Tuesday, July 30, 2013

ಮಹಿಳಾ ಮತ್ತು ಮಕ್ಕಳ ಮಾರಾಟ ತಡೆಗೆ ಇಲಾಖೆಗಳ ಸಮನ್ವಯತೆ ಅವಶ್ಯ-ಎನ್.ಪ್ರಕಾಶ್


ಮಂಗಳೂರು, ಜುಲೈ. 30:-ದಕ್ಷಿಣಕನ್ನಡ ಜಿಲ್ಲೆಯಲ್ಲಿ ಆಗೊಂದು ಈಗೊಂದು ಎಂಬಂತೆ ಬೆಳಕಿಗೆ ಬರುವ ಮಹಿಳೆ ಹಾಗೂ ಮಕ್ಕಳ ಮಾರಾಟ ಪ್ರಕರಣಗಳನ್ನು ಪತ್ತೆ ಹಚ್ಚಿ ಇತ್ಯರ್ಥ ಪಡಿಸುವಲ್ಲಿ ಸಂಬಂಧಿಸಿದ ಎಲ್ಲಾ ಇಲಾಖೆಗಳು ಹಾಗೂ ಸ್ವಯಂ  ಸೇವಾ ಸಂಸ್ಥೆಗಳ ನಡುವೆ ಸಮನ್ವಯತೆ ಅವಶ್ಯ ಎಂದು ದಕ್ಷಿಣಕನ್ನಡ ಜಿಲ್ಲಾ ಮಟ್ಟದ ಮಹಿಳಾ ಮತ್ತು ಮಕ್ಕಳ ಮಾರಾಟ ತಡೆ ಕಾವಲು ಸಮಿತಿ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಾದ  ಎನ್.ಪ್ರಕಾಶ್ ಅವರು ತಿಳಿಸಿದ್ದಾರೆ.
ಅವರಿಂದು ತಮ್ಮ ಕಚೇರಿಯಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಮಾರಾಟ ತಡೆ ಜಿಲ್ಲಾ ಮಟ್ಟದ ಕಾವಲು ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 1-4-2012 ರಿಂದ 30-6-13 ರ ತನಕ 3 ಮಹಿಳೆಯರು ಹಾಗೂ 3 ಮಕ್ಕಳಿಗೆ  ಸಂಬಂಧಿಸಿ ದಾಖಲಾಗಿದ್ದ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿದೆ. ಒಂದು ಪ್ರಕರಣಕ್ಕೆ  ಮೂಡಬಿದ್ರಿ ಪೋಲೀಸರು ಎಫ್.ಐ.ಆರ್.ದಾಖಲಿಸಿ ಪರಿಶೀಲನೆ ನಡೆಸುತ್ತಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಗಟ್ರೂಡ್ ವೇಗಸ್ ಅವರು ಜಿಲ್ಲಾಧಿಕಾರಿಗಳು ಹಾಗೂ ಸಭೆಗೆ ತಿಳಿಸಿದರು.
ಜನನ ಪ್ರಮಾಣ ಪತ್ರದಲ್ಲಿ ದಾಖಲಿಸುವ ತಾಯಿಯ ಹೆಸರು ಬೇರೊಬ್ಬರದು.ಇದು ಮಕ್ಕಳ ಮಾರಾಟ ಜಾಲದ ಇನ್ನೊಂದು  ಚಾಣಾಕ್ಷ ಬುದ್ಧಿವಂತಿಕೆಯ ವಂಚನೆ ಜಾಲವಾಗಿದೆ ಎಂದು ಸಭೆಯಲ್ಲಿ ಹಾಜರಿದ್ದ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸಭೆಗೆ ತಿಳಿಸಿದರು.
ಇಂತಹ ಅನೈತಿಕ ವಂಚನೆ ಜಾಲದ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಪೋಲೀಸ್ ಇಲಾಖೆ, ಸ್ವಯಂ ಸೇವಾ ಸಂಸ್ಥೆಗಳವರು ನಿರಂತರ ಗಮನ ಹರಿಸಿ ಅನೈತಿಕ ಜಾಲದಿಂದ ಅನ್ಯಾಯವಾಗುವುದನ್ನು ತಡೆ ಹಿಡಿಯಬೇಕೆಂದು ಜಿಲ್ಲಾಧಿಕಾರಿ ಸೂಚಿಸಿದರು.
ಸ್ವಯಂ ಸೇವಾ ಸಂಸ್ಥೆಗಳವರು ಮಕ್ಕಳನ್ನು ಅಥವಾ ಮಹಿಳೆಯರನ್ನು ರಕ್ಷಿಸಿ ಕರೆತಂದಾಗ ಪೋಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸುವ ಕೆಲಸಕ್ಕೆ ವೇಗ ದೊರಕಬೇಕಿದೆ ಎಂದು ಪ್ರಜ್ಞಾದ ಶ್ರೀಮತಿ ಹಿಲ್ಡಾ ರಾಯಪ್ಪ ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಶ್ರೀಮತಿ ಆಶಾ ನಾಯಕ್  ಅವರು ಸಭೆಯಲ್ಲಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಸದಸ್ಯೆ ಶ್ರೀಮತಿ ಧನಲಕ್ಷ್ಮಿ ಜನಾರ್ಧನ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀಮತಿ ಗ್ರೇಸಿ ಗೊನ್ಸಾಲ್ವೀಸ್ ಮುಂತಾದವರು ಹಾಜರಿದ್ದರು.
                            

Monday, July 29, 2013

ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರಿನಲ್ಲಿ 92125 ಟನ್ ಭತ್ತ ಬೆಳೆಯುವ ಗುರಿ

ಮಂಗಳೂರು,ಜುಲೈ.29:-ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ದಕ್ಷಿಣಕನ್ನಡ ಜಿಲ್ಲೆಯ 33500 ಹೆಕ್ಟೇರ್ ನಲ್ಲಿ 92125 ಟನ್ ಭತ್ತ ಉತ್ಪಾದಿಸುವ ಗುರಿ ಹೊಂದಲಾಗಿದೆ ಎಂದ ಜಂಟಿ ಕೃಷಿ ನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಜಿಲ್ಲೆಯಲ್ಲಿ 28-7-13 ರ ವರೆಗೆ 27008 ಹೆಕ್ಟೇರ್ನಲ್ಲಿ ಕೃಷಿ ಚಟುವಟಿಕೆಗಳು ಪೂರ್ಣಗೊಂಡಿದ್ದು,ಶೇಕಡಾ 80.6 ರಷ್ಟು ಪ್ರಗತಿ ಆಗಿದೆ.  ಕಳೆದ ವರ್ಷ ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ 23513 ಹೆಕ್ಟೇರ್ನಲ್ಲಿ ಕೃಷಿ ಕಾರ್ಯ ನಡೆದಿತ್ತು.
ಮಂಗಳೂರು ತಾಲೂಕಿನಲ್ಲಿ ಒಟ್ಟು 11800 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಇದ್ದು,ಇಲ್ಲಿಯ ವರೆಗೆ 9367 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಸುಳ್ಯ ತಾಲೂಕಿನಲ್ಲಿ 500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಇದ್ದು ಈಗಾಗಲೇ 489 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದ್ದು ಶೇಕಡಾ 98 ಗುರಿ ಸಾಧಿಸಲಾಗಿದೆ. ಬಂಟ್ವಾಳ ತಾಲೂಕಿನಲ್ಲಿ 9500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಇದ್ದು ಈಗಾಗಲೇ 7420 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದ್ದು ಶೇಕಡಾ 78 ಗುರಿ ಸಾಧಿಸಲಾಗಿದೆ.
ಬೆಳ್ತಂಗಡಿ  ತಾಲೂಕಿನಲ್ಲಿ 8500 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಇದ್ದು ಈಗಾಗಲೇ 6932 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದ್ದು ಶೇಕಡಾ 81 ಗುರಿ ಸಾಧಿಸಲಾಗಿದೆ.
ಪುತ್ತೂರು ತಾಲೂಕಿನಲ್ಲಿ 3200 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ಇದ್ದು ಈಗಾಗಲೇ 2800 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದ್ದು ಶೇಕಡಾ 78 ಗುರಿ ಸಾಧಿಸಲಾಗಿದೆ.
ಈ ಮುಂಗಾರು ಹಂಗಾಮಿನಲ್ಲಿ 8000ಟನ್ ರಸಗೊಬ್ಬರ ಬೇಡಿಕೆ ಇದ್ದು ಈಗಾಗಲೇ 9463 ಟನ್ ರಸಗೊಬ್ಬರ ವಿತರಣೆಯಾಗಿದ್ದು, 5900 ಟನ್ ರಸಗೊಬ್ಬರು ದಾಸ್ತಾನಿದೆ. ಮುಂಗಾರು ಹಮಗಾಮಿಗೆ ಜಿಲ್ಲೆಯಲ್ಲಿ ಒಟ್ಟು 2600 ಹೆಕ್ಟೇರ್ ಪ್ರದೇಶದಲ್ಲಿ ಭೂಚೇತನಾ ಕಾರ್ಯಕ್ರಮವನ್ನು ಯಶಸ್ವಿಯಾಗಿ ಕೈಗೊಳ್ಳಲಾಗುತ್ತಿದೆ.
ಬಿತ್ತನೆ ಬೀಜ ಪ್ರಮಾಣ ಸಾಕಷ್ಟಿದ್ದು,ಇದುವರಗೂ 459.50 ಕ್ವಿಂಟಾಲ್ ನಷ್ಟು ಬಿತ್ತನೆ ಬೀಜಗಳನ್ನು ರೈತ ಸಂಪರ್ಕ ಕೇಂದ್ರಗಳ ಮೂಲಕ 1274 ರೈತರಿಗೆ ವಿತರಿಸಲಾಗಿದೆ.ಕ್ವಿಂಟಾಲಿಗೆ  ಶೇಕಡಾ 50 ರಂತೆ ರೂ.700 ರಿಯಾಯಿತಿಯಲ್ಲಿ ಪ್ರಾಮಾಣಿತ ಬೀಜ) ರೈತ ಸಂಪರ್ಕ ಕೇಂದ್ರಗಳ ಮೂಲಕ ವಿತರಿಸಲಾಗುತ್ತಿದೆ. ಕರ್ನಾಟ ಕಜಕ ರಾಜ್ಯ ಬೀಜ ನಿಗಮದಿಂದ 27-7-13 ರ ವರೆಗೆ ಒಟ್ಟು 483.50 ಕ್ವಿಂಟಾಲ್ ಬೀಜ ದಾಸ್ತಾನು ಪಡೆದು459.50 ಕ್ವಿಂಟಾಲ್ ವಿತರಿಸಲಾಗಿದೆ.

Saturday, July 27, 2013

108 ಅಂಬುಲೆನ್ಸ್ ಸಮಸ್ಯೆಗೆ ಸರ್ಕಾರ ಪರ್ಯಾಯ ವ್ಯವಸ್ಥೆಗೆ ಸಿದ್ಧತೆ

ಮಂಗಳೂರು, ಜುಲೈ. 27:- ಆರೋಗ್ಯ ತುರ್ತು ಸೇವೆಗಳಿಗೆ ಮೀಸಲಾಗಿರುವ 108 ಅಂಬುಲೆನ್ಸ್ ನ ಸಿಬ್ಬಂದಿ ಮುಷ್ಕರಕ್ಕೆ ಕರೆ ಕೊಟ್ಟಿರುವುದರಿಂದ, ಸಾರ್ವಜನಿಕರಿಗೆ ತೊಂದರೆ ಉಂಟಾದಲ್ಲಿ ತಕ್ಷಣ ಪರ್ಯಾಯ ವ್ಯವಸ್ಥೆ ಕೈಗೊಳ್ಳುವಂತೆ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಆರೋಗ್ಯ ಸಚಿವ  ಯು.ಟಿ.ಖಾದರ್ ಅವರು ತಿಳಿಸಿದ್ದಾರೆ.
ಅವರು ಇಂದು ಮುಂಜಾನೆ ಉಳ್ಳಾಲದ ಕೋಟೆಪುರ, ಮೊಗವೀರ ಪಟ್ಟಣ, ಮುಕ್ಕಚೇರಿ, ಸುಭಾಷ್ನಗರ ಮುಂತಾದೆಡೆಗಳಲ್ಲಿ ಕಡಲ ಕೊರೆತದಿಂದ ಅಪಾಯಕ್ಕೆ ಈಡಾಗಿರುವ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಎನ್.ಪ್ರಕಾಶ್ ಅವರೊಂದಿಗೆ ಭೇಟಿ ನೀಡಿ, ಪರಿಶೀಲಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಈ ವಿಷಯ ತಿಳಿಸಿದರು.
108 ಅಂಬುಲೆನ್ಸ್ ವಾಹನಗಳು ಅದರಲ್ಲಿನ ಯಂತ್ರೋಪಕರಣಗಳು ಸರ್ಕಾರದ ಸ್ವತ್ತುಗಳಾಗಿದ್ದು, ಅದರಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು ಜಿವಿಕೆ ಖಾಸಗಿ ಸಂಸ್ಥೆಗೆ ಸೇರಿದವರಾಗಿದ್ದು, 2008ರಲ್ಲಿ ಜಿವಿಕೆ ಹಾಗೂ ಸರ್ಕಾರದ ನಡುವೆ ಆಗಿರುವ ಒಪ್ಪಂದದಂತೆ 108 ಸಿಬ್ಬಂದಿ ಕಾರ್ಯ ನಿರ್ವಹಿಸುತ್ತಿದ್ದು, ಅವರ ಸಮಸ್ಯೆಗಳಾದ ವೇತನ ಸೇವಾ ಭದ್ರತೆ ಇತರೆ ವಿಷಯಗಳ ಬಗ್ಗೆ ಜಿವಿಕೆ ಸಂಸ್ಥೆ ನೇರವಾಗಿ ಹೊಣೆಯಾಗಿದೆ. ಆದ್ದರಿಂದ 108 ರ ಸಿಬ್ಬಂದಿ ಯಾರಾದರೂ ಅನ್ಯಾಯವಾಗಿದೆ ಎಂದು ಸರ್ಕಾರಕ್ಕೆ ದೂರು ನೀಡಿದಲ್ಲಿ, ಕೂಡಲೇ ಸರ್ಕಾರ ಪರಿಶೀಲನೆ ನಡೆಸಿ ಜಿವಿಕೆ ಸಂಸ್ಥೆ ವಿರುದ್ಧ ಕ್ರಮ ತೆಗೆದುಕೊಂಡು ದಂಡ ವಿಧಿಸಲೂ ಹಿಂಜರಿಯುವುದಿಲ್ಲ ಎಂದು ತಿಳಿಸಿದರು.108ರ ಪರ್ಯಾಯವಾಗಿ ಬಳಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ ಎಂದರು.                   

ಕಡಲ್ಕೊರೆತ ತಡೆಗೆ ಕ್ರಮ -ಖಾದರ್

ಮಂಗಳೂರು, ಜುಲೈ. 27:- ಮಳೆಯ ಅಬ್ಬರದಿಂದಾಗಿ ರಾಜ್ಯದ ಕರಾವಳಿ ತೀರ ಪ್ರದೇಶಗಳಲ್ಲಿ ಕಡಲಿನ ಅಬ್ಬರ ದುಪ್ಪಟ್ಟಾಗಿದ್ದು, ಉಳ್ಳಾಲ ಕಡಲಿನ ಬದಿಯಲ್ಲಿ ವಾಸಿಸುವವರಿಗೆ ತುಂಬಾ ತೊಂದರೆಯಾಗಿ ಮನೆ ಸೂರುಗಳು ನಾಶವಾಗಿ ಬಾರೀ ನಷ್ಟ ಸಂಭವಿಸಿದ್ದು ಇಂದಿನಿಂದಲೇ ಇಲ್ಲಿ ನಷ್ಟಕ್ಕೊಳಗಾದ ಕುಟುಂಬಗಳಿಗೆ  ಪರಿಹಾರ ನೀಡುವುದು ಸೇರಿದಂತೆ ಕಡಲ ಕೊರೆತ ಹೆಚ್ಚಿರುವಂತಹ ಕಡೆಗಳಲ್ಲಿ ತುರ್ತು ಕಾಮಗಾರಿಗಳನ್ನು ಕೈಗೊಂಡು ಕಡಲ ಕೊರೆತ ತಡೆಯಬೇಕೆಂದು ಆದೇಶಿಸುವುದಾಗಿ ಆರೋಗ್ಯ ಸಚಿವ  ಯು.ಟಿ.ಖಾದರ್ ಅವರು ತಿಳಿಸಿದ್ದಾರೆ.
ಅವರು ಇಂದು ಉಳ್ಳಾಲ,ಕೋಟೆಪುರ,ಮಕ್ಕಚೇರಿ,ಮೊಗವೀರಪಟ್ಟಣ,ಸುಭಾಷ್ನಗರ ಮುಂತಾದ ಕಡಲ್ಕೊರೆತ ಉಂಟಾಗಿರುವ ಪ್ರದೇಶಗಳಿಗೆ ಭೇಟಿ ನೀಡಿ ಕಡಲ್ಕೊರೆತದಿಂದ ನಷ್ಟ ಉಂಟಾಗಿರುವ ಮನೆಗಳನ್ನು ಪರಿಶೀಲಿಸಿ ನಂತರ ಮಾಧ್ಯದವರೊಂದಿಗೆ ಮಾತನಾಡಿದರು.
ಪ್ರತೀ ವರ್ಷ ಉಳ್ಳಾಲ ಪರಿಸರದಲ್ಲಿ ಕಡಲ್ಕೊರೆತ ಸಂಭವಿಸುತ್ತದೆ. ಆದರೆ ಈ ಬಾರಿಯ ಕಡಲ್ಕೊರೆತ ಕಳೆದ 17 ವರ್ಷಗಳಲ್ಲಿ ಇದೇ ಮೊದಲ ಬಾರಿಯಾಗಿದೆ ಎಂದು ಸಚಿವರು ತಿಳಿಸಿದರು. ಸೆಪ್ಟೆಂಬರ್ನಲ್ಲಿ ಕಡಲ್ಕೊರೆತಕ್ಕೆ ಶಾಶ್ವತ ಪರಿಹಾರ ಕ್ಯಗೊಳ್ಳುವುದಾಗಿ ಅವರು ತಿಳಿಸಿದರು.
ಮಾನ್ಯ ಜಿಲ್ಲಾಧಿಕಾರಿ ಎನ್.ಪ್ರಕಾಶ್ ಅವರು ಸಚಿವರೊಂದಿಗೆ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.
 

Thursday, July 25, 2013

ರಾಮಪತ್ರೆ- ವಾಣಿಜ್ಯ ಬೆಳೆಯಾಗಿ ಬೆಳೆಸುವ ಪ್ರಯತ್ನ

ರಾಮಪತ್ರೆ
ಮಂಗಳೂರು, ಜುಲೈ. 25:-ಭಾರತ ದೇಶದಲ್ಲಿ ದಕ್ಷಿಣ ರಾಜ್ಯ ಗಳಾದ ಕೇರಳ, ಕರ್ನಾ ಟಕ,ತಮಿಳು ನಾಡು, ಮಹಾರಾಷ್ಟ್ರ ರಾಜ್ಯ ಗಳ ಪಶ್ಚಿಮ ಘಟ್ಟ ಪ್ರದೇಶ ಗಳಲ್ಲಿ ರಾಮ ಪತ್ರೆ ಯನ್ನು ಬೆಳೆ ಯುತ್ತಾರೆ.
ರಾಮ ಪತ್ರೆಯು ಹಳದಿ ಬಣ್ಣದಿಂದ ಕೂಡಿರುತ್ತದೆ ಮತ್ತು ಪತ್ರೆಯು ದಪ್ಪಗಿರುತ್ತದೆ. ಬೆಳೆಯ ಮಾಹಿತಿ ಕೊರತೆಯಿಂದ ವಾಣಿಜ್ಯ ಬೆಳೆಯಾಗಿ ಬೆಳೆಯದೇ ಇದ್ದು, ಇದನ್ನು ವಾಣಿಜ್ಯ ಬೆಳೆಯಾಗಿ ಬೆಳೆಯಲು ಪ್ರಯತ್ನಿಸಲಾಗುತ್ತದೆ. ರಾಮಪತ್ರೆಯು ಮುಖ್ಯವಾಗಿ ಕಾಡುತ್ಪತ್ತಿಯಾಗಿದ್ದು ಉತ್ಪನ್ನವನ್ನು ಪ್ರಸ್ತುತ ಲ್ಯಾಂಪ್ ಸೊಸೈಟಿ ಮೂಲಕ ಸಂಗ್ರಹಿಸಿ ಮಾರಾಟ ಮಾಡಲಾಗುತ್ತದೆ.
ರಾಮಪತ್ರೆಯನ್ನು ಸಾಂಬಾರ ಪದಾರ್ಥವಾಗಿ ಉಪಯೋಗಿಸುವುದಲ್ಲದೆ ಇದರಲ್ಲಿ ಎಣ್ಣೆಯ ಅಂಶವು ಹೆಚ್ಚಿರುವುದರಿಂದ ಪೈಂಟ್ ಇತ್ಯಾದಿ ವಸ್ತುಗಳಲ್ಲಿ ಬಳಸಲಾಗುತ್ತಿದೆ. ಜನವರಿ ತಿಂಗಳಲ್ಲಿ ಹೂಬಿಟ್ಟು ಮುಂದಿನ ಜನವರಿಯಿಂದ ಎಪ್ರಿಲ್- ಮೇ ತಿಂಗಳ ವರೆಗೆ ಕಾಯಿ ಬಿಟ್ಟು ಕಾಯಿಯ ಕೊಯ್ಲಿಗೆ ಬರುತ್ತದೆ. ರಾಮಪತ್ರೆಯ ಕಾಯಿಯನ್ನು ಕಟಾವು ಮಾಡಿ ಮಧ್ಯಭಾಗಕ್ಕೆ ಹೋಳು ಮಾಡಿ ಕೆಳಗಡೆಯಿಂದ ಬೀಜದ ಸುತ್ತುವರಿದ ಪತ್ರೆಯನ್ನು ಬಿಡಿಸಿ ಒಣಗಿಸಿದರೆ ಅದು ಪತ್ರೆಯಾಗಿ ಉತ್ಪನ್ನವಾಗುತ್ತದೆ.
ಪ್ರಸ್ತುತ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಡಿಕೆ ಹಳದಿ ರೋಗ ಬಾಧಿತ ತೋಟಗಳಲ್ಲಿ ಪುನಶ್ಚೇತನ ಕಾರ್ಯಕ್ರಮ, ಅನುಷ್ಠಾನ ಮಾಡುತ್ತಿರುವ ತೋಟಗಳಲ್ಲಿ ಬೆಳೆಯಲು ತೋಟಗಾರಿಕೆ ಇಲಾಖೆಯಿಂದ ಉತ್ತೇಜಿಸಲು ಪರಿಗಣಿಸಲಾಗುತ್ತಿದೆ.ಮುಂದಿನ ದಿನಗಳಲ್ಲಿ ಈ ಬೆಳೆಯನ್ನು ತೋಟದ ಬೆಳೆಯಾಗಿ ಬೆಳೆಯುವುದು ಆವಶ್ಯವಿದೆ. ಉತ್ಸಾಹಿ ರೈತರು ಹೆಚ್ಚಿನ ಮಾಹಿತಿಗೆ ತೋಟಗಾರಿಕೆ ಉಪನಿರ್ದೇಶಕರ ಕಚೇರಿ, ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ ಮಂಗಳೂರು(0824-2412628)      E-mail id:hoticlinicmangalore@gmail.com ಸಂಪರ್ಕಿಸಬಹುದಾಗಿದೆ.

Wednesday, July 24, 2013

ಧಾರ್ಮಿಕ ಕಟ್ಟಡಗಳ ಭದ್ರತೆಗೆ ಕ್ರಮ: ಜಿಲ್ಲಾಧಿಕಾರಿ

ಮಂಗಳೂರು, ಜುಲೈ.24;-  ದೇವಾಲಯಗಳ ನಗರಿ ದಕ್ಷಿಣ ಕನ್ನಡದಲ್ಲಿ ಸಂರಕ್ಷಣೆಯ ದೃಷ್ಟಿಯಿಂದ ನವೀನ ತಾಂತ್ರಿಕತೆಯ ನೆರವನ್ನು ಬಳಸಿ ಜಿಲ್ಲೆಯ ಮಂದಿರ, ಮಸೀದಿ, ದೇವಾಲಯಗಳಲ್ಲಿರುವ ಪುರಾತನ ಸೊತ್ತು, ಸಂಪತ್ತುಗಳನ್ನು ಕಾಯ್ದುಕೊಳ್ಳಬೇಕಾಗಿದೆ ಎಂದು ದ.ಕ ಜಿಲ್ಲಾಧಿಕಾರಿ ಎನ್ ಪ್ರಕಾಶ್ ಹೇಳಿದರು.
ಈ ಸಂಬಂಧ ಜಿಲ್ಲೆಯ ಪ್ರಮುಖ ದೇವಳಗಳ ಆಡಳಿತಾಧಿಕಾರಿಗಳ ಸಭೆಯನ್ನು ಜಿಲ್ಲಾಧಿಕಾರಿಗಳು ಗೃಹ ಸಚಿವಾಲಯದ ನಿರ್ದೇಶನದಂತೆ ಕರೆದಿದ್ದು, ಜಿಲ್ಲೆಯಲ್ಲಿರುವ ಪ್ರಮುಖ ಪುರಾತನ ದೇವಾಲಯಗಳಲ್ಲಿರುವ ಸುರಕ್ಷತಾ ಕ್ರಮಗಳು ಹಾಗೂ ಕೈಗೊಳ್ಳಬೇಕಾದ ಸುರಕ್ಷತಾ ಕ್ರಮಗಳ ಬಗ್ಗೆ ಸಭೆಯಲ್ಲಿ ಸವಿವರ ಚರ್ಚೆ ನಡೆಯಿತು. ಆಡಳಿತಾಧಿಕಾರಿಗಳು ಈ ಸಂಬಂಧ ಪೂರಕ ಮಾಹಿತಿ ನೀಡಿದರೆ ಸಮಗ್ರ ವರದಿಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಇನ್ಷೂರೆನ್ಸ್, ಆರ್ಮಡ್ ಸೆಕ್ಯುರಿಟಿ ನೇಮಿಸುವ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಯಿತು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ ಮತ್ತು ಎಂಡೋಮೆಂಟ್ ಅಧಿಕಾರಿಗಳು ಉಪಸ್ಥಿತರಿದ್ದರು.
 

Tuesday, July 23, 2013

ಸ್ವಾತಂತ್ರ್ಯ ದಿನಾಚರಣೆ: ಪೂರ್ವಭಾವಿ ಸಭೆ

ಮಂಗಳೂರು, ಜುಲೈ. 23:- ಆಗಸ್ಟ್ 15ರಂದು 67ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ಜುಲೈ 22ರಂದು ಆಯೋಜಿಸಲಾಗಿತ್ತು.
ಸ್ವಾತಂತ್ರ್ಯೋತ್ಸವವನ್ನು ಅರ್ಥಪೂರ್ಣವಾಗಿ ಹಾಗೂ ಸಂಭ್ರಮದಿಂದ ಆಚರಿಸಲು ವಿವಿಧ ಸಮಿತಿಗಳನ್ನು ರಚಿಸಲಾಯಿತು ಹಾಗೂ ಸಮಿತಿ ಅಧ್ಯಕ್ಷರಿಗೆ ಹೊಣೆಗಳನ್ನು ಹಂಚಲಾಯಿತು. ಅಪರಾಹ್ನ ನಗರದ ಪುರಭವನದಲ್ಲಿ ನಡೆಯಲಿರುವ ಕಾರ್ಯಕ್ರಮಗಳ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ  ದಯಾನಂದ ಕೆ ಎ, ಕನ್ನಡ ಸಾಹಿತ್ಯ ಪರಿಷತ್ತಿನ ಪ್ರದೀಪ್ ಕುಮಾರ್ ಕಲ್ಕೂರ  ಮತ್ತು ವಿವಿಧ ಇಲಾಖಾ ಮುಖ್ಯಸ್ಥರು ಸಭೆಯಲ್ಲಿದ್ದರು.
 

ಆಗಸ್ಟ್ 3ರಂದು ಲಕ್ಷ ವೃಕ್ಷ ಆಂದೋಲನಕ್ಕೆ ಚಾಲನೆ

ಮಂಗಳೂರು,ಜುಲೈ. 23:- ಆಗಸ್ಟ್ ಮೂರರಂದು ನಗರದ ಟೌನ್ಹಾಲ್ ನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ ಸಚಿವರಾದ ಬಿ. ರಮಾನಾಥ ರೈ ಅವರು ರಾಜ್ಯ ಮಟ್ಟದ ವೃಕ್ಷ ಲಕ್ಷ ಆಂದೋಲನಕ್ಕೆ ಚಾಲನೆ ನೀಡುವರು. ಪ್ರತಿಯೊಬ್ಬರಲ್ಲೂ ಪರಿಸರ ಸಂರಕ್ಷಣೆ ಕಾಳಜಿ ಹಾಗೂ ಸಸಿ ನೆಡುವ ಬಗ್ಗೆ ಅರಿವು ಮೂಡಿಸಲು ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಕಾರ್ಯಕ್ರಮದಲ್ಲಿ ಎಲ್ಲ ಇಲಾಖೆಗಳು, ಸರ್ಕಾರೇತರ ಸಂಘ ಸಂಸ್ಥೆಗಳು ಹಾಗೂ ಸಾರ್ವಜನಿಕರ ಪಾಲ್ಗೊಳ್ಳುವಿಕೆಯನ್ನು ಖಾತರಿಪಡಿಸಿಕೊಳ್ಳಿ ಎಂದು ದ.ಕ ಜಿಲ್ಲಾಧಿಕಾರಿ ಎನ್ ಪ್ರಕಾಶ್ ಅವರು ಅರಣ್ಯ ಇಲಾಖೆಯವರಿಗೆ ಸೂಚಿಸಿದರು.
            ಈಗಾಗಲೇ ನಗರದೆಲ್ಲೆಡೆ ಮಂಗಳೂರು ಮಹಾನಗರಪಾಲಿಕೆ ಹಾಗೂ ವಿವಿಧ ಕಂಪೆನಿಗಳ ಸಹಕಾರದಿಂದ ಐದಾರು ಸಾವಿರದಷ್ಟು ಸಸಿಗಳನ್ನು ನೆಡಲಾಗಿದ್ದು, ಸಸಿ ಬೆಳೆಸುವುದು ಅರಣ್ಯ ಇಲಾಖೆಯ ನಿರಂತರ ಕೆಲಸ ಎಂದು ಜಿಲ್ಲಾ ಉಪಅರಣ್ಯ ಸಂರಕ್ಷಣಾಧಿಕಾರಿಗಳಾದ ಓ. ಪಾಲಯ್ಯ ಅವರು ಸಭೆಗೆ ಮಾಹಿತಿ ನೀಡಿದರು.
ಆಗಸ್ಟ್ ಮೂರರಂದು ಸಾವಿರದಷ್ಟು ಮಕ್ಕಳು, ಸುಮಾರು 500ರಷ್ಟು ಸಾರ್ವಜನಿಕರು ಹಾಗೂ ಗ್ರಾಮ ಅರಣ್ಯ ಸಮಿತಿಯ ಸದಸ್ಯರು ಸಮಾರಂಭದಲ್ಲಿ ಪಾಲ್ಗೊಳ್ಳಲಿವರು ಎಂದು ಕಾರ್ಯಕ್ರಮದ ಆಯೋಜಕರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಎನ್ ಎಂ ಪಿ ಟಿಯವರು ಈಗಾಗಲೇ 20,000 ಸಸಿಗಳನ್ನು ನೆಟ್ಟಿದ್ದಾರೆ. ಎನ್ ಎಸ್ ಎಸ್ ನವರು ವಿಶ್ವವಿದ್ಯಾನಿಲಯದಲ್ಲಿ ಸಾವಿರದಷ್ಟು ಸಸಿಗಳನ್ನು ನೆಟ್ಟಿರುವರು ಎಂದು ಎನ್ ಎಸ್ ಎಸ್ ಸಂಯೋಜಕಿ ಶ್ರೀಮತಿ ವಿನೀತಾ ರೈ ಅವರು ಸಭೆಯಲ್ಲಿ ಮಾಹಿತಿ ನೀಡಿದರು. ಎಂ ಆರ್ ಪಿಎಲ್, ಎಂಸಿಎಫ್, ಎಸ್ ಇ ಝಡ್, ಎನ್ ಎಸ್ ಎಸ್, ಎನ್ ಸಿ ಸಿ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ  ಕೆ ಎ ದಯಾನಂದ, ಮಂಗಳೂರು ಮಹಾನಗರಪಾಲಿಕೆ ಆಯುಕ್ತರಾದ ಶಾನಾಡಿ ಅಜಿತ್ ಹೆಗಡೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪದ್ಮನಾಭ ಗೌಡ,  ಆರ್ ಎಫ್ ಒ ಕ್ಲಿಫರ್ಡ್ ಲೋಬೋ ಅವರನ್ನೊಳಗೊಂಡಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Monday, July 22, 2013

ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವಿಗೆ ಕ್ರಮವಹಿಸಿ- ಜಿಲ್ಲಾಧಿಕಾರಿ

ಮಂಗಳೂರು, ಜುಲೈ.22:-ಸವೋಚ್ಛ ನ್ಯಾಯಾಲಯದ ಆದೇಶದಂತೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈಗಾಗಲೇ ನಡೆಸಿದ ಸಮೀಕ್ಷೆಯಿಂದ ಗುರುತಿಸಲಾದ 1579 ಅನಧಿಕೃತ ಧಾರ್ಮಿಕ ಕಟ್ಟಡ ಮತ್ತು ರಚನೆಗಳನ್ನು ಗುರುತಿಸಲಾಗಿದ್ದು, 332 ಕಟ್ಟಡ ಮತ್ತು ರಚನೆಗಳ ಬಗ್ಗೆ ಕ್ರಮ ಕೈಗೊಳ್ಳಲಾಗಿದ್ದು, ಸಾರ್ವಜನಿಕ ಸ್ಥಳದಲ್ಲಿದ್ದ 277 ಕಟ್ಟಡಗಳನ್ನು  ಸಾರ್ವಜನಿಕರಿಗೆ ತೊಂದರೆ ಆಗುತ್ತಿದ್ದ ಕಾರಣಕ್ಕಾಗಿ ನೆಲಸಮಗೊಳಿಸಿ ತೆರವು ಮಾಡಲಾಗಿದೆ ಎಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಹಾಗೂ ಅನಧಿಕೃತ ಧಾರ್ಮಿಕ ಕಟ್ಟಡಗಳ ತೆರವುಗೊಳಿಸುವ ಜಿಲ್ಲಾ ಮಟ್ಟದ ಸಮಿತಿ ಅಧ್ಯಕ್ಷರಾದ ಎನ್.ಪ್ರಕಾಶ್ ಅವರು ತಿಳಿಸಿದ್ದಾರೆ.
 ಅವರು ಇಂದು ತಮ್ಮ ಕಚೇರಿಯಲ್ಲಿ ಈ ಕುರಿತು ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಪ್ರಗತಿ ಪರಿಶೀಲಿಸಿದರು.
ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಜಿಲ್ಲೆಯಲ್ಲಿ  ಸಾರ್ವಜನಿಕ ರಸ್ತೆ ಉದ್ಯಾನವನ ಇತರೆಡೆಗಳಲ್ಲಿ ತಲೆ ಎತ್ತಿರುವ ಯಾವುದೇ ಅನಧಿಕೃತ ಧಾರ್ಮಿಕ ಕಟ್ಟಡ ಅಥವಾ ರಚನೆಗಳನ್ನು ಕೂಡಲೇ ಪರಿಶೀಲಿಸಿ ದಿನಾಂಕ 29-7-13 ರೊಳಗೆ ಜಿಲ್ಲಾ ಸಮಿತಿಗೆ  ಪ್ರಗತಿ ವರದಿ ಸಲ್ಲಿಸಬೇಕೆಂದು ಸಭೆಯಲ್ಲಿ ಹಾಜರಿದ್ದ ಉಪವಿಭಾಗಾಧಿಕಾರಿ ಗಳಿಗೆ ಹಾಗೂ ತಹಶೀಲ್ದಾರರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಸಾರ್ವಜನಿಕರಿಗೆ ತೊಂದರೆ ನೀಡುವ ಅನಧಿಕೃತ ಕಟ್ಟಡ ಅಥವಬಾ ರಚನೆಗಳನ್ನು ತೆರವುಗೊಳಿಸಿ ಸಾರ್ವಜನಿಕರ ಸುಗಮ ಓಡಾಟಕ್ಕೆ ಅನುವು ಮಾಡಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು. 55 ಅನಧಿಕೃತ ಧಾರ್ಮಿಕ ಕಟ್ಟಡಗಳನ್ನು ಸಾರ್ವಜನಿಕರಿಗೆ ತೊಂದರೆ ಇಲ್ಲ ಎಂಬ ಕಾಣಕ್ಕಾಗಿ ಸಕ್ರಮಗೊಳಿಸಲಾಗಿದ್ದು ಸಮಿತಿಯ ಮುಂದೆ 332 ಪ್ರಕರಣಗಳು ಇದ್ದು, 1242 ಪ್ರಕರಣಗಳು ಬಾಕಿ ಇವೆ ಎಂದು ಅಪರ ಜಿಲ್ಲಾಧಿಕಾರಿ ಕೆ.ದಯಾನಂದ ಅವರು ಸಭೆಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶ್ರೀಮತಿ ತುಳಸಿ ಮದ್ದಿನೇನಿ ಉಪಸ್ಥಿತರಿದ್ದರು.

ನಿರ್ಗತಿಕರ ರಾತ್ರಿ ವಸತಿಕೇಂದ್ರ ನಿರ್ವಹಣೆ ಹೊಣೆ ಮನಪಾಗೆ

ಮಂಗಳೂರು ಜುಲೈ, 22 :- ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ನಗರ ಪ್ರದೇಶಗಳ ನಿರ್ಗತಿಕ/ರಾತ್ರಿ ವಸತಿ ರಹಿತ ನಾಗರೀಕರಿಗಾಗಿ ನಗರದ ಶರವು ಮತ್ತು ಉರ್ವ ಸಮುದಾಯಭವನದಲ್ಲಿರುವ ವಸತಿಕೇಂದ್ರಗಳ ನಿರ್ವಹಣೆಯನ್ನು ಮಂಗಳೂರು ಮಹಾನಗರಪಾಲಿಕೆಯ  ನಗರ ಬಡತನ ನಿರ್ಮೂಲನಾ ಕೋಶದ ನೇತೃತ್ಚದಲ್ಲಿ ಮುಂದಿನ ಮೂರು ತಿಂಗಳ ಕಾಲ ನಿರ್ವಹಿಸಲು ನಿರ್ಧರಿಸಲಾಯಿತು. 
ಇಂದು ಈ ಸಂಬಂಧ ದಕಿಣ ಕನ್ನಡ ಜಿಲ್ಲಾಧಿಕಾರಿ  ಎನ್ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಎನ್ ಜಿಒಗಳು ಪಾಲ್ಗೊಂಡು ನಿರ್ವಹಣೆಯನ್ನು ಉತ್ತಮಪಡಿಸುವ ಬಗ್ಗೆ ಸವಿವರ ಚರ್ಚೆ ನಡೆಯಿತು.
ಬಂದರಿನಲ್ಲಿರುವ ಕಸಬಾ ಬಜಾರ್ ನಲ್ಲಿ ಸುಸ್ಸಜ್ಜಿತ ವಸತಿಕೇಂದ್ರ ನಿರ್ಮಾಣದ ನೀಲಿನಕಾಶೆಯನ್ನು ಸಭೆಯ ಮುಂದಿಡಲಾಯಿತು ಹಾಗೂ ಯೋಜನೆಯನ್ನು ಮುಂದುವರಿಸಲು ಸಭೆಯ ಒಪ್ಪಿಗೆಯನ್ನು ಪಡೆಯಲಾಯಿತು. ಈವರೆಗೆ ಲೀಡ್ ಎನ್ ಜಿಒ ಮತ್ತು ಇಂಪ್ಲಿಮೆಂಟಿಂಗ್ ಎನ್ ಜಿ ಒ ದಡಿ ಸುವರ್ಣ ಕರ್ನಾಟಕ ಸಂಸ್ಥೆಯು ಹೊರಗುತ್ತಿಗೆ ಪಡೆದು ವಸತಿಕೇಂದ್ರಗಳನ್ನು ನಿರ್ವಹಣೆ ಮಾಡುತ್ತಿತ್ತು. ಈ ಗುತ್ತಿಗೆಯ ಅವಧಿ ಮುಗಿದ ಹಿನ್ನಲೆಯಲ್ಲಿ, ಮೂಲಭೂತ ಸೌಕರ್ಯಗಳನ್ನು ಬಡತನ ನಿಮರ್ೂಲನಾ ಕೋಶದಿಂದಲೇ ಪಡೆದುಕೊಂಡು ಎನ್ ಜಿ ಒ ಗಳ ನೆರವಿನೊಂದಿಗೆ ಇನ್ನೂ ಉತ್ತಮ ಸೇವೆ ನೀಡುವ ನಿಟ್ಟಿನಲ್ಲಿ ಮೂರು ತಿಂಗಳ ಕಾಲ ಮಹಾ ನಗರಪಾಲಿಕೆಯ ಬಡತನ ನಿರ್ಮೂಲನಾ ಕೋಶವೇ ವಹಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಇದೇ ಸಂದರ್ಭದಲ್ಲಿ ಮಕ್ಕಳನ್ನು ದುರ್ಬಳಕೆ ಮಾಡಿಕೊಂಡು ಬಿಕ್ಷಾಟನೆ ಮಾಡುವ ಪ್ರವೃತ್ತಿ ನಗರದ ಪ್ರಮುಖ ವೃತ್ತಗಳಲ್ಲಿ ಕಂಡುಬರುತ್ತಿದ್ದು, ಇದಕ್ಕೆ ಪೊಲೀಸ್ ಇಲಾಖೆಯ ನೆರವಿನೊಂದಿಗೆ ಮಕ್ಕಳ ರಕ್ಷಣಾ ಘಟಕ ಮತ್ತು ಇತರ ಇಲಾಖೆಗಳ ನೆರವಿನೊಂದಿಗೆ ಕಟ್ಟುನಿಟ್ಟಿನ ಕ್ರಮವಾಗಬೇಕೆಂದು ಮಕ್ಕಳ ರಕ್ಷಣಾ ಘಟಕದ ಅಧ್ಯಕ್ಷರಾದ ಆಶಾ ನಾಯಕ್ ಹೇಳಿದರು.
ಅಂಧರಿಗೆ ತರಬೇತಿ ನೀಡುತ್ತಿರುವ ಸಂಸ್ಥೆಯವರು ತಮ್ಮ ಅಭಿಪ್ರಾಯ ಮಂಡಿಸಿ ತರಬೇತಿ ನೀಡಲು ಮತ್ತು ಅವರು ಉತ್ಪಾದಿಸಿದ ಉತ್ಪನ್ನ ಮಾರಾಟ ಮಾಡಲು ಜಿಲ್ಲಾಡಳಿತದ ನೆರವನ್ನು ಕೋರಿದರು. ಈ ಸಂಬಂಧ ಪೂರಕ ನೆರವು ನೀಡುವುದಾಗಿ ಜಿಲ್ಲಾಧಿಕಾರಿಗಳು ಹೇಳಿದರು. ಭಿಕ್ಷುಕರನ್ನು ಭಿಕ್ಷುಕ ಕೇಂದ್ರಕ್ಕೆ ಸೇರಿಸುವ ಬಗ್ಗೆಯೂ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅರುಣ್ ಫುರ್ಟಡೋ ಅವರಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಮುಂದಿನ ಸಭೆಯಲ್ಲಿ ಪ್ರಗತಿ ಪರಿಶೀಲನೆ ವೇಳೆ ಈ ಸಂಬಂಧ ಅಗತ್ಯ ಬಿದ್ದಲ್ಲಿ ತಿದ್ದುಪಡಿ ಮಾಡುವುದಾಗಿಯೂ ಜಿಲ್ಲಾಧಿಕಾರಿಗಳು ಹೇಳಿದರು. ಸಭೆಯಲ್ಲಿ ಆಹಾರ ಮತ್ತು ನಾಗರೀಕ ಪೂರೈಕೆ ಉಪನಿರ್ದೇಶಕರಾದ  ಶರಣಬಸಪ್ಪ, ಪಾಲಿಕೆಯ ಜಂಟಿ ಆಯುಕ್ತ ಶ್ರೀಕಾಂತ್ ಹಾಗೂ ಎನ್ ಜಿ ಒಗಳು, ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Friday, July 19, 2013

ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮ್ಯಾನ್ಯುಯೆಲ್ ಸ್ಕ್ಯಾವೆಂಜಿಂಗ್ ಇಲ್ಲ: ಆಯುಕ್ತರು


ಮಂಗಳೂರು, ಜುಲೈ.19:ಮ್ಯಾನ್ಯುಯೆಲ್ ಸ್ಕ್ಯಾವೆಂಜಿಂಗ್ ವೃತ್ತಿ ಮಾಡುತ್ತಿರುವವರು ಸ್ವಯಂ-ಘೋಷಣೆ ಮಾಡಿಕೊಳ್ಳುವ ಸಲುವಾಗಿ ಮಹಾನಗರಪಾಲಿಕೆಯಲ್ಲಿ  ಡೆಸಿಗ್ನೇಟೆಡ್ ಸೆಂಟರನ್ನು ತೆರೆದು ಮಾಹಿತಿಗಳನ್ನು ಪಡೆದುಕೊಳ್ಳಲು ವಿಶೇಷ ಸಿಬ್ಬಂದಿಗಳನ್ನು ನೇಮಕ ಮಾಡಲಾಗಿದ್ದು,ಸ್ಥಳೀಯ ದಿನಪತ್ರಿಕೆಗಳಲ್ಲಿ, ದೂರದರ್ಶನ ವಾಹಿನಿಗಳಲ್ಲಿ ಮತ್ತು ರೇಡಿಯೋಗಳಲ್ಲಿ ಪ್ರಚಾರ ಮಾಡುವುದರೊಂದಿಗೆ ಕರಪತ್ರಗಳನ್ನು ಮುದ್ರಿಸಿ ಸಾರ್ವಜನಿಕರಿಗೆ ಹಂಚಲಾಗಿ ಆದರೆ ಇಲ್ಲಿಯ ತನಕ ಯಾರೂ ಸಹ ಮ್ಯಾನ್ಯುಯೆಲ್ ಸ್ಕ್ಯಾವೆಂಜಿಂಗ್ ವೃತ್ತಿ ಮಾಡುವ ಕುರಿತು ಸ್ವಯಂ-ಘೋಷಣೆ ಮಾಡಿಕೊಳ್ಳದೇ ಇರುವುದು ಕಂಡು ಬಂದಿರುತ್ತದೆ.
ಅಷ್ಟೇ ಅಲ್ಲದೇ ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯೊಳಗಡೆ ಕಾರ್ಯ ನಿರ್ವಹಿಸುತ್ತಿರುವ ಸ್ವಯಂ-ಸೇವಾ ಸಂಸ್ಥೆಗಳ ಕಡೆಯಿಂದಲೂ ಯಾವುದೇ ರೀತಿಯಲ್ಲಿಯೂ ಸಹ ಮಾಹಿತಿಗಳು ಬಂದಿರುವುದಿಲ್ಲ.ಈಗಾಗಲೇ ಮಂಗಳೂರು ಮಹಾನಗರಪಾಲಿಕೆಯ ವ್ಯಾಪ್ತಿಯೊಳಗಡೆ ಮತ್ತು ರೈಲ್ವೆ ನಿಲ್ದಾಣಗಳಲ್ಲಿ, ಸಂಬಂಧಪಟ್ಟ ಇಲಾಖೆಗಳಿಂದ ಕಸ ಗುಡಿಸುವವರು ಅಥವಾ ಸ್ಯಾನಿಟರಿ/ಸ್ವಚ್ಛ ಮಾಡುವ ಗುತ್ತಿಗೆ ಪಡೆದುಕೊಂಡಿರುವ ಏಜೆನ್ಸಿಗಳಿಂದ ನೇಮಕಗೊಂಡಿರುವವರು ಸಫಾಯಿ ಕರ್ಮಚಾರಿಗಳು ಆಗಿರುತ್ತಾರೆ. ಇವರುಗಳು ಮ್ಯಾನ್ಯುಯೆಲ್ ಸ್ಕ್ಯಾವೆಂಜರ್ ಗಳು ಆಗಿರುವುದಿಲ್ಲ.
ಮಹಾನಗರಪಾಲಿಕೆ, ರೈಲ್ವೆ ಇಲಾಖೆ ಮತ್ತು ಇತರೆ ಸಂಸ್ಥೆಗಳಲ್ಲಿ ಗುತ್ತಿಗೆಯಾಗಿ ಪಡೆದುಕೊಂಡಿರುವ ಏಜೆನ್ಸಿಗಳಲ್ಲಿ ದುಡಿಯುತ್ತಿರುವ ಸಫಾಯಿ ಕರ್ಮಚಾರಿಗಳು ಮ್ಯಾನ್ಯುಯೆಲ್ ಸ್ಕ್ಯಾವೆಂಜಿಂಗ್ ರೀತಿಯಲ್ಲಿ ಕೆಲಸ ನಿರ್ವಹಿಸುವುದು ಕಂಡು ಬಂದಲ್ಲಿ, ನೇರವಾಗಿ ಸಂಬಂಧಪಟ್ಟ ಇಲಾಖೆ/ಸಂಸ್ಥೆಗಳು ಗುತ್ತಿಗೆ ಪಡೆದಿರುವ ಏಜೆನ್ಸಿಯವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಮತ್ತು ತಕ್ಷಣಕ್ಕೆ ಜಾರಿ ಬರುವಂತೆ ಕಪ್ಪು ಪಟ್ಟಿಯಲ್ಲಿ ಸೇರಿಸುವುದಕ್ಕೆ ಕ್ರಮಕೈಗೊಳ್ಳುವುದಾಗಿ ಮಹಾನಗರಪಾಲಿಕೆಯ ಆಯುಕ್ತರು ತಿಳಿಸಿರುತ್ತಾರೆ.
 

Wednesday, July 17, 2013

ಹದಿಹರೆಯದ ಮಕ್ಕಳ ದೈಹಿಕ ಹಾಗೂ ಮಾನಸಿಕ ಆರೋಗ್ಯಕ್ಕೆ ಕಬ್ಬಿಣಾಂಶ ಮಾತ್ರೆ ಅಗತ್ಯ -ಎನ್.ಪ್ರಕಾಶ್

ಮಂಗಳೂರು, ಜುಲೈ.17:-ಮಕ್ಕಳಲ್ಲಿ ಕಂಡು ಬರುವ ರಕ್ತ ಹೀನತೆಯಿಂದ ಅವರ ಕಲಿಕಾ ಏಕಾಗ್ರತೆಗೆ ಭಂಗವುಂಟಾಗಿ ದೈಹಿಕ ತೊಂದರೆಗೊಳಗಾಗುತ್ತಾರೆ. ಇವೆಲ್ಲವನ್ನು ಹೋಗಲಾಡಿಸಲು ಅವರಿಗೆ ಸೂಕ್ತವಾದ ಕಬ್ಬಿಣಾಂಶಯುತ ಮಾತ್ರೆಗಳನ್ನು ನೀಡಬೇಕಾದ ಆವಶ್ಯಕತೆ ಇದೆಯೆಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಎನ್.ಪ್ರಕಾಶ್ ಅಭಿಪ್ರಾಯ ಪಟ್ಟರು.
                  ಅವರು ಇಂದು ನಗರದ ಅತ್ತಾವರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಜಿಲ್ಲಾ ಆಡಳಿತ,ಜಿಲ್ಲಾ ಪಂಚಾಯತ್,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ, ಕಬ್ಬಿಣಾಂಶಯುತ ಮಾತ್ರೆಗಳ(ಡಬ್ಲ್ಯು.ಐ.ಎಫ್.ಎಸ್.)ವಿತರಣಾ ಕಾರ್ಯಕ್ರಮವನ್ನು ಮಕ್ಕಳಿಗೆ ಮಾತ್ರೆ ನುಂಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
          ಇಂದಿನ ಮಕ್ಕಳೇ ಮುಂದಿನ ಸಬಲ ಪ್ರಜೆಗಳು ಎಂಬುದನ್ನು ಕಾರ್ಯಗತಗೊಳಿಸಲು ಇದೊಂದು ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ಜಿಲ್ಲೆಯಲ್ಲಿ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕೆಂದು ಜಿಲ್ಲಾಧಿಕಾರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತಿಯ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷರಾದ ಶ್ರೀಮತಿ ಆಶಾ ತಿಮ್ಮಪ್ಪ ಗೌಡ ಅವರು ಮಾತನಾಡಿ,ಶಾಲಾ ಮಕ್ಕಳಿಗೆ ಮಾತ್ರೆಯನ್ನು ಮನೆಗೆ ಕೊಂಡು ಹೋಗಲು ಬಿಡದೆ ಶಾಲೆಯಲ್ಲೇ ಪ್ರತಿ ವಾರ ಮಾತ್ರೆ ನುಂಗಿಸುವಂತೆ ಶಿಕ್ಷಕರಿಗೆ ತಿಳಿಸಿದರು.
 ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ.ರುಕ್ಮಿಣಿ, ಮಕ್ಕಳಲ್ಲಿ ಕಬ್ಬಿಣಾಂಶ ಕೊರತೆ ನೀಗಿಸಲು ವಾರಕ್ಕೆ ಒಂದರಂತೆ 52 ವಾರ ಮಾತ್ರೆಯನ್ನು ನುಂಗಿಸುವ ಆವಶ್ಯಕತೆ ಇದೆ. ಈ ಮಾತ್ರೆಗಳು ರೋಗಕ್ಕೆ ಚಿಕಿತ್ಸೆಯ ಬದಲಾಗಿ ಇದೊಂದು ರೋಗ ನಿರೋಧಕ ಕಾರ್ಯಕ್ರಮ ಅಷ್ಟೆ ಎಂದರು.
       ಸಮಾರಂಭದ ಅಧ್ಯಕ್ಷತೆಯನ್ನು ಕಾರ್ಪೋರೇಟರ್ ಅಬ್ದುಲ್ ರಾವೂಫ್ ವಹಿಸಿದ್ದರು. ಜಿಲ್ಲಾ ವಿದ್ಯಾಂಗ ಉಪನಿರ್ದೇಶಕರಾದ ಮೊಸೆಸ್ ಜಯಶೇಖರ್, ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ ರಾವ್ ಮುಂತಾದವರು ಹಾಜರಿದ್ದರು.

Monday, July 15, 2013

`ಸಕಾಲ'ಕ್ಕೆ 110 ಸೇವೆಗಳ ಸೇರ್ಪಡೆ: ಡಾ. ಶಾಲಿನಿ ರಜನೀಶ್

ಮಂಗಳೂರು,ಜುಲೈ.15: ಕಾಲಮಿತಿಯೊಳಗೆ ಸಾರ್ವಜನಿಕರಿಗೆ ನೀಡುವ ಸೇವೆ `ಸಕಾಲ' ಕ್ಕೆ ಹೊಸದಾಗಿ 110 ಸೇವೆಗಳನ್ನು ಸೇರ್ಪಡೆಗೊಳಿಸಲಾಗುತ್ತಿದೆ ಎಂದು ಸರಕಾರದ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಶಾಲಿನಿ ರಜನೀಶ್ ಹೇಳಿದ್ದಾರೆ.
 ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನು ಮುಂದೆ ಸಾರ್ವಜನಿಕರಿಗೆ 21 ಇಲಾಖೆಗಳ 375 ಸೇವೆಗಳನ್ನು ಸಕಾಲದ ಮೂಲಕ ಒದಗಿಸಲಾಗುವುದು. ಇದರಲ್ಲಿ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿ 76 ಸೇವೆಗಳು, ರೇಶ್ಮೆ ಇಲಾಖೆ 5, ಗ್ರಂಥಾಲಯ 2 ಹಾಗೂ ಮಾರುಕಟ್ಟೆ ಇಲಾಖೆಗೆ ಸಂಬಂಧಿಸಿ ಒಂದು ಸೇವೆಯನ್ನು ಒದಗಿಸಲಾಗುವುದು. ಇದರ ಅನುಷ್ಠಾನಕ್ಕಾಗಿ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಈಗಾಗಲೇ ಅಧಿಕಾರಿಗಳಿಗೆ ಒಂದು ತಿಂಗಳ  ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಸಕಾಲ ಯೋಜನೆ ಪ್ರಾರಂಭಿಕ ಹಂತದಲ್ಲಿ ಸಮಗ್ರವಾಗಿ ಜನರಿಗೆ ಮುಟ್ಟಿರಲಿಲ್ಲ. ಈ ಹಿನ್ನೆಲೆಯಲ್ಲಿ ಇಲಾಖೆ ಇದೀಗ `ಹೆಲ್ಪ್ ಡೆಸ್ಕ್' ಪ್ರಾರಂಭಿಸಿದ್ದು, ಇದುವರೆಗೆ 25,000 ಮಂದಿ ಇದರ ಪ್ರಯೋಜನ ಪಡೆದುಕೊಂಡಿದ್ದಾರೆ
ರಾಜ್ಯದಲ್ಲಿ ಇದುವರೆಗೆ 2.84 ಕೋಟಿ ವಿವಿಧ ಅರ್ಜಿಗಳು ಸ್ವೀಕಾರ ಆಗಿದ್ದು ಈ  ಪೈಕಿ 2.75 ಕೋಟಿ ಅರ್ಜಿಗಳ ವಿಲೇವಾರಿ ಆಗಿದೆ. ದಕ್ಷಿಣ ಕನ್ನಡದಲ್ಲಿ 9,64,555 ಅರ್ಜಿಗಳ ಪೈಕಿ 9,39,401 ಅರ್ಜಿಗಳು ವಿಲೇವಾರಿ ಆಗಿದೆ ಎಂದವರು ತಿಳಿಸಿದರು.
 ಆನ್ಲೈನ್ ಸೇವೆಗೆ ಆದ್ಯತೆ
ಸರಕಾರಿ ಸೇವೆಗಳನ್ನು ಆನ್ ಲೈನ್ ಮೂಲಕ ನಿರ್ವಹಿಸಲು ಆದ್ಯತೆ ನೀಡಲಾಗುತ್ತಿದೆ. ಸದ್ಯ 31 ಸೇವೆಗಳಷ್ಟೇ ಆನ್ ಲೈನ್ ಮೂಲಕ ನಿರ್ವಹಿಸಲಾಗುತ್ತಿದೆ. ಆ.16ರಿಂದ 21 ಇಲಾಖೆಗಳ 375 ಸೇವೆಗಳನ್ನು ಆನ್ಲೈನ್ನಲ್ಲಿ ಸೇರ್ಪಡೆಗೊಳಿಸಲಾಗುವುದು. ಅಲ್ಲದೆ ಕಂಪ್ಯೂಟರ್ ಕೇಂದ್ರಗಳನ್ನು ಹೊಂದಿರುವವರು ಮುಂದೆ ಬಂದರೆ ಅವರಿಗೆ ಸಕಾಲದ ಯೋಜನೆಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿ ಅವರಿಂದಲೇ ಅರ್ಜಿ ಸಲ್ಲಿಸುವಿಕೆಯನ್ನು ನಿರ್ವಹಿಸುವ ಬಗ್ಗೆ ಆದ್ಯತೆ ನೀಡಲಾಗುತ್ತಿದೆ ಎಂದು ಶಾಲಿನಿ ರಜನೀಶ್ ತಿಳಿಸಿದರು.
ವಿನೂತನವನ್ನು ಈ ಯೋಜನೆಯಡಿ ಅಳವಡಿಸಲು ಉದಾಹರಣೆಗೆ ಪಡಸಾಲೆಯಂತಹ  ನಿರ್ಮಾಣಗಳಿಗೆ (ಫೆಸಿಲಿಟೇಷನ್ ಸೆಂಟರ್) ಅಥವಾ ಯೋಜನೆಗಳಿಗೆ ರೂ. 1 ಕೋಟಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರತಿ ಜಿಲ್ಲೆಯಲ್ಲಿ ಪಡಸಾಲೆ ನಿರ್ಮಾಣ ಅಥವಾ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ರೂ. 1 ಕೋಟಿಯನ್ನು ಸದ್ಬಳಕೆ ಮಾಡಬಹುದಾಗಿದೆ. ಸರಕಾರದ ಸೇವೆಗಳು ಸಾರ್ವಜನಿಕರಿಗೆ ತಲುಪುವಲ್ಲಿ ಅಗತ್ಯ ವ್ಯವಸ್ಥೆ ಕಲ್ಪಿಸಲು ಈ ಹಣ ಬಳಕೆಯಾಗಲಿದೆ.

Sunday, July 14, 2013

ಸಿಂಥೆಟಿಕ್ ಟ್ರ್ಯಾಕ್ ವೀಕ್ಷಿಸಿದ ಪಿ ಟಿ ಉಷಾ

ಮಂಗಳೂರು,ಜೂನ್ 14: ಉತ್ತಮ ಕ್ರೀಡಾಪಟುಗಳನ್ನು ರೂಪಿಸಲು ಸರ್ಕಾರದ ಮೂಲಭೂತ ಸೌಕರ್ಯಗಳ ಜೊತೆಗೆ ಅರಳು ಕ್ರೀಡಾ ಪ್ರತಿಭೆಗಳಲ್ಲಿ ಸಾಧಿಸುವ ಛಲವಿರಬೇಕೆಂದು ಪಯ್ಯೋಳಿ ಎಕ್ಸ್ ಪ್ರೆಸ್ ಖ್ಯಾತಿಯ  ಪಿ ಟಿ ಉಷಾ ಹೇಳಿದರು.
      ಅವರಿಂದು ನಗರದ ಮಂಗಳಾ ಸ್ಟೇಡಿಯಂ ಗೆ ಸಿಂಥೆಟಿಕ್ ಟ್ರ್ಯಾಕ್ ವೀಕ್ಷಿಸಲು ಆಗಮಿಸಿದ ಬಳಿಕ ಮಾತನಾಡುತ್ತಿದ್ದರು. ತಾವು ತರಬೇತಿ ನೀಡುತ್ತಿರುವ ಕ್ರೀಡಾಪಟುಗಳನ್ನು ಮೈಸೂರಿನ ಇನ್ ಫೋಸಿಸ್ ಸಂಸ್ಥೆಯ ಸಿಂಥೆಟಿಕ್ ಕ್ರೀಡಾಂಗಣಕ್ಕೆ ತರಬೇತಿಗೊಯ್ಯುತ್ತಿದ್ದು, ಭವಿಷ್ಯದಲ್ಲಿ ನಗರದ ಸ್ಟೇಡಿಯಂಗೆ ತಮ್ಮ ತರಬೇತುದಾರರೊಂದಿಗೆ ಆಗಮಿಸಲು ಅವಕಾಶವಿದೆ ಎಂದರು. ಎಲ್ಲ ಜಿಲ್ಲೆಗಳಲ್ಲೊಂದು ಸಿಂಥೆಟಿಕ್ ಕ್ರೀಡಾಂಗಣದ ಅಗತ್ಯವಿದೆ ಎಂದ ಅವರು, ಕ್ರೀಡಾ ಸೌಕರ್ಯಗಳ ಸದುಪಯೋಗದಿಂದ ಉತ್ತಮ ಕ್ರೀಡಾಪಟುಗಳು ದೇಶಕ್ಕೆ ಲಭ್ಯವಾಗಲಿದೆ ಎಂದರು.
ಭಾರತೀಯ ಅಥ್ಲೀಟ್ ಗಳ ಸಾಧನೆ ಇನ್ನಷ್ಟು ಹೆಚ್ಚಬೇಕಿದೆ ಎಂದು ಹೇಳಿದ ಅವರು, ಮಂಗಳಾ ಕ್ರೀಡಾಂಗಣ ಉತ್ತಮವಾಗಿ ಮೂಡಿಬಂದಿದೆ ಎಂದರು. ಅಶ್ವಿನಿ ಅಕ್ಕುಂಜಿಯ ಬಗ್ಗೆ ಪ್ರತಿಕ್ರಿಯಿಸುತ್ತಾ, ಸಣ್ಣ ಸಣ್ಣ ತಪ್ಪುಗಳಿಂದ ಕಲಿತು ಸಾಧಿಸಬೇಕು; ಸಣ್ಣ ತಪ್ಪುಗಳಿಂದ ನಿರಾಶೆ ನಿರುತ್ಸಾಹ ಸಲ್ಲದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ  ಎನ್ ಪ್ರಕಾಶ್, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಪಾಶ್ರ್ವನಾಥ್ ಉಪಸ್ಥಿತರಿದ್ದರು. ಸಿಂಥೆಟಿಕ್ ಟ್ರ್ಯಾಕ್ ಉತ್ತಮವಾಗಿ ಮೂಡಿಬಂದಿದ್ದು, ಜಿಲ್ಲಾಡಳಿತ ಇನ್ನುಳಿದಿರುವ ಕೆಲಸಗಳನ್ನು ಇತರೆ ವೆಚ್ಚಗಳಡಿ ಸಂಪೂರ್ಣಗೊಳಿಸಲಿದೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.

Friday, July 12, 2013

ಆನೆಗಳ ಉಪಟಳ, 15 ಲಕ್ಷ ರೂ. ಪರಿಹಾರ

ಮಂಗಳೂರು, ಜುಲೈ.12:- ವಿವಿಧ ಕಾರಣಗಳಿಂದ ಮಾನವ ಹಾಗೂ ಕಾಡುಪ್ರಾಣಿಗಳ ನಡುವಿನ ಸ0ಘರ್ಷದಿಂದ  ಸಂಭವಿಸಿದ ದುರಂತಕ್ಕೆ ಪರಿಹಾರವಾಗಿ ದಕ್ಷಿಣ  ಕನ್ನಡ ಜಿಲ್ಲೆಯಲ್ಲಿ ಕಳೆದ 2011-12 ಮತ್ತು 2012-13 ರ ಸಾಲಿನಲ್ಲಿ ಒಟ್ಟು 66 ಪ್ರಕರಣಗಳಿಗೆ ಅರಣ್ಯ ಇಲಾಖೆಯಿಂದ ನೆರವು ನೀಡಲಾಗಿದೆ. ಕಾಡಾನೆಗಳು ರೈತರ ಬೆಳೆಗಳಿಗೆ ನಷ್ಟವು0ಟು ಮಾಡಿ ಆಸ್ತಿಪಾಸ್ತಿಗಳಿಗೆ ಹಾನಿಮಾಡಿವೆ ಹಾಗೂ ಇಬ್ಬರು ವ್ಯಕ್ತಿಗಳ ಮರಣ ಸಂಭವಿಸಿದ್ದು,  ಇದಕ್ಕಾಗಿ  ಅರಣ್ಯ ಇಲಾಖೆ  ಒಟ್ಟು ರೂ. 15,30,967 ಗಳ  ಪರಿಹಾರವನ್ನು ನೀಡಿದೆ.
    2011-12ರ ಸಾಲಿನಲ್ಲಿ ಜಿಲ್ಲೆಯ ಗ್ರಾಮಗಳಾದ ಕೊಲ್ಲಮೊಗರು, ಚಾಮರ್ಾಡಿ, ಕಡಿರುದ್ಯಾವರ, ಬಾಳುಗೋಡು,  ಕೊಂಬಾರು,  ಕೊಣಾಜೆ,   ತೋಟತ್ತಾಡಿ,  ನೂಜಿಬಾಳ್ತಿಲ, ದೇವಚಳ್ಳ, ಅಲೆಟ್ಟಿ ಮತ್ತು ಮಂಡೆಕೋಲುಗಳಲ್ಲಿ ಆನೆಗಳ ಹಾವಳಿಯಿಂದ ಬೆಳೆ ನಾಶವಾದ 20 ಪ್ರಕರಣಗಳು ದಾಖಲಿಸಿದ್ದು ಇದಕ್ಕಾಗಿ  ಸಕರ್ಾರ ಅರಣ್ಯ ಇಲಾಖೆ ಮೂಲಕ 1,71,801 ರೂ ಗಳ ಪರಿಹಾರ ವಿತರಿಸಿದೆ.
   2012-13 ನೇ ಸಾಲಿನಲ್ಲಿ ಚಾರ್ಮಾಡಿ, ಕಲ್ಮಡ್ಕ, ಕೆಲಿಮಂಜ, ಸುಬ್ರಹ್ಮಣ್ಯ, ಮಡಪಾಡಿ, ಸ0ಪಾಜೆ, ನೆಲ್ಯಾಡಿ, ಕೌಕ್ರಾಡಿ, ಹತ್ಯಡ್ಕ, ಕೊಂಬಾರು, ರೆಕಿಯಾ, ಕೊಲ್ಲಮೊಗ್ರು, ಹರಿಹರಪಲ್ಲತಡ್ಕ, ಕೋಡಿಂಬಾಳ, ಕಳಂಜ, ಕೊಣಾಜೆ, ನೂಜಿಬಾಳ್ತಿಲ, ದೇವಚಳ್ಳ, ಅಲೆಟ್ಟಿ ಹಾಗೂ ಮಂಡೆಕೋಲು ಗ್ರಾಮಗಳಲ್ಲಿ ಆನೆ ಉಪಟಳದಿಂದ ಬೆಳೆನಷ್ಟದ 46 ಪ್ರಕರಣಗಳು ದಾಖಲಾಗಿ ರೂ 4,59,030 ಗಳನ್ನು ನಷ್ಟ ಪರಿಹಾರವಾಗಿ ನೀಡಲಾಗಿದೆ. ಇದೇ ಅವಧಿಯಲ್ಲಿ ಇಬ್ಬರು ವ್ಯಕ್ತಿಗಳನ್ನು ಆನೆ ಕೊಂದು ಹಾಕಿದ್ದು, ಇವರ ಕುಟುಂಬದವರಿಗೆ ಒಟ್ಟು 9,00,000 ಲಕ್ಷ ರೂಗಳ ಪರಿಹಾರವನ್ನು ಅರಣ್ಯ ಇಲಾಖೆಯಿ0ದ ಕೊಡಮಾಡಲಾಗಿದೆ.

ಪುತ್ತೂರು ಬಾಲವನಕ್ಕೆ ಜಿಲ್ಲಾಧಿಕಾರಿ ಭೇಟಿ

ಮಂಗಳೂರು ಜುಲೈ 12:- ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್ ಪ್ರಕಾಶ್ ಅವರು ಇಂದು ಪುತ್ತೂರಿನ ಕಾರಂತ ಬಾಲವನಕ್ಕೆ ಭೇಟಿ ನೀಡಿ ಇತ್ತೀಚಿಗಿನ ಅಭಿವೃದ್ಧಿ ಕಾರ್ಯಗಳನ್ನು ಪರಿಶೀಲಿಸಿ ಪ್ರಶಂಸೆಯನ್ನು ವ್ಯಕ್ತಪಡಿಸಿದರು.
ಬಾಲವನದಲ್ಲಿ ಇತ್ತೀಚೆಗೆ ಲೋಕಾರ್ಪಣೆಗೊಂಡ ಕಲಾ ಗ್ಯಾಲರಿ ಅದ್ಭುತವಾಗಿದ್ದು, ಜೀವನದ ಜಂಜಾಟ ಮರೆತು ಹೊಸ ಸುಂದರ ಲೋಕಕ್ಕೆ ಕೊಂಡೊಯ್ಯುವಷ್ಟು ಸುಂದರವಾಗಿದೆ ಎಂದರು. ಇದನ್ನು ರಾಜ್ಯದ ಒಂದು ಪ್ರವಾಸಿ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಪುತ್ತೂರಿನ ಸಹಾಯಕ ಆಯುಕ್ತರು ರೂಪಿಸಿರುವ ಯೋಜನೆಗಳಿಗೆ ಎಲ್ಲ ಸಹಕಾರ ನೀಡುವುದಾಗಿ ಹೇಳಿದ ಜಿಲ್ಲಾಧಿಕಾರಿಗಳು ಅಭಿವೃದ್ಧಿ ಹಾಗೂ ಸಂರಕ್ಷಣೆ ಸಂಬಂಧ ಎಸಿ ಪ್ರಸನ್ನ ಅವರೊಂದಿಗೆ ಚರ್ಚೆ ನಡೆಸಿದರು.
ಪೂರ್ವಾಹ್ನ ಸುಳ್ಯದ ತಹಸೀಲ್ದಾರ್ ಕಚೇರಿಗೆ ಭೇಟಿ ನೀಡಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವಂತೆ ಹಾಗೂ ಯಾವುದೇ ದೂರುಗಳು ಬಾರದಂತೆ ಕಚೇರಿಯ ಸಿಬ್ಬಂದಿ ಮತ್ತು ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕೆಂದು ಸೂಚನೆ ನೀಡಿದರು. ಕಚೇರಿಯನ್ನು ಪರಿಶೀಲಿಸಿದರು. ಕಡತ ವಿಲೇವಾರಿ ನಿಗದಿತ ಸಮಯದಲ್ಲಾಗಬೇಕು ಇಲ್ಲದಿದ್ದಲ್ಲಿ ಕಠಿಣ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದರು.
 ನಗರಪಂಚಾಯತ್ನ ಘನತ್ಯಾಜ್ಯ ವಿಲೇ ನಿರ್ವಹಣೆಗೆ ಮೀಸಲಿಟ್ಟ ಜಾಗವನ್ನು ವ್ಯವಸ್ಥಿತ ನಿರ್ವಹಣೆ ಮಾಡುವಂತೆ ಇಂಜಿನಿಯರ್ ಗೆ ಸೂಚನೆ ನೀಡಿದ ಜಿಲ್ಲಾಧಿಕಾರಿಗಳು, ವೈಜ್ಞಾನಿಕವಾಗಿ ಹಾಗೂ ಸುತ್ತಮುತ್ತಲ ಜನರಿಗೆ ತ್ಯಾಜ್ಯ ವಿಲೇಯಿಂದ ಯಾವುದೇ ತೊಂದರೆಯಾಗದಂತೆ ನಿರ್ವಹಿಸಿ ವರದಿ ನೀಡಲು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.  ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಪುತ್ತೂರು ಪ್ರಸನ್ನ ಕುಮಾರ್ ಹಾಗೂ ತಹಸೀಲ್ದಾರ್ ಅವರು ಜಿಲ್ಲಾಧಿಕಾರಿ ಜೊತೆಗಿದ್ದರು.

Thursday, July 11, 2013

ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಕಾಲಮಿತಿ ನಿಗದಿಪಡಿಸಿ: ಜಿಲ್ಲಾ ಉಸ್ತುವಾರಿ ಸಚಿವರು

ಮಂಗಳೂರು, ಜುಲೈ.11:- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಗಾಲ ಸಮೃದ್ಧವಾಗಿದ್ದರೂ, ಬೇಸಿಗೆಯಲ್ಲಿ ಜಿಲ್ಲೆಯ ಕೆಲವು ತಾಲೂಕುಗಳಲ್ಲಿ ಕುಡಿಯುವ ನೀರಿಗೆ ತೀವ್ರ ಬರವನ್ನು ಎದುರಿಸುವ ಪರಿಸ್ಥಿತಿಯಿದೆ. ಹಾಗಾಗಿ ಜಿಲ್ಲೆಗೆ ಈಗಾಗಲೇ ಮಂಜೂರು ಮಾಡಿರುವ ಬಹುಗ್ರಾಮ ಕುಡಿಯವ ನೀರು ಯೋಜನೆಗಳನ್ನು ಕಾಲಮಿತಿಯೊಳಗೆ ಅನುಷ್ಠಾನಕ್ಕೆ ತನ್ನಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ ರೈ ಸೂಚಿಸಿದರು.
ಇಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಆಯೋಜಿಸಲಾದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಅವರು ಅಧಿಕಾರಿಗಳಿಗೆ ಈ ಸೂಚನೆ ನೀಡಿದರು. ಜಿಲ್ಲೆಗೆ ಬಂದ 14 ಹೊಸ ಯೋಜನೆಗಳಲ್ಲಿ ಹತ್ತು ಯೋಜನೆಗಳಿಗೆ ಡಿ ಎಸ್ ಆರ್ ತಯಾರಾಗಿದ್ದು, ಎಲ್ಲ ಯೋಜನೆಗಳನ್ನು ಮುಗಿಸಿ ಮುಖ್ಯ ಇಂಜಿನಿಯರ್ ಗೆ ಸಲ್ಲಿಸಲಾಗುವುದು ಎಂದು ಅಧಿಕಾರಿಗಳು ನೀಡಿದ ಮಾಹಿತಿಯನ್ನು ಒಪ್ಪದ ಜಿಲ್ಲಾ ಉಸ್ತುವಾರಿ ಸಚಿವರು, ಯೋಜನೆ ಅನುಷ್ಠಾನ ಹಾಗೂ ಫಲಿತಾಂಶದ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ಕಾಲಮಿತಿಯೊಳಗೆ ಯೋಜನೆಗಳು ಅನುಷ್ಠಾನಗೊಂಡು ಜನರಿಗೆ ಉಪಯೋಗ ಲಭಿಸಬೇಕೆಂದರು.
ಜಿಲ್ಲೆಯಲ್ಲಿ ಇಂತಹ ಯೋಜನೆಗೆ ವಿಫುಲ ಅವಕಾಶವಿದ್ದು, ಇವುಗಳ ಸದ್ಬಳಕೆಯಾಗಬೇಕು. ಹಾಗಾಗಿ ಪರಿಸರ ಪರ ಸುಸ್ಥಿರ ಕುಡಿಯುವ ನೀರು ಯೋಜನೆಯನ್ನು ಹೆಚ್ಚಿನ ಮುತುವರ್ಜಿ ವಹಿಸಿ ಅನುಷ್ಠಾನಕ್ಕೆ ತನ್ನಿ ಎಂದರು.
ಮೂಡಬಿದ್ರೆ ಕ್ರೀಡಾಂಗಣ ನೂರು ಲಕ್ಷ ರೂ. ಅಂದಾಜು ವೆಚ್ಚದಲ್ಲಿ ಹೊಸ ಯೋಜನೆ ರೂಪಿಸಲಾಗಿದ್ದು, ಕಾಮಗಾರಿ ಆರಂಭಿಸಲಾಗಿದೆ ಎಂದು ಲೋಕೋಪಯೋಗಿ ಇಲಾಖೆ ಅಧಿಕಾರಿ  ಹೇಳಿದರು. ಎಡಿಬಿ ಯೋಜನೆಯಡಿ ಉಳ್ಳಾಲ, ಉಡುಪಿ ಸಮುದ್ರ ತೀರದ ಜೊತೆಗೆ ಮೂಡಬಿದ್ರೆಯ ಸಸಿಹಿತ್ಲು, ಸುರತ್ಕಲ್ ಮುಕ್ಕ ಪ್ರದೇಶಗಳನ್ನು ಸೇರಿಸಿ ಎಂದು ಯೋಜನಾ ನಿರ್ದೇಶಕರಿಗೆ ಸಚಿವರು ಸೂಚಿಸಿದರು.
ವಸತಿಯೋಜನೆಯಲ್ಲಿ ನಿರೀಕ್ಷಿತ ಗುರಿ ಸಾಧಿಸುವಲ್ಲಿ ವಿಫಲರಾದರೆ ಸಂಬಂದಪಟ್ಟ ಕಾರ್ಯ ನಿರ್ವಹಣಾಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವುದಾಗಿಯೂ ಸಚಿವರು ಹೇಳಿದರು.
ಬಡ ಗರ್ಭಿಣಿಯರು ಹಾಗೂ ಬಾಣಂತಿಯರಿಗೆ ಪೌಷ್ಟಿಕತೆಯಿಂದ ಪಾರಾಗಲು  ಸರ್ಕಾರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಕೊಡಮಾಡುತ್ತಿರುವ ಪೌಷ್ಠಿಕಾಹಾರ ವಿತರಣೆ 2013-14ನೇ ಸಾಲಿನಲ್ಲಿ 25015 ಜನರಿಗೆ ವಿತರಿಸುವ ಗುರಿಯನ್ನು ಹಮ್ಮಿಕೊಂಡು 2013 ರ ಜೂನ್ ಅಂತ್ಯಕ್ಕೆ ಶೇಕಡಾ 100 ರಷ್ಟು ಸಾಧನೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿದ್ದ ಅರಣ್ಯ ಹಾಗೂ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ರಮಾನಾಥ ರೈ ಅವರಿಗೆ ಈ ಮಾಹಿತಿಯನ್ನು ನೀಡಲಾಯಿತು.
0-3 ವಯೋಮಾನದ 54901 ಮಕ್ಕಳಿಗೆ ಹಾಗೂ 3-6 ವಯೋಮಾನದ 43043 ಮಕ್ಕಳಿಗೆ ಪೌಷ್ಠಿಕಾಹಾರ ಹಂಚುವ ವಾಷರ್ಿಕ ಗುರಿ ಇದ್ದು,ಜೂನ್ ಅಂತ್ಯದವರೆಗೆ 53275 -0-3 ವರ್ಷದೊಳಗಿನ ಹಾಗೂ 32927 3-6 ವರ್ಷದೊಳಗಿನ ಮಕ್ಕಳಿಗೆ ಪೌಷ್ಠಿಕಾಹಾರ ವಿತರಿಸುವ ಮೂಲಕ ಕ್ರಮವಾಗಿ ಶೇಕಡಾ 97 ಹಾಗೂ ಶೇಕಡಾ 76 ರಷ್ಟು ಗುರಿ ಸಾಧಿಸಲಾಗಿದೆ ಎಂದು ಸಚಿವರ ಅವಗಾಹನೆಗೆ ತರಲಾಯಿತು.
ರಾಷ್ಟ್ರೀಯ ಮಲೇರಿಯಾ ನಿಯಂತ್ರಣ ಕಾರ್ಯಕ್ರಮದನ್ವಯ 84930 ಜನರ ರಕ್ತ ಪರೀಕ್ಷೆ ನಡೆಸಿದ್ದು 1290 ಜನರಿಗೆ ಮಲೇರಿಯಾ ಸೋಂಕು ಇರುವ ಬಗ್ಗೆ ಖಚಿತ ಪಟ್ಟಿದೆಯೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳು ತಿಳಿಸಿದರು.
ಕ್ಷಯ ನಿಯಂತ್ರಣ ಕಾರ್ಯಕ್ರಮದನ್ವಯ ಎಪಿಲ್ ನಿಂದ ಜೂನ್ ಅಂತ್ಯದ ವರೆಗೆ 425 ಹೊಸ ಕ್ಷಯ ರೋಗಿಗಳನ್ನು ಪತ್ತೆ ಹಚ್ಚಲಾಗಿದೆ.4672 ಜನರ ಕಫ ಪರೀಕ್ಷೆ ಮಾಡಲಾಗಿದ್ದು ಮೇಲ್ಕಂಡ ಅವಧಿಯಲ್ಲಿ 148 ಕ್ಷಯ ರೋಗಿಗಳು ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಎಂಬ ಮಾಹಿತಿಯನ್ನು ಸಚಿವರಿಗೆ ತಿಳಿಸಲಾಯಿತು.
12 ಜನರು ಕುಷ್ಠ ರೋಗಿಗಳನ್ನು ಪತ್ತೆ ಹಚ್ಚಲಾಗಿದ್ದು  8 ಕುಷ್ಟ  ರೋಗಿಗಳು ರೋಗ ಮುಕ್ತರಾಗಿದ್ದಾರೆ. ಜನನಿ ಸುರಕ್ಷಾ ಯೋಜನೆಯಲ್ಲಿ 1673 ಫಲಾನುಭವಿಗಳಿಗೆ ಹಾಗೂ ಪ್ರಸೂತಿ ಆರೈಕೆ ಮತ್ತು ತಾಯಿ ಭಾಗ್ಯ ಯೊಜನೆಯಲ್ಲಿ 1582 ಫಲಾನುಭವಿಗಳಿಗೆ ಸೌಲಭ್ಯ ದೊರಕಿಸಲಾಗಿದೆ.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೊರಗಪ್ಪ ನಾಯಕ್, ಸ್ಥಾಯಿಸಮಿತಿ ಅಧ್ಯಕ್ಷರಾದ ಶ್ರೀಮತಿ ಕಸ್ತೂರಿ ಪಂಜ, ಜಿಲ್ಲಾಧಿಕಾರಿ  ಎನ್ ಪ್ರಕಾಶ್, ಪೊಲೀಸ್ ಕಮಿಷನರ್ ಮನಿಷ್ ಕರ್ಬಿಕರ್, ಎಸ್ ಪಿ ಅಭಿಷೇಕ್ ಗೋಯಲ್, ಪಾಲಿಕೆ ಆಯುಕ್ತರಾದ ಶಾನಾಡಿ ಅಜಿತ್ ಹೆಗ್ಡೆ ಉಪಸ್ಥಿತರಿದ್ದರು.

ದೇಶದ ಅಭಿವೃದ್ಧಿಗೆ ಜನಸಂಖ್ಯಾ ಸ್ಪೋಟ ತಡೆ ಎಲ್ಲರ ಜವಾಬ್ದಾರಿಯಾಗಬೇಕು:ರಮಾನಾಥ ರೈ

ಮಂಗಳೂರು, ಜುಲೈ.11:-ಒಂದೇ ಸಮನೆ ಏರುತ್ತಿರುವ ಜನಸಂಖ್ಯೆ ದೇಶದ ಪ್ರಗತಿಗೆ ಮಾರಕವಾಗಿದ್ದು, ಜನಸಂಖ್ಯಾ ಸ್ಪೋಟವನ್ನು  ತಡೆಯುವುದು ಪ್ರತಿಯೊಬ್ಬರು ತಮ್ಮ ಜವಾಬ್ದಾರಿ ಎಂದು ಅರಿತು ಮುಂದಾಗಬೇಕೆಂದು ರಾಜ್ಯ ಅರಣ್ಯ ಖಾತೆ ಸಚಿವರು ಹಾಗೂ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ರಮಾನಾಥ ರೈ ತಿಳಿಸಿದ್ದಾರೆ.
ಅವರು ಇಂದು ಜಿಲ್ಲಾ ವೆನ್ಲಾಕ್ ಮಕ್ಕಳ ಆಸ್ಪತ್ರೆಯಲ್ಲಿ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಇಂದು ಏರ್ಪಡಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ 2013 ನ್ನು ಉದ್ಘಾಟಿಸಿ ಮಾತನಾಡಿದರು.
ಜನಸಂಖ್ಯಾ ಸ್ಪೋಟಕ್ಕೆ ನಮ್ಮಲ್ಲಿನ ಅಜ್ಞಾನ ,ಮೂಢನಂಬಿಕೆ, ನಿರುದ್ಯೋಗ ಸಮರ್ಪಕ ಮಾಹಿತಿ ಇವೇ ಮೊದಲಾದವುಗಳು ಮುಖ್ಯ ಕಾರಣವಾಗಿವೆ. ಆದ್ದರಿಂದ ನಾವು ಜನರಿಗೆ  ಜನಸಂಖ್ಯಾ ಸ್ಪೋಟದಿಂದ ಬಡತನ, ನಿರುದ್ಯೋಗ, ಸಮಾಜದಲ್ಲಿ ಅರಾಜಕತೆ, ಅಶಾಂತಿಗೆ ಎಡೆಮಾಡಿ, ಜನರಿಗೆ ನೆಮ್ಮದಿ ಇಲ್ಲದಂತಾಗುವುದು. ದೇಶದ ಪ್ರಗತಿಗೆ ಮಾರಕ ಎಂಬ ಬಗ್ಗೆ  ಜನರಲ್ಲಿ ಅರಿವು ಮೂಡಿಸಿ ಅವರು ``ಚಿಕ್ಕ ಸಂಸಾರ ಸುಖ ಸಂಸಾರ'' ಸೂತ್ರವನ್ನು ಪಾಲಿಸುವಂತೆ ಮನವೊಲಿಸಬೇಕು ಎಂದು ತಿಳಿಸಿದರು.
ಜನಸಂಖ್ಯಾ ಸ್ಪೋಟ ತಡೆಗೆ ಸರ್ವರಿಗೂ ಶಿಕ್ಷಣ ಮತ್ತು ಭೃಷ್ಠಾಚಾರ ನಿರ್ಮೂಲನೆಯಿಂದ ಮಾತ್ರ ಬಲಿಷ್ಠ ಭಾರತ ನಿಮರ್ಾಣ ಸಾಧ್ಯ ಎಂಬುದನ್ನು ಶಾಲಾ ಕಾಲೇಜು ಮಕ್ಕಳಿಗೆ ಮನನ ಮಾಡಲು ಸೂಚಿಸಿದರು.
ವಿಜ್ಞಾನ ತಂತ್ರಜ್ಞಾನಗಳ ಅವಿಷ್ಕಾರದಿಂದಾಗಿ ಇಂದು ನಮ್ಮ ದೇಶದಲ್ಲಿ ಶಿಶು ಮರಣ ಹಾಗೂ ತಾಯಂದಿರ ಮರಣ ಸಂಖ್ಯೆ ಇಳಿಮುಖವಾಗಿದೆ.ಇದೊಂದು ಸಮಾಧಾನಕರ ಸಂಗತಿಯಾದರೂ ಜನಸಂಖ್ಯಾ ಸ್ಪೋಟವನ್ನು ನಾವೆಲ್ಲರೂ ಸಾಮಾಜಿಕ ಬದ್ಧತೆಯಿಂದ ತಡೆಯಲು ಮುಂದಾಗುವಂತೆ ಕರೆಯಿತ್ತರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ಜೆ.ಆರ್.ಲೋಬೋ ಅವರು ಮಾತನಾಡಿ ಜನಸಂಖ್ಯೆ ಹೆಚ್ಚಳದಿಂದ ಜನಸಂಖ್ಯಾ ಸುನಾಮಿ ಆಗುವುದನ್ನು ನಾವೆಲ್ಲರೂ ತಡೆಯಬೇಕಿದೆ. ಅದಕ್ಕಾಗಿ ನಾವು ಜನಸಂಖ್ಯಾ ಸ್ಪೋಟದ ದುಷ್ಪರಿಣಾಮಗಳ ಕುರಿತು ಜನರನ್ನು ಜಾಗೃತಗೊಳಿಸಬೇಕೆಂದರು.
ಮುಖ್ಯ ಅತಿಥಿಗಳಾಗಿ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ  ಬಿ.ಎ.ಮೊಯಿದಿನ್ ಬಾವಾ, ಜಿಲ್ಲಾಧಿಕಾರಿ ಎನ್.ಪ್ರಕಾಶ್,ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು. ಸಮಾರಂಭದಲ್ಲಿ ಡಾ.ಕಿಶೋರ್ ಕುಮಾರ್ ಸ್ವಾಗತಿಸಿದರು,ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ ಪ್ರಾಸ್ತವಿಕ ನುಡಿಗಳನ್ನಾಡಿದರು. ಆರ್ಸಿಎಚ್ ಅಧಿಕಾರಿ ಡಾ.ರುಕ್ಮಿಣಿ ಜನಸಂಖ್ಯಾ ಸ್ಪೋಟ ಕುರಿತು ಉಪನ್ಯಾಸ ನೀಡಿದರು. ಡಾ.ರಾಜೇಶ್ ವಂದಿಸಿದರು.        

ರಸಗೊಬ್ಬರ ಖರೀದಿ: ರೈತರಿಗೆ ಸೂಚನೆ

ಮಂಗಳೂರು, ಜುಲೈ.11:- ಜಿಲ್ಲೆಯ ರೈತರು ಕ್ರಿಪ್ಕೊ ಡಿಎಪಿ ರಸಗೊಬ್ಬರ ಚೀಲವನ್ನು ಖರೀದಿಸುವ ವೇಳೆ ತೂಕವನ್ನು ಎಚ್ಚರಿಕೆಯಿಂದ ಗಮನಿಸಬೇಕೆಂದು ಜಂಟಿ ಕೃಷಿ ನಿರ್ದೇಶಕರಾದ ಹೊನ್ನಪ್ಪ ಗೌಡ ಅವರು ರೈತರನ್ನು ವಿನಂತಿಸಿದ್ದಾರೆ.
ರಸಗೊಬ್ಬರ ಪ್ರಮಾಣಕ್ಕೆ ತಕ್ಕಂತೆ ರೈತರು ಬೆಲೆಯನ್ನು ಪಾವತಿಸಬೇಕೆಂದೂ ವಿನಂತಿಸಿರುವ ಅವರು, ಬೆಲೆ ಮತ್ತು ಪ್ರಮಾಣವನ್ನು ಖರೀದಿವೇಳೆ ಖಾತರಿಪಡಿಸಿಕೊಳ್ಳಿ ಎಂದು ಕೋರಿದ್ದಾರೆ. ರಸಗೊಬ್ಬರವನ್ನು ರೈತರು ಕೊಳ್ಳುವಾಗ ಗಮನಿಸಬೇಕಾದ ಅಂಶಗಳು ಇಂತಿವೆ. ರಸಗೊಬ್ಬರದ ಚೀಲದಲ್ಲಿ ಗೊಬ್ಬರದ ಹೆಸರು ಮುದ್ರಿತವಾಗಿದ್ದು,ತಯಾರಕರ ಹೆಸರು ಮತ್ತು ವಿಳಾಸ,ಬ್ರ್ಯಾಂಡ್ ಪೋಷಕಾಂಶಗಳ ವಿವರ,ಗರಿಷ್ಠ ಮಾರಾಟ ಬೆಲೆ,ತೂಕ,ರಸಗೊಬ್ಬರಗಳ ಮಿಶ್ರಣ,ಸಿಂಗಲ್ ಸೂಪರ್ ಫಾಸ್ಫೇಟ್,ಲಘು ಪೋಷಕಾಂಶಗಳು ಮತ್ತು ಮಿಶ್ರಣಗಳ ಚೀಲ/ಡಬ್ಬಗಳ ಮೇಲೆ ಬ್ಯಾಚ್ ಸಂಖ್ಯೆ, ರಿಜಿಸ್ಟ್ರೇಷನ್ ಸಂಖ್ಯೆ ಮುಂತಾದ ವಿವರಗಳನ್ನು  ನಮೂದಿಸಿರಬೇಕು ಮತ್ತು   ರಸಗೊಬ್ಬರದ ಚೀಲವನ್ನು ಹೊಲಿದಿದ್ದು ಸೀಸದ ಮೊಹರನ್ನು ಹಾಕಿರಬೇಕು. ಗೊಬ್ಬರದ ಚೀಲವನ್ನುತೂಕ ಮಾಡಿಸಿ ತೆಗೆದುಕೊಳ್ಳತಕ್ಕದ್ದು.  ರಸಗೊಬ್ಬರವನ್ನು ಕೊಂಡಿದ್ದಕ್ಕೆ ನಮೂನೆ ಎಂ ನಲ್ಲಿ ರಸೀತಿಯನ್ನು ಪಡೆಯಬೇಕು.   ರಸೀತಿಯಲ್ಲಿ ರೈತರ ಸಹಿ ಮತ್ತು ಮಾರಾಟಗಾರರ ಸಹಿ ಇರಬೇಕೆಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿರುತ್ತಾರೆ. 

Wednesday, July 10, 2013

`ಅನ್ನ ಭಾಗ್ಯ' ಯೋಜನೆಗೆ ಚಾಲನೆ;ಯೋಜನೆ ದುರುಪಯೋಗವಾಗದಂತೆ ಎಚ್ಚರವಿರಲಿ: ಜಿಲ್ಲಾ ಉಸ್ತುವಾರಿ ಸಚಿವರು

ಮಂಗಳೂರು,ಜುಲೈ.10: ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಬಿಪಿಎಲ್ ಪಡಿತರ ಚೀಟಿ ಹೊಂದಿರುವವರಿಗೆ ಒಂದು ರೂಪಾಯಿಗೆ ಕೆಜಿ ಅಕ್ಕಿ ನೀಡುವ ಮಹತ್ತರ ಯೋಜನೆಯನ್ನು ರಾಜ್ಯ ಸರಕಾರ ಇಂದು ಅನುಷ್ಠಾನಗೊಳಿಸಿದೆ. ರಾಜ್ಯ ಸರ್ಕಾರ ಈ ಮೂಲಕ ತನ್ನ ಮಾತು ಪಾಲಿಸಿದೆ. ಬಡವರ್ಗದವರಿಗೆ ಈ ಯೋಜನೆ ತಲುಪಬೇಕು. ಯೋಜನೆ ದುರುಪಯೋಗವಾಗದಂತೆ ಎಚ್ಚರವಹಿಸಬೇಕಾದ್ದು ಅವಶ್ಯ ಎಂದು ರಾಜ್ಯ  ಅರಣ್ಯ ಮತ್ತು ಪರಿಸರ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ. ರಮಾನಾಥ ರೈ ಹೇಳಿದರು.
                ಅವರು ಇಂದು ನಗರದ ಪುರಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಡಳಿತದ ವತಿಯಿಂದ ಏರ್ಪಡಿಸಿದ್ದ `ಅನ್ನಭಾಗ್ಯ' ಒಂದು ರೂಪಾಯಿಗೆ ಕಿಲೋ ಅಕ್ಕಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದರು.ಕೇಂದ್ರ ಸರಕಾರ ಆಹಾರ ಭದ್ರತಾ ಕಾಯ್ದೆಯಡಿ ಬಿಪಿಎಲ್ ಪಡಿತರದಾರರಿಗೆ ರೂ.3 ರೂಪಾಯಿಯಲ್ಲಿ ಅಕ್ಕಿ ವಿತರಿಸುತ್ತಿದ್ದರೆ, ರಾಜ್ಯ ಸರಕಾರ ಒಂದು ರೂ.ಗೆ ಕಿಲೋ ಅಕ್ಕಿ ವಿತರಿಸುತ್ತಿದೆ. ರಾಜ್ಯ ಸರಕಾರದ ಮೇಲೆ ಆರ್ಥಿಕ ಹೊರೆ ಬಿದ್ದರೂ ಬಡವರು ಆಹಾರವಿಲ್ಲದೆ ಸಂಕಷ್ಟ ಎದುರಿಸುವಂತಾಗಬಾರದು ಎಂದು ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ. ಅಕ್ಕಿ ವಿತರಣೆಯಲ್ಲಿ ಎಲ್ಲೂ ಕೂಡ ಲೋಪವಾಗದಂತೆ ನಾಗರಿಕರು ಎಚ್ಚರವಹಿಸಬೇಕಾಗುತ್ತದೆ ಎಂದರು.
ಶಿಕ್ಷಣದಿಂದ ಮಾತ್ರ ಶೋಷಣೆ ಮುಕ್ತ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಗಮನಹರಿಸಿರುವ ಸರಕಾರ ಶಿಕ್ಷಣಕ್ಕೆ ವಿಶೇಷ ಆದ್ಯತೆ ನೀಡಿದೆ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ ಎಂದು ರಮಾನಾಥ ರೈ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಜೆ.ಆರ್.ಲೋಬೋ ಮಾತನಾಡಿ, ಅರ್ಹ ಫಲಾನುಭವಿ ಗಳಿಗೆ ಕ್ಲಪ್ತ ಸಮಯದಲ್ಲಿ `ಅನ್ನ ಭಾಗ್ಯ' ಯೋಜನೆಯ ಪ್ರಯೋಜನ ದೊರೆಯುವಂತಾಗಬೇಕು ಎಂದರು.ಮುಖ್ಯ ಅತಿಥಿಯಾಗಿದ್ದ ಶಾಸಕ ಬಿ.ಎ.ಮೊಯ್ದೀನ್ ಬಾವಾ ಸಮಾರಂಭವನ್ನುದ್ದೇಶಿಸಿ ಮಾತನಾಡಿದರು.
ಇದೇ ಸಂದರ್ಭ 10 ಮಂದಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಅಕ್ಕಿಯನ್ನು ವಿತರಿಸಲಾಯಿತು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 1.79 ಲಕ್ಷ ಮಂದಿ ಅನ್ನ ಭಾಗ್ಯ ಯೋಜನೆಯ ಪ್ರಯೋಜನ ಪಡೆಯಲಿದ್ದಾರೆ.
ಜಿಲ್ಲಾಧಿಕಾರಿ ಎನ್.ಪ್ರಕಾಶ್, ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಕಾರ್ಯಕ್ರಮದಲ್ಲಿ  ಉಪಸ್ಥಿತರಿದ್ದರು.ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಉಪನಿರ್ದೇಶಕ ಶರಣಬಸಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ತಾಲೂಕು ವ್ಯವಸ್ಥಾಪಕ ಎಂ.ವಿ.ರಾಜನ್ ವಂದಿಸಿದರು.

ಬಸ್ಸುಗಳಲ್ಲಿ ಹಿರಿಯ ನಾಗರೀಕರಿಗೆ ಅನುಕೂಲ ಕಲ್ಪಿಸಲು ಕ್ರಮ_ಆರ್.ಟಿ.ಓ

ಮಂಗಳೂರು, ಜುಲೈ. 10:- ನಗರ ಸಾರಿಗೆ ಹಾಗೂ ಸರ್ವಿಸ್ ಬಸ್ಸುಗಳಲ್ಲಿ ಹಿರಿಯ ನಾಗರೀಕರನ್ನು ಗೌರವದಿಂದ ಕಾಣುವ ಪರಿಸರನ್ನುಂಟು ಮಾಡುವುದು ಹಾಗೂ ಅವರಿಗೆ ಮೀಸಲಾದ ಸ್ಥಳಗಳಲ್ಲಿ ಇತರೆ ಜನರು ಕುಳಿತಿದ್ದರೆ ಅವರು ಬಂದ ಕೂಡಲೇ ತೆರವು ಮಾಡಿ ಅವರಿಗೆ ಅನುವು ಮಾಡಿಕೊಡಲು ಸಾರ್ವಜನಿಕರಲ್ಲಿ ಹಾಗೂ ಶಾಲಾ ಕಾಲೇಜು ಮಕ್ಕಳಲ್ಲಿ ಅರಿವು ಮೂಡಿಸಲಾಗುವುದೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿ ಮಲ್ಲಿಕಾರ್ಜುನ ತಿಳಿಸಿದ್ದಾರೆ.
ಅವರಿಂದು ತಮ್ಮ ಕಚೇರಿಯಲ್ಲಿ ನಡೆದ ಸಾರಿಗೆ ಅದಾಲತ್ ಸಭೆಯಲ್ಲಿ ಈ ವಿಷಯ ತಿಳಿಸಿದರು.
ಹಸನಬ್ಬ ಎನ್ನುವವರು ರಸ್ತೆಯ ಇಕ್ಕೆಡೆಗಳಲ್ಲಿನ ಕಾಲುದಾರಿಯನ್ನು ಮುಕ್ತವಾಗಿರಿಸಿ ಸಾರ್ವಜನಿಕರ ಸುಗಮ ಓಡಾಟಕ್ಕೆ ಅನುವು ಮಾಡಿ ಕೊಡುವಂತೆ ಮಾಡಿದ ಮನವಿಯನ್ನು, ಪರಿಗಣಿಸಲಾಗುವುದೆಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದರು.
ಕೆಲವು ಮಾರ್ಗಗಳಲ್ಲಿ ಕೆಲವೊಂದು ನಗರ ಸಾರಿಗೆ ಬಸ್ಸುಗಳು ಕೊನೇ ನಿಲ್ದಾಣದ ವರೆಗೂ ಹೋಗದೇ ಮದ್ಯದಲ್ಲೇ ಪ್ರಯಾಣಿಕರನ್ನು ಇಳಿಸುತ್ತಿರುವ ಬಗ್ಗೆ ಸಭೆಯಲ್ಲಿ ದೂರಿದಾಗ ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡು ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದರು.
ಹನುಮಂತ ಕಾಮತ್ ಅವರು ಮಾತನಾಡಿ ನಗರದ ಪಿವಿಎಸ್ ವೃತ್ತದಿಂದ ಬಂಟ್ಸ್ ಹಾಸ್ಟೆಲ್ ಮಾರ್ಗದಲ್ಲಿ ರಾತ್ರಿ 8 ಗಂಟೆಯ ನಂತರ ಖಾಸಗಿ ಬಸ್ಸುಗಳು ಇಡೀ ಮಾರ್ಗವನ್ನು ಆಕ್ರಮಿಸಿರುತ್ತಾರೆ. ಇದರಿಂದ ಇತರೆ ವಾಹನಗಳಿಗೆ ಕಿರಿಕಿರಿಯಾಗುತ್ತಿದೆ ಎಂದು ದೂರಿದರು. ಇದಕ್ಕೆ ಉತ್ತರಿಸಿದ ಸಂಚಾರಿ ಎಸಿಪಿ ಸುಬ್ರಹ್ಮಣ್ಯರವರು ಕೂಡಲೇ ಈ ಬಗ್ಗೆ ಪರಿಶೀಲಿಸಿ ಸಂಚಾರಿ ಪೋಲೀಸರನ್ನು ನೇಮಿಸಲಾಗುವುದೆಂದರು.
ತೊಕ್ಕೊಟ್ಟು ಜಂಕ್ಷನ್ನಲ್ಲಿ ರಾತ್ರಿ ಸಂಚರಿಸುವ ಬಸ್ಸುಗಳು ಅಲ್ಲಿಯ ನಿಲ್ದಾಣಕ್ಕೆ ಆಗಮಿಸದೇ ನೇರವಾಗಿ ಮುಂದೆ ಸಾಗುವುದರಿಂದ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿರುವವರು  ತೊಂದರೆ ಅನುಭವಿಸುವಂತಾಗಿದೆ ಎಂದು ದೂರಿದಾಗ ಈ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಆರ್ ಟಿ ಓ ತಿಳಿಸಿದರು. 
ನಾಗರೀಕರ ಎಲ್ಲಾ ಸಮಸ್ಯೆಗಳನ್ನು ಸಾರಿಗೆ ಪ್ರಾಧಿಕಾರದ ಗಮನಕ್ಕೆ ತಂದು ಪರಿಹರಿಸುವುದಾಗಿ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದರು.

Monday, July 8, 2013

ಮೀನು ಮಾರಾಟಕ್ಕೆ ಸ್ವಚ್ಛ ಪರಿಸರ ಅಗತ್ಯ -ಅಭಯಚಂದ್ರ

  ಮಂಗಳೂರು, ಜುಲೈ. 0 8:-ಮೀನು ಮಾರಾಟ ಮಾಡುವವರಿಗೂ ಮೀನು ಕೊಳ್ಳುವವರಿಗೂ ಸ್ವಚ್ಚತೆಯಿಂದ ಕೂಡಿದ ಉತ್ತಮ ಪರಿಸರ ವ್ಯವಸ್ಥೆಯನ್ನು ಕಲ್ಪಿಸುವುದೇ ಸರ್ಕಾರದ ಉದ್ದೇಶ.ಈ ದಿಸೆಯಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮವು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಕೆಮ್ರಾಲ್ ನಲ್ಲಿ ರೂ.10.00 ಲಕ್ಷ ವೆಚ್ಚದಲ್ಲಿ ನಿರ್ಮಿಸಿರುವ ಮೀನು ಮಾರುಕಟ್ಟೆ ಅತ್ಯಂತ ಸ್ವಚ್ಛ ಪರಿಸರ ಹೊಂದಿದೆ ಎಂದು ಯುವಜನ ಸೇವಾ ಹಾಗೂ ಮೀನುಗಾರಿಕಾ ಸಚಿವರಾದ  ಅಭಯಚಂದ್ರ ಅವರು ತಿಳಿಸಿದ್ದಾರೆ.
      ಅವರು ಇಂದು ಕೆಮ್ರಾಲ್ ನಲ್ಲಿ ನೂತನ ಮೀನು ಮಾರುಕಟ್ಟೆ ಉದ್ಘಾಟಿಸಿ ಮಾತನಾಡಿದರು. ಜನರ ತೆರಿಗೆ ಹಣದಿಂದ ನಿರ್ಮಿಸುವ ಯಾವುದೇ ಸಾರ್ವಜನಿಕ ಸ್ವತ್ತುಗಳಿಗೆ ಹಾನಿಯಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಸಾರ್ವಜನಿಕರದ್ದಾಗಿದೆಯೆಂದು ಈ ಸಂದರ್ಭದಲ್ಲಿ ತಿಳಿಸಿದರು.
ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಹಳ್ಳಿಗಳಲ್ಲೂ ಪಟ್ಟಣ/ನಗರಗಳಂತೆ ಉತ್ತಮ ಮಾರುಕಟ್ಟೆ ಸೌಲಭ್ಯಗಳು ಆವಶ್ಯಕತೆ ಇದೆ. ಇದನ್ನು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಪೂರೈಸಲಾಗುತ್ತಿರುವುದು ಪ್ರಗತಿಯ ಸೂಚಕವಾಗಿದೆ ಎಂದರು.
ಜಿಲ್ಲಾ  ಪಂಚಾಯತ್ ಸದಸ್ಯ ಈಶ್ವರ ಕಟೀಲ್, ತಾಲೂಕು ಪಂಚಾಯತ್ ಸದಸ್ಯೆ ಶ್ರೀಮತಿ ಬೇಬಿ.ಎಸ್. ಕೋಟ್ಯಾನ್,ಶ್ರೀಮತಿ ಸಾವಿತ್ರಿ ಜಿ.ಸುವರ್ಣ ,ಕೆಮ್ರಾಲ್ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಿಚರ್ಡ್ ಡಿ ಸೋಜಾ ಮುಂತಾದವರು ಹಾಜರಿದ್ದರು.
      ಇದೇ ಸಂದರ್ಭದಲ್ಲಿ  ಜಲಾನಯನ ಇಲಾಖೆ ವತಿಯಿಂದ ಸಸಿಗಳನ್ನು ವಿತರಿಸಲಾಯಿತು. ಮಂಗಳೂರಿನ ಮೀನುಗಾರಿಕಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ವಿ.ಕೆ.ಶೆಟ್ಟಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದಕ್ಕೂ ಮೊದಲು ಮಂಗಳ ಪೇಟೆಯಲ್ಲಿ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ವತಿಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ರೂ.10.00 ಲಕ್ಷ ವೆಚ್ಚದಲ್ಲಿ ಸುಸಜ್ಜಿತವಾದ ಮೀನು ಮಾರುಕಟ್ಟೆ ನಿರ್ಮಾಣಕ್ಕೆ ಕರ್ನಾಟಕ ರಾಜ್ಯ ಮೀನುಗಾರಿಕಾ ಹಾಗೂ ಯುವಜನ ಸೇವಾ ಖಾತೆ ಸಚಿವರಾದ ಅಭಯಚಂದ್ರ ಅವರು ಶಿಲಾನ್ಯಾಸ ನೆರವೇರಿಸಿದರು.

ಆರೋಗ್ಯಯುತ ಸಮಾಜ ನಿಮರ್ಾಣಕ್ಕೆ ಇಲಾಖೆ ಆದ್ಯತೆ: ಆರೋಗ್ಯ ಸಚಿವ

ಮಂಗಳೂರು ಜುಲೈ 8 :- ಆಸ್ಪತ್ರೆಗಳ ಸಂಖ್ಯೆಯನ್ನು ಹೆಚ್ಚಳ ಮಾಡದೆ ಇರುವ ಆಸ್ಪತ್ರೆಗಳನ್ನೇ ಸುಸ್ಸಜ್ಜಿತಗೊಳಿಸಿ ಜನರಲ್ಲಿ ರೋಗ ರುಜಿನಗಳ ಬಗ್ಗೆ ಜಾಗೃತಿ ಹಾಗೂ ರೋಗ ಮುಕ್ತ ಪರಿಸರ ನಿರ್ಮಾಣ ಆರೋಗ್ಯ ಇಲಾಖೆಯ ಆದ್ಯತೆಯಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು ಟಿ ಖಾದರ್ ಅವರು ಹೇಳಿದರು.
ಅವರಿಂದು ಕುಡುಪುವಿನಲ್ಲಿ ಒಂದು ಕೋಟಿ ಎರಡು ಲಕ್ಷ ರೂ.ಗಳಲ್ಲಿ ನಿರ್ಮಾಣಗೊಂಡ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಟ್ಟಡಗಳನ್ನು ನಿರ್ಮಿಸಿ, ಅಗತ್ಯ ಶುಶ್ರೂಷಾ ಉಪಕರಣಗಳಿಲ್ಲದ, ನಿರ್ವಹಣೆಯಿಲ್ಲದ ಆಸ್ಪತ್ರೆಗಳ ನಿರ್ಮಾಣ ತನ್ನ ಆದ್ಯತೆಯಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ಜನಸಾಮಾನ್ಯರಿಗೆ ಆರೋಗ್ಯ ವೇ ತಮ್ಮ ಇಲಾಖೆಯ ಧ್ಯೇಯವಾಗಲಿದೆ ಎಂದರು. ಸಕರ್ಾರಿ ಶಿಕ್ಷಣ ಮತ್ತು ಆರೋಗ್ಯ ವ್ಯವಸ್ಥೆಯ ಮೇಲೆ ಜನರ ನಂಬುಗೆಯನ್ನು ಹೆಚ್ಚಿಸುವ ಕೆಲಸ ಇಂದಿನ ಅಗತ್ಯವಾಗಿದ್ದು, ಇಲಾಖೆಯ ಎಲ್ಲರೂ ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರ ಸಹಕಾರದಿಂದ ಈ ಧ್ಯೇಯದ ಸಾಕಾರಕ್ಕೆ ಸಜ್ಜಾಗಬೇಕಿದೆ ಎಂದರು.
ಇಂದೂ ಸಹ ಶೇ. 70ರಷ್ಟು ಜನರು ಸಕರ್ಾರ ನೀಡುತ್ತಿರುವ ಆರೋಗ್ಯ ಸೇವೆಯನ್ನು ಪಡೆಯುತ್ತಿದ್ದಾರೆ. ಈ ವ್ಯವಸ್ಥೆಯಲ್ಲಿ ಲೋಪಗಳಾಗಬಾರದು. ಇಲಾಖೆಯಲ್ಲಿ ಸುಮಾರು 4,500 ಡಿ ಗ್ರೂಪ್ ನೌಕರರ ಕೊರತೆ ಇದ್ದು, 600 ಎ ಎನ್ ಎಂಗಳನ್ನು ಇವರಲ್ಲಿ %25 ಪುರುಷ ಎ ಎನ್ ಎಂಗಳನ್ನು ನೇಮಿಸುವ ಉದ್ದೇಶವಿದೆ ಎಂದರು.
ಸದೃಢ ಸಮಾಜ ನಿರ್ಮಾಣಕ್ಕೆ ಸದೃಢ ಮಕ್ಕಳಿರಬೇಕು. ಹಾಗಾಗಿ ಶಾಲಾ ಮಕ್ಕಳಿಗೆ ಆರೋಗ್ಯ ತಪಾಸಣೆ ಹಾಗೂ ಕಬ್ಬಿಣ ಅಂಶಗಳಿರುವ ಮಾತ್ರೆಯನ್ನು ನೀಡುವ ಯೋಜನೆಯಿದೆ. ಜಿಲ್ಲೆಗೊಂದು ಕ್ಯಾನ್ಸರ್ ಪತ್ತೆ ಯಂತ್ರ ಖರೀದಿಸಲಾಗುವುದು. ಹೊಟೆಲ್ ಗಳಲ್ಲಿ ಅಡುಗೆ ಕೆಲಸ ಮಾಡುವವರ ಆರೋಗ್ಯ ತಪಾಸಣೆ ಹಾಗೂ ಆರೋಗ್ಯ ಕಾರ್ಡ್ ನೀಡಲು ಯೋಜನೆ ರೂಪಿಸಲಾಗಿದೆ. ಈ ಎಲ್ಲ ಯೋಜನೆಗಳು ಸಾರ್ವಜನಿಕ ಆರೋಗ್ಯವನ್ನು ಗಮನದಲ್ಲಿರಿಸಿ ರೂಪಿಸಲಾಗಿದೆ ಎಂದು ಸಚಿವರು ಹೇಳಿದರು.
ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ ಮತ್ತು ಪರಿಸರ ಸಚಿವರಾದ ಶ್ರೀ ರಮಾನಾಥ ರೈ ಅವರು ಸಮಾರಂಭವನ್ನುದ್ದೇಶಿಸಿ ಮಾತನಾಡಿ, ಕೇಂದ್ರ ಸಕರ್ಾರದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ವ್ಯವಸ್ಥೆ ಉತ್ತಮವಾಗಿದೆ ಎಂದರು. ತಮ್ಮ ಸರ್ಕಾರವು ಜನಪರ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಿದೆ ಎಂದು ಸಚಿವರು ವಿವರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಬಿ ಎ ಮೊಯ್ದಿನ್ ಬಾವಾ ಅವರು ವಹಿಸಿದ್ದರು.
ಹನ್ನೊಂದು ವರ್ಷಗಳಿಂದ ಅಲ್ಲಿ ಸೇವೆ ಸಲ್ಲಿಸುತ್ತಿರುವ ಡಾ ಸುನಿಲ್ ಇವಾನ್ಸ್ ಜತ್ತಣ್ಣ ಅವರು ವಾಮಂಜೂರಿನಲ್ಲಿ ತಮ್ಮ ಸೇವಾನುಭವವನ್ನು ಹೇಳಿಕೊಂಡು, ಈ ಪ್ರಾಥಮಿಕ ಆರೋಗ್ಯ ಕೇಂದ್ರ ಅವರ ಮಗುವಿದ್ದಂತೆ ಎಂದರು. ಪೋಸ್ಟ್ ಗ್ರಾಜ್ಯುಯೇಷನ್ ಗೆ ಶೀಘ್ರದಲ್ಲೇ ತೆರಳಲಿರುವ ಇವರಿಗೆ ಇದೇ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಆಸ್ಪತ್ರೆಯ ಕಟ್ಟಡವನ್ನು ನಿರ್ಮಿಸಿದವರಿಗೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಡಾ ಜತ್ತನ್ನ ಅವರು ಇದೇ ಸಂದರ್ಭದಲ್ಲಿ ಸಚಿವರಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಂಬಂಧಿಸಿದ ಬೇಡಿಕೆಗಳ ಮನವಿಯನ್ನು ನೀಡಿದರು. ಡಾ ಓ ಆರ್ ಶ್ರೀರಂಗಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಜಿಲ್ಲಾಧಿಕಾರಿ  ಎನ್ ಪ್ರಕಾಶ್ ವೇದಿಕೆಯಲ್ಲಿದ್ದರು.
 ವಿಧಾನ ಪರಿಷತ್ ಸದಸ್ಯ  ಮೋನಪ್ಪ ಭಂಡಾರಿ, ಮಂಗಳೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಹರೀಶ್ ಕೆ, ಜಿಲ್ಲಾ ಪಂಚಾಯತ್ ಸದಸ್ಯರಾದ ಮೆಲ್ವಿನ್ ಡಿಸೋಜ, ನೀರು ಮಾರ್ಗ ಗ್ರಾಮಪಂಚಾಯತ್ ಅಧ್ಯಕ್ಷರಾದ  ರಾಬಟ್ರ್  ಲ್ಯಾನ್ಸಿ ಪಾಯಸ್, ಉಳಾಯಿಬೆಟ್ಟು ಗ್ರಾಮಪಂಚಾಯತ್ ಅಧ್ಯಕ್ಷರಾದ ಲಲಿತ ಕೊಟ್ಟಾರಿ, ತಾಲೂಕುಪಂಚಾಯತ್ ಸದಸ್ಯ  ಯೂಸುಫ್ರ, ಶಶಿಪ್ರಭ ಕೋಟ್ಯಾನ್, ಮನಾಪ ಸದಸ್ಯ  ಭಾಸ್ಕರ್ ಕೆ. ಶ್ರೀಮತಿ ಹೇಮಲತ ಆರ್ ಸಾಲಿಯಾನ್, ಕೃಷ್ನರಾಜ್ ತಂತ್ರಿ,  ಅಬೂಬಕ್ಕರ್ ಮುಸ್ಲಿಯಾರ್, ರೆ. ಡಾ. ಜೆ ಎಸ್ ಸದಾನಂದ ಉಪಸ್ಥಿತರಿದ್ದರು. 

ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮ: ಶೇಕಡಾ 100 ಸಾಧನೆಗೆ ಜಿಲ್ಲಾಧಿಕಾರಿ ಸೂಚನೆ

ಮಂಗಳೂರು, ಜುಲೈ.08:- ಕನರ್ಾಟಕ ಸಕರ್ಾರದ  ಮಹತ್ವಾಕಾಂಕ್ಷಿ ಯೋಜನೆ 01 ರಿಂದ 10 ನೇ ತರಗತಿಯ ಎಲ್ಲಾ ಸರಕಾರಿ ಶಾಲಾ ಮಕ್ಕಳಿಗೆ ಕಡ್ಡಾಯ ಆರೋಗ್ಯ ತಪಾಸಣೆ ಸುವರ್ಣ ಆರೋಗ್ಯ ಚೈತನ್ಯ ಕಾರ್ಯಕ್ರಮ ಕಳೆದ ವರ್ಷ 3 ಲಕ್ಷ ಮಕ್ಕಳಿಗೆ ದೊರಕಿದ್ದು, ಉಳಿದ 20 ಸಾವಿರ ಮಕ್ಕಳು ಈ ಯೋಜನೆಯ ಲಾಭ ಪಡೆದಿಲ್ಲ. ಆದ್ದರಿಂದ 2013-14ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಎಲ್ಲಾ ಸರಕಾರಿ ಶಾಲೆಗಳ ಮಕ್ಕಳ ಆರೋಗ್ಯ ತಪಾಸಣೆ ಮಾಡುವ ಮೂಲಕ ಶೇಕಡಾ 100 ರಷ್ಟು ಗುರಿ ಸಾಧಿಸುವಂತೆ ಆರೋಗ್ಯ ಇಲಾಖೆ ಹಾಗೂ ಶೈಕ್ಷಣಿಕ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎನ್.ಪ್ರಕಾಶ್ ಅವರು ಸೂಚಿಸಿದ್ದಾರೆ.
       ಅವರು ಈ ಬಗ್ಗೆ ಶನಿವಾರ (6-7-13) ತಮ್ಮ ಕಚೇರಿಯಲ್ಲಿ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸುವರ್ಣ ಆರೋಗ್ಯ ಚೈತನ್ಯ ಯೋಜನೆ ಸಂಪೂರ್ಣ ಉಚಿತ ಚಿಕಿತ್ಸೆಯಾಗಿದ್ದು, ಎಲ್ಲಾ ಮಕ್ಕಳಿಗೆ ಸೂಕ್ತ ಆರೋಗ್ಯ ತಪಾಸಣೆ ನಡೆಸಿ ಹೆಚ್ಚಿನ ಚಿಕಿತ್ಸೆಯನ್ನು ಆಯ್ದ ಹೈಟೆಕ್  ಆಸ್ಪತ್ರೆಗಳ ಮೂಲಕ ದೊರಕಿಸಿಕೊಡುವ ಯೋಜನೆಯಾಗಿದೆ ಎಂದು ಜಿಲ್ಲಾ ಆರ್ಸಿಎಚ್ ಅಧಿಕಾರಿ ಡಾ.ರುಕ್ಮಿಣಿ ಅವರು ತಿಳಿಸಿದರು.
ಈಗಾಗಲೇ ಎಲ್ಲಾ ತಾಲೂಕುಗಳಲ್ಲಿ  ಈ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಹೆಚ್ಚುವರಿಯಾಗಿ ಇಬ್ಬರು ವೈದ್ಯರು
ನರ್ಸ್ ಗಳ ನೇಮಕ ವಾಗಿದ್ದು,ಎಲ್ಲಾ ಸರ್ಕಾರಿ ಶಾಲಾ ಸಿಬ್ಬಂದಿಗಳು ತಮ್ಮ ಶಾಲೆಯ ಮಕ್ಕಳನ್ನು ಆರೋಗ್ಯ ತಪಾಸಣೆಗೊಳಪಡಿಸಲು ಹಾಗೂ ಪ್ರತಿಯೊಬ್ಬ ವಿದ್ಯಾರ್ಥಿಗೂ ನೀಡಿರುವ ಸುವರ್ಣ ಆರೋಗ್ಯ ಕಾರ್ಡ್ ನಲ್ಲಿ ವಿವರಗಳನ್ನು ತಪ್ಪದೆ ನಮೂದಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಓ.ಆರ್.ಶ್ರೀರಂಗಪ್ಪ ಸಂಬಂಧಿಸಿದವರಿಗೆ ಸೂಚಿಸಿದರು.
ಹದಿಹರೆಯದ 10-19 ವಯೋಮಾನದ  ಎಲ್ಲಾ ಹೆಣ್ಣು ಮಕ್ಕಳಿಗೆ ರಕ್ತವೃದ್ಧಿಗಾಗಿ ಕಬ್ಬಿಣಾಂಶ ಮಾತ್ರೆಗಳನ್ನು ಶಾಲೆಗಳಿಗೆ ಸರಬರಾಜು ಮಾಡುವ ಯೋಜನೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ಜಿಲ್ಲಾಧಿಕಾರಿಗಳು ಶಿಕ್ಷಕರಿಗೆ ಸೂಚಿಸಿದ್ದಾರೆ.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ದಯಾನಂದ ಸೇರಿದಂತೆ ಇತರೆ ಜಿಲ್ಲಾ ಮಟ್ಟದ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.         

Saturday, July 6, 2013

ಸಂಸದರಿಂದ ಪ್ರಗತಿ ಪರಿಶೀಲನಾ ಸಭೆ

ಮಂಗಳೂರು, ಜುಲೈ.06:- ದಕ್ಷಿಣ ಕನ್ನಡ  ಜಿಲ್ಲೆಯಲ್ಲಿ ನೆರೆಹಾವಳಿಯಿಂದ ಸಂಭವಿಸಿದ ಸಾವು ನೋವು, ಆಸ್ತಿಪಾಸ್ತಿ ನಷ್ಟಕ್ಕೆ ಸಂಬಂಧಿಸಿ ತುರ್ತು ಪರಿಹಾರ ನೀಡಲು ಪ್ರಾಕೃತಿಕ ವಿಕೋಪ ಪರಿಹಾರದಡಿ ಐದು ಕೋಟಿ ರೂ.ಗಳನ್ನು ತಕ್ಷಣ ಒದಗಿಸುವಂತೆ ಕೋರಿ ರಾಜ್ಯ ಸರಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಜಿಲ್ಲಾಧಿಕಾರಿ  ಎನ್. ಪ್ರಕಾಶ್ ಹೇಳಿದ್ದಾರೆ.
ಅವರಿಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಇಂದು ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯಲ್ಲಿ ನೆರೆ ಹಾವಳಿ ಕುರಿತು ಕೈಗೊಂಡ ಪರಿಹಾರ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳು ಈ ಮಾಹಿತಿ ನೀಡಿದರು.
ನೆರೆ ಬಂದ ಸಂದರ್ಭದಲ್ಲೇ ಅಣೆಕಟ್ಟುಗಳಿಂದ ನೀರು ಬಿಡಲಾಗಿರುವುದಲ್ಲದೆ ಹಲವೆಡೆಗಳಲ್ಲಿ ದೋಣಿ ಅಲಭ್ಯತೆ ಕುರಿತು ಜನರಿಂದ ಅಸಮಾಧಾನ ವ್ಯಕ್ತವಾಗಿರುವ ಬಗ್ಗೆ ಸಂಸದ  ನಳಿನ್ ಕುಮಾರ್ ಕಟೀಲ್ ಅವರು ಅಧಿಕಾರಿಗಳಲ್ಲಿ ನೆರೆ ಬಗ್ಗೆ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರ ಕೋರಿದರು.
ಜಿಲ್ಲೆಯಲ್ಲಿ ನೆರೆ ಪರಿಸ್ಥಿತಿಯನ್ನು ಎದುರಿಸಲು ಅಧಿಕಾರಿಗಳು ಪರಸ್ಪರ ಸಮನ್ವಯತೆಯಿಂದ ಕಾರ್ಯ ನಿರ್ವಹಿಸಲು ಈಗಾಗಲೇ ಸೂಚನೆ ನೀಡಲಾಗಿದೆ. ನೆರೆಯ ಸಂದರ್ಭ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲು ತಲಾ 10 ಲಕ್ಷ ರೂ.ಗಳ ಎರಡು ಬೋಟುಗಳನ್ನು ತರಿಸಿ ಪೊಲೀಸ್ ಇಲಾಖೆಗೆ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಇನ್ನೂ  ಅಗತ್ಯ ಕಂಡು ಬಂದರೆ ಮತ್ತೆ ಬೋಟುಗಳನ್ನು ತರಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಆಯಾ ತಾಲೂಕು ಪಂಚಾಯತ್ಗಳ ಕಾರ್ಯ ನಿರ್ವಹಣಾಧಿಕಾರಿಗಳು ಮಳೆ ಹಾಗೂ ನೆರೆಯಿಂದ ಸಂಭವಿಸಿದ ಪ್ರಾಣಹಾನಿ, ಆಸ್ತಿ ಪಾಸ್ತಿ ನಷ್ಟಗಳ ಬಗ್ಗೆ ಸಭೆಯಲ್ಲಿ ಮಾಹಿತಿ ಒದಗಿಸಿದರು. ಆದರೆ ಅಂದಾಜು ನಷ್ಟದ ಬಗ್ಗೆ ನಿಖರವಾಗಿ ಕಂದಾಯ ಇಲಾಖೆಯಿಂದಷ್ಟೇ ಮಾಹಿತಿ ದೊರೆಯಬೇಕಿದ್ದು, ಇನ್ನಷ್ಟೇ ಮಾಹಿತಿಗಳನ್ನು ಕಲೆ ಹಾಕುತ್ತಿರುವುದಾಗಿ ಸಭೆಯಲ್ಲಿ ಅಧಿಕಾರಿಗಳು ತಿಳಿಸಿದರು.
ಜಿಲ್ಲೆಯಾದ್ಯಂತ ನೆರೆ ಹಾಗೂ ಮಳೆಯಿಂದಾಗಿ 332.2 ಕಿ.ಮೀ. ರಸ್ತೆಗಳು ಹಾನಿಗೊಳಗಾಗಿದ್ದು, ಅವುಗಳ ತಾತ್ಕಾಲಿಕ ದುರಸ್ತಿಗೆ 2 ಕೋಟಿ ರೂ.ಗಳ ಅಗತ್ಯವಿದೆ ಎಂದು ಜಿಲ್ಲಾ ಪಂಚಾಯತ್ ನ ಎಕ್ಸಿಕ್ಯೂಟಿವ್ ಇಂಜಿನಿಯರ್   ಸತ್ಯನಾರಾಯಣ ಸಭೆಯಲ್ಲಿ ತಿಳಿಸಿದರು.ನೆರೆಯಿಂದಾಗಿ ರಸ್ತೆಗಳು ಹಾಳಾಗಿ ಜಿಲ್ಲೆಯಲ್ಲಿ ಎಲ್ಲಿಯೂ ಜನಸಂಪರ್ಕಕ್ಕೆ ತೊಂದರೆಯಾಗುವ ಪರಿಸ್ಥಿತಿ ನಿರ್ಮಾಣವಾಗಿಲ್ಲ ಎಂದೂ ಅವರು ಹೇಳಿದರು.
ಮೈಸೂರು- ಬಂಟ್ವಾಳ ರಾಜ್ಯ ಹೆದ್ದಾರಿಯ ಸಂಪಾಜೆಯಿಂದ ಮಾಣಿವರೆಗಿನ ಕಾಮಗಾರಿ ಕಳಪೆಯಾಗಿದ್ದು, ಪ್ರಸ್ತುತ ಜನಸಂಚಾರಕ್ಕೆ ಅಯೋಗ್ಯವಾಗಿದೆ. ಈ ಬಗ್ಗೆ ಗುತ್ತಿಗೆದಾರರಿಂದಲೇ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸಂಸದರು ಅಧಿಕಾರಿಗಳಿಗೆ ಸೂಚಿಸಿದರು.
ಗಣಿಗಾರಿಕೆಯಿಂದ ಗ್ರಾಮೀಣ ಪ್ರದೇಶದ ಹೊಸ ರಸ್ತೆಗಳು ಹಾಳಾಗುತ್ತಿದ್ದರೆ, ಅಧಿಕಾರಿಗಳು ಅಂತಹ ಗಣಿಗಾರಿಕೆ ನಡೆಸುವವರ ಪರವಾನಿಗೆಯನ್ನು ರದ್ದುಪಡಿಸುವಂತೆ ಸಂಸದರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಬಡವರಿಗೆ ಸೂರು ಒದಗಿಸುವ ಸಕರ್ಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಆಶ್ರಯ,ಅಂಬೇಡ್ಕರ್, ಇಂದಿರಾ ಅವಾಸ್ ಹಾಗೂ ಬಸವ ವಸತಿ ಯೋಜನೆಗಳಲ್ಲಿ ಇಲ್ಲಿಯವರೆಗೆ 7227 ಮನೆಗಳನ್ನು ಪೂರ್ಣಗೊಳಿಸಿ ಬೆಳ್ತಂಗಡಿ ತಾಲೂಕು ಮುಂಚೂಣಿಯಲ್ಲಿದೆ ಎಂದು ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ನರೇಂದ್ರ ಮಾಹಿತಿ ನೀಡಿದರು.
ಆಶ್ರಯ ಯೋಜನೆಯಲ್ಲಿ 2005-06ರಿಂದ 2008-09 ರ ಸಾಲಿನಲ್ಲಿ 647 ಮನೆಗಳನ್ನು  ರೂ.1312.73 ಲಕ್ಷ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. ಅಂಬೇಡ್ಕರ್ ವಸತಿ ಯೋಜನೆಯಡಿಯಲ್ಲಿ 2007-08 ನೇ ಸಾಲಿನಿಂದ 2011-12 ನೇ ಸಾಲಿನ ವರೆಗೆ ರೂ.39.20 ಲಕ್ಷ ವೆಚ್ಚದಲ್ಲಿ 118 ಮನೆಗಳನ್ನು ಪೂರ್ಣಗೊಳಿಸಲಾಗಿದೆ.
ಇಂದಿರಾ ಅವಾಸ್ ಯೋಜನೆಯಡಿ 2005-06ನೇ ಸಾಲಿನಿಂದ 2012-13 ನೇ ಸಾಲಿನ ತನಕ ಒಟ್ಟು 1571 ಮನೆಗಳನ್ನು ನಿರ್ಮಿಸಲಾಗುತ್ತಿದ್ದು ಇಲ್ಲಿಯ ವರೆಗೆ ಒಟ್ಟು 31.07 ಲಕ್ಷ ವೆಚ್ಚವಾಗಿದೆ.
ಬಸವ ವಸತಿ ಯೋಜನೆಯಡಿ 1159 ಮನೆಗಳು ಪೂರ್ಣವಾಗಿದ್ದು, 959.86 ಲಕ್ಷ ರೂ.ಗಳು ಬಿಡುಗಡೆಯಾಗಿ ವೆಚ್ಚವಾಗಿದೆ ಎಂಬ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಡೆಂಗ್ಯು ಜ್ವರದಿಂದ 5 ಜನರು ಮೃತಪಟ್ಟಿದ್ದು, ಇಲಿಜ್ವರದಿಂದ ಒಬ್ಬರು ಮೃತಪಟ್ಟಿದ್ದಾರೆ. ಡೆಂಗ್ಯುವಿನಿಂದ ಬಳಲಿದವರು 153 ಜನರು. ಮಂಗಳೂರಿನಲ್ಲಿ 45, ಬಂಟ್ವಾಳದಲ್ಲಿ 47, ಪುತ್ತೂರಿನಲ್ಲಿ 23, ಬೆಳ್ತಂಗಡಿಯಲ್ಲಿ 25, ಸುಳ್ಯದಲ್ಲಿ 13 ಜನರು ಡೆಂಗ್ಯುವಿನಿಂದ ಬಳಲಿದ್ದಾರೆ. ಇವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಓ ಆರ್ ಶ್ರೀರಂಗಪ್ಪ ಅವರು ತಿಳಿಸಿದರು.
ಮಲೇರಿಯಾ ಕಳೆದ ಸಾಲಿಗೆ ಹೋಲಿಸಿದರೆ ಪ್ರಸಕ್ತ ಸಾಲಿನಲ್ಲಿ ಕಡಿಮೆಯಾಗಿದ್ದು, ಈ ಸಾಲಿನಲ್ಲಿ 20435 ಜನರು ಜಿಲ್ಲೆಯಲ್ಲಿ ಮಲೇರಿಯಾ ಪೀಡಿತರಾಗಿದ್ದಾರೆ ಎಂದರು.
ನೆರೆ ಬಳಿಕ ಸಾಂಕ್ರಾಮಿಕ ರೋಗ ಹರಡದಂತೆ ತಡೆಯಲು ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗಿದೆ. ಬಾವಿಗಳ ನೀರು ಪರೀಕ್ಷೆಗೂ ಸೂಚನೆ ನೀಡಲಾಗಿದೆ ಎಂದರು.  ವಾಜಪೇಯಿ ಆರೋಗ್ಯ ಶ್ರೀ ಬಗ್ಗೆ ಸದಸ್ಯರ ಕೋರಿಕೆಗೆ ಮಾಹಿತಿ ನೀಡಿದ ಅಧಿಕಾರಿಗಳು, ಒಂದು ಕುಟುಂಬದ ಐದು ಸದಸ್ಯರಿಗೆ ಒಂದರಿಂದ ಒಂದೂವರೆ ಲಕ್ಷ ರೂ.ಗಳ ಮೆಡಿಕಲ್ ಇನ್ಷೂರೆನ್ಸ್ ನೀಡಲಾಗುವುದು. ನಗರದ ನಾಲ್ಕು ಆಸ್ಪತ್ರೆಗಳಾದ ಫಾದರ್ ಮುಲ್ಲರ್ಸ್, ಎ.ಜೆ ಆಸ್ಪತ್ರೆ, ಯೆನಪೋಯ, ಕ್ಷೇಮದಲ್ಲಿ ಏಳು ಗಂಭೀರ ಕಾಯಿಲೆಗಳಿಗೆ ಈ ಯೋಜನೆಯಡಿ ಬಿಪಿಎಲ್ ಕಾಡ್ರ್  ಹೊಂದಿದವರಿಗೆ ಚಿಕಿತ್ಸೆ ನೀಡಲಾಗುವುದು. ಈ ಆಸ್ಪತ್ರೆಗಳಲ್ಲಿರುವ ಆರೋಗ್ಯ ಮಿತ್ರರು ರೋಗಿಗಳಿಗೆ ಚಿಕಿತ್ಸೆ ನೀಡುವರು. ಇದುವರೆಗ 60 ಜನರು ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದಾರೆ ಹಾಗೂ 37,80,000 ರೂ. ವೆಚ್ಚ ಮಾಡಲಾಗಿದೆ.
ರಾಜೀವ್ ಗಾಂಧಿ ವಿದ್ಯುದ್ದೀಕರಣ ಯೋಜನೆಯಡಿ ಎಲ್ ಅಂಡ್ ಟಿ ಕಂಪೆನಿಯು 353 ಹಳ್ಳಿಗಳಿಗೆ ವಿದ್ಯುತ್ ನೀಡಲಿದ್ದು, ಪುತ್ತೂರು ಹೊರತುಪಡಿಸಿ ಕಾಮಗಾರಿಗಳನ್ನು ಆರಂಭಿಸಲಾಗಿದೆ. 18 ತಿಂಗಳು ಯೋಜನೆ ಸಂಪೂರ್ಣಗೊಳಿಸಲು ಸಮಯಮಿತಿ ನಿಗದಿಪಡಿಸಲಾಗಿದೆ ಎಂದು ಮೆಸ್ಕಾಂ ಅಧಿಕಾರಿಗಳು  ಮಾಹಿತಿ ನೀಡಿದರು. ಮೂಡಬಿದ್ರೆಯ ಎಂಟು ಹಳ್ಳಿಗಳಲ್ಲಿ ಯೋಜನೆ ಸಂಪೂರ್ಣಗೊಂಡಿದೆ. ಮಳೆಗಾಲದಲ್ಲಿ 2.200 ಲೈಟ್ ಕಂಬಗಳು ಉರುಳಿದೆ. ಆದರೆ ವಿದ್ಯುತ್ ಪ್ರಸರಣದಲ್ಲಿ ಲೋಪವಾಗದಂತೆ ಒಂದು ಉಪವಿಭಾಗಕ್ಕೆ 15 ಜನ ಗ್ಯಾಂಗ್ ಮನ್ ಗಳ ತಂಡದೊಂದಿಗೆ ಸಮಸ್ಯೆ ಇರುವೆಡೆ ಸ್ಪಂದಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದರು.
ತೋಟಗಾರಿಕಾ ಇಲಾಖಾ ಉಪನಿದರ್ೇಶಕರು ಮಾಹಿತಿ ನೀಡಿ, ಇಲಾಖೆಗೆ ಕಳೆದ ಸಾಲಿನಲ್ಲಿ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆಯಡಿ 158.72 ಲಕ್ಷ ರೂ. ಒಟ್ಟು ಅನುದಾನ ಬಂದಿದು, 147.67 ಲಕ್ಷ ವ್ಯಯಿಸಿ ಶೇ. 93 ಪ್ರಗತಿ ದಾಖಲಿಸಿದೆ. ರೈತರಿಗೆ ಇಲಾಖೆ ನೇರವಾಗಿ ಔಷಧಿಗಳನ್ನು ನೀಡದೆ ಸಹಾಯಧನ ನೀಡುತ್ತಿದೆ ಎಂದರು.
ಸಂಸದರು ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶದ ಬಳಿ ಎಂಡೋಸಲ್ಫಾನ್ ಬಾವಿಗೆ ಸುರಿದ ಸಂಬಂಧ ಕೇಳಿದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಇದು ಕನರ್ಾಟಕದ ಗಡಿಪ್ರದೇಶದಿಂದ ಒಂದೂವರೆ ಕಿ.ಮೀ ದೂರವಿದ್ದು, ರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಈ ಬಗ್ಗೆ ಪತ್ರಿಸಿದ್ದು, ಅವರು ಇನ್ಸಿಟ್ಯೂಟ್ ಆಫ್ ಆಕ್ಯುಪೇಷನಲ್ ಹೆಲ್ತ್ ನವರು ಪರಿಶೀಲಿಸಲಿರುವರು ಎಂದರು.
ಅಕ್ಷರ ದಾಸೋಹ ಯೋಜನೆಯಲ್ಲಿ ತೂಕ ವ್ಯತ್ಯಾಸ ತಡೆಯಲು ಎಲ್ಲ ಶಾಲೆಗಳಿಗೆ ತೂಕದ ಯಂತ್ರ ನೀಡಲು ಜಿಲ್ಲಾ ಪಂಚಾಯತ್ ನಲ್ಲಿ ನಿರ್ಧರಿಸಲಾಗಿದೆ ಸಿಇಒ ಡಾ ಕೆ ಎನ್ ವಿಜಯಪ್ರಕಾಶ್ ಅವರು ಹೇಳಿದರು.
ಶಿರಾಡಿ ಘಾಟಿಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅನುಕೂಲವಾಗುವಂತೆ ನೆಲ್ಯಾಡಿ ಬಳಿ ಸಾರ್ವಜನಿಕ ಶೌಚಾಲಯ ಜುಲೈ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ. ಆದರೆ ಗುಂಡ್ಯ ಬಳಿ ಜಾಗದ ಲಭ್ಯತೆ ಇಲ್ಲ ಎಂದು ಅಧಿಕಾರಿಗಳು ಸಭೆಯಲ್ಲಿ ವಿಷಯ ಸೂಚಿಗೆ ಸಂಬಂಧಿಸಿ ಮಾಹಿತಿ ನೀಡಿದರು.
ಈ ಸಂದರ್ಭ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಮಾನವೀಯತೆಯ ನೆಲೆಯಲ್ಲಿ ಅರಣ್ಯ ಅಧಿಕಾರಿಗಳು ಈ ಬಗ್ಗೆ ಆಲೋಚಿಸಿ ಕಾರ್ಯಪ್ರವೃತ್ತರಾಗಬೇಕು. ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಸಮತಟ್ಟಾದ ಸ್ವಲ್ಪ ಜಾಗದಲ್ಲಿ ಸಾರ್ವಜನಿಕರಿಗೆ ಶೌಚಾಲಯ ನಿರ್ಮಾಣಕ್ಕೆ ಜಾಗ ಇದೆಯೇ ಎಂಬುದನ್ನು ಸಹಾಯಕ ಆಯುಕ್ತರ ಜೊತೆ ಸೇರಿ ಪರಿಶೀಲಿಸುವಂತೆ ಅವರು ಅರಣ್ಯ ಅಧಿಕಾರಿಗಳಿಗೆ ಸಲಹೆ ನೀಡಿದರು.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ನಮ್ಮ ಜಿಲ್ಲೆ ಪ್ರಥಮವಾಗಲು ಏನು ಹೊಸ ಪ್ರಯೋಗಗಳನ್ನು ಕೈಗೊಳ್ಳಲಾಗಿದೆ ಎಂದು ಸಂಸದರು ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್ ಮಾತನಾಡಿ, ಉಳಿದ ಜಿಲ್ಲೆಗಳಿಗೆ ಹೋಲಿಸಿದರೆ ದ.ಕ. ಜಿಲ್ಲೆಯಲ್ಲಿ ಈ ಯೋಜನೆಯಡಿ ಶೇ. 93ರಷ್ಟು ಪ್ರಗತಿ ಮಾಡಲಾಗಿದೆ ಎಂದರು.
ಸಾಮೂಹಿಕ ಕೆಲಸ ಕಾರ್ಯಗಳ ಅವಕಾಶ ಜಿಲ್ಲೆಯಲ್ಲಿ ಕಡಿಮೆಯಾಗಿದ್ದು, ಈ ಬಾರಿ ತೋಟಗಳ ಬುಡ ಬಿಡಿಸುವ ಕೆಲಸಗಳಿಗೆ ಉದ್ಯೋಗ ಖಾತ್ರಿ ಯೋಜನೆಯನ್ನು ಉಪಯೋಗಿಸಲು ಅವಕಾಶ ಕೋರಲಾಗಿದೆ. ಮಾತ್ರವಲ್ಲದೆ, ಇಲ್ಲಿ 49,000ಕ್ಕೂ ಅಧಿಕ ಮಂದಿ ಜಾಬ್ ಕಾರ್ಡ್ ಹೊಂದಿರುವವರು ಇದ್ದರೂ ಕೆಲಸ ಪಡೆಯಲು ಬರುವವರು ಕೇವಲ 10,000 ಮಂದಿ ಮಾತ್ರ. ಹಾಗಾಗಿ ಈ ಬಾರಿ ಕೆಲಸ ಕೇಳದವರ ಜಾಬ್ ಕಾರ್ಡ್ ಅನರ್ಹಗೊಳಿಸುವ ಮೂಲಕ ಅರ್ಹರಿಗೆ ಕೆಲಸ ಸಿಗುವ ವ್ಯವಸ್ಥೆ ಮಾಡುವಂತಾಗಬೇಕು ಎಂದು ವಿಜಯ ಪ್ರಕಾಶ್ ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್  ಅಧ್ಯಕ್ಷ ಕೊರಗಪ್ಪ ನಾಯ್ಕ, ಉಪಾಧ್ಯಕ್ಷ ರಿತೇಶ್ ಶೆಟ್ಟಿ ಉಪಸ್ಥಿತರಿದ್ದರು.

ಅಟೋರಿಕ್ಷಾ ಚಾಲಕರ ಸಮಸ್ಯೆ ಪರಿಹಾರಕ್ಕೆ 10 ದಿನಗಳಲ್ಲಿ ವಿಶೇಷ ಸಭೆ-ಯು.ಟಿ.ಖಾದರ್

ಮಂಗಳೂರು, ಜುಲೈ.06:- ದಕ್ಷಿಣಕನ್ನಡ ಜಿಲ್ಲಾ ಅಟೋರಿಕ್ಷಾ ಚಾಲಕರ ಸಮಸ್ಯೆಗಳ ಪರಿಹಾರಕ್ಕೆ 10 ದಿನಗಳಲ್ಲಿ ವಿಶೇಷ ಆರ್. ಟಿ.ಎ.ಸಭೆ ಕರೆದು ಪರಿಹಾರ ಮಾಡಲಾಗುವುದೆಂದು ಆರೋಗ್ಯ ಖಾತೆ ಸಚಿವರಾದ  ಯು.ಟಿ.ಖಾದರ್ ಅವರು ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯಲ್ಲಿ ಇಂದು ನಡೆದ ಸಭೆಯಲ್ಲಿ ತಿಳಿಸಿದರು.
ಗ್ರಾಮಾಂತರ ಪ್ರದೇಶಗಳ ಪರವಾನಿಗೆ ಹೊಂದಿರುವ ಅಟೋರಿಕ್ಷಾಗಳು ನಗರ ಪ್ರದೇಶಕ್ಕೆ  ಬಂದು ಬಾಡಿಗೆ ಮಾಡುತ್ತಿರುವುದರಿಂದ ನಗರ ಪರವಾನಿಗೆ ಹೊಂದಿರುವ ರಿಕ್ಷಾದವರಿಗೆ ತೊಂದರೆಯಾಗುತ್ತಿದೆ ಎಂದು ರಿಕ್ಷಾ ಚಾಲಕರು ತಮ್ಮ ಅಳಲನ್ನು ಸಚಿವರಲ್ಲಿ ತೋಡಿಕೊಂಡಾಗ,ಇನ್ನು ಮುಂದೆ ಗ್ರಾಮಾಂತರ ಪ್ರದೇಶದ ರಿಕ್ಷಾಗಳು ನಗರಕ್ಕೆ ಬಂದು ಕೂಡಲೇ ಹಿಂತಿರುಗಬೇಕು. ತಪ್ಪಿದಲ್ಲಿ ಅಂತಹ ಅಟೋಗಳ ವಿರುದ್ಧ ಯಾವ ಕ್ರಮ ಕೈಗೊಳ್ಳಬಹುದು ಎಂಬ ಕುರಿತು ಸಾರಿಗೆ ಇಲಾಖೆ ಅಧಿಕಾರಿಗಳು ಕ್ರಮ ಕೈಗೊಳ್ಳಲಿದ್ದಾರೆ ಎಂದು ಸಚಿವರು ತಿಳಿಸಿದರು.
ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಮಲ್ಲಿಕಾರ್ಜುನ, ಎಸಿಪಿ ಸುಬ್ರಹ್ಮಣ್ಯ ರಾವ್, ದಕ್ಷಿಣಕನ್ನಡ ಜಿಲ್ಲಾ ಅಟೋರಿಕ್ಷಾ ಸಂಘದ ಅಧ್ಯಕ್ಷ ವಿಷ್ಣುಮೂರ್ತಿಯವರು ಹಾಜರಿದ್ದರು.

Thursday, July 4, 2013

ಜಲಾವೃತ್ತ ಪ್ರದೇಶಗಳಿಗೆ ಅಪರ ಜಿಲ್ಲಾಧಿಕಾರಿ ಭೇಟಿ

ಮಂಗಳೂರು, ಜುಲೈ.0 4:ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಪ್ರದೇಶಗಳಲ್ಲಿ ನೀರು ಪ್ರವಾಹೋಪಾದಿಯಲ್ಲಿ ಉಕ್ಕಿ ಹರಿದ ಪರಿಣಾಮವಾಗಿ ಅನೇಕ ಮನೆಗಳು ಜಲಾವೃತ್ತಗೊಂಡಿದೆ. ಮೂವರು ನೀರು ಪಾಲಾಗಿದ್ದಾರೆ. ಹಾಗೂ ಜಲಾವೃತ್ತಗೊಂಡಿರುವ ನಿವಾಸಿಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕಾರ್ಯವನ್ನು ಆಯಾ ತಾಲೂಕಿನ ತಹಶೀಲ್ದಾರರೊಂದಿಗೆ ಅಪರ ಜಿಲ್ಲಾಧಿಕಾರಿ ದಯಾನಂದ ಅವರು ನಿನ್ನೆ ರಾತ್ರಿಯಿಂದ  ಕೈಗೊಂಡಿದ್ದಾರೆ.
ದಿನಾಂಕ 3-7-13 ರ ಮಧ್ಯರಾತ್ರಿ 12.00 ಗಂಟೆಯಲ್ಲಿ ಶಿರಾಡಿ ಘಾಟ್ ಗುಂಡ್ಯ ರಸ್ತೆಗೆ ಮರವೊಂದು ಉರುಳಿ ಬಿದ್ದ ಪರಿಣಾಮವಾಗಿ ರಸ್ತೆ ಬಂದ್ ಆಗಿ ಸಂಚಾರ ಅಸ್ತವ್ಯಸ್ತವಾಗಿತ್ತು. ಈ ಹೊತ್ತಿನಲ್ಲಿ ಬೆಳ್ತಂಗಡಿ ತಾಲೂಕಿನ ತಹಶೀಲ್ದಾರರು ಕೂಡಲೇ ಸ್ಥಳಕ್ಕೆ ತೆರಳಿ ಪರಿಹಾರ ಕಾರ್ಯವನ್ನು ಕೈಗೊಂಡು ಕೂಡಲೇ ಮರವನ್ನು ಅಲ್ಲಿಂದ ತೆರವುಗೊಳಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಗೊಳಿಸಿದರು.
ಬಂಟ್ವಾಳ ತಾಲೂಕಿನಲ್ಲಿ ಮಳೆಯಿಂದಾಗಿ ನೆಲಮಳಿಗೆಗಳಲ್ಲಿರುವ ನಿವಾಸಿಗಳು ಪ್ರವಾಹದ ಪರಿಣಾಮವಾಗಿ ಜಲಾವೃತ್ತವಾಗಿ ಮುಳುಗಡೆಯಾಗುತ್ತಿದ್ದವರನ್ನು ಬೋಟ್ಗಳ ಸಹಾಯದಿಂದ ಸ್ಥಳೀಯ ಅಧಿಕಾರಿಗಳ ನೆರವಿನಿಂದ ರಕ್ಷಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ, ತಹಶೀಲ್ದಾರ್ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ಯಾವುದೇ ಅನಾಹುತ ಸಂಭವಿಸದಂತೆ ಕಟ್ಟೆಚ್ಚರ ವಹಿಸಲು ಅಪರ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
 ಉಪ್ಪಿನಂಗಡಿ ಬಳಿ ನದಿ ಅಪಾಯದ ಮಟ್ಟ ಮೀರಿರರುವುದರಿಂದ ವಾಹನಗಳ ಸುಗಮ ಸಂಚಾರಕ್ಕೂ ಹಾಗೂ ಸ್ಥಳಿಯ ನಿವಾಸಿಗಳು ತೊಂದರೆಯಾಗುತ್ತಿದ್ದುದನ್ನು ಮನಗಂಡು ಅವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿ ವಾಹನಗಳ ಓಡಾಟದ ಮಾರ್ಗವನ್ನು ಬದಲಾಯಿಸಲಾಯಿತು. ಸರಕಾರಿ ಕಾಲೇಜಿನಲ್ಲಿ ಗಂಜಿ ಕೇಂದ್ರ ತೆರೆಯಲಾಗಿತ್ತು. ಜಲಾವೃತ್ತ ಮನೆಗಳವರಿಗೂ ಹಾಗೂ ಅಗತ್ಯ ಇರುವವರಿಗೆ ನೆರವು ಕಲ್ಪಿಸಲಾಯಿತು.
 ಬೆಳ್ತಂಗಡಿ ತಾಲೂಕಿನ ವೇಣೂರು ರಸ್ತೆ ಕಡಿತಗೊಂಡಿದ್ದು ಇದನ್ನು ಸರಿಪಡಿಸಲಾಯಿತು. ಇದೇ ತಾಲೂಕಿನಲ್ಲಿ  ಒಬ್ಬ ವ್ಯಕ್ತಿ ಹಳ್ಳ ದಾಟುವಾಗ ಆಕಸ್ಮಿಕವಾಗಿ ಕಾಲುಜಾರಿ ಸಾವನ್ನಪ್ಪಿದ್ದು, ಆತನ ಕುಟುಂಬಕ್ಕೆ ತಹಶೀಲ್ದಾರರ ಮೂಲಕ ಪರಿಹಾರ ಒದಗಿಸುವ ಕಾರ್ಯವನ್ನು ಕೈಗೊಳ್ಳಲಾಗಿದೆ.
ಬಂಟ್ವಾಳ ತಾಲೂಕಿನ ಅಮ್ಮುಂಜೆ ಬಳಿ ನೀರುಪಾಲಾದವರನ್ನು  ಪತ್ತೆ ಹಚ್ಚಲು ಕರಾವಳಿ ರಕ್ಷಣಾ ಪಡೆಯವರ ನೆರವು ಪಡೆಯಲಾಗಿದೆ. ಮಂಗಳೂರು ತಾಲೂಕಿನ ಅಡ್ಯಾರಿನಲ್ಲಿ 25 ಮನೆಗಳು,ಹಾಗೂ ಕಂದಾವರದಲ್ಲಿ ಎರಡು ಮನೆಗಳು ಸೇರಿದಂತೆ ಇತರೆಡೆಗಳಲ್ಲಿ ಹಲವಾರು ಮನೆಗಳು ಹಾನಿಗೀಡಾಗಿವೆಯೆಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.
ತುತರ್ು ರಕ್ಷಣಾ ಕಾರ್ಯ ಕೈಗೊಳ್ಳಲು ಕಂದಾಯ ಇಲಾಖೆಯ ಎರಡು, ಅಗ್ನಿ ಶಾಮಕ ಇಲಾಖೆಯ ಒಂದು ,ಗೃಹರಕ್ಷಕ ದಳದ 2 ಬೋಟುಗಳು ಸೇರಿದಂತೆ ಖಾಸಗಿಯವರಿಂದ ಹಲವು ಬೋಟುಗಳನ್ನು ಪಡೆಯಲಾಗಿದೆಯೆಂದು ಅವರು ತಿಳಿಸಿರುತ್ತಾರೆ.
ಜಿಲ್ಲಾಡಳಿತ ಜಿಲ್ಲೆಯಾದ್ಯಂತ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡಿದ್ದು ಯಾವುದೇ ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸಲು ಮಾನಿಟರಿಂಗ್ ಸಮಿತಿಗಳನ್ನು ರಚಿಸಿದ್ದು ಜನರು ಆತಂಕಕ್ಕೆ ಒಳಗಾಗಬಾರದೆಂದು ಹಾಗೂ ತುರ್ತು ಸಂದರ್ಭದಲ್ಲಿ ನೆರವಿಗಾಗಿ 1077 ದೂರವಾಣಿ ಸಂಖ್ಯೆಗೆ ಕರೆಮಾಡಲು ಅಪರ ಜಿಲ್ಲಾಧಿಕಾರಿಗಳು ವಿನಂತಿಸಿದ್ದಾರೆ.  

ಮಳೆ ಅಬ್ಬರಕ್ಕೆ 408 ಮನೆಗಳಿಗೆ ಜಖಂ 72.64 ಲಕ್ಷ ನಷ್ಟ

 ಮಂಗಳೂರು, ಜುಲೈ.04 : ದಕ್ಷಿಣಕನ್ನಡ ಜಿಲ್ಲೆಯಲ್ಲಿ ಈ ಬಾರಿಯ ಮುಂಗಾರು ಹಂಗಾಮಿನಲ್ಲಿ ಜೂನ್ ಅಂತ್ಯದ ವರೆಗೆ ಸುರಿದ ಮಳೆಯಿಂದಾಗಿ ಒಟ್ಟು 408 ಮನೆಗಳು ಜಖಂ ಗೊಂಡು ಒಟ್ಟು 72.64 ಲಕ್ಷ ರೂ.ಗಳಷ್ಟು ನಷ್ಟವುಂಟಾಗಿದ್ದುಈಗಾಗಲೇ12.98 ಲಕ್ಷ ರೂ.ಗಳ ಪರಿಹಾರ ವಿತರಿಸಲಾಗಿದೆ.
ಇದೇ ಅವಧಿಯಲ್ಲಿ ಜಿಲ್ಲೆಯಲ್ಲಿ 12 ಜನರು ಪ್ರಾಣ ಕಳೆದುಕೊಂಡಿದ್ದು, ಅವರಲ್ಲಿ 3 ಜನರಿಗೆ ರೂ.4.50 ಲಕ್ಷ ಪರಿಹಾರ ನೀಡಿದ್ದು, ಇನ್ನು 9 ಜನರಿಗೆ ಪರಿಹಾರ ನೀಡಲುಬಾಕಿ ಇದೆ.
8 ಜಾನುವಾರುಗಳು ಮರಣಿಸಿದ್ದು, ಇವುಗಳ ಮಾಲೀಕರಿಗೆ ರೂ.20,000/- ಪರಿಹಾರ ವಿತರಿಸಲಾಗಿದೆ. 7 ಪಕ್ಕಾ ಮನೆಗಳಿಗೆ ಪೂರ್ಣ ಹಾನಿಯಾಗಿದ್ದು, ಇದರ ಒಟ್ಟು ನಷ್ಟ 5.37 ಲಕ್ಷಗಳಾಗಿದ್ದು, ಈಗಾಗಲೇ 5 ಜನರಿಗೆ ರೂ.1.33 ಲಕ್ಷ ಪರಿಹಾರ ಒದಗಿಸಲಾಗಿದೆ. 9 ಕಚ್ಚಾ ಮನೆಗಳು ಪೂರ್ಣ ಹಾನಿಗೊಳಗಾಗಿದ್ದು, 11.78 ಲಕ್ಷ ನಷ್ಟ  ಸಂಭವಿಸಿದೆ, ರೂ.52 ಸಾವಿರ ಪರಿಹಾರ ನೀಡಿದೆ.
75 ಪಕ್ಕಾ ಮನೆಗಳಿಗೆ ತೀವ್ರ ಹಾನಿಯಾಗಿದ್ದು, ಇದರಿಂದ ರೂ.22.9 ಲಕ್ಷ ನಷ್ಟ ಸಂಭವಿಸಿದ್ದು ರೂ.4.66 ಲಕ್ಷ ಪರಿಹಾರ ಪಾವತಿಯಾಗಿದೆ.ತೀವ್ರವಾಗಿ ಹಾನಿಯಾಗಿದ್ದ 30 ಕಚ್ಚಾ ಮನೆಗಳಿಂದ ರೂ.5.15 ಲಕ್ಷ ನಷ್ಟವುಂಟಾಗಿದ್ದು ಇಲ್ಲಿಯವರೆಗೆ ರೂ.92,000 ಪರಿಹಾರ ದೊರಕಿಸಲಾಗಿದೆ. 287 ಮನೆಗಳಿಗೆ ಭಾಗಶ: ಹಾನಿಯಾಗಿದ್ದು ಇದರಿಂದ ಒಟ್ಟು 27.44 ಲಕ್ಷ  ಸಂಭವಿಸಿದ್ದು ರೂ.5.55 ಲಕ್ಷ ಪಾವತಿಸಲಾಗಿದೆ. 

Monday, July 1, 2013

ಲೋಕ ಅದಾಲತ್ ಮೂಲಕ ಜಿಲ್ಲೆಯಲ್ಲಿ 5 ತಿಂಗಳಲ್ಲಿ 3126 ಮೊಕದ್ದಮೆ ಇತ್ಯರ್ಥ

ಮಂಗಳೂರು, ಜುಲೈ. 01: ತ್ವರಿತ ನ್ಯಾಯದಾನ ಹಾಗೂ ಕಕ್ಷಿದಾರನ ಜೇಬಿಗೆ ಹೆಚ್ಚು ಹೊರೆಯಾಗದ ರೀತಿಯಲ್ಲಿ ಲೋಕ ಅದಾಲತ್(ಜನತಾ ನ್ಯಾಯಾಲಯ) ಮೂಲಕ ಸೌಹಾರ್ದ ವಾತಾವರಣದಲ್ಲಿ ನ್ಯಾಯದಾನ ಇಂದಿನ ವಿಶೇಷತೆಯಾಗಿದ್ದು ದಕ್ಷಿಣಕನ್ನಡ ಜಿಲ್ಲೆಯಲ್ಲಿ  2013 ರ ಜನವರಿಯಿಂದ 2013 ಮೇ ಅಂತ್ಯದ ವರೆಗೆ 5 ತಿಂಗಳಲ್ಲಿ 282 ಸಿಟ್ಟಿಂಗ್ ಗಳ ಮೂಲಕ ಒಟ್ಟು 3126 ವಿವಿಧ ಮೊಕದ್ದಮೆಗಳನ್ನು ಇತ್ಯರ್ಥಪಡಿಸಿ ಸಾಧನೆ ಮಾಡಲಾಗಿದೆ.
ಇದರಲ್ಲಿ ಮೋಟಾರು ವಾಹನಗಳಿಗೆ  ಸಂಬಂಧಿಸಿದ 53 ಪ್ರಕರಣಗಳು,2834 ಕ್ರಿಮಿನಲ್ ಮೊಕದ್ದಮೆಗಳು,239 ಸಿವಿಲ್  ವ್ಯಾಜ್ಯಗಳು ಸೇರಿವೆ.  ಇತ್ಯರ್ಥವಾದ ಮೋಟಾರು ವಾಹನಗಳ ಮೊಕದ್ದಮೆಗಳಲ್ಲಿ ಪುತ್ತೂರು ತಾಲ್ಲೂಕಿನ 8 ಮೊಕದ್ದಮೆಗಳು ಇತ್ಯರ್ಥವಾಗಿದ್ದು,ರೂ.6,21,000ಗಳ ಪರಿಹಾರ ದೊರಕಿಸಿದ್ದರೆ,ಮಂಗಳೂರು ತಾಲೂಕಿನ 45 ಮೊಕದ್ದಮೆಗಳು ಇತ್ಯರ್ಥವಾಗಿದ್ದು, ಇದರಿಂದ ರೂ.40,77,000/-ಪರಿಹಾರ ಧನ ದೊರಕಿಸಲಾಗಿದೆ.
                                

ಕಾನೂನು ಸಾಕ್ಷರತಾ ರಥ ಸಂಚಾರಕ್ಕೆ ಚಾಲನೆ

ಮಂಗಳೂರು, ಜುಲೈ.01:- ಜನ ಸಾಮಾನ್ಯರಿಗೆ ಕಾನೂನು ಮಾಹಿತಿಯನ್ನು ಒದಗಿಸಿ ಅವರಲ್ಲಿ ಕಾನೂನಿನ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಇಂದಿನಿಂದ ಮೂರು ದಿನಗಳ ಕಾಲ (1-7-13 ರಿಂದ 3-7-13) ಮಂಗಳೂರು ತಾಲೂಕಿನಲ್ಲಿ ಕಾನೂನು ಸಾಕ್ಷರತಾ ರಥ ಹಾಗೂ ಸಂಚಾರಿ ಜನತಾ ನ್ಯಾಯಾಲಯ ಅಭಿಯಾನವನ್ನು ಹಮ್ಮಿಕೊಂಡಿದ್ದು, ಕಾನೂನು ಸಾಕ್ಷರತಾ ರಥಕ್ಕೆ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಅಧ್ಯಕ್ಷರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮಂಗಳೂರು ಚೌಡಾಪುರ್ಕರ್ ಅರುಣ್ ಅವರು ನ್ಯಾಯಾಲಯ ಆವರಣದಲ್ಲಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್.ಪ್ರಕಾಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್, ವಕೀಲರ ಸಂಘದ ಅಧ್ಯಕ್ಷರಾದ ಪಿ.ಅಶೋಕ ಅರಿಗಾ, ಪ್ರಾದೇಶಿಕ ಸಾರಿಗೆ ಅಧಿಕಾರಿ  ಮಲ್ಲಿಕಾರ್ಜುನ ಮುಂತಾದವರು ಹಾಜರಿದ್ದರು.