Tuesday, May 3, 2011

ಅಲ್ಪಸಂಖ್ಯಾತ ಅಭಿವೃದ್ಧಿಗೆ ಭರಪೂರ ಸೌಲಭ್ಯ.: ಅಬುಬಕ್ಕರ್

ಮಂಗಳೂರು,ಮೇ.03: ಬಿಕಾಂ, ಎಕೌಂಟೆನ್ಸಿ, ಎಂಬಿಎ ಪದವಿ ಪಡೆದ ಅರ್ಹ ಅಲ್ಪಸಂಖ್ಯಾತ ನಿರುದ್ಯೋಗಿ ಅಭ್ಯರ್ಥಿಗಳಿಗೆ ಉದ್ಯೋಗ ಒದಗಿಸುವಲ್ಲಿ ನಿಗಮ ಹೆಚ್ಚಿನ ಗಮನ ಹರಿಸಿದ್ದು ಈಗಾಗಲೇ ಬೆಳಗಾಂ, ಮೈಸೂರು, ಬೆಂಗಳೂರು, ಮಂಗಳೂರು 4 ವಿಭಾಗ ಮಟ್ಟದಲ್ಲಿ 10 ಮಂದಿಗೆ ಎನ್ಐಐಟಿ(ನ್ಯಾಶನಲ್ ಇನ್ಸ್ಟಿಟ್ಯೂಟ್ ಆಫ್ ಇಂಡಸ್ಟ್ರಿಯಲ್ ಟ್ರೈನಿಂಗ್) ತರಬೇತಿ ನೀಡಲಾಗಿದೆ.ತರಬೇತಿಯ ಬಳಿಕ ಇವರಿಗೆ ಉದ್ಯೋಗ ಒದಗಿಸುವ ಜವಾಬ್ದಾರಿಯೂ ನಿಗಮದಾಗಿದ್ದು, ಕಳೆದ ಸಾಲಿನಲ್ಲಿ ತರಬೇತಿ ಪಡೆದ ಅಭ್ಯರ್ಥಿಗಳಿಗೆ ಐಡಿಬಿ ಮತ್ತು ಐಸಿಐಸಿಐ ಬ್ಯಾಂಕ್ಗಳಲ್ಲಿ ಉದ್ಯೋಗವನ್ನು ಕಲ್ಪಿಸಲಾಗಿದೆ ಎಂದು ರಾಜ್ಯ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷರಾದ ಅಬುಬಕ್ಕರ್ ನುಡಿದರು.

ಅವ ರಿಂದು ನಗರದ ಸರ್ಕಿಟ್ ಹೌಸ್ ನಲ್ಲಿ ಪತ್ರಿಕಾ ಗೋಷ್ಠಿ ಯನ್ನು ದ್ದೇಶಿಸಿ ಮಾತ ನಾಡು ತ್ತಿದ್ದರು. ಈ ವರ್ಷ ದಲ್ಲಿ 60 ಮಂದಿಗೆ ತರ ಬೇತಿ ನೀಡಲು ನಿರ್ಧ ರಿಸ ಲಾಗಿದೆ. ಆರಂಭ ದಲ್ಲಿ ತರ ಬೇತಿಯ ರೂ.55 ಸಾವಿರವನ್ನು ನಿಗಮವೇ ಭರಿಸುತ್ತಿದೆ. ಪ್ರವೇಶ ಶುಲ್ಕ 500 ರೂ. ಪಾವತಿಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕು. ಆಯ್ಕೆಯಾದವರಿಗೆ ಎನ್ಐಐಟಿ ತರಬೇತಿ ನೀಡಲಾಗುವುದು ಎಂದವರು ನುಡಿದರು.55 ಸಾವಿರ ರೂ.ಗಳಿಗೆ ಶೇ. 2ರ ಬಡ್ಡಿಯಲ್ಲಿ ತರಬೇತಿಗೆ ಸಾಲ ನೀಡಲಾಗುವುದು ಎಂದರು.
ಅಲ್ಪ ಸಂಖ್ಯಾತರಿಗೆ ಮನೆ ನಿರ್ಮಾಣಕ್ಕೆ ಅನುಕೂಲವಾಗುವಂತೆ ನಿಗಮವು ರೂ.1ರಿಂದ 3 ಲಕ್ಷ ಸಾಲ ಒದಗಿಸಲು ಯೋಜನೆ ರೂಪಿಸಿದೆ. ಮನೆ ನಿರ್ಮಾಣ ಹಾಗೂ ಮನೆ ಕಟ್ಟಲು ಭೂಮಿ ಖರೀದಿಗೆ ರೂ.1ರಿಂದ 3 ಲಕ್ಷದವರೆಗೆ ಸಾಲವನ್ನು ಶೇ. 4ರ ಬಡ್ಡಿ ದರದಲ್ಲಿ ಒದಗಿಸುವ ಯೋಜನೆ ರೂಪಿಸಲಾಗಿದೆ ಎಂದರು.
ಭೂಮಿ ಖರೀದಿ ಯೋಜನೆಯಡಿ ಅಲ್ಪ ಸಂಖ್ಯಾತರಿಗೆ ಕೃಷಿ ಚಟುವಟಿಕೆ ನಡೆಸುವ ನಿಟ್ಟಿನಲ್ಲಿ ನಿಗಮವು ರೂ.2.5 ಲಕ್ಷ ಸಾಲ ಒದಗಿಸುತ್ತಿದೆ. ನೀರಾವರಿ ಸೌಲಭ್ಯ ಇಲ್ಲದ ಎರಡು ಎಕರೆ ಭೂಮಿಗೆ ಹಾಗೂ ನೀರಾವರಿ ಸೌಲಭ್ಯ ಇರುವ ಒಂದು ಎಕರೆ ಭೂಮಿ ಎಂದು ವಿಂಗಡಿಸಿ ಸಾಲ ಸೌಲಭ್ಯ ಒದಗಿಸಲಾಗುವುದು ಎಂದವರು ನುಡಿದರು.ಸಾಲ ಪಡೆಯುವ ರೈತರಿಗೆ ಶೇ.50 ಸಬ್ಸಿಡಿಯಿರುತ್ತದೆ. 10 ವರ್ಷದೊಳಗೆ ವಿವಿಧ ಕಂತುಗಳ ಮೂಲಕ ಉಳಿದ ಹಣವನ್ನು ಮರು ಪಾವತಿ ಮಾಡಬೇಕು ಎಂದರು.ಅಲ್ಪಸಂಖ್ಯಾತರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿರುವ ರಾಜ್ಯ ಸರಕಾರ, 2010-11ರಲ್ಲಿ ರೂ.252 ಕೋಟಿ, 2011-12ರಲ್ಲಿ ರೂ.397 ಕೋಟಿ ಒದಗಿಸುವ ಮೂಲಕ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಪೂರಕ ಯೋಜನೆ ಹಮ್ಮಿಕೊಂಡಿದೆ. ಅನುದಾನವನ್ನು ಸಮರ್ಪಕವಾಗಿ ಬಳಸುತ್ತಿದ್ದು, ಅರ್ಹರಿಗೆ ಸೌಲಭ್ಯ ದೊರಕಿಸಲು ನಿಗಮ ಹೆಚ್ಚಿನ ಪ್ರಯತ್ನ ಮಾಡುತ್ತಿದ್ದು, ಕ್ಷೇತ್ರವಾರು ಗುರಿ ನಿಗದಿಪಡಿಸಿದೆ ಎಂದರು.
ಇದುವರೆಗೆ ಒಟ್ಟು 1,04,474 ಫಲಾನುಭವಿಗಳಿಗೆ ರೂ.162.35 ಕೋಟಿ ಯೋಜನೆಗಳನ್ನು ರೂಪಿಸಿ ಅನುಷ್ಠಾನಕ್ಕೆ ತರಲಾಗಿದೆ. ಅರ್ಹ ಫಲಾನುಭವಿಗಳ ಯೋಜನೆಗಳ ಪ್ರಯೋಜನವನ್ನು ಪಡೆಯಬೇಕೆಂದರು. ಮೈಕ್ರೋ ಸಹಾಯಧನ ಸಾಲ ಯೋಜನೆಯಡಿ 2,277 ಸಂಘಗಳ 33,467 ಫಲಾನುಭವಿಗಳಿಗೆ ರೂ.29.25ಕೋಟಿ ಸಹಾಯಧನ ಒದಗಿಸಲಾಗಿದೆ ಎಂದು ನುಡಿದ ಅಬುಬಕ್ಕರ್ ಬೆಂಗಳೂರಿನಲ್ಲಿರುವ ನಿಗಮದ ಕೇಂದ್ರ ಕಚೇರಿಯನ್ನು ರೂ.75 ಲಕ್ಷ ವೆಚ್ಚದಲ್ಲಿ ನವೀಕರಣಗೊಳಿಸಿ ಕಂಪ್ಯೂಟರೀಕರಣಗೊಳಿಸಲಾಗುತ್ತಿದೆ. ಇದರಿಂದ ಕಾರ್ಯಗಳು ಇನ್ನಷ್ಟು ಚುರುಕುಗೊಳ್ಳಲಿವೆ ಎಂದರು. ಕಂಪ್ಯೂಟರೀಕರಣ ಹಾಗೂ ಆನ್ ಲೈನ್ ಗೊಳಿಸುವುದರಿಂದ ಸರ್ಕಾರದ ಯೋಜನೆಗಳಲ್ಲಿ ಮಧ್ಯವರ್ತಿಗಳ ತೊಂದರೆಯನ್ನು ನಿವಾರಿಸಲು ಸಾಧ್ಯ ಎಂದು ಅವರು ನುಡಿದರು.
ಪತ್ರಿಕಾಗೋಷ್ಠಿಯಲ್ಲಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸೋಮಪ್ಪ, ಅನ್ವರ್ ರೀಕೋ, ಅಬ್ದುಲ್ ಕುಂಞ, ಶೌಕತ್ ಅಲಿ, ಅಬ್ದುಲ್ ಕುಂಞ ನೆಲ್ಯಾಡಿ ಉಪಸ್ಥಿತರಿದ್ದರು.