Tuesday, May 31, 2011

ಅರಣ್ಯ ಅಭಿವೃದ್ಧಿಗೆ 150 ಕೋಟಿ ಹೆಚ್ಚುವರಿ ಅನುದಾನ: ವಿಜಯಶಂಕರ್

ಮಂಗಳೂರು,ಮೇ.31:ಅಭಿವೃದ್ದಿ ಹೊಂದಿದ ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಅರಣ್ಯ ಪ್ರದೇಶ ಕಡಿಮೆಯಿದ್ದು, ರಾಜ್ಯದಲ್ಲಿ ಅರಣ್ಯವನ್ನು ಸಂರಕ್ಷಿಸಲು ಮತ್ತು ಅರಣ್ಯೇತರ ಭೂಮಿಯಲ್ಲಿ ಅರಣ್ಯ ಬೆಳೆಸಲು ಮುಖ್ಯಮಂತ್ರಿಗಳು 150 ಕೋಟಿ ರೂ. ಗಳ ಹೆಚ್ಚುವರಿ ಅನುದಾನ ನೀಡಿರುವುದಾಗಿ ಸಣ್ಣ ಕೈಗಾರಿಕೆ ಮತ್ತು ಅರಣ್ಯ ಸಚಿವ ಸಿ. ಎಚ್.ವಿಜಯಶಂಕರ್ ಹೇಳಿದರು.
ಅವರಿಂದು ಗುಂಡ್ಯದಲ್ಲಿ ಅರಣ್ಯ ಇಲಾಖೆಯ ಪ್ಲಾಂಟೇಷನ್ ಗಳ ವೀಕ್ಷಣೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು. ಅರಣ್ಯ ಇಲಾಖೆ ಸಹಜ ಮಳೆ, ಶುದ್ಧ ಗಾಳಿ ಹಾಗೂ ಹಸುರೀಕರಣದ ಉದ್ದೇಶವನ್ನಿರಿಸಿ ವಿನೂತನ ಯೋಜನೆಗಳನ್ನು ರೂಪಿಸಿದ್ದು ಅನುಷ್ಠಾನಕ್ಕೆ ತರಲು ಹಣಕಾಸಿನ ಕೊರತೆ ಇಲ್ಲ ಎಂದು ಅವರು ನುಡಿದರು.ಕೃಷಿ ಪ್ರೋತ್ಸಾಹ ಯೋಜನೆಯಡಿ ಅರಣ್ಯ ಇಲಾಖೆಯು ಕೃಷಿಕರಿಗೆ ತನ್ನದೇ ಆದ ಕೊಡುಗೆಯನ್ನು ನೀಡಲು ತೀರ್ಮಾನಿಸಿದ್ದು, ಕೃಷಿಕರು ಬಯಸಿದ ಸಸಿ ನೀಡಲು ನಿರ್ಧರಿಸಲಾಗಿದೆ. ರೈತರಿಂದ ಈ ಸಂಬಂಧ ಅರ್ಜಿ ಪಡೆದು ಆರ್ ಟಿ ಸಿ ಆಧಾರದಲ್ಲಿ ಉಚಿತವಾಗಿ ಸಸಿಗಳನ್ನು ಹಂಚಲಾಗುವುದಲ್ಲದೆ ಒಂದು ಸಸಿಗೆ ಮೂರು ವರ್ಷ ಅವುಗಳ ನಿರ್ವಹಣೆಗೆ 45 ರೂ.ಗಳಂತೆ ಅನುದಾನವನ್ನೂ ನೀಡಲಾಗುವುದು ಎಂದರು. ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ಗ್ರಾಮ ಪಂಚಾಯತ್ ಹಾಗೂ ಅರಣ್ಯ ಇಲಾಖೆಯಲ್ಲಿ ಅಜರ್ಿಗಳು ಲಭ್ಯವಾಗಲಿದ್ದು, ನಮೂನೆ ಯನ್ನು ಸಿದ್ಧಪಡಿಸಲಾಗಿದ್ದು ಅಂತಿಮಗೊಳಿಸಬೇಕಿದೆ ಎಂದರು.ಅರಣ್ಯ ಇಲಾಖೆ ಏಕ ರೂಪದ ಸಸ್ಯೋ ತ್ಪಾದನೆಗೆ ಇತಿಶ್ರೀ ಹಾಡಿದ್ದು, ನೀಲ ಗಿರಿ ಯನ್ನು ನಿಷೇ ಧಿಸ ಲಾಗಿದೆ. ಅಕೇಷಿ ಯವನ್ನು ಬೆಟ್ಟ ಗಳ ಮೇಲೆ ಮತ್ತು ಸಮುದ್ರ ದ ಅಂಚಿ ನಲ್ಲಿ ಬೆಳೆ ಯಲು ಮಾತ್ರ ಅವ ಕಾಶ ನೀಡ ಲಾಗಿದೆ ಎಂದರು.ಸಸಿ ಗಳನ್ನು ಉತ್ಪಾ ದಿಸಿ, ವಿತ ರಿಸಲು ರಾಜ್ಯ ಕೃಷಿ ವಿಶ್ವ ವಿದ್ಯಾಲಯ, ತೋಟಗಾರಿಕೆ ಕೇಂದ್ರ ಸರ್ಕಾರದ ಕೃಷಿ, ಸಂಶೋಧನಾ ಕೇಂದ್ರಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಡಂಬಡಿಕೆ ಮಾಡಲಾಗಿದೆ. ಮುಂದಿನ ವರ್ಷದಿಂದ ಅವರಿಂದ ಸಸಿ ಪಡೆದು ರೈತರಿಗೆ ವಿತರಿಸಲು ಹಾಗೂ ಗುಣಮಟ್ಟದ ಖಾತ್ರಿಗೆ ಇಲಾಖೆಯ ಸಂಶೋಧನಾ ವಿಭಾಗಗಳನ್ನು ಬಳಸಿಕೊಳ್ಳುವ ಬಗ್ಗೆಯೂ ತಜ್ಞರ ಅಭಿಪ್ರಾಯ ಪಡೆಯಲಾಗಿದೆ ಎಂದರು. ಪ್ರತೀ ಜಿಲ್ಲೆಯಲ್ಲಿ ಬೆಂಗಳೂರಿನ ಕಬ್ಬನ್ ಪಾರ್ಕ್ ಮಾದರಿಯಲ್ಲಿ ಟ್ರೀ ಪಾಕ್ರ್ ಮಾಡುವ ಯೋಜನೆ ಹೊಂದಿದೆ. ಮಂಗಳೂರಿನಲ್ಲಿ ಪಿಲಿಕುಳದಲ್ಲಿ ಟ್ರೀ ಪಾರ್ಕ್ ಮಾಡುವ ಸಂಬಂಧ ಅಧಿಕಾರಿಗಳು ಸ್ಥಳ ಗುರುತಿಸಿದ್ದಾರೆ ಎಂದರು.
ನಿತ್ಯ ಯಾತ್ರಿಕರು, ಪ್ರವಾಸಿಗರು ಬರುವ ದೇವಾಲಯಗಳ ಪ್ರದೇಶಗಳಲ್ಲಿ ದೇವರೊಂದಿಗೆ ವನವನ್ನೂ ನೋಡಿ ಆನಂದಿಸುವಂತಾಗಲು ಪ್ರತೀ ಬೆಟ್ಟದಲ್ಲಿ ಸಾಂಪ್ರಾದಾಯಿಕ, ಅಳಿವಿನಂಚಿನ ಸಸ್ಯಗಳನ್ನು ಬೆಳೆಸಲಾಗುವುದು. ಪ್ರತೀ ದೇವವನದಲ್ಲಿ ಅರಣ್ಯ ಇಲಾಖೆಯಿಂದ ನರ್ಸರಿಯನ್ನೂ ಆರಂಭಿಸಲು ಚಿಂತಿಸಲಾಗಿದೆ ಎಂದು ಅರಣ್ಯ ಸಚಿವರು ಹೇಳಿದರು.ಕಾಶ್ಮೀರದ ದಾಲ್ ಸರೋವರ, ಮೈಸೂರಿನ ಕಾರಂಜಿ ಕೆರೆ ಮಾದರಿಯಲ್ಲಿ ಕೆರೆಗಳ ಅಭಿವೃದ್ಧಿಯನ್ನು ಲಭ್ಯವಿರುವ ಪ್ರದೇಶಗಳಲ್ಲಿ ಅಭಿವೃದ್ಧಿಪಡಿಸಲು ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲಾಗಿದೆ. ಮಕ್ಕಳಲ್ಲಿ ವೃಕ್ಷ ಪ್ರೇಮ ಬೆಳೆಸಲು 'ಮಗುವಿಗೊಂದು ಮರ' ಎಂಬ ಘೋಷವಾಕ್ಯದಡಿ ಮಗು ಬಯಸಿದ ಸಸಿಯನ್ನು ಪ್ರಮಾಣ ವಚನ ಬೋಧಿಸಿ ನೀಡಲಾಗುವುದು. 5ನೇ ತರಗತಿಯಿಂದ ಪಿಯುಸಿ ವರೆಗಿನ ಎಲ್ಲ ಮಕ್ಕಳಿಗೆ ಸಸಿ ನೀಡಲಾಗುವುದು.
ಪ್ರಾದೇಶಿಕ ಅರಣ್ಯ ನೀತಿ: ಇದುವರೆಗೆ ಇಲಾಖೆ ಕೇಂದ್ರದ ನೀತಿಯ ಚೌಕಟ್ಟಿನಲ್ಲಿ ಅರಣ್ಯ ನೀತಿ, ಮಾರ್ಗದರ್ಶಿಗಳು ಲಭ್ಯವಿದ್ದು, ಇದರಿಂದ ಹಲವು ಸಮಸ್ಯೆಗಳಿಗೆ ಪರಿಹಾರ ದೊರಕುತ್ತಿಲ್ಲ; ಮುಂದಿನ ಒಂದು ತಿಂಗಳೊಳಗೆ ಪ್ರಾದೇಶಿಕ ಅರಣ್ಯ ನೀತಿ ರೂಪಿಸಲಾಗುವುದು ಎಂದ ಸಚಿವರು, ಎಲ್ಲ ಯೋಜನೆಗಳಿಗೆ ಜೂನ್ 20ರಿಂದ ಜುಲೈ 25ರೊಳಗೆ ಚಾಲನೆ ನೀಡಲಾಗುವುದು ಎಂದರು.
ನೈಜ ಕಾಡು ಕಾಡಾಗಿ ಉಳಿಯಲು ಪಶ್ಚಿಮ ಘಟ್ಟ ಪ್ರದೇಶ ವ್ಯಾಪ್ತಿಯೊಳಗೆ ಯಾವುದೇ ಕಿರು ನೀರಾವರಿ ಯೋಜನೆಗಳಿಗೆ ತನ್ನ ಅವಧಿಯಲ್ಲಿ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟ ಪಡಿಸಿದ ಸಚಿವರು, ಪರಿಸರಕ್ಕೆ ಪೂರಕವಾದ ಸೋಲಾರ್ ಶಕ್ತಿಗೆ ಆದ್ಯತೆ ನೀಡಲಾಗುವುದೆಂದರು. ಪ್ರಾದೇಶಿಕ ಅರಣ್ಯ ಅಧಿಕಾರಿ ಶಾಂತಪ್ಪ, ಡಿಸಿಎಫ್ ವಿಜಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.

Monday, May 30, 2011

ಮಂಗಳೂರು-ಬೆಂಗಳೂರು 10 ಕೆಎಸ್ ಆರ್ ಟಿಸಿ ಸ್ಲೀಪರ್ ಕೋಚ್ ಬಸ್:ಯೋಗಿಶ್ ಭಟ್

ಮಂಗಳೂರು,ಮೇ.30:ಮಂಗಳೂರಿನಿಂದ ಬೆಂಗಳೂರಿಗೆ ಶೀಘ್ರವೇ ಸ್ಲೀಪರ್ ಕೋಚ್ ಬಸ್ಸುಗಳ ಸೇವೆಯನ್ನು ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಆರಂಭಿಸಲಿದೆ ಎಂದು ರಾಜ್ಯ ವಿಧಾನ ಸಭೆಯ ಉಪ ಸಭಾಧ್ಯಕ್ಷರಾದ ಎನ್ ಯೋಗೀಶ್ ಭಟ್ ಅವರು ಹೇಳಿದ್ದಾರೆ.
ಅವರು ಇಂದು ಮಂಗ ಳೂರಿನ ಬಿಜೈ ಕೆ.ಎಸ್. ಆರ್. ಟಿ.ಸಿ ಬಸ್ಸು ನಿಲ್ದಾಣ ದಲ್ಲಿ ಸರ್ಕಾ ರದ ನೆರವಿ ನೊಂದಿಗೆ ನಡೆ ಯುತ್ತಿ ರುವ ಯಾತ್ರಿ ನಿವಾಸ,ಮೂಲ ಭೂತ ಸೌಕರ್ಯ ಗಳ ಕಾಮ ಗಾರಿ ಯನ್ನು ವೀಕ್ಷಣೆ ಮಾಡಿದ ನಂತರ ಸುದ್ದಿ ಗಾರ ರೊಂದಿಗೆ ಮಾತ ನಾಡಿದರು.ಮೊದಲ ಹಂತ ವಾಗಿ 10 ಬಸ್ಸು ಗಳು ಈ ಸೇವೆಗೆ ಲಭ್ಯ ವಾಗ ಲಿದ್ದು,ಇವು ಗಳಲ್ಲಿ 6 ಬಸ್ ಮಂಗ ಳೂರಿ ನಿಂದ ಮತ್ತು 4 ಬಸ್ ಕುಂದಾ ಪುರ ದಿಂದ ಸೇವೆಯನ್ನು ಆರಂಭಿಸಲಿವೆ ಎಂದರು.ಮಂಗಳೂರು ಕೆಸ್.ಆರ್,ಟಿ.ಸಿ. ಬಸ್ ನಿಲ್ದಾಣವನ್ನು ಮೇಲ್ದರ್ಜೆಗೆ ಏರಿಸುವ ಕಾಮಗಾರಿ ಪ್ರಗತಿಯಲ್ಲಿದ್ದು,ಈಗಾಗಲೇ ಸರ್ಕಾರ 3 ಕೋಟಿ.ರೂ.ಗಳನ್ನು ನೀಡಿದೆ.ಕಾಮಾಗಾರಿ ಪೂರ್ಣಗೊಳಿಸಲು ಇನ್ನೂ 25 ಲಕ್ಷ ರೂ.ಗಳ ಅಗತ್ಯವಿದ್ದು,ಕೂಡಲೇ ಈ ಹಣ ಬಿಡುಗಡೆ ಮಾಡುವಂತೆ ಸಾರಿಗೆ ಸಚಿವರಲ್ಲಿ ವಿನಂತಿ ಮಾಡಲಾಗಿದೆ ಎಂದರು.ನಗರದ ಬೆಂದೂರು ವೆಲ್ ನಲ್ಲಿರುವ ಸಂಸ್ಥೆಯ 1.06 ಎಕರೆ ಜಾಗದಲ್ಲಿ ಖಾಸಾಗಿ ಸಹ ಭಾಗಿತ್ವದಲ್ಲಿ 20 ಕೋಟಿ ರೂ.ಗಳ ವೆಚ್ಚದಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದರು.ಸಾರ್ವಜನಿಕರ ದೂರುಗಳು ಬಂದರೆ ಆ ದೂರುಗಳಿಗೆ ತಕ್ಷಣ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಕೆ.ಎಸ್.ಆರ್.ಟಿ.ಸಿ ಮಂಗಳೂರು ವಿಭಾಗೀಯ ನಿಯಂತ್ರಣಾಧಿಕಾರಿ ಕರುಂಬಯ್ಯ ಉಪಸ್ಥಿತರಿದ್ದರು.

ಗಡಿನಾಡ ಉತ್ಸವಗಳು ಅಲ್ಲಿನ ಅಭಿವೃದ್ಧಿಗೆ ಪೂರಕವಾಗಲಿ: ಕೃಷ್ಣ ಪಾಲೆಮಾರ್

ಮಂಗಳೂರು,ಮೇ.29:ಸಾಂಸ್ಕೃತಿಕ, ಪ್ರಾಕೃತಿಕ ಹಾಗೂ ಭೌಗೋಳಿಕವಾಗಿ ಸಂಪದ್ಭರಿತವಾಗಿರುವ ಸುಳ್ಯದ ಗಡಿಯಲ್ಲಿರುವ ಮಂಡೆಕೋಲಿನಲ್ಲಿ ರಸ್ತೆ ಮತ್ತು ಶಾಲೆಗಳ ಅಭಿವೃದ್ಧಿಯಾಗಬೇಕಿದೆ. ರಾಜ್ಯ ಸರ್ಕಾರ ರಾಜ್ಯದ ಪ್ರತಿಯೊಂದು ಪ್ರಜೆಗೆ, ಪರಿಸರಕ್ಕೆ ಅನುಕೂಲ ಮಾಡಿಕೊಡುವ ಉದ್ದೇಶವನ್ನಿರಿಸಿ ವಿವಿಧ ಪ್ರಾಧಿಕಾರಗಳನ್ನು ರಚಿಸಿದೆ. ಬೆಲದ್ ಅವರ ಅಧ್ಯಕ್ಷತೆಯಲ್ಲಿ ಗಡಿ ಅಭಿವೃದ್ಧಿ ಪ್ರಾಧಿಕಾರ ಉತ್ತಮ ಕೆಲಸವನ್ನು ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೆಮಾರ್ ಹೇಳಿದರು.ಅವರು ಸುಳ್ಯದ ಮಂಡೆ ಕೋಲಿ ನಲ್ಲಿ ಆಯೋ ಜಿಸ ಲಾಗಿದ್ದ ವಿದ್ವತ್ ಪೂರ್ಣ ವಾದ ಎರಡು ದಿನಗಳ ಗಡಿ ಉತ್ಸವದ ಸಮಾ ರೋಪ ಸಮಾ ರಂಭ ವನ್ನು ಉದ್ದೇ ಶಿಸಿ ಮಾತ ನಾಡು ತ್ತಿದ್ದರು. ಸರ್ಕಾರ ಬಜೆಟ್ ನಲ್ಲಿ 15 ಕೋಟಿ ರೂ.ಗಳನ್ನು ಮೀಸ ಲಿರಿ ಸಿದ್ದು, ಎಲ್ಲರೂ ಸೇರಿ ಈ ಮೊತ್ತ ವನ್ನು ನೂರು ಕೋಟಿಗೆ ಏರಿಸು ವಂತೆ ಮುಖ್ಯ ಮಂತ್ರಿ ಗಳಲ್ಲಿ ಮನವಿ ಮಾಡುವ ಎಂದು ಪಾಲೆಮಾರ್ ಹೇಳಿದರು. ಗಡಿ ಪ್ರದೇಶ ಗಳಲ್ಲಿರುವ ಕನ್ನಡದ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಲು ವಿಧಾನಸಭೆ ಅಧಿವೇಶನದಲ್ಲಿ ಒತ್ತಾಯಿಸಲಾಗುವುದು ಎಂದರು. ರಾಜ್ಯ ಸರ್ಕಾರ ಸದುದ್ದೇಶದಿಂದ ರಚಿಸಿರುವ ಪ್ರಾಧಿಕಾರ, ಅಕಾಡೆಮಿಗಳು ಎಲ್ಲ ಮೂಲಭೂತ ಸೌಕರ್ಯಗಳೊಂದಿಗೆ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿವೆ. ನಮ್ಮ ಸಂಸ್ಕೃತಿ, ಭಾಷೆಯ ಅಭಿವೃದ್ಧಿಗೆ ವೇಗೋತ್ಕರ್ಷಗಳಂತೆ ಕೆಲಸಮಾಡುತ್ತಿದೆ ಎಂದರು.ಸಮಾ ರೋಪ ಸಮಾ ರಂಭದಲ್ಲಿ ಮಾತನಾಡಿದ ಸುಳ್ಯ ಶಾಸಕರಾದ ಅಂಗಾರ ಅವರು, ರಾಷ್ಟ್ರೀಯ ಪರಿಕಲ್ಪನೆ, ಸಾಮ ರಸ್ಯದಡಿ ಹಲವು ಸಂದರ್ಭ ಗಳಲ್ಲಿ ಕೆಲ ವರಿಗೆ ಅನ್ಯಾಯ ವಾದಾಗ ಅಂತ ಹವರ ಸಮಸ್ಯೆ ಗಳಿಗೆ ಸ್ಪಂದಿ ಸಲು ವಿವಿಧ ಪ್ರಾಧಿ ಕಾರ ಗಳನ್ನು ಸರ್ಕಾರ ರಚಿ ಸಿದ್ದು, ತಮ್ಮ ಕಾರ್ಯಾ ವಧಿಯಲ್ಲಿ ಕ್ಷೇತ್ರದ ಅಭಿವೃದ್ಧಿಯ ಚಿತ್ರಣವನ್ನು ಸಭೆಗೆ ನೀಡಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಕಾಂತ್ ಬೆಲದ್ ಅವರು ಮಾತನಾಡಿ,ಪ್ರಾಧಿ ಕಾರದ ಕಾರ್ಯ ವ್ಯಾಪ್ತಿ, ಆದ್ಯತೆ ಗಳನ್ನು ವಿವ ರಿಸಿ ದರು. ಗಡಿ ಉತ್ಸವ ಹಾಗೂ ಪ್ರಾಧಿ ಕಾರ ಉಳಿದ ವುಗ ಳಿಗಿಂತ ಭಿನ್ನ ವಾಗಿದ್ದು, 5 ಗಡಿ ಪ್ರದೇಶ ಗಳ 52 ತಾಲೂಕು ಗಳನ್ನು ತಾನು ಸಂದರ್ಶಿ ಸಿದ್ದು, ಚಾಮ ರಾಜ ನಗರ ದ ಹನೂರಿನ ಉತ್ಸ ವದ ಬಳಿಕ ಆಯೋ ಜಿಸಿದ ಮಂಡೆ ಕೋಲು ಉತ್ಸವ ವಿದ್ವತ್ ಪೂರ್ಣ ವಾಗಿ ಸಮಾಪ್ತಿ ಗೊಂಡ ಬಗ್ಗೆ ಹೆಮ್ಮೆ ಯನ್ನು ವ್ಯಕ್ತ ಪಡಿ ಸಿದರು. ಗಡಿ ಪ್ರದೇಶದ ನಾಲ್ಕು ಶಾಸಕರೊಂದಿಗೆ ಗಡಿ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹರಿಸುವ ಉದ್ದೇಶದಿಂದ ಗಡಿ ಉತ್ಸವಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು. ಈಗಾಗಲೇ ಪ್ರಾಧಿಕಾರಕ್ಕೆ ನೀಡಲಾಗಿರುವ 15 ಕೋಟಿ ರೂ.ಗಳಲ್ಲಿ ಗಡಿಯಂಚಿನ ಪ್ರದೇಶಗಳಲ್ಲಿರುವ ಶಾಲೆಗಳ ಶಿಕ್ಷಣಕ್ಕೆ, ಶಿಕ್ಷಕರಿಗೆ ವಸತಿಗೃಹಕ್ಕೆ, ಗ್ರಂಥಾಲಯ ಸ್ಥಾಪನೆಗೆ, ಗ್ರಾಮೀಣ ಕ್ರೀಡೆಗಳಿಗೆ ಪ್ರೋತ್ಸಾಹ ನೀಡಲು ಹೆಚ್ಚಿನ ಆದ್ಯತೆ ಕೊಡಲಾಗುವುದು ಎಂದರು. ಜಿಲ್ಲಾ ಪಂಚಾಯಿತಿ ಸದಸ್ಯ ನವೀನ್ ಕುಮರ್ ರೈ ಮೇನಾಲ, ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಗುಣಾವತಿ ಕೊಲ್ಲಂತ್ತಡ್ಕ, ಗಡಿ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಮೋಹನ ನಾಗಮ್ಮನವರ್, ಪುತ್ತೂರು ಸಹಾಯಕ ಕಮಿಷನರ್ ಡಾ. ಹರೀಶ್ ಕುಮಾರ್, ತಹಸೀಲ್ದಾರ್ ವೈದ್ಯನಾಥ್ ಉಪಸ್ಥಿತರಿದ್ದರು.
ಸಮಾರೋಪಕ್ಕೆ ಮೊದಲು ನಡೆದ ವಿಚಾರಗೋಷ್ಠಿ 'ಗಡಿ ಅಭಿವೃದ್ಧಿ ನುಡಿ' ಯಲ್ಲಿ ಬಂಟ್ವಾಳ ಶಾಸಕರಾದ ಬಿ. ರಮಾನಾಥ ರೈ, ಶಾಸಕ ಎಸ್ ಅಂಗಾರ ಅವರು ತಮ್ಮ ಕ್ಷೇತ್ರದ ಗಡಿ ಸಮಸ್ಯೆಗಳ ಬಗ್ಗೆ ಮಾತನಾಡಿದರು. ಅಪ ರಾಹ್ನ ಎರಡು ಗಂಟೆಗೆ ಆರಂಭ ವಾದ ಗಾನ ಕುಂಚ ಕಾರ್ಯ ಕ್ರಮ ದಲ್ಲಿ ಕೆ. ಆರ್. ಗೋಪಾಲ ಕೃಷ್ಣ ಅವರ ಭಾವನಾ ಬಳಗ ಸುಳ್ಯ ಇವ ರಿಂದ ಗಾನ ಹಾಗೂ ಪ್ರಸನ್ನ ಐವ ರ್ನಾಡು, ಶ್ರೀಹರಿ ಪೈಂದೋ ಡಿ, ಧನಂ ಜನ ಮ ರ್ಕಂಜ, ಚಂದ್ರಾ ಅಡ್ಕಾರ್, ಸತೀ ಶ್ ಪಂಜ, ಭಾಸ್ಕರ ನೆಲ್ಯಾಡಿ ಇವರು ಗಳು ಒಂದು ಗಾನಕ್ಕೆ ಆರು ಜನ ಕಲಾವಿದರಿಂದ ಕುಂಚ (ಚಿತ್ರ ಬಿಡಿಸುವಿಕೆ) ವಿನೂತನ ಪ್ರಯೋಗವಾಗಿತ್ತು.

Saturday, May 28, 2011

ಪ್ರವಾಸೋದ್ಯಮಕ್ಕೆ ದಕ್ಷಿಣ ಕನ್ನಡ ಮಾದರಿಯಾಗಲಿ: ಯೋಗೀಶ್ ಭಟ್

ಮಂಗಳೂರು,ಮೇ.28:ರಾಜ್ಯ ಸರ್ಕಾರ ಪ್ರವಾಸೋದ್ಯಮಕ್ಕೆ ವಿಶೇಷ ಆದ್ಯತೆ ನೀಡಿದ್ದು, ಪ್ರವಾಸೋದ್ಯಮ ಕೇಂದ್ರಗಳ ಅಭಿವೃದ್ಧಿಗೆ ಪೂರಕ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವಿಧಾನ ಸಭಾ ಉಪಸಭಾಧ್ಯಕ್ಷರಾದ ಎನ್. ಯೋಗೀಶ್ ಭಟ್ ಅವರು ಹೇಳಿದರು.

ಅವರಿಂದು ಜಿಲ್ಲಾಧಿ ಕಾರಿ ಗಳ ಕಚೇರಿ ಯಲ್ಲಿ ಪ್ರವಾ ಸೋದ್ಯಮ ಇಲಾಖೆ, ಜಿಲ್ಲಾ ಡಳಿತ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಜನತಾ ಬಜಾರ್ ಶಾಖೆ ಸಂಯುಕ್ತ ಆಶ್ರಯ ದಲ್ಲಿ ಆಯೋಜಿ ಸಲಾದ ಪ್ರವಾಸಿ ಟ್ಯಾಕ್ಸಿ ವಿತ ರಣಾ ಸಮಾ ರಂಭ ದಲ್ಲಿ 21 ಪ್ರವಾಸಿ ಟ್ಯಾಕ್ಸಿ ಗಳನ್ನು ಕರ್ನಾ ಟಕ ಪ್ರವಾ ಸೋದ್ಯಮ ಇಲಾಖೆ ಯಿಂದ 2010-11ನೇ ಸಾಲಿನ ಎಸ್ ಸಿ ಪಿ/ ಟಿ ಎಸ್ ಪಿ ಯೋಜನೆ ಯಡಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಅರ್ಹ ನಿರುದ್ಯೋಗಿ ಫಲಾನುಭವಿಗಳಿಗೆ ವಿತರಿಸುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಮಂಗ ಳೂರು ಮಹಾ ನಗರ ಪಾಲಿಕೆ ವ್ಯಾಪ್ತಿ ಯಲ್ಲಿ ಪ್ರವಾ ಸೋದ್ಯಮ ಕೇಂದ್ರ ಗಳ ಅಭಿ ವೃದ್ಧಿ ಸಂಬಂ ಧಿಸಿದ ರೂಪು ರೇಷೆಗಳು ಅಂತಿಮ ಹಂತಕ್ಕೆ ತಲು ಪಿದ್ದು, ಅಂತಾ ರಾಷ್ಟ್ರೀಯ ಗೋಲ್ಫ್ ಕೋರ್ಸ್ ಮತ್ತು ರೋಪ್ ವೇ ಕಾಮಗಾರಿಗೂ ಅಂತಿಮ ರೂಪು ನೀಡ ಲಾಗುವುದು ಎಂದರು. ಸೋಮೇಶ್ವರ ಕಡಲ ತೀರವನ್ನು ಕನ್ಯಾಕುಮಾರಿಯಂತೆ ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ ಎಂದು ಉಪಸಭಾಧ್ಯಕ್ಷರು ಹೇಳಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ. ಟಿ. ಶೈಲಜಾ ಭಟ್ ಅವರು ಮಾತನಾಡಿ, ಮಹಿಳಾ ಫಲಾನುಭವಿಗೂ ಕಾರು ನೀಡುವಂತೆ ಬ್ಯಾಂಕಿನವರಿಗೆ ಸೂಚಿಸಿದರಲ್ಲದೆ, ಫಲಾನುಭವಿಗಳಿಗೆ ಶುಭ ಹಾರೈಸಿದರು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ. ನಾಗರಾಜ ಶೆಟ್ಟಿ ಮಾತನಾಡಿ, ಉತ್ತಮ ಯೋಜನೆಗಳನ್ನು ಆರಂಭದಲ್ಲಿಯೇ ಸಕರ್ಾರ ರೂಪಿಸಿದ್ದು ಇಂದು ಫಲ ನೀಡುತ್ತಿದೆ. ಈ ಯೋಜನೆಯಡಿ ಇದುವರೆಗೆ 40 ಕಾರುಗಳನ್ನು ನೀಡಲಾಗಿದೆ ಎಂದರು. ಶಾಸಕ ಂಯು ಟಿ ಖಾದರ್ ಅವರು ಫಲಾನುಭವಿಗಳಿಗೆ ಶುಭ ಹಾರೈಸಿದರು.ಪ್ರವಾ ಸೋದ್ಯಮ ಇಲಾಖೆ ದ. ಕ ಜಿಲ್ಲೆಯ ಅರ್ಹ ನಿರು ದ್ಯೋಗಿ ಪರಿ ಶಿಷ್ಟ ಜಾತಿ ಮತ್ತು ಪರಿ ಶಿಷ್ಟ ಪಂಗ ಡದ ಅಭ್ಯರ್ಥಿ ಗಳಿಗೆ ಪ್ರವಾ ಸೋದ್ಯಮ ಕ್ಷೇತ್ರ ದಲ್ಲಿ ಉದ್ಯೋ ಗಾವ ಕಾಶ ಒದ ಗಿಸಿ ಅವ ರನ್ನು ಸ್ವಾವ ಲಂಬಿ ಗಳ ನ್ನಾಗಿಸುವ ಉದ್ದೇ ಶದಿಂದ ಕಳೆದ ಎರಡು ವರ್ಷ ಗಳಿಂದ ಟಾಟಾ ಇಂಡಿ ಕ್ಯಾಬ್ ಡಿ ಎಲ್ ಇ ಬಿ ಎಸ್ 3 ಪ್ರವಾಸಿ ಟ್ಯಾಕ್ಸಿ ಯನ್ನು ಶೇ. 50 ಸಹಾಯಧನ ಹಾಗೂ ಶೇ. 45 ಬ್ಯಾಂಕ್ ಸಾಲ ಸೌಲಭ್ಯ ಮತ್ತು ಶೇ. 5 ಫಲಾನುಭವಿ ಭರಿಸುವ ಮೂಲಕ ಖರೀದಿಸಿ ವಿತರಿಸಿದೆ. ಟ್ಯಾಕ್ಸಿ 3,59,339 ರೂ. ಮೌಲ್ಯದ್ದಾಗಿದೆ.
ಜಿಲ್ಲಾಧಿಕಾರಿ ಡಾ ಎನ್ ಎಚ್ ಚನ್ನಪ್ಪ ಗೌಡ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕರಾದ ಎಂ.ಆರ್. ಪ್ರಕಾಶ್ ಅವರು ಸ್ವಾಗತಿಸಿದರು. ಮೀನುಗಾರಿಕೆ ಸಹಾಯಕ ನಿರ್ದೇಶಕರಾದ ಮಹೇಶ್ ಕುಮಾರ್ ವಂದಿಸಿದರು.

Wednesday, May 25, 2011

ವೇಣೂರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ 5ಕೋ.-ಮುಖ್ಯಮಂತ್ರಿ ಯಡ್ಯೂರಪ್ಪ

ಮಂಗಳೂರು,ಮೇ.25:ಬೆಳ್ತಂಗಡಿ ತಾಲೂಕಿನ ವೇಣೂರಿನ ಬಾಹುಬಲಿ ಕ್ಷೇತ್ರದ ಸಮಗ್ರ ಅಭಿವೃದ್ದಿಯ ಜೊತೆಗೆ ಸುತ್ತಮುತ್ತಲ ಗ್ರಾಮದ ಅಭಿವೃದ್ಧಿಯನ್ನು ಗಮನದಲ್ಲಿರಿಸಿ ಜಿಲ್ಲಾಧಿಕಾರಿಗಳ ಮುಖಾಂತರ ಅಂದಾಜು ಪಟ್ಟಿ ಸಲ್ಲಿಸಿದರೆ ತಕ್ಷಣವೇ 5 ಕೋಟಿ ರೂ.ಗಳನ್ನು ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡ್ಯೂರಪ್ಪ ಅವರು ಹೇಳಿದರು.
20 12 ರಲ್ಲಿ ವೇಣೂರಿ ನಲ್ಲಿ ಜರು ಗುವ ಬಾಹು ಬಲಿಯ ಮಹಾ ಮಸ್ತ ಕಾಭಿ ಷೇಕ್ಕೆ ಪೂರ್ವ ಭಾವಿ ಯಾಗಿ ಬಜೆಟ್ ನಲ್ಲಿ ಈಗಾ ಗಲೇ 2 ಕೋಟಿ ರೂ. ಗಳನ್ನು ಮೀಸ ಲಾಗಿ ರಿಸಿದ್ದು ಅಂ ದಾಜು ಪಟ್ಟಿ ನೀಡಿದ ತಕ್ಷಣ ವೇ ಬೇಕಾದ ಹಣ ವನ್ನು ಬಿಡು ಗಡೆ ಮಾಡು ವುದಾಗಿ ರಾಜ್ಯ ಸರ್ಕಾ ರದ ದೆಹಲಿ ಯ ವಿಶೇಷ ಪ್ರತಿ ನಿಧಿ ,ಮಾಜಿ ಕೇಂದ್ರ ಸಚಿವ ರಾದ ವಿ.ಧನಂ ಜಯ ಕುಮಾರ್ ಅವರ (60 ವರ್ಷ)ಷಷ್ಟ್ಯಬ್ದಿ ಪೂರ್ತಿ ಪ್ರಯುಕ್ತ ಏರ್ಪಡಿ ಸಲಾದ ಬಾಹುಬಲಿ ಸ್ವಾಮಿಯ ಪೂಜಾ ಕಾರ್ಯ ಕ್ರಮ ದಲ್ಲಿ ಘೋಷಿ ಸಿದರು.20 ದಿನ ಗಳೊ ಳಗೆ ಅಂದಾಜು ಪಟ್ಟಿ ಸರ್ಕಾ ರಕ್ಕೆ ಸಲ್ಲಿ ಸಲು ಸೂಚಿಸಿದ ಅವರು ಧನಂಜಯ ಕುಮಾರ್ ಅವರ ಮನವಿಯ ಆಧಾರ ದಲ್ಲಿ ಫಲ್ಗುಣಿ ನದಿಗೆ ಬ್ಯಾರೇಜ್ ನಿರ್ಮಿಸಿ ಸುತ್ತ ಮುತ್ತಲ ಗ್ರಾಮಸ್ಥ ರಿಗೆ ಜೂನ್ ತಿಂಗಳ ವೇಳೆಗೆ ಕುಡಿಯುನ ನೀರು ಒದಗಿಸಲು ವ್ಯವಸ್ಥೆ ಮಾಡುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದರು.ಉತ್ಸವವನ್ನು ಅದ್ದೂರಿಯಾಗಿ ಆಚರಿಸಲು ಬೇಕಾದ ಎಲ್ಲಾ ಸಹಕಾರವನ್ನು ಸರ್ಕಾರದ ವತಿಯಿಂದ ನೀಡಲಾಗುವುದು ಎಂದರು.ವಿ.ಧನಂಜಯ ಕುಮಾರ್ ದಂಪತಿ, ಸಂಸದ ಡಿ.ವಿ.ಸದಾನಂದ ಗೌಡ,ವಿಧಾನ ಸಭಾ ಉಪಾಧ್ಯಕ್ಷ ಎನ್.ಯೋಗಿಶ್ ಭಟ್,ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್,ಹಣಕಾಸು ಆಯೋಗದ ಅಧ್ಯಕ್ಷ ಎ.ಜಿ.ಕೊಡ್ಗಿ,ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ,ಮಾಜಿ ಶಾಸಕ ಪ್ರಭಾಕರ ಬಂಗೇರಾ,ಜಿಲ್ಲಾಧಿಕಾರಿ ಚೆನ್ನಪ್ಪ ಗೌಡ,ಮತ್ತಿರತ ಗಣ್ಯರು ಉಪಸ್ಥಿತರಿದ್ದರು.ಚಾರು ಕೀರ್ತಿ ಭಟ್ಟಾರಕ ಸ್ವಾಮೀಜಿಗಳು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.ಅಳದಂಗಡಿ ಅರಮನೆಯ ಪದ್ಮಪ್ರಸಾದ್ ಅಜಿಲ ಅವರು ಪ್ರಾಸ್ತವಿಕ ನುಡಿಗಳನ್ನಾಡಿದರು.ಗುಣಪಾಲ ಜೈನ್ ಅವರು ಸ್ವಾಗತಿಸಿದರು.ಇದೇ ಸಂದರ್ಭದಲ್ಲಿ ಗೊಮ್ಮಟ ಯಾತ್ರೀ ನಿವಾಸಕ್ಕೆ ಮುಖ್ಯಮಂತ್ರಿಗಳು ಶಿಲಾನ್ಯಾಸ ನೆರವೇರಿಸಿದರು.

ಭತ್ತಕ್ಕೆ ಬೆಂಬಲ ಬೆಲೆ ನೀಡಲು ಕೇಂದ್ರಕ್ಕೆ ಒತ್ತಾಯ:ಮುಖ್ಯಮಂತ್ರಿ ಯಡ್ಯೂರಪ್ಪ

ಮಂಗಳೂರು,ಮೇ.25: ಭತ್ತಕ್ಕೆ ಸರಿಯಾದ ಬೆಂಬಲ ಬೆಲೆ ನೀಡಬೇಕೆಂದು ಕೇಂದ್ರ ಸರ್ಕಾರವನ್ನು ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ ಅವರು ಒತ್ತಾಯಿಸಿದ್ದಾರೆ.ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ಅವರು ಇದಕ್ಕಾಗಿ ಅವಶ್ಯಕತೆ ಇದ್ದರೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಚರ್ಚಿಸಲು ರಾಜ್ಯದಿಂದ ನಿಯೋಗ ಕಳುಹಿಸಿ ಕೊಡಲಾಗುವುದು ಎಂದರು.
ಇದು ವರೆಗೆ 7 ಬಾರಿ ಪೆಟ್ರೊಲ್ ಬೆಲೆಯನ್ನು ಕೇಂದ್ರ ಸರ್ಕಾರ ಏರಿಸಿದೆ.ಆದರೆ ರಾಜ್ಯ ಸರ್ಕಾರ ಒಂದು ಬಾರಿಯೂ ಹೆಚ್ಚುವರಿ ತೆರಿಗೆಯನ್ನು ಪೆಟ್ರೊಲ್ ಉತ್ಪನ್ನಗಳ ಮೇಲೆ ವಿಧಿಸಿಲ್ಲ.ಪೆಟ್ರೊಲ್ ಬೆಲೆ ಇಳಿಸುವ ಜವಾಬ್ದಾರಿ ಕೇಂದ್ರ ಸರ್ಕಾರದ್ದು ಎಂದು ಮುಖ್ಯಮಂತ್ರಿಗಳು ಹೇಳಿದರು.ಕೆ.ಪಿ.ಎಸ್.ಸಿ ಯಲ್ಲಿ ಅಕ್ರಮ ನೇಮಕಾತಿ ಗಳು ನಡೆದಿದೆ ಎಂಬ ದೂರುಗಳಿದ್ದು,ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದರು.
ವಿಧಾನ ಸಭೆಯ ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದರು. ಸಂಸದ ನಳಿನ್ ಕುಮಾರ್ ಕಟೀಲ್,ಡಿ.ವಿ. ಸದಾನಂದ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ,ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜ ಭಟ್, ಐಜಿಪಿ ಅಲೋಕ್ ಮೋಹನ್,ಎಸ್ಪಿ ಲಾಬು ರಾಮ್,ಪೋಲಿಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Tuesday, May 24, 2011

ಮಳವೂರು ಡ್ಯಾಂ, ಜನವರಿಯಲ್ಲಿ ಪೂರ್ಣ: ಪಾಲೇಮಾರ್

ಮಂಗಳೂರು,ಮೇ.24:ಬಹು ಗ್ರಾಮ ಕುಡಿಯುವ ನೀರು ಸರಬರಾಜಿಗೆ 2001 ನೇ ಇಸವಿಯಲ್ಲಿ ಯೋಜನೆ ರೂಪಿತವಾಗಿ ಇದೀಗ 2011 ರ ಜನವರಿಯಿಂದ ಕಾಮಗಾರಿ ಆರಂಭವಾಗಿರುವ 11 ಗ್ರಾಮಗಳಿಗೆ ನಿರಂತರ ನೀರು ಸರಬರಾಜಿಗಾಗಿ ಮಳವೂರು ಬಳಿ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸುತ್ತಿರುವ ಕಿಂಡಿ ಅಣೆಕಟ್ಟು(ವೆಂಟೆಡ್ ಡ್ಯಾಮ್) 2012 ರ ಜನವರಿ ವೇಳೆಗೆ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆಯೆಂದು ರಾಜ್ಯ ಪರಿಸರ,ಒಳನಾಡು,ಜಲಸಾರಿಗೆ,ಬಂದರು,ಜೀವಿಶಾಸ್ತ್ರ,ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಜೆ.ಕೃಷ್ಣಪಾಲೇಮಾರ್ ಅವರು ತಿಳಿಸಿದ್ದಾರೆ.
ಅವರು ಇಂದು ಅಣೆ ಕಟ್ಟು ಕಾಮ ಗಾರಿ ನಡೆಯು ತ್ತಿರುವ ಮಂಗ ಳೂರಿನ ಮಳ ವೂರಿಗೆ ಮೂಡ ಬಿದ್ರೆ ಶಾಸಕ ರಾದ ಅಭಯ ಚಂದ್ರ ಅವರ ಜೊತೆ ಭೇಟಿ ನೀಡಿ ಕಾಮ ಗಾರಿಯ ಗುಣ ಮಟ್ಟ ಪರಿಶೀ ಲಿಸಿ ಮಾತ ನಾಡಿದರು.ಏಳು ಗ್ರಾಮ ಪಂಚಾ ಯತ್ ಗಳ 11 ಗ್ರಾಮ ಗಳಿಗೆ ಈ ಅಣೆ ಕಟ್ಟಿ ನಿಂದ 2013 ರ ವೇಳೆಗೆ ನಿರಂತರ ಶುದ್ಧ ಕುಡಿ ಯುವ ನೀರನ್ನು ಒದಗಿ ಸಲಾಗು ವುದೆಂದು ಸಚಿ ವರು ತಿಳಿ ಸಿದರು. ಇದಕ್ಕಾಗಿ ಈಗಾಗಲೇ ರೂ.22 ಕೋಟಿ ವೆಚ್ಚವಾಗಿದ್ದು,ಯೋಜನೆ ಪೂರ್ಣಗೊಳ್ಳಲು ಒಟ್ಟು 35 ಕೋಟಿ ಹಣ ವೆಚ್ಚವಾಗಲಿದೆಯೆಂದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನುದಾನದ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಕಾಮಗಾರಿ ಗುಣಮಟ್ಟದಿಂದ ಕೂಡಿದೆಯೆಂದು ಅವರು ವಿವರಿಸಿದರು.2011-12 ನೇ ಸಾಲಿ ನಲ್ಲಿ ಕೆರೆ ಗಳ ಪುನರು ಜ್ಜೀವನ ಯೋಜನೆ ಯಡಿ ಜಿಲ್ಲಾ ಪಂಚಾ ಯತ್ ವ್ಯಾಪ್ತಿಯ 7 ವಿಧಾನ ಸಭಾ ಕ್ಷೇತ್ರ ಗಳ 122 ಕೆರೆ ಗಳನ್ನು ಅಂ ದಾಜು ಮೊತ್ತ ರೂ.3063.00 ಲಕ್ಷ ದಲ್ಲಿ ಕೈ ಗೆತ್ತಿ ಕೊಳ್ಳ ಲಾಗಿದ್ದು ಇವುಗಳಲ್ಲಿ 50 ಕಾಮ ಗಾರಿ ಗಳ ಟೆಂಡರ್ ಪ್ರ ಕ್ರಿಯೆ ಪೂರ್ಣ ಗೊಂಡಿದ್ದು 7 ಕಾಮ ಗಾರಿ ಗಳು ಪ್ರಾ ರಂಭಿಕ ಹಂತ ದಲ್ಲಿವೆ.ಜಿಲ್ಲೆ ಯಲ್ಲಿ 154 ಅಂಗ ನವಾಡಿ ಕಟ್ಟಡ ಗಳನ್ನು ನಿ ರ್ಮಾಣ ಮಾಡ ಲಾಗು ತ್ತಿದ್ದು ಈಗಾ ಗಲೇ 23 ಕಟ್ಟಡ ಗಳು ಪೂರ್ಣ ಗೊಂಡಿವೆ ಎಂದರು. 37 ಸಮು ದಾಯ ಭವನ ಗಳ ಪೈಕಿ 5 ಪೂರ್ಣ ಗೊಂ ಡಿವೆ.ಜಿಲ್ಲಾ ಪಂಚಾ ಯತ್ ಇಂಜಿ ನಿಯ ರಿಂಗ್ ವಿ ಭಾಗದ ಕಾರ್ಯ ಪಾಲಕ ಅಭಿ ಯಂತ ರರಾದ ಸತ್ಯ ನಾರಾ ಯಣ,ಜಿಲ್ಲಾ ಪಂಚಾ ಯತ್ ಸದ ಸ್ಯರು,ತಾಲ್ಲೂಕು ಪಂಚಾಯತ್ ಸದಸ್ಯರು ಹಾಗೂ ಇತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Sunday, May 22, 2011

ವಿಮಾನ ನಿಲ್ದಾಣದ ಅಭಿವೃದ್ದಿಗೆ 23 ಕೋಟಿ ರೂ.: ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪ

ಮಂಗಳೂರು,ಮೇ.22:ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಾಗ ಸಂಭವಿಸಿದ ಏರ್ ಇಂಡಿಯಾ ಏಕ್ಸ್ ಪ್ರೆಸ್ಸ್ ವಿಮಾನ ದುರಂತ ನಡೆದು ಇಂದಿಗೆ ಒಂದು ವರ್ಷವಾಗಿದ್ದು.ವಿಮಾನ ದುರಂತದಲ್ಲಿ ಮಡಿದವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡ್ಯೂರಪ್ಪರವರು ಇಂದು ವಿಮಾನ ನಿಲ್ದಾಣದಲ್ಲಿ ಶ್ರದ್ದಾಂಜಲಿ ಸಲ್ಲಿಸಿದರು.ಜಿಲ್ಲಾ ಉಸ್ತು ವಾರಿ ಸಚಿವ ರಾದ ಕೃಷ್ಣ ಜೆ.ಪಾಲೆ ಮಾರ್,ವಿಧಾನ ಸಭಾ ಉಪಾ ಧ್ಯಕ್ಷ ಎನ್.ಯೋ ಗಿಶ್ ಭಟ್,ಸಂಸ ದರಾದ ನಳಿನ್ ಕುಮಾರ್ ಕಟೀಲ್, ಡಿ.ವಿ.ಸದಾ ನಂದ ಗೌಡ,ವಿಧಾನ ಪರಿಷತ್ ಸದಸ್ಯ ರಾದ ಕ್ಯಾ ಪ್ಟನ್ ಗಣೇಶ್ ಕಾರ್ಣಿಕ್,ಕರಾ ವಳಿ ಅಭಿ ವೃದ್ದಿ ಪ್ರಾಧಿ ಕಾರದ ಅಧ್ಯಕ್ಷ ರಾದ ಬಿ.ನಾಗ ರಾಜ ಶೆಟ್ಟಿ, ಮೇಯರ್ ದಿವಾ ಕರ ಅವರು ವಿಮಾನ ದುರಂ ತದಲ್ಲಿ ಮಡಿದ ವರಿಗೆ ನಮನ ಸಲ್ಲಿ ಸಿದರು.ಜಿಲ್ಲಾ ಧಿಕಾರಿ ಚೆನ್ನಪ್ಪ ಗೌಡ,ಪಶ್ಚಿಮ ವಲಯ ಐಜಿಪಿ ಅಲೋಕ್ ಮೋ ಹನ್,ಪೋಲಿಸ್ ಆಯುಕ್ತ ರಾದ ಸೀ ಮಂತ್ ಕುಮಾರ್ ಸಿಂಗ್,ವಿಮಾನ ನಿಲ್ದಾಣ ನಿರ್ದೇಶಕದಾರ ಎಮ್.ಆರ್.ವಾಸುದೇನ ರಾವ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.ನಂತರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಮಂಗಳೂರು ವಿಮಾನ ನಿಲ್ದಾಣ ರನ್ ವೇ ವಿಸ್ತರಣೆಗೆ 15 ಕೋಟಿ ರೂ. ಮತ್ತು ವಿಮಾನ ನಿಲ್ದಾಣ ರಸ್ತೆ ಅಭಿವೃದ್ದಿಗೆ 8 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸುವುದಾಗಿ ತಿಳಿಸಿದರು.

Wednesday, May 18, 2011

ಮಳೆ ವರದಿ

ಮಂಗಳೂರು,ಮೇ.18:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ಏಪ್ರಿಲ್ ತಿಂಗಳಿನಿಂದ ಆರಂಭವಾಗಿದ್ದು, 2011ರ ಏಪ್ರಿಲ್ ನಲ್ಲಿ ಮಂಗಳೂರಿನಲ್ಲಿ 91.8 ಮಿ.ಮೀ., ಬೆಳ್ತಂಗಡಿ ಯಲ್ಲಿ 25.0 ಮಿ.ಮೀ, ಪುತ್ತೂರಿನಲ್ಲಿ 114.0 ಮಿ.ಮೀ., ಬಂಟ್ವಾಳದಲ್ಲಿ 74.5 ಮಿ.ಮೀ. ಹಾಗೂ ಸುಳ್ಯದಲ್ಲಿ ಅತೀ ಹೆಚ್ಚು 155.8 ಮಿ.ಮೀ ಮಳೆಯಾಗಿದೆ.
2011 ಮೇ 18 ರವರೆಗೆ ಮಂಗಳೂರಿನಲ್ಲಿ 19.8 ಮಿಲಿಮೀಟರ್, ಪುತ್ತೂರಿನಲ್ಲಿ 118.6ಮಿ.ಮೀ, ಬೆಳ್ತಂಗಡಿಯಲ್ಲಿ 75.2 ಮಿ.ಮೀ, ಬಂಟ್ವಾಳದಲ್ಲಿ 60.0ಮಿ.ಮೀ ಹಾಗೂ ಸುಳ್ಯದಲ್ಲಿ 134.8 ಮಿ.ಮೀ., ಮಳೆ ದಾಖಲಾಗಿದೆ.

Monday, May 16, 2011

ಜಿಲ್ಲಾಧಿಕಾರಿಯಾಗಿ ಚೆನ್ನಪ್ಪ ಗೌಡ ಅಧಿಕಾರ ಸ್ವೀಕಾರ

ಮಂಗಳೂರು,ಮೇ.16: ದಕ್ಷಿಣಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿ ಕಾರಿ ಗಳಾಗಿ ಚೆನ್ನಪ್ಪ ಗೌಡ ಇವರು ಇಂದು ಪ್ರಭಾರ ಜಿಲ್ಲಾಧಿ ಕಾರಿ ಪ್ರಭಾ ಕರ ಶರ್ಮಾ ಇವ ರಿಂದ ಅಧಿಕಾರ ಸ್ವೀಕ ರಿಸಿರುತ್ತಾರೆ.

Friday, May 13, 2011

ಸೌಭಾಗ್ಯ ಸಂಜೀವಿನಿ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ:ಎ.ಜಿ.ಕೊಡ್ಗಿ

ಮಂಗಳೂರು,ಮೇ.13: ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯ 13 ನದಿಗಳನ್ನು ಒಗ್ಗೂಡಿಸುವುದರಿಂದ ಈ ಭಾಗದ ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ದೂರವಾಗಲಿದೆ. ಜತೆಗೆ ಆರ್ಥಿಕ ವಹಿವಾಟು ಹೆಚ್ಚಾಗಲಿದೆ ಎಂದು ಕರ್ನಾಟಕ ಸರಕಾರದ ಮೂರನೇ ಹಣಕಾಸು ಆಯೋಗದ ಶಿಫಾರಸುಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಎ.ಜಿ.ಕೊಡ್ಗಿ ಹೇಳಿದ್ದಾರೆ.
ಕರಾ ವಳಿ ಅಭಿವೃದ್ಧಿ ಪ್ರಾಧಿ ಕಾರದ ವತಿ ಯಿಂದ ಇಂದು ಮಂಗ ಳೂರಿ ನಲ್ಲಿ ನಡೆದ ಸೌಭಾಗ್ಯ ಸಂಜೀ ವಿನಿ ಯೋಜನೆ ಕುರಿತ ಕಾರ್ಯಾ ಗಾರಕ್ಕೆ ಕರಾ ವಳಿ ಅಭಿ ವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಬಿ. ನಾಗ ರಾಜ ಶೆಟ್ಟಿ ದೀಪ ಬೆಳ ಗಿಸಿ ಚಾಲನೆ ನೀಡಿ ದರು. ದಿಕ್ಸೂಚಿ ಭಾಷಣ ಮಾತನಾಡಿದ ಎ.ಜಿ.ಕೊಡ್ಗಿ ಅವರು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಅತಿ ಹೆಚ್ಚು ಮಳೆ ಬಿದ್ದರೂ ಜನವರಿ ಬಳಿಕ ಕೆಲವು ತಿಂಗಳು ಕುಡಿಯುವ ನೀರಿನ ತೀವ್ರ ಕೊರತೆ ಉದ್ಭವಿಸುತ್ತದೆ. ಈ ಭಾಗದ ಸುಮಾರು 30 ಸಾವಿರ ಕ್ಯೂಬಿಕ್ ಮೀಟರ್ ನೀರು ಉಪಯೋಗವಾಗದೆ ಸಮುದ್ರ ಸೇರುತ್ತದೆ. ಈ ನೀರನ್ನು ಸೌಭಾಗ್ಯ ಸಂಜೀವಿನಿ ಯೋಜನೆಯ ಮೂಲಕ ಸದುಪಯೋಗಪಡಿಸಿ ಕೊಳ್ಳಬಹುದಾಗಿದೆ ಎಂದು ಕೊಡ್ಗಿ ಅಭಿಪ್ರಾಯಪಟ್ಟರು.
ಸಮರ್ಪಕ ಕುಡಿಯುವ ನೀರಿನ ಪೂರೈಕೆ, ವಿದ್ಯುಚ್ಛಕ್ತಿ ಉತ್ಪಾದನೆ, ಪ್ರವಾಹ ನಿಯಂತ್ರಣ, ಪ್ರವಾಸೋದ್ಯಮ ಅಭಿವೃದ್ಧಿ, ಆರ್ಥಿಕ ಪುನಶ್ಚೇತನ ಹಾಗೂ ಒಳನಾಡು ಮೀನುಗಾರಿಕೆಗೆ ಯೋಜನೆ ಪೂರಕವಾಗಲಿದೆ ಎಂದು ಎ.ಜಿ. ಕೊಡ್ಗಿಯವರು ನುಡಿದರು.ಯೋಜನೆಗೆ ಸುಮಾರು ರೂ.5 ಸಾವಿರ ಕೋಟಿ ವೆಚ್ಚವಾಗಲಿದ್ದು, 10 ವರ್ಷಗಳಲ್ಲಿ ಯೋಜನಾ ವೆಚ್ಚವನ್ನು ಭರಿಸಿಕೊಳ್ಳಬಹುದಾಗಿದೆ ಎಂದು ನುಡಿದ ಕೊಡ್ಗಿ ಅವರು, ಇದರಿಂದ ಅಂತರ್ಜಲ ಮಟ್ಟ ಕೂಡ ಹೆಚ್ಚಲಿರುವುದಾಗಿ ತಿಳಿಸಿದರು.
ದಿಕ್ಸೂಚಿ ಭಾಷಣಕ್ಕೆ ಪ್ರತಿಕ್ರಿಯೆ ವ್ಯಕ್ತಪಡಿಸಿದ ಕರ್ನಾಟಕ ರಾಜ್ಯ ಯೋಜನಾ ಮಂಡಳಿಯ ಸದಸ್ಯ ಪ್ರೊ. ಜಿ.ವಿ. ಜೋಶಿ, ನಂಜುಂಡಪ್ಪ ವರದಿಯನ್ನು ದ.ಕ. ಮತ್ತು ಉಡುಪಿ ಜಿಲ್ಲೆಗಳು ಸಮರ್ಪಕವಾಗಿ ಉಪಯೋಗಿಸಿಕೊಂಡಿಲ್ಲ. ಸೌಭಾಗ್ಯ ಸಂಜೀವಿನಿ ಅಂತಹ ಒಂದು ಅವಕಾಶವನ್ನು ತೆರೆದಿಟ್ಟಿದೆ. ನಂಜುಂಡಪ್ಪ ವರದಿಯಲ್ಲಿ ಉಲ್ಲೇಖಿಸಲ್ಪಟ್ಟ ಕುಡಿಯುವ ನೀರು, ಕೃಷಿ ನೀರಾವರಿ ಮತ್ತು ವಿದ್ಯುತ್ ಸಮಸ್ಯೆಗೆ ಈ ಯೋಜನೆಯಲ್ಲಿ ಉತ್ತರವಿದೆ ಎಂದರು.ಯೋಜನೆಯ ಅನುಷ್ಠಾನದಿಂದ ಕೃಷಿ ವಲಯದಲ್ಲಿ ಹೆಚ್ಚಿನ ಉತ್ಪಾದನೆ ಸಾಧ್ಯ. ಮಾತ್ರವಲ್ಲದೆ ಈ ಭಾಗದಲ್ಲಿ ದೊಡ್ಡ ನೀರಾವರಿ ಯೋಜನೆ ಸಾಧ್ಯ ಎಂಬುದನ್ನು ಸೌಭಾಗ್ಯ ಸಂಜೀವಿನಿ ತೋರಿಸಿಕೊಡಲಿದೆ ಎಂದರು.
ವಿಧಾನ ಸಭಾ ಉಪಾಧ್ಯಕ್ಷ ಎನ್. ಯೋಗೀಶ್ ಭಟ್ ಮಾತನಾಡಿ, ರಾಜ್ಯದಲ್ಲಿ ಸಂಪನ್ಮೂಲಗಳಿಗೆ ಕೊರತೆಯಿಲ್ಲ. ಅವುಗಳ ಸದುಪಯೋಗವಾಗಬೇಕು. ಕರಾವಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಇದ್ದು, ಸೌಭಾಗ್ಯ ಸಂಜೀವಿನಿ ಅನುಷ್ಠಾನದಿಂದ ಅದನ್ನು ನಿವಾರಿಸಬಹುದು ಎಂದರು. ಎನ್ಐಟಿಕೆ ಸುರತ್ಕಲ್ನ ಪ್ರಾಧ್ಯಾಪಕ ಪ್ರೊ. ಎಸ್.ಜಿ. ಮಯ್ಯ, ಮಂಗಳೂರು ವಿಶ್ವವಿದ್ಯಾನಿಲಯದ ಸಾಗರ ಭೂಗರ್ಭಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾದ ಪ್ರೊ. ಕೃಷ್ಣಯ್ಯ, ಪ್ರೊ. ಗಂಗಾಧರ ಭಟ್, ಮಣಿಪಾಲ ಎಂ.ಐ.ಟಿ.ಯ ಪ್ರಾಧ್ಯಾಪಕ ಪ್ರೊ. ಬಾಲಕೃಷ್ಣ ಮದ್ದೋಡಿ, ಹಂಪಿ ಕನ್ನಡ ವಿ.ವಿ.ಯ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಎ.ವಿ. ನಾವಡ ವಿಷಯತಜ್ಞರಾಗಿ ಪಾಲ್ಗೊಂಡು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಕರಾವಳಿ ಅಭಿವೃದ್ಧಿ ಪ್ರಾಕಾರದ ಸದಸ್ಯ ಗುಜ್ಜಾಡಿ ಪ್ರಭಾಕರ್ ನಾಯಕ್ ಪ್ರಾಸ್ತಾವಿಕ ಭಾಷಣ ಮಾಡಿದರು. ವಿಧಾನ ಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ, ಕ್ಯಾ| ಗಣೇಶ್ ಕಾರ್ಣಿಕ್ ಮತ್ತು ಪ್ರಾಧಿಕಾರದ ಸದಸ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ. ಕೆ. ಪ್ರಭಾಕರ ರಾವ್ ಸ್ವಾಗತಿಸಿ, ವ್ಯವಸ್ಥಾಪಕ ಪ್ರವೀಣ್ ಬಿ. ನಾಯಕ್ ವಂದಿಸಿದರು.

Wednesday, May 11, 2011

ಮುಖ್ಯ ಯೋಜನಾಧಿಕಾರಿ ತಾಕತ್ ರಾವ್ ಅವರಿಗೆ ಬೀಳ್ಕೊಡುಗೆ

ಮಂಗಳೂರು,ಮೇ.11:ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನಲ್ಲಿ 12 ವರ್ಷ ಆರು ತಿಂಗಳ ಸೇವಾವಧಿಯಲ್ಲಿ ಸಹಕಾರ ನೀಡಿದ ಎಲ್ಲ ರಿಗೂ ಮುಖ್ಯ ಯೋಜನಾಧಿಕಾರಿ ಪಿ ತಾಕತ್ ರಾವ್ ಅವರು ಕೃತಜ್ಞತೆ ಸಲ್ಲಿಸಿದರು.

ಇಂದು ಜಿಲ್ಲಾ ಪಂಚಾ ಯತ್ ನಲ್ಲಿ ಆಯೋ ಜಿಸಿದ ಬೀಳ್ಕೋ ಡುಗೆ ಸಮಾ ರಂಭ ದಲ್ಲಿ ಮಾತ ನಾಡಿದ ಅವರು, ಎಲ್ಲರ ನೆರ ವಿನಿಂದ ತಮ್ಮ ಕೆಲಸ ಸುಗಮ ವಾಗಿ ಸಾಗಿದ ಬಗ್ಗೆ ಸಂ ತೃಪ್ತಿ ವ್ಯಕ್ತ ಪಡಿಸಿ ದರು. ಸ್ವಚ್ಛತಾಂ ದೋಲನ ದಲ್ಲಿ ಜಿಲ್ಲೆಯ ಯಶೋ ಗಾಥೆ ಹಾಗೂ ಇದಕ್ಕೆ ಸಹಕಾರ ನೀಡಿದ ಎಲ್ಲರನ್ನೂ ಸ್ಮರಿಸಿದರು.
ಮುಖ್ಯ ಯೋಜನಾಧಿಕಾರಿಗಳಾಗಿ ಅಧಿಕಾರ ವಹಿಸಿಕೊಂಡ ನಝೀರ್ ಅವರು ಯಶಸ್ವಿಯಾಗಿ ಕರ್ತವ್ಯ ನಿರ್ವಹಿಸಲು ಎಲ್ಲರ ಸಹಕಾರ ಕೋರಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ ಟಿ ಶೈಲಜಾ ಅವರು ಮಾತನಾಡಿ, ಸರಳ, ಸಜ್ಜನ, ಪ್ರಾಮಾಣಿಕತೆ ಹಾಗೂ ಕೃತಿಯಲ್ಲಿ ನಂಬಿಕೆ ಇರಿಸಿದ ವ್ಯಕ್ತಿ ತಾಕತ್ ರಾವ್ ಅವರು ಎಲ್ಲರ ಮನಸ್ಸನ್ನು ತಮ್ಮ ನಡವಳಿಕೆಯಿಂದ ಗೆದ್ದಿದ್ದಾರೆ. ಅವರಿಗೆ ಒಳ್ಳೆಯದಾಗಲಿ ಎಂದು ಹಾರೈಸಿದರು. ಉಪಾಧ್ಯಕ್ಷರಾದ ಧನಲಕ್ಷ್ಮಿ ಜನಾರ್ಧನ್ ಅವರು ಮಾತನಾಡಿದರು.
ಸಿಇಒ ಕೆ. ಶಿವರಾಮೇಗೌಡ ಅವರು ತಾಕತ್ ರಾವ್ ಅವರ ಬೀಳ್ಕೊಡುಗೆ ಸಮಾರಂಭದಲ್ಲಿ ಶುಭ ಹಾರೈಸಿದರು. ಸ್ಥಾಯಿ ಸಮಿತಿ ಅಧ್ಯಕ್ಷರು, ಅಧಿಕಾರಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಸಹ ಕಾರ್ಯದರ್ಶಿ ಚಂದ್ರಶೇಖರ ಮಸಗುಪ್ಪಿ ಅವರು ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು. ಪಿ. ನಾಗೇಂದ್ರ ಅವರು ವಂದಿಸಿದರು.

ಕನ್ನಡ ಶಾಲೆಗಳನ್ನು ಬಲಪಡಿಸಲು ಜಿ.ಪಂ. ನಲ್ಲಿ ನಿರ್ಣಯ

ಮಂಗಳೂರು,ಮೇ.11:ಕನ್ನಡ ಶಾಲೆಗಳ ಗುಣಮಟ್ಟ ವರ್ಷದಿಂದ ವರ್ಷಕ್ಕೆ ಕುಸಿಯುತ್ತಿದ್ದು, ಸರ್ಕಾರಿ ಶಾಲೆಗಳಲ್ಲಿ ಅನುಪಾತದ ಆಧಾರದಲ್ಲಿ ಶಿಕ್ಷಕರ ನೇಮಕ ಸಲ್ಲದು; ಒಂದು ತರಗತಿಗೆ ಕನಿಷ್ಠ ಒಂದು ಉಪಾಧ್ಯಾಯರನ್ನು ಹಾಗೂ ಅಗತ್ಯ ಶಿಕ್ಷಕೇತರ ಸಿಬ್ಬಂದಿಯನ್ನು ನೇಮಿಸಬೇಕೆಂದು ಜಿಲ್ಲಾ ಪಂಚಾಯತ್ ನ ಕೆಡಿಪಿ ಸಭೆಯಲ್ಲಿ ನಿರ್ಣಯ ತೆಗೆದುಕೊಂಡು ಸರ್ಕಾರಕ್ಕೆ ಕಳುಹಿಸಲು ನಿರ್ಧರಿಸಲಾಯಿತು.

ಇಂದು ಜಿಲ್ಲಾ ಪಂಚಾ ಯತ್ ಅಧ್ಯಕ್ಷ ರಾದ ಕೆ ಟಿ ಶೈಲಜಾ ಅವರ ಅಧ್ಯಕ್ಷ ತೆಯಲ್ಲಿ ನಡೆದ ಕೆಡಿಪಿ ಸಭೆ ಯಲ್ಲಿ ಕನ್ನಡ ಶಾಲೆ ಗಳ ಸ್ಥಿತಿ ಗತಿ, ಆಡಳಿತ ದಲ್ಲಿ ಕನ್ನಡ ಮತ್ತು ಸಾರ್ವ ಜನಿಕ ಸ್ಥಳ ಗಳಲ್ಲಿ ಕನ್ನಡ ಬಳಕೆಯ ಕುರಿತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರ ಪ್ರಸ್ತಾ ಪಿಸಿದರು.
ಕನ್ನಡ ಶಾಲೆಗಳು ಅಧ್ಯಾಪಕರಿಲ್ಲದೆ ನಿತ್ರಾಣಗೊಂಡಿದ್ದು, ಸರ್ಕಾರ ಈ ಸಂಬಂಧ ನೀತಿ ರೂಪಿಸುವಾಗ ನಮ್ಮ ಜಿಲ್ಲಾ ಪಂಚಾಯತ್ ನಿರ್ಣಯವೂ ಅದಕ್ಕೆ ಪೂರಕವಾಗಿರಲಿ ಎಂದು ಕಸಾಪ ಅಧ್ಯಕ್ಷರು ಅಭಿಪ್ರಾಯ ವ್ಯಕ್ತಪಡಿಸಿದರು. ಎಲ್ಲ ಇಲಾಖೆಗಳಲ್ಲೂ ಕನ್ನಡ ಬಳಕೆಯಾಗುತ್ತಿದ್ದು, ವೆನ್ ಲಾಕ್ ನಲ್ಲಿ ಮಾತ್ರ ಆಡಳಿತಾತ್ಮಕ ಕಾರಣದಿಂದ ಶೇ. 80 ರಷ್ಟು ಕನ್ನಡ ಬಳಸ ಲಾಗುತ್ತಿದೆ. ಸಾರ್ವಜನಿಕ ಸ್ಥಳಗಳಲ್ಲಿ ಕನ್ನಡದಲ್ಲಿ ಪ್ರದರ್ಶನ ಫಲಕಗಳನ್ನು ಅಳವಡಿಸುವ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು; ದಂಡ ವಿಧಿಸಬೇಕು ಎಂಬ ಪ್ರಸ್ತಾಪಕ್ಕೆ ಉತ್ತರಿಸಿದ ಕಾರ್ಮಿಕ ಇಲಾಖೆ ಅಧಿಕಾರಿಗಳು , ಈ ಬಗ್ಗೆ ಕಾಯಿದೆಯಲ್ಲಿ ಅವಕಾಶವಿಲ್ಲ. ಈ ಕಾರ್ಯವನ್ನು ಮಹಾನಗರಪಾಲಿಕೆ ಅಥವಾ ಸ್ಥಳೀಯ ಸಂಸ್ಥೆಗಳು ಮಾಡಬೇಕು ಎಂಬ ಉತ್ತರ ಸಭೆಯಲ್ಲಿ ದೊರೆಯಿತು. ಬಳಿಕ ನಡೆದ ಪಾಲನಾ ವರದಿ ಸಮೀಕ್ಷೆ ಯಲ್ಲಿ ಗಂಗಾ ಕಲ್ಯಾಣ ಯೋಜನೆ ಯಡಿ 28 ಕೊಳವೆ ಬಾವಿ ತೆಗೆ ಸಿರು ವುದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸಿ ರುವ ಬಗ್ಗೆ ಅಂಬೇ ಡ್ಕರ್ ಅಭಿವೃದ್ಧಿ ನಿಗಮ ದ ಜಿಲ್ಲಾ ವ್ಯವ ಸ್ಥಾಪಕರು ಮಾಹಿತಿ ನೀಡಿದರು. ಭಾಗ್ಯ ಜ್ಯೋತಿ/ ಕುಟೀರ ಜ್ಯೋತಿ ಯೋಜನೆ ಯಡಿ 2010-11 ನೇ ಸಾಲಿನಲ್ಲಿ 1040 ಮನೆ ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಸಣ್ಣ ನೀರಾವರಿ ಇಲಾಖೆಯಡಿ 6 ಕಿಂಡಿ ಅಣೆಕಟ್ಟುಗಳನ್ನು 14 ಲಕ್ಷ ರೂ.ಗಳಲ್ಲಿ ನಿರ್ಮಿಸಿ ಪ್ರಗತಿ ದಾಖಲಿಸಿದೆ. ರೇಷ್ಮೆ ಗೂಡು ಉತ್ಪಾದನೆಗೆ ಅಕಾಲಿಕ ಮಳೆಯಿಂದ ಹಿನ್ನಡೆಯಾಗಿದೆ.
ಕೃಷಿ ಇಲಾಖೆಯಲ್ಲಿ 2010-11 ನೇ ಸಾಲಿನಲ್ಲಿ ಮುಂಗಾರು, ಹಿಂಗಾರು ಮತ್ತು ಬೇಸಿಗೆಯಲ್ಲಿ ಭತ್ತದ ಬೆಳೆ ವಿಸ್ತೀರ್ಣ ಕ್ರಮವಾಗಿ 32,408 ಹೆ., 20982 ಹೆ. ಮತ್ತು 1558 ಹೆಕ್ಟೇರ್ ಆಗಿದ್ದು, ಒಟ್ಟು 54 948 ಹೆಕ್ಟೇರಿನಲ್ಲಿ ಬೆಳೆ ಬೆಳೆಯಲಾಗಿದೆ. ಕಳೆದ ಸಾಲಿಗೆ ಹೋಲಿಸಿದರೆ 220 ಹೆಕ್ಟೇರ್ ಕಡಿಮೆಯಾಗಿರುತ್ತದೆ. ಭತ್ತದ ಬೆಳೆ ಬೆಳೆಯಲು ಪ್ರೋತ್ಸಾಹ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದರು. ಅಂಬೇಡ್ಕರ್ ಅಭಿವೃದ್ಧಿ ನಿಗಮ ಇನ್ನಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಎಚ್ಚರಿಕೆ ನೀಡಿದರು. ಇಂದಿರಾ ಆವಾಸ್ ಮತ್ತು ಬಸವ ಇಂದಿನಾ ಆವಾಸ್ ಯೋಜನೆಗಳ ಬಗ್ಗೆಯೂ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಯಿತು. ನಿಗದಿತ ಸಮಯದಲ್ಲಿ ಗುರಿ ಸಾಧಿಸುವಂತೆ ಕಾರ್ಯನಿರ್ವಹಣಾಧಿಕಾರಿಗಳಿಗೆ ಸಿಇಒ ಅವರು ಸೂಚಿಸಿದರು.
ಸಭೆಯಲ್ಲಿ ಉಪಾಧ್ಯಕ್ಷರಾದ ಧನಲಕ್ಷ್ಮಿ ಜನಾರ್ಧನ್, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷರಾದ ನವೀನ್ ಕುಮಾರ್ ಮೋನಾಲ, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ ಕಟೀಲ್, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಜನಾರ್ಧನ ಗೌಡ ಪಾಲ್ಗೊಂಡರು. ಮುಖ್ಯ ಯೋಜನಾಧಿಕಾರಿ ಟಿ ಜೆ ತಾಕತ್ ರಾವ್, ಮುಖ್ಯ ಲೆಕ್ಕಾಧಿಕಾರಿ ರಾಮದಾಸ್ ಉಪಸ್ಥಿತರಿದ್ದರು.

ಮೂಡಬಿದ್ರೆ ಸಾವಿರ ಕಂಬದ ಬಸದಿ-ಪ್ರವಾಸಿ ತಾಣಕ್ಕೆ 35 ಕೋಟಿ ಅಂದಾಜು ಪಟ್ಟಿ

ಮಂಗಳೂರು,ಮೇ.11:ದಕ್ಷಿಣ ಕನ್ನಡ ಜಿಲ್ಲೆಯ ಐತಿಹಾಸಿಕ ಪ್ರವಾಸಿ ತಾಣವಾದ ಮೂಡಬಿದ್ರೆಯ ಸಾವಿರ ಕಂಬದ ಬಸದಿ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಅಭಿವೃದ್ಧಿ ಪಡಿಸಲು ರೂ.35,94,08,371 ಗಳ ವೆಚ್ಚದ ಯೋಜನೆಯನ್ನು ಸಿದ್ದಪಡಿಸಿ ಪ್ರವಾಸೋದ್ಯಮ ಇಲಾಖೆ ನಿರ್ದೇಶಕರಿಗೆ ಅಂದಾಜು ಪಟ್ಟಿಯನ್ನು ಅನುಮೋದನೆಗೆ ಸಲ್ಲಿಸಲಾಗಿದೆಯೆಂದು ಜಿಲ್ಲಾಧಿಕಾರಿ ಮತ್ತು ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಅಧ್ಯಕ್ಷರು ತಿಳಿಸಿರುತ್ತಾರೆ.
ಇದರಲ್ಲಿ ಮೂಡಬಿದ್ರೆ ಐತಿಹಾಸಿಕ ತಾಣಗಳಿಗೆಸಂಪರ್ಕ ರಸ್ತೆ ನಿರ್ಮಾಣ,ಮಹಾವೀರ ಸಮುದಾಯ ಭವನ ಕಟ್ಟಡವನ್ನೊಳಗೊಂಡಂತೆ ಪಾರ್ಕಿಂಗ್ ವ್ಯವಸ್ಥೆ,ಸ್ಮಾರಕಗಳ ಪುನರ್ ನಿರ್ಮಾಣ ಕಾಮಗಾರಿಗಳಿಗೆ,ನೀರಿನ ಮೂಲಗಳನ್ನು ಸರಿಪಡಿಸಿ ಟ್ಯಾಂಕ್ ಗಳನ್ನು ನಿರ್ಮಿಸಲು,ಹಳೆಯ ಕಟ್ಟಡಗಳನ್ನು ನವೀಕರಿಸಲು,ಪ್ರವಾಸಿಗರ ಸೌಕರ್ಯಕ್ಕಾಗಿ ಪ್ರವಾಸಿ ಸ್ಥಳಗಳ ಮ್ಯಾಪ್,ಜೈನ ತೀರ್ಥಂಕರರ ಮೂರ್ತಿಗಳ ಪುನರ್ ನವೀಕರಣಗೊಳಿಸುವಿಕೆ , ಚೌಟರ ಅರಮನೆಯ ನವೀಕರಣ ಮತ್ತು ನಕ್ಷೆ ಮತ್ತು ಅಂದಾಜು ವೆಚ್ಚದ ದರಪಟ್ಟಿಗಾಗಿ ಹೀಗೆ ಒಟ್ಟು 35,94,08,371 ರೂಗಳ ಅಂದಾಜು ಪಟ್ಟಿಯನ್ನು ತಯಾರಿಸಿ ಅನುಮೋದನೆಗೆ ಸಲ್ಲಿಸಲಾಗಿದೆ.

Monday, May 9, 2011

ಯಶಸ್ಸು ನನ್ನದಲ್ಲ ಜಿಲ್ಲೆಯ ಜನರದ್ದು: ಸಿಇಒ ಶಿವಶಂಕರ್

ಮಂಗಳೂರು,ಮೇ.09:ಸದುದ್ದೇಶವನ್ನಿರಿಸಿಕೊಂಡು ಪ್ರಯೋಗಗಳನ್ನು ಮಾಡಲು ದಕ್ಷಿಣ ಕನ್ನಡ ಜಿಲ್ಲೆ ಉತ್ತಮ ಕರ್ಮಭೂಮಿ; ಉದ್ದೇಶ ಮಾತ್ರ ಉತ್ತಮವಿರಬೇಕು. ಇಲ್ಲಿನ ಜನರು ಉತ್ತಮ ಬದಲಾವಣೆಗಳನ್ನು ಸ್ವಾಗತಿಸುತ್ತಾರೆ ಹಾಗಾಗಿಯೇ ನಾನು ಹುದ್ದೆಯನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಧ್ಯವಾಯಿತು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಶಿವಶಂಕರ್ ಅವರು ಹೇಳಿದರು.

ಅವರಿಂದು ಜಿಲ್ಲಾ ಪಂಚಾ ಯತ್ ನಲ್ಲಿ ಆಯೋ ಜಿಸಿದ್ದ ಬೀಳ್ಕೊ ಡುಗೆ ಸಮಾ ರಂಭದಲ್ಲಿ ತಮ್ಮ ಕಾರ್ಯಾ ನುಭವ ಗಳನ್ನು ಮುಕ್ತ ವಾಗಿ ಹಂಚಿ ಕೊಂಡರು. ಜಿಲ್ಲೆ ಯಲ್ಲಿ 5 ವರ್ಷಗಳ ತಮ್ಮ ಸುದೀರ್ಘ ಸೇವಾ ವಧಿಯಲ್ಲಿ ಹಲವು ಯೋಜನೆ ಗಳ ಅನು ಷ್ಠಾನ ದಲ್ಲಿ ತೃಪ್ತಿ ಕಂಡು ಕೊಂಡಿದ್ ದೇನೆಂದ ರಲ್ಲದೆ, ಕುಡಿಯುವ ನೀರಿಗಾಗಿ ಎಲ್ಲ ಜಿಲ್ಲೆಗಳಿಗಿಂತ ಹೆಚ್ಚು ಅನುದಾನ ಪಡೆಯಲು ಯಶಸ್ವಿಯಾಗಿದ್ದೇನೆಂದರು. ಜಿಲ್ಲೆಯಲ್ಲಿ ಭತ್ತದ ಬೆಳೆ ವಿಸ್ತೀರ್ಣ ಕಡಿಮೆಯಾಗಿರುವ ಬಗ್ಗೆ ತಮ್ಮ ಆತಂಕವನ್ನು ವ್ಯಕ್ತಪಡಿಸಲು ಅವರು ಈ ಸಂದರ್ಭದಲ್ಲಿ ಮರೆಯಲಿಲ್ಲ. ರಾಜ್ಯದ 13 ಎಡೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದು, ಚಿತ್ರದುರ್ಗದಿಂದ ಉಡುಪಿಗೆ ಬಂದ ಸಂದರ್ಭ ಹಾಗೂ ಕಾರಣವನ್ನು ವಿವರಿಸಿದರು. ಬರಗಾಲದ ಪ್ರದೇಶಗಳಲ್ಲಿ ಕೆಲಸ ಮಾಡಿ ಕರಾವಳಿಯಲ್ಲಿ ಕೆಲಸದ ಅನುಭವ ಬಯಸಿ ಕರಾವಳಿಯೆಡೆಗೆ ಬಂದುದಾಗಿ ಹೇಳಿದ ಅವರು, ಮತ್ತೆ ತಿಳಿಯಿತು ಬರಗಾಲವಿಲ್ಲದೆ ಅತಿವೃಷ್ಠಿ ಪ್ರದೇಶಗಳಲ್ಲೂ ಗಂಭೀರ ಕುಡಿಯುವ ನೀರಿನ ಸಮಸ್ಯೆ ಇದೆ ಎಂಬುದು. ಈ ಸಂಬಂಧ ಸುದೀರ್ಘ ಯೋಚನೆ, ಯೋಜನೆಯ ಬಳಿಕ ರೂಪುಗೊಂಡುದ್ದೇ ಮಳವೂರು ಮತ್ತು ಕಿನ್ನಿಗೋಳಿಯ ಕುಡಿಯುವ ನೀರಿನ ಯೋಜನೆಗಳು. ನಮ್ಮ ತಾಂತ್ರಿಕ ಇಂಜಿನಿಯರ್ ಗಳು ಸಾಮಾಜಿಕ ಇಂಜಿನಿಯರ್ ಗಳಾಗಿ ಬದಲಾಗಬೇಕಾದ ಅಗತ್ಯವನ್ನು ಇಂದು ಮತ್ತೆ ಒತ್ತಿ ಹೇಳಿದ ಅವರು, ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಮತ್ತು ಗ್ರಾಮಪಂಚಾಯತ್ ಜನಸೇವೆಗಿರುವ ಅತ್ಯುತ್ತಮ ಅವಕಾಶಗಳು ಎಂದ ಅವರು, ದರೆಗುಡ್ಡೆ ಗ್ರಾಮಪಂಚಾಯತ್ ನ ಕೆಳಪುತ್ತಿಗೆಯಲ್ಲಿ ಸೌರಶಕ್ತಿ ಬಳಸಿಕೊಳ್ಳುವಲ್ಲಿ ಆದ ವೈಫಲ್ಯ ಅದರಿಂದ ಪಡೆದ ಅನುಭವಗಳು, ವೈಫಲ್ಯದ ಸಂಪೂರ್ಣ ಹೊಣೆ ಹೊತ್ತು ಮತ್ತೆ ಈಗ ಕಿನ್ನಿಗೋಳಿಯಲ್ಲಿ ಕಡಿಮೆ ವೆಚ್ಚದಲ್ಲಿ ಸೌರಶಕ್ತಿಯ ಬಳಕೆಗೆ ನಾಂದಿ ಹಾಡಲಾಗಿದೆ ಎಂದರು. ಜಿಲ್ಲೆಗೆ ಬಂದ ಸಂದರ್ಭದಲ್ಲಿ ಭಾಷೆ ಹಾಗೂ ಸಂಸ್ಕೃತಿಯ ಗೊಂದಲಗಳನ್ನು ನೆನಪಿಸಿಕೊಂಡ ಸಿಇಒ ಅವರು, ಇಲ್ಲಿನ ಅಧಿಕಾರಿಗಳು ಹಾಗೂ ಜನರು ಸಲಹೆಗಳನ್ನು ಸ್ವೀಕರಿಸಿದರು; ಪಾಲಿಸಿದರು ಹಾಗಾಗಿ ಕೈಗೊಂಡ ಕಾರ್ಯಗಳಿಗೆ ತಾತ್ವಿಕ ಅಂತಿಮ ರೂಪು ದೊರೆಯಿತೆಂದರು. ಇಲ್ಲಿನ ಸಂಸ್ಕೃತಿ, ಕಾಳಜಿ, ನಾಜೂಕುಗಳು ಜಿಲ್ಲೆಯ ಅಭಿವೃದ್ದಿಗೆ ಪೂರಕವಾಯಿತು. ಬಹಳಷ್ಟು ಕಲಿತಿದ್ದೇನೆ. ಸೇವಾವಧಿಯ ಅವಿಸ್ಮರಣೀಯ ಅನುಭವಗಳು ಈ ಜಿಲ್ಲೆಯಲ್ಲಾಗಿದೆ ಎಂದರು.
ಬೀಳ್ಕೊಡುಗೆ ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ ಟಿ ಶೈಲಜಾ ಭಟ್ ವಹಿಸಿದ್ದರು. ಉಪಾಧ್ಯಕ್ಷರಾದ ಧನಲಕ್ಷ್ಮಿ ಜನಾರ್ಧನ್, ಉಪಕಾರ್ಯದರ್ಶಿ ಕೆ. ಶಿವರಾಮೇಗೌಡ, ಸ್ಥಾಯಿ ಸಮಿತಿ ಅಧ್ಯಕ್ಷ ಜನಾರ್ಧನ ಗೌಡ, ಸದಸ್ಯರಾದ ದೇವರಾಜ್, ಮೊಹಮ್ಮದ್, ರೈತ ಮುಖಂಡ ಯಾದವ್ ಮಾತನಾಡಿದರು. ಪ್ರಭಾರ ಸಿಇಒ ಹಾಗೂ ಡಿಎಸ್ ಆಗಿರುವ ಶಿವರಾಮೇಗೌಡ ಸೇರಿದಂತೆ ಹಲವು ಅಧಿಕಾರಿಗಳು ಮಾತನಾಡಿದರು.ನಳಿನಿ ಶಿವಶಂಕರ್ ಅವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಎಎಸ್ ಚಂದ್ರಶೇಖರ್ ಮಸಗುಪ್ಪಿ ಸ್ವಾಗತಿಸಿದರು. ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಅರುಣ್ ಫುರ್ಟಡೊ ವಂದಿಸಿದರು.

Sunday, May 8, 2011

ಎಂಡೋಸಲ್ಫಾನ್ ನಿಷೇಧಕ್ಕೆ ಸರ್ಕಾರ ಬದ್ಧ

ಮಂಗಳೂರು, ಮೇ.08:ದಕ್ಷಿಣ ಕನ್ನಡ ಜಿಲ್ಲೆಯ ನಾರಾವಿಗೆ ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪನವರ ಆಗಮಿಸಿದ ಸಂದರ್ಭದಲ್ಲಿ ಮೂಡಬಿದರೆ ಸ್ವರಾಜ್ ಮೈದಾನ್ ಹೆಲಿಪ್ಯಾಡಿನಲ್ಲಿ ಪೊಲೀಸರಿಂದ ಗೌರವ ರಕ್ಷೆ ಸ್ವೀಕರಿಸಿದ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.
ಎಂಡೋ ಸಲ್ಫಾನ್ ನಿಷೇ ಧಿಸುವ ಬಗ್ಗೆ, ಮರಳು ನೀತಿಯ ಬಗ್ಗೆ, ರೈತ ರಿಗೆ ನೀಡುವ ಸೌಲಭ್ಯ ಗಳ ಬಗ್ಗೆ ಸರ್ಕಾ ರದ ನಿಲುವಿ ನಲ್ಲಿ ಯಾವುದೇ ಬದ ಲಾವಣೆ ಇಲ್ಲ ಎಂದು ಸ್ಪಷ್ಟ ಪಡಿ ಸಿದರು. ಸ್ವರಾಜ್ ಮೈದಾನ ದಲ್ಲಿ ಮುಖ್ಯ ಮಂತ್ರಿ ಯವ ರನ್ನು ಕ್ಷೇತ್ರದ ಶಾಸಕ ಹಾಗೂ ವಿಧಾನಸಭೆಯ ವಿಪಕ್ಷದ ಮುಖ್ಯ ಸಚೇ ತಕ ಕೆ. ಅಭಯ ಚಂದ್ರ ಜೈನ್,ವಿಧಾನ ಸಭಾ ಉಪ ಸಭಾ ಪತಿ ಗಳಾದ ಎನ್. ಯೋಗೀಶ್ ಭಟ್, ಇಂಧನ ಸಚಿವ ರಾದ ಶೋಭಾ ಕರಂ ದ್ಲಾಜೆ, ಕರಾ ವಳಿ ಅಭಿ ವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ನಾಗ ರಾಜ ಶೆಟ್ಟಿ, ವಿಧಾನ ಪರಿ ಷತ್ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಬಿಜೆಪಿ ಜಿಲ್ಲಾ ಧ್ಯಕ್ಷ ಪದ್ಮ ನಾಭ ಕೊಟ್ಟಾರಿ,ಐಜಿಪಿ ಪಶ್ವಿಮ ವಲಯ ಅಲೋಕ್ ಮೋಹನ್ ಅವರು ಗಳು ಸ್ವಾಗತಿ ಸಿದರು. ಜಿಲ್ಲಾಡಳಿತದ ಎಲ್ಲ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಬಳಿಕ ನಾರಾವಿಯ ಸೂರ್ಯನಾರಾಯಣ ದೇಗುಲಕ್ಕೆ ತೆರಳಿದ ಮುಖ್ಯಮಂತ್ರಿಗಳು ನಾರಾವಿ ಪ್ರದೇಶದ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆಯ ಮುಖಾಂತರ ಒಂದು ಕೋಟಿ ರೂ.ಗಳನ್ನು ನೀಡುವುದಾಗಿ ಘೋಷಿಸಿದರು.ನಂತರ ಮಂಗಳೂರಿಗೆ ಆಗಮಿಸಿ ಮುಖ್ಯ ಮಂತ್ರಿಗಳು ಜಪ್ಪಿನ ಮೊಗರುವಿನ ಕಡೆಕಾರು ಶ್ರೀ ಮಲ್ಲಿಕಾರ್ಜುನ ದೇವಸ್ಥಾನದ ಗುರುವನ ಶ್ರೀ ದುರ್ಗಾ ಕ್ಷೇತ್ರಕ್ಕೆ ಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು,ಸುತ್ತ ಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಎರಡು ಕೋಟಿ ರೂಪಾಯಿಗಳ ನೆರವನ್ನು ಘೋಷಿಸಿದರು.

Saturday, May 7, 2011

ಜನಸೇವೆಗೆ ಆದ್ಯತೆ: ಆರ್ ಅಶೋಕ್

ಮಂಗಳೂರು,ಮೇ.07:ಸಾರಿಗೆ ಕ್ಷೇತ್ರದಲ್ಲಿ ಆರೋಗ್ಯಕರ ಸ್ಪರ್ಧೆಯ ಮುಖಾಂತರ ಜನರಿಗೆ ಸೇವೆನೀಡುವುದಷ್ಟೆ ತಮ್ಮ ಸರ್ಕಾರದ ಧ್ಯೇಯ ಎಂದು ಸಾರಿಗೆ ಮತ್ತು ಗೃಹ ಸಚಿವ ಆರ್ ಅಶೋಕ್ ಅವರು ನುಡಿದರು. ಅವರಿಂದು ಪುತ್ತೂರಿನಲ್ಲಿ 7ಕೋಟಿ 32ಲಕ್ಷ ರೂ.ಗಳ ಎರಡು ಅಂತಸ್ತುಗಳ ನೂತನ ಬಸ್ ನಿಲ್ದಾಣದ ಶಿಲಾನ್ಯಾಸ ಸಮಾರಂಭವನ್ನು ನೆರವೇರಿಸಿ ಮಾತನಾಡುತ್ತಿದ್ದರು. ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಗುಣಮಟ್ಟ ಮತ್ತು ಸೇವೆಗೆ ಪ್ರಾಧ್ಯಾನ್ಯತೆ ನೀಡಿದ್ದು, 25,000 ಹೊಸ ಬಸ್ ಗಳು ಜನರಿಗೆ ಸೇವೆಯನ್ನು ನೀಡುತ್ತಿವೆ ಎಂದರು. ಬಿಸಿರೋಡ್, ಉಡುಪಿ, ಉಪ್ಪಿನಂಗಡಿ, ಗುಂಡ್ಯ, ಧರ್ಮಸ್ಥಳ, ಸುಳ್ಯಗಳಲ್ಲಿ ಬಸ್ ಸ್ಟ್ಯಾಂಡ್ ಅಭಿವೃದ್ಧಿಗೆ ಅನುದಾನ ನೀಡಲಾಗಿದೆ. ಮಂಗಳೂರಿನಲ್ಲಿ ವಿಶ್ರಾಂತಿ ಗೃಹ ನಿರ್ಮಾಣಕ್ಕೆ 65 ಲಕ್ಷ ರೂ.ಗಳ ಟೆಂಡರ್ ಕರೆಯಲಾಗಿದೆ. ಮೈಸೂರಿನಲ್ಲಿ ಕಳೆದ ಒಂದೂವರೆ ವರ್ಷದಲ್ಲಿ ಪಿಪಿಪಿ ಮಾಡೆಲ್ ನಲ್ಲಿ 7 ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ ಎಂದರು. ಇಂದು ಕೆ ಎಸ್ ಆರ್ ಟಿಸಿ ಯ ಯೋಜನೆಗಳು ಮುಂದಿನ 30 ವರ್ಷಗಳ ಅಗತ್ಯವನ್ನು ಮನದಲ್ಲಿರಿಸಿ ರೂಪಿಸಲಾಗುತ್ತಿದ್ದು, ಖಾಸಗಿಯವರೊಂದಿಗೆ ಆರೋಗ್ಯಕರ ಸ್ಪರ್ಧೆಯನ್ನು ಸರ್ಕಾರಿ ವ್ಯವಸ್ಥೆ ನೀಡುತ್ತಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪುತ್ತೂರು ವಿಧಾನಸಭಾ ಕ್ಷೇತ್ರ ಶಾಸಕರಾದ ಮಲ್ಲಿಕಾಪ್ರಸಾದ್ ಅವರು, ತಮ್ಮ ಅವಧಿಯಲ್ಲಿ ನಡೆಯಬೇಕಾದ ಯೋಜನೆಗಳ ಬಗ್ಗೆ ಸಚಿವರ ಗಮನಸೆಳೆದರು. ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೇಮಾರ್, ವಿಧಾನಸಭಾ ಉಪಸಭಾಧ್ಯಕ್ಷರಾದ ಎನ್ ಯೋಗೀಶ್ ಭಟ್, ದ.ಕ.ಜಿ.ಪಂ ಅಧ್ಯಕ್ಷರಾದ ಕೆ. ಟಿ ಶೈಲಜಾ ಭಟ್, ಲೋಕಸಭಾ ಸದಸ್ಯರಾದ ನಳಿನ್ ಕುಮಾರ್ ಕಟೀಲು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ. ನಾಗರಾಜ ಶೆಟ್ಟಿ, ಪುತ್ತೂರು ಪುರಸಭೆ ಅಧ್ಯಕ್ಷರಾದ ಕಮಲಾ ಆನಂದ್, ತಾಲೂಕು ಪಂಚಾಯತ್ ಅಧ್ಯಕ್ಷರಾದ ಶಂಭು ಭಟ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

ಸಮಾಜಘಾತುಕ ಶಕ್ತಿಗಳಿಗೆ ನಮ್ಮ ಪೊಲೀಸ್ ವ್ಯವಸ್ಥೆಯಲ್ಲಿ ಅವಕಾಶವಿಲ್ಲ: ಅಶೋಕ್

ಮಂಗಳೂರು,ಮೇ.07:ಪೊಲೀಸ್ ವ್ಯವಸ್ಥೆಗೆ ಅತ್ಯಾಧುನಿಕತೆಯ ಸ್ಪರ್ಶ ನೀಡಿದ್ದು, ಕಾನೂನು ಸುವ್ಯವಸ್ಥೆಯಿದ್ದರೆ ಮಾತ್ರ ಅಭಿವೃದ್ಧಿ ಸಾಧ್ಯ ಎಂಬುದು ಸರ್ಕಾರ ಮನಗಂಡಿದ್ದು, ಇದಕ್ಕಾಗಿಯೇ ರಾಜ್ಯ ದಕ್ಷ ಪೊಲೀಸ್ ವ್ಯವಸ್ಥೆಯೊಂದಿಗೆ ಅಭಿವೃದ್ಧಿ ಪಥದಲ್ಲಿ ಮುನ್ನುಗ್ಗುತ್ತಿದೆ ಎಂದು ರಾಜ್ಯ ಗೃಹ ಮತ್ತು ಸಾರಿಗೆ ಸಚಿವರಾದ ಆರ್. ಅಶೋಕ್ ಹೇಳಿದರು.ಅವರು ಶನಿವಾರ ರೂ. 29 ಲಕ್ಷ ವೆಚ್ಚದಲ್ಲಿ ನಿಮರ್ಿಸಿದ ವಿಟ್ಲ ಪೊಲೀಸ್ ಠಾಣೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಸಮಾಜ ಘಾತುಕ ಶಕ್ತಿ ಗಳನ್ನು ಮಟ್ಟ ಹಾಕು ವಲ್ಲಿ ರಾಜ್ಯ ಪೊಲೀಸರು ಯಶಸ್ವಿ ಯಾಗಿ ರುವು ದಲ್ಲದೆ, ಜನ ಸ್ನೇಹಿ ಪೊಲೀಸ್ ವ್ಯವಸ್ಥೆ ಯಿಂದ ಉತ್ತಮ ವರ್ಚಸ್ಸನ್ನು ಹೊಂದಿದೆ. ಈ ವ್ಯವಸ್ಥೆ ಯನ್ನು ಇನ್ನಷ್ಟು ಉತ್ತಮ ಗೊಳಿಸಲು ಅಗತ್ಯ ಕ್ರಮ ಗಳನ್ನು ಸರ್ಕಾರ ಕೈ ಗೊಂಡಿದೆ ಎಂದು ಅವರು ನುಡಿದರು. ಉತ್ತಮ ಮೂಲಭೂತ ಸೌಲಭ್ಯಗಳು ಹಾಗೂ ಆಧುನಿಕ ವ್ಯವಸ್ಥೆಗಳಿಂದ ಸಮಾಜ ಘಾತುಕ ಶಕ್ತಿಗಳನ್ನು ಮಟ್ಟಹಾಕಲು ಸಾಧ್ಯ ಎಂದ ಅವರು ಇಲಾಖೆಯ ಕಾರ್ಯನಿರ್ವಹಣೆಗೆ ಅಗತ್ಯವಿರುವ ಎಲ್ಲ ಸೌಲಭ್ಯ ಒದಗಿಸಲು ಸರ್ಕಾರ ಬದ್ಧ ಎಂದರು. ನಗರ ಪ್ರದೇಶದಲ್ಲಿ ಪೊಲೀಸರಿಗೆ ಸರಕಾರಿ-ಖಾಸಗಿ ಸಹಭಾಗಿತ್ವದಲ್ಲಿ ವಸತಿ ಸೌಲಭ್ಯವನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಗೃಹಸಚಿವ ಆರ್. ಅಶೋಕ್ ತಿಳಿಸಿದ್ದಾರೆ.
ಮುಂಬೈಯಲ್ಲಿ ಸರಕಾರಿ-ಖಾಸಗಿ ಸಹಭಾಗಿತ್ವದಲ್ಲಿ ಪೊಲೀಸರಿಗೆ ವಸತಿ ಸೌಲಭ್ಯ ಒದಗಿಸಲಾಗುತ್ತಿದೆ. ಅದೇ ಮಾದರಿಯನ್ನು ಇಲ್ಲಿ ಅನುಸರಿಸಲಾಗುವುದು. ಸರಕಾರಿ ಮತ್ತು ಪೊಲೀಸ್ ಇಲಾಖೆಯ ಜಮೀನನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳಲಾಗುವುದು ಎಂದು ಗೃಹಸಚಿವರು ನುಡಿದರು.ಪೊಲೀಸರ ವಸತಿ ಸೌಲಭ್ಯದ ಬೇಡಿಕೆಯನ್ನು ಸಮರ್ಥವಾಗಿ ನಿರ್ವಹಿಸಲು ಖಾಸಗಿ ನಿರ್ಮಾಣ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ವಿವರಿಸಿದ ಗೃಹಸಚಿವರು ಪೊಲೀಸ್ ವಸತಿ ನಿಗಮ ಗ್ರಾಮೀಣ ಭಾಗಗಳಲ್ಲಿ ಕಾರ್ಯೋನ್ಮುಖವಾಗಲಿದೆ ಎಂದರು.
ಬೆಳಗಾವಿಯಲ್ಲಿ ಸಿಆರ್ ಪಿಎಫ್ ತರಬೇತಿ ಕೇಂದ್ರವೊಂದನ್ನು ತೆರೆಯಲು ಉದ್ದೇಶಿಸಿದೆ. ಅದಕ್ಕಾಗಿ 400 ಎಕರೆ ಜಮೀನು ಹುಡುಕಾಟ ನಡೆದಿದೆ. ಎಂದು ಗೃಹಸಚಿವರು ಹೇಳಿದರು.ಕೇಂದ್ರೀಯ ಭದ್ರತಾ ಪಡೆಯ ತರಬೇತಿ ಕೇಂದ್ರದ ಸ್ಥಾಪನೆಯಿಂದ ಒಂದಷ್ಟು ಉದ್ಯೋಗ ಸೃಷ್ಟಿಯಾಗಲಿದೆ. ಆ ಭಾಗ ಅಭಿವೃದ್ಧಿ ಹೊಂದಲಿದೆ. ಅಷ್ಟೇ ಅಲ್ಲದೆ ರಾಜ್ಯದ ಕಮಾಂಡೋ ಪಡೆಗೆ ಇಲ್ಲಿ ತರಬೇತಿ ಸಿಗಲಿದೆ. ರಾಜ್ಯದ ಕಮಾಂಡೋಗಳಿಗೆ ತರಬೇತಿಗೆ ಅವಕಾಶ ಕಲ್ಪಿಸಿಕೊಡಬೇಕು ಎಂಬ ಸರಕಾರದ ಕೋರಿಕೆಯನ್ನು ಸಿಆರ್ ಪಿಎಫ್ ಒಪ್ಪಿದೆ ಎಂದು ಅಶೋಕ್ ವಿವರಿಸಿದರು.
ದಕ್ಷಿಣ ಕನ್ನಡ ಗ್ರಾಮಾಂತರ ಜಿಲ್ಲೆ ಒಂದೇ ಪೊಲೀಸ್ ವಿಭಾಗವನ್ನು ಹೊಂದಿದೆ. ಶೀಘ್ರ ಬಂಟ್ವಾಳ ಉಪವಿಭಾಗವನ್ನು ರೂಪಿಸಲಾಗುವುದು ಎಂದು ಗೃಹಸಚಿವರು ಹೇಳಿದರು.ನೆಲ್ಯಾಡಿ, ಧರ್ಮಸ್ಥಳ ಮತ್ತು ಬೆಳ್ಳಾರೆ ಉಪಠಾಣೆಗಳನ್ನು ಪೊಲೀಸ್ ಠಾಣೆಗಳಾಗಿ ಮೇಲ್ದರ್ಜೆಗೇರಿಸಲಾಗುವುದು. ಬಂಟ್ವಾಳದಲ್ಲಿ ನೂತನ ಸಂಚಾರ ಪೊಲೀಸ್ ಠಾಣೆಯನ್ನು ಸ್ಥಾಪಿಸಲಾಗುವುದು ಎಂದು ಹೇಳಿದ ಗೃಹ ಸಚಿವರು ರಾಜ್ಯದಲ್ಲಿ ಪೊಲೀಸ್ ಇಲಾಖೆಗೆ ತಂತ್ರಜ್ಞಾನ ಆಧಾರಿತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ತನಿಖೆಯಲ್ಲಿ ವೈಜ್ಞಾನಿಕ ಮಾದರಿಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದರು.
ನೂತನ ಪೊಲೀಸ್ ಠಾಣಾ ಕಟ್ಟಡವನ್ನು ನಿರ್ಮಿಸಿದ ಗುತ್ತಿಗೆದಾರ ಸುರೇಶ್ ಅವರನ್ನು ಗೃಹಸಚಿವರು ಸನ್ಮಾನಿಸಿದರು.ರಾಜ್ಯ ದಲ್ಲಿ ಬಿಜೆಪಿ ಸರ ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಬಂಟ್ವಾಳ ತಾಲೂಕಿ ನಾದ್ಯಂತ ಅನೇಕ ಅಭಿ ವೃದ್ಧಿ ಕಾಮ ಗಾರಿ ಗಳು ನಡೆ ದಿವೆ ಎಂದು ಮುಖ್ಯ ಅತಿಥಿ ದ.ಕ.ಜಿಲ್ಲಾ ಉಸ್ತು ವಾರಿ ಸಚಿವ ಕೃಷ್ಣ ಜೆ. ಪಾಲೆ ಮಾರ್ ಅಭಿ ಪ್ರಾಯ ಪಟ್ಟರು. ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸರು ದಕ್ಷತೆಗೆ ಹೆಸರಾಗಿರುವರೆಂದರು.
ಸಮಾ ರಂಭಗಳಲ್ಲಿ ಪ್ಲಾಸ್ಟಿಕ್ ಬೇಡ:ಇಲಾಖೆಗಳ ಸಮಾ ರಂಭಗಳಲ್ಲಿ ಪ್ಲಾಸ್ಟಿಕ್ ಬಳಕೆ ಯಾಗುತ್ತಿದೆ. ಹೂ ಗುಚ್ಛ ಗಳಲ್ಲಿ ಯಥೇಚ್ಛ ಪ್ಲಾಸ್ಟಿಕ್ ಉಪ ಯೋಗಿಸು ತ್ತಿದ್ದಾರೆ. ಇಂದಿನ ಸಮಾ ರಂಭವೂ ಅದಕ್ಕೆ ಹೊರತಾಗಿಲ್ಲ. ಪರಿಸರ ಸಚಿವನಾಗಿ ಎಚ್ಚರಿಸುವುದು ನನ್ನ ಜವಾಬ್ದಾರಿ. ಸರಕಾರಿ ಕಾರ್ಯಕ್ರಮಗಳು, ವಿವಿಧ ಇಲಾಖೆಗಳಲ್ಲಿ ಪ್ಲಾಸ್ಟಿಕ್ ಬಳಸದಂತೆ ಸುತ್ತೋಲೆ ಹೊರಡಿಸಲಾಗಿದೆ ಎಂದು ಸಚಿವ ಪಾಲೆಮಾರ್ ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಪುತ್ತೂರಿನ ಶಾಸಕರಾದ ಮಲ್ಲಿಕಾಪ್ರಸಾದ್, ಪೊಲೀಸ್ ಇಲಾಖೆ ಜನಸ್ನೇಹಿ ವರ್ತನೆಯನ್ನು ಇನ್ನೂ ಹೆಚ್ಚಾಗಿ ರೂಢಿಸಿಕೊಳ್ಳಬೇಕೆಂದರು.
ಬಂಟ್ವಾಳ ಶಾಸಕರಾದ ಬಿ. ರಮಾನಾಥ ರೈ ಸಮಾರಂಭದಲ್ಲಿ ಪಾಲ್ಗೊಂಡು ಶುಭ ಹಾರೈಸಿದರು.ದ.ಕ. ಜಿ.ಪಂ. ಅಧ್ಯಕ್ಷೆ ಶೈಲಜಾ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ , ಜಿ.ಪಂ. ಸದಸ್ಯರಾದ ಚೆನ್ನಪ್ಪ ಕೋಟ್ಯಾನ್, ಎಂ.ಎಸ್. ಮಹಮ್ಮದ್, ವಿಟ್ಲ ಗ್ರಾ.ಪಂ. ಅಧ್ಯಕ್ಷ ರಮಾನಾಥ ವಿಟ್ಲ , ಬಿಜೆಪಿ ಜಿಲ್ಲಾಧ್ಯಕ್ಷ ಕೆ. ಪದ್ಮನಾಭ ಕೊಟ್ಟಾರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಅಲೋಕ್ ಮೋಹನ್, ಕೆಎಸ್ಆರ್ ಪಿ ಕಮಾಂಡೆಂಟ್ ರಾಮದಾಸ್ ಗೌಡ, ಪುತ್ತೂರು ಸಹಾಯಕ ಪೊಲೀಸ್ ಅಧೀಕ್ಷಕಿ ಡಾ| ರೋಹಿಣಿ ಕಟೋಚ ಸಮಾರಂಭದಲ್ಲಿ ಪಾಲ್ಗೊಂಡರು.
ದ.ಕ. ಜಿಲ್ಲಾ ಪೊಲೀಸ್ ಅಧೀಕ್ಷಕ ಲಾಬೂರಾಮ್ ಸ್ವಾಗತಿಸಿದರು. ಹೆಚ್ಚುವರಿ ಎಸ್ಪಿ ಎಂ. ಪ್ರಭಾಕರ್ ವಂದಿಸಿದರು. ಸುಬ್ಬಪ್ಪ ಕೈಕಂಬ ಕಾರ್ಯಕ್ರಮ ನಿರ್ವಹಿಸಿದರು.

Wednesday, May 4, 2011

ರಜತ ಸಂಭ್ರಮದಲ್ಲಿ ದಕ್ಷಿಣ ಕನ್ನಡ ಹಾಲು ಒಕ್ಕೂಟ: ರವಿರಾಜ ಹೆಗ್ಡೆ

ಮಂಗಳೂರು,ಮೇ.04:ಮಣಿಪಾಲ ಮತ್ತು ಉಡುಪಿ ಪಟ್ಟಣದ ನಾಗರೀಕರಿಗೆ ಹಾಲು ಪೂರೈಕೆಗಾಗಿ 1974 ರಲ್ಲಿ ಆರಂಭವಾದ ದಕ್ಷಿಣ ಕನ್ನಡ ಹಾಲು ಒಕ್ಕೂಟ ಇಂದು ಒಕ್ಕೂಟದ ವ್ಯಾಪ್ತಿಯಲ್ಲಿ 154 ಮಹಿಳಾ ಸಂಘಗಳು ಸೇರಿದಂತೆ ಒಟ್ಟು 637 ಸಂಘಗಳು ಕಾರ್ಯಾಚರಣೆಯಲ್ಲಿದ್ದು ಒಟ್ಟು 1,05,000 ಸದಸ್ಯರಲ್ಲಿ 26,362 ಮಹಿಳಾ ಸದಸ್ಯರು ಇದ್ದಾರೆ. ಇವರಲ್ಲಿ 42,000 ಸಕ್ರಿಯ ಸದಸ್ಯರಿದ್ದು ದಿನವಹಿ 1,75,000 ಲೀಟರ್ ಹಾಲು ಶೇಖರಿಸಲಾಗುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರಾದ ರವಿರಾಜ ಹೆಗ್ಡೆ ತಿಳಿಸಿದ್ದಾರೆ.
ಅವರಿಂದು ತಮ್ಮ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, 1986ರಲ್ಲಿ ಅವಿಭಜಿತ ದ. ಕ ಜಿಲ್ಲೆಯ ಕಾರ್ಯವ್ಯಾಪ್ತಿಯೊಂದಿಗೆ ದ.ಕ ಹಾಲು ಉತ್ಪಾದಕರ ಒಕ್ಕೂಟ ಸ್ಥಾಪನೆಯಾಯಿತು.ಪ್ರಸ್ತುತ ಪ್ರತಿದಿನ 1.80 ಲಕ್ಷ ಲೀಟರ್ ಪೂರೈಕೆಯಾಗುತ್ತಿದ್ದು ಬೇಡಿಕೆ 3 ಲಕ್ಷ ಲೀಟರ್ ನಷ್ಟಿದೆ ಎಂದ ಅಧ್ಯಕ್ಷರು, ಈ ಬೇಡಿಕೆ ಪೂರೈಕೆಗಾಗಿ ಹಾಸನ, ಮಂಡ್ಯ ಮತ್ತು ಮೈಸೂರು ಒಕ್ಕೂಟಗಳಿಂದ ಹಾಲು ಖರೀದಿಸಿ ಪೂರೈಸಲಾಗುತ್ತಿದೆ ಎಂದರು.ರಜತಮಹೋತ್ಸವದ ಸವಿನೆನಪಿಗೆ ಹೆಚ್ಚುತ್ತಿರುವ ಹಾಲು ಹಾಗೂ ಹಾಲಿನ ಉತ್ಪನ್ನಗಳ ಬೇಡಿಕೆ ಪೂರೈಸುವ ನಿಟ್ಟಿನಲ್ಲಿ ಸುಮಾರು 20 ಕೋಟಿ ವೆಚ್ಚದಲ್ಲಿ ನೂತನ ಘಟಕ ನಿರ್ಮಾಣದ ಯೋಜನೆ ಹಮ್ಮಿಕೊಳ್ಳಲಾಗಿದೆ. ಗ್ರಾಹಕರಿಗೆ ಮೇ 1ರಿಂದ 31 ರವರೆಗೆ ಮೈಸೂರು ಪಾಕ್ ಹಾಗೂ ಪೇಡಾ ಖರೀದಿಗೆ (250 ಗ್ರಾಮ ಹಾಗೂ 100 ಗ್ರಾಮ್) ರಿಯಾಯ್ತಿ ನೀಡಲಾಗುವುದು. ರೂ. 25 ಲಕ್ಷ ವೆಚ್ಚದಲ್ಲಿ ಮಿಶ್ರತಳಿ ಹೆಣ್ಣು ಕರುಗಳ ಸಾಕಾಣಿಕೆ ಯೋಜನೆ ಹಮ್ಮಿಕೊಳ್ಳಲಾಗಿದೆ. ರಜತ ಮಹೋತ್ಸವ ಕಾರ್ಯಕ್ರಮ ಮೇ 8ರಂದು ಬೆಳಗ್ಗೆ 10.30ಕ್ಕೆ ನೆರವೇರಲಿದೆ. ಉದ್ಘಾಟನೆಯನ್ನು ವಿಧಾನಸಭಾ ಉಪಸಭಾಪತಿ ಯೋಗೀಶ್ ಭಟ್ ಮಾಡುವರು. ಉನ್ನತ ಶಿಕ್ಷಣ ಸಚಿವ ಡಾ ವಿ ಎಸ್ ಆಚಾರ್ಯ, ಇಂಧನ ಸಚಿವ ಕು. ಶೋಭಾ ಕರಂದ್ಲಾಜೆ, ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಪಾಲೆಮಾರ್, ಸಂಸದರಾದ ಡಿ ವಿ ಸದಾನಂದ ಗೌಡ, ನಳಿನ್ ಕುಮಾರ್ ಕಟೀಲ್ ಮುಂತಾದವರು ಭಾಗವಹಿಸಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ನಿರ್ವಾಹಕ ನಿರ್ದೇಶಕ ಚಂದ್ರಶೇಖರ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.

ಮಹಿಳೆ ಮತ್ತು ಮಕ್ಕಳ ಸಾಗಾಟ/ಮಾರಾಟ ಕಾವಲು ಪಡೆ ಸಮಿತಿ ಸಭೆ

ಮಂಗಳೂರು,ಮೇ.04:ಮಹಿಳೆ ಮತ್ತು ಮಕ್ಕಳ ಸಾಗಾಟ/ಮಾರಾಟ ಕಾವಲು ಪಡೆ ಸಮಿತಿ ಸಭೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಯಿತು.203 ಗ್ರಾಮಪಂಚಾಯತಿಗಳಲ್ಲಿ ಈ ಸಂಬಂಧ ಸಭೆಗಳು ನಡೆಯುತ್ತಿದ್ದು ಪುತ್ತೂರು, ಬಂಟ್ವಾಳಗಳಲ್ಲಿ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಸಿಡಿಪಿಒ ಗಳು ತಿಳಿಸಿದರು.
ಸಭೆಯಲ್ಲಿ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯರನ್ನು ಸೇರಿಸಿ ಮುಂದಿನ ಸಭೆ ಕರೆಯಿರಿ ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಸಭೆಯಲ್ಲಿ ಸಮಸ್ಯೆಗಳ ಕುರಿತು ಚರ್ಚೆಯಾಗಬೇಕು; ಸಮಸ್ಯೆಗಳ ಪರಿಹಾರವಾಗಬೇಕು ಎಂದ ಜಿಲ್ಲಾಧಿಕಾರಿಗಳು, ಮುಂದಿನ ಸಭೆಯಲ್ಲಿ ಸಿ ಡಬ್ಲ್ಯುಸಿ ಅವರನ್ನು ಸೇರಿಸಿ ಜಿಲ್ಲೆಯ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕರು ಹಾಗೂ ಉಪಸ್ಥಿತರಿದ್ದರು. ಸಂಸ್ಥೆಗಳ ನೋಂದಾವಣೆ ಕಡ್ಡಾಯವಾಗಿದ್ದು, ಈ ಸಂಬಂಧ ದಾಖಲೀಕರಣದ ಕೆಲಸ ನಡೆಯುತ್ತಿದೆ ಎಂದು ಉಪನಿರ್ದೇಶಕರು ತಿಳಿಸಿದರು.

ವಿಕೋಪ ಎದುರಿಸಲು ಸನ್ನದ್ಧರಾಗಿ: ಜಿಲ್ಲಾಧಿಕಾರಿ

ಮಂಗಳೂರು,ಮೇ.04:ರಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎದುರಾಗುವ ಸಂಭವನೀಯ ಪ್ರಾಕೃತಿಕ ವಿಕೋಪ ಮತ್ತು ಮಾನವ ನಿರ್ಮಿತ ವಿಕೋಪಗಳನ್ನು ತಡೆಯಲು ಸರ್ವಸನ್ನದ್ಧರಾಗುವಂತೆ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಎಲ್ಲ ಅಧಿಕಾರಿಗಳಿಗೆ ಸೂಚಿಸಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಸಿದ ಸುದೀರ್ಘ ಸಭೆಯಲ್ಲಿ ವಿಕೋಪ ತಡೆಗೆ ಕೈಗೊಂಡಿರುವ ಕ್ರಮಗಳ ಕುರಿತು ಸಂಬಂಧಪಟ್ಟವರಿಂದ ಸಮಗ್ರ ಮಾಹಿತಿಯನ್ನು ಕೋರಿದ ಜಿಲ್ಲಾಧಿಕಾರಿಗಳು, ಕಚೇರಿಯಲ್ಲಿರುವ ತುರ್ತು ವಿಕೋಪ ನಿರ್ವಹಣಾ ಕೇಂದ್ರದಲ್ಲಿ ಎಲ್ಲ ಮಾಹಿತಿಗಳು ಸಮರ್ಪಕವಾಗಿರಬೇಕು; ಹಾಗೂ ಪರಿಸ್ಥಿತಿ ಎದುರಿಸಲು, ಸಮಯ ಪೋಲಾಗದಂತೆ ನಿರ್ವಹಿಸಲು ಸೌಲಭ್ಯಗಳಿರಬೇಕು. ಹಾಗಾಗಿ ಎಲ್ಲ ಅಧಿಕಾರಿಗಳು ಹಾಗೂ ಕಂಪೆನಿಗಳು ರೂಪಿಸಿರುವ ಕಾರ್ಯಯೋಜನೆ ಹಾಗೂ ಸಂಪನ್ಮೂಲ ಸೌಲಭ್ಯಗಳ ಕುರಿತ ಮಾಹಿತಿಯನ್ನು ಜಿಲ್ಲಾಡಳಿತಕ್ಕೆ ನೀಡಬೇಕೆಂದು ಸೂಚನೆ ನೀಡಿದರು.
ಇತ್ತೀಚೆಗೆ ನೆಲ್ಯಾಡಿಯಲ್ಲಿ ನಡೆದ ಎರಡು ಟ್ಯಾಂಕರ್ ದುರಂತಗಳ ನಿದರ್ಶನ ನೀಡಿದ ಜಿಲ್ಲಾಧಿಕಾರಿಗಳು, ಪರಿಹಾರದಲ್ಲಾದ ವಿಳಂಬಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಜಿಲ್ಲೆಗೆ ಸುನಾಮಿ ಅಪ್ಪಳಿಸಿದರೆ ಕೈಗೊಳ್ಳಬಹುದಾದ ತುರ್ತು ಕ್ರಮಗಳ ಬಗ್ಗೆ , ಸಮುದ್ರ ತೀರದಲ್ಲಿರುವವರನ್ನು ಸ್ಥಳಾಂತರಗೊಳಿಸುವ ಬಗ್ಗೆ ಕಾರ್ಯಯೋಜನೆ ರೂಪಿಸುವಂತೆ ಮೀನುಗಾರಿಕೆ ಮತ್ತು ಬಂದರು ಅಧಿಕಾರಿಗಳಿಗೆ ಸೂಚಿಸಿದರು. ದೊಡ್ಡ ದೊಡ್ಡ ಕಂಪೆನಿಗಳಾದ ಎಂ ಸಿ ಎಫ್, ಕೆಐಒಸಿಎಲ್, ಬಿ ಎ ಎಸ್ ಎಫ್, ಎಂ ಆರ್ ಪಿ ಎಲ್, ಎನ್ ಎಂ ಪಿ ಟಿ ಗಳಲ್ಲಿ ಅವಘಡಗಳು ಸಂಭವಿಸಿದರೆ ನಿವಾರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಎಲ್ಲ ಕಂಪೆನಿಗಳು ಜಿಲ್ಲಾಡಳಿತಕ್ಕೆ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಸಂಬಂಧಪಟ್ಟ ಕಂಪೆನಿಯ ಅಧಿಕಾರಿಗಳಿಗೆ ನಿರ್ದೇಶಿಸಿದರು. ಕಂಪೆನಿಯ ಒಳಗಡೆ ಹಾಗೂ ಸುತ್ತಮುತ್ತಲ ಪರಿಸರಕ್ಕೆ ಹಾನಿಯಾಗದಂತೆ ರೂಪಿಸಿರುವ ಯೋಜನೆಗಳ ಮಾಹಿತಿಯನ್ನು ಎಲ್ಲರೂ 15 ದಿನಗಳೊಳಗಡೆ ನೀಡಲು ಸೂಚಿಸಿದ ಜಿಲ್ಲಾಧಿಕಾರಿಗಳು, ಗ್ಯಾಸ್ ಫಿಲ್ಲಿಂಗ್ ಕಂಪೆನಿಗಳು ಟ್ಯಾಂಕರ್ ಗಳನ್ನು ತಮ್ಮ ಸರಹದ್ದಿನಿಂದ ಹೊರಗೆ ಕಳುಹಿಸಿದ ಬಳಿಕ ಸಾರ್ವಜನಿಕವಾಗಿ ರಸ್ತೆ ಬದಿಗಳಲ್ಲಿ ನಿಲ್ಲಲು ಅವಕಾಶವಿಲ್ಲ ಎಂಬ ಬಗ್ಗೆ ಎಲ್ಲ ಕಂಪೆನಿಗಳಿಗೂ ಜಿಲ್ಲಾಡಳಿತ ಪತ್ರ ರವಾನಿಸಿದ್ದು, ಅನುಷ್ಠಾನದಲ್ಲಿ ಲೋಪವೆಸಗಿದರೆ ಶಿಸ್ತುಕ್ರಮಕ್ಕೆ ಸಿದ್ಧರಾಗಿ ಎಂಬ ಎಚ್ಚರಿಕೆಯನ್ನೂ ನೀಡಿದರು.
ಇತ್ತೀಚೆಗೆ ಜಿಲ್ಲಾಡಳಿತ ಬೀಚ್ ಕ್ಲೀನ್ ಮಾಡುವ ಸಂದರ್ಭದಲ್ಲಿ ಸಮುದ್ರ ತೀರದಲ್ಲಿ ಆಯಿಲ್ ಸ್ಪಿಲ್ಸ್ ಗಳ ಬಗ್ಗೆ ಮೀನುಗಾರರು ಗಮನಸೆಳೆದಿದ್ದು, ಎನ್ ಎಂ ಪಿ ಟಿ ಮತ್ತು ಕೋಸ್ಟ ಗಾರ್ಡ್ ಈ ಬಗ್ಗೆ ಗಮನ ಹರಿಸಿ ಕಾರಣದ ಬಗ್ಗೆ ವರದಿ ನೀಡಲು ಜಿಲ್ಲಾಧಿಕಾರಿಗಳು ಹೇಳಿದರು. ಸಮುದ್ರವನ್ನು ಕಲುಷಿತಗೊಳಿಸುವವರ ವಿರುದ್ದ ಕಠಿಣ ಕ್ರಮಕೈಗೊಳ್ಳುವುದಾಗಿಯೂ ನುಡಿದರು. ಕಂಪೆನಿಗಳು ಸುತ್ತಮುತ್ತಲ ಪರಿಸರದಲ್ಲಿ ವಾಸವಿರುವ ಜನಜೀವನದ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು. ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವಘಡಗಳು ಸಂಭವಿಸಿದಾಗ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ವಹಿಸಬೇಕಾದ ಮಾಹಿತಿಯನ್ನು ಜನರಿಗೂ ನೀಡಬೇಕೆಂದರು.
ಪೊಲೀಸ್ ಇಲಾಖೆಯಲ್ಲಿರುವ ವಿಕೋಪ ನಿರ್ವಹಣೆ ಸಿದ್ಧತೆ ಬಗ್ಗೆ, ಬಾಂಬ್ ಇದ್ದರೆ ನಿಷ್ಕ್ರಿಯ ಗೊಳಿಸುವ ಸಾಧನಗಳ ಬಗ್ಗೆ, ಸೌಲಭ್ಯಗಳ ಬಗ್ಗೆ ಜಿಲ್ಲಾಧಿಕಾರಿಗಳು ಮಾಹಿತಿ ಕೋರಿದರು.
ಈ ಸಂಬಂಧ ಸಮಗ್ರ ಮಾಹಿತಿಯನ್ನಾಧರಿಸಿ ಎಲ್ಲ ಪ್ರಮುಖ ಸಂಬಂಧಪಟ್ಟ ಇಲಾಖೆಯವರಿಗೆ ಕೈಪಿಡಿ ನೀಡಲು ಉದ್ದೇಶಿಸಿದ್ದು, ಜಿಲ್ಲಾಧಿಕಾರಿಗಳ ಕೋಟ್ರ್ ಹಾಲ್ ನ ಪಕ್ಕದ ಕೋಣೆಯನ್ನು ವಿಕೋಪ ನಿರ್ವಹಣೆಗೋಸ್ಕರ ಸುಸ್ಸಜಿತವಾಗಿ ರೂಪಿಸಲಾಗುವುದು ಹಾಗೂ ರೊಟೇಷನ್ ಲ್ಲಿ ಸಿಬ್ಬಂದಿಯನ್ನು ನೇಮಿಸಲಾಗುವುದು ಎಂದರು. ಇಲ್ಲಿ ಫೋನ್, ಫ್ಯಾಕ್ಸ್, ಟಿವಿ, ಮಾಹಿತಿಗಳು ಲಭ್ಯವಿರುವುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಸಭೆಯಲ್ಲಿ ಎಲ್ಲ ಕಂಪೆನಿಗಳ ಮುಖ್ಯಸ್ಥರು, ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

18 ಕಾರ್ಮಿಕ ಫಲಾನುಭವಿಗಳಿಗೆ ಚೆಕ್ ವಿತರಣೆ

ಮಂಗಳೂರು,ಮೇ.04:ಅಸಂಘಟಿತ ವಲಯದ ಕಟ್ಟಡ ಕಾರ್ಮಿಕರಿಗಾಗಿ ಕಾರ್ಮಿಕ ಕಲ್ಯಾಣ ಮಂಡಳಿಯನ್ನು ಸ್ಥಾಪಿಸಲಾಗಿದ್ದು, ಅರ್ಹ ಕಾರ್ಮಿಕರು ಸರ್ಕಾರ ನೀಡುವ ಇಂತಹ ಸೌಲಭ್ಯಗಳನ್ನು ಬಳಸಿಕೊಂಡು ಜೀವನಮಟ್ಟವನ್ನು ಉತ್ತಮಪಡಿಸಿಕೊಳ್ಳಬೇಕೆಂದು ಸಹಾಯಕ ಕಾರ್ಮಿಕ ಆಯುಕ್ತರಾದ ವೆಂಕಟೇಶ ಅಪ್ಪಯ್ಯ ಶಿಂದಿಹಟ್ಟಿ ಅವರು ಹೇಳಿದರು.

ಇಂದು ಕಾರ್ಮಿಕ ಇಲಾಖೆ ಯಲ್ಲಿ ಕಾರ್ಮಿಕ ದಿನಾ ಚರಣೆ ಅಂಗವಾಗಿ ಆಯೋಜಿ ಸಲಾದ ಕಾರ್ಮಿಕ ಸಪ್ತಾಹ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತ ನಾಡು ತ್ತಿದ್ದರು. ಕಾರ್ಮಿ ಕರು ಹಕ್ಕು ಗಳೊಂ ದಿಗೆ ಕರ್ತವ್ಯ ಪ್ರಜ್ಞೆ ಯನ್ನು ಮೆರೆಯ ಬೇಕೆಂದ ಅಧಿಕಾರಿ ಗಳು, ಮೇ ಒಂದ ರಿಂದ 7ರವರೆಗೆ ಇಲಾಖೆ ಕಾರ್ಮಿಕ ಕಾನೂನು ಗಳ ಬಗ್ಗೆ ಕಾರ್ಮಿ ಕರಿಗೆ ಮಾಹಿತಿ ನೀಡು ತ್ತಿದೆಯಲ್ಲದೆ, ಧೂಮಪಾನ ನಿಷೇಧ, ಕುಡಿತದಿಂದಾಗುವ ಅನಾಹುತಗಳು, ತಲೆಹೊರೆ ಕಾರ್ಮಿಕರಿಗಾಗಿ ವಿಶೇಷ ಮಾಹಿತಿ ಶಿಬಿರ, ವಾಸನ್ ಐ ಕೇರ್ ನಲ್ಲಿ ಮಹಿಳಾ ಕಾರ್ಮಿಕರಿಗಾಗಿ ಲೈಂಗಿಕ ದೌರ್ಜನ್ಯ ಕುರಿತ ಮಾಹಿತಿ ಶಿಬಿರವನ್ನು ಆಯೋಜಿಸಲಾಗಿತ್ತು ಎಂದರು.
ಇಂದು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ನೋಂದಣಿಯ ಬಗ್ಗೆ ಸಂವಾದ ಮತ್ತು ಮಾಹಿತಿ ನೀಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವಲಯದಲ್ಲಿ ವಲಸೆ ಕಾರ್ಮಿಕರು ಗಣನೀಯ ಸಂಖ್ಯೆಯಲ್ಲಿರುವುದು ಹಾಗೂ ಇವರಿಗೆ ದೃಢೀಕರಣ ನೀಡಲು ಮಾಲೀಕರು ಹಿಂದೇಟು ಹಾಕುತ್ತಿರುವುದನ್ನು ಇಲಾಖೆ ಗಮನಿಸಿ, ಕಾರ್ಮಿಕ ಮುಖಂಡರು ದೃಢೀಕರಿಸ ಬಹುದು. ಹಾಗೂ ಕಾರ್ಮಿಕ ಸಂಘಕ್ಕೆ ಒಂದು ಗುರುತು ಚೀಟಿ ಮಾಡಿಸಿದರೆ 5 ರೂ. ನೀಡುವುದಾಗಿಯೂ ಸಹಾಯಕ ಕಾರ್ಮಿಕ ಆಯುಕ್ತರು ತಿಳಿಸಿದರು.ಕಾರ್ಮಿಕ ಸಂಘ ಟನೆ ಗಳ ಮುಖಂ ಡರು ಹೇಳಿ ದಂತೆ ಹಲವು ಸಮಸ್ಯೆ ಗಳನ್ನು ನೀತಿ ನಿರೂಪ ಕರ ಗಮ ನಕ್ಕೆ ತರ ಲಾಗಿದ್ದು, ಕಾರ್ಮಿ ಕರ ಅನು ಕೂಲ ಕ್ಕಾಗಿ ವ್ಯವಸ್ಥೆ ಯನ್ನು ವಿಕೇಂ ದ್ರೀಕ ರಣ ಗೊಳಿಸ ಲಾಗಿದೆ. ಎಲ್ಲ ತಾಲೂಕು ಕೇಂದ್ರ ಗಳಲ್ಲಿ ಕಾರ್ಮಿಕ ನಿರೀಕ್ಷ ಕರಿದ್ದು, ಕಾರ್ಮಿ ಕರು ಸಮಸ್ಯೆ ಗಳ ಬಗ್ಗೆ, ಸೌಲಭ್ಯ ಗಳ ಬಗ್ಗೆ ಇವ ರನ್ನು ಸಂಪ ರ್ಕಿಸಿ ಪರಿಹಾರ ಕಂಡು ಕೊಳ್ಳ ಬಹು ದಾಗಿದೆ. ಕಾರ್ಮಿಕ ಮಕ್ಕಳಿಗಾಗಿರುವ ಶೈಕ್ಷಣಿಕ ಸ್ಕಾಲರ್ ಶಿಪ್ ನ್ನು ಹೆಚ್ಚಿಸಲಾಗಿದೆ ಎಂದರು. ಕಲ್ಯಾಣ ಮಂಡಳಿಯಲ್ಲಿ 778 ಕೋಟಿ ರೂ.ಗಳಿದ್ದು, ಸಹಾಯ ನೀಡಲು ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ ಸಹಾಯಕ ಕಾರ್ಮಿಕ ಆಯುಕ್ತರು, 9066 ಕಟ್ಟಡ ಕಾರ್ಮಿಕರು ತಮ್ಮ ಹೆಸರನ್ನು ದಾಖಲಿಸಿದ್ದು, ಆರು ಲಕ್ಷ ರೂ.ಗಳ ಸೌಲಭ್ಯಗಳನ್ನು ಪಡೆದುಕೊಂಡಿದ್ದಾರೆ. ಉಡುಪಿಯಲ್ಲಿ ಫಲಾನುಭವಿಗಳ ಸಂಖ್ಯೆ ಜಾಸ್ತಿ ಇದೆ. ಇಲ್ಲೂ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದರು. ಕಟ್ಟಡ ಕಾರ್ಮಿಕರಲ್ಲಿ ಕೌಶಲ್ಯ ತರಬೇತಿಗಾಗಿ ಕೌಶಲ್ಯ ತರಬೇತಿ ಮಂಡಳಿಯಿಂದ ತರಬೇತಿ ನೀಡಲು ಸಿದ್ಧತೆ ನಡೆಸಲಾಗಿದೆ ಎಂದರು. ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಅವರು ಫಲಾನುಭವಿಗಳಿಗೆ ಚೆಕ್ ವಿತರಿಸಿದರು. ಕೆಲಸ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಶಾಶ್ವತವಾಗಿ ಅಂಗವಿಕಲರಾದ ಕಾರ್ಮಿಕನ ಪತ್ನಿ ನ್ಯಾನ್ಸಿ ಡಿ ಸೋಜಾ ಅವರಿಗೆ ಇಂದು ಒಂದು ಲಕ್ಷ ರೂ.ಗಳ ಚೆಕ್ ವಿತರಿಸಲಾಯಿತು. ಉಳಿದವರಿಗೆ 3000 ದಿಂದ 10,000 ರೂ.ಗಳ ಪರಿಹಾರದ ಚೆಕ್ ವಿತರಿಸಲಾಯಿತು.
ಸಮಾರಂಭದಲ್ಲಿ ಅನಿಸಿಕೆ ಹಂಚಿಕೊಂಡ ಕಾರ್ಮಿಕ ಸಂಘಟನೆಗಳ ಮುಖಂಡರಾದ ಮೊಹಮ್ಮದ್ ರಫಿ, ಬಿ ಎಸ್ ಚಂದ್ರು, ವಾಸುದೇವ, ವಸಂತ ಬೆಳ್ತಂಗಡಿ, ಶಶಿಧರ ಅವರು ಕಾರ್ಮಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳ ಗಮನಸೆಳೆದರು. ನಿವೃತ್ತಿಯ ನಂತರ ಪಿಂಚಣಿ ಮೊತ್ತವನ್ನು ಹೆಚ್ಚಿಸುವ ಬಗ್ಗೆ, ಶೈಕ್ಷಣಿಕ ಧನ ಸಹಾಯ ನೀಡುವ ಬಗ್ಗೆ, ಆರೋಗ್ಯ ನೆರವಿಗೆ ಹೆಚ್ಚಿನ ಧನಸಹಾಯ ನೀಡುವ ಬಗ್ಗೆ, ಕಾರ್ಮಿಕ ಹೋರಾಟಗಳಿಂದ ಸಂಘಟಿತರಾದ ಬಗ್ಗೆ ಸಭೆಯ ಗಮನ ಸೆಳೆದರು.
ಕಾರ್ಮಿಕ ಅಧಿಕಾರಿ ಡಿ.ಜಿ. ನಾಗೇಶ್ ಸ್ವಾಗತಿಸಿದರು. ವಿಭಾಗ ಎರಡರ ಅಧಿಕಾರಿ ಗೋಪಾಲಗೌಡ ಉಪಸ್ಥಿತರಿದ್ದರು. ವಿಷ್ಣು ಪ್ರಸಾದ್ ಸ್ವಾಗತಿಸಿದರು. ಸತ್ಯನಾರಾಯಣ ವಂದಿಸಿದರು.

ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ರೂ.29.10 ಲಕ್ಷ ಬಿಡುಗಡೆ

ಮಂಗಳೂರು,ಮೇ.04:ದಕ್ಷಿಣಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರ ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ 2009-10 ನೇ ಸಾಲಿಗೆ ಒಟ್ಟು 32 ಕಾಮಗಾರಿಗಳಿಗೆ ರೂ.58.20 ಲಕ್ಷ ಅನುದಾನ ಮಂಜೂರಾಗಿದ್ದು,ಪ್ರಸ್ತುತ ಕಾಮಗಾರಿಗಳ ಅನುಷ್ಠಾನಕ್ಕಾಗಿ ಶೇ. 50 ರಂತೆ ಒಟ್ಟು ರೂ.29.10ಲಕ್ಷ ರೂ.ಗಳನ್ನು ಕಾರ್ಯಪಾಲಕ ಅಭಿಯಂತರರು,ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗ ಇವರಿಗೆ ದ.ಕ.ಜಿಲ್ಲಾಧಿಕಾರಿಗಳು ದಿನಾಂಕ26-4-11 ರಂದು ಬಿಡುಗಡೆ ಮಾಡಿರುತ್ತಾರೆ.
ಕಾಮಗಾರಿಗಳ ವಿವರ ಹಾಗೂ ಬಿಡುಗಡೆಯಾಗಿರುವ ಅನುದಾನದ ವಿವರ ಇಂತಿದೆ:
ಬಂಟ್ವಾಳದ ಉಪ್ಪಿರದಿಂದ ಎಲಿಯನಡುಗೋಡು ಶಾಲೆಯ ವರೆಗೆ ರಸ್ತೆ ಅಭಿವೃದ್ಧಿಗೆ ರೂ.2.00ಲಕ್ಷ,
ಕೊಲ್ನಾಡು ಗ್ರಾಮದ ಪುಡಿಕೆತ್ತೂರು ರಸ್ತೆ ಅಭಿವೃದ್ಧಿಗೆ ರೂ.1.50ಲಕ್ಷ,
ಪಂಜಿಕಲ್ಲು ಗ್ರಾಮದ ಸೊರ್ನಾಡು ಎಣಿಲಕೊಡಿ ರಸ್ತೆ ದುರಸ್ತಿಗೆ 2.50ಲಕ್ಷ, ಅಮ್ಟೂರು ಗ್ರಾಮದ ತರಬರಿ ಹಿಂದೂ ರುದ್ರಭೂಮಿ ಆವರಣಗೋಡೆ ನಿರ್ಮಾಣ ಮತ್ತು ಜಾಗ ಸಮತಟ್ಟಿಗೆ ರೂ.1.50 ಲಕ್ಷ, ಗೋಳ್ತಮಜಲು ಗ್ರಾಮದ ಕೊಳಕಿರು ರಾಮನಗರ ರಸ್ತೆ ದುರಸ್ತಿಗೆ 1.00 ಲಕ್ಷ, ಪುತ್ತೂರು ತಾಲೂಕು ಕಸಬಾ ಗ್ರಾಮದ ಕರ್ಕುಂಜ ಶಿಂಗಾಣಿ ರಸ್ತೆ ಮೋರಿ ಮತ್ತು ರಸ್ತೆ ಅಭಿವೃದ್ಧಿಗೆ ರೂ.1.50ಲಕ್ಷ,ನರಿಮೊಗ್ರು ಗ್ರಾಮದ ನೆಕ್ಕಿಲು ಸಾರ್ವಜನಿಕ ಸ್ಮಶಾನ ಅಭಿವೃದ್ಧಿಗೆ 2.00ಲಕ್ಷ,ಬಂಟ್ವಾಳದ ಇಡ್ಕಿದು ಗ್ರಾಮದ ದೇವಸ್ಯ ಕಂಬಳಬೆಟ್ಟು ರಸ್ತೆ ಅಭಿವೃದ್ಧಿಗೆ 3.50ಲಕ್ಷ,ಅಜೇರು-ಲಕ್ಕೊಣೆ-ಬುಲೇರಿಕಟ್ಟೆ ಕಾಲುದಾರಿಗೆ ಮೆಟ್ಟಿಲು ರಚನೆ ತಡೆಗೋಡೆ ರಚನೆಗೆ 3.00ಲಕ್ಷ,ಬೆಳ್ತಂಗಡಿಯ ನಿಡ್ಲೆ ಗ್ರಾಮದ ಬರೆಂಗಾಯ-ಪಾಂಡಿಲು ರಸ್ತೆ ಅಭಿವೃದ್ಧಿಗೆ 1.50ಲಕ್ಷ, ಬೆಳ್ತಂಗಡಿ ಕೊಕ್ಕಡ ಗ್ರಾಮದ ಮುಂಡೂರು ಪಳಿಕೆ ಸ.ಕಿ.ಪ್ರಾ.ಶಾಲಾ ರಂಗಮಂದಿರ ನಿರ್ಮಾಣಕ್ಕೆ ರೂ.1.50ಲಕ್ಷ, ಸುಳ್ಯದ ಸಂಪಾಜೆ ರಾಜರಾಯಪುರ ದ.ಕ.ಜಿ.ಪ.ಶಾಲೆಯ ರಂಗಮಂದಿರ ನಿರ್ಮಾಣಕ್ಕೆ 1.00ಲಕ್ಷ,ಕಳಂಜ ಗ್ರಾಮದ ವಾರಣಾಶಿ ಎಂಬಲ್ಲಿ ತಡೆಗೋಡೆ ರಚನೆಗೆ 1.00ಲಕ್ಷ,ಕೊಡಿಯಾಲ ಗ್ರಾಮದ ಬೇರ್ಯ ಮರಿಕೈ ರಸ್ತೆ ಡಾಮರೀಕರಣಕ್ಕೆ ರೂ.1.00ಲಕ್ಷ,ಪುತ್ತೂರಿನಕೋಡಿಂಬಾಳ ದೊಡ್ಡಕೊಪ್ಪ ಎಂಬಲ್ಲಿ ಗಂಗಾಕಲ್ಯಾಣ ಯೋಜನೆಗೆ ಪಂಪು ಅಳವಡಿಕೆಗೆ ರೂ.2.00ಲಕ್ಷ, ನೆಲ್ಯಾಡಿಯ ದಾಣಂತಿ-ಮಾದೇರಿ ರಸ್ತೆ ಅಭಿವೃದ್ಧಿಗೆ ರೂ.1.00ಲಕ್ಷ, ಮಂಗಳೂರಿನ ಮುತ್ತೂರು ಸರಕಾರಿ ಸಂಯುಕ್ತ ಪದವಿಪೂರ್ವ ಕಾಲೇಜು ಮೈದಾನ ರಚನೆಗೆ ರೂ 2.00ಲಕ್ಷ, ಬೊಂದೇಲ್ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಆವರಣಗೋಡೆಗೆ ರೂ.2.00 ಲಕ್ಷ,ಅರಂತೋಡು ಹಿ.ಪ್ರಾ.ಶಾಲೆಯರಂಗಮಂದಿರ ನಿರ್ಮಾಣಕ್ಕೆ 1.00ಲಕ್ಷ,ಸೂರಿಂಜೆ ಪೊನ್ನಗಿರಿ ದೇವಸ್ಥಾನ ರಸ್ತೆ ಅಭಿವೃದ್ಧಿಗೆ 3.00 ಲಕ್ಷ, ಮೂಡಬಿದ್ರೆ ಕೊಡಂಗಲ್ಲು ಶಾಲೆಯ ಕಟ್ಟಡದ ನಿರ್ಮಾಣಕ್ಕೆ 0.70,ಕೋಣಾಜೆ ಪಟ್ಟೋರಿ ರಸ್ತೆ ಅಭಿವೃದ್ಧಿ 2.50ಲಕ್ಷ,ಸೋಮೇಶ್ವರ ಗ್ರಾಮದ ಕುಂಪಲ ಆಶ್ರಯ ಕಾಲನಿ ರಸ್ತೆ ಅಭಿವೃದ್ಧಿಗೆ 2.00 ಲಕ್ಷ,ದೇವಿಪುರ ನೆತ್ತಿಲಪದವು ರಸ್ತೆ ಅಭಿವೃದ್ಧಿ 2.50ಲಕ್ಷ,ತುಂಬೆ ಗ್ರಾಮದ ಮಜಿ ರಸ್ತೆ ಅಭಿವೃದ್ಧಿಗೆ 2.00ಲಕ್ಷ,ಬೊಂಡಂತಿಲ ಗ್ರಾಮದ ರುದ್ರಭೂಮಿ ನಿರ್ಮಾಣಕ್ಕೆ 3.00 ಲಕ್ಷ,ಮೂಡುಪೆರಾರ್ ಕೊಲಪಿಲ ರಸ್ತೆ ಅಭಿವೃದ್ಧಿಗೆ2.00ಲಕ್ಷ,ಜಂತಬೆಟ್ಟು ರಸ್ತೆ ಡಾಮರೀಕರಣ 2.00ಲಕ್ಷ,ಪಡುಕೋಣಾಜೆ ಹೌದಾಲು 5 ಸೆಂಟ್ಸ್ ರಸ್ತೆ ಅಭಿವೃದ್ಧಿ 2.00ಲಕ್ಷ,ಚೇಳ್ಯಾರು ರೆಂಜಿರ್ ಗುಡ್ಡೆ ರಸ್ತೆ ಅಭಿವೃದ್ಧಿ 2.00 ಲಕ್ಷ ಅನುದಾನ ಮೊತ್ತದ ಕಾಮಗಾರಿಗೆ ಹೀಗೆ ಒಟ್ಟು 32 ಕಾಮಗಾರಿಗೆ 58.20ಲಕ್ಷಕ್ಕೆ ಅನುಮೋದನೆ ನೀಡಿ ,ಅನುದಾನದ ಶೇಕಡಾ 50 ನ್ನು ಅಂದರೆ 29.10 ಲಕ್ಷವನ್ನು ಜಿಲ್ಲಾಧಿಕಾರಿಗಳು ಕಾರ್ಯಪಾಲಕ ಅಭಿಯಂತರರಿಗೆ ಬಿಡುಗಡೆ ಮಾಡಿರುತ್ತಾರೆ.
ಇದರ ಜೊತೆಗೆ ಮೂಡಬಿದ್ರೆ ಹೋಬಳಿ ಪಾಲಡ್ಕ ಗ್ರಾಮದ ಸಾಂದೀಪನಿ ಸಾಧನಾಶ್ರಮ ಕೇಮಾರು ಇದರ ವತಿಯಿಂದ ನಿರ್ಮಿಸುತ್ತಿರುವ ಸಮುದಾಯ ಭವನ ಕಾಮಗಾರಿಗೆ ರೂ.2.50ಲಕ್ಷ ಮಂಜೂರು ಆಗಿದ್ದು ಪ್ರಸ್ತುತ ರೂ.1.25 ಲಕ್ಷ ಬಿಡುಗಡೆ ಮಾಡಲಾಗಿದೆ. ಅಂತೆಯೇ ಪುತ್ತೂರು ತಾಲೂಕು ಪೆರುವಾಜೆ ಮುಕ್ಕೂರು ಬಳಿ ಪ್ರಯಾಣಿಕರ ತಂಗುದಾಣ ನಿರ್ಮಾಣ ಕಾಮಗಾರಿಗೆ ಮಂಜೂರಾಗಿರುವ 3 ಲಕ್ಷದಲ್ಲಿ 1.50 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.

Tuesday, May 3, 2011

ಅಲ್ಪಸಂಖ್ಯಾತ ಅಭಿವೃದ್ಧಿಗೆ ಭರಪೂರ ಸೌಲಭ್ಯ.: ಅಬುಬಕ್ಕರ್

ಮಂಗಳೂರು,ಮೇ.03: ಬಿಕಾಂ, ಎಕೌಂಟೆನ್ಸಿ, ಎಂಬಿಎ ಪದವಿ ಪಡೆದ ಅರ್ಹ ಅಲ್ಪಸಂಖ್ಯಾತ ನಿರುದ್ಯೋಗಿ ಅಭ್ಯರ್ಥಿಗಳಿಗೆ ಉದ್ಯೋಗ ಒದಗಿಸುವಲ್ಲಿ ನಿಗಮ ಹೆಚ್ಚಿನ ಗಮನ ಹರಿಸಿದ್ದು ಈಗಾಗಲೇ ಬೆಳಗಾಂ, ಮೈಸೂರು, ಬೆಂಗಳೂರು, ಮಂಗಳೂರು 4 ವಿಭಾಗ ಮಟ್ಟದಲ್ಲಿ 10 ಮಂದಿಗೆ ಎನ್ಐಐಟಿ(ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟ್ರೈನಿಂಗ್) ತರಬೇತಿ ನೀಡಲಾಗಿದೆ.ತರಬೇತಿಯ ಬಳಿಕ ಇವರಿಗೆ ಉದ್ಯೋಗ ಒದಗಿಸುವ ಜವಾಬ್ದಾರಿಯೂ ನಿಗಮದಾಗಿದ್ದು, ಕಳೆದ ಸಾಲಿನಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಐಡಿಬಿ ಮತ್ತು ಐಸಿಐಸಿಐ ಬ್ಯಾಂಕ್ಗಳಲ್ಲಿ ಉದ್ಯೋಗವನ್ನು ಕಲ್ಪಿಸಲಾಗಿದೆ ಎಂದು ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರಾದ ಅಬುಬಕ್ಕರ್ ನುಡಿದರು.

ಅವ ರಿಂದು ನಗರದ ಸರ್ಕಿಟ್ ಹೌಸ್ ನಲ್ಲಿ ಪತ್ರಿಕಾ ಗೋಷ್ಠಿ ಯನ್ನು ದ್ದೇಶಿಸಿ ಮಾತ ನಾಡು ತ್ತಿದ್ದರು. ಈ ವರ್ಷ ದಲ್ಲಿ 60 ಮಂದಿಗೆ ತರ ಬೇತಿ ನೀಡಲು ನಿರ್ಧ ರಿಸ ಲಾಗಿದೆ. ಆರಂಭ ದಲ್ಲಿ ತರ ಬೇತಿಯ ರೂ.55 ಸಾವಿರವನ್ನು ನಿಗಮವೇ ಭರಿಸುತ್ತಿದೆ. ಪ್ರವೇಶ ಶುಲ್ಕ 500 ರೂ. ಪಾವತಿಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕು. ಆಯ್ಕೆಯಾದವರಿಗೆ ಎನ್ಐಐಟಿ ತರಬೇತಿ ನೀಡಲಾಗುವುದು ಎಂದವರು ನುಡಿದರು.55 ಸಾವಿರ ರೂ.ಗಳಿಗೆ ಶೇ. 2ರ ಬಡ್ಡಿಯಲ್ಲಿ ತರಬೇತಿಗೆ ಸಾಲ ನೀಡಲಾಗುವುದು ಎಂದರು.
ಅಲ್ಪ ಸಂಖ್ಯಾತರಿಗೆ ಮನೆ ನಿರ್ಮಾಣಕ್ಕೆ ಅನುಕೂಲವಾಗುವಂತೆ ನಿಗಮವು ರೂ.1ರಿಂದ 3 ಲಕ್ಷ ಸಾಲ ಒದಗಿಸಲು ಯೋಜನೆ ರೂಪಿಸಿದೆ. ಮನೆ ನಿರ್ಮಾಣ ಹಾಗೂ ಮನೆ ಕಟ್ಟಲು ಭೂಮಿ ಖರೀದಿಗೆ ರೂ.1ರಿಂದ 3 ಲಕ್ಷದವರೆಗೆ ಸಾಲವನ್ನು ಶೇ. 4ರ ಬಡ್ಡಿ ದರದಲ್ಲಿ ಒದಗಿಸುವ ಯೋಜನೆ ರೂಪಿಸಲಾಗಿದೆ ಎಂದರು.
ಭೂಮಿ ಖರೀದಿ ಯೋಜನೆಯಡಿ ಅಲ್ಪ ಸಂಖ್ಯಾತರಿಗೆ ಕೃಷಿ ಚಟುವಟಿಕೆ ನಡೆಸುವ ನಿಟ್ಟಿನಲ್ಲಿ ನಿಗಮವು ರೂ.2.5 ಲಕ್ಷ ಸಾಲ ಒದಗಿಸುತ್ತಿದೆ. ನೀರಾವರಿ ಸೌಲಭ್ಯ ಇಲ್ಲದ ಎರಡು ಎಕರೆ ಭೂಮಿಗೆ ಹಾಗೂ ನೀರಾವರಿ ಸೌಲಭ್ಯ ಇರುವ ಒಂದು ಎಕರೆ ಭೂಮಿ ಎಂದು ವಿಂಗಡಿಸಿ ಸಾಲ ಸೌಲಭ್ಯ ಒದಗಿಸಲಾಗುವುದು ಎಂದವರು ನುಡಿದರು.ಸಾಲ ಪಡೆಯುವ ರೈತರಿಗೆ ಶೇ.50 ಸಬ್ಸಿಡಿಯಿರುತ್ತದೆ. 10 ವರ್ಷದೊಳಗೆ ವಿವಿಧ ಕಂತುಗಳ ಮೂಲಕ ಉಳಿದ ಹಣವನ್ನು ಮರು ಪಾವತಿ ಮಾಡಬೇಕು ಎಂದರು.ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿರುವ ರಾಜ್ಯ ಸರಕಾರ, 2010-11ರಲ್ಲಿ ರೂ.252 ಕೋಟಿ, 2011-12ರಲ್ಲಿ ರೂ.397 ಕೋಟಿ ಒದಗಿಸುವ ಮೂಲಕ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಪೂರಕ ಯೋಜನೆ ಹಮ್ಮಿಕೊಂಡಿದೆ. ಅನುದಾನವನ್ನು ಸಮರ್ಪಕವಾಗಿ ಬಳಸುತ್ತಿದ್ದು, ಅರ್ಹರಿಗೆ ಸೌಲಭ್ಯ ದೊರಕಿಸಲು ನಿಗಮ ಹೆಚ್ಚಿನ ಪ್ರಯತ್ನ ಮಾಡುತ್ತಿದ್ದು, ಕ್ಷೇತ್ರವಾರು ಗುರಿ ನಿಗದಿಪಡಿಸಿದೆ ಎಂದರು.
ಇದುವರೆಗೆ ಒಟ್ಟು 1,04,474 ಫಲಾನುಭವಿಗಳಿಗೆ ರೂ.162.35 ಕೋಟಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗಿದೆ. ಅರ್ಹ ಫಲಾನುಭವಿಗಳ ಯೋಜನೆಗಳ ಪ್ರಯೋಜನವನ್ನು ಪಡೆಯಬೇಕೆಂದರು. ಮೈಕ್ರೋ ಸಹಾಯಧನ ಸಾಲ ಯೋಜನೆಯಡಿ 2,277 ಸಂಘಗಳ 33,467 ಫಲಾನುಭವಿಗಳಿಗೆ ರೂ.29.25ಕೋಟಿ ಸಹಾಯಧನ ಒದಗಿಸಲಾಗಿದೆ ಎಂದು ನುಡಿದ ಅಬುಬಕ್ಕರ್ ಬೆಂಗಳೂರಿನಲ್ಲಿರುವ ನಿಗಮದ ಕೇಂದ್ರ ಕಚೇರಿಯನ್ನು ರೂ.75 ಲಕ್ಷ ವೆಚ್ಚದಲ್ಲಿ ನವೀಕರಣಗೊಳಿಸಿ ಕಂಪ್ಯೂಟರೀಕರಣಗೊಳಿಸಲಾಗುತ್ತಿದೆ. ಇದರಿಂದ ಕಾರ್ಯಗಳು ಇನ್ನಷ್ಟು ಚುರುಕುಗೊಳ್ಳಲಿವೆ ಎಂದರು. ಕಂಪ್ಯೂಟರೀಕರಣ ಹಾಗೂ ಆನ್ ಲೈನ್ ಗೊಳಿಸುವುದರಿಂದ ಸರ್ಕಾರದ ಯೋಜನೆಗಳಲ್ಲಿ ಮಧ್ಯವರ್ತಿಗಳ ತೊಂದರೆಯನ್ನು ನಿವಾರಿಸಲು ಸಾಧ್ಯ ಎಂದು ಅವರು ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸೋಮಪ್ಪ, ಅನ್ವರ್ ರೀಕೋ, ಅಬ್ದುಲ್ ಕುಂಞ, ಶೌಕತ್ ಅಲಿ, ಅಬ್ದುಲ್ ಕುಂಞ ನೆಲ್ಯಾಡಿ ಉಪಸ್ಥಿತರಿದ್ದರು.

Monday, May 2, 2011

ಕೈಗಾರಿಕಾ ಪ್ರದೇಶಗಳಲ್ಲಿ ಏಕಗವಾಕ್ಷಿ ಪದ್ಧತಿಯಲ್ಲಿ ಸ್ಥಳೀಯರಿಗೆ ಆದ್ಯತೆ-ಸುಬೋಧ್ ಯಾದವ್

ಮಂಗಳೂರು,ಮೇ.02:ಮಂಗಳೂರು ತಾಲ್ಲೂಕಿನ ಇರಾ ಬಳಿ ಕೈಗಾರಿಕಾ ಪ್ರದೇಶಾಭಿವೃದ್ಧಿಗೆ ವಶಪಡಿಸಿಕೊಂಡಿರುವ 176 ಎಕರೆ ಜಮೀನಿನಲ್ಲಿ ಕೈಗಾರಿಕೆಗಳಿಗೆ ಬೇಕಾದ ನೀರು ರಸ್ತೆ ಹಾಗೂ ವಿದ್ಯುತ್ನಂತಹ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ ನಂತರ ಸ್ಥಳೀಯ ಉದ್ಯಮಿಗಳಿಗೆ /ಕೈಗಾರಿಕೋದ್ಯಮಿಗಳಿಗೆ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ತಿಳಿಸಿದ್ದಾರೆ.

ಅವರು ಇಂದು ತಮ್ಮ ಕಚೇರಿ ಯಲ್ಲಿ ನಡೆದ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಇರಾ ಗ್ರಾಮದ ಬಳಿ 585 ಎಕರೆ ಜಮೀನು ಬೇಕಾಗಿದ್ದು,ಈಗಾಗಲೇ 176 ಎಕರೆ ವಶಪಡಿಸಿಕೊಳ್ಳಲಾಗಿದ್ದು, ಪ್ರಥಮ ಹಂತದಲ್ಲಿ ವಶಪಡಿಸಿಕೊಂಡಿರುವ ಭೂಮಿಯನ್ನು ಅಭಿವೃದ್ಧಿ ಪಡಿಸಿ ಹಂಚಿಕೆಗೆ ವ್ಯವಸ್ಥೆ ಮಾಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಗಂಜಿಮಠದ ಬಳಿ 200 ಎಕರೆಯನ್ನು ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಅಭಿವೃದ್ಧಿ ಪಡಿಸಿದ್ದು,ವಿದ್ಯುತ್ ಉಪ ಕೇಂದ್ರಕ್ಕೆ ಬೆಸ್ಕಾಂರವರು ಹಣ ಪಾವತಿಸಿದ ಕೂಡಲೇ ಭೂಮಿಯನ್ನು ಹಸ್ತಾಂತರಿಸಲು ಜಿಲ್ಲಾಧಿಕಾರಿಗಳು ಕೆ.ಐ.ಡಿ.ಬಿ ಅಧಿಕಾರಿಗಳಿಗೆ ತಿಳಿಸಿದರು. ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಪೂರ್ಣಗೊಂಡಿರುವ ರಸ್ತೆ,ಚರಂಡಿ ಕಾಮಗಾರಿಗಳನ್ನು ಈ ತಿಂಗಳಾಂತ್ಯಕ್ಕೆ ಪೂರ್ಣಗೊಳಿಸಲು ಜಿಲ್ಲಾಧಿಕಾರಿಗಳು ಸಂಬಂಧಿಸಿದವರಿಗೆ ಸೂಚಿಸಿದರು.
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಜಂಟಿ ನಿರ್ದೇಶಕರಾದ ಎಸ್.ಜಿ.ಹೆಗಡೆ, ಕೆಐಎಡಿಬಿ, ಕೆಎಸ್ಎಫ್ ಸಿ,ಬೆಸ್ಕಾಂ,ಚೇಂಬರ್ ಆಫ್ ಕಾಮರ್ಸ್ ಮುಂತಾದ ಸಂಸ್ಥೆಗಳ ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

Sunday, May 1, 2011

ಜಿಲ್ಲೆಯಲ್ಲಿ ಸ್ವಚ್ಛತೆಗಾಗಿ 11500 ಜನರ ಶ್ರಮದಾನ

ಮಂಗಳೂರು,ಮೇ.01:ಜಿಲ್ಲೆಯಾದ್ಯಂತ 43 ಕಿ.ಮೀ ವ್ಯಾಪ್ತಿಯಲ್ಲಿ ನಡೆದ ಸಮುದ್ರ ತಟ ಸ್ವಚ್ಛತೆ ಹಾಗೂ ಎಲ್ಲ ತಾಲೂಕು ಕೇಂದ್ರಗಳಲ್ಲಿ ನಡೆದ ಸ್ವಚ್ಛತಾ ಕಾರ್ಯದಲ್ಲಿ ಜಿಲ್ಲಾಡಳಿತದೊಂದಿಗೆ 11500 ಜನರು ಪಾಲ್ಗೊಂಡಿದ್ದು ಸ್ಚಚ್ಛ, ಸುಂದರ ನಗರಿಯನ್ನಾಗಿಸುವ ಜಿಲ್ಲಾಡಳಿತದ ಧ್ಯೇಯ ಯಶಸ್ವಿಯಾಗಿದೆ ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಹೇಳಿದರು.
ಅವ ರಿಂದು ಮಂಗ ಳೂರಿನ ತೋಟ ಬೆಂಗ್ರೆ ಯಲ್ಲಿ ಬೀಚ್ ಸ್ವಚ್ಛತೆಗೆ ಚಾಲನೆ ನೀಡಿದ ಬಳಿಕ ನೀಡಿದ ಮಾಹಿತಿ ಯಲ್ಲಿ ಬೀಚ್ ಸ್ವಚ್ಛತೆ ಯಲ್ಲಿ 7,500 ಸ್ವಯಂ ಸೇವ ಕರು ಪಾಲ್ಗೊಂ ಡಿದ್ದು, 4000 ಜನರು ಬಂ ಟ್ವಾಳ, ಪುತ್ತೂರು, ಮೂಡ ಬಿದ್ರೆ, ಬೆಳ್ತಂ ಗಡಿ, ಸುಳ್ಯದ ಪಟ್ಟಣ ಗಳಲ್ಲಿ ನಡೆದ ಶ್ರಮ ದಾನ ದಲ್ಲಿ ಪಾಲ್ಗೊಂ ಡರು. ಬಂಟ್ವಾ ಳದಲ್ಲಿ 500, ಪುತ್ತೂರು ನಗರ ದಲ್ಲಿ 1800, ಮೂಡ ಬಿದ್ರೆ ಯಲ್ಲಿ 600, ಬೆಳ್ತಂ ಗಡಿಯಲ್ಲಿ 400, ಸುಳ್ಯ ದಲ್ಲಿ 400 ರಷ್ಟು ಸ್ವಯಂ ಸೇವ ಕರು ಸ್ವಚ್ಛತಾ ಕಾರ್ಯ ದಲ್ಲಿ ತಮ್ಮನ್ನು ತೊಡ ಗಿಸಿ ಕೊಂಡ ರೆಂದು ಜಿಲ್ಲಾ ಧಿಕಾ ರಿಗಳು ಮಾಹಿತಿ ನೀಡಿ ದರು.
ತೋಟ ಬೆಂಗ್ರೆ ಯಲ್ಲಿ 3,500, ವಲಯ ಒಂದ ರಲ್ಲಿ 1500, ಪಣಂ ಬೂರು ಸಸಿ ಹಿತ್ಲುವಿ ನಲ್ಲಿ 1500, ವಲಯ 4ರಲ್ಲಿ 700, ವಲಯ 5 ರಲ್ಲಿ 700, ಜನರು ಕಡಲ ತೀರ ಶುಚಿತ್ವ ದಲ್ಲಿ ಪಾಲ್ಗೊಂ ಡಿದ್ದರು. ಈ ಸಂದರ್ಭ ದಲ್ಲಿ ಒಟ್ಟು 23 ಲಾರಿ, ಟೆಂಪೊ ಟ್ರ್ಯಾಕ್ಸ್, 407 ವಾಹನ ಗಳಲ್ಲಿ ಒಟ್ಟು 65 ಲೋಡ್ ಕಸ ಸಂಗ್ರ ಹಿಸ ಲಾಗಿದ್ದು, ವಿಲೇ ವಾರಿ ವ್ಯವಸ್ಥೆ ಮಾಡ ಲಾಗಿದೆ ಎಂದೂ ಜಿಲ್ಲಾಧಿ ಕಾರಿಗಳು ತಿಳಿಸಿ ದರು. ಎಲ್ಲ ತಾಲೂಕು ಕೇಂದ್ರ ಗಳಲ್ಲಿ ನಡೆದ ಸ್ವಚ್ಛತಾ ಶ್ರಮದಾನದಲ್ಲಿ ಜನಪ್ರತಿನಿಧಿಗಳ ಸಕ್ರಿಯ ಪಾಲ್ಗೊಳ್ಳುವಿಕೆ ಸ್ವಯಂಸೇವಕರಲ್ಲಿ ಸ್ಫೂರ್ತಿಯನ್ನು ಮೂಡಿಸಿತು.
ತೋಟ ಬೆಂಗ್ರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೇಮಾರ್, ವಿಧಾನಸಭಾ ಉಪಸಭಾಧ್ಯಕ್ಷರಾದ ಯೋಗೀಶ್ ಭಟ್ ಮತ್ತು ಹೈಕೊರ್ಟ್ ನ್ಯಾಯಾಧೀಶರಾದ ನಾಗಮೋಹನ್ ದಾಸ್ ಅವರು ಸ್ವಚ್ಛತೆಯ ಸಂದೇಶವನ್ನು ನೀಡಿದರು. ಪರಿಸರ ಸಚಿವರೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವರು ಪ್ಲಾಸ್ಟಿಕ್ ನಿಷೇಧವನ್ನು ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತಂದಿರುವ ಬಗ್ಗೆ ಮಾಹಿತಿ ನೀಡಿದರು. ಮಂಗಳೂರು ಮೇಯರ್ ಪ್ರವೀಣ್ ಕುಮಾರ್,ಉಪಮೇಯರ್ ಗೀತಾ ನಾಯಕ್, ಜಿಲ್ಲಾಧಿಕಾರಿ ಸುಬೋಧ್ ಯಾದವ್, ನ್ಯಾಯಾಧೀಶರಾದ ಅಬ್ದುಲ್ ನಝೀರ್, ಬಿ.ಎನ್ ಪಿಂಟೋ,ಎಚ್ ಆರ್ ದೇಶಪಾಂಡೆ, ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಪ್ರದೀಪ್ ಕುಮಾರ್ ಕಲ್ಕೂರ, ಎಂ ಆರ್ ಪಿ ಎಲ್ ನ ಲಕ್ಷ್ಮೀ ಕುಮಾರನ್, ಪಾಲಿಕೆ ಆಯುಕ್ತರಾದ ಡಾ. ಕೆ. ಎನ್ ವಿಜಯಪ್ರಕಾಶ್ ಸೇರಿದಂತೆ,ಅನೇಕ ಜನ ಪ್ರತಿನಿಧಿಗಳು, ವಿವಿಧ ಸೇವಾ ಸಂಸ್ಥೆಗಳ, ಶಿಕ್ಷಣ ಸಂಸ್ಥೆಗಳ ಸ್ವಯಂ ಸೇವಕರು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.