Saturday, July 31, 2010

ವಸತಿರಹಿತರಿಗೆ ಬಸವ ಇಂದಿರ ವಸತಿ ಯೋಜನೆ

ಮಂಗಳೂರು,ಜು.31: 2010-11ನೇ ಸಾಲಿನಿಂದ ಕೇಂದ್ರ ಪುರಸ್ಕೃತ ಇಂದಿರಾ ಆವಾಸ್ ಯೋಜನೆಯನ್ನು ಪರಿಷ್ಕರಣೆಗೊಳಿಸಿ ರಾಜ್ಯದಲ್ಲಿರುವ ಎಲ್ಲ ಅರ್ಹ ಗುಡಿಸಲು ವಾಸಿಗಳಿಗೆ ಮತ್ತು ವಸತಿ ರಹಿತರಿಗೆ ಬಸವ ಇಂದಿರಾ ವಸತಿ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಅವರು ಹೇಳಿದರು.
ಈ ಯೋಜನೆಯಡಿ 63500 ಘಟಕ ವೆಚ್ಚ ಇದ್ದು, ಇದರಲ್ಲಿ 35000 ಕೇಂದ್ರದ ಪಾಲು ಹಾಗೂ ಬಾಕಿ ರೂ. 15000 ರೂ.ವನ್ನು ರಾಜ್ಯ ಸರ್ಕಾರದ ಸಹಾಯ ಧನವಿರುತ್ತದೆ. ರೂ. 10,000 ಗಳನ್ನು ಫಲಾನುಭವಿಯ ಬ್ಯಾಂಕುಗಳಿಂದ ಡಿ ಆರ್ ಐ ಯೋಜನೆಯಡಿ ಸಾಲ ಪಡೆಯಬಹುದು.ಹಾಗೂ 3500 ರೂ.ಗಳನ್ನು ಫಲಾನುಭವಿಯ ಸ್ವಂತ ವಂತಿಕೆಯಿಂದ ಭರಿಸಬೇಕು.
ಈ ಯೋಜನೆಯಡಿ ಫಲಾನುಭವಿಗಳ ಗುರಿಯನ್ನು ಈಗಾಗಲೇ ಎಲ್ಲ ಗ್ರಾ.ಪಂಗಳಲ್ಲಿ ಮಾಡಲಾದ ಗುಡಿಸಲು ವಾಸಿಗಳ ಸಮೀಕ್ಷೆಯ ಆಧಾರದಲ್ಲಿ ನಿಗದಿಪಡಿಸಿ ರಾಜೀವ್ ಗಾಂಧಿ ಗ್ರಾಮೀಣ ವಸಿ ನಿಗಮ ಎಲ್ಲ ತಾಲೂಕುಗಳಿಗೆ ಹಂಚಿಕೆ ಮಾಡಿದೆ. ದ.ಕ ಜಿಲ್ಲೆಗೆ ಮೊದಲ ಹಂತದಲ್ಲಿ ಮಂಗಳೂರು-54, ಪುತ್ತೂರು-185 ಹಾಗೂ ಸುಳ್ಯ -54 ಒಟ್ಟು 293 ಮನೆಗಳ ಗುರಿ ನೀಡಲಾಗಿದೆ ಎಂದು ಸಿಇಒ ವಿವರಿಸಿದರು. ಮುಂದಿನ ಹಂತಗಳಲ್ಲಿ ಜಿಲ್ಲೆಗೆ ಇನ್ನೂ ಹೆಚ್ಚಿನ ಗುರಿಯನ್ನು ನಿರೀಕ್ಷಿಸಲಾಗಿದೆ ಎಂದು ಮೀಟ್ ದ ಪ್ರೆಸ್ ಕಾರ್ಯಕ್ರಮದಲ್ಲಿ ತಿಳಿಸಿದರು.

ಶುದ್ಧ ಕುಡಿಯುವ ನೀರು ಪೂರೈಕೆ: ರಾಷ್ಟ್ರಕ್ಕೆ ದ.ಕ ಜಿಲ್ಲೆ ಮಾದರಿ- ಜಿ.ಪಂ.ಸಿಇಒ

ಮಂಗಳೂರು,ಜು.31:ಗ್ರಾಮೀಣ ಪ್ರದೇಶಗಳಿಗೆ ಶುದ್ಧ ಕುಡಿಯುವ ನೀರನ್ನು ನಿರಂತರವಾಗಿ ಪೂರೈಸಲು ಹಾಗೂ ನೀರಿನ ದುರುಪಯೋಗವಾಗದಂತೆ ತಡೆಯಲು ಮೀಟರ್ ಅಳವಡಿಸುವಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ರಾಷ್ಟ್ರಕ್ಕೆ ಮಾದರಿಯಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ. ಶಿವಶಂಕರ್ ಅವರು ಹೇಳಿದರು.
ಅವರಿಂದು ಮಂಗಳೂರು ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಪ್ರತಿನಿಧಿ ಗಳೊಂದಿ ಗಿನ ಸಂವಾದ ಕಾರ್ಯ ಕ್ರಮದಲ್ಲಿ ಪಾಲ್ಗೊಂಡು ಜಿಲ್ಲಾ ಪಂಚಾಯತ್ ಮೌನವಾಗಿ ನಡೆಸಿರುವ ಸಾಧನೆಗಳನ್ನು ವಿವರಿಸಿದರು. ಗ್ರಾಮ ಪಂಚಾಯತ್ ಗಳು ಜಿಲ್ಲಾ ಕೇಂದ್ರಗಳು ಕಾರ್ಯ ನಿರ್ವಹಿಸುವ ಮಾದರಿಯಲ್ಲೇ ರೂಪುಗೊಳ್ಳಲು ಹಾಕಿಕೊಂಡಿರುವ ಯೋಜನೆಗಳನ್ನು ಸಭೆಗೆ ತಿಳಿಸಿದ ಅವರು, ಗ್ರಾಮ ಪಂಚಾಯತ್ ಗಳ ಸಬಲೀಕರಣಕ್ಕೆ ಪಿಡಿಒಗಳ ನೇಮಕ ಬಹಳಷ್ಟು ಶಕ್ತಿ ತುಂಬಲಿದೆ ಎಂದರು.ಜಿಲ್ಲೆಯಲ್ಲಿ ಬಂಟ್ವಾಳ ಮತ್ತು ಮಂಗಳೂರು ನೀರಿನ ಸಮಸ್ಯೆಯನ್ನು ಎದುರಿಸುತ್ತಿದ್ದು ನೀರಿನ ಮೂಲಗಳ ಜಲ ಮರು ಪೂರಣಕ್ಕೆ ಹಾಗೂ ನಿರಂತರ ನೀರನ್ನು ಒದಗಿಸಲು ಎರಡೂವರೆ ಕೋಟಿ ರೂ.ಗಳ ವೆಚ್ಚದಲ್ಲಿ ಯೋಜನೆ ರೂಪಿಸಿ ಕಾರ್ಯಾರಂಭ ಮಾಡಲಾಗಿದೆ. ಈ ಸಂಬಂಧ ಮೊದಲ ಹಂತದ ಪ್ರಯೋಗವಾಗಿ ಕಿನ್ನಿಗೋಳಿ, ಹಳೆಯಂಗಡಿ, ತೋಕೂರು, ಗೋಳ್ತ ಮಜಲುಗಳನ್ನು ಆರಿಸಲಾಗಿದೆ ಎಂದರು. 203 ಗ್ರಾಮ ಪಂಚಾಯತ್ ಗಳ 127 ಗ್ರಾಮ ಪಂಚಾಯತ್ ಗಳಲ್ಲಿ 86,000 ನೀರು ಸಂಪರ್ಕ ನೀಡಿದ್ದು, 39,000 ನೀರಿನ ಸಂಪರ್ಕಕ್ಕೆ ಮೀಟರ್ ಅಳವಡಿಸಲಾಗಿದೆ ಎಂದರು. ಈ ಸಂದರ್ಭದಲ್ಲಿ ಯೋಜನೆ ಯಶಸ್ಸಿಗೆ ಜನರ ಸಹಕಾರವನ್ನು ಸ್ಮರಿಸಿದ ಅವರು, ನವದೆಹಲಿಯಲ್ಲಿ 5 ದೇಶಗಳು ಪಂಚತಂತ್ರ:ಪಾಲ್ಗೊಂಡ ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಾದರಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿತ್ತು ಎಂದರು.ವ್ಯವಸ್ಥೆಯನ್ನು ಪಾರದರ್ಶಕ ಗೊಳಿಸುವ ನಿಟ್ಟಿನಲ್ಲಿ ಹಾಗೂ ಗ್ರಾಮ ಪಂಚಾಯತ್ ಗಳ ಕಾರ್ಯವೈಖರಿಯನ್ನು ಪರಿಶೀಲಿಸಲು ಪೂರಕವಾಗಿ ಎಲ್ಲ 203 ಗ್ರಾಮ ಪಂಚಾಯಿತಿ ಗಳನ್ನು ಆನ್ ಲೈನ್ ಗೊಳಿಸಲಾಗಿದ್ದು, ಡಬಲ್ ಎಂಟ್ರಿ ಸಿಸ್ಟಮ್ ನ್ನು ಜಾರಿಗೊಳಿಸಿದೆ. ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಈ ವ್ಯವಸ್ಥೆಯನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲು ಚಾರ್ಟೆಡ್ ಅಕೌಂಟೆಂಟ್ ಗಳ ನೆರವನ್ನು ಪಡೆಯಲಾಗಿದೆ. ಈ ವೆಬ್ ಬೇಸ್ಡ್ ಸಾಫ್ಟ್ ವೇರ್ ನಿಂದ ಮಾನಿಟರಿಂಗ್ ಗೆ ಸಹಕಾರ ದೊರೆಯಲಿದೆ ಎಂದರು.
ಘನ ಹಾಗೂ ದ್ರವ ತ್ಯಾಜ್ಯ ವಿಲೇವಾರಿಗೆ ನೀಡಿರುವ ಆದ್ಯತೆ, ಸ್ವಚ್ಛತಾ ಆಂದೋಲನ ನಿರಂತರವಾಗಿ ನಡೆಯಲು ಕೈಗೊಂಡಿರುವ ಕ್ರಮ, ಸ್ವಚ್ಛತಾ ಪುರಸ್ಕಾರಗಳು ಇದೇ ಉದ್ದೇಶಕ್ಕೆ ಸದ್ಬಳಕೆ ಯಾಗುವಂತೆ ವಹಿಸಿದ ಮುತುವರ್ಜಿಯ ಬಗ್ಗೆ ಸಿಇಒ ಪತ್ರಕರ್ತರಿಗೆ ಮಾಹಿತಿ ನೀಡಿದರು.
ಸುವರ್ಣ ಗ್ರಾಮೋದಯ: ಸುವರ್ಣ ಗ್ರಾಮೋದಯ ಯೋಜನೆ ಯಡಿ 65 ಗ್ರಾಮಗಳಲ್ಲಿ ನಿರುದ್ಯೋಗ ಹೊಂದಿರುವ ಯುವಕ/ಯುವತಿಯರಿಗೆ ಕೌಶಲಾಭಿವೃದ್ಧಿ ತರಬೇತಿ ನೀಡಲು 243.63ಲಕ್ಷ ಅನುದಾನ ಲಭ್ಯವಿದೆ. ಈ ಬಗ್ಗೆ ಫಲಾನುಭವಿ ಆಯ್ಕೆ ಪ್ರಕ್ರಿಯೆ ಗ್ರಾಮ ಪಂಚಾಯತ್ ಮಟ್ಟದಲ್ಲಿ ಈಗಾಗಲೇ ಆರಂಭಗೊಂಡಿದೆ. 7 ರಿಂದ 12 ರವರೆಗೆ ಕಲಿತು ನಿರುದ್ಯೋಗಿ ಗಳಾಗಿರುವ ಗ್ರಾಮೀಣ ಮಟ್ಟದ ಯುವಶಕ್ತಿಗೆ ಅವರು ಇಚ್ಛಿಸುವ ಕೌಶಲ್ಯಾಭಿವೃದ್ಧಿ ತರಬೇತಿ ನೀಡಿ ಸ್ಥಳೀಯವಾಗಿ ಉದ್ಯೋಗ ದೊರಕಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.
ಭಾರತ ನಿರ್ಮಾಣ ರಾಜೀವ್ ಗಾಂಧಿ ಸೇವಾ ಕೇಂದ್ರ:ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ರೂ.10.00 ಲಕ್ಷ ಹಾಗೂ ತಾಲೂಕು ಪಂಚಾಯತ್ ಮಟ್ಟದಲ್ಲಿ ರೂ. 25.00 ಲಕ್ಷ ವೆಚ್ಚದಡಿ ಭಾರತ ನಿರ್ಮಾಣ ರಾಜೀವ್ ಗಾಂಧಿ ಸೇವಾ ಕೇಂದ್ರವನ್ನು ನಿರ್ಮಿಸಲು ಅನುದಾನವಿದೆ. ಈ ಕೇಂದ್ರವು ಎಂಜಿಎನ್ಆರ್ಇಜಿಎ ಕಾರ್ಯಕ್ರಮ ಅನುಷ್ಠಾನಕ್ಕೆ ಸ್ಥಳಾವಕಾಶ, ಗ್ರಾಮಸಭೆಗಳನ್ನು ನಡೆಸಲು ಸಭಾಂಗಣ, ಕಟ್ಟಡಗಳಿಲ್ಲದ ಗ್ರಾಮ ಪಂಚಾಯತ್ ಗಳಿಗೆ ಕಚೇರಿಗೆ ಸ್ಥಳಾವಕಾಶ ನೀಡುವುದಲ್ಲದೆ ವಿಶೇಷವಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎನ್ ಆರ್ ಇ ಜಿ ಎ ಮತ್ತು ಇತರ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಮಾಹಿತಿ ಮತ್ತು ಸೌಲಭ್ಯ ಪಡೆಯಲು ನಾಗರೀಕ ಮಾಹಿತಿ ಮತ್ತು ಸೇವಾ ಕೇಂದ್ರವಾಗಿ ಕಾರ್ಯ ನಿರ್ವಹಿಸುವಂತೆ ಮಾಡಲು ಯೋಜನೆ ರೂಪಿಸಿದೆ.
ವಸತಿ ಯೋಜನೆಗಳ ಸಾಲದ ಮೇಲಿನ ಬಡ್ಡಿ ಮನ್ನಾ: ರಾಜೀವ್ ಗಾಂಧಿ ವಸತಿ ನಿಗಮದ ಮೂಲಕ ಅನುಷ್ಠಾನಗೊಳಿಸುತ್ತಿರುವ ವಿವಿಧ ವಸತಿ ಯೋಜನೆಗಳ ನಿರ್ಮಾಣಕ್ಕೆ ಸಾಲ ಹಾಗೂ ಸಹಾಯಧನ ಕಾರ್ಯಕ್ರಮದಡಿ ಮನೆ ನಿರ್ಮಾಣಕ್ಕೆ ಫಲಾನುಭವಿಗಳಿಗೆ ಶೇ.11ರ ಬಡ್ಡಿ ದರದಲ್ಲಿ ನೀಡಲಾಗುತ್ತಿದೆ. ಫಲಾನುಭವಿ ಮನೆ ನಿರ್ಮಾಣಕ್ಕೆ ರೂ.10,000 ಸಾಲವನ್ನು ರಾಜೀವ್ ಗಾಂಧಿ ವಸತಿ ನಿಗಮದಿಂದ ಪಡೆದಿದ್ದಲ್ಲಿ ತಿಂಗಳ ರೂ.115 ಮಾಸಿಕ ಕಂತಿನಂತೆ 180 ಕಂತುಗಳಲ್ಲಿ ಸಾಲವನ್ನು ಮರು ಪಾವತಿಸ ಬೇಕಾಗುತ್ತದೆ ಸಾಲ ಪಡೆದ ಫಲಾನುಭವಿಗಳಿಗೆ ಬಡ್ಡಿ ಹೊರೆಯನ್ನು ಕಡಿಮೆ ಮಾಡುವ ಉದ್ದೇಶದಿಂದ ಆಶ್ರಯ/ನವಗ್ರಾಮ ಯೋಜನೆಗಳ ಸಾಲಕ್ಕೆ ಸಂಬಂಧಿಸಿದಂತೆ 31.3.10 ರೊಳಗೆ ಸಾಲ ಪಾವತಿಸಿದ್ದಲ್ಲಿ ಬಡ್ಡಿ ಮನ್ನಾ ಮಾಡಲಾಗುತ್ತದೆ ಎಂದರು. ದ.ಕ ಜಿಲ್ಲೆಯಲ್ಲಿ ಮೇಲ್ಕಂಡ ವಸತಿ ಯೋಜನೆಯಡಿ 26591 ಫಲಾನುಭವಿಗಳು ಸಾಲವನ್ನು ಪಡೆದಿದ್ದು ಅವರೆಲ್ಲರೂ ಸಾಲ ಪಾವತಿಸಲು ಮುಂದಾದರೆ ಒಟ್ಟು 1.84 ಕೋಟಿ ಬಡ್ಡಿ ಮನ್ನಾ ಮಾಡಿದಂತಾಗುತ್ತದೆ ಎಂದು ಶಿವಶಂಕರ್ ವಿವರಿಸಿದರು.ಈ ಸಂದರ್ಭದಲ್ಲಿ ಉಪಕಾರ್ಯದರ್ಶಿ ಶಿವರಾಮೇಗೌಡ, ಸಿಪಿಒ ತಾಕತ್ ರಾವ್, ಸಹಾಯಕ ಕಾರ್ಯದರ್ಶಿ ಚಂದ್ರಶೇಖರ ಮಸಗುಪ್ಪಿ,ಮುಖ್ಯ ಲೆಕ್ಕಾಧಿಕಾರಿ ಬಾಣದ ತಿಮ್ಮಪ್ಪ ಅವರು ಉಪಸ್ಥಿತರಿದ್ದರು.

Friday, July 30, 2010

ಜಿಲ್ಲಾಧಿಕಾರಿಗಳಿಂದ ಆರೋಗ್ಯ ಸೇವೆ ಪ್ರಗತಿ ಪರಿಶೀಲನೆ

ಮಂಗಳೂರು, ಜುಲೈ 30 :ಉಳಿದೆಲ್ಲ ವೃತ್ತಿಗಳಿಗಿಂತ ವೈದ್ಯ ವೃತ್ತಿ ವಿಭಿನ್ನವಾಗಿದ್ದು, ಆರೋಗ್ಯ ಸೇವೆ ನೀಡುವವರು ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಬೇಕು ಹಾಗೂ ಸೇವೆಯಲ್ಲಿ ವಿಶಿಷ್ಟತೆಯನ್ನು ಕಾಯ್ದು ಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ಹೇಳಿದರು.
ಅವರಿಂದು ಜಿಲ್ಲಾಧಿಕಾರಿಗಳ ಸಭಾಂಗ ಣದಲ್ಲಿ ಏರ್ಪಡಿಸ ಲಾಗಿದ್ದ ಆರೋಗ್ಯಾ ಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾ ಡುತ್ತಿದ್ದರು. ಇಂದು ಜಿಲ್ಲೆಯ 63 ಪ್ರಾಥಮಿಕ ಆರೋಗ್ಯ ಕೇಂದ್ರಗಳ, 7 ಸಮುದಾಯ ಆರೋಗ್ಯ ಕೇಂದ್ರಗಳ, ನಗರ ಆರೋಗ್ಯ ಕೇಂದ್ರ, 4 ತಾಲೂಕು ಆಸ್ಪತ್ರೆಗಳ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ವೆನ್ ಲಾಕ್ ವೈದ್ಯಾಧಿ ಕಾರಿಗಳ ಪಾಲ್ಗೊಂಡ ಸಭೆಯಲ್ಲಿ ಆರೋಗ್ಯ ಸೇವೆಯ ಪ್ರಗತಿ ಪರಿಶೀಲನೆ ನಡೆಸಿದರು.
ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸದ್ಬಳಕೆ, ಜನರಿಗೆ ಆರೋಗ್ಯ ಇಲಾಖೆ ನೀಡುತ್ತಿರುವ ಸೇವೆ, ಸೇವೆ ನೀಡುತ್ತಿರುವ ಡಾಕ್ಟರ್ ಗಳ ಸ್ಥಿತಿ-ಗತಿ, ಸಮಸ್ಯೆ, ಅವರ ದೂರದೃಷ್ಟಿ, ಮಾದರಿ ಆಲೋಚನೆ ಗಳ ಬಗ್ಗೆ ಸವಿವರ ಸಮಾ ಲೋಚನೆ ಜಿಲ್ಲಾಧಿ ಕಾರಿಗಳ ನೇತೃತ್ವದಲ್ಲಿ ನಡೆಯಿತು. ಪ್ರಸಕ್ತ ಪರಿಸ್ಥಿತಿಯಲ್ಲಿ ಸೇವೆ ಗಳನ್ನು ಇನ್ನಷ್ಟು ಉತ್ತಮವಾಗಿ ನೀಡುವ ಬಗ್ಗೆ, ಇದ್ದ ಸಂಪನ್ಮೂಲ ಗಳನ್ನು ಸದ್ಬಳಕೆ ಮಾಡಿ ಅಗತ್ಯ ಜನರಿಗೆ ಸೌಲಭ್ಯ ತಲುಪಿಸುವ ಬಗ್ಗೆ ಉಪಸ್ಥಿತರಿದ್ದ ಅನುಭವಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರ ಅಭಿಪ್ರಾಯ ಪಡೆದರು. ಮಾದರಿ ಆರೋಗ್ಯ ಕೇಂದ್ರಗಳನ್ನು ಅದೇ ಮಾದರಿ ರೂಪಿಸಲು ದೊರೆತ ಸ್ಪೂರ್ತಿ ಮತ್ತು ನೆರವಿನ ಬಗ್ಗೆ ಸಹೋದ್ಯೋಗಿಗಳೊಂದಿಗೆ ಮಾಹಿತಿ ವಿನಿಮಯ ಮಾಡಿಕೊಂಡರು. ಸಮಸ್ಯೆಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಎಲ್ಲರಿಂದಲೂ ಪಡೆಯಲು ಮಾದರಿ ಪ್ರಶ್ನೆಗಳನ್ನು ತಯಾರಿಸಿ ಫೀಡ್ ಬ್ಯಾಕ್ ಪಡೆಯಲು ನಿರ್ಧರಿಸಲಾಯಿತು. ತಾಲೂಕು ವೈದ್ಯಾಧಿಕಾರಿಗಳು ವೈದ್ಯಕೀಯ ಸೇವೆಗಿಂತ ಮಿಗಿಲಾಗಿ ಡಾಟಾ ಎಂಟ್ರಿ ಆಪರೇಟರ್ ಕೆಲಸ ಮಾಡಲು ಹೆಚ್ಚಿನ ಸಮಯ ಮೀಸಲಿಡಬೇಕಾದ ಕುರಿತು ಸಭೆಯಲ್ಲಿ ಚರ್ಚಿಸಿ ಈ ಬಗ್ಗೆ ಇದ್ದ ವ್ಯವಸ್ಥೆಯಲ್ಲೇ ಅದಕ್ಕೆ ಪರಿಹಾರ ಕಂಡುಹಿಡಿಯಲು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.ಈ ಕುರಿತು ಸ್ಪಷ್ಟ ಮಾಹಿತಿ ಹಾಗೂ ಪ್ರಾಜೆಕ್ಟ್ ತಯಾರಿಸಲು ಶ್ರೀನಿವಾಸ ಕಾಲೇಜಿನ ಸಿಬ್ಬಂದಿಗಳು ಮುಂದಾಗಿದ್ದು, ದೂರುಗಳನ್ನು ಮಾತ್ರ ದಾಖಲಿಸದೆ ಸೇವಾ ಕ್ಷೇತ್ರಗಳ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ವರದಿ ತಯಾರಿಸಲು ಮುಂದೆ ಬಂದಿದ್ದಾರೆ ಎಂದರು. ಈ ಸಂಬಂಧ ಮುಂದಿನ ತಿಂಗಳು ಇನ್ನೊಂದು ಸಭೆ ಕರೆದು ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದ ಅವರು, ಇಂದಿನ ಸಭೆಯಿಂದ ಬಹಳಷ್ಟು ಅನುಕೂಲವಾಗಿದೆ. ಆತ್ಮಾವಲೋಕನ, ಗುರಿ, ಸಾಧನೆ, ಕೊರತೆಗಳ ಬಗ್ಗೆ ಮಾಹಿತಿ ವಿನಿಮಯ, ಸಮಸ್ಯೆಗಳು, ಅದಕ್ಕೆ ಪರಿಹಾರದ ಬಗ್ಗೆಯೂ ಹಾಗೂ ಗುಣಮಟ್ಟದ ಸೇವೆಯಲ್ಲಿ ಪರಿಪೂರ್ಣತೆ ಸಾಧಿಸುವ ಕುರಿತು ಐದು ಹಂತಗಳಲ್ಲಿ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪಿ.ಶಿವಶಂಕರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶ್ರೀರಂಗಪ್ಪ ಉಪಸ್ಥಿತರಿದ್ದರು.

Wednesday, July 28, 2010

ಭಾರಧ್ವಾಜ ಆಶ್ರಮದಲ್ಲಿ ಸಾವಯವ ಕೃಷಿ..

ಮಂಗಳೂರು,ಜು.28:ಪ್ರಕೃತಿ ಇರುವುದು ಮಾನವನ ಅಗತ್ಯಗಳನ್ನು ಪೂರೈಸಲು,ದುರಾಸೆಗಳನ್ನಲ್ಲ ಎಂದು ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹೇಳಿದ್ದರು. ಕಾಲಚಕ್ರ ಸುತ್ತುತ್ತಿರುತ್ತದೆ;ಮಾನವ ಪ್ರಕೃತಿಯೊಂದಿಗೆ ಪೂರಕ ಬದುಕನ್ನು ನಡೆಸಬೇಕು.ಸಾವಯವ ಕೃಷಿಗೆ ಇಂದು ಕೃಷಿಕರು ಮರಳುತ್ತಿರುವುದು ಇದನ್ನೇ ಸಾಬೀತು ಪಡಿಸುತ್ತದೆ.
ಹಸಿರು ಕ್ರಾಂತಿಯಿಂದ ಆಹಾರ ಉತ್ಪಾದನೆ ಹೆಚ್ಚಾಯಿ ತಾದರೂ, ಕೃಷಿ ಭೂಮಿಯ ಮೇಲೆ ದುಷ್ಪರಿಣಾ ಮಗಳಾದವು. ಮಿತಿಮೀರಿದ ರಾಸಾಯಿ ನಿಕಗಳ ಬಳಕೆ ಯಿಂದ ಭೂಮಿಯ ಫಲವತ್ತತೆ ಕಡಿಮೆ ಯಾಯಿತು. ಕೃಷಿಕರು ಹಲವು ಸಮಸ್ಯೆಗಳನ್ನು,ಸವಾಲುಗಳನ್ನು ಎದುರಿಸಲು ಆರಂಭಿ ಸಿದರು. ಗೊಬ್ಬರ ಕೊರತೆಯ ಬಿಸಿ ರಾಜ್ಯಾಡ ಳಿತವನ್ನೇ ಅಲುಗಾಡಿಸಿತು. ಇಂತಹ ಸಂದರ್ಭದಲ್ಲಿ ಪರ್ಯಾಯ ಮಾರ್ಗವಾಗಿ ಸಾವಯವ ಕೃಷಿ ಜನಪ್ರಿಯ ವಾಗ ಲಾರಂಭಿಸಿತು.ಸರ್ಕಾರವು ಇದಕ್ಕೆ ಸಾಕಷ್ಟು ರೀತಿಯಲ್ಲಿ ಪ್ರೋತ್ಸಾಹವನ್ನು ನೀಡಲಾ ರಂಭಿಸಿತು.ಸಾವಯವ ಕೃಷಿ ಮಿಷನ್ ಸ್ಥಾಪಿಸಿತು. ಸಾವಯವ ಕೃಷಿ ಬಗ್ಗೆ ಗಂಭೀರ ಚಿಂತನೆ ನಡೆಯುತ್ತಿದೆ.

ಈ ಕಾಲ ಘಟ್ಟದಲ್ಲಿ ಇಂತಹ ಯಾವುದೇ ಆಕರ್ಷ ಣೆಗಳಿಗೆ ಒಳಗಾಗದೆ ಕೃಷಿ ವಲಯದ ಎಲ್ಲ ಸವಾಲು ಗಳನ್ನು ಎದುರಿಸಿ ಸಾವಯವ ಬೆಳೆಗಾ ರರಿಗೆ ಸ್ಫೂರ್ತಿಯಾಗಿ 1972 ರಿಂದಲೇ ಸುಳ್ಯದ ಭಾರದ್ವಾಜ ಕುಟುಂಬ ದವರು ಸಾವಯವ ಗೊಬ್ಬರ ಬಳಸಿ ಕೃಷಿ ಮಾಡಿ ಸಾರ್ಥಕ ಬದುಕು ನಡೆಸು ತ್ತಿದ್ದಾರೆ. ಸುಳ್ಯದ ಅರಂಬೂ ರಿನಲ್ಲಿ ಪಯಸ್ವಿನಿ ನದಿ ಮೂರು ದಿಕ್ಕನ್ನು ಸುತ್ತುವರಿ ದಿರುವ ಪ್ರಕೃತಿ ರಮಣೀಯ ಪರಿಸರದಲ್ಲಿ ಸಹೋದರರು 40 ಎಕರೆಗಳಷ್ಟು ಪ್ರದೇಶದಲ್ಲಿ ಭತ್ತದ ಕೃಷಿ ಮಾಡು ತ್ತಿದ್ದಾರೆ; ಹಸಿವನ್ನು ನೀಗಿಸುವ ಕಾಯಕದಲ್ಲಿ ತೊಡಗಿ ಕೊಂಡಿದ್ದಾರೆ. 12 ಜನ ಸಹೋದರರು ಕೃಷಿಯಲ್ಲಿ ತೊಡಗಿದ್ದು, ಇವರಲ್ಲೊಬ್ಬರು ಸಿವಿಲ್ ಇಂಜಿನಿಯರ್ ತೂಗು ಸೇತುವೆ ನಿರ್ಮಾಣದಲ್ಲಿ ಪ್ರಸಿದ್ಧಿಯನ್ನು ಪಡೆದ ಗಿರೀಶ್ ಭಾರದ್ವಾಜ.ಇವರಿಗೂ ಇಲ್ಲಿ ಕೃಷಿ ಭೂಮಿ ಇದೆ ಹಾಗೂ ಭೂಮಿಯಲ್ಲಿ ಬೆಳೆ ಬೆಳೆಯುತ್ತಿದ್ದಾರೆ. ಇವರ ಅಪ್ಪ ಇವರಲ್ಲರಿಗೂ ಮಾದರಿ. ಬ್ರಿಟಿಷ್ ರ ಆಡಳಿತದಲ್ಲಿ ಆಂಧ್ರ ಪ್ರದೇಶದಲ್ಲಿ ಸಿವಿಲ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿದವರು ಇವರು.ಅನಿವಾರ್ಯ ಕಾರಣದಿಂದ ಕೆಲಸಕ್ಕೆ ರಾಜೀನಾಮೆ ನೀಡಿ ಸ್ವಾತಂತ್ರ ಪೂರ್ವ 1930-31 ರಲ್ಲಿ ಮಂಗಳೂರಿಗೆ ಆಗಮಿಸಿದ ಇವರು ಪಾವಂಜೆ ಅಣೆಕಟ್ಟು, ಕೂಳೂರು ಸೇತುವೆ, ಮೋಹಿನಿ ವಿಲಾಸ ಹೋಟೆಲ್, ಧರ್ಮಸ್ಥಳದ ಮಂಜಯ್ಯ ಹೆಗಡೆ ಯವರ ಬೀಡಿನ ಕೆಳ ಅಂತಸ್ತು, ಹೊಳೆ ಮಧ್ಯೆ ಇರುವ ಕಟೀಲು ದೇವ ಸ್ಥಾನದ ಅಡಿ ಅಂತಸ್ತು ಯೋಜನೆ ವಿನ್ಯಾಸ ರೂಪಿಸಿದ ಬಿ.ಕೆ. ಭಟ್ಟ ಅವರು ನಂತರ ಉತ್ತಮ ಕೃಷಿಕ ರಾದರು.ಮಕ್ಕಳಲ್ಲೂ ಕೃಷಿಯ ಬಗ್ಗೆ ಪ್ರೀತಿ ಬೆಳೆಸಿದರು.ಎಲ್ಲ ವೃತ್ತಿಗಿಂತಲೂ ಕೃಷಿ ಕೊಡುವ ಖುಷಿಯನ್ನು ಅರಿಯುವ ಬಗ್ಗೆ ಮಾರ್ಗದರ್ಶನ ನೀಡಿದರು.ಅವರ 15 ಜನ ಮಕ್ಕಳಲ್ಲಿ 12 ಗಂಡು ಮಕ್ಕಳು. ಅವರಲ್ಲಿ ಗಿರೀಶ್ ಭಾರದ್ವಾಜ ಅವರು ಅಪ್ಪನಂತೆ ಇಂಜಿನಿಯರ್ ವೃತ್ತಿಯಲ್ಲಿ ತಮ್ಮನ್ನು ತೊಡಗಿಸಿ ಕೊಂಡರು. ಉಳಿದವರೆಲ್ಲರೂ ಕೃಷಿ ಋಷಿಗಳು. ಇಲ್ಲಿ ಅವರಿಗೆ ಕೃಷಿ ಮಾಡಲು ನೀರಿನ ತೊಂದರೆ ಇಲ್ಲ; ಆದರೆ ಇತ್ತೀಚೆಗೆ ಕೃಷಿ ಮಾಡಲು ಜನರೇ ದೊರೆಯದಂತಹ ಪರಿಸ್ಥಿತಿ. ಹಾಗಾಗಿ ಕೃಷಿ ಇಲಾಖೆ ಯಿಂದ ಮಾಹಿತಿ ಪಡೆದು ಕಟಾವು ಸೇರಿದಂತೆ ವಿವಿಧ ಕೆಲಸಗಳಿಗೆ ಯಂತ್ರಗಳನ್ನು ಉಪಯೋಗಿಸಲು ಆರಂಭಿಸಿದರಾದರೂ ಸಾವಯವ ಕೃಷಿ ಪದ್ಧತಿಯನ್ನು ಮುಂದುವರಿಸಿದ್ದೇವೆ ಎನ್ನುತ್ತಾರೆ ರವಿಶಂಕರ್ ಭಾರದ್ವಾಜ. ಹೂಮಲೆಯ ಬುಡದಲ್ಲಿ ಪ್ರಕೃತಿಸಹ್ಯ ಕೃಷಿ ನಡೆಸುತ್ತಿರುವ ಈ ಸಹೋದರರು ತಮಗೆ ಅಗತ್ಯವಿರುವ ಎಲ್ಲ ದವಸ ಧಾನ್ಯಗಳನ್ನು ಅವರ ಕೃಷಿ ಭೂಮಿಯಲ್ಲೇ ಬೆಳೆಯುತ್ತಾರೆ.ಹುಲ್ಲು ತೆಗೆಯಲು ಜನ ಸಿಗುತ್ತಿಲ್ಲ ಹಾಗಾಗಿ ಹಸುಗಳೇ ಹುಲ್ಲು ತೆಗೆಯುವ ಹಾಗೆ ಹುಲ್ಲು ಬೆಳೆದೆಡೆಗಳಲ್ಲಿ ಅವುಗಳನ್ನು ಮೇಯಲು ಬಿಡುತ್ತೇವೆ; ಶ್ರೀ ಪದ್ಧತಿ ಬೆಳೆಯಲ್ಲಿ ಕಳೆ ಜಾಸ್ತಿ, ಅದು ನಮ್ಮ ಪ್ರದೇಶಕ್ಕೆ ಒಗ್ಗದು ಎನ್ನುವ ಇವರು ಸಾಮಾನ್ಯ ನಾಟಿ ಪದ್ದತಿಯನ್ನು ಅನುಸರಿಸುತ್ತಿದ್ದಾರೆ.

ಕೃಷಿ ಕಾರ್ಮಿಕರ ಕೊರತೆ ಯಿಂದಾಗಿ ಕಟಾವಿಗೆ, ಉಳುಮೆಗೆ, ಕಳೆ ತೆಗೆಯಲು ಯಂತ್ರಗಳ ಮೊರೆ ಹೋಗಿದ್ದಾರೆ. ಪವರ್ ಟಿಲ್ಲರ್, ರೀಪರ್, ಮಿನಿಟ್ರ್ಯಾಕ್ಟರ್, ವಿನ್ನೋವರ್ (ಗಾಳಿಯಂತ್ರ), ಪವರ್ ವೀಡ್, ಕೋನೋ ವೀಡರ್ ಗಳ ಸಹಾಯದಿಂದ ಕಾರ್ಮಿಕ ಸಮಸ್ಯೆಗೆ ಪರಿಹಾರ ಕಂಡು ಕೊಂಡಿದ್ದಾರೆ.ಸಿವಿಲ್ ಇಂಜಿನಿಯರ್ ಸಹೋದರನ ಮಾರ್ಗ ದರ್ಶನದಲ್ಲಿ ಭತ್ತ ಸಂಗ್ರಹಿಸಲು, ತಲೆಹೊರೆ ಕಷ್ಟ ಕಡಿಮೆ ಮಾಡಿ ನೇರವಾಗಿ ಭತ್ತವನ್ನು ಮನೆಗೆ ತಂದು ಹಾಕಲು, ಚರ್ತು ಭುಜಾಕಾರ ಹಾಗೂ ನಾಲ್ಕು ಬಾಗಿಲಿರುವ ಮಗುಚಿ ಹಾಕಿದ ತೆಂಗಿನ ಸಿಪ್ಪೆ ಮಾದರಿಯ ಸಣ್ಣ ಕಟ್ಟಡ ನಿರ್ಮಿಸಿದ್ದು ಟ್ರ್ಯಾಕ್ಟರ್ ನೇರವಾಗಿ ಇದರೊಳಗೆ ತಂದು ಭತ್ತ ರಾಶಿ ಹಾಕುವು ದಲ್ಲದೆ ಬೈಹುಲ್ಲು ಮತ್ತು ಭತ್ತವನ್ನು ಬೇರ್ಪಡಿಸುವ ಕೆಲಸವನ್ನು ಮಾಡುತ್ತದೆ. ಆದರೆ ಈ ಆವಿಷ್ಕಾರದಲ್ಲಿ ಭತ್ತ ಸೂಡಿ ಕಟ್ಟಲು ಆಗುವುದಿಲ್ಲ ಎಂಬ ಅನಾನುಕೂಲ ಹೊರತು ಪಡಿಸಿದರೆ ಉಳಿದಂತೆ ಯಾವುದೇ ತೊಂದರೆ ಇಲ್ಲ ಎನ್ನುತ್ತಾರೆ. ಭತ್ತದ ಕೃಷಿಯೊಂದಿಗೆ ಅಡಿಕೆ, ತೆಂಗು,ಬಾಳೆ, ನೇಂದ್ರಬಾಳೆ, ಕಾಳು ಮೆಣಸು, ಹಣ್ಣಿನ ಗಿಡಗಳು, ಹೂಗಿಡಗಳನ್ನು ಬೆಳೆಸಿರುವ ಸಹೋದರರು ತಮ್ಮೆಲ್ಲ ಜ್ಞಾನವನ್ನು ಕೃಷಿಯಲ್ಲಿ ಅಳವಡಿಸಿ ಕೊಂಡಿದ್ದಾರೆ. ವಿದ್ಯಾರ್ಜನೆ ಕೃಷಿಯಿಂದ ನಮ್ಮನ್ನು ದೂರ ಸರಿಸದೆ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲು, ನೂತನ ಆವಿಷ್ಕಾರಗಳನ್ನು ಮಾಡಲು ಪ್ರೇರೇಪಿಸಿದೆ ಎನ್ನುತ್ತಾರೆ. ಇವರಲ್ಲಿ ವಿಶ್ವೇಶ್ವ ಭಾರದ್ವಾಜ ಅವರಿಗೆ 2004 ರಲ್ಲಿ ಅತ್ಯುತ್ತಮ ಕೃಷಿಕ ಪ್ರಶಸ್ತಿ ರಾಜ್ಯೋತ್ಸವದಂದು ಲಭಿಸಿದೆ. ಸುಳ್ಯದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಕೇಶವ ಅವರ ಸಹಕಾರವನ್ನು ರವಿಶಂಕರ್ ಸ್ಮರಿಸುತ್ತಾರೆ.
ಮಾಣಿ-ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಸುಳ್ಯದಿಂದ ನಾಲ್ಕು ಕಿಲೋಮೀಟರ್ ದೂರದಲ್ಲಿ ಅರಂಬೂರಿದೆ. ಇಲ್ಲಿಂದ ಎಡಕ್ಕೆ ತಿರುಗಿ ಒಂದು ಕಿಲೋಮೀಟರ್ ಒಳರಸ್ತೆಯಲ್ಲಿ ಸಾಗಿದರೆ ಇಡ್ಯಡ್ಕ ಇಲ್ಲೆ ಈ ಕೃಷಿ ಋಷಿಗಳ ವಾಸ.

Tuesday, July 27, 2010

'ಜನಸಂಖ್ಯೆ ಸಮಸ್ಯೆಯಾಗದೆ ಸಂಪನ್ಮೂಲವಾಗಲಿ'

ಮಂಗಳೂರು,ಜು.27: ಮಾನವ ಸಂಪನ್ಮೂಲವನ್ನು ಜವಾಬ್ದಾರಿಯಿಂದ ಬಳಸಿಕೊಳ್ಳುವುದರಿಂದ ಜನಸಂಖ್ಯಾ ಸ್ಫೋಟದ ದುಷ್ಪರಿಣಾಮಗಳನ್ನು ನಿವಾರಿಸಬಹುದು ಎಂದು ಎಸ್ ಡಿ ಎಮ್ ಕಾಲೇಜಿನ ಬಿಸಿನೆಸ್ ಮ್ಯಾನೇಜ್ ಮೆಂಟ್ ವಿಭಾಗದ ಪ್ರಾಂಶುಪಾಲರಾದ ಡಾ. ದೇವರಾಜ್ ಹೇಳಿದರು.
ಅವರಿಂದು ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಎಸ್ ಡಿ ಎಮ್ ಕಾಲೇಜಿನ ಬಿಸಿನೆಸ್ ಮ್ಯಾನೇಜ್ ಮೆಂಟ್ ನ ರಾಷ್ಟ್ರೀಯ ಸೇವಾ ಯೋಜನೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ ವಿಶ್ವ ಜನಸಂಖ್ಯಾ ದಿನಾಚರಣೆ ಹಾಗೂ ಸ್ವಯಂ ಪ್ರೇರಿತ ರಕ್ತದಾನಿಗಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪ್ರಪಂಚಲ್ಲಿ 600 ಕೋಟಿಯಷ್ಟು ಜನಸಂಖ್ಯೆಯಿದ್ದು,ಭಾರತದಲ್ಲಿ ಜನಸಂಖ್ಯೆ ಪ್ರಮಾಣ ಅಧಿಕವಾಗಿದೆ. ಈ ಬಗ್ಗೆ ನಮ್ಮಲ್ಲಿ ಬಹಳಷ್ಟು ಜಾಗೃತಿ ಮೂಡಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.ರಕ್ತದಾನದ ಬಗ್ಗೆ ಎನ್ ಎಸ್ ಎಸ್ ಘಟಕ ಅಗತ್ಯ ಜಾಗೃತಿಯನ್ನು ಜನರಲ್ಲಿ ಮೂಡಿಸಿದ್ದು ಮಾನವ ರಕ್ತಕ್ಕೆ ಪರ್ಯಾಯವಿಲ್ಲ. ಹಾಗಾಗಿ ಬದುಕ ನೀಡುವ ರಕ್ತದಾನ ಸರ್ವಶ್ರೇಷ್ಠ ಎಂದರು.
ಸಂಪನ್ಮೂಲ ವ್ಯಕ್ತಿಯಾಗಿದ್ದ ಆರ್ ಸಿ ಎಚ್ ಡಾಕ್ಟರ್ ರುಕ್ಮಿಣಿ ಅವರು ಮಾತನಾಡಿ,ದೇಶದ ಸಂಪನ್ಮೂಲ ಮತ್ತು ಅಭಿವೃದ್ಧಿಯನ್ನು ಗಮನದಲ್ಲಿರಿಸಿ ಗುಣಮಟ್ಟದ ಜೀವನ ನಡೆಸಲು ಸಾಧ್ಯವಾಗುವಂತೆ ಜನಸಂಖ್ಯಾ ಸ್ಥಿರತೆ ಸಾಧಿಸುವುದು ಮುಖ್ಯ ಎಂದು ಅವರು ಅಭಿಪ್ರಾಯಪಟ್ಟರು. ನಮ್ಮ ಜಿಲ್ಲೆಯ ಈ ನಿಟ್ಟಿನಲ್ಲಿ ಉತ್ತಮ ಪ್ರಗತಿ ದಾಖಲಿಸಿದೆ ಎಂದರು.ಎಲ್ಲದರಲ್ಲೂ ಗುಣಮಟ್ಟ ಕಾಯ್ದುಕೊಳ್ಳುವಿಕೆ ಇಂದಿನ ಅಗತ್ಯ ಎಂದು ತನ್ನ ಉಪನ್ಯಾಸದಲ್ಲಿ ಅವರು ವಿವರಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶ್ರೀರಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಕಿಶೋರ್ ರಕ್ತದಾನದ ಮಹತ್ವದ ಕುರಿತು ಉಪನ್ಯಾಸ ನೀಡಿದರು.ಗೌರಿಶೆಣೈ,ಯೋಜನಾಧಿಕಾರಿ ತ್ರಿಶಾಂತ್ ಉಪಸ್ಥಿತರಿದ್ದರು. ಆರೋಗ್ಯ ಶಿಕ್ಷಣಾಧಿಕಾರಿ ಜಯರಾಂ ಉಪಸ್ಥಿತರಿದ್ದರು. ನಗರದ ವಿವಿಧ ಕಾಲೇಜಿನ ರೆಡ್ ರಿಬ್ಬನ್ ಕ್ಲಬ್ ನ 50 ವಿದ್ಯಾರ್ಥಿಗಳು ರಕ್ತದಾನ ಮಾಡಿದರು.

Monday, July 26, 2010

ಅನಧಿಕೃತ ಲಾರಿಗಳಿಗೆ ಮರಳು ನೀಡಿದಲ್ಲಿ ಪರವಾನಗಿ ರದ್ದು- ಜಿಲ್ಲಾಧಿಕಾರಿ ಎಚ್ಚರಿಕೆ

ಮಂಗಳೂರು,ಜುಲೈ26: ಜಿಪಿಎಸ್ ಅಳವಡಿಸಿದ ಲಾರಿಗಳನ್ನು ಹೊರತುಪಡಿಸಿ ಇತರ ಲಾರಿಗಳಿಗೆ ಮರಳು ನೀಡಿದಲ್ಲಿ ಅಂತಹ ಮರಳೆತ್ತುವ ಗುತ್ತಿಗೆದಾರರ ಪರವಾನಗಿಯನ್ನು ತಕ್ಷಣ ರದ್ದುಪಡಿಸುವುದಾಗಿ ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಎಚ್ಚರಿಸಿದ್ದಾರೆ.ಅವರು ಸೋಮವಾರ ಮರಳು ಗುತ್ತಿಗೆದಾರರು, ಹೊಯ್ಗೆ ದೋಣಿ ಮಾಲಕರು, ಕಾರ್ಮಿಕರು ಮತ್ತು ಕಟ್ಟಡ ಸಾಮಗ್ರಿಗಳ ಸಾಗಾಟ ಲಾರಿ ಮಾಲಕರ ಜಂಟಿ ಕ್ರಿಯಾಸಮಿತಿಯ ಸಭೆಯ ಬಳಿಕ ಪತ್ರಕರ್ತರೊಂದಿಗೆ ಮಾತನಾಡಿದರು.
ಮರಳೆತ್ತಲು ಗುತ್ತಿಗೆ ಪಡೆದವರು ಕಡ್ಡಾಯವಾಗಿ ಅಧಿಕೃತ ಲಾರಿಗಳಿಗೆ ಮಾತ್ರ ಮರಳು ನೀಡಬೇಕು. ಈ ನಿಯಮವನ್ನು ಉಲ್ಲಂಘಿಸಿದರೆ ಮುಂದೆ ಅಂಥವರು ಮರಳೆತ್ತುವ ಗುತ್ತಿಗೆ ಪಡೆಯುವ ಅವಕಾಶವನ್ನು ಕಳೆದುಕೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದರು.ಜಿಪಿಎಸ್ ಅಳವಡಿಸದ, ಬಾನೆಟ್ಗೆ ಪ್ರತ್ಯೇಕ ಬಣ್ಣ ಹಚ್ಚದ ಲಾರಿಗಳು ಮರಳು ಸಾಗಿಸಿದರೆ ಅಂಥ ಲಾರಿಗಳ ಮೇಲೆ ಯಾವುದೇ ಕ್ರಮ ಜರಗಿಸುವುದಿಲ್ಲ. ಆದರೆ ಅವುಗಳಿಗೆ ಮರಳು ಸಿಗದಂತೆ ಮಾಡುವುದು ಖಚಿತ ಎಂದು ಅವರು ಹೇಳಿದರು.
ಈಗಾಗಲೇ ಅಸ್ತಿತ್ವಕ್ಕೆ ಬಂದಿರುವ ಟಾಸ್ಕ್ಫೋ ಫೋರ್ಸ್ ನ ಒಳಗೆ ಪ್ರತ್ಯೇಕ ತಂಡವನ್ನು ರಚಿಸಲಾಗುವುದು. ಮಂಗಳೂರು ಸಹಾಯಕ ಕಮಿಷನರ್ ಮರಳು ಸಾಗಾಟ ಸಂಬಂಧಿಸಿದ ವಿಷಯಗಳಿಗೆ ನೋಡೆಲ್ ಅಧಿಕಾರಿಯಾಗಿರುತ್ತಾರೆ ಎಂದರು.ಜಿಲ್ಲೆಯ ಗಡಿಗಳ ತಪಾಸಣಾ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳ ಮೇಲೆ ಜವಾಬ್ದಾರಿಯನ್ನು ನಿಗದಿಪಡಿಸಲಾಗಿದೆ ಎಂದು ನುಡಿದ ಜಿಲ್ಲಾಧಿಕಾರಿಯವರು, ಕೇರಳಕ್ಕೆ ಅಕ್ರಮ ಸಾಗಾಟ, ಅಲ್ಲಲ್ಲಿ ಅಕ್ರಮ ದಾಸ್ತಾನು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಪಿಎಸ್ ಅಳವಡಿಕೆ ಮತ್ತು ಮರಳು ಸಾಗಾಟ ಲಾರಿಗಳಿಗೆ ಪ್ರತ್ಯೇಕ ಬಣ್ಣ ಹಚ್ಚುವ ಕ್ರಮಕ್ಕೆ ಮುಂದಾಗಿರುವುದಾಗಿ ನುಡಿದರು.ಮುಂದಿನ 15 ದಿನಗಳೊಳಗಾಗಿ ಮರಳು ಸಾಗಾಟ ಕುರಿತು ನಿಯಮಾವಳಿಗಳನ್ನು ರೂಪಿಸಿ ಪ್ರಕಟಿಸಲಾಗುವುದು ಎಂದು ಹೇಳಿದ ಜಿಲ್ಲಾಧಿಕಾರಿಯವರು, ವಾಹನಗಳಿಗೆ ಜಿಪಿಎಸ್ ಅಳವಡಿಸುವ ಕುರಿತಂತೆ ಸರಕಾರದ ಮಟ್ಟದಲ್ಲಿಯೂ ಚಿಂತನೆ ನಡೆದಿದೆ ಎಂದರು.
ಅಪರ ಜಿಲ್ಲಾಧಿಕಾರಿ ಎಸ್.ಎ. ಪ್ರಭಾಕರ ಶರ್ಮ, ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಉಪ ನಿರ್ದೇಶಕ ರವೀಂದ್ರ ಉಪಸ್ಥಿತರಿದ್ದರು.

Saturday, July 24, 2010

'ಆರೋಗ್ಯ ಮತ್ತು ಜ್ಞಾನದ ಬೆಳಕು ಪಸರಿಸಲಿ'

ಮಂಗಳೂರು, ಜುಲೈ24: ಮಾನವ ಜನ್ಮ ಶ್ರೇಷ್ಠವಾದುದು;ಇತರ ಪ್ರಾಣಿಗಳಿಗಿಂತ ವಿವೇಕ, ಬುದ್ಧಿ ಜ್ಞಾನ ಎಲ್ಲವೂ ಇದ್ದು ಪರಿಸರದೊಂದಿಗೆ ಬದುಕುವ ಬಗೆಯನ್ನು ತಿಳಿದುಕೊಳ್ಳಬೇಕು ಎಂದು ಶಿಕ್ಷಣ ತಜ್ಞ ಗೋಪಾಲಕೃಷ್ಣ ಗೊಲ್ಲ ಅವರು ನುಡಿದರು.

ಅವರು ವಾರ್ತಾ ಇಲಾಖೆ ಮತ್ತು ಬೆಳ್ತಂಗಡಿ ತಾಲೂಕಿನ ಬೆಳಾಲು ಗ್ರಾಮ ಪಂಚಾಯತ್ ಆಶ್ರಯದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಾಯಾ ಬೆಳಾಲು, ಬೆಳ್ತಂಗಡಿಯಲ್ಲಿ ಏರ್ಪಡಿಸಿದ್ದ 'ಸ್ವಚ್ಛತೆ ಮತ್ತು ನಮ್ಮ ಆರೋಗ್ಯ ' ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.ನಮ್ಮ ಆಹಾರ ಸೇವನೆ, ದೈನಂದಿನ ಆಚರಣೆಗಳು, ನೀರಿನ ಸೇವನೆ ಬಗ್ಗೆ ಹಳ್ಳಿಗಳಲ್ಲಿ ಇನ್ನಷ್ಟು ಜಾಗೃತಿ ಮೂಡಬೇಕಿದೆ. ಬಯಲು ಮಲಮೂತ್ರ ವಿಸರ್ಜನೆಯ ದುಷ್ಪರಿಣಾಮಗಳನ್ನು ಜನರು ಅರಿಯಬೇಕಿದೆ ಎಂದರು.ಅಧ್ಯಕ್ಷತೆ ವಹಿಸಿದ್ದ ಬೆಳಾಲು ಗ್ರಾಮಪಂಚಾಯತ್ ನ ಅಧ್ಯಕ್ಷ ಸುರೇಂದ್ರ ಅವರು ಮಾತನಾಡಿ, ಗ್ರಾಮದಲ್ಲಿ ಇನ್ನೂ 133 ಮನೆಗಳಲ್ಲಿ ಶೌಚಾಲಯ ನಿರ್ಮಾಣ ವಾಗಬೇಕಿದೆ ಎಂದರು. ಇದಕ್ಕಾಗಿ ರಾಜ್ಯ ಸರ್ಕಾರ ಬಹಳಷ್ಟು ಪ್ರೋತ್ಸಾಹ ನೀಡುತ್ತಿದ್ದು, ಮುಂಬರುವ ದಿನಗಳಲ್ಲಿ ಯೋಜನೆ ನೆರವಿನೊಂದಿಗೆ ಜನೋಪಯೋಗಿ ಕೆಲಸಗಳನ್ನು ಅನುಷ್ಠಾನಕ್ಕೆ ತರಬೇಕೆಂದರು.
ಉಪನ್ಯಾಸ ನೀಡಿದ ಜಿಲ್ಲಾ ಆರೋಗ್ಯ ಶಿಕ್ಷಣಾ ಧಿಕಾರಿ ಜಯರಾಂ ಅವರು, ಸ್ವಚ್ಛತೆ ಮತ್ತು ಆರೋಗ್ಯದ ಬಗ್ಗೆಗಿನ ನಿಕಟ ಸಂಪರ್ಕ ಕುರಿತು ವಿವರಿಸಿದರು. ವೈಯಕ್ತಿಕ ಸ್ವಚ್ಛತೆ, ಸಮುದಾಯ ಸ್ವಚ್ಛತೆ, ಸೊಳ್ಳೆಗಳಿಂದಾಗುವ ವಿವಿಧ ಜ್ವರಗಳ ಬಗ್ಗೆ, ಇಲಿ ಜ್ವರ ಹರಡುವ ಬಗ್ಗೆ, ಕೊಳಚೆ ನೀರಿನಲ್ಲಿ ಚಪ್ಪಲಿ ಹಾಕಿ ನಡೆಯುವ ಅಗತ್ಯವನ್ನು ವಿವರಿಸಿದರು. ಸುತ್ತಮುತ್ತಲ ಪರಿಸರದಲ್ಲಿ ಅನುಪಯುಕ್ತ ವಸ್ತುಗಳನ್ನು ಎಲ್ಲೆಂದರಲ್ಲಿ ಒಗೆದು ಸೊಳ್ಳೆ ಉತ್ಪತ್ತಿಯಾಗುವ ರೀತಿಯನ್ನು ವಿವರಿಸಿದರು.ಗ್ರಾಮಪಂಚಾಯತ್ ಉಪಾಧ್ಯಕ್ಷರಾದ ಸುಶೀಲ, ಶಾಲಾ ಮುಖ್ಯೋಪಾಧ್ಯಾಯರಾದ ಧರ್ಮರಾಯ ಎಚ್. ಕೆ., ಎಸ್ ಡಿ ಎಂಸಿ ಅಧ್ಯಕ್ಷರು, ಗ್ರಾಮಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.ವಾರ್ತಾಧಿಕಾರಿ ರೋಹಿಣಿ ಸ್ವಾಗತಿಸಿದರು. ಶಿಕ್ಷಕ ವಿಶ್ವನಾಥ ಭಟ್ ವಂದಿಸಿದರು. ಸವಿತ ಮತ್ತು ರಾಜೇಶ್ ಕಾರ್ಯಕ್ರಮ ನಿರ್ವಹಣೆ ಮಾಡಿದರು. ಸಭಾ ಕಾರ್ಯಕ್ರಮದ ಬಳಿಕ ಜಗನ್ ಪವಾರ್ ನೇತೃತ್ವದ ಸಂಕೇತ್ ತಂಡದಿಂದ ಚೆಂಬು ಪುರಾಣ ಎಂಬ ನೀರು ನೈರ್ಮಲ್ಯ ಕುರಿತ ಬೀದಿ ನಾಟಕ ಏರ್ಪಡಿಸಲಾಗಿತ್ತು.

Friday, July 23, 2010

ಗ್ರಾಮಾಂತರ ವಾಸಿಗಳಿಗೂ ಬಂದೂಕು ತರಬೇತಿ: ಎಸ್ಪಿ ಡಾ.ಸುಬ್ರಹ್ಮಣ್ಯೇಶ್ವರ ರಾವ್

ಮಂಗಳೂರು,ಜು.22:ಪೊಲೀಸ್ ಮತ್ತು ನಾಗರೀಕ ಸ್ನೇಹಿ ಯೋಜನೆಗಳಡಿ ಆಗಸ್ಟ್ ಮೊದಲವಾರದಿಂದ ಗ್ರಾಮಾಂತರ ಪ್ರದೇಶದ ನಾಗರೀಕರಿಗೆ ಬಂದೂಕು ತರಬೇತಿ ನೀಡಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಎಸ್ ಪಿ ಡಾ. ಸುಬ್ರಹ್ಮಣ್ಯೇಶ್ವರ ರಾವ್ ಹೇಳಿದರು.
ನಗರ ಪೊಲೀಸ್ ಕಮಿಷ ನರೇಟ್ ವತಿಯಿಂದ ಬಂದೂಕು ತರಬೇತಿ ಪಡೆದ ನಾಗ ರೀಕರಿಗೆ ಇಂದು ಪೊಲೀಸ್ ಅತಿಥಿ ಗೃಹದಲ್ಲಿ ಏರ್ಪಡಿ ಸಲಾಗಿದ್ದ ಪ್ರಮಾಣ ಪತ್ರ ವಿತರಣಾ ಸಮಾ ರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾ ಡುತ್ತಿದ್ದರು. ಅಧ್ಯಕ್ಷತೆಯನ್ನು ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ವಹಿಸಿದ್ದರು. ಜಿಲ್ಲಾಧಿಕಾರಿ ವಿ.ಪೊನ್ನುರಾಜ್, ಡಿಸಿಪಿಗಳಾದ ಮುತ್ತೂರಾಯ ಮತ್ತು ರಮೇಶ್ ಉಪಸ್ಥಿ ತರಿದ್ದರು. ಎಸಿಪಿ ಬಿ.ಜೆ. ಭಂಡಾರಿ ಕಾರ್ಯಕ್ರಮ ನಿರೂಪಿಸಿದರು.

Wednesday, July 21, 2010

ಅಂತರ್ ಜಿಲ್ಲಾ ಅಪರಾಧ ಮಾಹಿತಿ ವಿನಿಮಯ;ನೋಡಲ್ ಅಧಿಕಾರಿಗಳ ನೇಮಕಕ್ಕೆ ನಿರ್ಧಾರ

ಮಂಗಳೂರು,ಜುಲೈ 21: ಅಂತರ್ ಜಿಲ್ಲಾ ಅಪರಾಧ ಪ್ರಕರಣಗಳ ಮಾಹಿತಿ ವಿನಿಮಯಕ್ಕಾಗಿ ಮಾರ್ಗದರ್ಶಕ ಅಧಿಕಾರಿಗಳನ್ನು ನೇಮಕ ಮಾಡಲಾಗುತ್ತಿದೆ. ಈ ಅಧಿಕಾರಿಗಳು ನೆರೆ ಜಿಲ್ಲೆಗಳಲ್ಲಿ ಸಂಭವಿಸಿದ ಅಪರಾಧ ಪ್ರಕರಣಗಳ ಮಾಹಿತಿ ಸಂಗ್ರಹ ಮತ್ತು ತನಿಖೆಯ ಅಧಿಕಾರವನ್ನು ಹೊಂದಿರುತ್ತಾರೆ ಎಂದು ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಗೋಪಾಲ ಬಿ.ಹೊಸೂರು ತಿಳಿಸಿದ್ದಾರೆ.

ನಗರದಲ್ಲಿ ಬುಧವಾರ ನಡೆದ ಗಡಿ ಅಪರಾಧ ಸಭೆಯ ಬಳಿಕ ಸುದ್ದಿಗಾರ ರೊಂದಿಗೆ ಮಾತ ನಾಡಿದ ಅವರು, ಈ ಮಾಹಿತಿ ಹಂಚಿಕೆ ಮತ್ತು ಪರಸ್ಪರ ಚರ್ಚಿಸುವ ಪ್ರಕ್ರಿಯೆಗಳು ಅಪರಾಧ ಪ್ರಕರಣಗಳ ಶೀಘ್ರ ಪತ್ತೆಗೆ ಸಹಕಾರಿ ಯಾಗಲಿವೆ ಎಂದರು. ಗಡಿ ಜಿಲ್ಲೆ ಕಾಸರ ಗೋಡು, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಮಂಗಳೂರು ನಗರ ಪೊಲೀಸ್ ಕಮಿಷ ನರೇಟ್ ಅಧಿಕಾರಿಗಳು ಮತ್ತು ಅಪರಾಧ ವಿಭಾಗದಲ್ಲಿ ಕೆಲಸ ಮಾಡುವ ಸಿಬಂದಿಗಳು ಸಭೆಯಲ್ಲಿ ಪಾಲ್ಗೊಂ ಡಿದ್ದರು ಎಂದು ಐಜಿಪಿ ವಿವರಿಸಿದರು. ಅಂತರ್ ಜಿಲ್ಲಾ ಪೊಲೀಸ್ ಅಧಿಕಾರಿಗಳು ಮಾಹಿತಿ ಹಂಚಿಕೊಳ್ಳುವ ಕ್ರಮ ಹಿಂದಿ ನಿಂದಲೂ ಇದೆ. ಆದರೆ ಇತ್ತೀಚೆಗೆ ಅದು ನಿರ್ದಿಷ್ಡ ರೂಪು ಪಡೆದಿದೆ. ಅದಕ್ಕೆಂದೇ ಅಧಿಕಾರಿಯನ್ನು ನೇಮಿಸುವ ಹಂತಕ್ಕೆ ಬೆಳೆದಿದೆ ಎಂದರು. ನೋಡಲ್ ಅಧಿಕಾರಿಯ ನೇಮಕದಿಂದ ಪರಸ್ಪರ ಮಾಹಿತಿ ಕೊಡು -ಕೊಳ್ಳುವಿಕೆಯ ವೇಗ ಹೆಚ್ಚುವುದು ಮತ್ತು ಅಪರಾಧ ಕೃತ್ಯಗಳನ್ನು ಮಟ್ಟ ಹಾಕಲು ಪೂರಕವಾಗಲಿದೆ ಎಂದು ಐಜಿಪಿ ಅವರು ನುಡಿದರು.
ಜನವರಿ 11 ರಂದು ಕಣ್ಣೂರಿನಲ್ಲಿ ಕೇರಳ -ಕರ್ನಾಟಕ ಹಿರಿಯ ಪೊಲೀಸ್ ಅಧಿಕಾರಿ ಗಳ ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಫಲಪ್ರದವಾಗಿ ಈ ಸಭೆ ನಡೆದಿದೆ ಮತ್ತು ಆಗಾಗ ಇಂತಹ ಸಭೆಗಳನ್ನು ನಡೆಸಿ ಮಾಹಿತಿ ವಿನಿಮಯ, ಫಲಾಫಲಗಳ ವಿಶ್ಲೇಷಣೆ ನಡೆಸ ಲಾಗುವುದು ಎಂದರು.
ಕಾನೂನು ಸುವ್ಯವಸ್ಥೆ , ಭಯೋತ್ಪಾದನೆ, ಸಂಘಟಿತ ಅಪರಾಧ, ಸಾಂಪ್ರದಾಯಿಕ ಅಪರಾಧ ಮತ್ತು ಆರೋಪಿಗಳ ಬಗ್ಗೆ ಸಭೆಯಲ್ಲಿ ಸವಿವರ ಚರ್ಚೆ ನಡೆಯಿತು ಎಂದು ಪೊಲೀಸ್ ಮಹಾ ನಿರೀಕ್ಷಕರು ತಿಳಿಸಿದರು.ಚಿಕ್ಕಮಗಳೂರು ಮತ್ತು ಉಡುಪಿ ಜಿಲ್ಲಾ ಉಪಾ ಧೀಕ್ಷಕರನ್ನು ನೋಡಲ್ ಅಧಿಕಾರಿ ಗಳಾಗಿ ನಿಯೋಜಿಸ ಲಾಗುವುದು. ಅಂತರ್ಜಿಲ್ಲಾ ಅಪರಾಧ ಪ್ರಕರಣಗಳ ಸುಲಲಿತ ತನಿಖೆ, ಮಾಹಿತಿ ವಿನಿಮಯ ಮತ್ತು ನಿಯಂತ್ರಣಕ್ಕಾಗಿ ಸಹಾಯ ವಾಣಿಯನ್ನು ಆರಂಭಿಸ ಲಾಗುವುದು. ಈ ಕುರಿತು ಶೀಘ್ರ ನಿರ್ಧಾರಕ್ಕೆ ಬರಲಾಗುವುದು ಎಂದು ಐಜಿಪಿ ಹೇಳಿದರು.ಮಹಿಳೆಯರ ಕಾಣೆ, ಗುರುತು ಪತ್ತೆಯಾಗದ ಶವಗಳು ಮತ್ತು ಕಳ್ಳನೋಟು ಕುರಿತು ಸುಧೀರ್ಘ ಚರ್ಚೆ ನಡೆದಿದೆ. ಅಪರಾಧ ವಿಭಾಗದ ಕಾನ್ಸ್ ಟೇಬಲ್ ಮಟ್ಟದ ಸಿಬಂದಿಗಳು ಕೂಡಾ ಸಭೆಯಲ್ಲಿ ಭಾಗವಹಿಸಿರುವುದು ಮತ್ತು ಗುಂಪು ಚರ್ಚೆಯಲ್ಲಿ ಪಾಲ್ಗೊಂಡಿರುವುದು ಇಂದಿನ ವಿಶೇಷ ಎಂದರು. ದಕ್ಷಿಣ ಕನ್ನಡ ಜಿಲ್ಲಾ ಎಸ್ಪಿ ಡಾ| ಸುಬ್ರಹ್ಮಣ್ಯೇಶ್ವರ ರಾವ್, ಮಂಗಳೂರು ನಗರ ಪೊಲಿಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್, ನಗರ ಪೊಲೀಸ್ ಉಪ ಆಯುಕ್ತ ಎಂ.ಮುತ್ತುರಾಯ (ಅಪರಾಧ ಮತ್ತು ಸಂಚಾರ), ಕಾಸರಗೋಡು ಪೊಲೀಸ್ ವರಿಷ್ಠಾಧಿಕಾರಿ ಕೆ. ಪ್ರಕಾಶ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ನೋಡಲ್ ಅಧಿಕಾರಿಗಳು:ದ.ಕ., ಕಾಸರಗೋಡು ಜಿಲ್ಲೆಗಳ ಡಿಸಿಆರ್ಬಿ ಪೊಲೀಸ್ ಉಪಾಧೀಕ್ಷಕರು, ದ.ಕ.ಜಿಲ್ಲಾ ಅಪರಾಧ ಪತ್ತೆದಳದ ಇನ್ಸ್ ಪೆಕ್ಟರ್, ಕಮಿಷರೇಟ್ ನ ಸಿ ಸಿ ಆರ್ ಬಿ ಎಸಿಪಿ, ಸಿಸಿಐಬಿ ಇನ್ಸ್ ಪೆಕ್ಟರ್ ನೋಡಲ್ ಅಧಿಕಾರಿಗಳಾಗಿರುತ್ತಾರೆ.

ಘನತ್ಯಾಜ್ಯ ವಿಲೇವಾರಿಗೆ ಆದ್ಯತೆ ನೀಡಲು ಸಿಇಒ ಸೂಚನೆ

ಮಂಗಳೂರು, ಜುಲೈ 21:ಸ್ವಚ್ಛತಾ ಆಂದೋಲನದಲ್ಲಿ ಜಿಲ್ಲೆಯ 203 ಗ್ರಾಮ ಪಂಚಾಯಿತಿಗಳಿಗೆ ಪ್ರಶಸ್ತಿ ಲಭಿಸಿ, ಸಾಧನೆಯಲ್ಲಿ ಜಿಲ್ಲೆ ಮುಂದಿದ್ದರೂ ನಿರಂತರತೆಗೆ ಒತ್ತು ನೀಡಬೇಕಾಗಿದೆ ಎಂದು ದ.ಕ.ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್ ಹೇಳಿದರು.

ಅವರಿಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸ ಲಾಗಿದ್ದ ಜಿಲ್ಲಾ ನೀರು ಮತ್ತು ನೈರ್ಮಲ್ಯ ಸಮಿತಿ ಸಭೆಯನ್ನು ದ್ದೇಶಿಸಿ ಮಾತನಾ ಡುತ್ತಿದ್ದರು. ಸ್ವಚ್ಛತೆ ಜಿಲ್ಲೆಯಲ್ಲಿ ಒಂದು ಆಂದೋಲ ನವಾಗಿ ಮಾರ್ಪಟ್ಟು ಎಲ್ಲರ ಸಕ್ರಿಯ ಪಾಲ್ಗೊಳ್ಳು ವಿಕೆಗೆ ಪ್ರೇರೇಪಿಸಿ ಸಾಧನೆ ಮಾಡಲಾ ಯಿತಾದರೂ ನಿರಂತರತೆ ಸಾಧಿಸುವಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಪಟ್ಟಣಗಳಾಗಿ ರೂಪು ಗೊಳ್ಳುತ್ತಿರುವ ಪ್ರದೇಶ ಗಳಿಂದಾಗಿ ತ್ಯಾಜ್ಯ ವಿಲೇವಾರಿ ಸ್ಥಳೀಯಾ ಡಳಿತಕ್ಕೆ ಸವಾಲಾಗಿದೆ.ಈ ಸಂಬಂಧ ವಿವಿಧ ಅಧ್ಯಯ ನಗಳ ಬಳಿಕ ಸರಳ ತಂತ್ರಜ್ಞಾನ ಮತ್ತು ಅನುದಾನ ಲಭ್ಯತೆಯನ್ನು ಗಮನ ದಲ್ಲಿರಿಸಿ ಮೈಸೂರಿನ ಭಗೀರಥ ಸಂಸ್ಥೆಯ ನೆರವಿ ನೊಂದಿಗೆ ಬೆಳ್ತಂಗಡಿಯ ಲಾಯಿಲಾ, ಮಂಗಳೂರಿನ ಕಟೀಲು, ಮನ್ನಬೆಟ್ಟು, ಕಿನ್ನಿಗೋಳಿ, ಪುತ್ತೂರಿನ ಕಡಬ, ಸುಳ್ಯದ ಸುಬ್ರಹ್ಮಣ್ಯದಲ್ಲಿ ಘನಹಾಗೂ ದ್ರವ ತ್ಯಾಜ್ಯ ವಿಲೇವಾರಿ ಬಗ್ಗೆ ಪೈಲೆಟ್ ಪ್ರಾಜೆಕ್ಟ್ ಗಳನ್ನು ರೂಪಿಸಲು ನಿರ್ಧರಿ ಸಲಾಗಿದೆ. ಈ ಯೋಜನೆಗಳ ಯಶಸ್ಸಿಗೆ ಜನರ ಸಹಭಾಗಿತ್ವದ ಅಗತ್ಯವನ್ನು ಮನಗಾಣಲಾಗಿದ್ದು, ನೀರು ನೈರ್ಮಲ್ಯ ಸಮಿತಿಗಳು ತಿಂಗಳಲ್ಲಿ ಒಂದು ಬಾರಿ ತಾಲೂಕು ಮಟ್ಟದಲ್ಲಿ ಕನಿಷ್ಠ 2 ಗಂಟೆ ಈ ಸಂಬಂಧ ಸಭೆ ನಡೆಸಿ, ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಅಧಿಕಾರಿಗಳಿಗೆ ಮಾರ್ಗದರ್ಶನ ನೀಡಿದರು.
ಸಾಂಕ್ರಾಮಿಕ ಕಾಯಿಲೆಗಳು ಹರಡಿದಾಗ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಡಾಕ್ಟರ ಗಳ ಬಗ್ಗೆ ಮಾತ್ರ ಹೆಚ್ಚಿನ ಚರ್ಚೆಗಳು ನಡೆಯುತ್ತವೆ; ಆದರೆ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಗಮನ ಹರಿಸಿದಾಗ ಈ ಸಂಬಂಧ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ, ಈ ಬಗ್ಗೆ ನೀರು ನೈರ್ಮಲ್ಯ ಸಮಿತಿ ಹೆಚ್ಚಿನ ಗಮನ ಹರಿಸಬೇಕೆಂದು ಅವರು ನುಡಿದರು.
ವಿದೇಶಗಳಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ ಸಾಧ್ಯವಾಗಿದ್ದು, ನಮ್ಮಲ್ಲಿ ತ್ಯಾಜ್ಯದಲ್ಲಿ ತೇವಾಂಶ ಜಾಸ್ತಿ ಇರುವುದರಿಂದ ಈ ಬಗ್ಗೆಗಿನ ಉತ್ಪನ್ನದ ಬಗ್ಗೆ ಚಿಂತಿಸಲಾಗಿಲ್ಲ. ಇಲ್ಲಿ ಲಾಭಕ್ಕಿಂತ ತ್ಯಾಜ್ಯ ನಿರ್ವಹಣೆಗೆ ಮೊದಲಿಗೆ ಹೆಚ್ಚಿನ ಒತ್ತು ನೀಡಿ, ಭಗೀರಥ ಸಂಸ್ಥೆಯ ಮಾರ್ಗದರ್ಶನದಲ್ಲಿ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳಲಾಗುತ್ತಿದೆ. ನಮ್ಮ ಜಲಮೂಲಗಳು ಕಲುಷಿತಗೊಳ್ಳದಂತೆ, ಸುತ್ತ ಮುತ್ತಲ ಪ್ರದೇಶಗಳಲ್ಲಿ ವಾಸನೆ ಬಾರದಂತೆ ಕಸವಿಲೇ ಮಾಡಲು ಜನರೊಂದಿಗೆ ಚರ್ಚಿಸಲಾಗಿದೆ. ಜೆ ಎಂ ಎಸ್ ಟೆಕ್ನಾಲಜಿಯಿಂದ ಪರಿಸರ ಸ್ನೇಹಿ ತ್ಯಾಜ್ಯ ವಿಲೇವಾರಿ ಸಾಧ್ಯ ಎಂದರು. ಇಒ ಗಳು ಈ ಬಗ್ಗೆ ಇನ್ನೂ ಹೆಚ್ಚಿನ ಆಸಕ್ತಿ ವಹಿಸಿ ಕರ್ತವ್ಯ ನಿರ್ವಹಿಸಬೇಕೆಂದರು. ವಾರ್ಡ ಸಮಿತಿಗಳನ್ನು ಸಕ್ರಿಯಗೊಳಿಸಿ ವೆಬ್ ಸೈಟ್ ನಲ್ಲಿ ಮಾಹಿತಿ ಪ್ರಕಟಿಸಬೇಕು. ಬಯಲು ಮಲವಿಸರ್ಜನೆ ಮುಕ್ತ ಹಾಗೂ ಸ್ವಚ್ಛತೆಯ ಬಗ್ಗೆ ನಿರಂತರತೆ ಕಾಯ್ದುಕೊಳ್ಳಲು ಮುಖ್ಯ ಯೋಜನಾಧಿಕಾರಿಗಳು ಯೋಜನೆಯನ್ನು ರೂಪಿಸಬೇಕು ಎಂದು ಸಿಇಒ ಸೂಚಿಸಿದರು.
203 ಗ್ರಾಮ ಪಂಚಾಯತ್ ವ್ಯಾಪ್ತಿಯ 360 ಗ್ರಾಮಗಳಲ್ಲಿ ವೈಯಕ್ತಿಕ ಶೌಚಾಲಯದ ಲಭ್ಯತೆ ಬಗ್ಗೆ ಸಮೀಕ್ಷೆ ಯನ್ನು ನಡೆಸಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಸಹಿ ಮಾಡಿ ಜಿಲ್ಲಾ ಪಂಚಾಯತ್ ಗೆ ಸಲ್ಲಿಸಲು ಸಿಇಒ ಅವರು ಇದೇ ಸಭೆಯಲ್ಲಿ ಸೂಚಿಸಿದರು. ಸಿಪಿಒ ಸ್ವಾಗತಿಸಿ ವಂದಿಸಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಶ್ರೀ ರಂಗಪ್ಪ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಚಾಮೇಗೌಡ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಶಕುಂತಳ, ಜನಶಿಕ್ಷಣ ಟ್ರಸ್ಟ್ ನ ಶೀನ ಶೆಟ್ಟಿ, ಕೃಷ್ಣ ಮೂಲ್ಯರು ಸೇರಿದಂತೆ ಜಿಲ್ಲಾ ಪಂಚಾಯತ್ ನ ವಿವಿಧ ವಿಭಾಗದ ಅಧಿಕಾರಿಗಳು ಉಪಸ್ಥಿತರಿದ್ದರು. ಘನತ್ಯಾಜ್ಯ ವಿಲೇವಾರಿ ಬಗ್ಗೆ ಅಸಿಸ್ಟೆಂಟ್ ಸೆಕ್ರೆಟರಿ ಚಂದ್ರಶೇಖರ್ ಮಸಗುಪ್ಪಿ ಪವರ್ ಪಾಯಿಂಟ್ ಪ್ರಸಂಟೇಷನ್ ಮೂಲಕ ವಿವರಿಸಿದರು.

Tuesday, July 20, 2010

ದ.ಕ ಜಿಲ್ಲೆಯಲ್ಲಿ 21,899 ಹೆಕ್ಟೇರ್ ಭತ್ತ ನಾಟಿ

ಮಂಗಳೂರು,ಜು.20:ಜಿಲ್ಲೆಯಲ್ಲಿ 19.7.10 ರವರೆಗೆ 21899 ಹೆಕ್ಟೇರ್ ಭತ್ತ ನಾಟಿ ಮಾಡಲಾಗಿದೆ. ಮಂಗಳೂರಿನಲ್ಲಿ 8740, ಬಂಟ್ವಾಳದಲ್ಲಿ 4270, ಬೆಳ್ತಂಗಡಿಯಲ್ಲಿ 6233, ಪುತ್ತೂರಿನಲ್ಲಿ 2230, ಸುಳ್ಯದಲ್ಲಿ 426 ಹೆಕ್ಟೇರ್ ವ್ಯಾಪ್ತಿಯಲ್ಲಿ ಭತ್ತ ನಾಟಿ ಮಾಡಲಾಗಿದೆ. ಕಳೆದ ಸಾಲಿನಲ್ಲಿ ಇದೇ ಸಮಯಕ್ಕೆ 23814 ಹೆಕ್ಟೇರ್ ವ್ಯಾಪ್ತಿಯಲ್ಲಿ ಭತ್ತ ನಾಟಿ ಮಾಡಲಾಗಿತ್ತು ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಕಳೆದ ಮುಂಗಾರು ಹಂಗಾಮಿನಲ್ಲಿ ಜೂನ್ ತಿಂಗಳಲ್ಲಿ ಹೆಚ್ಚಿನ ಮಳೆ ಯಾಗಿತ್ತು.ಜಿಲ್ಲೆ ಯಲ್ಲಿ ಒಟ್ಟು ಭತ್ತ ಬೆಳೆಯುವ ಪ್ರದೇಶ 35,000 ಹೆಕ್ಟೇರ್. ಇದು ವರೆಗೆ 504.05 ಕ್ವಿಂಟಾಲ್ ಬೀಜವನ್ನು 1263 ಫಲಾನು ಭವಿಗಳಿಗೆ ವಿತರಿಸ ಲಾಗಿದೆ. 207.85 ಕ್ವಿಂಟಾಲ್ ಬೀಜ ದಾಸ್ತಾನಿದ್ದು, ಬೇಡಿಕೆ ಪೂರೈಕೆಗೆ ಯಾವುದೇ ತೊಂದರೆ ಇಲ್ಲ ಎಂದು ಜಂಟಿ ಕೃಷಿ ನಿರ್ದೇಶಕರು ಹೇಳಿದ್ದಾರೆ. ಮಂಗಳೂರಿನಲ್ಲಿ 541, ಬಂಟ್ವಾಳದಲ್ಲಿ 363, ಬೆಳ್ತಂಗಡಿಯಲ್ಲಿ 133, ಪುತ್ತೂರಿನಲ್ಲಿ 129 ಮತ್ತು ಸುಳ್ಯದಲ್ಲಿ 97 ಫಲಾನುಭವಿಗಳಿಗೆ ಬೀಜ ವಿತರಣೆ ಮಾಡಲಾಗಿದೆ. ಒಟ್ಟು 504050 ರೂ. ರಿಯಾಯಿತಿಯನ್ನು ನೀಡಲಾಗಿದೆ. ಮಂಗಳೂರು ತಾಲೂಕಿನಲ್ಲಿ 69.85,ಬಂಟ್ವಾಳದಲ್ಲಿ 22.25, ಬೆಳ್ತಂಗಡಿಯಲ್ಲಿ 53.75, ಪುತ್ತೂರಿನಲ್ಲಿ 43.50 ಮತ್ತು ಸುಳ್ಯದಲ್ಲಿ 18.50 ಬೀಜ ದಾಸ್ತಾನಿದೆ.ರಾಷ್ಟ್ರೀಯ ಕೃಷಿ ವಿಮಾ ಯೋಜನೆಯನ್ನು ಮುಂಗಾರು 2010 ರಲ್ಲಿಯೂ ಮುಂದುವರೆಸಲಾಗಿದ್ದು,ಮಂಗಳೂರು(A)ಹೊಬಳಿ ಹೊರತು ಪಡಿಸಿ ಜಿಲ್ಲೆಯ ಎಲ್ಲಾ ಹೊಬಳಿಗಳಿಗೆ ಈ ಯೋಜನೆಗೆ ಒಳಪಟ್ಟಿರುತ್ತವೆ.

Saturday, July 17, 2010

ಹಸಿರಿನ ಹಬ್ಬ ವನಮಹೋತ್ಸವ

ಮಂಗಳೂರು,ಜು.17:ಜಾಗತಿಕ ತಾಪಮಾನ ಏರಿಕೆ,ಮಾನವನ ದುರಾಸೆಗೆ ಪ್ರಕೃತಿ ಬಲಿಯಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಅರ್ಥಪೂರ್ಣವಾಗಿ ವನಮಹೋತ್ಸವವನ್ನು ಆಚರಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಹೇಳಿದರು. ಅವರಿಂದು ನೆಹರು ಮೈದಾನದಲ್ಲಿ ಅರಣ್ಯ ಇಲಾಖೆ ಹಾಗೂ ಮಂಗಳೂರು ಮಹಾನಗರಪಾಲಿಕೆ ಸಂಯುಕ್ತ ಆಶ್ರಯದಲ್ಲಿ ಏರ್ಪಡಿಸಲಾದ ನಗರ ಹಸುರೀಕರಣ ಅಭಿಯಾನದ ಅಂಗವಾಗಿ ನೆಹರು ಮೈದಾನದಲ್ಲಿ ಗಿಡಗಳನ್ನು ನೆಡುವುದರ ಮೂಲಕ ವನಮಹೋತ್ಸವಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.

ಹಿಂದೆ ಕಾಡಿದ್ದರೆ ನಾಡು,ಮಳೆ ಎಂಬ ಘೋಷವಾಕ್ಯದಡಿ ನಮ್ಮ ಬದುಕು ಸಾಗುತ್ತಿತ್ತು; ಇಂದು ಕೈಗಾರಿಕೆ ಗಳಿಲ್ಲದಿದ್ದರೆ ಬದುಕೇ ಇಲ್ಲ ಎಂಬ ಪರಿಸ್ಥಿತಿ ನಿರ್ಮಾಣ ವಾಗಿದೆ. ಪ್ರಕೃತಿ ಮನುಷ್ಯನ ದುರಾಸೆಗೆ ಬಲಿಯಾಗುತ್ತಿದೆ. ಈ ಬಗ್ಗೆ ಯುವ ಜನಾಂಗದಲ್ಲಿ ಜಾಗೃತಿ ಮೂಡಿಸುವ ಕೆಲಸ ವಾಗಬೇಕಿದೆ. ವನ ಮಹೋತ್ಸವ ಒಣ ಮಹೋತ್ಸವ ವಾಗಬಾರದು ಎಂಬ ಸಂದೇಶವನ್ನು ಅವರು ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕರಾದ ಎನ್. ಯೋಗೀಶ್ ಭಟ್ ಅವರು, ವೃಕ್ಷ ಸಂದೇಶ, ಸಂಕೇತವನ್ನು ಅರಿತರೆ ಮಾನವ ನಿರಂತರ ಬೆಳವಣಿಗೆ ಕಾಣಬಹುದು ಎಂದರು. ಬೆಳವಣಿಗೆ ಮತ್ತು ಪರಿಸರ ಜೊತೆ ಜೊತೆಯಾಗಿ ಸಾಗಿದರೆ ಮಾತ್ರ ಸುಸ್ಥಿರ ಅಭಿವೃದ್ಧಿ ಸಾಧ್ಯ ಎಂದ ಅವರು, ಮಂಗಳೂರು ಮಹಾನಗರಪಾಲಿಕೆ ಇದಕ್ಕೆ ಮಾದರಿಯಾಗಬೇಕು.ಕಾಂಕ್ರೀಟಿಕರಣದೊಂದಿಗೆ ಪಾರ್ಕ್ ಗಳು, ವನಗಳನ್ನು ಬೆಳೆಸಲು ಆದ್ಯತೆ ನೀಡಬೇಕು. ಸಮುದ್ರ ಕೊರೆತಕ್ಕೆ, ಫ್ಲೋರೈಡ್ ನೀರನ್ನು ಶುದ್ಧೀಕರಿಸಲು, ಉತ್ತಮ ಆರೋಗ್ಯಕ್ಕೆ ಸಸ್ಯಗಳು ಬಹಳಷ್ಟು ಕೊಡುಗೆಯನ್ನು ನೀಡುತ್ತದೆ ಎಂಬುದನ್ನು ಸಂಶೋಧನಾ ವರದಿಗಳು ತಿಳಿಸಿವೆ ಎಂದರು. ಶಿಕ್ಷಣ, ವೈದ್ಯಕೀಯದಂತೆ, ವೃಕ್ಷಾರ್ಯುವೇದಕ್ಕೂ, ಸಸ್ಯ ಸಂಪತ್ತು ಅಭಿವೃದ್ಧಿಗೂ ಹೆಚ್ಚಿನ ಪ್ರಾಧಾನ್ಯತೆಯನ್ನು ನೀಡಬೇಕು.ವೈಜ್ಞಾನಿಕ ಸತ್ಯ ಅಡಗಿರುವ ಸಸ್ಯ ಶಾಸ್ತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿ; ಶಾಲೆಗಳಲ್ಲಿ ಬ್ರಾಹ್ಮಿಯನ್ನು ಬೆಳೆಸಿ ಹೃದಯ ಹಾಗೂ ಬುದ್ದಿಮತ್ತೆ ಚುರುಕಾಗಿಸಲು ಈ ತೋಟಗಳು ನೆರವಾಗಲಿವೆ ಎಂದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಾಗರಾಜ ಶೆಟ್ಟಿ ಅವರು ಸಸಿ ನೆಡುವ ಬಗ್ಗೆ ನಾಗರೀಕರ ಜವಾಬ್ದಾರಿಯನ್ನು ನೆನಪಿಸಿ ದರಲ್ಲದೆ, ಗಿಡ ನೆಟ್ಟ ಬಳಿಕ ಅದರ ಬೆಳವಣಿಗೆ ಬಗ್ಗೆ ಹೆಚ್ಚಿನ ಅಸ್ಥೆ ವಹಿಸಬೇಕಿದೆ ಎಂದರು. ಇದೇ ಸಂದರ್ಭದಲ್ಲಿ ಸಜಿಪ ಮನ್ನೂರಿನ ಮಂಗಲ್ಪಾಡಿಯ ನಾಲ್ವರು ಮಕ್ಕಳು ನೀರು ಪಾಲಾಗಿದ್ದು, ಪ್ರಾಕೃತಿಕ ವಿಕೋಪ ಪರಿಹಾರದಡಿ ಅವರ ಹೆತ್ತವರಾದ ಕೋಟೆಕಾರ ಶೇಖರ ಶೆಟ್ಟಿ ಮತ್ತು ನಾರಾಯಣ ಶೆಟ್ಟಿ ಅವರು ಪರಿಹಾರದ ಚೆಕ್ ಪಡೆದರು. ಮಹಾಪೌರರಾದ ರಜನಿ ದುಗ್ಗಣ್ಣ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಭಂಡಾರಿ, ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ಉಪಮಹಾಪೌರ ರಾಜೇಂದ್ರ ಕುಮಾರ್,ಪಾಲಿಕೆಯ ಸದಸ್ಯರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಪಅರಣ್ಯ ಸಂರಕ್ಷಣಾಧಿಕಾರಿ ವಿಜಯ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಮಹಾನಗರಪಾಲಿಕೆ ಸಹಯೋಗದೊಂದಿಗಿನ ನಗರ ಹಸುರೀಕರಣ ಯೋಜನೆಯಡಿ ನಗರ ವ್ಯಾಪ್ತಿಯಲ್ಲಿ 20 ವೈವಿಧ್ಯ ಜಾತಿಗಳ 20,000 ಗಿಡಗಳನ್ನು ನೆಟ್ಟಿದ್ದು, ಮುಂದಿನ 3 ವರ್ಷಗಳಲ್ಲಿ ಒಂದು ಲಕ್ಷ ಗಿಡ ನೆಡುವ ಯೋಜನೆಯಿದೆ ಎಂದರು. ಪಾಲಿಕೆ ಆಯುಕ್ತರಾದ ಡಾ. ವಿಜಯಪ್ರಕಾಶ್ ಅವರು ಸ್ವಾಗತಿಸುತ್ತಾ, ಪಾಲಿಕೆ 8 ಲಕ್ಷ ರೂ.ಗಳನ್ನು ಗಿಡನೆಡಲು ಅರಣ್ಯ ಇಲಾಖೆಗೆ ನೀಡಿದ್ದು, ರಸ್ತೆ ಇಕ್ಕೆಲಗಳಲ್ಲಿ, ಲೇಔಟ್ ಗಳಲ್ಲಿ, ನೀರು ಸ್ಥಾವರಗಳಲ್ಲಿ, ಸ್ಮಶಾನಗಳಲ್ಲಿ ಗಿಡ ನೆಡಲಾಗುವುದು ಎಂದರು. ಕಾರ್ಯಕ್ರಮಕ್ಕೂ ಮುನ್ನ ಸಸ್ಯ ಸಂಕುಲದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ನಗರದ ವಿವಿಧ ಶಾಲಾ ಮಕ್ಕಳ ಸಹಯೋಗದೊಂದಿಗೆ ಜಾಥಾ ಆಯೋಜಿಸಲಾಗಿತ್ತು.ಸಮಾರಂಭದ ಆರಂಭದಲ್ಲಿ ರೋಶನಿ ನಿಲಯದ ಮಕ್ಕಳಿಂದ ವನಮಹೋತ್ಸವದ ಬಗ್ಗೆ ಕಿರು ನಾಟಕ ಪ್ರದರ್ಶನವಿತ್ತು. ಪ್ರೆಸಿಡೆನ್ಸಿ ಶಾಲೆಯ ವಿದ್ಯಾರ್ಥಿ ಗಣೇಶ್ ವನಮಹೋತ್ಸವ ಸಂದೇಶ ನೀಡಿದರು. ಡೇನಿಯಲ್ ತೌರೋ ನಾಗರೀಕರ ಜವಾಬ್ದಾರಿಯ ಬಗ್ಗೆ ಮಾತನಾಡಿದರು. ಪರಿಸರವಾದಿ ಉಮರ್ ಅವರು ಪರಿಸರ ಗೀತೆಯನ್ನೋದಿದರು.

Friday, July 16, 2010

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 22,600 ಕೋಟಿ ಬ್ಯಾಂಕಿಂಗ್ ವ್ಯವಹಾರ

ಮಂಗಳೂರು,ಜು.16:ದಕ್ಷಿಣ ಕನ್ನಡ ಜಿಲ್ಲೆಯ 415 ಬ್ಯಾಂಕ್ ಶಾಖೆಗಳಲ್ಲಿ 14,407 ಕೋಟಿ ರೂ.ಠೇವಣಿ ಹಾಗೂ 8194 ಮುಂಗಡ ಕೋಟಿ ರೂ. ಮುಂಗಡ ಸೇರಿದ್ದು ಒಟ್ಟು 22,601ಕೋಟಿ ರೂ. ವ್ಯವಹಾರ ನಡೆಸಲಾಗಿದೆ ಎಂದು ಸಿಂಡಿಕೇಟ್ ಬ್ಯಾಂಕಿನ ಮುಖ್ಯ ಪ್ರಬಂಧಕ ಎಮ್ ರವಿ ತಿಳಿಸಿದರು.

ಇಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಬ್ಯಾಂಕಿಂಗ್ ಅಭಿವೃದ್ಧಿ ಮತ್ತು ಪರಿಶೀಲನಾ ಸಭೆಯಲ್ಲಿ ಮಾಹಿತಿ ನೀಡಿದ ಅವರು, ಜಿಲ್ಲಾ ಸಾಲ ಯೋಜನೆ 2009-10ರಡಿಯಲ್ಲಿ ನಾಲ್ಕನೇ ತ್ರೈಮಾಸಿಕದಲ್ಲಿ 3016 ಕೋಟಿ ರೂ., ನಿಗದಿಯಾಗಿದ್ದು 2850 ಕೋಟಿ ರೂ.ಗಳ ಸಾಲ ಬಿಡುಗಡೆಯಾಗಿದೆ. ಶೇಕಡಾ 94 ರಸಾಧನೆಯಾಗಿದೆ. ಆದ್ಯತಾ ವಲಯದ ಕೃಷಿ ಸಾಲ ಯೋಜನೆಯಡಿ 2210 ಕೋಟಿ ರೂ. ನಿಗದಿಯಾಗಿದ್ದು, 2011 ಕೋಟಿ ರೂ.ಗಳನ್ನು ವಿತರಿಸಿ ಶೇಕಡ 91 ಗುರಿ ಸಾಧಿಸಲಾಗಿದೆ. ಕೃಷಿಗಾಗಿ 1160 ಕೋಟಿ, ಸಣ್ಣ ಕೈಗಾರಿಕೆಗೆ 268 ಕೋಟಿ, ಮತ್ತಿತರ ಆದ್ಯತಾ ವಲಯಕ್ಕೆ 584 ಕೋಟಿ ಸಾಲ ನೀಡಲಾಗಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಬ್ಯಾಂಕ್ ಗಳು 66938 ಕಾರ್ಡಗಳನ್ನು ವಿತರಿಸಿದ್ದು, ಕೃಷಿಕರಿಗೆ 1765 ಕೋಟಿ, ಮಹಿಳೆಯರಿಗೆ 987 ಕೋಟಿ, ದುರ್ಬಲ ವರ್ಗದವರಿಗೆ 998 ಕೋಟಿ, ಅಲ್ಪಸಂಖ್ಯಾತರಿಗೆ ನೀಡಿದ ಸಾಲ ಆದ್ಯತಾ ರಂಗದ ಸಾಲ 26 ಶೇಕಡ ಆಗಿದ್ದು, ಸರ್ಕಾರ ನಿಗದಿ ಪಡಿಸಿದ ಮಿತಿ 15% ಕ್ಕಿಂತ ಹೆಚ್ಚಾಗಿದೆ. ಸ್ತ್ರೀಶಕ್ತಿ ಕಾರ್ಯಕ್ರಮದಡಿಯಲ್ಲಿ 3,638 ಸ್ವಸಹಾಯ ಸಂಘಗಳಿದ್ದು, ಈ ವರ್ಷ 38 ಗುಂಪುಗಳಿಗೆ ಸಾಲ ಬಿಡುಗಡೆ ಮಾಡಲಾಗಿದೆ. ಒಟ್ಟು 45,166 ಸ್ವಸಹಾಯ ಸಂಘಗಳು ಬ್ಯಾಂಕ್ ಗಳಿಂದ ಸಾಲ ಪಡೆದಿವೆ. ಇವುಗಳಿಗೆ 387 ಕೋಟಿ ರೂ. ಸಾಲ ಬಿಡುಗಡೆಯಾಗಿದೆ.
ಪ್ರಧಾನ ಮಂತ್ರಿ ಉದ್ಯೋಗ ಸೃಜನ ಯೋಜನೆಯನ್ನು ಈ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದ್ದು, ಜಿಲ್ಲೆಯಲ್ಲಿ 120 ಫಲಾನುಭವಿಗಳಲ್ಲಿ 125 ಮಂದಿಗೆ ಸಾಲ ಮಂಜೂರಾತಿ ದೊರಕಿದೆ. ಸ್ವರ್ಣ ಜಯಂತಿ ಶಹರಿ ರೋಜ್ ಗಾರ್ ಯೋಜನೆಯಲ್ಲಿ ಬದಲಾವಣೆಯನ್ನು ತಂದಿದ್ದು, ಸ್ವ ಉದ್ಯೋಗಕ್ಕಾಗಿ 2 ಲಕ್ಷ ರೂ.ವರೆಗೆ ಸಾಲ ದೊರೆಯಲಿದೆ. ಶೇ. 25 ಅಥವಾ ಗರಿಷ್ಠ 50,000 ರೂ. ಸಹಾಯಧನ ಸಿಗಲಿದೆ. ನಗರ ಪ್ರದೇಶದಲ್ಲಿ ಮಹಿಳಾ ಗುಂಪುಗಳಿಗೆ ಯೋಜನಾ ವೆಚ್ಚ ಶೇ. 35 ಅಥವಾ ಪ್ರತಿ ಸದಸ್ಯರಿಗೆ ಗರಿಷ್ಠ 60,000 ರೂ. ಸಹಾಯಧನ ಲಭ್ಯವಿದೆ. ಈ ಯೋಜನೆಯಲ್ಲಿ 77 ಫಲಾನುಭವಿಗಳಿಗೆ ಹಾಗೂ 18 ಸ್ವಸಹಾಯ ಗುಂಪುಗಳಿಗೆ ಸಾಲ ನೀಡಲಾಗಿದೆ.
ಬಡ್ಡಿ ಸಹಾಯಧನ ಯೋಜನೆಯಲ್ಲಿ ರಾಜ್ಯ ಸರ್ಕಾರ ನಮ್ಮ ಮನೆ ಯೋಜನೆ ರೂಪಿಸಿದ್ದು, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತ್ ಪ್ರದೇಶಗಳಲ್ಲಿ ಆರ್ಥಿಕವಾಗಿ ಹಿಂದುಳಿದವರು ಮತ್ತು ಕಡಿಮೆ ಆದಾಯದವರಿಗೆ ಒಂದು ಲಕ್ಷ ರೂ., ವರೆಗೆ ಮನೆ ನಿರ್ಮಾಣಕ್ಕೆ ಬಡ್ಡಿಯಲ್ಲಿ ರಿಯಾಯಿತಿ ನೀಡಿ ಮಾಸಿಕ 600 ರೂ., ಇಎಂಐಯಲ್ಲಿ ಸಾಲ ಮರುಪಾವತಿ ಯೋಜನೆ ಜಾರಿಯಲ್ಲಿದೆ. ದ.ಕ. ಜಿಲ್ಲೆಗೆ 6800 ಗುರಿ ನಿಗದಿಯಾಗಿದ್ದು, 329 ಅರ್ಜಿಗಳನ್ನು ಬ್ಯಾಂಕ್ ಗಳಿಗೆ ಸಾಲ ಮಂಜೂರಾತಿಗೆ ಕಳುಹಿಸಿಕೊಡಲಾಗಿದೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಉದಯ ಕುಮಾರ್ ಹೊಳ್ಳ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 2000ಕ್ಕಿಂತ ಮೇಲ್ಪಟ್ಟು ಜನಸಂಖ್ಯೆ ಇರುವ 214 ಗ್ರಾಮಗಳನ್ನು ಬಿಸಿನೆಸ್ ಕರೆಸ್ಪಾಂಡನ್ಸ್ ಮಾದರಿಯಲ್ಲಿ ಒಳಪಡಿಸಲು ಬಾಕಿ ಇದ್ದು, 2011 ಮಾರ್ಚ್ 31ರೊಳಗೆ ಇದನ್ನು ಸಾಧಿಸುವ ಗುರಿ ಹೊಂದಲಾಗಿದೆ ಎಂದರು. ಪ್ರತಿಯೊಂದು ಕುಟುಂಬವೂ ಬ್ಯಾಂಕಿಂಗ್ ಖಾತೆ ಹೊಂದಲು ಹಾಗೂ ಬ್ಯಾಂಕಿಂಗ್ ಸಾಲ ಸೌಲಭ್ಯ ಪಡೆಯಲು ಗುರಿ ನಿಗದಿಪಡಿಸಿ ಸಾಧಿಸಬೇಕಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಹೇಳಿದರು. ನಬಾರ್ಡ್ ನ ಎಜಿಎಂ ಪ್ರಸಾದ್ ರಾವ್, ಆರ್ ಬಿ ಐ ಪ್ರಬಂಧಕ ಪಿ.ಡಿ ರವಿಕುಮಾರ್ ಉಪಸ್ಥಿತರಿದ್ದರು.

Thursday, July 15, 2010

ವಿಮಾನ ದುರಂತ ಸಂತ್ರಸ್ತರಿಗೆ ಕೌನ್ಸಿಲಿಂಗ್

ಮಂಗಳೂರು,ಜು.15: ಮಂಗಳೂರು ವಿಮಾನ ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಹಾಗೂ ಬದುಕುಳಿದವರಿಗೆ ಕೌನ್ಸಿಲಿಂಗ್ ನಡೆಸಲು ಮನೋ ವಿಜ್ಞಾನ ವಿಭಾಗದ ನಾಲ್ವರು ವಿದ್ಯಾರ್ಥಿಗಳಿಗೆ ರೋಶನಿ ನಿಲಯದಲ್ಲಿ ಇಂದಿನಿಂದ ತರಬೇತಿ ಆರಂಭಿಸಲಾಗಿದೆ.
ಭಾರತ ಸರ್ಕಾರದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹಿರಿಯ ತಜ್ಞ ಡಾ.ಜಯಕುಮಾರ್ ಕೆ. ಹಾಗೂ ನಿಮ್ಹಾನ್ಸಿನ ತಜ್ಞ ವೈದ್ಯ ಡಾ. ಕೆ. ಸೇಕರ್ ಅವರು ರೋಶನಿ ನಿಲಯದಲ್ಲಿ ಇಬ್ಬರು ಕೇರಳದ ಹಾಗೂ ಇಬ್ಬರು ಕರ್ನಾಟಕದ ವಿದ್ಯಾರ್ಥಿಗಳಿಗೆ ಇಂದಿನಿಂದ 3 ದಿನಗಳ ವಿಶೇಷ ತರಬೇತಿ ನೀಡುತ್ತಿದ್ದಾರೆ.ತರಬೇತಿ ಬಳಿಕ ಇವರು ಸಂತ್ರಸ್ಥರ ಮನೆಗಳಿಗೆ ಭೇಟಿ ನೀಡಿ ಕೌನ್ಸಿಲಿಂಗ್ ನಡೆಸುವರಲ್ಲದೆ,ದುರಂತದಲ್ಲಿ ಬದುಕುಳಿದವರಿಗೆ ಹಾಗೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡವರಿಗೂ ಕೌನ್ಸಿಲಿಂಗ್ ನೀಡಲಿರುವರು ಎಂದು ಸಹಾಯಕ ಆಯುಕ್ತ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದ್ದಾರೆ.

ಅದಿರು ನಿಷೇಧ ಉಲ್ಲಂಘನೆ: ನಾಲ್ಕು ಲಾರಿಗಳ ವಶ

ಮಂಗಳೂರು,ಜು.15: ಜಿಲ್ಲೆಯಲ್ಲಿ ಅದಿರು ಲಾರಿಗಳನ್ನು ನಿಷೇಧಿಸಿ ಹೊರಡಿಸಿರುವ ಆಜ್ಞೆಯನ್ನು ಉಲ್ಲಂಘಿಸಿ ಅದಿರು ಸಾಗಾಟ ನಡೆಸುತ್ತಿದ್ದ ನಾಲ್ಕು ಲಾರಿಗಳನ್ನು ನವ ಮಂಗಳೂರು ಬಂದರು ಬಳಿ ಸಹಾಯಕ ದಂಡಾಧಿಕಾರಿ, ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ವಶಕ್ಕೆ ತೆಗೆದು ಕೊಂಡು ಪಣಂಬೂರು ಪೋಲಿಸ್ ಠಾಣೆಗೆ ಹಸ್ತಾಂತರಿಸಿ ಪ್ರಕರಣ ದಾಖಲಿ ಸಿದ್ದಾರೆ. 20.06.2010 ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅದಿರು ಲಾರಿಗಳನ್ನು ನಿಷೇದಿಸಲಾಗಿತ್ತು.ಈಗಾಗಲೇ ಸರ್ವೋಚ್ಚ ನ್ಯಾಯಾಲಯ ಮಂಗಳೂರು,ಬೆಲೆಕೇರಿ ಮತ್ತು ಕಾರವಾರ ಬಂದರುಗಳಿಂದ ಅದಿರು ರಫ್ತು ಮಾಡುವುದನ್ನು ನಿಷೇಧಿಸಿದೆ.ಇದರ ಹೊರತಾಗಿಯೂ ನವಮಂಗಳೂರು ಬಂದರಿನ ಮೂಲಕ ಅದಿರು ಸಾಗಾಟ ನಡೆಯುತ್ತಿದ್ದು, ಮತ್ತು ನಿಷೇಧವಿದ್ದರೂ ಜಿಲ್ಲೆಯನ್ನು ಪ್ರವೇಶಿಸುತ್ತಿರುವ ಅದಿರು ಲಾರಿಗಳ ಬಗ್ಗೆ ತನಿಖೆ ನಡೆಸಿ, ವರದಿ ನೀಡಲು ಜಿಲ್ಲಾಧಿಕಾರಿ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಆದೇಶ ನೀಡಿದ್ದಾರೆ.

Saturday, July 10, 2010

ಬೇಲಿಕೇರಿ ಅಕ್ರಮ ಗಣಿಗಾರಿಕೆ: ಲೋಕಾಯುಕ್ತ ವರದಿ ಬಳಿಕ ಕ್ರಮ

ಮಂಗಳೂರು,ಜು.10:ಉತ್ತರ ಕನ್ನಡ ಬೇಲೀಕೇರಿ ಬಂದರಿನಲ್ಲಿ ಅದಿರು ಕಳವು ಬಗ್ಗೆ ಸಮಗ್ರ ತನಿಖೆಗೆ ರಾಜ್ಯ ಸರ್ಕಾರ ಲೋಕಾಯುಕ್ತ ಹಾಗೂ ಸಿಐಡಿಗೆ ವಹಿಸಿದ್ದು ವರದಿಯ ಬಳಿಕ ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಬಂದರು ಸಚಿವರಾದ ಕೃಷ್ಣ ಜೆ.ಪಾಲೆಮಾರ್ ಅವರು ಹೇಳಿದರು.ಅವರಿಂದು ಸರ್ಕಿಟ್ ಹೌಸ್ ನಲ್ಲಿ ಪತ್ರಿಕಾ ಗೋಷ್ಠಿಯನ್ನು ದ್ದೇಶಿಸಿ ಮಾತ ನಾಡುತ್ತಾ,ಪ್ರಕರಣದ ಬಗ್ಗೆ ಸವಿವರ ಮಾಹಿತಿ ನೀಡಿದರು. ಜಲಮಾಲಿನ್ಯ ತಡೆಗೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದ ಅವರು ಬೆಂಗಳೂರಿನಲ್ಲಿ ಬೋರ್ ವೆಲ್ ನೀರು ಕಲುಷಿತಗೊಂಡಿದ್ದು ನೀರು ಶುದ್ದೀಕರಣದ ಪ್ಲಾಂಟ್ ಅಳವಡಿಸಲು ಯೋಜನೆ ರೂಪಿಸಿದೆ ಹಾಗೂ ಪರಿಸರ ಸಂರಕ್ಷಣೆಗೆ ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಮಂಗಳೂರು ನಗರ ಪಾಲಿಕೆಗೆ ಮತ್ತೆ 100 ಕೋಟಿ ರೂ.ಯೋಜನೆ ರೂಪಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದ್ದು,ಈ ಹಣದಲ್ಲಿ ಚರಂಡಿ,ಫುಟ್ ಪಾತ್ ನಿರ್ಮಾಣಕ್ಕೆ ಮೊದಲ ಆದ್ಯತೆ ನೀಡಲಾಗುದು ಎಂದರು. .

Friday, July 9, 2010

ಉಭಯ ಜಿಲ್ಲಾ ಶಾಸಕರು, ಸಹಕಾರಿಗಳ ಸಭೆ

ಮಂಗಳೂರು, ಜುಲೈ 9:ಪ್ರಾಥಮಿಕ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ಗಳು ಪ್ರೊ. ವೈದ್ಯನಾಥನ್ ವರದಿ ಶಿಫಾರಸ್ಸಿನ ಆಧಾರದಲ್ಲಿ ಸಹಕಾರಿ ಕಾನೂನಿಗೆ ತಂದ ತಿದ್ದುಪಡಿಯಂತೆ ಕೆಲವೊಂದು ಅನುಕೂಲತೆಗಳಿದ್ದರೂ ಪ್ರಮುಖ ತೊಡಕುಗಳ ಬಗ್ಗೆ ಜುಲೈ 8ರಂದು ಬೆಂಗಳೂರಿನ ಶಾಸಕರ ಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶ್ರೀ ಜೆ. ಕೃಷ್ಣ ಪಾಲೆಮಾರ್ ಅವರ ಅಧ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಶಾಸಕರ, ಸಹಕಾರಿಗಳ ಜೊತೆ ಚಿಂತನೆ ನಡೆಸಲಾಯಿತು.

ಎಲ್ಲ ಬ್ಯಾಂಕಿಂಗ್ ನಾರ್ಮ್, ಎನ್ ಪಿ ಎ, ಸಿ ಆರ್ ಆರ್, ಸಿ ಆರ್ ಎ ಆರ್ ಇತ್ಯಾದಿ ಅಳವಡಿಸಿ ಕೊಳ್ಳುತ್ತಿರುವ ಪ್ರಾಥಮಿಕ ಬ್ಯಾಂಕ್ ಗಳು ತಮ್ಮ ಬ್ಯಾಂಕಿಂಗ್ ವ್ಯವಹಾರ ಸುಗಮವಾಗಿ ಮುಂದುವರೆಸಲು ಆರ್ ಬಿ ಐ ಯವರಿಂದ ಅಗತ್ಯದ ಅನುಮತಿ ದೊರಕಿಸಿ ಕೊಡಲು ಸರಕಾರ ಪ್ರಯತ್ನಿಸ ಬೇಕೆಂದು ಸಭೆಯಲ್ಲಿ ಕೋರಲಾಯಿತು. ಈಗಿನಂತೆ ಬ್ಯಾಂಕ್ ಶಬ್ದ ಹಾಗೂ ಬ್ಯಾಂಕಿಂಗ್ ವ್ಯವಹಾರ ಮುಂದುವರೆಸಲು ಸರಕಾರ ಅನುಮತಿ ನೀಡಬೇಕೆಂದು ಕೇಳಿಕೊಳ್ಳಲು ಸಭೆ ತೀರ್ಮಾನಿಸಿತು. ಸೇವಾ ಭಾವದಿಂದ ಹಾಗೂ ರೈತ ಸಮೂಹ ಹಾಗೂ ಸಮಾಜದ ದುರ್ಬಲ ವರ್ಗಕ್ಕೆ ನೀಡುತ್ತಿರುವ ಸಹಾಯ ಮುಂದುವರಿಸಲು ಸಹಕಾರಿ ಕ್ಷೇತ್ರಕ್ಕೆ ನಿರಂತರ ಬೆಂಬಲ ಸರಕಾರದಿಂದ ದೊರಕಿಸಬೇಕೆಂದು ನಿರ್ಧರಿಸಲಾಯಿತು.
ನಿಯೋಗದಲ್ಲಿ ಎಸ್ ಸಿ ಬ್ಯಾಂಕಿನ ಪುಷ್ಪರಾಜ ಹೆಗ್ಡೆ, ಅಳದಂಗಡಿಯ ಧಣ್ಣಪ್ಪ ಪೂಜಾರಿ, ವಸಂತ ಮಜಲು, ಕಾವಳ ಮುಡೂರಿನ ಪದ್ಮಶೇಖರ ಜೈನ್, ನೃಪರಾಜ ಬಂಗೇರ ಉಪಸ್ಥಿತರಿದ್ದರು. ಮುಂಡಾಜೆ ಬ್ಯಾಂಕ್ ಅಧ್ಯಕ್ಷ ಎನ್ ಎಸ್ ಗೋಖಲೆ ಸ್ವಾಗತಿಸಿದರು. ವಸಂತ ಮಜಲು ವಂದಿಸಿದರು. ಬೆಳ್ತಂಗಡಿ ಶಾಸಕ ಶ್ರೀ ವಸಂತ ಬಂಗೇರ ಅವರ ಕೋರಿಕೆಯಂತೆ ಈ ಸಭೆಯನ್ನು ಕರೆಯಲಾಗಿದ್ದು,ಶಾಸಕ ಬಿ. ರಮನಾಥ ರೈ,ಯೋಗಿಶ್ ಭಟ್, ಯು.ಟಿ.ಖಾದರ್,ಮಲ್ಲಿಕಾ ಪ್ರಸಾದ್ ಭಂಡಾರಿ ಸೇರಿದಂತೆ ಎಲ್ಲ ಸಹಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಭೂಸ್ವಾಧೀನ ಕಾಯ್ದೆ ತಿದ್ದುಪಡಿಗೆ ಶಿಫಾರಸ್ಸು:ಎ. ಎಸ್. ಆನಂದ್

ಮಂಗಳೂರು,ಜು.9: ಕೈಗಾರಿಕೆಗೊಂದು ನೀತಿ, ಕೃಷಿಕರಿಗೊಂದು ನೀತಿ ಸಲ್ಲದು. ಕೃಷಿಕರ ಅಭಿವೃದ್ಧಿಗೆ ಸರ್ಕಾರ ಸಂಪೂರ್ಣ ಬೆಂಬಲ ನೀಡಬೇಕೆಂದು ಸಾವಯವ ಕೃಷಿ ಮಿಷನ್ ಅಧ್ಯಕ್ಷ ಎ. ಎಸ್. ಆನಂದ್ ಅವರು ಹೇಳಿದರು.
ಅವರಿಂದು ಮಂಗಳೂರಿನಲ್ಲಿ ಉಪವಾಸ ನಿರತ ಕೃಷಿಕ ಗ್ರೆಗರಿ ಪತ್ರಾವೋ ಅವರನ್ನು ಭೇಟಿ ಮಾಡಿದ ಬಳಿಕ, ಜಿಲ್ಲಾಡಳಿತ ದೊಂದಿಗೆ ಈ ಬಗ್ಗೆ ಚರ್ಚಿಸಿದರು. ನಂತರ ಪತ್ರಿಕಾ ಗೋಷ್ಠಿಯನ್ನು ದ್ದೇಶಿಸಿ ಮಾತನಾಡಿದ ಅವರು ಎಲ್ಲ ಕೃಷಿಕರ ಹಿತವನ್ನು ಗಮನದಲ್ಲಿರಿಸಿ ಕೈಗಾರೀ ಕೀಕರಣಕ್ಕೆ ಸರ್ಕಾರ ಭೂಮಿಯನ್ನು ಒತ್ತುವರಿ ಮಾಡುವ ರೀತಿಯಲ್ಲೇ ಕೃಷಿಕರಿಗೂ ಭೂಮಿ ನೀಡುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಬೇಕೆಂದ ಅವರು, ಉಪವಾಸ ನಿರತ ಕೃಷಿಕರ ನಿರಶನ ಅಂತ್ಯ ಹಾಗೂ ಕೃಷಿ ಭೂಮಿ ಸಂರಕ್ಷಣೆಯ ಬಗ್ಗೆ ನಾಳೆಯೇ ರಾಜ್ಯದ ಮುಖ್ಯ ಮಂತ್ರಿ ಗಳೊಂದಿಗೆ ಚರ್ಚಿಸಿ ಪರಿಹಾರ ಕಂಡು ಹುಡುಕುವುದಾಗಿ ಹೇಳಿದರು.ಕೃಷಿಕರ ಸಮ್ಮತಿಯಿಲ್ಲದೆ ಭೂಮಿ ಒತ್ತುವರಿ ಮಾಡುವ ಬಗ್ಗೆ ಅವರು ಅಸಮಾಧಾನ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಾವಯವ ಕೃಷಿಕರು ಉಪಸ್ಥಿತರಿದ್ದರು.

Thursday, July 8, 2010

' ಚರಕ ' ಪ್ರಶಸ್ತಿ ಪ್ರದಾನ

ಮಂಗಳೂರು, ಜುಲೈ 08:ಕಮ್ಯೂನಿ ಕೇಶನ್ ಫಾರ್ ಡೆವಲಪ್ ಮೆಂಟ್ ಎಂಡ್ ಲರ್ನಿಂಗ್ ಸಂಸ್ಥೆ ಕಳೆದ ಗುರುವಾರ ಬೆಂಗಳೂರು ರಾಜ ಭವನದಲ್ಲಿ ಏರ್ಪಡಿಸಿದ್ದ ಅಭಿವೃದ್ಧಿ ಪತ್ರಿ ಕೋದ್ಯಮ ಪ್ರೋತ್ಸಾಹಕ ಪ್ರಶಸ್ಥಿ ಮತ್ತು ಅಭಿವೃದ್ಧಿ ಪತ್ರಿ ಕೋದ್ಯಮ ವಾರ್ಷಿಕ ಪ್ರದಾನ ಸಮಾ ರಂಭದಲ್ಲಿ ವಿಜಯ ಕರ್ನಾಟಕ ಮಂಗಳೂರು ಆವೃತ್ತಿಯ ಪ್ರಧಾನ ವರದಿಗಾರ ಜಿತೇಂದ್ರ ಕುಂದೇಶ್ವರ ಅವರು ಗೌರವ್ವನಿತ ರಾಜ್ಯಪಾಲ ಎಚ್.ಆರ್.ಭಾರ ದ್ವಾಜ್ ಅವರಿಂದ 'ಮಕ್ಕಳ ಹಕ್ಕುಗಳ ಪತ್ರಿ ಕೋದ್ಯಮ' ಪ್ರಶಸ್ತಿ ಸ್ವೀಕರಿಸಿದರು.

Tuesday, July 6, 2010

ಜಲಾನಯನ ಅಭಿವೃದ್ಧಿ ಇಲಾಖೆಯಿಂದ 138 ಕಿಂಡಿ ಮತ್ತು ತಡೆಅಣೆಕಟ್ಟು

ಮಂಗಳೂರು,ಜುಲೈ,06: ಜಲಾನಯನ ಅಭಿವೃದ್ಧಿ ಇಲಾಖೆ ಜಿಲ್ಲಾ ಯೋಜನಾ ವ್ಯಾಪ್ತಿಯೊಳಗಿನ ರೈತರ ಶ್ರೇಯೋಭಿವೃದ್ಧಿಗಾಗಿ 2009-10ನೇ ಸಾಲಿನಲ್ಲಿ ರೂ. 573.10 ಲಕ್ಷ ರೂ.ವೆಚ್ಚದಲ್ಲಿ 138 ಕಿಂಡಿ ಮತ್ತು ತಡೆ ಅಣೆಕಟ್ಟುಗಳನ್ನು ನಿರ್ಮಿಸಿದೆ ಎಂದು ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಬಿ. ತಿಳಿಸಿದ್ದಾರೆ.

ಈ ನಿರ್ಮಾಣ ಗಳಿಂದ ಜಿಲ್ಲೆಯಲ್ಲಿ ಅಂತರ್ಜಲ ಅಭಿವೃದ್ಧಿ ಯೊಂದಿಗೆ ಸುಮಾರು 1200 ಹೆಕ್ಟೇರ್ ಪ್ರದೇಶದಲ್ಲಿ ಎರಡನೇ ಬೆಳೆ ಬೆಳೆಯಲು ಮತ್ತು ತೋಟಗಾರಿಕೆ ಬೆಳೆಗಳಿಗೆ ಬೇಸಿಗೆಯಲ್ಲಿ ನೀರಾವರಿ ಸೌಲಭ್ಯವನ್ನು ಒದಗಿಸಲು ಅನುಕೂಲ ವಾಗಿದೆ. ಜಿಲ್ಲೆಯ ಗ್ರಾಮೀಣ ಭಾಗ ಇಂದಿಗೂ ಕೃಷಿ ಪ್ರಧಾನ ವಾಗಿದ್ದು, ಭತ್ತ, ತೆಂಗು, ಅಡಿಕೆ, ಸಾಂಬಾರು, ರಬ್ಬರ್ ಮುಂತಾದ ಬೆಳೆಗಳನ್ನು ಬೆಳೆಯ ಲಾಗುತ್ತಿದೆ. ವಾರ್ಷಿಕ 4000 ಮಿ.ಮೀ ಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಮುಂಗಾರಿನಲ್ಲಿ ಮಳೆಯಾದರೂ ಡಿಸೆಂಬರ್ ನಿಂದ ಮೇ ವರೆಗೆ ನೀರೊದಗಿಸಲು ಜಲಾನಯನ ಇಲಾಖೆ ಜಿಲ್ಲೆಯಲ್ಲಿ ಸಮಗ್ರ ಬಂಜರು ಭೂಮಿ ಅಭಿವೃದ್ಧಿ,ಜಲಾನಯನ ಅಭಿವೃದ್ಧಿ, ಪಶ್ಚಿಮ ಘಟ್ಟ ಅಭಿವೃದ್ಧಿ, ಸಮಗ್ರ ಜಲಾನ ಯನ ನಿರ್ವಹಣೆ, ಮಳೆ ನೀರು ಕೊಯ್ಲು ವಿನ್ಯಾಸಗಳ ರಚನೆ ಯೋಜನೆಗಳಡಿ 2008-09ನೇ ಸಾಲಿನಲ್ಲಿ 482.84 ಲಕ್ಷ ರೂ. ವೆಚ್ಚದಲ್ಲಿ 93 ಕಿಂಡಿ ಅಣೆಕಟ್ಟು, 7 ತಡೆಅಣೆಕಟ್ಟು, 140 ನಾಲಾ ತಡೆಗೋಡೆ ಕಾಮಗಾರಿ ಗಳನ್ನು ಕೈಗೊಂಡಿದೆ.

Saturday, July 3, 2010

ಸರ್ಕಾರಿ ಯೋಜನೆಗಳ ಸದುಪಯೋಗ ಪಡೆಯಿರಿ; ಸಂತೋಷ್ ಕುಮಾರ್ ಭಂಡಾರಿ

ಮಂಗಳೂರು, ಜುಲೈ,03: ಜನಸ್ಪಂದನ ಯಶಸ್ವಿಯಾಗಲು ಜನರು ಸ್ಪಂದಿಸಬೇಕು; ಆಡಳಿತ ಮನೆಬಾಗಿಲಿಗೆ ಬಂದಿರುವಾಗ ಅರ್ಹ ಫಲಾನುಭವಿಗಳು ಅದರ ಪ್ರಯೋಜನ ಪಡೆಯಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಸಂತೋಷ್ ಕುಮಾರ್ ಭಂಡಾರಿ ಹೇಳಿದರು.
ಮಂಗಳೂರಿನ ಎಡಪದವು ಸ್ವಾಮಿ ವಿವೇಕಾನಂದ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಜನಸ್ಪಂದನ ಸಭೆಯಲ್ಲಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ಸೌಲಭ್ಯಗಳನ್ನು ವಿತರಿಸಿ ಅವರು ಮಾತನಾಡುತ್ತಿದರು.
ಅಧಿಕಾರಿಗಳು ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಹಾಗೂ ಯೋಜನೆಗಳ ಸದುಪಯೋಗವನ್ನು ಜನಪಡೆಯಲು ಮುಂದಾಗುವುದರಿಂದ ಮಾತ್ರ ಸಾಮಾಜಿಕ ಬೆಳವಣಿಗೆ ಮತ್ತು ಅಭಿವೃದ್ಧಿ ಸಾಧ್ಯ ಎಂದವರು ನುಡಿದರು.ಸುಮಾರು 750 ಜನರಿದ್ದ ಸಭೆಯಲ್ಲಿ 105 ಫಲಾನುಭವಿಗಳಿಗೆ ವಿವಿಧ ಪೆನ್ಷನ್, 55 ಜನರಿಗೆ ಭಾಗ್ಯಲಕ್ಷ್ಮಿ ಬಾಂಡ್, ಆಶ್ರಯ ಸೇರಿದಂತೆ ವಿವಿಧ ವಸತಿ ಯೋಜನೆಗಳಡಿ 5 ಫಲಾನುಭವಿಗಳಿಗೆ ಚೆಕ್ ವಿತರಿಸಲಾಯಿತು. ಸಭೆಯಲ್ಲಿ ಜಿ.ಪಂ. ಸದಸ್ಯ ವಿನೋದ ಮಾಡ, ತಾ.ಪಂ. ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ದುಗ್ಗು ಪೂಜಾರಿ ಉಪಸ್ಥಿತರಿದ್ದರು. ತಹಸೀಲ್ದಾರ್ ಮಂಜುನಾಥ್, ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.

Friday, July 2, 2010

ಮಂಗಳೂರಿನಲ್ಲಿ ಪತ್ರಿಕಾ ದಿನಾಚರಣೆ

ಮಂಗಳೂರು,ಜುಲೈ 02:ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರ ಕರ್ತರ ಸಂಘ ಹಾಗು ಮಂಗಳೂರು ಪ್ರೆಸ್ ಕ್ಲಬ್ ಆಶ್ರಯದಲ್ಲಿ ಪತ್ರಿಕಾ ದಿನಾ ಚರಣೆ

ಮತ್ತು ಸಾರ್ವ ಜನಿಕ ಗ್ರಂಥಾಲಯ ಉದ್ಘಾಟನಾ ಸಮಾರಂಭ ನಗರದ ಲೇಡಿಹಿಲ್ ನಲ್ಲಿರುವ ಪತ್ರಿಕಾ ಭವನ ದಲ್ಲಿ ನಡೆ ಯಿತು. ಸಾರ್ವ ಜನಿಕಾ ಗ್ರಂಥಾಲ ಯವನ್ನು ಪಾಲಿಕೆ ಆಯುಕ್ತಾ ಡಾ.ವಿಜಯ ಪ್ರಕಾಶ್ ಅವರು ಉದ್ಘಾ ಟಿಸಿದರು. ಹಿರಿಯ ರಂಗ ಕರ್ಮಿ,ಚಲನ ಚಿತ್ರ ನಿರ್ದೇಶಕ ಸದಾ ನಂದ ಸುವರ್ಣಾ, ಪತ್ರಕರ್ತ ಸಂಘದ ಅಧ್ಯಕ್ಷ ಹರ್ಷ,ಪ್ರಧಾನ ಕಾರ್ಯದರ್ಶಿ ಬಾಳೆಪುಣಿ, ಉಪಾಧ್ಯಕ್ಷ ಆರ್.ರಾಮಕೃಷ್ಣ, ಪ್ರೆಸ್ ಕ್ಲಬ್ ಅಧ್ಯಕ್ಷ ಆನಂದ ಶೆಟ್ಟಿ, ಉಪಾಧ್ಯಕ್ಷ ಜಗನ್ನಾಥ್ ಶೆಟ್ಟಿ ಬಾಳ, ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಸಮಾ ರಂಭದಲ್ಲಿ ಉಪಸ್ಥಿ ತರಿದ್ದರು.