Saturday, January 28, 2012

ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿ:ಮುಖ್ಯಮಂತ್ರಿ ಸದಾನಂದ ಗೌಡ

ಮಂಗಳೂರು,ಜನವರಿ.28:ಪ್ರತಿಭಾನ್ವಿತ ವಿದ್ಯಾರ್ಥಿಗಳು ಇತ್ತೀಚಿನ ದಿನಗಳಲ್ಲಿ ಇಂಜನಿಯರಿಂಗ್ ಮತ್ತು ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿರುವುದರಿಂದ ಮೂಲ ವಿಜ್ಞಾನ ಕ್ಷೇತ್ರವು ಪ್ರತಿಭಾ ಕೊರತೆಯನ್ನು ಎದುರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಮೂಲ ವಿಜ್ಞಾನದಲ್ಲಿ ಪದವಿ, ಸ್ನಾತಕೋತ್ತರ ಹಾಗೂ ಡಾಕ್ಟರೇಟ್ ಹಂತದಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಸಲುವಾಗಿ ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿ ನೀಡುವ ಶಿಷ್ಯ ವೇತನಕ್ಕಾಗಿ 2012-13ನೆ ಸಾಲಿಗೆ ರಾಜ್ಯ ಸರಕಾರ ಎರಡು ಕೋಟಿ ರೂ.ಗಳ ವಿಶೇಷ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಘೋಷಿಸಿದ್ದಾರೆ.ಜ್ಞಾನಾ ಧಾರಿತ ಮಾಹಿತಿ ಹಾಗೂ ಜೈವಿಕ ತಂತ್ರ ಜ್ಞಾನ ಕ್ಷೇತ್ರ ದಲ್ಲಿ ಬೆಂಗ ಳೂರು ವಿಶ್ವ ಮಾನ್ಯತೆ ಪಡೆ ದಿರು ವುದು ರಾಜ್ಯಕ್ಕೆ ಹೆ ಮ್ಮೆಯ ಸಂ ಗತಿ ಎಂದು ಹೇಳಿದ ಅವರು, ನ್ಯಾನೋ ತಂತ್ರ ಜ್ಞಾನ 21ನೆ ಶತ ಮಾನ ದಲ್ಲಿ ಎಲ್ಲಾ ಕ್ಷೇ ತ್ರದಲ್ಲಿ ಕ್ರಾಂತಿ ಕಾರಿ ಬದಲಾವಣೆ ತರುವ ನಿರೀಕ್ಷೆಯಿದೆ. ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನಕ್ಕೆ ಪ್ರೋತ್ಸಾಹ ನೀಡಿದಂತೆ ಈ ಭರವಸೆಯ ತಂತ್ರಜ್ಞಾನಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಬೆಂಗಳೂರಿನಲ್ಲಿ ಸುಸಜ್ಜಿತ ನ್ಯಾನೋಪಾರ್ಕಿಂಗ್ ನಿರ್ಮಾಣಕ್ಕೆ ಸರಕಾರ ಕ್ರಮ ಕೈಗೊಂಡಿದೆ ಎಂದವರು ತಿಳಿಸಿದರು.
ರಾಜ್ಯವು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳಾದ ಬರಗಾಲ, ಜಲಕ್ಷಾಮ, ಕೃಷಿ ಕ್ಷೇತ್ರದ ಸಮಸ್ಯೆಗಳು, ಸಮುದ್ರದ ಕೃಷಿ ಉತ್ಪನ್ನಗಳ ಸಂಗ್ರಹಣೆ, ಮೌಲ್ಯವರ್ಧನೆಗಾಗಿ ನಿರಂತರ ಹಸಿರು ಕ್ರಾಂತಿ, ಸಮುದ್ರದ ಮೀನು ಉತ್ಪಾದನೆಯ ಸುಸ್ಥಿರ ಅಭಿವೃದ್ಧಿ, ಘನತ್ಯಾಜ್ಯ ನಿರ್ವಹಣೆ, ವಿದ್ಯುತ್ ಸಮಸ್ಯೆ, ಹವಾಮಾನ ಬದಲಾವಣೆ ಮೊದಲಾದವುಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದಿಂದ ಹೊಸ ಸಂಶೋಧನೆ ಮತ್ತು ಅವಿಷ್ಕಾರಗಳು ಮೂಡಿಬರಬೇಕಾಗಿದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಿಸಿದರು.ವಿಜ್ಞಾನ ಜಾಗೃತಿ ಮತ್ತು ವಿಜ್ಞಾನ ಶಿಕ್ಷಣಕ್ಕೆ ರಾಜ್ಯ ಸರಕಾರ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ವಿದ್ಯಾ ಕ್ಷೇತ್ರದಲ್ಲಿ ನೀಡುವ ಅನುದಾನದಲ್ಲಿ ದೇಶದಲ್ಲಿಯೇ ಕರ್ನಾಟಕ ರಾಜ್ಯ ಪ್ರಥಮ ಸ್ಥಾನದಲ್ಲಿದೆ ಎಂದವರು ಈ ಸಂದರ್ಭ ತಿಳಿಸಿದರು.ಸಮಾ ರಂಭ ದಲ್ಲಿ ಮುಖ್ಯ ಅತಿಥಿ ಯಾಗಿ ಭಾಗವಹಿಸಿದ್ದ ಉನ್ನತ ಶಿಕ್ಷಣ ಸಚಿವ ಡಾ.ವಿ.ಎಸ್. ಆಚಾರ್ಯ ಮಾತನಾಡಿ, ಕುಡಿಯುವ ನೀರು, ಬಡತನೆ, ಅಪೌಷ್ಠಿಕತೆ, ವಿದ್ಯುತ್ ಮೊದಲಾದ ಸಮಸ್ಯೆಗಳನ್ನು ಎದುರಿಸುವಲ್ಲಿ ವಿಜ್ಞಾನಿಗಳು ಸೂಕ್ತ ಮಾಹಿತಿಯನ್ನು ನೀಡಬೇಕಾಗಿದೆ ಎಂದರು.
ರಾಜ್ಯ ಸರಕಾರವು ವಿಜ್ಞಾನ ಕ್ಷೇತ್ರಕ್ಕೆ ನೀಡುತ್ತಿರುವ ಪ್ರೋತ್ಸಾಹ ಮತ್ತು ಹಮ್ಮಿಕೊಂಡಿರುವ ಕಾರ್ಯಕ್ರಮಗಳ ವಿವರ ನೀಡಿದ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಮೀನುಗಾರಿಕಾ ಸಚಿವ ಆನಂದ್ ವಸಂತ್ ಅಸ್ನೋಟಿಕ್,ಪ್ರತಿ ಜಿಲ್ಲೆಯಲ್ಲಿಯೂ ವಿಜ್ಞಾನ ಉಪ ಕೇಂದ್ರಗಳ ನಿರ್ಮಾಣಕ್ಕೆ ರಾಜ್ಯ ಸರಕಾರವು ತಲಾ 2.6 ಕೋಟಿ ರೂ.ಗಳಿಗೆ ಅನುಮೋದನೆ ನೀಡಿದ್ದು, ಈಗಾಗಲೇ ತಲಾ 1.3 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ಧಾರವಾಡದ ವಿಜ್ಞಾನಕೇಂದ್ರ ಫೆಬ್ರವರಿಯಲ್ಲಿ ಆರಂಭಗೊಳ್ಳಲಿದ್ದರೆ, ಪಿಲಿಕುಳ ವಿಜ್ಞಾನ ಕೇಂದ್ರ ಜೂನ್ ತಿಂಗಳಲ್ಲಿ ಆರಂಭಗೊಳ್ಳುವುದಾಗಿ ತಿಳಿಸಿದರು.ಕರ್ನಾ ಟಕ ವಿಜ್ಞಾನ ಮತ್ತು ತಂತ್ರ ಜ್ಞಾನ ಅಕಾ ಡೆಮಿ ಆಶ್ರಯ ದಲ್ಲಿ `ವಿಜ್ಞಾನ ಮತ್ತು ತಂತ್ರ ಜ್ಞಾನದ ಹೊಸ ದಿಗಂ ತಗಳು: ಅವ ಕಾಶ ಗಳು ಮತ್ತು ಸವಾಲು ಗಳು' ಎಂಬ ವಿಷ ಯದಲ್ಲಿ ನಡೆ ಯಲಿ ರುವ ಎರಡು ದಿನ ಗಳ ಸಮ್ಮೇ ಳನ ವನ್ನು ಮಂಗ ಳೂರು ವಿಶ್ವ ವಿದ್ಯಾ ನಿಲ ಯದ ವಿಜ್ಞಾನ ಸಂ ಕೀರ್ಣ ಆವ ರಣ ದಲ್ಲಿ ಅವ ರಿಂದು ಉದ್ಘಾ ಟಿಸಿ ಮಾತ ನಾಡಿ ದರು.ಸ್ಪರ್ಧಾ ತ್ಮಕ ಜಗತ್ತಿ ನಲ್ಲಿ ಸವಾ ಲುಗ ಳನ್ನು ಸ್ವೀ ಕರಿ ಸುವ ಪ್ರವೃತ್ತಿ ಯುವ ಕರಲ್ಲಿ ಮೂಡಿ ಬಂದರೆ ಅವ ಕಾಶ ಗಳು ತನ್ನಿಂದ ತಾನಾ ಗಿಯೇ ಒದಗಿ ಬರು ತ್ತದೆ ಎನ್ನುತ್ತಾ ಅವ ಕಾಶಗಳನ್ನು ಉಪಯೋಗಿಸಿಕೊಳ್ಳುವಂತೆ ಯುವ ವಿದ್ಯಾರ್ಥಿಗಳಿಗೆ ಕರೆ ನೀಡಿದ ಅವರು, 40-50 ವರ್ಷಗಳಲ್ಲಿ ಆಗಿರುವ ಸಂಶೋಧನೆಗಳು, ಅವಿಷ್ಕಾರಗಳು ಒಂದು ವರ್ಷದಲ್ಲಿ ಆಗುವ ಸಾಧ್ಯತೆಗಳು ನಮ್ಮ ಎದುರಿಗಿದೆ ಎಂದವರು ಹೇಳಿದರು.ಈ ಸಮ್ಮೇಳನದಲ್ಲಿ ಮೂಡಿ ಬರುವ ವಿಜ್ಞಾನ-ತಂತ್ರಜ್ಞಾನದ ಬದಲಾವಣೆ ಜನಜೀವನವನ್ನು ಉತ್ತಮ ಪಡಿಸಲು ಹಾಗೂ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಬಳಸಲು ಸಹಕಾರಿಯಾಗಲಿ. ಕರಾವಳಿಯ ನಿರ್ವಹಣೆ ಹಾಗೂ ಸಮುದ್ರದ ಮೀನುಗಾರಿಕೆಯ ಬಗ್ಗೆಯೂ ಚರ್ಚೆಯಾಗಲಿದ್ದು, ಇದು ಕರಾವಳಿಯ ಅಭಿವೃದ್ಧಿಗೆ ಪೂರಕವಾಗಲಿದೆ ಎಂಬುದಾಗಿ ಸಮ್ಮೇಳನದ ಬಗ್ಗೆ ಆಶಯ ವ್ಯಕ್ತಪಡಿಸಿದರು.ಸಮಾ ರಂಭ ದಲ್ಲಿ ಆಹಾರ ಸಂಸ್ಕ ರಣಾ ತಂತ್ರ ಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡಿದ ಮೈ ಸೂರಿನ ಕೇಂ ದ್ರೀಯ ಆಹಾರ ತಂತ್ರ ಜ್ಞಾನ ಸಂಶೋ ಧನಾ ಸಂಸ್ಥೆಯ ನಿವೃತ್ತ ನಿರ್ದೇ ಶಕ, ನ್ಯೂಟ್ರಿ ಷನ್ ಸೊಸೈಟಿ ಆಫ್ ಇಂಡಿ ಯಾದ ಅಧ್ಯಕ್ಷ ಪದ್ಮಶ್ರೀ ಡಾ.ವಿ. ಪ್ರಕಾಶ್ ಅವರಿಗೆ ಜೀವ ಮಾನ ಸಾಧನೆ ಪ್ರಶಸ್ತಿ ಯನ್ನು ಮುಖ್ಯ ಮಂತ್ರಿ ಡಿ.ವಿ. ಸದಾನಂದ ಗೌಡ ನೀಡಿ ಗೌರವಿಸಿದರು.ಮಂಗ ಳೂರು ವಿಶ್ವ ವಿದ್ಯಾ ನಿಲ ಯದ ಕುಲ ಪತಿ ಪ್ರೊ.ಟಿ.ಸಿ. ಶಿವ ಶಂಕ ರಮೂರ್ತಿ ಸಮಾ ರಂಭದ ಅಧ್ಯ ಕ್ಷತೆ ವಹಿ ಸಿದ್ದರು.ರಾಜ್ಯ ಸರ ಕಾರದ ಪ್ರಧಾನ ಕಾರ್ಯ ದರ್ಶಿ ಎಂ.ಎನ್. ವಿದ್ಯಾ ಶಂಕರ್, ಜಿಲ್ಲಾ ಉಸ್ತು ವಾರಿ ಸಚಿವ ಕೃಷ್ಣ ಜೆ. ಪಾಲೆ ಮಾರ್, ಅಕಾ ಡೆಮಿ ಅಧ್ಯಕ್ಷ ಪದ್ಮ ಭೂಷಣ ಪ್ರೊ. ಯು.ಆರ್. ರಾವ್,ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನಿರ್ದೇಶಕ ಡಾ.ಎಚ್. ಹೊನ್ನೇಗೌಡ,ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಕೆ. ಚಿನ್ನಪ್ಪ ಗೌಡ ಉಪಸ್ಥಿತರಿದ್ದರು.

ಪೋಲೀಸರಿಗೆ ಸೂಕ್ತ ವಸತಿ ಕಲ್ಪಿಸಲು ಹೆಚ್ಚುವರಿ ಅನುದಾನ:ಮುಖ್ಯಮಂತ್ರಿಗಳು

ಮಂಗಳೂರು,ಜನವರಿ.28: ರಾಜ್ಯದ ಪೋಲೀಸರು ತಮ್ಮ ಜೀವದ ಹಂಗು ತೊರೆದು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ನಿರತರಾಗಿದ್ದು, ಅವರುಗಳಿಗೆ ಸೂಕ್ತ ವಸತಿ ಸೌಲಭ್ಯಗಳು ಇಲ್ಲದಿರುವ ಬಗ್ಗೆ ಸಮಾಜದಿಂದ ಅನೇಕರು ಪ್ರತೀ ನಿತ್ಯ ಟೀಕೆಗಳನ್ನು ಮಾಡುತ್ತಲೇ ಇರುತ್ತಾರೆ.ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು ಮುಂದಿನ ಬಜೆಟ್ ನಲ್ಲಿ ಪೋಲೀಸ್ ವಸತಿ ಗೃಹಗಳ ನಿರ್ಮಾಣಕ್ಕಾಗಿ ಹೆಚ್ಚು ಅನುದಾನವನ್ನು ಮೀಸಲಿಡುವುದಾಗಿ ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಡಿ.ವಿ ಸದಾನಂದ ಗೌಡ ಇವರು ಹೇಳಿದ್ದಾರೆ.ಅವರು ಇಂದು ಮಂಗ ಳೂರು ನಗರ ದಲ್ಲಿ ನೂತ ನವಾಗಿ ನಿರ್ಮಾ ಣವಾ ಗಿರುವ ಪೋ ಲೀಸ್ ಆಯು ಕ್ತರ ಕಚೇರಿ ಉದ್ಘಾ ಟಿಸಿ ಮಾತ ನಾಡು ತ್ತಿದ್ದರು.ನಗ ರದ ಪೋ ಲೀಸ್ ಆಯು ಕ್ತರ ಈ ಕಚೇ ರಿಯಲ್ಲಿ ಎಲ್ಲಾ ಆಧು ನಿಕ ತಂತ್ರ ಜ್ಞಾನ ಗಳನ್ನು ಅಳ ವಡಿ ಸಿದ್ದು,ಇದು ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ಉಪ ಯೋಗ ವಾಗ ಲಿದೆ ಯೆಂದು ಅವರು ತಿಳಿಸಿ ದರು.ರಾಜ್ಯ ದಲ್ಲಿ ವಿಶೇ ಷವಾಗಿ ಕರಾ ವಳಿ ಪ್ರದೇ ಶದಲ್ಲಿ ಭಯೋ ತ್ಪಾದ ಕರು ನುಸು ಳದಂತೆ ಕಟ್ಟೆ ಚ್ಚರ ವಹಿ ಸಲಾ ಗಿದ್ದು, ಕರಾ ವಳಿ ಪೋ ಲೀಸ್ ಪಡೆ ಹಗಲು ರಾತ್ರಿ ಇದ ಕ್ಕಾಗಿ ಶ್ರಮಿ ಸುತ್ತಿ ದೆಯೆಂದ ಅವರು, ಈಗಿ ರುವ 5 ಠಾಣೆ ಗಳ ಜೊತೆಗೆ 4 ಹೆಚ್ಚು ವರಿ ಠಾಣೆ ಗಳ ಪ್ರಸ್ತಾ ವನೆಯ ಬೇಡಿಕೆ ಯನ್ನು ಕೇಂದ್ರ ಸರ್ಕಾ ರಕ್ಕೆ ಈಗಾ ಗಲೇ ಸಲ್ಲಿಸ ಲಾಗಿ ದೆಯೆಂದು ಅವರು ತಿಳಿಸಿದರು.ಕರಾ ವಳಿ ಪ್ರದೇಶ ಶೈ ಕ್ಷಣಿಕ ಸಂಸ್ಥೆ ಗಳನ್ನು ಹಾಗೂ ವಿವಿಧ ಧರ್ಮ ಗಳ ಯಾತ್ರಾ ಸ್ಥಳ ಗಳನ್ನು ಹೊಂ ದಿದ್ದು ದೇಶದ ನಾನಾ ಭಾಗ ಗಳಿಂದ ಮತ್ತು ವಿದೇ ಶಿಯರು ಸಹ ಆಗ ಮಿಸು ತ್ತಿರು ತ್ತಾರೆ ಇವ ರೆಲ್ಲರ ರಕ್ಷಣೆ ಯು ಕರಾ ವಳಿಯ ಪೋಲೀ ಸರಿಗೆ ಸವಾ ಲಾಗಿ ಪರಿಣ ಮಿಸಿ ದ್ದರೂ ಸಹ ಸಮ ರ್ಪಕ ವಾಗಿ ಕಾರ್ಯ ನಿರ್ವ ಹಿಸು ತ್ತಿದ್ದಾ ರೆಂದು ಶ್ಲಾಘಿ ಸಿದರು.ಸಮಾ ರಂಭ ದಲ್ಲಿ ರಕ್ಷಣಾ ಹಾಗೂ ಸಾರಿಗೆ ಸಚಿವ ಆರ್. ಅ ಶೋಕ್, ವಿಧಾನ ಸಭಾ ಉಪ ಸಭಾ ಧ್ಯಕ್ಷ ರಾದ ಎನ್.ಯೋ ಗಿಶ್ ಭಟ್, ಉನ್ನತ ಶಿಕ್ಷಣ ಸಚಿವ ಡಾ ವಿ. ಎಸ್. ಆಚಾ ರ್ಯ, ಜಿಲ್ಲಾ ಉಸ್ತು ವಾರಿ ಸಚಿವ ಜೆ. ಕೃಷ್ಣ ಪಾಲೇ ಮಾರ್, ಮೀನು ಗಾರಿಕಾ ಹಾಗೂ ತಂತ್ರ ಜ್ಞಾನ ಸಚಿವ ಆನಂದ ವಿ. ಅಸ್ನೋ ಟಿಕರ್,ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಬಿ. ರಮನಾಥ ರೈ, ರಾಜ್ಯ ಪೋ ಲಿಸ್ ಮಹಾ ನಿರ್ದೇ ಶಕ ರಾದ ಶಂಕರ್ ಬಿದರಿ,ಪೋಲಿಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್,ಜಿಲ್ಲಾ ಪಂಚಾ ಯತ್ ಅಧ್ಯಕ್ಷೆ ಶ್ರಿಮತಿ ಕೆ.ಟಿ.ಶೈಲಜ ಭಟ್,ಕರಾ ವಳಿ ಪ್ರಾಧಿ ಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ,ಪೋಲಿಸ್ ಹೌಸಿಂಗ್ ಕಾರ್ಪೋರೇಶನ್ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಎನ್.ರೆಡ್ಡಿ,ಐಜಿಪಿ ಪ್ರತಾಪ್ ರೆಡ್ಡಿ,ಜಿಲ್ಲೆಯ ಚುನಾಯಿತ ಪ್ರತಿನಿಧಿಗಳು, ಮತ್ತು ಹಿರಿಯ ಅಧಿಕಾರಿಗಳು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಮೀನುಗಾರರ ಹಿತ ರಕ್ಷಣೆಗೆ ಸರ್ಕಾರ ಬದ್ದ: ಡಿ.ವಿ.ಸದಾನಂದಗೌಡ

ಮಂಗಳೂರು,ಜನವರಿ.28:ಕರ್ನಾಟಕ ರಾಜ್ಯದಲ್ಲಿ 5.60 ಲಕ್ಷ ಹೆಕ್ಟೇರ್ ಜಲ ವಿಸ್ತೀರ್ಣದ ಒಳನಾಡು ಹಾಗೂ ಉದ್ದದ ಕರಾವಳಿ ತೀರ ಪ್ರದೇಶ ಹೊಂದಿದ್ದು , ಒಳನಾಡು ಮತ್ತು ಕರಾವಳಿ ಮೀನುಗಾರಿಕೆಗೆ ವಿಪುಲ ಅವಕಾಶವಿದ್ದು, ರಾಜ್ಯದಲ್ಲಿ ಸುಮಾರು ಎರಡುವರೆ ಲಕ್ಷ ಕುಟುಂಬಗಳು ಮೀನುಗಾರಿಕೆಯನ್ನೇ ಜೀವನಾಧಾರವನ್ನಾಗಿಸಿಕೊಂಡಿದ್ದಾರೆ.ಅವರ ಹಿತಕ್ಕಾಗಿ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ಹಮ್ಮಿಕೊಂಡು ಸಮರ್ಪಕವಾಗಿ ಅನುಷ್ಠಾನಗೊಳಿಸುತ್ತಿದೆ ಎಂದು ಕರ್ನಾಟಕ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದಗೌಡ ಅವರು ತಿಳಿಸಿದ್ದಾರೆ.ಅವರು ಇಂದು ಮಂಗ ಳೂರಿ ನಲ್ಲಿ ಕರ್ನಾ ಟಕ ಮೀನು ಗಾರಿಕಾ ಅಭಿ ವೃದ್ದಿ ನಿಗಮ ನಿಯ ಮಿತ ಇದರ ಕೇಂದ್ರ ಕಛೇರಿ ಆವರ ಣದಲ್ಲಿ ನಿರ್ಮಾ ಣವಾ ಗಲಿ ರುವ ಆಧು ನಿಕ ಮೀನು ಸಂಸ್ಕ ರಣಾ ಸ್ಠಾವ ರಕ್ಕೆ ಶಿಲಾ ನ್ಯಾಸ ನೆರ ವೇರಿಸಿ ಮಾತ ನಾಡಿದರು.ಮೀನು ಗಾರಿಕೆ ಇಲಾಖೆಯ ಯೋಜನಾ ಕಾರ್ಯಕ್ರಮಗಳಿಗೆ ಒದಗಿಸಲಾಗುವ ಅನುದಾನವನ್ನು ಕಳೆದ ನಾಲ್ಕು ವರ್ಷಗಳಲ್ಲಿ ಗಣನೀಯವಾಗಿ ಹೆಚ್ಚಿಸಲಾಗಿದ್ದು, 2010-11ನೇ ಸಾಲಿನಲ್ಲಿ 130 ಕೋಟಿ ರೂ.ಗಳ ಅನುದಾನ ನೀಡಲಾಗಿದೆ, 2011-12ನೇ ಸಾಲಿನಲ್ಲಿ ಸಣ್ಣ ಬಂದರುಗಳನ್ನು ಪಿಪಿಪಿ ಆಧಾರದಡಿಯಲ್ಲಿ ನಿರ್ಮಿಸಲು 100 ಕೋಟಿ ರೂ.ಗಳನ್ನು , ಮತ್ಸಾಶ್ರಯ ಯೋಜನೆಯಡಿ 2000 ಮನೆಗಳನ್ನು ನಿರ್ಮಿಸಲು 9 ಕೋಟಿ ರೂ.ಗಳನ್ನು, 2000 ಹೆಕ್ಟೇರ್ ಮೀನು ಕೃಷಿ ಕೊಳಗಳನ್ನು ನಿರ್ಮಿಸಲು 10 ಕೋಟಿ ರೂ.ಗಳನ್ನು ಒದಗಿಸಲಾಗಿದೆ ಎಂದರು.ಇದಲ್ಲದೆ ಸಂಕಷ್ಟ ಪರಿಹಾರ ನಿಧಿಯಿಂದ ಮರಣ ಹೊಂದುವ ಮೀನುಗಾರರ ಅವಲಂಬಿತರಿಗೆ ನೀಡುವ ಪರಿಹಾರ ಮೊತ್ತವನ್ನು 50,000 ರೂ.ಗಳಿಂದ ಒಂದು ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ, ಮೀನು ಮಾರಾಟ, ಮೀನು ಸಂಸ್ಕರಣಾ ಚಟುವಟಿಕೆಗಳಲ್ಲಿ ಪ್ರಮುಖವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಮೀನುಗಾರ ಮಹಿಳೆಯರಿಗೆ ಸ್ವಾವಲಂಬನಾ ಯೋಜನೆಯಡಿ 10 ಕೋಟಿ ರೂ. ಅನುದಾನ ಒದಗಿಸಿ 2,000 ಸ್ವಸಹಾಯ ಗುಂಪುಗಳ ಮೂಲಕ ಅವರ ಸಬಲೀಕರಣಕ್ಕೆ ಸರ್ಕಾರ ಮುಂದಾಗಿದೆ. ಈ ಬಾರಿಯ ಬಜೆಟ್ ನಲ್ಲಿ ಇನ್ನೂ ಹೆಚ್ಚಿನ ಅನುದಾನವನ್ನು ಮೀನುಗಾರಿಗೆ ಮೀಸಲಿರಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು.ರಾಜ್ಯದ ಸಣ್ಣ ಬಂದ ರುಗ ಳನ್ನು ಪರಿ ಣಿತ ಖಾಸಗೀ ಸಂಸ್ಥೆ ಗಳ ಸಹ ಭಾಗಿ ತ್ವದಲ್ಲಿ ನಿರ್ಮಿ ಸಲು 2011-12ನೇ ಸಾಲಿನ ಆಯವ್ಯ ಯದಲ್ಲಿ 100 ಕೋಟಿ ರೂ,ಗಳನ್ನು ಮೀಸ ಲಿಡ ಲಾಗಿದೆ, ಕರಾ ವಳಿ ಮೀನು ಗಾರ ರಿಗೆ ಮೂಲ ಭೂತ ಸೌಕರ್ಯ ಒದಗಿ ಸಲು ರೂ.57.60 ಕೋಟಿ ಅಂದಾಜು ವೆಚ್ಚದ ಮಲ್ಪೆ 3ನೇ ಹಂತದ ಕಾಮ ಗಾರಿ ಗಳನ್ನು ಪ್ರಾ ರಂಭಿ ಸಲಾಗಿದೆ, ಬೈಂ ದೂರಿನ ಕೊಡೇ ರಿಯಲ್ಲಿ 30 ಕೋಟಿ ರೂ. ಅಂ ದಾಜು ವೆಚ್ಚ ದಲ್ಲಿ ಮೀನು ಗಾರಿಕೆ ಇಳಿದಾಣ ಕೇಂದ್ರವನ್ನು ಸ್ಥಾಪಿಸಲು 10 ಕೋಟಿ ರೂ.ಗಳ ಅನುದಾನ ಒದಗಿಸಲಾಗಿದೆ, ಗಂಗೊಳ್ಳಿ ಮೀನುಗಾರಿಕೆ ಬಂದರಿನಲ್ಲಿ 300 ಲಕ್ಷ ರೂ.ವೆಚ್ಚದಲ್ಲಿ 63 ಮೀಟರ್ ಉದ್ದದ ತಡೆಗೋಡೆ ನಿರ್ಮಾಣ ಕೈಗೊಳ್ಳಲಾಗಿದೆ, ಕರಾವಳಿ ಕೊಂಡಿ ರಸ್ತೆಗಳ ನಿರ್ಮಾಣ ಮತ್ತು ನಿರ್ವಹಣೆಗಾಗಿ ಒಟ್ಟು 5 ಕೋಟಿ ರೂ. ಅನುದಾನ ನೀಡಲಾಗಿದೆ ಎಂದು ಮಾನ್ಯ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಸಮಾರಂಭದ ಅಧ್ಯಕ್ಷತೆಯನ್ನು ವಿಧಾನಸಭಾ ಉಪಸಭಾಪತಿಗಳಾದ ಎನ್.ಯೋಗೀಶ್ ಭಟ್ ಅವರು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಹಾಗೂ ಜೀವಿಶಾಸ್ತ್ರ, ಪರಿಸರ ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವರಾದ ಕೃಷ್ಣ ಜೆ.ಪಾಲೆಮಾರ್, ಮೀನುಗಾರಿಕೆ, ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವರಾದ ಆನಂದ ವಿ ಆಸ್ನೋಟಿಕರ್ , ಸಂಸದರಾದ ನಳಿನ್ ಕುಮಾರ್ ಕಟೀಲ್,ಶಾಸಕರಾದ ಬಿ.ರಮಾನಾಥ ರೈ,ಯು.ಟಿ.ಖಾದರ್,ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಮೇಯರ್ ಪ್ರವೀಣ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ. ನಾಗರಾಜ ಶೆಟ್ಟಿ,ಮೀನುಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಅಲ್ಪ ಸಂಖ್ಯಾತರ ಅಭಿವೃದ್ದಿ ನಿಗಮದ ಅಧ್ಯಕ್ಷ ಅಮೂಬಕ್ಕರ್, ಸೇರಿದಂತೆ ಅನೇಕ ಮಹನೀಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Friday, January 27, 2012

ಕದ್ರಿ ದೇವಾಲಯ: ಪ್ರವಾಸೋದ್ಯಮ ಅಭಿವೃದ್ಧಿ ಕಾಮಗಾರಿ ಪರಿಶೀಲನಾ ಸಭೆ

ಮಂಗಳೂರು,ಜನವರಿ,27: ಕದ್ರಿ ದೇವಾಲಯದಲ್ಲಿ ಯಾತ್ರಾರ್ಥಿಗಳ ಅನುಕೂಲಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಬಿಡುಗಡೆಯಾದ ಅನುದಾನದ ಸದ್ಬಳಕೆ ಕುರಿತಂತೆ ಉಪಸಭಾಧ್ಯಕ್ಷರಾದ ಎನ್ ಯೋಗೀಶ್ ಭಟ್ ಅವರ ಅಧ್ಯಕ್ಷತೆಯಲ್ಲಿ ಇಂದು ಯುವಜನಸೇವಾ ಇಲಾಖೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು.ಪ್ರವಾ ಸೋದ್ಯಮ ಇಲಾಖೆಯಿಂದ 1.27 ಕೋಟಿ ರೂ.ಗಳು ಬಿಡುಗಡೆ ಯಾಗಿದ್ದು, ಆದ್ಯತೆಯ ಮೇರೆಗೆ ಯಾತ್ರಾರ್ಥಿಗಳ ಅನುಕೂಲಕ್ಕೆ ಶೌಚಾಲಯ ಗಳನ್ನು ನಿರ್ಮಿಸಲು ನಿರ್ಧರಿ ಸಲಾಯಿತು. 20ಲಕ್ಷ ರೂ.ಗಳನ್ನು ಈ ಸಂಬಂಧ ನಿರ್ಮಿತಿಯವರಿಗೆ ನೀಡಲಾಗಿದ್ದು, ಕೆಲಸ ಆರಂಭಿಸಲು ಸಭೆಯಲ್ಲಿ ಸೂಚಿಸಲಾಯಿತು. ಆವರಣಗೋಡೆ ನಿರ್ಮಾಣ, ನೀರು ಶೇಖರಣಾ ಟ್ಯಾಂಕ್ (ಸಂಪು) ನ್ನು ನಿರ್ಮಿಸಲು ಸಭೆ ಅನುಮೋದನೆ ನೀಡಿತು.
ಇನ್ನುಳಿದ ಹಣವನ್ನು ಮಲ್ಟಿ ಲೆವೆಲ್ ಪಾರ್ಕಿಂಗ್ ವ್ಯವಸ್ಥೆಗೆ ಸದ್ವಿನಿಯೋಗಿಸಲು ನೀಲಿ ನಕಾಶೆ ತಯಾರಿಸಿ ಅನುಮತಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಲು ಸಭೆ ನಿರ್ಧರಿಸಿತು. ಮಠದ ಕೆಳಗಿರುವ ಪಾಂಡವರ ಗುಹೆ ಬಳಿ ಇರುವ ಚಿಲಿಂಬಿ ಕೆರೆ ಅಭಿವೃದ್ಧಿಗೆ, ಒಳಗೆ ಚಪ್ಪರ ನಿರ್ಮಿಸುವ ಬಗ್ಗೆ ಸಭೆಯಲ್ಲಿ ಸವಿವರ ಚರ್ಚೆ ನಡೆಯಿತು. ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ. ನಾಗರಾಜ ಶೆಟ್ಟಿ, ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ, ಕಾರ್ಪೋರೇಟರ್ ಮತ್ತು ಸಂಬಂಧ ಪಟ್ಟ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಏಪ್ರಿಲ್ ನೊಳಗೆ ಸಿಂಥೆಟಿಕ್ ಟ್ರ್ಯಾಕ್ ಪೂರ್ಣ: ಯೋಗೀಶ್ ಭಟ್

ಮಂಗಳೂರು,ಜನವರಿ.27:ಜಿಲ್ಲೆಯ ಜನತೆಯ ಬಹುವರ್ಷಗಳ ಬೇಡಿಕೆ ಮಂಗಳಾ ಕ್ರೀಡಾಂಗಣದಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ ಉಪಸಭಾಧ್ಯಕ್ಷರಾದ ಎನ್ ಯೋಗೀಶ್ ಭಟ್ ಅವರು ಇಂದು ಭೂಮಿ ಪೂಜೆ ನೆರವೇರಿಸಿದರು.ಮುಖ್ಯ ಮಂತ್ರಿಗಳು ಯುವ ಜನೋತ್ಸವ ಸಮಾರಂಭದಲ್ಲಿ ಘೋಷಿಸಿದಂತೆ ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣ ಅನುಷ್ಠಾನಕ್ಕೆ ಇಂದಿನಿಂದ ಚಾಲನೆ ದೊರೆತಿದ್ದು, ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಲು ವಿಶೇಷ ಕಾಳಜಿ ವಹಿಸಲಾಗಿದೆ ಎಂದು ಬಳಿಕ ಪತ್ರಕರ್ತರೊಂದಿಗೆ ಮಾತ
ನಾಡುತ್ತಾ ಉಪಸಭಾಧ್ಯಕ್ಷರು ಹೇಳಿದರು.
ಟ್ರ್ಯಾಕ್ ನ್ನು 1ಡಿಗಿಂತ 2ಡಿಗೆ ಬದಲಾಯಿಸಲು ಕ್ರಮಕೈಗೊಳ್ಳಲಾಗಿದ್ದು, ಜಿಲ್ಲೆಯಿಂದ ಒಲಿಂಪಿಕ್ಕ್ ನಲ್ಲಿ ಪಾಲ್ಗೊಳ್ಳುವ ಕ್ರೀಡಾಳುಗಳು ಸೃಷಿಯಾಗಬೇಕೆಂಬುದು ತಮ್ಮ ಅಭಿಲಾಷೆ ಎಂದರು. ಜಿಲ್ಲೆಯ ಅಭಿವೃದ್ಧಿ ಕಾರ್ಯಗಳಿಗೆ ರಾಜ್ಯ ಮತ್ತು ಕೇಂದ್ರ ಸಕರ್ಾರದ ಸಹಾಯ ನಿರಂತರವಾಗಿರಲೆಂದು ಇಚ್ಚಿಸಿದ ಅವರು, ಮಾದರಿ ಕ್ರೀಡಾಂಗಣ ನಿರ್ಮಾಣವಾಗಲಿ ಎಂದು ಶುಭ ಹಾರೈಸಿದರು.
ಕಾಮಗಾರಿಯಲ್ಲಿ ಗುಣಮಟ್ಟ ಪರಿಶೀಲನೆಗೆ ಥರ್ಡ್ ಪಾರ್ಟಿ ಇನ್ಸ್ ಪೆಕ್ಷನ್ ಹಾಗೂ ಪ್ರತ್ಯೇಕ ತಜ್ಞರ ಸಮಿತಿ ನೇಮಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ತಿಳಿಸಿದರು.
ಮಂಗಳಾ ಕ್ರೀಡಾಂಗಣದಲ್ಲಿ 400 ಮೀ. ಸಿಂಥೆಟಿಕ್ ಟ್ರ್ಯಾಕ್ ನಿರ್ಮಾಣಕ್ಕೆ ಸರ್ಕಾರದಿಂದ 3.15 ಕೋಟಿ ರೂ. ಬಿಡುಗಡೆಯಾಗಿದೆ. ರೂ. 3.09 ಕೋಟಿ ವೆಚ್ಚದಲ್ಲಿ ಕಾಮಗಾರಿ ಅನುಷ್ಠಾನಗೊಳಿಸಲು ಆಡಳಿತಾತ್ಮಕ ಅನುಮೋದನೆ ನೀಡಿ ಹಣವನ್ನು ಜಿಲ್ಲಾ ಕ್ರೀಡಾಂಗಣ ಸಮಿತಿಗೆ ಬಿಡುಗಡೆಯಾಗಿದೆ. ಟೆಂಡರ್ ಮೆ. ಸಿಂಕಾಟ್ಸ್ ಇಂಟರ್ ನ್ಯಾಷನಲ್ ನವದೆಹಲಿ ಇವರಿಗೆ ನೀಡಲಾಗಿದೆ..
ಭೂಮಿ ಪೂಜೆ ಸಮಾರಂಭದಲ್ಲಿ ಶಾಸಕರಾದ ಯು ಟಿ ಖಾದರ್, ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ, ಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಪಾಶ್ರ್ವನಾಥ್, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಉಪನಿರ್ದೇಶಕರಾದ ಶರಣಬಸಪ್ಪ, ತೇಜೋಮಯ ಮುಂತಾದವರು ಉಪಸ್ಥಿತರಿದ್ದರು.

ನಾಳೆ ಮುಖ್ಯಮಂತ್ರಿಗಳು ದಕ್ಷಿಣ ಕನ್ನಡ ಜಿಲ್ಲೆಗೆ,ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿ

ಮಂಗಳೂರು,ಜನವರಿ.27: ಕರ್ನಾಟಕ ಸರ್ಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದ ಗೌಡರು ದಿನಾಂಕ ನಾಳೇ(28-1-12) ರಂದು ಬೆಳಿಗ್ಗೆ 7.30 ಗಂಟೆಗೆ ಬೆಂಗಳೂರಿನಿಂದ ಹೆಲಿಕ್ಯಾಫ್ಟರ್ ಮೂಲಕ ಹೊರಟು 8.50 ಗಂಟೆಗೆ ಮಂಗಳೂರಿನ ಮೇರಿಹಿಲ್ಸ್ ಹೆಲಿಪ್ಯಾಡ್ ಆಗಮಿಸಿ ಬೆಳಗ್ಲೆ 9.00 ಗಂಟೆಗೆ ಮಂಗಳೂರಿನ ಹೊಗೆಬಜಾರ್ ನಲ್ಲಿ ಆಧುನಿಕ ಮೀನು ಸಂಸ್ಕರಣಾ ಸ್ಥಾವರ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.9.30 ಗಂಟೆಗೆ ನಗರದ ನೆಹರೂ ಮೈದಾ ನದಲ್ಲಿ ಮಂಗ ಳೂರು ಪೋ ಲೀಸ್ ಆಯು ಕ್ತರ ಕಚೇ ರಿಯ ಉದ್ಘಾ ಟನೆ ಯನ್ನು ನೆರ ವೇರಿ ಸುವರು.
10.15 ಗಂಟೆಗೆ ಮಂಗಳೂರು ವಿಶ್ವವಿದ್ಯಾನಿಲಯದ ವಿಜ್ಞಾನ ಸಂಕೀರ್ಣ ಆವರಣದಲ್ಲಿ ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ನಾಲ್ಕನೇ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು.11.45 ಗಂಟೆಗೆ ಕಾವೂರು ಬಿಜೆಎಸ್ ಶಾಲಾ ಹಿಂಭಾಗದ ಅಭಿಮಾನ್ ಗ್ರೀನ್ ಲಾನ್ಸ್ನಲ್ಲಿ ಪರಮ ಪೂಜ್ಯ ಜಗದ್ಗುರು ಪದ್ಮಭೂಷಣ ಶ್ರೀಶ್ರೀಶ್ರೀ ಡಾ.ಬಾಲಗಂಗಾಧರನಾಥ ಮಹಾಸ್ವಾಮಿಗಳವರ 68ನೇ ವರ್ಧಂತ್ಯುತ್ಸವ ಹಾಗೂ ಬಿಜಿಎಸ್ ವಿದ್ಯಾರ್ಥಿ ನಿಲಯದ ಉದ್ಘಾಟನೆ ಮತ್ತು ಬಿಜಿಎಸ್ ಪಿ.ಯು.ಕಾಲೇಜು ಕಟ್ಟಡದ ಶಂಕುಸ್ಥಾಪನೆ ನೆರವೇರಿಸುವರು.
ಮಧ್ಯಾಹ್ನ 1,30 ಗಂಟೆಗೆ ಹೆಲಿಕಾಪ್ಟರ್ ಮೂಲಕ ಕಾರ್ಕಳಕ್ಕೆ ತೆರಳುವರು.ಕಾರ್ಕ ಳದ ಕಾರ್ಯ ಕ್ರಮ ದಲ್ಲಿ ಭಾಗ ವಹಿಸಿ,ಅಪ ರಾಹ್ನ 4 ಗಂ ಟೆಗೆ ಬೆಳ್ತಂ ಗಡಿಯ ಹೆಲಿ ಪ್ಯಾಡಿಗೆ ತೆರ ಳುವರು. 4.15 ಗಂ ಟೆಗೆ ವೇಣೂ ರಿನಲ್ಲಿ ಭಗ ವಾನ್ ಶ್ರೀ ಬಾಹು ಬಲಿ ಸ್ವಾಮಿಯ ಮಹಾ ಮಸ್ತಕಾ ಭಿಷೇಕ ಮಹೋ ತ್ಸವ ಸಮಾ ರಂಭ ಗಳ ಉದ್ಘಾ ಟನೆ ನೆರ ವೇರಿ ಸುವರು.
ಸಂಜೆ 5.25 ಗಂಟೆಗೆ ಹೆಲಿಪ್ಯಾಡ್ನಿಂದ ಪಂಜ ಹೆಲಿಪ್ಯಾಡಿಗೆ ತೆರಳುವರು.ಸಂಜೆ 7 ಗಂಟೆಗೆ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ನವೀಕರಣ ಪುನ: ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶ ಮಹೋತ್ಸವ,ನಾಗಮಂಡಲ ಮತ್ತು ವರ್ಷಾವಧಿ ಜಾತ್ರೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವರು.
ರಾತ್ರಿ 8.50 ಗಂಟೆಗೆ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ಮಾಡುವರು. 9.45 ಗಂಟೆಗೆ ನೆಟ್ಟಣ ರೈಲು ನಿಲ್ದಾಣಕ್ಕೆ ತೆರಳಿ ರೈಲಿನ ಮೂಲಕ ಬೆಂಗಳೂರಿಗೆ ತೆರಳುವರು.

Thursday, January 26, 2012

ಮಂಗಳೂರಿನಲ್ಲಿ 63 ನೇ ಗಣರಾಜ್ಯೋತ್ಸವದ ಸಂಭ್ರಮ

ಮಂಗಳೂರು,ಜನವರಿ.26:ಜಿಲ್ಲೆಯು ನಿರಂತರ ಅಭಿವೃದ್ಧಿಯ ಜೊತೆ, ಹಲವು ರಾಷ್ಟ್ರಮಟ್ಟದ ಕಾರ್ಯಕ್ರಮಗಳನ್ನು ಆಯೋಜಿಸುವುದರೊಂದಿಗೆ ರಾಷ್ಟ್ರಮಟ್ಟದಲ್ಲಿ ತನ್ನ ಹೆಸರನ್ನು ದಾಖಲಿಸಿದೆ ಎಂದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್ ತಿಳಿಸಿದ್ದಾರೆ.



ನಗರದ ನೆಹರೂ ಮೈದಾ ನದಲ್ಲಿ 63ನೇ ಗಣ ರಾಜ್ಯೋ ತ್ಸವದ ಅಂಗ ವಾಗಿ ಧ್ವಜಾ ರೋಹಣ ನೆರ ವೇರಿಸಿ ತಮ್ಮ ಸಂದೇ ಶದಲ್ಲಿ ಜಿಲ್ಲೆಯ ಅಭಿವೃ ದ್ಧಿಯನ್ನು ಉಲ್ಲೇಖಿಸಿದರು.ದ.ಕ. ಜಿಲ್ಲೆಯಲ್ಲಿ 2011-12ನೆ ಸಾಲಿನ ಆಯವ್ಯಯದಲ್ಲಿ 69 ಹೊಸ ಕಾಮಗಾರಿಗಳನ್ನು 7,250 ಲಕ್ಷ ರೂ. ಅಂದಾಜು ವೆಚ್ಚದಲ್ಲಿ 232 ಕಿ.ಮೀ. ಉದ್ದದ ರಸ್ತೆಯನ್ನು ಅಭಿವೃದ್ಧಿ ಪಡಿಸುವ ಗುರಿಯನ್ನು ಹೊಂದಲಾಗಿದೆ ಜಿಲ್ಲೆಯಲ್ಲಿ ಸಾಕಷ್ಟು ಪ್ರಗತಿ ಕಾರ್ಯಗಳು ನಡೆದಿದ್ದು, 528 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿ ಹಾಗೂ 775 ಕಿ.ಮೀ. ಉದ್ದದ ಜಿಲ್ಲಾ ಮುಖ್ಯ ರಸ್ತೆಗಳಿದ್ದು 9545 ಲಕ್ಷ ರೂ. ವೆಚ್ಚದಲ್ಲಿ ಒಟ್ಟು 138 ಕಾಮಗಾರಿಗಳನ್ನು ನಬಾರ್ಡ್ ಯೋಜನೆಯಡಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದರು. ಈಗಾಗಲೇ 45 ಕಾಮಗಾರಿಗಳನು ಪೂರ್ಣಗೊಳಿಸಲಾಗಿದೆ ಎಂದವರು ಈ ಸಂದರ್ಭ ತಿಳಿಸಿದರು.
ವಿಶೇಷ ಘಟಕ ಯೋಜನೆಯಡಿ, ಗಿರಿಜನ ಉಪಯೋಜನೆಯಡಿ ಹಾಗೂ ಸಿಆರ್ಎಫ್ ಯೋಜನೆಯಡಿ ಒಟ್ಟು 107 ಕಿ.ಮೀ. ಉದ್ದ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇದಲ್ಲದೆ ಕನರ್ಾಟಕ ರಸ್ತೆ ಅಭಿವೃದ್ಧಿ ನಿಗಮದಡಿ ಒಟ್ಟು 2921 ಲಕ್ಷ ರೂ. ವೆಚ್ಚದಲ್ಲಿ 81 ಕಿ.ಮೀ. ಉದ್ದದ ರಸ್ತೆ ಅಭಿವೃದ್ಧಿ ಪಡಿಸಲಾಗಿದೆ. 2,028 ಲಕ್ಷ ರೂ. ವೆಚ್ಚದಲ್ಲಿ 30 ಸೇತುವೆ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. 18 ಕೋಟಿ ರೂ. ವನೆಚ್ಚದ ಮಂಗಳೂರು ನ್ಯಾಯಾಲಯ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಸರ್ಕೂಟ್ ಹೌಸ್ ನ 3 ಕೋಟಿ ರೂ. ವೆಚ್ಚದ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಪುತ್ತೂರು ಮಿನಿ ವಿಧಾನಸೌಧದ ಎರಡನೆ ಹಂತದ ಕಾಮಗಾರಿಯನ್ನು ಈಗಾಗಲೆ 550 ಲಕ್ಷ ರೂ. ವೆಚ್ಚದಲ್ಲಿ ಕೈಗೊಳ್ಳಲಾಗುವುದು. ಸುಳ್ಯ ಮಿನಿ ವಿಧಾನಸೌಧ ಕಾಮಗಾರಿ ಮಾರ್ಚ್ ಗೆ ಅಂತ್ಯಗೊಳ್ಳಲಿದೆ. ಮಂಗಳೂರು, ಮೂಡಬಿದ್ರೆ ಹಾಗೂ ಬಂಟ್ವಾಳಗಳಲ್ಲಿ 32 ಕೋಟಿ ರೂ. ವೆಚ್ಚದಲ್ಲಿ ನ್ಯಾಯಾಲಯ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ಗ್ರಾಮೀಣ ಕುಡಿಯುವ ನೀರಿನ ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ 5638 ಲಕ್ಷ ರೂ. ಕ್ರಿಯಾ ಯೋಜನೆ ಸರಕಾರ ಮಂಜೂರು ಮಾಡಿದ್ದು 1331 ಲಕ್ಷ ರೂ. ಖರ್ಚು ಮಾಡಲಾಗಿದೆ. ಇಂದಿರಾ ಆವಾಜ್ ಯೋಜನೆಯಡಿ 2233 ಮನೆಗಳ ಭೌತಿಕ ಗುರಿ ಹಾಗೂ 1116 ಲಕ್ಷ ರೂ. ಆರ್ಥಿಕ ಗುರಿ ನಿಗದಿ ಮಾಡಲಾಗಿದೆ. ಇದುವರೆಗೆ 2011 ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, 28 ಮನೆಗಳು ಪೂರ್ಣಗೊಂಡು ಉಳಿದವು ಪ್ರಗತಿ ಹಂತದಲ್ಲಿದೆ ಎಂದವರು ಜಿಲ್ಲೆಯ ವಿವಿಧ ಅಭಿವೃದ್ಧಿ ಯೋಜನೆಗಳ ಕುರಿತಂತೆ ವಿವರ ನೀಡಿದರು.

ಕಾರ್ಯ ಕ್ರಮ ದಲ್ಲಿ ಸಮಗ್ರ ಕೃಷಿ ಪದ್ಧ ತಿಗಳು ಮತ್ತು ಬೆಳೆ ಗಳ ವೈ ವಿದ್ದೀ ಕರಣ ವಿಭಾ ಗದಲ್ಲಿ ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶ ಸ್ತಿಯ ತೃ ತೀಯ ಸ್ಥಾನ ಪಡೆದ ಚೇ ಳೂರಿನ ಜಾನ್ ವೇಗಸ್ ಹಾಗೂ ವಿಟ್ಲ ಕಸಬಾ ಗ್ರಾ ಮದ ಪಿ. ಶಂ ಕರ್ ಭಟ್ ಅವರನ್ನು ಜಿಲ್ಲಾ ಡಳಿ ತದ ವತಿ ಯಿಂದ ಗೌರ ವಿಸಲಾ ಯಿತು.
ಇದೇ ವೇಳೆ ಜಿಲ್ಲಾ ಮಟ್ಟದ ಭತ್ತದ ಬೆಳೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಬಾಳ್ತಿಲ ಗ್ರಾಮದ ಆನಂದ ಶೆಟ್ಟಿ, ದ್ವಿತೀಯ ಸ್ಥಾನ ಪಡೆದ ಬೆಳ್ತಂಗಡಿ ಸೋಣಂದೂರಿನ ಶಂಕರ ಪ್ರಭು ಹಾಗೂ ತೃತೀಯ ಸ್ಥಾನ ಪಡೆದ ಸುಳ್ಯ ಕಸಬಾದ ಕಮಲ ರೈ ಹಾಗೂ ತಾಲೂಕು ಮಟ್ಟದ ಭತ್ತದ ಬೆಳೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಹಂಚಿಕೊಂಡಿರುವ ಪಂಜಿಮೊಗರು ಗ್ರಾಮದ ಎಲಿಯಾಸ್ ಡಿಸೋಜಾ, ಬೆಳ್ಮ ಗ್ರಾಮದ ಡಿ. ಅಬೂಬಕರ್, ದ್ವಿತೀಯ ಸ್ಥಾನ ಪಡೆದ ತಾಳಿಪ್ಪಾಡಿ ಗ್ರಾಮದ ರಮೇಶ್ ಎನ್. ರಾವ್ ರಾಗೂ ತೃತೀಯ ಸ್ಥಾನ ಪಡೆದ ಶೀಮಂತೂರು ಗ್ರಾಮದ ಸುಂದರಿ ಶೆಡ್ತಿಯವರನ್ನು ಗೌರವಿಸಲಾಯಿತು.ಇದೇ ಸಂದರ್ಭ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪವರ್ ಲಿಫ್ಟಿಂಗ್ನಲ್ಲಿ ಸಾಧನೆ ಮಾಡಿದ ಕ್ರೀಡಾಪಟು ಸುಪ್ರೀತರನ್ನು ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ವಿಧಾನ ಸಭಾ ಉಪಸಭಾಧ್ಯಕ್ಷರಾದ ಎನ್.ಯೋಗೀಶ್ ಭಟ್, ಯು.ಟಿ.ಖಾದರ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ನಾಗರಾಜ ಶೆಟ್ಟಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಭಟ್, ಮೇಯರ್ ಪ್ರವೀಣ್, ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡ, ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್, ಮಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಮೊದಲಾದವರು ಉಪಸ್ಥಿತರಿದ್ದರು.
ರಾಷ್ಟ್ರ ಧ್ವಜಾರೋಹಣದ ಬಳಿಕ ಪೊಲೀಸ್ ಬ್ಯಾಂಡ್ ನೊಂದಿಗೆ ರಾಷ್ಟ್ರಗೀತೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಿತು. ಕಪಿತಾನಿಯಾ ವಿದ್ಯಾರ್ಥಿಗಳು ನಾಡಗೀತೆ ಹಾಗೂ ರೈತಗೀತೆ ಹಾಡಿದರು. ಬಳಿಕ ತೆರೆದ ಜೀಪಿನಲ್ಲಿ ಸಚಿವರು ಪರೇಡ್ ವೀಕ್ಷಿಸಿ ಗೌರವ ರಕ್ಷೆ ಸ್ವೀಕರಿಸಿದರು. ಕೊನೆಯಲ್ಲಿ ಶಾಲಾ ಸೈಂಟ್ ಜೆರೋಸಾ ವಿದ್ಯಾರ್ಥಿಗಳಿಂದ ಆಕರ್ಷಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದು, ಬಳಿಕ ವಿಂಟೇಜ್ ಕಾರು ರಾಲಿ ನಡೆಯಿತು.

Wednesday, January 25, 2012

ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ: ಡಾ.ವಿ.ಎಸ್. ಆಚಾರ್ಯ

ಮಂಗಳೂರು,ಜನವರಿ.25: ಇಂದಿನ ಮಕ್ಕಳೇ ಮುಂದಿನ ಜನಾಂಗ; ಎಂಬ ವಾಕ್ಯ ಇಂದಿನ ಯುವಪೀಳಿಗೆಯನ್ನು ಗಮನದಲ್ಲಿರಿಸಿ ಹೇಳಲಾಗಿದ್ದು ಮಕ್ಕಳಿಗೆ ಇಂದು ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿ ವಿಫುಲ ಅವಕಾಶಗಳು ಸೃಷ್ಟಿಯಾಗಿವೆ. ಶೈಕ್ಷಣಿಕ ಕೇಂದ್ರವೆಂದೇ ಬಿಂಬಿತವಾಗಿರುವ ದಕ್ಷಿಣ ಕನ್ನಡ ಜಿಲ್ಲೆಗೆ ರಾಷ್ಟ್ರದಾದ್ಯಂತದಿಂದ ಆಗಮಿಸಿದ ಮಕ್ಕಳು ಸೃಜನೋತ್ಸವದಲ್ಲಿ ಭಾಗಿಯಾಗಿ ಆನಂದಿಸಿದ್ದಾರೆ. ಇವರೆಲ್ಲರಿಗೂ ಮಾಜಿ ರಾಷ್ಟ್ರಪತಿ ಡಾ. ಎ ಪಿ ಜೆ ಅಬ್ದುಲ್ ಕಲಾಂ ಅವರ ಜೀವನ ಆದರ್ಶವಾಗಲಿ ಎಂದು ಉನ್ನತ ಶಿಕ್ಷಣ ಸಚಿವರಾದ ಡಾ ವಿ ಎಸ್ ಆಚಾರ್ಯ ಅವರು ಹೇಳಿದರು.
ಮೊದಲು ಮಾನವ ರಾಗಿ ಎಂಬ ಸಂದೇಶ ದೊಂದಿಗೆ ಗೌರ ವಾನ್ವಿತ ಅತಿಥಿ ಗಳಾಗಿ ಬಾಲ್ ಭಾರತ್ ಸೃಜ ನೋತ್ಸವ ಸಮಾ ರೋಪ ಸಮಾ ರಂಭದಲ್ಲಿ ಮಾತ ನ್ನಾರಂ ಭಿಸಿ ದರು. ಹಿರಿಯರು ಮಕ್ಕಳ ಮೇಲೆ ಇರಿಸಿರುವ ಭರವಸೆಯನ್ನು ಸಾಕಾರಗೊಳಿಸಬೇಕೆಂದ ಅವರು, ಜಿಲ್ಲೆಯಲ್ಲಿ ನಡೆದ ಯುವಜನೋತ್ಸವ ಮತ್ತು ಸೃಜನೋತ್ಸವ ಜಿಲ್ಲೆಯ ಗರಿಮೆಯನ್ನು ಹೆಚ್ಚಿಸಿದೆ ಎಂದರು. ರಾಜ್ಯ ಬಾಲಭವನ ಸೊಸೈಟಿಯುದ.ಕ. ಜಿಲ್ಲಾಡಳಿತದ ಸಹಕಾರದೊಂದಿಗೆ ಕಳೆದ ನಾಲ್ಕು ದಿನಗಳಿಂದ ಹಮ್ಮಿಕೊಂಡ ಬಾಲ ಭಾರತ ಸೃಜನೋತ್ಸವದ ಸಮಾರೋಪ ಸಮಾರಂಭದಲ್ಲಿ ಸಮೂಹ ಚಿತ್ರಕಲೆ, ಉಬ್ಬು ಶಿಲ್ಪ, ಥರ್ಮೋಫೋಮ್ ಮಾಸ್ಕ್, ಸಾಂಜಿಆರ್ಟ್ ಮೊದಲಾದ ಸೃಜನಾತ್ಮಕ ಕಲೆಗಳಲ್ಲಿ ಉತ್ತಮ ಕಲೆಯನ್ನು ಸೃಷ್ಟಿಸಿದ ಮಕ್ಕಳಿಗೆ ರಾಜ್ಯದ ಉನ್ನತ ಶಿಕ್ಷಣ ಸಚಿವರು ಬಹುಮಾನ ನೀಡಿ ಗೌರವಿಸಿದರು.
ಈ ಸಂದರ್ಭ ಜಿಲ್ಲಾಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅವರು ಪಿಲಿಕುಲ ನಿಸರ್ಗ ಧಾಮದಲ್ಲಿ ದತ್ತು ಪಡೆದಿರುವ ಹುಲಿ ಮತ್ತು ಚಿರತೆ ಮರಿಗಳ ನಿರ್ವಹಣೆಗಾಗಿ ನೀಡಿದ ಎರಡು ಲಕ್ಷ ರೂ.ಗಳ ಚೆಕ್ಕನ್ನು ಡಾ.ವಿ.ಎಸ್. ಆಚಾರ್ಯ ಅವರು ನಿಸರ್ಗಧಾಮದ ಕಾರ್ಯವಾಹಕ ನಿರ್ದೇಶಕ ಜೆ.ಆರ್.ಲೋಬೋಗೆ ಹಸ್ತಾಂತರಿಸಿದರು.ರಾಜ್ಯ ಬಾಲ ಭವನ ಸೊಸೈ ಟಿಯ ಅಧ್ಯಕ್ಷೆ ಸುಲೋ ಚನಾ ಜಿ.ಕೆ.ಭಟ್ ಮಾತ ನಾಡಿ, ಹೊರ ರಾಜ್ಯ ಒಟ್ಟು 55 ಬಾಲ ಭವನ ಗಳಿಂದ 487 ಮಕ್ಕಳು, 333 ಮೇಲ್ವಿ ಚಾರ ಕರು, 1820 ಮಂದಿ ಶಿಬಿ ರಾರ್ಥಿ ಗಳಲ್ಲದೆ, ಜಿಲ್ಲೆಯ ಸುಮಾರು 4000 ಕ್ಕೂ ಅಧಿಕ ಮಕ್ಕಳು ಕಳೆದ ನಾಲ್ಕು ದಿನ ಗಳಲ್ಲಿ ಸೃಜ ನೋತ್ಸ ವದ ಕಾರ್ಯ ಕ್ರಮ ಗಳನ್ನು ವೀಕ್ಷಿ ಸಿರು ವುದಾಗಿ ತಿಳಿಸಿದರು.

ಬಹುಮಾನ ವಿಜೇತರು:

ಸಮೂಹ ಚಿತ್ರಕಲೆಯಲ್ಲಿ ಮಂಡ್ಯದ ಎಂ.ಇ.ಸ್ಕೂಲ್ನ ಬಿ.ರಕ್ಷಿತ್ಕುಮಾರ್ ಪ್ರಥಮ, ಸಾಗರದ ರಾಘವೇಂದ್ರ ದ್ವಿತೀಯ ಹಾಗೂ ಮೂಡಬಿದ್ರೆಯ ಆದರ್ಶ್ ಜೈನ್ ತೃತೀಯ ಸ್ಥಾನ ಗಳಿಸಿದ್ದಾರೆ.

ಥರ್ಮೋ ಫೋಮ್ ನಲ್ಲಿ ಬೆಳಗಾಂನ ಆರಿಫ್ ಕೆ.ಮುಲ್ಲಾ ಪ್ರಥಮ, ಕನ್ಯಾನದ ನಿಶಾಂತ್ಕಮಾರ್ ದ್ವಿತೀಯ ಹಾಗೂ ಆಂಧ್ರಪ್ರದೇಶದ ನಿಶ್ಚಯ್ ತೃತೀಯ.

ಉಬ್ಬು ಶಿಲ್ಪದಲ್ಲಿ ಸುಳ್ಯದ ಸುದೀಪ್ ನಾರಾಯಣ್ ಪ್ರಥಮ, ಚಿಕ್ಕಬಳ್ಳಾಪುರದ ರಶ್ಮಿ ಎಸ್.,ಕೊಡಗಿನ ಉತ್ತಪ್ಪ ಎಂ.ಸಿ. ತೃತೀಯ.

ಕಾರ್ಟೂನ್ ರಚನೆಯಲ್ಲಿ ಹಾಸನದ ವಿ.ಕೆ.ಕಾರ್ತಿಕ್ ಪ್ರಥಮ, ಬೆಳಗಾವಿಯ ಅಕ್ಷಯ್ಎ.ಎಸ್. ದ್ವಿತೀಯ ಹಾಗೂ ಬಳ್ಳಾರಿಯ ವಿನಾಯಕ ತೃತೀಯ.

ಆವೆಮಣ್ಣಿನ ಕಲಾಕೃತಿ ರಚನೆಯಲ್ಲಿ ಉಡುಪಿ ಕುಂದಾಪುರದ ಕಾರ್ತಿಕ್ ಆಚಾರ್ ಪ್ರಥಮ, ಚಿತ್ರದುರ್ಗದ ವಿಶ್ವಾಸ್ ದ್ವಿತೀಯ ಹಾಗೂ ಬಾಗಲಕೋಟೆಯ ನಾರಾಯಣತೃತೀಯ.

ಚಿತ್ರಕಲೆಕಿರಿಯ ವಿಭಾಗದಲ್ಲಿಅಂಕಿತಾ ಸಿ. ಪ್ರಥಮ, ಮೂಡಬಿದ್ರೆಯ ಪ್ರಥ್ವೀಸ್ ದ್ವಿತೀಯ, ಬೀದರ್ ನ ಅಜಯ ತೃತೀಯ.ಹಿರಿಯ ವಿಭಾಗದಲ್ಲಿ ಪುತ್ತೂರಿನ ಉಮೇಶ್ ಪ್ರಥಮ, ಮೈಸೂರಿನ ಗಣಶ್ರೀ ದ್ವಿತೀಯ ಹಾಗೂ ರೋಶನ್ ವಿ.ಅಣ್ವೇಕರ್ ತೃತೀಯ ಸ್ಥಾನ ಪಡೆದಿದ್ದಾರೆ.

ಕಾರ್ಯಕ್ರಮದಲ್ಲಿ ಬೆಂಗಳೂರು ಬಾಲಭವನದ ಬೆಳ್ಳಿ ಹೆಜ್ಜೆಗಳ ಗುರುತಾದ `ಹೊಂಗನಸು' ಸ್ಮರಣ ಸಂಚಿಕೆ ಹಾಗೂ ಸೃಜನೋತ್ಸವದ ವಾರ್ತಾ ಪತ್ರ ಸಂದೇಶವನ್ನು ಈ ಸಂದರ್ಭ ಬಿಡುಗಡೆಗೊಳಿಸಲಾಯಿತು.
ರಾಜ್ಯದ ವಿವಿಧ ಬಾಲಭವನಗಳ ತಂಡದ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಸೈಂಟ್ ರೇಮಂಡ್ ಹೈಸ್ಕೂಲಿನ ವಿದ್ಯಾರ್ಥಿಗಳು ಪ್ರಾರ್ಥನೆ ಗೀತೆಹಾಡಿದರು.ಶಾಸಕ ಅಭಯಚಂದ್ರ ಜೈನ್ ಅಧ್ಯಕ್ಷತೆ ವಹಿಸಿದ್ದರು.
ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ತಾ.ಪಂ. ಅಧ್ಯಕ್ಷೆ ಭವ್ಯಾಗಂಗಾಧರ್, ಜಿ.ಪಂ. ಸದಸ್ಯೆ ಯಶವಂತಿ ಆಳ್ವ, ಉಪ ಮೇಯರ್ ಗೀತಾ ನಾಯಕ್, ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪಗೌಡ, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್, ಮನಪಾ ಆಯುಕ್ತ ಡಾ. ಹರೀಶ ಕುಮಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶಕುಂತಳಾ, ಪಿಲಿಕುಲ ನಿಸರ್ಗಧಾಮದ ನಿರ್ದೇಶಕ ಜೆ.ಆರ್. ಲೋಬೋ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾ ಉಸ್ತುವಾರಿ ಸಚಿವರಿಂದ ಹುಲಿಮರಿ ದತ್ತು ಸ್ವೀಕಾರ

ಮಂಗಳೂರು,ಜನವರಿ.25:ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ
ಇತ್ತೀಚೆಗೆ ಜನಿಸಿದ ಒಂದು ಹುಲಿಮರಿ ಮತ್ತು ಒಂದು ಚಿರತೆಯ ಮರಿಯನ್ನು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್ ಅವರು ಅವುಗಳ ಪೋಷಣೆಗಾಗಿ ದತ್ತು ಸ್ವೀಕರಿಸಿದ್ದು,ಇಂದು ಪಿಲಿಕುಳದಲ್ಲಿ ನಡೆದ ಬಾಲ ಭಾರತ್ ಸೃಜನೋತ್ಸವ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಪರವಾಗಿ ರಾಜ್ಯ ಉನ್ನತ ಶಿಕ್ಷಣ ಮತ್ತು ಮುಜರಾಯಿ ಸಚಿವರಾದ ಡಾ. ವಿ.ಎಸ್. ಆಚಾರ್ಯ ಅವರು ರೂ.2 ಲಕ್ಷದ ಚೆಕ್ಕನ್ನು ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕರಾದ ಜೆ.ಆರ್.ಲೋಬೋ ಅವರಿಗೆ ಹಸ್ತಾಂತರಿಸಿದರು.

ಉತ್ತಮ ಪ್ರಜಾಪ್ರಭುತ್ವಕ್ಕಾಗಿ ವಿವೇಚನೆಯಿಂದ ಮತದಾನಮಾಡಿ -ಜಿಲ್ಲಾಧಿಕಾರಿ

ಮಂಗಳೂರು,ಜನವರಿ.25:ದೇಶದ ಪ್ರತಿಯೊಬ್ಬ ಮತದಾರನೂ ಚುನಾವಣೆಗಳಲ್ಲಿ ಪಾಲ್ಗೊಂಡು ವಿವೇಚನೆಯಿಂದ ಮತದಾನ ಮಾಡಿದಾಗ ಮಾತ್ರ ಉತ್ತಮ ಪ್ರಜಾಪ್ರಭುತ್ವ ಹೊಂದಲು ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪಗೌಡ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಅವರು ಇಂದು ನಗರದ ಪುರಭವನದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ರಾಷ್ಟ್ರೀಯ ಮತದಾರರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಯುವ ಜನತೆ ತಮ್ಮ ವಯಸ್ಸು 18 ತುಂಬಿದ ಕೂಡಲೇ ತಮ್ಮ ಹೆಸ ರನ್ನು ಮತ ದಾರರ ಪಟ್ಟಿ ಯಲ್ಲಿ ನೊಂದಾ ಯಿಸಿ ಕೊಳ್ಳ ಬೇಕು, ಯುವ ಮತ ದಾರರು ಯಾವುದೇ ಆಸೆ ಆಕಾಂ ಕ್ಷೆಗಳಿಗೆ ಒಳ ಗಾಗದೆ ನಿರ್ಭೀ ತಿಯಿಂದ ಪವಿತ್ರ ಮತ ದಾನ ಕಾರ್ಯ ದಲ್ಲಿ ಪಾಲ್ಗೊ ಳ್ಳು ವಂತೆ ಅವರು ಯುವ ಜನತೆ ಯಲ್ಲಿ ಮನವಿ ಮಾಡಿ ದ್ದಾರೆ.ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಉದ್ಘಾಟಿಸಿದ ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ವಿಜಯ ಪ್ರಕಾಶ್ ಅವರು ಮಾತನಾಡಿ ನಾವು ನಮಗೆ ಸಂವಿದಾನ ದತ್ತವಾಗಿ ಬಂದಿರುವ ಹಕ್ಕುಗಳನ್ನು ಚಲಾಯಿಸುವಷ್ಟೇ ನಮ್ಮ ಜವಾಬ್ದಾರಿಗಳನ್ನು ಸಹ ನಿಭಾಯಿಸಿದಾಗ ಮಾತ್ರ ವಿಶೇಷವಾಗಿ ಮತದಾನವನ್ನು ಪ್ರಜ್ಞಾಪೂರ್ವಕವಾಗಿ ಚಲಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವದ ಮೂಲಭೂತ ಸಿದ್ದಾಂತಗಳು ಮೌಲ್ಯಯುತವಾಗಿ ಉಳಿಯಲು ಸಾಧ್ಯ ಎಂದರು.ಜಿಲ್ಲಾ ಕಾನೂನು ಸಲಹೆ ಗಾರ ರಾದ ಕೆ.ಬಿ.ಎಮ್. ಪಟೇಲ್ ಅವರು ಮಾತ ನಾಡುತ್ತಾ ನಮ್ಮ ರಾ ಷ್ಟ್ರದ ಬುನಾದಿ ನೆಲೆ ಯಾಗಿ ರುವುದು. ಈ ದೇಶದ ಜಾಗೃತ ಮತ ದಾರ ರಿಂದ, ಮತ ದಾರರು ಜಾಗೃತ ರಾಗಿ ಪ್ರತಿ ಯೊಬ್ಬರೂ ಮತ ದಾನ ಕಾರ್ಯ ದಲ್ಲಿ ಭಾಗವಹಿಸಿದಾಗ ಮಾತ್ರ ನಮ್ಮ ಸರ್ಕಾರಗಳ ಜನಕಲ್ಯಾಣ ಯೋಜನೆಗಳು ಸಮರ್ಪಕವಾಗಿ ಸೂಕ್ತ ಫಲಾನುಭವಿಗಳನ್ನು ತಲುಪಲು ಸಾಧ್ಯ ಎಂದ ಅವರು ಸಶಕ್ತ ಭಾರತ ನಿರ್ಮಾಣ ಎಚ್ಚೆತ್ತ ಮತದಾರರಿಂದ ಮಾತ್ರ ಸಾಧ್ಯ ಎಂದರು.ಮಹಾ ನಗರ ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್ .ಕೆ ಅವರು ಮತ ದಾರರ ಪ್ರ ತಿಜ್ಞಾ ವಿಧಿ ಬೋಧಿ ಸಿದರು.ಮತ ದಾರರ ನೋಂದ ಣಾಧಿ ಕಾರಿ ಹಾಗೂ ಮಂಗ ಳೂರು ಸಹಾ ಯಕ ಕಮೀ ಷನರ್ ಡಾ.ಎಮ್. ಎನ್.ವೆಂಕ ಟೇಶ್ ಅವರು ಮುಖ್ಯ ಚುನಾ ವಣಾಧಿ ಕಾರಿ ಗಳ ಚುನಾ ವಣಾ ದಿನಾ ಚರಣೆ ಸಂದೇಶ ವಾಚಿ ಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ದಯಾನಂದ ಅವರು ಸ್ವಾಗತಿಸಿದರೆ ಮಂಗಳೂರು ತಾಲ್ಲೂಕು ತಹಸೀಲ್ದಾರ್ ರವಿಚಂದ್ರ ನಾಯಕ್ ವಂದಿಸಿದರು. ಮತ ದಾರರ ದಿನಾ ಚರಣೆ ನಿಮಿತ್ತ ಮೂಡ ಬಿದ್ರೆ ಮತ್ತು ಮಂಗ ಳೂರು ಉತ್ತರ,ದಕ್ಷಿಣ ಹಾಗೂ ಮಂಗ ಳೂರು ವಿದಾನ ಸಭಾ ಕ್ಷೇತ್ರ ಗಳ ಮತ ದಾರರ ಹೆಸ ರನ್ನು ಲಾಟರಿ ತೆಗೆ ಯುವ ಮೂಲಕ ಅದೃಷ್ಟ ವಂತ ಮಹಿಳಾ ಮತ ದಾರರು ಮತ್ತು ಪುರುಷ ಮತ ದಾರರಿಗೆ ತಲಾ ರೂ.2000\- ಬಹುಮಾನ ನೀಡಲಾಯಿತು.( ಬಹುಮಾನ ಪಡೆಯದವರು ಜಿಲ್ಲಾಧಿಕಾರಿಗಳ ಕಛೇರಿಯ ಚುನಾವಣಾ ಶಾಖೆಯಲ್ಲಿ ಪಡೆಯಬಹುದಾಗಿದೆ). ಇದೇ ರೀತಿ ಅತ್ಯುತ್ತಮ ಬೂತ್ ಮಟ್ಟದ ಅಧಿಕಾರಿಗಳಿಗೆ ತಲಾ ರೂ.500\- ಪ್ರೋತ್ಸಾಹಕ ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ವಿತರಿಸಿದರು.

Tuesday, January 24, 2012

ಸೃಜನೋತ್ಸವ ಮೂರನೇ ದಿನಕ್ಕೆ, ಮುಂದುವರಿದ ಚಿನ್ನರ ಪ್ರತಿಭಾಪ್ರದರ್ಶನ

ಮಂಗಳೂರು,ಜನವರಿ.24: ಮಂಗಳೂರಿನ ಪಿಲಿಕುಳ ನಿಸರ್ಗಧಾಮದಲ್ಲಿ ನಡೆಯುತ್ತಿರುವ ರಾಷ್ಟ್ರಮಟ್ಟದ ಸೃಜನೋತ್ಸವ ಕಾರ್ಯಕ್ರಮಗಳು ಮೂರನೇ ದಿನವೂ ಮುಂದುವರೆದಿದ್ದು,ನೆರೆದ ಸಾರ್ವಜನಿಕರು ಎಳೆಯ ಪ್ರತಿಭೆಗಳ ಪ್ರತಿಭಾ ಪ್ರದರ್ಶನಕ್ಕೆ ಮನಸೋತರು.














Monday, January 23, 2012

ತೋಟಗಾರಿಕಾ ಇಲಾಖೆಗೆ 2 ಸಾವಿರ ಕೋ. ಅನುದಾನದ ಬೇಡಿಕೆ: ಸಚಿವ ರವೀಂದ್ರನಾಥ್

ಮಂಗಳೂರು,ಜನವರಿ.23: ಈ ಬಾರಿಯ ಬಜೆಟ್ ನಲ್ಲಿ ತೋಟಗಾರಿಕೆ ಇಲಾಖೆಗಾಗಿ 2 ಸಾವಿರ ಕೋಟಿ ಅನುದಾನವನ್ನು ಮೀಸಲಿಡುವಂತೆ ಬೇಡಿಕೆ ಇಡಲಾಗಿದೆ ಎಂದು ರಾಜ್ಯ ತೋಟಗಾರಿಕಾ ಸಚಿವ ಎಸ್.ಎ.ರವೀಂದ್ರನಾಥ್ ಹೇಳಿದ್ದಾರೆ.ಇಂದು ಮಂಗಳೂರಿಗೆ ಆಗಮಿಸಿದ ಸಚಿವರು ನಗರದ ಕದ್ರಿ ಉದ್ಯಾನವನಕ್ಕೆ ಭೇಟಿ ನೀಡಿ ಉದ್ಯನವನವನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಸ್ಥಳಿಯ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಕದ್ರಿ ಉದ್ಯಾನವನವನ್ನು ಸ್ಪೆಷಲ್ ಪ್ಯಾಕೇಜ್ ಮೂಲಕ ಸಮಗ್ರವಾಗಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ನುಡಿದರು.
ಈ ಸಂದರ್ಭ ಮಾತನಾಡಿದ ರಾಜ್ಯ ವಿಧಾನಸಭಾ ಉಪಸಭಾಧ್ಯಕ್ಷ ಎನ್.ಯೋಗೀಶ್ ಭಟ್,ಕದ್ರಿ ಪಾರ್ಕ್ ಒಂದು ಮಾದರಿ ಉದ್ಯಾನವನ ಆಗಿ ನಿರ್ಮಾಣಗೊಳ್ಳುವ ಮೂಲಕ `ಸ್ವರ್ಣ ಪಾರ್ಕ್' ಎಂದು ಗುರುತಿಸಿಕೊಳ್ಳುವಂತಾಗಬೇಕು. ಬೆಂಗಳೂರಿನ ಲಾಲ್ ಭಾಗ್ ಮಾದರಿಯಲ್ಲಿ ಇದರ ರಚನೆಯಾಗಬೇಕು. ಕದ್ರಿ ಉದ್ಯಾನವನವನ್ನು ರೂ.5 ಕೋಟಿ ವಿಶೇಷ ಪ್ಯಾಕೇಜ್ ಮೂಲಕ ಅಭಿವೃದ್ಧಿಪಡಿಸುವಂತೆ ಸರಕಾರದ ಮುಂದೆ ಈಗಾಗಲೇ ಬೇಡಿಕೆ ಇಡಲಾಗಿದ್ದು, ಈಗಾಗಲೇ ಹಣ ಬಿಡುಗಡೆಗಾಗಿ ತೋಟಗಾರಿಕೆ ಇಲಾಖೆ ಮೂಲಕ ಶಿಫಾರಸು ಮಾಡಿ ಹಣಕಾಸು ಇಲಾಖೆಗೆ ಕಳುಹಿಸಲಾಗಿದೆ.ಸಚಿವರು ತಕ್ಷಣ ಈ ಹಣ ಬಿಡುಗಡೆಗೆ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ರೂ.5 ಕೋಟಿ ಹಣ ಬಿಡುಗಡೆ ಯಾದಲ್ಲಿ ಕದ್ರಿ ಪಾರ್ಕಿಗೆ ಹೊಸ ಆಕರ್ಷಣೆ ಬರಲಿದೆ. 1.60 ಕೋಟಿ ವೆಚ್ಚದಲ್ಲಿ ಸಾಫ್ಟ್ ಲ್ಯಾಂಡ್ ಸ್ಕೇಪಿಂಗ್, ರೂ.1 ಕೋಟಿಯಲ್ಲಿ ಅಲ್ಟ್ರಾ ಬಾರ್ ಯುರೊ ಟೈಲ್ಸ್ ಅಳವಡಿಕೆ, ಆರ್ನ ಮೆಂಟಲ್ ಸೆಕ್ಯುರಿಟಿ ಗ್ರಿಲ್ ಅಳವ ಡಿಕೆಗೆ ರೂ.66 ಲಕ್ಷ, ರೂ.8 ಲಕ್ಷ ವೆಚ್ಚದಲ್ಲಿ ತಡೆ ಗೋಡೆ ನಿರ್ಮಾಣ, ನೀರು ಸಂಗ್ರಹಣಾ ತೊಟ್ಟಿಗೆ ರೂ.31 ಲಕ್ಷ, ಸಣ್ಣ ಮನೆಗಳ ನಿರ್ಮಾಣಕ್ಕೆ ರೂ.23 ಲಕ್ಷ, ಒಳ ಚರಂಡಿ ವ್ಯವಸ್ಥೆಗೆ ರೂ.7 ಲಕ್ಷ, ವಿದ್ಯುದ್ದೀಪಗಳ ಅಳವಡಿಕೆಗೆ ರೂ.50ಲಕ್ಷ, ಸ್ಪ್ರಿಂಕ್ಲಿಂಗ್ ವ್ಯವಸ್ಥೆಗೆ ರೂ.20 ಲಕ್ಷ, ಹೀಗೆ ವಿವಿಧ ನೆಲೆಯಲ್ಲಿ ಹಣವನ್ನು ವಿಂಗಡಿಸಿ ಉದ್ಯಾನವನದ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ. ಅಲ್ಲದೆ ಮಕ್ಕಳ ಆಟೋಟ ಚಟುವಟಿಕೆಗಳಿಗೆ ವ್ಯವಸ್ಥೆ, ಉದ್ಯಾನವನದಲ್ಲಿ ಬೊನ್ಸಾಯಿ ಗಿಡ ಬೆಳೆಸುವಿಕೆ, ಮೆಡಿಟೇಶನ್ ಸೆಂಟರ್ ನಿರ್ಮಾಣ, ಹಿರಿಯ ನಾಗರಿಕರಿಗೆ ನಡೆದಾಡಲು ಅನುಕೂಲವಾಗುವ ವ್ಯವಸ್ಥೆ ಸೇರಿ ಮಾದರಿ ಆಗುವ ರೀತಿಯಲ್ಲಿ ಕಾರ್ಯ ಯೋಜನೆ ಸಿದ್ದಗೊಂಡಿದೆ ಎಂದು ಯೋಗೀಶ್ ಭಟ್ ವಿವರಿಸಿದರು.ಯೋಗಿಶ್ ಭಟ್ ರ ಮನವಿಗೆ ಸ್ಪಂದಿಸಿದ ಸಚಿವರು ಕದ್ರಿ ಉದ್ಯಾನವದ ಅಭಿವೃದ್ಧಿಗೆ ಬೇಕಾದ ಹಣವನ್ನು ಶೀಘ್ರ ಬಿಡುಗಡೆ ಮಾಡಲು ಆದ್ಯತೆ ನೀಡುವುದಾಗಿ ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಮತ್ತಿತರ ಕಡೆ ಕಂಡು ಬಂದ ಅಡಿಕೆ ಕೊಳೆರೋಗ ಬಾಧೆಗೆ ಸಂಬಂಧಿಸಿ ಒಟ್ಟು 21,174 ಅರ್ಜಿಗಳು ಬಂದಿವೆ.ಕಂದಾಯ ಮತ್ತು ತೋಟಗಾರಿಕೆ ಇಲಾಖೆ ಪರಿಶೀಲನೆ ನಡೆಸಿ ಕೊಳೆರೋಗದಿಂದ 1.74 ಕೋಟಿ ನಷ್ಟ ಸಂಭವಿಸಿದೆ ಎಂಬ ಮಾಹಿತಿಯನ್ನು ಇಲಾಖಾ ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.