Thursday, February 28, 2013

ಸ್ಥಳೀಯ ಸಂಸ್ಥೆಗಳ ಚುನಾವಣೆ- ಕಣದಲ್ಲಿ 677 ಅಭ್ಯರ್ಥಿಗಳು

ಮಂಗಳೂರು, ಫೆಬ್ರವರಿ. 28:-ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ 2013 -ದಕ್ಷಿಣಕನ್ನಡ ಜಿಲ್ಲೆಯಲ್ಲಿ ಅಂತಿಮವಾಗಿ ಕಣದಲ್ಲಿ 677 ಅಭ್ಯರ್ಥಿಗಳು ವಿವಿಧ ರಾಜಕೀಯ ಪಕ್ಷಗಳಿಂದ ಹಾಗೂ ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧೆಯಲ್ಲಿದ್ದಾರೆ. 
ಮಂಗಳೂರು ಮಹಾನಗರಪಾಲಿಕೆಯ 60 ವಾರ್ಡುಗಳಿಗೆ ಚುನಾವಣೆ ನಡೆಯುತ್ತಿದ್ದು  ಕಾಂಗ್ರೆಸ್ ನಿಂದ 60, ಬಿಜೆಪಿ 60, ಜೆಡಿಎಸ್ 48, ಸಿಪಿಐ 1 ,ಸಿಪಿಐ(ಎಂ) 14 ಸ್ವತಂತ್ರರು 18 ಜೆಡಿಯು 2,ಬಿಎಸ್ಆರ್ 14,ಎಸ್ಡಿಪಿಐ 8,ಕೆಜೆಪಿ 11,ಡಬ್ಲ್ಯುಪಿಐ 6 ಮತ್ತು ಐಯುಎಂಲಿ. 1 ಸೇರಿ ಒಟ್ಟು 243 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಮೂಡಬಿದ್ರೆ ಪುರಸಭೆಯ 23 ವಾರ್ಡ್ ಗಳ ಚುನಾವಣೆಗೆ ಕಾಂಗ್ರೆಸ್ 22, ಬಿಜೆಪಿ 22 ಜನತಾದಳ(ಎಸ್)23,ಸಿಪಿಐ(ಎಂ)3,ಸ್ವತಂತ್ರರು 7 ಸೇರಿದಂತೆ ಒಟ್ಟು 77 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.
27 ವಾರ್ಡ್ ಗಳನ್ನು ಹೊಂದಿರುವ  ಉಳ್ಳಾಲ ಪುರಸಭೆ ಚುನಾವಣೆಗೆ ಕಾಂಗ್ರೆಸ್ 27, ಬಿಜೆಪಿ 18,ಜನತಾದಳ (ಎಸ್) 19,ಸಿಪಿಐ(ಎಂ) 7 ಸ್ವತಂತ್ರರು 9,ಎಸ್ಡಿಪಿಐ9,ಕೆಜೆಪಿ 4 ಸೇರಿದಂತೆ  ಒಟ್ಟು 93 ಉಮೇದುವಾರರು ಅಂತಿಮ ಕಣದಲ್ಲಿದ್ದಾರೆ.
ಬಂಟ್ವಾಳ ಪುರಸಭೆಯ 23 ವಾರ್ಡ್ ಗಳ ಚುನಾವಣೆಗೆ ಕಾಂಗ್ರೆಸ್ 22, ಬಿಜೆಪಿ 23,ಜನತಾದಳ (ಎಸ್)10,ಸಿಪಿಐ1,ಸಿಪಿಐ(ಎಂ)1 .ಎಸ್ಡಿಪಿಐ 13,ಕೆಜೆಪಿ4 ಅಭ್ಯರ್ಥಿಗಳು ಸೇರಿ ಒಟ್ಟು 83 ಅಭ್ಯರ್ಥಿಗಳು ಸ್ಪರ್ಧೇಯಲ್ಲಿದ್ದಾರೆ.
ಪುತ್ತೂರು ಪುರಸಭೆಯಲ್ಲಿ ಒಟ್ಟು 27 ವಾರ್ಡ್ ಗಳಿದ್ದು ಇಲ್ಲಿ ಕಾಂಗ್ರೆಸ್ 27,ಬಿಜೆಪಿ 27,ಜನತಾದಳ (ಎಸ್)18,ಸಿಪಿಐ(ಎಂ) 1ಸ್ವತಂತ್ರರು 5,ಎಸ್ಡಿಪಿಐ 10 ಸೇರಿ 88 ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.
ಬೆಳ್ತಂಗಡಿ ಪಟ್ಟಣ ಪಂಚಾಯತ್ ಕನಿಷ್ಠ 11 ವಾರ್ಡ್ ಗಳನ್ನು ಹೊಂದಿದ್ದು ಇಲ್ಲಿ ಕಾಂಗ್ರೆಸ್ ,ಬಿಜೆಪಿ ಪಕ್ಷಗಳು ಎಲ್ಲಾ 11 ಸ್ಥಾನಗಳಿಗೂ ತಮ್ಮ ಅಭ್ಯರ್ಥಿಗಳನ್ನು ಸ್ಪರ್ಧೆಗೆ ಇಳಿಸಿದ್ದಾರೆ.ಜನತಾದಳ (ಎಸ್)3,ಸಿಪಿಐ(ಎಂ)6,ಸ್ವತಂತ್ರರು 1,ಎಸ್ ಡಿಪಿಐ6 ಸೇರಿದಂತೆ ಒಟ್ಟು 38 ಅಭ್ಯರ್ಥೀಗಳು ಕಣದಲ್ಲಿದ್ದಾರೆ.
ಸುಳ್ಯ ಪಟ್ಟಣ ಪಂಚಾಯತ್ 18 ವಾರ್ಡುಗಳ ಚುನಾವಣೆಗೆ ಕಾಂಗ್ರಸ್ 17,ಬಿಜೆಪಿ 18 ಜನತಾದಳ(ಎಸ್)9 ಸಿಪಿಐ(ಎಂ)1,ಸ್ವತಂತ್ರರು6 ಕೆಜೆಪಿ 4 ಅಭ್ಯರ್ಥಿಗಳು ಸೇರಿದಂತೆ ಒಟ್ಟು 55 ಉಮೇದುವಾರರು ಕಣದಲ್ಲಿದ್ದಾರೆ.

ಚುನಾವಣಾ ವೀಕ್ಷಕರಾಗಿ-ಎ.ಕೆ.ಮೊನ್ನಪ್ಪ

ಮಂಗಳೂರು, ಫೆಬ್ರವರಿ. 28:- ನಗರ ಸ್ಥಳಿಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ 2013, ಮಂಗಳೂರು ಮಹಾನಗರಪಾಲಿಕೆಯ ಚುನಾವಣೆಗೆ  ಎ. ಕೆ. ಮೊನ್ನಪ್ಪ, ಭಾ.ಆ.ಸೇ, ವ್ಯವಸ್ಥಾಪಕ ನಿರ್ದೇಶಕರು, ಹಟ್ಟಿ ಚಿನ್ನದ ಗಣಿ ನಿ0ುಮಿತ, ಇವರನ್ನು ಚುನಾವಣಾ ವೀಕ್ಷಕರೆಂದು ರಾಜ್ಯ ಚುನಾವಣಾ ಆಯೋಗವು ನೇಮಿಸಿರುವ ಹಿನ್ನಲೆಯಲ್ಲಿ ದಿನಾಂಕ: 28-02-2013 ರಂದು ಚುನಾವಣಾ ವೀಕ್ಷಕರಾಗಿ ಅಧಿಕಾರ ಸ್ವೀಕರಿಸಿಕೊಂಡಿರುತ್ತಾರೆ.  ಚುನಾವಣಾ ಅಭ್ಯರ್ಥಿಗಳು, ಅವರ ಏಜೆಂಟರು ಹಾಗೂ ಸಾರ್ವಜನಿಕರು  ಚುನಾವಣೆಗೆ ಸಂಬಂಧಪಟ್ಟ ಯಾವುದೇ ದೂರು ಅಹವಾಲುಗಳನ್ನು ಕರ್ತವ್ಯದ ದಿನಗಳಂದು ಸಾಂಯಕಾಲ 4.00 ರಿಂದ 5.00 ರೊಳಗೆ ಮಂಗಳೂರು ಮಹಾನಗರಪಾಲಿಕೆಯ ಕೇಂದ್ರ ಕಚೇರಿಯ ಆಡಳಿತಾಧಿಕಾರಿಯವರ ಕೊಠಡಿಯಲ್ಲಿ ಅವರನ್ನು ಭೇಟಿ ಮಾಡಿ ಸಲ್ಲಿಸಬಹುದಾಗಿದೆ. ಅಲ್ಲದೆ ಇತರ ಅವಧಿಗಳಲ್ಲಿ ಅಹವಾಲು ಸಲ್ಲಿಸಬೇಕಾದಲ್ಲಿ  ಮಂಜುನಾಥ್ ಆರ್. ಶೆಟ್ಟಿ ಚುನಾವಣಾ ವೀಕ್ಷಕರ ಸಂಪರ್ಕಾಧಿಕಾರಿಯವರನ್ನು ಮೊಬೈಲ್ ಸಂಖ್ಯೆ: 9743559156 ಮೂಲಕ ಸಂಪರ್ಕಿಸಿ ಸಲ್ಲಿಸಲು ಅವಕಾಶವನ್ನು ಕಲ್ಪಿಸಲಾಗಿದೆಯೆಂದು ಮಹಾನಗರಪಾಲಿಕೆ ಪ್ರಕಟಣೆ ತಿಳಿಸಿದೆ.

ವರ್ಷದಲ್ಲಿ ಎರಡು ಬಾರಿ ಶಾಲಾಕಾಲೇಜುಗಳಲ್ಲಿ ಆರೋಗ್ಯ ಯುವದಿನ-ಡಾ.ವಿಜಯಪ್ರಕಾಶ್

ಮಂಗಳೂರು, ಫೆಬ್ರವರಿ. 28:-ಯುವಕರಲ್ಲಿ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಇನ್ನು ಮುಂದೆ ವರ್ಷದಲ್ಲಿ ಎರಡು ಬಾರಿ ಜಿಲ್ಲೆಯ ಪ್ರೌಢಶಾಲೆ/ಪದವಿಪೂರ್ವ/ಪದವಿ ಕಾಲೇಜುಗಳಲ್ಲಿ ಹದಿಹರೆಯದವರಿಗಾಗಿ ಆರೋಗ್ಯ ದಿನಾಚರಣೆಯನ್ನು ಆಚರಿಸುವಂತೆ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಕರೆ ನೀಡಿದ್ದಾರೆ.
ಅವರು ಇಂದು ಜಿಲ್ಲಾ ಪಂಚಾಯತ್ ಮಿನಿ ಸಭಾಂಗಣದಲ್ಲಿ ನಡೆದ ಎಚ್ಐವಿ/ಏಡ್ಸ್ ನಿಯಂತ್ರಣ ಕಾರ್ಯಕ್ರಮ ಕುರಿತು ಅಂತರ ಇಲಾಖಾ ಸಮನ್ವಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಒ.ಆರ್. ಶ್ರೀರಂಗಪ್ಪ,ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಕಿಶೋರ್ ಕುಮಾರ್ ಸೇರಿ ವಿವಿಧ ಇಲಾಖೆಗಳ  ಮುಖ್ಯಸ್ಥರು ಸ್ವಯಂ ಸೇವಾ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

ಚುನಾವಣಾ ವೀಕ್ಷಕರಾಗಿ ನೇಮಕ

ಮಂಗಳೂರು, ಫೆಬ್ರವರಿ. 28 :- ದಕ್ಷಿಣಕನ್ನಡ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ 2013-ಮಂಗಳೂರು ನಗರಪಾಲಿಕೆಗೆ ಶ್ರೀ ಎ.ಕೆ. ಮೊನ್ನಪ್ಪ  ವ್ಯವಸ್ಥಾಪಕ ನಿರ್ದೇಶಕರು, ಹಟ್ಟಿ ಚಿನ್ನದ ಗಣಿ ನಿಯಮಿತಇವರು/,ಮೂಡಬಿದ್ರೆ,ಉಡುಪಿ,ಬಂಟ್ವಾಳ ಪುರಸಭೆಗಳಿಗೆ ಪ್ರಭಾಕರ ಶರ್ಮಾ,ಉಡುಪಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯವರು /,ಪುತ್ತೂರು, ಸುಳ್ಯ ,ಬೆಳ್ತಂಗಡಿಗೆ ಶ್ರೀ ಪ್ರಭುಲಿಂಗ ಕವಳಿಕಟ್ಟಿ, ದಾಖಲೆಗಳ ವಿಶೇಷ ಜಿಲ್ಲಾಧಿಕಾರಿಗಳು ಕಂದಾಯ ಇಲಾಖೆ ಇವರುಗಳು ಚುನಾವಣಾ ವೀಕ್ಷಕರಾಗಿರುತ್ತಾರೆ.

ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ದೂರು ಸಲ್ಲಿಸಿ

ಮಂಗಳೂರು, ಫೆಬ್ರವರಿ. 28:-ನಗರ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ 2013 ರಂತೆ ಮಂಗಳೂರು ತಾಲೂಕಿನ ಉಳ್ಳಾಲ ಮತ್ತು ಮೂಡಬಿದ್ರೆ ಪುರಸಭೆ ಚುನಾವಣಾ ವ್ಯಾಪ್ತಿಯಲ್ಲಿನೀತಿ ಸಂಹಿತೆಯು ದಿನಾಂಕ 15-2-13 ರಿಂದ ಜಾರಿಯಲ್ಲಿದೆ.ಈ ಚುನಬಾವಣಾ ಕ್ಷೇತ್ರ ವ್ಯಾಪ್ತಿಯಲ್ಲಿ ಯಾವುದೇ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ಈ ಕೆಳ ಕಾಣಿಸಿದ ಅಧಿಕಾರಿಯವರಿಗೆ ದೂರವಾಣಿ ಅಥವಾ ಲಿಖಿತವಾಗಿ ದೂರುಗಳನ್ನು ಸಲ್ಲಿಸಬಹುದಾಗಿದೆಯೆಂದು ಮಂಗಳೂರು ತಹಶೀಲ್ದಾರರು ತಿಳಿಸಿರುತ್ತಾರೆ.
 ಮಂಗಳೂರು ತಹಶೀಲ್ದಾರರು 9916821123/2220596:ಉಳ್ಳಾಲ ಪುರಸಭೆ ವಾರ್ಡ್  1 ರಿಂದ 9 ಚುನಾವಣಾಧಿಕಾರಿ 9845216427 ಸಹಾಯಕ ಚುನಾವಣಾಧಿಕಾರಿ 9448101952,ವಾರ್ಡ್ ನಂಬ್ರ 10 ರಿಂದ 18 ಚುನಾವಣಾಧಿಕಾರಿ 9448482832/2423674/ಸಹಾಯಕ ಚುನಾವಣಾಧಿಕಾರಿ 9448153015 ವಾರ್ಡ್  ಸಂಖ್ಯೆ 19 ರಿಂದ 27 ಚುನಾವಣಾಧಿಕಾರಿ 9845032914,ಸಹಾಯಕ ಚುನಾವಣಾಧಿಕಾರಿ9448726160:ಮೂಡಬಿದ್ರೆ ಪುರಸಭೆ ವಾರ್ಡ್  ಸಂಖ್ಯೆ 1 ರಿಂದ 11 ಚುನಾವಣಾಧಿಕಾರಿ 9448951982 ಸಹಾಯಕ ಚುನಾವಣಾಧಿಕಾರಿ  9449066813 ವಾರ್ಡ್  ಸಂ. 12 ರಿಂದ 23 ಚುನಾವಣಾಧಿಕಾರಿ 9686918992/ಸಹಾಯಕ ಚುನಾವಣಾಧಿಕಾರಿ 9845234119 ಇವರಿಗೆ ನೀತಿ ಸಂಹಿತೆ ಉಲ್ಲಂಘನೆಯಾದಲ್ಲಿ ದೂರು ಸಲ್ಲಿಸಬಹುದಾಗಿದೆ.          

Wednesday, February 27, 2013

ಜಿಲ್ಲಾಧಿಕಾರಿಗಳಿಂದ ನಗರದ ನೈರ್ಮಲ್ಯ ಪರಿಶೀಲನೆ

ಮಂಗಳೂರು,ಫೆಬ್ರವರಿ.27:  ಮಾನ್ಯ ಜಿಲ್ಲಾಧಿಕಾರಿಗಳು ಹಾಗೂ ಮಂಗಳೂರು ಮಹಾನಗರ ಪಾಲಿಕೆಯ  ಆಡಳಿತಾಧಿಕಾರಿಯೂ ಆದ  ಎನ್. ಪ್ರಕಾಶ್ ಅವರು ಇಂದು ಬೆಳಗ್ಗೆ ಮಾನ್ಯ ಆಯುಕ್ತರು ಹಾಗೂ ಪರಿಸರ ಅಭಿಯಂತರರೊಂದಿಗೆ ಪಾಲಿಕಾ ವ್ಯಾಪ್ತಿಯೊಳಗಿನ ಘನತ್ಯಾಜ್ಯ ವಿಲೇವಾರಿ ಹಾಗೂ ನೈರ್ಮ ಲ್ಯಕ್ಕೆ ಸಂಬಂ ಧಿಸಿ ಫಳ್ನೀರು ರಸ್ತೆ, ಕಂಕ ನಾಡಿ, ಶಾಂತಿ ನಿಲಯ ರಸ್ತೆ, ನಂದಿ ಗುಡ್ಡ, ಪಾಂಡೇ ಶ್ವರ, ಕೋರ್ಟ್, ದಕ್ಕೆ, ಸೆಂಟ್ರಲ್ ಮಾರ್ಕೆಟ್, ರಥ ಬೀದಿ, ಬಂದರು, ಕುದ್ರೋಳಿ, ಮಣ್ಣ ಗುಡ್ಡೆ, ಉರ್ವ, ಕೊಟ್ಟಾರ, ಬಿಜೈ, ಕದ್ರಿ, ಶಿವಭಾಗ್, ಬೆಂದೂರು ಹಾಗೂ ಇತರ ಪ್ರದೇಶಗಳನ್ನು  ಸ್ವತಹ ಸಂದರ್ಶಿಸಿ ಪರಿಶೀಲನೆ ನಡೆಸಿದರು. ಕೆಲವು ಪ್ರದೇಶ ಗಳಲ್ಲಿ ನೈ ರ್ಮಲ್ಯ ಕೆಲಸ ಗಳನ್ನು ಸಮ ರ್ಪಕ ವಾಗಿ ನಿರ್ವ ಹಿಸಿ ರುವು ದರಿಂದ ಮೆಚ್ಚುಗೆ ಯನ್ನು ವ್ಯಕ್ತ ಪಡಿಸಿ ದರು. ಆದರೆ ಪ್ರಮುಖ ವಾಗಿ ಫಳ್ನೀರ್ ರಸ್ತೆ, ಕಂಕ ನಾಡಿ ಮತ್ತು ವೆಲೆ ನ್ಸಿಯಾ ಪ್ರದೇಶ ಗಳಲ್ಲಿ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಿರ್ವಹಿಸದೇ ಹಾಗೂ ಸೂಕ್ತ ಮೇಲ್ವಿಚಾರಣೆಯನ್ನು ನಡೆಸದೇ ಇರುವುದರಿಂದ ಸದ್ರಿ ಪ್ರದೇಶದ ನೈರ್ಮಲ್ಯ ನಿರೀಕ್ಷಕರನ್ನು ಸ್ಥಳದಲ್ಲಿಯೇ ಅಮನತು ಮಾಡಲು ಆದೇಶಿಸಿದರು.

Monday, February 25, 2013

ರಕ್ಷಣಾ ವ್ಯವಸ್ಥೆಯಲ್ಲಿ ರಾಜಿ ಇಲ್ಲ:ಪ್ರಧಾನ ಕಾರ್ಯದರ್ಶಿ ಉಮೇಶ್

ಮಂಗಳೂರು,ಫೆಬ್ರವರಿ.25 :- ಚುನಾವಣೆ ಸಮಯದಲ್ಲಿ ದೇಶದ ಭದ್ರತೆ ದೃಷಿಯಿಂದ ಪೊಲೀಸ್ ಮತ್ತು ಮೀನುಗಾರಿಕೆ ಹಾಗೂ ಪ್ರವಾಸೋದ್ಯಮ ಇಲಾಖೆ ಮತ್ತು ಜಿಲ್ಲಾಡಳಿತ ಪರಸ್ಪರ ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಎಂದು ರಾಜ್ಯ ಗೃಹ ಇಲಾಖೆ   ಪ್ರಧಾನ ಕಾರ್ಯದರ್ಶಿ (principal secretary) ವಿ. ಉಮೇಶ್ ಅವರು ಹೇಳಿದರು.
        ಇಂದು ದಕ್ಷಿಣ ಕನ್ನಡ ಜಿಲ್ಲಾಧಿ ಕಾರಿಗಳ ಕಚೇರಿ ಯಲ್ಲಿ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದ ಜಿಲ್ಲಾ ಮುಖ್ಯ ಸ್ಥರು, ಪೊಲೀಸ್, ಮೀನು ಗಾರಿಕೆ ಮತ್ತು ಪ್ರವಾ ಸೋದ್ಯಮ, ಕೋಸ್ಟ್ ಗಾರ್ಡ್ ಅಧಿಕಾ ರಿಗಳ ಸಭೆ ಯನ್ನು ಉದ್ದೇ ಶಿಸಿ ಮಾತ ನಾಡಿದ ಅವರು, ಹೈದ ರಾಬಾದ್ ದಾಳಿ ಹಿನ್ನಲೆ ಮತ್ತು ಚುನಾವಣಾ ಸಮಯದಲ್ಲಿ ರಾಷ್ಟ್ರೀಯ ಭದ್ರತೆಗೆ ನೀಡಬೇಕಿರುವ ಆದ್ಯತೆಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದರಲ್ಲದೆ, ಕರಾವಳಿ ತೀರದ ಸುರಕ್ಷತೆಯನ್ನು ದೃಢಪಡಿಸಿ ಎಂಬ ಎಚ್ಚರಿಕೆಯನ್ನೂ ರವಾನಿಸಿದರು.
ಸೂಕ್ತ ಸಮಯದಲ್ಲಿ ಸಮಗ್ರ ಮಾಹಿತಿಯೊಂದಿಗೆ ಸದಾ ಸನ್ನದ್ಧರಾಗಿರುವುದರಿಂದ ಸಮಸ್ಯೆಗಳನ್ನು ಸಮರ್ಥವಾಗಿ ಎದುರಿಸಲು ಸಾಧ್ಯ ಎಂದ ಅವರು, ಕರಾವಳಿ ತೀರಗಳ ಮೂಲಕ ಅಕ್ರಮ ಪ್ರವೇಶ, ಅಕ್ರಮ ಶಸ್ತ್ರಾಸ್ತ್ರ, ಮಾದಕ ವಸ್ತುಗಳು ಪ್ರವೇಶ, ಮಾನವ ಕಳ್ಳಸಾಗಾಣಿಕೆ ತಡೆಯಲು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಾಚರಿಸಿ, ರಕ್ಷಣಾ ವ್ಯವಸ್ಥೆಗೆ ಮಾರಕವೆನಿಸುವಂತಹ ಯಾವುದೇ ರಾಜಿಗೆ ರಾಜ್ಯದಲ್ಲಿ ಅವಕಾಶವಿಲ್ಲ ಎಂದರು.
 ಪ್ರವಾಸೋದ್ಯಮ ಇಲಾಖೆಯವರು ಬೀಚ್ ಗಳ ನಿರ್ವಹಣೆ ಮತ್ತು ಅಭಿವೃದ್ಧಿಯನ್ನು ಖಾಸಗಿಯವರಿಗೆ ವಹಿಸಿ ಮೌನವಾಗಿರದೆ ಅಲ್ಲಿ ನಡೆಯುತ್ತಿರುವ ಎಲ್ಲ ಚಟುವಟಿಕೆಗಳ ಬಗ್ಗೆ ಎಚ್ಚರಿಕೆ ವಹಿಸಿ, ಮೇಲ್ವಿಚಾರಣೆ ನಡೆಸಿ ಷರತ್ತುಗಳ ಪಾಲನೆಯಾಗುತ್ತಿರುವುದನ್ನು ಗಮನಿಸಿ. ಪ್ರವಾಸೋದ್ಯಮ ಅಭಿವೃದ್ಧಿ ಹೆಸರಿನಲ್ಲಿ ಪರವಾನಿಗೆಯಿಲ್ಲದೆ ನಡೆಸುವ ವಾಟರ್ ಸ್ಪೋರ್ಟ್ಸ್, ಸ್ಕ್ಯೂಬಾ ಡೈವಿಂಗ್ ನಡೆಸುತ್ತಿದ್ದರೆ, ತರಬೇತಿ ನೀಡುವಂತಹುದ್ದು ಗಮನಕ್ಕೆ ಬಂದರೆ ಕ್ರಮ ಕೈಗೊಳ್ಳಿ ಎಂದು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಹೇಳಿದರು.
ಕೋಸ್ಟ್ ಗಾರ್ಡ್ ನವರ ಕರ್ತವ್ಯ ಮತ್ತು ಸ್ಥಳೀಯರ ಸಹ ಕಾರ ದಿಂದ ನಡೆಸ ಬಹು ದಾದ ಚಟು ವಟಿಕೆ ಮತ್ತು ಕರ್ತ ವ್ಯಗಳ ಬಗ್ಗೆ ಕರಾ ವಳಿ ರಕ್ಷಣಾ ಪಡೆ ಮತ್ತು ಆಂತ ರಿಕ ಭದ್ರತೆ ಯ ಐಜಿಪಿ ಭಾಸ್ಕರ್ ರಾವ್ ಅವರು ಸಭೆಯ ಗಮನ ಸೆಳೆದರಲ್ಲದೆ, ಕರಾವಳಿ ರಕ್ಷಣಾ ಪಡೆಯ ಸಾಧನೆಗಳನ್ನು ಸಭೆಯ ಮುಂದಿಟ್ಟರು. ಸಾಗರ ರಕ್ಷಾ ದಳದ ಸಾಧನೆಗಳನ್ನು ವಿವರಿಸಿದ ಅವರು, ದಳವನ್ನು ಇನ್ನಷ್ಟು ಸಬಲಗೊಳಿಸಲು ಸರ್ಕಾರ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆಯೂ  ಪ್ರಧಾನ ಕಾರ್ಯದರ್ಶಿಗಳ  ಗಮನ ಸೆಳೆದರು.
ಮೀನುಗಾರಿಕಾ ಇಲಾಖೆಯವರು ಮೀನುಗಾರಿಕಾ ದೋಣಿಗಳ ಬಗ್ಗೆ ವಾರ್ಷಿಕ ತನಿಖೆ, ಆರ್ ಟಿ ಒ ಅವರು ಕೈಗೊಳ್ಳುವ ಮಾದರಿಯಲ್ಲಿ ಕೈಗೊಂಡರೆ ಈ ದೋಣಿಗಳು ಸುವ್ಯವಸ್ಥೆಯಲ್ಲಿರುವ ಜೊತೆಗೆ ಅಕ್ರಮ ದೋಣಿಗಳಿಗೆ ಅವಕಾಶವಿರುವುದಿಲ್ಲ ಎಂದ ಭಾಸ್ಕರ್ ರಾವ್, ಮೀನುಗಾರರಿಗೆ ಸ್ಮಾರ್ಟ್ ಕಾರ್ಡ್ ನೀಡಿದ ಮಾಹಿತಿಯನ್ನು ಮೀನುಗಾರಿಕೆ ಉಪನಿರ್ದೇಶಕರಿಂದ ಪಡೆದರು. ಬಂದರು ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆಯ ಸಹಕಾರವೂ ಅಕ್ರಮ ತಡೆಗೆ ಅದರಲ್ಲೂ ಮುಖ್ಯವಾಗಿ ಅಂಡರ್ ಬ್ರಿಡ್ಜ್ ರಕ್ಷಣಾ ವ್ಯವಸ್ಥೆಗೆ ಬೇಕೆಂದರು. ಕರಾವಳಿ ಹಳ್ಳಿಗಳ ಗಸ್ತು ಪುಸ್ತಕವನ್ನು ನಿರ್ವಹಿಸಿ, ಸಾರ್ವಜನಿಕ ಸಮಿತಿ ರಚಿಸಿ ವಿಚಾರ ವಿನಿಮಯ ನಡೆಸಿ ಎಂದರು.
ವಿಭಾಗ ಮಟ್ಟದ ಸಭೆ ಯಲ್ಲಿ ಮಾತ ನಾಡಿದ ಭಟ್ಕಳ ಸಹಾಯಕ ಆಯುಕ್ತ ರಾದ  ರಾಮ್ ಪ್ರಸಾದ್ ಅವರು, ಕರಾ ವಳಿ ರಕ್ಷಣಾ ಪಡೆಗೆ ತಾಂತ್ರಿಕ ನೈಪುಣ್ಯ ಪಡೆದ ಸಿಬ್ಬಂದಿ ಗಳನ್ನು ನೇಮಿ ಸುವ ಬಗ್ಗೆ, ಅವರ ವ್ಯಾಪ್ತಿ ಯಲ್ಲಿ ರುವ ಕರಾ ವಳಿ ತಟ ರಕ್ಷಣಾ ಪಡೆಗೆ ಮೂಲ ಭೂತ ಸೌಕರ್ಯ ಗಳನ್ನು ನೀಡುವ ಬಗ್ಗೆ, ನಿರುಪ ಯುಕ್ತ ದೋಣಿ ಗಳನ್ನು ದಡ ದಲ್ಲಿ ನಿಲ್ಲಿಸು ವುದ ರಿಂದಾ ಗುವ ತೊಂದರೆ ಗಳ ಬಗ್ಗೆ, ಅವರ ವ್ಯಾಪ್ತಿ ಯಲ್ಲಿ ನಡೆಯು ತ್ತಿರುವ ವಾಟರ್ ಸ್ಪೋಟ್ಸ್ರ್ ಗಳಿಗೆ ಪರವಾನಿಗೆ ನೀಡಿದ ಬಗ್ಗೆ, ಅನುಮತಿ ನೀಡಿದ ಬಳಿಕ ಅವರನ್ನು ನಿಯಂತ್ರಿಸುವ ನೀತಿಯ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದರು.
ಪ್ರವಾಸೋದ್ಯಮ ಇಲಾಖೆ ನಿರ್ವಹಣಾ ನೀತಿ ಮತ್ತು ನಿರ್ಬಂಧಗಳ ಬಗ್ಗೆ ಜಿಲ್ಲಾಧಿಕಾರಿಗಳ ಮುಖಾಂತರ ಇಲಾಖಾ ನಿರ್ದೇಶಕರಿಗೆ ಪತ್ರ ಬರೆದು ನಿಯಂತ್ರಣಕ್ಕೆ ಸಂಬಂಧಿಸಿದ ನೀತಿ ರಚಿಸಲು ಕೋರುವುದಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ  ಎನ್ ಪ್ರಕಾಶ್ ಅವರು ಹೇಳಿದರು.
ಪಶ್ಚಿಮ ವಲಯ ಐಜಿಪಿ ಪ್ರತಾಪ್ ರೆಡ್ಡಿ, ಪೊಲೀಸ್ ಕಮಿಷನರ್ ಮನೀಷ್ ಕರ್ಬಿಕರ್, ಎನ್ ಎಂ ಪಿಟಿಯ  ಮೂರ್ತಿ, ಕಾರವಾರ ಅಡಿಷನಲ್ ಎಸ್ ಪಿ, ದಕ್ಷಿಣ ಕನ್ನಡ  ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್, ಕೋಸ್ಟ್ ಗಾಡ್ ಐಜಿಪಿ ರಾಜೇಂದ್ರ ಸಿಂಗ್, ಕಮಾಂಡೆಂಟ್ ಸಫಲ್ ಸಿಂಗ್, ಮೀನುಗಾರಿಕಾ ಇಲಾಖೆ ಉಪನಿರ್ದೇಶಕರಾದ ಸುರೇಶ್ ಕುಮಾರ್, ಪ್ರವಾಸೋದ್ಯಮ ಇಲಾಖಾಧಿಕಾರಿ ಜಿತೇಂದ್ರ ಅವರನ್ನೊಳಗೊಂಡಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Saturday, February 23, 2013

ಮಾರ್ಚ್ 19ರಂದು ಜನನ ಪೂರ್ವ ಲಿಂಗ ನಿರ್ಣಯ ಕಾರ್ಯಾಗಾರ

ಮಂಗಳೂರು, ಫೆಬ್ರವರಿ.23:- ಜನನ ಪೂರ್ವ ಲಿಂಗ ನಿರ್ಣಯ ತಡೆ ಕಾಯಿದೆ 1994ರ ಅನ್ವಯ ನೋಂದಾವಣೆಗೊಂಡಿರುವ ವೈದ್ಯಕೀಯ ಸಂಸ್ಥೆಗಳವರಿಗಾಗಿ 2013 ಮಾರ್ಚ್ 19ರಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಛೇರಿಯಲ್ಲಿ ಒಂದು ದಿನದ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಓ.ಆರ್.ಶ್ರೀರಂಗಪ್ಪ ಅವರು ತಿಳಿಸಿದ್ದಾರೆ.
     ಅವರು ಇಂದು ತಮ್ಮ ಕಛೇರಿಯಲ್ಲಿ ನಡೆದ ಜನನ ಪೂರ್ವ ಲಿಂಗ ನಿರ್ಣಯ (ನಿರ್ಬಂಧ ಮತ್ತು ದುರ್ಬಳಕೆ) ತಡೆ ಕಾಯಿದೆ 1994ರ ಜಿಲ್ಲಾ ಮಟ್ಟದ ಸಲಹಾ ಸಮಿತಿಯ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
     2012-13 ನೇ ಸಾಲಿನಲ್ಲಿ ಹೊಸದಾಗಿ ನೋಂದಣಿಯಾದ ಸಂಸ್ಥೆಗಳೆಂದರೆ ಫಳ್ನೀರ್ ನ ಎ.ಅರ್.ಎಂ.ಸಿ ಐ.ವಿ.ಎಫ್, ಆನಂದ್ ಡಯಾಗ್ನಸ್ಟಿಕ್, ಮೌಂಟ್ ರೋಸರಿ ಆಸ್ಪತ್ರೆ ಮತ್ತು ಡಾ||ಅಶೋಕ್ ಜಿ.ಕೆ.
     ನವೀಕರಣಕ್ಕೆ ಅರ್ಜಿ ಸಲ್ಲಿಸಿದ್ದು ಸ್ಥಳ ತನಿಖೆ ಬಾಕಿ ಇರುವ ಸಂಖ್ಯೆ 11, ಒಟ್ಟಾರೆ ಜಿಲ್ಲೆಯಲ್ಲಿ 161 ಸಂಸ್ಥೆಗಳು ಜನನ ಪೂರ್ವ ಲಿಂಗ ನಿರ್ಣಯ ತಡೆ ಕಾಯ್ದೆ 1994ರ ಅಡಿ ನೋಂದಾವಣೆಗೊಂಡಿವೆ. ನವೀಕರಣ ಮುಗಿದು ಇನ್ನೂ ನವೀಕರಣ ಮಾಡದ ಸಂಸ್ಥೆಗಳು ಕೂಡಲೆ ನವೀಕರಣಗೊಳಿಸಬೇಕು ತಪ್ಪಿದಲ್ಲಿ ಅಂತಹವರ ವಿರುದ್ದ ಕಾನೂನಿನ ರೀತಿ ದಂಡ ವಿಧಿಸಲಾಗುವುದೆಂದು ಅವರು ತಿಳಿಸಿದರು.ಸಭೆಯಲ್ಲಿ ಅರ್,ಸಿ.ಹೆಚ್.ಅಧಿಕಾರಿ ಡಾ||ರುಕ್ಮಿಣಿ, ಮುಂತಾದವರು ಹಾಜರಿದ್ದರು.
 

Friday, February 22, 2013

ವಿ.ವಿ 31ನೇ ಘಟಿಕೋತ್ಸವ: ಕಂಬಾರ, ಕದ್ರಿ, ಸುಬ್ಬಯ್ಯರಿಗೆ ಗೌ.ಡಾಕ್ಟರೇಟ್

ಮಂಗಳೂರು ಫೆಬ್ರವರಿ 22: ಮಂಗಳೂರು ವಿಶ್ವವಿದ್ಯಾನಿಲಯದ 31ನೇ ಘಟಿಕೋತ್ಸವ ಫೆ.23ರಂದು ಸಂಪನ್ನಗೊಳ್ಳಲಿದ್ದು; ಮೂವರು ಸಾಧಕರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಲಾಗುವುದು ಎಂದು ಕುಲಪತಿಗಳಾದ ಪ್ರೊ.ಟಿ.ಸಿ.ಶಿವಶಂಕರ ಮೂರ್ತಿ ತಿಳಿಸಿದ್ದಾರೆ.
      ಗುರುವಾರ ನಗರದ ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಆಯೋಜಿಸಲಾದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೀಡೆ ಮತ್ತು ಸಮಾಜ ಸೇವೆಗಾಗಿ ಎ.ಬಿ.ಸುಬ್ಬಯ್ಯ, ಕಲೆ-ಸಂಗೀತ ಕ್ಷೇತ್ರದ ಸಾಧನೆಗಾಗಿ ಡಾ.ಕದ್ರಿ ಗೋಪಾಲನಾಥ್ ಮತ್ತು ಸಾಹಿತ್ಯ-ಸಂಗೀತ ಮತ್ತು ಜಾನಪದ ಕ್ಷೇತ್ರದ ಸಾಧನೆಗಾಗಿ ಡಾ.ಚಂದ್ರಶೇಖರ್ ಕಂಬಾರ್ ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಗುವುದು ಎಂದರು.
  ರಾಜ್ಯಪಾಲರು ಮತ್ತು ವಿಶ್ವವಿದ್ಯಾನಿಲಯದ ಕುಲಾಪತಿಗಳಾದ ಎಚ್.ಆರ್.ಭಾರದ್ವಾಜ್ ಘಟಿಕೋತ್ಸವದ ಅಧ್ಯಕ್ಷತೆ ವಹಿಸುವರು. ಸಹಕುಲಾಧಿಪತಿ ಮತ್ತು ರಾಜ್ಯದ ಉನ್ನತ ಶಿಕ್ಷಣ ಸಚಿವರಾದ ಸಿ.ಟಿ.ರವಿ ಉಪಸ್ಥಿತರಿರುತ್ತಾರೆ. ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಟಿ.ರಾಮಸ್ವಾಮಿ ಘಟಿಕೋತ್ಸವ ಭಾಷಣ ಮಾಡುವರು ಎಂದು ಕುಲಪತಿ ವಿವರಿಸಿದರು.
ಘಟಿಕೋತ್ಸವದಲ್ಲಿ 84 ಮಂದಿಗೆ ಡಾಕ್ಟರೇಟ್ ಪದವಿ ನೀಡಲಾಗುವುದು. ಕಲಾ ವಿಭಾಗದ 15 ಮಂದಿ, ವಿಜ್ಞಾನ ವಿಭಾಗದ 59 ಮಂದಿ, ವಾಣಿಜ್ಯ ವಿಭಾಗದ 8 ಮಂದಿ ಮತ್ತು ಶಿಕ್ಷಣ ವಿಭಾಗ ಇಬ್ಬರು ಡಾಕ್ಟರೇಟ್ ಪದವಿ ಪಡೆಯಲಿದ್ದಾರೆ. 7 ಮಂದಿಗೆ ಎಂ.ಫಿಲ್ ಪದವಿ ನೀಡಲಾಗುವುದು. ಇದೇ ವೇಳೆ 36 ಮಂದಿಗೆ ಚಿನ್ನದ ಪದಕ, 55 ಮಂದಿಗೆ ನಗದು ಬಹುಮಾನ ನೀಡಲಾಗುವುದು ಎಂದು ಪೊ.ಮೂರ್ತಿ ನುಡಿದರು.
       ಸ್ನಾತಕೋತ್ತರ ಪದವಿಯಲ್ಲಿ 44 ಮಂದಿಗೆ, ಪದವಿಯಲ್ಲಿ 16 ಮಂದಿಗೆ, ಕಲೆಯಲ್ಲಿ 12 ಮಂದಿಗೆ, ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ 30 ಮಂದಿಗೆ, ವಾಣಿಜ್ಯ ವಿಭಾಗದಲ್ಲಿ 10 ಮಂದಿಗೆ, ಕಾನೂನು ಶಿಕ್ಷಣದಲ್ಲಿ ಒಬ್ಬರಿಗೆ, ಶಿಕ್ಷಣದಲ್ಲಿ ನಾಲ್ವರಿಗೆ ಮತ್ತು ಸ್ನಾತಕೋತ್ತರ ಡಿಪ್ಲೊಮಾದಲ್ಲಿ ಮೂವರಿಗೆ ಹೀಗೆ ಒಟ್ಟು 60 ರ್ಯಾಂಕುಗಳನ್ನು ಘಟಿಕೋತ್ಸವದಲ್ಲಿ ನೀಡಲಾಗುವುದು ಎಂದು ಕುಲಪತಿಗಳು ಹೇಳಿದರು.
     2011-12 ನೇ ಸಾಲಿನಲ್ಲಿ ಪರೀಕ್ಷೆ ಬರೆದು ಉತ್ತೀರ್ಣ ರಾದ 18,969 ವಿದ್ಯಾ ರ್ಥಿಗಳ ಪೈಕಿ 1,406 (ಶೇ.7.41) ಮಂದಿ (425 ಸ್ನಾತ ಕೋತ್ತರ ಪದ ವೀಧರರು, 895 ಪದ ವೀಧರರು), ಡಾಕ್ಟರೇಟ್ ಪದ ವೀಧರರು 82 ಮಂದಿ, ನಾಲ್ವರು ಎಂ.ಫಿಲ್ ಪದವೀಧರರು ಸ್ವಯಂ ಹಾಜರಾಗಿ ತಮ್ಮ ಪದವಿಯನ್ನು ಸ್ವೀಕರಿಸಲಿರುವರು ಎಂದು ಪ್ರೊ.ಶಿವಶಂಕರ ಮೂರ್ತಿ ಹೇಳಿದರು.
     ಎ.ಬಿ.ಸುಬ್ಬಯ್ಯ ಅವರು ಮೂಲತ: ಕೊಡಗು ಜಿಲ್ಲೆಯ ಮಡಿಕೇರಿಯವರು. ಬೆಂಗಳೂರಿನ ಸೈಂಟ್ ಜೋಸೆಫ್ ಕಲಾ ಮತ್ತು ವಿಜ್ಞಾನ ಕಾಲೇಜಿನಿಂದ ಪದವಿ ಪಡೆದಿದ್ದಾರೆ. ಕಳೆದ ಮೂವತ್ತು ವರ್ಷಗಳಿಂದ ರಾಷ್ಟ್ರೀಯ ಕ್ರೀಡೆ ಹಾಕಿಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಪ್ರಸ್ತುತ ಕರ್ನಾಟಕ ಹಾಕಿ ಫೆಡರೇಶನ್ನ ಕಾರ್ಯದರ್ಶಿಯಾಗಿ ಸುಬ್ಬಯ್ಯ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅನೇಕ ಹಾಕಿ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ಇವರ ಶ್ರಮವಿದೆ.
  ಎ.ಬಿ.ಸುಬ್ಬಯ 1197ರಲ್ಲಿ ಅರ್ಜುನ ಪ್ರಶಸ್ತಿ  ಪುರಸ್ಕೃತರು. 2003ರಲ್ಲಿ ಪ್ರತಿಷ್ಠಿತ ಏಕಲವ್ಯ ಪ್ರಶಸ್ತಿಯನ್ನು ಪಡೆದಿದ್ದಾರೆ. ಸತತ 11 ವರ್ಷಗಳ ಕಾಲ ಭಾರತದ ಹಾಕಿ ತಂಡದಲ್ಲಿ ವಿರಾಜಮಾನರಾದ ಸುಬ್ಬಯ್ಯ 285 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ ಹೆಗ್ಗಳಿಕೆ ಹೊಂದಿದ್ದಾರೆ. ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಕಾಮನ್ವೆಲ್ತ್ ಗೇಮ್ಸ್ ಮೊದಲಾದ ಪ್ರತಿಷ್ಠಿತ ಪಂದ್ಯಗಳಲ್ಲಿ ಆಡಿ ಪದಕ ವಿಜೇತರಾಗಿರುವರು.
ಭಾರತದ ಪುರುಷ ಮತ್ತು ಮಹಿಳಾ ಹಾಕಿ ತಂಡಗಳಿಗೆ ಕೋಚ್ ಆಗಿಯೂ ಅವರು ಸೇವೆ ಸಲ್ಲಿಸಿದ್ದಾರೆ. ಉತ್ತಮ ಹಾಕಿ ವೀಕ್ಷಕ ವಿವರಣೆಗಾರರಾದ ಸುಬ್ಬಯ್ಯ 1986-87ರಲ್ಲಿ ಬೆಂಗಳೂರು ವಿಶ್ವವಿದ್ಯಾನಿಲಯದ ಹಾಕಿ ತಂಡದ ನಾಯಕರಾಗಿದ್ದರು.
ಕದ್ರಿ ಗೋಪಾಲನಾಥ್ ಮಂಗಳೂರಿನಲ್ಲಿ 1949ರಲ್ಲಿ ಜನಿಸಿದರು. ಭಾರತದ ಸಂಗೀತ ಸಾಮ್ರಾಜ್ಯದ ದೊರೆ. ಕರ್ನಾಟಕ ಸಂಗೀತವನ್ನು ಸ್ಯಾಕ್ಸೋಫೋನ್ ಮೂಲಕ ವಿಶ್ವ ಮಟ್ಟಕ್ಕೇರಿಸಿದವರು.
  2004ರಲ್ಲಿ ಭಾರತ ಸರಕಾರದ ಪದ್ಮಶ್ರೀ ಪುರಸ್ಕಾರ ಪಡೆದ ಕದ್ರಿಯವರು ಅದೇ ವರ್ಷ ಬೆಂಗಳೂರು ವಿಶ್ವವಿದ್ಯಾನಿಲಯದ ಗೌರವ ಡಾಕ್ಟರೇಟ್ ಪದವಿಗೆ ಪಾತ್ರರಾದವರು. 1998ರಲ್ಲಿ ಕರ್ನಾಟಕ ಸರಕಾರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು. 1994ರಲ್ಲಿ ಲಂಡನ್ನಲ್ಲಿ ಬಿಬಿಸಿಗಾಗಿ ಸಂಗೀತ ಕಛೇರಿ ನಡೆಸಿದ್ದಾರೆ. ಕರ್ಣಾಟಕ ಸಂಗೀತಕ್ಕಾಗಿ ಬಿಬಿಸಿಯಿಂದ ಆಮಂತ್ರಣ ಪಡೆದ ಮೊದಲ ಕಣರ್ಾಟಕ ಸಂಗೀತದ ಕಲಾವಿದರಾಗಿದ್ದಾರೆ ಕದ್ರಿ ಗೋಪಾಲನಾಥ್.
 ಸಾಕ್ಸೋಫೋನ್ ಚಕ್ರವರ್ತಿ, ಸಾಕ್ಸೋಪೋನ್ ಸಾಮ್ರಾಟ, ಕರ್ನಾಟಕ ಕಲಾಶ್ರೀ, ನಾದೋಪಾಸನ ಬ್ರಹ್ಮ ,ನಾದ ಕಲಾನಿ ಮೊದಲಾದ ಬಿರುದುಗಳಿಂದ ಅಲಂಕೃತರಾದ ಕದ್ರಿಯವರು ತಮಿಳ್ನಾಡು ಸರಕಾರದಿಂದ `ಕಲೈಮಾಮಣಿ' ಪ್ರಶಸ್ತಿ ಪುರಸ್ಕೃತರು. ಕಂಚಿ ಕಾಮಕೋಟಿ, ಶೃಂಗೇರಿ ಮತ್ತು ಅಹೋಬಿಲ ಮಠದ ಆಸ್ಥಾನ ವಿದ್ವಾಂಸರಾಗಿ ಗೌರವಿಸಲ್ಪಟ್ಟ ಮೇರು ಕಲಾವಿದರಾಗಿದ್ದಾರೆ. ಅನೇಕ ಅಂತಾರಾಷ್ಟ್ರೀಯ ಸಂಗೀತ ಉತ್ಸವಗಳಲ್ಲಿ ಭಾಗವಹಿಸಿ ಭಾರತದ ಕೀರ್ತಿಯನ್ನು ಎತ್ತರಕ್ಕೇರಿಸಿರುವ ಗೋಪಾಲನಾಥ್ ಅವರು  ಧ್ವನಿ ಸುರುಳಿಗಳ ಮೂಲಕ ದೇಶದ ಸಂಗೀತಾಸಕ್ತರಲ್ಲಿ ಮನೆ ಮಾತಾಗಿದ್ದಾರೆ.
    ಡಾ.ಚಂದ್ರಶೇಖರ ಕಂಬಾರ 2011ರ ಜ್ಞಾನಪೀಠ ಪ್ರಶಸ್ತಿ ಪಡೆದವರು. 2001ರಲ್ಲಿ ಪದ್ಮಶ್ರೀ, 1988ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯಿಂದ ಪುರಸ್ಕೃತರಾದ ಡಾ.ಚಂದ್ರಶೇಖರ ಕಂಬಾರ ಬೆಳಗಾಂ ಜಿಲ್ಲೆಯ ಘೋದಗೇರಿಯವರು. ಜನನ 1937ರಲ್ಲಿ. ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ಪಡೆದಿದ್ದಾರೆ. ಪ್ರತಿಭಾವಂತರಾದ ಕಂಬಾರ ಚಿಕ್ಕ ಅವಗೆ ಚಿಕಾಗೋದಲ್ಲಿ ಬೋಧಕರಾಗಿ ಸೇವೆ ಸಲ್ಲಿಸಿದ್ದಾರೆ.
         ಸುಮಾರು ಎರಡು ದಶಕಗಳ ಕಾಲ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸಿದ ಡಾ.ಕಂಬಾರ ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ಸ್ಥಾಪಕ ಕುಲಪತಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ರಾಷ್ಟ್ರೀಯ ನಾಟಕ ಶಾಲೆಯ ಅಧ್ಯಕ್ಷರಾಗಿ, ಕನರ್ಾಟಕ ನಾಟಕ ಅಕಾಡೆಮಿಯ ಅಧ್ಯಕ್ಷರಾಗಿ ಕೆಲಸ ಮಾಡಿರುವ ಕಂಬಾರರು ನಾಟಕಕರಾಗಿ, ಕವಿಯಾಗಿ, ಜಾನಪದ ವಿದ್ವಾಂಸರಾಗಿ ಮತ್ತು ಸಂಶೋಧಕರಾಗಿ ನಾಡಿನ ಜನಮನದಲ್ಲಿ ನೆಲೆಯಾಗಿದ್ದಾರೆ. ಕೇಂದ್ರ ನಾಟಕ ಅಕಾಡೆಮಿ ಪ್ರಶಸ್ತಿ, ನಾಡೋಜ ಪ್ರಶಸ್ತಿ, ಪಂಪ ಪ್ರಶಸ್ತಿ, ಕಬೀರ್ ಸಮ್ಮಾನ, ಮಾಸ್ತಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕುಮಾರನ್ ಆಶಾನ್ ಅವಾರ್ಡ್, ಜೋಶುವ ಸಾಹಿತ್ಯ ಪುರಸ್ಕಾರಂ ಮೊದಲಾದ ಪ್ರಶಸ್ತಿಗಳು ಕಂಬಾರರಿಗೆ ಸಂದಿವೆ.
   ಡಾ.ಕಂಬಾರರು 25 ನಾಟಕಗಳು, 11 ಕವನ ಸಂಕಲನಗಳು, 5 ಕಾದಂಬರಿಗಳು, 16 ಸಂಶೋಧನಾ ಪ್ರಬಂಧಗಳು ಮತ್ತು ಅನೇಕ ಬಿಡಿ ಲೇಖನಗಳಿಂದ ಕನ್ನಡ ಸಾಹಿತ್ಯ ಲೋಕವನ್ನು ಸಮೃದ್ದಗೊಳಿಸಿದ್ದಾರೆ.       

Thursday, February 21, 2013

ಪಾಲಿಕೆ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ಅಧಿಕಾರ ಸ್ವೀಕಾರ


ಮಂಗಳೂರು, ಫೆಬ್ರವರಿ.21: ಮಹಾನಗರಪಾಲಿಕೆ ಆಡಳಿತ ಸುಸೂತ್ರವಾಗಿ ನಡೆಯಲಿದ್ದು, ಕುಡಿಯುವ ನೀರು ಪೂರೈಕೆ ಬೇಸಿಗೆಯಲ್ಲಿ ಅಬಾಧಿತವಾಗಿರಲು ಮುನ್ನೆಚ್ಚರಿಕೆ ಕ್ರಮಕೈಗೊಳ್ಳಲಾಗುವುದು ಎಂದು ಮಹಾನಗರಪಾಲಿಕೆ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಜಿಲ್ಲಾಧಿಕಾರಿ ಎನ್ ಪ್ರಕಾಶ್ ಅವರು ಹೇಳಿದರು.
            ಪಾಲಿಕೆ ಯು ತನ್ನೆಲ್ಲ ಕರ್ತವ್ಯ ಗಳನ್ನು ನಿರ್ವ ಹಿಸಲಿದ್ದು, ಪ್ರಗತಿ ಯಲ್ಲಿ ರುವ ಕಾಮ ಗಾರಿ ಗಳು ಮುಂದು ವರಿಯ ಲಿವೆ ಎಂದು ಜಿಲ್ಲಾಧಿ ಕಾರಿಗಳು ಹೇಳಿದರು. ನಿಯ ಮಿತವಾಗಿ ಪ್ರಗತಿ ಪರಿಶೀಲನೆಯನ್ನು ಹಮ್ಮಿಕೊಳ್ಳುವೆ ಎಂದ ಅವರು, ತ್ಯಾಜ್ಯ ವಿಲೇಗೆ ಹೆಚ್ಚಿನ ಒತ್ತು ನೀಡ ಲಿದ್ದು ನಗರ ಶುಚಿತ್ವ ಮತ್ತು ತ್ಯಾಜ್ಯ ವಿಲೇಗೆ ಕಟ್ಟು ನಿಟ್ಟಿನ ಕ್ರಮ ಕೈಗೊ ಳ್ಳುವೆನು ಎಂದರು. ಪಾಲಿಕೆ ಆಯುಕ್ತ ರಾದ ಡಾ ಹರೀಶ್ ಕುಮಾರ್, ಜಂಟಿ ಆಯುಕ್ತ ರಾದ ಶ್ರೀಕಾಂತ್, ಅಧೀಕ್ಷಕ ಅಭಿಯಂತರರಾದ ಬಿ ಎಸ್ ಬಾಲಕೃಷ್ಣ , ಪಾಲಿಕೆ ಇಂಜಿನಿಯರ್ ಗಳು ಮತ್ತು ಪಾಲಿಕೆಯ ವಿವಿಧ ಇಲಾಖಾ ಮುಖ್ಯಸ್ಥರು ಜಿಲ್ಲಾಧಿಕಾರಿಗಳನ್ನು ಸ್ವಾಗತಿಸಿದರು.

ನೋಂದಣಿ ಮಾಡದಿದ್ದರೆ ವೈದ್ಯ ಸಂಸ್ಥೆ ರದ್ದು :ಎಚ್ಚರಿಕೆ


ಮಂಗಳೂರು. ಫೆಬ್ರವರಿ.21:ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಅಧಿನಿಯಮದಂತೆ 2010 ಅಕ್ಟೋಬರ್ 24ರ ಮೊದಲು ಹಾಗೂ ಅನಂತರ ರಾಜ್ಯದ ಎಲ್ಲ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮತ್ತು ಈ ತನಕ ಜಿಲ್ಲಾ ನೋಂದಣಾ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಂಡಿರದ ಎಲ್ಲಾ ಖಾಸಗಿ ವೈದ್ಯಕೀಯ ಸಂಸ್ಥೆಗಳು ನಿಯಮಾನುಸಾರ ಕಡ್ಡಾಯವಾಗಿ2013, ಮಾರ್ಚ್ ,2 ರೊಳಗೆ ನೋಂದಾಯಿಸಿಕೊಳ್ಳಬೇಕು. ಇಲ್ಲದಿದ್ದರೆ ಅಂತಹ ಸಂಸ್ಥೆಗಳನ್ನು ಮುಚ್ಚಲಾಗುವುದು ಎಂದು ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.
       ನೂತನವಾಗಿ ತೆರೆಯುವ ಎಲ್ಲ ಖಾಸಗಿ ವೈದ್ಯಕೀಯ ಸಂಸ್ಥೆಗಳು (ಅಲೋಪತಿ, ಯುನಾನಿ ಆಯುರ್ವೇದ, ಸಿದ್ದ, ಹೋಮಿಯೋಪತಿ ಮತ್ತು ಪ್ರಕೃತಿ ಚಿಕಿತ್ಸೆಯ ಪದ್ದತಿಗಳಲ್ಲಿ ಚಿಕಿತ್ಸೆಯನ್ನು ನೀಡಿತ್ತಿರುವ ಎಲ್ಲ ಮೆಡಿಕಲ್ ಕ್ಲಿನಿಕ್, ಕನ್ಸಲ್ಟೆಶನ್ ಸೆಂಟರ್, ಪಾಲಿಕ್ಲಿನಿಕ್ ಲ್ಯಾಬೋರೇಟರಿ, ಸ್ಕ್ಯಾನಿಂಗ್ ಸೆಂಟರ್ ಮತ್ತು ನರ್ಸಿಂಗ್ ಹೋಂ/ಆಸ್ಪತ್ರೆಗಳು) ಜಿಲ್ಲಾಧಿಕಾರಿಗಳು ಅಧ್ಯಕ್ಷರಾಗಿರುವ ಜಿಲ್ಲಾ ನೋಂದಣಾ ಪ್ರಾಧಿಕಾರದಲ್ಲಿ ನೋಂದಾಯಿಸಿಯೇ ಕಾಯರ್ಾರಂಭವನ್ನು ಮಾಡಬೇಕು. ಕಾನೂನಿನಲ್ಲಿ ಹೇಳಲಾದ ಸವಲತ್ತುಗಳನ್ನು ಹೊಂದಿರಬೇಕು. ಪ್ರಾಧಿಕಾರದಿಂದ ಅನುಮತಿಯನ್ನು ಪಡೆಯದೆ ತೆರೆಯುವ ವೈದ್ಯಕೀಯ ಸಂಸ್ಥೆಗಳ ಮುಖ್ಯಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಆರೋಗ್ಯಾಧಿಕಾರಿ ಎಚ್ಚರಿಸಿದ್ದಾರೆ.

ಫೆ. 24- ಪೋಲಿಯೋ ಲಸಿಕಾ ದಿನ

ಮಂಗಳೂರು,ಫೆಬ್ರವರಿ.21: ಪೋಲಿಯೋ ರೋಗವನ್ನು ದೇಶದಿಂದ ತೊಲಗಿಸಿ ದೇಶವನ್ನು ಪೋಲಿಯೋ ಮುಕ್ತವಾಗಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸುತ್ತಿವೆ. ಈ ನಿಟ್ಟಿನಲ್ಲಿ ದ.ಕ. ಜಿಲ್ಲೆಯಲ್ಲಿಯೂ 2013ರ ಫೆಬ್ರವರಿ 24ರಂದು ಎರಡನೇ ಸುತ್ತಿನ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
      ದ,ಕ.ಜಿಲ್ಲೆಯಲ್ಲಿ 0-5 ವಯೋಮಾನದ ಮಕ್ಕಳ ಸಂಖ್ಯೆ 1,63,860 ಇದ್ದು, ಇವರಲ್ಲಿ ವಲಸೆ ಕಾರ್ಮಿಕರ ಮಕ್ಕಳ ಸಂಖ್ಯೆ ಅಂದಾಜು 2319 ಎಂದು ಪರಿಗಣಿಸಲಾಗಿದೆ.ಪ್ರತಿಯೊಂದು ಮಗುವಿಗೂ ಪೋಲಿಯೋ  ಲಸಿಕೆ ಹಾಕಿಸುವುದರಿಂದ ಪೋಲಿಯೋ ನಿಯಂತ್ರಣ ಸಾಧ್ಯವಾಗುತ್ತದೆ. ಅದರಲ್ಲಿಯೂ ವಿಶೇಷವಾಗಿ ವಲಸೆ ಕಾರ್ಮಿಕರ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವುದು ಪ್ರಾಮುಖ್ಯವಾಗಿರುತ್ತದೆ. ಮಂಗಳೂರಿಗೆ ಆಗಮಿಸುವ ಕಾರ್ಮಿಕರು ಬೇರೆ ರಾಜ್ಯಗಳಿಗೆ ಸಂಬಂಧಿಸಿದವರಾಗಿದ್ದು, ಸಾಮಾನ್ಯವಾಗಿ ಅವರ ಮಕ್ಕಳಿಗೆ ಸಾರ್ವತ್ರಿಕ  ಲಸಿಕಾಕರಣ ಸರಿಯಾಗಿ ಆಗಿಲ್ಲದಿರುವುದು, ಅಲೆಮಾರಿ ಜನರು ವಾಸಿಸುವ ಪ್ರದೇಶಗಳಲ್ಲಿ ನೈರ್ಮಲ್ಯದ ಕೊರತೆ ಇರುವುದು, ಈ ಕಾರಣಗಳಿಂದ ಯಾವುದೇ ಸಮಯದಲ್ಲಿ ಪೋಲಿಯೋ ರೋಗ ಹರಡಿದರೆ ಆಶ್ಚರ್ಯವಲ್ಲ. ಇದಲ್ಲದೆ ನಮ್ಮ ಜಿಲ್ಲೆಯ ಮಕ್ಕಳನ್ನು ಸಹ ನಾವು ಪೋಲಿಯೋ ರಹಿತರನ್ನಾಗಿ ಕಾಪಾಡುವುದು ಅಗತ್ಯವಾಗಿರುತ್ತದೆ.
       ಆದ್ದರಿಂದ ಜಿಲ್ಲೆಯಲ್ಲಿ ಲಸಿಕಾ ಕಾರ್ಯಕ್ರಮದ ಯಶಸ್ವಿಗಾಗಿ ಒಟ್ಟು 921 ಲಸಿಕಾ ಕೇಂದ್ರಗಳು,ಮತ್ತು 11 ಸಂಚಾರಿ ತಂಡ ಹಾಗೂ 27 ಟ್ರಾನ್ಸಿಟ್ ಲಸಿಕಾ ಘಟಕಗಳನ್ನು ರೂಪಿಸಲಾಗಿರುತ್ತದೆ. ಇದಲ್ಲದೆ ಮಕ್ಕಳಿಗೆ 3822 ಲಸಿಕೆ ನೀಡುವವರು ಹಾಗೂ 193 ಮೇಲ್ವಿಚಾರಕರನ್ನು ನಿಯುಕ್ತಿಗೊಳಿಸಲಾಗಿದೆ.

Wednesday, February 20, 2013

'ಸದಾಚಾರ ಸಂಹಿತೆ ಹೊಣೆ ಸೆಕ್ಟರ್ ಅಧಿಕಾರಿಗಳಿಗೆ'

ಮಂಗಳೂರು, ಫೆಬ್ರವರಿ.20 : ದಕ್ಷಿಣ ಕನ್ನಡ ಜಿಲೆಥ್ಲಿ ನಗರಸ್ಥಳೀಯ ಸಂಸ್ಥೆಗಳಿಗೆ ನಿಷ್ಪಕ್ಷಪಾತ ಚುನಾವಣೆ ನಡೆಸಲು ಹಾಗೂ ಚುನಾವಣಾ ಪ್ರಕ್ರಿಯೆ ನಿರ್ವಿಘ್ನವಾಗಿ ನಡೆಯಲು ಮತ್ತು ಸದಾಚಾರ ಸಂಹಿತೆ ಪಾಲಿಸಲು ಜಿಲ್ಲಾಧಿಕಾರಿ ಎನ್. ಪ್ರಕಾಶ್ ಅವರ ನೇತೃತ್ವದಲ್ಲಿ ಇಂದು ಪೊಲೀಸ್, ಅಬಕಾರಿ ಮತ್ತು ಸೆಕ್ಟರ್ ಅಧಿಕಾರಿಗಳ ಸಭೆ ನಡೆಯಿತು.
         ಮಾರ್ಚ್ 7 ರಂದು ನಡೆ ಯಲಿರುವ ಚುನಾ ವಣಾ ಪ್ರ ಕ್ರಿಯೆ ಯನ್ನು ನಿರ್ವ ಹಿಸಲು ಅದ ರಲ್ಲೂ ಮುಖ್ಯ ವಾಗಿ ಚುನಾ ವಣಾ ನೀತಿ ಸಂಹಿತೆ ಪಾಲಿ ಸಲು ಸೆಕ್ಟರ್ ಅಧಿ ಕಾರಿ ಗಳನ್ನು ನೇಮಿಸಿ ಅವರಿಗೆ ವಲಯ ದಂಡಾ ಧಿಕಾ ರಿಗ ಳಾಗಿ (Zonal magistrate) ಕಾರ್ಯ ನಿರ್ವ ಹಿಸುವ ಕುರಿತು ಜಿಲ್ಲಾಧಿಕಾರಿಗಳು  ಸೂಚನೆಯನ್ನೂ ನೀಡಿದರು.
ಸೆಕ್ಟರ್ ಅಧಿಕಾರಿ, ಪೊಲೀಸ್ ಅಧಿಕಾರಿ ಹಾಗೂ ಅಬಕಾರಿ ಅಧಿಕಾರಿಗಳನ್ನೊಳಗೊಂಡ ತಂಡ ರಚಿಸಿ ಚುನಾವಣಾ ಅಕ್ರಮಗಳ ದೂರನ್ನು ಪರಿಶೀಲಿಸಲು ಹಾಗೂ ಅಕ್ರಮ ತಡೆಯಲು ಪರಿಣಾಮಕಾರಿಯಾಗಿ ಪರಸ್ಪರ ಸಮನ್ವಯತೆಯಿಂದ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.
ಮಂಗಳೂರು ಮಹಾನಗರಪಾಲಿಕೆ, ಮೂಡಬಿದರೆ ಪುರಸಭೆ, ಬಂಟ್ವಾಳ ಪುರಸಭೆ, ಪುತ್ತೂರು ಪುರಸಭೆ, ಬೆಳ್ತಂಗಡಿ ಪಟ್ಟಣ ಪಂಚಾಯತ್, ಸುಳ್ಯ ಪಟ್ಟಣ ಪಂಚಾಯತ್, ಉಳ್ಳಾಲ ಪುರಸಭೆಗಳನ್ನೊಳಗೊಂಡ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಯಲಿದೆ.
       15-02-13ರಿಂದ 11-3-13 ರವರೆಗೆ ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಸದಾಚಾರ ಸಂಹಿತೆ ಜಾರಿಯಲ್ಲಿದ್ದು, ಪಾಲಿಕೆ ವ್ಯಾಪ್ತಿಯಲ್ಲಿ 32 ಸೆಕ್ಟರ್ ಅಧಿಕಾರಿಗಳು, ಮೂಡಬಿದ್ರೆಯಲ್ಲಿ ಇಬ್ಬರು, ಉಳ್ಳಾಲದಲ್ಲಿ ಮೂವರು, ಬಂಟ್ವಾಳಕ್ಕೆ 3, ಪುತ್ತೂರಿಗೆ 4, ಬೆಳ್ತಂಗಡಿಗೆ 1, ಸುಳ್ಯ 2 ಸೇರಿದಂತೆ ಒಟ್ಟು 47 ಸೆಕ್ಟರ್ ಅಧಿಕಾರಿಗಳನ್ನು ನೇಮಿಸಲಾಗಿದೆ.
ಸೆಕ್ಟರ್ ಅಧಿಕಾರಿಗಳ ಜವಾಬ್ದಾರಿ ಹೆಚ್ಚಿದ್ದು, ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶ ಗುರುತಿಸುವಿಕೆ ಹಾಗೂ ಮಾಹಿತಿ ಸಂಗ್ರಹಿಸುವಿಕೆಯ ಹೊಣೆಯೂ ಇವರ ಮೇಲಿದೆ. ಚುನಾವಣಾ ಪ್ರಚಾರ ವೆಚ್ಚದ ಮೇಲೂ ನಿಗಾ ವಹಿಸಬೇಕಿದೆ. ಚುನಾವಣಾ ಪೂರ್ವ ಜವಾಬ್ದಾರಿ, ಚುನಾವಣಾ ದಿನಾಂಕದ ಕರ್ತವ್ಯ ಹಾಗೂ ಚುನಾವಣಾ ಬಳಿಕದ ಜವಾಬ್ದಾರಿಯೆಂದು ವಿಭಾಗಿಸಿ ಇವರಿಗೆ ಹೆಚ್ಚಿನ ಹೊಣೆಗಾರಿಕೆ ವಹಿಸಲಾಗಿದೆ. ಇದೇ ರೀತಿಯ ಸಮಗ್ರ ತರಬೇತಿಯನ್ನು ನೀಡಲಾಗುವುದು. ಸಮಸ್ಯೆಗಳಿದ್ದರೆ ತಕ್ಷಣ ಆರ್ ಒಗಳ ಗಮನಕ್ಕೆ ತನ್ನಿ.  ಹೊಣೆಯನ್ನು ಸಮರ್ಥವಾಗಿ ನಿಭಾಯಿಸಿ ಎಂದ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳು ದೂರುಗಳು ನೇರವಾಗಿ ತನಗೆ ಬಂದರೆ ಪರಿಣಾಮ ನೆಟ್ಟಗಿರದು. ಚುನಾವಣಾ ಕೆಲಸದಲ್ಲಿ ಕರ್ತವ್ಯಲೋಪಕ್ಕೆ ಅವಕಾಶ ನೀಡದೆ ನಿಷ್ಪಕ್ಷಪಾತವಾಗಿ ಕರ್ತವ್ಯ ನಿರ್ವಹಿಸಿ ಎಂದರು.
ಮಂಗಳೂರು ಮಹಾನಗರಪಾಲಿಕೆಯಲ್ಲಿ 60 ವಾರ್ಡುಗಳಿದ್ದು, 379 ಮತಗಟ್ಟೆಗಳನ್ನು ನಿಗದಿಪಡಿಸಲಾಗಿದೆ. ಒಟ್ಟು 312579 ಮತದಾರರಿದ್ದು, 153226 ಪುರುಷರು, 159353 ಮಹಿಳೆಯರಿದ್ದಾರೆ. ಮೂಡಬಿದ್ರೆ ಪುರಸಭೆಯಲ್ಲಿ 23 ವಾರ್ಡುಗಳಿದ್ದು, 23 ಮತಗಟ್ಟೆಗಳಿವೆ. ಒಟ್ಟು 19458 ಮತದಾರರಿದ್ದು, 9624 ಪುರುಷರು ಮತ್ತು 9834 ಮಹಿಳೆಯರಿದ್ದಾರೆ. ಉಳ್ಳಾಲ ಪುರಸಭೆಯಲ್ಲಿ 27 ವಾರ್ಡುಗಳಿದ್ದು, 35 ಮತಗಟ್ಟೆಗಳಿವೆ. 34513 ಮತದಾರರಿದ್ದು, 16820 ಪುರುಷರು, 17693 ಮಹಿಳೆಯರಿದ್ದಾರೆ. ಬಂಟ್ವಾಳ ಪುರಸಭೆಯಲ್ಲಿ 23 ವಾರ್ಡುಗಳಿದ್ದು, 31 ಮತಗಟ್ಟೆಗಳಿವೆ. 36830 ಒಟ್ಟು ಮತದಾರರ ಸಂಖ್ಯೆ. ಇವರಲ್ಲಿ ಪುರುಷರು 18282, ಮಹಿಳೆಯರು 18584.
ಪುತ್ತೂರು ಪುರಸಭೆಯಲ್ಲಿ 27 ವಾರ್ಡುಗಳಿದ್ದು, 42 ಮತಗಟ್ಟೆಗಳಿವೆ. 33 727 ಒಟ್ಟು ಮತದಾರರಿದ್ದು, 16437 ಪುರುಷರು, 16290 ಮಹಿಳೆಯರು. ಬೆಳ್ತಂಗಡಿಯಲ್ಲಿ 11 ವಾರ್ಡುಗಳು, 11 ಮತಗಟ್ಟೆಗಳು, 5140 ಮತದಾರರು ಒಟ್ಟಿಗಿದ್ದು, ಇವರಲ್ಲಿ ಪುರುಷರು 2522, ಮಹಿಳೆಯರು 2618. ಸುಳ್ಯದಲ್ಲಿ 18 ವಾರ್ಡುಗಳು, 18 ಮತಗಟ್ಟೆಗಳು, 11269 ಮತದಾರರು. ಇವರಲ್ಲಿ ಪುರುಷರು 5699, ಮಹಿಳೆಯರು 5570.
ಜಿಲ್ಲೆಯಲ್ಲಿ ಒಟ್ಟು 189 ವಾರ್ಡುಗಳಿದ್ದು, 539 ಮತಗಟ್ಟೆಗಳನ್ನು ಪಟ್ಟಿ ಮಾಡಲಾಗಿದೆ. ಒಟ್ಟು 453516 ಮತದಾರರಿದ್ದು, ಪುರುಷರು 222610, ಮಹಿಳೆಯರು 229942.
ನಾಮ ಪತ್ರ ಸಲ್ಲಿ ಸುವ ವೇಳೆ ಅಭ್ಯರ್ಥಿ ಯನ್ನೊ ಳಗೊಂ ಡಂತೆ ಒಟ್ಟು 5 ಜನರು ಜೊತೆ ಗಿರಲು ಅವ ಕಾಶ ವಿದ್ದು, ನಾಮ ಪತ್ರ ಸಲ್ಲಿಸುವ ಸ್ಥಳ ಗಳಲ್ಲಿ ಪೊಲೀಸ್ ವ್ಯವಸ್ಥೆ ಮಾಡ ಲಾಗಿದೆ. ಪಾಲಿಕೆ ವ್ಯಾಪ್ತಿ ಯಲ್ಲಿ 1ರಿಂದ 10 ವಾರ್ಡು ಗಳವರು ಪಾಲಿಕೆ ಉಪಕಚೇರಿ ಸುರತ್ಕಲ್ ನಲ್ಲಿ, 21ರಿಂದ 25 ಮತ್ತು 31ರಿಂದ 35 ಪಾಲಿಕೆ ಉಪಕಚೇರಿ ಕದ್ರಿಯಲ್ಲಿ, 11ರಿಂದ 20, 26ರಿಂದ 30, 36ರಿಂದ 60 ವಾರ್ಡುಗಳವರು ಪಾಲಿಕೆ ವ್ಯಾಪ್ತಿಯ ಲಾಲ್ ಬಾಗ್ ನಲ್ಲಿ ನಾಮಪತ್ರ ಸಲ್ಲಿಸಬಹುದಾಗಿದೆ. ಮೂಡಬಿದ್ರೆಯಲ್ಲಿ ಪುರಸಭೆ ಕಚೇರಿ ಮೂಡಬಿದ್ರೆಯಲ್ಲಿ, ಉಳ್ಳಾಲದಲ್ಲಿ ಪುರಸಭೆ ಕಚೇರಿ ಉಳ್ಳಾಲದಲ್ಲಿ, ಬಂಟ್ವಾಳದಲ್ಲಿ ಪುರಸಭೆ ಕಚೇರಿ ಬಂಟ್ವಾಳದಲ್ಲಿ, ಪುತ್ತೂರು ಪುರಸಭೆ ಕಚೇರಿ, ಬೆಳ್ತಂಗಡಿ ಪಟ್ಟಣ ಪಂಚಾಯಿತಿ ಕಚೇರಿ, ಸುಳ್ಯ ಪಟ್ಟಣ ಪಂಚಾಯಿತಿ ಕಚೇರಿಯಲ್ಲಿ ನಾಮ ಪತ್ರ ಸಲ್ಲಿಸಬಹುದಾಗಿದೆ.
ಅಬಕಾರಿ ಇಲಾಖೆಯ ಹೊಣೆ ಗುರುತರವಾಗಿದ್ದು, ಚುನಾವಣಾ ಸಮಯದಲ್ಲಿ ಇಲಾಖೆ ಲೈಸನ್ಸ್ ಇಲ್ಲದೆ ಕಾರ್ಯಾಚರಿಸುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಿದೆ. ಮಾರಾಟದಲ್ಲಿ %20ರಷ್ಟು ಹೆಚ್ಚಳ ಕಂಡುಬಂದರೆ ತನಿಖೆ ನಡೆಸಿ ಕ್ರಮಕೈಗೊಳ್ಳಿ; ಮಾರಾಟದ ಅವಧಿ ವಿಸ್ತರಣೆಯಾದರೆ ಇಲಾಖೆ ಉತ್ತರಿಸಬೇಕಿದೆ. ಹಾಗಾಗಿ ಅಬಕಾರಿ ಇಲಾಖೆ ಹೆಚ್ಚಿನ ಜಾಗೃತಿಯಿಂದ ಕೆಲಸ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು. ಚೆಕ್ ಪೋಸ್ಟ್ ಗಳನ್ನು ಬಲಪಡಿಸಿ. ಅಕ್ರಮ ಮದ್ಯ ಮಾರಾಟಕ್ಕೆ ಅವಕಾಶ ನೀಡಬೇಡಿ ಎಂದರು.
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ  ಅಭಿಷೇಕ್ ಗೋಯಲ್, ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ., ಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್, ಡಿಸಿಪಿ ಮುತ್ತುರಾಯ, ಮಂಗಳೂರು ಸಹಾಯಕ ಆಯುಕ್ತ ಸದಾಶಿವ ಪ್ರಭು,ಪುತ್ತೂರು ಎ ಸಿ ಪ್ರಸನ್ನ ಅವರನ್ನೊಳಗೊಂಡಂತೆ ಹಿರಿಯ ಅಧಿಕಾರಿಗಳು, ಸೆಕ್ಟರ್ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಚುನಾವಣಾ ವೀಕ್ಷಕರ ನೇಮಕ

ಮಂಗಳೂರು,ಫೆಬ್ರವರಿ,20: ದಕ್ಷಿಣ ಕನ್ನಡ ಜಿಲ್ಲೆ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಚುನಾವಣಾ ವೀಕ್ಷಕರನ್ನು ನೇಮಿಸಲಾಗಿದೆ.
ಮಂಗಳೂರು ಮಹಾನಗರಪಾಲಿಕೆಗೆ ಚುನಾವಣಾ ವೀಕ್ಷಕರಾಗಿ ಶ್ರೀ ಶಿವಲಿಂಗ ಮೂರ್ತಿ, (ಭಾಆಸೇ) ಸರ್ಕಾರದ ಅಪರ ಕಾರ್ಯದರ್ಶಿಗಳು, ಸಿಆಸುಇ ಬೆಂಗಳೂರು, ಮೂಡಬಿದ್ರಿ, ಉಳ್ಳಾಲ, ಬಂಟ್ವಾಳಕ್ಕೆ ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಬೆಟಸೂರ್ ಮಠ್, ಪುತ್ತೂರು, ಬೆಳ್ತಂಗಡಿ, ಸುಳ್ಯಕ್ಕೆ ಮಂಗಳೂರು ಮಹಾನಗರಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್ ಅವರನ್ನು ನೇಮಿಸಿ ಚುನಾವಣಾ ಆಯೋಗ ಆದೇಶ ಹೊರಡಿಸಿದೆ.

ದೂರು ಸ್ವೀಕರಿಸಲು ಕಂಟ್ರೋಲ್ ರೂಂ

ಮಂಗಳೂರು, ಫೆಬ್ರವರಿ.20 : ನಗರ ಸ್ಥಳೀಯ ಸಂಸ್ಥೆಗಳಿಗೆ ಚುನಾವಣಾ ಘೋಷಣೆಯ ಹಿನ್ನಲೆಯಲ್ಲಿ ಸಾರ್ವಜನಿಕರಿಂದ ದೂರು ಸ್ವೀಕರಿಸಲು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದೂರು ನಿರ್ವಹಣಾ ಕೋಶವನ್ನು ಆರಂಭಿಸಲಾಗಿದ್ದು, ಈ ಸಂಬಂಧ ಯಾವುದೇ ದೂರು ದುಮ್ಮಾನಗಳನ್ನು 2220590 ಈ ನಂಬರ್ ಗೆ ನೀಡಬಹುದು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿ  ಎನ್ ಪ್ರಕಾಶ್ ಅವರು ತಿಳಿಸಿದ್ದಾರೆ. 

ಪಾಲಿಕೆ ಆಡಳಿತಾಧಿಕಾರಿಯಾಗಿ ಜಿಲ್ಲಾಧಿಕಾರಿ ಎನ್. ಪ್ರಕಾಶ್

ಮಂಗಳೂರು, ಫೆಬ್ರವರಿ.20: ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆಯಾಗಿರುವ ಹಿನ್ನಲೆಯಲ್ಲಿ ಮಂಗಳೂರು ಮಹಾನಗರಪಾಲಿಕೆಯ ಆಡಳಿತಾಧಿಕಾರಿಗಳಾಗಿ ಫೆಬ್ರವರಿ 21 ರಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ  ಎನ್ ಪ್ರಕಾಶ್ ಅವರನ್ನು ನೇಮಿಸಿ ಸರ್ಕಾರ ಆದೇಶ ಹೊರಡಿಸಿದೆ.

Tuesday, February 19, 2013

ಆಂತರಿಕ ರಕ್ಷಣಾ ವ್ಯವಸ್ಥೆಯಲ್ಲಿ ಪೋಲೀಸ್ ಇಲಾಖೆ ಪಾತ್ರ ಪ್ರಮುಖ-ಪ್ರತಾಪರೆಡ್ಡಿ

ಮಂಗಳೂರು, ಫೆಬ್ರವರಿ.19: ದೇಶದ ಆಂತರಿಕ ರಕ್ಷಣಾ ವ್ಯವಸ್ಥೆಯಲ್ಲಿ ಪ್ರಮುಖ ಪಾತ್ರ ವಹಿಸುವ ಗೃಹ ಇಲಾಖೆಯ ಜವಾಬ್ದಾರಿ ಹೆಚ್ಚಿದ್ದು,ಇಲಾಖೆ ಸದಾ ಜಾಗೃತವಾಗಿರಬೇಕಾಗುತ್ತದೆ ಎಂದು ಪಶ್ಚಿಮ ವಲಯ ಪೋಲೀಸ್ ಮಹಾ ನಿರೀಕ್ಷಕರಾದ  ಪ್ರತಾಪ ರೆಡ್ಡಿಯವರು ಕರೆ ನೀಡಿದ್ದಾರೆ.
ಅವರು ಇಂದು ನಗರದ ಪೋಲೀಸ್ ಕಮೀಷನರೇಟ್ ಕಚೇರಿಯಲ್ಲಿ ಬೆಂಗಳೂರಿನ ಸಮಕಾಲೀನ ಅಧ್ಯಯನ ಸಂಸ್ಥೆ ವತಿಯಿಂದ ಆಯೋಜಿಸಿರುವ 2 ದಿನಗಳ ಪಶ್ಚಿಮ ವಲಯ ಪೋಲೀಸ್ ಅಧಿಕಾರಿಗಳು ಹಾಗೂ ನಕ್ಸಲ್ ನಿಗ್ರಹ ದಳ ಅಧಿಕಾರಿಗಳಿಗೆ ರಾಷ್ಟ್ರೀಯ ಭದ್ರತೆ ಕುರಿತ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ಮಿನಿ ಭಾರತವಿದ್ದಂತೆ ಇದ್ದು, ಇಲ್ಲಿ ಎಲ್ಲಾ ಧರ್ಮಗಳು,ಸಂಸ್ಕೃತಿ,ಭಾಷೆ ಸೇರಿದಂತೆ ವಿದೇಶಿಯರೂ ಹೆಚ್ಚಿನ ಸಂಖ್ಯೆಯಲ್ಲಿದ್ದು ಆಯಾ ದೇಶ ರಾಜ್ಯಗಳಲ್ಲಿ ಏನಾದರೂ ಘಟನೆಗಳು ಸಂಭವಿಸಿದರೆ ಇಲ್ಲಿಯೂ ಅದರ ಬಗ್ಗೆ ಪ್ರತಿಭಟನೆಗಳು ನಡೆದು ಕಾನೂನು ಸುವ್ಯವಸ್ಥೆ ತಲೆದೋರುತ್ತದೆ.ಆದ್ದರಿಂದ ರಾಷ್ಟ್ರೀಯ ಭದ್ರತಾ ದೃಷ್ಟಿಯಿಂದ ನಮ್ಮ ರಾಜ್ಯದಲ್ಲಿರುವ ಪೆಟ್ರೋಕೆಮಿಕಲ್ಸ್ ರಕ್ಷಣಾ ವಲಯ ಕೈಗಾರಿಕೆಗಳು,ಅಣು ಸ್ಥಾವರಗಳ  ರಕ್ಷಣಾ ದೃಷ್ಟಿಯಿಂದ ಘಟನೆಗಳು ಸಂಭವಿಸುವ ಮುನ್ನ ಸದಾ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸುವ ತಂತ್ರಗಾರಿಕೆಯನ್ನು ರೂಢಿಸಿಕೊಳ್ಳಬೇಕೆಂದರು.ಪೋಲೀಸರು ಕರಾವಳಿ ರಕ್ಷಣಾ ಪಡೆ ನಕ್ಸಲ್ ನಿಗ್ರಹದಳ ಮುಂತಾದವರು ಕೇವಲ ಸ್ಥಳೀಯ ವಿಷಯಗಳ ಕುರಿತು ಚಿಂತಿಸುವುದರ ಜೊತೆಗೆ ರಾಜ್ಯದಲ್ಲಿ ಬೀಡು ಬಿಟ್ಟಿರುವ ಈಶಾನ್ಯ ರಾಜ್ಯಗಳ ವಿದ್ಯಾಥರ್ಿಗಳು,ಟಿಬೇಟ್ ನಾಗರೀಕರು ಸೇರಿದಂತೆ ಇತರೆ ವಿದೇಶಿಯರ ಬಗ್ಗೆ  ಹಾಗೂ ಅವರ ಚಟುವಟಿಕೆಗಳ ಬಗ್ಗೆ ಸದಾ ಜಾಗೃತರಾಗಿರಬೇಕೆಂದು  ಅವರು ತಿಳಿಸಿದರು.
        ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೊ. ಚೆಂಗಪ್ಪ ಅವರು ದೇಶದ ಇತರೆ ರಾಜ್ಯಗಳಂತೆ ಕರ್ನಾಟಕವೂ ಆಂತರಿಕ ಭದ್ರತೆ ಸಮಸ್ಯೆ ಎದುರಿಸುತ್ತಿದೆ.ಸಾಮಾಜಿಕ,ಆರ್ಥಿಕ,ರಾಜಕೀಯ ಬೆಳವಣಿಗೆಗಳು ರಾಜ್ಯದ ಗಡಿ ದಾಟಿ ಮುಂದುವರಿದಿದೆ. ಇಲ್ಲಿ ಕಾಶ್ಮೀರಿಗಳ ಕುಟುಂಬಗಳು,ಟಿಬೇಟಿಯನ್ನರು ಸೇರಿದಂತೆ ವಿವಿಧ ದೇಶಗಳ ಜನ ಮೈಸೂರು ಗೋಕರ್ಣ ಮುಂತಾದೆಡೆ ಪ್ರವಾಸಕ್ಕಾಗಿ ಹಾಗೂ ಶಿಕ್ಷಣ ಯೋಗ ಕಲಿಯಲು ಆಗಮಿಸುತ್ತಿದ್ದಾರೆ.ಆದ್ದರಿಂದ ನಾವು ನಮ್ಮ ಆಂತರಿಕ ಭದ್ರತೆಗೆ ಹೆಚ್ಚಿನ ಗಮನಹರಿಸುವ ಮೂಲಕ  ಜಾಗ್ರತೆ ವಹಿಸುವ ಆವಶ್ಯವಿದ್ದು,ಈ ದಿಸೆಯಲ್ಲಿ ಇಂದು ಮತ್ತು ನಾಳೆ ನಡೆಯುವ ಎರಡು ದಿನಗಳ ರಾಷ್ಟ್ರೀಯ ಭದ್ರತೆ ಕಾರ್ಯಾಗಾರ ಅತ್ಯಂತ ಪ್ರಮುಖವಾದುದು ಎಂದರು. ದಕ್ಷಿಣಕನ್ನಡ,ಉಡುಪಿ,ಚಿಕ್ಕಮಗಳೂರುಹಾಗೂ ಉತ್ತರಕನ್ನಡ ಜಿಲ್ಲೆಗಳ 50ಕ್ಕೂ ಹೆಚ್ಚು ಪೋಲೀಸ್ ಅಧಿಕಾರಿಗಳು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

ಫೆ.24 ಎರಡನೇ ಸುತ್ತಿನ ಪಲ್ಸ್ ಪೋಲಿಯೋ

ಮಂಗಳೂರು,ಫೆಬ್ರವರಿ.19 : ಫೆಬ್ರವರಿ 24ರಂದು ನಡೆಯಲಿರುವ ಪ್ರಸಕ್ತ ಸಾಲಿನ ಎರಡನೇ ಸುತ್ತಿನ ಪಲ್ಸ್ ಪೋಲಿಯೋ ಹನಿ ಹಾಕಿಸುವ ಕಾರ್ಯಕ್ರಮದಲ್ಲಿ ಅಲೆಮಾರಿ ಮಕ್ಕಳು ಯಾವುದೇ ಕಾರಣದಿಂದ ವಂಚಿತರಾಗಬಾರದು ಎಂದು ಜಿಲ್ಲಾಧಿಕಾರಿ ಎನ್ ಪ್ರಕಾಶ್ ಅವರು ಹೇಳಿದರು.
       ಇಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ 2013ನೇ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮ ಅನುಷ್ಠಾನಕ್ಕೆ ಕರೆಯಲಾದ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. ಕಳೆದ ಬಾರಿ ಲಸಿಕಾ ಕಾರ್ಯಕ್ರಮದಲ್ಲಿ ಎದುರಾಗಿರುವ ಸಮಸ್ಯೆಗಳನ್ನು ಅವಲೋಕಿಸಿ ಪರಿಹರಿಸಿ ಕಾರ್ಯಕ್ರಮ ಯಶಸ್ವಿಯಾಗ ಬೇಕೆಂದು ಸೂಚಿಸಿದರು.
ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿರುವ ಕಾರ್ಯ ಕ್ರಮವಿದು; ನಿರಾಂತ ಕವಾಗಿ ನಡೆಯು ತ್ತಿದೆ ಎಂದು ನಿರ್ಲಕ್ಷ್ಯ ವಹಿಸದೆ ಹೆಚ್ಚಿನ ಅಸ್ಥೆ ವಹಿಸಿ ಮಾಡ ಬೇಕಾದ ಅಗತ್ಯವಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೂಕ್ತ  ಸಮನ್ವಯ ಮತ್ತು ಸಂವಹನವನ್ನಿರಿಸಿಕೊಂಡು ಹೈ ರಿಸ್ಕ್ ಪ್ರದೇಶದಲ್ಲಿ ಹೆಚ್ಚು ಕೆಲಸಮಾಡಿ, ರೂಟ್ ಮ್ಯಾಪ್ ಗಳು ಸಮರ್ಪಕ ಮತ್ತು ಸಮಗ್ರವಾಗಿರಲಿ. ಜಿಲ್ಲಾ ಮಟ್ಟದಲ್ಲಿ ಪ್ರತಿದಿನ ಸಂಜೆ ನಡೆಯುವ ಸಭೆಗಳಂತೆ ತಾಲೂಕು ಮಟ್ಟದಲ್ಲೂ ತಾಲೂಕು ವೈದ್ಯಾಧಿಕಾರಿಗಳು ಸಭೆ ನಡೆಸಿ ಎಂದರಲ್ಲದೆ, ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಪ್ರದೇಶಗಳಲ್ಲಿ ಪೋಲಿಯೋ ಸಂಬಂಧ ಪ್ರಚಾರ ಸಾಮಗ್ರಿ ಗಳನ್ನು ಪ್ರಚುರ ಪಡಿಸುವ ಸಂದರ್ಭದಲ್ಲಿ ಮುನ್ನೆಚ್ಚರಿಕೆ ವಹಿಸಿ ಎಂದು ಎಚ್ಚರಿಕೆ ನೀಡಿದರು.
ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸುವವರ ಹೆಸರನ್ನು ತಮಗೆ  ನೀಡಿ ಎಂದು ಜಿಲ್ಲಾಧಿಕಾರಿಗಳು ಆರ್ ಸಿ ಎಚ್ ಅಧಿಕಾರಿಗಳಿಗೆ ಹೇಳಿದರು. ಡಿವಿಷನಲ್ ಮೆಡಿಕಲ್ ಸವರ್ೆಲೆನ್ಸ್ ಅಧಿಕಾರಿಗಳಾದ ಡಾ ಸತೀಶ್ಚಂದ್ರ ಅವರು ನ್ಯೂನ್ಯತೆಗಳ ಬಗ್ಗೆ ಹಾಗೂ ಸಾಧನೆಗಳ ಬಗ್ಗೆ ವಿವರಿಸಿದರು. ಕಳೆದ ಜನವರಿಯಲ್ಲಿ ನಡೆದ ಪಲ್ಸ್ ಪೋಲಿಯೋ ಕಾರ್ಯಕ್ರಮದಲ್ಲಿ ಮಹಾನಗರಪಾಲಿಕೆ ಉತ್ತಮ ಸಾಧನೆ ಮಾಡಿದೆ ಎಂದೂ ಆರ್ ಸಿ ಎಚ್ ಡಾಕ್ಟರ್ ರುಕ್ಮಿಣಿ ಹೇಳಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಓ ಆರ್ ಶ್ರೀರಂಗಪ್ಪ ಉಪಸ್ಥಿತರಿದ್ದರು.

Saturday, February 16, 2013

ಗ್ರಾಮೀಣ ಮಹಿಳೆಯರಿಗೆ ಕಾನೂನಿನ ಅರಿವು ಮೂಡಿಸಿ-ವಿಶ್ವನಾಥ ವಿ.ಅಂಗಡಿ

ಮಂಗಳೂರು, ಫೆಬ್ರವರಿ.16 :ಕೌಟುಂಬಿಕ ದೌರ್ಜನ್ಯಗಳು ಕೇವಲ ನಗರ ಪಟ್ಟಣಗಳಿಗೆ ಮಾತ್ರ ಸೀಮಿತವಾಗಿಲ್ಲ. ಅವು ಗ್ರಾಮಾಂತರ ಪ್ರದೇಶಗಳಲ್ಲೂ ನಡೆಯುತ್ತಿರುವುದರಿಂದ ಗ್ರಾಮೀಣ  ಮಹಿಳೆಯರ ಸಂರಕ್ಷಣೆಗಾಗಿ ಅವರಿಗೆ ಕಾನೂನಿನ ಅರಿವು ಮೂಡಿಸಬೇಕು ಎಂದು  ವಿಶ್ವನಾಥ ವಿ.ಅಂಗಡಿ, ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಮತ್ತು ಸದಸ್ಯ ಕಾರ್ಯದರ್ಶಿಗಳು ,ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ,ಬೆಂಗಳೂರು ಇವರು ತಿಳಿಸಿರುತ್ತಾರೆ.
ಅವರು ಇಂದು ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ದಕ್ಷಿಣಕನ್ನಡ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ,ಮಂಗಳೂರು,ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಮಂಗಳೂರು ವಕೀಲರ ಸಂಘ,ಹಾಗೂ ಇನ್ನಿತರ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿರುವ ಏಕದಿನ ಜಿಲ್ಲಾ ಮಟ್ಟದ ಮಹಿಳೆಯರಿಗಾಗಿ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ವಿಶ್ವದಲ್ಲಿ ಇಂದು ಹಲವಾರು ಕಾರಣಗಳಿಂದ ಪುರುಷ ಹಾಗೂ ಮಹಿಳೆಯರ ಅನುಪಾತ ಕಡಿಮೆ ಇದೆ. 1000 ಪುರುಷರಿಗೆ 940 ಮಹಿಳೆಯರಿದ್ದಾರೆ. ಈ ಅನುಪಾತ ದಕ್ಷಿಣಕನ್ನಡ ಜಿಲ್ಲೆಯಲ್ಲಿ 1000 ಪುರುಷರಿಗೆ 1018 ಮಹಿಳೆಯರಿದ್ದು,ಮಹಿಳೆ ಬಗ್ಗೆ ಈ ಜಿಲ್ಲೆಯಲ್ಲಿ ಇದೊಂದು ಆಶಾಕಿರಣವಾಗಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣಕನ್ನಡ ಜಿಲ್ಲೆ ಕೌಟುಂಬಿಕ ನ್ಯಾಯಾಲಯ ನ್ಯಾಯಾಧೀಶರಾದ  ಜಿ.ಪಿ.ನರಸಿಂಹಮೂರ್ತಿಅವರು ಮಾತನಾಡಿ ಜಿಲ್ಲೆಯಲ್ಲಿ 354 ಕೌಟುಂಬಿಕ ಪ್ರಕರಣಗಳು ಕೌಟುಂಬಿಕ ನ್ಯಾಯಾಲಯದಲ್ಲಿ ದಾಖಲಾಗಿದ್ದು,ಇವುಗಳಲ್ಲಿ 224 ಪ್ರಕರಣಗಳು ವಿವಾಹ ವಿಚ್ಚೇಧನಕ್ಕೆ ಸಂಬಂಧಿಸಿದವಾಗಿವೆ. ಅದರಲ್ಲೂ ಇವರ್ಯಾರೂ ನಿರಕ್ಷರರಲ್ಲ ಮೇಲಾಗಿ ಡಾಕ್ಟರು,ಇಂಜಿನಿಯರ್ ಗಳು,ಸಕರ್ಾರಿ,ಖಾಸಗಿ ಕಂಪೆನಿಗಳಲ್ಲಿ ಲಕ್ಷಾಂತರ ರೂಪಾಯಿಗಳ ವೇತನ ಪಡೆಯುವ ಜವಾಬ್ದಾರಿಕ ಜನರಾಗಿದ್ದಾರೆಂದು ವಿಷಾದ ಸೂಚಿಸಿದರು.
        ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಮಾತನಾಡಿ ದಕ್ಷಿಣಕನ್ನಡ ಜಿಲ್ಲೆಯಲ್ಲಿ 2011-12 ರಲ್ಲಿ 142 ಮತ್ತು 2012-13 ರಲ್ಲಿ 312ಕೌಟುಂಬಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ.ವಿದ್ಯಾವಂತರ ಜಿಲ್ಲೆಯಲ್ಲಿಯೇ ಈ ಪ್ರಮಾಣದ ಪ್ರಕರಣಗಳು ದಾಖಲಾಗಿರುವುದು ಭಯ ಹುಟ್ಟಿಸಲಿದೆ ಎಂದು ತಿಳಿಸಿ ಇಂತಹ ಪ್ರಕರಣಗಳಿಗೆ ಇತಿಶ್ರೀ ಹಾಡಲು ಮಹಿಳೆಯರೇ ಕಾನೂನಿನ ಅರಿವನ್ನು ಪಡೆಯಬೇಕು.ಕಾನೂನು ಸಮರ್ಪಕವಾಗಿ ಅನುಷ್ಠಾನವಾದಾಗ ಮಹಿಳೆಯರ ಮೇಲಿನ ಶೋಷಣೆಗಳು ದೌರ್ಜನ್ಯ ಪ್ರಕರಣಗಳು ನಿಲ್ಲುತ್ತವೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಅಶೋಕ್ ಅರಿಗಾ.ಪಿ ಅವರು ಮಾತನಾಡಿ ಮಹಿಳೆಯರು ತಮ್ಮ ಮೇಲೆ ಆಗುವ ದೌರ್ಜನ್ಯಗಳನ್ನು ಎದುರಿಸಲು ಕಾನೂನು ಅಸ್ತ್ರವನ್ನು ಕೊನೆಯ ಅಸ್ತ್ರವಾಗಿ ಬಳಸಬೇಕು,ಎಷ್ಟೋ ಪ್ರಕರಣಗಳಲ್ಲಿ ತಪ್ಪತಸ್ಥರು ಕಾನೂನಿನ ಬಲಿ ಪಶುಗಳಾಗುತ್ತಿದ್ದಾರೆ ಎಂಬ ಕಿವಿ ಮಾತು ಹೇಳಿದರು.
ನ್ಯಾಯಾಧೀಶರಾದ ಜಿ.ಎನ್.ಸುಬ್ರಹ್ಮಣ್ಯ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಎ.ಶಕುಂತಳಾ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.ಮಕ್ಕಳ ಅಭಿವೃದ್ದಿ ಅಧಿಕಾರಿ ಕು.ಶಾಂತಾ ಸ್ವಾಗತಿಸಿದರು.ಆರ್ ಸಿ ಎಚ್ ಅಧಿಕಾರಿ ಡಾ. ರುಕ್ಮಿಣಿ ವಂದಿಸಿದರು.
 

Thursday, February 14, 2013

ನಗರಕ್ಕೆ ಹಸಿರುಕವಚ ಪಶ್ಚಿಮಘಟ್ಟ ಕಾರ್ಯಪಡೆ ಗುರಿ: ಆಶೀಸರ

ಮಂಗಳೂರು,ಫೆಬ್ರವರಿ.14: ಹಸಿರು ಆರೋಗ್ಯ ಅಭಿಯಾನ ಇಂದಿನ ಅಗತ್ಯವಾಗಿದ್ದು,ಕರಾವಳಿ ವಲಯಗಳಲ್ಲಿ ಹಸಿರು ಬೆಳೆಸಲು ಬಜೆಟ್ ನಲ್ಲಿ ಕರ್ನಾಟಕ ಸರ್ಕಾರ ಪ್ರತ್ಯೇಕ ಹಣವನ್ನು ಮೀಸಲಿರಿಸಿದೆ. ಗ್ರಾಮ ಅರಣ್ಯ ಸಮಿತಿ ಪುನರುಜ್ಜೀವನಕ್ಕೆ, ಪಟ್ಟಣ ಪ್ರದೇಶದಲ್ಲಿ ಹಸಿರು ಬೆಳೆಸಲು 18 ಕೋಟಿರೂ., ರಸ್ತೆ ಬದಿಗಳಲ್ಲಿ ಸಸಿ ನೆಡಲು 12 ಕೋಟಿ, ಸಮೃದ್ಧ ಹಸಿರು ಗ್ರಾಮಕ್ಕೆ ಮೂರು ಕೋಟಿ, ದೇವರ ಕಾಡುಗಳ ರಕ್ಷಣೆಗೆ 8 ಕೋಟಿ ಮೀಸಲು, ಇಕೋ ಟೂರಿಸಂಗೆ ಪ್ರತ್ಯೇಕ ಬಜೆಟ್ ಮೀಸಲಿರಿಸಿದೆ.
            ಔಷಧೀಯ ಸಸ್ಯಗಳ ಬಳಕೆ, ಸಂರಕ್ಷಣೆ ಮತ್ತು ಸಂವರ್ಧನೆಗಾಗಿ `ಹಸಿರು ಆರೋಗ್ಯ' ಅಭಿಯಾನವನ್ನು ಹಮ್ಮಿಕೊಳ್ಳಲಾಗಿದ್ದು  ಕರಾವಳಿ ಭಾಗದಲ್ಲಿ ಇಂದಿನಿಂದ(ಫೆ.15) ಸುಳ್ಯ ಪ್ರದೇಶದಿಂದ ಅಭಿಯಾನ ಆರಂಭಗೊಳ್ಳಲಿದೆ ಎಂದು ಪಶ್ಚಿಮ ಘಟ್ಟ ಕಾರ್ಯಪಡೆ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದ್ದಾರೆ.
ಗುರುವಾರ ಜಿಲ್ಲಾಧಿ ಕಾರಿಗ ಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾ ರರೊಂದಿಗೆ ಮಾತ ನಾಡಿದ ಅವರು ನಾಟಿ ಔಷಧಿಯ ಮಹತ್ವ ವನ್ನು ಸಾರು ವುದ ರೊಂದಿಗೆ ಅದರ ರಕ್ಷಣೆಗಾಗಿ ಕಾರ್ಯಕ್ರಮಗಳು ನಡೆಯುತ್ತಿವೆ ಎಂದರು.
ಚಿಕ್ಕಮಗಳೂರಿನಲ್ಲಿ ಈಗಾಗಲೇ ಈ ಯೋಜನೆ ಆರಂಭವಾಗಿದೆ. ಹಳ್ಳಿ ಔಷಧಿಗಳು ವಿನಾಶದಂಚಿನಲ್ಲಿದ್ದು ಅವುಗಳನ್ನು ಉಳಿಸುವ ಕೆಲಸವಾಗಬೇಕು. ಔಷಧೀಯ ಮೂಲಿಕೆಗಳ ಬಗ್ಗೆ ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಅಭಿಯಾನ ಕೈಗೆತ್ತಿಕೊಳ್ಳಲಾಗಿದೆ. ನಾಟಿ ವೈದ್ಯಕೀಯ, ಔಷಧಿ ಗಿಡ ರಕ್ಷಣೆ ಕುರಿತು ಮಾಹಿತಿ ಒದಗಿಸುವಲ್ಲಿ ಈಗಾಗಲೇ ನೂರಕ್ಕೂ ಅಧಿಕ ಕಡೆ ಶಿಬಿರಗಳು ನಡೆದಿವೆ. ಕೊಡಗು, ದಕ್ಷಿಣ ಕನ್ನಡ ಜಿಲ್ಲೆಯ ಆಯ್ದ 30 ಸ್ಥಳಗಳಲ್ಲಿ ಹಸಿರು ಆರೋಗ್ಯ ಶಿಬಿರ ನಡೆಯಲಿದೆ ಎಂದರು.
ಹಲಸು ಮತ್ತು ಜೇನು ಅಭಿವೃದ್ಧಿಗೆ ವಿಶೇಷ ಅಭಿಯಾನ ನಡೆಸಲು ನಿರ್ಧರಿಸಲಾಗಿದೆ. ಮಲೆನಾಡಿನ ಕಾಡುಗಳಲ್ಲಿ ಸುಮಾರು 50 ಸಾವಿರ ಹಲಸಿನ ಗಿಡಗಳನ್ನು ನೆಡಲಾಗುವುದು. ಹಲಸು ಬೆಳೆಗಾರರ ಸಂಘ, ಒಕ್ಕೂಟ ರಚನೆಯ ಮೂಲಕ ಸರಕಾರ ಹಲಸು ಬೆಳೆಗ ವಿಶೇಷ ಆದ್ಯತೆ ನೀಡಬೇಕು. ಹಲಸನ್ನು ಪ್ರಮುಖ ಹಣ್ಣಿನ ಬೆಲೆ ಎಂದು ತೋಟಗಾರಿಕಾ ಇಲಾಖೆ ಘೋಷಿಸುವಂತೆ ಒತ್ತಾಯಿಸಲಾಗಿದೆ ಎಂದರು.
ಅಲ್ಲದೆ ಅಡವಿ ಜೇನು ರಕ್ಷಣೆಗೆ ಆದ್ಯತೆ ನೀಡಲಾಗಿದೆ. ಅರಣ್ಯ ಇಲಾಖೆಯ ಜೇನು ಹರಾಜು ಪ್ರ ಕ್ರಿಯೆ ಯಲ್ಲಿ ಬದಲಾ ವಣೆ ತಂದು ವನ ವಾಸಿಗಳು, ಅರಣ್ಯ ಸಮಿತಿ ಗಳಿಗೆ ಸಂಗ್ರಹಕ್ಕೆ ಜವಾ ಬ್ದಾರಿ ನೀಡ ಬೇಕು. ಜೇನು ಮೇಳ ನಡೆಸ ಬೇಕು. ಜೇನು ಸಂಗ್ರಹಗಾರರಿಗೆ ತರಬೇತಿ ನೀಡುವಂತೆ ಸರಕಾರದ ಗಮನ ಸೆಳೆಯಲಾಗಿದೆ ಎಂದು ಅಶೀಸರ ತಿಳಿಸಿದರು.
ಅರಣ್ಯ ಅಭಿವೃದ್ಧಿಗಾಗಿ ಬಜೆಟ್ನಲ್ಲಿ 1 ಸಾವಿರ ಕೋಟಿ ರೂ.ಮೀಸಲಿಟ್ಟಿರುವುದು ಶ್ಲಾಘನೀಯ. ಕರಾವಳಿ ಹಸಿರು ಕವಚ ಯೋಜನೆಯಡಿ 10ಕೋ.ರೂ, ವನ್ಯ ಜೀವಿ ಪ್ರದೇಶ ಸಂರಕ್ಷಣೆಗಾಗಿ 66ಕೋಟಿ ರೂ., ಸಮೃದ್ಧ ಹಸಿರು ಯೋಜನೆಗೆ 3 ಕೋಟಿ ರೂ., `ನಗರ ಹಸಿರು' ಯೋಜನೆಯಡಿ ರಸ್ತೆ ಬದಿ ಗಿಡಗಳನ್ನು ಬೆಳೆಸಲು 12 ಕೋ.ರೂ, ಪಟ್ಟಣದಲ್ಲಿ ಗಿಡಗಳನ್ನು ಬೆಳಸಲು 18 ಕೋ.ರೂ., ದೇವರ ಕಾಡು ಯೋಜನೆಗೆ 8 ಕೋ.ರೂ. ರಾಷ್ಟ್ರೀಯ ಉದ್ಯಾನವನಕ್ಕೆ 10 ಕೋ.ರೂ.ಮೀಸಲಿಡಲಾಗಿದೆ ಎಂದರು.

ಅರಣ್ಯ ಸಮೀಪದಲ್ಲಿ ಯಾವುದೇ ಕಾರಣಕ್ಕೂ ಕಿರು ಜಲವಿದ್ಯುತ್ ಯೋಜನೆಗೆ ಅನುಮತಿ ನೀಡಲಾಗು ವುದಿಲ್ಲ. ಮಂಗಳೂರು ವಿಭಾಗದಲ್ಲಿ 10 ಕಂಪೆನಿಗಳು ಅರಣ್ಯ ಇಲಾಖೆಗೆ ಕ್ಲಿಯರೆನ್ಸ್  ಅರ್ಜಿ ಸಲ್ಲಿಸಿವೆ. ರಾಜ್ಯದಲ್ಲಿ 220 ಅರ್ಜಿಗಳು ಬಂದಿವೆ ಆದರೆ ಎಲ್ಲದಕ್ಕೂ ಅನುಮತಿ ನಿರಾಕರಿಸಲಾಗಿದೆ ಎಂದರು.
ನಗರ ಮಟ್ಟದಲ್ಲಿ ಬಯೋಗ್ಯಾಸ್ ಸ್ಥಾವರಕ್ಕೆ ಆದ್ಯತೆ ನೀಡಲಾಗಿದೆ. ಇಂತಹ ಯೋಜನೆಗಳಿಗೆ ಪಶ್ಚಿಮ ಘಟ್ಟ ಕಾರ್ಯಪಡೆ ವಿಶೇಷ ಗಮನಹರಿಸಲಿದೆ.
 ಪತ್ರಿಕಾಗೋಷ್ಠಿಯಲ್ಲಿ ಎಸಿ ಎಫ್ ಪದ್ಮನಾಭಗೌಡ, ಆರ್ ಎಫ್ ಒ ಕ್ಲಿಫರ್ಡ್  ಲೋಬೋ ಉಪಸ್ಥಿತರಿದ್ದರು.

ತ್ಯಾಜ್ಯ ವಿಲೇಗೆ ಮೂಡಬಿದರಿ ಮಾದರಿ: ಜಿಲ್ಲಾಧಿಕಾರಿ

ಮಂಗಳೂರು,ಫೆಬ್ರವರಿ.13:-ಜಿಲ್ಲೆಯಲ್ಲಿ ತ್ಯಾಜ್ಯ ವಿಲೇ ಸಮಸ್ಯೆ ನಿವಾರಣೆಗೆ ಮೂಲದಲ್ಲೇ ಕಸವನ್ನು  ಬೇರ್ಪಡಿಸಿ ಪ್ರತ್ಯೇಕ ಬಿನ್ ಗಳಲ್ಲಿ ಸಂಗ್ರಹಿಸಲು ಅನುವಾಗುವಂತೆ ಜಿಲ್ಲೆಯ ಎಲ್ಲಾ ಪುರಸಭೆ, ನಗರಸಭೆಗಳು ತಮ್ಮ ವ್ಯಾಪ್ತಿಯ ಎಲ್ಲಾ ವಾರ್ಡ್ ಗಳ ಮನೆಗಳಿಗೆ ಬಣ್ಣದ ಬಕೆಟ್ ಗಳನ್ನು ಉಚಿತವಾಗಿ ವಿತರಿಸಲು ಕ್ರಮ ಕೈಗೊಳ್ಳುವಂತೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಎನ್.ಪ್ರಕಾಶ್ ಅವರು ಸೂಚಿಸಿದ್ದಾರೆ.
ಅವರು  ಬುಧವಾರ ತಮ್ಮ ಕಚೇರಿಯಲ್ಲಿ ನಡೆದ ನಗರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.   
ಬಂಟ್ವಾಳ ಪಟ್ಟಣದ ಒಟ್ಟು 23 ವಾರ್ಡ್ ಗಳ ಪೈಕಿ 21 ರಲ್ಲಿ ಮನೆಮನೆಯಿಂದ  ಕಸ ಸಂಗ್ರಹ ಮಾಡುತ್ತಿದ್ದು, ಇಲ್ಲಿಯ 6 ವಾರ್ಡ್ ಗಳಲ್ಲಿ ಮೂಲದಲ್ಲೇ ಕಸವನ್ನು ಬೇರ್ಪಡಿಸಿ ಸಂಗ್ರಹ ಮಾಡಲಾಗುತ್ತಿದೆ.ಬೆಳ್ತಂಗಡಿ ಪಟ್ಟಣ ಪಂಚಾಯತ್ ನ ಒಟ್ಟು 11 ವಾರ್ಡ್ ಗಳಲ್ಲಿ 9 ರಲ್ಲಿ ಮನೆಮನೆಯಿಂದ ಕಸ ಸಂಗ್ರಹಿಸಲಾಗುತ್ತಿದೆ. ಮೂಡಬಿದ್ರೆ ಪುರಸಭೆಯ ಎಲ್ಲಾ 23 ವಾರ್ಡ್ಗಳಲ್ಲಿ ಮೂಲ್ಕಿ ಪುರಸಭೆಯ 17 ವಾರ್ಡ್ ಗಳಲ್ಲಿ ಮನೆಮನೆಯಿಂದ ಕಸ ಸಂಗ್ರಹ ಮಾಡುವ ಮೂಲಕ ಶೇಕಡಾ 100 ರಷ್ಟು ಸಾಧನೆ ಮಾಡಿ, ಇತರೆ ಪುರಸಭೆಗಳಿಗೆ ಮಾದರಿಯಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು. ಪುತ್ತೂರು ಪಟ್ಟಣದಲ್ಲಿ 18 ವಾರ್ಡ್ ಗಳ ಸುಮಾರು 4800 ಮನೆಗಳಿಂದ ಕಸ ಸಂಗ್ರಹಣೆ ಕಾರ್ಯ ನಡೆಯುತ್ತಿದ್ದು 800 ಮನೆಗಳಲ್ಲಿ ಮೂಲದಲ್ಲೇ ಕಸ ಬೇರ್ಪಡಿಸಿ ಸಂಗ್ರಹ ಮಾಡಲಾಗುತ್ತಿದೆ.
ಸುಳ್ಯ ಪಟ್ಟಣದಲ್ಲಿ 1800 ಮನೆಗಳಿಂದ ಕಸವನ್ನು ಬೇರ್ಪಡಿಸಿ ಸಂಗ್ರಹ ಮಾಡಲಾಗುತ್ತಿದ್ದರೆ,ಉಳ್ಳಾಲ ವ್ಯಾಪ್ತಿಯ 8000 ಮನೆಗಳಿಂದ ಹಾಗೂ 5 ಮಾರುಕಟ್ಟೆಗಳಿಂದ ಕಸವನ್ನು ಬೇರ್ಪಡಿಸಿ ಸಂಗ್ರಹ ಮಾಡಲಾಗುತ್ತಿದೆ ಎಂದು ಸಂಬಂಧ ಪಟ್ಟ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.   ಎಲ್ಲಾ ಪಟ್ಟಣ ಪುರಸಭೆಗಳಲ್ಲಿ ಕಸಾಯಿ ಖಾನೆಗಳನ್ನು ತೆರೆಯುವುದು ಹಾಗೂ ಅಲ್ಲಿನ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇ ಮಾಡಲು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಇದೇ ರೀತಿ ಮೀನು,ತರಕಾರಿ ಮಾರುಕಟ್ಟೆಗಳ ತ್ಯಾಜ್ಯವನ್ನು ಸಹ ಸೂಕ್ತ ರೀತಿಯಲ್ಲಿ ಸಂಗ್ರಹಿಸಿ ವಿಲೇ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು. ಜಿಲ್ಲೆಯ ಎಲ್ಲಾ ಪುರಸಭೆಗಳಲ್ಲಿರುವ ಸಕ್ಕಿಂಗ್ ಯಂತ್ರಗಳನ್ನು ಕಡ್ಡಾಯವಾಗಿ ಬಳಸುವಂತೆ  ಹಾಗೂ ಕಂಪೋಸ್ಟ್  ಗುಂಡಿಗಳನ್ನು ತೆಗೆದು ಕಾಂಪೋಸ್ಟ್ ಗೊಬ್ಬರ ತಯಾರಿಸಿ ಮಾರಾಟ ಮಾಡುವಂತೆ ತಿಳಿಸಿದರು.
 ವಾಜಪೇಯಿ ನಗರ ವಸತಿ ಯೋಜನೆಯಡಿ ಜಿಲ್ಲೆಗೆ 2045 ವಸತಿಗಳನ್ನು ನಿರ್ಮಿಸುವ ಗುರಿ ನೀಡಿದ್ದು,ಇಲ್ಲಿಯವರೆಗೆ 1289 ಫಲಾನುಭವಿಗಳು ಅರ್ಜಿಗಳನ್ನು ಸಲ್ಲಿಸಿದ್ದಾರೆ.  ಈ ಯೋಜನೆಯಲ್ಲಿ ಶೇಕಡಾ 100 ರಷ್ಟು ಸಾಧನೆ ಮಾಡಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.  ನೀರು ಸರಬರಾಜು ಹಾಗೂ ಒಳಚರಂಡಿ ಕಾಮಗಾರಿಗಳ ಪ್ರಗತಿ ಪರಿಶೀಲಿಸಿದರು.
ಸಭೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್, ಅಪರ ಜಿಲ್ಲಾಧಿಕಾರಿ ದಯಾನಂದ,ಯೋಜನಾ ನಿರ್ದೇಶಕ ಟಿ.ಜೆ.ತಾಕತ್ ರಾವ್ ಮುಂತಾದವರು ಉಪಸ್ಥಿತರಿದ್ದರು.
 

Wednesday, February 13, 2013

ಬಹುದೂರ ಮತ್ತು ಒಳನಾಡು ಪ್ರದೇಶಾಭಿವೃದ್ಧಿ ಪ್ರಗತಿ ದಾಖಲಿಸದಿದ್ದರೆ ಅಮಾನತು ಖಚಿತ

ಮಂಗಳೂರು, ಫೆಬ್ರವರಿ.13 : ಜಿಲ್ಲೆಯ ನಕ್ಸಲ್ಬಾಧಿತ ಪ್ರದೇಶ ವ್ಯಾಪ್ತಿಯಲ್ಲಿ ನಿರೀಕ್ಷಿತ ವೇಗದಲ್ಲಿ ಪ್ರಗತಿ ಸಾಧಿಸದ ಬಗ್ಗೆ ತೀವ್ರ ಅಸಮದಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿ  ಎನ್ ಪ್ರಕಾಶ್ ಅವರು, ಜವಾಬ್ದಾರಿ ನಿಭಾಯಿಸುವಲ್ಲಿ ವಿಫಲರಾದ ಅಧಿಕಾರಿಗಳನ್ನು ಯಾವುದೇ ಮುಲಾಜಿಲ್ಲದೆ ಅಮಾನತುಗೊಳಿಸುವುದಾಗಿ ಎಚ್ಚರಿಕೆ ನೀಡಿದರು.
ಮಂಗಳ ವಾರ  ಜಿಲ್ಲಾಧಿ ಕಾರಿ ಗಳ ಕೋರ್ಟ್  ಹಾಲ್  ನಲ್ಲಿ ಬಹು ದೂರದ ಮತ್ತು ಒಳ ನಾಡು ಪ್ರದೇಶ ಗಳ ಅಭಿ ವೃದ್ಧಿ ಕುರಿತು ಪ್ರಗತಿ ಪರಿ ಶೀಲನೆ ನಡೆಸಿದ ಜಿಲ್ಲಾ ಧಿಕಾ ರಿಗಳು, ಈ ಸಂಬಂಧ ಇಂದು ನಡೆ ಸಿದ ಮೂರನೇ ಸಭೆ ಇದಾ ಗಿದ್ದು, ಅಧಿ ಕಾರಿ ಗಳು ಈ ಪ್ರದೇಶ ಗಳ ಅಭಿ ವೃದ್ಧಿಯ ಕುರಿತು ತೀವ್ರವಾಗಿ ಕಾರ್ಯೋನ್ಮುಖರಾಗುತ್ತಿಲ್ಲ ಎಂಬ ಅಂಶ ಸ್ಪಷ್ಟವಾಗಿದೆ. ಬಹುದೂರ ಮತ್ತು ಒಳನಾಡು ಪ್ರದೇಶಾಭಿವೃದ್ಧಿ ಕಾಮಗಾರಿಯನ್ನು ನಿರ್ಲಕ್ಷಿಸದೆ ಗಂಭೀರವಾಗಿ ಪರಿಗಣಿಸಿ ಎಂದು ಎಚ್ಚರಿಸಿದರು.
 ಅದರಲ್ಲೂ ಮುಖ್ಯವಾಗಿ ಇಂಜಿನಿಯರಿಂಗ್ ವಿಭಾಗದವರ ಕರ್ತವ್ಯಲೋಪವನ್ನು ಎತ್ತಿಹಿಡಿದ ಜಿಲ್ಲಾಧಿಕಾರಿಗಳು, ತನಗೆ ಕಾರಣಗಳು ಬೇಡ; ಕೆಲಸವಾಗಬೇಕು ಎಂದು ಸ್ಪಷ್ಟಪಡಿಸಿದರು. ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗ, ನಿರ್ಮಿತಿ ಕೇಂದ್ರ ಹೊರತಾಗಿ ಇಂದು ಈ ಸಂಬಂಧ ಹಲವು ಕಾಮಗಾರಿಗಳನ್ನು ಲೋಕೋಪಯೋಗಿ ಇಲಾಖೆಗೂ ವಹಿಸಿದರು.
ಅನುಪಾಲನಾ ವರದಿಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಪ್ರಗತಿಯಲ್ಲಿದೆ ಎಂಬ ಒಕ್ಕಣೆ ಬೇಡ; ತಮಗೆ ಕಾಮಗಾರಿ ಮುಗಿಸುವ ದಿನಾಂಕದ  ಸ್ಪಷ್ಟಮಾಹಿತಿ ಬೇಕು; ಭರವಸೆ ಬೇಡ ಎಂದರು. ಪ್ರದೇಶಗಳ ಅಭಿವೃದ್ಧಿಯಲ್ಲಿ ನಿರ್ಲಕ್ಷ್ಯ ವಹಿಸಿದರೆ ಮುಖ್ಯ ಕಾರ್ಯದರ್ಶಿಗಳಿಗೆ ವರದಿ ನೀಡುವುದಾಗಿ ಹೇಳಿದ ಅವರು, ಮುಂದಿನ 15 ದಿನಗಳೊಳಗೆ ನಿಗದಿತ ಗುರಿಸಾಧನೆಯಾಗಬೇಕು. ಸುಲ್ಕೇರಿ ಗ್ರಾಮದ ಮಾಳಿಗೆ ರಸ್ತೆ ಮಧ್ಯೆ 3 ಚಿಕ್ಕ ಮೋರಿ ರಚನೆಗೆ 10 ದಿನಗಳ ಸಮಯಾವಕಾಶ ನೀಡಿದರು. ಶಿರ್ಲಾಲು ಮಲೆಕ್ಕಿಲ ಮತ್ತು ಮಾಣಿಲ ರಸ್ತೆ ಅಭಿವೃದ್ಧಿ ಮಾಡಿ ಈ ಕಾಮಗಾರಿಗಳನ್ನು ಉಳಿದ ಕಾಮಗಾರಿಗಳಿಗಿಂತ ಹೆಚ್ಚಿನ ಆದ್ಯತೆ ನೀಡಿ; ಕಾರಣ ನೀಡದೆ ಕೆಲಸ ಮಾಡಿ; ಮುಂದಿನ 10 ದಿನಗಳೊಳಗಾಗಿ ಪ್ರಗತಿ ದಾಖಲಿಸಿ ಛಾಯಾಚಿತ್ರ ಸಹಿತ ತನಗೆ ವರದಿ ನೀಡಿ ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಅಭಿವೃದ್ಧಿ ಕಾಮ ಗಾರಿ ವೇಳೆ ಪೊಲೀಸ್ ಇಲಾಖೆ ವತಿ ಯಿಂದ ಎಲ್ಲ ರೀತಿಯ ಸಹಕಾರ ನೀಡುವ ಭರ ವಸೆ ನೀಡಿದ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಅಭಿಷೇಕ್ ಗೋಯಲ್ ಅವರು, ಸರ್ಕಾರ ಈ ಪ್ರದೇ ಶಗಳ ಅಭಿ ವೃದ್ಧಿಗೆ ನೀಡಿದ ಹಣ  ಆ ಪ್ರದೇ ಶಗಳ ಅಲ್ಲಿನ ಬುಡ ಕಟ್ಟು ನನರ ಅಭಿ ವೃದ್ಧಿಗೆ ಬಳಕೆ ಯಾಗ ಬೇಕು.ಅವರ ವಿಶ್ವಾಸವನ್ನು ಪಡೆಯಬೇಕು ಅವರ ಅಭಿವೃದ್ಧಿಗೆ ಪ್ರೇರಕವಾಗಿ ಕೆಲಸ ಮಾಡಬೇಕು. ಈ ಎಲ್ಲ ಉದ್ದೇಶಗಳನ್ನು ಮನದಲ್ಲಿರಿಸಿ ಇಂಜಿನಿಯರ್ ಗಳು ಹಾಗೂ ಕಾಮಗಾರಿ ಅನುಷ್ಠಾನ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಸಲಹೆ ಮಾಡಿದರು.
ಈ ಪ್ರದೇಶಗಳಲ್ಲಿ ಕೈಗೆತ್ತಿಕೊಳ್ಳುವ ಕಾಮಗಾರಿಗಳ ಬಗ್ಗೆ ಪೊಲೀಸ ಇಲಾಖೆಗೆ ಮಾಹಿತಿ ಇರಬೇಕು. ಮಲವಂತಿಗೆ -ಗುತ್ಯಡ್ಕ್ ರಸ್ತೆ ಮೂರು ದಿನಗಳೊಳಗೆ ಸಂಪೂರ್ಣಗೊಳಿಸಿ. ಸಂಪಿಗೆಕಟ್ಟೆ ಬಡಾವಣೆ ರಸ್ತೆ ಹತ್ತು ದಿನಗಳೊಳಗೆ, ಕೋಟಿಕುಂಬ್ರ ಕಾಲುಸಂಕ ಕಾಮಗಾರಿ ಬಗ್ಗೆ, ಮಿತ್ತಬಾಗಿಲು ಬೊಳ್ಳಾಜೆ ರಸ್ತೆಗೆ ಮೋರಿ ಈ ಕೆಲಸಗಳನ್ನು ಲೋಕೋಪಯೋಗಿ ಇಲಾಖೆಗೆ ವಹಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ನಡ ಜಮಾಲಾಬಾದ್ ಬಳಿ ಕೊಡಳು ರಸ್ತೆಗೆ ಸ್ಲ್ಯಾಬ್ ಮೋರಿ, ನಡಗುತ್ತಿನ ಪಡ್ಯಾಯೂರು ರಸ್ತೆ ಮತ್ತು ಮೋರಿ, ಅಳದಂಗಡಿಯ ಐದು ಕಾಮಗಾರಿ 15 ದಿನಗಳೊಳಗೆ ಮುಗಿಸುವುದಾಗಿ ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಭರವಸೆ ನೀಡಿದರು. ಮುಂದೆ ಹೊಸ ಕಾಮಗಾರಿಗಳನ್ನು ಆರಂಭಿಸುವ ವೇಳೆ ಇಂಜಿನಿಯರ್ ಗಳು ತಾಂತ್ರಿಕ ಸಾಧ್ಯತೆ ಮತ್ತು ತಹಸೀಲ್ದಾರ್ ಹಾಗೂ ಪೊಲೀಸರು ಸಾಮಾಜಿಕ ಮತ್ತು ಆರ್ಥಿಕ ಸಾಧ್ಯತೆಗಳನ್ನು ಅಧ್ಯಯನ ಮಾಡಿ ಆಡಳಿತಾತ್ಮಕ ಅನುಮೋದನೆ ಪಡೆಯಲು  ಯೋಜನೆ ಸಲ್ಲಿಸಿ  ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಐಟಿಡಿಪಿ ಇಲಾಖೆ ವತಿಯಿಂದ ಕೈಗೊಂಡ ಕಾಮಗಾರಿಗಳ ಮಾಹಿತಿಯನ್ನು ಐಟಿಡಿಪಿ ಅಧಿಕಾರಿ ಸಬೀರ್ ಅಹಮದ್ ಮುಲ್ಲಾ ಅವರು ಸಭೆಗೆ ನೀಡಿದರು. ಒಟ್ಟು 15 ಸೋಲಾರ್ ದೀಪಗಳನ್ನು ನೀಡಲಾಗಿದ್ದು, ಶಿರ್ಲಾಲುವಿನಲ್ಲಿ ಒಂದು, ಇಂದಬೆಟ್ಟುವಿನಲ್ಲಿ 2, ನಾರಾವಿಯಲ್ಲಿ 5, ನಾವರದಲ್ಲಿ 2, ಸುಲ್ಕೇರಿಮೊಗ್ರುವಿನಲ್ಲಿ 5 ಸೋಲಾರ್ ದೀಪಗಳನ್ನು ಅಳವಡಿಸಲಾಗಿದೆ ಎಂದರು.
ನಾವೂರಿನ ಕಿರುಜಲವಿದ್ಯುತ್ ಯೋಜನೆಯಡಿ ನೀರಿಲ್ಲದೆ ನಿಂತಿರುವ ಘಟಕಕ್ಕ ಕಟ್ಟೆ ಕಟ್ಟಿ ನೀರೊದಗಿಸಲು ಜಲಾನಯನ ಅಧಿಕಾರಿಗಳು ಇಂದು ಸ್ಥಳಕ್ಕೆ ತೆರಳಿದ್ದಾರೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರು ಹೇಳಿದರು. ಈ ಪ್ರದೇಶಗಳಲ್ಲಿ ತೋಟಗಾರಿಕೆ ಮತ್ತು ಕೃಷಿ ಇಲಾಖೆ ನಿಗದಿ ಗುರಿ ಸಾಧಿಸಿದ್ದು, ಕೃಷಿ ಇಲಾಖೆಯಿಂದ ಮಲೆಕುಡಿಯರಿಗೆ 6 ಪವರ್ ಟಿಲ್ಲರ್ ಮತ್ತು 7 ಪಂಪ್ ಸೆಟ್ ಗಳನ್ನು ಈಗಾಗಲೇ ನೀಡಲಾಗಿದೆ ಎಂದರು. ಈ ಸಭೆಗೆ ಪೂರ್ವನಿಗದಿಯಾಗಿ ಜಿಲ್ಲಾ ಪಂಚಾಯತ್ ಇಂಜಿನಿಯರ್ ವಿಭಾಗ ಮತ್ತು ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿ ಎಂದು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.  ಇಂದಿನ ಸಭೆಗೆ ಗೈರುಹಾಜರಾದ ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ನೀಡಲು ಸೂಚಿಸಿದ ಜಿಲ್ಲಾಧಿಕಾರಿಗಳು, ಈ ಪ್ರದೇಶಾಭಿವೃದ್ಧಿಯ ಕಾಮಗಾರಿಗಳನ್ನು ತಮ್ಮ ಮನೆಯ ಕೆಲಸ, ದೇವರ ಕೆಲಸವೆಂದೇ ಪರಿಗಣಿಸಿ ನಿರ್ವಹಿಸಿ ಇಲ್ಲದಿದ್ದರೆ ಪರಿಣಾಮ ಎದುರಿಸಿ ಎಂದು ಮತ್ತೊಮ್ಮೆ ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ  ಕೆ ಎ ದಯಾನಂದ್, ಪುತ್ತೂರು ಸಹಾಯಕ ಆಯುಕ್ತರಾದ ಎಚ್ ಪ್ರಸನ್ನ ಅವರನ್ನೊಳಗೊಂಡಂತೆ ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Friday, February 8, 2013

'ಗಗನಕೆ ಬಿಚ್ಚಲು ರೆಕ್ಕೆಗಳ ಮಗುವಿಗೆ ಕೊಡಿರಿ ಹಕ್ಕುಗಳ'

ಮಂಗಳೂರು, ಫೆಬ್ರವರಿ.08  ''ಗಗನಕೆ ಬಿಚ್ಚಲು ರೆಕ್ಕೆಗಳ ಮಗುವಿಗೆ ಕೊಡಿರಿ ಹಕ್ಕುಗಳ,: ಕನಸನು ಹೊತ್ತ ಮಕ್ಕಳು ದೇಶಕಟ್ಟುವ ಶಕ್ತಿಗಳು;''
ಮಂಗಳೂರಿನ ಪುರಭವನದಲ್ಲಿ ಶುಕ್ರವಾರ ಜರುಗಿದ ಮಕ್ಕಳ ಹಕ್ಕುಗಳ ಜಾಗೃತಿಗಾಗಿ 'ಮಕ್ಕಳ ಅರಿವು' ಕಾರ್ಯಕ್ರಮದಲ್ಲಿ ಕಂಡುಬಂದ ಘೋಷವಾಕ್ಯಗಳಿವು. ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾಧಿಕಾರಿ ಎನ್ ಪ್ರಕಾಶ್ ಅವರು, ಮಕ್ಕಳ ಭವಿಷ್ಯ ಭವ್ಯವಾಗಲಿ ಎಂದು ಹಾರೈಸಿದರು.
ಬಳಿಕ ನಡೆದ ಮಕ್ಕಳ ಹಕ್ಕುಗಳ ಬಗ್ಗೆಗಿನ ಸಂವಾದದಲ್ಲಿ ಮಕ್ಕಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸವಿವರ ಚರ್ಚೆ ನಡೆಯಿತು. ಮಕ್ಕಳು ತಮ್ಮ ಶಾಲೆಗಳ ಸ್ಥಿತಿ ಬಗ್ಗೆ, ಬೀದಿ ನಾಯಿಗಳ ಕಾಟದ ಬಗ್ಗೆ, ವಾಹನಗಳ ಸದ್ದಿನ ಬಗ್ಗೆ, ಲಿಂಗತಾರತಮ್ಯದ ಬಗ್ಗೆ ಇಂದು ಮಕ್ಕಳು ಗಮನಸೆಳೆದ ರೀತಿಗೆ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ  ಹೆಚ್ ಆರ್ ಉಮೇಶ್ ಆರಾಧ್ಯ ಅವರಿಂದ ಭೇಷ್ ಅನಿಸಿಕೊಂಡರು.
ಮಕ್ಕಳ ಸಮಸ್ಯೆಗಳ ಬಗ್ಗೆ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡುವ ಮಾದರಿಯನ್ನೂ ಮಕ್ಕಳಿಗೆ ವಿವರಿಸಿದ ಆರಾಧ್ಯ ಅವರು, ಮಕ್ಕಳಿಗೆ ಅವರ ಹಕ್ಕುಗಳ ಕುರಿತು, ಸರ್ಕಾರ ನೀಡಿರುವ ವಿಶೇಷ ಸೌಲಭ್ಯಗಳ ಕುರಿತು ಮಾಹಿತಿ ನೀಡಿದರು.
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಶ್ರೀಮತಿ ವನಿತಾ ಎನ್ ತೊರವಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಶ್ರೀಮತಿ ಆಶಾ ನಾಯಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ. ಎನ್. ವಿಜಯಪ್ರಕಾಶ್, ಬಾಲಭವನ ಸೊಸೈಟಿ ಬೆಂಗಳೂರು ಅಧ್ಯಕ್ಷರಾದ ಸುಲೋಚನಾ ಜಿ ಕೆ ಭಟ್, ಪೊಲೀಸ್ ಕಮಿಷನರ್ ಮನೀಶ್ ಕರ್ಬೀಕರ್ ಮುಖ್ಯ ಅತಿಥಿಗಳಾಗಿದ್ದರು. ಗ್ರೇಸಿ ಗೊನ್ಸಾಲಿಸ್ ಸ್ವಾಗತಿಸಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಎಸ್ ಮೋಸೆಸ್ ಜಯಶೇಖರ್ ಉಪಸ್ಥಿತರಿದ್ದರು.

ಸಾಮಾಜಿಕ ಪಿಡುಗು ನಿವಾರಿಸಲು ಎಲ್ಲರ ಸಹಕಾರ ಅಗತ್ಯ: ಜಿಲ್ಲಾಧಿಕಾರಿ

ಮಂಗಳೂರು, ಫೆಬ್ರವರಿ.08 : ಮಾದಕ ದ್ರವ್ಯ ಸೇವನೆ ಪ್ರಮುಖ ಸಾಮಾಜಿಕ ಪಿಡುಗಾಗಿ ಪರಿಣಮಿಸಿದ್ದು, ಈ ಪಿಡುಗಿನ ನಿವಾರಣೆ ಹೊಣೆ ಸಮಾಜದ್ದು; ಸಮಸ್ಯೆ ನಿವಾರಣೆಗೆ ಎಲ್ಲರೂ ಪರಸ್ಪರ ಸಹಕಾರ ಹಾಗೂ ಹಾಗೂ ಜವಾಬ್ದಾರಿಯುತವಾಗಿ ಶ್ರಮಿಸೋಣ ಎಂದು ಜಿಲ್ಲಾಧಿಕಾರಿ ಎನ್ ಪ್ರಕಾಶ್ ಹೇಳಿದರು.
ಇಂದು ಪೊಲೀಸ್ ಅತಿಥಿ ಗೃಹದ ಸಭಾಂ ಗಣದಲ್ಲಿ ಆಯೋ ಜಿಸ ಲಾದ ಪ್ರಾಂಶು ಪಾಲರ ಮತ್ತು ಸರ್ಕಾ ರೇತರ ಸಂಘ ಸಂಸ್ಥೆ ಗಳ ಪ್ರತಿ ನಿಧಿ ಗಳ ಸಭೆ ಯನ್ನು  ಉದ್ದೇ ಶಿಸಿ ಮಾತ ನಾಡು ತ್ತಿದ್ದ ಅವರು, ಮೇಲ್ಕಂಡ ಸಮ ಸ್ಯೆಗೆ ಒಂದಂ ಶದ ಪರಿ ಹಾರ ಅಸಾಧ್ಯ. ಮಕ್ಕಳ ಭವಿಷ್ಯ ನಿರ್ಮಾಣ ನಮ್ಮೆಲ್ಲರ ಹೊಣೆ ಎಂದರು. ಹೊಣೆಯರಿತು ವರ್ತಿಸುವುದರಿಂದ ಸಮಸ್ಯೆ ಪರಿಹಾರ ಸಾಧ್ಯ ಎಂದರು.
ಸಭೆ ಯನ್ನು ದ್ದೇಶಿಸಿ ಮಾತ ನಾಡಿದ ಪೊಲೀಸ್ ಕಮಿಷ ನರ್ ಮನೀಷ್ ಕರ್ಬಿ ಕರ್ ಅವರು, ಬದಲಾ ಗುತ್ತಿ ರುವ ಸಾಮಾ ಜಿಕ ವ್ಯವಸ್ಥೆ ಮತ್ತು ಮಕ್ಕಳ ಬೆಳವ ಣಿಗೆಯ ವಾತಾ ವರಣ ಇಂತಹ ಕು ಕೃತ್ಯ ಗಳಿಗೆ ಪೂರಕ ವಾಗಿದ್ದು, ಸುಲಭ ಹಣ ದಿಂದ ವಿದ್ಯಾರ್ಥಿ ಗಳಿಗೆ ಮಾದಕ ವಸ್ತು ಖರೀದಿ ಸಾಧ್ಯ ವಾಗಿದೆ ಎಂದರು.
ಮಾದಕ ವಸ್ತು ಲಭ್ಯತೆ, ಒತ್ತಡದ ವಾತಾವರಣ, ಸಮಾಜ ವಿರೋಧಿ ಚಟುವಟಿಕೆ ಬಗ್ಗೆ ಅಪರಿಮಿತ ಧೈರ್ಯ ಈಗಿನ ಮಕ್ಕಳಲ್ಲಿ ಕಂಡುಬರುತ್ತಿದ್ದು ಮಕ್ಕಳ ನಕಾರಾತ್ಮಕ ಬೆಳವಣಿಗೆ ಬಗ್ಗೆ ಹೆತ್ತವರು ಮತ್ತು ಶಿಕ್ಷಕರು ಹೆಚ್ಚಿನ ಗಮನ ಹರಿಸಬೇಕು. ಇಂತಹ ಯಾವುದೇ ಚಟುವಟಿಕೆಗಳ ಬಗ್ಗೆ ಮಾಹಿತಿ ದೊರೆತರೆ ಪೊಲೀಸ್ ಇಲಾಖೆಗೆ ತಿಳಿಸಿ ಎಂದು ಪೊಲೀಸ್ ಕಮಿಷನರ್ ಹೇಳಿದರು. ಜಿಲ್ಲೆಯ ಔಷಧ ನಿಯಂತ್ರಕರು (ಡ್ರಗ್ ಕಂಟ್ರೋಲರ್) ಈ ಬಗ್ಗೆ ಹೆಚ್ಷಿನ ಮುತುವರ್ಜಿ ವಹಿಸಬೇಕೆಂದು ಜಿಲ್ಲೆಯ ಮನೋರೋಗ ತಜ್ಞರಾದ ಡಾ ಅರುಣಾ ರಾವ್ ಅಭಿಪ್ರಾಯ ಪಟ್ಟರು. ಡಾ ರಮೀಲಾ ಶೇಖರ್ ವಿವಿಧ ಕಾಲೇಜುಗಳ ಪ್ರಾಂಶುಪಾಲರು ಸಭೆಯಲ್ಲಿ ತಮ್ಮ ಅಭಿಪ್ರಾಯ ಮಂಡಿಸಿದರು. 

ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ: ಹರ್ಷಗುಪ್ತಾ ವಿಡಿಯೋ ಕಾನ್ಫರೆನ್ಸ್

ಮಂಗಳೂರು, ಫೆಬ್ರವರಿ.08: 2012-13ನೇ ಸಾಲಿಗೆ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯನ್ನು ದಕ್ಷಿಣಕನ್ನಡದಲ್ಲಿ ಇತರ ಏಳು ಜಿಲ್ಲೆಗಳೊಂದಿಗೆ ಮೊದಲ ಹಂತದಲ್ಲಿ ಫೆಬ್ರವರಿ 15ರೊಳಗೆ ಅನುಷ್ಠಾನಕ್ಕೆ ತರಬೇಕೆಂದು ಕಾರ್ಮಿಕ ಇಲಾಖೆ ಆಯುಕ್ತರಾದ ಹರ್ಷ ಗುಪ್ತಾ ಅವರು ಸೂಚಿಸಿದರು.
ಯೋಜನೆ ಅನುಷ್ಠಾನ ಸಂಬಂಧ ದಕ್ಷಿಣ ಕನ್ನಡ ಜಿಲ್ಲೆಯ ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ ಅವರ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಆಯುಕ್ತರು, ತುರ್ತಾಗಿ ಯೋಜನೆ ಅನುಷ್ಠಾನಕ್ಕೆ ತನ್ನಿ ಎಂದರು. ದಿನಾಂಕ 7.2.13ರಂದು ಈ ಬಗ್ಗೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಯೋಜನೆಯನ್ನು ಜಿಲ್ಲೆಯಲ್ಲಿ 25.2.13ರಿಂದ ಪ್ರಾರಂಭಿಸಲು ನಿರ್ಧರಿಸಲಾಗಿತ್ತು. ಆದರೆ ಆಯುಕ್ತರು ಅದಕ್ಕೂ ಮುಂಚೆಯೇ ಪ್ರಾರಂಭಿಸುವಂತೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ತಿಳಿಸಿದರು.
ಈ ಯೋಜನೆಯಡಿ ಈ ಬಾರಿ 97.119 ಕುಟುಂಬಗಳು ಸ್ಮಾಟ್ರ್  ಕಾರ್ಡ್  ಪಡೆಯಲಿವೆ. ಸ್ಮಾರ್ಟ್  ಕಾರ್ಡ್ ಪಡೆದ ಕುಟುಂಬಗಳು ಒಂದು ವರ್ಷದ ಅವಧಿಯಲ್ಲಿ ರೂ. 30,000 ಮೀರದಂತೆ ನಗದುರಹಿತ ಚಿಕಿತ್ಸೆಯನ್ನು ನೋಂದಾಯಿತ ಆಸ್ಪತ್ರೆಗಳಲ್ಲಿ ಪಡೆಯಬಹುದಾಗಿದೆ.
2002ರ ಸರ್ವ ಕುಟುಂಬ ಸಮೀಕ್ಷೆಯಲ್ಲಿ ಗುರುತಿಸಲಾದ ಗ್ರಾಮೀಣ ಬಿಪಿಎಲ್ ಕುಟುಂಬಗಳು ಮತ್ತು ನಗರ ಬಿಪಿಎಲ್ ಕುಟುಂಬಗಳು, ಮಹಾತ್ಮಗಾಂಧೀ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯ ಕಾರ್ಮಿಕರು ಮೊದಲ ಹಂತದಲ್ಲಿ ಪ್ರಯೋಜನ ಪಡೆಯಲಿರುವರು. ನಂತರದ ಹಂತದಲ್ಲಿ ಕಟ್ಟಡ ಕಾರ್ಮಿಕರು ಬೀಡಿ ಕಾರ್ಮಿಕರು ಪ್ರಯೋಜನ ಪಡೆಯಲಿರುವರು. ಹಂತ ಹಂತವಾಗಿ ಅಸಂಘಟಿತ ಕಾರ್ಮಿಕರು ಯೋಜನೆಯ ಪ್ರಯೋಜನ ಪಡೆಯುವವರಿದ್ದು, ಇತರೆ ವರ್ಗದ ಕುಟುಂಬಗಳನ್ನು ಯೋಜನೆಯಡಿ ಒಳಪಡಿಸಲಾಗುವುದು ಎಂದು ಕಾಮರ್ಿಕ ಸಹಾಯಕ ಆಯುಕ್ತ ನಾಗೇಶ್ ಅವರು ಮಾಹಿತಿ ನೀಡಿದರು. ವಿಡಿಯೋ ಕಾನ್ಫರೆನ್ಸ್ ನಲ್ಲಿ ಡಿಸ್ಟ್ರಿಕ್ಟ್ ಕೀ ಮ್ಯಾನೇಜ್ಮೆಂಟ್  ಅಥಾರಿಟಿಯ ಗ್ರಾಮೀಣಾಭಿವೃದ್ಧಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಾರ್ತಾ ಇಲಾಖೆ, ನಗರಾಭಿವೃದ್ಧಿ ಇಲಾಖೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

97,175 ಬಿಪಿಎಲ್ ಕುಟುಂಬಗಳಿಗೆ ಸ್ಮಾರ್ಟ್ ಕಾರ್ಡ್ ವಿತರಿಸುವ ಗುರಿ- ಎನ್ .ಪ್ರಕಾಶ್


ಮಂಗಳೂರು, ಫೆಬ್ರವರಿ.08:-ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆ ಫಲಾನುಭವಿ ಕಾರ್ಮಿಕ ಕುಟುಂಬದ ಸದಸ್ಯರಿಗೆ ಆರೋಗ್ಯ ವಿಮೆ ಸೌಲಭ್ಯ ಒದಗಿಸಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಒಂದು ಉತ್ಕೃಷ್ಟ ಯೋಜನೆಯಾಗಿದ್ದು,ಈ ಯೋಜನೆಯನ್ವಯ ದಕ್ಷಿಣಕನ್ನಡ ಜಿಲ್ಲೆಯಲ್ಲಿ 2012-13ನೇ ಸಾಲಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್  ರಾಜ್ ನೀಡಿರುವ 2002ರ ಪಟ್ಟಿಯಲ್ಲಿನ 97,175 ಬಡತನ ರೇಖೆಗಿಂತ ಕೆಳಗಿರುವ  ಕುಟುಂಬಗಳಿಗೆ ಸ್ಮಾರ್ಟ್ ಕಾರ್ಡನ್ನು,ಇನ್ನು 15 ದಿನಗಳೊಳಗೆ ವಿತರಿಸುವ ಕಾರ್ಯ ಆರಂಭವಾಗಲಿದೆಯೆಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ  ಎನ್.ಪ್ರಕಾಶ್ ತಿಳಿಸಿದ್ದಾರೆ.           
ಅವರು ನಿನ್ನೆ ಗುರುವಾರ ಸಂಜೆ ತಮ್ಮ ಕಚೇರಿಯಲ್ಲಿ ಈ ಬಗ್ಗೆ ನಡೆದ ಕಾರ್ಯಾನುಷ್ಠಾನ ಜಿಲ್ಲಾ ಮಟ್ಟದ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. 74,952 ಗ್ರಾಮೀಣ ಪ್ರದೇಶದ ಬಿಪಿಎಲ್ ಕುಟುಂಬಗಳು,6,552 ನಗರ ಪ್ರದೇಶದ ಬಿಪಿಎಲ್ ಕುಟುಂಬಗಳು ಹಾಗೂ 15,615 ಮಹಾತ್ಮಾಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭರವಸೆ ಯೋಜನೆ ಜಾಬ್ ಕಾರ್ಡ್  ಹೊಂದಿದವರು ಜೊತೆಗೆ ಬೀಡಿ ಕಾರ್ಮಿಕರು ರೈಲ್ವೇ ಪೋರ್ಟರ್ ಗಗಳನ್ನು ಸಹ ಈ ಬಾರಿ ನೊಂದಾಯಿಸಿಕೊಂಡು ಸ್ಮಾರ್ಟ್ ಕಾರ್ಡು ವಿತರಿ ಸಲಾಗುವು ದೆಂದರು.ಬಿಪಿಎಲ್ ಕುಟುಂಬಗಳ ನೋಂದಣಿ ಯನ್ನು ಆಶಾ ಕಾರ್ಯ ಕರ್ತೆಯರು ಅಂಗನ ವಾಡಿ ಕಾರ್ಯ ಕರ್ತೆಯರು ಗ್ರಾಮ ಲೆಕ್ಕಾಧಿಕಾರಿಗಳು ನಡೆಸಲಿದ್ದಾರೆ.ಈ ಯೋಜನೆಯಲ್ಲಿ ಸ್ಮಾರ್ಟ್ ಕಾರ್ಡ್ ಪಡೆದ ಕುಟುಂಬದ ಸದಸ್ಯರಿಗೆ ವಾರ್ಷಿಕ ರೂ.30,000/- ವರೆಗೂ ನೊಂದಾಯಿತ ಹೈಟೆಕ್ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಸೌಲಭ್ಯವಿದೆ.ಫಲಾನುಭವಿ ಕುಟುಂಬದ ಮುಖ್ಯಸ್ಥ ಹೆಂಡತಿ/ಗಂಡ ,ಮಕ್ಕಳು ಹಾಗೂ ಅವಲಂಭಿತರೂ ಸೇರಿದಂತೆ ಒಟ್ಟು 05 ಮಂದಿಗೆ ಈ ಸೌಲಭ್ಯ ದೊರಕಲಿದೆ.  

ಸಭೆಯಲ್ಲಿ ಸಹಾಯಕ ಕಾರ್ಮಿಕ ಆಯುಕ್ತ ಡಿ.ಜೆ ನಾಗೇಶ್, ಕಾರ್ಮಿಕಾಧಿಕಾರಿಗಳಾದ ಮಹೇಶ್, ಆನಂದ ಮೂರ್ತಿ,ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಶಿವರಾಮೇಗೌಡ, ಅಪರ ಜಿಲ್ಲಾಧಿಕಾರಿ ದಯಾನಂದ,ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಓ.ಶ್ರೀರಂಗಪ್ಪ ಮುಂತಾದವರು ಭಾಗವಹಿಸಿದ್ದರು.

Wednesday, February 6, 2013

ಮಾದಕದ್ರವ್ಯ ಜಾಲಪತ್ತೆಗೆ ಸೂಕ್ತ ಕ್ರಮ: ಜಿಲ್ಲಾಧಿಕಾರಿ


ಮಂಗಳೂರು, ಫೆಬ್ರವರಿ.06 : ನಗರದಲ್ಲಿ ಮಾದಕದ್ರವ್ಯ ಜಾಲ ತಡೆಗೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಜಿಲ್ಲಾಡಳಿತ ಕಾರ್ಯೋನ್ಮುಖವಾಗಿದ್ದು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಇಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಚರ್ಚಿಸಿತು.
    ಸಮಸ್ಯೆಯ ಮೂಲವನ್ನು ಪತ್ತೆ ಹಚ್ಚಿ ಚಿವುಟಲು ನಿರ್ದೇಶನ ನೀಡಿದ ಜಿಲ್ಲಾಧಿಕಾರಿಗಳು, ಪೊಲೀಸ್ ಇಲಾಖೆಗೆ ಈ ನಿಟ್ಟಿನಲ್ಲಿ ಎಲ್ಲ ಸಹಕಾರ ನೀಡುವುದಾಗಿ ಹೇಳಿದರಲ್ಲದೆ, ಅಬಕಾರಿ ಇಲಾಖೆ, ಮಹಾನಗರಪಾಲಿಕೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಶಿಕ್ಷಣ ಇಲಾಖೆ ಪೊಲೀಸ್ ಇಲಾಖೆಯ ಜೊತೆಗೆ ಕೈಜೋಡಿಸಲಿದೆ ಎಂದರು. 
ಈ ಸಂಬಂಧ ಫೆ.8ರಂದು ಪೂರ್ವಾಹ್ನ 12 ಗಂಟೆಗೆ ಜಿಲ್ಲೆಯ ಅದರಲ್ಲೂ ಪ್ರಮುಖವಾಗಿ ನಗರದ ಎಲ್ಲ ಪಿಯು ಮತ್ತು ಕಾಲೇಜು ಪ್ರಾಂಶುಪಾಲರ ಸಭೆಯನ್ನು ಕರೆದು  ತಾವು ಖುದ್ದಾಗಿ ಸಭೆಯನ್ನು ಉದ್ದೇಶಿಸಿ ಮಾತನಾಡುವುದಾಗಿ ಹೇಳಿದ ಅವರು, ಸಮಸ್ಯೆಯನ್ನು ಎದುರಿಸಲು ಹಾಗೂ ನಿವಾರಿಸುವಲ್ಲಿ ಶೈಕ್ಷಣಿಕ ಸಂಸ್ಥೆಗಳ ಸಹಕಾರವನ್ನು  ಪರಿಣಾಮಕಾರಿಯಾಗಿ ಬಳಸಿಕೊಳ್ಳುವುದಾಗಿ ಹೇಳಿದರು.
ನಿತ್ಯ , ನಿರಂತರ ಜಾಗೃತಿ ಕಾರ್ಯಕ್ರಮ ಮುಂದಿನ ಒಂದು ವರ್ಷ ಹಮ್ಮಿಕೊಂಡು ವಿದ್ಯಾರ್ಥಿಗಳನ್ನು ಈ ಜಾಲದಿಂದ ಹೊರಗಿಡಲು ಜಿಲ್ಲಾಡಳಿತ ಸರ್ವ ಯತ್ನಗಳನ್ನು ಮಾಡಲಿದೆ. ಇದಕ್ಕೆ ಹೆತ್ತವರ ಮತ್ತು ಸರ್ಕಾರೇತರ ಸಂಘಸಂಸ್ಥೆಗಳ ಸಹಕಾರವನ್ನು ಸ್ವೀಕರಿಸಲಾಗುವುದು ಎಂದರು. ವಿದ್ಯಾರ್ಥಿಗಳು ಅದರಲ್ಲೂ ಮುಖ್ಯವಾಗಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ನಿಗಾ ಇಡುವ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆಯಾಗಿದ್ದು, ಎಲ್ಲ ಕಾಲೇಜುಗಳ ಪ್ರತಿಯೊಂದು ತರಗತಿಗಳಿಗೆ ಒಬ್ಬ ಶಿಕ್ಷಕರ ಉಸ್ತುವಾರಿ ಹಾಗೂ ಕೌನ್ಸಿಲರ್ ನೇಮಕ ಮಾಡಬೇಕೆಂದು ಪಾಲಿಕೆ ಆಯುಕ್ತ ಡಾ. ಹರೀಶ್ ಕುಮಾರ್ ಸಲಹೆ ಮಾಡಿದರು.
ಈಗಾಗಲೇ ರ್ಯಾಗಿಂಗ್ ಪಿಡುಗನ್ನು ಅಂತ್ಯಗೊಳಿಸಿದ ಮಾದರಿಯಲ್ಲೇ ವಿದ್ಯಾರ್ಥಿಗಳಲ್ಲಿ ಮಾದಕ ದ್ರವ್ಯ  ವ್ಯಸನ ತಡೆಗೆ ಕ್ರಮಕೈಗೊಳ್ಳಬೇಕೆಂದು ಸಭೆ ನಿರ್ಧರಿಸಿತು. ಪಿಯು ಹಾಗೂ ಪದವಿ ಕಾಲೇಜುಗಳ ಶಿಕ್ಷಕರ ಹೊಣೆ ಈ ನಿಟ್ಟಿನಲ್ಲಿ ಹೆಚ್ಚಿದ್ದು, ಜಾಗೃತಿ ಮೂಡಿಸುವ, ತಂಡ ರಚಿಸುವ ವಿದ್ಯಾರ್ಥಿಗಳ ಮೇಲೆ ನಿರಂತರ ಕಣ್ಣಿಡುವ ಕೆಲಸದಿಂದ ಮಾತ್ರ ಸಮಸ್ಯೆ ಪರಿಹರಿಸಲು ಸಾಧ್ಯವಿದೆ. ಈ ಸಂಬಂಧ ಪಿಯುಸಿ ಹಾಗೂ ಪದವಿ ಕಾಲೇಜಿನ ಮುಖ್ಯಸ್ಥರು ಎಲ್ಲ ಸಹಕಾರ ನೀಡುವ ಭರವಸೆಯನ್ನು ಜಿಲ್ಲಾಧಿಕಾರಿಗಳಿಗೆ ನೀಡಿದರಲ್ಲದೆ  ಹಾಸ್ಟೆಲ್ ವಾರ್ಡನ್ ಗಳ ಹೊಣೆಗಾರಿಕೆಯ ಬಗ್ಗೆಯೂ ಅವರಿಗೆ ಮನವರಿಕೆ ಮಾಡುವಂತೆ ತಿಳಿಹೇಳಲು ಜಿಲ್ಲಾಧಿಕಾರಿಗಳು ಹೇಳಿದರು.
ನಗರದ 37 ಕಾಲೇಜುಗಳಲ್ಲಿ ಈ ಸಂಬಂಧ ನಿರಂತರ ಸಭೆಗಳಾಗುತ್ತಿದ್ದರೂ ಈ ಸಭೆಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಡಿ ವೈ ಎಸ್ ಪಿ ರ್ಯಾಂಕಿನ ಪೊಲೀಸರು ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ಡಿಸಿಪಿ ಮುತ್ತುರಾಯರು ಹೇಳಿದರು. ಈ ಸಂಬಂಧ ಪೊಲೀಸ್ ಕಮಿಷನರೇಟ್ ಈಗಾಗಲೇ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದ ಅವರು, ಹೆತ್ತವರ, ಶಿಕ್ಷಕರ ಹಾಗೂ ಸಾರ್ವಜನಿಕರ ಸಹಕಾರ ಪೊಲೀಸ್ ಇಲಾಖೆಗೆ ಅಗತ್ಯವಿದೆ ಎಂದರು. ಸಾರ್ವಜನಿಕರು ಮಾದಕ ದ್ರವ್ಯ ಪತ್ತೆ ಜಾಲದ ಬಗ್ಗೆ ಮಾಹಿತಿ ನೀಡಲು ಇಚ್ಚಿಸಿದಲ್ಲಿ 222807 ಅಥವಾ 9480802305 ಅಥವಾ 100ಕ್ಕೆ ಕರೆ ಮಾಡಿ ಎಂದು ಸಾರ್ವಜನಿಕರಲ್ಲಿ ಕೋರಿದರು. ಮಾಹಿತಿದಾರರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂಬುದನ್ನು  ಅವರು ಸ್ಪಷ್ಟಪಡಿಸಿದರು.
ನಗರದ ಖಾಸಗಿ ಕಾಲೇಜುಗಳ ಪಾಲ್ಗೊಳ್ಳುವಿಕೆ ಖಾತರಿ ಪಡಿಸಲು  ವಿಶ್ವವಿದ್ಯಾನಿಲಯದ ರೆಜಿಸ್ಟ್ರಾರ್ ಅವರ ನೆರವು ಪಡೆಯಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಸಹಪಠ್ಯ ಚಟುವಟಿಕೆಗಳಿಂದ ಮಕ್ಕಳ ಸರ್ವಾಂಗೀಣ ಅಭಿವೃದ್ಧಿ-ಡಾ.ಕೆ.ಎನ್.ವಿಜಯಪ್ರಕಾಶ್

ಮಂಗಳೂರು, ಫೆಬ್ರವರಿ.06:-ಸಹ ಪಠ್ಯ ಚಟುವಟಿಕೆಗಳಾದ ಕಲೆ,ಸಂಗೀತ,ನೃತ್ಯ,ಸಾಹಿತ್ಯ,ಕರಕುಶಲ ಕಾರ್ಯಗಳು ಮಕ್ಕಳ ಮನೋವಿಕಾಸಕ್ಕೆ ನಾಂದಿಯಾಗಿ ಅವರು ಸರ್ವಾಂಗೀಣ ಅಭಿವೃದ್ಧಿ ಹೊಂದಲು ಸಹಕಾರಿಯಾಗಿವೆ ಎಂದು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್ ತಿಳಿಸಿದ್ದಾರೆ.
             ಅವರು ಇಂದು ಮಂಗಳೂರು ನಗರದ ಅತ್ತಾವರ ಸರೋಜಿನಿ ಮಧುಸೂದನ್ ಕುಶೆ ವಿದ್ಯಾ ಸಂಸ್ಥೆಯಲ್ಲಿ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ವೃತ್ತಿ ಶಿಕ್ಷಣ ಶಿಕ್ಷಕರ ಸಂಘ ಇವರ ಸಹಯೋಗದಲ್ಲಿ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವೃತ್ತಿ ಶಿಕ್ಷಣ ವಸ್ತುಗಳ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.
         ನಾವು ಮಕ್ಕಳನ್ನು ನಿಷ್ಕ್ರಿಯರನ್ನಾಗಿಸದೇ, ಸೋಮಾರಿಗಳನ್ನಾಗಿಸದೇ,ಪುಸ್ತಕದ ಹುಳುಗಳನ್ನಾಗಿಸದೇ ಅವರಲ್ಲಿ ಕ್ರಿಯಾಶೀಲತೆ,ಸೃಜನಶೀಲತೆ, ತುಂಬಲು ಅವರಿಗೆ ವೃತ್ತಿ ತರಬೇತಿ ಆವಶ್ಯಕವೆಂದರು.ಇದರಿಂದ ಮಕ್ಕಳಲ್ಲಿ ಪರಿಸರದೊಂದಿಗೆ ಸಂಬಂಧ ಹೆಚ್ಚುತ್ತ್ತದೆ.ಸಾಮಾಜಿಕ ಕೌಶಲಗಳಾದ ತಾಳ್ಮೆ,ಸಹನೆ,ಹೊಂದಾಣಿಕೆ,ಅಥರ್ೈಸುವಿಕೆ ಅವಕಾಶ ವಂಚಿತರನ್ನು ಸಬಲೀಕರಣಗೊಳಿಸುತ್ತದೆ ಎಂದು ಅಭಿಪ್ರಾಯ ಪಟ್ಟರು.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಮೋಸೆಸ್ ಜಯಶೇಖರ್ ಅವರು ಮಾತನಾಡಿ ವೃತ್ತಿ ಶಿಕ್ಷಣ ತರಬೇತಿ ಮಕ್ಕಳ ಬದುಕು ರೂಪಿಸಲು ನೆರವಾಗುವಂತಿರಬೇಕು. ಮುಂದಿನ ದಿನಗಳಲ್ಲಿ ಸಕರ್ಾರ ವೃತ್ತಿ ಶಿಕ್ಷಣ ಇತರೆ ಪಠ್ಯ ವಿಷಯಗಳಿಗೆ ಪ್ರಾಮುಖ್ಯತೆ ನೀಡಿದಂತೆ ಪರೀಕ್ಷೆಗಳನ್ನು ಸಹ ನಡೆಸಲಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಸರಕಾರಿ ಶಿಕ್ಷಕ ಶಿಕ್ಷಣ ಮಹಾ ವಿದ್ಯಾಲಯದ ಪದನಿಮಿತ್ತ ಸಹ ನಿರ್ದೇಶಕರಾದ ಶ್ರೀಮತಿ ಫಿಲೋಮಿನಾ ಲೋಬೋ ಅವರು ಮಾತನಾಡಿ ವೃತ್ತಿ ಶಿಕ್ಷಣ ಮಕ್ಕಳಿಗೆ ಅತ್ಯಂತ ಉಪಯುಕ್ತವಾದುದು,ಸ್ವಾವಲಂಬಿ ಜೀವನ ನಡೆಸಲು ವೃತ್ತಿ ಶಿಕ್ಷಣ ಸಹಕಾರಿಯಾಗಲಿದೆ ಎಂದರು.
ಎಸ್.ಎಂ.ಕುಶೆ ವಿದ್ಯಾ ಸಂಸ್ಥೆಗಳ ಸಂಚಾಲಕರಾದ  ಸುರೇಶ್ ರಾಜ್ ಈ ಸಂದರ್ಭದಲ್ಲಿ ಮಾತನಾಡಿದರು. ವೃತ್ತಿ ಶಿಕ್ಷಣ ವಿಷಯ ಪರಿವೀಕ್ಷಕರಾದ ಎ.ಐ.ಖಾಜಿ ಸಮಾರಂಭಕ್ಕೆ ಎಲ್ಲರನ್ನು ಸ್ವಾಗತಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಶಿವರಾಮಯ್ಯ,ಪಾಲಾಕ್ಷ.ಡಿ. ಸರ್ವ ಶಿಕ್ಷಣ ಅಭಿಯಾನ ಅಧಿಕಾರಿ ಶಿವಪ್ರಕಾಶ್,ದಕ್ಷಿಣಕನ್ನಡ ಜಿಲ್ಲಾ ವೃತ್ತಿ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ  ಹನುಮಂತರಾಯ ಮುಂತಾದವರು ಸಭೆಯಲ್ಲಿ ಭಾಗವಹಿಸಿದ್ದರು.
ವಸ್ತು ಪ್ರದರ್ಶನದಲ್ಲಿ ಜಿಲ್ಲೆಯ ಎಲ್ಲಾ 5 ತಾಲೂಕುಗಳ 47 ಶಾಲೆಗಳಿಂದ ಸುಮಾರು 5 ಸಾವಿರಕ್ಕೂ ಹೆಚ್ಚು ಆಕರ್ಷಕ ಮಾದರಿಗಳನ್ನು ಪ್ರದರ್ಶಿಸಲಾಗಿದೆ. ವಸ್ತು ಪ್ರದರ್ಶನ ಫೆಬ್ರವರಿ 7 ರಂದು ಸಹ ಮುಂದುವರಿಯಲಿದೆ.

ಸಕ್ಕಿಂಗ್ ಯಂತ್ರವನ್ನು ಉಪಯೋಗಿಸಲು ಸೂಚನೆ


ಮಂಗಳೂರು, ಫೆಬ್ರವರಿ.06 : ಶೌಚಾಲಯದ ಗುಂಡಿಗಳನ್ನು ವ್ಯಕ್ತಿ/ಮಾನವರಿಂದ ಸ್ವಚ್ಛ ಮಾಡದೇ ಸಕ್ಕಿಂಗ್ ಯಂತ್ರದ ಮೂಲಕವೇ ಸ್ವಚ್ಛಗೊಳಿಸುವಂತೆ ಸರಕಾರ ಆದೇಶಿಸಿರುತ್ತದೆ. ಆದ್ದರಿಂದ ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಆಚರಣೆಗೆ ಕಾರಣರಾದವರು ಹಾಗೂ ಈ ಪದ್ಧತಿಯಲ್ಲಿ ಕೆಲಸ ಮಾಡುತ್ತಿರುವವರು ಕೂಡಾ ಅಪರಾಧಿಗಳಾಗುತ್ತಾರೆ. ಇನ್ನು ಮುಂದೆ ಶೌಚಾಲಯದ ಗುಂಡಿಗಳನ್ನು ವ್ಯಕ್ತಿಗಳು/ಮಾನವರು ಸ್ಚಚ್ಛ ಮಾಡದೇ ಸಕ್ಕಿಂಗ್ ಯಂತ್ರದ ಮೂಲಕವೇ ಸ್ವಚ್ಛ ಮಾಡಿಸತಕ್ಕದೆಂದು ಸೂಚಿಸಲಾಗಿದೆ. ಈ ಆದೇಶದ ವಿರುದ್ಧ ತಲೆ ಮೇಲೆ ಮಲ ಹೊರುವ ಪದ್ಧತಿಯನ್ನು ಅನುಸರಿಸುತ್ತಿದ್ದಲ್ಲಿ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದೆಂದು ಮಂಗಳೂರು ಮಹಾನಗರಪಾಲಿಕೆಯ  ಆಯುಕ್ತರು ತಿಳಿಸಿರುತ್ತಾರೆ.
                            
                      

ಸೈಬರ್ ಕೆಫೆ ನೋಂದಣಿ

ಮಂಗಳೂರು, ಫೆಬ್ರವರಿ.06:-ಸರ್ಕಾರಿ ಅಧಿಸೂಚನೆಯಂತೆ ಜಿಲ್ಲಾ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗಳನ್ನು ಸೈಬರ್ ಕೆಫೆ ನೋಂದಣಿ ಮಾಡಲು ಏಜೆನ್ಸಿಯಾಗಿ ನೇಮಕ ಮಾಡಲಾಗಿದೆ. ಅದರಂತೆ ಜಿಲ್ಲಾ ವ್ಯಾಪ್ತಿಯಲ್ಲಿರುವ ಸೈಬರ್ ಕೆಫೆಗಳು ಈಗಾಗಲೇ ನೋಂದಣಿಯಾಗಿರದಿದ್ದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಅಗತ್ಯ ದಾಖಲೆಗಳೊಂದಿಗೆ ಕಡ್ಡಾಯವಾಗಿ ಕೂಡಲೇ ನೋಂದಣಿ ಮಾಡಲು ದಕ್ಷಿಣಕನ್ನಡ ಜಿಲ್ಲಾಧಿಕಾರಿಯವರು ತಿಳಿಸಿರುತ್ತಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ತ್ಯಾಜ್ಯ ವಿಲೇವಾರಿ ಘಟಕ

ಮಂಗಳೂರು, ಫೆಬ್ರವರಿ.06:-ಇಂದಿನ ದಿನಗಳಲ್ಲಿ ಮಾನವ ಹಾಗೂ ಪಶುಗಳಿಗೆ ರೋಗಗಳು ಕೇವಲ ಪರಿಸರ ವೈಪ್ಯರೀತಿಯಿಂದ ಬರುತ್ತಿಲ್ಲ.ಬದಲಾಗಿ ಮಾನವನ ಅಸಡ್ಡೆ,ನಿರ್ಲಕ್ಷ್ಯಗಳಿಂದಾಗಿ ಬಹುತೇಕ ರೋಗಗಳು ಸಾಂಕ್ರಾಮಿಕವಾಗಿ ಹರಡುತ್ತಿವೆ.ಇಂತಹ ನಿರ್ಲಕ್ಷತೆಗೆ ಮುಖ್ಯ ಉದಾಹರಣೆ ಎಂದರೆ ವೈದ್ಯಕೀಯ ತ್ಯಾಜ್ಯ.
       ಇಂದು ಗಲ್ಲಿಗಲ್ಲಿಯಲ್ಲಿ ಕ್ಲಿನಿಕ್ ಗಳು,ನರ್ಸಿಂಗ್ ಹೋಂಗಳು, ಪಂಚತಾರಾ ಬಹುಚಿಕಿತ್ಸಾ ಸೌಲಭ್ಯಗಳುಳ್ಳ ಬೃಹತ್ ಆಸ್ಪತ್ರೆಗಳು,ಸರ್ಕಾರಿ  ಆಸ್ಪತ್ರೆಗಳು ಎಡತಾಕಿದೆಡೆಯಲ್ಲಿ ನಮಗೆ ಕಾಣ ಸಿಗುತ್ತವೆ. ಆದರೆ ಇಲ್ಲಿ ಉತ್ಪತ್ತಿಯಾಗುವ  ದ್ರವ ಮತ್ತು ಒಣ ತ್ಯಾಜ್ಯಗಳ ಸಮರ್ಪಕ ನಿರ್ವಹಣೆಯಿಲ್ಲದೆ ಇಂದು ಅನೇಕ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತಿದೆ.  ದ್ರವತ್ಯಾಜ್ಯ ಮಾನವನ ಕೊಳೆತ ಅಂಗಾಂಗಗಳು,ಮಲಿನ ರಕ್ತ,ಕೀವು ಇತ್ಯಾದಿಯಾದರೆ,ಒಣತ್ಯಾಜ್ಯದಲ್ಲಿ ಬಳಸಿ ಬಿಸಾಡಿದ ಇಂಜೆಕ್ಷನ್ ಸೂಜಿಗಳು,ಬ್ಯಾಂಡೇಜ್ ಗಳು ,ರೋಗಿ ಮಲಮೂತ್ರ ,ರಕ್ತ ಸಿಕ್ತ ಬಟ್ಟೆಗಳು ಇತ್ಯಾದಿಯಾಗಿವೆ. ಇವುಗಳನ್ನು ಸಮರ್ಪಕವಾಗಿ ವಿಲೇ ಮಾಡಲು ಆಸ್ಪತ್ರೆ,ಕ್ಲಿನಿಕ್ ನರ್ಸಿಂಗ್ ಹೋಂಗಳಲ್ಲಿ ಸೂಕ್ತವಾದ ತ್ಯಾಜ್ಯ ವಿಲೇವಾರಿ  ಘಟಕಗಳಿಲ್ಲ. ಇವುಗಳನ್ನು ರಸ್ತೆ ಬದಿಯ ನಗರ/ಪುರಸಭೆಗಳ ಕಸದ ತೊಟ್ಟಿಗಳಲ್ಲೆ ಅಥವಾ ರಸ್ತೆ ಬದಿ ಅನಧಿಕೃತ ಕಸದ ರಾಶಿಗೋ ಎಸೆಯುತ್ತಾ ಇದನ್ನು ನಾಯಿಗಳು,ಕಾಗೆ,ಹಂದಿ ಇನ್ನಿತರೆ ಪ್ರಾಣಿಗಳು ತಿನ್ನುವ ಆಸೆಗೆ ರಸ್ತೆಯಲ್ಲೆಲ್ಲ ಎಳೆದಾಡುತ್ತವೆ. ಇದರಿಂದ ಸೋಂಕುಳ್ಳ ವಸ್ತುಗಳು,ದ್ರವತ್ಯಾಜ್ಯ ಆರೋಗ್ಯವಂತ ಮನುಷ್ಯನ ಸಂಪರ್ಕಕ್ಕೆ ಬಂದು ಅವನಿಗೂ ಸೋಂಕು ಉಂಟಾಗುತ್ತಿದೆ.ಇದೊಂದು ಸಾಮಾಜಿಕ ಸಮಸ್ಯೆಯಾಗಿದೆ.

ಆದ್ದರಿಂದ ಇದನ್ನು ನಿವಾರಿಸುವ ಸಲುವಾಗಿ ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ಸರ್ಕಾರಿ ,ಅನುದಾನಿತ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ತ್ಯಾಜ್ಯ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ 2 ಜಿಲ್ಲಾ ಆಸ್ಪತ್ರೆಗಳು,4 ತಾಲೂಕು ಮಟ್ಟದ ಆಸ್ಪತ್ರೆಗಳು,63 ಪ್ರಾಥಮಿಕ ಆರೋಗ್ಯ ಕೇಂದ್ರಗಳು 7 ಸಮುದಾಯ ಆರೋಗ್ಯ ಕೇಂದ್ರಗಳಿದ್ದು ಇಲ್ಲಿ ಉತ್ಪತ್ತಿಯಾಗುವ ದ್ರವ ಮತ್ತು ಒಣ ವೈದ್ಯಕೀಯ ತ್ಯಾಜ್ಯವನ್ನು ವಿಲೇ ಮಾಡಲು ಮೂಲ್ಕಿಯ ರಾಮ್ ಕೀ ಸಂಸ್ಥೆಗೆ ವಹಿಸಲಾಗಿದೆ. ಈ ಸಂಸ್ಥೆಯವರು ಪ್ರತೀದಿನ ಈ ಎಲ್ಲಾ ಆಸ್ಪತ್ರೆಗಳಿಗೆ ತೆರಳಿ ಇಲ್ಲೆ ಸಂಗ್ರಹವಾಗುವ ದ್ರವ /ಒಣ ವ್ಯದ್ಯಕೀಯ ತ್ಯಾಜ್ಯವನ್ನು ಬೇರ್ಪಡಿಸಿ ತೆಗೆದುಕೊಂಡು ಹೋಗಿ ತಮ್ಮ ಸಂಸ್ಥೆಯಲ್ಲಿ ಸಂಸ್ಕರಿಸುತ್ತಾರೆ. ದ್ರವರೂಪಿ ತ್ಯಾಜ್ಯ ಅದರಲ್ಲಿ ಸೋಂಕುಳ್ಳ ತ್ಯಾಜ್ಯವನ್ನು ಆಳವಾದ ಗುಂಡಿಗಳನ್ನು ತೆಗೆದು ಅದರಲ್ಲಿ ಹೂಳುತ್ತಾರೆ. ಜಿಲ್ಲೆಯಲ್ಲಿರುವ ಆರೋಗ್ಯ ಸಂಸ್ಥೆಗಳಿಂದ ಪ್ರತೀ ನಿತ್ಯ 2600 ಕೆಜಿ ಹಾಗೂ ಅಧಿಕ ಬಯೋ ಮೆಡಿಕಲ್ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿದ್ದು, ಇದರಲ್ಲಿ 1900 ಕೆಜಿಗಳಷ್ಟು ಖಾಸಗಿ  ವೈದ್ಯಕೀಯ ಸಂಸ್ಥೆಗಳಿಂದಲೂ ಹಾಗೂ 700 ಕೆಜಿಯಷ್ಟು ಸರ್ಕಾರಿ ಆರೋಗ್ಯ ಸಂಸ್ಥೆಗಳಿಂದ ಉತ್ಪಾದನೆ ಆಗುತ್ತಿದೆಯೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಓ.ಶ್ರೀರಂಗಪ್ಪ ತಿಳಿಸಿರುತ್ತಾರೆ. ರಾಜ್ಯದಲ್ಲಿ ದಕ್ಷಿಣಕನ್ನಡ ಜಿಲ್ಲೆ ಬಯೋ ಮೆಡಿಕಲ್ ವೇಸ್ಟ್ ವಿಲೇವಾರಿಯಲ್ಲಿ ಮಾದರಿಯಾಗಿದೆ ಎಂದು ಅವರು ತಿಳಿಸಿರುತ್ತಾರೆ.


 

Tuesday, February 5, 2013

ಜಿಲ್ಲೆಯಲ್ಲಿರುವ ಆಶ್ರಮಗಳ ಸಮಗ್ರ ಮಾಹಿತಿ ಒದಗಿಸಲು ಜಿಲ್ಲಾಧಿಕಾರಿ ಸೂಚನೆ

ಮಂಗಳೂರು, ಫೆಬ್ರವರಿ.05: ನಗರದ ನಂತೂರಿನ ಆಶ್ರಯ ರಿಹ್ಯಾಬಿಲಿಟೇಷನ್ ಕೇಂದ್ರದ ಘಟನೆಯ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಎನ್ ಪ್ರಕಾಶ್ ಅವರು ಇಂದು ಸಂಬಂಧಪಟ್ಟ ಇಲಾಖಾಧಿಕಾರಿಗಳ ಸಭೆ ಕರೆದು  ಜಿಲ್ಲೆಯಲ್ಲಿರುವ ಈ ಮಾದರಿಯ ಆಶ್ರಮ ಅಥವಾ ಆಶ್ರಯ ತಾಣಗಳ ಸಮಗ್ರ ಮಾಹಿತಿ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ನೋಂದಣಿಯಾಗದ ಈ ರೀತಿಯ  ಅನಧಿಕೃತ ಸಂಸ್ಥೆಗಳ ಬಗ್ಗೆ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ವಿಕಲಚೇತನ ಇಲಾಖೆ ಮತ್ತು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ತಕ್ಷಣವೇ ಈ ಸಂಬಂಧ ಒಂದು ಸಮಿತಿಯನ್ನು ರಚಿಸಿ ಇಂತಹ ಸಂಸ್ಥೆಗಳನ್ನು ಖುದ್ದಾಗಿ ವೀಕ್ಷಿಸಿ ವರದಿ ನೀಡುವಂತೆಯೂ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ರೋಗಿಗಳನ್ನು ನೋಂದಾಯಿಸಿಕೊಳ್ಳಲು ಅಗತ್ಯವಾಗಿರುವ ಸೌಕರ್ಯ ಹಾಗೂ ಕಾನೂನು ಕುರಿತು ಮಾನಸಿಕ ತಜ್ಞರಾದ ಡಾ. ಆಶೋಕ್ ಪೈ ಮತ್ತು ಡಾ. ರವೀಶ್ ತುಂಗಾ ಅವರ ಜೊತೆ ಚರ್ಚಿಸಲೂ ಸಭೆಯಲ್ಲಿ ಜಿಲ್ಲಾಧಿಕಾರಿಗಳು ಹೇಳಿದರು.
ಇಂತಹ ಅನಧಿಕೃತ ಸಂಸ್ಥೆಗಳ ಬಗ್ಗೆ ಮಾಹಿತಿ ದೊರೆತರೆ ತಕ್ಷಣವೇ ಜಿಲ್ಲಾಧಿಕಾರಿಗಳಿಗೆ ಅಥವಾ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕೆಂದೂ ಜಿಲ್ಲಾಧಿಕಾರಿಗಳು ಸಾರ್ವಜನಿಕರನ್ನು ಕೋರಿದ್ದಾರೆ.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿದರ್ೇಶಕರಾದ ಶ್ರೀಮತಿ ಶಕುಂತಲಾ, ಜಿಲ್ಲಾ ಸರ್ಜನ್ ಡಾ. ಸರೋಜ, ವಿಕಲಚೇತನ ಅಧಿಕಾರಿ ಪುಟ್ಟಸ್ವಾಮಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಓ ಆರ್ ಶ್ರೀರಂಗಪ್ಪ ಉಪಸ್ಥಿತರಿದ್ದರು.
    ಇದೇ ಸಂದರ್ಭದಲ್ಲಿ ಮಾದಕ ದ್ರವ್ಯ ಜಾಲ ತಡೆಗೆ ಪೊಲೀಸ್ ಆಯುಕ್ತರು ಮತ್ತು ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಪಿಯುಸಿ ಕಾಲೇಜುಗಳ ಪ್ರಾಂಶುಪಾಲರು ಮತ್ತು ಅಧಿಕಾರಿಗಳ ಸಭೆಯನ್ನು ಕರೆದು, ಜಾಗೃತಿ ಹಾಗೂ ಈ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಅಗತ್ಯ ಕ್ರಮಗಳ ಕುರಿತು ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದೂ ಜಿಲ್ಲಾಧಿಕಾರಿಗಳು ಹೇಳಿದರು.

' ಸಕಾಲ' ಜಿಲ್ಲೆಯಲ್ಲಿ 5.80 ಲಕ್ಷ ಅರ್ಜಿಗಳ ವಿಲೆ


ಮಂಗಳೂರು, ಫೆಬ್ರವರಿ.05:-ಸಾಮಾನ್ಯ ನಾಗರೀಕರಿಗೆ ಸೂಕ್ತ ಸಮಯದಲ್ಲಿ ಕೆಲಸ ಕಾರ್ಯ ಒದಗಿಸುವ  ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿ ಕಾಯ್ದೆ, ಸಕಾಲ.ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕಳೆದ ಮಾರ್ಚ್  1 ರಿಂದ ಫೆಭ್ರವರಿ 02,2013  ರ ವರೆಗೆ ಒಟ್ಟು 5,93,749 ಅರ್ಜಿಗಳನ್ನು ಸ್ವೀಕರಿಸಿ 5,80,752 ಅರ್ಜಿಗಳನ್ನು ವಿಲೇ ಮಾಡುವ ಮೂಲಕ ಶೇಕಡಾ 97.98 ಸಾಧನೆ ಮಾಡಲಾಗಿದೆ.
        ಈ ಮೇಲ್ಕಂಡ ಅವಧಿಯಲ್ಲಿ  ಕಂದಾಯ ಇಲಾಖೆಯಲ್ಲಿ ಅತೀ ಹೆಚ್ಚು ಅರ್ಜಿಗಳನ್ನು ಅಂದರೆ 1,53,791 ಸ್ವೀಕರಿಸಿ,1,51,773 ಅರ್ಜಿಗಳನ್ನು ವಿಲೇ ಮಾಡಿದ್ದರೆ,ಸಾರಿಗೆ ಇಲಾಖೆಯಲ್ಲಿ 1,53,539 ಅರ್ಜಿಗಳನ್ನು ಸ್ವೀಕರಿಸಿ 1,49,992 ಅರ್ಜಿಗಳನ್ನು  ಇತ್ಯರ್ಥಪಡಿಸುವ ಮೂಲಕ 2ನೇ ಸ್ಥಾನದಲ್ಲಿದೆ.
       ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯಲ್ಲಿ 99,268 ಅರ್ಜಿಗಳನ್ನು ಸ್ವೀಕರಿಸಿ 99,104 ಅರ್ಜಿದಾರರಿಗೆ ಸಮರ್ಪಕ ಸಮಜಾಯಿಸಿ ದೊರಕಿಸಲಾಗಿದೆ. ಇತರೆ ಇಲಾಖೆಗಳಲ್ಲಿ ಅಂದರೆ ನಗರಾಭಿವೃದ್ಧಿ ಇಲಾಖೆಯಲ್ಲಿ 43,173 ಅರ್ಜಿ ಸ್ವೀಕರಿಸಿ 42,368 ವಿಲೇ,ಗೃಹ ಇಲಾಖೆಯಲ್ಲಿ 45,740 ಅರ್ಜಿ ಸ್ವೀಕೃತ 42,931 ವಿಲೇ,ಶಿಕ್ಷಣ ಇಲಾಖೆಯಲ್ಲಿ 170 ಸ್ವೀಕೃತ 90 ವಿಲೇ,ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ 6,143 ಅರ್ಜಿ ಸ್ವೀಕೃತ  6,137 ವಿಲೇ,ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್  ಇಲಾಖೆಯಲ್ಲಿ 10,746 ಸ್ವೀಕೃತ 9,994 ಅರ್ಜಿ ವಿಲೇ,ಹಣಕಾಸು ಇಲಾಖೆ 69,009 ಸ್ವೀಕೃತ 67,397 ಅರ್ಜಿ ವಿಲೇ, ಕಾರ್ಮಿಕ ಇಲಾಖೆ 6062 ಸ್ವೀಕೃತ 5891 ವಿಲೇ ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ 3944 ಸ್ವೀಕೃತ 3944 ವಿಲೇ (ಶೇಕಡಾ ನೂರು ಸಾಧನೆ)ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ 1099 ಸ್ವೀಕೃತ 1099 ಶೇ.100 ವಿಲೇ ಅರ್ಜಿಗಳನ್ನು ಇತ್ಯರ್ಥ ಮಾಡಲಾಗಿದೆ.

Monday, February 4, 2013

ಅನುಮತಿ ಇಲ್ಲದೆ ಕೊಳವೆ ಬಾವಿ ಕೊರೆದರೆ ರೂ.5000/- ದಂಡ: ಎನ್.ಪ್ರಕಾಶ್

ಮಂಗಳೂರು, ಫೆಬ್ರವರಿ.04:-  ಜಿಲ್ಲೆಯಲ್ಲಿ ಮಂಗಳೂರು ,ಬಂಟ್ವಾಳ ಹಾಗೂ ಪುತ್ತೂರು ತಾಲೂಕುಗಳ 43 ಗ್ರಾಮಗಳನ್ನು ಅಂತರ್ಜಲ ಅತಿ ಬಳಕೆ ಗ್ರಾಮಗಳೆಂದು ಘೋಷಿಸಲಾಗಿದ್ದು,ಈ ಗ್ರಾಮಗಳಲ್ಲಿ ಇನ್ನು ಮುಂದೆ ಖಾಸಗಿ ಅಥವಾ ಸಾರ್ವಜನಿಕ ಕೊಳವೆ ಬಾವಿಗಳನ್ನು   ಕೊರೆಯಲು ನೂತನವಾಗಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ರಚಿತವಾಗಿರುವ ದಕ್ಷಿಣಕನ್ನಡ ಜಿಲ್ಲಾ ಮಟ್ಟದ ಅಂತರ್ಜಲ ಪ್ರಾಧಿಕಾರದ ಅನುಮತಿ ಪಡೆಯಬೇಕೆಂದು,  ಒಂದು ವೇಳೆ ಅನುಮತಿ ಪಡೆಯದೇ ಕೊಳವೆ ಬಾವಿ ಕೊರೆದಲ್ಲಿ ಅಂತಹವರಿಗೆ ರೂ.5000-/ ದಂಡ ಅಥವಾ 6 ತಿಂಗಳ ಜೈಲು ಶಿಕ್ಷೆಗೆ ಒಳ ಪಡಿಸ ಲಾಗು ವುದು ಎಂದು ಜಿಲ್ಲಾಧಿಕಾರಿ ಎನ್.ಪ್ರಕಾಶ್ ತಿಳಿಸಿದ್ದಾರೆ.
   ಅವರು ಇಂದು ತಮ್ಮ ಕಚೇರಿಯಲ್ಲಿ ಕರ್ನಾಟಕ ಅಂತರ್ಜಲ ಅಭಿವೃದ್ಧಿ ಪಡಿಸುವ ಮತ್ತು ಅಂತರ್ಜಲದ ಅತಿ ಬಳಕೆಯನ್ನು ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಅಂತರ್ಜಲ  ಅಧಿನಿಯಮ 2011 ನಿಯಮಾವಳಿ- 2012 ರನ್ವಯ ನೂತನವಾಗಿ ರಚಿಸಿರುವ ದ.ಕ. ಜಿಲ್ಲಾ  ಮಟ್ಟದ ಅಂತರ್ಜಲ ಪ್ರಾಧಿಕಾರದ ಪ್ರಥಮ ಸಭೆಯ  ಅಧ್ಯಕ್ಷತೆ ವಹಿಸಿ ಮಾತನಾಡಿದರು.
      ಕರ್ನಾಟಕ ಅಂತರ್ಜಲ ಅಧಿನಿಯಮ 2011 ನಿಯಮಾವಳಿ 2012 ರನ್ವಯ  ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ಅಳಿಕೆ, ಅನಂತಾಡಿ, ಬಾಳೆಪುಣಿ, ಬೊಳಂತೂರು, ಇಡ್ಕಿದು,ಇರಾ,ಪದವು,ಕನ್ಯಾನ,ಕರಿಯಂಗಳ,ಕರೋಪಾಡಿ,ಕೇಪು,
ಕೊಲ್ನಾಡ್, ಕುಳಾಮಂಚಿ, ನೆರಿಯಂಗಾಣ, ಮಾಣಿಲಾ, ಪೆರುವಾಯಿ, ನೆಟ್ಲಮುಡ್ನೂರು, ಸಜಿಪಪಡು, ಪುಣಚ, ವೀರಕಂಭ,
ಸಾಲೆತ್ತೂರು, ವಿಟ್ಲಮುಡ್ನೂರು, ವಿಟ್ಲ ಮತ್ತು ವಿಟ್ಲ ಮಡ್ನೂರು ಸೇರಿ ಒಟ್ಟು 24 ಗ್ರಾಮಗಳಲ್ಲಿ , ಅದೇ ರೀತಿ  ಮಂಗಳೂರು ತಾಲೂಕಿನ 5 ಗ್ರಾಮಗಳೆಂದರೆ ಕಿನ್ಯಾ,ಕೋಣಾಜೆ,ಮಂಜನಾಡಿ,ಸೋಮೇಶ್ವರ ಮತ್ತು ತಲಪಾಡಿ
ಪುತ್ತೂರು ತಾಲೂಕಿನ 14 ಗ್ರಾಮಗಳೆಂದರೆ ಅರಿಯಡ್ಕ  ,ಆರ್ಯಾಪು, ಬಡಗನ್ನೂರು, ಬಲ್ನಾಡ್, ಬೆಟ್ಟಂಪಾಡಿ, ಕುಡಿಪಡಿ, ಕೆದಂಬಾಡಿ, ಇರ್ದೆ, ಕುರಿಯ, ಮಡ್ನೂರ್,ನಿಡಪಳ್ಳಿ, ಪದವನ್ನೂರು,ಪಾಣಾಜೆ ಮತ್ತು ಒಳಮೊಗರು ಗ್ರಾಮಗಳು.
        ಈಗಾಗಲೇ ಜಿಲ್ಲೆಯಲ್ಲಿ ಕೊಳವೆ ಬಾವಿಗಳನ್ನು ಕೊರೆಸಿರುವ ಖಾಸಗಿಯವರು ಕೂಡಲೇ ಕೊಳವೆ ಬಾವಿ ಗೃಹಕೃತ್ಯಕ್ಕೆ ಬಳಕೆಯಾಗುತ್ತಿದೆಯೇ ವಾಣಿಜ್ಯ ಕಾರ್ಯಗಳಿಗೆ ಬಳಕೆಯಾಗುತ್ತಿದೆಯೇ ಎಂಬ ಮಾಹಿತಿಯೊಂದಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯಲ್ಲಿ ಖಡ್ಡಾಯವಾಗಿ ನೋಂದಾಯಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.
ಅನುಮತಿ ಪಡೆಯದೇ ಕೊಳವೆ ಬಾವಿ ಕೊರೆದರೆ ಅಂತಹ ಡ್ರಿಲ್ಲಿಂಗ್ ಯಂತ್ರವನ್ನು ಮುಟ್ಟುಗೋಲು  ಹಾಕಿಕೊಳ್ಳಲಾಗುವುದೆಂದು ಜಿಲ್ಲಾಧಿಕಾರಿಗಳು ಸೂಚಿಸಿದ್ದಾರೆ.  ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಟ್ಟು 6 ಕೊಳವೆ ಬಾವಿ ಕೊರೆಯುವ ಘಟಕಗಳು ನೊಂದಾಯಿಸಿವೆ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಭೂಶಾಸ್ತ್ರಜ್ಞರಾದ  ಇವರು ತಿಳಿಸಿರುತ್ತಾರೆ.
       ಅಧಿನಿಯಮ 16 ರನ್ವಯ ಅಧಿಸೂಚಿತ ಪ್ರದೇಶದಲ್ಲಿ ಅನುಮತಿ ಪತ್ರ ಹೊಂದಿರದ ಯಾವೊಬ್ಬ ವ್ಯಕ್ತಿಯು ಹಣಕಾಸಿನ ಸಹಾಯ,ವಿದ್ಯುಚ್ಛಕ್ತಿಯ ಸಂಪರ್ಕ,ಜೊತೆಗೆ ರೈತರಾಗಿದ್ದರೆ ಸಿಂಪರಣೆ ,ಹನಿ ನೀರಾವರಿ ಸಾಧನಗಳನ್ನು ಅಳವಡಿಸದಿರುವವರಿಗೆ ಸರ್ಕಾರದಿಂದ ಯಾವುದೇ ಧನಸಹಾಯ ಅಥವಾ ಪ್ರೋತ್ಸಾಹ ಧನವನ್ನು ಪಡೆಯಲು ಅನರ್ಹರಾಗಿರುತ್ತಾರೆ. ಸಾರ್ವಜನಿಕ ನೀರಿನ ಮೂಲಗಳಿಂದ 500 ಮೀಟರ್ ಅಂತರದ ಒಳಗೆ ಯಾವುದೇ ಹೊಸ ಕೊಳವೆ ಬಾವಿಯನ್ನು ಕಾನೂನಿನಂತೆ ಕೊರೆಯಬಾರದೆಂದು ಸಹ ಅವರು ತಿಳಸಿದ್ದಾರೆ. 
      ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್,ಜಿಲ್ಲಾ ಪೋಲೀಸ್ ಅಧೀಕ್ಷಕ ಅಭಿಷೇಕ್ ಗೋಯಲ್,ಹೆಚ್ಚುವರಿ ಜಿಲ್ಲಾಧಿಕಾರಿ ದಯಾನಂದ ಮುಂತಾದವರು ಹಾಜರಿದ್ದರು.     
                        

Saturday, February 2, 2013

ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ:ಕಾನೂನು ಪಾಲಿಸದ ಉತ್ಪಾದಕರ ಪರವಾನಿಗೆ ರದ್ದು


ಮಂಗಳೂರು, ಫೆಬ್ರವರಿ.02: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆಗೆ ಸಂಬಂಧಿಸಿದ ಕಾನೂನನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ  ಪ್ಲಾಸ್ಟಿಕ್ ಉತ್ಪಾದಕರ ಸಂಘವು ಪಾಲಿಕೆ ಜೊತೆ ಕೈಜೋಡಿಸಿದ್ದು, ಕಾನೂನು ಪಾಲಿಸದ ಉತ್ಪಾದಕರ ಪರವಾನಿಗೆಯನ್ನು ರದ್ದು  ಮಾಡಲು ಕ್ರಮ ಕೈಗೊಳ್ಳುವುದಾಗಿ ಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್ ಹೇಳಿದರು.
                ಪಾಲಿಕೆ ಕಚೇರಿ ಯಲ್ಲಿಂದು ಸುದ್ದಿ ಗೋಷ್ಠಿ ಯಲ್ಲಿ ಮಾಹಿತಿ ನೀಡಿದ  ಆಯುಕ್ತರು  ಪ್ಲಾಸ್ಟಿಕ್ ಬಳಕೆಯ ಸಂದರ್ಭ ಪರಿಸರಕ್ಕೆ ಹಾನಿ ಯಾಗ ದಂತೆ ಎಚ್ಚರಿಕೆ ವಹಿಸುವುದು  ಪಾಲಿಕೆಯ ಜವಾಬ್ಧಾರಿ ಆಗಿದ್ದು, ಈ ಬಗ್ಗೆ ಸೂಕ್ತ ನಿರ್ವಹಣೆ ಉತ್ಪಾದಕರ ಹೊಣೆಯೂ ಆಗಿರುವುದರಿಂದ ಉತ್ಪಾದಕರು ಪ್ಲಾಸ್ಟಿಕ್ ನಿರ್ವಹಣೆಗೆ ಒಪ್ಪಿಕೊಂಡಿದ್ದಾರೆ. ಈ ಹಿಂದೆ ಜಿಲ್ಲಾಡಳಿತದ ಪ್ಲಾಸ್ಟಿಕ್ ನಿಷೇಧಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಆ ಹಿನ್ನೆಲೆಯಲ್ಲಿ ಕೇಂದ್ರದ ನಿಯಮಗಳನ್ನು ಮೀರಿ ಪ್ಲಾಸ್ಟಿಕ್ ಉತ್ಪಾದಿಸುವ ಸಂಸ್ಥೆಗಳ ಪರವಾನಿಗೆ ರದ್ದುಪಡಿಸುವ, ದಂಡ ವಿಧಿಸುವ ಹಾಗೂ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸುವ ಅಧಿಕಾರ ಮಾಲಿನ್ಯ ನಿಯಂತ್ರಣ ಮಂಡಳಿಗೆ ಇರುತ್ತದೆ.ಕೇಂದ್ರದ ಪ್ಲಾಸ್ಟಿಕ್ ತ್ಯಾಜ್ಯ ನಿರ್ವಹಣೆ ನಿಯಮಗಳು 2011ರ ಪ್ರಕಾರ ಅದನ್ನು ಪಾಲಿಸುವುದು ಸ್ಥಳೀಯಾಡಳಿತದ ಜವಾಬ್ಧಾರಿಯಾಗಿದೆ.ಈ ಪ್ರಕಾರ ಇದೀಗ ಮನೆ ಮನೆ ಕಸ ಸಂಗ್ರಹದ ಸಂದರ್ಭಲ್ಲಿ  ಪ್ಲಾಸ್ಟಿಕ್ ತ್ಯಾಜ್ಯವನ್ನು ವಾರಕ್ಕೊಮ್ಮೆ ಪ್ರತ್ಯೇಕವಾಗಿ ಸಂಗ್ರಹಿಸಲಾಗುವುದು. ಪಾಲಿಕೆ  ವ್ಯಾಪ್ತಿಯ ವಾರ್ಡು ಗಳಿಂದ ಕಸ ಸಂಗ್ರಹಿಸುವ ಏಜೆನ್ಸಿಗಳಿಂದ ಈ ರೀತಿ ಸಂಗ್ರಹಿಸಲಾಗುವ ಪ್ಲಾಸ್ಟಿಕ್ ತ್ಯಾಜ್ಯವನ್ನು ಉತ್ಪಾದಕರು ಸೂಕ್ತ ದರ ನೀಡಿ ಖರೀದಿಸಿ ನಿರ್ವಹಣೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ಲಾಸ್ಟಿಕ್ ಉತ್ಪಾದಕರು ಪಾಲಿಕೆ ಜೊತೆ ಕೈಜೋಡಿಸಲು ಮುಂದೆ ಬಂದಿದ್ದಾರೆ ಎಂದರು.
           ಪತ್ರಿಕಾ ಗೋಷ್ಟಿ ಯಲ್ಲಿ  ಮಾತ ನಾಡಿದ  ಕೆನರಾ ಪ್ಲಾಸ್ಟಿಕ್ ಉತ್ಪಾ ದಕರು ಮತ್ತು ವ್ಯಾಪಾ ರಿಗಳ ಸಂಘದ ಅಧ್ಯಕ್ಷ ಬಿ.ಎ. ನಝೀರ್ ಈ ಬಗ್ಗೆ ಪ್ರಾಥಮಿ ಕವಾಗಿ ಜನರಿಗೆ ಅರಿವು ಮೂಡಿ ಸುವ ಕಾರ್ಯ ಕ್ರಮ ವನ್ನು ಕೈ ಗೊಳ್ಳಲಾಗು ವುದು. ವಾಹ ನದ ಮೂಲಕ ಪ್ರಚಾರ ಜಾಥ, ರಾಜ್ಯ ಮಟ್ಟದ ಸಮ್ಮೇಳ ನಗಳ ಮೂಲಕ ಜನರಲ್ಲಿ ಪ್ಲಾಸ್ಟಿಕನ್ನು ಎಲ್ಲೆಂದರಲ್ಲಿ ಎಸೆಯದಂತೆ ಜನಜಾಗೃತಿ ಮೂಡಿಸಲಾಗುವುದು. ಏಜೆನ್ಸಿಗಳಿಂದ ಖರೀದಿ ಮಾಡುವ ಪ್ಲಾಸ್ಟಿಕ್ ನಲ್ಲಿ ಪುನರ್ ಬಳಕೆ ಮಾಡಬಹುದಾದ ಪ್ಲಾಸ್ಟಿಕನ್ನು ಪ್ರತ್ಯೇಕಿಸಿ ಬೈಕಂಪಾಡಿಯಲ್ಲಿರುವ ಎರಡು ಸ್ಥಾವರಗಳಲ್ಲಿ ಪುನರ್ ಬಳಕೆಗೆ ಕ್ರಮ ಕೈಗೊಳ್ಳಲಾಗುವುದು. ಉಳಿದ ಪ್ಲಾಸ್ಟಿಕನ್ನು ರಸ್ತೆ ನಿರ್ಮಾಣ ಕಾರ್ಯದಲ್ಲಿ ಬಳಕೆ ಮಾಡಲು ಕಂಪನಿಗಳಿಂದ ಬೇಡಿಕೆ ಇದೆ ಎಂದರು.
       ಪ್ಲಾಸ್ಟಿಕ್ ಖರೀದಿ ಮಾಡುವಾಗ ಸಾರ್ವಜನಿಕರು ಪ್ಲಾಸ್ಟಿಕ್ನಲ್ಲಿ ಉತ್ಪಾದಕರ ಹೆಸರು, ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪರವಾನಿಗೆ ಪಡೆದಿರುವ ಬಗ್ಗೆ ನಮೂದಿಸಲಾಗಿದೆಯೇ ಎಂಬುದನ್ನು ಖಾತರಿಪಡಿಸಿಕೊಳ್ಳಬೇಕು. ಈ ಬಗ್ಗೆ ಅಂಗಡಿಗಳಿಗೆ, ಜನಸಾಮಾನ್ಯರಿಗೆ ಮಾಹಿತಿ ನೀಡುವ ಕೆಲಸ ಮಾಡಲಾಗುವುದು. ನಗರದ ಉತ್ಪಾದಕರಿಂದ ಉತ್ಪತ್ತಿಯಾಗುವ ಪ್ಲಾಸ್ಟಿಕ್ ಗಳಲ್ಲಿ ಶೇ. 50ರಷ್ಟು ಸ್ಥಳೀಯವಾಗಿ ಅಂಗಡಿ ಹಾಗೂ ಮಾಲ್ ಗಳಲ್ಲಿ ಬಳಕೆಯಾಗುತ್ತಿದೆ. ಉಳಿದವು ಇಲ್ಲಿಂದ ಹೊರ ಜಿಲ್ಲೆ, ರಾಜ್ಯಗಳಿಗೆ ರಫ್ತಾಗುತ್ತಿವೆ. ಕೇಂದ್ರದ ನಿಯಮ ಉಲ್ಲಂಘಿಸಿ ಉತ್ಪಾದನೆ ಮಾಡದಂತೆ ಹಾಗೂ 40 ಮೈಕ್ರೋನ್ ಗಿಂತ ಕಡಿಮೆ ಗುಣಮಟ್ಟದ ಪ್ಲಾಸ್ಟಿಕ್ ಉತ್ಪಾದಿಸದಂತೆ ನಗರದ ಉತ್ಪಾದಕರಿಗೆ ಈಗಾಗಲೇ ಸೂಚನೆ ನೀಡಲಾಗಿದೆ ಎಂದು ಬಿ.ಎ. ನಝೀರ್ ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಲಕ್ಷ್ಮಣ್, ಮನಪಾ ಅಧಿಕಾರಿಗಳು ಉಪಸ್ಥಿತರಿದ್ದರು.

ಬ್ಯಾನರ್, ಬಂಟಿಂಗ್ಸ್ ವಿರುದ್ಧ ಪಾಲಿಕೆ ಸೂಕ್ತ ಕ್ರಮ

ಮಂಗಳೂರು,ಫೆಬ್ರವರಿ.02: ಮಂಗಳೂರು ನಗರದಲ್ಲಿ ಬ್ಯಾನರ್, ಬಂಟಿಂಗ್ಸ್ ಅಳವಡಿಸುವ ಬಗ್ಗೆ ದುರ್ಬಳಕೆಯಾಗುತ್ತಿದ್ದು, ಯಾವುದೇ ಪರ ವಾನಿಗೆ ಪಡೆಯದೇ ರಾತ್ರಿ ಹೊತ್ತಿ ನಲ್ಲಿ ಅನ ಧಿಕೃ ತವಾಗಿ  ಬ್ಯಾನರ್ ಗಳನ್ನು ಹಾಕ ಲಾಗುತ್ತಿದೆ.  ಈ ಬಗ್ಗೆ ಕಾನೂನು ಪ್ರಕಾರ ಕ್ರಮ ಕೈ ಗೊಳ್ಳಲು ಪಾಲಿಕೆ ನಿರ್ಧರಿಸಿದೆ ಎಂದು ಆಯುಕ್ತ ಹರೀಶ್ ಕುಮಾರ್ ತಿಳಿಸಿದ್ದಾರೆ.
       ಅನಧಿಕೃತ ಬ್ಯಾನರ್ ಬಂಟಿಂಗ್ಸ್ ಗಳನ್ನು ತೆಗೆಯುವ  ವೆಚ್ಚವನ್ನು ಅದನ್ನು ಹಾಕಿದವರಿಂದಲೇ ದುಪ್ಪಟ್ಟಾಗಿ ಸಂಗ್ರಹಿಸಲಾಗುವುದು. ವಾಹನವೊಂದರಲ್ಲಿ ಗುತ್ತಿಗೆಯಾಧಾರಿತ ಸಿಬಂದಿಗಳು ಈ ಬಗ್ಗೆ ಕಾರ್ಯ ನಿರ್ವಹಿಸಲಿದ್ದಾರೆ. ಅನಧಿಕೃತ ಬ್ಯಾನರ್ ಅಳವಡಿಕೆಯನ್ನು ಅಪರಾಧವಾಗಿ ಪರಿಗಣಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

Friday, February 1, 2013

ಆನ್ ಲೈನ್ ದೂರು ನಿರ್ಲಕ್ಷ್ಯ ಬೇಡ: ಜಿಲ್ಲಾಧಿಕಾರಿ


ಮಂಗಳೂರು, ಫೆಬ್ರವರಿ. 01: ಸಾರ್ವಜನಿಕ ಕುಂದುಕೊರತೆ ನಿರ್ವಹಣಾ ವ್ಯವಸ್ಥೆ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದ್ದು, ನಾಗರೀಕರು ಆನ್ ಲೈನ್ ಮೂಲಕ ಸಲ್ಲಿಸುವ ದೂರುಗಳ ಬಗ್ಗೆ ನಿರ್ಲಕ್ಷ್ಯ ವಹಿಸದೆ ಸ್ಪಂದಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್. ಪ್ರಕಾಶ್ ಅವರು ಸೂಚಿಸಿದರು.
ಜನ ವರಿ 26ರಂದು ಜಿಲ್ಲಾ ಉಸ್ತು ವಾರಿ ಸಚಿ ವರು ಉದ್ಘಾ ಟಿಸಿದ ಈ ವ್ಯ ವಸ್ಥೆಗೆ ಇದು ವರೆಗೆ 11 ದೂರು ಗಳು ಬಂದಿದ್ದು, ಸಂಬಂ ಧಪಟ್ಟ ಅಧಿ ಕಾರಿ ಗಳಿಗೆ ತರ ಬೇತಿಯೂ ಪೂರ್ಣ ಗೊಂಡಿದ್ದು, ಜನರ ಸಮಸ್ಯೆ ಗಳಿಗೆ ಎರಡು ದಿನಗಳೊಳಗೆ ಸ್ಪಂದಿಸಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.
ಜನರ ಸಮಸ್ಯೆಗೆ ಸ್ಪಂದಿಸುವುದು ಅಧಿಕಾರಿಗಳ ಆದ್ಯ ಕರ್ತವ್ಯವಾಗಿದ್ದು, ನೈಜ ಸಮಸ್ಯೆಗಳಿಗೆ ತಕ್ಷಣವೇ ಸ್ಪಂದಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ನುಡಿದರು. ಎಲ್ಲ ವಿಷಯಗಳನ್ನೂ ಗಂಭೀರವಾಗಿ ಪರಿಗಣಿಸಿ ಹಾಗೂ ಪ್ರಾಮಾಣಿಕ ಉತ್ತರ ನೀಡಿ ಎಂದ ಜಿಲ್ಲಾಧಿಕಾರಿಗಳು, ವ್ಯವಸ್ಥೆಯ ಉದ್ದೇಶವನ್ನು ಸಾಫಲ್ಯಗೊಳಿಸಿ ಎಂದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ  ದಯಾನಂದ ಕೆ.ಎ., ಮಂಗಳೂರು ಮಹಾನಗರಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್, ಎನ್ ಐ ಸಿ ಯ ಅಶ್ವಿನ್ ಈ ಬಗ್ಗೆ ಮಾಹಿತಿ ನೀಡಿದರು. ಎಲ್ಲ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.