Wednesday, January 25, 2012

ಉತ್ತಮ ಪ್ರಜಾಪ್ರಭುತ್ವಕ್ಕಾಗಿ ವಿವೇಚನೆಯಿಂದ ಮತದಾನಮಾಡಿ -ಜಿಲ್ಲಾಧಿಕಾರಿ

ಮಂಗಳೂರು,ಜನವರಿ.25:ದೇಶದ ಪ್ರತಿಯೊಬ್ಬ ಮತದಾರನೂ ಚುನಾವಣೆಗಳಲ್ಲಿ ಪಾಲ್ಗೊಂಡು ವಿವೇಚನೆಯಿಂದ ಮತದಾನ ಮಾಡಿದಾಗ ಮಾತ್ರ ಉತ್ತಮ ಪ್ರಜಾಪ್ರಭುತ್ವ ಹೊಂದಲು ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪಗೌಡ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.ಅವರು ಇಂದು ನಗರದ ಪುರಭವನದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ರಾಷ್ಟ್ರೀಯ ಮತದಾರರ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಯುವ ಜನತೆ ತಮ್ಮ ವಯಸ್ಸು 18 ತುಂಬಿದ ಕೂಡಲೇ ತಮ್ಮ ಹೆಸ ರನ್ನು ಮತ ದಾರರ ಪಟ್ಟಿ ಯಲ್ಲಿ ನೊಂದಾ ಯಿಸಿ ಕೊಳ್ಳ ಬೇಕು, ಯುವ ಮತ ದಾರರು ಯಾವುದೇ ಆಸೆ ಆಕಾಂ ಕ್ಷೆಗಳಿಗೆ ಒಳ ಗಾಗದೆ ನಿರ್ಭೀ ತಿಯಿಂದ ಪವಿತ್ರ ಮತ ದಾನ ಕಾರ್ಯ ದಲ್ಲಿ ಪಾಲ್ಗೊ ಳ್ಳು ವಂತೆ ಅವರು ಯುವ ಜನತೆ ಯಲ್ಲಿ ಮನವಿ ಮಾಡಿ ದ್ದಾರೆ.ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಉದ್ಘಾಟಿಸಿದ ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ವಿಜಯ ಪ್ರಕಾಶ್ ಅವರು ಮಾತನಾಡಿ ನಾವು ನಮಗೆ ಸಂವಿದಾನ ದತ್ತವಾಗಿ ಬಂದಿರುವ ಹಕ್ಕುಗಳನ್ನು ಚಲಾಯಿಸುವಷ್ಟೇ ನಮ್ಮ ಜವಾಬ್ದಾರಿಗಳನ್ನು ಸಹ ನಿಭಾಯಿಸಿದಾಗ ಮಾತ್ರ ವಿಶೇಷವಾಗಿ ಮತದಾನವನ್ನು ಪ್ರಜ್ಞಾಪೂರ್ವಕವಾಗಿ ಚಲಾಯಿಸಿದಾಗ ಮಾತ್ರ ಪ್ರಜಾಪ್ರಭುತ್ವದ ಮೂಲಭೂತ ಸಿದ್ದಾಂತಗಳು ಮೌಲ್ಯಯುತವಾಗಿ ಉಳಿಯಲು ಸಾಧ್ಯ ಎಂದರು.ಜಿಲ್ಲಾ ಕಾನೂನು ಸಲಹೆ ಗಾರ ರಾದ ಕೆ.ಬಿ.ಎಮ್. ಪಟೇಲ್ ಅವರು ಮಾತ ನಾಡುತ್ತಾ ನಮ್ಮ ರಾ ಷ್ಟ್ರದ ಬುನಾದಿ ನೆಲೆ ಯಾಗಿ ರುವುದು. ಈ ದೇಶದ ಜಾಗೃತ ಮತ ದಾರ ರಿಂದ, ಮತ ದಾರರು ಜಾಗೃತ ರಾಗಿ ಪ್ರತಿ ಯೊಬ್ಬರೂ ಮತ ದಾನ ಕಾರ್ಯ ದಲ್ಲಿ ಭಾಗವಹಿಸಿದಾಗ ಮಾತ್ರ ನಮ್ಮ ಸರ್ಕಾರಗಳ ಜನಕಲ್ಯಾಣ ಯೋಜನೆಗಳು ಸಮರ್ಪಕವಾಗಿ ಸೂಕ್ತ ಫಲಾನುಭವಿಗಳನ್ನು ತಲುಪಲು ಸಾಧ್ಯ ಎಂದ ಅವರು ಸಶಕ್ತ ಭಾರತ ನಿರ್ಮಾಣ ಎಚ್ಚೆತ್ತ ಮತದಾರರಿಂದ ಮಾತ್ರ ಸಾಧ್ಯ ಎಂದರು.ಮಹಾ ನಗರ ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್ .ಕೆ ಅವರು ಮತ ದಾರರ ಪ್ರ ತಿಜ್ಞಾ ವಿಧಿ ಬೋಧಿ ಸಿದರು.ಮತ ದಾರರ ನೋಂದ ಣಾಧಿ ಕಾರಿ ಹಾಗೂ ಮಂಗ ಳೂರು ಸಹಾ ಯಕ ಕಮೀ ಷನರ್ ಡಾ.ಎಮ್. ಎನ್.ವೆಂಕ ಟೇಶ್ ಅವರು ಮುಖ್ಯ ಚುನಾ ವಣಾಧಿ ಕಾರಿ ಗಳ ಚುನಾ ವಣಾ ದಿನಾ ಚರಣೆ ಸಂದೇಶ ವಾಚಿ ಸಿದರು. ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ದಯಾನಂದ ಅವರು ಸ್ವಾಗತಿಸಿದರೆ ಮಂಗಳೂರು ತಾಲ್ಲೂಕು ತಹಸೀಲ್ದಾರ್ ರವಿಚಂದ್ರ ನಾಯಕ್ ವಂದಿಸಿದರು. ಮತ ದಾರರ ದಿನಾ ಚರಣೆ ನಿಮಿತ್ತ ಮೂಡ ಬಿದ್ರೆ ಮತ್ತು ಮಂಗ ಳೂರು ಉತ್ತರ,ದಕ್ಷಿಣ ಹಾಗೂ ಮಂಗ ಳೂರು ವಿದಾನ ಸಭಾ ಕ್ಷೇತ್ರ ಗಳ ಮತ ದಾರರ ಹೆಸ ರನ್ನು ಲಾಟರಿ ತೆಗೆ ಯುವ ಮೂಲಕ ಅದೃಷ್ಟ ವಂತ ಮಹಿಳಾ ಮತ ದಾರರು ಮತ್ತು ಪುರುಷ ಮತ ದಾರರಿಗೆ ತಲಾ ರೂ.2000\- ಬಹುಮಾನ ನೀಡಲಾಯಿತು.( ಬಹುಮಾನ ಪಡೆಯದವರು ಜಿಲ್ಲಾಧಿಕಾರಿಗಳ ಕಛೇರಿಯ ಚುನಾವಣಾ ಶಾಖೆಯಲ್ಲಿ ಪಡೆಯಬಹುದಾಗಿದೆ). ಇದೇ ರೀತಿ ಅತ್ಯುತ್ತಮ ಬೂತ್ ಮಟ್ಟದ ಅಧಿಕಾರಿಗಳಿಗೆ ತಲಾ ರೂ.500\- ಪ್ರೋತ್ಸಾಹಕ ನಗದು ಬಹುಮಾನ ಹಾಗೂ ಪ್ರಶಸ್ತಿಪತ್ರ ವಿತರಿಸಿದರು.