Monday, November 29, 2010

ಉಪಕಸುಬುಗಳಿಂದ ಅಧಿಕ ಲಾಭ ಸಾಧ್ಯ: ಮೋನಪ್ಪ ಕರ್ಕೆರಾ

ಮಂಗಳೂರು, ನವೆಂಬರ್ 29 : ರೈತರು ಕೃಷಿಯೊಂದಿಗೆ ಉಪ ಕಸುಬುಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಹೆಚ್ಚಿನ ಲಾಭ ಗಳಿಸಲು ಸಾಧ್ಯವಿದೆ ಎಂದು ರಾಜ್ಯ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವ ವಿದ್ಯಾನಿಲಯ ಬೀದರ್ ಇದರ ಆಡಳಿತ ಮಂಡಳಿ ಸದಸ್ಯ ಮೋನಪ್ಪ ಕರ್ಕೆರಾ ಹೇಳಿದರು.

ವಿಸ್ತರಣಾ ಶಿಕ್ಷಣ ಕೇಂದ್ರ, ಮೀನು ಗಾರಿಕಾ ಕಾಲೇಜು ಮಂಗ ಳೂರು ಇದರ ಆಶ್ರಯ ದಲ್ಲಿ ಕಾಲೇಜಿ ನ ಸಭಾಗ ಣದಲ್ಲಿ ಕೃಷಿ ಕರಿ ಗಾಗಿ ಏರ್ಪಡಿ ಸಿರುವ `ಸಣ್ಣ ಕೆರೆ-ಕೊಳ ಗಳಲ್ಲಿ ಮೀನು ಸಾಕಣೆ' ಎರಡು ದಿನ ಗಳ ತರ ಬೇತಿ ಕಾರ್ಯ ಕ್ರಮ ವನ್ನು ಸೋಮವಾರ ಉದ್ಘಾಟಿಸಿ ಅವರು ಮಾತ ನಾಡಿದರು.ಆಡು, ಕೋಳಿ, ಜಾನುವಾರು ಸಾಕಣೆ, ಜೇನು ಕೃಷಿ ಇಂತಹ ಉಪ ಕಸುಗಳು ಇಂದು ಕೃಷಿಕನಿಗೆ ಹೆಚ್ಚು ಆದಾಯವನ್ನು ತಂದು ಕೊಡುತ್ತಿವೆ. ಮೀನು ಮರಿ ಸಾಕಣೆ ಕೂಡ ಲಾಭಗಳಿಸಬಹುದಾದಂತಹ ಉಪಕಸುಬು. ಆದರೆ ಇಲ್ಲಿ ಮಾರುಕಟ್ಟೆ ಸಮಸ್ಯೆ ಕೃಷಿಕರನ್ನು ಕಾಡುತ್ತಿದೆ. ಈ ನಿಟ್ಟಿನಲ್ಲಿ ಗಮನಹರಿಸಬೇಕಾದ್ದು ಅವಶ್ಯ. ಸಾಕಷ್ಟು ಮಾಹಿತಿಯನ್ನು ಪಡೆದು ಮೀನು ಮರಿ ಸಾಕಣೆ ಕೃಷಿಯಲ್ಲಿ ರೈತರು ತೊಡಗಿಕೊಳ್ಳಬೇಕು ಎಂದು ನುಡಿದ ಮೋನಪ್ಪ ಕರ್ಕೇರಾ ರೈತರ ಅಭಿವೃದ್ಧಿಗಾಗಿ ಬಿಡುಗಡೆಯಾಗುವ ಅನುದಾನ ಸಮರ್ಪಕವಾಗಿ ತಲುಪದೇ ಇರುವ ಕುರಿತು ವಿಷಾದ ವ್ಯಕ್ತಪಡಿಸಿದರು.ಮೀನು ಸಾಕಣೆ ಯಂತಹ ಉಪ ಕಸಬುಗಳಲ್ಲಿ ತೊಡಗಿಕೊಳ್ಳುವ ರೈತರು ಮುಂದೆ ಎದುರಾಗುವ ಸಮಸ್ಯೆಗಳನ್ನು ಯಾವ ರೀತಿ ಎದುರಿಸಬೇಕು ಎಂಬುದರ ಕುರಿತು ಸೂಕ್ತ ಮಾಹಿತಿಯನ್ನು ಮುಂಚಿತವಾಗಿ ಪಡೆದುಕೊಂಡಿರಬೇಕಾದ್ದು ಅವಶ್ಯ. ರೈತರಿಗೆ ಪ್ರಯೋಜನವಾಗುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಿರಬೇಕು ಎಂದು ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಕೆ ನುಡಿದರು.ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ.ಕೆ.ಎಂ.ಶಂಕರ್ ಅಧ್ಯಕ್ಷತೆ ವಹಿಸಿದ್ದರು. ಮೀನುಗಾರಿಕಾ ಇಲಾಖೆಯ ಪಾಶ್ರ್ವನಾಥ್ ಉಪಸ್ಥಿತರಿದ್ದರು.ಮೀನುಗಾರಿಕಾ ಕಾಲೇಜು, ವಿಸ್ತರಣಾ ಶಿಕ್ಷಣ ಕೇಂದ್ರದ ಮುಖ್ಯಸ್ಥ ಡಾ.ಎಚ್.ಎನ್.ಆಂಜನೇಯಪ್ಪ ಸ್ವಾಗತಿಸಿದರು. ಕಾಲೇಜಿನ ಸ್ನಾತಕೋತ್ತರ ವಿದ್ಯಾರ್ಥಿ ಕಿಶೋರ್ ವಂದಿಸಿದರು. ಸಹಾಯಕ ಪ್ರಾಧ್ಯಾಪಕ ಮಲ್ಲೇಶ್ ಕಾರ್ಯಕ್ರಮ ನಿರೂಪಿಸಿದರು.