Monday, November 1, 2010

ಪ್ರತೀ ವಿಧಾನಸಭಾ ಕ್ಷೇತ್ರಕ್ಕೆ 1000 ಮನೆ ನಿರ್ಮಾಣ: ಜೆ.ಕೃಷ್ಣ ಪಾಲೆಮಾರ್

ಮಂಗಳೂರು, ನ.1:ರಾಜ್ಯದ ಅಭಿವೃದ್ಧಿ ಯನ್ನೇ ಮೂಲ ಮಂತ್ರವಾಗಿರಿಸಿಕೊಂಡು ಯೋಜನೆಗಳನ್ನು ರೂಪಿಸುತ್ತಿರುವ ಸರ್ಕಾರ ರೈತರಿಗಾಗಿ ಶೇಕಡಾ ಒಂದರ ಬಡ್ಡಿದರದಲ್ಲಿ ಕೃಷಿಸಾಲ ಘೋಷಿಸಿದೆ. ರಾಜ್ಯ ವನ್ನು ಗುಡಿಸಲು ಮುಕ್ತ ರಾಜ್ಯ ವಾಗಿಸಲು ಈ ವರೆಗೆ ಜಿಲ್ಲೆಯ ಗ್ರಾಮಾಂ ತರ ಪ್ರದೇಶ ದಲ್ಲಿ 4,695 ಮತ್ತು ನಗರ ಪ್ರದೇಶ ದಲ್ಲಿ 3,676 ಕುಟುಂಬ ಗಳಿಗೆ ವಸತಿ ಒದ ಗಿಸಿದೆ. 50,510 ಕುಟುಂಬ ಗಳಿಗೆ ಮನೆ ನಿವೇಶ ನಗಳಿಗೆ ಹಕ್ಕು ಪತ್ರ ನೀಡ ಲಾಗಿದೆ. ವಾಜ ಪೇಯಿ ನಗರಾ ಶ್ರಯ ಯೋಜನೆ ಯಡಿ 2650 ನಿವೇಶನಗಳು ಹಾಗೂ 1325 ವಸತಿ ಗಳನ್ನು ಒದಗಿ ಸಲು ನಿರ್ಧರಿ ಸಿದೆ ಎಂದು ಜಿಲ್ಲಾ ಉಸ್ತು ವಾರಿ ಸಚಿವರು,ಜೀವಿ ಶಾಸ್ತ್ರ,ಪರಿಸರ ಬಂದರು ಮತ್ತು ಒಳ ನಾಡು ಜಲ ಸಾರಿಗೆ ಹಾಗೂ ಮುಜ ರಾಯಿ ಇಲಾಖೆ ಸಚಿವ ರಾದ ಜೆ.ಕೃಷ್ಣ ಪಾಲೆಮಾರ್ ಅವರು ಹೇಳಿದರು.ನಗರದ ನೆಹರು ಮೈದಾನ ದಲ್ಲಿ ಆಯೋ ಜಿಸಿದ್ದ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸ ವದಲ್ಲಿ ರಾಜ್ಯೋತ್ಸ ವ ಸಂದೇಶ ನೀಡಿದ ಸಚಿ ವರು, ಕಳೆದ ಎರಡೂ ವರೆ ವರ್ಷದಲ್ಲಿ ಸರ್ಕಾರ ಹಮ್ಮಿ ಕೊಂಡಿ ರುವ ಯೋಜನೆ ಗಳು, ಅನುಷ್ಠಾನ ಗೊಂಡ ಯೋಜನೆ ಗಳು ಹಾಗೂ ಭವಿಷ್ಯದ ಯೋಜನೆ ಗಳ ಬಗ್ಗೆ ವಿವರಿ ಸಿದರು. ಕನ್ನಡಕ್ಕೆ ದುಡಿದ ಮಹನೀ ಯರನ್ನು ಸ್ಮರಿಸಿ ದರು. ಜಿಲ್ಲೆ ಕನ್ನಡಕ್ಕೆ ನೀಡಿದ ಬಹು ದೊಡ್ಡ ಕಾಣಿಕೆ ಗಳನ್ನು ವಿವರಿ ಸಿದರು. ಕನ್ನಡದ ಅಭಿವೃದ್ಧಿಗೆ ಪ್ರತ್ಯೇಕ ಸಂಪ ನ್ಮೂಲ ಮೀಸಲಿ ಟ್ಟಿರುವುದನ್ನು ಹೇಳಿದರು. ಸಮಾ ರಂಭ ದಲ್ಲಿ 43 ಸಾಧ ಕರನ್ನು ಸನ್ಮಾನಿ ಸಲಾ ಯಿತು.ಶಾಸಕ ರಾದ ಎನ್. ಯೋ ಗೀಶ್ ಭಟ್, ಯು.ಟಿ. ಖಾದರ್, ಜಿಲ್ಲಾ ಪಂಚಾ ಯತ್ ಅಧ್ಯಕ್ಷ ರಾದ ಕೆ. ಸಂತೋಷ್ ಕುಮಾರ್ ಭಂಡಾರಿ, ಲೋಕ ಸಭಾ ಸದಸ್ಯ ರಾದ ನಳಿನ್ ಕುಮಾರ್ ಕಟೀಲ್, ಮಹಾ ಪೌರ ರಜನಿ ದುಗ್ಗಣ್ಣ,ಉಪ ಮೇಯರ್ ರಾಜೇಂದ್ರ ಕುಮಾರ್, ಕರಾವಳಿ ಅಭಿವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ಬಿ.ನಾಗ ರಾಜ ಶೆಟ್ಟಿ, ತಾಲೂಕು ಪಂಚಾಯತ್ ಅಧ್ಯಕ್ಷ ಕೆ. ರಾಮ ಚಂದ್ರ ಕುಂಪಲ, ಜಿಲ್ಲಾಧಿ ಕಾರಿ ಸುಭೋದ್ ಯಾದವ್, ಸಿಇಓ ಶಿವ ಶಂಕರ್, ಎಸ್. ಪಿ. ಡಾ. ಸುಬ್ರಮ ಣ್ಯೇಶ್ವರ ರಾವ್, ಪೋಲಿಸ್ ಕಮಿಷ ನರ್ ಸೀಮಂತ್ ಕುಮಾರ್ ಸಿಂಗ್, ಅಪರ ಜಿಲ್ಲಾಧಿ ಕಾರಿ ಪ್ರಭಾಕರ ಶರ್ಮಾ ಪಾಲ್ಗೊಂ ಡಿದ್ದರು.ಪತ್ರಿ ಕೋದ್ಯ ಮದಲ್ಲಿ ಉದಯ ವಾಣಿ ಹಿರಿಯ ವರದಿ ಗಾರ ರಾದ ಸುರೇಂದ್ರ ಎಸ್. ವಾಗ್ಲೆ, ವಿಜಯ ಕರ್ನಾ ಟಕದ ಛಾಯಾ ಚಿತ್ರ ಗ್ರಾಹಕ ಸುಧಾಕರ ಎರ್ಮಾಳ್ ಅವ ರನ್ನು ಸ ನ್ಮಾನಿ ಸಲಾ ಯಿತು.ಇದಕ್ಕೂ ಮುನ್ನ ಜ್ಯೋತಿ ಅಂಬೆಡ್ಕರ್ ವೃತ್ತ ದಿಂದ ನೆಹರು ಮೈದಾ ನಿನ ವರೆಗೆ ತಾಯಿ ಭುವ ನೇಶ್ವರಿಯ ಅದ್ದೂರಿಯ ಮೆರ ವಣಿಗೆ ನಡೆಯಿತು.ಸಾಂ ಸ್ಕೃತಿಕ ಕಾರ್ಯ ಕ್ರಮ ದಲ್ಲಿ ಚಿಣ್ಣರ ಲೋಕ ಕಾರ್ಯ ಕ್ರಮ ದಡಿ ತರಬೇತಿ ಪಡೆದ ಮಳಲಿಯ ಸರ್ಕಾರಿ ಸಂಯಕ್ತ ಪ್ರೌಢ ಶಾಲೆ, ರೋಸಾ ಮಿಸ್ತಿಕ್ ಶಾಲೆ ಗುರು ಪುರ ಕೈಕಂಬ, ಕಿನ್ನಿ ಕಂಬಳ ಹಿರಿಯ ಪ್ರಾಥಮಿಕ ಶಾಲಾ ಮಕ್ಕ ಳಿಂದ ಹಾಲಕ್ಕಿ ಸುಗ್ಗಿ ಕುಣಿತ, ನವಿಲು ನೃತ್ಯ, ಕರಗ ನೃತ್ಯ ಪ್ರದರ್ಶನ ಮನ ಸೂರೆಗೊಂಡಿತು.