Thursday, January 12, 2012

ಯುವ ಶಕ್ತಿ ಸದ್ವಿನಿಯೋಗವಾಗಲಿ: ಡಿ.ವಿ.

ವರದಿ: ಮಾಣಿಕ್ಯ

ಮಂಗಳೂರು : ಯುವ ಜನಾಂಗದಲ್ಲಿರುವ ಶಕ್ತಿ ಸದ್ವಿನಿಯೋಗವಾದಲ್ಲಿ ಸ್ವಾಮಿ ವಿವೇಕಾನಂದರ ಕನಸು ನನಸಾಗುವಲ್ಲಿ ಸಂಶಯವಿಲ್ಲ, ಒಳ್ಳೆಯವನಿಗೆ ಹಾಗು ಒಳ್ಳೆಯದನ್ನು ಮಾಡುವುದರಿಂದ ನಮ್ಮೊಳಗಿನ ಶಕ್ತಿ ಹೆಚ್ಚುತ್ತದೆ, ಮತ್ತು ಎಲ್ಲರಲ್ಲು ವಿವಿದತೆಯಲ್ಲಿ ಏಕತೆಯನ್ನು ಕಾಪಾಡಿಕೊಳ್ಳಬೇಕು ಎಂದು ಕರ್ನಾಟಕ ರಾಜ್ಯದ ಮುಖ್ಯಮಂತ್ರಿ ಡಿ.ವಿ ಸದಾನಂದ ಗೌಡ ಅಭಿಪ್ರಾಯಪಟ್ಟರು.

ಅವರು ಇಂದು ಮಂಗಳೂರಿನ ರಾಷ್ಟೀಯ ಯುವಜನೋತ್ಸವ2012 ಉದ್ಟಾಟಿಸಿ ಮಾತನಾಡಿ ವಿವಿದತೆಯಲ್ಲಿ ಏಕತೆಯನ್ನು ಸಾಧಿಸಿದರೆ ಎಲ್ಲವನ್ನು ಗೆಲ್ಲಬಹುದು ಮತ್ತು ವಿವೇಕಾನಂದರ ವಾಣಿ ಯಾವುದೂ ಕೂಡ ಅಸಾದ್ಯವಲ್ಲ ಮಾನವೀಯ ಮೌಲ್ಯ ಹಾಗೂ ಸಾಮಾಜಿಕ ಮೌಲ್ಯವನ್ನು ಉಳಿಸಿಕೊಳ್ಳುವುದರ ಮೂಲಕ ಯುವ ಶಕ್ತಿ ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು ಎಂದು ರಾಜ್ಯದ ಮುಖ್ಯಮಂತ್ರಿ ಹೇಳಿದರು.

ಕರಾವಳಿ ಪ್ರದೇಶ ತನ್ನ ಶೈಕ್ಷಣಿಕ ಅಭಿವೃದಿಯಿಂದಾಗಿ ಇತರ ದೇಶದ ಜನರನ್ನು ತನ್ನಡೆಗೆ ಸೆಳೆಯುತ್ತಿದೆ, ಹಾಗು ಸಮಾಜದ ತೊಡಕುಗಳನ್ನು ತೊಡೆದು ಹಾಕಿ ಹೊಸ ಭವಿಷ್ಯದ ಕನಸನ್ನು ಕಾಣಬೇಕು, ಕಟ್ಟುವೆವು ನಾವು ಹೊಸ ನಾಡೊಂದನ್ನು ಮತ್ತು ಸಮಾಜದ ಎಲ್ಲ ತೊಡಕುಗಳನ್ನು ತೊಲಗಿಸಿ ಉತ್ಸಾಹ ಉಲ್ಲಾಸ ಇರಬೇಕು ಎಂದು ಯುವಕರಿಗೆ ಕಿಮಾತು ಹೇಳಿದರು. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಅಜಯ್ ಮಾಕೇನ್ ಮತ್ತು ಕೇಂದ್ರ ಸಚಿವ ವಿರಪ್ಪಮೊಲಿ, ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವಿರೇಂದ್ರ ಹೆಗಡೆ ಉಪಸ್ಥಿತರಿದ್ದರು.