Monday, November 28, 2011

ರಸ್ತೆ ಕಾಮಗಾರಿಗಳಿಗೆ ಶಿಲಾನ್ಯಾಸ

ಮಂಗಳೂರು,ನವೆಂಬರ್.28: ರಾಜ್ಯ ಸರ್ಕಾರ ಅಭಿವೃದ್ಧಿಗೆ ಆದ್ಯತೆ ನೀಡುತ್ತಿದ್ದು, ಗ್ರಾಮೀಣ ಪ್ರದೇಶಗಳಲ್ಲೂ ರಸ್ತೆ ಸಂಪರ್ಕ ಹಾಗೂ ಮೂಲಭೂತ ಸೌಕರ್ಯಗಳನ್ನೊದಗಿಸುವಲ್ಲಿ ಹಿಂದೆ ಬಿದ್ದಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ ಪಾಲೆಮಾರ್ ಅವರು ಹೇಳಿದರು.



ಅವ ರಿಂದು ಮಂಗಳೂರಿನ ಅಡ್ಯಾರ್ ನಲ್ಲಿ ವಿವಿಧ ಅಭಿ ವೃದ್ಧಿ ಕಾಮ ಗಾರಿ ಗಳಿಗೆ ಶಿಲಾ ನ್ಯಾಸ ನೆರ ವೇರಿಸಿ ಮಾತ ನಾಡು ತ್ತಿದ್ದರು. 80 ಲಕ್ಷ ರೂ. ವೆಚ್ಚದಲ್ಲಿ ಅಡ್ಯಾರ ಪದ ವರು- ಕೆಮಾಂ ಜೂರು ರಸ್ತೆ, 4.5ಲಕ್ಷ ರೂ. ವೆಚ್ಚದಲ್ಲಿ ಅಡ್ಯಾರ್ -ದಡ್ಡಳಿಕೆ -ಬನ್ನಂಜೆ ರಸ್ತೆ, 4ಲಕ್ಷ ರೂ. ವೆಚ್ಚದಲ್ಲಿ ಅಡ್ಯಾರ್- ಮಾಂಡೋವಿ ಮೋಟಾರ್ಸ್ ಎದುರು ರಸ್ತೆ, ಅಡ್ಯಾರ್ ಕೋರ್ದಬ್ಬು ರಸ್ತೆ 2ಲಕ್ಷ ರೂ. ವೆಚ್ಚದಲ್ಲಿ, ಅಡ್ಯಾರ್ - ನಾಗಬನ ರಸ್ತೆ 2ಲಕ್ಷ ರೂ. ವೆಚ್ಚದಲ್ಲಿ, ವಳಚ್ಚಿಲ್ ರಸ್ತೆ ತಡೆಗೋಡೆಗೆ 2ಲಕ್ಷ ರೂ ವೆಚ್ಚದಲ್ಲಿ ನಡೆಯಲಿದೆ ಎಂದು ಸಚಿವರು ಹೇಳಿದರು.
ಅಭಿವೃದ್ಧಿಗೆ ಸರ್ವರ ಸಹಕಾರವನ್ನು ಕೋರಿದ ಅವರು, ಜನೋಪಯೋಗಿ ಕಾಮಗಾರಿಗಳನ್ನು ಗುಣಮಟ್ಟದಲ್ಲಿ ಲೋಪವೆಸಗದೆ ಅತ್ಯುತ್ತಮವಾಗಿ ನಿರ್ಮಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು. ಗ್ರಾಮೀಣ ಸಂಪರ್ಕ ವ್ಯವಸ್ಥೆಯ ಅಗತ್ಯವನ್ನು ಪ್ರತಿಪಾದಿಸಿದ ಅವರು ಸರ್ಕಾರದ ಬಳಿ ಅಭಿವೃದ್ಧಿ ಕಾಮಗಾರಿಗಳಿಗೆ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.
ನೀರು ಮಾರ್ಗ ಶಕ್ತಿ ಕೇಂದ್ರದ ಅಧ್ಯಕ್ಷ ಮಹಾಬಲ ಅಡ್ಯಾರ್, ಪ್ರದೀಪ್ ಕುಮಾರ್ ಶೆಟ್ಟಿ, ಪ್ರಸನ್ನ ಅಡ್ಯಾರ್, ಅಡ್ಯಾರು ಗ್ರಾಮಪಂಚಾಯಿತಿ ಅಧ್ಯಕ್ಷ ಸುರೇಂದ್ರ ಕಂಬಳಿ, ಜಿ.ಪಂ ಸದಸ್ಯ ಮೆಲ್ವಿನ್ ಪಿಂಟೋ, ತಾ.ಪಂ ಸದಸ್ಯರಾದ ಶ್ರೀಮತಿ ಗೀತಾ ಕೇಶವ ಮುಂತಾದವರು ಉಪಸ್ಥಿತರಿದ್ದರು.

Saturday, November 26, 2011

ಕಾವೂರು ಕೆರೆ ಅಭಿವೃದ್ಧಿಗೆ ಒಂದು ಕೋಟಿ ರೂ.

ಮಂಗಳೂರು,ನವೆಂಬರ್.26 : ರಾಜ್ಯದಲ್ಲಿನ 6,500 ಕೆರೆಗಳ ಅಭಿವೃದ್ಧಿ ಮತ್ತು ಸಂರಕ್ಷಣೆಗೆ ಕೆರೆ ಸಂರಕ್ಷಣಾ ಕಾಯಿದೆಯನ್ನು ಜಾರಿಗೆ ತರಲು ಸರ್ಕಾರ ತೀರ್ಮಾನಿದ್ದು, ಮುಂದಿನ ಅಧಿವೇಶನದಲ್ಲಿ ಇದರ ಮಂಡನೆಯಾಗಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ ಪಾಲೆಮಾರ್ ಅವರು ಹೇಳಿದರು.
ಅವ ರಿಂದು ಮಂಗ ಳೂರು ತಾಲೂ ಕಿನ ಕಾವೂ ರಿನ ಲ್ಲಿರುವ 8.37 ಎಕರೆ ವಿಸ್ತೀ ರ್ಣದ ಕಾವೂರು ಕೆರೆ ಅಭಿ ವೃದ್ಧಿ ಕಾಮ ಗಾರಿಗೆ ಚಾಲನೆ ನೀಡಿ ಮಾತ ನಾಡು ತ್ತಿದ್ದರು. 2011-12ನೇ ಸಾಲಿನ ಸನ್ಮಾನ್ಯ ಮುಖ್ಯ ಮಂತ್ರಿ ಗಳ ಕೆರೆ ಗಳ ಪುನ ರುಜ್ಜೀ ವನ ಕಾರ್ಯ ಕ್ರಮ ದಡಿ ಒಂದು ಕೋಟಿ ರೂ. ವೆಚ್ಚ ದಲ್ಲಿ ಅಭಿ ವೃದ್ಧಿ ಪಡಿ ಸಲು ಸಣ್ಣ ನೀರಾವರಿ ಇಲಾಖೆಯವರು ಈ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 122 ಕೆರೆಗಳನ್ನು ಮತ್ತು ಪಾಲಿಕೆ ವ್ಯಾಪ್ತಿಯಲ್ಲಿ ಹತ್ತು ಕೆರೆಗಳನ್ನು ಈ ಯೋಜನೆಯಡಿ ಅಭಿವೃದ್ಧಿ ಪಡಿಸಲಾಗುವುದು ಎಂದರು.
ಸಣ್ಣ ನೀರಾ ವರಿ ಇಲಾಖೆ ಯಿಂದ ಕಾವೂರು ಮತ್ತು ಕಾರಿಂ ಜೇಶ್ವ ರದ ಕೆರೆ ಗಳ ಅಭಿ ವೃದ್ಧಿ ನಡೆ ಯಲಿದೆ. ಕಾವೂರು ಕೆರೆ ಅಭಿ ವೃದ್ಧಿ ಕಾಮ ಗಾರಿ ಯಡಿ ಹೂಳೆ ತ್ತುವಿಕೆ, ಶಿಥಿಲ ಗೊಂಡ ಕೆರೆ ದಂಡೆ ಭದ್ರ ಪಡಿ ಸುವಿಕೆ, ದಂಡೆಯ ಇಳಿ ಜಾರಿಗೆ ಸುಮಾರು 500 ಮೀ ಉದ್ದದ ಗ್ರಾ ನೈಟ್ ಕಲ್ಲಿನ ರಿವೆಟ್ ಮೆಂಟ್ ರಚಿಸಲು ಅವ ಕಾಶ ಕಲ್ಪಿಸ ಲಾಗಿದೆ. ಮಳೆ ಗಾಲ ದಲ್ಲಿ ಕೆರೆಗೆ ಮಳೆನೀರು ಒಳಹರಿದು ಬರುವ ತೋಡಿಗೆ 5 ಸಂಖ್ಯೆಯ 600 ಮಿ ಮಿ ವ್ಯಾಸದ ಪೈಪು ಮೋರಿಯನ್ನು ನಿರ್ಮಿಸುವುದು ಹಾಗೂ 49.80 ಮೀ ಉದ್ದದ ಮಾದರಿ ತಡೆಗೋಡೆ ನಿಮರ್ಿಸುವ ಕಾಮಗಾರಿ ಒಳಗೊಂಡಿದೆ. ರಸ್ತೆ ಮತ್ತು ಇತರ ಅಬಿವೃದಿಗಳ ಹೆಸರಿನಲ್ಲಿ ಕೆರೆ ಒತ್ತುವರಿಯಾದ ಸ್ಥಳವನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಕೆರೆ ಅಂತರ್ಜಲ ಕುಸಿತದ ಇಂದಿನ ದಿನಗಳಲ್ಲಿ ಕೆರೆ ಅಭಿವೃದ್ಧಿ ಅಗತ್ಯವನ್ನು ಪ್ರತಿಪಾದಿಸಿದ ಸಚಿವರು, ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಸ್ಥಳೀಯರ ಸಹಕಾರ ಅಗತ್ಯ ಎಂದರು.
ಕೆರೆ ಅಭಿವೃದ್ಧಿ ಕಾಯಿದೆ ಅಥವಾ ನೀರು ನೀತಿ ಹಾಗೂ ಪರಿಸರ ಮಾಲಿನ್ಯ ನೀತಿಗಿಂತ ನೀರು ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಬೇಕೆಂದ ಸಚಿವರು, ಈಗಾಗಲೇ ನಗರದ ಎಲ್ಲ ಕೆರೆಗಳ ಸಮೀಕ್ಷೆ ನಡೆಸಲು ಹಾಗೂ ಅತಿಕ್ರಮಿತ ಪ್ರದೇಶವನ್ನು ತೆರವು ಗೊಳಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ ಎಂದರು. ಕೆರೆಗಳ ಅಭಿವೃದ್ಧಿಯಿಂದ ಕೃಷಿಗೆ ನೀರು, ಮೀನು ಸಾಕಾಣಿಕೆಯಂತಹ ಪೂರಕ ಕೃಷಿಯನ್ನು ಕೈಗೊಳ್ಳಬಹುದು ಬಮತ್ತು ಸರ್ಕಾರ ಈ ನಿಟ್ಟಿನಲ್ಲಿ ಬೇಕಾರ ಎಲ್ಲಾ ಸಹಕಾರವನ್ನು ನೀಡಲಿದೆ ಎಂದರು.
ಸಮಾರಂಭದಲ್ಲಿ ಪಾಲಿಕೆ ಮೇಯರ್ ಪ್ರವೀಣ್, ಪಾಲಿಕೆ ಸದಸ್ಯರುಗಳಾದ ದೀಪಕ್ ಪೂಜಾರಿ, ಹರಿನಾಥ್, ವೆಂಕಟೇಶ್, ಮಧುಕಿರಣ್ ಅವರು ಉಪಸ್ಥಿತರಿದ್ದರು.
ಬಳಿಕ ಸಚಿ ವರು ನೀರು ಮಾರ್ಗ, ಮಾಣೂರು, ಕೆಲ ರಾಯ್ ಕ್ರಾಸ್, ಬೊಂಡ ತಿಲ,ಅಡ್ಯಾರ್ ಪದವು ಪರಿ ಸರ ದಲ್ಲಿ ರಸ್ತೆ ಗಳ ಡಾಮ ರೀಕ ರಣ ಬಗ್ಗೆ ಪರಿ ಶೀಲನೆ ನಡೆ ಸಿದರು. ಇದೇ ಸಂದ ರ್ಭದಲ್ಲಿ ಮಾನೂರು ಅ ನಂತ ಪದ್ಮ ನಾಭ ದೇವ ಸ್ಥಾನದ ಬಳಿ ನಿರ್ಮಾ ಣವಾ ಗಲಿ ರುವ 10 ಲಕ್ಷ ರೂ. ವೆಚ್ಚದ ತಡೆ ಗೋಡೆ ಕಾಮ ಗಾರಿಗೆ ಸಚಿ ವರು ಶಿಲ ನ್ಯಾಸ ಮಾಡಿ ದರು. ಈ ಸಂದ ರ್ಭದಲ್ಲಿ ಸ್ಥಳಿಯ ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಸದಸ್ಯರು, ಗ್ರಾಮಪಂಚಾಯತ್ ಉಪಾದ್ಯಕ್ಷರು, ಸದಸ್ಯರು, ಇಂಜಿನಿಯರ್ಸ್ ಉಪಸ್ಥಿತರಿದ್ದರು.

Friday, November 25, 2011

ರಾಷ್ಟ್ರೀಯ ಯುವಜನೋತ್ಸವಕ್ಕೆ ಭರದ ಸಿದ್ದತೆಗೆ ಪೂರ್ವಭಾವಿ ಸಭೆ

ಮಂಗಳೂರು,ನವೆಂಬರ್.25:ಪ್ರಥಮ ಬಾರಿಗೆ ಮಂಗಳೂರಿನಲ್ಲಿ 2012ನೇ ಜನವರಿ 12ರಿಂದ 16ರ ತನಕ ರಾಷ್ಟ್ರೀಯ ಯುವಜನೋತ್ಸವವನ್ನು ಆಯೋಜಿಸಲಾಗಿದ್ದು, ಈ ಉತ್ಸವದಲ್ಲಿ ದೇಶದ ನಾನಾ ರಾಜ್ಯಗಳ ಯುವಜನರು ಭಾಗವಹಿಸುತ್ತಿದ್ದು, ಇದೊಂದು ಬೃಹತ್ ಸಮಾವೇಶವಾಗಲಿದ್ದು, ಇದರ ಯಶಸ್ವಿಗೆ ಎಲ್ಲರೂ ತಂಡೋಪಾದಿಯಲ್ಲಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಡಾ|ಎನ್.ಎಸ್.ಚನ್ನಪ್ಪಗೌಡ ಅವರು ನಿನ್ನೆ
ತಮ್ಮ ಕಚೇರಿಯಲ್ಲಿ ನಡೆದ ಪೂರ್ವಭಾವೀ ಸಭೆಯಲ್ಲಿ ತಿಳಿಸಿದರು.ಸ್ಪರ್ಧಾತ್ಮಕ ಕಾರ್ಯ ಕ್ರಮಗಳು, ಆಹಾ ರೋತ್ಸವ, ವಿವಿಧ ಕಲಾವಿದರ ಶಿಬಿರ, ಸಾಹಸ ಚಟುವಟಿಕೆಗಳು,ಸರ್ಕಾರೇತರ ಚಟುವಟಿಕೆಗಳು, ಸಾಂಸ್ಕೃತಿಕ ಸಂಜೆ, ಮನರಂಜನಾತ್ಮಕ ಕ್ರೀಡೆಗಳು ಮುಂತಾದ ಸ್ಪರ್ಧಗಳು ವಿವಿದ ಜಾಗಗಳಲ್ಲಿ ನಡೆಯಲಿವೆ ಎಂದು ಯುವಜನಸೇವಾ ಮತ್ತು ಕೀಡಾ ಇಲಾಖೆ ಜಂಟಿ ನಿರ್ದೇಶಕರಾದ ವೈ.ಕಾಂತರಾಜೇಂದ್ರ ಅವರು ಸಭೆಗೆ ತಿಳಿಸಿದರು.
ಸಭೆಯಲ್ಲಿ ಭಾರತ ಸರ್ಕಾರದ ಯುವಜನ ವ್ಯವಹಾರಗಳ ಮತ್ತು ಕ್ರೀಡಾ ಮಂತ್ರಾಲಯದ ಉಪಕಾರ್ಯದರ್ಶಿ ತಂಗಮೆಲಿಯನ್, ಎನ್.ಎಸ್.ಎಸ್. ವಿಭಾಗದ ಸಹಾಯಕ ಕಾರ್ಯಕ್ರಮ ಸಲಹೆಗಾರ ಎ.ಕೆ.ಕೆವಿನಿಯ,ಭಾರತ ಸರ್ಕಾರದ ಯುವಜನ ವ್ಯವಹಾರಗಳ ಮತ್ತು ಕ್ರೀಡಾ ಮಂತ್ರಾಲಯದ ಅಧೀನ ಕಾರ್ಯದರ್ಶಿ ಎಚ್.ಎಂ.ಕುಂಡಲೀಯ, ಖಾದ್ರಿ ನರಸಿಂಹಯ್ಯ,ಆರ್.ಕೆ.ಕುಂಡು, ರಿಶಿಪಾಲ್ ಸಿಂಗ್, ಆರ್.ನಟರಾಜನ್ ಮುಂತಾದವರು ಭಾಗವಹಿಸಿದ್ದರು. ಜಿಲ್ಲಾ ಮಟ್ಟದ ಅಧಿಕಾರಿಗಳು ನೆಹರೂ ಯುವ ಕೇಂದ್ರದ ಅಧಿಕಾರಿಗಳು, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸಮುದ್ರಕೊರೆತಕ್ಕೆ ಕಲ್ಲುಹಾಕುವುದು ಅವೈಜ್ಞಾನಿಕ; ಡಾ.ವಿ ಎನ್ ನಾಯಕ್

ಮಂಗಳೂರು,ನವೆಂಬರ್.25: ಕರಾವಳಿ ತೀರ ಸಮುದ್ರದ ಆಟದ ಮೈದಾನ; ಮಾನವರು ಈ ಆಟದ ಮೈದಾನವನ್ನು ಅತಿಕ್ರಮಿಸಲು ಸಮುದ್ರ ಎಂದಿಗೂ ಅವಕಾಶ ನೀಡಲ್ಲ ಎಂದು ಕಾರವಾರದ ಕರ್ನಾಟಕ ವಿಶ್ವವಿದ್ಯಾನಿಲಯದ ಪಿ ಜಿ ಕೇಂದ್ರದ ಸಾಗರ ಭೂವಿಜ್ಞಾನ ವಿಭಾಗದ ಡಾ ವಿ ಎನ್ ನಾಯಕ್ ಹೇಳಿದರು.
ಅವರು ಗುರುವಾರ ನಗರದ ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ಮೂರು ದಿನಗಳ ಕಡಲಕೊರೆತ ನಿರ್ವಹಣೆಯ ಎರಡನೇ ದಿನದ ಅಧಿವೇಶನವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಸಮುದ್ರ ಪ್ರದೇಶದಲ್ಲಿ ಮಾನವನ ಅತಿಕ್ರಮಣವೇ ಕಡಲ್ಕೊರೆತಕ್ಕೆ ಕಾರಣವಾಗಿದೆ. ಸಿ ಆರ್ ಝಡ್ ನಿಯಮ ಪಾಲಿಸಿದರೆ ಈ ಸಮಸ್ಯೆಯೇ ಉದ್ಭವಿಸುವುದಿಲ್ಲ. ಸಮುದ್ರಕ್ಕೆ ಅವೈಜ್ಞಾನಿಕವಾದ ಕಲ್ಲಿನ ತಡೆಗೋಡೆ ಕಟ್ಟುವ ಅವಶ್ಯಕತೆ ಇಲ್ಲ; ಸಮುದ್ರದಿಂದ ಉಸುಕನ್ನು ತೆಗೆಯುವುದು, ಪಶ್ಚಿಮ ಘಟ್ಟಗಳಂತೆಯೇ ಸೂಕ್ಷ್ಮ ಹಾಗೂ ಸುಂದರವಾಗಿರುವ ಸಮುದ್ರ ತೀರದ ಉಸುಕಿನ ದಿಬ್ಬಗಳನ್ನು ಸಮತಟ್ಟು ಮಾಡುವುದು ಹಾಗೂ ಕಾಂಡ್ಲಾ ವನ ನಾಶದಿಂದ ಸಮುದ್ರ ಕೊರೆತದಂತಹ ವಿಕೋಪಗಳು ಸಂಭವಿಸುತ್ತದೆ ಎಂದು ವಿವರಿಸಿದ ಅವರು, ಕಾರವಾರದ ಬಾವಿಕೇರಿ, ಹಣಕೋಣ, ದೇವಬಾಗ್ ನಲ್ಲಿ ಸಂಭವಿಸಿದ ಸಮುದ್ರ ಕೊರೆತದ ಘಟನೆಗಳನ್ನು ವಿಶ್ಲೇಷಿಸಿದರು. 2009ರಲ್ಲಿ ಸಂಭವಿಸಿದ ಮಹಾಮಳೆ ಮತ್ತು ಭೂಕುಸಿತಕ್ಕೆ ವೈಜ್ಞಾನಿಕವಾಗಿ ಕಾರಣಗಳನ್ನು ನೀಡಿದ ಅವರು, ಜೈವಿಕ ಬೇಲಿ ಮತ್ತು ಹಸಿರುಗೋಡೆಯಿಂದ ಸಮುದ್ರ ಕೊರೆತವನ್ನು ಪರಿಣಾಮಕಾರಿಯಾಗಿ ತಡೆಯಬಹುದು ಎಂದು ಪ್ರತಿಪಾದಿಸಿದರು.
ನಮ್ಮ ದೇಶ ಭೂಮಧ್ಯರೇಖೆಗೆ ಹತ್ತಿರವಾಗಿದ್ದು, ಸ್ಥಿರವಾದ ಹವಾಮಾನ ಹೊಂದಿರುವುದಿಲ್ಲ.ಅಸ್ಥಿರ ಹವಾಮಾನದಿಂದಾಗಿ ವಾತಾವರಣದ ಬದಲಾವಣೆಯನ್ನು ಕರಾರುವಕ್ಕಾಗಿ ಹೇಳಲು ಸಾಧ್ಯವಿಲ್ಲ. ಸ್ವೀಡನ್ ನಂತಹ ದೇಶಗಳಲ್ಲಿ 4ಗಂಟೆ 5 ನಿಮಿಷಕ್ಕೆ ಮಳೆ ಬರುತ್ತದೆ ಎಂಬುದನ್ನು ಕರಾರುವಕ್ಕಾಗಿ ಹೇಳಲು ಸಾಧ್ಯ ಎಂದರು.
ಸಮುದ್ರದ ತೀರಗಳನ್ನು ಅತಿಕ್ರಮಿಸುವುದರಿಂದ ಮತ್ತು ಕೇವಲ ಮಾನವ ಹಿತವನ್ನು ಮಾತ್ರ ದೃಷ್ಟಿಯಲ್ಲಿರಿಸಿದ ನಿರ್ಮಾಣಗಳಿಂದ ಅಮೂಲ್ಯವಾದ ಜಲಸಂಪತ್ತುಗಳಾದ ಮೀನುಗಳು, ಕಡಲಾಮೆಗಳು ಸೇರಿದಂತೆ ಅಸಂಖ್ಯ ವೈವಿಧ್ಯಮಯ ಜಲಚರಗಳು ಅಳಿವಿನಂಚಿಗೆ ಸರಿಯುತ್ತವೆ. ಮೀನುಗಾರರಿಗೆ ಮೀನುಗಾರಿಕೆಗೆ ತೊಂದರೆಯಾಗುತ್ತದೆ. ಬಿರುಗಾಳಿಯನ್ನು ತಡೆಯಲು ಸುರಹೊನ್ನೆಯಂತಹ ಮರಗಳಿಗಿರುವ ಸಾಮಥ್ರ್ಯ ತಡೆಗೋಡೆಗಳಿಗಿರುವುದಿಲ್ಲ ಎಂದ ಅವರು, ಕಳ್ಳಿ ಗಿಡಗಳು, ಸಮುದ್ರ ತೀರದಲ್ಲಿ ವಿಸ್ತಾರವಾಗಿ ಹಬ್ಬಿರುವ ಬಳ್ಳಿಗಳು, ಹಸಿರುಗೋಡೆಯ ಸಸಿಗಳು ಜೈವಿಕ ಗೋಡೆಗಳಾಗಿ ಸಮುದ್ರವನ್ನು, ಜಲಚರಗಳನ್ನು ಮಾನವನ ಸೊತ್ತುಗಳನ್ನು ಕಾಪಾಡುತ್ತವೆ. ಸಮುದ್ರ ತೀರಗಳನ್ನು ಅತಿಕ್ರಮಿಸುವುದರಿಂದ ಅದರ ಪರಿಣಾಮವನ್ನು ತೀರದಲ್ಲಿರುವ ಜೀವ ರಾಶಿ ಅನುಭವಿಸಬೇಕಾಗುತ್ತದೆ ಎಂದರು.
ಅಪರಾಹ್ನದ ಅಧಿವೇಶನದಲ್ಲಿ ಎನ್ ಐ ಟಿಕೆ ಯ ಡಾ ಕಿರಣ್ ಜಿ ಶಿರ್ಲಾಲ್ ಅವರು ಮಾತನಾಡಿ, ಸಮುದ್ರ ಕೊರೆತಕ್ಕೆ ಕಾರಣ, ಸಮಸ್ಯೆ ಮತ್ತು ಪರಿಹಾರದ ಬಗ್ಗೆ ವಿವರಿಸಿದರು. ನಮ್ಮ ಕರಾವಳಿ ತೀರದ ಕೊರೆತಕ್ಕೆ ಮನುಷ್ಯ ನೀಡಿದ ಕೊಡುಗೆ ಹಾಗೂ ಪ್ರಾಕೃತಿಕ ಕಾರಣಗಳನ್ನು ವಿವರಿಸಿದರು. ಹಸಿರುಗೋಡೆ ನಿರ್ಮಾಣ ಮತ್ತು ಇಂಜಿನಿಯರಿಂಗ್ ಪರಿಹಾರ, ಇದುವರೆಗೆ ಎನ್ ಐ ಟಿ ಕೆಯಿಂದ ನೀಡಿರುವ ಅತ್ಯುತ್ತಮ ಡಿಸೈನ್ ಮತ್ತು ಅದರ ಅಳವಡಿಕೆಯಲ್ಲಾದ ಸಮಸ್ಯೆಗಳ ಬಗ್ಗೆ ಪ್ರಶಿಕ್ಷಣಾರ್ಥಿಗಳಿಗೆ ಮಾಹಿತಿ ನೀಡಿದರು. ಸೀಬಡ್ರ್ ನ ಯಶೋಗಾಥೆ ಹಾಗೂ ಕೋವಳಂ ನಲ್ಲಿ, ಉಳ್ಳಾಲದಲ್ಲಿ ಯೋಜನೆ ವಿಫಲವಾಗಲು ಕಾರಣಗಳೇನು ಎಂಬುದನ್ನು ವಿವರಿಸಿದರು.

Wednesday, November 23, 2011

ಪ್ರಾಕೃತಿಕ ಸಮತೋಲನದಿಂದ ವಿಕೋಪಗಳನ್ನು ತಡೆಯಲು ಸಾಧ್ಯ;ಡಾ.ಕೆ.ಎನ್.ವಿಜಯಪ್ರಕಾಶ್

ಮಂಗಳೂರು,ನವೆಂಬರ್.23:ಪ್ರಾಕೃತಿಕ ಅಸಮತೋಲನದಿಂದಾಗಿ ಪ್ರಕೃತಿ ವಿಕೋಪಗಳು ಹೆಚ್ಚುತ್ತಿದ್ದು ಅಭಿವೃದ್ಧಿಯ ಮೇಲೆ ಇಂತಹ ವಿಕೋಪಗಳು ದುಷ್ಪರಿಣಾಮ ಬೀರಲಿದೆ ಎಂದು ದಕ್ಷಿಣಕನ್ನಡ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ರವರು ಹೇಳಿದರು.
ಅವರು ಇಂದು ಜಿಲ್ಲಾ ತರ ಬೇತಿ ಸಂಸ್ಥೆ ಯಲ್ಲಿ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿ ಕಾರಿ ಗಳಿಗೆ ಹಮ್ಮಿ ಕೊಂಡಿದ್ದ ಮೂರು ದಿನ ಗಳ ಕಡಲ ಕೊರೆತ ನಿರ್ವ ಹಣೆ ತರ ಬೇತಿ ಕಾರ್ಯಾ ಗಾರ ವನ್ನು ಉದ್ಘಾ ಟಿಸಿ ಮಾತ ನಾಡು ತ್ತಿದ್ದರು.ನಮ್ಮ ಸುತ್ತಲಿನ ಪರಿ ಸರ ವನ್ನು ಸೂಕ್ಷ್ಮ ವಾಗಿ ಗಮ ನಿಸಿ ದರೆ ಪರಿ ಸರ ದಲ್ಲಾ ಗುತ್ತಿ ರುವ ಬದ ಲಾವನೆ ನಮ್ಮ ಗಮ ನಕ್ಕೆ ಬರು ತ್ತದೆ ಎಂದ ಅವರು, ಇಂದು ಜಿಲ್ಲೆ ಯಲ್ಲಿ ಕನಿಷ್ಠ ಉಷ್ಣಾಂಶ ದಾಖಲಾಗಿದೆ; ಆಗಾಗ ಅಕಾಲಿಕ ಮಳೆಯು ಆಗುತ್ತಿದೆ. ಹೀಗೆ ಪ್ರಕೃತಿಯಲ್ಲಿ ಆಗುವ ಏರಿಳಿತಗಳು ಸಾಮಾಜಿಕ ಸ್ವಾಸ್ಥ್ಯದ ಮೇಲೆ ಪರಿಣಾಮವನ್ನು ಬೀರುತ್ತಿದೆಯೆಂದು ನುಡಿದರು.
ಸಾಮಾಜಿಕ ಸ್ವಾಸ್ಥ್ಯ ಕಾಪಿಡುವಲ್ಲಿ ಅಧಿಕಾರಿಗಳ ಪಾತ್ರ, ಕಾರ್ಯಕ್ರಮದ ಅನುಷ್ಠಾನದಲ್ಲಿರಬೇಕಾದ ಪ್ರಾಮಾಣಿಕತೆಯ ಬಗ್ಗೆ ಮಾತನಾಡಿದರು. ಮೂರು ದಿನಗಳ ಕಾರ್ಯಾಗಾರದ ಅವಧಿಯನ್ನು ವಿರಾಮವೆಂದು ಭಾವಿಸದೇ ತರಬೇತಿಯಲ್ಲಿ ಪಡೆದ ಮಾಹಿತಿ ಮತ್ತು ತಂತ್ರಜ್ಞಾನಗಳನ್ನು ತಮ್ಮ ಕಾರ್ಯಕ್ಷೇತ್ರದಲ್ಲಿ ಅಳವಡಿಸಿಕೊಳ್ಳಲು ಸಲಹೆ ಮಾಡಿದರು. ಇದಕ್ಕೆ ಉತ್ತಮ ಉದಾಹರಣೆಯೆಂದರೆ ತಾವು ಮಹಾನಗರಪಾಲಿಕೆಯ ಆಯುಕ್ತರಾಗಿದ್ದ ಅವಧಿಯಲ್ಲಿ ನಗರಾಡಳಿತದಲ್ಲಿ ವಿಕೋಪ ನಿರ್ವಹಣೆ ಕ್ರಿಯಾ ಯೋಜನೆಯನ್ನು ಅಳವಡಿಸಿಕೊಂಡ ಕಾರಣ, ಮಳೆಗಾಲದಲ್ಲಿ ಕೃತಕ ನೆರೆ ಉಂಟಾಗಲಿಲ್ಲವೆಂಬುದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಂಡರು. ಜಿಲ್ಲೆಯಲ್ಲಿ ಈ ದಿಸೆಯಲ್ಲಿ ರಚನಾತ್ಮಕ ಯೋಜನೆಗಳನ್ನು ಅಳವಡಿಸಿಕೊಳ್ಳಲು ಸಾಧ್ಯವಾಗಿದೆಯೆಂದರು.
ಕಡಲ್ಕೊರೆತ ತಡೆಗೆ ಕೈಗೊಂಡ ಕ್ರಮಗಳು, ಕಾಂಡ್ಲಾ ವನದ ಅಗತ್ಯವನ್ನು ಈ ಸಂದರ್ಭದಲ್ಲಿ ಸಿಇಒ ಪ್ರತಿಪಾದಿಸಿದರು.
ಸಮಾರಂಭದಲ್ಲಿ ಮೈಸೂರಿನ ಆಡಳಿತ ತರಬೇತಿ ಸಂಸ್ಥೆಯ ವಿಕೋಪ ನಿರ್ವಹಣೆ ಕೇಂದ್ರದ ಡಾ.ಆರ್.ಧರ್ಮರಾಜು ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಡಾ. ಜಿ.ವಿಶ್ವನಾಥ್ ಅವರು ಉಪಸ್ಥಿತರಿದ್ದರು. ಉಪಪ್ರಾಚಾರ್ಯರಾದ ಶ್ರೀಮತಿ ಪ್ರಮೀಳಾ ಸ್ವಾಗತಿಸಿದರು. ಶ್ರೀಮತಿ ಸುಷ್ಮಾ ಕಾರ್ಯಕ್ರ್ರಮ ನಿರೂಪಿಸಿದರು.
ಬಳಿಕ ನಡೆದ ಅಧಿವೇಶನದಲ್ಲಿ 2005 ವಿಕೋಪ ನಿರ್ವಹಣಾ ಕಾಯಿದೆ ಕುರಿತು, ವಿಕೋಪ ನಿರ್ವಹಣೆಗಾಗಿ ಮೀಸಲಿಟ್ಟಿರುವ 25,000 ಕೋಟಿ ರೂ.ಗಳು ಹಾಗೂ ಈ ಸಂಬಂಧ ನಡೆಯುತ್ತಿರುವ ನಿರಂತರ ಯೋಜನೆಗಳ ಬಗ್ಗೆ ಡಾ ವಿಶ್ವನಾಥ ಅವರು ಮಾಹಿತಿ ನೀಡಿದರು. ಸಿಆರ್ ಝಡ್ ಕುರಿತು ಸಹಾಯಕ ನಿರ್ದೇಶಕರಾದ ಮಹೇಶ್ ಅವರು ಪಿಪಿಟಿ ಪ್ರಸಂಟೇಷನ್ ಮೂಲಕ ಮಾಹಿತಿ ನೀಡಿದರು.

Tuesday, November 22, 2011

ದ.ಕ.ಜಿ.ಪಂ. 2012-13 ನೇ ಸಾಲಿಗೆ ರೂ.14,91,648 ಲಕ್ಷ ವಾರ್ಷಿಕ ಯೋಜನೆ;ಶೈಲಜಾ ಭಟ್

ಮಂಗಳೂರು,ನವೆಂಬರ್.22: ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಯೋಜನೆಗಳ ಫಲಗಳು ದೊರಕಿ ಅವನೂ ಸಹ ಎಲ್ಲರಂತೆ ಅಭಿವೃದ್ಧಿ ಹೊಂದ ಬೇಕೆಂಬುದೇ ಸರ್ಕಾರಗಳ ಮುಖ್ಯ ಉದ್ದೇಶ.ಈ ಉದ್ದೇಶ ಈಡೇರಿಕೆಗೆ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ನ ಜಿಲ್ಲಾ ಯೋಜನಾ ಸಮಿತಿಯು 2012-13ನೇ ಸಾಲಿಗೆ 36 ವಲಯಗಳ ಮೂಲಕ ವಿವಿಧ ಜನ ಕಲ್ಯಾಣ ಯೋಜನೆಗಳನ್ನು ಅನುಷ್ಠಾನಗೊಳಿಸಲು ರಾಜ್ಯ ಅನುದಾನ ರೂ.7496.37 ಹಾಗೂ ಕೇಂದ್ರದ ಅನುದಾನ ರೂ.7420.11 ಲಕ್ಷ ಸೇರಿ ಒಟ್ಟು 14,91,648 ಲಕ್ಷ ರೂ.ಗಳ ವಾರ್ಷಿಕ ಯೋಜನೆ ತಯಾರಿಸಿ ಅನುಮೋದನೆಗೆ ರಾಜ್ಯ ಸರ್ಕಾರಕ್ಕೆ ಕಳುಹಿಸಿದೆಯೆಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೈಲಜಾ ಭಟ್ ತಿಳಿಸಿದ್ದಾರೆ.
ಅವರು ಸೋಮ ವಾರ ಜಿಲ್ಲಾ ಪಂಚಾ ಯತ್ ನೇತ್ರಾವತಿ ಸಭಾಂ ಗಣದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಯೋಜನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತ ನಾಡುತ್ತಿದ್ದರು.ಕಳೆದ ಸಾಲಿನ ವಾರ್ಷಿಕ ಯೋಜನೆಯ ರಾಜ್ಯ ಅನುದಾನಕ್ಕಿಂತ ಮುಂದಿನ ಆರ್ಥಿಕ ವರ್ಷಕ್ಕೆ ರೂ.4919.43 ಲಕ್ಷಗಳ ಹೆಚ್ಚುವರಿ ಅನುದಾನಕ್ಕೆ ಪ್ರಸ್ತಾಪಿಸಲಾಗಿದೆ ಎಂದರು.
2012-13ನೇ ಸಾಲಿಗೆ ಜಿಲ್ಲಾ ಪಂಚಾಯತ್ ಗೆ ರಾಜ್ಯ ಅನುದಾನ ರೂ.3609.71 ಲಕ್ಷ ಮತ್ತು ಕೇಂದ್ರ ಅನುದಾನ ರೂ.3789.17 ಲಕ್ಷ, ಇದೇ ರೀತಿ ತಾಲ್ಲೂಕು ಪಂಚಾಯತ್ಗಳಿಗೆ ರಾಜ್ಯ ವಲಯ 2508.27 ಲಕ್ಷ ಹಾಗೂ ಕೇಂದ್ರ ಅನುದಾನ ರೂ.2223.44 ,ಗ್ರಾಮ ಪಂಚಾಯತ್ ಗಳಿಗೆ ರಾಜ್ಯ ಅನುದಾನ ರೂ.1378.39 ಲಕ್ಷ ಹಾಗೂ ಕೇಂದ್ರ ಅನುದಾನ 1407.50 ಲಕ್ಷ ಅನುದಾನ ಒಟ್ಟು ರೂ.7496.37 ಲಕ್ಷ ರಾಜ್ಯ ಅನುದಾನ ಹಾಗೂ ರೂ.7420.11 ಲಕ್ಷ ಕೇಂದ್ರ ಅನುದಾನಕ್ಕಾಗಿ ಪ್ರಸ್ತಾವನೆ ಸಲ್ಲಿಸಲಾಗಿದೆಯೆಂದು ಜಿಲ್ಲಾ ಪಂಚಾಯತ್ ನ ಮುಖ್ಯ ಯೋಜನಾಧಿಕಾರಿ ಮೊಹಮ್ಮದ್ ನಜೀರ್ ಸಭೆಗೆ ತಿಳಿಸಿದರು.
ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆ 1993 ರ ನಿಯಮ 310 ರಂತೆ ಪ್ರತಿಯೊಂದು ಜಿಲ್ಲೆಯಲ್ಲಿ ಜಿಲ್ಲಾ ಯೋಜನಾ ಸಮಿತಿಯನ್ನು ರಚಿಸುವುದು ಕಡ್ಡಾಯ ಹಾಗೂ ಎಲ್ಲಾ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳು ಜಿಲ್ಲಾ ಯೋಜನಾ ಸಮಿತಿಗೆ ತಮ್ಮ ಕ್ರಿಯಾ ಯೋಜನೆಗಳನ್ನು ಸಲ್ಲಿಸಿ ಅನುಮೋದನೆ ಪಡೆಯುವುದು ಕಡ್ಡಾಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ. ಕೆ.ಎನ್. ವಿಜಯಪ್ರಕಾಶ್ ತಿಳಿಸಿದ್ದಾರೆ.
ದಕ್ಷಿಣಕನ್ನಡ ಜಿಲ್ಲಾ ಯೋಜನಾ ಸಮಿತಿಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರು ಅಧ್ಯಕ್ಷರಾಗಿರುತ್ತಾರೆ. ಮಂಗಳೂರು ಮಹಾನಗರಪಾಲಿಕೆ ಮೇಯರ್ ಅವರು ಉಪಾಧ್ಯಕ್ಷರಾಗಿರುತ್ತಾರೆ.ಲೋಕಸಭಾ ಸದಸ್ಯರು ಸದಸ್ಯರಾಗಿದ್ದು,ಇವರ ಜೊತೆ ಜಿಲ್ಲಾ ಪಂಚಾಯತ್ ನ 15 ಜನ ಸದಸ್ಯರು ಹಾಗೂ ಪುರಸಭೆ ಮತ ಕ್ಷೇತ್ರಗಳ 9 ಚುನಾಯಿತ ಸದಸ್ಯರು ಸದಸ್ಯರಾಗಿರುತ್ತಾರೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾದಿಕಾರಿ ಕಾರ್ಯದರ್ಶಿಯಾಗಿದ್ದು ಜಿಲ್ಲೆಯೆ 8 ವಿಧಾನ ಸಭಾ ಸದಸ್ಯರು 3 ವಿಧಾನ ಪರಿಷತ್ ಸದಸ್ಯರು ಹಾಗೂ ಜಿಲ್ಲಾಧಿಕಾರಿಗಳು ಜಿಲ್ಲಾ ಯೋಜನಾ ಸಮಿತಿ ಖಾಯಂ ಆಹ್ವಾನಿತರಾಗಿರುತ್ತಾರೆ.
ಜಿಲ್ಲಾ ಯೋಜನಾ ಸಮಿತಿ ಪ್ರತಿ 3 ತಿಂಗಳಿಗೊಮ್ಮೆ ಸಭೆ ಸೇರಲಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕೆ.ಟಿ.ಶೈಲಜಾ ಭಟ್ ತಿಳಿಸಿದರು.ಸಭೆಯಲ್ಲಿ ಹಾಜರಿದ್ದ ಜಿಲ್ಲಾ ಪಂಚಾಯತ್ ಸದಸ್ಯರಾದ ನವೀನ್ ಕುಮಾರ್ ಮೇನಾಲ ಅವರು ಮಾತನಾಡಿ ಜಿಲ್ಲಾ ವಾರ್ಷಿಕ ಯೋಜನೆ ತಯಾರಿಸುವಾಗ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಳೆ ಹೆಚ್ಚಾಗಿದ್ದು ಜಿಲ್ಲೆಯ ರಸ್ತೆಗಳನ್ನು ಡಾಂಬರೀಕರಣಕ್ಕೆ ಬದಲಾಗಿ ಕಾಂಕ್ರೀಟೀಕರಣಗೊಳಿಸಲು ಪ್ರಸ್ತಾವನೆ ಸಲ್ಲಿಸಬೇಕೆಂದು ತಮ್ಮ ಅಭಿಪ್ರಾಯ ಸೂಚಿಸಿದರು. ಇದಕ್ಕೆ ಇತರೆ ಎಲ್ಲಾ ಸದಸ್ಯರು ಸಹಮತ ವ್ಯಕ್ತಪಡಿಸಿದರು.ಜಿಲ್ಲೆಯ 185 ಹಿರಿಯ ಪ್ರಾಥಮಿಕ ಶಾಲೆಗಳಿಗೆ ಕುಡಿಯುವ ನೀರು ಸೌಲಭ್ಯ ಕಲ್ಪಿಸಲಾಗುತ್ತಿದ್ದು ಎಲ್ಲಾ ಪ್ರೌಢಶಾಲೆಗಳಿಗೂ ಶೌಚಾಲಯಗಳನ್ನು ಡಿಸೆಂಬರ್ 31 ರೊಳಗೆ ಪೂರ್ಣಗೊಳಿಸುವಂತೆ ಡಾ.ವಿಜಯಪ್ರಕಾಶ್ ಸೂಚಿಸಿದರು.
ಅಲ್ಲದೆ ಜಿಲ್ಲೆಯ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಎಲ್ಲಾ ರಸ್ತೆಗಳ ಗುಂಡಿಗಳನ್ನು ಮುಚ್ಚಲು ರೂ.,13.5 ಕೋಟಿ ವೆಚ್ಚದಲ್ಲಿ ಕಾಮಗಾರಿ ಪ್ರಕಿೃಯೆ ಆರಂಭಿಸಲಾಗಿದೆಯೆಂದರು.
ಸಭೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ಮಹಾಪೌರ ಪ್ರವೀಣ್ ,ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶ್ರೀಮತಿ ಧನಲಕ್ಷ್ಮಿ ಜನಾರ್ಧನ್ ಮುಂತಾದವರು ಹಾಜರಿದ್ದರು.

ಅರಣ್ಯ ಪ್ರದೇಶದ ಕೊರಗರು ಅರ್ಜಿ ಸಲ್ಲಿಸಿದರೆ ಹಕ್ಕು ಪತ್ರ; ಜಿಲ್ಲಾಧಿಕಾರಿ

ಮಂಗಳೂರು,ನವೆಂಬರ್.22: ದಕ್ಷಿಣಕನ್ನಡ ಜಿಲ್ಲೆಯಲ್ಲಿ 24 ಕೊರಗರ ಕುಟುಂಬಗಳು ಅರಣ್ಯ ವ್ಯಾಪ್ತಿಯಲ್ಲಿ ಸಾಗುವಳಿ ಮಾಡುತ್ತಿದ್ದು,ಅವರು ಹಕ್ಕು ಪತ್ರ ಕೋರಿ ಸಂಬಂಧಿಸಿದವರಿಗೆ ಅರ್ಜಿ ಸಲ್ಲಿಸಿದಲ್ಲಿ ಕೂಡಲೇ ಹಕ್ಕು ಪತ್ರ ದೊರಕಿಸುವುದಾಗಿ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡರು ತಿಳಿಸಿದ್ದಾರೆ.
ಅವರು ಸೋಮವಾರ ತಮ್ಮ ಕಚೇರಿಯಲ್ಲಿ ಈ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೊರಗ ಮುಖಂಡರು ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳೊಂದಿಗೆ ಕೊರಗರ ಜಮೀನು ಹಕ್ಕು ಪತ್ರ ವಿತರಣೆ ಸೇರಿದಂತೆ ಇತರ ವಿಷಯಗಳ ಕುರಿತು ಚರ್ಚಿಸಿದರು.
ಜಿಲ್ಲೆಯಲ್ಲಿ 857 ಕೊರಗ ಕುಟುಂಬಗಳಿದ್ದು,ಅವರಲ್ಲಿ 501 ಕುಟುಂಬಗಳಿಗೆ ಸ್ವಂತ ಜಮೀನು ಇದೆ.209 ಕುಟುಂಬಗಳು ಸರ್ಕಾರಿ ಜಮೀನಿನಲ್ಲಿ ಸಾಗುವಳಿ ಮಾಡುತ್ತಿದ್ದರೆ, 24 ಕುಟುಂಬಗಳು ಅರಣ್ಯ ಪ್ರದೇಶದಲ್ಲಿದ್ದಾರೆ. 122 ಕುಟುಂಬಗಳು ಇತರ ಜಮೀನುಗಳಲ್ಲಿ ಇದ್ದಾರೆ.
501 ಕುಟುಂಬಗಳಿಗೆ ತಮ್ಮ ಜಮೀನು ಹಕ್ಕು ಪತ್ರ ಈಗಾಗಲೇ ಇದ್ದು ಇನ್ನೂ 356 ಕುಟುಂಬಗಳಿಗೆ ಹಕ್ಕು ಪತ್ರ ಸಿಕ್ಕಿಲ್ಲ ಎಂದ ಜಿಲ್ಲಾಧಿಕಾರಿಗಳು ಹಕ್ಕು ಪತ್ರ ವಿತರಣೆಯನ್ನು ,ಇನ್ನು ಒಂದು ತಿಂಗಳೊಳಗೆ ಪೂರ್ಣಗೊಳಿಸುವಂತೆ ತಹಶೀಲ್ದಾರರಿಗೆ ಕಾಲಮಿತಿಯನ್ನು ನಿಗಧಿಪಡಿಸುವಂತೆ ಉಪವಿಭಾಗಾಧಿಕಾರಿಗಳಿಗೆ ಸೂಚಿಸಿದರು. ಈಗಾಗಲೇ ಸರ್ಕಾರಿ ಜಾಗದಲ್ಲಿದ್ದು, ಇನ್ನೂ ಹಕ್ಕು ಪತ್ರ ಸಿಗದಿದ್ದವರು ಕೂಡಲೇ ಸಂಬಂಧಿಸಿದ ತಾಲ್ಲೂಕು ಅಧಿಕಾರಿಗಳಿಗೆ ಅರ್ಜಿಗಳನ್ನು ನೀಡಿದರೆ ಪರಿಶೀಲಿಸಿ ಹಕ್ಕು ಪತ್ರ ದೊರಕಿಸಲು ಸರ್ಕಾರಕ್ಕೆ ಕಳುಹಿಸಲಾಗುವುದೆಂದರು.
ಜಿಲ್ಲೆಯಲ್ಲಿ ಒಟ್ಟು 73 ಕೊರಗರ ಕುಟುಂಬಗಳಿಗೆ 82.15 ಎಕ್ರೆ ಜಮೀನು ಮಂಜೂರು ಮಾಡಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ 27 ಕುಟುಂಬಗಳಿಗೆ 29.92 ಎಕ್ರೆ ಅತೀ ಹೆಚ್ಚು ,ಅತೀ ಕಡಿಮೆ ಸುಳ್ಯ ತಾಲೂಕಿನಲ್ಲಿ ಒಂದು ಕುಟುಂಬಕ್ಕೆ 0.70 ಎಕ್ರೆ ಜಮೀನು ಮಂಜೂರು ಮಾಡಲಾಗಿದೆ. ಮಂಗಳೂರು ತಾಲೂಕಿನ 19 ಕುಟುಂಬಗಳಿಗೆ 28.27 ಎಕ್ರೆ ,ಬೆಳ್ತಂಗಡಿ ತಾಲೂಕಿನ 21 ಕುಟುಂಬಗಳಿಗೆ 16.93 ಎಕ್ರೆ ಹಾಗೂ ಪುತ್ತೂರು ತಾಲೂಕಿನ 05 ಕುಟುಂಬಗಳಿಗೆ 6.33 ಎಕ್ರೆ ಜಮೀನು ಮಂಜೂರು ಮಾಡಲಾಗಿದೆಯೆಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಆರೋಗ್ಯ ಪ್ರೇರಕರಾಗಿ ಕಾರ್ಯ ನಿರ್ವಹಿಸುತ್ತಿರುವ ಕೊರಗ ಹೆಣ್ಣು ಮಕ್ಕಳಿಗೆ 5 ತಿಂಗಳ ಗೌರವಧನದ ಚೆಕ್ಗಳನ್ನು ನೀಡಿದರು. ಸ್ವಂತ ನಿವೇಶನವಿದ್ದು, ಮನೆ ನಿರ್ಮಿಸಲು ಸರ್ಕಾರ ನೀಡುವ ಅನುದಾನದ ಚೆಕ್ ಗಳನ್ನು ಜಿಲ್ಲಾಧಿಕಾರಿಗಳು ಇದೇ ಸಂದರ್ಭದಲ್ಲಿ ವಿತರಿಸಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ದಯಾನಂದ, ಮಂಗಳೂರು ಉಪವಿಭಾಗಾಧಿಕಾರಿ ಡಾ.ವೆಂಕಟೇಶ್ ಮುಂತಾದವರು ಹಾಜರಿದ್ದರು.

Monday, November 21, 2011

ಸಂಕಷ್ಟದಲ್ಲಿರುವ ಯುವ ಸಂಘಟನೆಗಳಿಗೆ ಸರ್ಕಾರದ ಪ್ರೋತ್ಸಾಹ;ಜೆ.ಕೃಷ್ಣ ಪಾಲೇಮಾರ್

ಮಂಗಳೂರು,ನವೆಂಬರ್.21:ಅಸಾಧಾರಣ ಪ್ರತಿಭೆಗಳಿದ್ದು,ಸರಿಯಾದ ಅವಕಾಶಗಳು ಸೂಕ್ತ ಕ್ರೀಡಾ ಸಾಮಾಗ್ರಿಗಳನ್ನು ಖರೀದಿಸಲು ಶಕ್ತಿ ಇಲ್ಲದೆ, ಸಂಕಷ್ಠದಲ್ಲಿರುವ ಯುವ ಸಂಘಟನೆಗಳಿಗೆ ಸರ್ಕಾರ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸುವ ಮೂಲಕ, ಗ್ರಾಮೀಣ ಕ್ರೀಡಾ ಪ್ರತಿಭೆಗಳು ಬೆಳಕಿಗೆ ಬರಲು ನೆರವಾಗಿದೆಯೆಂದು ಜಿಲ್ಲಾ ಉಸ್ತುವಾರಿ ಮತ್ತು ಜೀವಿಶಾಸ್ತ್ರ ,ಪರಿಸರ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಜೆ.ಕೃಷ್ಣಪಾಲೇಮಾರ್ ತಿಳಿಸಿದ್ದಾರೆ.
ಅವರು ಇಂದು ಜಿಲ್ಲಾ ಡಳಿತ,ದಕ್ಷಿಣ ಕನ್ನಡ ಜಿಲ್ಲಾ ಪಂಚಾ ಯತ್ ಹಾಗೂ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆ ಇವರ ಆಶ್ರ ಯದಲ್ಲಿ ಏರ್ಪ ಡಿಸಿದ್ದ ಗ್ರಾ ಮೀಣ ಕ್ರೀಡೆ ಯುವಕ ಸಂಘ ಗಳಿಗೆ ಕ್ರೀಡಾ ಸಲ ಕರಣೆ ವಿತ ರಿಸುವ ಕಾರ್ಯ ಕ್ರಮ ಉದ್ಘಾ ಟಿಸಿ ಕ್ರೀಡಾ ಸಲ ಕರಣೆ ವಿತರಿಸಿ ಮಾತನಾಡಿದರು.ಒಂದು ತಾಲೂಕಿಗೆ 24 ಸಂಘಗಳಂತೆ ಜಿಲ್ಲೆಯ ಒಟ್ಟು 120 ಸಂಘಗಳಿಗೆ ರೂ.5000/- ಮೊತ್ತದ ಕ್ರೀಡಾ ಸಾಮಾಗ್ರಿಗಳನ್ನು ವಿತರಿಸಲಾಗಿದೆ ಎಂದರು. 2012 ರ ಜನವರಿ 16 ರಿಂದ ಮಂಗಳೂರು ನಗರದಲ್ಲಿ ಪ್ರಥಮ ಬಾರಿಗೆ ರಾಷ್ಟ್ರೀಯ ಯುವಜನೋತ್ಸವವನ್ನು ಹಮ್ಮಿಕೊಂಡಿದ್ದು,ಈ ಯುವಜನೋತ್ಸವದಲ್ಲಿ ರಾಷ್ಟ್ರಾದ್ಯಂತ ವಿವಿಧ ರಾಜ್ಯಗಳ ಸುಮಾರು 6000 ಕ್ಕೂ ಹೆಚ್ಚು ಯುವ ಪ್ರತಿಭೆಗಳು ಭಾಗವಹಿಸುತ್ತಿವೆ. ಈ ಯುವಜನೋತ್ಸವದ ಯಶಸ್ವಿಗೆ ಮಂಗಳೂರು ನಗರವನ್ನು ಸಿಂಗರಿಸಬೇಕು.ಇಡೀ ರಾಷ್ಟ್ರ ಮಂಗಳೂರು ಕಡೆ ನೋಡುತ್ತಿದೆ. ಆದ್ದರಿಂದ ನಮ್ಮ ನಗರದ ಎಲ್ಲಾ ದೇವಾಲಯ,ಚರ್ಚು,ಮಸೀದಿಗಳು ,ಶಾಲಾ ಕಾಲೇಜುಗಳು,ಪಾರಂಪರಿಕ ಕಟ್ಟಡಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲು ಸಾರ್ವಜನಿಕರನ್ನು ವಿನಂತಿಸಿದ್ದಾರೆ.

ಸಮಾ ರಂಭ ದಲ್ಲಿ ಹಾಜ ರಿದ್ದ ವಿಧಾನ ಸಭೆಯ ಉಪಾ ಧ್ಯಕ್ಷ ರಾದ ಎನ್.ಯೋ ಗೀಶ್ ಭಟ್ ಮಾತ ನಾಡಿ ರಾಷ್ಟ್ರೀ ಯ ಅಂತ ರ್ರಾಷ್ಟ್ರೀಯ ಕ್ರೀಡಾ ಪಟುಗಳು ಸ್ಪರ್ಧೆ ಗಳಲ್ಲಿ ನಿಶ್ಚಿಂತ ವಾಗಿ ಭಾಗ ವಹಿಸಲು ಅವರಿಗೆ ಆರ್ಥಿಕ ಸಹಾಯವನ್ನು ಸಂಘ ಸಂಸ್ಥೆಗಳು,ಜಿಲ್ಲಾಡಳಿತ,ಉದ್ಯಮಿಗಳು, ನೀಡಲು ಮುಂದೆ ಬರಬೇಕೆಂದರು.ಮಂಗಳಾಕ್ರೀಡಾಂಗಣದಲ್ಲಿ ಸಿಂಥೆಟಿಕ್ಸ್ ಟ್ರಾಕ ನ್ನು ಅಳವಡಿಸಲು ಟೆಂಡರ್ ಅಂಗೀಕರಿಸಿದ್ದು ಯುವ ರಾಷ್ಟ್ರೀಯ ಜನೋತ್ಸವದ ನಂತರ ಕಾಮಗಾರಿ ಆರಂಭವಾಗಲಿದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೈಲಜಾ ಭಟ್ ವಹಿಸಿದ್ದರು. ಜಿಲ್ಲಾಧಿಕಾರಿ ಡಾ. ಎನ್.ಎಸ್.ಚನ್ನಪ್ಪಗೌಡ,ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್,ಜಿಲ್ಲಾ ಪಂಚಾಯತ್ ಉಪಾದ್ಯಕ್ಷೆ ಶ್ರೀಮತಿ ಧನಲಕ್ಷ್ಮಿಜನಾರ್ಧನ್, ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಈಶ್ವರ ಕಟೀಲ್,ಕೃಷಿ ಹಾಗೂ ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ನವೀನ್ಕುಮಾರ್ ಮೇನಾಲ,ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಜನಾರ್ಧನ ಗೌಡ ಮುಚ್ಚೂರು ಮುಂತಾದವರು ಹಾಜರಿದ್ದರು.
ಮಂಗಳೂರು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿದರ್ೇಶಕರಾದ ಶ್ರೀ ಪಾಶ್ವರ್ ನಾಥ ಸ್ವಾಗತಿಸಿದರೆ, ಕ್ರೀಡಾಧಿಕಾರಿ ಪಾಂಡುರಂಗ ಗೌಡ ವಂದಿಸಿದರು.

Friday, November 18, 2011

ಜನಪರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಆದ್ಯತೆ:ಮುಖ್ಯಮಂತ್ರಿ

ಮಂಗಳೂರು,ನವೆಂಬರ್.18 : ಜನಪರ ಕಾರ್ಯಕ್ರಮಗಳ ಅನುಷ್ಠಾನಕ್ಕೆ ತಮ್ಮ ಸರ್ಕಾರ ಆದ್ಯತೆ ನೀಡಿದ್ದು, ಕಾರ್ಯಕ್ರಮಗಳ ಅನುಷ್ಠಾನಕ್ಕೆ ಎಲ್ಲರ ಸಹಕಾರ ಅಗತ್ಯ ಎಂದು ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ಅವರು ಹೇಳಿದರು.ಅವರಿಂದು ವಿಟ್ಲ ದಲ್ಲಿ ಬಂಟ್ವಾಳ ತಾಲೂಕಿನ ಕಡೂರು ಕಾಂಞ ಗಾಡ್ ರಸ್ತೆಯ ಆಯ್ದ ಭಾಗ ಗಳಲ್ಲಿ ಮರು ಡಾಮರೀ ಕರಣ ಮತ್ತು ಸುರತ್ಕಲ್ -ಕಬಕ ರಸ್ತೆಯ 73.60 ರಿಂದ 76.60ಕಿ.ಮೀ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಬಂಟ್ವಾಳ ತಾಲೂಕು ಪುಣಚ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದರು.ದಕ್ಷಿಣ ಕನ್ನಡ ಜಿಲ್ಲೆಗೆ ವಿಶೇಷ ಅನು ದಾನ ನೀಡ ಲಾಗು ವುದು; 50 ಕೋಟಿ ರೂ.ಗಳ ವಿಶೇಷ ಪ್ಯಾಕೇಜ್ ನೀಡ ಲಾಗು ವುದು. ಈಗಾ ಗಲೇ ಜಿಲ್ಲೆಯ ವಿವಿಧ ಕಾಮ ಗಾರಿ ಗಳ ಅಭಿ ವೃದ್ಧಿಗೆ 3.30 ಲಕ್ಷ ರೂ ದುಡ್ಡಿದೆ. ಲೋಕೋ ಪಯೋಗಿ ಇಲಾ ಖೆಗೆ ಜಿಲ್ಲೆಯ ರಸ್ತೆ ಗಳ ಅಭಿ ವೃದ್ಧಿಗೆ 8.5 ಕೋಟಿ ರೂ., ನೀಡ ಲಾಗು ವುದು. ಡಿಸೆಂಬರ್ 30 ರೊಳಗೆ ಎಲ್ಲ ರಸ್ತೆಗಳು ಸಂಪೂರ್ಣ ದುರಸ್ತಿಯಾಗಬೇಕೆಂದ ಮುಖ್ಯಮಂತ್ರಿಗಳು, ಮಾಣಿ-ಸಂಪಾಜೆ ರಸ್ತೆ ಅಭಿವೃದ್ಧಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವರು ಪ್ರತೀ 15ದಿನಗಳಿಗೊಮ್ಮೆ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಬೇಕೆಂದ ಅವರು, ಅಭಿವೃದ್ಧಿ ಕಾಮಗಾರಿಗ ಕೈಗೊಳ್ಳುವಲ್ಲಿ ಹಿಂದೆ ಬಿದ್ದರೆ ಕಾರಣರಾದವರನ್ನು ಕ್ಷಮಿಸುವುದಿಲ್ಲ ಎಂದರು. ಸುಬ್ರಹ್ಮಣ್ಯ ಮತ್ತು ಸುತ್ತಮುತ್ತಲ ಅಭಿವೃದ್ಧಿಗೆ 120 ಕೋಟಿ ರೂ. ಬಿಡುಗಡೆಯಾಗಿದೆ.ವಿವಿಧ ಯೋಜನೆ ಯಡಿ ಯಲ್ಲಿ ಅಭಿ ವೃದ್ಧಿ ಕಾಮ ಗಾರಿಗೆ ರಾಜ್ಯ ದಲ್ಲಿ ಸಾಕಷ್ಟು ದುಡ್ಡಿದ್ದು ಅಭಿ ವೃದ್ಧಿ ಕಾಮ ಗಾರಿ ಗಳು ತುರ್ತು ಅನು ಷ್ಠಾನದ ಅಗತ್ಯ ವಿದೆ ಎಂದರು. ಇದೇ ಸಂದ ರ್ಭದಲ್ಲಿ ಜಿಲ್ಲಾ ಪಂಚಾ ಯಿತಿ ಯಿಂದ ವಿಷನ್ 2020 ಡಾಕ್ಯು ಮೆಂಟ್ ನ್ನು ಮುಖ್ಯ ಮಂತ್ರಿ ಗಳು ಬಿಡು ಗಡೆ ಮಾಡಿ ದರು.ಬಂಟ್ವಾಳ ತಾಲೂಕಿನ ಸುರತ್ಕಲ್- ಕಬಕ ರಸ್ತೆಯ ಕಿ.ಮೀ 73.60ರಿಂದ 76.60 ಕಿ.ಮೀ ವರೆಗೆ ರಸ್ತೆ ಅಭಿವೃದ್ಧಿ ಕಾಮಗಾರಿಗೆ 240 ಲಕ್ಷ ರೂ. ಅನುಮೋದನೆ ಗೊಂಡಿದೆ. ಬಂಟ್ವಾಳ ತಾಲೂಕಿನ ಕಡೂರು ಕಾಂಞಂಗಾಡ್ ರಸ್ತೆ ಕಾಮಗಾರಿ 184.00 ಯಿಂದ 195.60 ವರೆಗೆ ಕಾಮಗಾರಿಯು 5054 ರಾಜ್ಯ ಹೆದ್ದಾರಿ ನವೀಕರಣ ಯೋಜನೆಯಡಿಯಲ್ಲಿ ರೂ. 164.07 ಲಕ್ಷ ರೂ. ಅನುಮೋದನೆಗೊಂಡಿದೆ. ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ ಪಾಲೆಮಾರ್, ಶಾಸಕಿ ಶ್ರೀಮತಿ ಮಲ್ಲಿಕಾ ಪ್ರಸಾದ್, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶೈಲಜಾಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಾಗರಾಜ ಶೆಟ್ಟಿ, ಬಾಲಭವನದ ಅಧ್ಯಕ್ಷರಾದ ಶ್ರೀಮತಿ ಸುಲೋಚನಾ ಭಟ್ ಸೇರಿದಂತೆ ಹಲವು ಗಣ್ಯರು , ಅಧಿಕಾರಿಗಳು ಪಾಲ್ಗೊಂಡಿದ್ದರು.

ಕನ್ನಡ ಅಭಿವೃದ್ಧಿಗೆ ವಿವಿಗಳಿಗೆ ತಲಾ 2 ಕೋ.ರೂ. ಅನುದಾನ ;ಡಿ.ವಿ.ಸದಾನಂದ ಗೌಡ

ಮಂಗಳೂರು,ನವೆಂಬರ್.18: ಕನ್ನಡ ಅಭಿವೃದ್ಧಿಗೆ ರಾಜ್ಯದ ಎಲ್ಲಾ ವಿಶ್ವ ವಿದ್ಯಾಲಯಗಳಿಗೆ ತಲಾ 2 ಕೋಟಿ ಅನುದಾನ ನೀಡುವುದಾಗಿ ತಿಳಿಸಿದ ಮುಖ್ಯಮಂತ್ರಿಗಳು, ಶೀಘ್ರದಲ್ಲಿ ತಲಾ 1ಕೋಟಿ ಬಿಡುಗಡೆ ಮಾಡುವುದಾಗಿ ತಿಳಿಸಿದರು. ಕರ್ನಾಟಕ ಸರ್ಕಾರ ಗಡಿಯಲ್ಲಿರುವ ಯಾವುದೇ ಶಾಲೆಗಳನ್ನಾಗಲೀ ಅಥವಾ ಗಡಿಯಾಚೆಗಿನ ಶಾಲೆಗಳನ್ನಾಗಲೀ ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ.ಈ ಬಗ್ಗೆ ಯಾರೂ ಆತಂಕ ಪಡಬೇಕಿಲ್ಲ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಜನರಿಗೆ ಸ್ಪಷ್ಟಪಡಿಸಿದ್ದಾರೆ.ಅವರು ಇಂದು ಬಂಟ್ವಾಳ ತಾಲ್ಲೂ ಕಿನ ಅಳಿಕೆ ಶ್ರೀ ಸತ್ಯ ಸಾಯಿ ವಿದ್ಯಾ ಸಂಸ್ಥೆ ಗಳ ಪ್ರಾಂಗ ಣದಲ್ಲಿ ಏರ್ಪ ಡಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ 17ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇ ಳನ ಉದ್ಘಾ ಟಿಸಿ ಮಾತ ನಾಡಿ ದರು.5 ಕ್ಕಿಂತ ಕಡಿಮೆ ಮಕ್ಕ ಳಿರುವ ಗಡಿ ಶಾಲೆ ಗಳನ್ನು ಯಾವ ರೀತಿ ಪರಿ ಗಣಿಸ ಬೇಕು ಎಂಬು ದಕ್ಕೆ ತಾಲೂಕು ಪಂಚಾ ಯತ್ ಮೂಲಕ ನಿರ್ಣಯ ಕೈ ಗೊಳ್ಳಲು ತೀರ್ಮಾ ನಿಸ ಲಾಗಿದೆ ಯೆಂದು ಮುಖ್ಯ ಮಂತ್ರಿ ಗಳು ತಿಳಿ ಸಿದರು.ಡಾ.ಚಿದಾ ನಂದ ಮೂರ್ತಿ ಅವರ ಅಧ್ಯಕ್ಷ ತೆಯಲ್ಲಿ ಕನ್ನಡ ತಂ ತ್ರಾಂಶ ಅಭಿ ವೃದ್ಧಿಗೆ ಟೆಂಡರ್ ಆಹ್ವಾನಿಸಲು ಕ್ರಮ ಕೈಗೊಳ್ಳಲಾಗಿದೆಯೆಂದ ಮುಖ್ಯಮಂತ್ರಿಗಳು, ಇಂಗ್ಲೀಷ್ ಭಾಷೆ ಕಲಿತರೆ ಮಾತ್ರ ಬದುಕು ಎಂಬ ಧೋರಣೆ ಬಿಡಬೇಕೆಂದರು.ಗಡಿ ತಂಟೆಕೋರರನ್ನು ಸಮರ್ಥವಾಗಿ ನಿಗ್ರಹಿಸಲಾಗುವುದೆಂದ ಮುಖ್ಯಮಂತ್ರಿಗಳು ಬೆಳಗಾವಿ ಮಹಾನಗರಪಾಲಿಕೆ ಮಹಾಪೌರರ ಹಾಗೂ ಉಪಮಹಾಪೌರರ ವಿರುದ್ಧ ಕಾರಣ ಕೇಳಿ ನೋಟಿಸನ್ನು ಜಾರಿ ಮಾಡಲಾಗಿದು,ಅವರಿಂದ ಉತ್ತರ ಬಂದ ಕೂಡಲೇ ಕ್ರಮ ಕೈಗೊಳ್ಳಲಾಗುವುದೆಂದ ಅವರು ಗಡಿ ವಿಷಯದಲ್ಲಿ ಯಾವುದೇ ರಾಜಿ ಸಂಧಾನಗಳಿಗೆ ಅವಕಾಶವೇ ಇಲ್ಲ ಎಂದರು.
ನೆರೆ ಕೇರಳ ರಾಜ್ಯದೊಂದಿಗೆ ಉತ್ತಮ ಭಾಂದವ್ಯ ಹೊಂದುವ ಸಲುವಾಗಿ ಗಡಿ ಭಾಗದ ಕನ್ನಡ ಶಾಲೆಗಳನ್ನು ಬಲಪಡಿಸುವ ಹಾಗೂ ರಾಜ್ಯ ಯಾತ್ರಾರ್ಥಿಗಳಿಗೆ ಶಬರಿಮಲೆಯಲ್ಲಿ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ 5 ಎಕರೆ ಜಾಗವನ್ನು ನೀಡುವಂತೆ ಕೇರಳ ಮುಖ್ಯಮಂತ್ರಿ ಉಮ್ಮನ್ ಚಾಂಡಿ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಚರ್ಚಿಸಿರುವುದಾಗಿ ತಿಳಿಸಿದರು.ಬಂ ಟ್ವಾಳ, ಕಲ್ಲಡ್ಕ,ಅಳಿಕೆ, ವಿಟ್ಲ ಮುಂ ತಾದ ಗ್ರಾ ಮೀಣ ರಸ್ತೆ ಗಳ ಸುಧಾ ರಣೆಗೆ ರೂ. 3,27 ಕೋಟಿ ಬಿಡು ಗಡೆ ಮಾಡ ಲಾಗಿದೆ. ಅಂತೆ ಯೇ ಅಳಿಕೆ,ವಿಟ್ಲ,ಕಲ್ಲಡ್ಕ ಗ್ರಾಮ ಗಳಿಗೆ ಶಾಶ್ವತ ಕುಡಿ ಯುವ ನೀರನ್ನು ನೇತ್ರಾ ವತಿ ನದಿ ಯಿಂದ ಒದಗಿಸುವ ಬಗ್ಗೆ ಇನ್ನು ಒಂದು ತಿಂಗಳಲ್ಲಿ ಕ್ರಿಯಾ ಯೋಜನೆ ತಯಾರಿಸಿ ತಮಗೆ ಸಲ್ಲಿಸಿದಲ್ಲಿ ಮುಂದಿನ ಎರಡು ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಖರ್ಚು ವೆಚ್ಚಗಳಿಗೆ ಸರ್ಕಾರದ ವತಿಯಿಂದ ರೂ.10ಲಕ್ಷ ನೀಡುವುದಾಗಿ ಹಾಗೂ ಸರಸ್ವತಿ ಸಮ್ಮಾನ್ ಪುರಸ್ಕೃತ ಡಾ.ಎಸ್.ಎಲ್.ಭೈರಪ್ಪನವರನ್ನು ರೂ.10 ಲಕ್ಷ ನೀಡಿ ಸರ್ಕಾರದ ವತಿಯಿಂದ ಸನ್ಮಾನಿಸಲಾಗುವುದೆಂದರು.ಸಮಾ ರಂಭ ದಲ್ಲಿ ಜಿಲ್ಲಾ ಉಸ್ತು ವಾರಿ ಸಚಿವ ಜೆ. ಕೃಷ್ಣ ಪಾಲೇ ಮಾರ್, ಸಮ್ಮೇ ಳಾನ ಧ್ಯಕ್ಷ ರಾದ ಡಾ. ತಾಳ್ತಜೆ ವಸಂತ ಕುಮಾರ್, ಶಾಸಕ ರಾದ ಬಿ ರಮಾ ನಾಥ ರೈ,ಜಿಲ್ಲಾ ಪಂಚಾ ಯತ್ ಅಧ್ಯಕ್ಷ್ಯೆ ಶ್ರೀಮತಿ ಶೈಲಜಾ ಭಟ್,ಅಂಬಾ ತನಯ ಮುದ್ರಾಡಿ,ವಿಧಾನ ಪರಿ ಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ ಕಾರ್ಣಿಕ್,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಸತ್ಯಸಾಯಿ ಲೋಕಸೇವಾ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಯು.ಗಂಗಾಧರ ಭಟ್ ಅವರು ಸ್ವಾಗತಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರಾ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ಸಾಹಿತಿ ಶ್ರೀಮತಿ ಸಾರಾ ಅಬೂಬಕರ್ ಆಶಯ ಭಾಷಣ ಮಾಡಿದರು.ಒಡಿಯೂರು ಶ್ರೀ ಗುರು ದೇವಾನಂಧ ಸ್ವಾಮೀಜಿ ಮಾಣಿಲ, ಶ್ರೀಧಾಮದ ಮೋಹನದಾಸ ಸ್ವಾಮೀಜಿ ಮತ್ತು ಕನ್ಯಾನದ ಶಶಿಕಾಂತ್ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ವಾಯು ಮಾಲಿನ್ಯ ತಡೆಗಾಗಿ ರೈಲು ಪ್ರಯಾಣ ಮಾಡಿ;ಕೆ.ಎಚ್.ಮುನಿಯಪ್ಪ

ಮಂಗಳೂರು,ನವೆಂಬರ್.18:-ಕೇಂದ್ರ ಸರ್ಕಾರ 2011-12 ನೇ ಸಾಲಿನ ಆಯವ್ಯಯದಲ್ಲಿ 271 ಹೊಸ ರೈಲು ಸೇವೆಯನ್ನು ಪ್ರಾರಂಭಿಸಲು ಹಣ ವೆಚ್ಚ ಮಾಡುತ್ತಿದೆ. ದೇಶದಾದ್ಯಂತ ಬಸ್ಸು ಹಾಗೂ ಇತರ ವಾಹನಗಳ ಓಡಾಟದಿಂದ ವಾಯು ಮಾಲಿನ್ಯ ಉಂಟಾಗುತ್ತದೆ. ಮುಂದಿನ ಪೀಳಿಗೆಗಾಗಿ ನಾವು ಹೆಚ್ಚು ರೈಲುಗಳನ್ನು ಅವಲಂಭಿಸಬೇಕಾಗಿದೆ.ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್ ಯೋಜನೆಯಿಂದ ವಿದ್ಯುಚ್ಛಕ್ತಿಯಿಂದ ಓಡುವ ರೈಲುಗಳನ್ನು ಕ್ರಮೇಣ ಚಾಲ್ತಿಗೆ ತರಲಾಗುವುದು.
ದೇಶ ದಾದ್ಯಂ ತ ಐಐಟಿ ಕಾನ್ಪೂರ್ ಯೋ ಜನೆ ಮೂಲಕ ವಾತಾ ವರಣ ಕಲು ಷಿತ ವಾಗು ವುದನ್ನು ತಡೆ ಯಬ ಹುದಾ ಗಿದೆ. ಕೇಂದ್ರ ಸರ್ಕಾ ರದ ಹೊಸ ಯೋಜನೆ ಗಳಿಗೆ ರಾಜ್ಯದ ಸಹ ಕಾರ ಅಗತ್ಯ. ಸರ್ಕಾರ ತುರ್ತಾ ಗಿ ಸ್ಪಂದಿ ಸಿದಲ್ಲಿ ಹೊಸ ರೈಲು ಲೈನ್ ಗಳನ್ನು ಅನು ಷ್ಠಾನ ಮಾಡ ಲಾಗುವುದು. 50 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನೇತ್ರಾವತಿ ನದಿಗೆ ರೈಲು ಸೇತುವೆ ಕಾಮಗಾರಿ ಭರದಿಂದ ನಡೆಯುತ್ತಿದೆಯೆಂದು ರೈಲ್ವೆಯ ರಾಜ್ಯ ಸಚಿವರಾದ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಅವರು ಇಂದು ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಮಂಗಳೂರು ಸೆಂಟ್ರಲ್-ಪಾಲಕ್ಕಾಡ್ ಜಂಕ್ಷನ್ ಇಂಟರ್ಸಿಟಿ ಎಕ್ಸ್ಪ್ರೆಸ್ ಪ್ರಾರಂಭೋತ್ಸವದಲ್ಲಿ ಹಸಿರು ನಿಶಾನೆ ತೋರಿಸಿ ಮಾತನಾಡುತ್ತಿದ್ದರು.ಅವರು ಮುಂದುವರೆದು ಮಾತನಾಡುತ್ತಾ ದೇಶದಾದ್ಯಂತ ದಿನಂಪ್ರತಿ 2 ಕೋಟಿ ಜನರು ರೈಲುಗಳನ್ನು ಅವಲಂಭಿಸಿ ಪ್ರಯಾಣಿಸುತ್ತಾರೆ. 14 ಲಕ್ಷ ನೌಕರರು ಈ ರೈಲ್ವೇ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಂದು ಮಂಗಳೂರು-ಪಾಲಕ್ಕಾಡ್ ಇಂಟರ್ಸಿಟಿ ರೈಲನ್ನು ಉದ್ಘಾಟಿಸಲಾಗಿದೆ. ಮುಂದಿನ ದಿನಗಳಲ್ಲಿ ಮಂಗಳೂರು ಉಡುಪಿ ಕುಂದಾಪುರ ಬೈಂದೂರು ಇಂಟರ್ಸಿಟಿ ರೈಲು ಪ್ರಾರಂಭಿಸಲು ಪ್ರಯತ್ನಿಸಲಾಗುವುದು. ಕರಾವಳಿಯ ರಾಜ್ಯ ಸಭಾ ಸದಸ್ಯರಾದ ಅಸ್ಕರ್ ಫೆರ್ನಾಂಡಿಸ್ ಅವರು ಕರ್ನಾಟಕದ ಪ್ರಗತಿಗಾಗಿ ಹೆಚ್ಚು ಅನುದಾನ ಬಿಡುಗಡೆಯಾಗಲು ಶ್ರಮಿಸುತ್ತಿದ್ದಾರೆ. ಇದರ ಫಲವಾಗಿ ಸಕಲೇಶಪುರದಿಂದ40 ಕಿ.ಮೀ.ಘಾಟಿ ಪ್ರದೇಶದ ಹೆದ್ದಾರಿಯನ್ನು ಕಾಂಕ್ರಿಟೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗುವುದೆಂದು ಸಚಿವರು ತಿಳಿಸಿದರು.ಸಮಾ ರಂಭದ ಅಧ್ಯಕ್ಷ ತೆಯನ್ನು ಮಂಗ ಳೂರು ಮಹಾ ನಗರ ಪಾಲಿಕೆಯ ಮೇಯರ್ ಪ್ರವೀಣ್ ವಹಿ ಸಿದ್ದರು. ಮುಖ್ಯ ಅತಿಥಿ ಯಾಗಿ ಶಾಸಕ ರಾದ ಎನ್. ಯೋಗೀಶ್ ಭಟ್ ಮಾತ ನಾಡಿ ಪ್ರತ್ಯೇಕ ಮಂಗ ಳೂರು ರೈಲ್ವೇ ವಿಭಾ ಗವನ್ನು ಆರಂಭಿ ಸಬೇಕು.ಮಂಗಳೂರು ರೈಲು ನಿಲ್ದಾಣವನ್ನು ವಿಶ್ವ ದರ್ಜೆಯ ಮಟ್ಟಕ್ಕೇ ರಿಸಬೇಕು.ಮಂಗ ಳೂರು ಕಾಫಿ ಗೋಡಂಬಿ ರಫ್ತಿಗೆ ಹೆಸರು ವಾಸಿ ಯಾಗಿದ್ದು ಮಂಗ ಳೂರಿ ನಿಂದ ಕಾರವಾರ ತನಕ ಇಂಟರ್ಸಿಟಿ ರೈಲು ಓಡಿಸಬೇಕು. ರೈಲ್ವೆಯಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶವನ್ನು ಒದಗಿಸಬೇಕು ಎಂದು ಸಚಿವರಿಗೆ ಮನವಿ ಮಾಡಿದರು.ದಿ ರೈಲ್ವೆ ಚೆನ್ನೈ ಅಡಿಶನಲ್ ಜನರಲ್ ಮ್ಯಾನೇಜರ್ ಜೆ.ಎನ್.ಜಗನ್ನಾಥ ಅತಿಥಿಗಳನ್ನು ಸ್ವಾಗತಿಸಿದರು.
ಸಮಾರಂಭದಲ್ಲಿ ರೈಲ್ವೆ ಹೋರಾಟ ಸಮಿತಿಯ ಕೆ.ಎ.ಮೋಹನ್ ,ಮಾಜಿ ಶಾಸಕ ಕೆ.ವಿಜಯಕುಮಾರ್ ಶೆಟ್ಟಿ,ಗಫೂರ್ ಮೊಯಿದಿನ್ ಭಾವಾ,ನವೀನ್ ಡಿಸೋಜ ಹಾಗೂ ಡೆನಿಸ್ ಉಪಸ್ಥಿತರಿದ್ದರು. ರೈಲ್ವೆ ಡಿವಿಜನಲ್ ಮ್ಯಾನೇಜರ್ ಎಸ್.ಕೆ.ರೈನಾ ವಂದಿಸಿದರು.

Monday, November 14, 2011

' ಕನಕದಾಸರು ದೇವರನ್ನು ಒಲಿಸಿಕೊಂಡ ಶ್ರೇಷ್ಟ ದಾರ್ಶನಿಕ '

ಮಂಗಳೂರು,ನವೆಂಬರ್.14:ದಕ್ಷಿಣ ಕನ್ನಡ ಜಿಲ್ಲಾಡಳಿತ ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ,ಕರಾವಳಿ ಕುರುಬರ ಸಂಘಗಳ ಸಂಯುಕ್ತ ಆಶ್ರಯದಲ್ಲಿ ಕನಕ ದಾಸರ ಜಯಂತಿ ಕಾರ್ಯಕ್ರಮ ಮಂಗಳೂರಿನಲ್ಲಿ ಆಯೋಜಿಸಲಾಗಿತ್ತು.
ಕಾರ್ಯ ಕ್ರಮ ವನ್ನು ಉದ್ಘಾ ಟಿಸಿ ಮಾತ ನಾಡಿದ ಜಿಲ್ಲಾ ಉಸ್ತು ವರಿ ಸಚಿವ ರಾದ ಕೃಷ್ಣ ಜೆ ಪಾಲೆ ಮಾರ್ ಅವರು ಜಾತಿ ಸಂಘ ರ್ಷಗಳ ವಿರುದ್ದ ಸಾಹಿ ತ್ಯದ ಮೂಲಕ ಜನ ಸಾಮ ನ್ಯರಿಗೆ ಅರ್ಥ ವಾಗುವ ರೀತಿ ಯಲ್ಲಿ ಸಂ ದೇಶ ನೀಡಿದ ಕನಕ ದಾಸರು ಮತ್ತು ಅವರ ಆದರ್ಶ ಗಳು ಸರ್ವ ಕಾಲಿಕ ವಾಗಿವೆ. ಕಲೆದ ನಾಲ್ಕು ವರ್ಷ ಗಳಿಂದ ಕನಕ ದಾಸರ ಜಯಂ ತಿ ಸರ್ಕಾ ರದ ವತಿ ಯಿಂದ ಮಾಡು ತ್ತಿದ್ದು ತಾಲೂಕಿಗೆ 25 ಸಾವಿರ ಮತ್ತು ಜಿಲ್ಲೆಗೆ 50 ಸಾವಿರ ಗಳನ್ನು ಸರ್ಕಾರ ನೀಡು ತ್ತಿದೆ. ಅಲ್ಲದೆ ಕಾಗಿ ನೆಲೆಗೆ ರು.10 ಕೋಟಿ ಗಳನ್ನು ರಾಜ್ಯ ಸರ್ಕಾರ ನೀಡಿದೆ ಎಂದು ಹೇಳಿ ದರು. ಬಾಲ ಕೃಷ್ಣ ಶೆಟ್ಟಿ ಅವರು ಕನಕ ದಾಸರ ಸಾಹಿತ್ಯ ಮತ್ತು ಜೀವನ ಬಗ್ಗೆ ಉಪನ್ಯಾಸ ನೀಡಿದರು. ಶಾಸಕರಾದ ಯು.ಟಿ. ಖಾದರ್, ಅಪರ ಜಿಲ್ಲಾಧಿಕಾರಿ ದಯಾನಂದ,ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಿವರಾಮೇ ಗೌಡ,ಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್, ಕನ್ನಡ ಸಂಸ್ಕೃತಿ ಇಲಾಖೆಯ ಉಪ ನಿರ್ದೇಶಕಿ ಮಂಗಳ ವೆಂ. ನಾಯಕ್, ಕುರುಬರ ಸಂಘದ ಅಧ್ಯಕ್ಷರಾದ ಡಾ. ಕೆ.ಇ. ಪ್ರಕಾಶ್, ಪದಾಧಿಕಾರಿಗಳಾದ ಹನುಮಂತಪ್ಪ,ಕೆ.ಎಂ. ರಾಜು,ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಪ್ರವಾಸದ ಮಕ್ಕಳೊಂದಿಗೆ ಮುಖ್ಯಮಂತ್ರಿಗಳು

ಮಂಗಳೂರು,ನವೆಂಬರ್.14:ವಾರ್ತಾ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಕಚೇರಿ ವತಿಯಿಂದ
ವಿಶೇಷ ಘಟಕ ಯೋಜನೆ ಯಡಿ ಶೈಕ್ಷ ಣಿಕ ಪ್ರವಾಸ ಹೊರಟ ಪರಿ ಶಿಷ್ಟ ಜಾತಿಯ ವಿದ್ಯಾರ್ಥಿ - ವಿದ್ಯಾರ್ಥಿ ನಿಯ ರನ್ನು ಬೆಂಗ ಳೂರಿ ನಲ್ಲಿ ಸನ್ಮಾನ್ಯ ಮುಖ್ಯ ಮಂತ್ರಿ ಗಳು ಇಂದು ಬೆಳಗ್ಗೆ ವಿಧಾನ ಸೌಧದ ಮುಂಭಾ ಗದಲ್ಲಿ ಭೇಟಿ ಯಾಗಿ ಕೆಲವು ಕ್ಷಣ ಗಳನ್ನು ವಿದ್ಯಾರ್ಥಿ ಗಳೊಂ ದಿಗೆ ಕಳೆದು ವಿದ್ಯಾರ್ಥಿ ಗಳ ಮುಂದಿನ ಭವಿಷ್ಯ ಯಶಸ್ವಿ ಯಾಗಲಿ ಎಂದು ಶುಭ ಹಾರೈಸಿ ಬೀಳ್ಕೊ ಟ್ಟರು.ಕನ್ನಡ ಸಂಸ್ಕೃತಿ ಇಲಾಖಾ ಸಚಿವ ರಾದ ಗೋವಿಂದ ಕಾರಜೋಳ,ವಾರ್ತಾ ಇಲಾಖೆಯ ಕಾರ್ಯದರ್ಶಿ ಬಸವರಾಜ್, ವಾರ್ತಾ ಇಲಾಖೆಯ ನಿರ್ದೇಶಕರಾದ ಡಾ. ಮುದ್ದು ಮೋಹನ್,ಸಮಾಜ ಕಲ್ಯಾಣ ಇಲಾಖೆಯ ನಿರ್ದೇಶಕರಾದ ಚಂದ್ರಶೇಖರ ಮೂರ್ತಿ ಮತ್ತಿತರ ಗಣ್ಯರು ಮತ್ತು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Saturday, November 12, 2011

"ವಿದ್ಯಾರ್ಥಿಗಳ ಶೈಕ್ಷಣಿಕ ಪ್ರವಾಸಕ್ಕೆ ಚಾಲನೆ "

ಮಂಗಳೂರು, ನವೆಂಬರ್.12:ವಾರ್ತಾ ಇಲಾಖೆ ದಕ್ಷಿಣ ಕನ್ನಡ ಜಿಲ್ಲಾ ಕಚೇರಿ ವತಿಯಿಂಧ ವಿಶೇಷ ಘಟಕ ಯೋಜನೆಯಡಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಇಂದಿನಿಂದ ನವೆಂವೆರ್ 16 ರ ವರೆಗೆ ಶೈಕ್ಷಣಿಕ ಪ್ರವಾಸವನ್ನು ಆಯೋಜಿಸಲಾಗಿದ್ದು, ಇಂದು ಬೆಳಗ್ಗೆ ನಗರದ ವಾರ್ತಾ ಇಲಾಖಾ ಕಚೇರಿಯ ಆವರಣದಲ್ಲಿ ಜಿಲ್ಲಾ ಪಂಚಾಯತ್ ಸಿಇಓ ಡಾ. ವಿಜಯ ಪ್ರಕಾಶ್ ಅವರು ಪ್ರವಾಸಕ್ಕೆ ಹಸಿರು ನಿಶಾನೆ ತೋರಿಸಿದರು. ಈ ಸಂದ ರ್ಭದಲ್ಲಿ ಪ್ರವಾ ಸದ ವಿದ್ಯಾರ್ಥಿ ಗಳಿಗೆ ಶುಭ ಹಾರೈಸಿ ಮಾತ ನಾಡಿದ ಅವರು ದೇಶ ಸುತ್ತು ಕೋಶ ಓದು ಎಂಬ ನಾನ್ನು ಡಿಯಂ ತೆ ವಿದ್ಯಾರ್ಥಿ ಗಳು ಪ್ರವಾಸ ಗಳನ್ನು ಅನು ಭವಿಸಿ ಉತ್ತಮ ಮಾಹಿತಿ ಪಡೆಯು ವುದ ರೊಂದಿಗೆ ಜ್ಞಾನ ವೃದ್ದಿಸಿ ಕೊಳ್ಳಬೇಕೆಂದು ಕರೆ ನೀಡಿದ ಅವರು ಉತ್ತಮ ಪ್ರವಾಸ ಕಥನ ಬರೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವುದಾಗಿ ಘೋಷಿಸಿದರು.
ಒಂಬುಡ್ಸ್ ಮನ್ ಶೀನ ಶೆಟ್ಟಿ ಅವರು ಮಕ್ಕಳಿಗೆ ಶಿಕ್ಷಣದ ಮಹತ್ವ ಮತ್ತು ಸ್ವಚ್ಚತೆಯ ಮಹತ್ವದ ಬಗ್ಗೆ ವಿವರಿಸಿ ಉತ್ತಮ ಪ್ರವಾಸ ಕಥನ ಬರೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡುವ ಭರವಸೆಯೊಂದಿಗೆ ಶುಭ ಹಾರೈಸಿದರು.
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅರುಣ್ ಫುರ್ಟಡೋ, ಅರಣ್ಯ ಸಂರಕ್ಷಣಾಧಿಕಾರಿ ಕ್ಲಿಫಡ್ ಲೋಬೊ, ಜನಶಿಕ್ಷಣ ಟ್ರಸ್ಟ್ ನ ಕೃಷ್ಣ ಮೂಲ್ಯ ಈ ಸಂಧರ್ಭದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿ ವಿದ್ಯಾರ್ಥಿಗಳನ್ನು ಬೀಳ್ಕೊಟ್ಟರು.
ಐದು ದಿನಗಳ ಈ ಶೈಕ್ಷಣಿಕ ಪ್ರವಾಸದಲ್ಲಿ ಉಡುಪಿ,ಮಣಿಪಾಲ,ಕುದುರೆ ಮುಖ,ಬೆಂಗಳೂರು,ಮೈಸೂರು, ಮಡಿಕೇರಿ ಮುಂತಾದ ಕಡೆಗಳಲ್ಲಿ ಹಲವಾರು ಪ್ರೇಕ್ಷಣೀಯ ಸ್ಥಳಗಳನ್ನು ವಿದ್ಯಾರ್ಥಿಗಳು ಸಂದರ್ಶಿಸಲಿದ್ದಾರೆ. ನವೆಂಬರ್ 14 ಮಕ್ಕಳ ದಿನಾಚರಣೆಯಂದು ವಿಧಾನ ಸೌಧದ ಮುಂಭಾಗಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳು ಪ್ರವಾಸದ ವಿದ್ಯಾರ್ಥಿಗಳನ್ನು ಭೇಟಿಯಾಗಲಿದ್ದಾರೆ.

ಘನ ತ್ಯಾಜ್ಯ ನಿರ್ವಹಣೆ;ಮನಪಾಗೆ ಪ್ರಶಸ್ತಿಯ ಗರಿ

ಮಂಗಳೂರು,ನವೆಂಬರ್.12: ಕೊಲ್ಕತ್ತದ ಜಾಧವಪುರ ವಿಶ್ವವಿದ್ಯಾನಿಲಯದ ಆವರಣದಲ್ಲಿ
ನವೆಂ ಬರ್ 9 ರಿಂದ 11 ರ ವರೆಗೆ ನಡೆದ ಘನ ತ್ಯಾಜ್ಯ ನಿರ್ವ ಹಣೆ ಕುರಿತ ಅಂತ ರಾಷ್ಟ್ರೀ ಯ ಸಮ್ಮೇ ಳ 'ಐಕಾನ್' ನಲ್ಲಿ ಮಂಗ ಳೂರು ಮಹಾ ನಗರ ಪಾಲಿಕೆ ಪ್ರಶಸ್ತಿ ಪಡೆದು ಕೊಂಡಿತು.ಶುಕ್ರ ವಾರ ನಡೆದ ಸಮಾ ರೋಪ ಸಮಾ ರಂಭ ದಲ್ಲಿ ಕೇಂದ್ರ ನಗರಾ ಭಿವೃದ್ದಿ ಸಚಿವ ಸೌಗತ್ ರಾಯ್ ಅವರು ಪ್ರಶಸ್ತಿ ಪ್ರದಾನ ಮಾಡಿ ದರು.ಪಾಲಿಕೆ ಮೇಯರ್ ಪ್ರವೀಣ್,ಉಪ ಮೇಯರ್ ಗೀತಾ ನಾಯಕ್,ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಯಶವಂತ ಮೀನಕಳಿಯ,ಪಾಲಿಕೆ ಸದಸ್ಯ ನವೀನ್ ಚಂದ್ರ,ಆರೋಗ್ಯಾಧಿಕಾರಿ ಡಾ.ಮಂಜಯ್ಯ ಶೆಟ್ಟಿ,ಪರಿಸರ ಇಂಜಿನೀಯರ್ ಎಸ್.ಮಧು,ಎಸ್.ಮನೋಹರ್,ಮಂಜುನಾಥ್ ಶೆಟ್ಟಿ ಅವರು ಪಾಲಿಕೆಯ ಪರವಾಗಿ ಪ್ರಶಸ್ತಿ ಸ್ವೀಕರಿಸಿದರು.

ದೇವಕಾರ್ಯದೊಂದಿಗೆ ಜನಪರ ಯೋಜನೆಗಳು ಅನುಷ್ಠಾನವಾಗಲಿ: ಧನಂಜಯ ಕುಮಾರ್

ಮಂಗಳೂರು,ನವೆಂಬರ್.12: ಲೋಕ ಕಲ್ಯಾಣಾರ್ಥವಾಗಿ ಹಾಗೂ ಜನಸಮುದಾಯದಲ್ಲಿ ಧಾರ್ಮಿಕ ಪ್ರವೃತ್ತಿಯ ಸಂರಕ್ಷಣೆಗಾಗಿ ನಡೆಯುವ ಮಹಾಮಸ್ತಕಾಭಿಷೇಕವು ವೇಣೂರಿನಲ್ಲಿ 2000ನೇ ಇಸವಿಯಲ್ಲಿ ನಡೆದಿದ್ದು, ಇದೀಗ 21ನೇ ಶತಮಾನದ 2ನೇ ಮಹಾಮಸ್ತಕಾಭಿಷೇಕ ಜರುಗಲಿದ್ದು ಇದೇ ಸಂದರ್ಭದಲ್ಲಿ ವೇಣೂರಿನಲ್ಲಿ ಜನಪರ ಯೋಜನೆಗಳು ಜಾರಿಯಾಗಲಿ ಎಂದು ಧನಂಜಯ ಕುಮಾರ್ ಹೇಳಿದರು.
ಶುಕ್ರ ವಾರ (11. 11.11)ದಂದು ದಕ್ಷಿಣ ಕನ್ನಡ ಜಿಲ್ಲೆ ಯ ವೇಣೂ ರಿನ ಡಾ.ಪಿ.ಎ. ಆಳ್ವ ಸಭಾಂ ಗಣ ದಲ್ಲಿ ಆಯೋ ಜಿಸ ಲಾದ ಭಗ ವಾನ್ ಶ್ರೀ ಬಾಹು ಬಲಿ ಸ್ವಾಮಿ ಮಹಾ ಮಸ್ತ ಕಾಭಿ ಷೇಕ ಸಮಿತಿ ಸಭೆ ಯನ್ನು ದ್ದೇಶಿಸಿ ಮಾತ ನಾಡು ತ್ತಿದ್ದರು. ಜನ ವರಿ 28 ರಿಂದ 9 ದಿನ ಗಳ ಕಾಲ ನಡೆ ಯುವ ಬೃಹತ್ ಸಮಾ ರಂಭ ವನ್ನು ಯಶಸ್ವಿ ಯಾಗಿ ಹಮ್ಮಿ ಕೊಳ್ಳಲು ಯೋಜನೆ ಯನ್ನು ಸಭೆ ಯಲ್ಲಿ ರೂಪಿ ಸಲಾ ಯಿತು.ಈಗಾಗಲೇ ಮೂಲಭೂತ ಸೌಕರ್ಯಕ್ಕಾಗಿ ಪ್ರವಾಸೋದ್ಯಮ ಇಲಾಖೆ ಮೂಲಕ 2 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ನಿರ್ಮಾಣ ಕಾಮಗಾರಿಯ ನಕ್ಷೆ ಪರಿಶೀಲನೆ ಸಭೆಯಲ್ಲಿ ನಡೆಯಿತು. ಜಿಲ್ಲಾಡಳಿತ ಕೈಗೊಂಡ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪಗೌಡ ಅವರು ಸಭೆಗೆ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯತ್ ನಿಂದ ಸಂಪರ್ಕ ರಸ್ತೆ ಅಭಿವೃದ್ಧಿಗೆ 17 ರಸ್ತೆಗಳನ್ನು 60.6 ಕಿ. ಮೀ ರಸ್ತೆಗಳನ್ನು ಗುರುತಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ವಿವರಿಸಿದರು.ಮಲ್ಟಿ ವಿಲೇಜ್ ವಾಟರ್ ಸ್ಕೀಮ್ ನಡಿ 15 ಸುತ್ತಮುತ್ತಲ ಹಳ್ಳಿಗಳಿಗೆ ನೀರೊದಗಿಸುವ ಯೋಜನೆ ಇರುವುದಾಗಿಯೂ ಅವರು ತಿಳಿಸಿದರು.
ಲೋಕೋಪಯೋಗಿ ಇಲಾಖೆಯಿಂದ ಸಂಪರ್ಕ ರಸ್ತೆ ದುರಸ್ತಿ ಕಾಮಗಾರಿ ಡಿಸೆಂಬರ್ ಅಂತ್ಯದೊಳಗೆ ಸಂಪೂರ್ಣಗೊಳಿಸಲಾಗುವುದು ಎಂದು ಸೂಪರಿಂಟೆಂಡೆಂಟ್ ಇಂಜಿನಿಯರ್ ಬಿ ಎಸ್ ಬಾಲಕೃಷ್ಣ ಅವರು ಹೇಳಿದರು.ಸಂಚಾರ ವ್ಯವಸ್ಥೆ, ಸಿಸಿ ಟಿ ವಿ ಅಳ ವಡಿಕೆ, ಏಕ ಮುಖ ಸಂಚಾ ರದ ಬಗ್ಗೆ ಪೊಲೀ ಸ್ ವ್ಯ ವಸ್ಥೆ ಬಗೆ ಎಸ್ ಪಿ ಲಾಬೂ ರಾಮ್ ಅವರು ಮಾಹಿತಿ ನೀಡಿದರು. ಅತ್ಯಂತ ಪ್ರಮು ಖವಾಗಿ ಸಾಂಕ್ರಾ ಮಿಕ ರೋಗ ಹರಡ ದಂತೆ ನೀರು ಮತ್ತು ನೈ ರ್ಮಲ್ಯ ಕಾಯ್ದು ಕೊಳ್ಳಲು ಆರೋಗ್ಯ ಇಲಾಖೆ, ಗ್ರಾಮ ಪಂಚಾ ಯತ್ ಮತ್ತು ಸ್ಥಳೀಯ ಸಮಿತಿ ಜೊತೆ ಸಮ ನ್ವಯ ಸಾಧಿಸಿ ಔಷಧಿ ಗಳ ಸಿಂಪ ಡಣೆ, ಕ್ಲೋರಿ ನೈ ಸೇಷನ್ ಕುರಿತು ಕ್ರಮ ಕೈಗೊ ಳ್ಳುವ ಬಗ್ಗೆ ಸಭೆ ಯಲ್ಲಿ ಚರ್ಚಿ ಸಲಾ ಯಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾಂಸ್ಕೃತಿಕ ಕಾರ್ಯಕ್ರಮ ನೀಡುವ ಕುರಿತು ಸಹಾಯಕ ನಿರ್ದೇಶಕರಾದ ಶ್ರೀಮತಿ ಮಂಗಳಾ ವೆಂ ನಾಯಕ್ ಅವರು ಮಾಹಿತಿ ನೀಡಿದರು. ಜೈನ ಧರ್ಮದ ಬಗ್ಗೆ, ಭರತಬಾಹುಬಲಿ ದೃಶ್ಯನಾಟಕ ಮುಂತಾದ ಅತ್ಯುತ್ತಮ ಕಾರ್ಯಕ್ರಮ ನೀಡುವ ಕುರಿತು ಸಭೆ ಸಲಹೆ ಮಾಡಿತು. ಕೆ ಎಸ್ ಆರ್ ಟಿಸಿ ಹೆಚ್ಚಿನ ಬಸ್ ಗಳನ್ನು ವ್ಯವಸ್ಥೆ ಮಾಡುವ ಕುರಿತು, ಅಗ್ನಿಶಾಮಕ ವಾಹನಗಳನ್ನು ಆಯೋಜಿಸುವ ಕುರಿತು ಸಭೆಯಲ್ಲಿ ಚರ್ಚಿಸಿತು.
ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಅಭಯಚಂದ್ರ ಜೈನ್, ರಮಾನಾಥ ರೈ,ಹರ್ಷೇಂದ್ರ ಕುಮಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ ಟಿ ಶೈಲಜಾ, ಉಪಾಧ್ಯಕ್ಷರಾದ ಧನಲಕ್ಷ್ಮಿ ಜನಾರ್ಧನ್, ಅಳದಂಗಡಿ ಅರಸು ಮನೆತನದ ಡಾ. ಪದ್ಮಪ್ರಸಾದ್ ಅಜಿಲರು ಸಭೆಯಲ್ಲಿ ಪಾಲ್ಗೊಂಡರು. ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು.

Friday, November 11, 2011

ಅಭಿವೃದ್ಧಿ ಕಾಳಜಿ ಅಧಿಕಾರಿಗಳಿಗಿರಲಿ: ಶೈಲಜಾ ಭಟ್

ಮಂಗಳೂರು,ನವೆಂಬರ್.11 :ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಅಭಿವೃದ್ಧಿ ಕಾರ್ಯಗಳ ಅನುಷ್ಠಾನದಡಿಯಲ್ಲಿ 13ನೇ ಸ್ಥಾನದಿಂದ 2ನೇ ಸ್ಥಾನಕ್ಕೆ ಏರಿದ್ದು, ಪ್ರಥಮ ಸ್ಥಾನ ಗಳಿಸಲು ಎಲ್ಲಾ ಅಧಿಕಾರಿಗಳು ಶ್ರಮ ವಹಿಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಶೈಲಜಾ ಭಟ್ ಹೇಳಿದರು.ಅವರು ಇಂದು ಜಿಲ್ಲಾ ಪಂಚಾ ಯತ್ ಸಭಾಂ ಗಣ ದಲ್ಲಿ ನಡೆದ ಕರ್ನಾ ಟಕ ಅಭಿ ವೃದ್ಧಿ ಕಾರ್ಯ ಕ್ರಮ ಗಳ ಪ್ರಗತಿ ಪರಿ ಶೀಲನಾ ಸಭೆ ಯಲ್ಲಿ ಮಾತ ನಾಡುತ್ತಾ, ಈ ಮಾಹಿತಿ ಯನ್ನು ಸಭೆಗೆ ನೀಡಿ ದರು.ತಾಲೂಕು ಪಂಚಾ ಯತ್ ಕಾರ್ಯ ನಿರ್ವ ಹಣಾ ಧಿಕಾ ರಿಗಳು ಕೆಳ ಮಟ್ಟದ ಅಧಿಕಾ ರಿಗ ಳಿಗೆ ಕೇವಲ ಸೂಚನೆಗಳನ್ನು ನೀಡದೆ ಖುದ್ದಾಗಿ ಗ್ರಾಮ ಪಂಚಾಯತ್ ಮಟ್ಟಕ್ಕೆ ತೆರಳಿ, ಸೂಕ್ತ ಮಾರ್ಗದರ್ಶನ ನೀಡಬೇಕೆಂದ ಅವರು, ನಿಗಧಿತ ಗುರಿ ಸಾಧಿಸುವಲ್ಲಿ ಇತರ ಜಿಲ್ಲೆಗಳಿಗೆ ಮಾದರಿಯಾಗಬೇಕೆಂದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಾದ ಡಾ.ಕೆ.ಎನ್.ವಿಜಯಪ್ರಕಾಶ್ ಅಧಿಕಾರ ವಿಕೇಂದ್ರಿಕರಣಕ್ಕೆ ತಮ್ಮ ಕಚೇರಿಯು ವಿನೂತನ ಕ್ರಮಗಳನ್ನು ಕೈಗೊಂಡಿದ್ದು, ತಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಸಹಿ ಹಾಕುವ ಜವಾಬ್ದಾರಿಯನ್ನು ತಮ್ಮ ಅಧೀನ ಅಧಿಕಾರಿಗಳಿಗೆ ಹಂಚಿಕೆ ಮಾಡಿರುವುದಾಗಿ ತಿಳಿಸಿದರು.
ಸಾರ್ವಜನಿಕ ಕುಂದುಕೊರತೆ ಬಗ್ಗೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಎಲ್ಲಾ ಕಚೇರಿಗಳಲ್ಲಿ ತುರ್ತು ಹಾಗೂ ಸೂಕ್ತ ಕ್ರಮ ವಹಿಸಿ ಸಾರ್ವಜನಿಕ ದೂರುಗಳಿಗೆ ಸ್ಪಂದಿಸಲು ಸೂಚಿಸಿದರು.ಪ್ರಮುಖವಾಗಿ ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗವು ಕಾಲಮಾನಕ್ಕೆ ತಕ್ಕಂತೆ ನಿಗಧಿತ ಅವಧಿಯೊಳಗೆ ಯೋಜನೆಗಳನ್ನು ಅನುಷ್ಠಾನಗೊಳಿಸಲು ಸೂಚಿಸಿದರು. ಜಿಲ್ಲೆಯಲ್ಲಿ 13175 ವಿಕಲಚೇತನರನ್ನು ಗುರುತಿಸಲಾಗಿದ್ದು ಸರ್ಕಾರೇತರ ಸಂಸ್ಥೆಗಳ ನೆರವಿನೊಂದಿಗೆ ಕೈಗೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದ ಮುಖ್ಯ ಕಾರ್ಯ ನಿವರ್ಾಹಕ ಅಧಿಕಾರಿಯವರು ಜಿಲ್ಲೆಯಲ್ಲಿ ಸಮನ್ವಯ ಅಧಿಕಾರಿಗಳ ಜೊತೆಗೆ 605 ಅಂಗವಿಕಲ ಮಕ್ಕಳಿಗೆ ಮನೆಯಾಧಾರಿತ ವಿದ್ಯಾಭ್ಯಾಸ ನೀಡಲು ಮಾರ್ಗದರ್ಶನ ನೀಡಿದರು. ಪರಿಶಿಷ್ಟ ವರ್ಗಗಳ ಅಭಿವೃದ್ಧಿಗೆ ಆಶ್ರಯ, ಅಂಬೇಡ್ಕರ್ ವಸತಿ ಯೋಜನೆಯ ಅಭಿವೃದ್ದಿಯಲ್ಲಿ ನಿರೀಕ್ಷಿತ ಸಾಧನೆ ಆಗಿಲ್ಲ ಎಂದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರು ಸಂಬಂಧಪಟ್ಟ ಇಲಾಖಾಧಿಕಾರಿಗಳ ಪ್ರತ್ಯೇಕ ಸಭೆ ಕರೆಯುವುದಾಗಿ ತಿಳಿಸಿದರು.
ಮಂಗಳೂರು ಮಹಾನಗರಪಾಲಿಕೆ ಸೇರಿದಂತೆ ಎಲ್ಲಾ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಅಭಿವೃದ್ಧಿ ಆಗದಿದ್ದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದರು. ಕೆಡಿಪಿ ಸಭೆಯ ಕೊನೆಯಲ್ಲಿ ಚೀನಾದ ಶಾಂಘೈಯಲ್ಲಿ ಸ್ಕೇಟಿಂಗ್ನಲ್ಲಿ ಚಿನ್ನದ ಪದಕ ಪಡೆದ ಧನ್ಯರಾವ್ ಹಾಗೂ ಬೆಳ್ಳಿ ಕಂಚು ಪದಕ ಪಡೆದ ಧನರಾಜ್ ಅವರನ್ನು ಜಿಲ್ಲಾ ಪಂಚಾಯತ್ ವತಿಯಿಂದ ಹಾರ ಪ್ರಶಸ್ತಿ ಪತ್ರ ಹಾಗೂ 10 ಸಾವಿರ ನೀಡಿ ಸನ್ಮಾನಿಸಲಾಯಿತು.ಯೋಜನಾ ನಿರ್ದೇಶಕಿ ಶ್ರೀಮತಿ ಸೀತಮ್ಮ ,ಉಪಕಾರ್ಯದರ್ಶೀಶಿವರಾಮೇ ಗೌಡ ,ಮುಖ್ಯ ಯೋಜನಾಧಿಕಾರಿ ನಜೀರ್,ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀ ಜನಾರ್ಧನ ,ಕೃಷಿ ಮತ್ತು ಕೈಗಾರಿಕೆ ಸಮಿತಿ ಅಧ್ಯಕ್ಷರಾದ ನವೀನ್ ಕುಮಾರ್ ಮೇನಾಲ,ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಈಶ್ವರ ಕಟೀಲ್ ಉಪಸ್ಥಿತರಿದ್ದರು.

ಬಿರುಗಾಳಿ,ಪ್ರವಾಹ ಮತ್ತು ರಾಷ್ಟ್ರೀಯ ವಿಕೋಪ ನಿರ್ವಹಣೆ ಕಾರ್ಯಾಗಾರ

ಮಂಗಳೂರು,ನವೆಂಬರ್.11:ಕರಾವಳಿ ರಾಜ್ಯಗಳಲ್ಲಿ ಹಮ್ಮಿಕೊಂಡಿರುವ ರಾಷ್ಟ್ರೀಯ ಚಂಡಮಾರುತ ಪ್ರವಾಹಗಳ ಅಪಾಯ ನಿರ್ವಹಣೆ ಯೋಜನೆಯ ನಿಮಿತ್ತ ಕಂದಾಯ ಇಲಾಖೆ ಹಾಗೂ ಜಿಲ್ಲಾ ವಿಕೋಪ ನಿರ್ವಹಣಾ ಪ್ರಾಧಿಕಾರ,ಯುಎನ್ಡಿಪಿ ಇವರ ಸಹಕಾರದೊಂದಿಗೆ ದಕ್ಷಿಣಕನ್ನಡ ಜಿಲ್ಲಾಡಳಿತದ ವತಿಯಿಂದ ವಿಕೋಪ ನಿರ್ವಹಣಾ ಯೋಜನೆ ಕಾರ್ಯಾಗಾರವು ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಇತ್ತೀಚೆಗೆ ನಡೆಯಿತು. ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ದೀಪ ಬೆಳಗಿಸುವುದರ ಮೂಲಕ ಕಾರ್ಯಾಗಾರವನ್ನು ಉದ್ಘಾಟಿಸಿದರು.
ರೆಡ್ ಕ್ರಾಸ್ ಸಂಸ್ಥೆಯ ಉಡುಪಿ ವಿಭಾಗದ ಪ್ರಭಾತ್ ರವರು ಪ್ರವಾಹ ವಿಕೋಪ ನಿರ್ವಹಣೆಯ ಬಗ್ಗೆ ವಿವರವಾದ ಮಾಹಿತಿಯನ್ನಿತ್ತರು. ಪ್ರೊ ನಾಗರಾಜ್ ಚಂಡಮಾರುತ ಹಾವಳಿಯ ವಿವಿಧ ವಿಧಾನಗಳು ಹಾಗೂ ಎಚ್ಚರಿಕೆ ಕ್ರಮಗಳ ಬಗ್ಗೆ ತಿಳುವಳಿಕೆ ನೀಡಿದರು.
ಅಪರ ಜಿಲ್ಲಾಧಿಕಾರಿ ದಯಾನಂದ ಕೆ.ಎ.,ಮಹಾನಗರಪಾಲಿಕಾ ಆಯುಕ್ತರಾದ ಡಾ.ಹರೀಶ್ ಕುಮಾರ್ ,ಸಹಾಯಕ ಆಯುಕ್ತ ಡಾ.ವೆಂಕಟೇಶ್,ಕಾರ್ಯಾಗಾರದ ಸಂಪನ್ಮೂಲ ವ್ಯಕ್ತಿಗಳಾದ ಡಾ.ಮಹೇಂದ್ರ.ಆರ್. ಪ್ರೊಫೆಸರ್ ನಾಗರಾಜ್ ಹಾಗೂ ಪ್ರಭಾತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Wednesday, November 9, 2011

ಪಿಲಿಕುಳದಲ್ಲಿ ಮಕ್ಕಳ ಕಲಾ ಉತ್ಸವ ಪೂರ್ವಭಾವಿ ಸಭೆ

ಮಂಗಳೂರು,ನವೆಂಬರ್.09 : ಜನವರಿ 26 ರಿಂದ ಪಿಲಿಕುಳದಲ್ಲಿ ಆಯೋಜಿಸಿರುವ ರಾಷ್ಟ್ರ ಮಟ್ಟದ ಮಕ್ಕಳ ಕಲಾ ಉತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ಜವಾಹರ ಬಾಲಭವನ ಕಬ್ಬನ್ ಪಾರ್ಕ್ ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತ ಸಮಿತಿಗಳನ್ನು ರಚಿಸಿ ಕಾರ್ಯಕ್ರಮಗಳನ್ನು ರೂಪಿಸಿದ್ದು ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಅವರನ್ನು ಕರೆಸಲು ಯತ್ನಿಸಲಾಗುವುದು ಎಂದು ರಾಜ್ಯ ಬಾಲಭವನ ಸೊಸೈಟಿ ಅಧ್ಯಕ್ಷರಾದ ಶ್ರೀಮತಿ ಸುಲೋಚನ ಜಿ.ಕೆ. ಭಟ್ ಅವರು ಹೇಳಿದರು.ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಸಂಬಂಧ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಕ್ಕಳ ಉತ್ಸವ ಯಶಸ್ಸಿಗೆ ರೂಪಿಸಿರುವ ಕಾರ್ಯಕ್ರಮಗಳ ಸ್ಥೂಲ ಪರಿಚಯ ನೀಡಿದ ಅವರು ಈ ಕಾರ್ಯಕ್ರಮದೊಂದಿಗೆ ಜಿಲ್ಲಾ ಬಾಲಭವನಕ್ಕೂ ಹೊಸ ರೂಪ ನೀಡಲು ನಿರ್ಧರಿಸಲಾಗಿದೆ ಎಂದರು.
ಮೆರವಣಿಗೆಯಿಂದ ಆರಂಭಿಸಿ ಸಮಾರೋಪದವರೆಗಿನ ಕಾರ್ಯಕ್ರಮಗಳ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗ ಚರ್ಚಿಸಿದ ಅವರು, ಮುಖ್ಯವಾಗಿ ಆಹಾರ, ವಸತಿ ಮತ್ತು ಸಂಪರ್ಕ ವ್ಯವಸ್ಥೆಯ ಕುರಿತು ಯೋಜನೆಯನ್ನು ಸಭೆಯಲ್ಲಿ ರೂಪಿಸಲಾಯಿತು. ಉತ್ಸವಕ್ಕೆ ಆಗಮಿಸುವ ಮಕ್ಕಳಿಗೆ ವಸತಿ, ಊಟ ಹಾಗೂ ಸ್ಥಳೀಯ ಸಾರಿಗೆ ವೆಚ್ಚವನ್ನು ಜಿಲ್ಲಾಡಳಿತ ಭರಿಸುತ್ತಿದ್ದು ತೊಂದರೆಯಾಗದಂತೆ ನಿರ್ವಹಿಸುವ ಭರವಸೆಯನ್ನು ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ ಅವರು ನೀಡಿದರು.
ಮಂಗಳಜ್ಯೋತಿ ಶಾಲೆ, ಸೈಂಟ್ ಜೋಸೆಫ್ಸ್, ಸ್ಕೌಟ್ಸ್ ಅಂಡ್ ಗೈಡ್ಸ್ ಮತ್ತು ಕರಾವಳಿ ಕಾಲೇಜುಗಳಲ್ಲಿ ವಾಸ್ತವ್ಯಕ್ಕೆ ನೆರವು ಪಡೆಯುವುದಾಗಿ, ಈ ಸಂಬಂಧ ಹೊಸ ವೆಬ್ ಸೈಟ್ ಮೂಲಕ ಆನ್ ಲೈನ್ ರಿಜಿಸ್ಟ್ರೇಷನ್ ಮಾಡಿಸುವುದಾಗಿ ಸಭೆಯಲ್ಲಿ ಪ್ರಸ್ತಾಪಿಸಲಾಯಿತು.
ಇದೇ ಸಂದರ್ಭದಲ್ಲಿ ಫುಡ್ ಕೋರ್ಟ್ , ವಸ್ತುಪ್ರದರ್ಶನ ಮಳಿಗೆ ಸ್ಥಾಪಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು. ಸ್ವಾಗತ ಸಮಿತಿಯಲ್ಲಿ ಇನ್ನೂ ಹಲವು ನಗರದ ಗಣ್ಯರ ಹೆಸರನ್ನು ಸೇರಿಸಲಾಯಿತು ಮತ್ತು ಮೆರವಣಿಗೆ ಸಮಿತಿಯನ್ನು ರಚಿಸಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಸ್ಥಳೀಯ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಬೀದಿ ದೀಪ ನಿರ್ವಹಣೆ-ಸಾರ್ವಜನಿಕರು ದೂರು ದಾಖಲಿಸಲು ಸೂಚನೆ

ಮಂಗಳೂರು,ನವೆಂಬರ್.09 :ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ದೀಪಗಳನ್ನು ಸಮರ್ಪಕವಾಗಿ ನಿರ್ವಹಿಸಲು ಬರುವ ದೂರುಗಳನ್ನು ದಾಖಲಿಸಿಕೊಂಡು ಸರಿಪಡಿಸಲು ಈ ಕೆಳಕಂಡ ಅಭಿಯಂತರರಿಗೆ ಜವಾಬ್ದಾರಿ ನೀಡಲಾಗಿದ್ದು,ಸಾರ್ವಜನಿಕರು ದೂರುಗಳನ್ನು ಇವರಲ್ಲಿ ನೊಂದಾಯಿಸಬಹುದಾಗಿದೆ ಎಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.
ರಮೇಶ್ ಕಾರ್ಯಪಾಲಕ ಅಭಿಯಂತರರು,ವಲಯ ನಂಬ್ರ 1 ರಿಂದ 4-ವಾರ್ಡ್ ನಂಬ್ರ 1ರಿಂದ 60 ರ ವರೆಗೆಇವರ ಮೊಬೈಲ್ ಸಂಖ್ಯೆ -9880174836
ಟಿ.ಎಸ್.ಲೋಕೇಶ್,ಕಾರ್ಯಪಾಲಕಅಭಿಯಂತರರು,ವಲಯ ನಂಬ್ರ 1ರಿಂದ2-ವಾರ್ಡ್ ನಂಬ್ರ 1ರಿಂದ 13,15,60,16,17,23ರಿಂದ 34 ಮತ್ತು 38 ರ ವರೆಗೆ ಮೊಬೈಲ್ ಸಂಖ್ಯೆ 9448115259
ಆರ್.ಗಣೇಶನ್,ಕಾರ್ಯಪಾಲಕ ಅಭಿಯಂತರರು,ವಲಯ ನಂಬ್ರ 4-ವಾರ್ಡ್ ನಂಬ್ರ 14,18ರಿಂದ 22,35,36,37,49ರಿಂದ 54 ರ ವರೆಗೆ:ವಲಯ ನಂಬ್ರ 3,ವಾಡ್ರ್ ನಂ39 ರಿಂದ 48,55ರಿಂದ 59 ಮೊಬೈಲ್ ಸಂಖ್ಯೆ 9449555526
ಕಿರಣ್ ಕುಮಾರ್ ವಿದ್ಯುತ್ ಅಭಿಯಂತರರು ವಲಯ ನಂಬ್ರ 2 ವಾಡ್ರ್ ನಂಬ್ರ 16,17,23ರಿಂದ 34 ಮತ್ತು 38 ಮೊಬೈಲ್ ಸಂಖ್ಯೆ -9620646280
ಚಂದ್ರ ಹಾಸ ವಿದ್ಯುತ್ ಅಧೀಕ್ಷಕರು ವಲಯ ನಂಬ್ರ 4 ವಾರ್ಡ್ ನಂಬರ 14, 18 ರಿಂದ 22,35,36,37 ,49 ರಿಂದ 54 ,ವಲಯ ನಂಬ್ರ 3 ವಾರ್ಡ್ ನಂಬ್ರ 39 ರಿಂದ 48, 55 ರಿಂದ 59, ಮೊಬೈಲ್ ಸಂಖ್ಯೆ 9448626647
ಸಂಜೀವ ವಿದ್ಯುತ್ ಅಧೀಕ್ಷಕರು ವಲಯ ನಂಬ್ರ 1 ವಾರ್ಡ್ ನಂಬ್ರ 1 ರಿಂದ 13,15ರಿಂದ 60 ಮೊಬೈಲ್ ಸಂಖ್ಯೆ 9880480817
ಸಹಾಯವಾಣಿ ಕಚೇರಿ ವಾರ್ಡ್ 1 ರಿಂದ 60 ದೂರವಾಣಿ ಸಂಖ್ಯೆ 2220321,2220306 ಆಗಿರುತ್ತದೆ.
ಮೇಲಿನ ಕಾಮಗಾರಿಯ ಬಗ್ಗೆ ನಿರ್ಲಕ್ಷತೆ ತೋರಿದಲ್ಲಿ ಸಾರ್ವಜನಿಕರು ಅಯುಕ್ತರನ್ನು ಮೊಬೈಲ್ ಸಂಖ್ಯೆ 9945794353 ನ್ನು ಸಂಪರ್ಕಿಸಬಹುದಾಗಿದೆಯೆಂದು ಪಾಲಿಕೆ ಆಯುಕ್ತರು ತಿಳಿಸಿದ್ದಾರೆ.

ಅಪಾಯಕಾರಿ ಸ್ಪೋಟಕ ಸರಕು ಸಾಗಣೆ -ವಾಹನ ಚಾಲಕರಿಗೆ ಮಾಹಿತಿ ಅಗತ್ಯ :ಆರ್ ಟಿ ಓ

ಮಂಗಳೂರು,ನವೆಂಬರ್.09: ಚಾಲಕರು ತನ್ನ ಲೈಸನ್ಸನ್ನು ಪ್ರತೀ ವರ್ಷ ನಿಗಧಿತ ಸಮಯಕ್ಕೆ ನವೀಕರಣ ಮಾಡಿಕೊಂಡು,ರಾಸಾಯನಿಕ ವಸ್ತುಗಳ ಸಾಗಣೆ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆಯುವುದು ಅತ್ಯಗತ್ಯ.ವಾಹನದಲ್ಲಿ ಸುರಕ್ಷತಾ ಪೆಟ್ಟಿಗೆ ಇದ್ದು,ಅಪಘಾತವಾದಲ್ಲಿ ಕೂಡಲೇ ಪೊಲೀಸರಿಗೆ,ಅಂಬುಲೆನ್ಸ್ ,ಅಗ್ನಿಶಾಮಕ ದಳಕ್ಕೆ ತಿಳಿಸುವ ಸಲುವಾಗಿ.ವಾಹನದಲ್ಲಿ ತುರ್ತು ಮಾಹಿತಿ ಫಲಕಗಳನ್ನು ಬರೆಸಬೇಕೆಂದು ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳಾದ ಮಲ್ಲಿಕಾರ್ಜುನರವರು ತಿಳಿಸಿದರು.ಅವರು ಇಂದು ಐ.ಒ.ಸಿ.ಮಂ ಗಳಾ ಟರ್ಮಿ ನಲ್ ನಲ್ಲಿ ಕರ್ನಾ ಟಕ ರಾಜ್ಯ ಸಾರಿಗೆ ಇಲಾಖೆ ಅಧಿ ಕಾರಿ ಗಳ ಸಂಘ,ಇಂಡಿ ಯನ್ ಆಯಿಲ್ ಕಾರ್ಪೋ ರೇಷನ್ ಮಂಗ ಳೂರು ಮತ್ತು ಪ್ರಾದೇ ಶಿಕ ಸಾರಿಗೆ ಅಧಿ ಕಾರಿ ಗಳ ಕಚೇರಿ ಮಂಗ ಳೂರು ಇವರ ಸಂಯುಕ್ತಾ ಶ್ರಯದಲ್ಲಿ ಅಪಾಯಕಾರಿ ಹಾಗೂ ಸ್ಪೋಟಕ ಸರಕು ಸಾಗಣೆ ಕುರಿತು ವಾಹನ ಚಾಲಕರಿಗೆ ನೀಡಲಾಗುತ್ತಿರುವ ತರಬೇತಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಬೆಂಗಳೂರು ಟ್ರಾಫಿಕ್ ಇಂಜಿನಿಯರ್ ಮತ್ತು ಸೇಫ್ಟಿ ತರಬೇತಿ ಸಂಸ್ಥೆಯ ನಿರ್ದೇಶಕರಾದ ಬಿ.ಸಿ.ಎಸ್.ಕುಮಾರ್ ತರಬೇತಿ ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.ತರಬೇತಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರು ಸಾರಿಗೆ ಇಲಾಖೆ ಅಧಿಕಾರಿಗಳ ಸಂಘದ ಅಧ್ಯಕ್ಷರಾದ ಶಿವರಾಜ್ ಪಾಟೀಲ್ ಮಾತನಾಡಿ,ರಾಜ್ಯ ಬೊಕ್ಕಸಕ್ಕೆ ಪ್ರತೀ ವರ್ಷ ಸುಮಾರು 200 ಕೋಟಿ ರಾಜಸ್ವ ಸಂಗ್ರಹ ಮಾಡಿ ದೇಶದಲ್ಲಿ 4ನೇ ಸ್ಥಾನದಲ್ಲಿದೆ ಎಂದರು.ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಗಳಾಗಿ ಎಲ್.ಜಯಬಾಲನ್ ಉಪಸ್ಥಿತರಿದ್ದರು.ತರಬೇತಿಯಲ್ಲಿ ಸುಮಾರು 250 ಟ್ರಕ್ ಚಾಲಕರು ಭಾಗವಹಿಸಿದ್ದರು.

Tuesday, November 8, 2011

ಪ್ರಾಥಮಿಕ ಶಾಲಾ ಗ್ರಂಥಾಲಯಗಳಿಗಾಗಿ ಪುಸ್ತಕ ಮೇಳ

ಮಂಗಳೂರು, ನವೆಂಬರ್.08: ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಗ್ರಂಥಾಲಯ ಪುಸ್ತಕ ಖರೀದಿಸಲು ಅನುಕೂಲವಾಗುವಂತೆ ಇಂದು ನಗರದ ಡಯಟ್ ಕೊಡಿಯಾಲ್ ಬೈಲ್ ನಲ್ಲಿ ಪುಸ್ತಕ ಮೇಳ ಆಯೋಜಿಸಲಾಗಿತ್ತು.


ರಾಜ್ಯ ದಾದ್ಯಂ ತದಿಂದ ಆಗ ಮಿಸಿದ್ದ 88 ಪ್ರಕಾ ಶಕರು ತಮ್ಮ ಪುಸ್ತಕ ಗಳನ್ನು ಮೇಳ ದಲ್ಲಿ ಪ್ರದ ರ್ಶಿಸಿದ್ದು, ಜಿಲ್ಲಾ ಪಂಚಾ ಯತ್ ಅಧ್ಯಕ್ಷ ರಾದ ಶ್ರೀ ಮತಿ ಶೈಲಜಾ ಭಟ್ ಅವರು ಮೇಳ ವನ್ನು ಉದ್ಘಾ ಟಿಸಿ ದರು. ಉಪಾ ಧ್ಯಕ್ಷ ರಾದ ಶ್ರೀಮತಿ ಧನ ಲಕ್ಷ್ಮಿ ಯವರು, ಸ್ಥಾಯಿ ಸಮಿತಿ ಸದ ಸ್ಯರು ಪುಸ್ತಕ ಮೇಳ ವೀಕ್ಷಿ ಸಿದರು.
ಮಂಗ ಳೂರು ತಾಲೂಕು, ನಗರ, ಮೂಡ ಬಿದ್ರೆ ಇಲ್ಲಿನ 300 ಶಾಲೆಗ ಳವರು ಪುಸ್ತಕ ಮೇಳದ ಪ್ರಯೋ ಜನ ವನ್ನು ಪಡೆದು ಕೊಂಡಿ ದ್ದಾರೆಂದು ಸರ್ವ ಶಿಕ್ಷಣ ಅಭಿಯಾನದ ಯೋಜನಾ ಸಮನ್ವಯಾಧಿಕಾರಿಗಳಾದ ಶಿವಪ್ರಕಾಶ್ ತಿಳಿಸಿದರು.
ಪ್ರಾಥಮಿಕ ಶಾಲೆಗಳ ಜೊತೆಗೆ ಮಾಧ್ಯಮಿಕ ಶಿಕ್ಷಣ ಅಧ್ಯಯನದಡಿ ಪ್ರೌಢಶಾಲೆಗಳಿಗೂ ಅನುದಾನ ಲಭ್ಯವಾಗಿದೆ. ಪ್ರಸಕ್ತ ಸಾಲಿನಲ್ಲಿ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಿಗೆ ಗ್ರಂಥಾಲಯಕ್ಕೆ ಪುಸ್ತಕ ಖರೀದಿಸಲು ಕ್ರಮವಾಗಿ 3000 ರೂ., ಮತ್ತು 10,000 ದಂತೆ ಒಟ್ಟು 35 ಲಕ್ಷ ರೂ ಅನುದಾನವನ್ನು ಜಿಲ್ಲೆಯ ಎಲ್ಲ ಶಾಲಾ ಎಸ್ ಡಿ ಎಂ ಸಿ ಖಾತೆಗಳಿಗೆ ಬಿಡುಗಡೆಯಾಗಿದೆ.
ಬಂಟ್ವಾಳ,ಬೆಳ್ತಂಗಡಿಯವರಿಗಾಗಿ ಮಧುಕರ ಸಭಾಭವನ ಶ್ರೀರಾಮ ಪ್ರೌಢಶಾಲೆ ಹನುಮಾನ್ ನಗರ ಕಲ್ಲಡ್ಕದಲ್ಲಿ ನಾಳೆ, ಪುತ್ತೂರು, ಸುಳ್ಯದಲ್ಲಿ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಭಾಭವನದಲ್ಲಿ ನವೆಂಬರ್ 10ರಂದು ಪುಸ್ತಕಮೇಳ ಆಯೋಜಿಸಲಾಗಿದೆ.
ಶಾಲೆಗಳ ಮುಖ್ಯಶಿಕ್ಷಕರು ಮತ್ತು ಎಸ್ ಡಿ ಎಂ ಸಿಯವರು ಈ ಮೇಳದಲ್ಲಿ ಸಕ್ರಿಯವಾಗಿ ಭಾಗವಹಿಸಿ ಮಕ್ಕಳ ಗುಣಾತ್ಮಕ ಶಿಕ್ಷಣದ ಬಲವರ್ಧನೆಗೆ ಸಹಕರಿಸಲು ಯೋಜನಾ ಸಮನ್ವಯಾಧಿಕಾರಿಗಳು ಕೋರಿದ್ದಾರೆ. ಜಿಲ್ಲೆಯ ಒಟ್ಟು 983 ಶಾಲೆಗಳಿಗೆ ಈ ಯೋಜನೆಯ ಪ್ರಯೋಜನ ಲಭಿಸಲಿದೆ.

" ವಾಯುಮಾಲಿನ್ಯ ಬಗ್ಗೆ ಜಾಗೃತಿ ಅಗತ್ಯ "

ಮಂಗಳೂರು,ನವೆಂಬರ್.08 : ಜನಸಂಖ್ಯಾ ಸ್ಫೋಟದ ಜೊತೆಗೆ ವಾಹನಗಳ ಸಂಖ್ಯೆಯು ವೇಗವಾಗಿ ಹೆಚ್ಚುತ್ತಿದ್ದು, ಇದರ ಪರಿಣಾಮವಾಗಿ ದೇಶದ ಪಟ್ಟಣ, ನಗರ ಪ್ರದೇಶಗಳು ವಾಯು ಮಾಲಿನ್ಯದಿಂದ ಕಲುಷಿತವಾಗಿದೆ ಈ ಬಗ್ಗೆ ಜನರಲ್ಲಿ ಜಾಗೃತಿ ಅಗತ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪಗೌಡ ಅವರು ಹೇಳಿದರು.ಅವ ರಿಂದು ದಕ್ಷಿಣ ಕನ್ನಡ ಜಿಲ್ಲಾ ಡಳಿತ ಮತ್ತು ಪ್ರಾದೇ ಶಿಕ ಸಾರಿಗೆ ಕಚೇ ರಿಯು ಜಂಟಿ ಯಾಗಿ ಹಮ್ಮಿ ಕೊಂಡಿ ದ್ದ ವಾಯು ಮಾಲಿನ್ಯ ನಿಯಂ ತ್ರಣ ಮಾಸಾ ಚರಣೆ ಕಾರ್ಯ ಕ್ರಮ ವನ್ನು ಉದ್ಘಾ ಟಿಸಿ ಮಾತ ನಾಡು ತ್ತಿದ್ದರು.ವಿಶ್ವ ಸಂಸ್ಥೆ ನೀಡಿದ ವರದಿಯ ಪ್ರಕಾರ ವಾಯು ಮಾಲಿನ್ಯದಿಂದ ಜಗತ್ತಿನಲ್ಲಿ ವರ್ಷಕ್ಕೆ 2.4 ಮಿಲಿಯನ್ ಜನರು ಸಾಯುತ್ತಿದ್ದಾರೆ ಅಲ್ಲದೆ ಜಾಗತಿಕ ತಾಪಮಾನ ಕೂಡ ಗಣನೀಯವಾಗಿ ಏರುತ್ತಿದೆ.ಪರಿಸರ ಸಂರಕ್ಷಣೆ, ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಅಧಿಕೃತ ರಾಯಭಾರಿಗಳಾಗಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು. ಜಿಲ್ಲಾಡಳಿತ ಘನತ್ಯಾಜ್ಯ ವಿಲೇ,ಸಸಿ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಜಲ ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಒಳಚರಂಡಿ ವ್ಯವಸ್ಥೆಯೂ ನಮಗೆ ಸವಾಲಾಗಿ ಪರಿಣಮಿಸಿದೆ. ಪ್ಲಾಸ್ಟಿಕ್ ನಿಷೇಧವನ್ನು ಜಿಲ್ಲೆಯಲ್ಲಿ ಈಗಾಗಲೇ ಜಾರಿಗೆ ತಂದಿದ್ದರೂ ಪರಿಣಾಮಕಾರಿ ಅನುಷ್ಠಾನವಾಗುತ್ತಿಲ್ಲ; ಜನರು ಅಭ್ಯಾಸ ಬಲವನ್ನು ಬದಲಾಯಿಸಬೇಕು; ಪರಿಸರ ಸ್ನೇಹಿ ಸೈಕಲ್ ನ್ನು ಯುವಜನಾಂಗ ಬಳಸಿದರೆ ಪರಿಸರ ಮಾಲಿನ್ಯ ತಡೆಯಬಹುದು ಎಂದು ಜಿಲ್ಲಾಧಿಕಾರಿಗಳು ಸಲಹೆ ಮಾಡಿದರು.ಎನ್ ಐ ಟಿ ಕೆಯ ಸಿವಿಲ್ ಇಂಜಿ ನಿಯ ರಿಂಗ್ ವಿಭಾ ಗದ ಅಸಿ ಸ್ಟೆಂಟ್ ಪ್ರೊಫೆ ಸರ್ ಡಾ. ಬಿ. ಮನು ಉಪ ನ್ಯಾಸ ನೀಡಿ ದರು. ಕಾರ್ಯ ಕ್ರಮದ ಅಧ್ಯ ಕ್ಷತೆ ವಹಿ ಸಿದ್ದ ಸಂತ ಅಲೋ ಷಿಯಸ್ ಕಾಲೇ ಜಿನ ಪ್ರೊ. ಜಾನ್ ಎಡ್ವರ್ಡ್ ಡಿ ಸಿಲ್ವಾ ಅವರು ಪರಿಸರ ಸಂರ ಕ್ಷಣೆಗೆ ವಿದ್ಯಾ ರ್ಥಿಗಳು ಹದಿ ನೆಂಟು ವರ್ಷ ವಾಗದೆ ಮೋಟಾರ್ ಸೈಕಲ್ ಚಾಲನೆ ಮಾಡಬೇಡಿ, ಸಾರ್ವಜನಿಕ ವಾಹನಗಳಲ್ಲಿ ಪ್ರಯಾಣ ಮಾಡಿ, ಶಾಲಾ ಬಸ್ಸುಗಳನ್ನು ಉಪಯೋಗಿಸಿ, ನಡಿಗೆಗೆ ಆದ್ಯತೆ ನೀಡಿ ಇದು ಉತ್ತಮ ಆರೋಗ್ಯಕ್ಕೆ ಸಹಕಾರಿಯಾಗುವುದು ಎಂದರಲ್ಲದೆ, ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ಮಾಡಿದರು. ಅತಿಥಿ ಗಳನ್ನು ಸ್ವಾಗತಿಸಿ ಪ್ರಾಸ್ತಾ ವಿಕ ಮಾತು ಗಳ ನ್ನಾಡಿದ ಪ್ರಾದೇ ಶಿಕ ಸಾರಿಗೆ ಅಧಿ ಕಾರಿ ಗಳಾದ ಸಿ.ಮಲ್ಲಿ ಕಾರ್ಜುನ ಅವರು ಶಾಲಾ ಮಕ್ಕ ಳಲ್ಲಿ ವಾಯು ಮಾಲಿನ್ಯ ಕುರಿತು ಜಾಗೃತಿ ಮೂಡಿ ಸಿದಾಗ ಬದ ಲಾವಣೆ ಸಾಧ್ಯ ಈ ನಿಟ್ಟಿ ನಲ್ಲಿ ಶಾಲಾ ಮಟ್ಟ ದಲ್ಲಿ ಈ ಕಾರ್ಯ ಕ್ರಮ ಗಳನ್ನು ಹಮ್ಮಿ ಕೊಳ್ಳ ಲಾಗುತ್ತಿದೆ ಎಂದರು. ಬಸ್ಸು ಮಾಲಕರ ಸಂಘದ ಅಧ್ಯಕ್ಷ ರಾಜ ವರ್ಮ ಬಳ್ಳಾಲ್ ಮುಖ್ಯ ಅಥಿತಿಗಳಾಗಿ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಾಯು ಮಾಲಿನ್ಯ ತಡೆ ಪ್ರತಿಜ್ಞೆ ಸ್ವೀಕಾರವನ್ನು ಜಿಲ್ಲಾಧಿಕಾರಿಗಳು ಬೋಧಿಸಿದರು. ವಾಹನಗಳಿಂದ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ತಡೆಯುವುದು ಹೇಗೆ ಎಂಬ ಕಿರುಹೊತ್ತಿಗೆಯನ್ನು ಜಿಲ್ಲಾಧಿಕಾರಿಗಳು ಬಿಡುಗಡೆ ಮಾಡಿದರು.ಸೀನಿಯರ್ ಇನ್ಸ್ ಪೆಕ್ಟರ್ ಜಿ.ಎಸ್. ಹೆಗ್ಡೆ ವಂದಿಸಿದರು. ಕೇಶವ ಧರಣಿ ಅವರು ಕಾರ್ಯ ಕ್ರಮ ನಿರೂಪಿಸಿದರು.

Saturday, November 5, 2011

ವಸತಿ ಯೋಜನೆ ಅರ್ಜಿಗಳ ತುರ್ತು ವಿಲೇಗೆ ಜಿಲ್ಲಾಧಿಕಾರಿ ಸೂಚನೆ

ಮಂಗಳೂರು,ನವೆಂಬರ್.05: ವಾಜಪೇಯಿ ನಗರ ವಸತಿ ಹಾಗೂ ನಮ್ಮ ಮನೆ ಯೋಜನೆಯಡಿ ಒಟ್ಟು 982 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಇವರಲ್ಲಿ 777 ಫಲಾನುಭವಿಗಳ ಅರ್ಜಿಗಳು ಬ್ಯಾಂಕುಗಳಲ್ಲಿ ಬಾಕಿ ಇದ್ದು, ಈ ಅರ್ಜಿಗಳನ್ನು ಪುರಸ್ಕರಿಸಿ ತಕ್ಷಣವೇ ಹಣ ಬಿಡುಗಡೆ ಮಾಡಲು ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ ಅವರು ಲೀಡ್ ಬ್ಯಾಂಕ್ ಮ್ಯಾನೇಜರ್ ಗೆ ಸೂಚಿಸಿದರು. ಇಂದು ಜಿಲ್ಲಾಧಿ ಕಾರಿಗಳ ಕಚೇರಿ ಯಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಾಧಿ ಕಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ನವೆಂಬರ್ ಅಂತ್ಯದೊಳಗೆ ಶೇಕಡ 75 ಪ್ರಗತಿ ದಾಖಲಿಸಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು, ಜಿಲ್ಲೆಯ ಎಲ್ಲ ಬ್ಯಾಂಕ್ ಮ್ಯಾನೇಜರ್ ಜೊತೆ ಸಮನ್ವಯ ಸಾಧಿಸಿ ಪ್ರಗತಿ ದಾಖಲಿಸಬೇಕೆಂದು ಜಿಲ್ಲೆಯ ಲೀಡ್ ಬ್ಯಾಂಕ್ ಅಧಿಕಾರಿಗಳು ಏನೆಲ್ಲ ಅಗತ್ಯ ಮಾಹಿತಿ ಬೇಕೆಂಬುದನ್ನು ಸಭೆಯಲ್ಲಿ ಸ್ಪಷ್ಟಪಡಿಸಬೇಕು; ಈ ಮಾಹಿತಿಯನ್ನು ಎಲ್ಲ ಮುಖ್ಯ ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿರುವ ಫಲಾನುಭವಿಗಳಿಗೆ ತಿಳಿಸಿ ತಕ್ಷಣ ಕಾರ್ಯೋನ್ಮುಖರಾಗಬೇಕು ಸೂಚಿಸಿದರು.
ಸಭೆಯಲ್ಲಿ ಉತ್ತರಿಸಿದ ಲೀಡ್ ಬ್ಯಾಂಕ್ ಅಧಿಕಾರಿ ಅನುಮೋದನೆ ಪಡೆದ ಯೋಜನೆ ಪ್ರತಿ, ಖಾತಾ ಅಥವಾ ಆರ್ ಟಿ ಸಿ, ಇನ್ ಕಂ ಸರ್ಟಿಫಿಕೇಟ್ ಕೊಡಬೇಕು. ಆದರೆ ಸಾಲ ನೀಡಲು ಆದಾಯ ಪ್ರಮಾಣ ಪತ್ರ ಮಾನದಂಡ ವಾಗುವುದಿಲ್ಲ ಎಂಬುದನ್ನು ಸಭೆಗೆ ತಿಳಿಸಿದರು.
ನೀರಿನ ತೆರಿಗೆ, ವಾಣಿಜ್ಯ, ಉದ್ಯಮ ತೆರಿಗೆ ವಸೂಲಾತಿ ವರದಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಗುರಿ ಸಾಧಿಸದ ಅಧಿಕಾರಿಗಳಿಗೆ ಮುಂದಿನ ತಿಂಗಳೊಳಗೆ ನಿಗದಿತ ಗುರಿ ಸಾಧಿಸಬೇಕೆಂದು ತಾಕೀತು ಮಾಡಿದರು. ನೀರಿನ ಬಿಲ್ ಪಾವತಿಸದವರಿಗೆ ಸಂಪರ್ಕ ಕಡಿತ ಮಾಡಿ ವರದಿ ನೀಡಲು ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.
ಘನ ತ್ಯಾಜ್ಯ ವಿಲೇ ಯಲ್ಲಿ ಆದ ಪ್ರಗತಿ ಬಗ್ಗೆ, ಎಲ್ಲಾ ಪುರಸಭೆ ಮತ್ತು ನಗರಸಭೆ ವ್ಯಾಪ್ತಿಯಲ್ಲಿ ಕನಿಷ್ಟ ಒಂದು ಉದ್ಯಾನವನ ನಿರ್ಮಿಸುವ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕೆಂದ ಜಿಲ್ಲಾಧಿಕಾರಿಗಳು, ಪರಿಶಿಷ್ಟ ಜಾತಿಯವರಿಗೆ ನಿವೇಶನ ಗುರುತಿಸುವಲ್ಲಿ ಲೋಪವಾದರೂ ಅದು ದೌರ್ಜನ್ಯಕ್ಕೆ ಸಮ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ತಾಕತ್ ರಾವ್ ಸ್ವಾಗತಿಸಿದರು. ಸಂಬಂಧ ಪಟ್ಟ ಇಲಾಖಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

'ತರಬೇತಿ ಉಚಿತ ಕೆಲಸ ಖಚಿತ'

ಮಂಗಳೂರು,ನವೆಂಬರ್.05 : ಸ್ವರ್ಣ ಜಯಂತಿ ಶಹರಿ ರೋಜ್ ಗಾರ್ ಯೋಜನೆಯಡಿ ನಗರದ ಬಡಜನರಿಗಾಗಿ ಕೌಶಲ್ಯಾಭಿವೃದ್ಧಿ ತರಬೇತಿ ಪಡೆದವರಿಗೆ ಕೆಲಸ ನೀಡುವ ಕುರಿತು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಯಿತು.ಪೌರಾಡಳಿತ ನಿರ್ದೇಶಾನಲಯದ ಮಾರ್ಗಸೂಚಿಯನ್ವಯ ಆಸಕ್ತ ಅರ್ಹ ಅಭ್ಯರ್ಥಿಗಳಿಗೆ ತರಬೇತಿ ನೀಡುವುದಲ್ಲದೆ, ತರಬೇತಿ ನೀಡಿದ ಸಂಸ್ಥೆಗಳು ಕೆಲಸದ ಖಾತರಿ ನೀಡಬೇಕಾಗುತ್ತದೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪಗೌಡ ಹೇಳಿದರು.
ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ಧಿ ಕೋಶ, ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಸಮುದಾಯ ಅಭಿವೃದ್ಧಿ ಪರಿಣತರು, ಸಹಾಯಕ ನಿರ್ದೇಶಕರು ಉದ್ಯೋಗ ಮತ್ತು ತರಬೇತಿ ಇಲಾಖೆ, ಜಿಲ್ಲಾ ಲೀಡ್ ಬ್ಯಾಂಕ್ ಸೇರಿದಂತೆ ಪ್ರಮುಖ ಇಲಾಖೆಗಳು ಹಾಗೂ ಸರ್ಕಾರಿ ಸ್ವಾಮ್ಯದಡಿ ಬರುವ ಕಂಪೆನಿಗಳ ಪ್ರಮುಖರು ಸಭೆಯಲ್ಲಿ ಉಪಸ್ಥಿತರಿದ್ದರು. ಕೆಪಿಟಿ ಮಂಗಳೂರು ಇವರು ವಿವಿಧ ತಾಂತ್ರಿಕ ತರಬೇತಿ ನೀಡುವರು. ಮಾನವ ಸಂಪನ್ಮೂಲ ಇಲಾಖೆ ಮೊಬೈಲ್ ಟೆಕ್ನಿಷಿಯನ್ ಮತ್ತು ಸಾಫ್ಟ್ ಸ್ಕಿಲ್ಸ್ ಗಳ ತರಬೇತಿ, ಎಂ ಎಸ್ ಎಂ ಇ (ಮೈಕ್ರೋ ಸ್ಮಾಲ್ ಅನ್ ಮೀಡಿಯಂ ಎಂಟರ್ ಪ್ರೈಸಸ್) ರೆಡಿಮೇಡ್ ಗಾರ್ಮೆಂಟ್ಸ್, ಆಹಾರ ಸಂಸ್ಕರಣೆ, ಬೇಕರಿ ಉತ್ಪನ್ನ ತಯಾರಿಕೆ, ಕಸೂತಿ ಮತ್ತು ಆರ್ಟಿಫಿಷಿಯಲ್ ಆಭರಣ ತಯಾರಿಕೆ ಕುರಿತ ತರಬೇತಿ, ಜಿಐಟಿಸಿ (ಗವರ್ನ್ಮೆಂಟ್ ಟೂಲ್ ರೂಮ್ ಮತ್ತು ಟ್ರೈನಿಂಗ್ ಸೆಂಟರ್ ನವರು ಆಟೋ ಕ್ಯಾಡ್ ನಿಂದ ಆರಂಭಿಸಿ ಟರ್ನರ್, ಮಿಲ್ಲರ್, ಗ್ರೈಂಡರ್, ಸಿ ಎನ್ ಸಿ ಟರ್ನರ್, ಮಿಲ್ಲಿಂಗ, ಸಾಲಿಡ್ ವಕ್ರ್ಸ ಮುಂತಾದ ವಿಷಯಗಳಲ್ಲಿ ತರಬೇತಿಗಳನ್ನು ಎಸ್ ಎಸ್ ಎಲ್ ಸಿ/ ಪಿ ಯುಸಿ ಪಾಸಾದ ಅಥವಾ ಫೈಲ್ ಆದ ಮಕ್ಕಳಿಗೆ ನೀಡಿ ಉದ್ಯೋಗ ನೀಡುವ ಭರವಸೆಯನ್ನು ಸಭೆಯಲ್ಲಿ ನೀಡಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೇರು ಉದ್ಯಮಕ್ಕೂ ಮಾನವ ಸಂಪನ್ಮೂಲದ ಅಗತ್ಯವಿದ್ದು ಈ ಉದ್ಯಮದವರು ತಾವೂ ತರಬೇತಿ ನೀಡಿ ಉದ್ಯೋಗ ನೀಡುವ ಭರವಸೆಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರು. ಕಿಯೋನಿಕ್ಸ್ ಅವರು ಆಧಾರ್ ಯೋಜನೆಗೆ ಅಗತ್ಯವಿರುವವರಿಗೆ ತರಬೇತಿ ನೀಡುವುದಾಗಿ ಹೇಳಿದರು.
ತರಬೇತಿ ಪಡೆದ ಫಲಾನುಭವಿಗಳು ಖಚಿತವಾಗಿ ಉದ್ಯೋಗ ಪಡೆಯುವಲ್ಲಿ ಕ್ರಮ ವಹಿಸಲಾಗಿದ್ದು ನಗರಸಭೆ ಮತ್ತು ಪುರಸಭೆಯವರು ಉದ್ಯೋಗಾಕಾಂಕ್ಷಿಗಳ ಪಟ್ಟಿಯನ್ನು ನವೆಂಬರ್ 20 ರೊಳಗೆ ನೀಡಲು ಜಿಲ್ಲಾಧಿಕಾರಿಗಳು ಸೂಚಿಸಿದರು.