Wednesday, November 21, 2012

` ಭ್ರೂಣ ಹತ್ಯೆಯಿಂದ ಅಮ್ಮನ ಜೀವಕ್ಕೂ ಕುತ್ತು ' - ಡಾ. ಪೂರ್ಣಿಮಾ

ಮಂಗಳೂರು, ನವೆಂಬರ್.21 : ಹಲವು ಕಾರಣಗಳಿಂದ ಭ್ರೂಣ ಲಿಂಗ ಹತ್ಯೆ ಇಂದು ಪ್ರಚಲಿತದಲ್ಲಿದ್ದು,ಇಂತಹ ಘಟನೆಗಳು ತಾಯಿಯ ಪ್ರಾಣಕ್ಕೂ ಕುತ್ತು ತರಬಲ್ಲದು ಎಂದು ಲೇಡಿಗೋಷನ್ ಆಸ್ಪತ್ರೆ ಹಿರಿಯ ಮಹಿಳಾ ವೈದ್ಯಾಧಿಕಾರಿ ಡಾ.ಪೂರ್ಣಿಮಾ ಇವರು ತಿಳಿಸಿದ್ದಾರೆ.
   ಅವರು ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗ ಳೂರು,ಜಿಲ್ಲಾ ಆಡ ಳಿತ,ದ.ಕ.ಜಿಲ್ಲಾ ಪಂಚಾ ಯತ್ ಇವರ ಸಹ ಯೋಗ ದೊಂದಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾ ಣಾಧಿ ಕಾರಿಗಳ ಕಚೇರಿ ಯಲ್ಲಿ ಹಮ್ಮಿ ಕೊಂಡಿದ್ದ ` ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯ್ದೆ 1994 ''ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ಭಾಗವಹಿಸಿ ಮಹಿಳೆ ಮತ್ತು ಮಕ್ಕಳ ಆರೋಗ್ಯ ರಕ್ಷಣೆಯಲ್ಲಿ  ಲಿಂಗ ತಾರತಮ್ಯದ ಪ್ರಭಾವ ಎಂಬ ವಿಷಯ ಕುರಿತು ಮಾತನಾಡಿದರು.
            ಭ್ರೂಣ ಹತ್ಯೆ ಕೊಲೆಗೆ ಸಮಾನವಾದ ಅಪರಾಧವಾಗಿದು,್ದ ಇದನ್ನು ಮಾಡುವವರಿಗೆ ,ಪ್ರಚೋದನೆ ನೀಡುವವರಿಗೆ ದಂಡ ಸಹಿತ ಸೆರೆವಾಸದ  ಶಿಕ್ಷೆ ನೀಡಲಾಗುವುದೆಂದರು. ಸಮಾಜದಲ್ಲಿ ಹೆಣ್ಣು ಗಂಡುಗಳ ಅನುಪಾತ ಸಮಾನವಾಗಿದ್ದರೆ ಮಾತ್ರ ಸಮಾಜದಲ್ಲಿ ಭದ್ರತೆ ಮೂಡಲು ಸಾಧ್ಯ.ಆದರೆ ಭ್ರೂಣ ಹತ್ಯೆಗಳಿಂದಾಗಿ ಇಂದು ಹೆಣ್ಣು ಗಂಡುಗಳ ಅನುಪಾತದಲ್ಲಿ ವ್ಯತ್ಯಾಸವಾಗಿ ಸಮಾಜದಲ್ಲಿ ಹೆಣ್ಣು ಶೋಷಣೆಗೊಳಗಾಗುತ್ತಿದ್ದಾಳೆ ಎಂಬುದಾಗಿ ತಿಳಿಸಿದರು. ತಂದೆ ತಾಯಿಯರು ತಮ್ಮ ಮಕ್ಕಳನ್ನು ಹೆಣ್ಣು-ಗಂಡು ಎಂಬ ತಾರತಮ್ಯವಿಲ್ಲದೆ ಬೆಳೆಸಬೇಕು.ಇದರಿಂದ ಸಮಾಜದಲ್ಲಿ ಇಬ್ಬರೂ ಗೌರವಯುತರಾಗಿ ಬದುಕಲು ಸಹಕಾರಿಯಾಗಲಿದೆಯೆಂದರು.
     ಶ್ರೀಮತಿ ವಿಜಯ, ವಕೀ ಲರು ಇವರು ಮಾತ ನಾಡಿ ಆಧುನಿಕ ತಂತ್ರ ಜ್ಞಾನ  ಸ್ಕ್ಯಾ ನಿಂಗ್ ಗರ್ಭ ದಲ್ಲಿ ರುವ ಮಗು ವಿನ ಆರೋಗ್ಯ ಪರೀ ಕ್ಷೆಗೆ ಮಾತ್ರ ಬಳಸ ಬೇಕೇ ಹೊರತು ಮಗು ವಿನ ಲಿಂಗದ ಬಗ್ಗೆ ತಾಯಿ ಗಾಗಲೀ ತಂದೆ ಗಾಗಲೀ ತಿಳಿಸು ವುದು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ನಿಷೇಧ ಕಾಯಿದೆ 1994 ರಂತೆ ಶಿಕ್ಷಾರ್ಹ ಅಪರಾಧವಾಗುತ್ತದೆ ಎಂದು ತಿಳಿಸಿದರು.
ಎಲ್ಲಾ ಆರೋಗ್ಯ ಸಂಸ್ಥೆಗಳು ತಮ್ಮ ಸಂಸ್ಥೆಗಳಲ್ಲಿ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಶಿಕ್ಷಾರ್ಹ ಅಪರಾಧ ಎಂಬ ಬಗ್ಗೆ ಬಿತ್ತಿ ಪತ್ರಗಳನ್ನು ಬೋರ್ಡ್ ಗಳನ್ನು ತೂಗುಹಾಕುವುದು ಕಡ್ಡಾಯ ಎಂದು ತಿಳಿಸಿ, ಕೌನ್ಸಿಲಿಂಗ್ ಸೆಂಟರ್ಗಳು,ಆಸ್ಪತ್ರೆಗಳು,ಲ್ಯಾಬೋರೇಟರಿಗಳು ಸಕ್ಷಮ ಪ್ರಾಧಿಕಾರದಲ್ಲಿ ಕಡ್ಡಾಯವಾಗಿ ನೋಂದಾಯಿಸಿರಬೇಕು. ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಹಚ್ಚುವ ವೈದ್ಯರು,ಸಿಬ್ಬಂದಿಗಳನ್ನು ವಿಚಾರಣೆ ಮಾಡದೆಯೇ ಸಕ್ಷಮ ಪ್ರಾಧಿಕಾರದ ಆದೇಶದಂತೆ ಬಂಧಿಸಬಹುದಾಗಿದೆ. ಆದ್ದರಿಂದ ವೈದ್ಯರು ಮಾನವೀಯತೆಯಿಂದ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ಹಚ್ಚುವ ಹೇಯ ಕಾರ್ಯಕ್ಕೆ ಮುಂದಾಗಬಾರದೆಂದರು.
  ಮಂಗಳೂರಿನ ಪ್ರಜ್ಞಾ ಸಲಹಾ ಕೇಂದ್ರ ನಿರ್ದೇಶಕರಾದ ಪ್ರೊ.ಹಿಲ್ಡಾ ರಾಯಪ್ಪನ್ ಅವರು ಭ್ರೂಣ ಹತ್ಯೆ ತಡೆಗಟ್ಟುವಲ್ಲಿ ಸಂಘ ಸಂಸ್ಥೆ ಹಾಗೂ ಸಮುದಾಯದ ಪಾತ್ರ ಎಂಬ ಕುರಿತು ಮಾತನಾಡಿದರು.
       ಪ್ರಾಸ್ತಾವಿಕವಾಗಿ ಮಾತನಾಡಿದ ಆರ್ಸಿಹೆಚ್ ಅಧಿಕಾರಿ  ಡಾ.ರುಕ್ಮಿಣಿ ಅವರು ಉತ್ತಮ ಸಮಾಜಕ್ಕೆ ಗಂಡುಹೆಣ್ಣುಗಳ ಪ್ರಾಕೃತಿಕ ಅನುಪಾತ ಅಗತ್ಯ ಎಂದರು. ಕಾರ್ಯಾಗಾರದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಭಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮಕೃಷ್ಣ ರಾವ್ ಅವರು ಮಾತನಾಡಿ ಅಲ್ಟ್ರಾಸೌಂಡ್ ತಂತ್ರಜ್ಞಾನ ಇಂದು ಭ್ರೂಣಲಿಂಗ ಪತ್ತೆಯಂತಹ ಅಪರಾಧಗಳಿಗೆ ಬಳಕೆಯಾಗುತ್ತಿರುವುದು ಆತಂಕಕಾರಿಯಾಗಿದೆ ಎಂದರು.ಕಾರ್ಯಾಗಾರವನ್ನು ಜಿಲ್ಲಾ ವೆನ್ಲಾಕ್ ಆಸ್ಪತ್ರೆ,ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ. ಸರೋಜ ಉದ್ಘಾಟಿಸಿದರು. ಆರೋಗ್ಯ ಶಿಕ್ಷಣಾಧಿಕಾರಿ ಪಾಪೇಗೌಡ ಸ್ವಾಗತಿಸಿದರು. ಶ್ರೀಮತಿ ಜ್ಯೋತಿ ವಂದಿಸಿದರು.