Monday, March 14, 2011

ಪಿಯುಸಿ ಪರೀಕ್ಷೆ: ನೋಡಲ್ ಅಧಿಕಾರಿಗಳ ನೇಮಕ,ಅವ್ಯವಹಾರ ತಡೆಗೆ ಸಮಿತಿ ರಚನೆ

ಮಂಗಳೂರು, ಮಾರ್ಚ್.14: ಮಾರ್ಚ್ 17 ರಿಂದ 30 ರವರೆಗೆ ನಡೆಯಲಿರುವ ದ್ವಿತೀಯ ಪಿಯುಸಿ ಪರೀಕ್ಷೆ ಸುಸೂತ್ರವಾಗಿ ನಡೆಯಲು ಪರೀಕ್ಷಾ ಕೇಂದ್ರಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಿಸಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಸೈಂಟ್ ಅಲೋಷಿಯಸ್ ಪಿ ಯು ಕಾಲೇಜ್ ಕೊಡಿಯಾಲ್ ಬೈಲ್, ಸೈಂಟ್ ಅಗ್ನೆಸ್, ಗಣಪತಿ ಪಿ ಯು ಕಾಲೇಜು, ಸರಕಾರಿ ಮಹಿಳಾ ಪಿ ಯು ಕಾಲೇಜು, ಕಾರ್ ಸ್ಟ್ರೀಟ್, ಎಕ್ಸ್ ಪರ್ಟ್ ಪಿ ಯು ಕಾಲೇಜ್ ನ ಪರೀಕ್ಷಾ ಕೇಂದ್ರಗಳಿಗೆ ತಾಲೂಕು ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿಗಳು, ಕೆನರಾ ಪಿ ಯು ಕಾಲೇಜು, ಸರಕಾರಿ ಮಹಿಳಾ ಪಿ ಯು ಕಾಲೇಜು ಬಲ್ಮಠ, ಬೆಸೆಂಟ್ ಮಹಿಳಾ ಪಿ ಯು ಕಾಲೇಜು, ಶಾರದಾ ಪಿ ಯು ಕಾಲೇಜು ಪರೀಕ್ಷಾ ಕೇಂದ್ರಗಳಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಗಳೂರು ನಗರ, ಗೋಕರ್ಣಾನಾಥೇಶ್ವರ ಪಿ ಯು ಕಾಲೇಜು, ಮಿಲಾಗ್ರಿಸ್ ಪಿ ಯು ಕಾಲೇಜು, ಸೈಟ್ ಆನ್ಸ್ ಪಿ ಯು ಕಾಲೇಜು ಮಂಗಳೂರಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳೂರು ನಗರ ಇವರು ನೋಡಲ್ ಅಧಿಕಾರಿಗಳಾಗಿರುತ್ತಾರೆ.
ವಿಜಯ ಪಿ ಯು ಕಾಲೇಜು ಮುಲ್ಕಿ, ಗೋವಿಂದಾಸ್ ಪಿ ಯು ಕಾಲೇಜು , ಸುರತ್ಕಲ್, ಪೊಂಪೈ ಪಿ ಯು ಕಾಲೇಜು, ತಾಳಿಪಾಡಿ, ಐಕಳ ಕೇಂದ್ರಗಳಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಂಗಳೂರು ಗ್ರಾಮಾಂತರ, ಸೈಂಟ್ ಜೋಸೆಫ್ ಪಿ ಯು ಕಾಲೇಜು, ಬಜಪೆ, ದುರ್ಗಪರಮೇಶ್ವರಿ ಪಿ ಯು ಕಾಲೇಜು ಕಟೀಲು ಇಲ್ಲಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳೂರು ಗ್ರಾಮಾಂತರ ನೋಡಲ್ ಅಧಿಕಾರಿಗಳಾಗಿರುತ್ತಾರೆ. ಉಳ್ಳಾಲದ ಮದನಿ ಪಿ ಯು ಕಾಲೇಜು, ಟಿಪ್ಪು ಸುಲ್ತಾನ್ ಸಂಯುಕ್ತ ಪಿ ಯು ಕಾಲೇಜು ಒಂಬತ್ತುಕೆರೆಗೆ ಉಳ್ಳಾಲ ಪುರಸಭೆ ಮುಖ್ಯಾಧಿಕಾರಿಗಳು, ಮೂಡಬಿದ್ರೆಯ ಮಹಾವೀರ ಪಿ ಯು ಕಾಲೇಜು, ಜೈನ್ ಪಿ ಯು ಕಾಲೇಜಿಗೆ, ಆಳ್ವಾಸ್ ಎಜುಕೇಷನ್ ಸೊಸೈಟಿ ಪಿ ಯು ಕಾಲೇಜಿಗೆ ಮೂಡಬಿದ್ರೆ ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರಿನ ಸೈಂಟ್ ಫಿಲೋಮಿನಾ ಪಿ ಯು ಕಾಲೇಜು, ವಿವೇಕಾನಂದ ಪಿ ಯು ಕಾಲೇಜು, ಸರಕಾರಿ ಪಿ ಯು ಕಾಲೇಜು, ಕುಂಬ್ರದ ಸರಕಾರಿ ಪದವಿಪೂರ್ವ ಕಾಲೇಜಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಪುತ್ತೂರು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ಉಪ್ಪಿನಂಗಡಿ ಸರಕಾರಿ ಪಿ ಯು ಕಾಲೇಜು, ಸೈಂಟ್ ಜಾರ್ಜ್ ಪದವಿಪೂರ್ವ ಕಾಲೇಜು ನೆಲ್ಯಾಡಿಗೆ ನಾಡಕಚೇರಿ ಉಪತಹಸೀಲ್ದಾರ್, ಬಂಟ್ವಾಳದ ಲೋಕಸೇವಾ ಪಿ ಯು ಕಾಲೇಜು, ವಿಟ್ಲ ಪಿ ಯು ಕಾಲೇಜು, ಕನ್ಯಾನದ ಸರಕಾರಿ ಪಿ ಯು ಕಾಲೇಜು, ಕಲ್ಲಡ್ಕದ ಶ್ರೀ ರಾಮ ಪಿ ಯು ಕಾಲೇಜಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬಂಟ್ವಾಳ ಇವರು ನೋಡಲ್ ಅಧಿಕಾರಿಗಳಾಗಿರುತ್ತಾರೆ.
ಎಸ್ ವಿ ಎಸ್ ಬಂಟ್ವಾಳ,ಕಾರ್ಮೆಲ್ ಕಾನ್ವೆಂಟ್ ಮೊಡಂಕಾಪು, ಸರಕಾರಿ ಪಿ ಯು ಕಾಲೇಜು ವಾಮದ ಪದವಿಗೆ ಕ್ಷೇತ್ರ ಶಿಕ್ಷಣಾಧಿಕಾರಿ ಬಂಟ್ವಾಳ ತಾಲೂಕು ನೋಡಲ್ ಅಧಿಕಾರಿಗಳಾಗಿರುತ್ತಾರೆ. ಸರಕಾರಿ ಪಿ ಯು ಕಾಲೇಜು, ಕುರ್ನಾಡು, ಎಸ್ ಡಿ ಎಂ ಪಿ ಯು ಕಾಲೇಜು, ಉಜಿರೆ, ಸರಕಾರಿ ಪಿ ಯು ಕಾಲೇಜು ಬೆಳ್ತಂಗಡಿಗೆ ನಾಡಕಚೇರಿ ಉಪತಹಸೀಲ್ದಾರ್, ಎಸ್ ಡಿ ಎಂ ಪಿ ಯು ಕಾಲೇಜು ಕುರ್ನಾಡು, ಸರಕಾರಿ ಪಿ ಯು ಕಾಲೇಜು, ಕ್ಷೇತ್ರ ಶಿಕ್ಷಣಾಧಿಕಾರಿ ಬೆಳ್ತಂಗಡಿ, ಸೇಕ್ರಡ್ ಹಾಟ್ರ್ ಪಿ ಯು ಕಾಲೇಜು, ವಾಣಿ ಪದವಿ ಪೂರ್ವ ಕಾಲೇಜಿಗೆ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಬೆಳ್ತಂಗಡಿ, ಸರಕಾರಿ ಪಿ ಯು ಕಾಲೇಜಿಗೆ, ನೆಹರು ಮೆಮೊರಿಯಲ್ ಪಿ ಯು ಕಾಲೇಜು ಸುಳ್ಯಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಸುಳ್ಯ, ಸುಬ್ರಹ್ಮಣ್ಯೇಶ್ವರ ಪಿ ಯು ಕಾಲೇಜಿಗೆ ಕಾರ್ಯ ನಿರ್ವಹಣಾಧಿಕಾರಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ, ಬೆಳ್ಳಾರೆ ಸರಕಾರಿ ಪಿ ಯು ಕಾಲೇಜಿಗೆ, ಕಡಬದ ಸರಕಾರಿ ಪಿಯು ಕಾಲೇಜಿಗೆ ರಾಮಕುಂಜೇಶ್ವರ ಪಿ ಯು ಕಾಲೇಜಿಗೆ ವಿಶೇಷ ತಹಸೀಲ್ದಾರ್ ಕಡಬ ನೋಡಲ್ ಅಧಿಕಾರಿಗಳಾಗಿರುತ್ತಾರೆ.
ಪಿಯುಸಿ ಪರೀಕ್ಷೆ ಅವ್ಯವಹಾರ ತಡೆಗೆ ಸಮಿತಿ ರಚನೆ:ಪಿಯುಸಿ ಪರೀಕ್ಷೆಗಳು ಸುಸೂತ್ರವಾಗಿ ನಡೆಯಲು ಜಿಲ್ಲಾ ಮತ್ತು ತಾಲೂಕು ಮಟ್ಟದ ಸಮಿತಿಯನ್ನು ರಚಿಸಿದ್ದು, ಈ ಸಮಿತಿಯು ಪರೀಕ್ಷಾ ಅವ್ಯವಹಾರಗಳನ್ನು ತಡೆಗಟ್ಟಿ ,ಪರೀಕ್ಷೆಯ ಪಾವಿತ್ರ್ಯತೆಗೆ ಚ್ಯುತಿ ಬಾರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬಹುದಾಗಿದೆಯೆಂದು ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.
ಜಿಲ್ಲಾ ಮಟ್ಟದ ಸಮಿತಿಯಲ್ಲಿ ದ.ಕ.ಜಿಲ್ಲಾಧಿಕಾರಿಗಳು ತಂಡದ ಮುಖ್ಯಸ್ಥರಾಗಿದ್ದು,ಪೊಲೀಸ್ ಕಮಿಷನರ್,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶೀಗಳು,ಮೀನುಗಾರಿಕಾ ಉಪನಿರ್ದೇಶಕರು ,ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸದಸ್ಯರಾಗಿರುತ್ತಾರೆ.
ಜಿಲ್ಲಾ ಮಟ್ಟದ ಮತ್ತೊಂದು ತಂಡದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಮುಖ್ಯಸ್ಥರಾಗಿದ್ದು,ಪೊಲೀಸ್ ಅಧೀಕ್ಷಕರು,ಕೃಷಿ ಜಂಟಿ ನಿರ್ದೇಶಕರು,ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ,ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಸದಸ್ಯರಾಗಿರುತ್ತಾರೆ.
ತಾಲೂಕು ಮಟ್ಟದ ಸಮಿತಿಯಲ್ಲಿ ಮಂಗಳೂರು ತಾಲೂಕು ,ಮೂಡಬಿದ್ರೆ ತಾಲೂಕುಮತ್ತು ಬಂಟ್ವಾಳ ತಾಲೂಕಿಗೆ ಐದು ಅಧಿಕಾರಿಗಳ ಸದಸ್ಯರನ್ನೊಗೊಂಡಂತೆ ಮಂಗಳೂರು ಸಹಾಯಕ ಕಮೀಷನರ್ ತಂಡದ ಮುಖ್ಯಸ್ಥರಾಗಿರುತ್ತಾರೆ.
ಪುತ್ತೂರು ತಾಲೂಕಿಗೆ,ಸುಳ್ಯ ಮತ್ತು ಬೆಳ್ತಂಗಡಿ ತಾಲೂಕಿಗೆ ತಾಲೂಕು ಮಟ್ಟದ ಐದು ಅಧಿಕಾರಿಗಳನ್ನೊಳಗೊಂಡಂತೆ ಪುತ್ತೂರು ಸಹಾಯಕ ಕಮೀಷನರ್ ತಂಡದ ಮುಖ್ಯಸ್ಥರಾಗಿರುತ್ತಾರೆ.ತಂಡದ ಮುಖ್ಯಸ್ಥರು ಪ್ರತೀದಿನವು ಪರೀಕ್ಷಾ ಸಂಬಂಧ ಜಿಲ್ಲಾಧಿಕಾರಿಗಳಿಗೆ ವರದಿ ನೀಡುವುದು. ಎಲ್ಲಾ ಜಾಗೃತ ದಳವು ಪರೀಕ್ಷಾ ದಿನಗಳಲ್ಲಿ ಕಾರ್ಯ ನಿರ್ವಹಿಸಿ ಅವ್ಯವಹಾರಗಳನ್ನು ತಡೆಗಟ್ಟಲು ಉತ್ತಮ ಕಾರ್ಯ ನಿರ್ವಹಿಸುವಂತೆ
ದ.ಕ. ಜಿಲ್ಲೆ ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.