Thursday, March 3, 2011

ಧ್ವನಿ ಮತ್ತು ಬೆಳಕು: ರಾಯರಥ

ಮಂಗಳೂರು,ಮಾರ್ಚ್.03: ಕರ್ನಾಟಕ ಪ್ರವಾಸೋದ್ಯಮ ಇಲಾಖೆ,ರಾಜ್ಯ ಪ್ರವಾ ಸೋದ್ಯಮ ಅಭಿ ವೃದ್ಧಿ ನಿಗಮ ನಿಯ ಮಿತ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಡಳಿತ ಸಂಯು ಕ್ತವಾಗಿ ವಿಜಯ ನಗರ ಸಾಮ್ರಾ ಜ್ಯದ ಶ್ರೀ ಕೃಷ್ಣ ದೇವ ರಾಯರ ಪಟ್ಟಾ ಭಿಷೇಕ ದ 500 ನೇ ವರ್ಷದ ಸ್ಮರ ಣಾರ್ಥ ನಗರ ದ ನೆಹರು ಮೈದಾ ನದಲ್ಲಿ ಮಾರ್ಚ್ 5 ಮತ್ತು 6 ರಂದು ಸಂಜೆ 7 ಗಂ ಟೆಗೆ ಧ್ವನಿ ಮತ್ತು ಬೆಳಕು ಕಾರ್ಯ ಕ್ರಮ ಆಯೋ ಜಿಸಿದೆ.ಈ ಸಂ ಬಂಧ ಜಿಲ್ಲಾ ಪಂಚಾ ಯತ್ ಕಚೇರಿ ಯಲ್ಲಿ ಏರ್ಪಡಿ ಸಲಾದಪತ್ರಿಕಾ ಗೋಷ್ಠಿ ಯಲ್ಲಿ ಸವಿ ವರ ಮಾಹಿತಿ ನೀಡಿದ ಅಪರ ಜಿಲ್ಲಾ ಧಿಕಾರಿ ಪ್ರಭಾ ಕರ ಶರ್ಮಾ ಅವರು, ಸರ್ವ ರಿಗೂ ಸಮಾ ರಂಭ ಕ್ಕೆ ಉಚಿತ ಪ್ರವೇಶ ವಿದೆ ಎಂ ದರು.ಶಾಲಾ ಮಕ್ಕಳಿ ಗೋಸ್ಕರ ಮಾರ್ಚ್ 4 ರಂದು ಅಪ ರಾಹ್ನ 4 ಗಂಟೆ ಯಿಂದ ಸಂಜೆ 5 ರವ ರೆಗೆ ಮತ್ತು ಮಾರ್ಚ್ 5 ರಂದು ಪೂರ್ವಾಹ್ನ 8 ಗಂಟೆ ಯಿಂದ ಸಂಜೆ 5 ರವರೆಗೆ ಕೃತಕ ವಾಗಿ ನಿರ್ಮಿಸ ಲಾದ ಹಂ ಪಿಯ ವಿಜಯ ನಗರ ಸಾಮ್ರಾಜ್ಯ ದ ಸ್ಮಾರಕ ಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ಹತ್ತಿರ ದಿಂದ ವೀಕ್ಷಿ ಸಲು ಅವಕಾ ಶವಿದೆ. ಸುಮಾರು ಒಂದು ಗಂಟೆ ಕಾಲದ ಧ್ವನಿ ಬೆಳಕು ಕಾರ್ಯ ಕ್ರಮ ದಲ್ಲಿ ಕೃಷ್ಣ ದೇವ ರಾಯ ಜನ್ಮ, ಪಟ್ಟಾಭಿ ಷೇಕ, ವಿವಾಹ, ಬ್ರಿಟಿಷ ರ ಸ್ನೇಹ, ಕಲ್ಲಿನ ರಥ, ಉಗ್ರ ನರ ಸಿಂಹ, ವಿಠ್ಠಲ ನ ದೇವ ಸ್ಥಾನ, ಕಮಲ್ ಮಹಲ್, ಕಡಲೇ ಕಾಳು ಗಣೇಶ, ಸಾಸಿವೆ ಕಾಳು ಗಣೇಶ, ವಿರೂ ಪಾಕ್ಷ ದೇವಾ ಲಯ, ಹಂಪಿ ಬಜಾರ್, ಆನೆ ಗಳ ಬಾಯಿ, ಆಂಜ ನೇಯ ಬೆಟ್ಟ, ಅಕ್ಕ ತಂಗಿ ಬಂಡೆ, ಸ್ಮಾರಕಗಳ ಬಗ್ಗೆ ಧ್ವನಿ ಮತ್ತು ಬೆಳಕಿನ ಕಾರ್ಯಕ್ರಮವಿದೆ.
ಮಾರ್ಚ್ 5 ರಂದು ಸಂಜೆ 6 ಗಂಟೆಗೆ ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಪಾಲೆಮಾರ್ ನೆರವೇರಿಸಲಿರುವರು. ಆಯ್ದ 20 ಜಿಲ್ಲೆಗಳಲ್ಲಿ ಪ್ರದರ್ಶನ ಏರ್ಪಡಿಸಲಾಗಿದ್ದು, ಈ ಸಂಬಂಧ ಪೂರ್ವ ತಯಾರಿಗೆ 300 ಜನ ಕಲಾವಿದರು, 3 ತಿಂಗಳು ದುಡಿದಿದ್ದಾರೆ ಎಂದು ಗೋಷ್ಠಿಯಲ್ಲಿ ಉಪಸ್ಥಿತರಿದ್ದಪ್ರಸ್ತುತ ಯೋಜನೆಯ ಸಹಾಯಕ ನಿರ್ದೇಶಕರಾದ ಎಂ. ಕೆ. ಮಠ ಅವರು ವಿವರಿಸಿದರು. ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರಾದ ಮಹೇಶ್ ಕುಮಾರ್ ಉಪಸ್ಥಿತರಿದ್ದರು.