Monday, February 28, 2011

ಪಾಲಿಕೆ ನೂತನ ಮೇಯರ್ - ಉಪಮೇಯರ್ ಆಯ್ಕೆ

ಮಂಗಳೂರು,ಫೆಬ್ರವರಿ.28: ಮಂಗಳೂರು ಮಹಾನಗರ ಪಾಲಿಕೆಯ
ನೂತನ ಮೇಯರಾಗಿ ದೇರೆಬೈಲು ದಕ್ಷಿಣ ವಾರ್ಡಿನ ಸದಸ್ಯರಾದ ಪ್ರವೀಣ್ ಅವರು ಮತ್ತು ಉಪ ಮೇಯರ್ ಆಗಿ ಮಣ್ಣಗುಡ್ಡ ವಾರ್ಡಿನ ಸದಸ್ಯೆ ಗೀತಾ ಎನ್. ನಾಯಕ್ ಅವರು ಆಯ್ಕೆ ಯಾಗಿ ದ್ದಾರೆ.ಇಂದು ಪಾಲಿಕೆಯ ಸಭಾಂ ಗಣದಲ್ಲಿ ನಡೆದ ಚುನಾ ವಣೆಯಲ್ಲಿ ನಿರೀಕ್ಷೆ ಯಂತೆ ಬಹು ಮತ ಹೊಂದಿದ್ದ ಈ ಬಿಜೆಪಿ ಸದಸ್ಯರು ಮೇಯರ ಮತ್ತು ಉಪ ಮೇಯರ್ ಹುದ್ದೆ ಗಳಿಗೆ ಆಯ್ಕೆ ಗೊಂಡರು. ಮೈಸೂರು ಪ್ರಾದೇಶಿಕ ಆಯುಕ್ತೆ ಎಂ.ವಿ.ಜಯಂತಿ ಅವರು ಚುನಾವಣಾಧಿಕಾರಿಯಾಗಿ ಚುನಾವಣಾ ಪ್ರಕ್ರೀಯೆಗಳನ್ನು ನಡೆಸಿಕೊಟ್ಟರು.ಉಪ ಆಯುಕ್ತ ಮಂಜುನಾಥ ನಾಯಕ್,ಪಾಲಿಕೆ ಆಯುಕ್ತರಾದ ಡಾ. ವಿಜಯ ಪ್ರಕಾಶ್ ಅವರು ಉಪಸ್ಥಿತರಿದ್ದರು.

Sunday, February 27, 2011

ಭಾರತೀಯ ಕರಾವಳಿ ತಟ ರಕ್ಷಣಾ ಪಡೆ 34ನೇ ವಾರ್ಷಿಕೋತ್ಸವ

ಮಂಗಳೂರು,ಫೆ.27:ಭಾರತೀಯ ಕರಾವಳಿ ತಟ ರಕ್ಷಣಾ ಪಡೆಯ 34ನೇ ವಾರ್ಷಿ ಕೋತ್ಸ ವದ ಸಂಭ್ರ ಮಾಚ ರಣೆ ಯನ್ನು 'ಎ ಡೇ ವಿದ್ ಡಿಗ್ನ ಟರೀಸ್' ಎಂಬ ಘೋಷ ವಾಕ್ಯ ದೊಂ ದಿಗೆ ಜಿಲ್ಲಾ ಡಳಿ ತದ ಪ್ರ ಮುಖರು, ಮಾಧ್ಯಮ ದವರು ಹಾಗೂ ವಿಶೇಷ ಆಹ್ವಾನಿ ತರೊಂ ದಿಗೆ ಪಣಂ ಬೂರಿ ನಿಂದ 20 ಕಿ,ಮೀ (12 ನಾಟೆ ಕಲ್ ಮೈಲ್ಸ್) ದೂರ ಅರಬ್ಬೀ ಸಮುದ್ರ ದದಲ್ಲಿ ಆಚ ರಿಸಿತು.ಸಾವಿತ್ರಿ ಬಾಯಿ ಪುಲೆ ಮತ್ತು ಸಿಜಿಎಸ್ ಸಂ ಗ್ರಾಮ ಯುದ್ಧ ನೌಕೆ ಗಳು, ಚೇತಕ್ ಹೆಲಿ ಕಾಪ್ಟರ್ ಮತ್ತು ಡಾರ್ನಿ ಯರ್ ವಿಮಾನ ಗಳು ಮತ್ತು ಕರಾ ವಳಿ ಕಾವಲು ಪಡೆಯ ಎರಡು ಇಂ ಟರ್ ಸೆಪ್ಟರ್ ಬೋಟ್ ಗಳು ತಮ್ಮ ಶಕ್ತಿ ಪ್ರದರ್ಶ ನವನ್ನು ತೋರ್ಪ ಡಿಸಿ ದವು. ಡಿಐಜಿ ಕೆಬಿ ಎಲ್ ಭಟ್ನಾ ಗರ್,ರಕ್ಷಣಾ ಪಡೆಯ ಕಮಾಂ ಡೆಂಟ್ ಗಳಾದ ಪಿ ಎಸ್ ಜಾ, ಮತ್ತು ರಾ ಜೇಂದ್ರ ಸಿಂಗ್ ಸಫಲ್ ಅಣಕು ಕಾರ್ಯಾ ಚರ ಣೆಯ ನೇ ತೃತ್ವ ವಹಿ ಸಿದ್ದರು. ಸಮುದ್ರ ದಲ್ಲಿ ಶತ್ರು ಹಡಗು ನಾಶ ಮತ್ತು ತುರ್ತು ಕಾರ್ಯಾ ಚರಣೆ ಯ ಮಾದರಿ ಯನ್ನು ಪ್ರದ ರ್ಶಿಸಿ ದರು.

'ಸುಸ್ಥಿರ ಅಭಿವೃದ್ಧಿಯಲ್ಲಿ ಇಂಜಿನಿಯರ್ ಗಳ ಪಾತ್ರ ಮಹತ್ವದ್ದು'

ಮಂಗಳೂರು, ಫೆ.27: ಸುಸ್ಥಿರ ಅಭಿವೃದ್ಧಿ ಮತ್ತು ಬಡತನ ನಿರ್ಮೂಲನೆಯಲ್ಲಿ ಇಂಜಿನಿಯರ್ ಗಳ ಪಾತ್ರ ಮಹತ್ವದ್ದು ಎಂದು ನಿವೃತ್ತ ಮುಖ್ಯ ಇಂಜಿನಿಯರ್ ಎಂ. ಎಂ. ಕಾಮತ್ ನುಡಿದರು. ಅವರು ಶನಿವಾರ ನಗರದಲ್ಲಿ ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿ ಇಂಜಿನಿಯರ್ ಅಸೋಸಿಯೇಷನ್ ಅವರು ಏರ್ಪಡಿಸಿದ್ದ 'ಸುಸ್ಥಿರ ನಗರಾಭಿವೃದ್ಧಿಯಲ್ಲಿ ಇಂಜಿನಿಯರ್ ಗಳ ಪಾತ್ರ' ಕುರಿತ ಕಾರ್ಯಾಗಾರದಲ್ಲಿ ದಿಕ್ಸೂಚಿ ಭಾಷಣ ನೀಡುತ್ತಿದ್ದರು.ಅಭಿ ವೃದ್ಧಿ ಕಾರ್ಯ ಯೋಜನೆ ಗಳು ಸಮಾ ಜದ ಕಟ್ಟ ಕಡೆಯ ವ್ಯಕ್ತಿ ಯನ್ನು ತಲುಪು ವುದು, ಸೌಲಭ್ಯ ಗಳು ಪ್ರತಿ ಯೊಬ್ಬ ರಿಗೂ ತಲು ಪುವ ಧ್ಯೇಯ ಹೊಂದಿ ರಬೇಕು ಎಂದ ಅವರು, ಬಡ ತನ ನಿರ್ಮೂ ಲನೆ ಯಲ್ಲಿ ಪ್ರಮುಖ ಪಾತ್ರ ವನ್ನು ಇಂಜಿ ನಿಯರ್ ಗಳು ವಹಿಸ ಬೇಕೆಂದ ರು.ಕೆಡಿಕೆ ಯುಇಎ ಅಧ್ಯಕ್ಷ ರಾದ ಇಂಜಿ ನಿಯರ್ ಎಸ್. ಇ. ಬಾಲ ಕೃಷ್ಣ ಅವರು ತಮ್ಮ ಅಧ್ಯಕ್ಷೀ ಯ ನುಡಿ ಯಲ್ಲಿ ಕ್ಷಿಪ್ರ ಗತಿಯ ಪ್ರಗತಿ ಯಲ್ಲಿ ಇಂಜಿ ನಿಯರ್ ಗಳ ಪಾತ್ರದ ಬಗ್ಗೆ ವಿವರಿ ಸಿದರು. ಎನ್ ಐ ಟಿ ಕೆ ಯ ನಿವೃತ್ತ ಪ್ರೊಫೆ ಸರ್ ಡಾ. ಆರ್ ಕೆ ಯಾಜಿ ಅವರು ಸುಸ್ಥಿರ ಅಭಿ ವೃದ್ಧಿಗೆ ಅತ್ಯು ತ್ತಮ ತಾಂತ್ರಿ ಕತೆಯ ಅಗತ್ಯ ವನ್ನು ಪ್ರತಿ ಪಾದಿ ಸಿದರು. ಮೂಲ ಸೌಕರ್ಯ ಅಭಿ ವೃದ್ಧಿ ರಸ್ತೆ ಮತ್ತು ಸಾರ್ವ ಜನಿಕ ಆರೋ ಗ್ಯದ ಕುರಿತು ಪ್ರೊ. ಡಾ. ಕೆ. ಎಸ್. ಬಾಬು ನಾರಾಯಣ್ ಮಾತನಾಡಿದರು. ಅಗ್ನಿ ಸುರಕ್ಷತೆ ಬಗ್ಗೆ ಅಗ್ನಿ ಶಾಮಕ ದಳದ ಅಧಿಕಾರಿ ಎಚ್. ಎಸ್. ವರದರಾಜನ್ ಅವರು ವಿವರಿಸಿದರು.

Saturday, February 26, 2011

ಕುಡಿಯುವ ನೀರು ಪೂರೈಕೆಗೆ ಒತ್ತಾಯ

ಮಂಗಳೂರು, ಫೆ.26: ತುರ್ತು ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಜಿಲ್ಲಾ ಪಂಚಾಯತ್ ಸದಸ್ಯರಿಗೆ ಅಧಿಕಾರ ಹಾಗೂ ಅನುದಾನ ನೀಡುವ ಬಗ್ಗೆ ಸಕರ್ಾರಕ್ಕೆ ಪತ್ರ ಬರೆಯಲು ಜಿಲ್ಲಾ ಪಂಚಾಯತ್ ಸಭೆಯಲ್ಲಿ ನಿರ್ಧರಿಸಲಾಯಿತು.ಇಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಪ್ರಥಮ ಸಾಮಾನ್ಯ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರು ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶೈಲಜಾ ಭಟ್ ಅವರ ಅಧ್ಯಕ್ಷತೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.
ಅತಿವೃಷ್ಠಿ ಹಾಗೂ ಅನಾವೃಷ್ಠಿ ಜಿಲ್ಲೆಯನ್ನು ಕಾಡುತ್ತಿದ್ದು, ಈ ಸಂಬಂಧ ತುರ್ತು ಹಾಗೂ ಶಾಶ್ವತ ಪರಿಹಾರ ಯೋಜನೆಗಳನ್ನು ರೂಪಿಸುವ ಬಗ್ಗೆ ಜಿಲ್ಲಾ ಪಂಚಾಯತ್ ಸದಸ್ಯರು ಆಗ್ರಹಿಸಿದರು. ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ ಶಿವಶಂಕರ್ ಅವರು, ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ 983 ಮಿನಿ ನೀರು ಸರಬರಾಜು ಯೋಜನೆ, 1,200 ಪೈಪ್ ವಾಟರ್ ಸಪ್ಲೈ ಯೋಜನೆ, 5,200 ಹ್ಯಾಂಡ್ ಪಂಪ್ಸ್ ಯೋಜನೆಗಳಿರುವುದಾಗಿ ಮಾಹಿತಿ ನೀಡಿದರು. ಕುಡಿಯುವ ನೀರಿನ ಯೋಜನೆಯಡಿ 36 ಲಕ್ಷ ಜನರ ಪೂರೈಕೆಗಾಗುವಷ್ಟು ನೀರಿದ್ದು, ಈ ನೀರು ಇಂದು 4 ಲಕ್ಷ ಜನರ ಉಪಯೋಗಕ್ಕೆ ಮೀಸಲಾಗಿದೆ. ಆದರೆ ವಿದ್ಯುತ್ ಬಿಲ್ ಪಾವತಿಯೇ ಬಾಕಿ ಇದೆ. ಬೋರ್ ವೆಲ್ ಆಧಾರಿತ ನೀರಾವರಿಗೆ ಸಮೀಕ್ಷೆಯಾಗಿದೆ. ಕಿನ್ನಿಗೋಳಿ, ಮಳವೂರಿನಲ್ಲಿ ಮೇ ಅಂತ್ಯದೊಳಗೆ ಮಲ್ಟಿ ವಿಲೇಜ್ ಸಪ್ಲೈ ಯೋಜನೆಯಡಿ ನೀರು ವಿತರಿಸಲಾಗುವುದು. ಕುಡಿಯುವ ನೀರು ಒದಗಿಸಲು ಟಾಸ್ಕ್ ಪೋರ್ಸ್ ಸೀಮಿತ ಅವಧಿಗೆ ರಚಿಸಲಾಗಿದ್ದು, ಕಳೆದ ಸಾಲಿನಲ್ಲಿ ವಿತರಿಸಿದ ನೀರಿಗೆ ಬಿಲ್ ಪಾವತಿಯಾಗದಿರಲು ಗ್ರಾಮಪಂಚಾಯಿತಿಗಳು ಜಿಲ್ಲಾಧಿಕಾರಿಗಳ ಪೂರ್ವಾನುಮೋದನೆ ಪಡೆಯದಿರುವುದೇ ಕಾರಣ ಎಂದರು.
ಸಮೀಕ್ಷೆಯ ಸಂದರ್ಭದಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸಹಕರಿಸಿದರೆ ಮಾತ್ರ ಸಮಗ್ರವಾಗಿ ಯೋಜನೆ ರೂಪಿಸಲು ಸಾಧ್ಯ ಎಂದರು. ಕಳೆದ ಸಾಲಿನಲ್ಲಿ ಟಾಸ್ಕ್ ಫೋಸ್ರ್ ಗೆ ನೀಡಿದ ಹಣದಲ್ಲಿ ತಾಲೂಕುವಾರು ಉಳಿಕೆಯಾದ ಹಣವನ್ನು ಬಳಸಿಕೊಳ್ಳಬಹುದೆಂದು ಸಿ ಇ ಒ ಹೇಳಿದರು. ಬಂಟ್ವಾಳದಲ್ಲಿ 7.46 ಲಕ್ಷ, ಪುತ್ತೂರಿನಲ್ಲಿ 1.65 ಲಕ್ಷ, ಬೆಳ್ತಂಗಡಿಯಲ್ಲಿ 50,000, ಮಂಗಳೂರು ತಾಲೂಕಿನಲ್ಲಿ 18 ಲಕ್ಷ ಉಳಿದಿದೆ. ಈ ಹಣವನ್ನು ಮರುಬಳಕೆ ಮಾಡಬಹುದು ಎಂದರು.
ಅಂಗನವಾಡಿ ಕೇಂದ್ರಗಳು ಸಂಜೆ 4 ಗಂಟೆಯವರೆಗೆ ಕರ್ತವ್ಯ ನಿರ್ವಹಿಸಬೇಕು ಎಂಬುದಕ್ಕೆ ಸಭೆ ಆಕ್ಷೇಪ ವ್ಯಕ್ತವಪಡಿಸಲಿಲ್ಲ; ಆದರೆ ಅಲ್ಲಿನ ಪುಟಾಣಿಗಳಿಗೆ ಪ್ರಸ್ತುತ ಒದಗಿಸುತ್ತಿರುವ ಆಹಾರದ ಬಗ್ಗೆ ಆಕ್ಷೇಪ ವ್ಯಕ್ತವಾಯಿತು. ಅಂಗನವಾಡಿ ಕಾರ್ಯಕರ್ತರ ಸಮಸ್ಯೆಗಳ ಬಗ್ಗೆಯೂ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು.
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಗರ್ಭಿಣಿ ಮತ್ತು ಬಾಣಂತಿಯರಿಗೆ `ಪ್ರಸೂತಿ ಆರೈಕೆ' ಹೆಸರಲ್ಲಿ ನೀಡಲಾಗುವ ಪ್ರೋತ್ಸಾಹಧನ ಇನ್ನೂ ಫಲಾನುಭವಿಗಳಿಗೆ ಲಭಿಸಿಲ್ಲ ಎಂಬ ಅಂಶ ಚರ್ಚೆಯ ವೇಳೆ ಬಹಿರಂಗಗೊಂಡಿತು.
ಮಾಣಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ದೀರ್ಘಕಾಲದಿಂದ ಸೇವೆಗೆ ಗೈರುಹಾಜರಾಗಿರುವುದು, ಕೆಲವರು ಕೇಂದ್ರ ಸ್ಥಾನದಲ್ಲಿ ವಾಸ ಇಲ್ಲದಿರುವುದು ಹಾಗೂ ಆರೋಗ್ಯ ಉಪಕೇಂದ್ರಗಳಲ್ಲಿ ಆರೋಗ್ಯ ಸಹಾಯಕಿಯರು ವಾಸ ಇಲ್ಲದಿರುವುದು ಸಭೆಯಲ್ಲಿ ಚರ್ಚೆಗೆ ಬಂತು.
ಸಂಸತ್ ಸದಸ್ಯ ನಳಿನ್ ಕುಮಾರ್ ಕಟೀಲ್ ಸಭೆಯಲ್ಲಿ ಉಪಸ್ಥಿತರಿದ್ದರು, ಉಪಾಧ್ಯಕ್ಷೆ ಧನಲಕ್ಷ್ಮೀ ಜನಾರ್ಧನ್ ಉಪಸ್ಥಿತರಿದ್ದರು.

ದೌರ್ಜನ್ಯಕ್ಕೊಳಗಾದ, ನೊಂದ ಮಹಿಳೆಯರ ದೂರುಗಳನ್ನು ಸ್ವೀಕರಿಸಿ - ಮಂಜುಳಾ

ಮಂಗಳೂರು, ಫೆಬ್ರವರಿ. 26:ಗಂಡನ ಕಿರುಕುಳ, ಲೈಂಗಿಕ ದೌರ್ಜನ್ಯ,ವರದಕ್ಷಿಣೆಯ ಒತ್ತಡ ಇತ್ಯಾದಿಗಳಿಂದ ನೊಂದ ಮಹಿಳೆ ಪರಿಹಾರಕ್ಕಾಗಿ ನ್ಯಾಯ ಬೇಡಿ ದೂರು ನೀಡಲು ಬಂದಾಗ ಅಂತಹವರ ದೂರುಗಳನ್ನು ಸಮಚಿತ್ತದಿಂದ ಆಲಿಸಿ ಸ್ವೀಕರಿಸುವಂತೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷರಾದ ಮಂಜುಳಾ ಅವರು ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಅವರು ಇಂದು ದ.ಕ.ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲೆಯಲ್ಲಿ ಮಹಿಳೆಯರಿಗೆ ಹೇಗೆ ರಕ್ಷಣೆ ನೀಡಲಾಗುತ್ತಿದೆ ಎಂಬ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳು,ಸರ್ಕಾರೇತರ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಮಾತನಾಡುತ್ತಿದ್ದರು.ಜಿಲ್ಲೆಯಲ್ಲಿ ನಿರಾಶ್ರಿತ ಮಹಿಳೆಯರು ಹಾಗೂ ಗಂಡ ಅಥವಾ ಕುಟುಂಬದವರ ದೌರ್ಜನ್ಯಕ್ಕೊಳಗಾಗಿ ಆಶ್ರಯ ಬೇಡಿ ಬಂದವರಿಗೆ ತಾತ್ಕಾಲಿಕ ವಸತಿ ಸೌಕರ್ಯಕ್ಕೆ ಇದ್ದದ್ದೊಂದು ಸ್ವೀಕಾರ ಕೇಂದ್ರ ಬಂದ್ ಆಗಿರುವುದರಿಂದ ತುಂಬಾ ತೊಂದರೆಯಾಗಿರುವ ಬಗ್ಗೆ,ಸಾಂತ್ವನ ಮಹಿಳಾ ಸಹಾಯವಾಣಿ ಹಾಗೂ ಮಹಿಳಾ ಪುನರ್ ವಸತಿ ಕೇಂದ್ರದ ಕಾರ್ಯಕರ್ತರು ಹಾಗೂ ಮಹಿಳಾ ಪೊಲೀಸ್ ಠಾಣಾಧಿಕಾರಿ ಮಹಿಳಾ ಆಯೋಗದ ಅಧ್ಯಕ್ಷರ ಗಮನಕ್ಕೆ ತಂದರು.ದಿಕ್ಕು ದೆಸೆಯಿಲ್ಲದ ಹಿರಿಯರ ಅಂಕೆ ಇಲ್ಲದೆ, ಕಪಟ ಪ್ರೇಮದ ಬಲೆಗೆ ಬಿದ್ದು ಮದುವೆ ಆಗಿರುವ ಪ್ರೇಮ ವಿವಾಹಗಳು,ವರದಕ್ಷಿಣೆ ದಾಹ, ಸಂಶಯಗಳಿಂದಾಗಿ 1-2 ವರ್ಷಗಳಲ್ಲೇ ಸಂಬಂಧಗಳು ಮುರಿದು ಬೀಳುತ್ತವೆ.ಇಂತಹ ಹೆಣ್ಣು ಮಕ್ಕಳ ಬಾಳು ಅಕ್ಷರಶ: ನರಕ ಸದೃಶವಾಗಿದೆ ಎಂದು ತಮ್ಮ ಆತಂಕ ತೋರ್ಪಡಿಸಿದ ಮಹಿಳಾ ಆಯೋಗದ ಅಧ್ಯಕ್ಷರು ಮೈಸೂರಿನ ಊಟಿ ರಸ್ತೆಯಲ್ಲಿರುವ ಶಕ್ತಿ ಕೇಂದ್ರ ಮಹಿಳಾ ಪುನರ್ ವಸತಿ ಕೇಂದ್ರದ ಮಾದರಿಯಲ್ಲಿ ಮಂಗಳೂರು ಸೇರಿದಂತೆ ರಾಜ್ಯದ ಇತರೆಡೆಗಳಲ್ಲಿ ತೆರೆಯಲು ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು.ನೊಂದ ಮಹಿಳೆಯರು ಪೊಲೀಸ್ ಠಾಣೆಗೆ ಬಂದಾಗ ಪೊಲೀಸರು ಮಹಿಳಾ ಸ್ನೇಹಿಗಳಾಗಿ ಅವರ ದುಖ: ದುಮ್ಮಾನಗಳನ್ನು ಆಲಿಸಬೇಕೆಂದು ಮನವಿ ಮಾಡಿದರು.ತಾವು ಮಹಿಳಾ ಆಯೋಗದ ಅಧ್ಯಕ್ಷರಾದ ಮೇಲೆ ಒಂದೂವರೆ ತಿಂಗಳಲ್ಲಿ 238 ಪ್ರಕರಣಗಳು ದಾಖಲಾಗಿವೆ.ಮಹಿಳೆಯರ ಅಜ್ಞಾನ ಇನ್ನಿತರೆ ಕಾರಣಗಳಿಂದ ಶೇಕಡಾ 60ಕ್ಕೂ ಹೆಚ್ಚು ದೌರ್ಜನ್ಯ ಪ್ರಕರಣಗಳು ಬೆಳಕು ಕಾಣುತ್ತಿಲ್ಲ.ಪ್ರತೀದಿನ ಮಹಿಳಾ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸುವ ಜೊತೆಗೆ ವಾರದಲ್ಲಿ ಯಾವುದಾದರೊಂದು ನಿರ್ದೀಷ್ಠ ದಿನವನ್ನು ವಿಶೇಷವಾಗಿ ಮಹಿಳೆಯರ ಅಹವಾಲು ಸ್ವೀಕಾರಕ್ಕೆ ಮೀಸಲಿಡುವಂತೆ ಅರಕ್ಷಕರಲ್ಲಿ ಮನವಿ ಮಾಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಜನ ರಾಜ್ಯದ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಅತ್ಯಂತ ಸುಶಿಕ್ಷಿತರು ಸಂಸ್ಕೃತಿವಂತರು ಆದರೆ ಬಸ್ಸುಗಳಲ್ಲಿ ಮಹಿಳೆಗೆ ಮೀಸಲಿಟ್ಟ ಆಸಗಳಲ್ಲಿ ಮಹಿಳೆಯರು ನಿಂತಿದ್ದರೂ ಸ್ಥಳ ಬಿಡದೆ ಕೂರುವುದು ಸಂಸ್ಕೃತಿಗೆ ಅಪಚಾರವೆಸಗಿದಂತೆಯೇ ಸರಿ ಎಂದ ಅವರು ಮಹಿಳೆಯರಿಗೆ ಮೀಸಲಿಟ್ಟಿರುವ ಜಾಗದಲ್ಲಿ ಪುರುಷ ಸಹ ಪ್ರಯಾಣಿಕರು ಅವರ ಆಸನಗಳನ್ನು ಬಿಟ್ಟುಕೊಡಬೇಕೆಂದು ತಿಳಿಸಿದ್ದಾರೆ.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ,ಜಿಲ್ಲಾ ಪಂಚಾಯತ್ ಸಿಇಓ ಪಿ.ಶಿವಶಂಕರ್, ಡಿವೈಎಸ್ ಪಿ ಬಿ.ಜೆ.ಭಂಡಾರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ್ಯೆ ಶೈಲಜಾ ಭಟ್ ,ರಾಜ್ಯ ಬಾಲಭವನ ಅಧ್ಯಕ್ಷ್ಯೆ ಸುಲೋಚನಾ ಭಟ್ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಉಪನಿರ್ದೇಶಕಿ ಶಕುಂತಳಾ ಭಾಗವಹಿಸಿದ್ದರು.

ವೃಕ್ಷ ಪರಿಸರ ಪ್ರೇಮಿ "ಕೃಷ್ಣಪ್ಪ"

ಮಂಗಳೂರು, ಫೆಬ್ರವರಿ.26:ಹಲವಾರು ಸಮಾಜ ಮುಖೀ ಕಾರ್ಯಗಳು ಹೆಚ್ಚು ಪ್ರಚಾರವಿಲ್ಲದೆ ತನ್ನಿಂತಾನೆ ನಡೆಯುತ್ತಿರುತ್ತವೆ. ಈ ಪ್ರಕ್ರೀಯೆಯಿಂದಲೇ ಇಂದಿಗೂ ಸ್ವಸ್ಥ ಸಮಾಜ ಅಸ್ಥಿತ್ವದಲ್ಲಿದೆ.ಸ್ವಚ್ಛ ಹಸಿರು,ಪ್ರಗತಿಪರ ಮಂಗಳೂರು ಧ್ಯೇಯದೊಂದಿಗೆ ಕಳೆದ ಭಾನುವಾರ ಮಂಗಳೂರಿನಲ್ಲಿ ಆಯೋಜಿಸಿದ್ದ ಹಾಫ್ ಮ್ಯಾರಥಾನ್ ಉದ್ದೇಶವನ್ನು ಸಾರ್ಥಕಪಡಿಸಿದವರು ಮಂಗಳೂರಿನ ಒಬ್ಬ ನಿವೃತ್ತ ನೌಕರ ಅಕ್ಷರಶ: ವೃಕ್ಷ ಪ್ರೇಮಿ ಹಾಗೂ ಪರಿಸರ ಪ್ರೇಮಿ ಕೃಷ್ಣಪ್ಪ. ಕೃಷ್ಣಪ್ಪ ಅವರು ಮಂಗಳಾ ಕ್ರೀಡಾಂಗಣದಲ್ಲಿ ಗಿಡಗಳನ್ನು ಸ್ವತ:ತಾವೇ ಖರೀದಿಸಿ ರಸ್ತೆ ಬದಿಯಲ್ಲಿ ನೆಟ್ಟು ಅವುಗಳಿಗೆ ಪ್ರತೀನಿತ್ಯ ನೀರುಣಿಸುವರು.ಬೇವು,ಹಲಸು,ಹೆಬ್ಬಲಸು,ಮಾವು ಇಂತಹ ಪ್ರಯೋಜನಕಾರಿಯಾದ ಸಸಿಗಳನ್ನೇ ನೆಡುವ ಕೃಷ್ಣಪ್ಪ,ಎಲ್ಲಿಯಾದರೂ ಮರ ಕಡಿಯುವುದನ್ನು ಕಂಡರೆ ಅತ್ಯಂತ ದು:ಖಿತರಾಗುತ್ತಾರೆ. ಅಲ್ಲಿ ಮತ್ತೊಂದು ಸಸಿ ನೆಡುವುದನ್ನು ಮರೆಯುವುದಿಲ್ಲ.ಪ್ಲಾಸ್ಟಿಕ್ ತ್ಯಜಿಸಿ ಆಂದೋಲನವನ್ನು ಕೃಷ್ಣಪ್ಪ ಸದ್ದಿಲ್ಲದೆ ಮಾಡುತ್ತಿದ್ದಾರೆ. ಮರಗಳ ಉದುರಿದ ಎಲೆಗಳನ್ನು ತಾವು ನೆಟ್ಟ ಸಸಿಗಳಿಗೆ ಒಳ್ಳೆ ಪಾತಿ ಮಾಡಿ ಹಾಕಿ ಮೇಲೆ ಮಣ್ಣನ್ನು ಹಾಕಿ ಕಾಂಪೊಸ್ಟ್ ಆಗುವ ರೀತಿ ಮಾಡುವುದರಿಂದ ಸಸಿಗಳಿಗೆ ಉತ್ತಮ ಕಾಂಪೋಸ್ಟ್ ಗೊಬ್ಬರ ದೊರಕಿ ಸೊಂಪಾಗಿ ಬೆಳೆಯುತ್ತಿವೆ. ಕೇವಲ ಪರಿಸರ ಕಾಳಜಿಯೊಂದೇ ಕೃಷ್ಣಪ್ಪನವರ ಹವ್ಯಾಸವಾಗಿರದೇ ಅವರು ಅನೇಕ ರಕ್ತದಾನ ಶಿಬಿರಗಳಲ್ಲಿ ಭಾಗವಹಿಸುತ್ತಾರೆ.ಕೆಲವೊಮ್ಮೆ ಸ್ವತ: ರಕ್ತದಾನವನ್ನು ಮಾಡಿದ್ದಾರೆ. ಆರೋಗ್ಯ ಭಾಗ್ಯಕ್ಕೆ ಯೋಗ ಉತ್ತಮ ಸಾಧನ ಎನ್ನುವ ಕೃಷ್ಣಪ್ಪ ತಮ್ಮ 71ನೇ ವಯಸ್ಸಿನಲ್ಲಿ ಸಮಾಜಕ್ಕೆ ಹೊರೆಯಾಗದೇ ಸಮಾಜಕ್ಕೆ ಅತ್ಯಂತ ಪವಿತ್ರವಾದ ಕೆಲಸಗಳನ್ನು ನಿರ್ಮಲ ಮನಸ್ಸಿನಿಂದ ಮಾಡುತ್ತಿರುವುದು ಇಂದಿನ ಯುವಕರಿಗೆ ಮಾದರಿ.
ಸರ್ಕಾರದಿಂದ ತಮ್ಮ ಪರಿಸರ ಕೆಲಸಕ್ಕೆ ಬಿಡಿಗಾಸನ್ನು ಅಪೇಕ್ಷಿಸದ ತಮಗೆ ಬಿರುದು ಬಾವಲಿಗಳು ಪ್ರಶಸ್ತಿಗಳು ಬೇಕೆಂಬ ಹಂಬಲವಿಲ್ಲ.ಇಂತಹ ಕೃಷ್ಣಪ್ಪನವರು ನೂರಾರು ಜನ ಸಮಾಜಕ್ಕೆ ಬೇಕಾಗಿದೆ.

Friday, February 25, 2011

'ರಕ್ತದಾನ ಮಹಾದಾನ'

ಮಂಗಳೂರು,ಫೆಬ್ರವರಿ. 25: ಭಾರತೀಯ ಸಂಸ್ಕೃತಿಯಲ್ಲಿ ದಾನಕ್ಕೆ ವಿಶೇಷ ಸ್ಥಾನಮಾನ; ರಕ್ತದಾನ ಸರ್ವಶ್ರೇಷ್ಠ ಎಂಬುದರಲ್ಲಿ ಎರಡು ಮಾತಿಲ್ಲ ಆದರೆ ರಕ್ತದಾನದ ಬಗ್ಗೆ ಅಜ್ಞಾನ ವಿದೆ. ಈ ಬಗ್ಗೆ ಗ್ರಾಮೀಣರಲ್ಲಿ ಅರಿವು ಮೂಡಿಸುವ ಕೆಲಸವಾಗಬೇಕಿದೆ ಎಂದು ಲ್ಯಾಲ ಜಿಲ್ಲಾ ಪಂಚಾಯತ್ ಸದಸ್ಯರಾದ ಶೈಲೇಶ್ ಕುಮಾರ್ ಅವರು ನುಡಿದರು.

ಅವ ರಿಂದು ವಾರ್ತಾ ಇಲಾಖೆ, ಜಿಲ್ಲಾ ಪಂಚಾ ಯತ್, ತಾಲೂಕು ಪಂಚಾ ಯತ್ ಬೆಳ್ತಂ ಗಡಿ ಹಾಗೂ ಗ್ರಾಮ ಪಂಚಾ ಯತ್ ಮೇ ಲಂತ ಬೆಟ್ಟು ಇವರ ಸಂಯು ಕ್ತ ಆಶ್ರಯ ದಲ್ಲಿ ಏರ್ಪ ಡಿಸಿದ್ದ ರಕ್ತ ದಾನದ ಮಹತ್ವ ಕುರಿತ ವಿಚಾರ ಸಂಕಿ ರಣ ವನ್ನು ಉದ್ಘಾ ಟಿಸಿ ಮಾತ ನಾಡು ತ್ತಿದ್ದರು. ಸಾಮಾಜಿಕ, ಆರ್ಥಿಕ ಸಬಲತೆಯೊಂದಿಗೆ ಆರೋಗ್ಯ, ಪರಿಸರದ ಬಗ್ಗೆ ಎಲ್ಲರೂ ಜಾಗೃತರಾಗಬೇಕು ಎಂದ ಅವರು, ನಾಡು ಕಟ್ಟಲು ಸದೃಢ ಯುವಜನಾಂಗದ ಅಗತ್ಯವಿದೆ ಎಂದರು. ಪ್ರಾಂಶುಪಾಲರಾದ ಲಿಂಗಣ್ಣಯ್ಯ ಅವರು ಮಾತನಾಡಿ, ಅಜ್ಞಾನವನ್ನು ನೀಗಿಸುವ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ಎಲ್ಲ ಚಟುವಟಿಕೆಗಳಿಗೂ ಕಾಲೇಜಿನಲ್ಲಿ ಉತ್ತಮ ವಾತಾವರಣವಿದೆ. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು. ರಕ್ತದಾನದ ಮಹತ್ವದ ಬಗ್ಗೆ ವಿವರಿಸಿದರು. ಬೆಳ್ತಂಗಡಿ ನಗರಪಂಚಾಯತ್ ಅಧ್ಯಕ್ಷ ಮುಗುಳಿ ನಾರಾಯಣ ಶೆಟ್ಟಿ, ಶಿರ್ಲಾಲು ತಾಲೂಕು ಪಂಚಾಯತ್ ಸದಸ್ಯರಾದ ಬಾಲಕೃಷ್ಣ ವಿ ಶೆಟ್ಟಿ, ಗ್ರಾಮಪಂಚಾಯತ್ ಮೇಲಂತಬೆಟ್ಟು ಉಪಾಧ್ಯಕ್ಷರಾದ ಸರಸ್ವತಿ, ಸಭೆಯನ್ನುದ್ದೇಶಿಸಿ ಮಾತನಾಡಿದರು.ಸಮಾ ರಂಭ ದಲ್ಲಿ ಅಧ್ಯ ಕ್ಷೀಯ ಭಾಷಣ ಮಾಡಿದ ಮೇಲಂ ತಬೆ ಟ್ಟು ಗ್ರಾಮ ಪಂ ಚಾಯಿತಿ ಅಧ್ಯಕ್ಷ ರಾದ ವಿಮಲಾ ಅವರು, ಸ್ವಾವ ಲಂಬಿ ಸಮಾಜ ನಿರ್ಮಾ ಣಕ್ಕೆ ಸರ್ಕಾರ ಸಾಕಷ್ಟು ಯೋಜನೆ ಗಳನ್ನು ರೂಪಿ ಸಿದ್ದು, ಈ ಬಗ್ಗೆ ಎಲ್ಲ ರಲ್ಲಿ ಜಾಗೃತಿ ಮೂಡ ಬೇಕೆಂ ದರು. ವಿಚಾರ ಸಂಕಿ ರಣ ದಲ್ಲಿ ಉಪ ನ್ಯಾಸ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂ ಬ ಕಲ್ಯಾಣ ಇಲಾಖೆ ಯ ಮಲೇರಿ ಯಾ ಪರಿ ವೀಕ್ಷಣಾ ಧಿಕಾರಿ ಜಯ ರಾಂ ಪೂಜಾರಿ ಅವರು ಜೀವ ರಕ್ಷಕ ರಕ್ತ ದಾನದ ಬಗ್ಗೆ ಸ ವಿವರ ಮಾಹಿತಿ ನೀಡಿದ ರಲ್ಲದೆ, ಸಂ ವಾದವೂ ನಡೆ ಯಿತು. ರಕ್ತ ದಾನಕ್ಕೆ ಸಂ ಬಂಧಿ ಸಿದಂ ತೆ ಸಭಿಕ ರಿಂದ ಬಂದ ಹಲವು ಪ್ರಶ್ನೆ ಗಳಿಗೆ ಅವರು ಉತ್ತರಿ ಸಿದರು. ರಕ್ತಕ್ಕೆ ಪರ್ಯಾ ಯವಿಲ್ಲ; ತುರ್ತು ಸಂದ ರ್ಭದಲ್ಲಿ ರಕ್ತದ ಅಗತ್ಯ ವನ್ನು ಎದುರಿ ಸಿದ ವರಿಗೇ ರಕ್ತದ ಮಹತ್ವ ದ ಅರಿವಾ ಗುತ್ತದೆ. ರಕ್ತ ದಾನ ಜೀವನ ದಾನ ಎಂದರು. ಮೇ ಲಂತ ಬೆಟ್ಟು ಕಾರ್ಯ ದರ್ಶಿ ಗಳಾದ ರಾಜ ಶೇಖರ ಶೆಟ್ಟಿ ಸಮಾ ರಂಭ ದಲ್ಲಿ ಉಪಸ್ಥಿ ತರಿದ್ದರು. ಜಿಲ್ಲಾ ವಾರ್ತಾ ಧಿಕಾರಿ ರೋಹಿಣಿ ಸ್ವಾಗ ತಿಸಿ ದರು. ವಿದ್ಯಾ ರ್ಥಿನಿ ಯರಾದ ಜಯ ಲಕ್ಷ್ಮಿ ವಂದಿ ಸಿದರು. ವರ್ಣ ಶ್ರೀ ಕಾರ್ಯ ಕ್ರಮ ನಿರೂ ಪಿಸಿ ದರು.

Thursday, February 24, 2011

'ಲಸಿಕೆ ಹಾಕಿಸಲು ಪೊಲಿಯೋ ಬೂತ್ ಗೆ ಬನ್ನಿ'

ಮಂಗಳೂರು, ಫೆಬ್ರವರಿ.24:ಪೊಲಿಯೋ ರೋಗ ನಿರ್ಮೂಲನಾ ಕಾರ್ಯಕ್ರಮದಡಿ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಫೆಬ್ರವರಿ 27 ರಂದು ಭಾನುವಾರ ನಡೆಯಲಿದ್ದು, 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ತಪ್ಪದೇ ಪೊಲಿಯೋ ಲಸಿಕೆಯನ್ನು ಹಾಕಿಸಿರಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಓ.ಆರ್. ರಂಗಪ್ಪ ಅವರು ಕೋರಿದ್ದಾರೆ.
ಫೆಬ್ರವರಿ 27 ರಂದೇ ಮಕ್ಕಳನ್ನು ಪೊಲಿಯೋ ಬೂತ್ ಗೆ ಕರೆತನ್ನಿ ಎಂದು ಪಾಲಕರನ್ನು ವಿನಂತಿಸಿರುವ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು, ಜಿಲ್ಲೆಯಲ್ಲಿ ಒಟ್ಟು 170721 ಮಕ್ಕಳು 5 ವರ್ಷದೊಳಗಿದ್ದು, ಇದರಲ್ಲಿ ವಲಸೆ ಕಾರ್ಮಿಕರ ಮಕ್ಕಳು 1431 ಎಂದು ಅಂದಾಜಿಸಲಾಗಿದೆ. ಯಶಸ್ವೀ ಲಸಿಕಾ ಕಾರ್ಯಕ್ರಮಕ್ಕಾಗಿ ಒಟ್ಟು 921 ಲಸಿಕಾ ಕೇಂದ್ರಗಳನ್ನು ಹಾಗೂ 20 ಟ್ರಾನ್ಸಿಟ್ ಲಸಿಕಾ ಘಟಕಗಳನ್ನು ರೂಪಿಸಲಾಗಿದೆ. 3684 ಲಸಿಕೆ ನೀಡುವವರು ಹಾಗೂ 184 ಮೇಲ್ವಿಚಾರಕರನ್ನು ನಿಯೋಜಿಸಲು ನಿರ್ಧರಿಸಿದೆ.
ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಸಹಾಯವಾಣಿಗಳನ್ನು ಕಲ್ಪಿಸಿದೆ. ಜಿಲ್ಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ 9449843050ಮ ಡಾ. ರುಕ್ಮಿಣಿ (ಆರ್ ಸಿ ಎಚ್) 9449843194, ಬೇಬಿ 9880929671. ವಿದ್ಯಾಲತಾ 0824- 2423672. ಡಾ. ರತ್ನಾಕರ್ 9480157604, ಬಂಟ್ವಾಳ ಡಾ. ದೀಪ ಪ್ರಭು 9845838677, ಪುತ್ತೂರು ಡಾ. ಬದ್ರುದ್ದೀನ್ 9449947168, ಡಾ ಸುಬ್ರಹ್ಮಣ್ಯ 9449662224, ಬೆಳ್ತಂಗಡಿ ತಾಲೂಕು ಡಾ. ರವೀಂದ್ರ 9448333078.ಮಂಗಳೂರು ಗ್ರಾಮಾಂತರ ದಲ್ಲಿ ಒಟ್ಟು 31429 ಮಕ್ಕಳಿದ್ದು, 185 ಲಸಿಕಾ ಕೇಂದ್ರ, 740 ಸ್ವಯಂಸೇವಕರು, 37 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಮಂಗಳೂರು ನಗರದಲ್ಲಿ ಒಟ್ಟು 21040 ಮಕ್ಕಳಿದ್ದು, 67 ಲಸಿಕಾ ಕೇಂದ್ರ, 268 ಸ್ವಯಂಸೇವಕರು, 13 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಮಂಗಳೂರು ನಗರಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 25957 ಮಕ್ಕಳಿದ್ದು, 90 ಲಸಿಕಾ ಕೇಂದ್ರ, 360 ಸ್ವಯಂಸೇವಕರು, 18 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಪುತ್ತೂರು ಗ್ರಾಮಾಂತರ ದಲ್ಲಿ ಒಟ್ಟು 20429 ಮಕ್ಕಳಿದ್ದು, 135 ಲಸಿಕಾ ಕೇಂದ್ರ, 540 ಸ್ವಯಂಸೇವಕರು, 27 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಪುತ್ತೂರು ನಗರ ದಲ್ಲಿ ಒಟ್ಟು 3684ಮಕ್ಕಳಿದ್ದು, 10 ಲಸಿಕಾ ಕೇಂದ್ರ, 40 ಸ್ವಯಂಸೇವಕರು, 2 ಮೇಲ್ವಿಚಾರಕರನ್ನು ನೇಮಿಸಲಾಗಿದೆ.
ಬೆಳ್ತಂಗಡಿ ಗ್ರಾಮಾಂತರ ದಲ್ಲಿ ಒಟ್ಟು 23131 ಮಕ್ಕಳಿದ್ದು, 165 ಲಸಿಕಾ ಕೇಂದ್ರ, 660 ಸ್ವಯಂಸೇವಕರು, 33 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಬಂಟ್ವಾಳ ಗ್ರಾಮಾಂತರ ದಲ್ಲಿ ಒಟ್ಟು 29746 ಮಕ್ಕಳಿದ್ದು, 181 ಲಸಿಕಾ ಕೇಂದ್ರ, 724 ಸ್ವಯಂಸೇವಕರು, 36 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಬಂಟ್ವಾಳ ನಗರ ದಲ್ಲಿ ಒಟ್ಟು 3897ಮಕ್ಕಳಿದ್ದು, 13 ಲಸಿಕಾ ಕೇಂದ್ರ, 52 ಸ್ವಯಂಸೇವಕರು, 3 ಮೇಲ್ವಿಚಾರಕರನ್ನು ನೇಮಿಸಲಾಗಿದೆ. ಸುಳ್ಯ ಗ್ರಾಮಾಂತರ ದಲ್ಲಿ ಒಟ್ಟು 11408 ಮಕ್ಕಳಿದ್ದು, 75 ಲಸಿಕಾ ಕೇಂದ್ರ, 300 ಸ್ವಯಂಸೇವಕರು, 15 ಮೇಲ್ವಿಚಾರ ಕರನ್ನು ನೇಮಿಸಲಾಗಿದೆ.

Wednesday, February 23, 2011

ನಿಗಧಿಗಿಂತ ಹೆಚ್ಚು ಬಸ್ ಪ್ರಯಾಣದರ-ವರದಿ ನೀಡಲು ಸಚಿವರ ಪತ್ರ

ಮಂಗಳೂರು, ಫೆಬ್ರವರಿ. 23:ಕೆಲವು ಖಾಸಗಿ ಬಸ್ ಗಳ ಪ್ರಯಾಣ ದರವನ್ನು ಅನಧಿಕೃತವಾಗಿ ಏರಿಕೆ ಮಾಡಿರುವುದು ಮತ್ತು ಕೆಲವೊಂದು ಪ್ರದೇಶಗಳಲ್ಲಿ ನಿಗಧಿತ ದರಕ್ಕಿಂತ ಹೆಚ್ಚುವರಿ ದರ ಪ್ರಯಾಣಿಕರಿಂದ ವಸೂಲು ಮಾಡುತ್ತಿರುವುದು ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಬಂದಿದೆ.ಈ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ವಿಜ್ಞಾನ ಮತ್ತು ತಂತ್ರ ಜ್ಞಾನ,ಜೀವಿ ಶಾಸ್ತ್ರ, ಪರಿಸರ,ಮೀನುಗಾರಿಕೆ,ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣ ಪಾಲೇಮಾರ್ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಅವರು ತಮ್ಮ ಪತ್ರದಲ್ಲಿ ಕೆಲವು ಖಾಸಗಿ ಬಸ್ಸುಗಳಲ್ಲಿ ಪದೇಪದೇ ಪ್ರಯಾಣದರ ಹೆಚ್ಚಿಸುತ್ತಿರುವ ಕುರಿತು ಕೆಲವು ಪತ್ರಿಕೆ ಗಳಲ್ಲಿಯೂ ಪ್ರಕಟವಾಗಿರುವ ವರದಿ ಬಗ್ಗೆ ಮಾನ್ಯ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದು,ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಅನಧಿಕೃತ ಪ್ರಯಾಣ ದರ ವಸೂಲಿಯನ್ನು ತಡೆಯುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರದಲ್ಲಿ ವಿನಂತಿಸಿದ್ದಾರೆ.
ಮಂಗಳೂರು-ಕಾರ್ಕಳ ವೋಲ್ವೋ ಬಸ್ ಪ್ರಾರಂಭಿಸಲು ಸಚಿವರ ಪತ್ರ: ಮಂಗಳೂರಿನಿಂದ ಕಾರ್ಕಳಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವೋಲ್ವೋ ಬಸ್ ಸೇವೆ ಪ್ರಾರಂಭಿಸುವ ಪ್ರಸ್ತಾವನೆಯು ತುಂಬಾ ಸಮಯದಿಂದ ಕಾರ್ಯಗತ ಗೊಂಡಿಲ್ಲ.ಆದ್ದರಿಂದ ಮಂಗಳೂರಿನಿಂದ ಮೂಡಬಿದ್ರೆ ಮಾರ್ಗವಾಗಿ ಕಾರ್ಕಳಕ್ಕೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ವೋಲ್ವೋ ಬಸ್ ಸಂಚಾರವನ್ನು ತಕ್ಷಣದಿಂದ ಪ್ರಾರಂಭಿಸಲು ಕ್ರಮ ಕೈಗೊಂಡು ವರದಿ ನೀಡಲು ಸಚಿವರು ಮಂಗಳೂರಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಸೂಚಿಸಿದ್ದಾರೆ.

103 ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು-ಸುಬೋಧ್ ಯಾದವ್

ಮಂಗಳೂರು. ಫೆಬ್ರವರಿ, 23:ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಇಲ್ಲಿಯ ತನಕ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವು ಕಾರ್ಯಾಚರಣೆ ಕುರಿತಂತೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆಸಲಾದ ನಾಲ್ಕು ಸಭೆಗಳ ತೀರ್ಮಾನದಂತೆ ಜಿಲ್ಲೆಯಲ್ಲಿ ಒಟ್ಟು 104 ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಇಲ್ಲಿಯವರೆಗೆ ತೆರವು ಗೊಳಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಸುಬೋಧ್ ಯಾದವ್ ತಿಳಿಸಿದ್ದಾರೆ.
ಅವರು ಇಂದು ತಮ್ಮ ಕಚೇರಿಯಲ್ಲಿ ಈ ಸಂಬಂಧ ನಡೆದ ಜಿಲ್ಲಾ ಮಟ್ಟದ ಸಭೆಯ ಅಧ್ಯಕ್ಷತೆ ವಹಿಸಿ ಮಾತ ನಾಡುತ್ತಿದ್ದರು.
ಇಂದಿನ ಸಭೆಯಲ್ಲಿ 78 ಪ್ರಕರಣಗಳ ಬಗ್ಗೆ ವರದಿಗಳ ಸಲ್ಲಿಕೆಯಾಗಿದ್ದು ಇದರಲ್ಲಿ 30 ಪ್ರಕರಣಗಳು ತೆರವುಗೊಳಿಸಿದ್ದು,26 ಪ್ರಕರಣಗಳು ತೆರವಿಗೆ ಬಾಕಿ ಇದ್ದು 15 ಪ್ರಕರಣಗಳನ್ನು ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದ ಕಾರಣ ಇವುಗಳನ್ನು ಸಕ್ರಮಗೊಳಿಸಲು ಸಭೆಯಲ್ಲಿ ಶಿಫಾರಸು ಮಾಡಲಾಯಿತು.ಫೆಬ್ರವರಿ 28 ರೊಳಗೆ ಬಾಕಿ ಇರುವ ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ತೆರವುಗೊಳಿಸುವಂತೆ ಜಿಲ್ಲಾಧಿಕಾರಿಗಳು ಸಂಬಂಧಿಸಿದ ಉಪವಿಭಾಗಾಧಿಕಾರಿಗಳು ಹಾಗೂ ತಹಶೀಲ್ದಾರರು ಸೇರಿದಂತೆ ಲೋಕೋಪಯೋಗಿ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ಇನ್ನು ಮುಂದೆ ಜಿಲ್ಲಾ ಮಟ್ಟದ ಸಭೆಗೆ ಹಾಜರಾಗುವ ಮುನ್ನ ತಮ್ಮತಮ್ಮ ತಾಲ್ಲೂಕುಗಳ ಪ್ರಕರಣಗಳ ಕುರಿತು ಲೋಕೋಪಯೋಗಿ ಇಲಾಖೆ,ಇತರೆ ಇಲಾಖೆಗಳ ತಾಲ್ಲೂಕು ಮಟ್ಟದ ಅಧಿಕಾರಿಗಳಲ್ಲಿ ಚರ್ಚಿಸಿ ಅಂತಿಮ ಒಪ್ಪಿಗೆಗಾಗಿ ಮಾತ್ರ ಜಿಲ್ಲಾ ಮಟ್ಟದ ಸಭೆಯಲ್ಲಿ ಮಂಡಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ ಹಾಗೂ ಇನ್ನಿತರ ಇಲಾಖಾ ಅಧಿಕಾರಿಗಳು ಹಾಜರಿದ್ದರು.
ಸರಕಾರಿ ಜಮೀನು ಒತ್ತುವರಿ ಸಂಪೂರ್ಣ ವರದಿಗೆ ತಹಶೀಲ್ದಾರರಿಗೆ ಸೂಚನೆ:
ಜಿಲ್ಲೆಯಲ್ಲಿ ಖಾಸಗಿಯವರಿಂದ ಸರ್ಕಾರಿ ಜಮೀನು ಒತ್ತುವರಿ ಯಾಗಿರುವ ಬಗ್ಗೆ ಇನ್ನು 8 ದಿನಗಳೊಳಗಾಗಿ ಸಂಪೂರ್ಣ ವರದಿ ನೀಡುವಂತೆ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಕಂದಾಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಅಲ್ಲದೆ ಈಗಾಗಲೇ ಈ ಬಗ್ಗೆ ಒತ್ತುವರಿ ಮಾಹಿತಿ ಇದ್ದಲ್ಲಿ ಅಂತಹವರನ್ನು ಟಾಪ್ಟೆನ್ ಪಟ್ಟಿ ಮಾಡಿ ಒತ್ತುವರಿ ತೆರವಿಗೆ ಮುಂದಾಗುವಂತೆ ಅಧಿಕಾರಿಗಳಿಗೆ ತಿಳಿಸಿದರು.

Tuesday, February 22, 2011

ಮಕ್ಕಳ ಸರ್ವಾಂಗೀಣ ಪ್ರಗತಿಗೆ ಬಾಲವಿಕಾಸ ಅಕಾಡೆಮಿ

ಮಂಗಳೂರು. ಫೆಬ್ರವರಿ,22:ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಕರ್ನಾಟಕ ಸರ್ಕಾರ ಎಲ್ಲಾ ಜಿಲ್ಲೆಗಳಲ್ಲಿ ಬಾಲ ವಿಕಾಸ ಅಕಾಡೆಮಿಗಳನ್ನು ಸ್ಥಾಪಿಸಿದೆ. ಈ ಬಾಲವಿಕಾಸ ಅಕಾಡೆಮಿಯ ಮೂಲ ಉದ್ದೇಶಗಳೆಂದರೆ, ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ವಿಶೇಷ ಕಾರ್ಯಕ್ರಮಗಳನ್ನು ರೂಪಿಸುವುದು ಮುಖ್ಯವಾಗಿ ಆರ್ಥಿಕವಾಗಿ,ಸಾಮಾಜಿಕವಾಗಿ ಹಿಂದುಳಿದ ಮಕ್ಕಳನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯ ಕ್ರಮಗಳನ್ನು ರೂಪಿಸು ವುದಾಗಿದೆ. ಗ್ರಾಮೀಣ ಮಕ್ಕಳ ಮನೋ ವಿಕಾಸಗೊಳಿಸುವ ಆತ್ಮ ಸ್ಥೈರ್ಯ ತುಂಬುವ ರಚನಾತ್ಮಕ ಕಾರ್ಯ ಕ್ರಮಗಳನ್ನು ರೂಪಿಸುವುದು.ಡಾ.ಶಿವರಾಮ ಕಾರಂತರ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಪ್ರಯತ್ನಿಸಿದ ಪ್ರಯೋಗಗಳನ್ನು ಅನುಷ್ಠಾನ ಗೊಳಿಸುವುದಾಗಿದೆ. ವಿಜ್ಞಾನ,ಸಾಹಿತ್ಯ,ಸಂಸ್ಕೃತಿ ಕಲೆಗಳ ಚಟುವಟಿಕೆಗಳ ಕೇಂದ್ರವಾಗಿರುವ ಬಾಲವಿಜ್ಞಾನ ವಿಕಾಸ ಕೇಂದ್ರ ನಿರ್ಮಿಸಿ ಮಕ್ಕಳ ಪ್ರತಿಬೆ ಅರಳಿಸುವ ನಿರಂತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು.ಮಕ್ಕಳ ಮನಸ್ಸು ಅರಳಿಸುವ ಮೌಲ್ಯಯುಕ್ತ ಮಕ್ಕಳ ಸಾಹಿತ್ಯ ರಚನೆಯಾಗುವಂತೆ ಮಾಡುವುದು.ಮಗುವು ಹುಟ್ಟಿದಾಗಿನಿಂದ ಹರೆಯದವರೆಗೆ ಮಗುವಿನ ದೈಹಿಕ,ಬೌದ್ಧಿಕ,ಸಾಮಾಜಿಕ ಮತ್ತು ವ್ಯಕ್ತಿತ್ವ ಬೆಳವಣಿಗೆಗಾಗಿ ಶಿಕ್ಷಣ,ಆರೋಗ್ಯ,ಪೌಷ್ಟಿಕತೆ,ಮನೋವಿಜ್ಞಾನ ಹಾಗೂ ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೆಚ್ಚಿನ ಅಭಿವೃದ್ಧಿಗೊಳಿಸಿ ರಾಜ್ಯದಲ್ಲಿರುವ ಮಕ್ಕಳ ಸ್ಥಿತಿಗತಿಗಳನ್ನು ಉತ್ತಮಗೊಳಿಸುವುದು.ಮಕ್ಕಳ ಮೇಲಾಗುತ್ತಿರುವ ಎಲ್ಲಾ ರೀತಿಯ ಶೋಷಣೆಗಳನ್ನು ತಡೆಗಟ್ಟಲು ಅಂತರ್ ಜಿಲ್ಲಾ ಮತ್ತು ಅಂತರ್ ರಾಜ್ಯ ಅಂತರ್ಜಾಲಗಳ ಸಂಪೂರ್ಣ ಬಳಕೆ ಮಾಡುವ ಮೂಲಕ ಎಲ್ಲಾ ವಿಧದ ಶೋಷಣೆಯ ವಿರುದ್ಧ ರಕ್ಷಣೆ ನೀಡುವ ಕಾರ್ಯಕ್ರಮಗಳನ್ನು ರೂಪಿಸುವುದು. ಮಕ್ಕಳ ಕ್ಷೇತ್ರದಲ್ಲಿ ನೂತನ ಅವಿಷ್ಕಾರಗಳು,ಸಂಶೋಧನೆಗಳು ಹಾಗೂ ವಿವಿಧ ತರಬೇತಿ ಕಾರ್ಯಕ್ರಮಗಳನ್ನು ರೂಪಿಸುವುದು. ಪರಿಣಾಮಕಾರಿಯಾದ ಶಿಕ್ಷಣ ಕಾರ್ಯಕ್ರಮದ ಮೂಲಕ ದುಡಿಯುವ ಮಕ್ಕಳ ಪುನರ್ವಸತಿಯನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದಾಗಿದೆ.
ದಕ್ಷಿಣ ಕನ್ನಡ ಜಿಲ್ಲಾ ಅಕಾಡೆಮಿ ಸಮಿತಿಯ ಅಧ್ಯಕ್ಷರಾಗಿ ದಕ್ಷಿಣಕನ್ನಡ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ,ಉಪಾಧ್ಯಕ್ಷರಾಗಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರು, ಕಾರ್ಯದರ್ಶಿಗಳಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ಹಾಗೂ ಸರ್ಕಾರೇತರ ಸಮಿತಿಯ ಸದಸ್ಯರಾಗಿ ಐ.ಕೆ.ಬೊಳುವಾರು, ಮೌನೇಶ್ ವಿಶ್ವಕರ್ಮ ಹಾಗೂ ಗೋಪಾಡ್ಕರ್ ಅವರನ್ನು ನೇಮಿಸಲಾಗಿದೆ. ಇವರ ಜೊತೆಗೆ ಆಶಾ ನಾಯಕ್ ಅಧ್ಯಕ್ಷರು,ಮಕ್ಕಳ ಕಲ್ಯಾಣ ಸಮಿತಿ ಇವರು ಸಹ ಸಮಿತಿಯ ಗೌರವ ಸದಸ್ಯರಾಗಿರುತ್ತಾರೆ. ವಿದ್ಯಾರ್ಥಿ ಬಳಗದಿಂದ ಪಿಯುಸಿ ವಿದ್ಯಾರ್ಥಿ ಪ್ರಶಾಂತ್,ಸಮಿತಿಯ ಸದಸ್ಯನಾಗಿರುತ್ತಾರೆ.
ಜಿಲ್ಲಾ ಸಮಿತಿಯು ಫೆಬ್ರವರಿ 17 ರಂದು ಬಾಲವಿಕಾಸ ಅಕಾಡೆಮಿ ಜಿಲ್ಲಾ ಅಧ್ಯಕ್ಷರಾದ ಶಿವಶಂಕರ್ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿ ಜಿಲ್ಲೆಯಲ್ಲಿ ಮಕ್ಕಳ ಸರ್ವಾಂಗೀಣ ವಿಕಾಸಕ್ಕಾಗಿ ಕೈಗೊಳ್ಳಬೇಕಾದ ಕಾರ್ಯಕ್ರಮಗಳನ್ನು ರೂಪಿಸಲು ಉಪಸಮಿತಿಗಳನ್ನು ರಚಿಸುವಂತೆ ನಿರ್ಣಯ ಕೈಗೊಳ್ಳಲಾಯಿತು.

Sunday, February 20, 2011

ಸ್ವಚ್ಚ ಹಾಗೂ ಪ್ರಗತಿಪರ ಮಂಗಳೂರಿಗಾಗಿ ನಗರದಲ್ಲಿ ಹಾಫ್ ಮ್ಯಾರಥನ್

ಮಂಗಳೂರು.ಫೆಬ್ರವರಿ,20:ಸ್ವಚ್ಚ ಹಾಗೂ ಪ್ರಗತಿಪರ ಮಂಗಳೂರು ಧ್ಯೇಯದೊಂದಿಗೆ ಇಂದು ಮುಂಜಾನೆ ನಡೆದ ಹಾಫ್ ಮ್ಯಾರಥನ್ ಗೆ ಜಿಲ್ಲಾ ಉಸ್ತುವರಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್ ಅವರು ನಗರದ ನೆಹರು ಮೈದಾನಿನಲ್ಲಿ ಚಾಲನೆ ನೀಡಿದರು.ಜಿಲ್ಲಾ ಧಿಕಾರಿ ಸು ಬೋದ್ ಯಾದವ್, ಪಶ್ಚಿಮ ವಲಯ ಪೋಲಿಸ್ ಮಹಾ ನಿರೀಕ್ಷ ಕರಾದ ಅಲೋ ಕ್ ಮೋ ಹನ್, ಅಪರ ಜಿಲ್ಲಾ ಧಿಕಾರಿ ಪ್ರಭಾ ಕರ ಶರ್ಮಾ,ಜಿಲ್ಲಾ ಎಸ್ಪಿ ಡಾ. ಸುಬ್ರ ಹ್ಮಣ್ಯೇ ಶ್ವರ ರಾವ್,ಜಿಲ್ಲಾ ಸಹಾ ಯಕ ಆಯುಕ್ತ ಪ್ರಭು ಲಿಂಗ ಕವಳಿ ಕಟ್ಟಿ,ಪಾಲಿಕೆ ಆಯುಕ್ತ ಡಾ. ವಿಜಯ ಪ್ರಕಾಶ್, ಮಂಗ ಳೂರು ವಿಮಾನ ನಿಲ್ದಾಣ ನಿರ್ದೇ ಶಕ ಎಂ.ಆರ್. ವಾಸು ದೇವ್ ಮತ್ತಿ ತರರು ಈ ಸಂ ದರ್ಭ ದಲ್ಲಿ ಉಪ ಸ್ಥಿತ ರಿದ್ದರು. ಅಂತ ರಾಷ್ಟ್ರೀ ಯ ಕ್ರೀಡಾ ಪಟು ಗಳಾದ ಪಿ.ಟಿ. ಉಷ, ವಂ ದನಾ ರಾವ್, ರೀತ್ ಅಬ್ರ ಹಾಂ, ವಂ ದನಾ ಶ್ಯಾನ್ ಭಾಗ್, ಪೂವ ಮ್ಮ ಅವರು ಈ ಓಟ ದಲ್ಲಿ ಪಾಲ್ಗೊ ಳ್ಳುವ ಮೂಲಕ ಹೊಸ ಸ್ಪೂರ್ತಿ ತುಂಬಿ ದ್ದರು. 21 ಕಿ.ಮೀ ಮತ್ತು 6 ಕಿ. ಮೀ. ಗಳ ಎರಡು ಓಟದ ಸ್ಪರ್ಧೆ ಗಳಲ್ಲಿ ಮಕ್ಕಳು,ಅಬಾಲ ವೃದ್ಧರಾ ದಿಯಾಗಿ ಸಾವಿ ರಾರು ಸಂಖ್ಯೆ ಯಲ್ಲಿ ಜನರು ಉತ್ಸಾಹ ದಿಂದ ಲೇ ಪಾಲ್ಗೊಂ ಡಿದ್ದರು.ನಂತರ ಮಂಗಳ ಕ್ರೀಡಾಂ ಗಣ ದಲ್ಲಿ ಜರು ಗಿದ ಸಮಾ ರೋಪ ದಲ್ಲಿ ವಿಜೇತ ಸ್ಪರ್ಧಾ ಳುಗ ಳಿಗೆ ಬಹು ಮಾನ ಗಳನ್ನು ವಿತರಿಸಿ ಮಾತ ನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿ ಕಾರಿ ಸುಬೋದ್ ಯಾದವ್ ಅವರು ಮಂಗ ಳೂರು ಮತ್ತು ಸುತ್ತ ಮುತ್ತಲ ಪ್ರದೇಶ ಗಳಿಂ ದ 7, 000 ಕ್ಕೂ ಮಿಕ್ಕಿ ಜನ ಈ ಓಟದ ಸ್ಪರ್ಧೆ ಯಲ್ಲಿ ಉತ್ಸಾ ಹ ದಿಂದ ಪಾಲ್ಗೊಂ ಡದ್ದು ತುಂಬಾ ಸಂತೋ ಷವ ನ್ನು ಉಂಟು ಮಾಡಿದೆ.ಮಂ ದಿನ ಬಾರಿ ಇನ್ನೂ ಉತ್ತಮ ರೀತಿ ಯಲ್ಲಿ ಇಂ ತಹ ಕಾರ್ಯ ಕ್ರಮ ಗಳನ್ನು ಜಿಲ್ಲಾ ಡಳಿತ ಸಂಘ ಟಿಸ ಲಿದೆ ಎಂದರು.ಪಿ.ಟಿ. ಉಷಾ, ವಂದನಾ ಶ್ಯಾನ್ ಭಾಗ್,ರೀತ್ ಅಬ್ರಾಹಂ,ವಂದನಾ ರಾವ್,ಚಿತ್ರ ನಟ ಪ್ರೇಮ್,ನಟಿ ಪೂಜಾ ಗಾಂಧಿ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Saturday, February 19, 2011

ಮಹಿಳಾ ಸಶಕ್ತೀಕರಣದಿಂದ ರಾಷ್ಟ್ರಕ್ಕೆ ಲಾಭ: ಸಚಿವ ಪಾಲೆಮಾರ್

ಮಂಗಳೂರು.ಫೆಬ್ರವರಿ,19: ಮಹಿಳೆಯರು ಸಶಕ್ತರಾಗುವುದರಿಂದ ರಾಷ್ಟ್ರಕ್ಕೆ ಲಾಭವಿದೆ. ಅವರು ಉದ್ಯೋಗದಲ್ಲಿ ತೊಡಗಿಸಿ ಕೊಳ್ಳುವುದರಿಂದ ಆರ್ಥಿಕ ಭದ್ರತೆ ಲಭಿಸಿದಂತಾಗುತ್ತದೆ.ಮಹಿಳಾ ಸಬಲೀಕರಣ ಪ್ರಸ್ತುತದ ಅಗತ್ಯವಾಗಿದೆ ಎಂದು ರಾಜ್ಯದ ಬಂದರು,ಮೀನುಗಾರಿಕೆ, ಪರಿಸರ, ಜೀವವಿಜ್ಞಾನ ಹಾಗೂ ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವರಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್ ಹೇಳಿದಾರೆ.

ಅವರು ಮಂಗ ಳೂರಿನ ಕಲಾಂ ಗಣ್ ನಲ್ಲಿ ವಾರ್ತಾ ಇಲಾಖೆ ಹಮ್ಮಿ ಕೊಂಡ ಎರಡು ದಿನ ಗಳ `ಮಹಿಳಾ ಸಬಲೀ ಕರಣ' ಕುರಿತ ರಾಜ್ಯ ಮಟ್ಟದ ಕಾರ್ಯಾ ಗಾರ ದಲ್ಲಿ ಸಮಾ ರೋಪ ಭಾಷಣ ಮಾಡಿ ದರು.ಪ್ರಸ್ತುತ ದಿನಗಳಲ್ಲಿ ಮಹಿಳೆಯರಲ್ಲಿ ವಿಶ್ವಾಸ ತುಂಬುವ ಕೆಲಸ ಹೆಚ್ಚೆಚ್ಚು ನಡೆಯುತ್ತಿದೆ.ಸಮಾಜಿಕ ಸಂಘಟನೆಗಳು ಮತ್ತು ಸಂಸ್ಥೆಗಳುಮಹಿಳಾ ಸಬಲೀಕರಣಕ್ಕಾಗಿ ಅನೇಕ ಕಾರ್ಯ ಕ್ರಮಗಳನ್ನು ಹಾಕಿ ಕೊಳ್ಳುತ್ತಿವೆ. ಸರ್ಕಾರವೂ ಮಹಿಳಾ ಸಬಲೀಕರಣಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದರು.ಇದೇ ಸಂದರ್ಭ ಸಚಿ ವರು ಕಾರ್ಯಾ ಗಾರ ದಲ್ಲಿ ಪಾ ಲ್ಗೊಂಡ ವಿವಿಧ ಜಿಲ್ಲೆ ಗಳ ಪ್ರತಿ ನಿಧಿ ಗಳಿಗೆ ಪ್ರಮಾಣ ಪತ್ರ ಗಳನ್ನು ವಿತರಿ ಸಿದರು.
ಸಮಾರೋಪದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದ ಪುತ್ತೂರು ಪೊಲೀಸ್ ಉಪವಿಭಾಗದ ಸಹಾಯಕ ಪೊಲೀಸ್ ಅಧಿಕ್ಷಕಿ ಡಾ.ರೋಹಿಣಿ ಕಟೋಚಾ ಅವರು ಮಹಿಳೆ ಯರಿಗೆ ಅಧಿಕಾರ ಯಾರೂ ಕೊಡ ಬೇಕಾ ಗಿಲ್ಲ. ಅದನ್ನು ಪಡೆದು ಕೊಳ್ಳುವ ಸ್ವ ಸಾಮಥ್ರ್ಯ ಅವರಿಗೆ ಇದೆ.ಪ್ರತಿ ಯೊಬ್ಬ ಮಹಿಳೆಯೂ ವಿಶ್ವಾಸ ದಿಂದ ಮುನ್ನಡೆ ದಾಗ ಅದು ಸಾಧ್ಯ ವಾಗು ವುದು ಎಂದರು.ಮಹಿಳೆ ಯರು ಹೆಚ್ಚಿನ ಸಂಖ್ಯೆ ಯಲ್ಲಿ ಪೊಲೀಸ್ ಇಲಾಖೆ ಯಲ್ಲಿ ಸೇವೆ ಸಲ್ಲಿಸಲು ಮುಂದಾ ಗಬೇಕು ಎಂದು ಅವರು ಕರೆ ನೀಡಿದರು.ಮೈಸೂರು ನಗರಾ ಭಿವೃದ್ಧಿ ಪ್ರಾಧಿ ಕಾರದ ಕಾರ್ಯ ದರ್ಶಿ ವಿದ್ಯಾ ಕುಮಾರಿ,ಶಿಬಿರ ನಿರ್ದೇ ಶಕ ಡಾ.ಡೊಮಿನಿಕ್ ಡಿ,ಮೈಸೂರು ಆಕಾಶ ವಾಣಿ ಕೇಂದ್ರದ ಕಾರ್ಯ ಕ್ರಮ ನಿರ್ವಾಹಕ ಎನ್.ಕೇಶವ ಮೂರ್ತಿ, ದ.ಕ.ಜಿಲ್ಲಾ ವಾರ್ತಾಕಾರಿ ಕೆ.ರೋಹಿಣಿ ಉಪಸ್ಥಿತರಿದ್ದರು. ವಾರ್ತಾ ಇಲಾಖೆಯ ಮೈಸೂರು ವಿಭಾಗದ ಉಪ ನಿರ್ದೇಶಕ ಪ್ರಕಾಶ್ ಸ್ವಾಗತಿಸಿ, ವಂದಿಸಿದರು.

ನೆಹರೂ ಮೈದಾನದಿಂದ ಮಂಗಳಾ ಕ್ರೀಡಾಂಗಣದ ವರೆಗೆ ಹಾಫ್ ಮ್ಯಾರಥಾನ್ ಓಟ

ಮಂಗಳೂರು. ಫೆಬ್ರವರಿ,19:ಪ್ರಗತಿ ಪಥದಲ್ಲಿರುವ ಮಂಗಳೂರು ನಗರವನ್ನು ಸ್ವಚ್ಛವಾಗಿಡುವ ಮತ್ತು ಹಸಿರಾಗಿಸುವ ಕರ್ತವ್ಯ ಪ್ರಗತಿಪರ ಉದ್ದೇಶಗಳನ್ನು ಮುಂದಿಟ್ಟು ಕೊಂಡು ನಾಗರೀಕರಲ್ಲಿ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಹಾಗೂ ವಿಜಯಾಬ್ಯಾಂಕ್ ಸಹಯೋಗದಲ್ಲಿ ಫೆ.20 ರಂದು ಪೂರ್ವಾಹ್ನ 6 ಗಂಟೆಗೆ ಮಂಗಳೂರು ನಗರದಲ್ಲಿ ಹಾಫ್ ಮ್ಯಾರಥಾನ್ ಮತ್ತು 6 ಕಿ.ಮೀ. ಮ್ಯಾರಥಾನ್ ಓಟವನ್ನು ಏರ್ಪಡಿಸಲಾಗಿದೆ. ಅಭಿವೃದ್ಧಿ, ಪರಿಸರ ಹಾಗೂ ಹಸಿರು ಸಮಾ ನಾಂತ ರವಾಗಿ ಸಾಗುವ ದಿಸೆ ಯಲ್ಲಿ ಜನತೆ ಯನ್ನು ಜಾಗೃತ ಗೊಳಿ ಸಲು ಜಿಲ್ಲಾ ಡಳಿತ ಹಮ್ಮಿ ಕೊಂಡ ಅಪ ರೂಪದ ಕಾರ್ಯ ಕ್ರಮ ಇದಾಗಿದೆ. ಸುಮಾರು 5 ಸಾವಿರ ಕ್ಕಿಂತಲೂ ಅಧಿಕ ಮಂದಿ ಮ್ಯಾರಥಾನ್ ನಲ್ಲಿ ಭಾಗವ ಹಿಸುವ ನಿರೀಕ್ಷೆ ಇದೆ .
ಹಾಫ್ ಮ್ಯಾರಥಾನ್ 21 ಕಿ.ಮೀ. ಹಾಗೂ ಮಿನಿ ಮ್ಯಾರಥಾನ್ 6 ಕಿ.ಮೀ. ಕ್ರಮಿಸಲಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಳುಗಳು ಇದರಲ್ಲಿ ಭಾಗವಹಿಸಲಿರುವರು. ಫೆ.20ರ ಮುಂಜಾನೆ 6.00 ಗಂಟೆಗೆ ನೆಹರೂ ಮೈದಾನದಲ್ಲಿ ಹಾಫ್ ಮ್ಯಾರಥಾನ್ ಗೆ ಹಾಗೂ 7 ಗಂಟೆಗೆ ಕ್ರಾಸ್ ಕಂಟ್ರಿ ಓಟಕ್ಕೆ ಚಾಲನೆ ನೀಡಲಾಗುವುದು. ಮಂಗಳೂರು ನಗರದ ಸರಕಾರಿ ಇಲಾಖೆಗಳ ಎಲ್ಲಾ ಸಿಬ್ಬಂದಿಗಳು ತಪ್ಪದೇ ಮ್ಯಾರಥಾನ್ ಓಟದಲ್ಲಿ ಪಾಲ್ಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿರುತ್ತಾರೆ,
ಹಾಫ್ ಮ್ಯಾರಥಾನ್ 20 ಸಾವಿರದಿಂದ ಮೊದಲ್ಗೊಂಡು ಒಟ್ಟು 10 ನಗದು ಬಹುಮಾನ ಗಳನ್ನು ಒಳಗೊಂಡಿದೆ. ಕ್ರಾಸ್ ಕಂಟ್ರಿ ರೂ. 3 ಸಾವಿರದಿಂದ ಮೊದಲ್ಗೊಂಡು ಒಟ್ಟು 6 ಬಹುಮಾನಗಳಿವೆ. ಮಹಿಳೆಯರು ಮತ್ತು ಪುರುಷರ ವಿಭಾಗಗಳಿಗೆ ಪ್ರತ್ಯೇಕವಾಗಿ ಬಹುಮಾನಗಳನ್ನು ನೀಡಲಾಗುತ್ತದೆ. ಓಟವನ್ನು ಪೂರ್ತಿಗೊಳಿಸುವ ಪ್ರತಿಯೊಬ್ಬರಿಗೂ ಜಿಲ್ಲಾಡಳಿತ ವತಿಯಿಂದ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು.
ಹಾಫ್ ಮ್ಯಾರಥಾನ್ ಹಾದಿ: ನೆಹರೂ ಮೈದಾನ- ಪಾಂಡೇಶ್ವರ-ಮಂಗಳಾದೇವಿ- ಜಪ್ಪುಮಾರ್ಕೆಟ್- ವೆಲೆನ್ಸಿಯಾ- ಕಂಕನಾಡಿ- ಜ್ಯೋತಿವೃತ್ತ - ಹಂಪನಕಟ್ಟಾ-ಗೋವಿಂದ ಪೈ ವೃತ್ತ , ಪಿ.ವಿ.ಎಸ್.ಸರ್ಕಲ್-ಸಿ.ಟಿ.ಹಾಸ್ಪಿಟಲ್- ನಂತೂರು- ಕದ್ರಿಪಾರ್ಕ್ - ಬಿಜೈ- ಕೆ.ಎಸ್ಆರ್ ಟಿ ಸಿ - ಕುಂಟಿಕಾನ ರಸ್ತೆ- ಇನ್ಫೋಸಿಸ್-ಉರ್ವಸ್ಟೋರ್-ಚಿಲಿಂಬಿ- ಮಂಗಳಾ ಕ್ರೀಡಾಂಗಣ ತಲುಪುವುದು.
ಮಿನಿ ಮ್ಯಾರಥಾನ್ ನೆಹರೂ ಮೈದಾನ-ಹಂಪನಕಟ್ಟಾ- ಠಾಗೂರ್ ಪಾರ್ಕ್- ಜ್ಯೋತಿ- ಬಂಟ್ಸ್ ಹಾಸ್ಟೆಲ್-ಕರಂಗಲ್ಪಾಡಿ- ಜೈಲ್ ರಸ್ತೆ - ಎಂ.ಜಿ.ರೋಡ್-ಲೇಡಿಹಿಲ್ ವೃತ್ತ - ಮಂಗಳಾ ಕ್ರೀಡಾಂಗಣ.

Friday, February 18, 2011

ಮೀಸಲಾತಿ ಆಶ್ರಯಿಸದೇ ಮಹಿಳೆ ಮುನ್ನಡೆಯಬೇಕು: ಶೈಲಜಾ ಭಟ್

ಮಂಗಳೂರು,ಫೆ.18: ಚುನಾವಣೆಯಲ್ಲಿ ಮೀಸಲಾತಿ ಕಲ್ಪಿಸುವ ಮೂಲಕ ಸರ್ಕಾರ ಮಹಿಳೆಗೆ ರಾಜಕೀಯ ಸ್ಥಾನಮಾನ ದೊರೆಯುವ ಅವಕಾಶ ಕಲ್ಪಿಸಿದೆ. ಒಂದು ಹಂತದ ವರೆಗೆ ಈ ಸೌಲಭ್ಯವನ್ನು ಬಳಸಿಕೊಂಡು, ಮುಂದೆ ಮೀಸಲಾತಿಯ ಆಶ್ರಯವಿಲ್ಲದೆಯೂ ಅವಕಾಶಗಳನ್ನು ಗಿಟ್ಟಿಸಿಕೊಳ್ಳುವಷ್ಟು ಮಹಿಳೆ ಸಬಲಳಾಗಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಟಿ. ಶೈಲಜಾ ಭಟ್ ಅವರು ತಿಳಿಸಿದರು.
ಮಹಿಳಾ ಸಬಲೀಕರಣ ಕುರಿತು ವಾರ್ತಾ ಇಲಾಖೆ ಶಕ್ತಿ ನಗರದ ಕಲಾಂಗಣ್ ನಲ್ಲಿ ಆಯೋಜಿಸಿರುವ ಎರಡು ದಿನಗಳ ರಾಜ್ಯ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಾಜಿ ಪ್ರಧಾನ ಮಂತ್ರಿ ದಿವಂಗತ ಇಂದಿರಾ ಗಾಂಧಿ, ಸುಷ್ಮಾ ಸ್ವರಾಜ್ ಮುಂತಾದ ಮಹಿಳೆಯರು ಸ್ವ ಸಾಮಥ್ರ್ಯ ದಿಂದ ಉನ್ನತ ಸ್ಥಾನ ಗಳಿಗೆ ಬಂದು, ಸಾಮಾಜಿ ಕವಾಗಿ ಹಲವು ಸಾಧನೆ ಮಾಡಿ ದರು. ಅವರಿಗೆ ಆಗ ಮೀಸ ಲಾತಿಯ ಬೆಂಬಲ ವಿರ ಲಿಲ್ಲ. ಅವರ ಹಾಗೆ ಪರಿ ಶ್ರಮ ದಿಂದ ಉನ್ನತ ಸ್ಥಾನಕ್ಕೆ ಏರುವ ಪ್ರಯತ್ನ ಮಾಡಬೇಕು ಎಂದರು.ಸ್ತ್ರೀಶಕ್ತಿ ಸಂಘಗಳು, ಸ್ವಸಹಾಯ ಗುಂಪುಗಳ ರಚನೆಯು ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯ ಸಬಲೀಕರಣಗೊಳ್ಳುವಂತೆ ಮಾಡಿದೆ. ಆರ್ಥಿಕವಾಗಿ ಮಹಿಳೆ ಅಭಿವೃದ್ಧಿ ಸಾಧಿಸಿದರೆ ಸಾಮಾಜಿಕವಾಗಿ ಮುಂದೆ ಬರಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.
ಭಾರತೀಯ ಸಂಸ್ಕೃತಿಯಲ್ಲಿ ಮಹಿಳೆಗೆ ಉನ್ನತ ಸ್ಥಾನವಿದೆ. ಸ್ವಾತಂತ್ರ್ಯವನ್ನು ಸ್ವೇಚ್ಛೆಯಾಗಿ ಬಳಸಿಕೊಳ್ಳಬಾರದು. ಎಲ್ಲಿ ನಾರಿ ಪೂಜಿಸಲ್ಪಡುವಳೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬ ಮಾತಿದೆ. ಉಡುಗೆ ತೊಡುಗೆಯಲ್ಲಿ ಆಚಾರ ವಿಚಾರಗಳಲ್ಲಿ ಆಕೆ ಸಮಾಜದಲ್ಲಿ ಹಾಗೂ ಕುಟುಂಬದಲ್ಲಿ ಗೌರವ ಮೂಡುವಂತೆ ನಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ರಜನಿ ದುಗ್ಗಣ್ಣ ಅವರು ಮಾತನಾಡಿ, ಹಲವು ಕ್ಷೇತ್ರಗಳಲ್ಲಿ ಇಂದು ಮಹಿಳೆ ಮುಂದುವರಿಯುತ್ತಿದ್ದಾಳೆ. ಹಿಂದೆ ಹೆಣ್ಣು ಮಗುವನ್ನು ಶಾಲೆಗೆ ಕಳುಹಿಸಲು ಹಿಂಜರಿಯುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದೆ. ಹೆಣ್ಣು ಮಕ್ಕಳಿಗೆ ಹೆಚ್ಚಿನ ಶಿಕ್ಷಣ ಕೊಡಿಸಲು ಎಲ್ಲರೂ ಆಸಕ್ತಿ ತೋರುತ್ತಾರೆ. ಸರ್ಕಾರವು ಸಹ ಮಹಿಳೆಯ ಅಭಿವೃದ್ಧಿಗೆ ಹಲವು ಸೌಲಭ್ಯಗಳನ್ನು ಕಲ್ಪಿಸಿದೆ ಎಂದರು.
ಜಿಲ್ಲಾ ಪಂಚಾ ಯತ್ ಉಪಾ ಧ್ಯಕ್ಷೆ ಧನ ಲಕ್ಷ್ಮಿ ಜನಾ ರ್ಧನ ಅವರು ಮಾತನಾಡಿ, ಸಮಾಜ ಸುಧಾ ರಣೆಗೆ ನಮಗೆ ಈಗ ಒಳ್ಳೆಯ ಅವ ಕಾಶ ಸಿಕ್ಕಿದೆ. ಪುರು ಷರ ಸಹಾಯ ಹಾಗೂ ಬೆಂಬ ಲವೂ ಮಹಿಳೆ ಗೆ ಇದೆ ಎಂದರು.ಪ್ರಾಸ್ತಾವಿಕ ವಾಗಿ ಮಾತನಾಡಿದ ವಾರ್ತಾ ಇಲಾಖೆ ಉಪನಿರ್ದೇಶಕರಾದ ಎ.ಆರ್.ಪ್ರಕಾಶ್ ಅವರು, ಸರ್ಕಾರದ ಯೋಜನೆಗಳ ಬಗ್ಗೆ ನಾಗರಿಕರಿಗೆ ತಿಳಿಯಪಡಿಸುವ ಕೆಲಸವನ್ನು ವಾರ್ತಾ ಇಲಾಖೆ ಮಾಡುತ್ತಿದೆ. ಮಹಿಳಾ ಸಬಲೀಕರಣದ ಬಗ್ಗೆ ಆಯೋಜಿಸಿರುವ ಈ ಕಾರ್ಯಾಗಾರ ವಿವಿಧ ಕ್ಷೇತ್ರಗಳಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿರುವ ಪ್ರತಿನಿಧಿಗಳ ಆಗಮನದಿಂದ ಹೆಚ್ಚು ಅರ್ಥಪೂರ್ಣವಾಗಿದೆ. ಮಹಿಳಾ ಸಬಲೀಕರಣದಲ್ಲಿ ಸ್ವಯಂಸೇವಾ ಸಂಸ್ಥೆಗಳ ಪಾತ್ರ, ಮಹಿಳಾ ಸ್ವಾವಲಂಬನೆ ಮತ್ತು ಕೃಷಿ, ಮಹಿಳಾ ಸಬಲೀಕರಣದಲ್ಲಿ ಮಹಿಳಾ ಮೀಸಲಾತಿ ಮುಂತಾದ ವಿಷಯಗಳ ಬಗ್ಗೆ ವಿವಿಧ ಇಲಾಖೆಯ ಮುಖಸ್ಥರು ಪರಿಣಿತರು ಕಾರ್ಯಾಗಾರದಲ್ಲಿ ತಿಳಿಸಿ ಕೊಡಲಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಹಂಪಿಯ ಸಿರಿಗನ್ನಡ ಕನ್ನಡ ವಿಶ್ವವಿದ್ಯಾಲಯದ ಮುಖ್ಯಸ್ಥರಾದ ಹೆಚ್.ನಾಗವೇಣಿ, ಪ್ರಜಾವಾಣಿ ದಿನಪತ್ರಿಕೆಯ ಮುಖ್ಯ ಉಪ ಸಂಪಾದಕರಾದ ಎನ್.ಎ.ಎಂ.ಇಸ್ಮಾಯಿಲ್, ಬೆಂಗಳೂರು ವಿಶ್ವವಿದ್ಯಾಲಯದ ಕೋಲಾರ ಪಿ.ಜಿ.ಕೇಂದ್ರದ ಸಹ ಪ್ರಾಧ್ಯಾಪಕ ಹಾಗೂ ಶಿಬಿರದ ನಿರ್ದೇಶಕರಾದ ಡಾ| ಡಾಮಿನಿಕ್ ಡಿ. ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ದಕ್ಷಿಣ ಕನ್ನಡ ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಅವರು ಸ್ವಾಗತಿಸಿದರು. ಕೊಡಗು ಜಿಲ್ಲಾ ವಾರ್ತಾಧಿಕಾರಿ ವಿನೋದ್ ಚಂದ್ರ ಅವರು ಕಾರ್ಯಕ್ರಮ ನಿರೂಪಿಸಿದರು.

Tuesday, February 15, 2011

ಕರ್ತವ್ಯಚ್ಯುತಿ: ಜಿಲ್ಲಾಧಿಕಾರಿಗಳಿಂದ ಸಮಜಾಯಿಷಿ ಕೋರಿ ನೋಟೀಸು ಜಾರಿ

ಮಂಗಳೂರು, ಫೆಬ್ರವರಿ.15: ಸಾಮಾಜಿಕ ಭದ್ರತಾ ಯೋಜನೆಗಳಾದ ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ ಯೋಜನೆ, ವಿಧವಾ ವೇತನದಂತಹ ಕಡತಗಳ ವಿಲೇಯಲ್ಲಿ ನಿರ್ಲಕ್ಷ್ಯ ತೋರಿ ವಿಳಂಬಿಸಿದ್ದಕ್ಕೆ ಬೆಳ್ತಂಗಡಿ ಕಸ್ಬಾದ ಮೂವರು ಕಂದಾಯ ನಿರೀಕ್ಷಕರಿಗೆ ಸಮಜಾಯಿಷಿ ಕೋರಿ ನೋಟೀಸು ಜಾರಿ ಮಾಡಲು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.

ಫೆಬ್ರವರಿ 10 ರಂದು ಬೆಳ್ತಂಗಡಿ ತಾಲೂಕು ಕಚೇರಿಗೆ ಅನಿರೀಕ್ಷಿತ ಭೇಟಿ ನೀಡಿದ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು, ಎಲ್ಲ ಪಿಂಚಣಿ ಯೋಜನೆಗಳಿಗೆ ಸಂಬಂಧಪಟ್ಟಂತೆ ಬಾಕಿ ಪಟ್ಟಿಯನ್ನು ಪರಿಶೀಲಿಸಿ ಈ ಕ್ರಮ ಕೈಗೊಂಡಿದ್ದಾರೆ. ಬೆಳ್ತಂಗಡಿಯ ಕೊಕ್ಕಡ ಹೋಬಳಿಯಲ್ಲಿ ಅಂಗವಿಕಲ ವೇತನಕ್ಕೆ ಸಂಬಂಧಿಸಿದಂತೆ ಒಟ್ಟು 11 ಪ್ರಕರಣಗಳು, ಸಂಧ್ಯಾ ಸುರಕ್ಷಾದ 23 ಪ್ರಕರಣಗಳು, ವಿಧವಾ ವೇತನದ 33 ಪ್ರಕರಣಗಳು 18.10. 10ರಿಂದ ಬಾಕಿ ಇರುವುದನ್ನು ಗಮನಿಸಲಾಗಿದೆ. ಬೆಳ್ತಂಗಡಿ ಕಸ್ಬಾದಲ್ಲಿ ಅಂಗವಿಕಲ ವೇತನಕ್ಕೆ ಸಂಬಂಧಿಸಿದಂತೆ ಒಟ್ಟು 171 ಪ್ರಕರಣಗಳು, ಸಂಧ್ಯಾ ಸುರಕ್ಷಾದ 149 ಪ್ರಕರಣಗಳು, ವಿಧವಾ ವೇತನದ 9 ಪ್ರಕರಣಗಳು 25.10. 10ರಿಂದ ಬಾಕಿ ಇವೆ. ವೇಣೂರು ಹೋಬಳಿಯಲ್ಲಿ ಅಂಗವಿಕಲ ವೇತನಕ್ಕೆ ಸಂಬಂಧಿಸಿದಂತೆ ಒಟ್ಟು 13 ಪ್ರಕರಣಗಳು, ಸಂಧ್ಯಾ ಸುರಕ್ಷಾದ 105 ಪ್ರಕರಣಗಳು, ವಿಧವಾ ವೇತನದ 22 ಪ್ರಕರಣಗಳು 20.10. 10 ರಿಂದ ಬಾಕಿ ಇದೆ. ಮೂರು ಕಂದಾಯಾಧಿಕಾರಿಗಳಿಗೂ ನೋಟೀಸು ನೀಡಲಾಗಿದೆ. ಬೆಳ್ತಂಗಡಿ ತಹಸೀಲ್ದಾರರಿಗೆ ಆರ್ ಎಂ ಐ ಎಸ್ ಬಾಕಿಯನ್ನು ತಕ್ಷನ ವಿಲೇ ಮಾಡಲು ಕ್ರಮಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.

ಶಾಲೆಗಳ ಮೂಲಭೂತ ಸೌಕರ್ಯಗಳ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಿಸಲು ಸಭೆ

ಮಂಗಳೂರು, ಫೆಬ್ರವರಿ.15: ಉಚಿತ ಮತ್ತು ಕಡ್ಡಾಯ ಶಿಕ್ಷಣವು ಸಂವಿಧಾನ ಬದ್ಧ ಹಕ್ಕಾಗಿದ್ದು, ಈ ಹಕ್ಕಿನ ಪರಿಣಾಮಕಾರಿ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯ ಎಲ್ಲ ಜಿಲ್ಲಾಧಿಕಾರಿಗಳಿಂದ ವರದಿ ಕೋರಿದ್ದು, ಸಮಗ್ರ ವರದಿ ತಯಾರಿಸಲು ಅಪರ ಜಿಲ್ಲಾಧಿಕಾರಿಗಳಾದ ಪ್ರಭಾಕರ ಶರ್ಮಾ ಅವರು ಸೂಚನೆ ನೀಡಿದರು.
ಅವರಿಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕರೆದಿದ್ದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡಿ, ವರದಿಯನ್ನು ಸಾಕಷ್ಟು ಎಚ್ಚರಿಕೆಯಿಂದ ಹಾಗೂ ಕರಾರುವಕ್ಕಾಗಿ ಸಲ್ಲಿಸಬೇಕೆಂದು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು. ಪ್ರತಿ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಲ್ಲಿನ ಮೂಲಭೂತ ಸೌಕರ್ಯಗಳು,ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ, ಕುಡಿಯುವ ನೀರು, ಕಂಪೌಂಡ್ ವಾಲ್ ಸೇರಿದಂತೆ ಎಲ್ಲ ಸೌಕರ್ಯಗಳನ್ನು ಪರಿಶೀಲಿಸಲು ಎರಡು ಸಮಿತಿಗಳನ್ನು ರಚಿಸಲಾಯಿತು. ಜಿಲ್ಲಾ ಮಟ್ಟದಲ್ಲಿ ಸಮನ್ವಯಾಧಿಕಾರಿಗಳಾಗಿ ವಿದ್ಯಾಂಗ ಉಪನಿರ್ದೆಶಕರಾದ ಚಾಮೇಗೌಡ ಅವರು ಕರ್ತವ್ಯ ನಿರ್ವಹಿಸುವರು. ಬಿಇಒ ಅವರು ನೋಡಲ್ ಅಧಿಕಾರಿಗಳಾಗಿರುವರು. ಜಿಲ್ಲಾಮಟ್ಟದ ಅಧಿಕಾರಿಗಳ ತಂಡ ಬಿಇಒ ವಲಯದ ಅಧಿಕಾರಿಗಳ ತಂಡ ತಯಾರಿಸಿದ ವರದಿಯನ್ನು ಸ್ಥಳ ಭೇಟಿಯ ಮೂಲಕ ಪರಿಶೀಲಿಸಲಿದೆ. ವರದಿ ಸಮರ್ಪಕ ವಾಗಿರ ಬೇಕೆಂಬುದಕ್ಕೆ ಹೆಚ್ಚಿನ ಒತ್ತನ್ನು ನೀಡಲಾಗಿದೆ. ಸಭೆಯಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಉಪ ನಿರ್ದೇಶಕ ರಾದ ವೃಷಭ ರಾಜೇಂದ್ರ ಮೂರ್ತಿ, ಪಶುಪಾಲನಾ ಇಲಾಖೆ ಉಪನಿರ್ದೇಶಕರಾದ ಡಾ. ಕೆ.ವಿ ಹಲಗಪ್ಪ ಅವರನ್ನೊಳಗೊಂಡಂತೆ ಶಿಕ್ಷಣ ಇಲಾಖೆಗೆ ಸಂಬಂಧಿಸಿದ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.
ಪುತ್ತೂರು ವಲಯಕ್ಕೆ ಸಹಾಯಕ ಆಯುಕ್ತರಾದ ಡಾ. ಹರೀಶ್ ಕುಮಾರ್, ಬೆಳ್ತಂಗಡಿ ವಲಯಕ್ಕೆ ವಿಜಯ ಬಿ.ಪಿ (ಪ್ರೊಬೇಷನರಿ ಕೆ ಎ ಎಸ್), ಮೂಡಬಿದ್ರಿ ವಲಯಕ್ಕೆ ಫಿಲೋಮಿನಾ ಲೋಬೋ, ಮಂಗಳೂರು ವಲಯಕ್ಕೆ ಜಿಲ್ಲಾ ಸಮಾಜಕಲ್ಯಾಣಾಧಿಕಾರಿ ಅರುಣ್ ಫುರ್ಟದೋ, ಮಂಗಳೂರು ನಗರಕ್ಕೆ ಮಂಜುಳಾ, ಸುಳ್ಯ ವಲಯಕ್ಕೆ ಬಿ.ಕೆ. ಕುಸುಮಾಧರ್, ಬಂಟ್ವಾಳ ವಲಯಕ್ಕೆ ಡಾ. ಕೆ.ವಿ.ಹಲಗಪ್ಪ ಅವರನ್ನು ನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ. ಫೆಬ್ರವರಿ 28 ರೊಳಗೆ ಈ ಸಂಬಂಧ ಸಂಪೂರ್ಣ ವರದಿ ಸಿದ್ಧಗೊಳ್ಳಬೇಕಿದೆ.

Monday, February 14, 2011

ಸಚಿವರಿಂದ ನೇತ್ರಾವತಿ ಜಲಾಶಯಕ್ಕೆ ಬಾಗಿನ

ಮಂಗಳೂರು.ಫೆಬ್ರವರಿ,14: ಮಂಗಳೂರು ನಗರಕ್ಕೆ ಮತ್ತು ನೆರೆಯ ಗ್ರಾಮೀಣ ಪ್ರದೇಶಗಳಿಗೆ ನಿರಂತರ ಕುಡಿಯುವ ನೀರು ಒದಗಿಸಲು ಮಹಾನಗರಪಾಲಿಕೆ ಸಜ್ಜಾಗಿದೆ ಎಂದು ರಾಜ್ಯದ ಬಂದರು, ಮೀನುಗಾರಿಕೆ, ಪರಿಸರ, ಜೀವಿಶಾಸ್ತ್ರ ಮತ್ತು ಒಳನಾಡು ಜಲಸಾರಿಗೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಜೆ. ಕೃಷ್ಣ ಪಾಲೆಮಾರ್ ಹೇಳಿದ್ದಾರೆ.ಅವರು ಇಂದು ತುಂಬೆಯಲ್ಲಿ ನೇತ್ರಾವತಿ ನದಿಗೆ ಗಂಗಾ ಪೂಜೆ ನೆರವೇರಿಸಿ ಬಾಗಿನ ಅರ್ಪಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಪ್ರಸ್ತುತ ತುಂಬೆ ವೆಂಟೆಡ್ ಡ್ಯಾಂ ನಿಂದ ಮಂಗ ಳೂರು ಮಹಾ ನಗರ ಪಾಲಿಕೆ, ಉಳ್ಳಾಲ ಪುರ ಸಭೆ ಹಾಗೂ ಮುಲ್ಕಿ ನಗರ ಸಭೆಗೆ ನೀರು ಒದಗಿ ಸಲಾ ಗುತ್ತಿದೆ. ಮುಂದಿನ ದಿನ ಗಳಲ್ಲಿ ಚೇಳಾರು, ಹಳೆ ಯಂ ಗಡಿ, ನೀರು ಮಾರ್ಗ, ಮೂಡು ಶೆಡ್ಡೆ ಮುಂತಾದ ಗ್ರಾಮೀಣ ಪ್ರದೇಶ ಗಳಿಗೆ ನೀರು ಒದಗಿ ಸಲು ಕ್ರಮ ಕೈ ಗೊಳ್ಳ ಲಾಗು ವುದು ಎಂದರು.
ಇದೇ ಸಂದರ್ಭದಲ್ಲಿ ನೂತನ ವೆಂಟೆಡ್ ಡ್ಯಾಂನ ಕಾಮಗಾರಿಯ ವೀಕ್ಷಣೆ ನಡೆಸಿದ ಸಚಿವರು, ಸುಮಾರು ರೂ.48.37 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಹೊಸ ವೆಂಟೆಡ್ ಡ್ಯಾಂ ಕಾಮಗಾರಿ ಭರದಿಂದ ನಡೆಯುತ್ತಿದೆ. ಕಾಮಗಾರಿಯ ಗುಣಮಟ್ಟಕ್ಕೆ ಆದ್ಯತೆ ನೀಡಬೇಕೆಂಬುದು ನಿರ್ದೇಶಿಸಿದ ಸಚಿವರು, ಅದರಂತೆ ಅಣೆಕಟ್ಟು ಮುಂದಿನ ಒಂದು ವರ್ಷದೊಳಗೆ ಪೂರ್ಣಗೊಳ್ಳಲಿದೆ. ಅಣೆಕಟ್ಟು ಕಾಮಗಾರಿ ಪೂರ್ಣಗೊಂಡ ಬಳಿಕ ಎಲ್ಲಾ ದಿನಗಳಲ್ಲೂ ನಿರಂತರ ನೀರು ಪೂರೈಕೆ ಮಾಡಲಾಗುವುದು ಎಂದು ನುಡಿದ ಸಚಿವರು, ಲಕ್ಯಾ ಡ್ಯಾಂ ನಿಂದ ಮಹಾನಗರಪಾಲಿಕೆಗೆ ನೀರು ಪೂರೈಕೆಗೆ ಈಗಾಗಲೇ ಸಮ್ಮತಿ ಸಿಕ್ಕಿದೆ. ಈ ನೀರನ್ನು ಕೈಗಾರಿಕೆಗಳಿಗೆ ಬಳಸಬಹುದು ಎಂದು ಸಚಿವರು ತಿಳಿಸಿದರು.
ಮುಖ್ಯಮಂತ್ರಿಗಳು ಮನಪಾಕ್ಕೆ ಒದಗಿಸಿದ ದ್ವಿತೀಯ ಹಂತದ ರೂ.100 ಕೋಟಿ ವಿಶೇಷ ಅನುದಾನದ ಕ್ರಿಯಾಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಮೂರನೇ ಹಂತದಲ್ಲಿ ಮತ್ತೆ ರೂ.100 ಕೋಟಿ ವಿಶೇಷ ಅನುದಾನ ಒದಗಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿರುತ್ತಾರೆ ಎಂದು ಸಚಿವ ಪಾಲೆಮಾರ್ ನುಡಿದರಲ್ಲದೆ, ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರಕಾರ ಜನತೆಯ ಕಲ್ಯಾಣ ಕಾರ್ಯಕ್ರಮಗಳಿಗಾಗಿ ಹಿಂದೆಂದೂ ಒದಗಿಸದಷ್ಟು ಅನುದಾನವನ್ನು ಒದಗಿಸುತ್ತಿರುವುದಾಗಿ ಹೇಳಿದರು.
24x7 ನೀರು ಪೂರೈಕೆ:ಮಹಾ ನಗರ ಪಾಲಿಕೆ ಯ ನಾಲ್ಕೈದು ವಾರ್ಡ್ ಗಳಲ್ಲಿ ಪೈಲೆಟ್ ಯೋಜನೆ ಯನ್ವಯ ದಿನದ 24 ಗಂಟೆ ಯೂ ನೀರು ಪೂರೈಕೆ ಯೋಜನೆ ಯ ಸಮೀಕ್ಷೆ ಕಾರ್ಯ ಪ್ರಗತಿ ಯಲ್ಲಿದೆ. ಕ್ರಿಶೆಲ್ ಕಾರ್ಪೋರೇಶನ್ ಎಂಬ ಸಂಸ್ಥೆ ಈ ವೈಜ್ಞಾನಿಕ ಸಮೀಕ್ಷೆಯನ್ನು ನಡೆಸುತ್ತಿದೆ. ಪೈಲೆಟ್ ಯೋಜನೆಯ ಬಳಿಕ ಪಾಲಿಕೆಯ ಎಲ್ಲಾ ವಾರ್ಡಗಳಿಗೂ ಈ ಸೇವೆಯನ್ನು ವಿಸ್ತರಿಸಲಾಗುವುದು ಎಂದು ಮನಪಾ ಆಯುಕ್ತ ಡಾ. ಕೆ.ಎನ್.ವಿಜಯಪ್ರಕಾಶ್ ತಿಳಿಸಿದರು.
ಈಗಿರುವ ವೆಂಟೆಡ್ ಡ್ಯಾಂ, 4 ಮೀ. ಎತ್ತರ ಹೊಂದಿದ್ದು, 9 ಮಿಲಿಯನ್ ಕ್ಯೂಬಿಕ್ ಮೀ. ನೀರು ಸಂಗ್ರಹದ ಸಾಮಥ್ರ್ಯ ಹೊಂದಿದೆ. ಆದರೆ ಹೂಳು ತುಂಬಿರುವುದರಿಂದ 4.5 ಮಿಲಿಯ ಕ್ಯೂಬಿಕ್ ಮೀ. ನೀರು ಸಂಗ್ರಹ ಮಾತ್ರ ಸಾಧ್ಯವಾಗಿದೆ. ಈಗಿನ ನೀರಿನ ಸಂಗ್ರಹ 21 ದಿನಗಳಿಗೆ ಮಾತ್ರ ಸಾಕಾಗುವಷ್ಟಿದೆ ಎಂದರು. 7 ಮೀ. ಎತ್ತರದ 350 ಮೀ. ಉದ್ದದ ನೂತನ ವೆಂಟೆಡ್ ಡ್ಯಾಂ ನಿಮರ್ಾಣದ ಬಳಿಕ 14.74 ಕ್ಯೂಬಿಕ್ ಮಿಲಿಯ ಲೀ. ನೀರು ಸಂಗ್ರಹಿಸಬಹುದಾಗಿದೆ. ಈ ಸಂಗ್ರಹ 90 ದಿನಗಳ ಬೇಡಿಕೆಯನ್ನು ಪೂರೈಸಲಿದೆ. ಕಾಮಗಾರಿಯನ್ನು ಇನ್ನಷ್ಟು ವೇಗವಾಗಿ ನಡೆಸುವಂತೆ ಜಲಮಂಡಳಿಯ ಅಧಿಕಾರಿಗಳಿಗೆ ನಿರ್ದೇಶನವನ್ನು ನೀಡಲಾಗಿದೆ. ಜಲಮಂಡಳಿಯ ಮುಖ್ಯ ಅಭಿಯಂತರರು ಮುಂದಿನ ವಾರ ತುಂಬೆಗೆ ಭೇಟಿ ನೀಡಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಲಿದ್ದಾರೆ ಎಂದು ಆಯುಕ್ತರು ತಿಳಿಸಿದರು.
ಸಮಾರಂಭದಲ್ಲಿ ಮೇಯರ್ ರಜನಿ ದುಗ್ಗಣ್ಣ, ಉಪಮೇಯರ್ ರಾಜೇಂದ್ರ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಾಂತಾ ಆರ್., ಶೆಟ್ಟಿ , ರೂಪಾ ಡಿ.ಬಂಗೇರ, ದಿವಾಕರ್, ಮುಖ್ಯ ಸಚೇತಕ ರಂಗನಾಥ ಕಿಣಿ, ಜಿ.ಪಂ. ಸದಸ್ಯೆ ಮಮತಾ ಗಟ್ಟಿ, ಬಂಟ್ವಾಳ ತಾ.ಪಂ. ಅಧ್ಯಕ್ಷೆ ಶೈಲಜಾ, ಸದಸ್ಯೆ ಸುನೀತಾ ಪೂಜಾರಿ, ತುಂಬೆ ಗ್ರಾ.ಪಂ. ಉಪಾಧ್ಯಕ್ಷ ದಿವಾಕರ ಪಂಬದಬೆಟ್ಟು ಮುಂತಾದವರು ಉಪಸ್ಥಿತರಿದ್ದರು.

69 ಅರ್ಹ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿಗೆ ಕ್ರಮ: ಜಿಲ್ಲಾಧಿಕಾರಿ

ಮಂಗಳೂರು,ಫೆಬ್ರವರಿ.14: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಯ ಅಧಿನಿಯಮದಂತೆ ಒಟ್ಟು ತಪಾಸಣೆ ನಡೆಸಿದ 755 ಸಂಸ್ಥೆಗಳ ಪೈಕಿ 69 ಅರ್ಹವಾಗಿದ್ದು, ಅರ್ಹವಿರುವ ಸಂಸ್ಥೆಗಳನ್ನು ನೋಂದಾಯಿಸಲು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಸೂಚಿಸಿದರು.
ಅವರು ಇಂದು ಜಿಲ್ಲಾಧಿ ಕಾರಿಗಳ ಕಚೇರಿ ಯಲ್ಲಿ ನಡೆದ ಖಾಸಗಿ ವೈದ್ಯ ಕೀಯ ನೋಂದಾ ವಣೆ ಪ್ರಾಧಿ ಕಾರದ ಸಭೆಯನ್ನು ಉದ್ದೇಶಿಸಿ ಮಾತ ನಾಡು ತ್ತಿದ್ದರು. ತಪಾಸಣೆಯ ವೇಳೆ 686 ಸಂಸ್ಥೆಗಳಲ್ಲಿ ನ್ಯೂನತೆ ಕಂಡುಬಂದಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಶ್ರೀರಂಗಪ್ಪ ತಿಳಿಸಿದರು. ಈ ನ್ಯೂನತೆಗಳನ್ನು ಸರಿಪಡಿಸಲು ಕಾಲಾವಕಾಶ ನೀಡಿ ನೋಟೀಸು ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಐ ಎಂ ಎ ಕಡೆಯಿಂದ ಸಭೆಯಲ್ಲಿ ಪಾಲ್ಗೊಂಡ ಡಾ. ಮೋಹನ್ ದಾಸ ಭಂಡಾರಿಯವರು ಮಾತನಾಡಿ, ಅಧಿನಿಯಮ ಸಡಿಲಿಕೆಗೆ ಮನವಿ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಯ ಅಧಿನಿಯಮ 2007 ಹಾಗೂ 2009 ಒಂದು ಕಾನೂನಾಗಿದ್ದು, ಅದನ್ನು ಬದಲಾಯಿಸುವ ಅಧಿಕಾರ ಜಿಲ್ಲಾ ನೋಂದಣಿ ಪ್ರಾಧಿಕಾರಕ್ಕೆ ಇರುವುದಿಲ್ಲ. ಹಾಗೂ ಈ ಸಂಬಂಧ ಐ ಎಂ ಎ ಕೊಟ್ಟ ಮನವಿಯನ್ನು ಸರ್ಕಾರಕ್ಕೆ ಮುಂದಿನ ಕ್ರಮಕ್ಕೆ ಕಳುಹಿಸಿಕೊಡಲಾಗುವುದು ಎಂದು ಹೇಳಿದರು.
ಈವರೆಗೆ ಅರ್ಜಿ ಹಾಕದಿರುವ ಹಾಗೂ 24.10.2010 ಅರ್ಜಿ ನೋಂದಾವಣೆಗೆ ಕೊನೆಯ ದಿನಾಂಕವಾಗಿದ್ದು, ಅದರ ನಂತರ ಅರ್ಜಿ ಹಾಕಿದ 95 ಸಂಸ್ಥೆಗಳ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಸೂಚಿಸಿದರು. ಸಭೆಯಲ್ಲಿ ಐ ಎಂ ಎ ಪದಾಧಿಕಾರಿಗಳು, ಸ್ಥಳೀಯ ತಪಾಸಣಾ ತಂಡಗಳ ಮುಖ್ಯಸ್ಥರು ಹಾಗೂ ಕಾರ್ಯಕ್ರಮ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

ಸುಧಾರಣೆಯತ್ತ ಸಮುದಾಯ ಆರೋಗ್ಯ ಕೇಂದ್ರಗಳು

ಮಂಗಳೂರು, ಫೆಬ್ರವರಿ.14:ಎಲ್ಲರಿಗೂ ಆರೋಗ್ಯ ಭಾಗ್ಯ ಇದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಧೋರಣೆ. ಈ ನಿಟ್ಟಿನಲ್ಲಿ ದೇಶದ ಯಾರೊಬ್ಬರೂ ಆರೋಗ್ಯ ಸೇವೆಗಳಿಂದ ವಂಚಿತರಾಗಬಾರದೆಂದು ಸರ್ಕಾರದ ಉದ್ದೇಶ. ಈ ಕಾರಣಕ್ಕಾಗಿ ಸರ್ಕಾರ ಈ ಹಿಂದೆ ಇದ್ದ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಇದ್ದಂತಹ ಹೊಣೆಗಾರಿಕೆಯ ಕೊರತೆ ಯಿಂದಾಗಿ ರೋಗಿಗಳು ಆರೋಗ್ಯ ಸೇವೆಗಳಿಗೆ ಖಾಸಗಿ ಸೌಲಭ್ಯ ಗಳತ್ತ ಹೋಗುವು ದನ್ನು ತಡೆಗಟ್ಟಲು ಆರೋಗ್ಯ ಸೇವೆಗಳಲ್ಲಿ ಉತ್ತಮ ಗುಣ ಮಟ್ಟದ ಹೊಣೆಗಾರಿಕೆ ಯನ್ನು ತರಲು ಪ್ರಥಮ ಆರೋಗ್ಯ ಸೇವಾ ಕೇಂದ್ರಗಳನ್ನು ಆರಂಭಿಸಲಾಗಿದ್ದು, ಈ ಆರೋಗ್ಯ ಕೇಂದ್ರಗಳಿಗೆ ಮತ್ತು ಭಾರತೀಯ ಸಾರ್ವಜನಿಕ ಆರೋಗ್ಯ ಮಟ್ಟವನ್ನು ನಿಗಧಿಪಡಿಸಲಾಗಿದೆ.
ಇದರಿಂದಾಗಿ ಭಾರತೀಯ ಸಾರ್ವಜನಿಕ ಆರೋಗ್ಯ ನಿಯಮಾವಳಿಯಂತೆ ಕಟ್ಟಡ,ಮಾನವಶಕ್ತಿ ಸಾಧನ ಸಲಕರಣೆ ಔಷಧಿ ಗುಣಮಟ್ಟದ ಖಾತ್ರಿಯನ್ನು ಒಳಗೊಂಡಂತೆ ಮೂಲಭೂತ ಸೌಕರ್ಯಗಳ ಉತ್ತಮ ಗುಣಮಟ್ಟವನ್ನು ಈ ಆರೋಗ್ಯ ಕೇಂದ್ರಗಳು ಖಾತ್ರಿಪಡಿಸಲಿವೆ.
ಪ್ರಥಮ ಆರೋಗ್ಯ ಸೇವಾ ಕೇಂದ್ರಗಳ ಕಾರ್ಯ ಚಟುವಟಿಕೆಗಳು:-ಇವರು ದಿನದ 24 ಗಂಟೆಗಳು (24 *7) ವ್ಯಾಪಕ ತುರ್ತು ಪ್ರಸೂತಿಕಾ ರಕ್ಷಣೆಯ ಅಧಿಕೃತ ಮಾನದಂಡವನ್ನು ಒಳಗೊಂಡಿದ್ದು,ಪ್ರಸವ ವೇದನೆ ಅನುಭವಿಸುತ್ತಿರುವ ಒಬ್ಬ ಗರ್ಭಿಣಿ ಸ್ತ್ರೀಯು ಹಗಲಿನಲ್ಲಾಗಲೀ ರಾತ್ರಿಯಲ್ಲಾಗಲೀ ಆಸ್ಪತ್ರೆಗೆ ಬಂದಕೂಡಲೇ ಪ್ರಸೂತಿಕಾ ಕೋಣೆಗೆ ದಾಖಲಿಸಬೇಕು.ಇಂತಹ ಸಮಯದಲ್ಲಿ ಗರ್ಭಿಣಿಗೆ ರಕ್ತಸ್ರಾವ,ಎಳೆತ ಅಥವಾ ದಿಗ್ಬ್ರಮೆಗೆ ಒಳಗಾದ ಲಕ್ಷಣಗಳು ಕಂಡುಬಂದರೆ ಪರೀಕ್ಷಿಸಿ ಕೂಡಲೇ ಚಿಕಿತ್ಸೆ ನೀಡಬೇಕು. ಇದಲ್ಲದೆ ಪ್ರಸೂತಿಕಾ ಕೋಣೆ ಮತ್ತು ಶಸ್ತ್ರಚಿಕಿತ್ಸಾ ಕೋಣೆಗೆ ಸಮೀಪದಲ್ಲಿ ತುರ್ತು ನಿಗಾ ಘಟಕವನ್ನು ಆವಶ್ಯಕವಾದ ರಕ್ತದೊಂದಿಗೆ ತಜ್ಞರ ತಂಡ ಲಭ್ಯವಾಗುವಂತಿರಬೇಕು.
ಪ್ರಥಮ ಆರೋಗ್ಯ ಸೇವಾ ಕೇಂದ್ರದಲ್ಲಿ ಒಬ್ಬ ಪ್ರಸೂತಿಕಾ ತಜ್ಷರು,ಅರಿವಳಿಕೆ ತಜ್ಞರು,ಮಕ್ಕಳ ತಜ್ಞರ ಜೊತೆಗೆ ಜೀವರಕ್ಷಕ ಔಷಧಿಗಳು ಮತ್ತು ಐವಿ ದ್ರಾವಣ ಸೇರಿದಂತೆ ರಕ್ತ ಸಂಗ್ರಹಾಲಯದ ದೂರವಾಣಿ ಇತ್ಯಾದಿ ಅತ್ಯವಶ್ಯಕವಾದುದನ್ನು ಹೊಂದಿರಬೇಕು.
24 ಗಂಟೆಗಳೂ ಪ್ರಯೋಗಾಲಯ ಸೇವೆಗಳು ದೊರೆಯಬೇಕು,ಮಕ್ಕಳ ತಜ್ಞರು ಹಾಜರಿರಬೇಕು.ತುರ್ತು ಶಿಷ್ಟಾಚಾರಗಳು ಲಭ್ಯವಿರಬೇಕು. ಶಸ್ತ್ರಚಿಕಿತ್ಸೆ ಆದ ನಂತರ ಬಾಣಂತಿಯ ಶುಶ್ರೂಷೆಗೆ ಪ್ರತೀ 2ಗಂಟೆಗೊಮ್ಮೆ ಪರೀಕ್ಷಿಸುತ್ತಿರಬೇಕು.
ಇವೆಲ್ಲಾ ಸೌಲಭ್ಯಗಳನ್ನು ಹೊಂದಿರುವ ಪ್ರಥಮ ಆರೋಗ್ಯ ಸೇವಾ ಕೇಂದ್ರಗಳು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮೂಲ್ಕಿ,ಮೂಡಬಿದ್ರೆ, ಬಂಟ್ವಾಳ,ಬೆಳ್ತಂಗಡಿ,ಸುಳ್ಯ ಮತ್ತು ಪುತ್ತೂರುಗಳಲ್ಲಿವೆ.ದ.ಕ.ಜಿಲ್ಲೆಯಲ್ಲಿರುವ ಈ ಆರು ಪ್ರಥಮ ಆರೋಗ್ಯ ಸೇವಾ ಘಟಕಗಳಲ್ಲಿ ಆರು ಜನನಿ ಸುರಕ್ಷಾ ವಾಹಿನಿಯ ಸೌಲಭ್ಯವಿದೆ.
ಇದಲ್ಲದೆ ಇಲ್ಲಿ ದೊರಕುವ ಇತರೆ ಸೇವೆಗಳೆಂದರೆ ಕರಳುಬೇನೆ,ರಕ್ತಸ್ರಾವಗಳಂತಹ ತುರ್ತು ಪ್ರಸಂಗಗಳನ್ನು ಗಮನಿಸುವುದು,ಸಿಸೇರಿಯನ್ ಮತ್ತು ಇತರ ವೈದ್ಯಕೀಯ ಆವಶ್ಯ ಶುಶ್ರೂಷೆಗಳ ಸುರಕ್ಷಾ ಗರ್ಭಪಾತ ಸೇವೆಗಳು,ಅನಾರೋಗ್ಯ ಪೀಡಿತ ಮಕ್ಕಳಿಗೆ ದಿನನಿತ್ಯ ತುತರ್ು ಸೇವೆ ಒದಗಿಸುವುದು,ಹರ್ನಿಯಾ ಹೈಡ್ರೋಸೆಲ್ ,ಅಪೆಂಡಿಸೈಟಸ್,ಪಿಸ್ತೂಲ ಮುಂತಾದ ಶಸ್ತ್ರಚಿಕಿತ್ಸೆಗೊಳಗಾದ ರೋಗಗಳಿಗೂ ಚಿಕಿತ್ಸೆ ನೀಡಲಾಗುವುದು.
ಜಿಲ್ಲೆಯಲ್ಲಿರುವ ಆರು ಪ್ರಥಮ ಆರೋಗ್ಯ ಸೇವಾ ಘಟಕಗಳಿಂದ ಗ್ರಾಮಾಂತರ ಪ್ರದೇಶದ ಜನ ಆರೋಗ್ಯ ಸೇವೆಗಳಿಗಾಗಿ ಖಾಸಗಿ ನರ್ಸಿಂಗ್ ಹೋಂಗಳಿಗೆ ಹೋಗಿ ದುಪ್ಪಟ್ಟು ಹಣ ವೆಚ್ಚ ಮಾಡುವುದು ತಪ್ಪು. ಎಲ್ಲಾ ರೀತಿಯ ಉತ್ತಮ ಆರೋಗ್ಯ ಸೇವೆಗಳು ದಿನದ 24 ಗಂಟೆಯೂ ದೊರಕುವಂತಾಗಿದೆ. ಪ್ರಥಮ ಆರೋಗ್ಯ ಸೇವಾ ಘಟಕಗಳು ಗ್ರಾಮಾಂತರ ಜನರಿಗೆ ರಾಜ್ಯ ಸರ್ಕಾರ ಕಲ್ಪಿಸಿರುವ ಆರೋಗ್ಯ ಸೇವಾ ಕೊಡುಗೆಯೇ ಸರಿ.

ನಂದಿನಿ ಹಾಲಿನ ದರ ಹೆಚ್ಚಳ

ಮಂಗಳೂರು. ಫೆಬ್ರವರಿ,14: ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಉತ್ಪಾದನಾ ವೆಚ್ಚದಿಂದಾಗಿ ಉತ್ಪಾದನೆ ಮತ್ತು ಹಾಲು ಶೇಖರಣೆ ತೀವ್ರವಾಗಿ ಇಳಿಮುಖವಾಗುತ್ತಿರುವ ಹಿನ್ನಲೆಯಲ್ಲಿ ಉತ್ಪಾದನಾ ವೆಚ್ಚವನ್ನು ಸಾಧ್ಯವಾದಷ್ಟು ಸರಿದೂಗಿಸುವುದು ಆವಶ್ಯಕವಾಗಿರುತ್ತದೆ. ರಾಜ್ಯದ ಹೈನುಗಾರರ ರೈತರ ಹಿತದೃಷ್ಠಿಯಿಂದ ಹಾಲಿನ ಮಾರಾಟ ದರವನ್ನು ರೂ 2.00 ಹೆಚ್ಚಿಸಲು ಕರ್ನಾಟಕ ಸರ್ಕಾರವು ಅನುಮತಿ ನೀಡಿದ್ದು, ನಂದಿನಿ ಹಾಲಿನ ಮಾರಾಟ ದರವನ್ನು ರೂ.2.00 ಹೆಚ್ಚಿಸಲು ಕರ್ನಾಟಕ ಹಾಲು ಮಹಾಮಂಡಳಿಯು ತೀರ್ಮಾನಿಸಿರುತ್ತದೆ.
ಅದರಂತೆ ದಿನಾಂಕ 15-2-11 ರ ಬೆಳಗಿನ ಸರದಿ ಯಿಂದ ಅನ್ವಯ ವಾಗು ವಂತೆ ದಕ್ಷಿಣ ಕನ್ನಡ ಹಾಲು ಒಕ್ಕೂಟದ ವ್ಯಾಪ್ತಿಗೆ ಬರುವ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳ ಪರಿಷ್ಕೃತ ಮಾರಾಟ ದರವು ಈ ಕೆಳಕಂಡಂತಿರುತ್ತದೆ.

ಟೋನ್ಡ್ ಹಾಲು 500 ಮಿಲಿ ಲೀಟರ್ ಗೆ 11 ರೂ.1 ಲೀಟರ್ ಗೆ 22.00 ರೂ.,
ಹೊಮೋಜಿನೈಸ್ಡ್ ಹಸುವಿನ ಹಾಲು 500 ಮಿಲಿ ಲೀಟರ್ ಗೆ 12 ರೂ.1 ಲೀಟರ್ ಗೆ 24 ರೂ.,
ಹೊಮೋಜಿನೈಸ್ಡ್ ಹಸುವಿನ ಹಾಲು 6 ಲೀಟರ್ ಗೆ ರೂ.144-00
ಶುಭಂ ಹಾಲು 500 ಮಿಲಿಲೀಟರ್ ಗೆ ರೂ.13.50,
ಮೊಸರು 200 ಗ್ರಾಂಗೆ 7.00 ರೂ.500 ಗ್ರಾಂಗೆ 14.00,6 ಕೆ.ಜಿ ಜಂಬೋರೂ 162.00
ಮಸಾಲ ಮಜ್ಜಿಗೆ 200 ಮಿಲಿ ಲೀಟರ್ ಗೆ 6.00 ರೂ. ಸಿಹಿ ಲಸ್ಸಿ 200 ಮಿಲಿಲೀಟರ್ ಗೆ ರೂ.8.00 ಆಗಿರುತ್ತದೆ.

ಒಕ್ಕೂಟದಲ್ಲಿ ಈಗಾಗಲೇ ದಾಸ್ತಾನು ಇರುವ ಪ್ಯಾಕಿಂಗ್ ಫಿಲಂ ಮುಗಿಯುವವರೆಗೆ ಹಳೆಯ ದರ ನಮೂದಿಸಿರುವ ನಂದಿನಿ ಹಾಲು,ಹಾಲಿನ ಉತ್ಪನ್ನಗಳನ್ನು ಸರಬರಾಜು ಮಾಡಾಗುವುದು. ಎಲ್ಲಾ ಗ್ರಾಹಕರು ಹಾಗೂ ನಂದಿನಿ ಹಾಲಿನ ಅಧಿಕೃತ ಡೀಲರುಗಳು ಪರಿಷ್ಕೃತ ದರದಲ್ಲಿಯೇ ವ್ಯಹವಹರಿಸಿ ಒಕ್ಕೂಟದೊಂದಿಗೆ ಸಹಕರಿಸಲು ಹಾಲು ಒಕ್ಕೂಟದ ಅಧ್ಯಕ್ಷರು ತಿಳಿಸಿರುತ್ತಾರೆ.

Saturday, February 12, 2011

ಗೇರು ಮೇಳ 2011 ಮತ್ತು ಗೇರು ಬೆಳೆ ಕ್ಷೇತ್ರೋತ್ಸವ

ಮಂಗಳೂರು,ಫೆಬ್ರವರಿ.12: ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯ,ಬಾಗಲ ಕೋಟೆ,ತೋಟ ಗಾರಿಕಾ ಸಂಶೋ ಧನಾ ಕೇಂದ್ರ ಉಳ್ಳಾಲ,ಗೇರು ಮತ್ತು ಕೊಕ್ಕೊ ಅಭಿ ವೃದ್ದೀ ನಿರ್ದೇಶ ನಾಲಯ ಕೊಚ್ಚಿನ್,ರಾಷ್ಟ್ರೀಯ ತೋಟ ಗಾರಿಕಾ ಮಿಷನ್ ನವ ದೆಹಲಿ,ತೋಟ ಗಾರಿಕಾ ಇಲಾಖೆ ಮಂಗಳೂರು,ಕೃಷಿ ಇಲಾಖೆ ಮಂಗಳೂರು ಮತ್ತು ಆತ್ಮ ಯೋಜನೆ ಕೃಷಿ ವಿಜ್ಞಾನ ಸಂಸ್ಥೆ ಧರ್ಮಸ್ಥಳ ಇವುಗಳ ಸಂಯುಕ್ತ ಆಶ್ರಯದಲ್ಲಿ ಗೇರು ಮೇಳ 2011 ಮತ್ತು ಗೇರು ಬೆಳೆ ತರಬೇತಿ ಮತ್ತು ಗೇರು ಕ್ಷೇತ್ರೋತ್ಸವ ಕಾರ್ಯಕ್ರಮ ಮಂಗಳೂರಿನ ಉಳ್ಳಾಲದ ಗೇರು ಸಂಶೋಧನ ಕೇಂದ್ರದ ಆವರಣದಲ್ಲಿ ಇಂದು ನಡೆಯಿತು.ಸಮಾರಂಭವನ್ನು ಬಾಗಲಕೋಟೆಯ ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯದ ವ್ಯವಸ್ತಾಪಕ ಮಂಡಳಿ ಸದಸ್ಯರಾದ ಎಸ್.ಡಿ. ಸಂಪತ್ ಕುಮಾರ್ ಅವರು ಉದ್ಘಾಟಿಸಿದರು.ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾದ ಡಾ.ಎಸ್.ಬಿ.ದಂಡಿನ್,ತೋಟಗಾರಿಕಾ ಸಂಶೋಧನಾ ಕೇಂದ್ರದ ವಿಜ್ಞಾನಿ ಲಕ್ಷ್ಮಣ್,ನವೋದಯ ಸ್ವಸಹಾಯ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪೂರ್ಣಿಮಾ ಶೆಟ್ಟಿ ಮತ್ತಿರರ ಗಣ್ಯರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.