Saturday, January 21, 2012

ನಾಳೆಯಿಂದ ಬಾಲಭಾರತ್ ಸೃಜನೋತ್ಸವ

ಮಂಗಳೂರು,ಜನವರಿ.21: ರಾಷ್ಟ್ರಮಟ್ಟದ ಸೃಜನೋತ್ಸವ ಕಾರ್ಯಕ್ರಮ ಮಂಗಳೂರಿನಲ್ಲಿ ನಾಳೆಯಿಂದ ಆರಂಭಗೊಳ್ಳಲಿದೆ.ಪಿಲಿಕುಳ ನಿಸರ್ಗಧಾಮದಲ್ಲಿ ನಾಲ್ಕು ದಿನಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ 17 ರಾಜ್ಯಗಳ 3,000 ಮಕ್ಕಳು ಭಾಗವಹಿಸಲಿದ್ದಾರೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್ ತಿಳಿಸಿದರು.ಇಂದು ನಗರದ ಜಿಲ್ಲಾಧಿ ಕಾರಿ ಕಚೇರಿ ಯಲ್ಲಿ ನಡೆದ ಸುದ್ದಿ ಗೋಷ್ಟಿ ಯಲ್ಲಿ ವಿವರ ಗಳನ್ನು ನೀಡಿದ ಸಚಿವರು ಉತ್ಸವ ಸಿದ್ದತೆ ಗಳು ಪೂರ್ಣ ಗೊಂಡಿದ್ದು, ಈಗಾಗಲೇ ಪ್ರತಿ ನಿಧಿ ಗಳು ಜಿಲ್ಲೆಗೆ ಆಗಮಿ ಸಲಾ ರಂಭಿಸಿ ದ್ದಾರೆ.ಉತ್ಸವ ವನ್ನು ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾದ ಸಿ.ಸಿ. ಪಾಟೀಲ್ ಅವರು ಉದ್ಘಾಟಿಸಲಿದ್ದು,ಸಚಿವರಾದ ಗೋವಿಂದ ಕಾರಜೋಳ,ಶೋಭಾ ಕರಂದ್ಲಾಜೆ,,ಜಿಲ್ಲೆಯ ಶಾಸಕರು,ಸಂಸದರುಸಹಿತ ಅನೇಕ ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.ಉದ್ಘಾಟನ ಸಮಾರಂಭಕ್ಕೂ ಮುನ್ನ ವಾಮಂಜೂರಿನ ಕೇಂದ್ರ ಭಾಗದಿಂದ ಪಿಲಿಕುಳಕ್ಕೆ ಆಕರ್ಷಕ ಮೆರವಣಿಗೆ ನಡೆಯಲಿದೆ ಎಂದರು.
ಸೃಜನಾತ್ಮಕ ಕಲೆ,ಸೃಜನಾತ್ಮಕ ಬರವಣಿಗೆ, ಪ್ರದರ್ಶನ ಕಲೆ ಮತ್ತು ವಿಜಾನದಲ್ಲಿ ನೂತನ ಅವಿಷ್ಕಾರ ಕ್ಷೇತ್ರಗಳಲ್ಲಿ ಸ್ಪರ್ಧೆ ಮತ್ತು ತರಬೇತಿಯನ್ನು ಏರ್ಪಡಿಸಲಾಗಿದೆ ಎಂದು ರಾಜಯ ಬಾಲಭವನ ಸೊಸೈಟಿ ಅಧ್ಯಕ್ಷೆ ಶ್ರೀಮತಿ ಸುಲೋಚನ ಜಿ.ಕೆ.ಭಟ್ ಮಾಹಿತಿ ನೀಡಿದರು.ವಿವಿಧ ರಾಜಯಗಳಿಂದ ಬಂದಿರುವ ಮಕ್ಕಳು ಆಯಾಯ ರಾಜ್ಯ ಗಳ ನೃತ್ಯ,ಸಾಂಸ್ಕೃತಿಕ ಕಲೆಗಳನ್ನು ಇಲ್ಲಿಯ ಜನರ ಮುಂದೆ ಪ್ರದರ್ಶಿಸಲಿದ್ದಾರೆ. ಪಣಂಬೂರು ಕಡಲ ಕಿನಾರೆಯಲ್ಲಿ ನಂದಗೋಕುಲ ವೇದಿಕೆಯಡಿ ಮಕ್ಕಳು ರಚಿಸಿದ ವಿವಿಧ ವಿನ್ಯಾಸದ ಆಕರ್ಷಕ ಗಾಳಿಪಟಗಳ ಹಾರಾಟ,ಮರಳು ಶಿಲ್ಪಕಲೆ ಮತ್ತು ಸಾಂಸ್ಕೃತಿಕ ಕಾರ್ಕ್ರಮಗಳನ್ನು ಆಯೋಜಿಸಲಾಗಿದ್ದೆ ಎಂದರು. ಜನವರಿ 25 ರಂದು ನಡೆಯುವ ಸಮಾರೋಪ ಸಮಾರಂಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡ,ಕೇಂದ್ರ ಕಾರ್ಪೋರೇಟ್ ವ್ಯವಹಾರಗಳ ಸಚಿವರಾದ ಡಾ.ಎಂ.ವೀರಪ್ಪ
ಮೊಯಿಲಿ ಸಹಿತ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದರು.
ದ.ಕ.ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ,ಸಿಇಓ ಡಾ.ಶಿವಶಂಕರ್ ಸುದ್ದಿಗೋಷ್ಟಿಯಲ್ಲಿ ಉಪಸ್ಥಿತರಿದ್ದರು.