Thursday, November 4, 2010

ಪಟಾಕಿ ಎಚ್ಚರಿಕೆ ವಹಿಸಲು ಡಿಸಿ ಸಲಹೆ

ಮಂಗಳೂರು,ನವೆಂಬರ್ 04 :ದೀಪಾವಳಿ ಸಮಯದಲ್ಲಿ ಪಟಾಕಿಯನ್ನು ನಿಯಂತ್ರಣ ವಿಲ್ಲದೆ ಸಿಡಿಸುವುದರಿಂದ ಕಣ್ಣು ಕಳೆದುಕೊಳ್ಳುವ ,ಪರಿಸರ,ಕೈ ಮೈ ಸುಟ್ಟು ಕೊಳ್ಳುವ ಅನೇಕ ಅಪಾಯಕಾರಿ ಘಟನೆಗಳು ಸಂಭವಿಸುತ್ತಿದ್ದು, ಆದ್ದರಿಂದ ಪಟಾಕಿ ಸಿಡಿಸುವಾಗ ಎಚ್ಚರಿಕೆ ವಹಿಸ ಬೇಕೆಂದು ದ.ಕ. ಜಿಲ್ಲಾಧಿಕಾರಿ ಸುಬೋಧ್ ಯಾದವ್ ತಿಳಿಸಿರುತ್ತಾರೆ.ಆದ್ದರಿಂದ ಎಲ್ಲೆಡೆ ಪಟಾಕಿ ಮಾರಾಟಕ್ಕೆ ಅವಕಾಶವಿಲ್ಲ ಎಂಬುದನ್ನು ಸ್ಪಷ್ಟ ಪಡಿಸಿರುವ ಅವರು,ಜನರು ದೀಪಾವಳಿ ಹಬ್ಬವನ್ನು ಜಾಗರೂಕತೆಯಿಂದ ಪಟಾಕಿ ಸಿಡಿಸುವ ಮೂಲಕ ಸಂಭ್ರಮದಿಂದ ಆಚರಿಸಬೇಕೆಂದು ಸಲಹೆ ಮಾಡಿದ್ದಾರೆ.ಶಿಕ್ಷಣ ಇಲಾಖೆ ಈ ಸಂಬಂಧ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದ್ದು,ಪಟಾಕಿ ಸಿಡಿಸುವುದರಿಂದ ಆಗುವ ಹಾನಿಯನ್ನು ವಿದ್ಯಾರ್ಥಿಗಳಿಗೆ ವಿವರಿಸಲಾಗಿದೆ. ದೀಪಾವಳಿ ಹಬ್ಬ ಸಂತಸ, ಸಡಗರ ಹಾಗೂ ಶ್ರೇಯಸ್ಸು ನೀಡಲಿ ಎಂದು ಜಿಲ್ಲಾಧಿಕಾರಿಗಳು ಶುಭ ಹಾರೈಸಿದ್ದಾರೆ.