ಅವರು ಇಂದು ರಾಷ್ಟ್ರೀ ಯ ಯುವ ಜನೋ ತ್ಸವದ ಮುಖ್ಯ ಕಾರ್ಯ ಕ್ರಮಗಳು ನಡೆ ಯಲಿ ರುವ ಮಂಗಳಾ ಕ್ರೀಡಾಂ ಗಣಕ್ಕೆ ಭೇಟಿ ನೀಡಿ ಇಲ್ಲಿಯ ವರೆಗೆ ಆಗಿರುವ ಸಿದ್ಧತೆ ಗಳ ಪರಿ ಶೀಲನೆ ಮಾಡಿ ದರು.ಉದ್ಘಾ ಟನಾ ಸಮಾರಂಭ ಹಾಗೂ ಸಾಂಸ್ಕೃತಿಕ ದಿಗ್ಗಜರ ಸಂಗೀತ ರಸಸಂಜೆ ಜರಗುವ ಮುಖ್ಯ ವೇದಿಕೆ ನಿರ್ಮಾಣದ ಮೇಲುಸ್ತುವಾರಿಯನ್ನು ಪರಿಶೀಲಿಸಿ ಹಲವಾರು ಸಲಹೆಗಳನ್ನು ನೀಡಿದ್ದಲ್ಲದೆ ಜನವರಿ 10 ರಂದು ವೇದಿಕೆಯನ್ನು ಯುವಜನೋತ್ಸವ ಸಮಿತಿಗೆ ಹಸ್ತಾಂತರಿಸುವಂತೆ ಸೂಚಿಸಿದರು. ನಂತರ ಕರಾವಳಿ ಮೈದಾನದಲ್ಲಿ ನಡೆದಿರುವ ವಿವಿಧ ಮಳಿಗೆಗಳ ಕಾಮಗಾರಿಗಳನ್ನು ವೀಕ್ಷಿಸಿ ಎಲ್ಲಾ ಮಳಿಗೆಗಳ ಕಾಮಗಾರಿಗಳನ್ನು ವೀಕ್ಷಿಸಿ ಎಲ್ಲಾ ಮಳಿಗೆಗಳನ್ನು ಜನವರಿ 11 ರಂದೇ ಸಂಬಂಧಿಸಿದವರು ಸಜ್ಜುಗೊಳಿಸುವಂತೆ ಸಂಘಟಕರಿಗೆ ಸೂಚಿಸಿದರು. ಜನವರಿ 11 ರ ರಾತ್ರಿ ಇಡೀ ಮಂಗಳೂರು ನಗರ ವಿದ್ಯುತ್ ದೀಪಗಳಿಂದ ಅಲಂಕರಿಸಿ ಇಂದ್ರನಗರಿಯಂತೆ ಕಂಗೊಳಿಸಲಿದೆ ಎಂದರು.ಈ ಸಂದರ್ಭದಲ್ಲಿ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಡಾ.ಮೋಹನ್ ಆಳ್ವಾ,ಜಿ.ಪಂ.ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ವಿಜಯಪ್ರಕಾಶ್, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಆಬಿಯಂತರರಾದ ಗೋಪಾಲನಾಯಕ್ ಮುಂತಾದವರು ಉಪಸ್ಥಿತರಿದ್ದರು.