ಇದು ವರೆಗೆ 7 ಬಾರಿ ಪೆಟ್ರೊಲ್ ಬೆಲೆಯನ್ನು ಕೇಂದ್ರ ಸರ್ಕಾರ ಏರಿಸಿದೆ.ಆದರೆ ರಾಜ್ಯ ಸರ್ಕಾರ ಒಂದು ಬಾರಿಯೂ ಹೆಚ್ಚುವರಿ ತೆರಿಗೆಯನ್ನು ಪೆಟ್ರೊಲ್ ಉತ್ಪನ್ನಗಳ ಮೇಲೆ ವಿಧಿಸಿಲ್ಲ.ಪೆಟ್ರೊಲ್ ಬೆಲೆ ಇಳಿಸುವ ಜವಾಬ್ದಾರಿ ಕೇಂದ್ರ ಸರ್ಕಾರದ್ದು ಎಂದು ಮುಖ್ಯಮಂತ್ರಿಗಳು ಹೇಳಿದರು.ಕೆ.ಪಿ.ಎಸ್.ಸಿ ಯಲ್ಲಿ ಅಕ್ರಮ ನೇಮಕಾತಿ ಗಳು ನಡೆದಿದೆ ಎಂಬ ದೂರುಗಳಿದ್ದು,ಈ ಬಗ್ಗೆ ತನಿಖೆ ನಡೆಸುವುದಾಗಿ ಹೇಳಿದರು.ವಿಧಾನ ಸಭೆಯ ಅಧಿವೇಶನದ ಬಳಿಕ ಸಂಪುಟ ವಿಸ್ತರಣೆ ಮಾಡುವುದಾಗಿ ಮುಖ್ಯಮಂತ್ರಿಗಳು ಹೇಳಿದರು. ಸಂಸದ ನಳಿನ್ ಕುಮಾರ್ ಕಟೀಲ್,ಡಿ.ವಿ. ಸದಾನಂದ ಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ,ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜ ಭಟ್, ಐಜಿಪಿ ಅಲೋಕ್ ಮೋಹನ್,ಎಸ್ಪಿ ಲಾಬು ರಾಮ್,ಪೋಲಿಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.