Tuesday, November 27, 2012

ಶೈಕ್ಷಣಿಕ ಪ್ರವಾಸಕ್ಕೆ ಅಪರ ಜಿಲ್ಲಾಧಿಕಾರಿಯಿಂದ ಹಸಿರು ನಿಶಾನೆ

ಮಂಗಳೂರು, ನವೆಂಬರ್. 27 : ದ.ಕ.ಜಿಲ್ಲೆಯ ಸಮಾಜಕಲ್ಯಾಣ ಇಲಾಖೆಯ ವಸತಿ ಶಾಲೆ ಗಳಿ0ದ ಆಯ್ದ 80 ಪರಿಶಿಷ್ಟ ಜಾತಿಯ ವಿದ್ಯಾ ರ್ಥಿಗ ಳಿಗೆ ಜಿಲ್ಲಾ ವಾರ್ತಾ ಇಲಾಖೆ ಆಯೋ ಜಿಸಿದ್ದ 5 ದಿನ ಗಳ ಶೈ ಕ್ಷಣಿಕ ಪ್ರವಾ ಸಕ್ಕೆ ಅಪರ ಜಿಲ್ಲಾ ಧಿಕಾರಿ ಕೆ.ಎ. ದಯಾ ನ0ದ ಅವರು ಸೋಮ ವಾರ ನಗ ರದಲ್ಲಿ ಹಸಿರು ನಿಶಾನೆ ತೋರಿಸಿ ಶುಭ ಹಾರೈ ಸಿದರು. ಈ ಸ0ದರ್ಭ ಜನ ಶಿಕ್ಷಣ ಟ್ರಸ್ಟ್ ನ ಕೃಷ್ಣ ಮೂಲ್ಯ, ಜಿಲ್ಲಾ ವಾರ್ತಾ ಧಿಕಾರಿ ಶ್ರೀಮತಿ ರೋಹಿಣಿ  ಉಪ ಸ್ಥಿತರಿದ್ದರು.

 

Saturday, November 24, 2012

ಗೋಕುಲ್ ದಾಸ್ ಗೆ ವಾಲ್ಮೀಕಿ ಪ್ರಶಸ್ತಿ ಪ್ರದಾನ

ಮಂಗಳೂರು, ನವೆಂಬರ್.24: ಕೊರಗ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸಿದ ಸಮುದಾಯದ ಹಿರಿಯ ಮುಖಂಡ ಗೋಕುಲ್ದಾಸ್ರಿಗೆ ರಾಜ್ಯ ವಾಲ್ಮೀಕಿ ಪ್ರಶಸ್ತಿಯನ್ನು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಪ್ರದಾನ ಮಾಡಿದರು.
ಬೆಂಗ ಳೂರಿ ನಲ್ಲಿ ಮುಖ್ಯ ಮಂತ್ರಿ ಯಿಂದ ಸ್ವೀಕ ರಿಸ ಬೇಕಿದ್ದ ಪ್ರಶಸ್ತಿ ಯನ್ನು ಗೋಕುಲ್ ದಾಸ ಅವರ ಅನಾ ರೋಗ್ಯದ ಹಿನ್ನೆಲೆಯಲ್ಲಿ ಇಂದು ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿಂದು ಪ್ರದಾನ ಮಾಡಲಾಯಿತು. ಈ ಸಂದರ್ಭ ವಿಧಾನ ಸಭಾ ಉಪಸಭಾಪತಿ ಎನ್. ಯೋಗೀಶ್ ಭಟ್, ಸಂಸದ ನಳಿನ್ ಕುಮಾರ್ ಕಟೀಲ್, ಜಿ.ಪಂ. ಅಧ್ಯಕ್ಷ ಕೊರಗಪ್ಪ ನಾಯ್ಕ, ಉಪಾಧ್ಯಕ್ಷ ರಿತೇಶ್ ಶೆಟ್ಟಿ, ಜಿಲ್ಲಾಧಿಕಾರಿ ಡಾ.ಎನ್.ಎಸ್. ಚನ್ನಪ್ಪ ಮತ್ತಿರರು ಉಪಸ್ಥಿತರಿದ್ದರು.

ದುರ್ಬಲವರ್ಗದ ಅಭಿವೃದ್ಧಿಗೆ ಒತ್ತುಕೊಡಿ: ಸಚಿವ ಸಿ ಟಿ ರವಿ


ಮಂಗಳೂರು. ನವೆಂಬರ್. 24: ಪರಿಶಿಷ್ಟ ಜಾತಿ ಮತ್ತು ವರ್ಗದವರ ಅಭಿವೃದ್ಧಿಗೆ ಮೀಸಲಾಗಿರುವ ಅನುದಾನವನ್ನು ಅವರ ಅಭಿವೃದ್ಧಿಗೆ ಬಳಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ.ಟಿ. ರವಿ ಅವರು ಹೇಳಿದರು.
ದ.ಕ.ಜಿಲ್ಲಾ ಪಂಚಾ ಯತ್ ನ ನೇತ್ರಾ ವತಿ ಸಭಾಂ ಗಣ ದಲ್ಲಿ ಇಂದು ನಡೆದ ಕೆಡಿಪಿ ತ್ರೈ ಮಾಸಿಕ ಸಭೆಯ ಅಧ್ಯ ಕ್ಷತೆ ವಹಿಸಿ ಮಾತ ನಾಡು ತ್ತಿದ್ದ ಸಚಿವರು, ಜಿಲ್ಲೆ ಯಲ್ಲಿ ಕುಡಿಯುವ ನೀರಿಗೆ ತೊಂದರೆ ಯಾಗ ದಂತೆ ಯೋಜನೆ ರೂಪಿಸಿ. ಕಿಂಡಿ ಅಣೆಕಟ್ಟುಗಳನ್ನು, ಕಿರುಜಲ ಯೋಜನೆಗಳನ್ನು ತ್ವರಿತಗತಿಯಲ್ಲಿ ಮುಗಿಸಿ. ಇಒಗಳು ಪಿಡಿಒಗಳ ಮುಖಾಂತರ ದುರ್ಬಲ ವರ್ಗದವರ ವಸತಿಯೋಜನೆಗಳನ್ನು ನಿಗದಿತ ಗುರಿಯೊಳಗೆ ಮುಗಿಸಲು ಸೂಚನೆ ನೀಡಿ ಎಂದು ನಿರ್ದೇಶನ ನೀಡಿದರು.
ನಿವೇಶನ ರಹಿತರ ಪಟ್ಟಿ ಮಾಡಿ, ಕೊರಗ ಕುಟುಂಬಗಳು, ಪರಿಶಿಷ್ಟ ಜಾತಿ,ವರ್ಗದ ಕುಟುಂಬಗಳ ಬಗ್ಗೆ ಸಮಗ್ರ ಮಾಹಿತಿಯನ್ನಿರಿಸಿಕೊಂಡು ನಿವೇಶನ ರಹಿತರಿಗೆ ಸೂರು ಒದಗಿಸಲು ಆದ್ಯತೆ ನೀಡಿ ಎಂದು ಅವರು ಸೂಚಿಸಿದರು.
ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದಲ್ಲಿ ಕುಡಿಯುವ ನೀರಿಗೆ 48.78 ಕೋಟಿ ರೂ.ಗಳ ಯೋಜನೆಯನ್ನು ರೂಪಿಸಲಾಗಿದೆ. 526 ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ. 236 ಕಾಮಗಾರಿಗಳಿಗೆ ಟೆಂಡರ್ ಮಾಡಲಾಗಿದೆ. ಕಳೆದ ಸಾಲಿನ 244 ಕಾಮಗಾರಿಗಳು ಸಂಪೂರ್ಣಗೊಂಡಿವೆ. ರಸ್ತೆ ಕಾಮಗಾರಿಗಳಿಗಾಗಿ 582 ಲಕ್ಷ ರೂ. ಗಳ ಯೋಜನೆ ಸಿದ್ಧವಾಗಿದೆ. ತುಂಡು ಗುತ್ತಿಗೆ ಮೂಲಕ ಜನವರಿ ಅಂತ್ಯದೊಳಗೆ ಹಲವು ಕಾಮಗಾರಿಗಳನ್ನು ಮುಗಿಸಲಿರುವೆವು ಎಂದು ಜಿಲ್ಲಾ ಪಂಚಾಯತ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಸತ್ಯ ನಾರಾಯಣ ಸಭೆಗೆ ಮಾಹಿತಿ ನೀಡಿದರು.
ದೂರ ಮತ್ತು ಒಳನಾಡು ಪ್ರದೇಶಾಭಿವೃದ್ಧಿಗೆ ಮಂಜೂರಾಗಿರುವ 5 ಕೋಟಿ ರೂ. 22 ಕಾಮಗಾರಿಗಳು ಅನುಮೋದನೆಗೊಂಡು ಕಾಮಗಾರಿ ಆರಂಭಗೊಂಡಿವೆ. ಸುವರ್ಣಗ್ರಾಮ ಯೋಜನೆಯಡಿ 32 ಸುವರ್ಣಗ್ರಾಮಗಳು ಮಂಜೂರಾಗಿದೆ ಎಂದರು.
ಜಿಲ್ಲೆಯ ಎಂಟನೇ ತರಗತಿಯ 19,075 ವಿದ್ಯಾರ್ಥಿಗಳಿಗೆ ಸೈಕಲ್ ವಿತರಿಸಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.                                                                          
ಅಡುಗೆ ಅನಿಲದ ಮೇಲಿನ ನಿರ್ಬಂಧದಿದಾಗಿ ಅಂಗನವಾಡಿಗಳಲ್ಲಿ ಮಕ್ಕಳಿಗೆ ಪೌಷ್ಠಿಕ ಆಹಾರ ತಯಾರಿಸಲು ಹಾಗೂ ಅಕ್ಷರ ದಾಸೋಹ ಕಾರ್ಯಕ್ರಮಕ್ಕೆ ತೊಂದರೆಯಾಗಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಅನುದಾನ ಅಥವಾ ಹೆಚ್ಚುವರಿ ಸಿಲಿಂಡರ್  ನೀಡುವ ಬಗ್ಗೆ ಕೆಡಿಪಿಯಲ್ಲಿ ನಿರ್ಣಯ ಅಂಗೀಕರಿಸಿ ಸರಕಾರಕ್ಕೆ ತಕ್ಷಣ ಪತ್ರ ಬರೆಯಲು ಸಚಿವರು ಸೂಚಿಸಿದರು.
2012-13ನೆ ಸಾಲಿನ ಸೆಪ್ಟಂಬರ್ ತಿಂಗಳವರೆಗಿನ ಪ್ರಗತಿ ವರದಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಸೇರಿದ ಯೋಜನೆ ಹಾಗೂ ಕಾಮಗಾರಿಗಳ ಪ್ರಗತಿಯಲ್ಲಿ ಸಾಧನೆ ಅಸಮಾಧಾನಕರ ಎಂದ ಅವರು, ಪಡಿತರ ಚೀಟಿ ಹೆಸರು ಸೇರ್ಪಡೆ ಮತ್ತು ಹೆಸರು ತೆಗೆಯುವುದು ಸೇರಿದಂತೆ ಪಡಿತರ ಚೀಟಿ ವಿತರಣೆಯಲ್ಲಿ ಆಗುತ್ತಿರುವ ಸಮಸ್ಯೆಗಳ ಬಗ್ಗೆ ಅಧಿಕಾರಿಯಿಂದ ಮಾಹಿತಿ ಪಡೆದ ಸಿ.ಟಿ. ರವಿ, ವಿತರಣೆಯ ಬಗ್ಗೆ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಸಚಿವರಿಗೆ ನೇರವಾಗಿ ಮೊಬೈಲ್ನಲ್ಲಿ  ಸಂಪರ್ಕಿಸಿದರು.
ಎಂಡೋಸಂತ್ರಸ್ತರ ಕುರಿತಂತೆ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಡಾ. ಎನ್.ಎಸ್. ಚನ್ನಪ್ಪ ಗೌಡ, ದ.ಕ. ಜಿಲ್ಲೆಯಲ್ಲಿ 5223 ಫಲಾನುಭವಿಗಳನ್ನು ಗುರುತಿಸಲಾಗಿದ್ದು, ಪರಿಹಾರಕ್ಕೆ ಸರಕಾರಕ್ಕೆ ಪತ್ರ ಬರೆಯಲಾಗಿದೆ. ಇವರ ಆರೈಕೆಗಾಗಿ ಎರಡು ಕೇರ್ ಸೆಂಟರ್ ತೆರೆಯಲಾಗಿದ್ದು, ಶೀಘ್ರದಲ್ಲೇ ಮೊಬೈಲ್ ಯುನಿಟ್ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಬಹುಗ್ರಾಮ ಯೋಜನೆಯಡಿ ಕುಡಿಯುವ ನೀರಿನ ಸಮಸ್ಯೆಗೆ ಕೈಗೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದ ಸಚಿವರು, ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಮೊದಲೇ ಪೂರ್ವ ಸಿದ್ಧತೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬಹುಗ್ರಾಮ ಯೋಜನೆಯಡಿ ಬಂಟ್ವಾಳದಲ್ಲಿ 8, ಮಂಗಳೂರಿನಲ್ಲಿ ಉಳಾಯಿಬೆಟ್ಟು, ಉಳ್ಳಾಲ ಹಾಗೂ ಕುಪ್ಪೆಪದವು ಒಳಗೊಂಡು 3, ಪುತ್ತೂರಿನಲ್ಲಿ 1 ಹಾಗೂ ಸುಳ್ಯದಲ್ಲಿ ಆರು, ಬೆಳ್ತಂಗಡಿಯಲ್ಲಿ ಎರಡು ಬಹುಗ್ರಾಮ ಯೋಜನೆಗಳಿಗೆ ಮಂಜೂರಾತಿ ದೊರಕಿದೆ. ಕಿನ್ನಿಗೋಳಿಯ 16.8 ಕೋಟಿರೂ.ಗಳ ಬಹುಗ್ರಾಮ ಯೋಜನೆ 2013ರ ಜನವರಿಯೊಳಗೆ ಪೂರ್ಣಗೊಳ್ಳಲಿದೆ ಎಂದು ಅಧಿಕಾರಿ ಸಭೆಯಲ್ಲಿ ಮಾಹಿತಿ ನೀಡಿದರು.
ಮಾಣಿ- ಮಡಿಕೇರಿ ರಸ್ತೆಯ ಒಟ್ಟು 40 ಕಿ.ಮೀ. ಉದ್ದದ ರಸ್ತೆ ಕಾಮಗಾರಿಗೆ ಸಂಬಂಧಿಸಿ ಡಿಸೆಂಬರ್ ಅಂತ್ಯಕ್ಕೆ 10 ಕಿ.ಮೀ. ರಸ್ತೆ ಕಾಮಗಾರಿ ಪೂರ್ಣಗೊಳ್ಳಲಿದೆ. ಉಳಿದ 30 ಕಿ.ಮೀ. ಹಾಗೂ ಸಂಬಂಧಪಟ್ಟ ಇತರ ಕಾಮಗಾರಿಗಳನ್ನು ಮೇ ತಿಂಗಳೊಳಗೆ ಅಂತಿಮಗೊಳಿಸಲಾಗುವುದು ಎಂದು ಕೆಆರ್ ಡಿಸಿಎಲ್ ನ ಅಧಿಕಾರಿ ಭರವಸೆ ನೀಡಿದರು.
      ಸಭೆಯಲ್ಲಿ ವಿಧಾನ ಸಭಾ ಉಪ ಸಭಾಪತಿ ಎನ್. ಯೋಗಿಶ್ ಭಟ್, ಸಂಸದ ನಳಿನ್ ಕುಮಾರ್ ಕಟೀಲ್,ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್, ಅಧ್ಯಕ್ಷರಾದ ಕೊರಗಪ್ಪ ನಾಯ್ಕ, ಉಪಾಧ್ಯಕ್ಷ ರಿತೇಶ್ ಶೆಟ್ಟಿ ಉಪಸ್ಥಿತರಿದ್ದರು.

Friday, November 23, 2012

ಜಿಲ್ಲಾ ನ್ಯಾಯಾಲಯ ಕಟ್ಟಡ ಕಾಮಗಾರಿ ಜಿಲ್ಲಾಧಿಕಾರಿಯಿಂದ ಪರಿಶೀಲನೆ


ನಿರ್ಮಾಣ ಹಂತದಲ್ಲಿರುವ ಜಿಲ್ಲಾ ನ್ಯಾಯಾಲಯ ಕಟ್ಟಡ ಕಾಮ ಗಾರಿ ಯನ್ನು ಇಂದು ಜಿಲ್ಲಾಧಿ ಕಾರಿ ಡಾ. ಎನ್. ಎಸ್ ಚನ್ನಪ್ಪಗೌಡ ಅವರು ಪರಿ ಶೀಲನೆ ನಡೆಸಿದರು. ಡಿಸೆಂ ಬರ್ ಅಂತ್ಯ ದೊಳಗೆ ಕಾಮ ಗಾರಿ ಮುಗಿ ಸಲು ಲೋಕೋ ಪಯೋಗಿ ಇಲಾಖೆ ಇಂಜಿನಿ ಯರ್ ಗಳಿಗೆ ಸೂಚನೆ ನೀಡಿದರು, ಈ ಸಂದರ್ಭದಲ್ಲಿ ಜಿಲ್ಲಾ ಸತ್ರ ನ್ಯಾಯಾಧೀಶರಾದ ಅಶೋಕ್ ಜಿ. ನಿಜಗಣ್ಣವರ್, ಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್ ಉಪಸ್ಥಿತರಿದ್ದರು.
ಒಳಾಂಗಣ ವಿನ್ಯಾಸ, ಕೋರ್ಟ್ ಹಾಲ್ ಡಯಾಸ್ ನಿರ್ಮಾಣದ ಬಗ್ಗೆಯೂ ಈ ಸಂದರ್ಭದಲ್ಲಿ ಚರ್ಚೆ ನಡೆಯಿತು.
 

ಜಿಲ್ಲೆಯಲ್ಲಿ ನವೆಂಬರ್ 23 ರಿಂದ 26 ರ ವರೆಗೆ ಕಾನೂನು ಅರಿವು ನೆರವು ಹಾಗೂ ಲೋಕ ಅದಾಲತ್

ಮಂಗಳೂರು, ನವೆಂಬರ್.23 : ಸಾಮಾನ್ಯ ಜನರಿಗೂ ಕಾನೂನಿನ ಅರಿವು ಮೂಡಿಸಿ ಅವರಿಗೆ  ಆವಶ್ಯಕತೆ ಇದ್ದಲ್ಲಿ ಅರ್ಹರಾದವರಿಗೆ ಕಾನೂನು ನೆರವು ನೀಡುವುದು ಹಾಗೂ ವ್ಯರ್ಥವಾಗಿ ನ್ಯಾಯಾಲಯಕ್ಕೆ ಅಲೆಯುವುದನ್ನು ತಪ್ಪಿಸಲು ಸಂಚಾರಿ ಲೋಕ ಅದಾಲತ್ ಗಳನ್ನು ದ.ಕ.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ,ಮಂಗ ಳೂರು,ಜಿಲ್ಲಾ ಡಳಿತ,ಪೋಲೀಸ್ ಇಲಾಖೆ,ಜಿಲ್ಲಾ ಪಂಚಾ ಯತ್  ಮಂಗ ಳೂರು,ವಕೀ ಲರ ಸಂಘ ಇನ್ನಿತರ ಇಲಾಖೆ ಗಳ ಸಹ ಯೋಗ ದೊಂದಿಗೆ 23-11-12 ರಿಂದ 26-11-12 ರವರೆಗೆ ಹಮ್ಮಿ ಕೊಂಡಿ ರುವ ನಾಲ್ಕು ದಿನ ಗಳ ಕಾನೂನು ಸಾಕ್ಷ ರತಾ ರಥ ಹಾಗೂ ಸಂಚಾರಿ ಜನತಾ ನ್ಯಾಯಾಲಯ ಅಭಿಯಾನವನ್ನು  ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆಎ.ಎನ್.ವಿಜಯಪ್ರಕಾಶ್ ನ್ಯಾಯಾಲಯದ ಆವರಣದಲ್ಲಿ ಇಂದು ಉದ್ಘಾಟಿಸಿದರು.
     ಈ ಸಂದರ್ಭದಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಅಧ್ಯಕ್ಷರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಶೋಕ್ ಜಿ.ನಿಜಗಣ್ಣವರ್,ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ,ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ಪಿ.ಅಶೋಕ್ ಅರಿಗ ಸೇರಿದಂತೆ ಪೋಲೀಸ್ ಇಲಾಖೆ,ನ್ಯಾಯಾಂಗ ಇಲಾಖೆಯ ಹಲವರು ಭಾಗವಹಿಸಿದ್ದರು.
     ದಿನಾಂಕ 24-11-12 ರಂದು ಎಡಪದವು  ಶ್ರೀರಾಮ ಭಜನಾ ಮಂದಿರದಲ್ಲಿ ಬೆಳಿಗ್ಗೆ 10.30 ರಿಂದ 12.00 ರವರೆಗೆ ,ಅದೇದಿನ ಮಧ್ಯಾಹ್ನ 12.30 ರಿಂದ 1.30 ಗಂಟೆ ವರೆಗೆ ಗಂಜಿಮಠ ಗ್ರಾಮ ಪಂಚಾಯತ್ ಆವರಣದಲ್ಲಿ ,ಬಾಲ್ಯ ವಿವಾಹ ಮತ್ತು ಮಹಿಳೆ,ಮಕ್ಕಳ ಹಕ್ಕು,ಅಪರಾಹ್ನ 3.00 ಗಂಟೆಯಿಂದ 4.00 ಗಂಟೆ ವರೆಗೆ ಜಿಲ್ಲಾ ನ್ಯಾಯಾಲಯದ  ಆವರಣದಲ್ಲಿ ಲೋಕ ಅದಾಲತ್ ಕುರಿತು,26 ರಂದು ಬೆಳಿಗ್ಗೆ 9.30 ರಿಂದ 10.30 ರ ವರೆಗೆ ಕೆನರಾ ಹೆಣ್ಮಕ್ಕಳ ಪ್ರೌಢಶಾಲೆಯಲ್ಲಿ ಬಾಲ ನ್ಯಾಯ ಕಾಯ್ದೆ  ,11 ರಿಂದ ಉರ್ವಾ ಪೊಂಪೈ ಪ್ರೌಢಶಾಲೆಯಲ್ಲಿ ಕಾನೂನು ಮಾಹಿತಿ ,2.00 ರಿಂದ 4.00 ಗಂಟೆ ವರೆಗೆ ಕಾಟಿಪಳ್ಳ ಯುವಕ ಮಂಡಲದ 5ನೇ ವಿಭಾಗದಲ್ಲಿ ಕಾನೂನು ಮಾಹಿತಿ ಸಂಚಾರಿ ಜನತಾ ನ್ಯಾಯಾಲಯದಲ್ಲಿ ಉಪನ್ಯಾಸ  ನೀಡಲಿದ್ದಾರೆ.
 

Wednesday, November 21, 2012

` ಭ್ರೂಣ ಹತ್ಯೆಯಿಂದ ಅಮ್ಮನ ಜೀವಕ್ಕೂ ಕುತ್ತು ' - ಡಾ. ಪೂರ್ಣಿಮಾ

ಮಂಗಳೂರು, ನವೆಂಬರ್.21 : ಹಲವು ಕಾರಣಗಳಿಂದ ಭ್ರೂಣ ಲಿಂಗ ಹತ್ಯೆ ಇಂದು ಪ್ರಚಲಿತದಲ್ಲಿದ್ದು,ಇಂತಹ ಘಟನೆಗಳು ತಾಯಿಯ ಪ್ರಾಣಕ್ಕೂ ಕುತ್ತು ತರಬಲ್ಲದು ಎಂದು ಲೇಡಿಗೋಷನ್ ಆಸ್ಪತ್ರೆ ಹಿರಿಯ ಮಹಿಳಾ ವೈದ್ಯಾಧಿಕಾರಿ ಡಾ.ಪೂರ್ಣಿಮಾ ಇವರು ತಿಳಿಸಿದ್ದಾರೆ.
   ಅವರು ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗ ಳೂರು,ಜಿಲ್ಲಾ ಆಡ ಳಿತ,ದ.ಕ.ಜಿಲ್ಲಾ ಪಂಚಾ ಯತ್ ಇವರ ಸಹ ಯೋಗ ದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾ ಣಾಧಿ ಕಾರಿಗಳ ಕಚೇರಿ ಯಲ್ಲಿ ಹಮ್ಮಿ ಕೊಂಡಿದ್ದ ` ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ 1994 ''ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಹಿಳೆ ಮತ್ತು ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ  ಲಿಂಗ ತಾರತಮ್ಯದ ಪ್ರಭಾವ ಎಂಬ ವಿಷಯ ಕುರಿತು ಮಾತನಾಡಿದರು.
            ಭ್ರೂಣ ಹತ್ಯೆ ಕೊಲೆಗೆ ಸಮಾನವಾದ ಅಪರಾಧವಾಗಿದು,್ದ ಇದನ್ನು ಮಾಡುವವರಿಗೆ ,ಪ್ರಚೋದನೆ ನೀಡುವವರಿಗೆ ದಂಡ ಸಹಿತ ಸೆರೆವಾಸದ  ಶಿಕ್ಷೆ ನೀಡಲಾಗುವುದೆಂದರು. ಸಮಾಜದಲ್ಲಿ ಹೆಣ್ಣು ಗಂಡುಗಳ ಅನುಪಾತ ಸಮಾನವಾಗಿದ್ದರೆ ಮಾತ್ರ ಸಮಾಜದಲ್ಲಿ ಭದ್ರತೆ ಮೂಡಲು ಸಾಧ್ಯ.ಆದರೆ ಭ್ರೂಣ ಹತ್ಯೆಗಳಿಂದಾಗಿ ಇಂದು ಹೆಣ್ಣು ಗಂಡುಗಳ ಅನುಪಾತದಲ್ಲಿ ವ್ಯತ್ಯಾಸವಾಗಿ ಸಮಾಜದಲ್ಲಿ ಹೆಣ್ಣು ಶೋಷಣೆಗೊಳಗಾಗುತ್ತಿದ್ದಾಳೆ ಎಂಬುದಾಗಿ ತಿಳಿಸಿದರು. ತಂದೆ ತಾಯಿಯರು ತಮ್ಮ ಮಕ್ಕಳನ್ನು ಹೆಣ್ಣು-ಗಂಡು ಎಂಬ ತಾರತಮ್ಯವಿಲ್ಲದೆ ಬೆಳೆಸಬೇಕು.ಇದರಿಂದ ಸಮಾಜದಲ್ಲಿ ಇಬ್ಬರೂ ಗೌರವಯುತರಾಗಿ ಬದುಕಲು ಸಹಕಾರಿಯಾಗಲಿದೆಯೆಂದರು.
     ಶ್ರೀಮತಿ ವಿಜಯ, ವಕೀ ಲರು ಇವರು ಮಾತ ನಾಡಿ ಆಧುನಿಕ ತಂತ್ರ ಜ್ಞಾನ  ಸ್ಕ್ಯಾ ನಿಂಗ್ ಗರ್ಭ ದಲ್ಲಿ ರುವ ಮಗು ವಿನ ಆರೋಗ್ಯ ಪರೀ ಕ್ಷೆಗೆ ಮಾತ್ರ ಬಳಸ ಬೇಕೇ ಹೊರತು ಮಗು ವಿನ ಲಿಂಗದ ಬಗ್ಗೆ ತಾಯಿ ಗಾಗಲೀ ತಂದೆ ಗಾಗಲೀ ತಿಳಿಸು ವುದು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯಿದೆ 1994 ರಂತೆ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ತಿಳಿಸಿದರು.
ಎಲ್ಲಾ ಆರೋಗ್ಯ ಸಂಸ್ಥೆಗಳು ತಮ್ಮ ಸಂಸ್ಥೆಗಳಲ್ಲಿ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಶಿಕ್ಷಾರ್ಹ ಅಪರಾಧ ಎಂಬ ಬಗ್ಗೆ ಬಿತ್ತಿ ಪತ್ರಗಳನ್ನು ಬೋರ್ಡ್ ಗಳನ್ನು ತೂಗುಹಾಕುವುದು ಕಡ್ಡಾಯ ಎಂದು ತಿಳಿಸಿ, ಕೌನ್ಸಿಲಿಂಗ್ ಸೆಂಟರ್ಗಳು,ಆಸ್ಪತ್ರೆಗಳು,ಲ್ಯಾಬೋರೇಟರಿಗಳು ಸಕ್ಷಮ ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ನೋಂದಾಯಿಸಿರಬೇಕು. ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಹಚ್ಚುವ ವೈದ್ಯರು,ಸಿಬ್ಬಂದಿಗಳನ್ನು ವಿಚಾರಣೆ ಮಾಡದೆಯೇ ಸಕ್ಷಮ ಪ್ರಾಧಿಕಾರದ ಆದೇಶದಂತೆ ಬಂಧಿಸಬಹುದಾಗಿದೆ. ಆದ್ದರಿಂದ ವೈದ್ಯರು ಮಾನವೀಯತೆಯಿಂದ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಹಚ್ಚುವ ಹೇಯ ಕಾರ್ಯಕ್ಕೆ ಮುಂದಾಗಬಾರದೆಂದರು.
  ಮಂಗಳೂರಿನ ಪ್ರಜ್ಞಾ ಸಲಹಾ ಕೇಂದ್ರ ನಿರ್ದೇಶಕರಾದ ಪ್ರೊ.ಹಿಲ್ಡಾ ರಾಯಪ್ಪನ್ ಅವರು ಭ್ರೂಣ ಹತ್ಯೆ ತಡೆಗಟ್ಟುವಲ್ಲಿ ಸಂಘ ಸಂಸ್ಥೆ ಹಾಗೂ ಸಮುದಾಯದ ಪಾತ್ರ ಎಂಬ ಕುರಿತು ಮಾತನಾಡಿದರು.
       ಪ್ರಾಸ್ತಾವಿಕವಾಗಿ ಮಾತನಾಡಿದ ಆರ್ಸಿಹೆಚ್ ಅಧಿಕಾರಿ  ಡಾ.ರುಕ್ಮಿಣಿ ಅವರು ಉತ್ತಮ ಸಮಾಜಕ್ಕೆ ಗಂಡುಹೆಣ್ಣುಗಳ ಪ್ರಾಕೃತಿಕ ಅನುಪಾತ ಅಗತ್ಯ ಎಂದರು. ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ ರಾವ್ ಅವರು ಮಾತನಾಡಿ ಅಲ್ಟ್ರಾಸೌಂಡ್ ತಂತ್ರಜ್ಞಾನ ಇಂದು ಭ್ರೂಣಲಿಂಗ ಪತ್ತೆಯಂತಹ ಅಪರಾಧಗಳಿಗೆ ಬಳಕೆಯಾಗುತ್ತಿರುವುದು ಆತಂಕಕಾರಿಯಾಗಿದೆ ಎಂದರು.ಕಾರ್ಯಾಗಾರವನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆ,ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಸರೋಜ ಉದ್ಘಾಟಿಸಿದರು. ಆರೋಗ್ಯ ಶಿಕ್ಷಣಾಧಿಕಾರಿ ಪಾಪೇಗೌಡ ಸ್ವಾಗತಿಸಿದರು. ಶ್ರೀಮತಿ ಜ್ಯೋತಿ ವಂದಿಸಿದರು.


 

Tuesday, November 20, 2012

ಮಂಗಳೂರಿನಲ್ಲಿ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2012 ಸಮಾರೋಪ

ಮಂಗಳೂರು, ನವೆಂಬರ್.20: ಸಾರ್ವಜನಿಕ ಗ್ರಂಥಾಲಯ ಇಲಾಖೆ,ಜಿಲ್ಲಾ ಹಾಗೂ ನಗರ ಕೇಂದ್ರ ಗ್ರಂಥಾಲಯ ಮಂಗಳೂರು ಇವರ ಸಹಕಾರದೊಂದಿಗೆ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2012 ಸಮಾರೋಪ ಸಮಾರಂಭ ಹಾಗೂ ಸಿಬ್ಬಂದಿ ಸೇವಾ ಪುರಸ್ಕಾರ ಸಮಾರಂಭ  ಇಂದು ಮಂಗಳೂರಿನಲ್ಲಿ ನಡೆಯಿತು. ನಗರದ ಮಿಲಾ ಗ್ರಿಸ್ ಜುಬಿಲಿ  ಹಾಲ್ ನಲ್ಲಿ ಆಯೋ ಜಿಸಿದ್ದ ಸಪ್ತಾಹ ಸಮಾ ರೋಪ ಸಮಾ ರಂಭದ ಉದ್ಘಾ ಟನೆ ಯನ್ನು  ಸಂಸದ ನಳಿನ್ ಕುಮಾರ್ ಕಟೀಲ್ ಅವರು ನೆರ ವೇರಿ ಸಿದರು.ಸಾಹಿತಿ ಹಾಗೂ ರಾಜ್ಯ ಗ್ರಂಥಾ ಲಯ ಪ್ರಾಧಿ ಕಾರದ ಸದಸ್ಯ ರಾದ ಶೂದ್ರ ಶ್ರೀನಿ ವಾಸ್ ಅವರು ಆಶಯ ಭಾಷಣ ಮಾಡಿ ದರು. ಕೆ.ಟಿ. ಗಟ್ಟಿ ಅವರು ವಿಶೇಷ ಉಪ ನ್ಯಾಸ ನೀಡಿದರು. ಶಾಸಕ ರಾದ ಕೃಷ್ಣ ಜೆ ಪಾಲೆ ಮಾರ್ ಅವರು ಅಧ್ಯ ಕ್ಷತೆ ವಹಿಸಿ ದ್ದರು, ಜಿಲ್ಲಾ ಧಿಕಾರಿ ಡಾ. ಎನ್.ಎಸ್. ಚನ್ನಪ್ಪ ಗೌಡ, ಮೂಡದ ಅಧ್ಯಕ್ಷ ಎಸ್. ರಮೇಶ್ ,ಜಿಲ್ಲಾ ಪಂಚಾ ಯತ್ ಸಿಇಓ ಡಾ. ವಿಜಯ ಪ್ರಕಾಶ್,ಸಾರ್ವ ಜನಿಕ ಗ್ರಂಥಾ ಲಯ, ಬೆಂಗ ಳೂರು ಇದರ ನಿರ್ದೇ ಶಕ ರಾದ  ಎಂ.ಎಂ.ಬಡ್ನಿ ಮತ್ತಿತರ ಗಣ್ಯರು ಸಮಾ ರೋಪ ಸಮಾ ರಂಭದಲ್ಲಿ ಪಾಲ್ಗೊಂಡಿದ್ದರು.
 

ಉತ್ತಮ ಪರಿಸರಕ್ಕಾಗಿ ಪ್ಲಾಸ್ಟಿಕ್ ನಿಷೇಧ ಅನಿವಾರ್ಯ: ಡಾ. ಹರೀಶ್ ಕುಮಾರ್

ಮಂಗಳೂರು, ನವೆಂಬರ್. 20: ಬೇಕಾಬಿಟ್ಟಿ ಪ್ಲಾಸ್ಟಿಕ್ ಬಳಕೆಯಿಂದಾಗಿ ತ್ಯಾಜ್ಯ ವಿಲೇವಾರಿ ಸವಾಲಾಗಿ ಪರಿಣಮಿಸಿದ್ದು, ಪ್ಲಾಸ್ಟಿಕ್ ನಿಷೇಧ ಮಂಗಳೂರು ಮಹಾನಗರಪಾಲಿಕೆಗೆ ಅನಿವಾರ್ಯ ಎಂದು ಮಂಗಳೂರು ಮಹಾ ನಗರ ಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್ ಹೇಳಿದರು. 
ಅವರು ಇಂದು ವಾರ್ತಾ ಇಲಾಖೆ, ದ.ಕ.ಜಿಲ್ಲಾ ಡಳಿತ, ಮಹಾ ನಗರ ಪಾಲಿಕೆ ಹಾಗೂ ಸಂತ ಅಲೋ ಶಿಯಸ್ ಕಾಲೇಜು ಮಂಗ ಳೂರು ಇವರ ಸಂಯುಕ್ತಾ ಶ್ರಯ ದಲ್ಲಿ ಏರ್ಪ ಡಿಸಿದ 'ಪ್ಲಾಸ್ಟಿಕ್ ಮುಕ್ತ ನಗ ರಕ್ಕೆ ವಿದ್ಯಾರ್ಥಿ ಗಳ ಕೊಡುಗೆ' ಸಂವಾದ ಕಾರ್ಯ ಕ್ರಮ ದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.
ಪ್ಲಾಸ್ಟಿಕ್ ಚಿರಂಜೀವಿ; ಇದಕ್ಕೆ ನಾಶ ಎಂಬುದಿಲ್ಲ. ಮಣ್ಣಿನಲ್ಲಿ ಕರಗುವುದಿಲ್ಲ, ಉರಿಸಿದರೆ ಪರಿಸರಕ್ಕೆ ಮಾರಕ. ನಮಗೆ ಇದರಿಂದಾಗುವ ಉಪಕಾರ ಕ್ಷಣಿಕ ಆದರೆ ಬಾಧಕಗಳು ಅಧಿಕ ಎಂದ ಅವರು, ಮಹಾನಗರಪಾಲಿಕೆ ಮ್ಯಾನ್ ಹೋಲ್ ಗಳೆಲ್ಲ ಪ್ಲಾಸ್ಟಿಕ್ನಿಂದಾಗಿ ಸಮಸ್ಯೆ ಎದುರಿಸುತ್ತಿದೆ. ನಮ್ಮ ಡಂಪಿಂಗ್ ಯಾರ್ಡ್  ಪಚ್ಚನಾಡಿ ಇನ್ನೂ 20ರಿಂದ 30 ವರ್ಷ ಬಳಸಬಹುದಾದ್ದು ಪ್ಲಾಸ್ಟಿಕ್ ತ್ಯಾಜ್ಯದಿಂದಾಗಿ ಇನ್ನೂ 10 ವರ್ಷಗಳಲ್ಲಿ ತುಂಬಲಿದೆ. ಬೆಂಗಳೂರಿನಲ್ಲಿ ತ್ಯಾಜ್ಯ ವಿಲೇ ಬೃಹತ್ ಸಮಸ್ಯೆಯಾಗಲೂ ಪ್ಲಾಸ್ಟಿಕ್ ಕಾರಣ. ಇಂದು ನಮ್ಮ ಜೀವನದಲ್ಲಿ ಅನಿವಾರ್ಯ ಎನಿಸಿರುವ ಪ್ಲಾಸ್ಟಿಕ್ ಇಲ್ಲದೆಯೂ ನಾವು ಉತ್ತಮ ಬದುಕು ಬದುಕಿದ್ದೆವು ಎಂಬುದನ್ನು ಸ್ಮರಿಸಿದರೆ ಪ್ಲಾಸ್ಟಿಕ್ ಬಳಸದಿರಲು ಸಾಧ್ಯವಿದೆ. ನಮ್ಮ ನಂತರದವರಿಗೆ ಉತ್ತಮ ಪರಿಸರವನ್ನು ಬಿಟ್ಟು ಹೋದ ತೃಪ್ತಿ ನಮ್ಮದಾಗಲಿದೆ. ಹಾಗಾಗಿ ಪಾಲಿಕೆ ಕಟ್ಟು ನಿಟ್ಟಿನಲ್ಲಿ ಪ್ಲಾಸ್ಟಿಕ್ ನಿಷೇಧ ಅನುಷ್ಠಾನಕ್ಕೆ ತರಲಿದೆ ಎಂದು ಪಾಲಿಕೆ ಆಯುಕ್ತರು ಹೇಳಿದರು.
ಎಲ್ಲೆಂ ದರಲ್ಲಿ ಪ್ಲಾಸ್ಟಿಕ್ ನಲ್ಲಿ ಕಸ ತುಂಬಿ ಎಸೆ ಯುವು ದರಿಂದ ನಮ್ಮ ರಸ್ತೆ ಗಳು, ಜಲ ಮೂಲಗಳು ಹಾಳಾಗಿವೆ. ಪ್ರಾಣಿಗಳು, ಜಲ ಚರ ಗಳಿಗೆ ತೊಂದರೆ ಯಾಗಿದೆ ಎಂದ ಅವರು, ಪ್ಲಾಸ್ಟಿಕ್ ನ್ನು ಬಳಸಿ ಎಸೆಯುವುದರಿಂದಾಗುತ್ತಿರುವ ಅಪಾಯಗಳನ್ನು ಸವಿವರವಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು, ಜಿಲ್ಲಾಡಳಿತದ ನಿಲುವು ಜನಪರ ನಿಲುವು. ಜನರಿಂದ ನಿಷೇಧಕ್ಕೆ ಉತ್ತಮ ಬೆಂಬಲ ದೊರಕಿದ್ದು, ವಿದ್ಯಾರ್ಥಿಗಳ ಸಹಕಾರದಿಂದ ಸ್ವಚ್ಛ, ಹಸಿರು ಮಂಗಳೂರು ನಮ್ಮದಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು. ಜನರಲ್ಲಿ ಜಾಗೃತಿ ಮೂಡಿಸಲು ನಿಷೇಧ ಅನಿವಾರ್ಯವಾಗಿತ್ತು ಎಂದರು. ಸಾಕಷ್ಟು ತಿಂಗಳುಗಳ ಮುಂಚಿತವಾಗಿ ಈ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಜಿಲ್ಲಾಡಳಿತ ಕೈಗೊಂಡಿತ್ತು ಎಂದರು.
ಸಂವಾದ ಕಾರ್ಯಕ್ರಮವನ್ನು 'ಸ್ವಚ್ಛ ನಗರ' ಚಿತ್ರಗಳನ್ನು ಪರಿಸರದಿಂದಲೇ ತಯಾರಿಸಿದ ಬಣ್ಣಗಳನ್ನು ಬಳಸಿ ಬಿಡಿಸುವ ಮೂಲಕ ಪುತ್ತೂರಿನ ಬಾಲಭವನದ ಕಲಾಪ್ರತಿಭೆಗಳಾದ ಕು.ಸೌಜನ್ಯ ಬಲ್ನಾಡ್,ಸನತ್ ರಾಗಿ ಕುಮೇರಿ ಹಾಗೂ ಶರತ್ ಅವರು ಉದ್ಘಾಟಿಸಿದರು.
ಸಮಾ ರಂಭದ ಅಧ್ಯಕ್ಷತೆ ವಹಿಸಿದ್ದ ಸಂತ ಅಲೋಶಿಯಸ್ ಕಾಲೇಜು ಪ್ರಾಂಶು ಪಾಲ ರಾದ ರೆ.ಫಾ.ಸ್ವೀ ಬರ್ಟ್  ಡಿ.ಸಿಲ್ವಾ ಮಾತ ನಾಡುತ್ತಾ ನಾಳಿನ ಪೀಳಿಗೆ ಗಾಗಿ ನಾವು ಪರಿಸ ರವನ್ನು ರಕ್ಷಿಸ ಬೇಕು. ನಮ್ಮ ಭೂಮಿ ಯನ್ನು ನಾವು ಪ್ಲಾಸ್ಟಿಕ್ ನಿಂದ  ಕಾಪಾಡಬೇಕು. ಈ ಕಾರ್ಯಕ್ಕೆ ವಿದ್ಯಾರ್ಥಿಗಳ ಸಹಕಾರ ಅಗತ್ಯ ಎಂದ ಅವರು, ಸಂತ ಅಲೋಷಿಯಸ್ ಕಾಲೇಜು ಈ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡಲಿದೆ ಎಂದರು.
 ಸಮಾರಂಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು,ಉಪನ್ಯಾಸಕರು ಹಾಗೂ ರೇಡಿಯೋ ಸಾರಂಗ್ ನ ಸಂಪೂರ್ಣ ತಂಡ ಪಾಲ್ಗೊಂಡಿತ್ತು, ವಾರ್ತಾಧಿಕಾರಿ ರೋಹಿಣಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಮುದಾಯ ರೇಡಿಯೋದ ಅಭಿಷೇಕ್ ವಂದಿಸಿದರು.
 

ಉದ್ಯೋಗ ಭರವಸೆ ಯೋಜನೆಯಡಿ ದೂರು ಕಂಡು ಬಂದಲ್ಲಿ ಕಾನೂನು ಕ್ರಮ :ನಳಿನ್ ಕುಮಾರ್ ಕಟೀಲ್

ಮಂಗಳೂರು, ನವೆಂಬರ್. 20 : ಯಾವುದೇ ಗ್ರಾಮ ಪಂಚಾಯತ್ ನಲ್ಲಿ ರಾಷ್ಟ್ರೀಯ ಉದ್ಯೋಗ ಭರವಸೆ ಯೋಜನೆಯಡಿ ಹಣ ದುರುಪಯೋಗ ಪ್ರಕರಣಗಳು ಕಂಡು ಬಂದಲ್ಲಿ ಕೂಡಲೇ ಕಾನೂನು ಕ್ರಮ ಕೈಗೊಳ್ಳಲು  ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಅವರಿಗೆ ಸೂಚಿಸಿದ್ದಾರೆ.
          ಅವರು ಇಂದು ದ.ಕ.ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ನಡೆದ ಕೇಂದ್ರ ನೆರವಿನ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ ಬಗ್ಗೆ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪುತ್ತೂರು ತಾಲೂಕಿನ ಬಹುತೇಕ ಗ್ರಾಮ ಪಂಚಾಯತ್ ಗಳಲ್ಲಿ ರಾಷ್ಟ್ರೀಯ ಉದ್ಯೋಗ ಭರವಸೆ ಯೋಜನೆಯಡಿ ಅಭಿವೃದ್ಧಿ ಕಾಮಗಾರಿಗಳು ಕೈಗೊಳ್ಳಲು ತೊಡಕುಂಟಾಗಿದೆಯೆಂದು ಸಭೆಯಲ್ಲಿ ಅಧಿಕಾರಿಗಳು ಸಂಸದರ ಅವಗಾಹನೆಗೆ ತಂದಾಗ 24-12-12 ರಂದು ಪುತ್ತೂರು ತಾಲೂಕಿನ ಎಲ್ಲಾ ಗ್ರಾಮ ಪಂಚಾಯತ್ ಅಧ್ಯಕ್ಷರು,ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಸಭೆ ಏರ್ಪಡಿಸುವಂತೆ    ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.
           ಸರ್ವಶಿಕ್ಷಣ ಅಭಿಯಾನ ಯೋಜನೆಯಡಿ ಜಿಲ್ಲೆಯಲ್ಲಿ ಆಗಿರುವ ಲೋಪದೋಷಗಳನ್ನು ಸರಿಪಡಿಸಲು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆ ನಡೆಸುವಂತೆ ತಿಳಿಸಿದರು.
ನಕ್ಸಲ್ ಬಾಧಿತ ಬೆಳ್ತಂಗಡಿ ತಾಲೂಕಿನ 9 ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಸಕರ್ಾರ ರೂ.5 ಕೋಟಿ ಅನುದಾನ ನೀಡಿದ್ದು, ಈಗಾಗಲೇ ರೂ.2.26 ಕೋಟಿಗಳನ್ನು ವೆಚ್ಚ ಮಾಡಿ ಆರೋಗ್ಯ ಕೇಂದ್ರ, ಅಂಗನವಾಡಿ ಕೇಂದ್ರಗಳನ್ನು ತೆರೆಯಲಾಗಿದೆ ಹಾಗೂ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಶಿಕ್ಷಕರನ್ನು ನೇಮಕ ಮಾಡಲಾಗಿದೆಯೆಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಸಭೆಗೆ ತಿಳಿಸಿದರು.
ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕೆಲವು ಸರ್ಕಾರಿ ಶಾಲೆಗಳಿಗೆ ಆರ್ ಟಿಸಿ ಇಲ್ಲದಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು, ಅಂತಹ ಶಾಲೆಗಳು ತಮ್ಮ ಇಲಾಖೆ ಮೂಲಕ ಆರ್ ಟಿ ಸಿಗೆ ಮನವಿ ಸಲ್ಲಿಸಿದಲ್ಲಿ ಆರ್ ಟಿಸಿಯನ್ನು ನೀಡಲು ಕ್ರಮ ವಹಿಸುವುದಾಗಿ ಅಪರ ಜಿಲ್ಲಾಧಿಕಾರಿ ದಯಾನಂದ್ ಅವರು ಸಭೆಯಲ್ಲಿ ತಿಳಿಸಿದರು. ಜಿಲ್ಲೆಯಲ್ಲಿರುವ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಆದ್ಯತೆ ಮೇಲೆ 2013 ರ ಮಾರ್ಚ್ ಅಂತ್ಯದೊಳಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಸಂಸದರು ಮೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೊರಗಪ್ಪ ನಾಯ್ಕ ,ಉಪಾಧ್ಯಕ್ಷರಾದ ರಿತೇಶ್ ಶೆಟ್ಟಿ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ  ಸದಸ್ಯರು ಮುಂತಾದವರು ಭಾಗವಹಿಸಿದ್ದರು.

Monday, November 19, 2012

ವಿಕೇಂದ್ರಿಕೃತ ವ್ಯವಸ್ಥೆಯಿಂದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ: ಸಿಇಒ


ಮಂಗಳೂರು, ನವೆಂಬರ್. 19 :-  ಸಬಲ ವಿಕೇಂದ್ರಿಕೃತ ವ್ಯವಸ್ಥೆಯಲ್ಲಿ ಆಡಳಿತಗಾರರು ಅಭಿವೃದ್ಧಿ, ಸೇವೆ, ಸಬಲೀಕರಣವೆಂಬ ಧ್ಯೇಯವನ್ನು ಪಾಲಿಸುವುದರಿಂದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ದೊರಕಿಸಿಕೊಡಲು ಸಾಧ್ಯ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಹೇಳಿದರು.
ಅವರಿಂದು ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಮೈಸೂರಿನ ಅಬ್ದುಲ್ ನಜೀರ್ ಸಾಬ್  ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸಹಯೋಗದೊಂದಿಗೆ ಆಯೋಜಿಸಲಾದ ರಾಜೀವ್ಗಾಂಧಿ ಪಂಚಾಯತ್ ಸಶಕ್ತೀಕರಣ ಅಭಿಯಾನದಡಿ ಪಂಚಾಯತ್ ರಾಜ್ ಸಂಸ್ಥೆಗಳ ವ್ಯಾಪ್ತಿಗೆ ಬರುವ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳ ತರಬೇತಿ ಅವಶ್ಯಕತೆಗಳ ವಿನ್ಯಾಸ ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.
ಗ್ರಾಮಸಭೆಗಳು ಸಮಗ್ರವಾಗಿ ಹಾಗೂ ಪಾರದರ್ಶಕವಾಗಿ ನಡೆಯುವುದರಿಂದ ನಮ್ಮ ಇಡೀ ವ್ಯವಸ್ಥೆಯಲ್ಲಿ ಉತ್ತಮ ಸಕಾರಾತ್ಮಕ ಬದಲಾವಣೆ ಸಾಧ್ಯ. ದಕ್ಷಿಣ ಕನ್ನಡ ಈ ನಿಟ್ಟಿನಲ್ಲಿ ಉತ್ತಮ ಹೆಜ್ಜೆಯನ್ನಿಟ್ಟಿದ್ದು ಹಲವು ಪ್ರಶಸ್ತಿಗಳನ್ನು ತನ್ನದಾಗಿಸಿಕೊಂಡಿದೆ. ನಮ್ಮ ಎಲ್ಲಾ ಇಲಾಖೆಗಳು ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಕಾರ್ಯೋನ್ಮುಖವಾಗಿದೆ.
ಜಿಲ್ಲೆಯ 116 ಪಂಚಾಯತ್ ನೂತನ ಕಟ್ಟಡಗಳನ್ನು ನಿರ್ಮಿಸಲು ತಲಾ 12 ಲಕ್ಷದಂತೆ, 87 ಗ್ರಾಮಪಂಚಾಯತ್ ಕಟ್ಟಡಗಳ ದುರಸ್ತಿಗೆ ತಲಾ 3 ಲಕ್ಷದಂತೆ, ಒಟ್ಟು 21.73 ಕೋಟಿ ರೂ.ಗಳ ಪ್ರಸ್ತಾವನೆ ಕಳುಹಿಸಲಾಗಿದೆ. ಇದರಲ್ಲಿ ಜಿಲ್ಲೆಗೊಂದು ಜಿಲ್ಲಾ ಮಟ್ಟದ ಸಂಪನ್ಮೂಲ ಕೇಂದ್ರ, ತಾಲೂಕಿಗೊಂದರಂತೆ 5 ತಾಲೂಕು ಮಟ್ಟದ ಸಂಪನ್ಮೂಲ ಕೇಂದ್ರ, ಗ್ರಾಮಪಂಚಾಯತ್ ಗೆ ಒಬ್ಬರಂತೆ ಫೆಸಿಲಿಟೇಟರ್ ನೇಮಕ, ಯೋಜನಾ ಮತ್ತು ಉಸ್ತುವಾರಿಗೆ ವ್ಯವಸ್ಥೆ ಸೇರಿದಂತೆ ಸಮಗ್ರ ಪ್ರಸ್ತಾವನೆ ಸಲ್ಲಿಸಲಾಗಿದೆ.  ನಮ್ಮಲ್ಲಿ ಸಾಧನೆಗಳನ್ನು ನೋಡಿ ಅನುದಾನ ಬಿಡುಗಡೆ ಮಾಡಲಾಗುತ್ತದೆ. ಹಲವು ವಿನೂತನ ಮಾದರಿಗಳನ್ನು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನೀಡಿದೆ. ಅಕ್ಷರದಾಸೋಹ ಯೋಜನೆಯಡಿ ಅಡುಗೆ ಕೋಣೆಯಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಸ್ವಚ್ಛ ಹಾಗೂ ಸುಂದರವಾಗಿ ಕಾಣಲು ಸಮವಸ್ತ್ರ, ತಲೆಗೆ ಹಾಗೂ ಕೈಗಳಿಗೆ ಗ್ಲೌಸ್ಗಳನ್ನು ಒದಗಿಸಲಾಗುವುದು. 231 ಅಂಗನವಾಡಿಗಳಿಗೆ ವಿದ್ಯುದೀಕರಣ ಸಂಪೂರ್ಣಗೊಳ್ಳಲಿದೆ. ಅಗ್ರಿ ವಿಷನ್ 2020 ಸಿದ್ಧವಾಗಿದ್ದು ಶೀಘ್ರವೇ ಸಕರ್ಾರಕ್ಕೆ ಕಳುಹಿಸಲಾಗುವುದು. ಮಹಾತ್ಮಗಾಂಧೀ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಗುಣಮಟ್ಟದ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ ಎಂದು ಸಿಇಒ ಹೇಳಿದರು. ವೇದಿಕೆಯಲ್ಲಿ ಪುತ್ತೂರಿನ ಮುಂಡೂರು ಪಂಚಾಯತ್ ಸದಸ್ಯರಾದ  ವಸಂತ, ಮೈಸೂರಿನಿಂದ ಸಂಪನ್ಮೂಲ ವ್ಯಕ್ತಿಗಳಾದ ವಿಲ್ಫ್ರೆಡ್ ಡಿ ಸೋಜಾ, ಮನೋಜ್ ಕುಮಾರ್, ಶ್ರೀಮತಿ ಮನೋರಮಾ ಭಟ್, ಜನಶಿಕ್ಷಣ ಸಂಸ್ಥೆಯ ಕೃಷ್ಣ ಮೂಲ್ಯ ಉಪಸ್ಥಿತರಿದ್ದರು. ಉಪಕಾರ್ಯದರ್ಶಿ ಶಿವರಾಮೇಗೌಡರು ಸ್ವಾಗತಿಸಿದರು.
ಕಾರ್ಯಾಗಾರದಲ್ಲಿ ಗುಂಪು ಚಟುವಟಿಕೆ ಮತ್ತು ಸಾಮಥ್ರ್ಯ ಅಭಿವೃದ್ಧಿ ತರಬೇತಿ ಕಾರ್ಯಕ್ರಮಕ್ಕೆ ಪೂರಕವಾಗಿ ತರಬೇತಿ ಅವಶ್ಯಕತೆಗಳ ವಿನ್ಯಾಸ, ಗುರಿ ಮತ್ತು ಉದ್ದೇಶ, ವಿಷಯ ಮತ್ತು ಅವಧಿ, ಮೇಲ್ವಿಚಾರಣೆ ಕುರಿತು ಚರ್ಚೆಗಳು ನಡೆದವು. ಉತ್ತಮ ಗ್ರಾಮಪಂಚಾಯತ್ ಮಾದರಿಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳು ಮಾಹಿತಿ ನೀಡಿದರು.
 

ಮಹಿಳೆ ಮತ್ತು ಮಕ್ಕಳ ಅನೈತಿಕ ಸಾಗಾಟ ತಡೆ ಸಮಾಜದ ಜವಾಬ್ದಾರಿ:ಯೋಗೀಶ್ ಭಟ್

ಮಂಗಳೂರು, ನವೆಂಬರ್.19: ಇಂದು ಸಮಾಜದಲ್ಲಿ ಮಹಿಳೆ ಮತ್ತು ಮಕ್ಕಳನ್ನು ಅನೈತಿಕವಾಗಿ ಸಾಗಾಟ ಮಾಡುತ್ತಿರುವ ಪಿಡುಗು ಇಡೀ ಸಮಾಜವೇ ತಲೆ ತಗ್ಗಿಸುವಂತಹ ಹೀನಾಯ ಸ್ಥಿತಿಗೆ ಬಂದಿದ್ದು,ಇದನ್ನು ಕೇವಲ ಸರ್ಕಾರಗಳು ಮಾತ್ರ ತಡೆಯಲು ಸಾಧ್ಯವಿಲ್ಲ.ಬದಲಾಗಿ ಇದೊಂದು ಸಾಮಾಜಿಕ ಜವಾಬ್ದಾರಿಯಾಗಬೇಕೆಂದು ವಿಧಾನ ಸಭಾ ಉಪಸಭಾಧ್ಯಕ್ಷರಾದ ಎನ್.ಯೋಗೀಶ್ ಭಟ್ ಅವರು ಹೇಳಿದರು.
 ಇಂದು ನಗರದ ಪುರ ಭವನ ದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಡಳಿತ,ಜಿಲ್ಲಾ ಪಂಚಾ ಯತ್ ಹಾಗೂ ಮಹಿಳೆ ಯರ ಮತ್ತು ಮಕ್ಕಳ ಅಭಿ ವೃದ್ಧಿ ಇಲಾಖೆ,ಮಂಗ ಳೂರು ಇವರ ಜಂಟಿ ಆಶ್ರಯ ದಲ್ಲಿ  ಆಯೋ ಜಿಸಿದ್ದ ` ಮಹಿಳೆ ಯರ ಮತ್ತು ಮಕ್ಕಳ ಅನೈ ತಿಕ ಸಾಗಾ ಣಿಕೆ ವಿರುದ್ಧ ಬೃಹತ್ ಆಂದೋ ಲನ ' ಉದ್ಘಾಟಿಸಿ  ಅವರು ಮಾತನಾಡಿದರು.ಮಾದಕ ವಸ್ತುಗಳ ಕಳ್ಳ ಸಾಗಾಣಿಕೆಯಷ್ಟೇ ಮಹಿಳೆಯರ ಹಾಗೂ ಮಕ್ಕಳ ಕಳ್ಳ ಸಾಗಾಣಿಕೆಯಾಗುತ್ತಿರುವುದು ಅತ್ಯಂತ ಅಪಾಯಕಾರಿಯಾಗಿದ್ದು,ಇದಕ್ಕೆ ಬಡತನ ಹಾಗೂ ನಿರುದ್ಯೋಗ ಸಮಸ್ಯೆಯೊಂದೇ ಕಾರಣವಲ್ಲ. ಬದಲಾಗಿ ಲೈಂಗಿಕತೆಯು ಕಾರಣವಾಗಿದೆಯೆಂದು ಅಭಿಪ್ರಾಯಪಟ್ಟರು.
              ಸಮಾ ರಂಭ ದಲ್ಲಿ ಮುಖ್ಯ ಅತಿಥಿ ಗಳಾಗಿ ಆಗ ಮಿಸಿದ್ದ ಶಾಸಕ ರಾದ ಯು.ಟಿ.ಖಾದರ್ ಅವರು ಮಾತ ನಾಡಿ ಅಪ ಹರಣಕ್ಕೆ ಒಳ ಗಾದ ಮಹಿಳೆ ಯರನ್ನು, ಮಕ್ಕ ಳನ್ನು ರಕ್ಷಿಸಿ,ಅವರಿಗೆ ಪುನರ್ ವಸತಿ ಕಲ್ಪಿ ಸುವ ಕಾರ್ಯ ಆಗ ಬೇಕಿದೆ ಎಂದರು. ದಕ್ಷಿಣ ಕನ್ನಡ ಜಿಲ್ಲಾ ಬಾಲ ನ್ಯಾಯ ಮಂಡಳಿ ಸದಸ್ಯರಾದ ಶ್ರೀಮತಿ ರಮೀಳಾ ಶೇಖರ್ ಅವರು ಮಾತನಾಡಿ ಮಹಿಳೆ ಮತ್ತು ಮಕ್ಕಳ ಅಪಹರಣ/ಸಾಗಾಟ ತಡೆಗೆ ಅವರಿಗೆ ಉತ್ತಮ ಶಿಕ್ಷಣ ನೀಡಬೇಕು. ಅಮಿಷಗಳಿಗೆ ಒಳಗಾಗದಂತೆ ಅವರಲ್ಲಿ ಜಾಗೃತಿ ಮೂಡಿಸಬೇಕೆಂದರು.
       ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ್ಯೆ ಶ್ರೀಮತಿ ಆಶಾ ನಾಯಕ್,ಮೇಯರ್ ಶ್ರೀಮತಿ ಗುಲ್ಜಾರ್ ಭಾನು, ರಾಜ್ಯ ಸಂಪನ್ಮೂಲ ವ್ಯಕ್ತಿ  ಪ್ರೇಮಾನಂದ ಕಲ್ಮಾಡಿ, ಜಿಲ್ಲಾ ಮಟ್ಟದ ಮಹಿಳೆಯರ ಮತ್ತು ಮಕ್ಕಳ ಸಾಗಾಟ ನಿಷೇಧ ಸಮಿತಿ ಉಪಾಧ್ಯಕ್ಷ್ಯೆ ಶ್ರೀಮತಿ ಧನಲಕ್ಷ್ಮಿ ಜನಾರ್ಧನ್ ಮುಂತಾದವರು ಮಾತನಾಡಿದರು. ಜಿಲ್ಲಾ ಪಂಚಾಯತ್ ಯೋಜನಾಧಿಕಾರಿ ನಝೀರ್, ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಶೆಟ್ಟಿ, ರೆನ್ನಿ ಡಿ `ಸೋಜಾ, ಉಪಸ್ಥಿತರಿದ್ದರು. ಶಕುಂತಳಾ ಉಪನಿರ್ದೇಶಕರು,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಇವರು ಸ್ವಾಗತಿಸಿದರು. ಇದಕ್ಕೂ ಮುನ್ನ ನಗರದ ಜ್ಯೋತಿ ಸರ್ಕಲ್ ನಿಂದ ಏರ್ಪಡಿಸಿದ್ದ  ಜಾಗೃತಿ ಜಾಥಾವನ್ನು ಯೋಗೀಶ್ ಭಟ್  ಅವರು ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಹಾಜರಿದ್ದರು.

 

Friday, November 16, 2012

ಹೈನುಗಾರಿಕೆ ಲಾಭದಾಯಕವಾಗಿಸಲು ಹಸಿರು ಮೇವು ಉತ್ಪಾದನೆಗೆ ಆದ್ಯತೆ ನೀಡಿ

ಮಂಗಳೂರು,ನವೆಂಬರ್.16: ರಾಜ್ಯದ 13 ಒಕ್ಕೂಟಗಳಲ್ಲಿ ಒಂದಾಗಿರುವ ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದಿಂದ ದಿನಕ್ಕೆ 2.35 ಸಾವಿರ ಲೀಟರ್ .ಹಾಲು ಉತ್ಪಾದನೆಯಾಗುತ್ತಿದ್ದು,ಕಳೆದ ವರ್ಷಕ್ಕಿಂತ ಶೇ.15ರಷ್ಟು ಪ್ರಗತಿ ಸಾಧಿಸಲಾಗಿದೆ. ಪ್ರತಿನಿತ್ಯ 3 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದ್ದು ಶೇ.4ರಷ್ಟು ಪ್ರಗತಿಯಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟ ಅಧ್ಯಕ್ಷ ರವಿರಾಜ್ ಹೆಗ್ಡೆ ಹೇಳಿದರು.
  ಕರ್ನಾ ಟಕ ರಾಜ್ಯ ಸಹ ಕಾರ ಮಹಾ ಮಂಡಳಿ, ದ.ಕ.ಜಿಲ್ಲಾ ಸಹ ಕಾರಿ ಯೂನಿ ಯನ್, ದ.ಕ.ಸಹ ಕಾರಿ ಹಾಲು ಉತ್ಪಾ ದಕರ ಒಕ್ಕೂ ಟದ ವತಿ ಯಿಂದ  ಅಖಿಲ ಭಾರತ 59ನೇ ಸಹ ಕಾರಿ ಸಪ್ತಾ ಹದ ಅಂಗ ವಾಗಿ ನಗರದ ಕುಲ ಶೇಕ ರದ ಲ್ಲಿನ  ಕೆಎಂಎಫ್ ಡೇರಿ ಸಭಾಂ ಗಣದಲ್ಲಿ ಇಂದು ನಡೆದ `ಸಹಕಾರ ಸಂಸ್ಥೆಗಳಲ್ಲಿ ಮೌಲ್ಯವರ್ಧನೆಯನ್ನು ಬಲಪಡಿಸುವ ಮತ್ತು ಪ್ರೋತ್ಸಾಹಿಸುವ' ನಿಟ್ಟಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದ  ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.  
ದಕ್ಷಿಣ ಕನ್ನಡ ಹಾಲು ಉತ್ಪಾದಿಸುವ ರೈತರಿಗೆ ಹೆಚ್ಚಿನ ಲಾಭ ಸಿಗುತ್ತಿಲ್ಲ. ಹಾಲಿನ ದರಕ್ಕಿಂತ ಪಶು ಆಹಾರದ ದರವೇ ಹೆಚ್ಚಾಗುತ್ತಿರುವುದು ರೈತರಿಗೆ ಸಮಸ್ಯೆಯಾಗಿದೆ. ಆದ್ದರಿಂದ  ರೈತರು ಹಸಿರು ಮೇವು ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದರು.
ಸಮಾ ರಂಭ ವನ್ನು ಉದ್ಘಾಟಿಸಿ ಮಾತ ನಾಡಿದ ಎಂದು ನಿಟ್ಟೆ ವಿಶ್ವ ವಿದ್ಯಾ ನಿಲ ಯದ ಪ್ರೋ ಚಾನ್ಸೆ ಲರ್ ಡಾ.ಎಂ.ಶಾಂತ ರಾಮ ಶೆಟ್ಟಿ ಅವರು, ಯಾವುದೇ ಕ್ಷೇತ್ರ ಹೊಸತನಕ್ಕೆ ತೆರೆದುಕೊಂಡಾಗ ಮಾತ್ರ ಪ್ರಗತಿ ಕಾಣಲು ಸಾಧ್ಯ. ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಬದಲಾವಣೆಯೊಂದಿಗೆ ಸಾಕಷ್ಟು ಬೆಳವಣಿಗೆಯನ್ನು ಕಂಡಿದ್ದು, ವಿವಿಧ ಸಹಕಾರ ರಂಗಗಳಿಗೆ ಸ್ಪೂರ್ತಿಯಾಗಿದೆ ಎಂದು ಹೇಳಿದರು.
       ಮೇಯರ್ ಗುಲ್ಜಾರ್ ಭಾನು ಪ್ಯಾಶ್ಚರೀಕರಣ ಯಂತ್ರ ವನ್ನು ಉದ್ಘಾ ಟಿಸಿ ದರು. ತುಳು ರಂಗ ಭೂಮಿ ಕಲಾ ವಿದ ದೇವ ದಾಸ್ ಕಾಪಿ ಕಾಡ್ `ಕ್ಷೀರಾಂಜಲಿ' ಎಂಬ ಸಾಕ್ಷ್ಯ ಚಿತ್ರ ಬಿಡುಗಡೆಗೊಳಿಸಿದರು.  ಬೆಣ್ಣೆ ಐಸ್ಕ್ರೀಂ ಇತ್ಯಾದಿಗಳನ್ನು ಶೈತೀಕರಿಸಿಡುವ 10000 ಲೀ.ಸಾಮಥ್ರ್ಯದ `ವಾಕ್ ಇನ್-ಡಿಫ್ರೀಸರ್ ಗೆ ಚಾಲನೆ ನೀಡಲಾಯಿತು. ಇದೇ ಸಂದರ್ಭಅತಿಥಿಗಳು ಮ್ಯಾಂಗೋ ಲಸ್ಸಿಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದರು. ಹಾಲು ಶೇಖರಣಾ ಸೈಲೋವನ್ನು ಎಸ್ಸಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ಎಂ.ಎನ್.ರಾಜೇಂದ್ರ ಕುಮಾರ್ ಉದ್ಘಾಟಿಸಿದರು.
ಆಹಾರ ಸುರಕ್ಷತೆಗೆ ಸಂಬಂಧಿಸಿ ಕೆಎಂಎಫ್ಗೆ ದೊರೆತ ಐಎಸ್ಒ ಪ್ರಮಾಣಪತ್ರವನ್ನು ಡಿಎನ್ವಿ ಸಂಸ್ಥೆಯ ವಲಯ ಮುಖ್ಯಸ್ಥ ಪುರುಷೋತ್ತಮ ಭಟ್ ಹಾಗೂ ಚಿತ್ರಾ ಕೆಎಂಎಫ್ ಅಧ್ಯಕ್ಷರಿಗೆ ಹಸ್ತಾಂತರಿಸಿದರು.
ಜಿಲ್ಲಾ ಸಹ ಕಾರಿ ಯೂನಿ ಯನ್ನ ಅಧ್ಯಕ್ಷ ಪಿ.ಬಿ.ದಿವಾ ಕರ ರೈ, ಪಾಲಿಕೆ ಸದಸ್ಯ ಭಾಸ್ಕರ್ ಕೆ., ಸಹ ಕಾರಿ ಸಂಘ ಗಳ ಉಪ ನಿಬಂ ಧಕ ಬಿ.ಕೆ.ಸಲೀಂ, ಕೆಎಂಎಫ್ ನಿರ್ದೇಶ ಕರಾದ ಡಾ.ಕೆ.ಎಂ.ಕೃಷ್ಣ ಭಟ್, ಕೆ.ಪಿ.ಸುಚ ರಿತ ಶೆಟ್ಟಿ, ಮೋನಪ್ಪ ಶೆಟ್ಟಿ ಎಕ್ಕಾರು, ವೀಣಾ ಆರ್.ರೈ, ಎಂ.ರಾಮ ಭಟ್, ನಾಮ ನಿರ್ದೇಶಿತ ನಿರ್ದೇಶಕ ಎಚ್.ಮುಕುಂದ ನಾಯಕ್, ಪದನಿಮಿತ್ತ ಕಾರ್ಯದರ್ಶಿ ಡಾ.ಬಿ.ವಿ.ಸತ್ಯನಾರಾಯಣ ಮತ್ತಿತರರು ಉಪಸ್ಥಿತರಿದ್ದರು.
ಕೆಎಂಎಫ್ ಮಾಜಿ ಅಧ್ಯಕ್ಷ ಕೆ.ಸೀತಾರಾಮ ರೈ ಸ್ವಾಗತಿಸಿದರು. ನಿರ್ದೇಶಕ ಕಾಪು ದಿವಾಕರ ಶೆಟ್ಟಿ ವಂದಿಸಿದರು. ಡಿ.ಎಸ್.ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.

ಡಿಸೆಂಬರ್ 1ರಂದು ಕನಕ ಜಯಂತಿ

ಮಂಗಳೂರು, ನವೆಂಬರ್.16 : ಡಿಸೆಂಬರ್ ಒಂದರಂದು ಕನಕ ಜಯಂತಿಯನ್ನು ಸಂಭ್ರಮದಿಂದ ಆಚರಿಸಲು ಜಿಲ್ಲಾಡಳಿತ ಮತ್ತು ಸಂಘಟನೆ ಸೇರಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಯನ್ನು ನವೆಂಬರ್ 15ರಂದು ನಡೆಸಲಾಯಿತು.
ಕಳೆದ ಬಾರಿಯಂತೆ ಆಕರ್ಷಕವಾಗಿ ಹಾಗೂ ಅರ್ಥಪೂರ್ಣವಾಗಿ ಕಾರ್ಯಕ್ರಮ ನಡೆಸಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೇತೃತ್ವದಲ್ಲಿ ಕಾರ್ಯಕ್ರಮ ರೂಪಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಮೆರವಣಿಗೆ ನಡೆಸಲು, ಕಲಾತಂಡ, ಉಪನ್ಯಾಸ ನೀಡಲು  ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ರೂಪಿಸಲು ಸಭೆಯಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀಮತಿ ಮಂಗಳಾ ನಾಯಕ್, ಅಪರ ಜಿಲ್ಲಾಧಿಕಾರಿ ದಯಾನಂದ ಕೆ. ಎ, ಮಹಾ ನಗರ ಪಾಲಿಕೆ ಕಂದಾಯ ಅಧಿಕಾರಿ ಮೇಘನಾ, ತಹಸೀಲ್ದಾರ್ ರವಿಚಂದ್ರ ನಾಯಕ್ ಮತ್ತು ಸಂಘಟನೆಯ ಪ್ರಮುಖರು ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡರು.
  
 

Thursday, November 15, 2012

ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಸಂರಕ್ಷಿಸಿ: ನಾಗರೀಕರಲ್ಲಿ ಜಿಲ್ಲಾಧಿಕಾರಿ ಮನವಿ

ಮಂಗಳೂರು,ನವೆಂಬರ್.15: ಸಮಷ್ಠಿ ಹಿತವನ್ನು ದೃಷ್ಟಿಯಲ್ಲಿರಿಸಿ ಪ್ಲಾಸ್ಟಿಕ್ ಬಳಕೆಯನ್ನು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸಮಗ್ರ ನಿಷೇಧ ಹಾಗೂ ಜಿಲ್ಲೆಯಲ್ಲೂ ಪ್ಲಾಸ್ಟಿಕ್ ನಿಷೇಧ ಜಾರಿಗೆ ತರಲು ಜಿಲ್ಲಾಡಳಿತ ನಿರ್ಧರಿಸಿದೆ.
ಡಿಸೆಂಬರ್ ಒಂದರಿಂದ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಸಮಗ್ರ ಕಸ ವಿಲೇವಾರಿಗೆ ಕ್ರಮ ಕೈ ಗೊಳ್ಳಲಾಗುವುದು. ಆ ಪ್ರಯುಕ್ತ ಜಿಲ್ಲೆಯ ಎಂಟು ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಕಾರ್ಯಾಚರಣೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ಅವರು ಇಂತು ತಮ್ಮ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯ 203 ಗ್ರಾಮ ಪಂಚಾ ಯತ್ ಗಳ ಪೈಕಿ 31 ಗ್ರಾಮ ಪಂಚಾ ಯತ್ ಗಳಲ್ಲಿ ಈಗಾ ಗಲೇ ಕಸ ವಿಲೇ ವಾರಿಗೆ ಕ್ರಮ ಕೈ ಗೊಳ್ಳ ಲಾಗಿದೆ.ಮಂಗ ಳೂರು ಮಹಾ ನಗರ ಪಾಲಿಕೆಯ ವ್ಯಾಪ್ತಿಯ ಎಲ್ಲಾ ವಾರ್ಡು ಗಳಲ್ಲಿ ಮನೆ ಮನೆ ಗಳಿಂದ ಕಸ ವಿಲೇ ವಾರಿ ನಡೆ ಯಲಿದೆ. ಅದೇ ರೀತಿ ಜಿಲ್ಲೆಯ   ಇತರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಡಿಸೆಂಬರ್ ತಿಂಗಳ ಅಂತ್ಯದೊಳಗೆ ಶೇ100ಕಸ ವಿಲೇವಾರಿಗೆ ಕ್ರಮ ಕೈ ಗೊಳ್ಳಲಾಗುವುದು. ಈ ಬಗ್ಗೆ ಲೋಕ್ ಅದಾಲತ್ ಗೆ ವರದಿ ಸಲ್ಲಿಸಲಾಗಿದೆ  ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಪ್ಲಾಸ್ಟಿಕ್ ನಿಷೇಧಕ್ಕೆ ಪೂರಕವಾಗಿ ಜನಜಾಗೃತಿಯನ್ನು ಮೂಡಿಸಲಾಗಿದ್ದು, ಇನ್ನು ಮುಂದೆ ದಂಡ ವಿಧಿಸುವ ಮೂಲಕವೂ ಜಾಗೃತಿ ಮೂಡಿಸಲಾಗುವುದು ಎಂದ ಜಿಲ್ಲಾಧಿಕಾರಿಗಳು, ಮಹಾನಗರಪಾಲಿಕೆಯ ಕಾಯಿದೆ ವ್ಯಾಪ್ತಿಯಲ್ಲಿ ನಿಷೇಧ ಜಾರಿಗೆ ತರಲಾಗಿದ್ದು, ಜಿಲ್ಲಾಡಳಿತ ಸಂಪೂರ್ಣ ಬೆಂಬಲ ನೀಡಲಿದೆ ಎಂದರು.
ಡಿ.1ರಿಂದ ಮನಪಾ ವ್ಯಾಪ್ತಿಯಲ್ಲಿ ಎಲ್ಲಾ ತರಹದ ಪ್ಲಾಸ್ಟಿಕ್ ಬ್ಯಾಗ್ ನಿಷೇಧ - ಡಿಸೆಂಬರ್ 1ರಿಂದ ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಎಲ್ಲಾ ತರಹದ ಪ್ಲಾಸ್ಟಿಕ್ ಬ್ಯಾಗ್ ಗಳನ್ನು  ನಿಷೇಧಿಸಲಾಗುವುದು. ಮಂಗಳೂರು ಮನಪಾ ವ್ಯಾಪ್ತಿಯಲ್ಲಿ 40 ಮೈಕ್ರಾನಿಗಿಂತ ಕಡಿಮೆ ಇರುವ ಪ್ಲಾಸ್ಟಿಕ್ ಸಾಮಾಗ್ರಿಗಳನ್ನು ಈಗಾಗಲೆ ನಿಷೇಧಿಸಲಾಗಿದೆ. ಪ್ರಸಕ್ತ ನಗರದಲ್ಲಿ ಸಂಗ್ರಹವಾಗುತ್ತಿರುವ ತ್ಯಾಜ್ಯದಲ್ಲಿ ಶೇ 60ರಿಂದ 70 ಪ್ಲಾಸ್ಟಿಕ್ ತ್ಯಾಜ್ಯವಿದ್ದು, ಮನಬಂದಂತೆ ಪ್ಲಾಸ್ಟಿಕ್ ನ್ನು ಎಲ್ಲೆಂದರಲ್ಲಿ ಎಸೆಯುವುದರಿಂದ ಮನಪಾ ವ್ಯಾಪ್ತಿಯ ಚರಂಡಿಗಳಲ್ಲಿ, ಮ್ಯಾನ್ ಹೋಲ್ ಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸೃಷ್ಟಿಸುತ್ತಿರುವ ಸಮಸ್ಯೆ ವಿಪರೀತ. ಮಹಾನಗರಪಾಲಿಕೆ ಕಾಯಿದೆ 223,256,431ರ ಪ್ರಕಾರ ಮನಪಾ ವ್ಯಾಪ್ತಿಯಲ್ಲಿ ಯಾವ ಸಾಮಗ್ರಿಯನ್ನು ಎಲ್ಲಿ ಹಾಕಬೇಕು, ಯಾವುದನ್ನು ನಿಷೇಧಿಸಬೇಕು ಎಂದು ಸೂಚಿಸುತ್ತದೆ. ಅದಕ್ಕಾಗಿ ಪ್ರತ್ಯೇಕ ಅಧಿ ಸೂಚನೆ ಹೊರಡಿ ಸಲಾಗು ವುದಿಲ್ಲ. ಕಾಯಿದೆ ಯಲ್ಲಿ ಅವ ಕಾಶ ಇಲ್ಲದಿ ದ್ದರೆ ಮಾತ್ರ ಅಧಿ ಸೂಚನೆ ಹೊರಡಿ ಸಬೇಕಾ ಗುತ್ತದೆ. ದೆಹಲಿಯಲ್ಲಿ 2009ರಲ್ಲಿ ಈ ಪ್ರಯೋಗ ನಡೆದಿದೆ. ಆದರೆ ಅಲ್ಲಿ 40 ಮೈಕ್ರಾನ್ ಗಿಂತ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಮಾತ್ರ ನಿಷೇಧಿಸಿರುವುದರಿಂದ ಯಶಸ್ಸು ಸಾಧಿಸಲು ಸಾಧ್ಯವಾಗಲಿಲ್ಲ. ಕಳೆದ 1998ರಲ್ಲಿ ಬಾಂಗ್ಲಾ ದೇಶದಲ್ಲಿ ಹಾಗು 1998ರಲ್ಲಿ ಮುಂಬಯಿಯಲ್ಲಿ ನೆರೆ ಉಂಟಾಗಲು ಪ್ಲಾಸ್ಟಿಕ್ ತ್ಯಾಜ್ಯವೂ ಒಂದು ಕಾರಣ ಎನ್ನುವ ಸಂಗತಿ ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಹಂತ ಹಂತವಾಗಿ ಪ್ಲಾಸ್ಟಿಕ್ ತ್ಯಾಜ್ಯ ವನ್ನು ಸಂಪೂರ್ಣವಾಗಿ ನಿಲ್ಲಿಸುವ ನಿಟ್ಟಿನಲ್ಲಿ  ಶುಕ್ರವಾರದಿಂದ ಕಾರ್ಯಾಚರಣೆ ಆರಂಭಿಸಲಾಗುವುದು ಆರಂಭದಲ್ಲಿ ಜನ ಜಾಗೃತಿ ಮೂಡಿಸಲಾಗುತ್ತಿದೆ ಸಾಂಕೇತಿಕವಾಗಿ ಪ್ಲಾಸ್ಟಿಕ್ ಮಾರಾಟ ಮಾಡುವವರಿಗೆ 100ರೂಪಾಯಿ ದಂಡ ವಿಧಿಸಲಾಗುವುದು. ಎರಡನೆ ಹಂತದಲ್ಲಿ ಇನ್ನೂ ಹೆಚ್ಚಿನ ದಂಡ ವಿಧಿಸಲಾಗುವುದು ಹಾಗೂ ಮಹಾನಗರಪಾಲಿಕೆಗೆ ಬೆಂಬಲವಾಗಿ ಜಿಲ್ಲಾಡಳಿತವಿದ್ದು, ಕಾನೂನು ಪಾಲಿಸುವಲ್ಲಿ ಮೊಂಡುತನ ಅನುಸರಿಸಿದರೆ ಕಠಿಣ ಕಾನೂನು ಕ್ರಮ ಅನಿವಾರ್ಯವಾಗಲಿದೆ ಎಂದರು.
ಮನಪಾ ವ್ಯಾಪ್ತಿಯಲ್ಲಿ ಕಸ ವಿಲೇವಾರಿಗೆ ಕ್ರಮ: ಮನಪಾ ವ್ಯಾಪ್ತಿಯ ಮಣ್ಣ ಗುಡ್ಡ ಹಾಗೂ ಪೋರ್ಟ್  ವಾರ್ಡುಗಳಲ್ಲಿ ಕಸವಿಂಗಡಣೆಯ ಪೈಲಟ್ ಯೋಜನೆ ಅನುಷ್ಠಾನಗೊಳಿಸಲಾಗುವುದು. ಉಳಿದ ವಾರ್ಟುಗಳಲ್ಲಿ ಬಳಿಕ ಮನೆ ಮನೆಗಳಿಂದ ಕಸ ಸಂಗ್ರಹಿಸಿ ವಿಲೇವಾರಿ ಮಾಡುವ ಕ್ರಮ ಅನುಷ್ಠಾನಗೊಳ್ಳಲಿದೆ. ಹಂತ ಹಂತವಾಗಿ ಕಸ ಸಂಗ್ರಹಕ್ಕೆ ಹಾಕಲಾದ ಬಿನ್ ಗಳನ್ನು ತೆಗೆಯಲಾಗುವುದು ಮನೆ ಮನೆ ಕಸ ಸಂಗ್ರಹದ ವ್ಯವಸ್ಥೆಗಳನ್ನು ಜನರ ಸಹಕಾರದಿಂದ ಹಮ್ಮಿಕೊಳ್ಳಲಾಗುವುದು  ಎಂದು ಮನಪಾ ಆಯುಕ್ತ ಡಾ.ಹರೀಶ್ ಕುಮಾರ್ ತಿಳಿಸಿದರು.
ಜನಹಿತ ಹಾಗೂ ಪರಿಸರವನ್ನು ಗಮನದಲ್ಲಿರಿಸಿ ಜಾರಿಗೆ ತಂದಿರುವ ಜಿಲ್ಲಾಡಳಿತದ ಕ್ರಮ ಯಶಸ್ವಿಯಾಗಲು ಜಿಲ್ಲೆಯ ಪ್ರಜ್ಞಾವಂತ ಜನರ ಸಹಕಾರ ಅಗತ್ಯ ಎಂದು ಮಹಾನಗರಪಾಲಿಕೆ ಆಯುಕ್ತರು ಹೇಳಿದರು.

2014ರಲ್ಲಿ ಕರ್ನಾಟಕ ವಿದ್ಯುತ್ ಸ್ವಾವಲಂಬಿ ರಾಜ್ಯ: ಶೋಭಾ ಕರಂದ್ಲಾಜೆ

ಮಂಗಳೂರು, ನವೆಂಬರ್.15: ರಾಜ್ಯದಲ್ಲಿ ಕಳೆದ ನಾಲ್ಕು ವರ್ಷಗಳಲ್ಲಿ ವಿದ್ಯುತ್ ಸಮಸ್ಯೆಯನ್ನು ಸವಾಲಾಗಿ ಸ್ವೀಕರಿಸಿ ಪರಿಹರಿಸುವಲ್ಲಿ ರಾಜ್ಯ ಸರಕಾರ ಯಶಸ್ವಿಯಾಗಿದೆ ಎಂದು ಇಂಧನ ಸಚಿವರಾದ ಕುಮಾರಿ ಶೋಭಾ ಕರಂದ್ಲಾಜೆ ಅವರು ಹೇಳಿದರು.
ಅವರಿಂದು ನಗರದ ಬಿಜೈಯಲ್ಲಿ ನೂತನ ಮಂಗ ಳೂರು ವಿದ್ಯು ಚ್ಛಕ್ತಿ ಸರಬ ರಾಜು ಕಂಪೆನಿ ಯ ಆಡ ಳಿತ ಕಚೇ ರಿಯ ನೂತನ ಕಟ್ಟ ಡದ ಶಿಲಾ ನ್ಯಾಸ ನೆರ ವೇರಿಸಿ ಮಾತ ನಾಡು ತ್ತಿದ್ದರು.
ವಿದ್ಯುತ್ ಉತ್ಪಾದನೆ ಮತ್ತು ಬೇಡಿಕೆಗೆ ಸ್ಪಂದಿಸಿ ಅಭಾವ ನೀಗಿಸಲು ಸಮಗ್ರ ಯೋಜನೆ ರೂಪಿಸಿ 4,500 ಮೆಗಾವ್ಯಾಟ್ ಹೆಚ್ಚುವರಿ ವಿದ್ಯುತ್ ನ್ನು ರಾಜ್ಯಕ್ಕೆ ನೀಡಿದೆ.
ಉಡುಪಿಯಲ್ಲಿ 600 ಮೆಗಾವ್ಯಾಟ್, ಬಳ್ಳಾರಿಯಲ್ಲಿ 500, ರಾಯಚೂರಿನ ಎಂಟನೆ ಘಟಕದಿಂದ 250 ಮೆಗಾವ್ಯಾಟ್,  ವರಾಹಿ ಘಟಕಗಳು, ಸಣ್ಣ ಜಲವಿದ್ಯುತ್ ಘಟಕ ಹಾಗೂ ಪವನ ವಿದ್ಯುತ್ ಶಕ್ತಿಗಳ ಮೂಲಕ ವಿದ್ಯುತ್ ಉತ್ಪಾದನೆ ಮಾಡಲಾಗುತ್ತಿದೆ. ಬಳ್ಳಾರಿ ದ್ವಿತೀಯ ಘಟಕ ಈ ತಿಂಗಳು ಪೂರ್ಣಗೊಳ್ಳಲಿದೆ ಈ ಮೂಲಕ ನಾಲ್ಕು ವರ್ಷಗಳಲ್ಲಿ 4500 ಮೆಗಾವ್ಯಾಟ್ ವಿದ್ಯುತ್ತನ್ನು ಹೆಚ್ಚುವರಿಯಾಗಿ ಉತ್ಪಾದಿಸಿ ನಮ್ಮ ಗ್ರಿಡ್ಗೆ ಸೇರ್ಪಡೆಗೊಳಿಸಲಾಗಿದೆ. ಎಲ್ಲವೂ ಯೋಜನೆಯಂತೆ ಸಂಪೂರ್ಣಗೊಂಡರೆ 2014ರ ವೇಳೆಗೆ ಗುಜರಾತ್ ನಂತೆ ಕರ್ನಾಟಕ ಕೂಡಾ ವಿದ್ಯುತ್ ನಲ್ಲಿ ಸ್ವಾವಲಂಬಿ ರಾಜ್ಯವಾಗಲಿದೆ ಎಂದು ಶೋಭಾ ಅಭಿಪ್ರಾಯಿಸಿದರು.
ಉತ್ಪಾದನೆಗೆ ಮತ್ತು ವಿತರಣೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಗ್ರಾಮೀಣ ಪ್ರದೇಶಗಳಲ್ಲಿನ ವಿದ್ಯುತ್ ಸಮಸ್ಯೆ ನಿವಾರಣೆಗೂ ರಾಜ್ಯ ಸರಕಾರ ಬದ್ಧವಾಗಿದೆ. ನಾಲ್ಕು ವರ್ಷಗಳಲ್ಲಿ ಹೊಸ ವಿದ್ಯುತ್ ಲೈನ್ ಹಾಗೂ ಹೊಸ ಸ್ಟೇಷನ್ಗಳ ಆರಂಭ ಹಾಗೂ ಮೇಲ್ದರ್ಜೆಗೇರಿಸುವ ಕಾರ್ಯಕ್ಕಾಗಿಯೇ 11,000 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ. ಹಾಗಿದ್ದರೂ ಇನ್ನೂ ಸ್ಟೇಷನ್ ಗಳ ಕೊರತೆ ಇದೆ. ಬೆಂಗಳೂರು ಮಹಾನಗರದಲ್ಲೇ 22 ಕಡೆಗಳಲ್ಲಿ ವಿದ್ಯುತ್ ಸ್ಟೇಷನ್ ಳ ಕೊರತೆ ಇದೆ. ಸ್ಟೇಷನ್ ಳ ಕೊರತೆಯಿಂದಾಗಿ ಸಾಗಾಣಿಕೆ ನಷ್ಟ ಹೆಚ್ಚತ್ತಿದೆ. ವಿದ್ಯುತ್ ಕಳ್ಳತನ, ಅಕ್ರಮ ಜೋಡಣೆಗೆ ಸಂಬಂಧಿಸಿ ಲೈನ್ ಗಳ ಬದಲಾವಣೆ ಕೆಲಸ ಮಾಡಲಾಗುತ್ತಿದೆ ಎಂದು ಇಂಧನ ಸಚಿವರು ವಿವರಿಸಿದರು.
ಶಿಲಾನ್ಯಾಸಗೊಂಡ ಮೆಸ್ಕಾಂ ಆಡಳಿತ ಕಚೇರಿ ಕಟ್ಟಡ ಪರಿಸರ ಸ್ನೇಹಿಯಾಗಿದ್ದುಕೊಂಡು 10 ಕೋಟಿ ರೂ. ವೆಚ್ಚದಲ್ಲಿ ಒಂದು ವರ್ಷದೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ. ಈ ಕಟ್ಟಡವು ಮಳೆ ನೀರು ಕೊಯ್ಲು, ಸೌರ ವಿದ್ಯುತ್ ಯೋಜನೆಗಳನ್ನು ಒಳಗೊಂಡು ಮಾದರಿಯಾಗಲಿದೆ ಎಂದವರು ಹೇಳಿದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತ ನಾಡಿ, ಕಳೆ ದೆರಡು ವರ್ಷ ಗಳಿಂದ ಜಿಲ್ಲೆ ಯಲ್ಲಿ ವಿದ್ಯುತ್ ಕಡಿತ ಸಮಸ್ಯೆ ಬಹು ತೇಕ ಕಡಿಮೆ ಯಾಗಿದೆ ಎಂದರು. ಗ್ರಾಮಾಂ ತರ ಪ್ರದೇಶ ಗಳಲ್ಲೂ ಸಮ ರ್ಪಕ ವಿದ್ಯುತ್ ಒದಗಿ ಸುವಲ್ಲಿ ರಾಜ್ಯ ಸರ ಕಾರ ಸೂಕ್ತ ಯೋಜನೆ ಗಳನ್ನು ರೂಪಿಸಿದ್ದು, ಬೆಳ್ತಂಗಡಿ, ಸುಳ್ಯ ಮೊದಲಾದೆಡೆಗಳಲ್ಲಿ ವಿದ್ಯುತ್ ಕಂಬ, ತಂತಿ ಅಳವಡಿಕೆ ಕಾರ್ಯದಲ್ಲಿ ಅದ್ಭುತವಾದ ಬೆಳವಣಿಗೆ ಆಗಿದೆ. ಹಾಗಿದ್ದರೂ  ಕೆಲವೆಡೆಗಳಲ್ಲಿ ಕೆಪಿಟಿಸಿಎಲ್ ಲೈನ್ ಹಾದುಹೋಗುವಲ್ಲಿ ಜನರ ಸಹಕರಿಸದಿರುವುದರಿಂದ ಕಾಮಗಾರಿ ವಿಳಂಬವಾಗುತ್ತಿದೆ ಎಂದವರು ಹೇಳಿದರು.
ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಉಪ ಮೇಯರ್ ಅಮಿತಕಲಾ, ಮನಪಾ ಸದಸ್ಯ ಲ್ಯಾನ್ಸಿಲಾಟ್ ಪಿಂಟೋ, ರಾಮ ಅಮೀನ್ ಮೊದಲಾದವರು ಉಪಸ್ಥಿತರಿದ್ದರು.
ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಎಸ್. ಸುಮಂತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಾಂತ್ರಿಕ ವಿಭಾಗದ ನಿರ್ದೇಶಕ ಎಚ್. ನಾಗೇಶ್ ವಂದಿಸಿದರು. ಮೆಸ್ಕಾಂ ಕಚೇರಿ ಸಹಾಯಕ ನಾಗರಾಜ್ ಪ್ರಾರ್ಥಿಸಿದರು.
 

Wednesday, November 14, 2012

ಮಕ್ಕಳನ್ನು ಸಮಾಜಮುಖಿಗಳಾಗಿಸುವ ಹೊಣೆ ಸಮಾಜದ್ದು: ಜಿಲ್ಲಾಧಿಕಾರಿ

ಮಂಗಳೂರು, ನವೆಂಬರ್ 14: ನಮ್ಮ ಮಕ್ಕಳನ್ನು ಪ್ರಜ್ಞಾವಂತ ಹಾಗೂ ವಿದ್ಯಾವಂತರನ್ನಾಗಿ ಬೆಳೆಸುವ ಸಾಮಾಜಿಕ ಹೊಣೆ ದೇಶದ ಪ್ರತಿಯೊಬ್ಬ ನಾಗರೀಕನದ್ದು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಹೇಳಿದರು.
    ಅವರಿಂದು ನಗರದ ಬಿಜೈ ಕಾಪಿ ಕ್ಕಾಡಿ ನಲ್ಲಿ ರುವ ಚಿಣ್ಣರ ತಂಗು ಧಾಮದಲ್ಲಿ ಮಕ್ಕಳ ದಿನಾ ಚರಣೆ ಯಲ್ಲಿ ಪಾಲ್ಗೊಂಡು ಮಾತ ನಾಡು ತ್ತಿದ್ದರು. ನಗ ರೀಕ ರಣದ ಇನ್ನೊಂದು ಮುಖ ಕೊಳಚೆ ಪ್ರದೇಶ ಗಳು. ಇಲ್ಲಿ ಬೆಳೆ ಯುವ ಮಕ್ಕಳಿಗೆ ಉತ್ತಮ ವಿದ್ಯಾ ಭ್ಯಾಸ ಹಾಗೂ ಸರ್ಕಾ ರದ ಸವ ಲತ್ತು ಗಳನ್ನು ನೀಡುವ ಹೊಣೆ ಯನ್ನು ಇಂತಹ ತಂಗು ಧಾಮಗಳ ಮೂಲಕ ಹಲವರ ಸಹ ಕಾರ ದೊಂದಿಗೆ ಇಂದು ಜಿಲ್ಲಾಡಳಿತ ನಡೆಸುತ್ತಿದೆ. ರಾಜ್ಯದಲ್ಲಿ ಒಟ್ಟು ಮಹಾನಗರಪಾಲಿಕೆಗೆ ಒಂದರಂತೆ 9 ತಂಗುಧಾಮಗಳನ್ನು ಪ್ರಥಮ ಹಂತದಲ್ಲಿ ನೀಡಿದ್ದು, ಜಿಲ್ಲೆಗೆ ಎರಡು ತಂಗುದಾಮಗಳನ್ನು ನೀಡಿದೆ. ಇಲ್ಲಿ ಮಕ್ಕಳಿಗೆ ಬೆಳೆಯಲು ಪೂರಕ ವಾತಾವರಣವನ್ನು ಸೃಷ್ಟಿಸಲಾಗುತ್ತದೆ.
ದಕ್ಷಿಣ ಕನ್ನಡ ಜಿಲ್ಲೆಯು ಉತ್ತಮ ಮಾದರಿಗಳನ್ನು ವಿವಿಧ ಕ್ಷೇತ್ರಗಳಲ್ಲಿ ರಾಷ್ಟ್ರಕ್ಕೆ ನೀಡಿದ್ದು, ಇದೂ ಉತ್ತಮ ತಂಗುದಾಮವಾಗಲಿ ಎಂದು ಹಾರೈಸಿದರು. ಮಕ್ಕಳಿಗೆ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ಅರಿವು ಮೂಡಿಸುವ ಕೆಲಸ ಗ್ರಾಮಸಭೆಗಳಿಂದ ಆರಂಭವಾಗಬೇಕು ಎಂದರು. ಮಕ್ಕಳ ಹಕ್ಕುಗಳ ಜಾರಿಗಾಗಿ ಮಕ್ಕಳ ಗ್ರಾಮಸಭೆ ಚಾರ್ಟ್ ಬಿಡುಗಡೆ ಮಾಡಿದರು.
ಕಾರ್ಯ ಕ್ರಮ ವನ್ನು ಜಿಲ್ಲಾ ಪಂಚಾ ಯತ್ ಉಪಾ ಧ್ಯಕ್ಷ ರಾದ ರಿತೇಶ್ ಶೆಟ್ಟಿ ಅವರು ಮಕ್ಕಳ ಹಕ್ಕು ಗಳ ಕುರಿತ ಜಾಗೃತಿ ಮೂಡಿ ಸುವ ಚಾರ್ಟ್  ಬಿಡಿ ಸುವ ಮೂಲಕ ಉದ್ಘಾ ಟಿಸಿ, ಉದ್ಘಾ ಟನಾ ಭಾಷಣ ಮಾಡಿದರು. ಮಕ್ಕಳ ರಕ್ಷಣಾ ಹಕ್ಕು ಘಟಕದ ಅಧ್ಯಕ್ಷ ರಾದ ಗ್ರೇಸಿ ಗೊನ್ಸಾ ಲಿಸ್, ತಂಗು ದಾಮ ವನ್ನು ನಿರ್ವ ಹಿಸು ತ್ತಿರುವ ಪ್ರಜ್ಞಾ ಸಂಸ್ಥೆಯ ಪ್ರೊ. ಹೀಲ್ಡಾ ರಾಯ ಪ್ಪನ್, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ರಾದ ಆಶಾ ನಾಯಕ್, ವಿದ್ಯಾಂಗ ಉಪ ನಿರ್ದೇ ಶಕರಾದ ಮೋಸೆಸ್ ಜಯಶೇಖರ್, ಸರ್ವಶಿಕ್ಷಣ ಅಭಿಯಾನದ ಸಮನ್ವಯಾಧಿಕಾರಿ ಶಿವಪ್ರಕಾಶ್,  ಪಡಿ ಸಂಸ್ಥೆಯ ರೆನ್ನಿ ಡಿ ಸೋಜ, ಬಾಳ್ತಿಲ ಕೃಷ್ಣ ಮೂರ್ತಿ, ಸುರೇಶ್ ಶೆಟ್ಟಿ ಮುಂತಾದವರು ಪಾಲ್ಗೊಂಡರು.
ಬಳಿಕ ಮಕ್ಕಳು ತಿಂಕ್ ಹೆಲ್ತ್ ನಾಟ್ ಡ್ರಗ್ ಚಿತ್ರ ಕಲೆ ರಚಿಸು ವಲ್ಲಿ ನಿರತ ರಾದರು. ತಂಗು ಧಾಮ ದಲ್ಲಿ ಪ್ರಸಕ್ತ 50 ಮಕ್ಕ ಳಿದ್ದಾರೆ.

Saturday, November 10, 2012

ಸಮಾನ ಸಮಾಜ ಸೃಷ್ಟಿ ಎಲ್ಲರ ಕೊಡುಗೆ ಅಗತ್ಯ: ಜಿಲ್ಲಾಧಿಕಾರಿ

ಮಂಗಳೂರು, ನವೆಂಬರ್.10: ಜಿಲ್ಲೆಯ ಅತ್ಯಂತ ಹಿಂದುಳಿದ ಕೊರಗ ಸಮುದಾಯದ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದ ಗೋಕುಲ್ ದಾಸ್ ಅವರನ್ನು ಸನ್ಮಾನಿಸುವುದು ಹೆಮ್ಮೆ ಹಾಗೂ ಕರ್ತವ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ. ಎನ್. ಎಸ್ ಚನ್ನಪ್ಪಗೌಡ ಹೇಳಿದರು.
ಇಂದು ನಗ ರದ ಚಿಲಿಂ ಬಿಯ ಕುದ್ಮುಲ್ ಗಾರ್ಡನ್ ನಲ್ಲಿ ರುವ  ಗೋಕುಲ್ ದಾಸ್ ಅವರ ಮನೆ ಯಂಗಳ 'ಶ್ರೀ ರಂಗ ಪ್ರಸಾದ್  ದಲ್ಲಿ ಕುಂದಾ ಪುರ, ಉಡುಪಿ ಮತ್ತು ಮಂಗ ಳೂರಿನ ಕೊರಗ ಸಮುದಾ ಯದ ವರು ಹಮ್ಮಿ ಕೊಂಡಿದ್ದ ಸನ್ಮಾನ ಸಮಾ ರಂಭ ದಲ್ಲಿ ಮಾತ ನಾಡು ತ್ತಿದ್ದರು. ಈ ಬಾರಿಯ ರಾಜ್ಯ ವಾಲ್ಮೀಕಿ ಪ್ರಶಸ್ತಿ ಪಡೆದ ಹಿರಿಯ ಮುಖಂಡ ಗೋಕುಲ್ ದಾಸ್ ಅವರನ್ನು ಸನ್ಮಾನಿ ಸುವುದು ತಳ ಮಟ್ಟದವರ ಏಳಿಗೆಗಾಗಿ ದುಡಿಯುತ್ತಿರುವ ಒಳ್ಳೆಯ ಮನಸ್ಸುಗಳಿಗೆ ಸ್ಫೂರ್ತಿಯನ್ನು ನೀಡಲಿದೆ ಎಂದರು.
ಜಿಲ್ಲಾಡಳಿತ ಸಮುದಾಯದ ಸಹಕಾರದಿಂದ ದಕ್ಷಿಣ ಕನ್ನಡದಲ್ಲಿ ನಿವೇಶನ ಹೊಂದಿರುವವರಿಗೆ 750 ಮನೆ ನಿರ್ಮಾಣ ಮಾಡುವ ಕಾರ್ಯಕ್ಕೆ ಮುಂದಾಗಿದೆ. ನಿವೇಶನ ಇಲ್ಲದವರಿಗೆ ನಿವೇಶನ ನೀಡಲು ಸೂಕ್ತ ಕ್ರಮಕೈಗೊಂಡಿದೆ.
ಮಂಗಳೂರು, ಬಂಟ್ವಾಳ ಗಳಲ್ಲಿ ಸಮು ದಾಯದ ಹೆಚ್ಚಿನ ಸಂಖ್ಯೆ ಜನ ರಿದ್ದು,ಸೌಲಭ್ಯ ಗಳನ್ನು ಸದು ಪಯೋಗ ಪಡಿಸಿ ಕೊಳ್ಳಬೇಕು. ಸರ್ಕಾರ ನೀಡಿದ ಭೂಮಿ ಯನ್ನು ಇತ ರರಿಗೆ ಮಾರಾಟ ಮಾಡದೆ ಸದುಪ ಯೋಗ ಪಡಿಸಿ ಅಭಿ ವೃದ್ಧಿ ಹೊಂದಿ. ಜಮೀನಿಗೆ ಬೆಲೆ ಬಂದ ಮೇಲೆ ಅದನ್ನು  ಮಾರಾಟ ಮಾಡುವ ದುರುಪಯೋಗದ ವರದಿಗಳು ಹೆಚ್ಚಾಗಿದ್ದು, ಇಂತಹದುಕ್ಕೆ ಕಡಿವಾಣ ಹಾಕಿ ಎಂದು ಜಿಲ್ಲಾಧಿಕಾರಿ ಹೇಳಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಗೋಕುಲ್ ದಾಸ್ ಅವರು ಹರ್ಷ ವ್ಯಕ್ತಪಡಿಸಿ, ಶಿಕ್ಷಣ ಮತ್ತು ಅರಿವಿನಿಂದ ಸಮುದಾಯ ಅಭಿವೃದ್ಧಿ ಸಾಧ್ಯ ಎಂದರು. ಸಮುದಾಯ ಅಭಿವೃದ್ಧಿ ಹೋರಾಟಕ್ಕೆ ಜಿಲ್ಲಾಡಳಿತ, ಸರ್ಕಾರ ತಮಗೆ ಬೆಂಬಲ ನೀಡಿದೆ ಎಂದರು.
ಐಟಿಡಿಪಿ ಅಧಿಕಾರಿ ಸಬೀರ್ ಅಹಮ್ಮದ್ ಮುಲ್ಲಾ ಶುಭ ಹಾರೈಸಿದರು. ಮತ್ತೋಡಿ ಸ್ವಾಗತ, ಪ್ರಾಸ್ತಾವಿಕ ಮಾತುಗಳನ್ನಾಡಿದರು.  ಅಧ್ಯಕ್ಷತೆಯನ್ನು ಸಮುದಾಯದ ಮುಖಂಡ ಗಣೇಶ್ ವಹಿಸಿದ್ದರು. 


 

Friday, November 9, 2012

ವಿಕೋಪ ನಿರ್ವಹಣೆಯ ತರಬೇತಿಗೆ ಅಧಿಕಾರಿಗಳ ಉತ್ತಮ ಸ್ಪಂದನ: ಜೇಮ್ಸ್ ವಾರ್ನ್ ಪೆನೆ

ಮಂಗಳೂರು,ನವೆಂಬರ್.09: ಮಂಗಳೂರಿನಲ್ಲಿ ನಡೆದ ವಿಕೋಪ ನಿರ್ವಹಣೆಯ ತರಬೇತಿಗೆ ಅಧಿಕಾರಿಗಳು ಉತ್ತಮವಾಗಿ ಸ್ಪಂದಿಸಿದ್ದಾರೆಎಂದು  ಅಮೆರಿಕಾದ ವಿದೇಶಾಂಗ ಸೇವೆಯ ಜೇಮ್ಸ್ ವಾರ್ನ್ ಪೆನೆ ಹೇಳಿದರು.
 ಮಂಗ ಳೂರು ಮಹಾ ನಗರ ಪಾಲಿ ಕೆಯ ಮಂಗಳಾ ಸಭಾಂ ಗಣ ದಲ್ಲಿ  ಗೃಹ ಸಚಿವಾ ಲಯ ನವ ದೆಹಲಿ, ಅಮೇ ರಿಕಾ ವಿದೇ ಶಾಂಗ ಸಚಿ ವಾಲಯ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಡಳಿತ  ಸಂಯುಕ್ತ ಆಶ್ರಯದಲ್ಲಿ  ನಡೆದ ರಾಷ್ಟ್ರೀಯ ವಿಕೋಪ ನಿರ್ವಹಣಾ 5 ದಿನಗಳ ಕಾರ್ಯಾಗಾರ ಇಂದು ಸಂಪನ್ನಗೊಂಡಿತ್ತು.  ಸುದ್ದಿಗಾರರಿಗೆ ಕಾರ್ಯಾಗಾರದ ಬಗ್ಗೆ ಮಾಹಿತಿ ನೀಡಿದ ಜೇಮ್ಸ್ ಅವರು ಅಮೆರಿಕಾದಲ್ಲಿ ರೂಪುಗೊಂಡ ಈ ಪರಿಕಲ್ಪನೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಭಾರತದಲ್ಲಿ ಆಧಿಕಾರಿಗಳಿಗೆ ತರಬೇತಿ ನೀಡಿ ಸವಿವರವಾಗಿ ತಿಳಿ ಹೇಳಲಾಗಿದೆ. ಅಮೆರಿಕಾದ ನಗರಗಳಿಗೆ ಹೋಲಿಸಿದರೆ ಮಂಗಳೂರಿನಲ್ಲಿ ಅತೀ ಹೆಚ್ಚು ಟ್ರಾಫಿಕ್ ದಟ್ಟನೆ ಇದೆ ಮತ್ತು ಈ ಪ್ರದೇಶದಲ್ಲಿ ಹೆಚ್ಚು ಮಳೆ ಇರುವುದರಿಂದ ಕೃತಕ ಪ್ರವಾಹದ ಸಂಭವ ಇದೆ. ವಿಮಾನ ನಿಲ್ದಾಣ ಮತ್ತು ಬಂದರು ಪ್ರದೇಶವಾಗಿರುವುದರಿಂದ ನಗರ ವಿಕೋಪ ನಿರ್ವಹಣೆಗೆ ಸಜ್ಜಾಗುವುದು ಅತೀ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.
                   ಐದು ದಿನಗಳ  ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ತರಬೇತುದಾರ ಕರ್ನಲ್ ಪಿ.ಕೆ. ಪಾಟಕ್  ಮಾತನಾಡಿ 1970ರಲ್ಲಿ ಅಮೆರಿಕಾದಲ್ಲಿ ವಿಕೋಪ ಪ್ರತಿಕ್ರಿಯೆ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಇದನ್ನು ಏಷ್ಯಾದ ರಾಷ್ಟ್ರಗಳಲ್ಲಿಯೂ ಅಳವಡಿಸಿಕೊಳ್ಳಲಾಗುತ್ತಿದೆ. ಭಾರತದಲ್ಲಿ ಐದು ರಾಜ್ಯಗಳನ್ನು ಆಯ್ಕೆ ಮಾಡಿಕೊಂಡಿದ್ದು ಪ್ರಥಮ ಹಂತದ ತರಬೇತಿಯನ್ನು ಮಂಗಳೂರಿನಲ್ಲಿ ನಡೆಸಲಾಗಿದೆ ಎಂದರು.
       ವಿಕೋಪಗಳು ಸಂಭವಿಸಿದಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವುಗಳನ್ನು ಸಮರ್ಥವಾಗಿ ಎದುರಿಸಲು ವೈಜ್ಞಾನಿಕ ಮಾದರಿಯ ತಂಡಗಳನ್ನು ರಚಿಸಿ ಕಾರ್ಯಗತಗೊಳಿಸುವ ಮೂಲಕ  ಅಗತ್ಯ ಕ್ರಮಗಳನ್ನು  ಕೈಗೊಳ್ಳಲಾಗುವುದು ಎಂದು  ಅಪರ ಜಿಲ್ಲಾಕಾರಿ ದಯಾನಂದ ಕೆ. ಹೇಳಿದರು. ಜಿಲ್ಲೆಗೆ ವಿಕೋಪ ನಿರ್ವಹಣೆಗೆ ಪ್ರಸಕ್ತ ಸಾಲಿನಲ್ಲಿ ಬಿಡುಗಡೆಯಾದ 9 ಕೋಟಿ ಹಣದಲ್ಲಿ ಈಗಾಗಲೇ ನಾಲ್ಕು ಕೋಟಿ ರೂ.ಗಳು ಖರ್ಚಾಗಿದೆ. ನದಿ ಪ್ರವಾಹ ಮತ್ತು ಅರಬ್ಬೀ ಸಮುದ್ರದ ಕಿನಾರೆಯನ್ನು ದೃಷ್ಟಿಯಲ್ಲಿಕೊಂಡು ಜಿಲ್ಲಾಡಳಿತ ಎರಡು ಬೋಟ್ ಗಳನ್ನು ಖರೀದಿಸಿದೆ. ಒಂದು ಬೋಟನ್ನು ಬಂಟ್ವಾಳದಲ್ಲಿ ಮತ್ತು ಇನ್ನೊಂದನ್ನು  ಗೃಹ ರಕ್ಷಕದಳಕ್ಕೆ ನೀಡಲಾಗಿದೆ. ವಿಕೋಪ ನಿರ್ವಹಣೆಯಲ್ಲಿ ದಕ್ಷಿಣ ಕನ್ನಡವನ್ನು ಸನ್ನದ್ಧಗೊಳಿಸುವ ದೃಷ್ಟಿಯಿಂದ ವಿಕೋಪ ನಿರ್ವಹಣೆ ತರಬೇತಿಯನ್ನು ಆಯೋಜಿಸಲಾಗಿತ್ತು ಎಂದು ಮಾಹಿತಿ ನೀಡಿದರು.
ಐದು ದಿನಗಳ ಕಾಲ ನಡೆದ ತರಬೇತಿಯಲ್ಲಿ ವಿವಿಧ ಅಣಕು ಘಟನೆಗಳಿಗೆ ಜಿಲ್ಲಾಡಳಿತ ವ್ಯಾಪ್ತಿಯ ಸುಮಾರು 34 ಅಧಿಕಾರಿಗಳ ತಂಡ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂದು ಗಮನಿಸಲಾಯಿತು.
ಇಂದು  ನಡೆದ ಅಣಕು ಕಾರ್ಯಾ ಚರಣೆ ಯಲ್ಲಿ ಬಿರು ಗಾಳಿ ಮತ್ತು ಸಮುದ್ರ ದಲ್ಲಿ ವಾಯು ಭಾರ ಕುಸಿತ ನಡೆ ದಲ್ಲಿ ಕೈ ಗೊಳ್ಳ ಬೇಕಾದ ಕ್ರಮ ಗಳ ಬಗ್ಗೆ ತಂಡ ಗಳನ್ನು ರಚಿಸಿ ತರ ಬೇತಿ ನೀಡ ಲಾಯಿತು. ನಿರ್ವ ಹಣಾ ತಂಡದ ನೇ ತೃತ್ವ ವನ್ನು ನಂಜಪ್ಪ, ಯೋಜನಾ ತಂಡದ ನೇತೃತ್ವವನ್ನು ಡಾ. ಒ.ಶ್ರೀರಂಗಪ್ಪ, ಸೌಕರ್ಯ ವಿಭಾಗದ ಉಸ್ತುವಾರಿಯನ್ನು ಕಾಶೀನಾಥ್ ವಹಿಸಿಕೊಂಡಿದ್ದರು.  ಇನ್ಸಿಡೆಂಟ್ ಕಮಾಂಡರ್ಆಗಿ  ಮಂಗಳೂರು ಉಪವಿಭಾಗಾಧಿಕಾರಿ ಡಾ. ವೆಂಕಟೇಶ್  ಸಾರಥ್ಯ ವಹಿಸಿದ್ದರು.
  ಕೇಂದ್ರಾಡಳಿತ ಪ್ರದೇಶಗಳ ನಾಗರಿಕ ಸೇವೆಗಳ ವಿಭಾಗದ ಅಧಿಕಾರಿ ರಾಜೇಶ್ ಭಾಟಿಯಾ, ಮಹಾರಾಷ್ಟ್ರದ ಪ್ರಾದೇಶಿಕ ತರಬೇತಿ ಸಂಸ್ಥೆಯ ಅದಿಕಾರಿ ಸುರ್ ರಾಥೋಡ್, ಜೇಮ್ಸ್ ವಾರ್ನ್ ಪೆನೆ ಮತ್ತು ಸಿ. ಬಾಲಾಜಿ ತರಬೇತಿಯ ಪರಿಶೀಲನೆ ನಡೆಸಿದರು.

 'ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಪರಿಸರ ಹಾನಿ ತಪ್ಪಿಸಿ'

Thursday, November 8, 2012

ಮಹಿಳೆಯರು ಮತ್ತು ಮಕ್ಕಳ ರಕ್ಷಣೆಗೆ ಸಾರ್ವಜನಿಕರ ಸಹಕಾರ ಅಗತ್ಯ- ವನಿತಾ ತೊರವಿ


ಮಂಗಳೂರು, ನವೆಂಬರ್.08 :ಬಡತನ,ಅನಕ್ಷರತೆ,ಬಹುಸಂತಾನ ಇವೇ ಮೊದಲಾದ ಕಾರಣಗಳಿಂದ ಮಹಿಳೆಯರನ್ನು ಬಲವಂತವಾಗಿ ವೇಶ್ಯಾವಾಟಿಕೆಯಂತಹ ಅನೇಕ ಕೆಲಸಗಳಿಗೆ ದೂಡುತ್ತಿರುವುದು ಹಾಗೂ ಹೆಣ್ಣು ಮಕ್ಕಳನ್ನು ಮೋಸ ಮಾಡಿ ಅವರನ್ನು ಮಾರಾಟ ಮಾಡುತ್ತಿರುವುದು ಸೇರಿದಂತೆ ಮಹಿಳೆಯರು ಮಕ್ಕಳ ಶೋಷಣೆ ತಪ್ಪಿಸಲು ಸರ್ಕಾರದೊಂದಿಗೆ ಸಾರ್ವಜನಿಕರು ಸ್ಪಂದಿಸಿದರೆ ಮಾತ್ರ ಸಾಧ್ಯ ಎಂದು ರಾಜ್ಯ ಮಹಿಳಾ ಮತ್ತು ಮಕ್ಕಳ ರಕ್ಷಣಾ ಸಮಿತಿ ಸದಸ್ಯರಾದ ಶ್ರೀಮತಿ ವನಿತಾ ತೊರವಿ ತಿಳಿಸಿದ್ದಾರೆ.
              ಅವರು ನಿನ್ನೆ ಜಿಲ್ಲಾ ಬಾಲ ಭವನದಲ್ಲಿ ಆಯೋಜಿಸಿದ್ದ ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ನಿವಾರಣೆ ಬಗ್ಗೆ ಜಿಲ್ಲಾ/ತಾಲೂಕು ಸಮಿತಿ ಸದಸ್ಯರು ಹಾಗೂ ಗ್ರಮಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ 3 ತಂಡಗಳ 6 ದಿನಗಳ ತರಬೇತಿಯಲ್ಲಿ ಪಾಲ್ಗೊಂಡಿದ್ದವರಿಗೆ ದೃಢೀಕರಣ ಪತ್ರ ವಿತರಿಸಿ ಮಾತನಾಡಿದರು.
         ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮಕ್ಕಳ ಸಾಗಾಟ ದಿನೇದಿನೇ ಹೆಚ್ಚಾಗುತ್ತಿದ್ದು ಇದು ಸರ್ಕಾರ ಹಾಗೂ ಸಮಾಜ ಕಳವಳಪಡುವಂತಾಗಿದೆ ಎಂದ ಅವರು ಒಂದು ವರದಿ ಪ್ರಕಾರ ದೇಶದಲ್ಲಿ ವರ್ಷವೊಂದಕ್ಕೆ 9 ಸಾವಿರ ಮಕ್ಕಳು ಕಾಣೆಯಾಗುತ್ತಿದ್ದಾರೆ.5 ಲಕ್ಷಕ್ಕೂ ಹೆಚ್ಚು ಮಕ್ಕಳು ಹದಿಹರೆಯದ ಮನ್ನವೇ ವೇಶ್ಯಾ ವೃತ್ತಿಗೆ ಬಲವಂತವಾಗಿ ನೂಕಲ್ಪಡುತ್ತಿದ್ದಾರೆ. ಇವರಲ್ಲಿ ಶೇಕಡಾ 40 ರಷು ಮಕ್ಕಳು 12 ರಿಂದ 17 ವರ್ಷದೊಳಗಿನವರಾಗಿರುವುದು ದುರ್ದೈವದ ಸಂಗತಿ ಎಂದರು.
ತಮ್ಮ ನೆರೆಹೊರೆಯಲ್ಲಿ ಹೆಣ್ಣು ಮಕ್ಕಳಿಗೆ ಶೋಷಣೆಯಾಗುತ್ತಿದ್ದರೆ ,ಬಾಲಕಾರ್ಮಿಕರು ಕಂಡು ಬಂದಲ್ಲಿ ಮಹಿಳಾ ಸಹಾಯವಾಣಿಗಾಗಲೀ ಯಾ ಮಕ್ಕಳ ರಕ್ಷಣಾ ಸಮಿತಿಗೆ ತಿಳಿಸುವಂತೆ ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.ಇನ್ನು ಕೆಲವೇ ದಿನಗಳಲ್ಲಿ ಮಕ್ಕಳ ರಕ್ಷಣೆ ಕುರಿತು ವೆಬ್ ಸೈಟ್ ಆರಂಭಿಸಲಾಗುವುದು ಎಂದು ತಿಳಿಸಿ,ಮಕ್ಕಳ ರಕ್ಷಣೆಗೆ ಜಿಲ್ಲೆಯಲ್ಲಿ 41 ರಕ್ಷಣಾ ಗೃಹಗಳಿದ್ದು,ಇನ್ನೂ 11 ರಕ್ಷಣಾ ಗೃಹಗಳನ್ನು ಆರಂಭಿಸುವುದಾಗಿ ಅವರು ತಿಳಿಸಿದರು.
        ಸಭೆಯಲ್ಲಿ ಜಿಲ್ಲಾ ಮಹಿಳಾ ಮಕ್ಕಳ ರಕ್ಷಣಾ ಸಮಿತಿಯ ಶ್ರೀಮತಿ ಆಶಾ ನಾಯಕ್,ಲಾವಣ್ಯ ಶೆಟ್ಟಿ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಶಕುಂತಳಾ ಮುಂತಾದವರು ಹಾಜರಿದ್ದರು.

  'ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಪರಿಸರ ಹಾನಿ ತಪ್ಪಿಸಿ'

" ವಸತಿ ನಿಲಯಗಳು ವ್ಯಕ್ತಿತ್ವ ವಿಕಸನದ ಕೇಂದ್ರಗಳಾಗಲಿ''


ಮಂಗಳೂರು, ನವೆಂಬರ್.08:- ವಸತಿ ನಿಲಯಗಳು ವ್ಯಕ್ತಿತ್ವ ವಿಕಸನದ ಕೇಂದ್ರಗಳಾಗಲಿ. ಅತ್ಯುತ್ತಮ ಮಾದರಿಗಳು ನಮ್ಮ ಹಾಸ್ಟೆಲ್ಗಳಿಂದ ಹೊರಹೊಮ್ಮಲಿ ಎಂದು ಮಾಜಿ ಸಚಿವರು ಹಾಗೂ ಉಪಸಮಿತಿಯ ಸದಸ್ಯರಾದ  ಸಿ ಎಚ್ ವಿಜಯಶಂಕರ್ ಅಭಿಪ್ರಾಯ ವ್ಯಕ್ತಪಡಿಸಿದರು. ನಿನ್ನೆ ಬುಧವಾ ರದಂದು ಸಂಜೆ ದಕ್ಷಿಣ ಕನ್ನಡ ಜಿಲ್ಲಾಧಿ ಕಾರಿ ಗಳ ಕಚೇರಿ ಯಲ್ಲಿ ಆಯೋ ಜಿಸ ಲಾಗಿದ್ದ ಕರ್ನಾ ಟಕ ವಿಧಾನ ಮಂಡ ಲದ ಹಿಂದು ಳಿದ ವರ್ಗ ಗಳ ಮತ್ತು ಅಲ್ಪ ಸಂಖ್ಯಾ ತರ ಕಲ್ಯಾಣ ಸಮಿತಿಯ ಮೈ ಸೂರು ವಿಭಾ ಗದ ಉಪ ಸಮಿತಿ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು. ಈ ಸಮಿತಿಯು ಜಿಲ್ಲೆಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ನಡೆಯುತ್ತಿರುವ ವಸತಿ ನಿಲಯಗಳ ಮೂಲಸೌಕರ್ಯ ಮತ್ತು ನಿವೇಶನ ಮಾಹಿತಿ ವಿವರಗಳನ್ನು ಪಡೆಯಲು ಮೈಸೂರು ವಿಭಾಗದಲ್ಲಿ ಅಧ್ಯಯನ ಪ್ರವಾಸ ನಡೆಸಿದೆ.
ಶೈಕ್ಷಣಿಕ ಜಿಲ್ಲೆಯೆಂದು ಗುರುತಿಸಲ್ಪಟ್ಟಿರುವ ದಕ್ಷಿಣ ಕನ್ನಡದಲ್ಲಿ ಶಿಕ್ಷಣ ಮತ್ತು ವಸತಿನಿಲಯದ ಪರಿಸ್ಥಿತಿಗಳು ಉತ್ತಮವಾಗಿದೆಯಾದರೂ ಇಡೀ ರಾಜ್ಯಕ್ಕೆ ಮಾದರಿಯಾಗುವಂತಹ ವಸತಿನಿಲಯಗಳನ್ನು ರೂಪಿಸುವತ್ತ ಜಿಲ್ಲೆಯ ಅಧಿಕಾರಿಗಳು ಹೆಚ್ಚಿನ ಗಮನಹರಿಸಬೇಕಿದೆ. ಇಲ್ಲಿನ ವಿದ್ಯಾರ್ಥಿಗಳ ಬದುಕಿನ ಆತ್ಮೀಯ ಕ್ಷಣಗಳು ನಮ್ಮ ವಸತಿ ನಿಲಯದಿಂದ ಹೊಮ್ಮಲಿ. ಮಕ್ಕಳಿಗೆ ಉತ್ತಮ ಓದಿನ ವಾತಾವರಣ, ಯೋಗ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಪೂರಕ ವಾತಾವರಣ ಸೃಷ್ಟಿಯಾಗಲಿ.  ತಮ್ಮ ಜೀವನದಲ್ಲಿ ಹಾಸ್ಟೆಲ್ನ್ನು ಅವರು ಮರೆಯಬಾರದು; ಅಪರೂಪ ಕ್ಕೊಮ್ಮೆ ತಮ್ಮ ವಸತಿ ನಿಲಯಕ್ಕೆ ಭೇಟಿ ನೀಡಬೇಕೆಂಬ ಇಚ್ಛೆ ಅವರ ಮನದಲ್ಲಿ ಮೂಡಬೇಕು. ವಸತಿನಿಲಯಗಳ ಸುತ್ತಮುತ್ತಲೂ ಹಣ್ಣಿನ ಮರಗಳನ್ನು ಬೆಳೆಸಿ. ಮಕ್ಕಳು ಮರಗಳಡಿ ಕುಳಿತು ಓದಲಿ, ಸ್ಥಳೀಯ ನಿವೃತ್ತ ಪ್ರಾಧ್ಯಾಪಕರಿಂದ ಮಕ್ಕಳಿಗೆ ವಿಶೇಷ ಮನೆಪಾಠ ಹೇಳಿಸಿ. ಜಿಲ್ಲೆಯ ಇತರ ಇಲಾಖೆಗಳ ಅಧಿಕಾರಿಗಳು ಈ ಮಕ್ಕಳೊಂದಿಗೆ ಬೆರೆಯಲಿ; ಅವರ ಜೊತೆ ವಾರದಲ್ಲಿ ಕನಿಷ್ಠ ಒಂದು ಗಂಟೆ  ವಿನಿಯೋಗಿಸಲಿ. ದಕ್ಷಿಣ ಕನ್ನಡದ ಪ್ರಯೋಗಗಳು ದೇಶಕ್ಕೆ ಮಾದರಿಯಾಗಲಿ ಎಂದರು.
ನಮ್ಮ ಜಿಲ್ಲೆಯ ಬಹುತೇಕ ವಸತಿ ನಿಲಯಗಳು ದೇಶಕ್ಕೆ ಉತ್ತಮ ಕ್ರೀಡಾಪಟುಗಳನ್ನು, ಅರಳು ಪ್ರತಿಭೆಗಳನ್ನು ನೀಡಿದೆ ಎಂದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅರುಣ್ ಫುರ್ಟಾಡೋ ಅವರು, ಮಮತ ಪೂಜಾರಿ ನಮ್ಮ ವಸತಿ ನಿಲಯದಲ್ಲಿ ಬೆಳೆದ ಪ್ರತಿಭೆ. ಬೆಳ್ತಂಗಡಿ ಮಚ್ಚಿನದ ವಸತಿ ಶಾಲೆಯ ಹವ್ಯಾಸ್ (ರಾಷ್ಟ್ರ ಮಟ್ಟದ ಇನ್ಸ್ಪೈರ್ ಅವಾಡ್ರ್ ) ಪ್ರತಿಭೆಯೂ ನಮ್ಮದೆ ಇತ್ತೀಚಿನ ಉದಾಹರಣೆಗಳು; ದಕ್ಷಿಣ ಕನ್ನಡದ ವಸತಿ ನಿಲಯಗಳಲ್ಲಿ ಇಂತಹ ಹಲವು ಪ್ರತಿಭೆಗಳು ಅರಳಿದೆ ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರು ಮಾತನಾಡಿ, ನಗರದ ವಸತಿ ನಿಲಯಗಳಲ್ಲಿ ಟೆರೇಸ್ ಗಾರ್ಡನಿಂಗನ್ನು ಪ್ರಾಯೋಗಿಕವಾಗಿ ಕೈಗೆತ್ತಿಕೊಂಡಿದ್ದು, ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಮೊರಾಜರ್ಿ ದೇಸಾಯಿ ಮಾದರಿ ವಸತಿಶಾಲೆಯ ಮಾದರಿ ಯೋಜನೆಗಳನ್ನು ನಮ್ಮ ವಸತಿಶಾಲೆಗಳಿಗೂ ನೀಡಿ ಎಂದರು. ವಿದ್ಯಾಥರ್ಿನಿಯರ ಆರೋಗ್ಯ ಮತ್ತು ಸ್ವಚ್ಛತೆಯನ್ನು ಗಮನದಲ್ಲಿರಿಸಿ ಎಲ್ಲ ವಿದ್ಯಾರ್ಥಿನಿಯರಿಗೂ ಸೇಫ್ಟಿ ನ್ಯಾಪಕಿನ್ ಒದಗಿಸುವಂತಹ ಹಾಗೂ ನ್ಯಾಪ್ ಕಿನ್ ವಿಲೇಗೆ ನ್ಯಾಪ್ ಕಿನ್ ಬರ್ನರ್ ಯುನಿಟ್ ಅಳವಡಿಸಲು ಜಿಲ್ಲಾ ಪಂಚಾಯತ್ ಯೋಜನೆ ರೂಪಿಸಿದೆ ಎಂದರು. ಕಳೆದ ಸಾಲಿನಲ್ಲಿ ವಸತಿ ನಿಲಯದ ಮಕ್ಕಳ ಫಲಿತಾಂಶದಲ್ಲೂ ದಾಖಲೆ ಸಾಧಿಸಿದೆ ಎಂದರು. ಸದಸ್ಯರು ನೀಡಿದ ಸಲಹೆಗಳನ್ನು ಗಮನದಲ್ಲಿರಿಸಿ ಉತ್ತಮ ಮಾದರಿ ರೂಪಿಸುವುದಾಗಿ ಹೇಳಿದರು.
ಸದಸ್ಯರ ಸೂಚನೆಯಂತೆ ಶಿಕ್ಷಣದಲ್ಲಿ ಮುಂದಿರುವ ನಮ್ಮ ಜಿಲ್ಲೆಯಲ್ಲಿ ಪದವಿ ಮತ್ತು ತಾಂತ್ರಿಕ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿ ಕಳೆದ ಮೂರು ವರ್ಷಗಳ ಬೇಡಿಕೆ ಆಧಾರದಲ್ಲಿ ನೀಲಿ ನಕ್ಷೆ ತಯಾರಿಸಲಾಗುವುದು ಎಂದೂ ಸಿಇಒ ಹೇಳಿದರು.  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯಗಳು 29, ಮೆಟ್ರಿಕ್ ಪೂರ್ವ ವಿದ್ಯಾರ್ಥಿ ನಿಲಯಗಳು 27, ಮೊರಾರ್ಜಿ ದೇಸಾಯಿ ವಸತಿ ಶಾಲೆಗಳು 4, ಹೊಲಿಗೆ ತರಬೇತಿ ಕೇಂದ್ರಗಳು 2, ಜಿಲ್ಲಾ ಕಚೇರಿ 1, ತಾಲೂಕು ಮಟ್ಟದಮ ಕಚೇರಿ 5, ಅಭಿವೃದ್ಧಿ ನಿಗಮದ ಜಿಲ್ಲಾ ಕಚೇರಿ ಒಂದು ಇದ್ದು, 11 ನಿವೇಶನ ರಹಿತ ನಿಲಯಗಳಿವೆ.
ಇವುಗಳಲ್ಲಿ ನಗರದ ಬಿಜೈಯಲ್ಲಿರುವ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಹಾಗೂ ಕದ್ರಿಯ ಸಾರ್ವಜನಿಕ ಮಾದರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯ  ಸರ್ಕಾರಿ ಜಮೀನು ನೀಡುವ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು, ಹೊರವಲಯದ ನಾಟೆಕಲ್ ನ ಮುಸ್ಲಿಮ್ ವಸತಿ ಶಾಲೆಗೆ ಮೀಸಲಿಟ್ಟ ಜಾಗದ ಬಗ್ಗೆ ಗೊಂದಲಗಳಿವೆ ಎಂದರು. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಮನ್ವಯದೊಂದಿಗೆ ವಸತಿ ನಿಲಯಗಳ ನಿವೇಶನ ಸಮಸ್ಯೆಯನ್ನು ಆದ್ಯತೆಯ ಮೇರೆಗೆ ಪರಿಹರಿಸಲು ಉಪಸಮಿತಿಯ ಅಧ್ಯಕ್ಷರಾದ ತನ್ವೀರ್ ಸೇಠ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಸರ್ಕಾರಿ ಜಮೀನು ಲಭ್ಯವಿದ್ದರೆ ತತ್ ಕ್ಷಣವೇ ಸಮಿತಿಯ ನಡಾವಳಿಯನ್ನು ಉಲ್ಲೇಖಿಸಿ ಆದ್ಯತೆಯ ನೆಲೆಯಲ್ಲಿ ಜಮೀನು ನೀಡಲು ಅವರು ಸೂಚಿಸಿದರು.
ಹಾಸನ, ಚಿಕ್ಕಮಗಳೂರು, ಉಡುಪಿ ನಂತರದ ದಕ್ಷಿಣ ಕನ್ನಡ ಭೇಟಿಯಲ್ಲಿ ದ. ಕ ಜಿಲ್ಲೆಯ ವಸತಿಶಾಲೆಗಳ ನಿರ್ವಹಣೆ ಬಗ್ಗೆ ಸಮಿತಿ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು. ಸಭೆಯಲ್ಲಿ ನಿಗಮ ಹಾಗೂ ಇಲಾಖೆಗಳು ಎದುರಿಸುತ್ತಿರುವ ವಿದ್ಯಾರ್ಥಿ ವೇತನ, ಸಿಲಿಂಡರ್ ಹಾಗೂ ಆಹಾರ ಪೂರೈಕೆ  ಸಮಸ್ಯೆಗಳನ್ನು ಅಧಿಕಾರಿಗಳು ಉಪಸಮಿತಿ ಸದಸ್ಯರ ಗಮನಕ್ಕೆ ತಂದರು. ಸಭೆಯಲ್ಲಿ ಸಮಿತಿ ಸದಸ್ಯರಾದ ಎಸ್ ಪಿ ಮಂಜುನಾಥ್, ಎಂ ಶ್ರೀನಿವಾಸ್, ರಮಾನಾಥ ರೈ, ಸಂಚಾಲಕ ಎಂ ರಾಮಯ್ಯ, ಉಪಕಾರ್ಯದರ್ಶಿ ಮಲ್ಲಪ್ಪ ಪಿ ಕಾಳೆ, ಅಪರ ಜಿಲ್ಲಾಧಿಕಾರಿ ಕೆ. ಎ ದಯಾನಂದ ಉಪಸ್ಥಿತರಿದ್ದರು.


 'ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಪರಿಸರ ಹಾನಿ ತಪ್ಪಿಸಿ'
 

ಪ್ಲಾಸ್ಟಿಕ್ ಬಳಕೆ ನಿಷೇಧ ; ಮಂಗಳೂರಿನ ಮಾಲ್ ಗಳಿಗೆ ಜಾಗೃತದಳ ದಾಳಿ

ಮಂಗಳೂ ರು,ನವೆಂಬರ್.08: ದಕ್ಷಿಣ ಕನ್ನಡ ಜಿಲ್ಲಾ ಡಳಿತ ಪ್ಲಾಸ್ಟಿಕ್ ಬಳಕೆ ಯನ್ನು  ಸಂಪೂರ್ಣ ವಾಗಿ ನಿಷೇ ಧಿಸಿದ್ದು, ನಿಷೇಧ ಅನು ಷ್ಠಾನಕ್ಕೆ  ಮಂಗ ಳೂರು ಮಹಾ ನಗರ ಪಾಲಿಕೆ ಅಧಿ ಕಾರಿ ಗಳು  ಹಾಗೂ ಪರಿಸರ ಸ್ನೇಹಿ ಜಾಗೃತ ದಳ  ಸದಸ್ಯರು ನಗ ರದ ಪ್ರಮುಖ ಮಾಲ್  ಗಳಲ್ಲಿ ಪ್ಲಾಸ್ಟಿಕ್ ಬಳಕೆ ಪರಿ ಶೀಲಿ ಸಲು ದಾಳಿ ಆರಂಭಿ ಸಿದ್ದಾರೆ. ಪ್ರತಿ ನಿತ್ಯ ಎರಡು ತಂಡ ಗಳು ನಗ ರದ ಪ್ರ ಮುಖ ಪ್ರದೇ ಶಗ ಳಲ್ಲಿ ಗಸ್ತು ತಿರು ಗುತ್ತಿದ್ದು ಪ್ಲಾಸ್ಟಿಕ್ ನಿಷೇ ಧಕ್ಕೆ ಜನರ ಸಹ ಕಾರ ಅಗತ್ಯ ಜಿಲ್ಲಾ ಡಳಿತ ಹೇಳಿದೆ.ಈಗಾ ಗಲೇ ಜಾಗೃತಿ ಕಾರ್ಯ ಕ್ರಮ ಗಳನ್ನು ನಡೆಸ ಲಾಗಿದೆ.



"ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಪರಿಸರ ಹಾನಿ ತಪ್ಪಿಸಿ"

Wednesday, November 7, 2012

ನಗರದಲ್ಲಿ ಪ್ಲಾಸ್ಟಿಕ್ ನಿರ್ಮೂಲನೆಗೆ ಸ್ವಸಹಾಯ ಗುಂಪುಗಳ ನೆರವು: ಡಾ.ಹರೀಶ್ ಕುಮಾರ್


ಮಂಗಳೂರು, ನವೆಂಬರ್.07 :ಮಂಗಳೂರು ನಗರವನ್ನು ಸ್ವಚ್ಛ ಸುಂದರವಾಗಿಡುವ ನಿಟ್ಟಿನಲ್ಲಿ ಮಂಗಳೂರು ಮಹಾನಗರಪಾಲಿಕೆಯು ಜಿಲ್ಲಾಡಳಿತದ ಆದೇಶದಂತೆ ನವೆಂಬರ್ 15 ರಿಂದ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಿದ್ದು, ಈ ಬಗ್ಗೆ ಸಾರ್ವಜನಿಕರು ಜಾಗೃತಿ ಮೂಡಿಸಲು  ಸ್ವಸಹಾಯ ಸಂಘಗಳ ನೆರವು ಬೇಕಾಗಿದೆ ಎಂದು ಮಂಗಳೂರು ಮಹಾನಗರಪಾಲಿಕೆ ಆಯುಕ್ತರಾದ ಹರೀಶ್ ಕುಮಾರ್ ಅವರು ತಿಳಿಸಿದ್ದಾರೆ.
          ಅವರು ಇಂದು ಮಹಾನಗರ ಪಾಲಿಕೆಯಲ್ಲಿ ನಡೆದ 20 ಕ್ಕೂ ಹೆಚ್ಚು ಸ್ವಸಹಾಯ ಸಂಘಗಳ ಪದಾಧಿಕಾರಿಗಳಿಗೆ  ಪ್ಲಾಸ್ಟಿಕ್ ನಿರ್ಮೂಲನೆಯಲ್ಲಿ ಸ್ವಸಹಾಯ ಗುಂಪುಗಳ ಸದಸ್ಯರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮನೆಮನೆಗೆ ತೆರಳಿ ಸಾರ್ವಜನಿಕರು ಪ್ಲಾಸ್ಟಿಕ್ ಬಳಕೆಯಿಂದ  ಮುಕ್ತರಾಗುವಂತೆ ಅವರಲ್ಲಿ ಅರಿವು ಮೂಡಿಸಬೇಕೆಂದರು.
        ಸ್ವಸಹಾಯ ಗುಂಪುಗಳ ಪ್ರತಿನಿಧಿಗಳಿಗೆ ಮಹಾನಗರಪಾಲಿಕೆ ವತಿಯಿಂದ ಗುರುತಿನ ಚೀಟಿಯನ್ನು ಉಪಮಹಾಪೌರರಾದ ಶ್ರೀಮತಿ ಅಮಿತ್ ಕಲಾ ಅವರು ವಿತರಿಸಿದರು. ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷೆ ಶ್ರೀಮತಿ ಆರ್.ಶಾಂತಾ,ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ  ಭಾಸ್ಕರ ಶೆಟ್ಟಿ, ವಿಪಕ್ಷ ನಾಯಕ  ದೀಪಕ್ ಪೂಜಾರಿ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಸಮಾರಂಭದಲ್ಲಿ ಸಮುದಾಯ ಕಲ್ಯಾಣಾಧಿಕಾರಿ ರೂಪಾ ಶೆಟ್ಟಿ ಸ್ವಾಗತಿಸಿದರು. ಚಿತ್ತರಂಜನ್ ದಾಸ್ ವಂದಿಸಿದರು.
      20 ಸ್ವಸಹಾಯ ತಂಡಗಳನ್ನು ರಚಿಸಲಾಗಿದ್ದು,ಪ್ರತೀ ತಂಡದಲ್ಲಿ 5 ಜನ ಸದಸ್ಯರಿದ್ದು ಅವರು ತಮ್ಮ ವ್ಯಾಪ್ತಿಯ ಮನೆಮನೆಗಳಿಗೆ ಹಾಗೂ ವಾಣಿಜ್ಯ ಉದ್ದಿಮೆದಾರರನ್ನು ಭೇಟಿ ಮಾಡಿ,ಪ್ಲಾಸ್ಟಿಕ್ ಬಳಕೆಯನ್ನು ಕೈಬಿಡುವಂತೆ ಮನವಿ ಮಾಡಲಿದ್ದಾರೆ. ನಗರದ ಪ್ರಮುಖ ಮಾರುಕಟ್ಟೆ ಪ್ರದೇಶಗಳಲ್ಲಿ ಗೃಹ ರಕ್ಷಕದಳ ಮತ್ತು ಪಾಲಿಕೆ ಅಧಿಕಾರಿಗಳ ನೇತೃತ್ವದಲ್ಲಿ ಬೆಳಿಗ್ಗೆ , ಮಧ್ಯಾಹ್ನ ಪ್ಲಾಸ್ಟಿಕ್ ಜಫ್ತಿಗಾಗಿ ಗಸ್ತು ನಡೆಸಲಾಗುತ್ತಿದೆ.ಇದಕ್ಕಾಗಿ ಜನರ ಸಹಕಾರವನ್ನು ಕೋರಿದೆ.




  'ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಪರಿಸರ ಹಾನಿ ತಪ್ಪಿಸಿ'


 

ಮಾಲಿನ್ಯರಹಿತ ದೀಪಾವಳಿ ಆಚರಿಸಲು ಮನವಿ


ಮಂಗಳೂರು, ನವೆಂಬರ್.07 :- ದೀಪಗಳ ಹಬ್ಬ ದೀಪಾವಳಿ ಮಾಲಿನ್ಯರಹಿತವಾಗಿರಲಿ ಎಂದು ಪ್ರಾದೇಶಿಕ ಪರಿಸರ ಅಧಿಕಾರಿಗಳು ಜಿಲ್ಲೆಯ ಜನತೆಯನ್ನು ವಿನಂತಿಸಿದ್ದಾರೆ.
             ಸಾರ್ವಜನಿಕ ಆಸ್ತಿ ಮತ್ತು ಆರೋಗ್ಯದ ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಶಬ್ದ ಮಾಲಿನ್ಯಗಳನ್ನು ನಿಯಂತ್ರಣದಲ್ಲಿಡುವ ಉದೇಶದಿಂದ ಪರಿಸರ ಸಂರಕ್ಷಣೆ ನಿಯಮಾವಳಿಗಳು 1999ರ ಅನ್ವಯ ಹಾಗೂ ಮಾನ್ಯ ಸರ್ವೋಚ್ಛ ನ್ಯಾಯಾಲಯದ ಆದೇಶ wp (c)  72/98, ದಿನಾಂಕ 21.7.05 ರ ಪ್ರಕಾರ 125 db (a), ಅಥವಾ 145 db (c) ಕ್ಕಿಂತ (ಪಟಾಕಿ ಸಿಡಿಸುವ ಸ್ಥಳದಿಂದ 4 ಮೀಟರ್ ಅಂತರದಲ್ಲಿ) ಹೆಚ್ಚು ಶಬ್ದ ಮಾಡುವ ಪಟಾಕಿ ಹಾಗೂ ಸಿಡಿಮದ್ದುಗಳನ್ನು ಮಾರಾಟ ಮಾಡುವುದಾಗಲಿ ಮತ್ತು ಉಪಯೋಗಿಸುವುದಾಗಲೀ ನಿಷೇಧಿಸಲ್ಪಟ್ಟಿದೆ.
ಆದ್ದರಿಂದ ಸಾರ್ವಜನಿಕರು 125 db (a)  145db(c) ಗಿಂತ ಹೆಚ್ಚು ಶಬ್ದ ಮಾಡುವ ಪಟಾಕಿ ಹಾಗೂ ಸಿಡಿ ಮದ್ದುಗಳನ್ನು ಉಪಯೋಗಿಸಬಾರದು ಎಂದು ಸ್ಪಷ್ಟಪಡಿಸಿದ್ದಾರೆ.
ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಶಬ್ದ ಉಂಟು ಮಾಡುವ ಪಟಾಕಿಗಳನ್ನು ನಿಷೇಧಿಸಲಾಗಿದೆ. ದಿನದ ಯಾವುದೇ ಸಮಯದಲ್ಲಿ ನಿಶಬ್ದ ವಲಯಗಳೆ0ದು ಘೋಷಿಸಲ್ಪಟ್ಟಿರುವ ಸ್ಥಳಗಳಲ್ಲಿ ಯಾವುದೇ ರೀತಿಯ ಸಿಡಿ ಮದ್ದು ಬಳಸಬಾರದು.
ಸಾರ್ವಜನಿಕರು ಪಟಾಕಿ ಹಾಗೂ ಸಿಡಿಮದ್ದುಗಳನ್ನು ವಸತಿ ಪ್ರದೇಶಗಳಲ್ಲಿ ಉಪಯೋಗಿಸುವ ಬದಲು ಮೈದಾನ ಗಳಲ್ಲಿ ಸಿಡಿಸಲು ಕೋರಲಾಗಿದೆ.

  'ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಪರಿಸರ ಹಾನಿ ತಪ್ಪಿಸಿ'

Tuesday, November 6, 2012

ಗ್ರಾಮೀಣರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಒದಗಿಸಿ-ರಿತೇಶ್ ಶೆಟ್ಟಿ


ಮಂಗಳೂರು,ನವೆಂಬರ್.06 : ``ಎಲ್ಲರಿಗೂ ಆರೋಗ್ಯ ,ಎಲ್ಲೆಡೆ ಆರೋಗ್ಯ ''ಇದು ಸರ್ಕಾರದ ಧ್ಯೇಯವಾಗಿದ್ದು, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಗ್ರಾಮೀಣರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರಕಿಸಲು ಜನಪ್ರತಿನಿಧಿಗಳು  ಸರ್ಕಾರದಿಂದ ಬಡವರಿಗೆ ದೊರಕುವ ಆರೋಗ್ಯ ಸೌಲಭ್ಯಗಳ ಬಗ್ಗೆ ಮಾಹಿತಿ ಅರಿತಿರುವುದು ಸೂಕ್ತ ಎಂದು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ರಿತೇಶ್ ಶೆಟ್ಟಿ ಅವರು ತಿಳಿಸಿದ್ದಾರೆ.
           ಅವರು ಇಂದು ಜಿಲ್ಲಾ ಪಂಚಾ ಯತ್ ನೇತ್ರಾ ವತಿ ಸಭಾಂ ಗಣ ದಲ್ಲಿ ಜಿಲ್ಲಾ ಆಡ ಳಿತ,ಜಿಲ್ಲಾ ಪಂಚಾ ಯತ್,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ( ಮಾಹಿತಿ ಶಿಕ್ಷಣ ಸಂಪರ್ಕ ವಿಭಾಗ) ವತಿಯಿಂದ ,  ಜಿಲ್ಲಾ ಪಂಚಾಯತ್ ಚುನಾಯಿತ ಪ್ರತಿನಿಧಿಗಳಿಗೆ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
     ಇಂದು ಜೀವನ ಶೈಲಿ ಹಾಗೂ ಆಹಾರ ಶೈಲಿಗಳ ಬದಲಾವಣೆಯಿಂದಾಗಿ ಹೊಸ ಹೊಸ ಕಾಯಿಲೆಗಳು ಉದ್ಭವವಾಗುತ್ತಿದ್ದು,ವೈದ್ಯಕೀಯ ರಂಗಕ್ಕೆ ಸವಾಲಾಗುತ್ತಿದೆ.ಇಂತಹ ಕ್ಲಿಷ್ಟ ಸಂದರ್ಭದಲ್ಲಿ ಗ್ರಾಮೀಣ ಜನರಿಗೆ ಉತ್ತಮ ಆರೋಗ್ಯ ದೊರಕಿಸಿ ಅವರನ್ನು ಆರೋಗ್ಯವಂತರನ್ನಾಗಿಸುವುದು ಚುನಾಯಿತ ಪ್ರತಿನಿಧಿಗಳ ಕರ್ತವ್ಯ ಎಂದರು.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಜನಾರ್ಧನ ಗೌಡ ಅವರು ಮಾತನಾಡಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸರ್ಕಾರದ ಆರೋಗ್ಯ ಕಾರ್ಯಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಜನಪ್ರತಿನಿಧಿಗಳು ಮುಂದಾಗುವಂತೆ ತಿಳಿಸಿದರು.

ಡಾ ಹೇಮಲತಾ ,ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿಯವರು ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಕುರಿತು ಮಾಹಿತಿ ನೀಡಿದರೆ,ಡಾ ರುಕ್ಮಿಣಿ ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ತಾಯಿ ಮಕ್ಕಳ ಆರೋಗ್ಯದ ಬಗ್ಗೆ ಮಾತನಾಡಿ ಜಿಲ್ಲೆಯಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮಗಳು ಅತ್ಯಂತ ಪರಿಣಾಮಕಾರಿಯಾಗಿದ್ದು  ಜನಸಂಖ್ಯೆ ಬೆಳವಣಿಗೆ ಪ್ರಮಾಣ ಶೇಕಡಾ 1.7 ಕ್ಕೆ ಇಳಿದಿದೆ. ಅಂತೆಯೇ ಜಿಲ್ಲೆಯಲ್ಲಿ 2001 ರ ಜನಗಣತಿಯಂತೆ 1000 ಪುರುಷರಿಗೆ 1020 ಮಹಿಳೆಯರಿದ್ದ ಪ್ರಮಾಣ 2011 ರ ಜನಗಣತಿಯಂತೆ 1000 ಪುರುಷರಿಗೆ 1018 ಕ್ಕೆ ಇಳಿದಿದೆಯೆಂದರು. ಜಿಲ್ಲೆಯಲ್ಲಿ  ಸಾಕ್ಷರತಾ ಪ್ರಮಾಣ ಹೆಚ್ಚಾಗಿರುವುದರಿಂದ ಶಿಶು ಮರಣ ಹಾಗೂ ತಾಯಂದಿರ ಮರಣ ಪ್ರಮಾಣ ಇಳಿಕೆಯಾಗಿದೆಯೆಂದರು.
ಡಾ.ಅರುಣ್ ಕುಮಾರ್ ಅವರು ಕೀಟಜನ್ಯ ರೋಗಗಳ ನಿಯಂತ್ರಣದ ಬಗ್ಗೆ ಮಾತನಾಡಿ ಡೆಂಘೀ ಜ್ವರ ಕೇವಲ ನಗರ ಪ್ರದೇಶಕ್ಕೆ ಮಾತ್ರ  ಸೀಮಿತ ಎಂಬ ಭಾವನೆ ಇತ್ತು.ಆದರೆ ಇಂದು ಡೆಂಘೀ ಜ್ವರ ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸಿದೆ ಎಂದು ತಿಳಿಸಿ ಯಾವುದೇ ಜ್ವರದ ಲಕ್ಷಣಗಳೂ ಕಂಡು ಬಂದರೂ ಕೂಡಲೇ ಸೂಕ್ತ ಚಿಕಿತ್ಸೆ ಪಡೆಯುವುದರಿಂದ ಮಾರಣಾಂತಿಕವಾಗುವುದನ್ನು ತಪ್ಪಿಸಬಹುದೆಂದರು. ಸೂಕ್ತ ಸಮಯದಲ್ಲಿ ಚುಚ್ಚುಮದ್ದು ನೀಡುತ್ತಿರುವುದರ ಪರಿಣಾಮ 5 ವರ್ಷಗಳಿಂದ ಜಿಲ್ಲೆಯಲ್ಲಿ ಮಂಗನ ಕಾಯಿಲೆ  ಕಂಡುಬಂದಿಲ್ಲ ಎಂದರು. ಜನಪ್ರತಿನಿಧಿಗಳು ಸಾರ್ವಜನಿಕರಿಗೆ ಮಲೇರಿಯಾ,ಡೆಂಘೀ,ಇಲಿಜ್ವರಗಳ ಕುರಿತು ಜಾಗೃತಿ ಮೂಡಿಸಲು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಲು ಕೋರಿದರು.
              ಡಾ ರಾಜೇಶ್ ಅವರು ಮಾತನಾಡಿ ಜಿಲ್ಲೆಯಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುವ ಸಾಂಕ್ರಾಮಿಕ ರೋಗಗಳೆಂದರೆ ಮಲೇರಿಯಾ ಹಾಗೂ ಡೆಂಘೀ ಜ್ವರ ಎಂದು ತಿಳಿಸಿದರು.ಮಲೇರಿಯಾ ಕಾಯಿಲೆಗೆ ನಿರ್ಧಿಷ್ಟ ಔಷಧಿ ಇದೆ.ಆದರೆ ಡೆಂಘಿಗೆ ನಿರ್ಧಿಷ್ಟ ಔಷಧಿಗಳು ಇನ್ನೂ ಲಭ್ಯವಾಗಿಲ್ಲ.ಆದ್ದರಿಂದ ಜನ ಡೆಂಘೀ ಬಾರದಂತೆ ಎಚ್ಚರ ವಹಿಸಬೇಕೆಂದು ತಿಳಿಸಿದರು.
 ಸಮಾರಂಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮೊಹ್ಮದ್ ನಜೀರ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ (ಪ್ರಭಾರ) ಡಾ.ರಾಮಕೃಷ್ಣ ರಾವ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರುಗಳು ಹಾಜರಿದ್ದರು.ಆರೋಗ್ಯ ಶಿಕ್ಷಣಾಧಿಕಾರಿ ಪಾಪೇಗೌಡ ಸ್ವಾಗತಿಸಿದರು.ಉಪ ಆರೋಗ್ಯ ಶಿಕ್ಷಣಾಧಿಕಾರಿ ಜ್ಯೋತಿ ವಂದಿಸಿದರು.
                
 

ವಿಪತ್ತು ನಿರ್ವಹಣೆ ಭಾರತೀಯರು ಸ್ಪಂದಿಸುವ ರೀತಿ ವಿಭಿನ್ನ

ಮಂಗಳೂರು, ನವೆಂಬರ್.06 : ವಿಪತ್ತುಗಳು ಸಂಭವಿಸಿದ ಸಂದರ್ಭವನ್ನು ರಚನಾತ್ಮಕವಾಗಿ ಹಾಗೂ ಯೋಜನಾತ್ಮಕವಾಗಿ ಎದುರಿಸಲು ನಮ್ಮ ಯೋಜನೆಗಳಿನ್ನೂ ಶೈಶಾವವಸ್ಥೆಯಲ್ಲಿದ್ದರೂ, ಭಾವನಾತ್ಮಕವಾಗಿ ನಮ್ಮವರೂ ಸ್ಪಂದಿಸುವ ರೀತಿ ಅತ್ಯದ್ಭುತ ಎಂದು ರಾಜ್ಯ ವಿಕೋಪ ನಿರ್ವಹಣೆಯ ಯೋಜನಾ ನಿರ್ದೇಶಕರಾದ ಡಾ. ಮಹೇಂದ್ರ ರಾಜಾರಾಂ ಅವರು ಹೇಳಿದರು.
   ವಿಕೋ ಪಗಳು ಸಂಭವಿ ಸಿದಾಗ, ಜಿಲ್ಲಾ ಡಳಿತ ಹಾಗೂ ಸ್ಥಳೀ ಯರು ಒಗ್ಗಟ್ಟಿ ನಿಂದ ನಿರ್ವ ಹಿಸುವ ರೀತಿ ಬೇರೆಲ್ಲ ದೇಶ ಗಳಿ ಗಿಂತ ಭಿನ್ನ. ಯೋಜನೆ ರೂಪಿ ಸುವಲ್ಲಿ ನಾವಿನ್ನೂ ಪ್ರಥಮ ಹಂತ ದಲ್ಲಿ ದ್ದರೂ, ಅವ ಘಡಗಳ ಸಂದ ರ್ಭದಲ್ಲಿ ಕಾರ್ಯೋ ನ್ಮುಖ ವಾಗುವ ರೀತಿ ಮಾದರಿ ಯಾಗಿ ರುತ್ತದೆ ಎಂದರು.ನಿನ್ನೆ ಯಿಂದ ಮಂಗ ಳೂರು ಮಹಾ ನಗರ ಪಾಲಿಕೆ ಸಭಾಂಗಣದಲ್ಲಿ ದಕ್ಷಿಣಕನ್ನಡ ಜಿಲ್ಲಾಡಳಿತದ ಸಹಯೋಗದೊಂದಿಗೆ ಗೃಹಸಚಿವಾಲಯ ದೆಹಲಿ ಆಯೋಜಿಸಿರುವ ಕಾಯರ್ಾಗಾರದ ಎರಡನೇ ದಿನ ಗುಂಪು ಚಟುವಟಿಕೆ ಮತ್ತು ಚರ್ಚೆಯ ವೇಳೆ ಮೇಲ್ಕಂಡ ಅಭಿಪ್ರಾಯ ವ್ಯಕ್ತವಾಯಿತು.
  ಯಾವುದೇ ಸಂದರ್ಭಗಳಿರಲಿ ವಿವಿಧ  ಇಲಾಖೆಗಳ ನಡುವೆ ಸಮನ್ವಯ  ಮತ್ತು ಮಾಹಿತಿ ವಿನಿಮಯಗಳು ಸುಸೂತ್ರವಾಗಿದ್ದರೆ  ಒಂದು ಹಂತದವರೆಗೆ ನಾವು ಯಶಸ್ವಿಯಾದಂತೆ. ಇಂತಹ ಸಂದರ್ಭಗಳಲ್ಲಿ ನೆರವಿಗೆ ಧಾವಿಸುವವರು ಜಿಲ್ಲಾಡಳಿತದಿಂದಾಗಲೀ ಸ್ಥಳೀಯರಿಂದಾಗಲೀ ಯಾವುದೇ ನೆರವು ಬಯಸದಿರುವುದು ಕಾರ್ಯಾಚರಣೆಯನ್ನು ಇನ್ನಷ್ಟು ಸುಲಲಿತಗೊಳಿಸುತ್ತದೆ ಎಂಬ ಅಭಿಪ್ರಾಯವೂ ಕಾರ್ಯಾಗಾರದಲ್ಲಿ ವ್ಯಕ್ತವಾಯಿತು.
   ಮಂಗಳೂರು ನಗರ ಪೆಟ್ರೊ ಕೆಮಿಕಲ್ ಝೋನ್ ನಿಂದಾಗಿ ಹೆಚ್ಚಿನ ಮುನ್ನೆ ಚ್ಚರಿಕೆ ವಹಿಸ ಬೇಕಿದೆ. ನೈ ಸರ್ಗಿಕ ಅಥವಾ ಮಾನವ ಕಾರಣ ದಿಂದಾ ಗುವ ವಿಪತ್ತು ಉಂಟಾ ದಲ್ಲಿ ತೆಗೆದು ಕೊಳ್ಳ ಬೇಕಾದ ತುರ್ತು ಕಾರ್ಯ ಗಳ ಕುರಿತು ಸು ದೀರ್ಘ ವಾಗಿ ವಿವ ರಿಸಿದ ದೆಹಲಿ ಯ ಪ್ರೊ. ರಾಜೇಶ್ ಭಾಟೀಯಾ ಅವರು, ವಿಪತ್ತು ನಿರ್ವಹಣೆಯ ಜವಾಬ್ದಾರಿ ಹಂಚಿಕೆ,ಕರ್ತವ್ಯಗಳು,ವಿಪತ್ತು ನಿರ್ವಹಣೆ ಮಾಹಿತಿಯನ್ನು ಮಾಧ್ಯಮಗಳಿಗೆ ಒದಗಿಸುವುದು,ವಿಪತ್ತಿಗೊಳಗಾದವರಿಗೆ ತುರ್ತು ಚಿಕಿತ್ಸೆ ತೆಗೆದುಕೊಳ್ಳಬೇಕಾದ ತುರ್ತು ಕಾರ್ಯಗಳು ಸೇರಿದಂತೆ ಆಹಾರ, ಸಂಚಾರ,ಸಂವಹನ ಕುರಿತು ಸವಿವರ ಮಾಹಿತಿ ನೀಡಿದರು.
    ಸಂಪನ್ಮೂಲ ವ್ಯಕ್ತಿಗಳಾಗಿ ಜೊತೆಗಿರುವ ಸುಧೀರ್ ರಾಥೋಡ್ ಅವರು , ಅವರು ವಿಪತ್ತು ನಿರ್ವಹಣೆಯಲ್ಲಿ ಸಮೂಹ ಚರ್ಚೆ ಹಾಗೂ ಸಮೂಹ ಕಸರತ್ತುಗಳ ಕುರಿತು ವಿವರಿಸಿದರು.ಸಣ್ಣ ಅಪಘಾತ ದೊಡ್ಡ ವಿಪತ್ತಾಗುವುದು ಹೇಗೆ ಎಂಬುದನ್ನು ವಿವರಿಸಿದರು.
     ಕಾರ್ಯಾಗಾರದಲ್ಲಿ ಅಪರ ಜಿಲ್ಲಾಧಿಕಾರಿ ಕೆ ಎ. ದಯಾನಂದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಓ.ಶ್ರೀರಂಗಪ್ಪ,  ಆಹಾರ ಮತ್ತು ನಾಗರೀಕ ಇಲಾಖೆ ಉಪನಿರ್ದೇಶಕರಾದ ಶರಣ ಬಸಪ್ಪ, ಸಹಾಯಕ ಆಯುಕ್ತರಾದ ಡಾ ವೆಂಕಟೇಶ್, ಪುತ್ತೂರು ವಿಭಾಗದ ಸಹಾಯಕ ಆಯುಕ್ತರಾದ ಪ್ರಸನ್ನ, ತಹಸೀಲ್ದಾರ್ ರವಿಚಂದ್ರ ನಾಯಕ್, ಅವರನ್ನೊಳಗೊಂಡಂತೆ ವಿವಿಧ ಇಲಾಖೆಗಳ ಹಲವು ಅಧಿಕಾರಿಗಳು ಪಾಲ್ಗೊಂಡರು.



  

Monday, November 5, 2012

ವಿಕೋಪ ನಿರ್ವಹಣೆಯಲ್ಲಿ ಸ್ಥಳೀಯ ತೀರ್ಮಾನಗಳೇ ಮುಖ್ಯ: ಐಜಿಪಿ

ಮಂಗಳೂರು,ನವೆಂಬರ್.05 : ವಿಕೋಪ ನಿರ್ವಹಣೆಯಲ್ಲಿ ಸ್ಥಳೀಯ ಅಧಿಕಾರಿಗಳ ಪಾತ್ರ ಹಾಗೂ ನಿರ್ಧಾರ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ ಎಂದು ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ ಹೇಳಿದರು.
ಇಂದು ಮಹಾ ನಗರ ಪಾಲಿ ಕೆಯ ಮಂಗಳಾ ಕೌನ್ಸಿಲ್ ಹಾಲ್ ನಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಮತ್ತು ಉಡುಪಿಯ ಅಧಿಕಾ ರಿಗಳಿಗೆ ಆಯೋಜಿ ಸಲಾ ಗಿದ್ದ ಐದು ದಿನ ಗಳ ವಿಕೋಪ ನಿರ್ವ ಹಣೆ ಕಾರ್ಯಾ ಗಾರ ವನ್ನು ಉದ್ಘಾ ಟಿಸಿ ಅವರು ಮಾತ ನಾಡು ತ್ತಿದ್ದರು. ಕಾರ್ಯಾ ಗಾರ ವನ್ನು ವಿಕೋಪ ನಿರ್ವಹಣೆ ರಾಷ್ಟ್ರೀಯ ಸಂಸ್ಥೆ ನವದೆಹಲಿ ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತ ಜಂಟಿಯಾಗಿ ಆಯೋಜಿಸಿದೆ.
ತಮ್ಮ ಕಾರ್ಯಾವಧಿಯಲ್ಲಿ ಎದುರಿಸಿರುವ ವಿಕೋಪಗಳ ನಿರ್ವಹಣೆಯ ಅನುಭವಗಳನ್ನು ಹಂಚಿಕೊಂಡ ಅವರು, ಜನಸಾಮಾನ್ಯರು ಎಲ್ಲಾ ಸಂದರ್ಭಗಳಲ್ಲಿಯೂ 100ಕ್ಕೆ ಫೋನ್ ಮಾಡಿದರೂ, ಎಲ್ಲ ಸಂದರ್ಭಗಳನ್ನು ಪೊಲೀಸರಿಂದ ಮಾತ್ರ ನಿಭಾಯಿಸಲು ಕಷ್ಟ ಸಾಧ್ಯ. ಹಾಗಾಗಿ ಸ್ಥಳೀಯ ಅಧಿಕಾರಿಗಳ ನಡುವೆ ಸಮನ್ವಯ ಮತ್ತು ಮಾಹಿತಿ ವಿನಿಮಯ ಅತೀ ಅಗತ್ಯ ಎಂದು ಹೇಳಿದರು.
ಮಂಗಳೂರು ಇಂದು ಪೆಟ್ರೋ ಕೆಮಿ ಕಲ್ ಝೋನ್ ಹಾಗೂ ಪ್ರಮುಖ ವಾಣಿಜ್ಯ ನಗರಿ ಯಾಗಿ ರುವು ದರಿಂದ ವಿಕೋಪ ನಿರ್ವ ಹಣೆ ಸವಾ ಲಾಗಿ ಪರಿಣ ಮಿಸಿದೆ ಎಂದ ಅವರು, ಪ್ರಾ ಕೃತಿಕ ಅಥವಾ ಮಾನವ ನಿರ್ಮಿತ ವಿಕೋ ಪಗ ಳಲ್ಲಿ ಎಲ್ಲರೂ ಹೊಣೆ ಯರಿತು ವರ್ತಿ ಸುವು ದರಿಂದ ಎಲ್ಲ ರಿಗೂ ಅನು ಕೂಲ ವಾಗ ಲಿದೆ ಎಂದರು.
ವಿಕೋಪ ನಿರ್ವಹಣೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸಲು ಇಂತಹ ಕಾರ್ಯಾಗಾರಗಳು ಮತ್ತು ಅಣಕು ಪ್ರಯೋಗಗಳು ಅಗತ್ಯ. ಇಂತಹ ಪ್ರಯೋಗಗಳು ನಮ್ಮ ವ್ಯವಸ್ಥೆಯನ್ನು ಬಲಿಷ್ಠಗೊಳಿಸುವುದಲ್ಲದೆ ಉತ್ತಮ ಪಡಿಸುವ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದರು.
ಮೇಯರ್ ಗುಲ್ಜಾರ್ ಭಾನು ಅಧ್ಯಕ್ಷೀಯ ಸ್ಥಾನದಿಂದ ಶುಭ ಹಾರೈಸಿದರು. ಯುನೈಟೆಡ್ ಸ್ಟೇಟ್ಸ್ ನ ವಿದೇಶಾಂಗ ಸೇವೆಯ ಜೇಮ್ಸ್ ವಾರ್ನ್  ಪೆನೆ ಉಪಸ್ಥಿತರಿದ್ದರು. ಅಪರ ಜಿಲ್ಲಾಧಿಕಾರಿಗಳು ಕಾರ್ಯಕ್ರಮ ನಿರ್ವಹಿಸಿದರು. ಮಹಾನಗರಪಾಲಿಕೆ ಆಯುಕ್ತರು ಉಪಸ್ಥಿತರಿದ್ದರು. ಸಹಾಯಕ ಆಯುಕ್ತರಾದ ಡಾ ವೆಂಕಟೇಶ್ ಸ್ವಾಗತಿಸಿದರು.
ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ರಾಜೇಶ್ ಭಾಟಿಯಾ ಮತ್ತು ಸುಧೀರ್ ರಾಥೋಡ್ ಪಾಲ್ಗೊಂಡರು.