Tuesday, November 30, 2010

'ಮಂಗಳೂರು ಗ್ರಾಮಾಂತರ ವ್ಯಾಪ್ತಿ ಸ್ತ್ರೀಶಕ್ತಿ ಸಂಘಗಳ ವ್ಯವಹಾರ ಸುಮಾರು 9 ಕೋಟಿ'

ಮಂಗಳೂರು, ನವೆಂಬರ್,30 : ಮಂಗಳೂರು ಗ್ರಾಮಾಂತರ ವ್ಯಾಪ್ತಿಯ ಸ್ತ್ರೀಶಕ್ತಿ ಸಂಘದ ವ್ಯವಹಾರವೇ ಸುಮಾರು 9 ಕೋಟಿ ರೂ. ಸ್ತ್ರೀಶಕ್ತಿ ಸಬಲೀಕರಣಗೊಳ್ಳುತ್ತಿರುವುದಕ್ಕೆ, ಸ್ತ್ರೀಯರು ಸ್ವಾವಲಂಬಿ ಗಳಾಗುತ್ತಿರುವುದಕ್ಕೆ ಇದು ಅತ್ಯುತ್ತಮ ಸಾಕ್ಷಿ ಎಂದು ಮಂಗಳೂರು ಗ್ರಾಮಾಂತರ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶ್ಯಾಮಲಾ ಹೇಳಿದರು.
ಅವರು ವಾರ್ತಾ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಕೇಂದ್ರ ಸುರತ್ಕಲ್ ಇವರ ಸಂಯುಕ್ತಾ ಶ್ರಯದಲ್ಲಿ ಇಡ್ಯಾ ಮಹಾಲಿಂಗೇಶ್ವರ ದೇವಾಲಯ ಆವರಣದ ಸಭಾಭವನದಲ್ಲಿ ನವೆಂಬರ್ 29ರಂದು ಆಯೋಜಿಸಿದ್ದ 'ಮಹಿಳಾ ಸಬಲೀಕರಣ' ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡುತ್ತಿದ್ದರು.ಮಂಗಳೂರು ಗ್ರಾಮಾಂತರ ವಲಯದಲ್ಲಿ 2002ರ ನಂತರ 860 ಸ್ತ್ರೀ ಶಕ್ತಿ ಗುಂಪುಗಳ ಮೂಲಕ ಮಾಡಿದ ವ್ಯವಹಾರ ಸುಮಾರು 9 ಕೋಟಿ ರೂ.ಗಳು ಮಹಿಳೆಯರು ಸಬಲೀಕರಣ ಗೊಳ್ಳುತ್ತಿರುವುದಕ್ಕೆ ಇದು ಸಾಕ್ಷಿ ಎಂದ ಅವರು, ಸಾಮಾಜಿಕ ಹಾಗೂ ಸರ್ಕಾರ ನೀಡುವ ಪ್ರೋತ್ಸಾಹವನ್ನು ಸದುಪಯೋಗ ಮಾಡಿಕೊಂಡು ಮಹಿಳೆಯರು ಇನ್ನಷ್ಟು ಸಬಲರಾಗಬೇಕೆಂದರು. ಉದ್ಯೋಗಿನಿ, ಭಾಗ್ಯಲಕ್ಷ್ಮಿಯಂತಹ ಯೋಜನೆಗಳು ಹೆಣ್ಣು ಮಗುವಿನ ಸರ್ವತೋಮುಖ ಅಭಿವೃದ್ಧಿಗಾಗಿ ರೂಪಿಸಿದ ಯೋಜನೆಗಳೆಂದ ಶ್ಯಾಮಲ, ರಾಜಕೀಯವಾಗಿಯೂ ಮಹಿಳೆ ಇನ್ನಷ್ಟು ಬೆಳೆದರೆ ಮಹಿಳೆಯರ ಅಭಿವೃದ್ಧಿಗೆ ಪೂರಕ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಸಾಧ್ಯ ಎಂದರು.
ವಿಚಾರ ಸಂಕಿರಣ ವನ್ನು ಉದ್ಘಾಟಿಸಿ ಮಾತ ನಾಡಿದ ಡಾ. ಜ್ಯೋತಿ ಕಾರ್ಣಿಕ್ ಅವರು, ಜ್ಞಾನ ಶಕ್ತಿಯ ಸಂಕೇತ. ಅರಿವಿ ನೊಂದಿಗೆ ವ್ಯಕ್ತಿತ್ವದ ಪರಿ ಪೂರ್ಣ ಅಭಿವೃದ್ಧಿ ಸಾಧ್ಯ ಎಂದರು. ಮಹಿಳಾ ಕೇಂದ್ರದ ಅಧ್ಯಕ್ಷರೂ ಹಾಗೂ ವಿಚಾರ ಸಂಕಿರಣ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಲೋಚನಾ ವಿ. ರಾವ್ ಅವರು, ಗ್ರಾಮೀಣ ಮಹಿಳೆಯರಿಗೆ ನೀಡುವ ಎಲ್ಲ ಪ್ರೋತ್ಸಾಹಗಳನ್ನು ನಗರದ ಮಹಿಳೆಯರಿಗೆ ನೀಡಬೇಕು; ಮಹಿಳಾ ಕೇಂದ್ರಗಳು ಇಂದು ಹಿಂದಿನಷ್ಟು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂಬ ಅಸಂತೋಷವನ್ನು ವ್ಯಕ್ತಪಡಿಸಿದರಲ್ಲದೆ, ನಗರದ ಮಹಿಳೆಯರ ಸಮಸ್ಯೆಗಳ ಬಗ್ಗೆ ಸಭೆಯ ಗಮನಸೆಳೆದರು.ಸಂಧ್ಯಾ ಕಾಮತ್ ಹಾಗೂ ಶಕುಂತಳಾ ಆರ್ ಭಟ್ ಮುಖ್ಯ ಅತಿಥಿಗಳಾಗಿದ್ದರು. ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಸ್ವಾಗತಿಸಿ, ಪ್ರಸ್ತಾವಿಕ ಮಾತುಗಳನ್ನಾಡಿದರು. ಕೆ. ಕಲಾವತಿ ಕಾರ್ಯಕ್ರಮ ನಿರೂಪಿಸಿದರು. ರಮಣಿ ವಂದಿಸಿದರು. ನಂತರ ಮಹಿಳಾ ಕೇಂದ್ರದ ವತಿಯಿಂದ ಸಾಂಸ್ಕೃತಿಕ ಸಪ್ತಾಹದ ಅಂಗವಾಗಿ ಸಹೋದರಿಯರಾದ ಕುಮಾರಿ ಪವಿತ್ರ ಮತ್ತು ಪಲ್ಲವಿಯವರಿಂದ ಕರ್ನಾಟಕ ಶಾಸ್ತ್ರೀಯ ಕಾರ್ಯಕ್ರಮ ನಡೆಯಿತು.

Monday, November 29, 2010

'ಅನಧಿಕೃತ ನಿರ್ಮಾಣ ಸ್ವ ಇಚ್ಛೆಯಿಂದ ತೆರವಿಗೆ ಡಿಸೆಂಬರ್ 15ರ ಗಡುವು'

ಮಂಗಳೂರು, ನವೆಂಬರ್.29 : ಸುಪ್ರೀಂ ಕೋರ್ಟ್ ಆದೇಶದನ್ವಯ ಜನಪರವಾಗಿ ತೆಗೆದುಕೊಂಡಿರುವ ಅನಧಿಕೃತ ಧಾರ್ಮಿಕ ನಿರ್ಮಾಣಗಳ ತೆರವು ಕಾರ್ಯಾಚರಣೆಯನ್ನು ಸಂಬಂಧಪಟ್ಟವರು ಸ್ವ ಇಚ್ಛೆಯಿಂದ ಕೈಗೊಳ್ಳಲು ಡಿಸೆಂಬರ್ 15ರವರೆಗೆ ಜಿಲ್ಲಾಡಳಿತ ಕಾಲಾವಕಾಶ ನೀಡಿದೆ.

ಇಂದು ಈ ಸಂಬಂಧ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರ ನೇತೃತ್ವದಲ್ಲಿ ಜರುಗಿದ ಅಧಿಕಾರಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು. ಜನಪರ ನಿರ್ಧಾರವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಈಗಾಗಲೇ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಹಲವು ಸುತ್ತಿನ ಸಭೆಗಳನ್ನು ನಡೆಸಲಾಗಿತ್ತು.ಈ ಸಭೆಗಳಿಗೆ ಧಾರ್ಮಿಕ ಮುಖಂಡರು ಹಾಜರಾಗಿದ್ದು, ಸ್ಥಳೀಯರಲ್ಲಿ ಅರಿವು ಮೂಡಿಸಲು ಪೂರ್ವಭಾವಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಅನಧಿಕೃತವಾಗಿದ್ದು, ಸಾರ್ವಜನಿಕರ ದೈನಂದಿನ ವ್ಯವಹಾರಗಳಿಗೆ ತೊಂದರೆಯಾಗಿರುವ ನಿರ್ಮಾಣಗಳನ್ನು ತೆಗೆಯಲು ಬಹುತೇಕರು ಸ್ವ ಇಚ್ಛೆಯಿಂದ ಮುಂದೆ ಬಂದಿರುವರೆಂದು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಉಪವಿಭಾಗಾಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 1579 ಅನಧಿಕೃತ ನಿರ್ಮಾಣಗಳನ್ನು ಗುರುತಿಸಲಾಗಿದ್ದು, ಪುತ್ತೂರಿನಲ್ಲಿ 152, ಕಡಬದಲ್ಲಿ 150, ಮಂಗಳೂರಿನಲ್ಲಿ 363, ಬಂಟ್ವಾಳದಲ್ಲಿ 352, ಬೆಳ್ತಂಗಡಿಯಲ್ಲಿ 298, ಸುಳ್ಯದಲ್ಲಿ 136 ಮೂಡಬಿದ್ರೆಯಲ್ಲಿ 98 ಇವೆ. ಸ್ವ ಇಚ್ಛೆಯಿಂದ ತೆರವು ಗೊಳಿಸುವ ಗಡುವು ಮುಗಿದ ಬಳಿಕ, ಆದ್ಯತೆಯ ನೆಲೆಯಲ್ಲಿ ಜಿಲ್ಲಾಡಳಿತ ಸ್ಥಳೀಯಾಡಳಿತದ ನೆರವಿನಿಂದ ತೆರವು ಕಾರ್ಯಾಚರಣೆ ನಡೆಸಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಆದ್ಯತಾ ಪಟ್ಟಿಯನ್ನು ಸ್ಥಳೀಯ ಅಧಿಕಾರಿಗಳು ಡಿಸೆಂಬರ್ 10 ರೊಳಗೆ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಸೂಚನೆ ನೀಡಿದರು. ಪಟ್ಟಿ ತಯಾರಿಸುವಾಗ ಪೊಲೀಸ್ ಇಲಾಖೆಯ ಜೊತೆಗೂ ಚರ್ಚಿಸಬೇಕೆಂದು ಸಲಹೆ ನೀಡಿದ ಜಿಲ್ಲಾಧಿಕಾರಿಗಳು, ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಇನ್ನಷ್ಟು ಸಭೆಗಳನ್ನು ನಡೆಸುವ ಹಾಗೂ ಸ್ಥಳೀಯವಾಗಿ ವಿವೇಚನ ಶಕ್ತಿಗನುಸಾರ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಸ್ಥಳೀಯ ಉನ್ನತಾಧಿಕಾರಿಗಳಿಗೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಸುಬ್ರಮಣ್ಯೇಶ್ವರ ರಾವ್, ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ, ಡಿಸಿಪಿ ರಮೇಶ್, ಸಿಇಒ ಪಿ. ಶಿವಶಂಕರ್, ಮಂಗಳೂರು ಎಸಿ, ಪುತ್ತೂರು ಎಸಿ, ಎಲ್ಲ ತಾಲೂಕಿನ ತಹಸೀಲ್ದಾರ್ ಸೇರಿದಂತೆ ಎಲ್ಲ ಹಿರಿಯ ಹಾಗೂ ಅನುಷ್ಠಾನಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಉಪಕಸುಬುಗಳಿಂದ ಅಧಿಕ ಲಾಭ ಸಾಧ್ಯ: ಮೋನಪ್ಪ ಕರ್ಕೆರಾ

ಮಂಗಳೂರು, ನವೆಂಬರ್ 29 : ರೈತರು ಕೃಷಿಯೊಂದಿಗೆ ಉಪ ಕಸುಬುಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಹೆಚ್ಚಿನ ಲಾಭ ಗಳಿಸಲು ಸಾಧ್ಯವಿದೆ ಎಂದು ರಾಜ್ಯ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾನಿಲಯ ಬೀದರ್ ಇದರ ಆಡಳಿತ ಮಂಡಳಿ ಸದಸ್ಯ ಮೋನಪ್ಪ ಕರ್ಕೆರಾ ಹೇಳಿದರು.

ವಿಸ್ತರಣಾ ಶಿಕ್ಷಣ ಕೇಂದ್ರ, ಮೀನು ಗಾರಿಕಾ ಕಾಲೇಜು ಮಂಗ ಳೂರು ಇದರ ಆಶ್ರಯ ದಲ್ಲಿ ಕಾಲೇಜಿ ನ ಸಭಾಗ ಣದಲ್ಲಿ ಕೃಷಿ ಕರಿ ಗಾಗಿ ಏರ್ಪಡಿ ಸಿರುವ `ಸಣ್ಣ ಕೆರೆ-ಕೊಳ ಗಳಲ್ಲಿ ಮೀನು ಸಾಕಣೆ' ಎರಡು ದಿನ ಗಳ ತರ ಬೇತಿ ಕಾರ್ಯ ಕ್ರಮ ವನ್ನು ಸೋಮವಾರ ಉದ್ಘಾಟಿಸಿ ಅವರು ಮಾತ ನಾಡಿದರು.ಆಡು, ಕೋಳಿ, ಜಾನುವಾರು ಸಾಕಣೆ, ಜೇನು ಕೃಷಿ ಇಂತಹ ಉಪ ಕಸುಗಳು ಇಂದು ಕೃಷಿಕನಿಗೆ ಹೆಚ್ಚು ಆದಾಯವನ್ನು ತಂದು ಕೊಡುತ್ತಿವೆ. ಮೀನು ಮರಿ ಸಾಕಣೆ ಕೂಡ ಲಾಭಗಳಿಸಬಹುದಾದಂತಹ ಉಪಕಸುಬು. ಆದರೆ ಇಲ್ಲಿ ಮಾರುಕಟ್ಟೆ ಸಮಸ್ಯೆ ಕೃಷಿಕರನ್ನು ಕಾಡುತ್ತಿದೆ. ಈ ನಿಟ್ಟಿನಲ್ಲಿ ಗಮನಹರಿಸಬೇಕಾದ್ದು ಅವಶ್ಯ. ಸಾಕಷ್ಟು ಮಾಹಿತಿಯನ್ನು ಪಡೆದು ಮೀನು ಮರಿ ಸಾಕಣೆ ಕೃಷಿಯಲ್ಲಿ ರೈತರು ತೊಡಗಿಕೊಳ್ಳಬೇಕು ಎಂದು ನುಡಿದ ಮೋನಪ್ಪ ಕರ್ಕೇರಾ ರೈತರ ಅಭಿವೃದ್ಧಿಗಾಗಿ ಬಿಡುಗಡೆಯಾಗುವ ಅನುದಾನ ಸಮರ್ಪಕವಾಗಿ ತಲುಪದೇ ಇರುವ ಕುರಿತು ವಿಷಾದ ವ್ಯಕ್ತಪಡಿಸಿದರು.ಮೀನು ಸಾಕಣೆ ಯಂತಹ ಉಪ ಕಸಬುಗಳಲ್ಲಿ ತೊಡಗಿಕೊಳ್ಳುವ ರೈತರು ಮುಂದೆ ಎದುರಾಗುವ ಸಮಸ್ಯೆಗಳನ್ನು ಯಾವ ರೀತಿ ಎದುರಿಸಬೇಕು ಎಂಬುದರ ಕುರಿತು ಸೂಕ್ತ ಮಾಹಿತಿಯನ್ನು ಮುಂಚಿತವಾಗಿ ಪಡೆದುಕೊಂಡಿರಬೇಕಾದ್ದು ಅವಶ್ಯ. ರೈತರಿಗೆ ಪ್ರಯೋಜನವಾಗುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದು ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ ನುಡಿದರು.ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ.ಕೆ.ಎಂ.ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಮೀನುಗಾರಿಕಾ ಇಲಾಖೆಯ ಪಾಶ್ರ್ವನಾಥ್ ಉಪಸ್ಥಿತರಿದ್ದರು.ಮೀನುಗಾರಿಕಾ ಕಾಲೇಜು, ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ.ಎಚ್.ಎನ್.ಆಂಜನೇಯಪ್ಪ ಸ್ವಾಗತಿಸಿದರು. ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿ ಕಿಶೋರ್ ವಂದಿಸಿದರು. ಸಹಾಯಕ ಪ್ರಾಧ್ಯಾಪಕ ಮಲ್ಲೇಶ್ ಕಾರ್ಯಕ್ರಮ ನಿರೂಪಿಸಿದರು.

Saturday, November 27, 2010

ಕೋಮು ಸೌಹಾರ್ದ ಮರಳು ಶಿಲ್ಪ

ಮಂಗಳೂರು,ನವೆಂಬರ್ 27 :ಕೋಮು ಸೌಹಾರ್ದ ಸಪ್ತಾಹ
ಸಮಾ ರೋಪ ಅಂಗ ವಾಗಿ ಮಂಗ ಳೂರಿನ ಪಣಂ ಬೂರು ಬೀಚಿ ನಲ್ಲಿ ವಿದ್ಯಾರ್ಥಿ ಗಳಿ ಗಾಗಿ ಮರಳು ಶಿಲ್ಪ ಸರ್ಧೆ ಯನ್ನು ಆಯೋಜಿ ಸಲಾ ಗಿತ್ತು.ಮಂಗ ಳೂರು ಪೋಲಿಸ್ ಕಮಿಶ ನರೇಟ್ ಆಯೋ ಜಿಸಿದ್ದ ಈ ಸ್ಪರ್ಧಾ ಕೂಟ ದಲ್ಲಿ ನಗ ರದ ವಿವಿಧ ಶಾಲಾ ವಿದ್ಯಾರ್ಥಿ-ವಿದ್ಯಾರ್ಥಿ ನಿಯರು ಪಾಲ್ಗೊಂ ಡಿದ್ದರು. ಸಮಾ ರೋಪ ಸಮಾ ರಂಭದಲ್ಲಿ ಮಂಗ ಳೂರು ನಗರ ಪೋಲಿಸ್ ಆಯುಕ್ತ ರಾದ ಸೀಮಂತ್ ಕುಮಾರ್ ಸಿಂಗ್,ಡಿಸಿಪಿ ಗಳಾದ ಆರ್.ರಮೇಶ್, ಮುತ್ತು ರಾಯ ಸೇರಿ ದಂತೆ ಇಲಾಖೆಯ ಹಿರಿಯ ಪೋಲಿಸ್ ಅಧಿಕಾ ರಿಗಳು ಪಾಲ್ಗೊಂ ಡಿದ್ದರು.

ಗ್ರಾಮೀಣ ಪ್ರದೇಶಗಳಿಗೆ ಬಸ್ ಸಂಚಾರಕ್ಕೆ ಪರವಾನಿಗೆ ಕೋರಿದವರಿಗೆ ತಿಂಗಳೊಳಗೆ ಪರವಾನಿಗೆ ನೀಡಿ: ಸಚಿವ ಪಾಲೆಮಾರ್

ಮಂಗಳೂರು, ನವೆಂಬರ್. 27 : ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಬಸ್ ಓಡಿಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಿರುವವರಿಗೆ ಒಂದು ತಿಂಗಳೊಳಗೆ ಪರವಾನಿಗೆ ನೀಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರು ನಿರ್ದೇಶನ ನೀಡಿದ್ದಾರೆ. ಪರವಾನಿಗೆ ಪಡೆದು ಬಸ್ ಓಡಿಸದಿದ್ದಲ್ಲಿ ಅಂತಹ ಪರವಾನಿಗೆಯನ್ನು ರದ್ದುಗೊಳಿಸುವಂತೆ ಮಂಗಳೂರು ಸಾರಿಗೆ ಅಧಿಕಾರಿಗೆ ಸ್ಪಷ್ಟ ಆದೇಶ ನೀಡಿದ್ದಾರೆ.
ದ.ಕ. ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಇಂದು ಜಿಲ್ಲಾ ಪಂಚಾಯತ್ನ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜೂನ್ 21ರಂದು ಕೆಡಿಪಿ ಸಭೆಯಲ್ಲಿ ಪ್ರಸ್ತಾಪಗೊಂಡ ಗ್ರಾಮೀಣ ಪ್ರದೇಶದ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಬಸ್ಸುಗಳಿಗೆ ಪರವಾನಿಗೆ ನೀಡುವ ಕುರಿತಾದ ವಿಷಯಕ್ಕೆ ಸಂಬಂಧಿಸಿ ಯಾವುದೇ ಪ್ರಗತಿ ಆಗದಿರುವ ಬಗ್ಗೆ ಸಚಿವ ಪಾಲೆಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಕೆಡಿಪಿ ಸಭೆಯಲ್ಲಿ ಪ್ರಸ್ತಾಪಗೊಂಡ ಸಮಸ್ಯೆಗಳು ಪರಿಹಾರಗೊಳ್ಳದೇ ಮುಂದುವರಿದರೆ ಅಂತಹ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆಯನ್ನೂ ನೀಡಿದರು.ಕೆಎಸ್ಆರ್ ಟಿಸಿಯವರಿಗೆ ಪರವಾನಿಗೆ ನೀಡಲು ಏನಾಗಿದೆ ಎಂದು ಪ್ರಶ್ನಿಸಿದ ಸಚಿವರು, ಈ ಬಗ್ಗೆ ಆರ್ ಟಿ ಒ ವಿಶೇಷ ಸಭೆ ಕರೆದು 31 ದಿನಗಳೊಳಗೆ ಅರ್ಜಿ ಸಲ್ಲಿಸಿರುವವರಿಗೆ ಪರವಾನಿಗೆ ನೀಡಬೇಕೆಂದು ಆದೇಶಿಸಿದರು.
ಸರಕಾರಿ ಭೂಮಿಯಲ್ಲಿ ಮನೆಕಟ್ಟಿ ವಾಸಿಸುತ್ತಿರುವವರಿಗೆ ಮನುಷ್ಯರೆಂಬ ಆಧಾರದಲ್ಲಿ ತಾತ್ಕಾಲಿಕ ಮನೆ ನಂಬ್ರ ನೀಡಿ ಅವರು ಸರಕಾರಿ ಸೌಲಭ್ಯ ಪಡೆಯಲು ಅನುಕೂಲ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದರು.
ಮನೆನಂಬ್ರ ಕೇವಲ ತಾತ್ಕಾಲಿಕವಾಗಿ ನೀಡಿ. ಅದೇನು ಹಕ್ಕುಪತ್ರ ಕೊಡುವುದಲ್ಲ. ಮನೆನಂಬ್ರ ಪಡೆದುಕೊಂಡವರಿಂದ ಅಫಿದಾವಿತ್ ಪಡೆದುಕೊಂಡು ಮುಂದೆ ಮನೆ ಖಾಲಿ ಮಾಡಬೇಕಾದ ಸಂದರ್ಭ ತಕರಾರು ಮಾಡದ ರೀತಿಯಲ್ಲಿ ಹಾಗೂ ಮುಂದೆ ಸರಕಾರದಿಂದ ಸೂಕ್ತ ಆದೇಶ ಬರುವವರೆಗೆ ತಾತ್ಕಾಲಿಕ ಮನೆನಂಬ್ರ ನೀಡಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಅನುಸೂಚಿತ ಬುಡಕಟ್ಟುಗಳ ಮತ್ತು ಇತರ ಪಾರಂಪರಿಕ ಕಾಯ್ದೆಯಡಿ 1704 ಅರ್ಜಿಗಳು ಬಂದಿವೆ. ಆ ಪೈಕಿ 262 ಅರಣ್ಯ ಭೂಮಿ ಹಕ್ಕು ಅರ್ಜಿಗಳನ್ನು ಮಾನ್ಯ ಮಾಡಲಾಗಿದೆ. 1416 ಅರ್ಜಿಗಳನ್ನು ತಿರಸ್ಕರಿಸಲಾಗಿದೆ. 26 ಅರ್ಜಿಗಳು ಅರಣ್ಯ ಇಲಾಖೆಯಲ್ಲಿವೆ. ಮಾನ್ಯ ಮಾಡಲಾದ ಅರ್ಜಿಗಳ ಪೈಕಿ 67 ಬಫರ್ ಭೂಮಿಗೆ ಸಂಬಂಧಪಟ್ಟಿದ್ದು ಕಂದಾಯ ಇಲಾಖೆ ಇತ್ಯರ್ಥ ಪಡಿಸಬೇಕಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ರಾ.ಹೆ. 17- ಡಿಸೆಂಬರ್ 15ರೊಳಗೆ ಪ್ಯಾಚ್ ವರ್ಕ್:
ತಲಪಾಡಿ ತೊಕ್ಕೊಟ್ಟು ನಡುವಿನ ರಸ್ತೆ ತೀರ ನಾದುರಸ್ತಿಯಲ್ಲಿದ್ದು, ಈಗಾಗಲೆ ಮಾಡಿರುವ ಪ್ಯಾಚ್ ವರ್ಕ್ ಕೆಲಸವೂ ಸಮರ್ಪಕವಾಗಿಲ್ಲ ಎಂದು ಶಾಸಕ ಖಾದರ್ ಆಕ್ಷೇಪಿಸಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್, ಈಗಾಗಲೆ ಪ್ಯಾಚ್ ವರ್ಕ್ ಕಾರ್ಯ ನಡೆಯುತ್ತಿದ್ದು, ಮಳೆಯಿಂದಾಗಿ ತೊಂದರೆಯಾಗಿದೆ. ಮುಂದಿನ ಡಿಸೆಂಬರ್ 15ರೊಳಗೆ ಈ ರಾ.ಹೆದ್ದಾರಿಯ ಪ್ಯಾಚ್ ವರ್ಕ್ ಸಂಪೂರ್ಣಗೊಳ್ಳಲಿದೆ. ಬಳಿಕ ಮರು ಡಾಮರೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿಸಿದರು. ದ.ಕ. ಜಿಲ್ಲೆಯಾದ್ಯಂತ ಈ ಬಾರಿ ಅತಿವೃಷ್ಟಿಯಿಂದಾಗಿ ಸಾಕಷ್ಟು ಬೆಳೆ ನಾಶವಾಗಿದ್ದು, ರೈತರು ಕಂಗಾಲಾಗಿದ್ದಾರೆ. ಈ ಬಗ್ಗೆ ಸರಕಾರದಿಂದ ಸೂಕ್ತ ಪರಿಹಾರ ನೀಡಬೇಕು. ಅತಿವೃಷ್ಟಿಯಿಂದಾಗಿರುವ ನಷ್ಟದ ಬಗ್ಗೆ ಮಾಹಿತಿ ಒದಗಿಸುವಂತೆ ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕರಾದ ಅಭಯಚಂದ್ರ ಜೈನ್ ಹಾಗೂ ಯು.ಟಿ.ಖಾದರ್ ಆಗ್ರಹಿಸಿದರು. ಈ ತನಕ ಬಂದ ಮಾಹಿತಿಯಂತೆ ದ.ಕದಲ್ಲಿ ಅಕಾಲಿಕ ಮಳೆಗೆ 132.6 ಎಕರೆ ಭತ್ತದ ಬೆಳೆಗೆ ಹಾನಿಯಾಗಿರುವುದಾಗಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಪದ್ಮಯ ನಾಯ್ಕ್ ತಿಳಿಸಿದರು.
ಇದೇ ವೇಳೆ ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ಕೂಡಾ ಪೂರಕವಾಗಿ ಮಾತನಾಡುತ್ತಾ, ಈ ಬಾರಿ ಅತಿವೃಷ್ಟಿಯಿಂದಾಗಿ ಅಡಿಕೆ ಒಣಗಿಸುವ ಪರಿಸ್ಥಿತಿ ಇಲ್ಲವಾಗಿದೆ. ಸರಕಾರ ಅಡಿಕೆ ಒಣಗಿಸಲು ಪಾಲಿಥಿನ್ ಶೀಟ್ಗಳನ್ನು ಉಚಿತವಾಗಿ ಒದಗಿಸುವ ವ್ಯವಸ್ಥೆ ಮಾಡಬೇಕೆಂದು ಕೋರಿದರು. ಬೆಳೆ ಹಾನಿಯ ಬಗ್ಗೆ ಮಾಹಿತಿ ಒದಗಿಸುವಂತೆ ರೈತರಿಗೆ ಮಾಹಿತಿ ನೀಡಿ ಡಿಸೆಂಬರ್ 7ರೊಳಗೆ ವರದಿಯನ್ನು ನೀಡುವಂತೆ ಸಚಿವರು ಅಧಿಕಾರಿಗಳಿಗೆ ಸೂಚಿಸಿದರು. ಮಾತ್ರವಲ್ಲದೆ, ಬೆಳೆ ಹಾನಿಗೊಳಗಾದವರು ಈ ಬಗ್ಗೆ ಇಲಾಖೆಗಳಿಗೆ ಮಾಹಿತಿ ನೀಡುವಂತೆ ಸಭೆಯಲ್ಲಿ ಉಸ್ತುವಾರಿ ಸಚಿವರು ತಿಳಿಸಿದರು.
ಅಂಬೇಡ್ಕರ್ ಅಭಿವೃದ್ಧಿ ನಿಗಮ ಮತ್ತು ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮಗಳ ಎರಡು ನಿಗಮಗಳ ಪ್ರಗತಿ ಕುಂಠಿತವಾಗಿರುವ ಕುರಿತು ಸಚಿವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರಲ್ಲದೆ ನಿಗಮಗಳ ಜಿಲ್ಲಾ ವ್ಯವಸ್ಥಾಪಕರಿಗೆ ಎಚ್ಚರಿಕೆ ನೀಡಿದರು.
ಕೇರಳಕ್ಕೆ ಮರಳು ಅಕ್ರಮವಾಗಿ ಸಾಗಾಟವಾಗುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಸಚಿವ ಪಾಲೆಮಾರ್ ಗಣಿ ಮತ್ತು ಭೂಗರ್ಭ ಇಲಾಖೆಯ ಅಧಿಕಾರಿಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕೆಂದರು. ಪೊಲೀಸ್ ಇಲಾಖೆ ಅವರೊಂದಿಗೆ ಸಹಕರಿಸುವಂತೆಯೂ ಮಂತ್ರಿಗಳು ಸಲಹೆ ಮಾಡಿದರು.
ತುಂಬೆ ಅಣೆಕಟ್ಟು: 193 ಎಕರೆ ಭೂಮಿ ಮುಳುಗಡೆ
ಮಂಗಳೂರು ನಗರಕ್ಕೆ ಕುಡಿಯುವ ನೀರು ಒದಗಿಸಲು ತುಂಬೆಯಲ್ಲಿ ನಿರ್ಮಿಸುತ್ತಿರುವ ಕಿಂಡಿ ಅಣೆಕಟ್ಟಿ ನಿಂದ ಮುಳುಗಡೆಯಾಗುವ ಪ್ರದೇಶಗಳ ಮಾಹಿತಿಯನ್ನು ಮತ್ತು ಅಗತ್ಯವಿರುವ ಪರಿಹಾರದ ಮೊತ್ತ ಕುರಿತಂತೆ ವರದಿ ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬೆಂಗಳೂರಿನ ಸ್ಟುಪ್ ಕನ್ಸಲ್ಟೆನ್ಸಿ ಈಗಾಗಲೇ ಮುಳುಗಡೆಯಾಗುವ ಪ್ರದೇಶಗಳ ಸಮೀಕ್ಷೆ ಪೂರ್ತಿಗೊಳಿಸಿದೆ. ನದಿಪಾತ್ರದ 6 ಪ್ರದೇಶಗಳಲ್ಲಿ ಕಿಂಡಿ ಅಣೆಕಟ್ಟಿನಿಂದಾಗಿ ಭೂಮಿ ಮುಳುಗಡೆಯಾಗಲಿದೆ. ಮುಳುಗಡೆಯಾಗುವ ಪ್ರದೇಶದ ವಿಸ್ತೀರ್ಣ 193 ಎಕರೆಯಾಗಿದ್ದು , ಅದು ಫಲವತ್ತಾದ ಕೃಷಿಭೂಮಿಯಾಗಿರುತ್ತದೆ ಎಂದು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಅಧಿಕಾರಿಗಳು ಸಭೆಗೆ ತಿಳಿಸಿದರು.
ಮುಳುಗಡೆ ಪ್ರದೇಶಕ್ಕೆ ಎಕರೆಗೆ ಅಂದಾಜು ರೂ. 10 ಲಕ್ಷದಂತೆ ಪರಿಹಾರ ನೀಡಲು ಸುಮಾರು ರೂ. 20 ಕೋಟಿ ಬೇಕಾಗಿದೆ. ಕಿಂಡಿ ಅಣೆಕಟ್ಟು ನಿರ್ಮಿಸಲು ಮಾತ್ರ ಸರಕಾರದಿಂದ ಅನುದಾನ ಮಂಜೂರಾಗಿದೆ. ಭೂ ಸ್ವಾಧೀನಕ್ಕೆ ಅನುದಾನ ಮಂಜೂರಾಗಿಲ್ಲ ಎಂದು ಅಧಿಕಾರಿಗಳು ವಿವರಿಸಿದರು. ಮುಳುಗಡೆ ಪ್ರದೇಶ, ಪರಿಹಾರ ಕ್ರಮಗಳ ಬಗ್ಗೆ ಸವಿವರವಾದ ಮಾಹಿತಿ ಸಂಗ್ರಹಿಸಿ ವರದಿ ನೀಡುವಂತೆ ಸಚಿವರು ಇಲಾಖೆಯ ಅಧಿಕಾರಿಗಳಿಗೆ ನಿರ್ದೇಶಿಸಿದರು.ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರಾದ ರಾಜಶ್ರೀ ಹೆಗ್ಡೆ, ಸದಾನಂದ ಮಲ್ಲಿ , ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ. ಶಿವಶಂಕರ್ ಮೊದಲಾದವರು ಉಪಸ್ಥಿತರಿದ್ದರು.

Friday, November 26, 2010

ಅಂಗವಿಕಲರ ಕಲ್ಯಾಣಕ್ಕೆ ಪ್ರತ್ಯೇಕ ಸಚಿವಾಲಯ: ಕೆ.ವಿ. ರಾಜಣ್ಣ

ಮಂಗಳೂರು,ನವೆಂಬರ್ 26:ಗ್ರಾಮ ಪಂಚಾಯತ್ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಅಂಗವಿಕಲರ ಸಮಸ್ಯೆಗಳಿಗೆ ಸ್ಪಂದಿಸಲು, ಅವರಿಗೆ ಎಲ್ಲ ಇಲಾಖೆಗಳಲ್ಲೂ ನೀಡಿರುವ ಮೀಸಲಾತಿಯನ್ನು ಪರಿಶೀಲಿಸಿ, ಅಭಿವೃದ್ಧಿ ಕಾರ್ಯಕ್ರಮ ರೂಪಿಸಲು ಪ್ರತ್ಯೇಕ ಸಚಿವಾಲಯ ರೂಪಿಸುವಂತೆ ಸರ್ಕಾರಕ್ಕೆ ಬೇಡಿಕೆ ಸಲ್ಲಿಸಲಾಗುವುದು ಎಂದು ರಾಜ್ಯ ಅಂಗವಿಕಲ ವ್ಯಕ್ತಿಗಳ ಆಯುಕ್ತರಾದ ಕೆ. ವಿ. ರಾಜಣ್ಣ ತಿಳಿಸಿದರು.ಅವರಿಂದು ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಪತ್ರಿಕಾ ಗೋಷ್ಠಿ ಯನ್ನು ದ್ದೇಶಿಸಿ ಮಾತನಾ ಡುತ್ತಿದ್ದರು. ಜನವರಿ ಯಲ್ಲಿ ನಡೆಯ ಲಿರುವ ಜನ ಗಣತಿ ಯಲ್ಲಿ ಅಂಗವಿಕಲರ ಬಗ್ಗೆ ಸಮಗ್ರ ಮಾಹಿತಿ ಸಂಗ್ರಹಣೆಗೆ ಸೂಚಿಸಿರುವ ಆಯುಕ್ತರು, ಯಾರಿಗೂ ಅಂಗವಿಕಲರ ಬಗ್ಗೆ, ಅವರ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯೇ ಇಲ್ಲದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಜಿಲ್ಲೆಯಲ್ಲಿ ಎಂಡೋಸಲ್ಫಾನ್ ನಿಂದ ಅಂಗವೈಕಲ್ಯ ಹೊಂದಿದವರ ಬಗ್ಗೆಯೂ ಪ್ರತ್ಯೇಕ ವರದಿ ತಯಾರಿಸಲಾಗುವುದು ಎಂದರು. ಬುದ್ಧಿ ಮಾಂದ್ಯರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸೌಲಭ್ಯ ಒದಗಿಸುವ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಗುವುದು ಎಂದರು.
ರಾಜ್ಯದಲ್ಲಿ ಪ್ರತೀ ಗ್ರಾಮ ಪಂಚಾಯಿತಿಗಳಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರನ್ನು ಗ್ರಾಮೀಣ ಅಂಗವಿಕಲರ ಪುನರ್ವಸತಿ ಯೋಜನೆಯಡಿ ಈಗಾಗಲೇ ನೇಮಕ ಮಾಡಲಾಗಿದೆ. ಪಟ್ಟಣ ಪಂಚಾಯಿತಿಯಿಂದ ಪಂಚಾಯತ್ ರಾಜ್ ಸಂಸ್ಥೆಗಳ ಇಲಾಖೆ ಮಟ್ಟದವರೆಗೆ ಅಂದರೆ ನಗರಾಭಿವೃದ್ಧಿ ಪೌರಾಡಳಿತ ಸಂಸ್ಥೆಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳು ಮತ್ತು ಎಲ್ಲಾ ಇಲಾಖೆಗಳು ಪ್ರತಿಶತ ಶೇ.3 ರಷ್ಟು ಅಯವ್ಯಯವನ್ನು ಅಂಗವಿಕಲರಿಗಾಗಿ ಅಧಿ ನಿಯಮದನ್ವಯ ಮೀಸಲಿಡಬೇಕಿದೆ. ಈ ಸಂಬಂಧ ಇಲಾಖೆ ಕ್ರಿಯಾ ಯೋಜನೆ ತಯಾರಿಸಿ ಅನುಷ್ಠಾನ ಗೊಳಿಸಬೇಕಿದೆ ಎಂದರು.ಅಂಗವಿಕಲರು 2011ರಲ್ಲಿ ನಡೆಸಲಾಗುವ ಸರ್ವೇ ಕಾರ್ಯಕ್ಕೆ ಸಂಪೂರ್ಣ ಸಹಕಾರ ನೀಡಿ ಎಲ್ಲ ಮಾಹಿತಿಯನ್ನು ನೀಡಲು ಒತ್ತಾಯಿಸಿದರು. ಅಂಗವಿಕಲರ ಸಂಖ್ಯೆಯನ್ನಾಧರಿಸಿ ಅವರಿಗೆ ಅಭಿವೃದ್ಧಿ ಕಾರ್ಯಗಳನ್ನು ಹಮ್ಮಿಕೊಳ್ಳುವುದರಿಂದ ಮಾಹಿತಿಯ ಅಗತ್ಯವನ್ನು ಪ್ರತಿಪಾದಿಸಿದರು.ಜಿಲ್ಲೆಯಲ್ಲಿ ಅಂಗವಿಕಲರ ಜನಸಂಖ್ಯೆ 17155 ಇದ್ದು, 15,905 ಜನರಿಗೆ ಗುರುತಿನ ಚೀಟಿಯನ್ನು ವಿತರಿಸಲಾಗಿದೆ. ಇತರರಿಗೆ ಕೂಡಲೇ ಗುರುತಿನ /ಅಂಗವಿಕಲತೆ ಪ್ರಮಾಣ ಪತ್ರವನ್ನು ನೀಡಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅಂಗವಿಕಲ ಮಕ್ಕಳ ಸಮನ್ವಯ ಶಿಕ್ಷಣ ಅಂಗನವಾಡಿಯಿಂದಲೇ ಪ್ರಾರಂಭವಾಗಬೇಕು. ಇಂತಹ ಮಕ್ಕಳನ್ನು ಮುಖ್ಯವಾಹಿನಿಯಲ್ಲಿ ತರಲು ಸಾಮಾನ್ಯ ಶಾಲೆಗಳಲ್ಲಿ ಸಮನ್ವಯ ಶಿಕ್ಷಣ ನೀಡುವುದು ಅಗತ್ಯವಿದ್ದು, ಎಲ್ಲ ಶಾಲೆಗಳಲ್ಲೂ ಇಂತಹ ಮಕ್ಕಳನ್ನು ದಾಖಲು ಮಾಡಿಕೊಳ್ಳಬೇಕಾಗುತ್ತದೆ. ಅಂಗವಿಕಲರ ಅಧಿನಿಯಮ ದಲ್ಲಿ ಅಂಗವಿಕಲ ಮಕ್ಕಳಿಗೆ ಉನ್ನತಶಿಕ್ಷಣ ಹಾಗೂ ತಾಂತ್ರಿಕ ಶಿಕ್ಷಣ ದಾಖಲಾತಿಯಲ್ಲಿ ಶೇ. 3 ರಷ್ಟು ಮೀಸಲಾತಿ ಕಲ್ಪಿಸಲಾಗಿದೆ. ಇದೇ ರೀತಿ ವಸತಿನಿಲಯಗಳಲ್ಲೂ ಸಹ ಅಂಗವಿಕಲ ಮಕ್ಕಳಿಗೆ ಪ್ರಾಧಾನ್ಯತೆ ನೀಡಬೇಕೆಂದರು.
ಪ್ರತಿ ಜಿಲ್ಲೆಗಳಲ್ಲಿ ಅಂಗವಿಕಲರ ಸಂಪನ್ಮೂಲ ಕೇಂದ್ರಗಳನ್ನು ತೆರೆಯುವುದು ಮತ್ತು ಶೇ. 3ರ ಅನುದಾನದಲ್ಲಿ ಅದನ್ನು ನಡೆಸುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿರುತ್ತದೆ. ಈ ಕೇಂದ್ರಗಳಲ್ಲಿ ಅಂಗವಿಕಲರ ತಪಾಸಣೆ, ಸಾಧನ ಸಲಕರಣೆ ತಯಾರಿಕೆ/ ವಿತರಣೆ, ಅಂಗವಿಕಲರಿಗೆ ಬೇಕಾಗುವ ಮಾಹಿತಿ ಒದಗಿಸಬೇಕು. ಜಿಲ್ಲಾಧಿಕಾರಿಗಳಲ್ಲಿ ಅಂಗವಿಕಲರು ತಮ್ಮ ಕುಂದುಕೊರತೆಯ ಬಗ್ಗೆ ಅರ್ಜಿ ಸಲ್ಲಿಸಿ ನಿವಾರಿಸಿಕೊಳ್ಳಬಹುದು ಎಂದೂ ಹೇಳಿದರು.ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಮಾನಸಿಕ ಅಸ್ವಸ್ಥರಿಗೆ ಚಿಕಿತ್ಸೆ ಖಡ್ಡಾಯ ನೀಡಲು ಆರೋಗ್ಯ ಇಲಾಖೆಗೆ ಸೂಚಿಸಲಾಗಿದೆ. ರಾಜ್ಯ ಮಟ್ಟದ ಹಾಗೂ ರಾಜ್ಯ ನೀತಿಗೆ ಸಂಬಂಧಿಸಿದ ಕುಂದುಕೊರತೆಗಳನ್ನು ರಾಜ್ಯ ಆಯುಕ್ತರು ಬೆಂಗಳೂರು ಇವರಿಗೆ ಸಲ್ಲಿಸಬಹುದೆಂದು ರಾಜ್ಯ ಆಯುಕ್ತರುತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಪ್ರಭಾಕರ ಶರ್ಮಾ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಶಕುಂತಳಾ, ಸಹಾಯಕ ಆಯುಕ್ತ ಇಬ್ರಾಹಿಂ ಗೂನಡ್ಕ, ಅಂಗವಿಕಲ ಕಲ್ಯಾಣಾಧಿಕಾರಿ ಪುಟ್ಟಸ್ವಾಮಿ ಉಪಸ್ಥಿತರಿದ್ದರು.

ತಾಲೂಕು ಕೇಂದ್ರಗಳಲ್ಲೂ ಅಂಗವಿಕಲರ ದೃಢೀಕರಣ ಪತ್ರ ಲಭ್ಯ-ಕೆ.ವಿ.ರಾಜಣ್ಣ

ಮಂಗಳೂರು ನವೆಂಬರ್ 26:ಅಂಗವಿಕಲರು ಅಂಗವಿಕಲತೆ ಬಗ್ಗೆ ದೃಢೀಕರಣ ಪತ್ರಕ್ಕಾಗಿ ಜಿಲ್ಲಾ ಕೇಂದ್ರಗಳಿಗೆ ಅಲೆಯಬೇಕಾಗಿಲ್ಲ ಬದಲಾಗಿ ತಾಲೂಕು ಮಟ್ಟದಲ್ಲಿ ವೈದ್ಯಕೀಯ ಮಂಡಳಿಗಳನ್ನು ರಚಿಸಿ ದೃಢೀಕರಣ ಪತ್ರಗಳನ್ನು ಹಂಚುವ ವ್ಯವಸ್ಥೆ ಮಾಡುವಂತೆ ಸಂಬಂಧಿಸಿದ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಕರ್ನಾಟಕ ರಾಜ್ಯ ಅಂಗವಿಕಲರ ಅಧಿನಿಯಮದ ಆಯುಕ್ತರಾದ ಕೆ.ವಿ. ರಾಜಣ್ಣನವರು ತಿಳಿಸಿದ್ದಾರೆ.

ಅವರು ಇಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯ ವಿವಿಧ ಇಲಾಖೆಗಳಲ್ಲಿ ಅಂಗವಿಕಲರ ಹಕ್ಕುಗಳ ಅನುಷ್ಠಾನದಲ್ಲಿ ಏನಾದರೂ ತೊಡಕುಗಳು ಇವೆಯೇ ಹಾಗೂ ಗ್ರಾಮೀಣ ಅಂಗವಿಕಲರ ಪುನ:ಶ್ಚೇತನ ಯೋಜನೆ ಎಷ್ಟರಮಟ್ಟಿಗೆ ಅನುಷ್ಠಾನ ಆಗುತ್ತಿದೆ ಎಂಬ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ಪ್ರಗತಿ ಪರಿಶೀಲನೆ ನಡೆಸಿದರು.
ಮೈಸೂರು ಜಿಲೆಯಲ್ಲಿ 1 ರಿಂದ 10 ನೇ ತರಗತಿಯಲ್ಲಿ 3.63 ಲಕ್ಷ ವಿದ್ಯಾರ್ಥಿಗಳಿದ್ದಾರೆ.ಇವರಲ್ಲಿ 5285 ಜನ ಅಂಗವಿಕಲರಾಗಿದ್ದು, ಇವರನ್ನು ವಿಶೇಷ ಅಗತ್ಯ ಮಕ್ಕಳು ಎಂದು ಪರಿಗಣಿಸಿ ರೂ.1.13 ಕೋಟಿ ವೆಚ್ಚದಲ್ಲಿ ಪಠ್ಯಪುಸ್ತಕ,ಸಮವಸ್ತ್ರ ಮುಂತಾದವುಗಳನ್ನು ನೀಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಆಯುಕ್ತರಿಗೆ ವಿವರಿಸಿದರು. ಮಂಗಳೂರು ದ.ಕ. ಜಿಲ್ಲೆಯಲ್ಲಿ ಒಟ್ಟು 13813 ಜನ ಅಂಗವಿಕಲರು ಮಾಸಾಶನ ಪಡೆಯುತ್ತಿದ್ದಾರೆ.ಅಂಗವಿಕಲರು ಯಾವುದೇ ಸಾರ್ವಜನಿಕ ಕಚೇರಿಗಳಲ್ಲಿ ತಮ್ಮ ಕೆಲಸದ ನಿಮಿತ್ತ ತೆರಳಿದಾಗ ಅವರು ಅಲ್ಲಿ ಯಾವ ಅಡ್ಡಿ ಆತಂಕಗಳಿಲ್ಲದೆ ಓಡಾಡಲು ಅನುಕೂಲವಾಗುವಂತೆ ಎಲ್ಲಾ ಕಟ್ಟಡಗಳಲ್ಲಿ ರಾಂಪ್ (ಇಳಿಜಾರು ಕಾಲುದಾರಿ) ನಿರ್ಮಿಸಬೇಕು. ಹೊಸ ಕಟ್ಟಡಗಳಿಗೆ ಕಾಮಗಾರಿ ಪೂರ್ಣಗೊಳಿಸಿರುವ ಬಗ್ಗೆ ದೃಢೀಕರಣ ನೀಡುವ ಮೊದಲು ಈ ಸೌಲಭ್ಯ ಇದೆಯೇ ಎಂಬುದನ್ನು ಪರಿಶೀಲಿಸಿ ನಂತರ ದೃಢೀಕರಣ ಪತ್ರ ನೀಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಟ್ಟು 17155ಅಂಗವಿಕಲತೆಯ ಜನರಿದ್ದು, ಇವರಲ್ಲಿ ದೈಹಿಕ ಅಂಗವಿಕಲತೆಯ 7567, ಶ್ರವಣ ದೋಷವುಳ್ಳವರು 1966,ದೃಷ್ಟಿ ದೋಷವುಳ್ಳವರು 952,ಬುದ್ಧಿಮಾಂದ್ಯರು 2036,ಮಾನಸಿಕ ಅಸ್ವಸ್ಥರು 809, ಇತರರು 3825 ಇದ್ದಾರೆ. ಇವರಲ್ಲಿ 15905 ಮಂದಿಗೆ ಗುರುತು ಚೀಟಿ ನೀಡಲಾಗಿದೆ.ಅಂಗವಿಕಲ ವೇತನ ರೂ 400/- ಪಡೆಯುವವರ ಸಂಖ್ಯೆ 10756 ,ರೂ 1000/-ಪಡೆಯುವವರ ಸಂಖ್ಯೆ 3107/- ಆಗಿದೆ. ಅಂಗವಿಕಲ ವಿದ್ಯಾರ್ಥಿಗಳಿಗೆ ಎಲ್ಲಾ ವಿದ್ಯಾರ್ಥಿ ನಿಲಯಗಳಲ್ಲೂ ಅವಕಾಶ ಇದ್ದು, ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಆಯುಕ್ತರು ಸಲಹೆ ನೀಡಿದರು.
ಸಭೆಯಲ್ಲಿ ಉಪಾಯುಕ್ತ ಇಬ್ರಾಹಿಂ,ಜಿಲ್ಲಾಧಿಕಾರಿ ಸುಬೋಧ್ ಯಾದವ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್ , ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಪುಟ್ಟುಸ್ವಾಮಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರು ಶಕುಂತಳಾ ಮತ್ತಿತರರು ಉಪಸ್ಥಿತರಿದ್ದರು.

Thursday, November 25, 2010

ರಾಷ್ಟ್ರೀಯ ತೋಟಗಾರಿಕಾ ಮಿಷನ್: ವಿವಿಧ ಯೋಜನೆಗಳಿಗೆ ಸಹಾಯಧನ

ಮಂಗಳೂರು ನವೆಂಬರ್ 25 : ಸಂದಿಗ್ಧ ಪರಿಸ್ಥಿತಿಯಲ್ಲಿ ತೋಟಗಾರಿಕಾ ಬೆಳೆಗಳಿಗೆ ನೀರನ್ನು ಒದಗಿಸಲು ಅನುವು ಆಗುವಂತೆ ನೀರು ಸಂಗ್ರಹಣಾ ಘಟಕಗಳನ್ನು ಸ್ಥಾಪಿಸಲು ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ ಸಹಾಯಧನ ಒದಗಿಸಲಾಗುತ್ತಿದ್ದು, ಸಮುದಾಯ ಕೆರೆಗಳಿಗೆ ಅವುಗಳ ಸಾಮಥ್ರ್ಯದ ಆಧಾರದ ಮೇಲೆ ರೂ 4.00 ಲಕ್ಷಗಳವರೆಗೆ ಸಹಾಯ ಧನ ನೀಡಲು ಅವಕಾಶವಿದೆ. ವೈಯಕ್ತಿಕ ಕೆರೆಗಳಿಗೆ ರೂ. 60,000ಗಳ ವರೆಗೆ ಸಹಾಯಧನ ಒದಗಿಸಲು ಅವಕಾಶವಿರುತ್ತದೆ. ಹೊಸ ಪ್ರದೇಶ ವಿಸ್ತರಣೆ ಕೈಗೊಳ್ಳುವ ಹಾಗೂ ಸೂಕ್ಷ್ಮ ನೀರಾವರಿ ಪದ್ಧತಿ ಅಳವಡಿಸುವ ರೈತರು ಈ ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ. ರೈತರು ಇಲಾಖೆಯಿಂದ ಅರ್ಜಿಯನ್ನು ಪಡೆದು ಎಲ್ಲಾ ದಾಖಲೆಗಳೊಂದಿಗೆ ಪ್ರಸ್ತಾವನೆ ಸಲ್ಲಿಸಿ ಮಂಜೂರಾತಿಯನ್ನು ಪಡೆಯಬೇಕು. ತದನಂತರ ಕಾಮಗಾರಿಯನ್ನು ಕೈಗೊಳ್ಳತಕ್ಕದ್ದು. ಸಹಾಯಧನವನ್ನು 4 ಹಂತಗಳಲ್ಲಿ ರೈತರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುವುದು.
ಸಾವಯವ ಕೃಷಿಗೆ ಸಹಾಯಧನ: ಸಾವಯವ ಕೃಷಿಗೆ ಪೂರಕವಾದ ಎರೆ ಹುಳ ಗೊಬ್ಬರ ಘಟಕ ಹಾಗೂ ಬಯೋ ಡೈಜೆಸ್ಟರ್ ಘಟಕಗಳ ಸ್ಥಾಪನೆಗೆ ಶೇಕಡಾ 50 ರ ಸಹಾಯ ಧನ ಗರಿಷ್ಠ ರೂ.30,000 ದವರೆಗೆ ಸಹಾಯಧನ ಲಭ್ಯವಿದೆ. ತೋಟಗಾರಿಕೆ ಬೆಳೆ ಹೊಂದಿದ ರೈತರು ಇಲಾಖಾ ಅಧಿಕಾರಿ/ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳೊಂದಿಗೆ ಸಂಪರ್ಕಿಸಿ ನಿರ್ಮಾಣದ ತಾಂತ್ರಿಕ ಮಾಹಿತಿ ಪಡೆದು ಅದರಂತೆ ಘಟಕವನ್ನು ಸ್ಥಾಪಿಸಬೇಕು. ತೋಟಗಾರಿಕೆ ಬೆಳೆ ದಾಖಲಾತಿಯುಳ್ಳ ಪಹಣಿ ಪತ್ರ, ಕಾಮಗಾರಿಗೆ ಸಂಬಂಧಿಸಿದಂತೆ ಖರ್ಚಿನ ಬಿಲ್ಲುಗಳು, ಅಂದಾಜು ಪತ್ರ ಅಥವಾ ಮೌಲ್ಯ ಮಾಪನ ವರದಿ ಹಾಗೂ ಕೆಲಸ ಪೂರ್ಣಗೊಂಡ ವರದಿ ರೂ.20 ಛಾಪಾ ಕಾಗದದಲ್ಲಿ ನಿಗಧಿತ ನಮೂನೆಯಲ್ಲಿ ದೃಢೀಕರಣ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಅರ್ಜಿಯೊಂದಿಗೆ ಲಗತ್ತಿಸಿ ರೈತ ಸಂಪರ್ಕ ಕೇಂದ್ರದ ಅಥವಾ ತಾಲೂಕು ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ. ಅವರು ಘಟಕ ಪರಿಶೀಲಿಸಿ ಅನುದಾನದ ಲಭ್ಯತೆಯ ಮೇರೆಗೆ ಅರ್ಜಿಯನ್ನು ಸಹಾಯ ಧನಕ್ಕೆ ಪರಿಗಣಿಸಲಾಗುವುದೆಂದು ತೋಟಗಾರಿಕಾ ಉಪನಿರ್ದೇಶಕರು ಮಾಹಿತಿ ನೀಡಿದ್ದಾರೆ.
ಜೇನು ಕೃಷಿಗೆ ಸಹಾಯಧನ: ಪರಾಗ ಸ್ಪರ್ಶ ಪ್ರೋತ್ಸಾಹಕ್ಕೆ ಜೇನು ಸಾಕಾಣಿ ಕೆಗಾಗಿ ತರಬೇತಿ ಹೊಂದಿದ ರೈತರಿಗೆ ಸಹಾಯ ಧನ ನೀಡ ಲಾಗುವುದು. ಜೇನು ವ್ಯವಸಾಯ ಸಹಕಾರಿ ಸಂಘ ಗಳಿಂದ ರೈತರೇ ಜೇನು ಗೂಡು ಗಳನ್ನು ಪಡೆದು ಅವುಗಳಲ್ಲಿ ಜೇನು ಕುಟುಂಬ ಗಳನ್ನು ಅಭಿವೃದ್ಧಿ ಪಡಿಸಬೇಕು. ಅರ್ಜಿಯನ್ನು ತೋಟಗಾರಿಕೆ ಬೆಳೆ ದಾಖಲಾತಿಯುಳ್ಳ ಪಹಣಿ ಪತ್ರ ಬಿಲ್ಲು, ಬ್ಯಾಂಕ್ ಖಾತೆ ವಿವರ ಹಾಗೂ ತರಬೇತಿ ಪ್ರಮಾಣ ಪತ್ರದೊಂದಿಗೆ ಹಾಗೂ ರೂ.20 ಛಾಪಾಕಾಗದದ ದೃಢೀಕರಣದೊಂದಿಗೆ ಸಂಬಂಧ ಪಟ್ಟ ತಾಲೂಕು ಅಧಿಕಾರಿಗಳಿಗೆ ಸಲ್ಲಿಸಬಹುದಾಗಿದೆ. ಅಧಿಕಾರಿಗಳು ತಾಕು ಪರಿಶೀಲಿಸಿ ಜೇನು ಕುಟುಂಬಗಳಿರುವ ಗೂಡುಗಳಿಗೆ ಶೇ.50 ರ ಗರಿಷ್ಠ ರೂ.800 ಪ್ರತೀ ಪೆಟ್ಟಿಗೆಗೆ ಸಹಾಯಧನವನ್ನು ಅನುದಾನದ ಲಭ್ಯತೆ ಮೇರೆಗೆ ಒದಗಿಸಲಾಗುವುದು. ಪ್ರತೀ ಫಲಾನುಭವಿಗೆ ಗರಿಷ್ಠ 50 ಜೇನು ಪೆಟ್ಟಿಗೆಗೆ ಸಹಾಯಧನ ನೀಡಲಾಗುವುದೆಂದು ತೋಟಗಾರಿಕಾ ಉಪನಿರ್ದೇಶಕರು ತಿಳಿಸಿರುತ್ತಾರೆ.
ಟ್ರ್ಯಾಕ್ಟರ್ ಖರೀದಿಗೆ ಸಹಾಯಧನ: ರೈತರಿಗೆ ಟ್ರಾಕ್ಟರ್ ಖರೀದಿಗೆ ರೂ. 75,000/- ಗಳ ಸಹಾಯಧನ ಒದಗಿಸ ಲಾಗುವುದು.ರೈತರು ಕನಿಷ್ಠ 10 ಎಕರೆ ಜಮೀನು ಹೊಂದಿದ್ದು, ಅದರಲ್ಲಿ ಕನಿಷ್ಠ 5 ಎಕರೆ ಪ್ರದೇಶದಲ್ಲಿ ಬಹುವಾಷರ್ಿಕ ತೋಟಗಾರಿಕೆ ಬೆಳೆ ಹೊಂದಿರಬೇಕು. ರೈತರು ಆದಾಯ ಪಾವತಿದಾರರಾಗಿರಬಾರದು ಹಾಗೂ ಈಗಾಗಲೇ ಟ್ರಾಕ್ಟರ್ ಹೊಂದಿರಬಾರದು.2010-11 ನೇ ಸಾಲಿನಲ್ಲಿ ಖರೀದಿಸಿದ ಟ್ರಾಕ್ಟರ್ಗಳಿಗೆ ಮಾತ್ರ ಸಹಾಯಧನ ಒದಗಿಸಲಾಗುವುದು. ಟ್ರಾಕ್ಟರ್ಗಳಿಗೆ ಆರ್ಟಿಒ ದೃಢೀಕರಣ ಇರಬೇಕು. ಅರ್ಹ ರೈತರು ಟ್ರಾಕ್ಟರ್ ಖರೀದಿಸಿ ಮೂಲ ದಾಖಲಾತಿ ಗಳೊಂದಿಗೆ ಅರ್ಜಿಯನ್ನು ಸಂಬಂಧಪಟ್ಟ ತಾಲೂಕು ಅಧಿಕಾರಿಗಳ ಮೂಲಕ ತೋಟಗಾರಿಕೆ ಉಪನಿರ್ದೇಶಕರಿಗೆ ಸಲ್ಲಿಸ ಬಹುದಾಗಿದೆ. ಈ ಎಲ್ಲ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಹೆಚ್ಚಿನ ಮಾಹಿತಿಯನ್ನು ತೋಟಗಾರಿಕಾ ಉಪನಿರ್ದೇಶಕರ ಕಚೇರಿಯಿಂದ ಪಡೆಯಬಹುದು.

Wednesday, November 24, 2010

ಕನಕದಾಸರು ಓರ್ವ ಶ್ರೇಷ್ಟ ಮಾನವತಾವಾದಿ : ಸಚಿವ ಪಾಲೇಮಾರ್

ಮಂಗಳೂರು,ನವೆಂಬರ್ 24:ಇಂದಿನ ಸಮಾಜದಲ್ಲಿ ತಲೆದೋರಿರುವ ರಾಜಕೀಯ,ಧಾರ್ಮಿಕ, ಸಾಮಾಜಿಕ ಜಂಜಾಟಗಳನ್ನು ನಿವಾರಣೆ ಮಾಡಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಎಲ್ಲರೂ ದಾಸ ಶ್ರೇಷ್ಟ ಕನಕ ದಾಸರಕೀರ್ತನೆಗಳ ತತ್ವ ಸಿದ್ದಾಂತಗಳನ್ನು ಪಾಲಿಸಬೇಕು ಎಂದು ರಾಜ್ಯ ಜೀವಿಶಾಸ್ತ್ರ, ಪರಿಸರ,ಬಂದರು,ಮೀನುಗಾರಿಕೆ,ಒಳನಾಡು ಜಲಸಾರಿಗೆ ಹಾಗೂ ಜಿಲ್ಲಾ ಉಸ್ತುವರಿ ಸಚಿವರಾದ ಕೃಷ್ಣ ಜೆ. ಪಾಲೇಮಾರ್ ಕರೆ ನೀಡಿದ್ದಾರೆ.
ನಗರದ ಪುರ ಭವನ ದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಡಳಿತ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ದಕ್ಷಿಣ ಕನ್ನಡ ಮತ್ತು ಕರಾ ವಳಿ ಕುರು ಬರ ಸಂಘ ದ ಆಶ್ರಯ ದಲ್ಲಿ ನಡೆದ ದಾಸವ ರೇಣ್ಯ, ದಾರ್ಶ ನಿಕ ಕವಿ,ಸಂತ ಶ್ರೇಷ್ಟ ರಾದ ಕನಕ ದಾಸರ 523 ನೇ ಜಯಂತಿ ಕಾರ್ಯ ಕ್ರಮವನ್ನು ಉದ್ಘಾ ಟಿಸಿ ಮಾತ ನಾಡಿ ದರು.ಕನಕ ದಾಸರು ಕೇವಲ ಕುರುಬ ಸಮಾಜಕ್ಕೆ ಮಾತ್ರ ಸೀಮಿತ ರಾದ ವರಲ್ಲ, ಬದ ಲಾಗಿ ಎಲ್ಲಾ ಮನು ಕುಲದ ವರಿಗೂ ಕೀರ್ತನೆ ಗಳ ಮೂಲಕ ಅತ್ಯಂತ ಪ್ರೀತಿ ಪಾತ್ರ ರಾದವರು.6 ನೇ ಶತ ಮಾನ ದಲ್ಲೇ ಮಾನವತಾ ವಾದವನ್ನು ಪ್ರತಿಪಾದಿಸಿದ,ಸಮಾಜದ ಅಂಕುಡೊಂಕುಗಳನ್ನು ತಿದ್ದಿದ ಮಾಹಾನ್ ದಾರ್ಶನಿಕ ಎಂದು ಪ್ರಶಂಸಿಸಿದರು.ಕನಕ ದಾಸರ ಜೀವನ ಮತ್ತು ಸಾಹಿತ್ಯ ಕುರಿತು ಕಟೀಲು ಶ್ರಿ ದುರ್ಗಾ ಪರ ಮೇಶ್ವರಿ ಪ್ರಥಮ ದರ್ಜೆ ಕಾಲೇಜಿ ನ ಸಂಸ್ಕೃತ ವಿಭಾಗದ ಮುಖ್ಯ ಸ್ಥರಾದ ಡಾ.ಸೋಂದೆ ಭಾಸ್ಕರ್ ಭಟ್ ಅವರು ಮಾತ ನಾಡಿ ದರು.ಸಮಾ ರಂಭದ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಮಂಗ ಳೂರು ದಕ್ಷಿಣ ಶಾಸಕ ರಾದ ಎನ್. ಯೋಗಿಶ್ ಭಟ್ ಅವರು ಸಮಾಜ ದ ಅನಿಷ್ಟ ಪದ್ದತಿ ಗಳನ್ನು ಹೋಗ ಲಾಡಿ ಸಲು ಕನಕ ದಾಸರ ಸಾಹಿತ್ಯ ಪ್ರತಿ ಮನೆ ಮನ ಗಳಿಗೆ ಪ್ರಚಾರ ವಾಗಬೇಕೆಂದರು.ಶಾಸಕರಾದ ಯು.ಟಿ.ಖಾದರ್,ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ, ಜಿಲ್ಲಾಧಿಕಾರಿ ಸುಬೋಧ್ ಯಾದವ್, ಕರ್ನಾಟಕ ಬ್ಯಾರಿ ಅಕಾಡೆಮಿ ಅಧ್ಯಕ್ಷ ಎಂ.ಬಿ. ಅಬ್ದುಲ್ ರೆಹಮಾನ್, ಕರಾವಳಿ ಕುರುಬರ ಸಂಘದ ಅದ್ಯಕ್ಷ ಬಸವರಾಜ್ ನೋಟಗಾರ್, ರಾಜ್ಯ ಸಂಘದ ಸಹ ಕಾರ್ಯದರ್ಶಿ ಎಂ.ಪ್ರಸನ್ನ ಕುಮಾರ್ ಮತ್ತಿತರ ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಸಮಾ ರಂಭಕ್ಕೂ ಮುನ್ನ ನಗರ ದ ಶರವು ಮಹಾ ಗಣಪತಿ ದೇವ ಸ್ಥಾನದ ಮುಂಭಾ ಗದಿಂದ ಪುರ ಭವನದ ವರೆಗೆ ನಡೆದ ಕನಕ ದಾಸರ ಭಾವ ಚಿತ್ರ ವನ್ನೊ ಳಗೊಂಡ ಆಕ ರ್ಷಕ ಮೆರ ವಣಿ ಗೆಗೆ ಮಂಗ ಳೂರು ಪಾಲಿಕೆ ಮೇಯರ್ ರಜನಿ ದುಗ್ಗಣ್ಣ ಅವರು ಚಾಲನೆ ನೀಡಿದರು.

Tuesday, November 23, 2010

ಗ್ರಾಹಕರ ಹಿತದೃಷ್ಠಿಯಿಂದ ವಿದ್ಯುತ್ ದರ ಪರಿಷ್ಕರಿಸಬೇಡಿ

ಮಂಗಳೂರು ನವೆಂಬರ್ 23: ಮೆಸ್ಕಾಂ ಉತ್ತಮ ಕಾರ್ಯ ನಿರ್ವಹಣೆಯಿಂದಾಗಿ ಲಾಭದಲ್ಲಿರುವುದರಿಂದ ಗ್ರಾಹಕರಿಗೆ ಹೊರೆಯಾಗದಂತೆ ದರ ಹೆಚ್ಚಿಸಬಾರದಾಗಿ ಗ್ರಾಹಕರು/ವಿದ್ಯುತ್ ಬಳಕೆದಾರರು ಕರ್ನಾಟಕ ವಿದ್ಯುತ್ ದರ ನಿಯಂತ್ರಣ ಆಯೋಗದ ಅಧ್ಯಕ್ಷರಾದ ಎಂ.ಆರ್. ಶ್ರೀನಿವಾಸಮೂರ್ತಿ ಅವರಲ್ಲಿ ತಮ್ಮ ಮನವಿ ಅರ್ಪಿಸಿದರು.

ಇಂದು ಜಿಲ್ಲಾಧಿ ಕಾರಿಗಳ ಕಚೇರಿ ಯಲ್ಲಿ ಕರ್ನಾಟಕ ವಿದ್ಯುತ್ ದರ ನಿ ಯಂತ್ರಣ ಆ ಯೋಗದ ವತಿ ಯಿಂದ ನಡೆದ ಮೆಸ್ಕಾಂ ವಿದ್ಯುತ್ ದರ ಹೆಚ್ಚಿ ಸುವ ಕುರಿತ ಸಾರ್ವ ಜನಿಕ ಅಹವಾಲು ಸ್ವೀಕಾರ ಚರ್ಚೆ ಸಭೆಯಲ್ಲಿ ಭಾಗ ವಹಿ ಸಿದ್ದ ಸುಮಾರು 200 ಕ್ಕೂ ಹೆಚ್ಚಿನ ಗ್ರಾಹ ಕರು ಆಯೋ ಗದ ಅಧ್ಯಕ್ಷ ರಲ್ಲಿ ಮನವಿ ಮಾಡಿ ದರು. ಡಿಜಿಟಲ್ ಮೀಟರ್ ಅಳ ವಡಿಕೆ,ಟಿಸಿ ಗಳಿಗೆ ಸಿಡಿಲು ನಿಯಂತ್ರಣ ಸಾಧನ ಅಳವ ಡಿಸು ವುದು,ಲೈನ್ ಮೆನ್ ಗಳ ಟ್ರಾನ್ಸ ಫರ್ ಹೀಗೆ ಇನ್ನು ಅನೇಕ ಸಮಸ್ಯೆ ಗಳು ಸಭೆ ಯಲ್ಲಿ ಗ್ರಾಹಕ ರಿಂದ ಕೇಳಿ ಬಂದವು.
ಸ್ಮಾರ್ಟ್ ಗ್ರಿಡ್ ವಿದ್ಯುತ್ ಕಡಿತ ನಿಯಂತ್ರಣಕ್ಕೆ ಉತ್ತಮ ಸಾಧನ.ಇದೊಂದು ಒತ್ತಡ ಸಮಯದಲ್ಲಿ ವಿದ್ಯುತ್ ಸರಬರಾಜು ನಿಯಂತ್ರಣ ಮಾಡುವ ಸಾಧನ.ಮೆಸ್ಕಾಂ ವತಿಯಿಂದ ಮಂಗಳೂರಿನ ಕದ್ರಿಹಿಲ್ಸ್ ಅಪಾರ್ಟ್ ಮೆಂಟ್ ನಲ್ಲಿ ಒಂದು ಬೀದಿ ದೀಪಗಳಲ್ಲಿ ಹಾಗೂ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಈ ಸಾಧನ ಅಳವಡಿಸಲಾಗಿದ್ದು ಇದರಿಂದ ಗ್ರಾಹಕ ತನಗೆ ಒದಗಿಸಿರುವ ವಿದ್ಯುತ್ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿವಿದ್ಯುತ್ ಬಳಕೆ ಮಾಡಿದಲ್ಲಿ ಕೂಡಲೇ 30 ಸೆಕೆಂಡುಗಳ ಅಂತರದಲ್ಲಿ ಅವರ ವಿದ್ಯುತ್ ಕಡಿತವಾಗುತ್ತದೆ. ಪುನ: 30 ಸೆಕೆಂಡುಗಳ ಅಂತರದಲ್ಲಿ ವಿದ್ಯುತ್ ಸರಬರಾಜು ಎಂದಿನಂತೆ ಆಗುತ್ತದೆ.ಮತ್ತೊಮ್ಮೆ ನಿಗಧಿತ ಪ್ರಮಾಣಕ್ಕಿಂತ ಹೆಚ್ಚಿಗೆ ವಿದ್ಯುತ್ ಬಳಸಿದರೆ ಪುನ: ಸ್ವಯಂಚಾಲಿತವಾಗಿ ವಿದ್ಯುತ್ ನಿಲುಗಡೆಯಾಗಲಿದೆ. ಹೀಗೆ ಮೂರು ಬಾರಿ ಎಚ್ಚರಿಕೆ ನೀಡಿದರೂ ಗ್ರಾಹಕ ಎಚ್ಚೆತ್ತುಕೊಳ್ಳದಿದ್ದಲ್ಲಿ ಸಂಪೂರ್ಣವಾಗಿ ವಿದ್ಯುತ್ ನಿಲುಗಡೆ ಆಗಲಿದೆ.
ಇದರಿಂದಾಗಿ ವ್ಯರ್ಥವಾಗಿ ಲೋಡ್ ಶೆಡ್ಡಿಂಗ್ ಸಮಸ್ಯೆ ನಿವಾರಣೆಯಾಗಿ 24 * 7 ಆಧಾರದಲ್ಲಿ ವಿದ್ಯುತ್ ಸರಬರಾಜು ಮಾಡಬಹುದೆಂದು ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಸುಮಂತ್ ತಿಳಿಸಿದ್ದಾರೆ. ಇಂದು ನಡೆದ ಸಭೆಯಲ್ಲಿ ಕರ್ನಾಟಕ ವಿದ್ಯುತ್ ದರ ನಿಯಂತ್ರಣ ಆಯೋಗದ ಸದಸ್ಯರಾದ ಶ್ರೀನಿವಾಸ ರಾವ್,ಯು.ಜಿ.ಹಿರೇಮಠ,ಮೆಸ್ಕಾಂ ಸೂಪರಿಂಟೆಂಡೆಂಟ್ ಇಂಜಿನಿಯರ್ ಜಯಸೂರ್ಯ ಮುಂತಾದವರು ಹಾಜರಿದ್ದರು. ಸುಮಾರು 4000ಕ್ಕೆ ಹೆಚ್ಚು ಸಲಹೆಗಳು ಈ ಸಂದರ್ಭದಲ್ಲಿ ಸಲ್ಲಿಸಲಾಗಿತ್ತು.

ಕರಾವಳಿ ಪ್ರಾಧಿಕಾರ ಅಧ್ಯಕ್ಷರಿಂದ ರಸ್ತೆ ಕಾಮಗಾರಿ ಅಭಿವೃದ್ಧಿ ಪರಿಶೀಲನಾ ಸಭೆ

ಮಂಗಳೂರು, ನವೆಂಬರ್ 23 : ದಕ್ಷಿಣ ಕನ್ನಡ ಜಿಲ್ಲೆಯ ಹದಗೆಟ್ಟ ನಗರ ಹಾಗೂ ಗ್ರಾಮೀಣ ರಸ್ತೆಗಳನ್ನು ಸಂಚಾರಯೋಗ್ಯವನ್ನಾಗಿ ಮಾಡಲು ಹಾಗೂ ದೊಡ್ಡ ದೊಡ್ಡ ಹೊಂಡಗಳನ್ನು ನವೆಂಬರ್ 10 ರೊಳಗೆ ಮುಚ್ಚಬೇಕೆಂದು ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾದ ಬಿ. ನಾಗರಾಜ ಶೆಟ್ಟಿ ಅವರು ಇಲಾಖಾಧಿಕಾರಿಗಳಿಗೆ ಗಡುವು ನೀಡಿದ್ದರು. ಈ ಆದೇಶ ಪರಿಪಾಲನೆಗೆ ಸಂಬಂಧಿಸಿದಂತೆ ರಸ್ತೆ ಕಾಮಗಾರಿ ಅಭಿವೃದ್ಧಿ ಕುರಿತ ಸಭೆಯನ್ನು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಾಧಿಕಾರದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಕರೆಯಲಾಗಿತ್ತು. ಲೋಕೋಪಯೋಗಿ, ಮಹಾನಗರಪಾಲಿಕೆ, ರಾಷ್ಟ್ರೀಯ ಹೆದ್ದಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮತ್ತು ಜಿಲ್ಲಾ ಪಂಚಾಯತ್ ಅಧಿಕಾರಿಗಳು ಪಾಲ್ಗೊಂಡ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಂಪರ್ಕ ವ್ಯವಸ್ಥೆಗೆ ಹಣದ ಕೊರತೆ ಇಲ್ಲ; ಬಿಡುಗಡೆಯಾದ ಹಣವನ್ನು ಸದ್ಬಳಕೆ ಮಾಡುತ್ತಿಲ್ಲ ಎಂದರು. ಜಿಲ್ಲೆಯ ಪ್ರಮುಖ ರಸ್ತೆ (ಎಂ ಡಿ ಆರ್) ಗಳ ಅಭಿವೃದ್ಧಿ ಪ್ರಮಾಣ ಕಡಿಮೆ ಇದೆ ಎಂದರು.ದ.ಕ.ಜಿಲ್ಲೆಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ 13, 48 ಹಾಗೂ 234 ರಲ್ಲಿರುವ ಗುಂಡಿ ಗಳನ್ನು ಮುಚ್ಚುವ ಕಾರ್ಯವನ್ನು ಡಿಸೆಂಬರ್ ಹತ್ತ ರೊಳಗೆ ಮುಗಿಸ ಬೇಕು. ಬಳಿಕ ಮಾಧ್ಯಮ ಪ್ರತಿನಿಧಿ ಗಳೊಂದಿಗೆ ರಸ್ತೆಯನ್ನು ಖುದ್ದಾಗಿ ಪರಿಶೀ ಲಿಸುವು ದಾಗಿ ಎಚ್ಚರಿಕೆ ನೀಡಿದ ಪ್ರಾಧಿ ಕಾರದ ಅಧ್ಯಕ್ಷರು, ರಸ್ತೆ ಹೊಂಡ ಮುಚ್ಚಲು ಅನು ದಾನ ವಿಲ್ಲ ಎಂಬ ಸಬೂಬು ಹೇಳಬೇಡಿ ಎಂದರು. ರಾಷ್ಟ್ರೀಯ ಹೆದ್ದಾರಿ 48 ಒಟ್ಟು 74.8 ಕಿ.ಮೀ ಉದ್ದ ವಿದ್ದು, 54.8 ಕಿ.ಮೀ ಉದ್ದ ರಸ್ತೆಯ ಹೊಂಡ ಮುಚ್ಚ ಲಾಗಿದೆ ಎಂದು ಅಧಿಕಾ ರಿಗಳು ತಿಳಿಸಿದರು. ಶಿರಾಡಿ ಮತ್ತು ಅಮೈ - ಬಿ.ಸಿ.ರೋಡು ಬಳಿ ಹೊಂಡ ಮುಚ್ಚ ಲಾಗಿಲ್ಲ; ಈ ಪ್ರದೇಶಗಳನ್ನು 3 ವಾರದೊಳಗೆ ಮುಚ್ಚಲಾಗುವುದು ಎಂದರು. ರಾಷ್ಟ್ರೀಯ ಹೆದ್ದಾರಿ 13 ರ ವ್ಯಾಪ್ತಿ 36.90 ಕಿ.ಮೀನಷ್ಟಿದ್ದು, 28 ಕಿ.ಮೀ ರಸ್ತೆ ಹೊಂಡ ಮುಚ್ಚಲಾಗಿದೆ. ಸಾಮಾನ್ಯ ವೆಚ್ಚಕ್ಕೆಂದು ನೀಡಲಾದ 61 ಲಕ್ಷ ರೂ.ಗಳು ಖರ್ಚಾಗಿಲ್ಲ. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ತನ್ನ ಮುಂದಿರುವ ಒಂದೇ ಕಾರ್ಯಸೂಚಿ ಎಂದರೆ ರಸ್ತೆಯನ್ನು ವಾಹನ ಓಡಾಟಕ್ಕೆ ಸಜ್ಜುಗೊಳಿಸುವುದು. ಆದ್ದರಿಂದ ಅಧಿಕಾರಿಗಳು ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕೆಂದರು. ಎನ್ ಎಚ್ 234ರಲ್ಲಿ 67 ಕಿ.ಮೀ ವಿಸ್ತಾರ ರಸ್ತೆಯಿದ್ದು, 25 ಕಿ.ಮೀ ರಸ್ತೆ ಹೊಂಡ ಮುಚ್ಚಲಾಗಿದೆ ಎಂದರು. ಒಂದೊಂದು ರಸ್ತೆಗೆ ಒಬ್ಬೊಬ್ಬ ಅಧಿಕಾರಿಯನ್ನು ಹೊಣೆಯಾಗಿಸಬೇಕು. ಪ್ರತೀ ಬಾರಿ ಅಂತಿಮ ಗಡುವು, ದಿನಾಂಕ ನಿಗದಿ ಮಾಡಲು ತನಗೆ ಅವಕಾಶ ನೀಡಬೇಡಿ ಎಂದು ಎಚ್ಚರಿಸಿದರು. ನಾಳೆಯೇ ಎನ್ ಎಚ್ 13 ರಸ್ತೆಯನ್ನು ತನಿಖೆ ಮಾಡಲಿದ್ದೇನೆ ಎಂದರು. ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನದಿಂದ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಬೇಕು. ಅಭಿವೃದ್ಧಿ ಕಾಮಗಾರಿಗೆ ಸಹಕಾರ ಸ್ಪಂದನೆ ನೀಡದ ಅಧಿಕಾರಿಗಳು ಜಿಲ್ಲೆಯಿಂದ ಬೇರೆಡೆಗೆ ವರ್ಗಾವಣೆ ತೆಗೆದುಕೊಂಡು ಹೋಗಬಹುದೆಂದರು. ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಒಟ್ಟು 120 ರಸ್ತೆಗಳಿದ್ದು, 50 ರಸ್ತೆಗಳನ್ನು ಆದ್ಯತೆಯ ಮೇಲೆ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ಮಾಹಿತಿ ನೀಡಿದರು. ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ 645.80 ಕಿ.ಮೀ ರಸ್ತೆಯಿದ್ದು, 52 ರಸ್ತೆಗಳ ರಿಪೇರಿ ಆರಂಭಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಇಂಜಿನಿಯರ್ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಕಾಲುಸಂಕ ಗಳಿಗೆ ಐದು ಕೋಟಿ ರೂ. ಬಿಡುಗಡೆಯಾಗಿದ್ದು, ರಸ್ತೆಯ ಬಳಿಕ ಕಾಲುಸಂಕ ಕಾಮಗಾರಿ ಆರಂಭಿಸಲಾಗುವುದು ಎಂದರು. ಆರು ಘಾಟಿಗಳಲ್ಲಿ ರಸ್ತೆ ಅಭಿವೃದ್ಧಿಗೆ 100 ಕೋಟಿ ರೂ. ಬಿಡುಗಡೆಯಾಗಿದ್ದು, ಘಾಟಿ ರಸ್ತೆಗಳ ಕಾಮಗಾರಿ ವಿವರವನ್ನು ಸೂಪರಿಂಟೆಂಡೆಂಟ್ ಇಂಜಿನಿಯರ್ ಬಾಲಕೃಷ್ಣ ಅವರು ನೀಡಿದರು. ಶಿರಾಡಿ ಘಾಟ್ ಅಭಿವೃದ್ಧಿ ಮತ್ತು 237ನೇ ಸ್ಟ್ರಚ್ ನಲ್ಲಿ ಶೌಚಾಲಯ ನಿರ್ಮಿಸಲು ಅವಕಾಶ ಮುಕ್ತವಾಗಿರಿಸಲು ಅಧ್ಯಕ್ಷರು ಸೂಚಿಸಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ಸುಭೋದ್ ಯಾದವ್ ಉಪಸ್ಥಿತರಿದ್ದರು.

ಅಲ್ಪಸಂಖ್ಯಾತರ ಅಭಿವೃದ್ಧಿ ಹೊಣೆ ಅಲ್ಪಸಂಖ್ಯಾತರ ನಿಗಮ ಮತ್ತು ಇಲಾಖೆಯದ್ದು : ಜಿಲ್ಲಾಧಿಕಾರಿ

ಮಂಗಳೂರು, ನವೆಂಬರ್ 23: ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿ ಹೊಣೆ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖೆ ಮತ್ತು ನಿಗಮದ್ದು ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಹೇಳಿದರು.ಅವರು 22 ರಂದು ಜಿಲ್ಲಾಧಿಕಾರಿಯವರ ಸಭಾಂಗಣದಲ್ಲಿ ಏರ್ಪಡಿಸಿದ್ದ ಪ್ರಧಾನಮಂತ್ರಿಗಳ 15 ಅಂಶ ಕಾರ್ಯ ಕ್ರಮಗಳ ಪ್ರಗತಿ ಪರಿಶೀಲನಾ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.

ಅಲ್ಪ ಸಂಖ್ಯಾತರ ಅಭಿವೃದ್ಧಿ ಗೆಂದೇ ಮೀಸಲಿ ರಿಸಿರುವ ಸಂಸ್ಥೆಗಳು ತಮ್ಮ ಹೊಣೆ ಗಾರಿಕೆ ಯನ್ನು ನಿರ್ವಹಿಸುವ ಬಗ್ಗೆ ಮಾರ್ಗ ದರ್ಶನ ನೀಡಿದ ಜಿಲ್ಲಾಧಿ ಕಾರಿಗಳು, ಅವರ ಅಭಿ ವೃದ್ಧಿಗೆ ಮೀಸಲಿಟ್ಟ ಯೋಜನೆ ಗಳು, ಅವರಿಗೆ ಮಾರ್ಗ ದರ್ಶನ ನೀಡುವ ಹೊಣೆಯನ್ನು ನಿಗದಿ ಪಡಿಸಿ ದರಲ್ಲದೆ, ಸಾರ್ವ ಜನಿಕರಿಂದ ಈ ಸಂಬಂಧ ದೂರುಗಳು ಬರಬಾರದು ಎಂದು ಎಚ್ಚರಿಸಿದರು.
ಮುಂದೆ ನಡೆಯುವ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳು ಸಾಮಾನ್ಯ ಪ್ರಗತಿ ವರದಿಯನ್ನು ತಾರದೆ, ಅಲ್ಪಸಂಖ್ಯಾತರ ಅಭಿವೃದ್ಧಿಗೆ ರೂಪಿಸಿದ ಯೋಜನೆ ಹಾಗೂ ಗುರಿಸಾಧನೆಗಳೊಂದಿಗೆ ಸಭೆಗೆ ಹಾಜರಾಗಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ಕರ್ನಾಟಕ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದಡಿ ದೊರಕುವ ಸೌಲಭ್ಯಗಳಾದ ಸ್ವಾವಲಂಬನಾ, ಅರಿವು ಯೋಜನೆಯಡಿ ಅರ್ಹರಿಗೆ ಮಾಹಿತಿ ನೀಡಿ ಸ್ವಾವಲಂಬಿ ಜೀವನ ನಡೆಸಲು ನೆರವಾಗಬೇಕೆಂದರು. ಶಿಕ್ಷಣ ಇಲಾಖೆ, ಕೈಗಾರಿಕಾ ಅಭಿವೃದ್ಧಿ, ರೇಷ್ಮೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳು ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರಿಗಾಗಿ ಮೀಸಲಿಟ್ಟ ಯೋಜನೆಗಳ ಅಭಿವೃದ್ಧಿ ಪರಿಶೀಲನೆ ನಡೆಸಿದರು. ಸಭೆಯಲ್ಲಿ ಅಧಿಕಾರೇತರ ಸದಸ್ಯರಾದ ಧರಣೇಂದ್ರ ಜೈನ್ ಮತ್ತು ಲಾರೆನ್ಸ್ ಪಿಂಟೋ ಉಪಸ್ಥಿತರಿದ್ದರು.

Monday, November 22, 2010

199 ಅರಣ್ಯ ಹಕ್ಕು ಪತ್ರಗಳನ್ನು ಇಂದೇ ಅಂತಿಮಗೊಳಿಸಿ: ಜಿಲ್ಲಾಧಿಕಾರಿ ಸೂಚನೆ

ಮಂಗಳೂರು, ನವೆಂಬರ್ 22: ಹಲವಾರು ವರ್ಷಗಳಿಂದ ಅರಣ್ಯದಲ್ಲಿ ನೆಲೆನಿಂತ ಕುಟುಂಬಗಳ ಬದುಕಿಗೆ ಭದ್ರತೆ ನೀಡಲು ಸರ್ಕಾರ ರೂಪಿಸಿದ ವಿಶೇಷ ಕಾಯಿದೆ ಅರಣ್ಯ ಹಕ್ಕು ಪತ್ರ ನೀಡಿಕೆಯಾಗಿದ್ದು, ಈ ಕಾಯಿದೆಯ ಉದ್ದೇಶವನ್ನು ಸಂಬಂಧಪಟ್ಟ ಅಧಿಕಾರಿಗಳು ಅರ್ಥೈಸಿಕೊಂಡು ಶೀಘ್ರ ಅನುಷ್ಠಾನಕ್ಕೆ ಮುಂದಾಗಬೇಕೆಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಹೇಳಿದರು.
ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆಸಿದ ಅರಣ್ಯ ಹಕ್ಕು ಪತ್ರಗಳ ನೀಡಿಕೆ ಕುರಿತ ಸಭೆಯಲ್ಲಿ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡುತ್ತಿದ್ದರು.
262 ಹಕ್ಕುಪತ್ರಗಳನ್ನು ಮಾನ್ಯತೆಗಾಗಿ ಸಲ್ಲಿಸಿದ್ದು, 32 ಹಕ್ಕು ಪತ್ರಗಳನ್ನು ವಿತರಿಸಲಾಗಿದೆ. 230 ಅರ್ಜಿಗಳು ಬಾಕಿ ಇದ್ದು,ಅವುಗಳಲ್ಲಿ 63ನ್ನು ಬಫರ್ ಎಂದು ನಮೂದಿಸಲಾಗಿದೆ. 199 ಹಕ್ಕು ಪತ್ರಗಳಲ್ಲಿ ಅರಣ್ಯ ಪ್ರದೇಶ ಎಂದು ನಮೂದಿಸಿದ್ದು, ಇಂದು ಸಮಿತಿ ಸದಸ್ಯರು ಕುಳಿತು ಈ ಅರ್ಜಿಗಳನ್ನು ಶೀಘ್ರ ವಿಲೇ ಮಾಡಲು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಅರಣ್ಯವಾಸಿಗಳ ಬದುಕಿನ ಭದ್ರತೆಗೆ ರೂಪಿಸಿದ ಈ ಕಾಯಿದೆಯನ್ನು ಹಗುರವಾಗಿ ಪರಿಗಣಿಸದೆ, ಸಂಶಯಗಳ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳನ್ನು ತುರ್ತಾಗಿ ಸಂಪರ್ಕಿಸಿ, ಸಮಜಾಯಿಷಿ ಪಡೆದುಕೊಂಡು ಈ ವಿಷಯದ ಬಗ್ಗೆ ಅಂತಿಮ ನಿರ್ಣಯ ಕೈಗೊಳ್ಳಬೇಕೆಂದರು. ಬಫರ್ ಜಮೀನಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ತಾವೇ ಮಾತನಾಡುವುದಾಗಿ ಹೇಳಿದ ಜಿಲ್ಲಾಧಿಕಾರಿಗಳು, ವಿಶೇಷ ಕಾಯಿದೆಯ ಮೂಲ ಉದ್ದೇಶ ಈಡೇರಬೇಕೆಂದರು.ಈ ಸಂಬಂಧ ಸಭೆಯಲ್ಲೇ ಒಂದು ಮಾದರಿಯನ್ನು ತಯಾರಿಸಿ ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದ ಜಿಲ್ಲಾಧಿಕಾರಿಗಳು, ಸಾಮಾಜಿಕ ಕಲ್ಯಾಣ ಇಲಾಖೆ ಅಧಿಕಾರಿಗಳ ನೆರವನ್ನು ಈ ಸಂಧರ್ಭದಲ್ಲಿ ಪಡೆಯಲು ಸೂಚಿಸಿದರು. ಸಭೆಯಲ್ಲಿ ಪುತ್ತೂರು ಉಪವಿಭಾಗಾಧಿಕಾರಿ ಡಾ. ಹರೀಶ್ ಕುಮಾರ್, ಡಿಸಿಎಫ್ ವಿಜಯಕುಮಾರ್ ಶೆಟ್ಟಿ ಅವರು ಉಪಸ್ಥಿತರಿದ್ದರು.

Saturday, November 20, 2010

ಮಾನವ ಹಕ್ಕು ಆಯೋಗದಿಂದ 12,000 ಪ್ರಕರಣ ಇತ್ಯರ್ಥ

ಮಂಗಳೂರು,ನ.20: ರಾಜ್ಯ ಮಾನವ ಹಕ್ಕು ಆಯೋಗ ದಡಿ 23,000 ಪ್ರಕರಣ ಗಳನ್ನು ದಾಖಲಿಸ ಲಾಗಿದ್ದು, 5000 ಪ್ರಕರಣ ಗಳನ್ನು ಸ್ವಯಂ ಪ್ರೇರಿತ ವಾಗಿ ದಾಖಲಿ ಸಲಾಗಿದೆ.12,000 ಪ್ರಕರಣ ಗಳ ಕುರಿತು ತೀರ್ಮಾನ ಕೈಗೊಳ್ಳ ಲಾಗಿದೆ ಎಂದು ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷ ರಾದ ಎಸ್ ಆರ್ ನಾಯಕ್ ಅವರು ಹೇಳಿದರು.ಅವರಿಂದು ಮಂಗಳೂರಿನ ಜಿಲ್ಲಾಧಿ ಕಾರಿಗಳ ಕೋರ್ಟ್ ಹಾಲ್ ನಲ್ಲಿ ಸಾರ್ವಜನಿ ಕರಿಂದ ಅಹವಾಲು ಸ್ವೀಕರಿಸಿದ ಬಳಿಕ ಮಾಧ್ಯಮ ದೊಂದಿಗೆ ಮಾತನಾಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಅವಧಿಯಲ್ಲಿ ಸುಮಾರು 1,000 ಪ್ರಕರಣಗಳನ್ನು ದಾಖಲಿಸಲಾಗಿದ್ದು, 450 ಪ್ರಕರಣಗಳ ಸಂಬಂಧ ತೀರ್ಪು ನೀಡಲಾಗಿದೆ. ಮಾನವ ಹಕ್ಕು ಆಯೋಗ ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಲು ಕನಿಷ್ಠ ಜಿಲ್ಲಾ ಕೇಂದ್ರದಲ್ಲಿ ಮಾನವ ಹಕ್ಕು ಆಯೋಗದ ಘಟಕಗಳಿರಬೇಕು ಎಂದರು. ರಾಜ್ಯ ಮಾನವ ಹಕ್ಕು ಆಯೋಗ ಅದ್ಭುತ ಸಂಸ್ಥೆಯಾಗಿ ಬೆಳೆಯಲು ಮಾನವ ಸಂಪನ್ಮೂಲ ಮತ್ತು ಮೂಲಭೂತ ಸೌಕರ್ಯಗಳ ಅಗತ್ಯವಿದೆ ಎಂದರು.

Friday, November 19, 2010

ಲೋಕೋಪಯೋಗಿ ಇಲಾಖೆಯಿಂದ 265 ಕೋಟಿ ರೂ. ಕಾಮಗಾರಿ ಪ್ರಗತಿ

ಮಂಗಳೂರು,ನವೆಂಬರ್ 19: ಲೋಕೋಪಯೋಗಿ ಇಲಾಖೆ ರೂ.265 ಕೋಟಿಯ ಸಾರ್ವಜನಿಕ ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಕಾಮಗಾರಿಗಳೆಲ್ಲವೂ ಪ್ರಗತಿಯಲ್ಲಿದೆ. ಮಂಗಳೂರು ವಿಭಾಗದಲ್ಲಿ ವಿವಿಧ ಯೋಜನೆಗಳಡಿ ಮಿನಿ ವಿಧಾನಸೌಧ, ಪ್ರಾದೇಶಿಕ ಸಾರಿಗೆ ಅಧಿಕಾರಿ ಕಚೇರಿ, ಸುಳ್ಯ ಮಿನಿ ವಿಧಾನಸೌಧ, ನ್ಯಾಯಲಯ ಕಟ್ಟಡ ಸೇರಿದಂತೆ ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ. ಇಲಾಖೆಗೆ ಮತ್ತೆ ರೂ.160 ಕೋಟಿ ಮಂಜೂರಾಗಿದ್ದು, ಶೀಘ್ರದಲ್ಲಿಯೇ ಕಾಮಗಾರಿಗಳನ್ನು ಪ್ರಾರಂಭಿಸಲಾಗುವುದು ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೆಮಾರ್ ಹೇಳಿದ್ದಾರೆ.
ಅವರು ಶುಕ್ರವಾರ ನಗರದ ಲೋಕೋ ಪಯೋಗಿ ಇಲಾಖೆಯ ವೃತ್ತ ಕಚೇರಿಗೆ ಭೇಟಿ ನೀಡಿ ಕಾರ್ಯಾಲಯದ ನವೀಕರಣ ಕಾಮಗಾರಿ ವೀಕ್ಷಿಸಿದ ಬಳಿಕ ಸಚಿವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು.ಬಂದರು ಇಲಾಖೆಯ ರೂ. 15 ಕೋಟಿಯ ಕಾಮಗಾರಿ ಪ್ರಗತಿಯಲ್ಲಿದೆ. ರೂ. 358 ಕೋಟಿಯ ಕಾಮಗಾರಿ ಸದ್ಯದಲ್ಲಿಯೇ ಕೈಗೆತ್ತಿಕೊಳ್ಳಲಾಗುವುದು. ಮೀನುಗಾರಿಕಾ ಇಲಾಖೆಯ ರೂ. ಒಂದು ಕೋಟಿ ಮೌಲ್ಯದ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿದೆ. ರೂ. 3.2 ಕೋಟಿ ಮೌಲ್ಯದ ಕಾಮಗಾರಿಗಳನ್ನು ಶೀಘ್ರ ಆರಂಭಿಸಲಾಗುವುದು ಎಂದು ಸಚಿವರು ವಿವರಿಸಿದರು.
ಪಿಲಿಕುಳ ನಿಸರ್ಗಧಾಮದಲ್ಲಿ ತಾರಾಲಯ ನಿರ್ಮಾಣಕ್ಕಾಗಿ ಸರಕಾರ ರೂ. 15.5 ಕೋಟಿ ಮಂಜೂರು ಮಾಡಿದೆ. ಯೋಜನೆಯನ್ನು ಶೀಘ್ರ ಆರಂಭಿಸಲಾಗುವುದು ಎಂದು ಸಚಿವರು ನುಡಿದರು.ಲೋಕೋಪಯೋಗಿ ಇಲಾಖೆಯ ಕಾಮಗಾರಿಗಳ ಗುಣಮಟ್ಟ ಪರೀಕ್ಷೆಗಾಗಿ ಹಿಂದೆ ವಿಭಾಗಗಳಲ್ಲಿ ಒಂದೊಂದರಂತೆ ಪ್ರಯೋಗಾಲಯಗಳಿದ್ದವು. ಈಗ ಪ್ರತೀ ತಾಲೂಕಿಗೆ ಒಂದರಂತೆ ಪ್ರಯೋಗಾಲಯ ಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಕಾಮಗಾರಿಗಳಲ್ಲಿ ಹೆಚ್ಚಿನ ಗುಣಮಟ್ಟ ಕಾಯ್ದುಕೊಳ್ಳಲು ಸಾಧ್ಯವಾಗಿದೆ ಎಂದು ಸಚಿವ ಪಾಲೆಮಾರ್ ಹೇಳಿದರು.
ಲೋಕೋಪಯೋಗಿ ಇಲಾಖೆ ಮತ್ತು ಇತರ ಕಚೇರಿ ಸಮುಚ್ಛಯಗಳ ಪೈಕಿ ಲೋಕೋಪಯೋಗಿ ಇಲಾಖೆಯ ಕಾರ್ಯಾಲಯವನ್ನು ನವೀಕರಿಸಲಾಗಿದೆ. ಉಳಿದ ಇಲಾಖೆಗಳ ನವೀಕರಣಕ್ಕೆ ಕ್ರಮಕೈಗೊಳ್ಳಲಾಗಿದೆ ಎಂದರು. ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆಯ ಅಧೀಕ್ಷಕ ಅಭಿಯಂತರ ಬಿ.ಎಸ್.ಬಾಲಕೃಷ್ಣ ಮತ್ತು ಕಾರ್ಯನಿರ್ವಾಹಕ ಅಭಿಯಂತರ ಗೋಪಾಲ್ ಗೌಡ ಉಪಸ್ಥಿತರಿದ್ದರು.

Thursday, November 18, 2010

ಜಿಪಿಎಸ್ ಅಳವಡಿಕೆ ಉದ್ದೇಶ ಸಾರ್ಥಕಪಡಿಸಿ ; ಜಿಲ್ಲಾಧಿಕಾರಿ ಸುಭೋದ್ ಯಾದವ್

ಮಂಗಳೂರು,ನವೆಂಬರ್ 18: ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಣಿಕೆ ತಡೆಯಲು ಕಂಡುಕೊಂಡ ಜಿಪಿಎಸ್ ವ್ಯವಸ್ಥೆಯ ಉದ್ದೇಶವನ್ನು ಸಾರ್ಥಕ ಪಡಿಸಲು ಗಣಿ ಮತ್ತು ಭೂ ವಿಜ್ನಾನ ಇಲಾಖೆ ಅಧಿಕಾರಿಗಳು ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸುಭೋದ್ ಯಾದವ್ ಅವರು ಎಚ್ಚರಿಕೆ ನೀಡಿದ್ದಾರೆ.
ಈ ಬಗ್ಗೆ ಇಂದು ತಮ್ಮ ಕಚೇರಿಯಲ್ಲಿ ಕರೆದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಮಾತ ನಾಡಿದರು. ಜಿಲ್ಲೆಯಿಂದ ನೆರೆಯ ಕೇರಳಕ್ಕೆ ಅಕ್ರಮವಾಗಿ ಮರಳು ಸಾಗಣಿಕೆ ತಡೆಯಲು ತೆಗೆದುಕೊಂಡ ಪರಿಣಾಮಕಾರಿ ಕ್ರಮಗಳಲ್ಲಿ ಒಂದಾದ ಮರಳು ಲಾರಿಗಳಿಗೆ ಜಿಪಿಎಸ್ ಸಾಧನ ಅಳವಡಿಕೆ ಅಧಿಕಾರಿಗಳ ನಿರ್ಲಕ್ಷ ದಿಂದ ವ್ಯರ್ಥ ವಾಗಬಾರದು ಎಂಬುವುದನ್ನು ಸ್ಪಷ್ಟಪಡಿಸಿದ ಜಿಲ್ಲಾಧಿಕಾರಿಗಳು ಈ ನಿಟ್ಟಿನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರ ಬಳಿ ಸಮಗ್ರ ಮಾಹಿತಿ ನೀಡುವಂತೆ ಸೂಚನೆ ನೀಡಿದರು. ಇದಕ್ಕೆ ಉತ್ತರಿಸಿದ ಗಣಿ ಮತ್ತು ಭೂ ವಿಜ್ನಾನ ಇಲಾಖೆಯ ಅಧಿಕಾರಿಗಳು ಜಿಪಿಎಸ್ ಅಳವಡಿಸಿದ ಐ ಸರ್ಚ ಕಂಪೆನಿಯ ಬಳಿ ಈ ಬಗ್ಗೆ ನಿಕಟ ಸಂಪರ್ಕವನ್ನಿರಿಸಿಕೊಂಡು ಮಾಹಿತಿ ನೀಡುತ್ತಿದ್ದು, ತಾಂತ್ರಿಕ ಕಾರಣಗಳಿಂದ ಮಾನಿಟರಿಂಗ್ ವ್ಯವಸ್ಥೆಯಲ್ಲಿ ಕುಂದು ಉಂಟಾಗಿದೆ ಎಂಬುದನ್ನು ಒಪ್ಪಿಕೊಂಡರು. ಗಡಿ ಪ್ರದೇಶ ನರಿಂಗಾಣ ಗ್ರಾಮ ಪಂಚಾ ಯತ್ ವ್ಯಾಪ್ತಿಯ ಜನರನ್ನು ವಿಶ್ವಾಸಕ್ಕೆ ತೆಗೆದು ಕೊಳ್ಳ ಲಾಗಿದ್ದು, ಅಲ್ಲಿನ ಗ್ರಾಮಸ್ಥರಿಗೆ ಅಕ್ರಮ ಮರಳಿನ ಲಾರಿಗಳು ಸಂಚರಿ ಸುವುದು ಗಮನಕ್ಕೆ ಬಂದರೆ ಮಾಹಿತಿ ನೀಡಲು ಅನುಕೂ ಲವಾಗು ವಂತೆ ತಮ್ಮ ದೂರವಾಣಿ ಸಂಖ್ಯೆಯನ್ನು ನೀಡಲಾಗಿದೆ.ಉಳಿದ ಗಡಿ ಭಾಗಗಳ ಗ್ರಾಮ ಪಂಚಾಯತ್ ಗಳೊಂದಿಗೂ ಇದೇ ರೀತಿಯ ಸಂಬಂಧವಿರಿಸಿ ಮಾಹಿತಿ ಪಡೆಯಲು ಕ್ರಮ ಕೈ ಗೊಳ್ಳಲಾಗಿದೆ ಎಂದು ಉತ್ತರಿಸಿದರು.
ಈ ಜಿಪಿಎಸ್ ಸಾಧನ ಅಳವಡಿಕೆಯ ಉದ್ದೇಶ ಸಾರ್ಥಕವಾಗಬೇಕೆಂದು ಈ ಬಗ್ಗೆ ಇಲಾಖೆ ಗಂಭೀರ ನಡಾವಳಿಗಳನ್ನು ತೆಗೆದುಕೊಳ್ಳ ಬೇಕೆಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಡಳಿತ ಅಕ್ರಮ ತಡೆಗೆ ಮಾನವ ಸಂಪನ್ಮೂಲ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಶ್ರಮವನ್ನು ಬಳಸಿಕೊಂಡಿದ್ದು, ಯಾವುದೇ ಕಾರಣಕ್ಕೂ ಅಕ್ರಮ ಮರಳು ಸಾಗಾಣಿಕೆ ದೂರು ಬಂದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು.

Wednesday, November 17, 2010

' ಬಸಿರಲ್ಲಿ ಜನನಿಯ ಅಕ್ಕರೆ; ಭವಿಷ್ಯದಲ್ಲಿ ಭಾಗ್ಯಲಕ್ಷ್ಮಿ ಆಸರೆ '

ಮಂಗಳೂರು,ನ.17: ಭಾಗ್ಯಲಕ್ಷ್ಮಿ ಯೋಜನೆ ದೇಶಕ್ಕೆ ಮಾದರಿ ಯೋಜನೆಯಾಗಿದ್ದು, ರಾಜ್ಯದ ಎಲ್ಲ ದು:ಖಿತ ಅಮ್ಮಂದಿರ ಕಣ್ಣೀರು ಒರೆಸುವ ಮತ್ತು ಮಹಿಳೆಯರ ಗೌರವ ರಕ್ಷಣೆಯ ಹೊಣೆ ಹೊತ್ತ ತನ್ನ ಸರ್ಕಾರದ ಅತ್ಯುತ್ತಮ ಯೋಜನೆ ಎಂದರು. ಮುಂದಿನ ವರ್ಷದಲ್ಲಿ ಹತ್ತು ಲಕ್ಷ ಹೆಣ್ಣು ಮಕ್ಕಳಿಗೆ ನೆರ ವಾಗು ವ ನಿಟ್ಟಿನಲ್ಲಿ 3 ಸಾವಿರ ಕೋಟಿ ಹೆಚ್ಚಿನ ಅನುದಾನ ಮೀಸಲಿ ಡಲಾ ಗುವುದು. ಸುಮಾರು ಒಂದು ಲಕ್ಷ ಇಪ್ಪತ್ತೈದು ಸಾವಿರ ಸ್ತ್ರೀ ಶಕ್ತಿ ಸಂಘಟ ನೆಗ ಳಿಗೆ ನೆರವಾಗಲು ಮಾರುಕಟ್ಟೆಯನ್ನು ರೂಪಿಸುವ ಆಶ್ವಾಸನೆಯನ್ನು ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪನವರು ನೀಡಿದರು.ಅವ ರಿಂದು ಪುತ್ತೂ ರಿನಲ್ಲಿ ಏರ್ಪಡಿ ಸಲಾದ ಭಾಗ್ಯ ಲಕ್ಷ್ಮಿ ಯೋಜ ನೆಯ ಫಲಾನು ಭವಿ ಗಳಿಗೆ ಉಚಿತ ಆರೋಗ್ಯ ತಪಾ ಸಣೆ,ಬಾಂಡ್ ವಿತ ರಣೆ, ತಾಯಂ ದಿರಿಗೆ ಸೀರೆ ವಿತ ರಣೆ, ವಿವಿಧ ಕಾಮ ಗಾರಿಗಳ ಉದ್ಘಾ ಟನೆ ಮತ್ತು ಶಿಲಾ ನ್ಯಾಸ ಸಮಾ ರಂಭ ನೆರ ವೇರಿಸಿ ಮಾತ ನಾಡು ತ್ತಿದ್ದರು.ರಾಜ್ಯದ ಬಡ ಜನರು ಸ್ವಾಭಿ ಮಾನ ದಿಂದ ಬದುಕಲು ಅಗತ್ಯ ಹಾಗೂ ಅರ್ಹ ವೆನಿ ಸುವ ಯೋಜನೆ ಗಳನ್ನು ರೂಪಿ ಸುವ ಭರವ ಸೆಯನ್ನು ನೀಡಿದ ಮುಖ್ಯ ಮಂತ್ರಿ ಗಳು, ಗಾಡಿ ವ್ಯಾಪಾರಿ ಗಳ ಶ್ರೀಮಂತ ಬಡ್ಡಿ ವ್ಯಾಪಾರಿ ಗಳಿಂದ ಸಾಲ ಪಡೆಯು ವುದನ್ನು ತಪ್ಪಿ ಸಲು 500 ಕೋಟಿ ರೂ., ಮೀಸ ಲಿಟ್ಟು ಕಡಿಮೆ ಬಡ್ಡಿ ಯಲ್ಲಿ ಸಾಲ ನೀಡುವ ವ್ಯವಸ್ಥೆ ಮಾಡುವು ದಾಗಿ ಹೇಳಿದ ಅವರು, ಅಂಗನ ವಾಡಿ ಕಾರ್ಯ ಕರ್ತೆ ಯರಿಗೆ ಗೌರ ವಧನ ಹೆಚ್ಚಿಸುವ ಭರವಸೆ ನೀಡಿ ದರು. ಅಮೃತ ಯೋಜನೆ ಯಡಿ ಶೇಕಡ 6ರ ಬಡ್ಡಿಗೆ ರಾಸುಗಳ ಖರೀದಿಗೆ ಸೌಲಭ್ಯ ಒದಗಿ ಸುವು ದಾಗಿ ಹೇಳಿದರು. ದುಡಿಯುವ ಕೈಗಳಿಗೆ ಉದ್ಯೋಗ ಹಾಗೂ ಮಹಿಳಾ ಸಬಲೀಕರಣಕ್ಕೆ ಒತ್ತುನೀಡುವುದು ರಾಜ್ಯ ಸರ್ಕಾರದ ಧ್ಯೇಯ ಎಂದು ಘೋಷಿಸಿದರು.
ಬಸಿರಲ್ಲಿ ಜನನಿಯ ಅಕ್ಕರೆ; ಭವಿಷ್ಯದಲ್ಲಿ ಭಾಗ್ಯಲಕ್ಷ್ಮಿ ಆಸರೆ

ಎಂಬ ಘೋಷಣೆ ಯೊಂ ದಿಗೆ ಸರ್ಕಾರ ಕೈ ಗೊಂಡ ಜನಪರ ಕಾರ್ಯ ಕ್ರಮ ಗಳನ್ನು ವಿವರಿ ಸಿದ ಮುಖ್ಯ ಮಂತ್ರಿ ಗಳು ಜನರು ಸರ್ಕಾ ರದ ಯೋಜನೆ ಗಳ ಬಗ್ಗೆ ವಿವೇಕ ಯುತ ವಾಗಿ ವಿವೇ ಚಿಸಲಿ ಎಂದರು. ಅವಳಿ ಜಿಲ್ಲೆ ಗಳ ಅಭಿ ವೃದ್ಧಿಗೆ ನೀಡಿ ರುವ ವಿಶೇಷ ಅನು ದಾನದ ಸದ್ಬ ಳಕೆ ಯಿಂದ ಜಿಲ್ಲೆ ಗಳು ಅಭಿ ವೃದ್ಧಿ ಪಥದಲ್ಲಿ ಸಾಗಲಿ ಎಂದರು.14.21 ಕೋಟಿ ರೂ.ಗಳ ಕಾಮಗಾರಿ ಉದ್ಘಾಟನೆ ಮತ್ತು 94.54 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿದ ಬಳಿಕ ರಾಜ್ಯ ಮತ್ತು ಜಿಲ್ಲಾ ಪ್ರಗತಿ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಭಾಗ್ಯಲಕ್ಷ್ಮಿ ಫಲಾನುಭವಿಗಳಿಗೆ ಬಾಂಡ್ ವಿತರಿಸಿದರು. ತಾಯಂದಿರಿಗೆ ಸೀರೆ ಹಂಚಿದರು. ಯಾವುದೇ ಸಮಸ್ಯೆಗಳಿದ್ದರೆ ನೇರವಾಗಿ ತಮಗೆ ಪತ್ರ ಬರೆಯಬಹುದು ಅಥವಾ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿಗಳ ಮುಖಾಂತರ ತಮ್ಮನ್ನು ಸಂಪರ್ಕಿ ಸಬಹು ದೆಂದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ರಾದ ಸಿ. ಸಿ.ಪಾಟೀಲ್ ಅವರು,ಭಾಗ್ಯ ಲಕ್ಷ್ಮಿ ಯೋಜನೆ ಗಾಗಿ ಮೀಸ ಲಿಟ್ಟು 500 ಕೋಟಿ ಅನು ದಾನ ದಲ್ಲಿ 300 ಕೋಟಿ ರೂ.ಗಳನ್ನು ಈಗಾಗಲೇ ಬಿಡು ಗಡೆ ಗೊಳಿ ಸಿದ್ದು, ಉಳಿದ ಹಣ ವನ್ನು ಶೀಘ್ರ ದಲ್ಲೇ ಬಿಡು ಗಡೆ ಗೊಳಿಸಲು ಕ್ರಮ ಕೈಗೊ ಳ್ಳುವುದಾಗಿ ಹೇಳಿದರು. ಇಂಧನ ಖಾತೆ ಸಚಿವರಾದ ಶೋಭಾ ಕರಂದ್ಲಾಜೆ ಅವರು, ಸ್ತ್ರೀ ಶಕ್ತಿ ಸಬಲೀಕರಣಕ್ಕೆ ಸರ್ಕಾರ ಹಮ್ಮಿಕೊಂಡಿರುವ ಯೋಜನೆಗಳನ್ನು ವಿವರಿಸಿದರು. ಪುತ್ತೂರು ಶಾಸಕಿ ಮಲ್ಲಿಕಾ ಪ್ರಸಾದ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೇಮಾರ್ ಅವರು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಉನ್ನತ ಶಿಕ್ಷಣ ಸಚಿವ ಡಾ. ವಿ.ಎಸ್. ಆಚಾರ್ಯ, ಸಂಸ ದರಾದ ನಳಿನ್ ಕುಮಾರ್ ಕಟೀಲ್,ಡಿ.ವಿ. ಸದಾ ನಂದ ಗೌಡ, ಶಾಸಕ ರಾದ ಎಸ್ ಅಂಗಾರ, ಯೋಗೀಶ್ ಭಟ್, ವಿಧಾನ ಪರಿ ಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್,ಭಾರತಿ ಶೆಟ್ಟಿ, ಕರಾ ವಳಿ ಅಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಬಿ.ನಾಗ ರಾಜ ಶೆಟ್ಟಿ, ಜಿ.ಪಂ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ, ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಸರೋಜಿನಿ ಭಾರದ್ವಾಜ, ಮೇಯರ್ ರಜನಿ ದುಗ್ಗಣ್ಣ, ಅಮೃತ ಕುಮಾರ್, ಜಿ.ಪಂ. ಉಪಾಧ್ಯಕ್ಷ ಜಗನ್ನಾಥ್ ಸಾಲಿಯಾನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಸಿ. ಎನ್. ಸೀತಾರಾಂ, ಜಿಲ್ಲಾಧಿಕಾರಿ ಸುಬೋಧ ಯಾದವ್, ಐಜಿಪಿ ಅಲೋಕ್ ಮೋಹನ್, ಸಿಇಒ ಶಿವಶಂಕರ್, ಎಸ್ ಪಿ ಡಾ. ಸುಬ್ರಮಣ್ಯೇಶ್ವರ, ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಶಕುಂತಲಾ ವೇದಿಕೆಯಲ್ಲಿದ್ದರು.

ಹಣಕಾಸು ನಿರ್ವಹಣೆ ದೇಶದಲ್ಲೇ ಪ್ರಥಮ:ಮುಖ್ಯಮಂತ್ರಿ ಬಿ.ಎಸ್ .ಯಡಿಯೂರಪ್ಪ

ಮಂಗಳೂರು ನ.17: ರಾಜ್ಯ ಸರಕಾರಕ್ಕೆ ಹಣಕಾಸು ನಿರ್ವಹಣೆಯಲ್ಲಿ ದೇಶದಲ್ಲೇ ಪ್ರಥಮ ಸ್ಥಾನ ಲಭಿಸಿದೆ.ಭಾರತೀಯ ರಿಸರ್ವ ಬ್ಯಾಂಕ್ ಸಹ ರಾಜ್ಯ ಸರ್ಕಾರದ ಕಾರ್ಯ ನಿರ್ವಹಣೆಯನ್ನು ಮೆಚ್ಚಿ ಪ್ರಶಂಸೆ ವ್ಯಕ್ತಪಡಿಸಿದೆ. ಕೇಂದ್ರ ಸರಕಾರದ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ದೊರೆತಿದೆ. ವಿಶ್ವ ಹೂಡಿಕೆದಾರರ ಸಮಾವೇಶದಲ್ಲಿ ಭಾಗವಹಿಸಿದ 400 ಉದ್ದಿಮೆದಾರರ ಪೈಕಿ 150 ಮಂದಿ ರಾಜ್ಯದಲ್ಲಿ ಕೈಗಾರಿಕೆ ಆರಂಭಿಸಲು ಕ್ರಮ ಆರಂಭಿಸಿದ್ದಾರೆ. ಇಂತಹ ಪ್ರಗತಿಯನ್ನು ಸಹಿಸಲಾಗದ ಪ್ರತಿಪಕ್ಷಗಳು ಸತ್ಯವನ್ನು ಮರೆಮಾಚಿ ಗೊಂದಲ ಎಬ್ಬಿಸಲು ಪ್ರಯತ್ನಿಸುತ್ತಿವೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ರಾಜ್ಯದಲ್ಲಿ 11.50 ಲಕ್ಷ ಭಾಗ್ಯಲಕ್ಷ್ಮೀ ಫಲಾನುಭವಿಗಳಿಗೆ ಸವಲತ್ತು ವಿತರಿ ಸಲಾ ಗುತ್ತಿದೆ. ಮುಂದಿನ ಮೂರು ವರ್ಷ ದಲ್ಲಿ 15 ಲಕ್ಷ, ಹೆಣ್ಣು ಮಕ್ಕಳಿಗೆ ಸ್ವಾವ ಲಂಬಿ ಜೀವನ ನಡೆಸಲು ಅನುಕೂ ಲವಾಗು ವಂತೆ ಕಡಿಮೆ ಬಡ್ಡಿ ದರದ ಸಾಲ ವಿತರಿ ಸಲಾ ಗುವುದು. ಅಸಂಘ ಟಿತ ವಲಯ ದಲ್ಲಿ ದುಡಿಯುತ್ತಿರುವವರಿಗೆ ನೆರವಾಗಲು 500ಕೋಟಿ ರೂ. ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದರು.
ರಾಜ್ಯ ಸರಕಾರ ಅಕ್ರಮ ಗಣಿಗಾರಿಕೆ ನಿಲ್ಲಿಸಲು ಹಾಗೂ ಅದಿರು ರಫ್ತು ನಿಷೇಧಿಸಿ ಆದೇಶ ಹೊರಡಿಸಿದ್ದು ರಾಜ್ಯ ಸರ್ಕಾರದ ಬಹು ದೊಡ್ಡ ಸಾಧನೆ ಎಂದರು.
ಭೂ ಹಗರ ಣಗಳ ಸಮಗ್ರ ತನಿಖೆ:ರಾಜ್ಯ ದಲ್ಲಿ ಕೇಳಿ ಬಂದಿ ರುವ ಭೂ ಹಗರ ಣಗಳ ಬಗ್ಗೆ ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾ ಧೀಶ ರಿಂದ ಸಮಗ್ರ ತನಿಖೆ ನಡೆಸ ಲಾಗು ವುದು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಕಟಿಸಿದ್ದಾರೆ.ಬುಧವಾರ ಬಿಜ್ಪೆ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾಳೆ ನಡೆಯುವ ಸಂಪುಟ ಸಭೆಯಲ್ಲಿ ಈ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದರು.ಕಳೆದ 10 ವರ್ಷಗಳಲ್ಲಿ ಆಗಿರುವ ಕೆಐಎಡಿಬಿ ಭೂಮಿ ಮಂಜೂರು, ಸಿಎಂ ಸೈಟ್ ಹಂಚಿಕೆ ಮತ್ತು ಡೀನೋಟಿಫೈ ಕುರಿತು ತನಿಖೆ ನಡೆಸಿ ರಾಜ್ಯದ ಜನರಿಗೆ ಮಾಹಿತಿ ಒದಗಿಸಲಾಗುವುದು. ಈ ಕುರಿತು ಆದಷ್ಟು ಶೀಘ್ರ ಆದೇಶ ಹೊರಡಿಸಲಾಗುವುದು ಎಂದು ಮುಖ್ಯಮಂತ್ರಿ ತಿಳಿಸಿದರು.ಕಾನೂನಿನ ಚೌಕಟ್ಟಿನಲ್ಲಿ ರಾಜಕಾರಣಿಗಳ ಸಂಬಂಧಿಕರು ಭೂಮಿ ಪಡೆದು ಕೈಗಾರಿಕೆ ಸ್ಥಾಪಿಸಿರಬಹುದು. ಇದು ಕಾನೂನುಬಾಹಿರ ಆಗಿದ್ದರೆ; ಪ್ರತಿಪಕ್ಷ ನಾಯಕರು ಬಯಸಿದರೆ ಅಧಿವೇಶನದಲ್ಲಿ ಎರಡು ದಿನಗಳ ಚರ್ಚೆಗೆ ಅವಕಾಶ ನೀಡಲು ಕೂಡಾ ಸಿದ್ಧನಿದ್ದೇನೆ ಎಂದರು. ಇನ್ನು ಮುಂದೆ ರಾಜ್ಯದಲ್ಲಿ ಯಾವುದೇ ಭೂಮಿ ಡೀನೋಟಿಫೈ ಮಾಡಲಾಗುವುದಿಲ್ಲ. ಸಿಎಂ ಕೋಟಾದಲ್ಲಿ ಸೈಟ್ ಗಳ ವಿತರಣೆ ಕೂಡಾ ಮಾಡಲಾಗುವುದಿಲ್ಲ. ಇದಕ್ಕಾಗಿ ಅಧಿಕಾರಿಗಳ ಸಮಿತಿ ರಚಿಸಿ ಆ ಅಧಿಕಾರವನ್ನು ಆ ಸಮಿತಿಗೇ ನೀಡಲಾಗುವುದು ಎಂದು ಅವರು ತಿಳಿಸಿದರು.
ಬಜ್ಪೆಯಲ್ಲಿ ಸ್ವಾಗತ:ಉಡುಪಿ ಮತ್ತು ಪುತ್ತೂರಿನಲ್ಲಿ ಭಾಗ್ಯಲಕ್ಷ್ಮೀ ಫಲಾನುಭವಿಗಳಿಗೆ ಸೀರೆ ವಿತರಿಸಲು ಬೆಂಗಳೂರಿನಿಂದ ವಿಶೇಷ ವಿಮಾನದಲ್ಲಿ ಮುಖ್ಯಮಂತ್ರಿ ಆಗಮಿಸಿದರು.ಬಜ್ಪೆ ವಿಮಾನ ನಿಲ್ದಾಣದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್, ಉನ್ನತ ಶಿಕ್ಷಣ ಸಚಿವ ಡಾ| ವಿ.ಎಸ್. ಆಚಾರ್ಯ,ಸಂಸದರಾದ ನಳಿನ್ ಕುಮಾರ್ ಕಟೀಲ್, ಡಿ.ವಿ. ಸದಾನಂದ ಗೌಡ, ಶಾಸಕರಾದ ಎನ್. ಯೋಗೀಶ್ ಭಟ್, ಮೇಯರ್ ರಜನಿ ದುಗ್ಗಣ್ಣ , ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ, ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ಉಪಮೇಯರ್ ರಾಜೇಂದ್ರ ಕುಮಾರ್ ಮುಂತಾದವರು ಸ್ವಾಗತಿಸಿದರು.
ಐಜಿಪಿ ಗೋಪಾಲ್ ಹೊಸೂರ್ ,ಜಿಲ್ಲಾಧಿಕಾರಿ ಸುಭೋದ್ ಯಾದವ್, ಐಜಿಪಿ ಅಲೋಕ್ ಮೋಹನ್, ಎಸ್ಪಿ ಡಾ. ಸುಬ್ರಹ್ಮಣ್ಯೇಶ್ವರ ರಾವ್, ಪೊಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್, ಮನಪಾ ಆಯುಕ್ತ ವಿಜಯಪ್ರಕಾಶ್ ಜಿ.ಪಂ. ಸಿಇಓ ಶಿವಶಂಕರ್ ಮುಂತಾದವರು ಹಾಜರಿದ್ದರು.

Tuesday, November 16, 2010

11,987 ತಾಯಂದಿರಿಗೆ ಮುಖ್ಯಮಂತ್ರಿಗಳಿಂದ ಬಾಂಡ್, ಸೀರೆ ವಿತರಣೆ

ಮಂಗಳೂರು ನವೆಂಬರ್16:ಮಹಿಳಾ ಸಬಲೀಕರಣಕ್ಕೆ ಪೂರಕವಾಗಿ ಹಮ್ಮಿಕೊಂಡಿರುವ ಕರ್ನಾಟಕ ಸರ್ಕಾರದ ಜನಪ್ರಿಯ ಭಾಗ್ಯಲಕ್ಷ್ಮಿ ಯೋಜನೆ ಇಡೀ ದೇಶದಲ್ಲೇ ಪ್ರಶಂಸೆಗೆ ಪಾತ್ರವಾಗಿದ್ದು, ಭಾಗ್ಯಲಕ್ಷ್ಮಿ ಯೋಜನೆ ಫಲಾನುಭವಿ ಮಕ್ಕಳ 11987 ತಾಯಂದಿರಿಗೆ ನವೆಂಬರ್ 17 ರಂದು ಪುತ್ತೂರಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮೈದಾನದಲ್ಲಿ ಕರ್ನಾಟಕ ರಾಜ್ಯದ ಮುಖ್ಯ ಮಂತ್ರಿಗಳಾದ ಸನ್ಮಾನ್ಯ ಬಿ.ಎಸ್.ಯಡಿಯೂರಪ್ಪ ಅವರು ವಿತರಿಸಲಿದ್ದಾರೆಂದು ಜೀವಿಶಾಸ್ತ್ರ,ಪರಿಸರ,ಬಂದರು ಮತ್ತು ಒಳನಾಡು,ಜಲಸಾರಿಗೆ ಹಾಗೂ ಮೀನುಗಾರಿಕೆ ಖಾತೆ ಹಾಗೂ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಪಾಲೇಮಾರ್ರವರು ಹೇಳಿದರು. ಅವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಏರ್ಪಡಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ನಾಳಿನ ಕಾರ್ಯಕ್ರಮದ ಕುರಿತು ಸಮಗ್ರ ಮಾಹಿತಿ ನೀಡಿದರು.
ದ.ಕ.ಜಿಲ್ಲೆಯಲ್ಲಿ 2010 ರ ಸೆಪ್ಟೆಂಬರ್ ಅಂತ್ಯದ ವರೆಗೆ 12983 ಹೆಣ್ಣು ಮಕ್ಕಳುಈ ಯೋಜನೆಯಡಿ ಸೇರ್ಪಡೆಗೊಂಡಿದ್ದು, 9138 ಮಕ್ಕಳಿಗೆ ಭಾಗ್ಯಲಕ್ಷ್ಮಿ ಬಾಂಡ್ ವಿತರಿಸಲಾಗಿದ್ದು,ಇಲ್ಲಿಯ ವರೆಗೆ ಇದಕ್ಕಾಗಿ 223.56 ಲಕ್ಷ ರೂ.ಗಳನ್ನು ಠೇವಣಿ ಇಡಲಾಗಿದೆ. ಇದಲ್ಲದೆ ಇನ್ನು 3845 ಮಕ್ಕಳಿಗೆ ಈ ಯೋಜನೆಯಲ್ಲಿ ಬಾಂಡ್ ವಿತರಿಸಲಾಗುವುದೆಂದು ಸಚಿವರು ತಿಳಿಸಿದರು. ಭಾಗ್ಯ ಲಕ್ಷ್ಮಿ ಯೋಜನೆ ಕಾರ್ಯಕ್ರಮಕ್ಕೆ ದ.ಕ.ಜಿಲ್ಲೆಯಾದ್ಯಂತ ಒಟ್ಟು 232 ಬಸ್ಸುಗಳ ಮೂಲಕ ಫಲಾನುಭವಿ ಮಕ್ಕಳು ಹಾಗೂ ತಾಯಂದಿರನ್ನು ಕರೆತರಲು ಅವಕಾಶ ಕಲ್ಪಿಸಲಾಗಿದ್ದು, ಕಾರ್ಯ ಕ್ರಮದಲ್ಲಿ ಸುಮಾರು 30 ಸಾವಿರಕ್ಕೂ ಹೆಚ್ಚು ಜನರು ಬರುವ ನಿರೀಕ್ಷೆ ಇದೆ ಎಂದು ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು. ಸ್ತ್ರೀಶಕ್ತಿ ಯೋಜನೆಯಡಿ ಮಹಿಳಾ ಗುಂಪುಗಳ ಸದಸ್ಯರು ಉತ್ಪಾದಿಸುವ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ ಜಿಲ್ಲಾ ಮಟ್ಟದಲ್ಲಿ ಮಾರುಕಟ್ಟೆ ಸಂಕೀರ್ಣ/ಮಳಿಗೆಯನ್ನು ರೂ.65 ಲಕ್ಷ ವೆಚ್ಚದಲ್ಲಿ ಮಂಗಳೂರಿನ ಬಿಜೈ ಸಮೀಪ ನಿರ್ಮಿಸಲಾಗುವುದು.ಇದಕ್ಕೆ ತಮ್ಮ ಶಾಸಕರ ನಿಧಿಯಿಂದ ರೂ.10 ಲಕ್ಷ ಅನುದಾನ ನೀಡುವುದಾಗಿ ಪತ್ರಿಕಾಗೋಷ್ಠಿಯಲ್ಲ್ಲಿ ಹಾಜರಿದ್ದ ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಯೋಗೀಶ್ ಭಟ್ ಅವರು ರೂ.5 ಲಕ್ಷ ಅನುದಾನ ನೀಡುವುದಾಗಿ ತಿಳಿಸಿದರು. ಮಂಗಳೂರು ನಗರದಲ್ಲಿ ಸಂಚಾರ ನಿಯಂತ್ರಣಕ್ಕೆ ಅನುವು ಆಗುವಂತೆ ಸಂಚಾರ ನಿಯಂತ್ರಣ ಸಾಧನೆಗಳನ್ನು ಅಳವಡಿಸಲು ಪೊಲೀಸ್ ಇಲಾಖೆಗೆ ರೂ.7 ಕೋಟಿ ಅನುದಾನ ಮಂಜೂರು ಮಾಡಲಾಗಿದ್ದು ಶೀಘ್ರದಲ್ಲೇ ನಗರದಲ್ಲಿ ಸುಗಮ ಸಂಚಾರಕ್ಕೆ ನಾಂದಿಯಾಗಲಿದೆಯೆಂದರು. ಇದರ ಜೊತೆಗೆ ಮಂಗಳೂರು ನಗರದ ರಸ್ತೆಗಳನ್ನು 7 ತಿಂಗಳೊಳಗಾಗಿ ಸುಸಜ್ಜಿತಗೊಳಿಸುವುದಾಗಿ ಸಚಿವರು ಈ ಸಂದರ್ಭದಲ್ಲಿ ತಿಳಿಸಿದರು.
ಸಚಿವರೊಂದಿಗೆ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

Monday, November 15, 2010

ಭೂಮಿ ಕಳಕೊಂಡವರ ಮಕ್ಕಳಿಗೆ ಕಡ್ಡಾಯ ಉದ್ಯೋಗ: ಜಿಲ್ಲಾಧಿಕಾರಿ ಸುಬೋಧ್ ಯಾದವ್

ಮಂಗಳೂರು,ನವೆಂಬರ್ 15: ಮಂಗಳೂರಿನ ಎಂಆರ್ ಪಿಎಲ್, ಒ ಎನ್ ಜಿಸಿ ಮತ್ತು ಒಎಂಪಿಎಲ್ (ONGC Mangalore Petrochemicals Ltd) ಗಳಿಗಾಗಿ ಭೂ ಸ್ವಾಧೀನ ಪಡಿಸಿಕೊಳ್ಳಲಾಗಿದ್ದು, ಭೂಮಿ ಕಳೆದುಕೊಂಡವರ ಮಕ್ಕಳಿಗೆ ಸೂಕ್ತವಾದ ತರಬೇತಿ ನೀಡಿ ಉದ್ಯೋಗ ದೊರಕಿಸುವುದು ಸಂಬಂಧಿಸಿದ ಕಂಪೆನಿಗಳ ಜವಾಬ್ದಾರಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹಾಗೂ ಪುರ್ನವಸತಿ ಸಮಿತಿ ಅಧ್ಯಕ್ಷರಾದ ಸುಭೋದ್ ಯಾದವ್ ಅವರು ತಿಳಿಸಿದ್ದಾರೆ.
ಅವರು ಇಂದು ತಮ್ಮ ಕಚೇರಿ ಯಲ್ಲಿ ಎಂಆರ್ ಪಿಎಲ್, ಒ ಎನ್ ಜಿಸಿ ಮತ್ತು ಒಎಂಪಿ ಎಲ್ ಗಳಿಗಾಗಿ ಭೂ ಸ್ವಾಧೀನ ದಿಂದ ನಿರ್ವಸಿ ತರಿ ಗಾಗಿ ತರಬೇತಿ ಹೊಂದಿದ ವರಿಗೆ ಉದ್ಯೋಗ ದೊರಕಿಸುವ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತ ನಾಡುತ್ತಿದ್ದರು. ಪುನರ್ ವಸತಿ ಪ್ಯಾಕೇಜ್ ಪ್ರಕಾರ ಯೋಜನಾ ಸಂತೃಸ್ತರಿಗೆ ತರಬೇತಿ ಸೌಲಭ್ಯ ಒದಗಿಸಬೇಕಿದ್ದು 18 ರಿಂದ 25 ವರ್ಷದೊಳಗಿನ ಯೋಜನಾ ಸಂತೃಸ್ತರ ಕುಟುಂಬದ ಇಚ್ಛೆಯುಳ್ಳ ಒಬ್ಬ ಸದಸ್ಯರಿಗೆ ಅವರು ಹೊಂದಿರುವ ವಿದ್ಯಾರ್ಹತೆಗೆ ಅನುಸಾರವಾಗಿ ಸೂಕ್ತ ಉದ್ಯಮ ಶೀಲ ಹಾಗೂ ಕೌಶಲ್ಯೀಕರಣ ತರಬೇತಿ ನೀಡತಕ್ಕದ್ದು. ಈ ನಿಟ್ಟಿನಲ್ಲಿ ಇಲ್ಲಿಯವರೆಗೆ 207 ಜನರಿಗೆ ಕರ್ನಾಟಕ ಪಾಲಿಟೆಕ್ನಿಕ್ನಲ್ಲಿ ತರಬೇತಿ ನೀಡಲಾಗಿದೆ. 2ನೇ ಹಂತದಲ್ಲಿ 211 ಜನರಿಗೆ ತರಬೇತಿ ನೀಡಬೇಕಿದೆ.ಮಂಗಳೂರು ವಿಶೇಷ ಆರ್ಥಿಕ ವಲಯ ನಿಯಮಿತದಲ್ಲಿ ಆದ್ಯತೆ ಮೇಲೆ ಹಾಗೂ ಖಾಲಿ ಹುದ್ದೆಗಳು ಲಭ್ಯ ವಿರುವುದಕ್ಕೆ ಬದ್ಧವಾಗಿ ಯೋಜನಾ ಸಂತೃಸ್ತರ ಕುಟುಂಬದ ಆಸಕ್ತ ಒಬ್ಬ ಸದಸ್ಯರಿಗೆ ಅವರು ಹೊಂದಿರುವ ಅರ್ಹ ವಿದ್ಯಾರ್ಹತೆ ಅನುಗುಣವಾಗಿ ಉದ್ಯೋಗವನ್ನು ನೀಡಲಾಗುವುದು. ಇದರಂತೆ ಯೋಜನಾ ವ್ಯಾಪ್ತಿಯ ತರಬೇತಿ ಹೊಂದಿದ ಸಂತೃಸ್ತರ ಕುಟುಂಬದ 85 ಜನರಿಗೆ ಉದ್ಯೋಗ ದೊರಕಿಸಲಾಗಿದೆಯೆಂದು ತಿಳಿಸಿದ ಜಿಲ್ಲಾಧಿಕಾರಿಗಳು, ಯೋಜನಾ ಪ್ರಾಧಿಕಾರವು ವಿಶೇಷ ಆರ್ಥಿಕ ವಲಯ ನಿಯಮಿತದ ಹೊರಗಡೆ ಸಹ ಯೋಜನಾ ಸಂತೃಸ್ತರಿಗೆ ಉದ್ಯೋಗಾವಕಾಶಗಳನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ನಡೆಸ ಬೇಕೆಂದರು. ಒಂದು ವೇಳೆ ಯೋಜನಾ ಸಂತೃಸ್ತರ ಕುಟುಂಬದ ಸದಸ್ಯರು ಮೇಲೆ ತಿಳಿಸಿದ ಯಾವುದೇ ಉದ್ಯೋಗಾವಕಾಶವನ್ನು ಪಡೆಯಲು ಇಚ್ಚಿಸದಿದ್ದಲ್ಲಿ ಅಂತಹವರಿಗೆ ಒಂದು ಬಾರಿ ಪರಿಹಾರವೆಂದು ಉದ್ಯೋಗಕ್ಕೆ ಬದಲಾಗಿ ರೂ.3.50 ಲಕ್ಷಗಳನ್ನು ಪಾವತಿಸಬೇಕೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಯೋಜನಾ ಸಂತೃಸ್ತ ವ್ಯಕ್ತಿಯು ಒಂದಕ್ಕಿಂತ ಹೆಚ್ಚು ಕಡೆ ಮನೆ ಮತ್ತು ಜಮೀನನ್ನು ಹೊಂದಿದ್ದು, ಅವನ ಹೆಸರು ಉದ್ಯೋಗಕ್ಕಾಗಿ ಹೆಚ್ಚು ಕಡೆ ಪಟ್ಟಿಯಲ್ಲಿ ಸೇರಿದ್ದಲ್ಲಿ ಆತನು ಕೇವಲ ಒಂದು ಉದ್ಯೋಗಾವಕಾಶ ಮತ್ತು ನಗದು ಪರಿಹಾರಕ್ಕೆ ಅರ್ಹನಾಗಿರುತ್ತಾನೆ.
ಉದ್ಯೋಗಾವಕಾಶಕ್ಕೆ ಅರ್ಹತೆಯು ನಿಗಧಿತ ದಿನಾಂಕದಂದು ಮುಖ್ಯ ಯೋಜನಾ ಸಂತೃಸ್ತ ಕುಟುಂಬದೊಂದಿಗೆ ಸಾಮಾನ್ಯವಾಗಿ ವಾಸಿಸುತ್ತಿರುವ ವಯಸ್ಕ ಮಗ/ಸೊಸೆ, ಮಗಳು/ಅಳಿಯ ಅಥವಾ ಹೆಣ್ಮಕ್ಕಳಿಗೆ ಮಾತ್ರ ಲಭ್ಯವಾಗುತ್ತದೆ ಎಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಒಂದು ವೇಳೆ ಯೋಜನಾ ಸಂತೃಸ್ತರು ಭೂಮಿ ನೀಡದಿದ್ದಲ್ಲಿ ಎಂಆರ್ ಪಿಎಲ್, ಒ ಎನ್ ಜಿಸಿ ಗಳು ಎಲ್ಲಿರುತ್ತಿದ್ದವು ಎಂದು ಪ್ರಶ್ನಿಸಿದ ಜಿಲ್ಲಾಧಿ ಕಾರಿಗಳು ಒ ಎನ್ ಜಿಸಿ ಮಾತೃ ಸಂಸ್ಥೆಯಾಗಿರುವುದರಿಂದ ಯೋಜನಾ ಸಂತೃಸ್ತ ಕುಟುಂಬದ ತರಬೇತಿ ಹೊಂದಿದ ಎಲ್ಲರಿಗೂ ಉದ್ಯೋಗಾ ವಕಾಶ ಕಲ್ಪಿಸುವ ಹೊಣೆ ಹೊರಬೇಕೆಂದರು. ಉದ್ಯೋಗಾವಕಾಶಗಳು ಯಾವಾಗಲಾದರೂ ಸೃಷ್ಠಿಯಾದರೂ ಸರಿ ನಿರ್ವಸಿತ ಯೋಜನಾ ಸಂತೃಸ್ತರಿಗೆ ಉದ್ಯೋಗ ದೊರಕಿಸುವ ಹೊಣೆ ಕಂಪೆನಿಗಳದ್ದು ಎಂದ ತಾಕೀತು ಮಾಡಿದರು. ಒ ಎನ್ ಜಿಸಿ ಕಂಪೆನಿ ಪರವಾಗಿ ಲಕ್ಷ್ಮಿ ಕುಮಾರನ್ ಸಭೆಯಲ್ಲಿ ಪಾಲ್ಗೊಂಡಿದ್ದರು.

Sunday, November 14, 2010

ಸದಭಿರುಚಿಯ ಚಲನಚಿತ್ರಗಳು ಗುಣಾತ್ಮಕ ಸಾಮಾಜಿಕ ಬದಲಾವಣೆಗೆ ನಾಂದಿ: ಜಿಲ್ಲಾಧಿಕಾರಿ ಸುಬೋಧ್ ಯಾದವ್

ಮಂಗಳೂರು,ನವೆಂಬರ್ 14: ಪ್ರಬಲ ಸಂವಹನ ಮಾಧ್ಯಮವಾಗಿರುವ ಚಲನಚಿತ್ರಗಳು ಮನರಂಜನೆಯನ್ನು ಮೀರಿದ ಸಂದೇಶಗಳು, ಚಿಂತನೆಗಳನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವುದರಿಂದ ಸಾಮಾಜಿಕ ಜೀವನದಲ್ಲಿ ಗುಣಾತ್ಮಕ ಬದಲಾವಣೆ ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಹೇಳಿದರು.ಅವರಿಂದು ನಗರದ ಡಾನ್ ಬೋಸ್ಕೊ ಸಭಾಂಗಣದಲ್ಲಿ ಕರ್ನಾಟಕ ಚಲನಚಿತ್ರ ಅಕಾಡಮಿ ಹಾಗು ಸ್ಥಳೀಯ ವಿವಿಧ ಸಂಘಟನೆಗಳ ಆಶ್ರಯದಲ್ಲಿ ಹಮ್ಮಿಕೊಂಡ ಅಂತರಾಷ್ಟ್ರೀಯ ಚಲನಚಿತ್ರೋತ್ಸವನ್ನು ಉದ್ಘಾಟಿಸಿ ಮಾತನಾಡಿದರು.
ಸದಭಿ ರುಚಿಯ ಚಲನಚಿತ್ರ ವೀಕ್ಷಿಸುವ ಅಭಿರು ಚಿಯನ್ನು ಜನರಲ್ಲಿ ಬೆಳೆಸು ವಲ್ಲಿ ಕರ್ನಾಟಕ ಚಲನ ಚಿತ್ರ ಅಕಾಡೆಮಿ ಅಂತ ರಾಷ್ಟ್ರೀಯ ಚಲನ ಚಿತ್ರೋ ತ್ಸವ ಕಾರ್ಯ ಕ್ರಮ ಹಮ್ಮಿ ಕೊಂಡಿ ರುವುದು ಸ್ವಾಗ ತಾರ್ಹ. ಸಿನಮಾ ಮಾಧ್ಯಮ ಇಂದು ಕೇವಲ ಮನೋ ರಂಜನೆ ಗಾಗಿ ಮಾತ್ರ ಸೀಮಿತ ವಾಗಿಲ್ಲ.ನಮ್ಮಲ್ಲಿ ಚಲನಚಿತ್ರ ಮಾಧ್ಯಮ ವಿವಿಧ ಹಂತ ಗಳಲ್ಲಿ ತನ್ನ ಪ್ರಭಾವ ವನ್ನು ಬೀರು ತ್ತದೆ.ಸದ ಭಿರು ಚಿಯ ಚಲನ ಚಿತ್ರ ಗಳು ಆರೋಗ್ಯ ಕರ ಸಂಸ್ಕೃತಿ ಯ ಬಗ್ಗೆ ಜನರ ನ್ನು ಚಿಂತಿ ಸುವಂತೆ ಮಾಡು ತ್ತದೆ. ಈ ನಿಟ್ಟಿನಲ್ಲಿ ಸದಭಿ ರುಚಿಯ ಚಲನ ಚಿತ್ರಗಳು ಜನ ಸಾಮಾನ್ಯ ರನ್ನು ತಲುಪು ವಂತಾ ಗಲಿ ಎಂದರು.ಸಮಾ ರಂಭ ದಲ್ಲಿ ಮುಖ್ಯ ಅತಿಥಿ ಯಾಗಿ ಭಾಗ ವಹಿಸಿ ಮಾತ ನಾಡಿದ ರಾಷ್ಟ್ರ ಪ್ರಶಸ್ತಿ ವಿಜೇತ, ಯುವ ಚಲನ ಚಿತ್ರ ನಿರ್ದೇಶಕ ಅಭಯ ಸಿಂಹ ಸು ಶಿಕ್ಷಿತ ಸಿನಮಾ ಪ್ರೇಕ್ಷ ಕರು ಸಿನಮಾ ರಂಗ ವನ್ನು ಬೆಳೆಸು ವಲ್ಲಿ ಪ್ರಮುಖ ಪಾತ್ರ ವಹಿಸು ತ್ತಾರೆ. ಪ್ರಜ್ಞಾ ವಂತ ಪ್ರೇಕ್ಷಕ ರು ಒಳ್ಳೆಯ ಚಿತ್ರ ಗಳನ್ನು ಸದಾ ಪ್ರೋತ್ಸಾ ಹಿಸು ತ್ತಾರೆ. ಈ ರೀತಿಯ ಪ್ರೇಕ್ಷಕ ವರ್ಗ ಬೆಳೆಯ ಬೇಕಾಗಿದೆ. ಮುಂದಿನ ದಿನಗಳಲ್ಲಿ ಇಂತಹ ಸದಭಿರುಚಿಯ ಚಲನ ಚಿತ್ರಗಳು ಹೆಚ್ಚಿನ ಸಂಖ್ಯೆಯಲ್ಲಿ ಮೂಡಿಬರಲಿ ಎಂದು ಹಾರೈಸಿದರು.
ಕ್ಯಾಂಪಸ್ ಫಿಲಂ ಸೊಸೈಟಿ :ಶಾಲಾ ಕಾಲೇಜುಗಳಲ್ಲಿ ಸಿನಮಾ ರಸ ಗ್ರಹಣ ಶಿಬಿರ ಏರ್ಪಡಿಸುವುದರೊಂದಿಗೆ ಕಾಲೇಜುಗಳಲ್ಲಿ ಕ್ಯಾಂಪಸ್ ಫಿಲಂ ಸೊಸೈಟಿಗಳನ್ನು ಮತ್ತು ಪ್ರಮುಖ ಜಿಲ್ಲಾ ಕೇಂದ್ರಗಳಲ್ಲಿ ಹೊಸ ಚಲನಚಿತ್ರ ಸೊಸೈಟಿಗಳನ್ನು ಸ್ಥಾಪಿಸಲು ಚಲನಚಿತ್ರ ಅಕಾಡೆಮಿ ಪ್ರೋತ್ಸಾಹ ನೀಡುತ್ತದೆ ಎಂದು ಅಂತರಾಷ್ಟ್ರೀಯ ಚಲನಚಿತ್ರೋತ್ಸವ ರಾಜ್ಯ ಸಮಿತಿಯ ಸದಸ್ಯ ಎಂ.ಎಸ್. ಗುಣಶೀಲನ್ ತಿಳಿಸಿದರು. ಸಂಘಟಕ ಸಮಿತಿಯ ಪದಾಧಿಕಾರಿಗಳಾದ ಐವನ್ ಡಿಸಿಲ್ವ, ನಿತ್ಯಾನಂದ ಶೆಟ್ಟಿ, ಪ್ರಕಾಶ್ ಶೆಣೈ,ನಂದಾ ಪಾಯಿಸ್ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಡಾ. ದಿನೇಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಡಾ. ಶಿವಪ್ರಕಾಶ್ ವಂದಿಸಿದರು.
....

Saturday, November 13, 2010

ಗ್ರಾ.ಪಂ. ಜನಪ್ರತಿನಿಧಿಗಳಿಗೆ ಕಾನೂನು ಅರಿವು ಕಾರ್ಯಾಗಾರ

ಮಂಗಳೂರು, ನ.13: ಹುಟ್ಟಿನಿಂದ ಸಾಯುವವರೆಗೆ ಕಾನೂನಿನ ಪರಿಮಿತಿಯಲ್ಲೇ ಬಾಳುವ ನಾವು ಕಾನೂನಿನ ಬಗ್ಗೆ ತಿಳಿಯಬೇಕಾದ ಅಗತ್ಯವನ್ನು ಕರ್ನಾಟಕ ಉಚ್ಛ ನ್ಯಾಯಾಲಯದ ನ್ಯಾಯಾಧೀಶ ಎಚ್.ಎನ್. ನಾಗಮೋಹನದಾಸ್ ವಿವರಿಸಿದರು. ಸ್ವಾತಂತ್ರ ಕಳೆದು 55 ವರ್ಷಗಳ ಬಳಿಕ ನಮ್ಮ ಗ್ರಾಮಗಳಲ್ಲಿ ಇಂದು ಆರ್ಥಿಕ, ನೈತಿಕ ಹಾಗೂ ಸಾಂಸ್ಕೃತಿಕ ದಿವಾಳಿತನ ಬಹುವಾಗಿ ಕಾಡುತ್ತಿದ್ದು, ಈ ಬಗ್ಗೆ ಗಂಭೀರ ಚಿಂತನೆ ನಡೆಸದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಗಂಭೀರ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ನಗರದ ಪುರ ಭವನದಲ್ಲಿ ಇಂದು ದ.ಕ. ಜಿಲ್ಲಾ ಪಂಚಾ ಯತ್ ಮತ್ತು ದ.ಕ. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿ ಕಾರದ ಆಶ್ರಯದಲ್ಲಿ ಮಂಗಳೂರು ತಾಲೂಕಿನ ಎಲ್ಲಾ ಚುನಾ ಯಿತ ಗ್ರಾಮ ಪಂಚಾ ಯತ್ ಜನ ಪ್ರತಿ ನಿಧಿ ಗಳಿಗೆ ಆಯೋಜಿ ಸಲಾದ ಕಾನೂನು ಅರಿವು ಕಾರ್ಯಾ ಗಾರವನ್ನು ಉದ್ಘಾಟಿಸಿ ಅವರು ಮಾತ ನಾಡಿದರು.ಭಯೋ ತ್ಪಾದನೆ, ಕೋಮು ವಾದ, ಭ್ರಷ್ಟಾಚಾರ, ವ್ಯಾಪಾ ರೀಕರಣ ಮೊದ ಲಾದ ಸಮಸ್ಯೆ ಗಳನ್ನಿಂದು ನಾವು ಎದುರಿ ಸುತ್ತಿದ್ದು, ವ್ಯವಸ್ಥೆಯ ಅಡಿ ಪಾಯ ವಾದ ಗ್ರಾಮ ಪಂಚಾ ಯತ್ ನ ವ್ಯವಸ್ಥೆಯು ಈ ಸಮಸ್ಯೆಯ ಸುಳಿಗೆ ಸಿಲುಕಿದೆ. ಪ್ರತಿಯೊಬ್ಬ ಜನ ಪ್ರತಿ ನಿಧಿಗೂ ಜನರು ನಮ್ಮನ್ನು ಗಮನಿ ಸುತ್ತಿದ್ದಾ ರೆಂಬ ಪರಿ ಜ್ಞಾನ ಹೊಂದಿ ರಬೇಕು.ಈ ಬಗ್ಗೆ ಗ್ರಾಮ ಪಂಚಾ ಯತ್ ನ ಚುನಾ ಯಿತ ಪ್ರತಿ ನಿಧಿಗಳು ಪಕ್ಷ ಬೇಧ ಮರೆತು ಭ್ರಷ್ಟಾ ಚಾರ ಮುಕ್ತ ಹಾಗೂ ಪಾರ ದರ್ಶಕ ವಾಗಿ ಗ್ರಾಮ ಸೇವೆ ಮಾಡಿ ದಾಗ ಮಾತ್ರವೇ ಸಶಕ್ತ ಸಮಾಜ ನಿರ್ಮಾಣ ಸಾಧ್ಯ; ವಿನಾ ಶವನ್ನು ತಡೆಯಲು ಸಾಧ್ಯ ಎಂದು ಜನ ಪ್ರತಿ ನಿಧಿ ಗಳಿಗೆ ಕಿವಿಮಾತು ಹೇಳಿದರು.ಕೇವಲ ವಿದ್ಯಾ ವಂತ ರಾದರೆ ಸಾಲದು ಅದರ ಜೊತೆಗೆ ಕಾನೂನಿನ ಅರಿವು ಅತ್ಯಗತ್ಯ ಎಂದು ಹೇಳಿದ ಅವರು, ಪ್ರತಿಯೊಬ್ಬ ಮನುಷ್ಯನ ಪ್ರತಿಯೊಂದು ಚಟು ವಟಿಕೆ ಗಳನ್ನು ಕಾನೂನು ಯಾವ ರೀತಿ ನಿಯಂತ್ರಿಸುತ್ತದೆ ಎಂಬುದನ್ನು ಅವರು ಉದಾಹರಣೆಯ ಸಹಿತ ವಿಶ್ಲೇಷಿಸಿದರು.
2500 ಲೆಕ್ಕ ಸಹಾಯಕರ ನೇಮಕ:
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ರಾಜ್ಯ ಸರಕಾರದ ಕಾರ್ಯದರ್ಶಿ ಜಿ.ಎಸ್. ನಾರಾಯಣ ಸ್ವಾಮಿ ಮಾತನಾಡಿ, ಗ್ರಾಮ ಪಂಚಾಯತ್ ಗಳ ಆಡಳಿತವನ್ನು ಆರ್ಥಿವಾಗಿ ಸದೃಡಗೊಳಿಸುವ ನಿಟ್ಟಿನಲ್ಲಿ ಕಳೆದ ವರ್ಷ 2500 ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗಳನ್ನು ನೇಮಕ ಮಾಡಲಾಗಿದೆ. ಮತ್ತೆ 1400 ಪಿಡಿಒಗಳ ಬೇಡಿಕೆ ಇದೆ. ಇದರೊಂದಿಗೆ ಈ ವ್ಯವಸ್ಥೆಗೆ ಬಲ ತುಂಬಲು 2500 ಮಂದಿ ಲೆಕ್ಕ ಸಹಾಯಕರನ್ನು ಗ್ರಾಮ ಪಂಚಾಯತ್ ಗಳಿಗೆ ನೇಮಕಾತಿ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.
`ಮಾಹಿತಿ ಹಕ್ಕು ಕಾಯ್ದೆ-ಪ್ರಜೆಗಳೇ ಪ್ರಭುಗಳು' 2005ರ ಅಕ್ಟೋಬರ್ 12ರಂದು ಜಾರಿಗೆ ಬಂದ ಮಾಹಿತಿ ಹಕ್ಕು ಕಾಯ್ದೆ ಈ ಶತಮಾನದ ಜಾರಿಗೆ ಬಂದ ಕ್ರಾಂತಿಕಾರಕ ಮಸೂದೆ ಎಂದು ಮಾಹಿತಿ ಹಕ್ಕು ಕಾಯ್ದೆಯ ಉಪಯೋಗಗಳು, ಅದರಿಂದ ಸಮಾಜ ದಲ್ಲಿ ಆಗಿರುವ ಮಹತ್ತರ ಬದಲಾ ವಣೆ ಗಳ ಕುರಿತು ರಾಜ್ಯ ಮಾಹಿತಿ ಆಯುಕ್ತ ಡಾ.ಎಚ್.ಎನ್. ಕೃಷ್ಣ ವಿಶ್ಲೇಷಿ ಸಿದರು. 1947 ರಲ್ಲಿ ದೇಶಕ್ಕೆ ಸ್ವಾತಂತ್ರ ದೊರಕಿ ದ್ದರೂ ನಿಜವಾಗಿ ಜನ ಸಾಮಾ ನ್ಯರಿಗೆ ಸ್ವಾ ತಂತ್ರ ದೊರ ಕಿದ್ದು, ಈ ಕಾಯ್ದೆ ಜಾರಿಗೆ ಬಂದ ಬಳಿಕ ಎಂದು ಹೇಳಿದ ಅವರು, ಅಲ್ಲಿಯ ವರೆಗೆ ಪ್ರಜಾ ತಂತ್ರ ದಲ್ಲಿ ರಾಜ ಕಾರಣಿ ಗಳು, ಅಧಿಕಾರ ವರ್ಗದ್ದೇ ದರ್ಬಾರಿ ನಿಂದಾಗಿ ಜನ ಸಾಮಾ ನ್ಯ ಉಪ ಸ್ಥಿತರಿದ್ದ ಗ್ರಾಮ ಪಂಚಾ ಯತ್ ಜನಪ್ರತಿ ನಿಧಿಗಳ ಪ್ರಶ್ನೆ ಗಳಿಗೆ ಅವರು ಉತ್ತರಿಸಿದರು.ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ ಮಾತ ನಾಡಿ, ತಾಲೂಕು ಪಂಚಾಯತ್, ಜಿಲ್ಲಾ ಪಂಚಾ ಯತ್ ಹಾಗೂ ಗ್ರಾಮ ಪಂಚಾಯತ್ ಗಳಿಗೆ ಆರ್ಥಿಕವಾಗಿ ಶಕ್ತಿ ನೀಡ ಬೇಕೆಂದು ಆಗ್ರಹಿಸಿದರು.ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಸುಬೋದ್ ಯಾದವ್, ಮನಪಾ ಆಯುಕ್ತ ಡಾ. ಕೆ.ಎನ್. ವಿಜಯ ಪ್ರಕಾಶ್, ಮೂಡಬಿದ್ರೆ ವಕೀಲರ ಸಂಘದ ಅಧ್ಯಕ್ಷ ಎಂ.ಎಸ್. ಕೋಟ್ಯಾನ್, ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಎಸ್.ಪಿ. ಚೆಂಗಪ್ಪ ಉಪಸ್ಥಿತರಿದ್ದರು. ಜಿಲ್ಲಾ ಮತ್ತು ಪ್ರಧಾನ ಸತ್ರ ನ್ಯಾಯಾಧೀಶ ಎಚ್.ಆರ್. ದೇಶಪಾಂಡೆ ಸ್ವಾಗತಿಸಿದರು. ಇದೇ ವೇಳೆ, ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ರವರ `ಗ್ರಾಮ ರಾಜ್ಯ' ಮಹಾತ್ಮ ಗಾಂಧೀಜಿಯವರ ಕಲ್ಪನೆ ಎಂಬ ಪುಸ್ತಕವನ್ನು ಜಿ.ಎಸ್.ನಾರಾಯಣ ಸ್ವಾಮಿ ಬಿಡುಗಡೆಗೊಳಿಸಿದರು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿವಶಂಕರ್ ವಂದಿಸಿದರು.

ಅನಧಿಕೃತ ಕಟೌಟ್,ಬ್ಯಾನರ್ ತೆರವು ಕಾರ್ಯಾಚರಣೆ

ಮಂಗಳೂರು,ನವೆಂಬರ್ 13: ನಗರದ ವಿವಿಧ ಭಾಗಗಳಲ್ಲಿ ಅನಧಿಕೃತವಾಗಿ ಹಾಕಲಾಗಿದ್ದ ಬ್ಯಾನರ್,ಕಟೌಟುಗಳನ್ನು
ತೆರವು ಗೊಳಿಸುವ ಕಾರ್ಯ ಚರಣೆಯನ್ನು ಮಂಗಳೂರು ಮಹಾ ನಗರ ಪಾಲಿಕೆ ಶುಕ್ರ ವಾರ ಆರಂಭಿ ಸಿತು.ಪಾಲಿಕೆ ಆಯುಕ್ತ ರಾದ ಡಾ.ವಿಜಯ ಪ್ರಕಾಶ್ ಸ್ವತ ತರವು ಕಾರ್ಯ ಚರಣೆಯ ನೇತ್ರತ್ವ ವಹಿ ಸಿದ್ದು, ಇದ ಕ್ಕಾಗಿ ಕಂದಾಯ ಅಧಿಕಾರಿ ಪ್ರವೀಣ್ ಕರ್ಕೇರಾ ನೇತ್ರತ್ವ ದಲ್ಲಿ ವಿಶೇಷ ತಂಡವನ್ನು ರಚಿಸ ಲಾಗಿದೆ.ಈ ಕಾರ್ಯಾಚರಣೆ ಕೆಲವು ದಿನಗಳ ವರೆಗೆ ಮುಂದು ವರೆಯಲಿದೆ.

Friday, November 12, 2010

ಪರವಾನಿಗೆ ಇಲ್ಲದೆ ಉದ್ಯಮ ನಡೆಸಲು ಮಹಾನಗರಪಾಲಿಕೆಯಲ್ಲಿ ಅವಕಾಶವಿಲ್ಲ: ಜಿಲ್ಲಾಧಿಕಾರಿ

ಮಂಗಳೂರು, ನವೆಂಬರ್ 12: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಉದ್ದಿಮೆ ಪರವಾನಿಗೆ ಇಲ್ಲದೆ ವ್ಯಾಪಾರ ವ್ಯವಹಾರ ನಡೆಸಲು ಯಾರಿಗೂ ಅವಕಾಶವಿಲ್ಲ; ಈ ಬಗ್ಗೆ ಪಾಲಿಕೆ ಆಡಳಿತಾಧಿಕಾರಿಗಳು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು ಎಚ್ಚರಿಕೆ ನೀಡಿದ್ದಾರೆ.

ಇಂದು ಅಪರಾಹ್ನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕರೆದ ಮಹಾನಗರಪಾಲಿಕೆ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಮಹಾನಗರಪಾಲಿಕೆ ಅಭಿವೃದ್ಧಿ ಪರಿಶೀಲಿಸುತ್ತಿದ್ದರು. ಪರವಾನಿಗೆ ಇಲ್ಲದೆ ಉದ್ಯಮ ನಡೆಸುತ್ತಿರುವ ಬಗ್ಗೆ, ಪರವಾನಿಗೆ ಅರ್ಜಿ ಸಲ್ಲಿಸಿ ಕಾಯುತ್ತಿರುವ ವರದಿಯನ್ನು ಪರಿಶೀಲಿಸಿ ಮಾತನಾಡಿದ ಅವರು, ಹಂತ ಹಂತವಾಗಿ ವ್ಯವಸ್ಥೆಯನ್ನು ಉತ್ತಮ ಪಡಿಸುವ ಬಗ್ಗೆ ಅಧಿಕಾರಿಗಳಿಗೆ ಕನಿಷ್ಠ ಬದ್ದತೆ ಬೇಕು. ಇಲ್ಲದಿದ್ದರೆ ವ್ಯವಸ್ಥೆ ಕುಸಿಯಲಿದೆ ಎಂದರು. ಲೈಸನ್ಸ್ ವ್ಯವಸ್ಥೆ ಬಗ್ಗೆ ಆತ್ಮ ಮಂಥನ ಮಾಡಿ ಏನು ಕ್ರಮ ಕೈ ಗೊಳ್ಳ ಬಹುದೆಂಬ ಬಗ್ಗೆ ತಕ್ಷಣವೇ ಹೇಳಿ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು. ಇಂತಹ ಬೇಜವಾಬ್ದಾರಿ ವರ್ತನೆಯನ್ನು ಸಹಿಸುವುದಿಲ್ಲ ಎಂದ ಜಿಲ್ಲಾಧಿಕಾರಿಗಳು, ವ್ಯವಸ್ಥೆಯಲ್ಲಿ ಸುಧಾರಣೆ ತರಲು ಒಂದು ತಿಂಗಳು ಕಾಲಾವಕಾಶ ನೀಡಿದರು. ಸಭೆಯಲ್ಲಿ ಪಾಲಿಕೆ ಆಯುಕ್ತರಾದ ಡಾ. ಕೆ. ಎನ್. ವಿಜಯಪ್ರಕಾಶ್, ಮೂಡಾ ಆಯುಕ್ತ ಮಧುಕರ ಗಡ್ಕರ್, ಕಂದಾಯ ಅಧಿಕಾರಿ ಮೇಘನಾ ಸೇರಿದಂತೆ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.

ನೀರು ಕಳ್ಳತನಕ್ಕೆ ಕಾದಿದೆ ತಕ್ಕ ಶಿಕ್ಷೆ

ಮಂಗಳೂರು, ನವೆಂಬರ್,12 : ಮಹಾನಗರಪಾಲಿಕೆ ವಿತರಿಸುತ್ತಿರುವ ನೀರಿಗೆ ಮೀಟರ್ ಅಳವಡಿಸಿ ಬಿಲ್ ಪಾವತಿಸುವುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದ್ದು, ನೀರಿನ ಕರ ಪಾವತಿಸದಿದ್ದರೆ ಪಾಲಿಕೆಗೆ ಆದಾಯ ಸೋರಿಕೆ ಹಾಗೂ ಅಭಿವೃದ್ಧಿಗೆ ತೊಂದರೆ ಯಾಗಲಿದೆ ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಹೇಳಿದರು.

ಮಹಾ ನಗರಪಾಲಿಕೆ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತ ನಾಡಿದ ಅವರು, ಅಕ್ರಮ ನೀರಿನ ಸಂಪರ್ಕ ಗಳನ್ನು ಕಿತ್ತೆಸೆಯಲು ಸಮಯ ನಿಗದಿ ಮಾಡಿದ ರಲ್ಲದೆ, ಕಡು ಬಡವರಿಗೆ ಮಹಾ ನಗರಪಾಲಿಕೆ ವತಿಯಿಂದಲೇ ಮೀಟರ್ ಅಳವಡಿಸುವ ವ್ಯವಸ್ಥೆ ಮಾಡಬೇಕು. ಬಡವರ ಹೆಸರಿನಲ್ಲಿ ಅಪಾರ ಪ್ರಮಾಣದಲ್ಲಿ ನೀರು ಪೋಲಾಗುವುದನ್ನು ಇದರಿಂದ ತಪ್ಪಿಸಲು ಸಾಧ್ಯ. ಮೀಟರ್ ಅಳವಡಿಕೆಯಿಂದ ಪಾಲಿಕೆಗೆ ನಷ್ಟವಿಲ್ಲ; ಲಾಭವೇ ಆಗಲಿದೆ ಎಂದರು. ಅಧಿಕಾರಿಗಳಿಗೆ ಈ ಬಗ್ಗೆ ಇರುವ ದೂರದೃಷ್ಟಿ ಹಾಗೂ ಕ್ರಿಯಾಯೋಜನೆಯ ಬಗ್ಗೆ ಮಾಹಿತಿ ನೀಡಿ ಎಂದು ಅಧಿಕಾರಿಯನ್ನು ಕೇಳಿದರು.
ಜಲಭಾಗ್ಯ ಯೋಜನೆಯಡಿ ಬಡವರಿಗೆ ನೀರು ಸಂಪರ್ಕ ನೀಡಲು ಅವಕಾಶವಿದೆ. ಈ ಅವಕಾಶವನ್ನು ಪಾಲಿಕೆ ಸದುಪಯೋಗ ಪಡಿಸಿ ಅಕ್ರಮ ನೀರು ಸಂಪರ್ಕ ಪಡೆದಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ ಎಂದರಲ್ಲದೆ ನಗರದಲ್ಲಿ ನೀರು ಸರಬರಾಜು ವ್ಯವಸ್ಥೆ ಬಗ್ಗೆ, ತುಂಬೆಯಿಂದ ನೀರು ಸರಬರಾಜುಗೊಂಡು 3 ಹಂತದಲ್ಲಿ ಶುದ್ಧೀಕರಣಗೊಳ್ಳುತ್ತಿರುವ ಬಗ್ಗೆ ಮಾಹಿತಿ ಪಡೆದರು.
ಸಭೆಯಲ್ಲಿ ಪಾಲಿಕೆ ಆಯುಕ್ತರಾದ ಡಾ. ಕೆ. ಎನ್. ವಿಜಯಪ್ರಕಾಶ್ ಅವರನ್ನೊಳಗೊಂಡಂತೆ ಪಾಲಿಕೆಯ ವಿವಿಧ ವಿಭಾಗಗಳ ಎಲ್ಲ ಅಧಿಕಾರಿಗಳು ಉಪಸ್ಥಿತರಿದ್ದರು.

Thursday, November 11, 2010

' ಲೇಪಾಕ್ಷಿ ' ಕರ ಕುಶಲ ಮೇಳ ಉದ್ಘಾಟನೆ

ಮಂಗಳೂರು,ನವೆಂಬರ್,11:ಆಂಧ್ರ ಪ್ರದೇಶ ಸರ್ಕಾರಿ ಸೌಮ್ಯದ ಕರಕುಶಲ ಅಭಿವೃದ್ಧಿ ನಿಗಮದ ಆಶ್ರಯದಲ್ಲಿ
ಮಂಗಳೂರಿನಲ್ಲಿ ಆಯೋಜಿ ಸಲಾಗಿದ್ದ 10 ದಿನಗಳ ಕರ ಕುಶಲ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳ ' ಲೇಪಾಕ್ಷಿ' ಯನ್ನು ಮಂಗಳೂರು ಮಹಾ ನಗರ ಪಾಲಿಕೆಯ ಮೇಯರ್ ರಜನಿ ದುಗ್ಗಣ್ಣ ಅವರು ಗುರುವಾರ ಉದ್ಘಾಟಿಸಿದರು.ಕರ ಕುಶಲ ಅಭಿವೃದ್ದಿ ನಿಗಮದ ಅಧಿಕಾರಿಗಳಾದ ಜಾಕೋಬ್ ಡಿ'ಸೋಜ,ಲೇಪಾಕ್ಷಿ ಎಂಪೋರಿಯಂ ನ ಮೆನೆಜರ್ ಸುಬ್ಬಣ್ಣ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.10 ದಿನಗಳ ಕಾಲ ನಗರದ ಹೋಟೇಲ್ ವುಡ್ ಲ್ಯಾಂಡಿನಲ್ಲಿ ನಡೆಯುವ ಈ ಮೇಳದಲ್ಲಿ ಸುಮಾರು 35 ಜನ ಕರಕುಶಲ ಕರ್ಮಿಗಳು ಪಾಲ್ಗೊಳ್ಳುತ್ತಿದ್ದಾರೆ.

ಪ್ರಾಕೃತಿಕ ವಿಕೋಪ, ಶಾಸಕ, ಸಂಸದರ ಪ್ರದೇಶಾಭಿವೃದ್ಧಿ ನಿಧಿ ಬಳಕೆಗೆ ಕಾಲಮಿತಿ ನಿಗದಿ

ಮಂಗಳೂರು, ನವೆಂಬರ್ 11: 2006-08ರ ಸಾಲಿನ ಪ್ರಾಕೃತಿಕ ವಿಕೋಪ, ಶಾಸಕ, ಸಂಸದರ ಪ್ರದೇಶಾಭಿವೃದ್ಧಿ ನಿಧಿ ಬಳಕೆಗೆ ಡಿಸೆಂಬರ್ 31 2010 ಅಂತಿಮ ದಿನವೆಂದು ನಿಗದಿಪಡಿಸಿದ್ದು, ಈ ಸಾಲಿನ ಕಾಮಗಾರಿಗಳ ಬಗ್ಗೆ ಮತ್ತೆ ಪ್ರಸ್ತಾಪವೇ ಸಲ್ಲದು ಎಂದು ಜಿಲ್ಲಾಧಿಕಾರಿ ಸುಬೋಧ್ ಯಾದವ್ ಸ್ಪಷ್ಟಪಡಿಸಿದರು.

ಅವರಿಂದು ಜಿಲ್ಲಾಧಿ ಕಾರಿಗಳ ಕೋರ್ಟ್ ಹಾಲ್ ನಲ್ಲಿ ಪ್ರಾಕೃತಿಕ ವಿಕೋಪ ನಿಧಿ, ಶಾಸಕರ ಹಾಗೂ ಸಂಸದರ ಪ್ರದೇಶಾಭಿವೃದ್ಧಿ ನಿಧಿಯ ಅನುಷ್ಠಾನಕ್ಕೆ ಸಂಬಂಧಿ ಸಿದಂತೆ ಕರೆದ ವಿವಿಧ ಇಲಾಖಾ ಧಿಕಾರಿಗಳ ಸಭೆಯಲ್ಲಿ ಎಲ್ಲ ಕಾಮಗಾರಿ ಗಳನ್ನು ಸಮಯ ಮಿತಿಯಡಿ ಮುಗಿಸಲು ಸಂಬಂಧ ಪಟ್ಟ ಇಲಾಖಾ ಧಿಕಾರಿಗಳಿಗೆ ಸೂಚನೆ ನೀಡಿದರು. 2009-10ನೇ ಸಾಲಿನ ಕಾಮಗಾರಿ ಮುಗಿಸಲು 2011 ಜನವರಿ 31ರವರೆಗೆ ಕಾಲಾವಕಾಶ ನೀಡಲಾಗಿದ್ದು, ಸಭೆಯಲ್ಲಿ ಸಕಾರಣ ನೀಡಿದ ಕೆಲವು ಕಾಮಗಾರಿಗಳಿಗೆ ಮಾತ್ರ ವಿಸ್ತರಣೆಗೆ ಅವಕಾಶ ನೀಡಲಾಯಿತು.
ಪ್ರಾಕೃತಿಕ ವಿಕೋಪ ಕಾಮಗಾರಿ ತುರ್ತಾಗಿ ನಡೆಯಬೇಕಾಗಿದ್ದ ಕಾಮಗಾರಿಯಾಗಿದ್ದು, ಈ ಕಾಮಗಾರಿಗಳ ಅನುಷ್ಠಾನಕ್ಕೆ ವರ್ಷಾನುಗಟ್ಟಲೆ ಸಮಯ ವ್ಯಯಿಸಿದರೆ ಯೋಜನೆ ಉದ್ದೇಶವೇ ನಿರರ್ಥಕವೆಂಬುದನ್ನು ವಿವರಿಸಿದ ಜಿಲ್ಲಾಧಿಕಾರಿಗಳು, ಕಾಲಮಿತಿಯೊಳಗೆ ಜನರಿಗೆ ಅನುಕೂಲವಾಗುವಂತೆ ಕೆಲಸಗಳನ್ನು ಮಾಡಿ; ಯೋಜನೆಗಳನ್ನು ರೂಪಿಸಲು ಬೇಡಿಕೆ ಸಲ್ಲಿಸುವಾಗಲೇ ಸಂಬಂಧಪಟ್ವವರಿಗೆ ಯೋಜನೆ, ಕಾಮಗಾರಿಗಳ ಬಗ್ಗೆ ಸ್ಪಷ್ಟ ಮಾರ್ಗದರ್ಶನ ನೀಡಲು ಅಧಿಕಾರಿಗಳಲ್ಲಿ ಹಿಂಜರಿಕೆ ಬೇಡ. ಇದರಿಂದ ಯೋಜನೆಯ ಅನುಷ್ಠಾನದಲ್ಲಿ ಅಸಮರ್ಪಕತೆ ನಿವಾರಣೆ ಸಾಧ್ಯ ಎಂದು ಜಿಲ್ಲಾಧಿಕಾರಿಗಳು ಹೇಳಿದರು.ಕ್ರಮವಾಗಿ ಜಿಲ್ಲಾ ಪಂಚಾಯತ್, ಲೋಕೋಪಯೋಗಿ ಇಲಾಖೆ, ನಿರ್ಮಿತಿ ಹಾಗೂ ಮಹಾನಗರಪಾಲಿಕೆ ಕಾಮಗಾರಿಗಳ ವಿವರವನ್ನು 2005-06ರಿಂದ 09-10 ರವರೆಗೆ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ಹಲವು ಸಂದರ್ಭಗಳಲ್ಲಿ ಜಿಲ್ಲಾ ಮಟ್ಟ ಮತ್ತು ತಾಲೂಕು ಮಟ್ಟದಲ್ಲಿ ಅಭಿವೃದ್ಧಿ ಕಾಮಗಾರಿಗಳ ಸಂಖ್ಯೆಯಲ್ಲಿ ವ್ಯತ್ಯಾಸ ಇರುವ ಬಗ್ಗೆ ಎಚ್ಚರಿಕೆ ನೀಡಿದರು. ಶಾಸಕರ ಅನುದಾನ ತಾಲೂಕುವಾರು ಪರಿಶೀಲಿಸಿದ ಜಿಲ್ಲಾಧಿಕಾರಿಗಳು ವ್ಯವಸ್ಥಿತವಾಗಿ ಎಲ್ಲ ಕಾಮಗಾರಿಗಳನ್ನು ಸಂಪೂರ್ಣಗೊಳಿಸಿ ವರದಿ ಸಲ್ಲಿಸಲು ಸೂಚನೆ ನೀಡಿದರು. ಯಾವುದೇ ಕಾರಣಕ್ಕೂ ಕೆಲಸ ಅಪೂರ್ಣ, ಪ್ರಗತಿಯಲ್ಲಿದೆ ಎಂಬುದನ್ನು ತೋರಿಸದೆ, ಪೂರ್ಣಗೊಂಡಿದೆ, ಸಕಾರಣದಿಂದ ಕೈಬಿಟ್ಟಿದೆ ಎಂಬುದನ್ನು ಸ್ಪಷ್ಟಪಡಿಸಿ. ಸಮಸ್ಯೆಗಳಿದ್ದರೆ ನೇರವಾಗಿ ತಮ್ಮ ಗಮನಕ್ಕೆ ತರಲು ಸೂಚಿಸಿದರು.
ಕಾಮಗಾರಿಯ ಗುಣಮಟ್ಟದ ಬಗ್ಗೆ ಹಿಂದಿನ ಜಿಲ್ಲಾಧಿಕಾರಿಗಳ ಅವಧಿಯಲ್ಲಿದ್ದ ಮಾನದಂಡವನ್ನೇ ಮುಂದುವರಿಸುವುದಾಗಿ ಹೇಳಿದ ಸುಬೋಧ್ ಯಾದವ್ ಅವರು, ಕಾಮಗಾರಿಯ ಪ್ರತ್ಯಕ್ಷ ವೀಕ್ಷಣೆ ನಡೆಸುವುದಾಗಿ ಎಚ್ಚರಿಕೆಯನ್ನೂ ನೀಡಿದರು. ಇಲಾಖೆಗಳು ಹೊಣೆಯರಿತು ಸಮಯಮಿತಿಯೊಳಗೆ ಕೆಲಸ ಮಾಡುವುದರಿಂದ ಎಲ್ಲರಿಗೂ ಅನುಕೂಲ ಎಂದು ನುಡಿದರು.

Wednesday, November 10, 2010

ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕರಾವಳಿ ನಿಯಂತ್ರಣ ವಲಯ ಸಭೆ

ಮಂಗಳೂರು, ನವೆಂಬರ್. 10: ಕರಾವಳಿ ನಿಯಂತ್ರಣ ಅಧಿಸೂಚನೆ 1991ರ ಬಗ್ಗೆ ಸಾರ್ವಜನಿಕರ ಆಕ್ಷೇಪಣೆ ಗಮನಾರ್ಹವಾಗಿದ್ದನ್ನು ಪರಿಗಣಿಸಿ ಕೇಂದ್ರ ಸರಕಾರ 2010 ಸೆಪ್ಟೆಂಬರ್ 15ರಂದು ಹೊಸ ಕರಡು ಅಧಿಸೂಚನೆ ಸಿದ್ಧಪಡಿಸಿದೆ. ಈ ಕರಡು ಅಧಿಸೂಚನೆ ಲೋಪದೋಷಗಳ ಬಗ್ಗೆ ನವೆಂಬರ್ 15ರೊಳಗೆ ವರದಿ ಸಲ್ಲಿಸಬೇಕಿದ್ದು, ಈ ನಿಟ್ಟಿನಲ್ಲಿ ವಿವಿಧ ಮಟ್ಟಗಳಲ್ಲಿ ಹಲವಾರು ಸಭೆಗಳನ್ನು ನಡೆಸಲಾಗಿದೆ. ಇಂದು ಈ ಸಂಬಂಧ ಜಿಲ್ಲಾ ಉಸ್ತು ವಾರಿ ಸಚಿವರಾದ ಕೃಷ್ಣ ಜೆ ಪಾಲೆಮಾರ್ ಅವರ ನೇತೃತ್ವದಲ್ಲಿ ಜಿಲ್ಲಾಧಿ ಕಾರಿಗಳ ಕಚೇರಿಯಲ್ಲಿ ಜನ ಪ್ರತಿನಿಧಿ ಗಳನ್ನೊಳ ಗೊಂಡ ಸಭೆ ನಡೆಯಿತು.
ಸಿ ಆರ್ ಝಡ್ ನ ಅಧಿಕಾರಿ ಮಹೇಶ್ ಕುಮಾರ್ ಅವರು ಪಿಪಿಟಿ ಪ್ರಸಂಟೇಷನ್ ಮುಖಾಂತರ ಸಿ ಆರ್ ಝಡ್ ಒಂದರಿಂದ ಐದರವರೆಗಿನ ಕರಡು ಅಧಿ ಸೂಚನೆ ಬಗ್ಗೆ ಸಭೆಗೆ ಮಾಹಿತಿ ನೀಡಿದರು. ಕರಡು ಅಧಿ ಸೂಚನೆಯಂತೆ ನದಿಯ/ ಸಮುದ್ರದ ಇಳಿತ ರೇಖೆಯ ಕಡೆಗಿನ ಭೂಭಾಗ ಕರಾವಳಿ ನಿಯಂತ್ರಣ ವಲಯಕ್ಕೆ ಸೇರಿದೆ. ಆದರೆ ಇದರಿಂದಾಗಿ ನದಿಯಲ್ಲಿ ಮರಳು ಗಾರಿಕೆಗೆ ತೊಂದರೆ ಯಾಗಲಿದ್ದು, ಈ ವ್ಯಾಪ್ತಿಯಲ್ಲಿ ಸುಸ್ಥಿರ ಮರಳು ಗಾರಿಕೆಗೆ ಅವಕಾಶ ನೀಡಬೇಕು. ನಗರದ ಹೊರ ವಲಯದ ಅಭಿವೃದ್ಧಿ ಹೊಂದಿದ ಪ್ರದೇಶದಲ್ಲಿ ಹಾಗೂ ಕರಾವಳಿ ಯಲ್ಲಿರುವ ಮೀನುಗಾರರಿಗೆ ಮನೆ ನಿರ್ಮಿಸಲು ಅನುಕೂಲವಾಗುವಂತೆ ನಗರಮಿತಿಯ ಹೊರಗಿರುವ ಪ್ರದೇಶಗಳಲ್ಲಿಯೂ ವಾಸ್ತವ್ಯ ಹೆಚ್ಚಿರುವ ಪ್ರದೇಶಗಳನ್ನು ಸಿಆರ್ ಝಡ್-2 ಎಂದು ಪರಿಗಣಿಸಬೇಕು.
ಸ್ಥಳೀಯ ಕಟ್ಟಡ ನಿಯಮಾವಳಿಗಳನ್ನು ಪಾಲಿಸಲು ಅನುಮತಿ ನೀಡಬೇಕು. ಕೇರಳದಲ್ಲಿ ಕರಾವಳಿ ನಿಯಂತ್ರಣ ವಲಯವನ್ನು 50 ಮೀ.ಗೆ ಮಿತಿಗೊಳಿಸಿದಂತೆ ಇಲ್ಲಿನ ಕರಾವಳಿ ಜಿಲ್ಲೆಗಳಲ್ಲು ಮಿತಿ ಗೊಳಿಸಬೇಕು. ಕರಾವಳಿ ನಿಯಂತ್ರಣ ವಲಯದಲ್ಲಿ ಉಲ್ಲಂಘನೆ ಪ್ರಕರಣ ನಿಲ್ಲಿಸಲು ಜಿಲ್ಲಾ ಮಟ್ಟದಲ್ಲಿ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಕ್ಕೆ ಅವಕಾಶ ನೀಡಬೇಕು ಎಂಬ ವಿಷಯಗಳು ಇಂದು ಸಭೆಯಲ್ಲಿ ಪ್ರಸ್ತಾಪಗೊಂಡವು.
ಸಮುದ್ರ ಮಾಲಿನ್ಯ ತಡೆಗೆ, ಸುಸ್ಥಿರ ಮರಳುಗಾರಿಕೆಗೆ ಹಾಗೂ ಜಿಲ್ಲೆಯಲ್ಲಿ ಅಕ್ರಮವಾಗಿ ಸರಕಾರಿ ಜಮೀನಿನ ಒತ್ತುವರಿ ತಡೆಗೆ ಪ್ರತ್ಯೇಕ ಕಾನೂನು ಜಾರಿ ಪಡೆ ಜಾರಿಗೊಳಿಸುವಂತೆ ಶಾಸಕರಾದ ಎನ್ ಯೋಗೀಶ್ ಭಟ್ ಅವರು ಸಲಹೆ ಮಾಡಿದರು. ಸರಕಾರಿ ಭೂಮಿಯ ಅತಿಕ್ರಮಣದಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ಭವಿಷ್ಯದಲ್ಲಿ ತೊಂದರೆಯಾಗಲಿದೆ ಎಂದ ಅವರು, ಬೆಂಗರೆ, ಮೀನಕಳಿಯದಲ್ಲಿ ಅನಧಿಕೃತ ಕಟ್ಟಡಗಳು ನಿರ್ಮಾಣಗೊಳ್ಳದ ರೀತಿ ನಗರದಲ್ಲಿ ಸರ್ವೇ ಕಾರ್ಯ ನಡೆಸುವ ಹಾಗೆ ಇಲ್ಲೂ ನಡೆಸಿ ಸೂಕ್ತ ವ್ಯವಸ್ಥೆ ಮಾಡಬೇಕೆಂದು ಸಲಹೆ ನೀಡಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ಸೋಮೇಶ್ವರದಲ್ಲಿ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶವಿದ್ದು, ಅಲ್ಲಿಯೂ ಅನಧಿಕೃತ ಕಟ್ಟಡಗಳ ಹಾವಳಿಯಿದೆ; ಸಮುದ್ರಕ್ಕೆ ಹಲವು ಕಂಪೆನಿಗಳು ನೇರವಾಗಿ ತ್ಯಾಜ್ಯ ವನ್ನು ಬಿಡುತ್ತಿರುವ ಬಗ್ಗೆ, ಜಿಲ್ಲೆಯಲ್ಲಿರುವ ದೊಡ್ಡ ದೊಡ್ಡ ಕಂಪೆನಿಗಳು ಪರಿಸರಕ್ಕೆ ಸಂಬಂಧಿಸಿದಂತೆ ಕಾನೂನು ಉಲ್ಲಂಘಿಸುತ್ತಿರುವ ಬಗ್ಗ ಸಭೆಯ ಗಮನಕ್ಕೆ ತಂದರು.
ಇದಕ್ಕೆಂದೇ ಕೇಂದ್ರ ಸರಕಾರ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯನ್ನು ನೋಡಲ್ ಅಧಿಕಾರಿಯನ್ನಾಗಿ ಮಾಡಿ ಎಲ್ಲ ತ್ಯಾಜ್ಯಗಳನ್ನು ಶುದ್ಧೀಕರಿಸಿ ಜಲ ಸಂಪನ್ಮೂಲ ಕಲುಷಿತಗೊಳ್ಳದಂತೆ ನೋಡುವ ಹೊಣೆಯನ್ನು ವಹಿಸಬೇಕು ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಯಿತು. ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಸುಬೋಧ್ ಯಾದವ್ ಅವರು, ಸರಕಾರಿ ಜಮೀನು ಅತಿಕ್ರಮಣ ತಡೆಯಲು ಸೂಕ್ತ ಕ್ರಮಕೈಗೊಳ್ಳುವುದಾಗಿ ಹೇಳಿದರು. ಜಿಲ್ಲಾ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಭಂಡಾರಿ, ಸಿ ಆರ್ ಝಡ್ ನ ಎಸಿ ಎಫ್ ಮಹಮ್ಮದ್ ಬ್ಯಾರಿ ಉಪಸ್ಥಿತರಿದ್ದರು.

Monday, November 8, 2010

ಚತುಷ್ಪಥ ಕಾಮಗಾರಿ ಚುರುಕುಗೊಳಿಸಲು ಸಮನ್ವಯ ಸಮಿತಿ ಸಭೆ

ಮಂಗಳೂರು, ನವೆಂಬರ್ 08: ಜಿಲ್ಲೆಯಲ್ಲಿ ಪ್ರಗತಿಯಲ್ಲಿರುವ ಚತುಷ್ಪಥ ರಸ್ತೆ ಅಗಲೀಕರಣ ಕಾಮಗಾರಿಗಳನ್ನು ಸಮಯಮಿತಿಯೊಳಗೆ ಮುಗಿಸಿ ಜನರು ಎದುರಿಸುತ್ತಿರುವ ಹಲವು ಸಮಸ್ಯೆಗಳಿಗೆ ಪರಿಹಾರವನ್ನು ತುರ್ತಾಗಿ ನೀಡಿ ಎಂದು ಜಿಲ್ಲಾಧಿಕಾರಿ ಸುಭೋಧ್ ಯಾದವ್ ಅವರು ಹೇಳಿದರು.

ಅವರಿಂದು ಜಿಲ್ಲಾಧಿ ಕಾರಿಗಳ ಕೋರ್ಟ್ ಹಾಲ್ ನಲ್ಲಿ ಏರ್ಪಡಿಸಿದ್ದ ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದ ವಿವಿಧ ಇಲಾಖೆ ಅಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾ ಡುತ್ತಿದ್ದರು. ಪ್ರತಿಯೊಂದು ವಿಷಯದಲ್ಲೂ ಕಾನೂನನ್ನು ಪ್ರತಿ ಪಾದಿಸದೆ, ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಕಾಮಗಾರಿ ವಿಳಂಬದಿಂದಾಗಿ ಹಲವು ಸಮಸ್ಯೆಗಳು ಉದ್ಭವ ವಾಗುತ್ತಿದ್ದು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ರಾಷ್ಟ್ರೀಯ ಹೆದ್ದಾರಿ, ಮಹಾನಗರಪಾಲಿಕೆ, ಮೆಸ್ಕಾಂ ಸಮನ್ವಯದಿಂದ ಮಾತುಕತೆಯ ಮೂಲಕ ಕಾಮಗಾರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲು ಸಾಧ್ಯವಿದೆ ಎಂದರು.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಗವಸಾನೆಯವರು ತಮ್ಮ ಪ್ರಾಧಿಕಾರ ಎದುರಿಸುತ್ತಿರುವ ಸವಾಲುಗಳನ್ನು ವಿವರಿಸಿದರೆ, ಇತರ ಇಲಾಖೆಗಳು ತಮ್ಮ ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳ ಮುಂದಿರಿಸಿದರು. ಜಾಗ ಒತ್ತುವರಿ ಸೇರಿದಂತೆ ಮಳೆಯಿಂದಾಗುವ ಸಮಸ್ಯೆಗಳು, ಜನರ ಮನವೊಲಿಸುವಿಕೆ ವಿಫಲವಾದದ್ದು, ನೀರಿನ ಪೈಪ್, ಫೋನ್ ಲೈನ್ ಗಳಿಗೆ ಪಯರ್ಾಯ ಕಂಡುಕೊಳ್ಳಲು ಇಲಾಖಾಧಿಕಾರಿಗಳು ಪರಸ್ಪರ ಸಮನ್ವಯದಿಂದ ಕುಳಿತು ಮಾತು ಕತೆಯ ಮೂಲಕ ಪರಿಹಾರ ಕಂಡುಕೊಳ್ಳಿ ಎಂದರು.
ಸುರತ್ಕಲ್ ನಿಂದ ಬಂಟ್ವಾಳ ಬಿ .ಸಿ.ರೋಡು ವರೆಗಿನ ಚತುಷ್ಫಥ 2007 ರೊಳಗೆ ಮುಗಿದಿರಬೇಕಾಗಿದ್ದು, ಇನ್ನೂ ಮುಂದುವರಿದಿದೆ, ಆದರೆ 61 ಕೋಟಿ ರೂ. ಪರಿಹಾರ ನೀಡಲಾಗಿದ್ದು, ಇದರಲ್ಲಿ 25 ಲಕ್ಷ ರೂ. ಮಾತ್ರ ನೀಡಲು ಬಾಕಿ ಇದೆ ಎಂದರು. ಸೆಕ್ಷನ್ 2 ರಡಿ ನಂತೂರಿನಿಂದ ತಲಪಾಡಿ ರಸ್ತೆ ನಿಮರ್ಮಾಣವಾಗಲಿದ್ದು, ರಸ್ತೆ ಹಾದು ಹೋಗಲಿರುವ 7 ಹಳ್ಳಿಗಳಿಗೆ ಪ್ರಥಮ ಹಂತದ ನೋಟೀಸು ನೀಡಲಾಗಿದೆ. ಇದರಡಿ ಪಂಪ್ ವೆಲ್ ಮತ್ತು ತೊಕ್ಕೊಟ್ಟಿನಲ್ಲಿ ಎರಡು ಫ್ಲೈ ಓವರ್ ಗಳು ಬರಲಿವೆ ಎಂದರು. ಕೂಳೂರಿನಿಂದ ಮುಲ್ಕಿ ವರೆಗೆ ಯುಟಿಲಿಟಿ ಶಿಫ್ಟಿಂಗ್, ಎಲೆಕ್ಟ್ರಿಕಲ್ ವ್ಯವಸ್ಥೆಗೆ, ಮರಕಡಿಯಲು ಹಣ ಪಾವತಿಸಲಾಗಿದೆ ಎಂದು ಗವಸಾನೆ ಸಭೆಗೆ ಮಾಹಿತಿ ನೀಡಿದರು.
ಸುರತ್ಕಲ್ ಫ್ಲೈಓವರ್ ಕಾಮಗಾರಿ ಸಂಬಂಧ ಕೋರ್ಟ್ ನಲ್ಲಿದ್ದ ವ್ಯಾಜ್ಯ ವಜಾ ಗೊಂಡಿದ್ದು, ಬಳಿಯಲ್ಲಿರುವ ಕಟ್ಟಡಕ್ಕೆ ಲೋಕೋಪಯೋಗಿ ಇಲಾಖೆಯಿಂದ ದರ ನಿಗದಿಪಡಿಸುವ ಹಂತದಲ್ಲಿದೆ. ಇದಾದ ತಕ್ಷಣವೇ ಅಲ್ಲಿನ ಕಾಮಗಾರಿ ಸಂಪೂರ್ಣ ಗೊಳ್ಳಲಿದೆ ಎಂದರು. ಪಡೀಲಿನಿಂದ ತುಂಬೆ ವರೆಗೆ ನೀರಿನ ಸಂಪರ್ಕದಿಂದಾಗಿರುವ ಕಾಮಗಾರಿ ವಿಳಂಬ ತಪ್ಪಿಸಿ ಕಾಮಗಾರಿಯನ್ನು ಪ್ರಗತಿಪಥದತ್ತ ಒಯ್ಯುವಂತೆ ಮಾರ್ಗದರ್ಶನ ನೀಡಿದರು. ಕನಿಷ್ಠ ರಸ್ತೆ ಗುಂಡಿಗಳನ್ನು ಮುಗಿಸುವ ಕಾಮಗಾರಿಯನ್ನು ರಾಷ್ಟ್ರೀಯ ಹೆದ್ದಾರಿಯವರು ಕಾರಣಗಳನ್ನು ನೀಡದೆ ಸಮಯಮಿತಿಯೊಳಗೆ ಮುಗಿಸಬೇಕೆಂದರು.
ನಂತೂರಿನ ಬಳಿ ಇರುವ ಆರು ಕೊರಗ ಕುಟುಂಬಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಈ ಸಂಬಂಧ ಸಹಾಯಕ ಕಮಿಷನರ್ ಅಧ್ಯಕ್ಷತೆಯಲ್ಲಿ ಸಭೆ ನಡೆಸಿದ್ದು, ಕೊರಗ ಕುಟುಂಬದವರು ಸ್ಥಳಾಂತರಕ್ಕೆ ಒಪ್ಪಿದ್ದಾರೆ.
ಬ್ರಹ್ಮರಕೂಟ್ಲುವಿನ ಸಮಸ್ಯೆಯನ್ನು ಬಗೆಹರಿಸಲು ತಾವೇ ಮುಂದಾಗಿ ಕ್ರಮಕೈಗೊಳ್ಳುವುದಾಗಿ ಹೇಳಿದ ಜಿಲ್ಲಾಧಿಕಾರಿ, ಜಿಲ್ಲಾಡಳಿತದ ಉದ್ದೇಶ ಜನಹಿತ ಮಾತ್ರ ಎಂದರು. ಹೆದ್ದಾರಿಗಳಲ್ಲಿ ಎಲ್ಲೆಂದರಲ್ಲಿ ಘನ ತ್ಯಾಜ್ಯಗಳನ್ನು ಲಾರಿಗಳಲ್ಲಿ ತಂದು ರಾಶಿ ಹಾಕುವ ಬಗ್ಗೆ ಸಬೆಯಲ್ಲಿ ಗಂಭೀರ ಚರ್ಚೆ ನಡೆಯಿತಲ್ಲದೆ, ಈ ತ್ಯಾಜ್ಯ ಗಳನ್ನು ರಾಶಿ ಹಾಕಲು ಮಹಾ ನಗರ ಪಾಲಿಕೆ ಸೂಕ್ತ ಜಾಗವನ್ನು ಆದಷ್ಟು ಶೀಘ್ರದಲ್ಲಿ ಗುರುತಿಸಿಕೊಡಬೇಕು. ಬಳಿಕ ಇಂಥವರ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಜಿಲ್ಲಾಧಿಕಾರಿಗಳು ನೀಡಿದರು.