Friday, November 9, 2012

ವಿಕೋಪ ನಿರ್ವಹಣೆಯ ತರಬೇತಿಗೆ ಅಧಿಕಾರಿಗಳ ಉತ್ತಮ ಸ್ಪಂದನ: ಜೇಮ್ಸ್ ವಾರ್ನ್ ಪೆನೆ

ಮಂಗಳೂರು,ನವೆಂಬರ್.09: ಮಂಗಳೂರಿನಲ್ಲಿ ನಡೆದ ವಿಕೋಪ ನಿರ್ವಹಣೆಯ ತರಬೇತಿಗೆ ಅಧಿಕಾರಿಗಳು ಉತ್ತಮವಾಗಿ ಸ್ಪಂದಿಸಿದ್ದಾರೆಎಂದು  ಅಮೆರಿಕಾದ ವಿದೇಶಾಂಗ ಸೇವೆಯ ಜೇಮ್ಸ್ ವಾರ್ನ್ ಪೆನೆ ಹೇಳಿದರು.
 ಮಂಗ ಳೂರು ಮಹಾ ನಗರ ಪಾಲಿ ಕೆಯ ಮಂಗಳಾ ಸಭಾಂ ಗಣ ದಲ್ಲಿ  ಗೃಹ ಸಚಿವಾ ಲಯ ನವ ದೆಹಲಿ, ಅಮೇ ರಿಕಾ ವಿದೇ ಶಾಂಗ ಸಚಿ ವಾಲಯ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಡಳಿತ  ಸಂಯುಕ್ತ ಆಶ್ರಯದಲ್ಲಿ  ನಡೆದ ರಾಷ್ಟ್ರೀಯ ವಿಕೋಪ ನಿರ್ವಹಣಾ 5 ದಿನಗಳ ಕಾರ್ಯಾಗಾರ ಇಂದು ಸಂಪನ್ನಗೊಂಡಿತ್ತು.  ಸುದ್ದಿಗಾರರಿಗೆ ಕಾರ್ಯಾಗಾರದ ಬಗ್ಗೆ ಮಾಹಿತಿ ನೀಡಿದ ಜೇಮ್ಸ್ ಅವರು ಅಮೆರಿಕಾದಲ್ಲಿ ರೂಪುಗೊಂಡ ಈ ಪರಿಕಲ್ಪನೆಯನ್ನು ರಾಷ್ಟ್ರೀಯ ಮಟ್ಟದಲ್ಲಿ ಭಾರತದಲ್ಲಿ ಆಧಿಕಾರಿಗಳಿಗೆ ತರಬೇತಿ ನೀಡಿ ಸವಿವರವಾಗಿ ತಿಳಿ ಹೇಳಲಾಗಿದೆ. ಅಮೆರಿಕಾದ ನಗರಗಳಿಗೆ ಹೋಲಿಸಿದರೆ ಮಂಗಳೂರಿನಲ್ಲಿ ಅತೀ ಹೆಚ್ಚು ಟ್ರಾಫಿಕ್ ದಟ್ಟನೆ ಇದೆ ಮತ್ತು ಈ ಪ್ರದೇಶದಲ್ಲಿ ಹೆಚ್ಚು ಮಳೆ ಇರುವುದರಿಂದ ಕೃತಕ ಪ್ರವಾಹದ ಸಂಭವ ಇದೆ. ವಿಮಾನ ನಿಲ್ದಾಣ ಮತ್ತು ಬಂದರು ಪ್ರದೇಶವಾಗಿರುವುದರಿಂದ ನಗರ ವಿಕೋಪ ನಿರ್ವಹಣೆಗೆ ಸಜ್ಜಾಗುವುದು ಅತೀ ಅಗತ್ಯ ಎಂದು ಅವರು ಅಭಿಪ್ರಾಯಪಟ್ಟರು.
                   ಐದು ದಿನಗಳ  ರಾಷ್ಟ್ರೀಯ ವಿಪತ್ತು ನಿರ್ವಹಣಾ ಸಂಸ್ಥೆಯ ತರಬೇತುದಾರ ಕರ್ನಲ್ ಪಿ.ಕೆ. ಪಾಟಕ್  ಮಾತನಾಡಿ 1970ರಲ್ಲಿ ಅಮೆರಿಕಾದಲ್ಲಿ ವಿಕೋಪ ಪ್ರತಿಕ್ರಿಯೆ ವ್ಯವಸ್ಥೆಯನ್ನು ಜಾರಿಗೆ ತರಲಾಗಿದ್ದು, ಇತ್ತೀಚಿನ ವರ್ಷಗಳಲ್ಲಿ ಇದನ್ನು ಏಷ್ಯಾದ ರಾಷ್ಟ್ರಗಳಲ್ಲಿಯೂ ಅಳವಡಿಸಿಕೊಳ್ಳಲಾಗುತ್ತಿದೆ. ಭಾರತದಲ್ಲಿ ಐದು ರಾಜ್ಯಗಳನ್ನು ಆಯ್ಕೆ ಮಾಡಿಕೊಂಡಿದ್ದು ಪ್ರಥಮ ಹಂತದ ತರಬೇತಿಯನ್ನು ಮಂಗಳೂರಿನಲ್ಲಿ ನಡೆಸಲಾಗಿದೆ ಎಂದರು.
       ವಿಕೋಪಗಳು ಸಂಭವಿಸಿದಾಗ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅವುಗಳನ್ನು ಸಮರ್ಥವಾಗಿ ಎದುರಿಸಲು ವೈಜ್ಞಾನಿಕ ಮಾದರಿಯ ತಂಡಗಳನ್ನು ರಚಿಸಿ ಕಾರ್ಯಗತಗೊಳಿಸುವ ಮೂಲಕ  ಅಗತ್ಯ ಕ್ರಮಗಳನ್ನು  ಕೈಗೊಳ್ಳಲಾಗುವುದು ಎಂದು  ಅಪರ ಜಿಲ್ಲಾಕಾರಿ ದಯಾನಂದ ಕೆ. ಹೇಳಿದರು. ಜಿಲ್ಲೆಗೆ ವಿಕೋಪ ನಿರ್ವಹಣೆಗೆ ಪ್ರಸಕ್ತ ಸಾಲಿನಲ್ಲಿ ಬಿಡುಗಡೆಯಾದ 9 ಕೋಟಿ ಹಣದಲ್ಲಿ ಈಗಾಗಲೇ ನಾಲ್ಕು ಕೋಟಿ ರೂ.ಗಳು ಖರ್ಚಾಗಿದೆ. ನದಿ ಪ್ರವಾಹ ಮತ್ತು ಅರಬ್ಬೀ ಸಮುದ್ರದ ಕಿನಾರೆಯನ್ನು ದೃಷ್ಟಿಯಲ್ಲಿಕೊಂಡು ಜಿಲ್ಲಾಡಳಿತ ಎರಡು ಬೋಟ್ ಗಳನ್ನು ಖರೀದಿಸಿದೆ. ಒಂದು ಬೋಟನ್ನು ಬಂಟ್ವಾಳದಲ್ಲಿ ಮತ್ತು ಇನ್ನೊಂದನ್ನು  ಗೃಹ ರಕ್ಷಕದಳಕ್ಕೆ ನೀಡಲಾಗಿದೆ. ವಿಕೋಪ ನಿರ್ವಹಣೆಯಲ್ಲಿ ದಕ್ಷಿಣ ಕನ್ನಡವನ್ನು ಸನ್ನದ್ಧಗೊಳಿಸುವ ದೃಷ್ಟಿಯಿಂದ ವಿಕೋಪ ನಿರ್ವಹಣೆ ತರಬೇತಿಯನ್ನು ಆಯೋಜಿಸಲಾಗಿತ್ತು ಎಂದು ಮಾಹಿತಿ ನೀಡಿದರು.
ಐದು ದಿನಗಳ ಕಾಲ ನಡೆದ ತರಬೇತಿಯಲ್ಲಿ ವಿವಿಧ ಅಣಕು ಘಟನೆಗಳಿಗೆ ಜಿಲ್ಲಾಡಳಿತ ವ್ಯಾಪ್ತಿಯ ಸುಮಾರು 34 ಅಧಿಕಾರಿಗಳ ತಂಡ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂದು ಗಮನಿಸಲಾಯಿತು.
ಇಂದು  ನಡೆದ ಅಣಕು ಕಾರ್ಯಾ ಚರಣೆ ಯಲ್ಲಿ ಬಿರು ಗಾಳಿ ಮತ್ತು ಸಮುದ್ರ ದಲ್ಲಿ ವಾಯು ಭಾರ ಕುಸಿತ ನಡೆ ದಲ್ಲಿ ಕೈ ಗೊಳ್ಳ ಬೇಕಾದ ಕ್ರಮ ಗಳ ಬಗ್ಗೆ ತಂಡ ಗಳನ್ನು ರಚಿಸಿ ತರ ಬೇತಿ ನೀಡ ಲಾಯಿತು. ನಿರ್ವ ಹಣಾ ತಂಡದ ನೇ ತೃತ್ವ ವನ್ನು ನಂಜಪ್ಪ, ಯೋಜನಾ ತಂಡದ ನೇತೃತ್ವವನ್ನು ಡಾ. ಒ.ಶ್ರೀರಂಗಪ್ಪ, ಸೌಕರ್ಯ ವಿಭಾಗದ ಉಸ್ತುವಾರಿಯನ್ನು ಕಾಶೀನಾಥ್ ವಹಿಸಿಕೊಂಡಿದ್ದರು.  ಇನ್ಸಿಡೆಂಟ್ ಕಮಾಂಡರ್ಆಗಿ  ಮಂಗಳೂರು ಉಪವಿಭಾಗಾಧಿಕಾರಿ ಡಾ. ವೆಂಕಟೇಶ್  ಸಾರಥ್ಯ ವಹಿಸಿದ್ದರು.
  ಕೇಂದ್ರಾಡಳಿತ ಪ್ರದೇಶಗಳ ನಾಗರಿಕ ಸೇವೆಗಳ ವಿಭಾಗದ ಅಧಿಕಾರಿ ರಾಜೇಶ್ ಭಾಟಿಯಾ, ಮಹಾರಾಷ್ಟ್ರದ ಪ್ರಾದೇಶಿಕ ತರಬೇತಿ ಸಂಸ್ಥೆಯ ಅದಿಕಾರಿ ಸುರ್ ರಾಥೋಡ್, ಜೇಮ್ಸ್ ವಾರ್ನ್ ಪೆನೆ ಮತ್ತು ಸಿ. ಬಾಲಾಜಿ ತರಬೇತಿಯ ಪರಿಶೀಲನೆ ನಡೆಸಿದರು.

 'ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ, ಪರಿಸರ ಹಾನಿ ತಪ್ಪಿಸಿ'