Thursday, May 30, 2013

ಡೆಂಗ್ಯು, ಮಲೇರಿಯಾ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯಿಂದ ವಿಶೇಷ ಜಾಗೃತಿ ಅಭಿಯಾನ

ಮಂಗಳೂರು, ಮೇ. 30: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಗ್ಯು, ಮಲೇರಿಯಾ ನಿಯಂತ್ರಣಕ್ಕೆ ವಿಶೇಷ ಕಾರ್ಯಯೋಜನೆಯನ್ನು ರೂಪಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಓ ಆರ್ ಶ್ರೀರಂಗಪ್ಪ ತಿಳಿಸಿದರು.
               ಅವರಿಂದು ತಮ್ಮ ಇಲಾಖಾಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಇಲಾಖೆ ಜ್ವರ ನಿಯಂತ್ರಣಕ್ಕೆ ಹಾಗೂ ಜಾಗೃತಿ ಮೂಡಿಸಲು ಎಲ್ಲರ ಸಹಕಾರವನ್ನು ಬಯಸಿದ್ದು, ಜಾಗೃತ ಸಮಾಜದಿಂದ ಸಾಂಕ್ರಾಮಿಕ ರೋಗ ಹರಡುವಿಕೆ ತಡೆಯಬಹುದು. ಈ ನಿಟ್ಟಿನಲ್ಲಿ ಎಲ್ಲ ವೈದ್ಯಕೀಯ ಸಂಸ್ಥೆಗಳ ನೆರವನ್ನು ಇಲಾಖೆ ಕೋರಿದ್ದು, ರೋಗ ತಡೆಗೆ ಪ್ರತಿಯೊಬ್ಬರ ಸಹಕಾರ ಬಯಸಿದೆ ಎಂದರು.
ಜೂನ್ ಒಂದರಂದು ಶನಿವಾರ ಬೆಳಗ್ಗೆ 10ರಿಂದ 12 ಗಂಟೆಯವರೆಗೆ ಎಲ್ಲ ಸರ್ಕಾರಿ ವೈದ್ಯರುಗಳಿಗೆ ಡೆಂಗ್ಯು ನಿಯಂತ್ರಣದ ಬಗ್ಗೆ ವಿಶೇಷ ಮಾಹಿತಿ, 12 ಗಂಟೆಯಿಮದ 1 ಗಂಟೆಯವರಿಗೆ ಎಲ್ಲ ಖಾಸಗಿ ಮೆಡಿಕಲ್ ಕಾಲೇಜುಗಳ ಮುಖ್ಯಸ್ಥರಿಗೆ ಮಾಹಿತಿ ಹಾಗೂ ಕರ್ತವ್ಯ ಭೋಧನೆಯನ್ನು ಮಾಡಲಾಗುವುದು ಎಂದರು.
ಅದೇ ದಿನ ಮಧ್ಯಾಹ್ನ 2ಗಂಟೆಯಿಂದ 4 ಗಂಟೆಯವರೆಗೆ ಪುರುಷ ಆರೋಗ್ಯ ಸಹಾಯಕರಿಗೆ ಆರೋಗ್ಯ ಜಾಗೃತಿ ಕುರಿತು ವಿಶೇಷ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದರು.
ಜೂನ್ 3ರಿಂದ 7 ತಾರೀಖಿನವರೆಗೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಾಗೂ ಅಧೀನ ಸಂಸ್ಥೆಗಳಲ್ಲಿ ಸಮುದಾಯ ಆರೋಗ್ಯ ದಿನಾಚರಣೆ ಮಾದರಿಯಲ್ಲಿ ಡೆಂಗ್ಯು, ಮಲೇರಿಯಾ ಹಾಗೂ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು ಹಾಗೂ ಪಂಚಾಯತ್ ಅಧಿಕಾರಿಗಳು ಹಾಗೂ ಸ್ಥಳೀಯ ಮುಖಂಡರ ಸಹಕಾರ ಪಡೆಯಲಾಗುವುದು.
ಜೂನ್ 3ರಂದು ನಗರದ ವೆನ್ ಲಾಕ್ ನ ಆಸ್ಪತ್ರೆಯ ಆರ್ ಎ ಪಿಸಿಸಿ ಯಲ್ಲಿ ಆರೋಗ್ಯ ಶಿಕ್ಷಣದ ಬಗ್ಗೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರ ಸಭೆಯನ್ನು ಕರೆಯಲಾಗುವುದು. ಈ ಮೂಲಕ ವಿಶೇಷ ಆರೋಗ್ಯ ಜಾಗೃತಿ ಕಾರ್ಯಕ್ರಮದಲ್ಲಿ ನರ್ಸಿಂಗ್ ವಿದ್ಯಾರ್ಥಿಗಳ ಸಂಪೂರ್ಣ ಸಹಕಾರ ಪಡೆಯಲಾಗುವುದು.
ಎಲ್ಲ ಸಮುದಾಯ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಿ ಡಿಗಳ ಮೂಲಕ ಆರೋಗ್ಯ ಮಾಹಿತಿ ನೀಡಲಾಗುವುದು ಎಂದು ಡಿಎಚ್ ಒ ಹೇಳಿದರು.ಜೂನ್ 10ರಿಂದ 15ರವರೆಗೆ ಎಎನ್ ಎಂ, ಅಂಗನವಾಡಿ, ಆಶಾ ಕಾರ್ಯಕರ್ತೆಯರ ನೆರವಿನಿಂದ ಮನೆ ಮನೆ ಭೇಟಿ ಮೂಲಕ ಮಾಹಿತಿ ನೀಡಲಾಗುವುದು.
ಎಲ್ಲ ತಾಲೂಕುಗಳಲ್ಲಿ ತಹಸೀಲ್ದಾರ್, ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ವೈದ್ಯಾಧಿಕಾರಿ, ಸಿಡಿಪಿಒ, ಬಿಇಒ ಇವರನ್ನು ಸದಸ್ಯರನ್ನಾಗಿಸಿ ಟಾಸ್ಕ್ ಫೋರ್ಸ್  ರಚಿಸಲಾಗುವುದು. ಗ್ರಾಮಮಟ್ಟದಲ್ಲಿ ಪಿಡಿಒಗಳು ಹಾಗೂ ತಾಲೂಕು ವೈದ್ಯಾಧಿಕಾರಿ ಹಾಗೂ ಹಿರಿಯ ಆರೋಗ್ಯ ಸಹಾಯಕರಮ ಸಭೆ ಕರೆದು ಗ್ರಾಮ ನೈರ್ಮಲ್ಯಕ್ಕೆ ಒತ್ತು ನೀಡಲು, ಸ್ವಚ್ಛತೆಯನ್ನು ಪಾಲಿಸಲು ನಿರ್ದೇಶನ ನೀಡಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿಗಳು ಹೇಳಿದರು.

ಡೆಂಗ್ಯು ಜ್ವರ ಎಚ್ಚರವಿರಲಿ

ಮಂಗಳೂರು, ಮೇ.30 : ನಮ್ಮ ಪರಿಸರದಲ್ಲಿ ಕಂಡು ಬರುವ ಸಾಂಕ್ರಾಮಿಕ ರೋಗಗಳಲ್ಲಿ ಡೆಂಗ್ಯು ಜ್ವರ ಇತ್ತೀಚಿನ ಸೇರ್ಪಡೆಯಾಗಿರುತ್ತದೆ. ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮೊತ್ತ ಮೊದಲ ಡೆಂಗ್ಯು ಪ್ರಕರಣ ಮೂಲ್ಕಿ ಸಮೀಪದ ಲಿಂಗಪ್ಪಯ್ಯಕಾಡು ವಸತಿ ಪ್ರದೇಶದಲ್ಲಿ ಕಂಡು ಬಂದಿತ್ತು. 2003 ರಲ್ಲಿ ಸುಳ್ಯ ತಾಲೂಕು ಮರ್ಕಂಜದಿಂದ ಆರಂಭಗೊಂಡು ತಾಲೂಕಿನಾದ್ಯಂತ ಹರಡಿತ್ತು.ಆ ಬಳಿಕ ಅಲ್ಲಲ್ಲಿ ಒಂದೊಂದು ಪ್ರಕರಣ ಪತ್ತೆಯಾಗುತ್ತಿತ್ತು. ಕಳೆದ ವರ್ಷದಿಂದೀಚೆಗೆ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಬಹಳಷ್ಟು ಡೆಂಗೀ ಜ್ವರ ಪ್ರಕರಣಗಳು ಕಂಡು ಬರುತ್ತಿವೆ. ಈ ಹಿನ್ನಲೆಯಲ್ಲಿ ಜಾಗೃತಿಗಾಗಿ ಈ ಮಾಹಿತಿಯನ್ನು ಹಮ್ಮಿಕೊಳ್ಳಲಾಗಿದೆ.
ಡೆಂಗ್ಯು ಜ್ವರವು  ಮೂರು ವಿಧಗಳಲ್ಲಿದ್ದು,ಸಾಮಾನ್ಯ ಡೆಂಗ್ಯು ಜ್ವರ,ರಕ್ತಸ್ರಾವದ ಡೆಂಗ್ಯು ಜ್ವರ, ಪ್ರಜ್ಞೆ ತಪ್ಪಿಸುವ ಡೆಂಗ್ಯು ಜ್ವರ.ಇದ್ದಕ್ಕಿದ್ದಂತೆ ಕಾಣಿಸಿಕೊಳ್ಳುವ ತೀವ್ರ ಜ್ವರ,ಸ್ನಾಯುಗಳಲ್ಲಿ ತೀವ್ರ ತರದ ನೋವು,ಹಣೆಯ ಮುಂಭಾಗದಲ್ಲಿ ಹಾಗೂ ಕಣ್ಣುಗುಡ್ಡಗಳಲ್ಲಿ ನೋವು ಡೆಂಗ್ಯು ಜ್ವರದ ಲಕ್ಷಣಗಳು.
ರಕ್ತಸ್ರಾವದ ಡೆಂಗ್ಯು ಜ್ವರದಲ್ಲಿ ಮೇಲಿನ ಲಕ್ಷಣಗಳೊಂದಿಗೆ ಮೈಮೇಲೆ ಕೆಂಪಗಿನ ಸಣ್ಣಸಣ್ಣ ಗಂಧೆಗಳು ಕಂಡುಬರುತ್ತವೆ.ಮೂಗಿನಲ್ಲಿ ವಸಡಿನಲ್ಲಿ ರಕ್ತಸ್ರಾವದ ಚಿಹ್ನೆ,ಮೂತ್ರ ಕೆಂಪಾಗಿರುವುದು,ಕಪ್ಪಗಿನ ಮಲ ವಿಸರ್ಜನೆ,ಕಣ್ಣು ಕೆಂಪಾಗಿರುವಂತಹ ತೊಂದರೆಗಳುವುಂಟಾಗಬಹುದು. ಡೆಂಗ್ಯು ಸೋಂಕಿಗೆ ಕಾರಣವಾಗಿರುವ ವೈರಸ್ನ ಪ್ರಭೇದ ತೀವ್ರ ಸ್ವರೂಪದ್ದಾಗಿದ್ದಾಗ ಅಪಾಯಕಾರಿ ಡೆಂಗ್ಯು ಲಕ್ಷಣಗಳು ಕಂಡು ಬರುತ್ತವೆ.
ಡೆಂಗ್ಯು ಜ್ವರ ವೈರಸ್ನಿಂದುಂಟಾಗುವ ರೋಗವಾಗಿದ್ದು ಇದಕ್ಕೆ ನಿರ್ಧಿಷ್ಟ ಚಿಕಿತ್ಸೆ ಇರುವುದಿಲ್ಲ.ರೋಗಲಕ್ಷಣಗಳಿಗೆ ಅನುಸಾರವಾಗಿ ಚಿಕಿತ್ಸೆ ನೀಡಲಾಗುತ್ತದೆ. ಸಾಮಾನ್ಯ ಜ್ವರ ಕಂಡು ಬಂದಾಗ ಮನೆಯಲ್ಲಿದ್ದುಕೊಂಡು ಚಿಕಿತ್ಸೆ ಪಡೆಯಬಹುದು. ರಕ್ತಸ್ರಾವದ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ಸುಸಜ್ಜಿತ ಆಸ್ಪತ್ರೆಗೆ ದಾಖಲಾಗಿ ಮರಣದ ಅಪಾಯವನ್ನು ತಡೆಗಟ್ಟಬಹುದು. ಮಕ್ಕಳು,ಗರ್ಭಿಣಿಯರು, ಬಾಣಂತಿಯರು ಹಾಗೂ ವಯಸ್ಸಾದವರಿಗೆ ಡೆಂಗ್ಯು ಜ್ವರದ ತೊಂದರೆ ಯುಂಟಾದಾಗ ಅಪಾಯದ ಪ್ರಮಾಣ ಜಾಸ್ತಿ ಇರುತ್ತದೆ.
ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಣ ಮಾಡಲು ಯಾವುದೇ ಲಸಿಕೆ ಲಭ್ಯವಿರುವುದಿಲ್ಲ.ಜಾಗ್ರತ ಜೀವನ ಕ್ರಮದಿಂದ ರೋಗ ಬಾರದಂತೆ ರಕ್ಷಣೆ ಪಡೆಯಬಹುದು. ಸೊಳ್ಳೆ ಬೆಳವಣಿಗೆಯಾಗದಂತೆ ಕ್ರಮ ಕೈಗೊಳ್ಳುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಮನೆಯ ಪರಿಸರದಲ್ಲಿರುವ ಗಿಡಗಂಟೆಗಳನ್ನು ಸ್ವಚ್ಛಗೊಳಿಸುವುದು,ಹಗಲಲ್ಲಿ ಧೂಪದ ಹೊಗೆ ಹಾಕುವುದು,ಡೆಂಗ್ಯು ಸಮಸ್ಯಾತ್ಮಕ ಪ್ರದೇಶಗಳಲ್ಲಿ ಕೆಲಸ ಮಾಡುವಾಗ ಸೊಳ್ಳೆ ನಿರೋಧಕ ಎಣ್ಣೆ ಅಥವಾ ಕ್ರೀಮ್ ಹಚ್ಚುವುದು ಇತ್ಯಾದಿ ಕ್ರಮಗಳಿಂದ ಸೊಳ್ಳೆ ಕಚ್ಚದಂತೆ ರಕ್ಷಣೆ ಪಡೆಯಬೇಕು.
                                                                  ಮಾಹಿತಿ:- ಜಯರಾಮ ಪೂಜಾರಿ,
                                                                                   ಹಿರಿಯ ಆರೋಗ್ಯ ನಿರೀಕ್ಷಕ

ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 99.35 ಕ್ವಿಂಟಾಲ್ ಭತ್ತದ ಬೀಜವನ್ನು 247 ರೈತರಿಗೆ ವಿತರಣೆ

ಮಂಗಳೂರು, ಮೇ. 30:  ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪ್ರಸ್ತುತ ಮುಂಗಾರು ಹಂಗಾಮಿನಲ್ಲಿ ಸರಬರಾಜಾಗಿದ್ದ ಒಟ್ಟು 390 ಕ್ವಿಂಟಾಲ್ ಬಿತ್ತನೆ ಭತ್ತದಲ್ಲಿ ದಿನಾಂಕ 29-5-13 ರ ವರೆಗೆ 99.35 ಕ್ವಿಂಟಾಲ್, ಕೆಜಿ ಒಂದಕ್ಕೆ ರೂ.7/- ರ ರಿಯಾಯಿತಿ ದರದಲ್ಲಿ 247 ರೈತರಿಗೆ ವಿತರಿಸಲಾಗಿದೆಯೆಂದು ಜಂಟಿ ಕೃಷಿ ನಿರ್ದೇಶಕರ ಕಚೇರಿ ಪ್ರಕಟಣೆ ತಿಳಿಸಿದೆ.  ಕರ್ನಾಟಕ ರಾಜ್ಯ ಬೀಜ ನಿಗಮದ ವತಿಯಿಂದ ಎಂಒ4- 290 ಕ್ವಿಂಟಾಲ್,ಜಯ 100 ಕ್ವಿಂಟಾಲ್ ಬಂದಿದೆ. ಉಳಿಕೆ 290.65 ಕ್ವಿಂಟಾಲ್ ದಾಸ್ತಾನಿನಲ್ಲಿದೆ.
ಮಂಗಳೂರು ತಾಲೂಕಿನ ಮಂಗಳೂರು,ಮೂಲ್ಕಿ,ಸುರತ್ಕಲ್,ಗುರುಪುರ,ಮೂಡಬಿದ್ರೆ ರೈತ ಸಂಪರ್ಕ ಕೇಂದ್ರಗಳಲ್ಲಿ ಜಯ ಭತ್ತ -60 ಕ್ವಿಂಟಾಲ್,ಎಂಒ4 -155 ಕ್ವಿಂಟಾಲ್ ಸೇರಿದಂತೆ ಒಟ್ಟು 215 ಕ್ವಿಂಟಾಲ್ ದಾಸ್ತಾನು ಇದ್ದು,ಇದರಲ್ಲಿ 62.25 ಕ್ವಿಂಟಾಲ್  ವಿತರಿಸಲಾಗಿದೆ.
ಬಂಟ್ವಾಳ ತಾಲೂಕಿನ ಬಂಟ್ವಾಳ ಪಾಣೆಮಂಗಳೂರು ವಿಟ್ಲ ರೈತ ಸಂಪರ್ಕ ಕೇಂದ್ರಗಳಲ್ಲಿ ಜಯ- 25 ಕ್ವಿಂಟಾಲ್ ಎಂಒ4- 50 ಕ್ವಿಂಟಾಲ್ ಸೇರಿದಂತೆ ಒಟ್ಟು 75 ಕ್ವಿಂಟಾಲ್ ಬಂದಿದ್ದು ಇಲ್ಲಿಯ ವರೆಗೆ 15.50 ಕ್ವಿಂಟಾಲ್ ವಿತರಿಸಲಾಗಿದ್ದು ಊಲಿಕೆ 59.50 ಕ್ವಿಂಟಾಲ್ ದಾಸ್ತಾನು ಇದೆ.
ಬೆಳ್ತಂಗಡಿ ತಾಲೂಕಿನ ಬೆಳ್ತಂಗಡಿ,ಕೊಕ್ಕಡ,ವೇಣೂರು ರೈತ ಸಂಪರ್ಕ ಕೇಂದ್ರಗಳಿಗೆ ಜಯ -10 ಕ್ವಿಂಟಾಲ್,ಎಂಒ4- 40 ಕ್ವಿಂಟಾಲ್ ಸೇರಿ 50 ಕ್ವಿಂಟಾಲ್ ಸರಬರಾಜಾಗಿದ್ದು,ಇದರಲ್ಲಿ 11.60 ಕ್ವಿಂಟಾಲ್ ವಿತರಿಸಿದ್ದು,ಉಳಿಕೆ 38.40 ಕ್ವಿಂಟಾಲ್ ದಾಸ್ತಾನಿನಲ್ಲಿದೆ.
ಪುತ್ತೂರು ತಾಲೂಕಿನ ಪುತ್ತೂರು,ಕಡಬ,ಉಪ್ಪಿನಂಗಡಿ ರೈತ ಸಂಪರ್ಕ ಕೇಂದ್ರಗಳಿಗೆ ಎಂಒ4- 30 ಕ್ವಿಂಟಾಲ್ ಮಾತ್ರ  ಸರಬರಾಜಾಗಿದ್ದು,ಅದರಲ್ಲಿ 4.50 ಕ್ವಿಂಟಾಲ್ ವಿತರಿಸಲಾಗಿ ಉಳಿಕೆ 25.50 ಕ್ವಿಂಟಾಲ್ ಲಭ್ಯವಿದೆ.
ಸುಳ್ಯ ತಾಲೂಕಿನ ಸುಳ್ಯ ಮತ್ತು ಪಂಜ ರೈತ ಸಂಪರ್ಕ ಕೇಂದ್ರಗಳಿಗೆ ಜಯ- 5 ಕ್ವಿಂಟಾಲ್ ಮತ್ತು ಎಂಒ4-15 ಕ್ವಿಂಟಾಲ್ ಸೇರಿ ಒಟ್ಟು 20 ಕ್ವಿಂಟಾಲ್ ಸರಬರಾಜಾಗಿದ್ದು,ಇಲ್ಲಿಯ ವರೆಗೆ 5 ಕ್ವಿಂಟಾಲ್ ವಿತರಿಸಿ ಉಳಿಕೆ  15.0 ಕ್ವಿಂಟಾಲ್ ದಾಸ್ತಾನಿದೆ ಎಂದು ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

ಹಾಲು ಶೇಖರಣೆಯಲ್ಲಿ ದ.ಕ. ಹಾಲು ಒಕ್ಕೂಟದ ಹೊಸ ಸಾಧನೆ

ಮಂಗಳೂರು, ಮೇ.30: ದಿನಾಂಕ 29-5-2013 ರಂದು, ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟವು 2,50,606 ಲೀಟರ್ ಹಾಲನ್ನು ತನ್ನ 648 ಹಾಲು ಉತ್ಪಾದಕರ ಸಂಘಗಳಿಂದ ಸಂಗ್ರಹಿಸುವ ಮೂಲಕ, ಈವರೆಗೆ ಒಂದು ದಿನದ ಅತೀ ಹೆಚ್ಚು ಹಾಲು ಶೇಖರಣೆಯಾದ 2,46,000 ಲೀಟರ್ ಸಾಧನೆಯನ್ನು ಹಿಂದೆ ಹಾಕಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ಈ ಸಾಧನೆಗೆ ಕಾರಣಕರ್ತರಾದ ಉಭಯ ಜಿಲ್ಲೆಗಳ ಎಲ್ಲ ಹಾಲು ಉತ್ಪಾದಕರನ್ನು, ನೌಕರರನ್ನು ಅಭಿನಂದಿಸಿದ ಒಕ್ಕೂಟದ ಅಧ್ಯಕ್ಷರಾದ  ರವಿರಾಜ್ ಹೆಗ್ಡೆಯವರು, ಮುಂದೆ ಪ್ರತಿದಿನ  3.50 ಲಕ್ಷ ಲೀಟರ್ ಸಂಗ್ರಹಣೆ ಮಾಡುವತ್ತ ಸಾಗಿ ನಮ್ಮ ಮಾರುಕಟ್ಟೆಯ ಅಗತ್ಯತೆಯನ್ನು ತಲುಪುವಲ್ಲಿ ಎಲ್ಲರ ಸಹಕಾರಕ್ಕೆ ಕೋರಿದ್ದಾರೆ.

Wednesday, May 29, 2013

ಜೂನ್ 15 ರಿಂದ ಅಗೋಸ್ತು 10 ರ ವರೆಗೆ ಮೀನುಗಾರಿಕೆ ನಿಷೇಧ


ಮಂಗಳೂರು, ಮೇ. 29: ಯಾಂತ್ರೀಕೃತ ಮೀನುಗಾರಿಕೆ ದೋಣಿಗಳನ್ನು ಬಳಸಿ ಯಾವುದೇ ಬಲೆಗಳನ್ನು/ಸಾಧನಗಳನ್ನು ಉಪಯೋಗಿಸಿ ಕರ್ನಾಟಕ ಕರಾವಳಿ ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯ ಕರಾವಳಿಯಲ್ಲಿ ಪ್ರತೀ ವರ್ಷ ಮಳೆಗಾಲದ ಜೂನ್ 15 ರಿಂದ ಅಗೋಸ್ತು 10 ರ ವರೆಗೆ ಒಟ್ಟು 57 ದಿನಗಳ ಕಾಲ ಮೀನು ಹಿಡಿಯುವುದನ್ನು ಕರ್ನಾಟಕ ಸರ್ಕಾರವು ನಿಷೇಧಿಸಿದೆ. ನಿಷೇಧಿತ ಅವಧಿಯಲ್ಲಿ ಆಳಸಮುದ್ರ ಬಹುದಿನಗಳ ಮೀನುಗಾರಿಕೆ ದೋಣಿಗಳು ಅಗೋಸ್ತು 3 ರಿಂದ ಕರಾವಳಿ ಮೀನುಗಾರಿಕೆಗೆ ತೆರಳಲು ಅನುಮತಿಸಿದ್ದು,  ಸದ್ರಿ ದೋಣಿಗಳು ಹಿಡಿದ ಮೀನನ್ನು ಇಳಿಸಲು ಅಗೋಸ್ತು 10 ರ ನಂತರವೇ ಬಂದರುಗಳಿಗೆ ಹಿಂತಿರುಗತಕ್ಕದೆಂಬ ನಿಬಂಧನೆಯ ಮೇರೆಗೆ ಅನುಮತಿ ನೀಡಲಾಗಿದೆ. ಮೀನುಗಾರಿಕೆ ನಿಷೇಧಿತ ಅವಧಿಯಲ್ಲಿ ಕೇವಲ ದೋಣಿಗಳ ಚಲನವಲನಕ್ಕಾಗಿ 10 ಅಶ್ವಶಕ್ತಿ ವರೆಗಿನ ಔಟ್ ಬೋರ್ಡ್  ಇಂಜಿನ್ ಗಳನ್ನು ಅಳವಡಿಸಿದ ಅಥವಾ ಅಳವಡಿಸದೇ ಇರುವ ನಾಡದೋಣಿಗಳ ಮೂಲಕ ಸಮುದ್ರ ಮೀನುಗಾರಿಕೆಯಲ್ಲಿ ತೊಡಗಲು ಅನುಮತಿ ನೀಡಲಾಗಿದೆ. ನಿಷೇಧಿತ ಅವಧಿಯಲ್ಲಿ ಮೀನುಗಾರಿಕೆಗೆ ತೆರಳಿದ್ದಲ್ಲಿ ವಿಧಿಸಲಾಗಿರುವ ದಂಡನೆಗಳಿಗೆ ಹೊಣೆಯಾಗುತ್ತಾರೆಂದು ಮೀನುಗಾರಿಕೆ ಉಪನಿರ್ದೇಶಕರು ತಿಳಿಸಿರುತ್ತಾರೆ.
 

Thursday, May 23, 2013

ಮಲೇರಿಯಾ ತಡೆಗೆ ಪಾಲಿಕೆಯಿಂದ ಮುನ್ನೆಚ್ಚರಿಕೆ

ಮಂಗಳೂರು, ಮೇ 23 : ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಮಲೇರಿಯಾ ನಿಯಂತ್ರಿಸಲು ಹಾಗೂ ಮಲೇರಿಯಾ ತಡೆಗೆ ಸೂಕ್ತ ಮುನ್ನೆಚ್ಚರಿಕೆ ವಹಿಸಲು ಜಾಗೃತಿ ಕಾರ್ಯಕ್ರಮ ನಡೆಸಲು ಜಿಲ್ಲಾಧಿಕಾರಿ  ಎನ್ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ  ವಿಶೇಷ ಸಭೆ ಬುಧವಾರ ನಡೆಯಿತು.
ಜೂನ್ ತಿಂಗಳಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆ ನಡೆಸಲು ಹಾಗೂ ಬಳಿಕ ನಗರದ ನರ್ಸಿಂ ಗ್ ಕಾಲೇಜುಗಳ ಸಹಕಾರದಿಂದ ಸಮೀಕ್ಷೆ ನಡೆಸಲು, ಪಾಲಿಕೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಹೊರಗುತ್ತಿಗೆ ಆಧಾರದಲ್ಲಿ ಸಿಬ್ಬಂದಿ ನೇಮಿಸಲು ಜಿಲ್ಲಾಧಿಕಾರಿಗಳು ಆದೇಶ ನೀಡಿದರು.
ಕಟ್ಟಡ ಕಾಮಗಾರಿ ಹಾಗೂ ಕಾರ್ಮಿಕರ ಆರೋಗ್ಯ ನಿರ್ವಹಣೆ ಜವಾಬ್ದಾರಿ ಗುತ್ತಿಗೆದಾರರಿಗೆ ವಹಿಸಲು ನಿರ್ಧರಿಸಲಾಯಿತು. ಸಭೆಯಲ್ಲಿ ಪಾಲಿಕೆ ಆಯುಕ್ತರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಮಲೇರಿಯಾ ಅಧಿಕಾರಿ, ಆರೋಗ್ಯಾಧಿಕಾರಿ, ಪರಿಸರ ಅಭಿಯಂತರರು ಉಪಸ್ಥಿತರಿದ್ದರು.

Wednesday, May 22, 2013

ಪ್ರವಾಹ ವಿಕೋಪ ಎದುರಿಸಲು ಪೂರ್ವಭಾವಿ ಸಭೆ

ಮಂಗಳೂರು, ಮೇ. 21: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಪೂರೈಕೆಗೆ ಉಪವಿಭಾಗಾಧಿಕಾರಿಗಳು ಮತ್ತು ತಹಸೀಲ್ದಾರ್ ಗಳು ಹೆಚ್ಚಿನ ಗಮನನೀಡಿ ಸಮಸ್ಯೆ ಪರಿಹರಿಸಲು ಕ್ರಮಕೈಗೊಳ್ಳಿ ಎಂದು ಜಿಲ್ಲಾಧಿಕಾರಿ  ಎನ್ ಪ್ರಕಾಶ್ ಹೇಳಿದರು.
ಅವರಿಂದು ತಮ್ಮ ಕಚೇರಿಯಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಹಾಗೂ  ತಾಲೂಕು ಮಟ್ಟದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದ ಅವರು, ಸಕರ್ಾರದ ಹಣವನ್ನು ಪೋಲು ಮಾಡದೆ ವಿವೇಚನೆಯಿಂದ ಅರ್ಹ ಪ್ರದೇಶಗಳಿಗೆ ಹಾಗೂ ಜನರಿಗೆ ತಲುಪುವಂತೆ ಯೋಜನೆ ರೂಪಿಸಿ ಎಂದು ಸೂಚನೆ ನೀಡಿದರು.
ಮುಲ್ಕಿಯಲ್ಲಿ ನೀರಿನ ಸಮಸ್ಯೆ ಪರಿಹರಿಸಲು ಆದ್ಯತೆ ನೀಡಿ ಎಂದು ಸೂಚಿಸಿದ ಅವರು, ಜಿಲ್ಲೆಯಲ್ಲಿ ನೀರಿನ ಸಮಸ್ಯೆ ಪರಿಹರಿಸಲು ಜಿಲ್ಲಾ ಪಂಚಾಯತ್, ಸಹಾಯಕ ಕಮಿಷನರ್, ತಹಸೀಲ್ದಾರ್, ಪುರಸಭೆ ಹಾಗೂ ನಗರ ಪಂಚಾಯತ್ ಅಧಿಕಾರಿಗಳು ತುತರ್ು ಕ್ರಮ ಕೈಗೊಳ್ಳಿ ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಮುಂಗಾರು ಶೀಘ್ರವೇ ಜಿಲ್ಲೆಗೆ ಕಾಲಿಡಲಿದ್ದು, ಜಿಲ್ಲೆಯಲ್ಲಿ ಅದರಲ್ಲೂ ಮುಖ್ಯವಾಗಿ ಪಾಲಿಕೆ ವ್ಯಾಪ್ತಿಯಲ್ಲಿ ಚರಂಡಿ ಹಾಗೂ ಕಾಲುವೆಗಳನ್ನು ಶುಚಿಗೊಳಿಸಿ, ಕೃತಕ ನೆರೆ ಉಂಟಾಗದಂತೆ ಸರಿ ಪಡಿಸಬೇಕು. ಪಾಲಿಕೆ ಹಾಗೂ ಪ್ರತೀ ತಾಲೂಕು ವ್ಯಾಪ್ತಿಯಲ್ಲಿ ಮುಂಬರುವ ಮುಂಗಾರು ಮಳೆಯಿಂದ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪ ಬಗ್ಗೆ ಮುಂಜಾಗ್ರತೆ ವಹಿಸಲು ಇತ್ತೀಚೆಗೆ ಸಹಾಯಕ ಕಮಿಷನರ್ ಅಧ್ಯಕ್ಷತೆಯಲ್ಲಿ ರಚಿಸಿರುವ ತಾಲೂಕು ಮಟ್ಟದ ಸಮಿತಿ ಸಭೆಯನ್ನು ಮೇ 25ರೊಳಗೆ ನಡೆಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದರು.
ಅತಿವೃಷ್ಟಿ/ನೆರೆ ಸಂಭವಿಸುವ ಸಾಧ್ಯತೆ ಇರುವ ಪ್ರದೇಶಗಳನ್ನು ಗುರುತಿಸಿ ತಾಲೂಕು ಮ್ಯಾಪ್ ನಲ್ಲಿ ದಾಖಲಿಸಿ ಇಡಲೂ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದರು.
ಪಾಲಿಕೆ, ಪೊಲೀಸ್ ಇಲಾಖೆ ಹಾಗೂ ತಾಲೂಕು ಕಚೇರಿಗಳಲ್ಲಿ ದಿನದ 24 ಗಂಟೆ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಮ್ ತೆರೆದು ಕಾರ್ಯನಿರ್ವಹಿಸಬೇಕೆಂದ ಜಿಲ್ಲಾಧಿಕಾರಿಗಳು, ಯಾವುದೇ ಸಮಸ್ಯೆ ಇದ್ದಲ್ಲಿ 1077 ಮತ್ತು ಮೆಸ್ಕಾಂ ಸಂಬಂಧ ಸಮಸ್ಯೆಗಳಿಗೆ 18004251917 ಸಂಪರ್ಕಿಸಿ ಎಂದು ಸೂಚಿಸಿದರು. ನದಿ ನೀರಿನ ಮಟ್ಟದ ಬಗ್ಗೆ ಮತ್ತು ಮಳೆಯ ವಿವರಗಳನ್ನು ಪ್ರತಿದಿನ ಬೆಳಗ್ಗೆ 9ಗಂಟೆಯೊಳಗೆ ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿಸಲು ಸೂಚನೆ ನೀಡಿದರು.
ಸಂತ್ರಸ್ತರಿಗೆ ತುರ್ತು ನೆರವು  ನೀಡಲು ಪೊಲೀಸ್, ಹೋಂಗಾರ್ಡ್, ಅಗ್ನಿಶಾಮಕ ದಳಗಳನ್ನು ಒಳಗೊಂಡ ತುರ್ತು ಸಹಾಯಪಡೆ ರಚಿಸುವಂತೆ, ಈಜುಗಾರರ ತಂಡವನ್ನು ಗುರುತಿಸಿ ಸಜ್ಜಾಗಿರಿಸಲು, ದೋಣಿ ಮತ್ತು ಅಗತ್ಯ ವಾಹನ ಪರಿಕರಗಳನ್ನು ಸುಸ್ಥಿತಿಯಲ್ಲಿಡುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಪುನರ್ವಸತಿ ಮತ್ತು ಗಂಜಿ ಕೇಂದ್ರದ ವ್ಯವಸ್ಥೆಗೆ, ಪರಿಹಾರ ನೀಡಿಕೆಗೆ ಗರಿಷ್ಟ 24 ಗಂಟೆಯೊಳಗೆ ನೀಡಿ ಪರಿಹಾರ ಧನ ವಿತರಿಸುವಂತೆ ವರದಿ ನೀಡಲು ಅಧಿಕಾರಿಗಳಿಗೆ ಹೊಣೆ ವಹಿಸಿದರು.
ಕಡವು ಪ್ರದೇಶಗಳಲ್ಲಿ ಬಂದರು ಇಲಾಖೆಯ ಅಧಿಕಾರಿಗಳು ಉಸ್ತುವಾರಿ ವಹಿಸುವಂತೆ, ಸಮುದ್ರಕೊರೆತ ತಡೆಗೆ ಮುಂದಿನ ಎಂಟು ದಿನಗಳೊಳಗಾಗಿ ಸೂಕ್ತ ಕ್ರಮ ಹಾಗೂ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದ ಜಿಲ್ಲಾಧಿಕಾರಿಗಳು, ಕರ್ತವ್ಯದಲ್ಲಿ ನಿರ್ಲಕ್ಷ್ಯ ವಹಿಸಿದರೆ ಸಚಿವರಿಗೆ ಅಧಿಕಾರಿಗಳೇ ಉತ್ತರಿಸಬೇಕಾದೀತು ಎಂಬ ಎಚ್ಚರಿಕೆಯನ್ನೂ ನೀಡಿದರು.
ಇಲಾಖಾ ಮುಖ್ಯಸ್ಥರು ಜಿಲ್ಲಾಧಿಕಾರಿಗಳ ಅನುಮತಿ ಇಲ್ಲದೆ ಕೇಂದ್ರಸ್ಥಾನ ಬಿಡಬಾರದೆಂದು ಸೂಚಿಸಿದ ಅವರು, ಅಂಬುಲೆನ್ಸ್ ಮತ್ತು ಫೈಯರ್ ಬ್ರಿಗೇಡ್ ಗಳ ಲಭ್ಯತೆಯ ಬಗ್ಗೆ ಮಾಹಿತಿ ಪಡೆದರು.
ಟೆಲಿಕಾಂ ನವರ ವಿಶೇಷ ಸಹಕಾರ ಬೇಕೆಂದು ಕೋರಿದ ಅವರು, ಮಳೆಗಾಲದಲ್ಲಿ ಸ್ಥಳೀಯ ಪರಿಸ್ಥಿತಿಯನ್ನು ಗಮನದಲ್ಲಿರಿಸಿ ಶಾಲೆಗೆ ರಜೆ ನೀಡುವ ಅಧಿಕಾರವನ್ನು ಬಿಇಒ ಗಳಿಗೆ ನೀಡಲಾಯಿತು.
ಚಾಮರ್ಾಡಿಯಲ್ಲಿ ಪ್ರತಿವರ್ಷ ಸಂಭವಿಸುವ ರಸ್ತೆ ತಡೆ ಸಮಸ್ಯೆ ಪರಿಹರಿಸಲು ರಾಷ್ಟ್ರೀಯ ಹೆದ್ದಾರಿಯವರು ಸಮಯಮಿತಿಯೊಳಗೆ ಸಹಕಾರ ನೀಡುವ ಬಗ್ಗೆಯೂ ಜಿಲ್ಲಾಧಿಕಾರಿಗಳು ನಿರ್ದೇಶನನೀಡಿದರು. 
ಎಲ್ಲ ಅಧಿಕಾರಿಗಳು ಮತ್ತು ಇಲಾಖೆಗಳು ಪರಸ್ಪರ ಸಮನ್ವಯತೆ ಹಾಗೂ ಉತ್ತಮ ಸಂಪರ್ಕವನ್ನಿರಿಸಿಕೊಂಡು ಸಮಸ್ಯೆಯನ್ನು ಪರಿಹರಿಸಲು ಗಮನ ಕೊಡಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ  ದಯಾನಂದ ಕೆ.ಎ., ಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್ ಉಪಸ್ಥಿತರಿದ್ದರು.

ಆಸ್ತಿ ದಾಖಲೆ ವಿವರ ಸಲ್ಲಿಸಿ: ಭೂಮಾಪನಾಧಿಕಾರಿ

ಮಂಗಳೂರು, ಮೇ. 22 :-ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಯು.ಪಿ.ಒ.ಆರ್.ಯೋಜನೆಯಡಿ 28,200 ಆಸ್ತಿಯ ದಾಖಲೆಗಳನ್ನು ಸಂಗ್ರಹಿಸಲಾಗಿದೆ ಎಂದು   ನಗರ ಮಾಪನ ಯೋಜನಾಧಿಕಾರಿ ಬಿ.ಕೆ. ಕುಸುಮಾಧರ ತಿಳಿಸಿದ್ದಾರೆ.
                   ಕಳೆದ ಒಂದು ವರ್ಷದಿಂದ ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ 32 ಗ್ರಾಮಗಳಲ್ಲಿ ಯು.ಪಿ.ಓ.ಆರ್.(ಅರ್ಬನ್ ಪ್ರಾಪರ್ಟಿ ಒನರ್ಶಿಪ್ ರೆಕಾರ್ಡ್)ಯೋಜನೆ ಯಶಸ್ಸಿನಿಂದ ಸಾಗುತ್ತಿದ್ದು,ಬಾಕಿ ಉಳಿದ ಖಾತೆದಾರರು ತಮ್ಮ ದಾಖಲೆಗಳನ್ನು ಆದಷ್ಟು ಶೀಘ್ರ ಯೋಜನಾಧಿಕಾರಿ,ನಗರ ಮಾಪನ ಯೋಜನೆ,1ನೇ ಮಹಡಿ,ಸರಕಾರಿ ನೌಕರರ ಸಂಘದ ಕಟ್ಟಡ, ಹಳೆ ತಾಲೂಕು ಕಚೇರಿ ಹಿಂಬದಿ, ಮಂಗಳೂರು ಇವರಿಗೆ ಸಲ್ಲಿಸಬಹುದು.
2013 ಸೆಪ್ಡೆಂಬರ್ ಅಂತ್ಯದೊಳಗೆ ಉಳಿದ 70,000 ಆಸ್ತಿಗಳ ಅಳತೆ ಕಾರ್ಯ ಪೂರ್ಣಗೊಳ್ಳಲಿದೆ ಎಂದಿರುವ ಅವರು  ಕ್ರಯ/ವಿಭಾಗ/ವ್ಯವಸ್ಥೆ ಅಥವಾ ಇತರೆ ದಸ್ತಾವೇಜು ಪತ್ರ /ಪಹಣಿ ಖಾತೆ/ಮನೆ ತೆರಿಗೆ ರಶೀದಿ/ಸ್ವಯಂ ಘೋಷಿತ ಆಸ್ತಿ ತೆರಿಗೆ ರಶೀದಿ/ಜಮೀನಿಗೆ ಸಂಬಂಧಿಸಿದ ಇತರೆ ಪೂರಕ ದಾಖಲೆಗಳನ್ನು ಒದಗಿಸುವಂತೆ ಕೋರಿದ್ದಾರೆ.
ಯು.ಪಿ.ಓ.ಆರ್. ಯೋಜನೆ ಬಹುತೇಕ ಯಶಸ್ವಿಯಾಗಿದ್ದು,ಸಾರ್ವಜನಿಕರು ತಮ್ಮ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಸ್ಥಳಕ್ಕೆ ಬಂದು ಸಿಬ್ಬಂದಿಯವರಲ್ಲಿ ಅಥವಾ ನಗರ ಮಾಪನ ಕಚೇರಿಗೆ ಬಂದು ನೀಡಿ ಸಹಕರಿಸಬೇಕೆಂದು ಯೋಜನಾಧಿಕಾರಿಗಳು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಯನ್ನು ದೂರವಾಣಿ ಸಂಖ್ಯೆ 0824-4266222 ಸಂಪರ್ಕಿಸಿ ಪಡೆಯಬಹುದಾಗಿದೆ.

Tuesday, May 21, 2013

'ಆದ್ಯತೆ ನೆಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಿ'

ಮಂಗಳೂರು, ಮೇ 21: ಜಿಲ್ಲೆಯಲ್ಲಿ ಕುಡಿಯುವ ನೀರು, ಅಂಗವಿಕಲರ ಅಭಿವೃದ್ಧಿ ಮತ್ತು ಎಂಡೋಪೀಡಿತರ ಪ್ರದೇಶದಲ್ಲಿ ಮೂಲಸೌಕರ್ಯ ಒದಗಿಸಲು ವಿಶೇಷ ಗಮನಹರಿಸುವಂತೆ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೊರಗಪ್ಪ ನಾಯಕ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಂದು ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಕೆಡಿಪಿ (ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮ) ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಗ್ರಾಮೀಣ ಪ್ರದೇಶಗಳ ಜನರಿಗೆ ಕುಡಿಯುವ ನೀರಿಗೆ ಯಾವುದೇ ತೊಂದರೆಯಾಗದಂತೆ ಜಲಸೇವಾ ನಿಯಂತ್ರಣದಂತಹ ಕ್ರಮ ಕೈಗೊಳ್ಳಲಾಗಿದ್ದರೂ, ಬೋರ್ವೆಲ್ ಕೊರೆಸುವಲ್ಲಿ ಹಾಗೂ ಕೊರೆಸಿದ ಬೋರ್ ವೆಲ್ ಗೆ ವಿದ್ಯುತ್ ಸಂಪರ್ಕ ಕೊಡಿಸಲು ಇನ್ನಷ್ಟು ಆಸಕ್ತಿಯಿಂದ ಕಾರ್ಯೋನ್ಮುಖವಾಗಬೇಕೆಂದರು.
ಬೆಳ್ತಂಗಡಿ ಮತ್ತು ಮಂಗಳೂರು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ವ್ಯಾಪಕವಾಗಿದೆ. ಇಲ್ಲಿ ತುರ್ತಾಗಿ ಟ್ಯಾಂಕರ್ ಮೂಲಕವಾದರೂ ನೀರು ವಿತರಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕಿದೆ ಎಂದರು.
ಬೆಳ್ತಂಗಡಿಯ 60 ಗ್ರಾಮಗಳಲ್ಲಿ ನೀರಿನ ಸಮಸ್ಯೆ ಉದ್ಭವಿಸಿದೆ. ಇಳಂತಿಲದಲ್ಲಿ ನೀರಿನ ಸಮಸ್ಯೆ ಕಂಡುಬಂದಿದ್ದು, ಟ್ಯಾಂಕರ್ನಲ್ಲಿ ನೀರು ಪೂರೈಕೆ ಮಾಡಲಾಗುತ್ತಿದೆ. ಕ್ರಿಯಾ ಯೋಜನೆಯಡಿ 18 ಬೋರ್ವೆಲ್ಗಳನ್ನು ಕೊರೆಯಲಾಗುತ್ತಿದೆ ಎಂದು ಬೆಳ್ತಂಗಡಿಯ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಮಾಹಿತಿ ನೀಡಿದರು.
          ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ 19 ಲಕ್ಷ ರೂ. ಪುತ್ತೂರಿಗೆ 5.10 ಲಕ್ಷ ರೂ., ಮಂಗಳೂರಿಗೆ 6.40 ಲಕ್ಷ ರೂ. ಕುಡಿಯುವ ನೀರಿಗೆ ತುರ್ತು ಅನುದಾನ ನೀಡಲಾಗಿದೆ. ಅನುದಾನದಡಿ ಬಂಟ್ವಾಳದಲ್ಲಿ 26 ಬೋರ್ ವೆಲ್, ಪುತ್ತೂರಿನಲ್ಲಿ 9 ಬೋರ್ ವೆಲ್, ಸುಳ್ಯದಲ್ಲಿ 11, ಮಂಗಳೂರಿನಲ್ಲಿ 14 ಬೋರ್  ಕೊರೆದು ನೀರು ವಿತರಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಕಾರ್ಯನಿರ್ವಾಹಕ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಬೆಳ್ತಂಗಡಿ, ಮಂಗಳೂರು ಸೇರಿದಂತೆ ನೀರಿನ ಸಮಸ್ಯೆ ಇರುವಲ್ಲಿ ಭೂ ವಿಜ್ಞಾನಿಗಳ ಸಹಕಾರ ಪಡೆದು ತುರ್ತಾಗಿ ಬೋರ್ ವೆಲ್ ಗಳನ್ನು ಕೊರೆಯಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಅಧ್ಯಕ್ಷ ಕೊರಗಪ್ಪ ನಾಯ್ಕ ಸಲಹೆ ನೀಡಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಮಾಹಿತಿ ನೀಡುತ್ತಾ, ಅಪೌಷ್ಟಿಕ ಮಕ್ಕಳ ಸಂಖ್ಯೆ 662ರಿಂದ 650ಕ್ಕೆ ಇಳಿದಿದೆ. ಬೆಳ್ತಂಗಡಿಯಲ್ಲಿ 178 ಮಕ್ಕಳು, ಪುತ್ತೂರಿನಲ್ಲಿ 123, ಮಂಗಳೂರು ಗ್ರಾಮಾಂತರದಲ್ಲಿ 103 ಮಕ್ಕಳನ್ನು ಗುರುತಿಸಲಾಗಿದ್ದು, ಜೂನ್ ತಿಂಗಳಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದೊಂದಿಗೆ ವಿಶೇಷ ಆರೋಗ್ಯ ತಪಾಸಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಹೃದಯ ಸಂಬಂಧಿ ಕಾಯಿಲೆ ಇರುವ ಮಕ್ಕಳನ್ನು ಬಾಲಸಂಜೀವಿನಿಯಡಿ ಅಥವಾ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಸೇರಿಸಲು ಕ್ರಮಕೈಗೊಳ್ಳಲು ಸಾಧ್ಯವಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಿಗೆ ಮಾಹಿತಿ ನೀಡಿದರು.
1615 ಅಂಗನವಾಡಿಗಳಲ್ಲಿ 1,488 ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದ್ದು, 127 ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ಬಾಕಿ ಇದೆ. 41 ಕಡೆ ಕಂಬದ ಸಮಸ್ಯೆ ಇದ್ದರೆ ಉಳಿದೆಡೆಯಲ್ಲಿ ಸ್ವಂತ ಅಂಗನವಾಡಿ ಕಟ್ಟಡಗಳಿಲ್ಲದೆ, ದುರಸ್ತಿಯಲ್ಲಿರುವೆಡೆ ವಿದ್ಯುತ್ ಸಂಪರ್ಕ ನೀಡಲಾಗಿಲ್ಲ. ಮುಂದಿನ ಕೆಡಿಪಿ ಸಭೆಯ ವೇಳೆಗೆ ಈ ವಿದ್ಯುತ್ ಸಂಪರ್ಕ ಸಂಪೂರ್ಣಗೊಳ್ಳಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಶಾಲಾ ಕಟ್ಟಡಗಳ ಬಗ್ಗೆ, ಶಾಲೆಯಿಂದ ಹೊರಗುಳಿದ ಮಕ್ಕಳ ಮಾಹಿತಿ ನೀಡಿದ ಸರ್ವಶಿಕ್ಷಣ ಅಭಿಯಾನದ ಅಧಿಕಾರಿಗಳು, 13-14ನೇ ಸಾಲಿನಲ್ಲಿ 130 ಹೊಸ ಮಕ್ಕಳನ್ನು ಗುರುತಿಸಲಾಗಿದೆ. 63 ಮಕ್ಕಳಿಗೆ ಕಳೆದ ಸಾಲಿನಲ್ಲಿ ಟೆಂಟ್ ಶಾಲೆಯಲ್ಲಿ ವ್ಯವಸ್ಥೆ ಮಾಡಲಾಗಿದೆ. 21 ಮಕ್ಕಳು ವಲಸೆ ಹೋಗಿದ್ದಾರೆ ಎಂದರು.
ಎರಡಕ್ಕಿಂತ ಹೆಚ್ಚಿನೆಡೆ ಪಿಡಿಒಗಳಿಗೆ ಕೆಲಸದ ಹೊಣೆ ಬೇಡ ಎಂದು ಸ್ಪಷ್ಟಪಡಿಸಿದ ಜಿಲ್ಲಾಪಂಚಾಯತ್ ಅಧ್ಯಕ್ಷರು, ಪಂಚಾಯತ್ ಕಾರ್ಯದರ್ಶಿ ಮತ್ತು ಪಿಡಿಒಗಳನ್ನು ನೇಮಿಸುವಾಗ ಹೆಚ್ಚಿನ ಅಸ್ಥೆ ವಹಿಸಿ ಅವರು ಕರ್ತವ್ಯ ನಿರ್ವಹಣೆಗೆ ಅನುಕೂಲವಾಗಿರಲಿ ಎಂದರು.
ಕಲ್ಗಣಿ ಗುತ್ತಿಗೆದಾರರಿಗೆ ಪಂಚಾಯಿತಿಯಿಂದ ಎನ್ ಒ ಸಿ ನೀಡುವಂತೆ ನಿರ್ಣಯ ತೆಗೆದುಕೊಳ್ಳಲು ಸಭೆ ನಿರ್ಧರಿಸಿತು. ಗಣಿಗಾರಿಕೆಯಿಂದ ಗ್ರಾಮೀಣ ಪ್ರದೇಶದ ರಸ್ತೆಗಳು ಸಂಪೂರ್ಣ ಹಾಳಾಗುತ್ತಿದ್ದು, 16 ಟನ್ ಗಿಂತ ಹೆಚ್ಚು ಭಾರ ಸಾಗಿಸುವ ವಾಹನಗಳ ವಿರುದ್ಧ ಕ್ರಮಕೈಗೊಳ್ಳುವಂತಾಗಬೇಕೆಂದು ಸಭೆ ನಿರ್ಣಯಿಸಿತು.
ಜನ ಕಲ್ಯಾಣ ಯೋಜನೆಗಳ ಅನುಷ್ಠಾನಕ್ಕೆ ಅರ್ಜಿ ಬಂದಿಲ್ಲವೆಂಬ ಕಾರಣ ನೀಡಬಾರದೆಂದ ಅಧ್ಯಕ್ಷರು, ಅಂಗವಿಕಲರಿಗೆ, ಎಂಡೋ ಪೀಡಿತ ಪ್ರದೇಶಗಳಾದ ಕೊಕ್ಕಡ, ಚಿಬಿದ್ರೆ ಗಳಿಗೆ ಮೂಲಸೌಕರ್ಯ ಒದಗಿಸಿ. ಸಮಾಜ ಕಲ್ಯಾಣ ಇಲಾಖೆ ಹಾಗೂ ಐಟಿಡಿಪಿ ಇಲಾಖೆಯವರು, ಪರಿಶಿಷ್ಟ ಜಾತಿಯವರು ಸಂಗ್ರಹಿಸುವ ಸೀಗೆಪುಡಿ, ಜೇನು ಹಾಗೂ ಬುಟ್ಟಿಗಳಿಗೆ ಮಾರುಕಟ್ಟೆ ಒದಗಿಸುವ ಯತ್ನ ಮಾಡಬೇಕೆಂದರು. ಕಲ್ಲೇರಿಯಾದಲ್ಲಿ ವಿದ್ಯುತ್ ಸಮಸ್ಯೆ ಬಗೆಹರಿಸಿ ಎಂದು ಸೂಚಿಸಿದರು.
ಸಭೆಯಲ್ಲಿ ಉಪಾಧ್ಯಕ್ಷ ರಿತೇಶ್ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷರಾದ   ಆಶಾ ತಿಮ್ಮಪ್ಪ ಗೌಡ, ಉಪ ಕಾರ್ಯದರ್ಶಿ ಟಿ.ಎಂ. ಶಶಿಧರ್, ಮುಖ್ಯ ಯೋಜನಾಧಿಕಾರಿ ನಝೀರ್, ಯೋಜನಾ ನಿರ್ದೇಶಕರಾದ ಸೀತಮ್ಮ ಉಪಸ್ಥಿತರಿದ್ದರು.
 

Monday, May 20, 2013

ವಿಶೇಷ ವಸತಿ ಯೋಜನೆಯಡಿ 38 ಅರ್ಹ ಫಲಾನುಭವಿಗಳ ಆಯ್ಕೆ

ಮಂಗಳೂರು ಮೇ 20: : ಸರ್ಕಾರದ ನಿರ್ದೇಶನದಂತೆ ವಿಶೇಷ ವರ್ಗಕ್ಕೆ ಸೇರಿದ ಫಲಾನುಭವಿಗಳ ಆಯ್ಕೆ ಮತ್ತು ಕಾರ್ಯಕ್ರಮ ಅನುಷ್ಠಾನಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ 36 ಫಲಾನುಭವಿಗಳು ಹಾಗೂ ಇಬ್ಬರು ಮಂಗಳೂರು ತಾಲೂಕಿನ ಫಲಾನುಭವಿಗಳಿಗೆ ವಸತಿಗಳನ್ನು ಮಂಜೂರು ಮಾಡಲಾಯಿತು.
ಈ ಸಂಬಂಧ ಇಂದು ಜಿಲ್ಲಾಧಿಕಾರಿ  ಎನ್ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಡತನ ರೇಖೆಗಿಂತ ಕೆಳಗಿರುವ ಮತ್ತು ಯಾವುದೇ ಯೋಜನೆಗಳಡಿ ಮನೆ ಪಡೆದಿಲ್ಲದಿರುವ ಜಿಲ್ಲಾ ಮಟ್ಟದ ಸಮಿತಿ ತಯಾರಿಸಿದ ಪಟ್ಟಿಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಗಳು, ಫಲಾನುಭವಿಗಳ ಆಯ್ಕೆಗೆ ಅನುಮೋದನೆ ನೀಡಿದರು.
ಈ ವಿಶೇಷ ವರ್ಗದಡಿ ಬಸವ ವಸತಿ ಯೋಜನೆ, ಆಶ್ರಯ, ಅಂಬೇಡ್ಕರ್ ಮುಂತಾದ ವಸತಿ ಯೋಜನೆಯಡಿ ಮನೆ ಪಡೆಯದ ಫಲಾನುಭವಿಗಳಿಗೆ ಆದ್ಯತೆ ನೀಡಲಾಗುವುದು. ಅಂಗವಿಕಲರು, ಕುಷ್ಟರೋಗದಿಂದ ಗುಣಮುಖರಾದವರು, ಅರಣ್ಯ ಪ್ರದೇಶದಿಂದ ಹಾಗೂ ಅತಿಕ್ರಮಣದಿಂದ ತೆರವುಗೊಳಿಸಲಾದ ನಿರಾಶ್ರಿತರು, ಪ್ರವಾಹ ಪೀಡಿತರು, ದೇವದಾಸಿಯರು, ಇತರೆ ದೌರ್ಜನ್ಯಕ್ಕೊಳಗಾದ ಮಹಿಳೆಯರು, ಅಂಗನವಾಡಿ ಕಾರ್ಯಕರ್ತೆಯರು, ಗಲಭೆಗಳಿಂದ ಸಂತ್ರಸ್ತರು, ನೇಕಾರರು, ಹಮಾಲರು, ಬೀಡಿ ಕಾರ್ಮಿಕರು ಹಾಗೂ ಕುಶಲಕರ್ಮಿಗಳು ಇವರಿಗೆ ರಾಜೀವ್ ಗಾಂಧಿ ವಸತಿ ನಿಗಮದಿಮದ ಮನೆ ನಿರ್ಮಿಸಿಕೊಡಲಾಗುವುದು.
ಇದೇ ಸಭೆಯಲ್ಲಿ ಕೊರಗರಿಗೆ ಮನೆ ನೀಡುವ ಬಗ್ಗೆ, ಘನತ್ಯಾಜ್ಯ ವಿಲೇಗೆ ಜಾಗ ಕಾಯ್ದಿರಿಸುವ ಬಗ್ಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಅವರು ಸಭೆಯಲ್ಲಿ ಪ್ರಸ್ತಾಪಿಸಿದರು. ಮುಂದಿನ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಆದ್ಯತೆಯ ಮೇರೆಗೆ ಈ ವಿಷಯವನ್ನು ಪ್ರಸ್ತಾಪಿಸಲು ಜಿಲ್ಲಾಧಿಕಾರಿಗಳು ಹೇಳಿದರು.
ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ., ಮುಖ್ಯ ಯೋಜನಾಧಿಕಾರಿ ನಝೀರ್, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅರುಣ್ ಫುರ್ಟಾಡೋ, ಪಾಲಿಕೆ ಆರೋಗ್ಯಾಧಿಕಾರಿ ಡಾ ಸುದರ್ಶನ್ ಸಭೆಯಲ್ಲಿ ಪಾಲ್ಗೊಂಡಿದ್ದರು. 

Sunday, May 19, 2013

ಎಚ್ ಪಿ ಸಿ ಎಲ್ ನಿಂದ ಪೆರ್ನೆ ಸಂತ್ರಸ್ತರಿಗೆ ಪರಿಹಾರ

ಮಂಗಳೂರು.ಮೇ.19 :-  ಪೆರ್ನೆ ಅನಿಲ ದುರಂತದಲ್ಲಿ ಮಡಿದವರ ಕುಟುಂಬಕ್ಕೆ ಎಚ್ ಪಿ ಸಿ ಎಲ್ ಕಂಪೆನಿಯಿಂದ ತಲಾ 1.5 ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ಕೇಂದ್ರ ಪೆಟ್ರೋಲಿಯಂ ಖಾತೆ ಸಚಿವ  ಎಂ ವೀರಪ್ಪ ಮೊಯಿಲಿ ಅವರು ಹೇಳಿದರು.
       ಅವ ರಿಂದು ನಗರದ ಸರ್ಕಿಟ್ ಹೌಸ್ ನಲ್ಲಿ ಜಿಲ್ಲಾ ಧಿಕಾರಿ ಗಳೊಂದಿಗೆ ಸಭೆ ನಡೆಸಿ ಪೆರ್ನೆ ದುರಂತ ದಲ್ಲಿ ಮಡಿ ದವರ ಕುಟುಂಬಕ್ಕೆ  ಎಚ್ ಪಿ ಸಿ ಎಲ್ ಕಂಪೆನಿ ಯಿಂದ ತಲಾ 1.5 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 50,000 ರೂ. ಪರಿಹಾರ ನೀಡಲಾಗುವುದು. ಇದಕ್ಕಾಗಿ ಕಂಪೆನಿ ಒಟ್ಟು 17 ಲಕ್ಷ ರೂ. ಪರಿಹಾರವನ್ನು ಬಿಡುಗಡೆ ಮಾಡಿದೆ ಎಂದರು.
ಇದಲ್ಲದೆ ರಾಜ್ಯ ಸರ್ಕಾರ 48 ಲಕ್ಷ ರೂ.ಗಳ ಪ್ಯಾಕೇಜನ್ನು ದುರಂತ ಸಂಭವಿಸಿದ ಪ್ರದೇಶದಲ್ಲಿ ಸಮಗ್ರ ಪುನರ್ ವಸತಿಗೆ ಘೋಷಿಸಿದೆ.
ನಗರದ ಲೇಡಿಗೋಷನ್ ಆಸ್ಪತ್ರೆಗೆ ಇನ್ನೊಂದು ಹೈಟೆಕ್ ಬ್ಲಡ್ ಬ್ಯಾಂಕ್ ನೀಡುವ ಯೋಜನೆಯ ಬಗ್ಗೆಯೂ ಕೇಂದ್ರ ಸಚಿವರು ಸಭೆಯಲ್ಲಿ ಪ್ರಸ್ತಾಪಿಸಿದರು. 
ಸಭೆಯಲ್ಲಿ ಜಿಲ್ಲಾಧಿಕಾರಿ  ಎನ್ ಪ್ರಕಾಶ್, ಜಿಲ್ಲಾ ಪಂಚಾಯತ್ ಸಿಇಒ ಡಾ ಕೆ ಎನ್ ವಿಜಯಪ್ರಕಾಶ್, ಮಹಾನಗರಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್ ಉಪಸ್ಥಿತರಿದ್ದರು.

 

Saturday, May 18, 2013

ನಗರಪಾಲಿಕೆ ವ್ಯಾಪ್ತಿಯ ತೋಡುಗಳ ಹೂಳೆತ್ತುವ ಕಾರ್ಯ- ಜಿಲ್ಲಾಧಿಕಾರಿಗಳಿಂದ ಪರಿಶೀಲನೆ

ಮಂಗಳೂರು, ಮೇ. 18. :- ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 180 ಕಿಲೋಮೀಟರ್ ಉದ್ದದ ಪ್ರಮುಖ ತೋಡುಗಳಿದ್ದು, ಇವುಗಳಲ್ಲಿ ತುಂಬಿರುವ ಹೂಳನ್ನು ಸ್ವಚ್ಛಗೊಳಿಸಿ ಮಳೆನೀರು ಸರಾಗವಾಗಿ ಹರಿಯುವಂತೆ ಮಾಡಲು ಪಾಲಿಕೆ ಕ್ರಮ ಕೈಗೊಂಡಿದೆ. ಈಗಾಗಲೇ 59 ಕಿಲೋಮೀಟರ್ ನಷ್ಟು ತೋಡುಗಳನ್ನು ರೂ.70.7 ಲಕ್ಷ ವೆಚ್ಚದಲ್ಲಿ ಹೂಳೆತ್ತುವ ಕಾರ್ಯ ಭರದಿಂದ ಸಾಗುತ್ತಿದ್ದು, ದಕ್ಷಿಣಕನ್ನಡ ಜಿಲ್ಲಾಧಿಕಾರಿ ಎನ್.ಪ್ರಕಾಶ್ ರವರು ಇಂದು ನಗರದ ಎಕ್ಕೂರು ಹಾಗೂ ಜೆಪ್ಪಿನಮೊಗರು ಸಮೀಪದ ತೋಡುಗಳ ಹೂಳೆತ್ತುವ ಕಾರ್ಯವನ್ನು ಪರಿಶೀಲಿಸಿ ಮಹಾನಗರಪಾಲಿಕೆ ಅಧಿಕಾರಿಗಳಿಗೆ ಸೂಕ್ತ ಸಲಹೆಗಳನ್ನು ನೀಡಿದರು.
 ತೋಡುಗಳಿಂದ ತೆಗೆಯಲಾದ  ಹೂಳನ್ನು ಕೂಡಲೇ ವಿಲೇವಾರಿ ಮಾಡಬೇಕೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು ಹೂಳೆತ್ತುವ ಕಾರ್ಯವನ್ನು ಸಮರೋಪಾದಿಯಲ್ಲಿ ಕೈಗೊಳ್ಳಬೇಕೆಂದರು.
ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ 1.5 ಮೀಟರ್ ಗಿಂತಲೂ ಹೆಚ್ಚು ಎತ್ತರವಿರುವ ಸುಮಾರು 180 ಕಿಲೋಮೀಟರ್ ಉದ್ದದ 37 ಪ್ರಮುಖ ಚರಂಡಿಗಳಿವೆ ಹಾಗೂ 1800 ಕಿಲೋಮೀಟರ್ ಉದ್ದದ 1.5 ಮೀಟರ್ ಗಿಂತಲೂ ಕಡಿಮೆ ಎತ್ತರದ ಚರಂಡಿಗಳಿವೆ ಎಂದು ವಿವರ ನೀಡಿದ ಪಾಲಿಕೆ ಆಯುಕ್ತರಾದ ಡಾ.ಹರೀಶ್ ಕುಮಾರ್ರವರು ತೋಡುಗಳಲ್ಲಿನ ಹೂಳನ್ನು ತೆಗೆಯಲು ಈಗಾಗಲೇ 17 ಯಂತ್ರಗಳನ್ನು ಬಳಸಲಾಗುತ್ತಿದೆ ಹಾಗೂ 7 ಕಡೆಗಳಲ್ಲಿ ಯಂತ್ರಗಳಿಂದ ಕಾರ್ಯ ಸಾಧ್ಯವಿಲ್ಲದ ಕಾರಣ ಮಾನವರಿಂದ ಈ ಕಾರ್ಯವನ್ನು ಕೈಗೊಳ್ಳಲಾಗಿದೆಯೆಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಮಹಾನಗರಪಾಲಿಕೆಯ ಕಾರ್ಯ ಪಾಲಕ ಅಭಿಯಂತರರಾದ ಕೆ.ಎಂ.ಜಯಪ್ರಕಾಶ್, ರಾಜಶೇಖರ್, ಸಹಾಯಕ ಕಾರ್ಯಪಾಲಕ ಅಭಿಯಂತರರಾದ ನಿಂಗೇಗೌಡ ಹಾಗೂ ಸಹಾಯಕ ಅಭಿಯಂತರರಾದ ಗಣಪತಿಯವರು ಸ್ಥಳದಲ್ಲಿ ಹಾಜರಿದ್ದು ಕಾರ್ಯ ಪ್ರಗತಿಯ ಬಗ್ಗೆ ಜಿಲ್ಲಾಧಿಕಾರಿಗಳಿಗೆ ವಿವರಿಸಿದರು.
 

ಜೂನ್ 1 ರಿಂದ 30 ರ ವರೆಗೆ ಜಿಲ್ಲೆಯಲ್ಲಿ ಆರ್ಥಿಕ ಗಣತಿ ಸಾರ್ವಜನಿಕರು ಸಹಕರಿಸಲು ಜಿಲ್ಲಾಧಿಕಾರಿ ವಿನಂತಿ

ಮಂಗಳೂರು, ಮೇ.18: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿವಿಧ ಸಾಮಾಜಿಕ ಹಾಗೂ ಆರ್ಥಿಕ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಪ್ರತೀ ಬಾರಿಯಂತೆ ಈ ಸಲವೂ 6 ನೇ ಆರ್ಥಿಕ ಗಣತಿ 2012-13 ನ್ನು ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜೂನ್ 1 ರಿಂದ 30 ರ ವರೆಗೆ ಹಮ್ಮಿಕೊಳ್ಳಲಾಗಿದ್ದು, ಈ ಅವಧಿಯಲ್ಲಿ ಮನೆಮನೆಗೆ ಭೇಟಿ ನೀಡಲಿರುವ ಗಣತಿದಾರರಿಗೆ ಸಮರ್ಪಕ ಮಾಹಿತಿಯನ್ನು ನೀಡುವ ಮೂಲಕ ಸಹಕಾರ ನೀಡಬೇಕೆಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳು ಹಾಗೂ 6ನೇ ಆರ್ಥಿಕ ಗಣತಿಯ  ಜಿಲ್ಲಾಧ್ಯಕ್ಷರಾದ ಎನ್.ಪ್ರಕಾಶ್ ರವರು ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.
           ಅವರು ಇಂದು ತಮ್ಮ ಕಚೇರಿಯಲ್ಲಿ ನಡೆದ 6ನೇ ಆರ್ಥಿಕ ಗಣತಿಯ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆ ಹಾಗೂ ಗಣತಿದಾರರಿಗೆ ಮತ್ತು ಮೇಲ್ವಿಚಾರಕರಿಗೆ ಆಯೋಜಿಸಿದ್ದ ತರಬೇತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಆರ್ಥಿಕ ಗಣತಿಯು ಅತ್ಯಂತ ಮುಖ್ಯ ಗಣತಿಯಾಗಿದ್ದು, ಇದರಲ್ಲಿ ತೊಡಗಿಸಿಕೊಳ್ಳುವ ಎಲ್ಲಾ ಅಧಿಕಾರಿಗಳು ನಿಷ್ಠೆ ಹಾಗೂ ಪ್ರಾಮಾಣಿಕತೆಯಿಂದ ಮೊದಲ ಆದ್ಯತೆಯಾಗಿ ಕರ್ತವ್ಯ ನಿರ್ವಹಿಸಬೇಕೆಂದು  ಅಧಿಕಾರಿಗಳಿಗೆ ಕಿವಿಮಾತು ಹೇಳಿದರು.
ದಕ್ಷಿಣಕನ್ನಡ ಜಿಲ್ಲೆಯಲ್ಲಿ  ಮಂಗಳೂರು ನಗರ ಬಂಟ್ವಾಳ, ಪುತ್ತೂರು,ಬೆಳ್ತಂಗಡಿ,ಉಳ್ಳಾಲ ಮುಂತಾದೆಡೆಗಳ ವ್ಯಾಪ್ತಿಯಲ್ಲಿ ಆಥರ್ಿಕ ಗಣತಿ ಕಾರ್ಯ ನಡೆಯಲಿದೆ. ಯಾವುದೇ ತೆರನಾದ ಉತ್ಪಾದಕತೆಯ ಲಾಭಾಂಶ ತರುವ ಆಥರ್ಿಕ ಚಟುವಟಿಕೆಯನ್ನು ನಡೆಸುತ್ತಿರುವವರ ಕುಟುಂಬಗಳ ಮಾಹಿತಿಯನ್ನು ಈ ಗಣತಿ ಕಾರ್ಯದಲ್ಲಿ ಸಂಗ್ರಹಿಸಬೇಕಾಗಿದೆ. ಆದರೆ ಅನಧಿಕೃತವಾಗಿ ನಡೆಯುವ ಜೂಜು,ಇತರೇ ಚಟುವಟಿಕೆಗಳು ಈ ಗಣತಿಯ ವ್ಯಾಪ್ತಿಯಿಂದ ಹೊರತಾಗಿರುತ್ತದೆ. ವಕೀಲಿ ವೃತ್ತಿ,ವೈದ್ಯಕೀಯ ವೃತ್ತಿ, ತೆರಿಗೆ ಸಲಹೆಗಾರರು ಇನ್ನು ಮುಂತಾದ ವೃತ್ತಿಗಳ ಅವಲಂಬಿತರುಈ ಗಣತಿಯ ವ್ಯಾಪ್ತಿಗೆ ಒಳಪಡುತ್ತಾರೆ.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್,ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರು ಹಾಗೂ ಆರ್ಥಿಕ ಗಣತಿ ಜಿಲ್ಲಾ ಆಯುಕ್ತರಾದ ಡಾ. ಹರೀಶ್ ಕುಮಾರ್. ಆರ್ಥಿಕ ಗಣತಿ ನೋಡಲ್ ಅಧಿಕಾರಿ ಹಾಗೂ ಜಿಲ್ಲಾ  ಸಂಖ್ಯಾ ಸಂಗ್ರಹಣಾಧಿಕಾರಿ ಪ್ರದೀಪ್ ಡಿ'ಸೋಜ ಉಪಸ್ಥಿತರಿದ್ದರು.
 

ಸಂಪುಟ ವಿಸ್ತರಣೆ : 28 ಸಚಿವರಿಂದ ಪ್ರಮಾಣ ವಚನ ಸ್ವೀಕಾರ

ಬೆಂಗಳೂರು, ಮೇ.18 : ಸನ್ಮಾನ್ಯ ಮುಖ್ಯಮಂತ್ರಿ  ಸಿದ್ಧರಾಮಯ್ಯ ನೇತೃತ್ವದ ವಿಸ್ತರಣೆಯಲ್ಲಿ ಸಂಪುಟ ದರ್ಜೆ ಸಚಿವರಾಗಿ 20 ಹಾಗೂ ರಾಜ್ಯ ಸಚಿವರಾಗಿ ಎಂಟು ಮಂದಿ ಸೇರ್ಪಡೆಯಾಗುವುದರೊಂದಿಗೆ ರಾಜ್ಯ ಸಚಿವ ಸಂಪುಟದ ಗಾತ್ರ 29 ಕ್ಕೆ ಏರಿಕೆಯಾಗಿದೆ.
      ರಾಜ ಭವನದ ಗಾಜಿನ ಮನೆಯಲ್ಲಿ ಕಿಕ್ಕಿರಿದ ಜನಸ್ತೋಮದ ನಡುವೆ ಶನಿವಾರ ನಡೆದ ವಿಶೇಷ ಸಮಾರಂಭದಲ್ಲಿ ರಾಜ್ಯಪಾಲ  ಹಂಸರಾಜ ಭಾರಧ್ವಾಜ್ ಅವರು ನೂತನ ಸಚಿವರಿಗೆ ಅಧಿಕಾರಪದ ಹಾಗೂ ಗೌಪ್ಯತಾ ಪ್ರಮಾಣ ವಚನ ಬೋಧಿಸಿದರು.
 ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಭಯಚಂದ್ರ ಜೈನ್, ಬಂಟ್ವಾಳವಿಧಾನ ಸಭಾ ಕ್ಷೇತ್ರದ ಶಾಸಕರಾದ ಬಿ. ರಮನಾಥ ರೈ, ಹಾಗೂ ಮಂಗಳೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ  ಯು.ಟಿ. ಖಾದರ್ ಅವರು ಸಚಿವರುಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು. 

Friday, May 17, 2013

ಜಿಲ್ಲೆಯಲ್ಲಿ 2.41 ಲಕ್ಷ ಜನರಿಂದ ಆಧಾರ್ ನೋಂದಣಿ

ಮಂಗಳೂರು, ಮೇ. 17: ಭಾರತ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಆಧಾರ್ ಗುರುತಿನ ಚೀಟಿ ನೋಂದಣಿ ಕಾರ್ಯ ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು,ಮೂಡಬಿದ್ರಿ,ಬಂಟ್ವಾಳ,ವಿಟ್ಲ, ಮತ್ತು ಪುತ್ತೂರುಗಳಲ್ಲಿ 2012 ರ ಡಿಸೆಂಬರ್ ನಿಂದ ಕಾರ್ಯಾರಂಭವಾಗಿದ್ದು,ಇಲ್ಲಿಯ ತನಕ 16 ಕೇಂದ್ರಗಳಲ್ಲಿ ಒಟ್ಟು 2,41,809 ಜನ ತಮ್ಮ ಹೆಸರನ್ನು ಹಾಗೂ ವೈಯಕ್ತಿಕ ಮಾಹಿತಿಯನ್ನು ಆಧಾರ  ಕಾರ್ಡ್  ಪಡೆಯಲು ನೊಂದಾಯಿಸಿಕೊಂಡಿದ್ದಾರೆ.

ಜಿಲ್ಲೆಯಲ್ಲಿ ಮಾನವರಿಂದ ಶೌಚ ಸ್ವಚ್ಚತೆ ತಡೆಯಿರಿ- ಅಪರ ಜಿಲ್ಲಾಧಿಕಾರಿ

ಮಂಗಳೂರು,ಮೇ.17:ಅಮಾನವೀಯವಾದ ಮಾನವ ಶೌಚವನ್ನು ಕೈಯಿಂದ
ಶುಚಿಗೊಳಿಸುವ (manual scavenging) ರ ಪದ್ದತಿಯನ್ನು ನಿರ್ಮೂಲ ಮಾಡಬೇಕೆಂದು ದ.ಕ.ಜಿಲ್ಲಾ ಹೆಚ್ಚುವರಿ ಜಿಲ್ಲ್ಲಾಧಿಕಾರಿ ದಯಾನಂದ ಅವರು ತಿಳಿಸಿದ್ದಾರೆ.
     ಅವರು ಇಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಮಂಗಳೂರು ಮಹಾನಗರಪಾಲಿಕೆ ಬಂಟ್ವಾಳ,ಉಳ್ಳಾಲ  ಮತ್ತು ಪುತ್ತೂರು ಪುರಸಭೆಗಳ ಎನ್ಯುಮರೇಟರ್ಸ್,ಸೂಪರ್ ವೈಸರ್ಸ್ ಹಾಗೂ ಅಪರೇಟರ್ ಗಳಿಗೆ  (manual scavengingರ ಕುರಿತು ನಡೆದ ಒಂದು ದಿನದ ತರಬೇತಿಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಮೇಲ್ಕಂಡ ಪುರಸಭೆಗಳಲ್ಲಿ ನಗರಪಾಲಿಕೆ ವ್ಯಾಪ್ತಿಯಲ್ಲಿ ಅನೈರ್ಮಲ್ಯ ಶೌಚಾಲಯಗಳನ್ನು  ಮಾನವರಿಂದ ಸ್ವಚ್ಛಗೊಳಿಸುತ್ತಿರುವ ಬಗ್ಗೆ ಇತ್ತೀಚಿನ ಸರ್ವೆಯಿಂದ ದೃಢಪಟ್ಟಿರುವುದರಿಂದ ಈ ಭಾಗಗಳಲ್ಲಿ ಎನ್ಯೂಮರೇಟರ್ಸ್ ಗಳು ಸರ್ವೆ ಮಾಡಿ ಅಂತಹವರನ್ನು ಗುರುತಿಸಿ ಅವರಿಗೆ ಪುನರ್ವಸತಿ ಕಲ್ಪಿಸುವಂತೆ ಹಾಗೂ ಜನರಲ್ಲಿ ಇಂತಹ ಪದ್ದತಿಯನ್ನು ನಿರ್ಮೂಲನೆಗೊಳಿಸಲು ಜಾಗೃತಿ ಮೂಡಿಸುವಂತೆ ತಿಳಿಸಿದರು.
ಯೋಜನಾ ನಿರ್ದೇಶಕರಾದ ತಾಕತ್ ರಾವ್, ಸಮಾಜ ಕಲ್ಯಾಣಾಧಿಕಾರಿ ಅರುಣ್ ಪುರ್ಟಡೋ ಇತರರು ಹಾಜರಿದ್ದರು.                 

Thursday, May 16, 2013

ಮಳೆಗಾಲ ಎದುರಿಸಲು ಪಾಲಿಕೆ ಸಜ್ಜು: ಜಿಲ್ಲಾಧಿಕಾರಿ

ಮಂಗಳೂರು ಮೇ 16:- ಮಳೆಗಾಲ ಎದುರಿಸಲು ಮಹಾನಗರಪಾಲಿಕೆ ಸಜ್ಜಾಗಬೇಕಿದ್ದು, ನಗರದ ಚರಂಡಿಗಳ ಹೂಳೆತ್ತುವಿಕೆ ಕಾಮಗಾರಿಗಳನ್ನು ಮೇ 25ರೊಳಗೆ ಸಂಪೂರ್ಣಗೊಳಿಸಬೇಕೆಂದು ಪಾಲಿಕೆ ಆಡಳಿತಾಧಿಕಾರಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಧಿಕಾರಿ  ಎನ್ ಪ್ರಕಾಶ್ ಸೂಚಿ ಸಿದ್ದಾರೆ.
ಅವರು ಬುಧ ವಾರ  ಮಹಾ ನಗರ ಪಾಲಿಕೆ ಸಭಾಂ ಗಣ ದಲ್ಲಿ ಆಯೋ ಜಿಸ ಲಾದ ಅಭಿ ವೃದ್ಧಿ ಸಭೆ ಯನ್ನು ಉದ್ದೇ ಶಿಸಿ ಮಾತ ನಾಡು ತ್ತಿದ್ದರು. ನೆರೆ ಪೀಡಿತ ಪ್ರದೇಶ ಗಳನ್ನು ಈಗಾ ಗಲೇ ಗುರು ತಿಸ ಲಾಗಿದ್ದು, ಮಳೆ ಗಾಲವನ್ನು ಎದುರಿಸಲು 10 ತಂಡಗಳ ಟಾಸ್ಕ್ ಫೋರ್ಸ ನ್ನು ರಚಿಸಲಾಗಿದೆ ಎಂದು ಪಾಲಿಕೆ ಮುಖ್ಯ ಅಧೀಕ್ಷಕ ಇಂಜಿನಿಯರ್ರಾದ ಬಿ ಎಸ್ ಬಾಲಕೃಷ್ಣ ಅವರು ಜಿಲ್ಲಾಧಿಕಾರಿಗಳಿಗೆ ಮಾಹಿತಿ ನೀಡಿದರು.
ಪಾಲಿಕೆಯಲ್ಲಿ ಈಗಾಗಲೇ 71 ಲಕ್ಷ ರೂ. ವೆಚ್ಚದಲ್ಲಿ ಬೃಹತ್ ಚರಂಡಿಗಳನ್ನು ಸ್ವಚ್ಛಗೊಳಿಸಲಾಗಿದೆ. ಮಳೆಗಾಲದಲ್ಲಿ ಐದು ವಾರ್ಡಗೆ ಒಂದು ತಂಡ, ರಾತ್ರಿಗೆ ಹೆಚ್ಚುವರಿ 3 ತಂಡಗಳನ್ನು ಸಜ್ಜುಗೊಳಿಸಲಾಗಿದ್ದು, 24 ಗಂಟೆಯೂ ಪಾಲಿಕೆಯಲ್ಲಿ ಕರ್ತವ್ಯ ನಿರ್ವಹಿಸಲಿದೆ. ಈ ತಂಡಗಳ ನೇತೃತ್ವವನ್ನು ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ ಅವರು ವಹಿಸಲಿದ್ದಾರೆ. ಪಾಲಿಕೆಗೆ ಪ್ರಥಮ ಹಂತದಲ್ಲಿ ಬಂದ ನೂರು ಕೋಟಿ ರೂ.ಗಳಲ್ಲಿ 12 ಕಾಮಗಾರಿಗಳು ಬಾಕಿ ಉಳಿದಿವೆ ಎಂದು ಬಾಲಕೃಷ್ಣ ಅವರು ವಿವರಿಸಿದರು.
ದ್ವಿತೀಯ ಹಂತದ  ನೂರು ಕೋಟಿ ರೂ. ಪಾಲಿಕೆ ಕಾಮ ಗಾರಿ ಯಲ್ಲಿ 15.4 ಕೋಟಿ ರೂ. ಬಿಡು ಗಡೆ ಯಾಗಿದ್ದು, 42 ಕಾಮ ಗಾರಿ ಗಳು ಬಾಕಿ ಉಳಿ ದಿವೆ. ನಿರ್ಮಿತಿ ಕೇಂದ್ರಕ್ಕೆ ಫುಟ್ಪಾತ್ ಹಾಗೂ ಚರಂಡಿ ಕಾಮ ಗಾರಿಯನ್ನು ನಿರ್ವ ಹಿಸಲು ವಹಿಸ ಲಾಗಿದೆ ಎಂದರು.
ಕಳೆದ ಮೂರು ತಿಂಗಳಿಂದ ಚುನಾವಣಾ ಕಾರಣ ಬಾಕಿ ಉಳಿದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಚುನಾವಣಾ ಕೆಲಸದಂತೆಯೇ ಪರಿಗಣಿಸಿ ಕ್ಷಿಪ್ರಗತಿಯಲ್ಲಿ ಸಂಪೂರ್ಣಗೊಳಿಸಿ ಎಂದು ಜಿಲ್ಲಾಧಿಕಾರಿಗಳು ಈ ಸಂದರ್ಭದಲ್ಲಿ ಹೇಳಿದರು. ನಿಗದಿತ ಅವಧಿಯಲ್ಲಿ ಕಾಮಗಾರಿ ಆರಂಭಿಸದ ಹಾಗೂ ಅತ್ಯಂತ ನಿಧಾನವಾಗಿ ಕಾಮಗಾರಿ ನಡೆಸುವ ಗುತ್ತಿಗೆದಾರರ ಟೆಂಡರ್ ನ್ನು ರದ್ದುಗೊಳಿಸಲಾಗುವುದು ಎಂದು ಎಚ್ಚರಿಸಿದರು.
ವನಿತಾವನಕ್ಕೆ 20 ಲಕ್ಷ ರೂ. ಮೀಸಲಿರಿಸಿದೆ ಎಂಬ ಮಾಹಿತಿಯನ್ನು ಪಾಲಿಕೆ ಆಯುಕ್ತ ಡಾ ಹರೀಶ್ ಕುಮಾರ್ ಅವರು ಜಿಲ್ಲಾಧಿಕಾರಿಗಳಿಗೆ ನೀಡಿದರು. ಸ್ವಯಂ ಘೋಷಿತ ಆಸ್ತಿ ತೆರಿಗೆಯಿಂದ ಕಂದಾಯ ವಸೂಲಿ ನಿರೀಕ್ಷಿತ ಪ್ರಮಾಣದಲ್ಲಿ ಸಂಗ್ರಹಿಸಲಾಗಿಲ್ಲ ಎಂದ ಪಾಲಿಕೆ ಆಯುಕ್ತರು, ಆರೋಗ್ಯ ಮತ್ತು ಕಸ ವಿಲೇ, ಘನತ್ಯಾಜ್ಯ ವಿಲೇ ಯೋಜನೆಯಂತೆ ಅನುಷ್ಟಾನಕ್ಕೆ ಬರುತ್ತಿದೆ ಎಂದರು.
ಪರಿಶಿಷ್ಟ ಜಾತಿ ಮತ್ತು ಪಂಗಡದವರ ಮನೆ ನಿರ್ಮಾಣದಲ್ಲಿ ಪಾಲಿಕೆ ಒಂದು ತಿಂಗಳೊಳಗೆ ತನ್ನ ಗುರಿ ಸಾಧಿಸಬೇಕೆಂದ ಜಿಲ್ಲಾಧಿಕಾರಿಗಳು, ಮತ್ತೆ 15 ದಿನಗಳಲ್ಲಿ ಈ ಸಂಬಂಧ ಆದ ಅಭಿವೃದ್ಧಿಯನ್ನು ಪರಿಶೀಲನೆ ನಡೆಸುವುದಾಗಿ ಹೇಳಿದರು.
ಆದ್ಯತೆಯ ಮೇರೆಗೆ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಿ ಎಂದು ಸೂಚಿಸಿದ ಜಿಲ್ಲಾಧಿಕಾರಿಗಳು, ಇಂಜಿನಿಯರ್ ಗಳು ಕಾಮಗಾರಿ ಅನುಷ್ಠಾನದಲ್ಲಿ ಉದಾಸೀನತೆ ತೋರಿದರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನೂ ನೀಡಿದರು.
  ಸಭೆಯಲ್ಲಿ ಪಾಲಿಕೆ ಇಂಜಿನಿಯರ್ ಗಳು ಹಾಗೂ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Tuesday, May 14, 2013

ಜಿಲ್ಲಾಧಿಕಾರಿಯಾಗಿ ಎನ್ ಪ್ರಕಾಶ್

ಮಂಗಳೂರು ಮೇ 14: ಮೇ 14ರಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ  ಎನ್ ಪ್ರಕಾಶ್ ಅವರು ಅಧಿಕಾರ ಸ್ವೀಕರಿಸಿದ್ದಾರೆ.


Wednesday, May 8, 2013

ದಕ್ಷಿಣಕನ್ನಡ ಜಿಲ್ಲೆಯ ವಿಧಾನಸಭೆ ಕ್ಷೇತ್ರಗಳ ಚುನಾವಣೆಯ ಫಲಿತಾಂಶ

ಮಂಗಳೂರು, ಮೇ.08 :-ಕರ್ನಾಟಕ ರಾಜ್ಯ ವಿಧಾನಸಭೆಗೆ ಮೇ 5,2013 ರಂದು ನಡೆದ ಚುನಾವಣೆಯಲ್ಲಿ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳಿಂದ ಸ್ಪರ್ಧಿಸಿದ್ದ ವಿಜಯಿ ಅಭ್ಯರ್ಥಿಗಳು ಪಡೆದ ಮತಗಳ ವಿವರ.
200  ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ 74530 ಮತಗಳನ್ನು ಪಡೆದ  ಭಾರತೀಯ ರಾಷ್ಟ್ರೀಯ ಕಾಂಗ್ರೆಸಿನ ಅಭ್ಯರ್ಥಿ ಕೆ. ವಸಂತ ಬಂಗೇರಾರವರು ಚುನಾಯಿತರಾಗಿರುತ್ತಾರೆ. ಇವರ ಸಮೀಪದ ಸ್ಪರ್ಧಿ ಭಾರತೀಯ ಜನತಾ ಪಕ್ಷದ ರಂಜನ್ ಜಿ.ಗೌಡ ಅವರು 58,789 ಮತಗಳನ್ನು ಗಳಿಸಿದ್ದಾರೆ.
201 ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ  ಕೆ.ಅಭಯಚಂದ್ರ ಇವರು 53180   ಮತಗಳನ್ನು                  ಪಡೆದು  ಚುನಾಯಿತರಾಗಿರುತ್ತಾರೆ. ಅವರ ಸಮೀಪ ಸ್ಪರ್ಧಿ ಬಿಜೆಪಿಯ ಉಮಾನಾಥ ಕೋಟ್ಯಾನ್ 48,630 ಮತಗಳನ್ನು ಪಡೆದಿರುತ್ತಾರೆ.
202 ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅಭ್ಯರ್ಥಿ ಬಿ.ಎ.ಮೊಯಿದ್ದಿನ್  ಬಾವಾ ಅವರು 69,897   ಮತಗಳನ್ನು  ಪಡೆದು  ಜಯಶಾಲಿಯಾಗಿರುತ್ತಾರೆ. ಅವರ ಸಮೀಪ ಸ್ಪರ್ಧಿ ಕೃಷ್ಣ ಜೆ.ಪಾಲೇಮಾರ್ ರವರು 64,524 ಮತಗಳನ್ನು ಪಡೆದಿರುತ್ತಾರೆ.
203 ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ  ಚುನಾವಣೆಯಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಜೆ.ಆರ್.ಲೋಬೋ ರವರು 67,829   ಮತಗಳನ್ನು  ಪಡೆದು  ಚುನಾಯಿತರಾಗಿರುತ್ತಾರೆ. ಸಮೀಪ ಸ್ಪರ್ಧಿ ಎನ್.ಯೋಗೀಶ್ ಭಟ್ ಇವರು 55554 ಮತಗಳನ್ನು ಪಡೆದಿರುತ್ತಾರೆ.
204 ಮಂಗಳೂರು ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ಯು.ಟಿ.ಖಾದರ್ 69,450   ಮತಗಳನ್ನು ಪಡೆದು  ಚುನಾಯಿತರಾಗಿರುತ್ತಾರೆ. ಸಮೀಪ  ಸ್ಪರ್ಧಿ ಚಂದ್ರಹಾಸ ಉಳ್ಳಾಲ  40,339 ಮತಗಳನ್ನು ಪಡೆದಿರುತ್ತಾರೆ.
205 ಬಂಟ್ವಾಳ ವಿಧಾನಸಭಾ ಕ್ಷೇತ್ರದ  ಚುನಾವಣೆಯಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಬಿ.ರಮಾನಾಥ ರೈಯವರು 81,655  ಮತಗಳನ್ನು  ಪಡೆದು  ಚುನಾಯಿತರಾಗಿರುತ್ತಾರೆ. ಸಮೀಪ ಸ್ಪರ್ಧಿ ರಾಜೇಶ್ ನಾಯಕ್ ಉಳ್ಳಿಪ್ಪಾಡಿ ಇವರು 63815 ಮತಗಳನ್ನು ಪಡೆದಿರುತ್ತಾರೆ.
206 ಪುತ್ತೂರು ವಿಧಾನಸಭಾ ಕ್ಷೇತ್ರದ  ಚುನಾವಣೆಯಲ್ಲಿ  ಕಾಂಗ್ರೆಸ್ ಅಭ್ಯರ್ಥಿ ಶಕುಂತಳಾ ಟಿ.ಶೆಟ್ಟಿ ರವರು 66,345   ಮತಗಳನ್ನು  ಪಡೆದು  ಚುನಾಯಿತರಾಗಿರುತ್ತಾರೆ. ಸಮೀಪ ಸ್ಪರ್ಧಿ ಸಂಜೀವ ಮಟಂದೂರು ಇವರು 62056 ಮತಗಳನ್ನು ಪಡೆದಿರುತ್ತಾರೆ.
207 ಸುಳ್ಯ ವಿಧಾನಸಭಾ ಕ್ಷೇತ್ರದ  ಚುನಾವಣೆಯಲ್ಲಿ  ಬಿಜೆಪಿ ಅಭ್ಯರ್ಥಿ ಅಂಗಾರ .ಎಸ್.ರವರು 65,913   ಮತಗಳನ್ನು         ಪಡೆದು  ಚುನಾಯಿತರಾಗಿರುತ್ತಾರೆ. ಸಮೀಪ ಸ್ಪರ್ಧಿ ಡಾ..ರಘು ಇವರು 64,540 ಮತಗಳನ್ನು ಪಡೆದಿರುತ್ತಾರೆ.
 

Tuesday, May 7, 2013

ಮತ ಎಣಿಕೆ ಸಂಬಂಧ ಅಂತಿಮ ಸುತ್ತಿನ ಮಾಕ್ ಡ್ರಿಲ್

ಮಂಗಳೂರು ಮೇ 7 : ಮೇ 5 ರಂದು ನಡೆದ ರಾಜ್ಯ ವಿಧಾನ ಸಭಾ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಗೆ ದಕ್ಷಿಣಕನ್ನಡ ಜಿಲ್ಲೆ ಸಜ್ಜಾಗಿದ್ದು, ಈ ಸಂಬಂಧ ಅಂತಿಮ ಸುತ್ತಿನ ಮಾಕ್ ಡ್ರಿಲ್(ಅಣುಕು ಪ್ರದರ್ಶನ) ಜಿಲ್ಲಾಧಿಕಾರಿಗಳ ನೇತ್ರತ್ವದಲ್ಲಿಂದು ನಗರದ  ಕೆನರಾ ಕಾಲೇಜಿನಲ್ಲಿ ನಡೆಯಿತು.
ಮತ ಎಣಿಕೆಗೆ ಸಜ್ಜು- ಜಿಲ್ಲಾಧಿಕಾರಿ

ಮಂಗಳೂರು, ಮೇ.07 :ಮತ ಎಣಿಕೆ ಪ್ರಕ್ರಿಯೆಗೆ ದಕ್ಷಿಣಕನ್ನಡ ಜಿಲ್ಲೆ ಸಜ್ಜಾಗಿದ್ದು,ಇಂದು ಈ ಸಂಬಂಧ ಅಂತಿಮ ಸುತ್ತಿನ ಮಾಕ್ ಡ್ರಿಲ್(ಅಣುಕು ಪ್ರದರ್ಶನ)ಸಹ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಕೆನರಾ ಕಾಲೇಜಿನಲ್ಲಿ ನಡೆಯಿತು. ಚುನಾವಣಾ ಮಾಹಿತಿಯನ್ನು ಪಬ್ಲಿಕ್ ಎಡ್ರೆಸ್ ವ್ಯವಸ್ಥೆ ಮೂಲಕ (ಮೈಕ್ ) ಸಾರ್ವಜನಿಕರಿಗೆ ತಿಳಿಸಲಾಗುವುದೆಂದು ಅವರು ತಿಳಿಸಿದರು.
           ಮತ ಎಣಿಕಾ ಕೇಂದ್ರ ದಲ್ಲಿ ಮೊಬೈಲ್ ಫೋನ್ ಗಳ ಬಳಕೆಗೆ  ಚುನಾ ವಣಾ ಅಧಿ ಕಾರಿ ಗಳು,  ವೀಕ್ಷ ಕರು, ಜಿಲ್ಲಾ ಚುನಾ ವಣಾ ಅಧಿ ಕಾರಿ ಗಳಿಂದ ಅನು ಮತಿ ಪಡೆದ ವರಿಗೆ ಮಾತ್ರ ಅವ ಕಾಶ ವಿರು ತ್ತದೆ.
ಮಾದ್ಯಮ ಪ್ರತಿ ನಿಧಿಗಳು ಮೊಬೈಲ್ ಫೋನ್ ಗಳನ್ನು ಮಾದ್ಯಮ ಕೊಠಡಿ ಯಲ್ಲಿ ಮಾತ್ರ ಬಳಸ ಬಹುದಾ ಗಿದೆ. ಎಣಿಕಾ ಕೇಂದ್ರದ ಆವ ರಣ ಗಳಲ್ಲಿ ಯಾರೂ ಮೊಬೈಲ್ ಫೋನ್ ಗಳನ್ನು ಕೊಂಡೊ ಯ್ಯಬಾ ರದೆಂದು ಹಾಗೂ ಮೊಬೈಲ್ ಫೋನ್ ಗಳ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆಯೆಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ  ಹರ್ಷಗುಪ್ತ ಇವರು ತಿಳಿಸಿರುತ್ತಾರೆ.
ಎಣಿಕಾ ಕೇಂದ್ರದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಹಾಗೂ ಅವರ ಎಣಿಕಾ  ಒಬ್ಬ ಏಜೆಂಟ್ ಮಾತ್ರ  ಮೊಬೈಲ್  ಫೋನ್ನ್ನು  ಕೊಂಡೊಯ್ಯಲು ಅವಕಾಶವಿದ್ದು ಅವರು ಅವುಗಳ ಬಳಕೆಯನ್ನು ತಮಗೆ ಮೀಸಲಾದ ಕೊಠಡಿಯಲ್ಲಿ ಮಾತ್ರ ಮಾಡಬಹುದಾಗಿದೆ. ಅನಾವಶ್ಯಕವಾಗಿ ಎಣಿಕಾ ಕೇಂದ್ರದ ಅಂಗಳದಲ್ಲಿ( ಕಾರಿಡಾರ್) ಅತ್ತಿಂದತ್ತ ಓಡಾಡುವುದನ್ನು ಫೋನ್ನಲ್ಲಿ ಮಾತನಾಡುವುದನ್ನು ನಿಷೇಧಿಸಲಾಗಿದೆ.
ಚುನಾವಣಾ ಎಣಿಕೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಅಂದರೆ ಮತಯಂತ್ರವನ್ನು ಸ್ಟ್ರಾಂಗ್ ರೂಮಿನಿಂದ ಎಣಿಕಾ ಕೊಠಡಿಗೆ ಸಾಗಿಸುವುದು ಅದನ್ನು ತೆರೆಯುವುದು ಎಣಿಕೆ ಮಾಡುವುದು ಇನ್ನಿತರೆ ಎಲ್ಲಾ ಪ್ರಕ್ರಿಯೆಗಳನ್ನು ವಿಡಿಯೋ ಕ್ಯಾಮರಾ ಮೂಲಕ ದಾಖಲಿಸುವ ವ್ಯವಸ್ಥೆ ಮಾಡಲಾಗಿದೆ.
ಅಂಚೆ ಮತಪತ್ರಗಳ ಎಣಿಕೆಯ ಬಗ್ಗೆ ಚುನಾವಣಾಧಿಕಾರಿ ಸಹಾಯಕ ಚುನಾವಣಾಧಿಕಾರಿಗಳಿಗೆ ವಿಶೇಷ ತರಬೇತಿಯನ್ನು ನೀಡಲಾಗಿದ್ದು, ಅವರ ನಿರ್ಧಾರವೇ ಅಂತಿಮವಾಗಿರುತ್ತದೆಯೆಂದು ಜಿಲ್ಲಾ ಚುನಾವಣಾಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.
ನಿಷೇದಾಜ್ಞೆ ಜಾರಿ :
  ರಾಜ್ಯ ವಿಧಾನ ಸಭಾ ಚುನಾವಣೆ - 2013 ರಂದು ಮಂಗಳೂರು ನಗರದ ಕೊಡಿಯಾಲ್ ಬೈಲ್ ಕೆನರಾ ವಿದ್ಯಾಲಯದಲ್ಲಿ ನಡೆಯಲಿರುವ  ಮತ ಎಣಿಕೆ ನಂತರ ಫಲಿತಾಂಶದಲ್ಲಿ ವಿಜಯಿಯಾದ ಅಭ್ಯರ್ಥಿಗಳು ತಮ್ಮ ಬೆಂಬಲಿಗರೊಂದಿಗೆ ತಮ್ಮ ಕ್ಷೇತ್ರಗಳೆಡೆಗೆ ತಮ್ಮ ವಿಜಯೋತ್ಸವ ಆಚರಿಸುತ್ತಾ ಮೆರವಣಿಗೆಯಲ್ಲಿ ತೆರಳುತ್ತಾರೆ.ಸಾರ್ವಜನಿಕ ಹಿತದೃಷ್ಟಿಯಿಂದ ವಿಜಯೋತ್ಸವ ಮೆರವಣಿಗೆಯನ್ನು ಪ್ರತಿಬಂಧಿಸುವ ಸಲುವಾಗಿ  ದಿನಾಂಕ 8-5-13 ರಂದು ಬೆಳಿಗ್ಗೆ 6.00 ಗಂಟೆಯಿಂದ ದಿನಾಂಕ 11-5-13 ರಂದು ಬೆಳಿಗ್ಗೆ 6.00 ಗಂಟೆಯ  ವರೆಗೆ ಯಾವುದೇ ಸಭೆ ಸಮಾರಂಭ ಮತ್ತು ಪ್ರತಿಭಟನಾ ಮೆರವಣಿಗೆಯನ್ನು ನಡೆಸದಂತೆ ನಿಷೇದಾಜ್ಞೆಯನ್ನು  ಪೋಲೀಸ್ ಆಯುಕ್ತರು ಹಾಗೂ ಎಡಿಷನಲ್ ಡಿಸ್ಟ್ರಿಕ್ಟ್ ಮೆಜಿಸ್ಟ್ರೇಟ್  ಮನೀಷ್ ಖರ್ಬಿಕರ್ ಘೋಷಿಸಿರುತ್ತಾರೆ.
 ವಾಹನ ಸಂಚಾರದಲ್ಲಿ ಬದಲಾವಣೆ:
ರಾಜ್ಯ ವಿಧಾನ ಸಭಾ ಚುನಾವಣೆ  -2013  ಮತ ಎಣಿಕೆದಿನಾಂಕ 8-5-13 ರಂದು ಬೆಳಿಗ್ಗೆ 7.00 ಗಂಟೆಯಿಂದ ಮಂಗಳೂರು ನಗರದ ಕೊಡಿಯಾಲ್ ಬೈಲ್ ಕೆನರಾ ವಿದ್ಯಾಲಯದಲ್ಲಿ ನಡೆಯಲಿದ್ದು, ಈ ಸಂದರ್ಭದಲ್ಲಿ ಮತ ಎಣಿಕಾ ಕೇಂದ್ರದ ಸುತ್ತಮುತ್ತ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಬದಲಿ ಸಂಚಾರ ವ್ಯವಸ್ಥೆಯನ್ನು ಮಾಡಿ ಪೋಲೀಸ್ ಆಯುಕ್ತರು ಆದೇಶಿಸಿರುತ್ತಾರೆ.ಜೈಲ್ ಜಂಕ್ಷನ್ ಕಡೆಯಿಂದ ಬೆಸೆಂಟ್ ಜಂಕ್ಷನ್ ಕಡೆಯಿಂದ, ಕೆನರಾ ಕಾಲೇಜು ಕಡೆಗೆ ಚುನಾವಣೆ ಅಧಿಕಾರಿಯವರ ಹಾಗೂ ಪೋಲೀಸ್ ಅಧಿಕಾರಿಗಳ ವಾಹನ ಹೊರತು ಪಡಿಸಿ ಇತರೆ ವಾಹನಗಳ ಪ್ರವೇಶ ನಿಷೇಧಿಸಿದೆ.
ಪಿವಿಎಸ್ ನಿಂದ ಬಳ್ಳಾಲ್ ಭಾಗ್ ತನಕ ರಸ್ತೆಯ ಎರಡೂ ಬದಿ ಯಲ್ಲಿ ಯಾವುದೇ ತೆರ ನಾದ ವಾಹನ ನಿಲು ಗಡೆ ಯನ್ನು ಕಡ್ಡಾಯ ವಾಗಿ ನಿಷೇ ಧಿಸಿದೆ. ಕಪು ಚಿನ್ ಪ್ರಾದ್ ಹಾಗೂ ಕ ರಂಗಲ್ ಪಾಡಿ ಕಡೆ ಯಿಂದ ಜೈಲು ಜಂಕ್ಷನ್ ಕಡೆಗೆ ಎಲ್ಲಾ ತೆರ ನಾದ ವಾಹನ ಸಂಚಾರ ನಿಷೇ ಧಿಸಿದೆ. ಜೈಲ್ ಜಂಕ್ಷನ್ ನಿಂದ ಕೋರಿರೊಟ್ಟಿ ಕ್ರಾಸ್ ರಸ್ತೆ ವಾಣಿಜ್ಯ ಕಟ್ಟಡ ಗಳ ಪಾರ್ಕಿಂ ಗ್ ಹೊರತು ಪಡಿಸಿ ರಸ್ತೆ ಯಲ್ಲಿ ಯಾವುದೇ ವಾಹನ ನಿಲು ಗಡೆಗೆ ಅವ ಕಾಶವಿ ರುವು ದಿಲ್ಲ. ಜೈಲು ಜಂಕ್ಷನ್ ನಿಂದ ವೆಟರ್ನರಿ ಜಂಕ್ಷನ್ ತನಕ ರಸ್ತೆಯ ಎಡಬದಿಯಲ್ಲಿ ಮಾತ್ರ ವಾಹನಗಳನ್ನು ರಸ್ತೆಗೆ ಸಮಾನಾಂತರವಾಗಿ ಪಾರ್ಕ್ ಮಾಡಬಹುದಾಗಿದೆ. ಈ ಆದೇಶದನ್ವಯ ಸದರಿ ರಸ್ತೆಯಲ್ಲಿ ವಾಹನ ಸಂಚಾರ ವ್ಯವಸ್ಥೆ ಬಗ್ಗೆ ಆವಶ್ಯವರುವ ಸೂಚನಾ ಫಲಕ ಅಳವಡಿಸಲು ಹಾಗೂ ಸಂಚಾರ ನಿಯಂತ್ರಣ ಸಿಬ್ಬಂದಿಗಳನ್ನು ನೇಮಕ ಗೊಳಿಸಲು ಸಹಾಯಕ ಪೋಲೀಸ್ ಆಯುಕ್ತರು ಅಧಿಕಾರವುಳ್ಳವರಾಗಿರುತ್ತಾರೆ. .

Monday, May 6, 2013

ದ.ಕ. ಮತ ಎಣಿಕೆಗೆ ಸಜ್ಜು: ಜಿಲ್ಲಾಧಿಕಾರಿ

ಮಂಗಳೂರು, ಮೇ 6: ದಕ್ಷಿಣ ಕನ್ನಡ  ಜಿಲ್ಲಾ 8 ವಿಧಾನಸಭೆಗಳ ಚುನಾವಣಾ ಫಲಿತಾಂಶ ಮೇ 8ರಂದು ನಡೆಸಲು ಜಿಲ್ಲಾಡಳಿತ ಸಜ್ಜಾಗಿದ್ದು ಅಂದು 11.30 ರ ಸುಮಾರಿಗೆ  ಫಲಿತಾಂಶ ಲಭ್ಯವಾಗಲಿದೆಎಂದು ದ.ಕ. ಜಿಲ್ಲಾಧಿಕಾರಿ ಹರ್ಷಗುಪ್ತಾ ಹೇಳಿದ್ದಾರೆ.
                 ಕೆನರಾ ಕಾಲೇ ಜಿನಲ್ಲಿ ಬೆಳಗ್ಗೆ 7  ಗಂಟೆಗೆ ಮತ ಎಣಿಕೆ ಪ್ರ ಕ್ರಿಯೆ ಆರಂಭ ಗೊಳ್ಳ ಲಿದ್ದು, ಪ್ರತಿ ಯೊಂದು ಕ್ಷೇತ್ರಕ್ಕೆ ತಲಾ ನಾಲ್ಕು ಟೇಬಲ್  ಗಳಲ್ಲಿ ಸುಪರ್ ವೈಸರ್, ಅಸಿಸ್ಟೆಂಟ್ ಹಾಗೂ ಮೈಕ್ರೋ ಒಬ್ಸರ್ವರ್ ನೇತೃತ್ವದಲ್ಲಿ  ಮತ ಎಣಿಕೆ ಕಾರ್ಯ ನಡೆಯಲಿದೆ. 15ರಿಂದ 17 ಸುತ್ತುಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಆರಂಭದಲ್ಲಿ ಅಂಚೆ ಮತಗಳ ಎಣಿಕೆ ನಡೆಯಲಿದೆ. ಒಟ್ಟಿನಲ್ಲಿ ಮಧ್ಯಾಹ್ನ 11.30ರಿಂದ 12 ಗಂಟೆಯ ವೇಳೆಗೆ ಮತ ಎಣಿಕೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ ಎಂದು ಅವರು ಹೇಳಿದರು.
ಮತ ಎಣಿಕೆ ಕೇಂದ್ರದೊಳಗೆ ಅಭ್ಯರ್ಥಿ ಹಾಗೂ ಅಭ್ಯರ್ಥಿಪರವಾಗಿ ಏಜೆಂಟ್ ಭೇಟಿ ನೀಡಲು ಅವಕಾಶವಿದ್ದು, ಮೊಬೈಲ್ ನಿಷೇಧಿಸಲಾಗಿದೆ ಎಂದು ಅವರು ಹೇಳಿದರು.
ದ.ಕ.: ಶೇ. 74.48 ಮತದಾನ:
ದ.ಕ. ಜಿಲ್ಲೆಯಲ್ಲಿ ಅಂಚೆ ಮತ ಸೇರಿದಂತೆ ಒಟ್ಟು ಶೇ. 74.48 ಮತದಾನವಾಗಿದೆ.  15,01,024 ಮತದಾರರಲ್ಲಿ 11,18,025 ಮಂದಿ ಮತ ಚಲಾಯಿಸಿದ್ದಾರೆ.
ಮತಚಲಾವಣೆಯಲ್ಲಿ ಮಹಿಳೆಯರು ಮುಂದು!
ದ.ಕ. ಜಿಲ್ಲೆಯ ಪ್ರಸಕ್ತ ವಿಧಾನಸಭಾ ಚುನಾವಣೆಯಲ್ಲಿ ಮತ ಚಲಾವಣೆಯಲ್ಲಿ ಮಹಿಳಾ ಮತದಾರರೇ ಮುಂದಿದ್ದಾರೆ. 7,43,463 ಪುರುಷ ಮತದಾರರಲ್ಲಿ 5,54,544  ಮಂದಿ ಮತ ಚಲಾಯಿಸಿದ್ದರೆ, 7,57,561 ಮಹಿಳಾ ಮತದಾರರಲ್ಲಿ 5,63,481 ಮಂದಿ ಮತ ಚಲಾಯಿಸಿದ್ದಾರೆ.
81 ನೋಟಾ ಮತ ಚಲಾವಣೆ:
ಯಾವುದೇ ಅಭ್ಯರ್ಥಿಗಳಿಗೆ ಮತ ಚಲಾಯಿಸಲು ಮನಸ್ಸಿಲ್ಲದೆ ನೋಟಾ ಮತ ಚಲಾಯಿಸಿದರ ಸಂಖ್ಯೆ ಜಿಲ್ಲೆಯಲ್ಲಿ ಒಟ್ಟು 81. ಮೂಡಬಿದ್ರೆಯ ಮತಗಟ್ಟೆ ಸಂಖ್ಯೆ 155ರಲ್ಲಿ ಶೇ. 41.05 ಮತದಾನದ ಮೂಲಕ ಅತೀ ಕಡಿಮೆ ಮತದಾನವಾಗಿದೆ. ಮಂಗಳೂರು ಕ್ಷೇತ್ರದ ರಾಣಿಪುರ ಮುನ್ನೂರು ಮತಗಟ್ಟೆ ಸಂಖ್ಯೆ 38 (ಎ)ಯಲ್ಲಿ ಅತೀ ಹೆಚ್ಚು ಶೇ. 95.23 ಮತದಾನವಾಗಿದೆ ಎಂದು ಹರ್ಷಗುಪ್ತಾ ತಿಳಿಸಿದರು.
ವೆಬ್ ಕಾಸ್ಟಿಂಗ್ ಯಶಸ್ವಿ:
ಮಂಗಳೂರಿನ 208 ಕಂಡೆ ಸೇರಿದಂತೆ ದ.ಕ. ಜಿಲ್ಲೆಯ 272 ಮತಗಟ್ಟೆಗಳಲ್ಲಿ ಪ್ರಥಮ ಬಾರಿಗೆ ಪ್ರಾಯೋಗಿಕವಾಗಿ ಜಿಲ್ಲೆಯ ವಿವಿಧ ಇಂಜನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಸಹಕಾರದಲ್ಲಿ ನಡೆಸಲಾದ ವೆಬ್ ಕಾಸ್ಟಿಂಗ್ ಯಶಸ್ವಿಯಾಗಿದೆ. ಕೆಲವೆಡೆ ವಿದ್ಯುಚ್ಛಕ್ತಿ ಕೈಕೊಟ್ಟು ಕೆಲ ಹೊತ್ತು ಈ ವ್ಯವಸ್ಥೆಗೆ ತಡೆಯಾಗಿದ್ದರೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಮತದಾರರಿಗೆ ಮತಗಟ್ಟೆಗಳಿಗೆ ತೆರಳಿ ಹಿಂತಿರುವ ನಿಟ್ಟಿನಲ್ಲಿ ಮಾಡಲಾದ ವಾಹನದ ವ್ಯವಸ್ಥೆಗೆ ನಿರೀಕ್ಷಿತ ಮಟ್ಟದಲ್ಲಿ ಯಶಸ್ವಿಯಾಗದಿದ್ದರೂ ಗ್ರಾಮಾಂತರ ಪ್ರದೇಶವಾದ ಸುಬ್ರಹ್ಮಣ್ಯ ಸೇರಿದಂತೆ ಹಲವು ಕಡೆಗಳಲ್ಲಿ ಮತದಾರರು ಈ ವ್ಯವಸ್ಥೆಯನ್ನು ಉಪಯೋಗಿಸಿಕೊಂಡಿದ್ದಾರೆ.
ಗ್ರಾಮಾಂತರ ಪ್ರದೇಶದಲ್ಲಿ ಸ್ವೀಪ್ ಯಶಸ್ವಿ:
ದ.ಕ. ಜಿಲ್ಲೆಯಲ್ಲಿ ಸ್ವೀಪ್ ಕಾರ್ಯಕ್ರಮ ಯಶಸ್ವಿಯಾಗಿಲ್ಲವಲ್ಲ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ನಗರ ಪ್ರದೇಶದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಸ್ವೀಪ್ ಕಾರ್ಯಕ್ರಮಕ್ಕೆ ಮನ್ನಣೆ ದೊರೆಯದಿದ್ದರೂ, ಗ್ರಾಮಾಂತರ ಪ್ರದೇಶಗಳಲ್ಲಿ ಈ ಕಾರ್ಯಕ್ರಮ ಸಾಕಷ್ಟು ಪರಿಣಾಮ ಬೀರಿದ್ದು, ಯಶಸ್ವಿಯಾಗಿದೆ ಎಂದು ಹೇಳಿದರು.
ಸ್ವೀಪ್ ಕಾರ್ಯಕ್ರಮಕ್ಕೆ ಕ್ಷೇತ್ರವೊಂದಕ್ಕೆ ತಲಾ 2.50 ಲಕ್ಷ ರೂ.ಗಳನ್ನು ಸರಕಾರ ನಿಗದಿಪಡಿಸಿತ್ತು. ಇದರಲ್ಲಿ 1.25 ಲಕ್ಷ ರೂ.ಗಳನ್ನು ಆಯಾ ಕ್ಷೇತ್ರದ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸಿದ ಬಿಎಲ್ಒಗಳಿಗೆ ಪ್ರೋತ್ಸಾಹ ಧನವಾಗಿ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಹರ್ಷಗುಪ್ತ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ದಯಾನಂದ, ಮಹಾನಗರ ಪಾಲಿಕೆ ಆಯುಕ್ತ ಹರೀಶ್ ಕುಮಾರ್ ಉಪಸ್ಥಿತರಿದ್ದರು.

ಮಂಗಳೂರು ನಗರ ಕೆನರಾ ಕಾಲೇಜಿನಲ್ಲಿ ಮತ ಎಣಿಕೆ


ಮಂಗಳೂರು,ಮೇ.06:- ದಕ್ಷಿಣಕನ್ನಡ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ ಕಾರ್ಯವು ನಗರದ ಕೊಡಿಯಾಲ್ ಬೈಲ್ ನಲ್ಲಿರುವ ಕೆನರಾ ಪದವಿ ಪೂರ್ವ ಮತ್ತು ಕೆನರಾ ಪದವಿ ಕಾಲೇಜಿನಲ್ಲಿ ಮೇ 8ರಂದು ಬೆಳಿಗ್ಗೆ 8.00 ಗಂಟೆಗೆ ಆರಂಭವಾಗಲಿದೆ.
ಕೆನರಾ ಪದವಿ ಪೂರ್ವ ಕಾಲೇಜಿ ನಲ್ಲಿ ಬೆಳ್ತಂ ಗಡಿ,ಮೂಡ ಬಿದ್ರಿ, ಮಂಗ ಳೂರು ನಗರ ದಕ್ಷಿಣ,ಮಂಗ ಳೂರು ನಗರ ಉತ್ತರ,ಮಂಗ ಳೂರು ಹಾಗೂ ಬಂಟ್ವಾಳ ಕ್ಷೇತ್ರಗಳ ಮತಗಳ ಎಣಿಕೆ ಕಾರ್ಯ ನಡೆಯಲಿದೆ.  ಪುತ್ತೂರು ಮತ್ತು ಸುಳ್ಯ ಕ್ಷೇತ್ರ ಗಳ ಮತಗಳ ಎಣಿಕೆ ಕಾರ್ಯ ಕೆನರಾ ಪದವಿ ಕಾಲೇಜಿ ನಲ್ಲಿ ನಡೆಯ ಲಿದೆ.
ಪ್ರತೀ ಕ್ಷೇತ್ರಕ್ಕೂ 14 ಮೇಜು ಗಳಿದ್ದು ಒಂದೊಂದು ಮೇಜಿಗೆ ಒಬ್ಬರು ಸೂಪರ್ ವೈಸರ್, ಒಬ್ಬರು ಎಣಿಕೆ ಸಹಾಯಕರು,ಒಬ್ಬರು ಮೈಕ್ರೋ ವೀಕ್ಷಕ ಹಾಗೂ ಡಿ ಗ್ರೂಪ್ ನೌಕರರನ್ನು ನಿಯೋಜಿಸಲಾಗಿದೆ.ಒಟ್ಟು 132 ಸೂಪರ್ ವೈಸರ್ ಗಳು,131 ಎಣಿಕಾ ಸಹಾಯಕರು ,121 ಡಿ  ಗ್ರೂಪ್ ನೌಕರರು ಹಾಗೂ 129 ಮೈಕ್ರೋ ವೀಕ್ಷಕರು ಸೇರಿದಂತೆ 513 ಸಿಬ್ಬಂದಿಗಳು ಎಣಿಕೆ ಕಾರ್ಯದಲ್ಲಿ ಭಾಗವಹಿಸುವರು. ಇವರಲ್ಲದೆ 82 ಸಿಬ್ಬಂದಿಗೆ ಭದ್ರತಾ ಕೊಠಡಿ ಸೀಲಿಂಗ್ ಜವಾಬ್ದಾರಿ,ಅನ್ಯ ಕೆಲಸ ಕಾರ್ಯಗಳಿಗೆ 23,ಟ್ಯಾಬುಲೇಶನ್ 30 ಸೇರಿದಂತೆ ಒಟ್ಟಿಗೆ ಸುಮಾರು 820 ಸಿಬ್ಬಂದಿಯನ್ನು ಮತಗಳ ಎಣಿಕಾ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹರ್ಷಗುಪ್ತಾ ತಿಳಿಸಿದ್ದಾರೆ.
 (ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮತ ಎಣಿಕಾ ಕಾರ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿಗಳಿಗೆ ಕೊನೇ ಕ್ಷಣದ ತರಬೇತಿಯನ್ನು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಾದ ಹರ್ಷಗುಪ್ತಾ ,ಅಪರ ಜಿಲ್ಲಾಧಿಕಾರಿಗಳಾದ ದಯಾನಂದ ಮತ್ತು ಮಹಾನಗರಪಾಲಿಕೆಯ ಆಯುಕ್ತರಾದ  ಹರೀಶ್ ಕುಮಾರ್  ನಡೆಸಿಕೊಟ್ಟರು)ದಕ್ಷಿಣಕನ್ನಡ ಜಿಲ್ಲೆಯ 1.43 ಲಕ್ಷ ಅಧಿಕ ಮತದಾರರಿಂದ ಮತದಾನ

ಮಂಗಳೂರು,ಮೇ.06 :- ದಕ್ಷಿಣಕನ್ನಡ ಜಿಲ್ಲೆಯಲ್ಲಿ ರಾಜ್ಯ ವಿಧಾನಸಭೆಗೆ ಮೇ 5 ರಂದು ನಡೆದ ಸಾರ್ವತ್ರಿಕ ಚುನಾವಣೆಯು ಅತ್ಯಂತ ಸುವ್ಯವಸ್ಥಿತವಾಗಿ ಹಾಗೂ ಶಾಂತಿಯುತವಾಗಿ ನಡೆದಿದ್ದು, ಮತದಾರರು ಮತದಾನದ ಹಕ್ಕನ್ನು ಗೌರವಿಸಿದ್ದಾರೆ. ಕಳೆದ ಸಾಲಿನಲ್ಲಿ ಒಟ್ಟು 9,74,288 ಮತದಾರರು ತಮ್ಮ ಹಕ್ಕನ್ನು ಚಲಾಯಿಸಿದ್ದರೆ ಪ್ರಸಕ್ತ ಸಾಲಿನಲ್ಲಿ 11,18,025 ಜನರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.
ಜಿಲ್ಲೆಯಲ್ಲಿ ಕಳೆದ ಸಾಲಿಗಿಂತ ಈ ಸಾಲಿನಲ್ಲಿ ಒಟ್ಟು 1,43,737 ಅಧಿಕ ಮತದಾರರು ಮತ ಚಲಾಯಿಸುವ ಮೂಲಕ ಅತ್ಯಂತ ಪ್ರಶಂಸನೀಯ ಮತದಾನವಾಗಿದೆ.  ಪ್ರಥಮ ಹಂತದಲ್ಲಿ 62,000 ಅರ್ಜಿಗಳನ್ನು ಸ್ವೀಕರಿಸಿ ನೋಂದಾಯಿಸಲಾಗಿದ್ದು,ಜನರು ತಮ್ಮ ಹಕ್ಕಿನ ಬಗ್ಗೆ ಹೆಚ್ಚು ಜಾಗ್ರತರಾಗಿದ್ದಾರೆ. ನೈತಿಕ ಮತದಾನಕ್ಕೆ ಪ್ರಾಶಸ್ತ್ಯದ ಜೊತೆಗೆ ಶಾಂತಿಯುತ ಮತದಾನ ಜಿಲ್ಲೆಯಲ್ಲಿ ದಾಖಲಾಗಿದೆ. ಜಿಲ್ಲೆಯಲ್ಲಿ 11,18,025 ಒಟ್ಟು ಮತ ಚಲಾವಣೆಯಾಗಿದ್ದು, ಇದು ಜಿಲ್ಲೆಯಲ್ಲಿ  ಸ್ವಿಪ್ ಕಾರ್ಯಕ್ರಮ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದ್ದು ಕಾರಣವಾಗಿದೆ.
ಕಳೆದ 2008ರ ವಿಧಾನಸಭಾ ಚುನಾವಣೆಯಲ್ಲಿ ಇದ್ದ  ಒಟ್ಟು 13,33,092 ಮತದಾರರ ಪೈಕಿ 9,79,288 ಮತದಾರರು ಮತ ಚಲಾಯಿಸಿದ್ದರೆ,ಈ ಬಾರಿ ಹೆಚ್ಚುವರಿಯಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾದ ಸುಮಾರು 56,000 ಮತದಾರರು ಸೇರಿದಂತೆ ಒಟ್ಟು ಮತದಾರರ ಸಂಖ್ಯೆ 15,01,024 ಆಗಿತ್ತು.
 ಕಳೆದ ಬಾರಿಗಿಂತ ಈ ಬಾರಿಯು 72,713 ಮಹಿಳಾ ಮತದಾರರು  ಮತ ಚಲಾಯಿಸುವ ಮೂಲಕ ದಾಖಲೆ ಮಾಡಿದ್ದಾರೆ. ಕಳೆದ ಬಾರಿ ಪುರುಷರು 4,83,520 ಮತದಾರರು ಮತ ಚಲಾಯಿಸಿದ್ದರೆ 2013 ಮೇ 5 ರಂದು ನಡೆದ ಚುನಾವಣೆಯಲ್ಲಿ 5,54,544 ಮತದಾರ ಪುರುಷರು ಮತ ಚಲಾಯಿಸಿದ್ದಾರೆ.
ಬೆಳ್ತಂಗಡಿ ಕ್ಷೇತ್ರದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ 1,28,577 ಮತದಾರರು ಮತ ಚಲಾಯಿಸಿದ್ದರೆ ಈ ಬಾರಿ 1,45,594  ಮತ ಚಲಾಯಿಸಿದ್ದಾರೆ.
ಮೂಡಬಿದ್ರೆ ಕ್ಷೇತ್ರದಲ್ಲಿ ಕಳೆದ ಬಾರಿ 1,10,531 ಮತದಾರರು ಮತ ಚಲಾಯಿಸಿದ್ದರೆ ಈ ಬಾರಿ 1,28,241 ಮತದಾರರು ಮತ ಚಲಾಯಿಸಿದ್ದಾರೆ.
ಮಂಗಳೂರು ನಗರ ಉತ್ತರ ಕ್ಷೇತ್ರದಲ್ಲಿ 2008 ರ ವಿಧಾನಸಭಾ ಚುನಾವಣೆಯಲ್ಲಿ 1,31,468 ಮತದಾರರು ಮತ ಚಲಾಯಿಸಿದ್ದರೆ, ಈ ಬಾರಿ 1,45,238 ಮತದಾರರು ಮತ ಚಲಾಯಿಸಿದ್ದಾರೆ. 
ಮಂಗಳೂರು ನಗರ ದಕ್ಷಿಣ  ಕ್ಷೇತ್ರದಲ್ಲಿ 2008 ರ ವಿಧಾನಸಭಾ ಚುನಾವಣೆಯಲ್ಲಿ 1,18,430 ಮತದಾರರು ಮತ ಚಲಾಯಿಸಿದ್ದರೆ, ಈ ಬಾರಿ 1,32,177 ಮತದಾರರು ಮತ ಚಲಾಯಿಸಿದ್ದಾರೆ. 
ಮಂಗಳೂರು  ಕ್ಷೇತ್ರದಲ್ಲಿ 2008 ರ ವಿಧಾನಸಭಾ ಚುನಾವಣೆಯಲ್ಲಿ 1,04,329 ಮತದಾರರು ಮತ ಚಲಾಯಿಸಿದ್ದರೆ, ಈ ಬಾರಿ 1,2
4,205 ಮತದಾರರು ಮತ ಚಲಾಯಿಸಿದ್ದಾರೆ. 
ಬಂಟ್ವಾಳ  ಕ್ಷೇತ್ರದಲ್ಲಿ 2008 ರ ವಿಧಾನಸಭಾ ಚುನಾವಣೆಯಲ್ಲಿ 1,34,853 ಮತದಾರರು ಮತ ಚಲಾಯಿಸಿದ್ದರೆ, ಈ ಬಾರಿ 1,55,750  ಮತದಾರರು ಮತ ಚಲಾಯಿಸಿದ್ದಾರೆ. 
ಪುತ್ತೂರು  ಕ್ಷೇತ್ರದಲ್ಲಿ 2008 ರ ವಿಧಾನಸಭಾ ಚುನಾವಣೆಯಲ್ಲಿ 1,22,941 ಮತದಾರರು ಮತ ಚಲಾಯಿಸಿದ್ದರೆ, ಈ ಬಾರಿ 1,41,746 ಮತದಾರರು ಮತ ಚಲಾಯಿಸಿದ್ದಾರೆ. 
ಸುಳ್ಯ  ಕ್ಷೇತ್ರದಲ್ಲಿ 2008 ರ ವಿಧಾನಸಭಾ ಚುನಾವಣೆಯಲ್ಲಿ 1,23,159 ಮತದಾರರು ಮತ ಚಲಾಯಿಸಿದ್ದರೆ, ಈ ಬಾರಿ 1,45,074 ಮತದಾರರು ಮತ ಚಲಾಯಿಸಿದ್ದಾರೆ. 
 ಜಿಲ್ಲೆಯಲ್ಲಿ ಸ್ವಿಪ್ ಕಾರ್ಯಕ್ರಮದಿಂದ ಹೆಚ್ಚು ಮತದಾರರು ಜಾಗೃತಿ ಹೊಂದಿ ಮತದಾನ ಮಾಡಿರುವುದು.

ವಿಧಾನಸಭಾ ಚುನಾವಣೆ-2013

ಮಂಗಳೂರು, ಮೇ.06: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ 5 ಭಾನುವಾರದಂದು ನಡೆದ ವಿಧಾನ ಸಭಾ ಚುನಾವಣೆಯ ಚಿತ್ರನೋಟ..Sunday, May 5, 2013

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶೇ. 72.38 ಮತದಾನ


ಮಂಗಳೂರು, ಮೇ.05: ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನ ಸಭಾ ಕ್ಷೇತ್ರಗಳಿಗೆ ಇಂದು ನಡೆದ ಚುನಾವಣೆಯು ಶಾಂತಿಯುತವಾಗಿ ನಡೆದಿದ್ದು ಮತದಾರರು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಒಟ್ಟು ಶೇಕಡ 72.38 ಮತ ದಾನ ವಾಗಿದೆ. ಚುನಾ ವಣಾ ಆಯೋ ಗದ ನಿರ್ದೇ ಶನ ದಂತೆ ಮತ ದಾನದ ಅವಧಿ ಯನ್ನು ಒಂದು ಗಂಟೆ ವಿಸ್ತ ರಿಸ ಲಾಗಿತ್ತು. ಶಾಂತಿ ಯುತ ಮತ ದಾನಕ್ಕೆ ಗಡಿ ಭದ್ರತಾ ಪಡೆ ಯೋಧರು ಸೇರಿ ದಂತೆ ನೆರೆಯ ರಾಜ್ಯಗಳ ಪೋಲಿಸ ರನ್ನು ನಿಯೋ ಜಿಲಾ ಗಿತ್ತು. ವೆಬ್ ಕಾಸ್ಟ್ ಮೂಲಕ ಮತ ಗಟ್ಟೆ ಗಳಲ್ಲಿನ ಚುನಾ ವಣಾ ಪ್ರಕ್ರಿ ಯೆಗಳನ್ನು ಕಂಟ್ರೋ ಲ್  ರೂಂ ನಲ್ಲಿ ವೀಕ್ಷಿ ಸುವ ವಿಶೇಷ ವ್ಯವಸ್ಥೆ ಯನ್ನು ಜಿಲ್ಲಾಧಿ ಕಾರಿ ಗಳು ಮಾಡಿ ದ್ದರು. ಮತ ದಾನದ ಕ್ಷೇತ್ರ ವಾರು ವಿವರ: ಬೆಳ್ತಂಗಡಿ- ಶೇ.74.5, ಮೂಡಬಿದರೆ- ಶೇ.70, ಮಂಗಳೂರು ಉತ್ತರ - ಶೇ.67. ಮಂಗಳೂರು ದಕ್ಷಿಣ-ಶೇ.64, ಮಂಗಳೂರು-ಶೇ.73.6, ಬಂಟ್ವಾಳ-ಶೇ.78, ಪುತ್ತೂರು-ಶೇ.80, ಸುಳ್ಯ-ಶೇ.72. 

Saturday, May 4, 2013

ಜಿಲ್ಲೆಯಲ್ಲಿ 163 ಅತೀ ಸೂಕ್ಷ್ಮ ಮತಗಟ್ಟೆಗಳು


ಮಂಗಳೂರು,ಮೇ.4:-  ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮೇ 5 ರಂದು ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ 8 ವಿಧಾನಸಭಾ ಕ್ಷೇತ್ರಗಳಲ್ಲಿ 88 ಅಕ್ಷಿಲರಿ ಮತಗಟ್ಟೆಗಳು ಸೇರಿದಂತೆ ಒಟ್ಟು 1715 ಮತಗಟ್ಟೆಗಳು ಇರುತ್ತವೆ. ಇವುಗಳಲ್ಲಿ 325 ಸೂಕ್ಷ್ಮ ಮತಗಟ್ಟೆಗಳು 163 ಅತೀ ಸೂಕ್ಷ್ಮ ಮತಗಟ್ಟೆಗಳು ಹಾಗೂ 61 ಮತಗಟ್ಟೆಗಳು ನಕ್ಸಲ್ ಬಾಧಿತ ಪ್ರದೇಶದಲ್ಲಿ  ಇರುತ್ತವೆ. 1166 ಸಾಮಾನ್ಯ ಮತಗಟ್ಟೆಗಳಿದ್ದು ಎಲ್ಲಾ ಮತಗಟ್ಟೆಗಳಲ್ಲಿ ಜಿಲ್ಲಾಡಳಿತ ಮುಕ್ತ ಹಾಗೂ ನಿರ್ಭೀತ ಮತದಾನಕ್ಕೆ ಸರ್ವ ವ್ಯವಸ್ಥೆಯನ್ನು ಮಾಡಲಾಗಿದೆ.  ಮಂಗಳೂರು ನಗರದಲ್ಲಿ  ಅತೀ ಹೆಚ್ಚು ಅಂದರೆ 53 ಸೂಕ್ಷ್ಮ ಮತಗಟ್ಟೆಗಳು ಮತ್ತು 38 ಅತೀ ಸೂಕ್ಷ್ಮ ಮತಗಟ್ಟೆಗಳು ಇರುತ್ತವೆ.  ಅತೀ ಕಡಿಮೆ ಅಂದರೆ 28 ಸೂಕ್ಷ್ಮ ಮತಗಟ್ಟೆಗಳು ಮತ್ತು 7 ಅತೀ ಸೂಕ್ಷ್ಮ ಮತಗಟ್ಟೆಗಳು ಮೂಡಬಿದ್ರೆ ಕ್ಷೇತ್ರದಲ್ಲಿರುತ್ತವೆ.
 ಮತದಾನ ಅವಧಿ ಒಂದು ಗಂಟೆ ವಿಸ್ತರಣೆ
 ಭಾರತ ಚುನಾವಣಾ ಆಯೋಗವು ಮೇ 5 ರಂದು ಕರ್ನಾಟಕ ವಿಧಾನಸಭೆಗೆ ನಡೆಯುತ್ತಿರುವ ಸಾರ್ವತ್ರಿಕ ಚುನಾವಣಾ ವೇಳೆಯನ್ನು ಒಂದು ಗಂಟೆ ಕಾಲ ಹೆಚ್ಚುವರಿಯಾಗಿ ವಿಸ್ತರಿಸಿ ಆದೇಶ ಹೊರಡಿಸಿದೆ. ಈ ಆದೇಶದಂತೆ ಅಂದು ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 6 ಗಂಟೆ ವರೆಗೆ ಮತದಾನದ ಅವಧಿಯಾಗಿರುತ್ತದೆಯೆಂದು ಜಿಲ್ಲಾ ಚುನಾವಣಾಧಿಕಾರಿ/ಜಿಲ್ಲಾಧಿಕಾರಿ  ಹರ್ಷಗುಪ್ತ ಅವರು ತಿಳಿಸಿರುತ್ತಾರೆ.
 

ನಿರ್ಭೀತ ಮತದಾನಕ್ಕೆ ಸರ್ವ ಸಿದ್ಥತೆ: ಜಿಲ್ಲಾಧಿಕಾರಿ ಹರ್ಷಗುಪ್ತ


ಮಂಗಳೂರು, ಮೇ.04: ಕೇಂದ್ರಚುನಾವಣಾಆಯೋಗದ ನಿರ್ದೇಶನದಂತೆ ಜಿಲ್ಲಾಡಳಿತ ನಿರ್ಭೀತ ಮತ್ತು ಮುಕ್ತ ನ್ಯಾಯಯುತ ಮತದಾನಕ್ಕೆ ಜಿಲ್ಲಾಡಳಿತ ಸರ್ವಸನ್ನದ್ಧವಾಗಿದ್ದು, ರಾಜ್ಯಕ್ಕೆ ಮಾದರಿಯಾಗುವ ಹಲವು ವಿನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಚುನಾವಣೆಗೆ ಸಜ್ಜಾಗಿದೆಎಂದುಜಿಲ್ಲಾಚುನಾವಣಾಧಿಕಾರಿ ಹರ್ಷಗುಪ್ತ ಹೇಳಿದ್ದಾರೆ.
         ಚುನಾವಣೆಯಲ್ಲಿ ನಡೆಯುವ ಎಲ್ಲ ಅಕ್ರಮಗಳನ್ನು ನಿಯಂತ್ರಿಸಲಾಗಿದ್ದು, ಸುವ್ಯವಸ್ಥಿತ ಚುನಾವಣೆಗೆ ಸಮಗ್ರ ವ್ಯವಸ್ಥೆ ರೂಪಿಸಲಾಗಿದೆ. ಚುನಾವಣೆಯ ಬಗ್ಗೆ ಮತದಾರರಲ್ಲಿ ಜಾಗೃತಿ ಮೂಡಿಸಲು ಯಶಸ್ವಿಯಾಗಿ ಸ್ವೀಪ್ ಕಾರ್ಯಕ್ರಮ ನಿರ್ವಹಿಸಲಾಗಿದೆ.
ಮತದಾರರ ಹಿತವನ್ನು ಗಮನದಲ್ಲಿರಿಸಿ ಮತದಾನಕ್ಕೆ ಅನುಕೂಲ ವಾತಾವರಣ ಸೃಷ್ಟಿಸಲು ಅಗತ್ಯ ಪ್ರದೇಶಗಳಲ್ಲಿ ಬಸ್ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬ ಮತದಾರರನ್ನು ಮತಗಟ್ಟೆಗೆ  ತಲುಪಿಸಿ ಮತ ಚಲಾಯಿಸಿದ ನಂತರ ಪಿಕ್ಅಪ್ ಪಾಯಿಂಟ್  ಗೆ ತಲುಪಿಸಲು ಕನಿಷ್ಟ ಶುಲ್ಕ ರೂ.5/- ನ್ನು ವಸೂಲಿ ಮಾಡಲು ತೀರ್ಮಾನಿಸಲಾಗಿದೆ.

200 ಬೆಳ್ತಂಗಡಿ ವಿಧಾನಸಭಾ ಚುನಾವಣಾ ಕ್ಷೇತ್ರಕ್ಕೆ ರೂಟ್ ಸಂಖ್ಯೆ 34 ಆಗಿದ್ದು ಪಿಕ್ಅಪ್ ಪಾಯಿಂಟ್ ಗಳು 69 ಇರುತ್ತದೆ.
201 ಮೂಡಬಿದ್ರಿ ವಿಧಾನ ಸಭಾ ಚುನಾವಣಾ ಕ್ಷೇತ್ರಕ್ಕೆ ರೂಟ್ ಸಂಖ್ಯೆ 13 ಆಗಿದ್ದು ಪಿಕ್ಅಪ್ ಪಾಯಿಂಟ್ ಗಳು 19 ಇರುತ್ತದೆ.
202 ಮಂಗಳೂರು ನಗರಉತ್ತರ ವಿಧಾನಸಭಾ ಚುನಾವಣಾ ಕ್ಷೇತ್ರಕ್ಕೆ ರೂಟ್ ಸಂಖ್ಯೆ 24 ಆಗಿದ್ದು ಪಿಕ್ಅಪ್ ಪಾಯಿಂಟ್ ಗಳು 41 ಇರುತ್ತದೆ.
203 ಮಂಗಳೂರು ನಗರದಕ್ಷಿಣ ವಿಧಾನಸಭಾ ಚುನಾವಣಾ ಕ್ಷೇತ್ರಕ್ಕೆ ರೂಟ್ ಸಂಖ್ಯೆ 10 ಆಗಿದ್ದು ಪಿಕ್ಅಪ್ ಪಾಯಿಂಟ್ ಗಳು 14 ಇರುತ್ತದೆ.
204 ಮಂಗಳೂರು ವಿಧಾನಸಭಾ ಚುನಾವಣಾ ಕ್ಷೇತ್ರಕ್ಕೆ ರೂಟ್ ಸಂಖ್ಯೆ 37 ಆಗಿದ್ದು ಪಿಕ್ಅಪ್ ಪಾಯಿಂಟ್ ಗಳು 76 ಇರುತ್ತದೆ.
205 ಬಂಟ್ವಾಳ ವಿಧಾನಸಭಾ ಚುನಾವಣಾ ಕ್ಷೇತ್ರಕ್ಕೆ ರೂಟ್ ಸಂಖ್ಯೆ 23 ಆಗಿದ್ದು ಪಿಕ್ಅಪ್ ಪಾಯಿಂಟ್ ಗಳು 59 ಇರುತ್ತದೆ.
206 ಪುತ್ತೂರು ವಿಧಾನಸಭಾ ಚುನಾವಣಾ ಕ್ಷೇತ್ರಕ್ಕೆ ರೂಟ್ ಸಂಖ್ಯೆ 58 ಆಗಿದ್ದು ಪಿಕ್ಅಪ್ ಪಾಯಿಂಟ್ ಗಳು 202 ಇರುತ್ತದೆ.
207 ಸುಳ್ಯ ವಿಧಾನಸಭಾಚುನಾವಣಾಕ್ಷೇತ್ರಕ್ಕೆರೂಟ್ ಸಂಖ್ಯೆ 27 ಆಗಿದ್ದು ಪಿಕ್ಅಪ್ ಪಾಯಿಂಟ್ಗಳು 97 ಇರುತ್ತದೆ. ಮತದಾರರು ಪೂರ್ವಾಹ್ನ 7 ಗಂಟೆಯಿಂದ  ಮಧ್ಯಾಹ್ನ 3 ಗಂಟೆಯವರೆಗೆ ಈ ವ್ಯವಸ್ಥೆಯ ಸದುಪಯೋಗವನ್ನು ಪಡೆಯಬಹುದಾಗಿದೆ.
ವೆಬ್ ಕಾಸ್ಟಿಂಗ್:
ಈ ಚುನಾವಣೆಯಲ್ಲಿ ನೂತನವಾಗಿ ಜಿಲ್ಲೆಯ ವಿವಿಧ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳ ಸಹಕಾರದೊಂದಿಗೆ  ವೆಬ್ ಕಾಸ್ಟಿಂಗ್ ವ್ಯವಸ್ಥೆಯನ್ನು ಮಾಡಲಾಗಿದೆ. ಮತಗಟ್ಟೆ 203 ಮಂಗಳೂರು ನಗರದಕ್ಷಿಣ  ವಿಧಾನಸಭಾ ಕ್ಷೇತ್ರಗಳ ಎಲ್ಲ 208 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ವ್ಯವಸ್ಥೆ ಮಾಡಲಾಗಿದೆ, ಇಂತಹ ವ್ಯವಸ್ಥೆ ದೇಶದಲ್ಲೇ ಪ್ರಥಮ. ಬೆಳ್ತಂಗಡಿಯಲ್ಲಿ 30 ಮೂಡಬಿದ್ರೆಯಲ್ಲಿ 27, ಮಂಗಳೂರು ನಗರಉತ್ತರ 25, ಮಂಗಳೂರು ನಗರದಕ್ಷಿಣ 208, ಮಂಗಳೂರು 27, ಬಂಟ್ವಾ:ಳ 27 ಪುತ್ತೂರು 23 ಸುಳ್ಯ 35 ಒಟ್ಟು 402 ಮತಗಟ್ಟೆಗಳಲ್ಲಿ ವೆಬ್ ಕ್ಯಾಸ್ಟಿಂಗ್ ವ್ಯವಸ್ಥೆ ಅಳವಡಿಸಲಾಗಿದೆ.
ನಾವು ಮತದಾನ ಮಾಡುತ್ತೇವೆ -ನೀವು ಎಂಬ ಘೋಷ ವಾಕ್ಯ ಪಾಲಿಸಲು ಪೋಸ್ಟಲ್ ಬ್ಯಾಲೆಟ್,   ಅಂಚೆ ಮತಪತ್ರ ವಿತರಣೆಗೆ ಹೆಚ್ಚಿನಆದ್ಯತೆ ಮತ್ತು ತರಬೇತಿ ನೀಡಲಾಗಿದೆ ಎಂದ ಜಿಲ್ಲಾಧಿಕಾರಿ ಹರ್ಷಗುಪ್ತ ಅವರು, ಪ್ರಸಕ್ತ ಚುನಾವಣೆಯಲ್ಲಿ ಚುನಾವಣಾ ಕರ್ತವ್ಯ ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಯವರಿಗೆ 90 ಶೇಕಡಾಕ್ಕಿಂತಲೂಹೆಚ್ಚು ಮತದಾನ ದಾಖಲಿಸಲು ಅಂಚೆ ಮತ ಪತ್ರ ವಿತರಿಸುವ  ವ್ಯವಸ್ಥೆ ಮಾಡಲಾಗಿದೆ.
ಅದರಂತೆ ಜಿಲ್ಲೆಯಲ್ಲಿ 8209 ಮತಗಟ್ಟೆ ಸಿಬ್ಬಂದಿಯವರಿಗೆ 824 ಪೋಲೀಸ್ ಸಿಬ್ಬಂದಿಯವರಿಗೆ 520 ವಾಹನ ಚಾಲಕರಿಗೆಮತ್ತು ನಿರ್ವಾಹಕರಿಗೆಒಟ್ಟು 5907 ಅಂಚೆ ಮತಪತ್ರಗಳು ಮತಚಲಾವಣೆಯಿಂದ ಸ್ವೀಕೃತವಾಗಿರುತ್ತದೆ. ಇದಲ್ಲದೆ 1027 ಸೇವಾ ಮತದಾರರಿಗೆ ಅಂಚೆ ಮತಪತ್ರವನ್ನು ವೇಗ ಅಂಚೆ ಮೂಲಕ ಕಳುಹಿಸಿಕೊಡಲಾಗಿದೆ ಹಾಗೂ ಮೇಲ್ಕಾಣಿಸಿರುವಂತೆ ಕಳುಹಿಸಿ ಕೊಡಲಾದ ಅಂಚೆ ಮತಪತ್ರಗಳನ್ನು 8-5-13 ರಂದು ಪೂರ್ವಾಹ್ನ 8 ಗಂಟೆಯ ವರೆಗೆ ಸ್ವೀಕರಿಸಲು ಅವಕಾಶವಿರುತ್ತದೆ.ಅಲ್ಲದೆ ಪ್ರಿವೆಂಟಿವ್ಟೆನ್ಶನ್ಅಡಿಯಲ್ಲಿ ಜಿಲ್ಲೆಯ  ಉಪ ಕಾರಾ ಗೃಹದಲ್ಲಿರುವ ಯಾವುದೇ ಅಪಾದಿತರು ಅಂಚೆ ಮತ ಪತ್ರ ಬೇಡಿಕೆ ಸಲ್ಲಿಸಿರುವುದಿಲ್ಲ.
 ಮತಗಟ್ಟೆಗಳ ಭದ್ರತಾ ವ್ಯವಸ್ಥೆ:ಜಿಲ್ಲೆಯಲ್ಲಿ 967 ಕಟ್ಟಡಗಳಲ್ಲಿರುವ 1715 ಮತಗಟ್ಟೆಗಳಲ್ಲಿ 1180 ಸಿಪಿಎಫ್ ಕಮಾಂಡೋಗಳನ್ನು ಮತ್ತು 1475 ಕರ್ನಾಟಕ ಪೋಲೀಸರನ್ನು  ನಿಯೋಜಿಸಲಾಗಿದೆಯಲ್ಲದೆ, 402 ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್  257 ಮತಗಟ್ಟೆಗಳಿಗೆ ಮೈಕ್ರೋ ವೀಕ್ಷಕರನ್ನು ನಿಯೋಜಿಸಲಾಗಿದೆ.
ಚುನಾವಣಾ ದೂರುಗಳು: 1077ರಲ್ಲಿ 173 ದೂರುಗಳು ದಾಖಲಾಗಿವೆ. ಅಲ್ಲದೆ ಅಬಕಾರಿ ಇಲಾಖೆಯಲ್ಲಿ ಒಟ್ಟು 338 ದೂರುಗಳು ಸ್ವೀಕೃತವಾಗಿದ್ದು, 87 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. 50 ಮಂದಿ ಅಪಾದಿತರನ್ನು ದಸ್ತಗಿರಿ ಮಾಡಲಾಗಿದೆ.6 ವಾಹನ ಮುಟ್ಟುಗೋಲು ಹಾಕಲಾಗಿದೆ. 7,55,530 ಮೊತ್ತದ 299. 67 ಲೀಟರ್ ಮದ್ಯವನ್ನು ವಶವಪಡಿಸಿಕೊಳ್ಳಲಾಗಿದೆ.
ದಕ್ಷಿಣಕನ್ನಡಜಿಲ್ಲೆಯಒಟ್ಟು ಮತದಾರರು
ದಕ್ಷಿಣಕನ್ನಡಜಿಲ್ಲೆಯಲ್ಲಿ  1-5-13 ರಲ್ಲಿದ್ದಂತೆ  ಈ ಕೆಳಗಿನಂತೆ  ಪ್ರತೀ ವಿಧಾನಸಭಾಕ್ಷೇತ್ರದಲ್ಲಿ ಮತದಾರರಿರುತ್ತಾರೆ.
200 ಬೆಳ್ತಂಗಡಿ ವಿಧಾನಸಭಾಕ್ಷೇತ್ರದಲ್ಲಿರುವಒಟ್ಟು ಮತದಾರರಲ್ಲಿಗಂಡಸರು 98463, ಮಹಿಳೆಯರು 95260,ಒಟ್ಟು 193723 ಮತದಾರರಿರುತ್ತಾರೆ.
201 ಮೂಡಬಿದ್ರೆ ವಿಧಾನ ಸಭಾಕ್ಷೇತ್ರದಲ್ಲಿರುವಒಟ್ಟು ಮತದಾರರಲ್ಲಿಗಂಡಸರು 83075, ಮಹಿಳೆಯರು 90391 ಒಟ್ಟು 173466 ಮತದಾರರಿರುತ್ತಾರೆ.
202 ಮಂಗಳೂರು ನಗರಉತ್ತರ ವಿಧಾನ ಸಭಾಕ್ಷೇತ್ರದಲ್ಲಿರುವಒಟ್ಟು ಮತದಾರರಲ್ಲಿಗಂಡಸರು 99922, ಮಹಿಳೆಯರು 104371 ಒಟ್ಟು 204293 ಮತದಾರರಿರುತ್ತಾರೆ.
203 ಮಂಗಳೂರು ನಗರದಕ್ಷಿಣ ವಿಧಾನ ಸಭಾಕ್ಷೇತ್ರದಲ್ಲಿರುವಒಟ್ಟು ಮತದಾರರಲ್ಲಿಗಂಡಸರು 97984, ಮಹಿಳೆಯರು 106965 ಒಟ್ಟು 204949 ಮತದಾರರಿರುತ್ತಾರೆ.
204 ಮಂಗಳೂರು  ವಿಧಾನ ಸಭಾಕ್ಷೇತ್ರದಲ್ಲಿರುವಒಟ್ಟು ಮತದಾರರಲ್ಲಿಗಂಡಸರು 82873, ಮಹಿಳೆಯರು 85393ಒಟ್ಟು 168266 ಮತದಾರರಿರುತ್ತಾರೆಎಂದುಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
205 ಬಂಟ್ವಾಳ ವಿಧಾನ ಸಭಾಕ್ಷೇತ್ರದಲ್ಲಿರುವಒಟ್ಟು ಮತದಾರರಲ್ಲಿಗಂಡಸರು 98671, ಮಹಿಳೆಯರು 98295 ಒಟ್ಟು 196966 ಮತದಾರರಿರುತ್ತಾರೆ.
206 ಪುತ್ತೂರು  ವಿಧಾನ ಸಭಾಕ್ಷೇತ್ರದಲ್ಲಿರುವಒಟ್ಟು ಮತದಾರರಲ್ಲಿಗಂಡಸರು 91259, ಮಹಿಳೆಯರು 88183 ಒಟ್ಟು 179442 ಮತದಾರರಿರುತ್ತಾರೆ.
207 ಸುಳ್ಯ ವಿಧಾನ ಸಭಾಕ್ಷೇತ್ರದಲ್ಲಿರುವಒಟ್ಟು ಮತದಾರರಲ್ಲಿಗಂಡಸರು 91200, ಮಹಿಳೆಯರು 88719 ಒಟ್ಟು 179919 ಮತದಾರರಿರುತ್ತಾರೆ.
ದಕ್ಷಿಣಕನ್ನಡಜಿಲ್ಲೆಯಎಲ್ಲಾಒಟ್ಟು 8 ವಿಧಾನಸಭಾ ಕ್ಷೇತ್ರಗಳಲ್ಲಿರುವ ಮತದಾರರಲ್ಲಿಗಂಡಸರು 743447 ಮಹಿಳೆಯರು 757577 ಮತ್ತುಒಟ್ಟು 1501024 ಮತದಾರರಿರುತ್ತಾರೆ.

 

'ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮತ್ತು ಮತದಾರನೇ ಸಾರ್ವಭೌಮ'

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮತದಾನ ಮತ್ತು ಮತದಾರನೇ  ಸಾರ್ವಭೌಮ. ಜನರಿಂದ, ಜನರಿಗಾಗಿ ಮತ್ತು ಜನರಿಗೋಸ್ಕರ ಇರುವ ವ್ಯವಸ್ಥೆಯಲ್ಲಿ ಮತದಾನ ಪ್ರತಿಯೊಬ್ಬ ಪ್ರಜೆಯ ಹಕ್ಕೂ ಹೌದು ಕರ್ತವ್ಯವೂ ಹೌದು. ಈ ನಿಟ್ಟಿನಲ್ಲಿ ಮತದಾರರ ಭಾಗ ವಹಿ ಸುವಿ ಕೆಯನ್ನು  ಪ್ರೋತ್ಸಾ ಹಿಸಲು ಪ್ರಸಕ್ತ ಸಾಲಿನ  ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ-2013 ರ ವೇಳೆ ಚುನಾವಣಾ ಆಯೋಗ SVEEP (Systematic Voters Education and Electoral Participation) ಕಾರ್ಯಕ್ರಮದ ಮೂಲಕ ವಿಶೇಷ ಆದ್ಯತೆ ನೀಡಿದ್ದು ಮತದಾನದ ಬಗ್ಗೆ ಪ್ರತಿಯೊಬ್ಬರೂ ಮರುಚಿಂತನೆ ಮಾಡುವ ಪ್ರೇರಣೆಯನ್ನು ಹುಟ್ಟು ಹಾಕಿದೆ.
 ಚುನಾವಣಾ ಆಯೋಗದ ನಿರ್ದೇಶನದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು  ಮತ್ತು ಚುನಾವಣಾಧಿಕಾರಿಗಳಾದ ಹರ್ಷಗುಪ್ತರವರ ನೇತೃತ್ವದಲ್ಲಿ  ಜಿಲ್ಲಾ ಪಂಚಾಯತ್  ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಸ್ವೀಪ್ ಕಾರ್ಯಕ್ರಮದ ಅಧ್ಯಕ್ಷರಾದ ಡಾ| ಕೆ.ಎನ್ ವಿಜಯಪ್ರಕಾಶ್, ನಗರ ಪೊಲೀಸ್ ಆಯುಕ್ತರಾದ ಮನೀಶ್ ಕರ್ಬಿಕರ್ ಹಾಗೂ ಜಿಲ್ಲಾ ಪೋಲಿಸ್ ವರೀಷ್ಠಾಧಿಕಾರಿಗಳಾದ ಅಭಿಷೇಕ್ ಗೋಯಲ್ ಅವರ ಮಾರ್ಗದರ್ಶನದಲ್ಲಿ ಈ   ಬಾರಿಯ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವ ಮೂಲ ಉದ್ದೇಶದೊಂದಿಗೆ ಜಿಲ್ಲೆಯ ವಾತಾವರಣಕ್ಕೆ ಪೂರಕವಾಗಿ ಹಲವು ವಿಶೇಷ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಮೂಲಕ ಸ್ವೀಪ್ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ವಿಶೇಷವಾಗಿ ದೂರ ಹಾಗೂ ದುರ್ಗಮ ಪ್ರದೇಶದ ಜನಮನದಲ್ಲಿ ಪ್ರಸಾರಣಗೊಳ್ಳುವ ಪ್ರಯತ್ನವನ್ನು ಮಾಡಿದೆ.  ಈ ಎಲ್ಲಾ ಪ್ರಯತ್ನವನ್ನು ವಿವಿಧ ಮಾಧ್ಯಮಗಳ ಮೂಲಕ ತಲುಪುವ ವಿನೂತನ ಪ್ರಯತ್ನ ನಮ್ಮ ಜಿಲ್ಲೆಯಲ್ಲಿ ನಡೆದಿದೆ.  ಈ ಜಾಗೃತಿ ಪ್ರಕ್ರಿಯೆಗೆ ಗ್ರಾಮ ಮಟ್ಟದಲ್ಲಿ ಬಿಎಲ್ಒಗಳ ನೆರವು ಹಾಗೂ ಅವರಿಗೆ ಉತ್ತಮವಾಗಿ ಕರ್ತವ್ಯವನ್ನು ನಿರ್ವಹಿಸಿದ ಹಾಗೂ ಅತ್ಯಧಿಕ ಮತದಾನವಾದಲ್ಲಿ ಬಹುಮಾನ ನೀಡುವ ಯೋಜನೆಯನ್ನು ದ.ಕ ಜಿಲ್ಲಾಧಿಕಾರಿಯವರು ಪ್ರಕಟಿಸಿರುತ್ತಾರೆ. ಸ್ವೀಪ್ ಕಾರ್ಯಕ್ರಮವನ್ನು 3 ಹಂತಗಳಲ್ಲಿ ಅನುಷ್ಠಾನಗೊಳಿಸಿದೆ.ಪ್ರಥಮವಾಗಿ ಮತದಾರದ ನೋಂದಾವಣೆ ಆಂದೋಲನ, ನೈತಿಕ ಮತದಾನದ ಜಾಗೃತಿ ಆಂದೋಲನ, ಮೂರನೆಯದಾಗಿ ಸಂಪೂರ್ಣ ಮತದಾನದ ಬಗ್ಗೆ ಪ್ರೇರೇಪಣಾ ಆಂದೋಲನ.


 ಸ್ವೀಪ್ ಯೋಜನೆಯನ್ನು ದ.ಕ ಜಿಲ್ಲೆಯಲ್ಲಿ ಯಕ್ಷಗಾನ, ಮೈಮ್ ಶೋ, ಪಂಚಭಾಷಾ ಹಾಡು, ಮಾಸ್ಕಟ್(ಬಾಬಣ್ಣ), ಭಿತ್ತಿ ಚಿತ್ರಗಳು, ಕರ ಪತ್ರ, ಜಾಥಾ, ಬೈಕ್ ರಾಲಿ, ಮನೆ ಮನೆ ಭೇಟಿ, ಮಾನವ ಸರಪಳಿ, ಕಡಲ ಕಿನಾರೆಯಲ್ಲಿ ಗಾಳಿಪಟ ಹಾರಿಸುವುದರ ಮೂಲಕ ಮತ್ತು ಮತದಾನದ ಅರಿವಿನ ಬೆಳಕನ್ನು ಹಚ್ಚುವುದರ ಮೂಲಕ ಜಿಲ್ಲೆಯಾದ್ಯಂತ ಕರಾವಳಿಯ ತೀರ ಪ್ರದೇಶ, ದೂರ, ದುರ್ಗಮ, ನಗರ  ಹಾಗೂ ಗಡಿನಾಡು ಪ್ರದೇಶಗಳ ಉದ್ದಕ್ಕೂ   ಮತದಾರರಲ್ಲಿ ಮತದಾನದ ಜಾಗೃತಿಯ ಅರಿವಿನ ಭಾವನೆಯನ್ನು ಹುಟ್ಟು ಹಾಕುವ ಪ್ರಯತ್ನವನ್ನು ಜಿಲ್ಲಾಡಳಿತ ಎಲ್ಲಾ ಇಲಾಖೆಗಳ ಹಾಗೂ ಸಂಘಸಂಸ್ಥೆಗಳ ಸಹಕಾರದೊಂದಿಗೆ ಹಮ್ಮಿಕೊಂಡಿದೆ.

ಮೈಮ್ ಷೋ: ಮತದಾನದ ಬಗ್ಗೆ ಮತದಾರರನ್ನು ಆಕರ್ಷಿಸಲು  ಮೈಮ್ ಷೋ  ನಿರೂಪಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ವಿಶಿಷ್ಟ ಮೂಕಾಭಿನಯದ ಮೂಲಕ ಜಾಗೃತಿ ಮೂಡಿಸುವಲ್ಲಿ ವಹಿಸಿದ ಪಾತ್ರ ಗಮನೀಯ. ಈ ಪ್ರಯತ್ನವನ್ನು ಚುನಾವಣಾ ಆಯೋಗವೂ ಶ್ಲಾಘಿಸಿದೆ. ಭಾಷೆ, ಗಡಿಗಳ ವ್ಯಾಪ್ತಿಯಿಲ್ಲದೆ ಭಾವಾಭಿನಯ ಮತ್ತು ಅಂತಿಮವಾಗಿ ಅಕ್ಷರ ರೂಪದಲ್ಲಿ ನೀಡಿದ ನೈತಿಕ ಮತದಾನದ ಸಂದೇಶಗಳು  ಎಲ್ಲರ ಮೆಚ್ಚುಗೆ  ಹಾಗೂ ಗಮನವನ್ನು ಪಡೆಯಿತು. ಚುನಾವಣಾ ಆಯೋಗದ ಸ್ವೀಪ್ ಕಾರ್ಯಕ್ರಮದ  ವಿನೂತನ ಹಾಗೂ ವಿಶಿಷ್ಟ ಹೆಜ್ಜೆಗೆ ದಕ್ಷಿಣ ಕನ್ನಡ ಜಿಲ್ಲೆ ಮುನ್ನುಡಿಯನ್ನು  ಬರೆಯಿತು.

ಮಾಸ್ಕಟ್:-  ದಕ್ಷಿಣ ಕನ್ನಡ ಜಿಲ್ಲೆಯ ಇಂದಿನ ಮತ್ತು ಮುಂದಿನ ಎಲ್ಲಾ ಜಿಲ್ಲಾ ಕಾರ್ಯಕ್ರಮಗಳಿಗೆ  ಜಿಲ್ಲೆಯ  ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವೈಶಿಷ್ಟ್ಯಪೂರ್ಣ ಪಾತ್ರ (ಒಚಿಛಿಠಣ) ವನ್ನು 'ಬಾಬಣ್ಣ' ಎಂಬ ಹೆಸರಿನೊಂದಿಗೆ ನಮೂದಿಸಿ ಬಾಬಣ್ಣನ ಮುಖಾಂತರ ಮತದಾನ ಮತ್ತು ನೈತಿಕ ಮತದಾನದ ಸಂದೇಶವನ್ನು ಪ್ರಚುರಪಡಿಸುವ ಬಿತ್ತಿಚಿತ್ರ,ವಿಡಿಯೋ ಕಮರ್ಷಿಯಲ್ಸ್, ಬ್ಯಾನರ್ಗಳು ಇತ್ಯಾದಿಗಳನ್ನು ಜಿಲ್ಲೆಯಾದ್ಯಂತ ಎಲ್ಲಾ ಮಾಧ್ಯಮಗಳಲ್ಲಿ ಪ್ರಚುರ ಪಡಿಸಿರುವುದು ವಿಶೇಷವಾಗಿದೆ.

ಪಂಚಭಾಷಾ ಹಾಡು:- ಸಾರ್ವಜನಿಕ ಶಿಕ್ಷಣ ಇಲಾಖೆಯ ಪ್ರಯತ್ನದಲ್ಲಿ ರೂಪುಗೊಂಡ ಚುನಾವಣಾ ಜಾಗೃತಿ ಪ್ರತಿಧ್ವನಿಸುವ  ಪಂಚಭಾಷೆಯಲ್ಲಿ ರೂಪಿಸಿದ ಹಾಡುಗಳು ಜನಮನ ಸೂರೆಗೊಂಡವು. ಸ್ಥಳೀಯ ಭಾಷೆಗಳಾದ ಕನ್ನಡ,ತುಳು, ಬ್ಯಾರಿ,ಹಿಂದಿ ಮತ್ತು  ಕೊಂಕಣಿ ಭಾಷೆಗಳನ್ನೊಳಗೊಂಡಂತೆ ಬಂದ ಹಾಡುಗಳು ಎಲ್ಲರನ್ನೂ ಸೆಳೆಯಿತು. ಜಿಲ್ಲೆಯ ಎಲ್ಲಾ ಇಲಾಖೆಗಳೊಂದಿಗೆ ಸಮನ್ವಯ ಮತ್ತು ಸಂವಹನ ಸಾಧಿಸಿ ಎಲ್ಲೆಡೆಯೂ ಮತದಾನದ ಮಹತ್ವ ಸಾರುವ ಹಾಡನ್ನು ಹಾಡುವ, ಅರಿಯುವ ಹಾಗೂ ಮಾಹಿತಿಯನ್ನು ಹಂಚುವ ಮೂಲಕ ಈ ಹಾಡು ಮತದಾನದ ಜಾಗೃತಿ ಮೂಡಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದೆ. ಶಿಕ್ಷಣ ಇಲಾಖೆಯ  ಪ್ರಮುಖ ಚಟುವಟಿಕೆಗಳಾದ 'ಮೀನಮೇಳ' ಮತ್ತು 'ಸಮುದಾಯದತ್ತ ಶಾಲೆ' ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳ ಪೋಷಕರಿಗೆ ಮತದಾನದ ಜಾಗೃತಿಯನ್ನು ಮೂಡಿಸುವ ಪ್ರಯತ್ನಿಸಲಾಗಿದೆ. 

ಯಕ್ಷಗಾನ: ದಕ್ಷಿಣ ಕನ್ನಡ ಜಿಲ್ಲೆಯು ಯಕ್ಷಗಾನ ಕಲೆಯ ತವರೂರು.. ಜಿಲ್ಲೆಯ ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಯಕ್ಷಗಾನದ ಪ್ರದರ್ಶನವನ್ನು ನಗರದ ಮಾಲ್ಗಳಲ್ಲಿ ಆಯೋಜಿಸುವ ಮೂಲಕ ಮತದಾರರಲ್ಲಿ ಜಾಗೃತಿಯನ್ನು ಮೂಡಿಸುವ ಮುಂಚೂಣಿಯನ್ನು ಕಾಲೇಜು ವಿದ್ಯಾರ್ಥಿನಿಯರು ಮತ್ತು ವಿದ್ಯಾರ್ಥಿಗಳು  ವಹಿಸಿಕೊಂಡಿದ್ದರು .ಆ ಮೂಲಕ ಯುವ ಜನಾಂಗ ಹಾಗೂ ಇತರರಲ್ಲಿ ಮತದಾನ ಮಾಡುವ  ಪ್ರೇರಣೆಯನ್ನು ನೀಡಿದರು.  ಈ ಪ್ರದರ್ಶನದಲ್ಲಿ ರಾಜ್ಯದಲ್ಲಿ ಪರಿಣಾಮಕಾರಿ ಆಡಳಿತ ನೆಲೆಸಲು ನೈತಿಕ ಮತದಾನದ ಪ್ರಾಮುಖ್ಯತೆಯ ಸಂದೇಶದ ಪರಿಕಲ್ಪನೆಯನ್ನು  ಸಾರಲಾಯಿತು. ಈ ಯಕ್ಷಗಾನದ ಸಿಡಿಗಳನ್ನು ಸ್ಥಳೀಯ ಚಾನೆಲ್ ಗಳಲ್ಲಿ, ಸಾರಿಗೆ ಬಸ್ ಗಳಲ್ಲಿ, ಪ್ರಾಥಮಿಕ ಆರೋಗ್ಯಕೇಂದ್ರಗಳಲ್ಲಿ, ಶಿಕ್ಷಣ ಸಂಸ್ಥೆಗಳ ಮೂಲಕ ಮತದಾರರನ್ನು ತಲುಪುವ ಕ್ರಮ ಕೈಗೊಳ್ಳಲಾಯಿತು.
    
ಕಡಲ ಕಿನಾರೆಯಲ್ಲಿ ಜಾಗೃತಿ ವಿಹಾರ: ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ಪಣಂಬೂರು ಕಡಲತೀರ ಅಭಿವೃದ್ದಿ ನಿಗಮದ ಸಹಯೋಗದಲ್ಲಿ ಮಕ್ಕಳಲ್ಲಿ ಮತದಾನದ ಅರಿವು ಮೂಡಿಸುವ ಕಾರ್ಯಕ್ರಮ ಹಾಗೂ ಸುಮಾರು 2,000 ಜನ ಪ್ರವಾಸಿಗರ ಹಾಗೂ ಸ್ಥಳೀಯ ಜನರ ಗಮನವನ್ನು ಮತದಾನದ  ಜಾಗೃತಿಯ ಗಾಳಿಪಟವನ್ನು ಜಿಲ್ಲಾಧಿಕಾರಿಯವರು ಆಗಸದೆತ್ತರಕ್ಕೆ ಹಾರಿಸುವ  ಮೂಲಕ  ಆಕಷರ್ಿಸಲಾಯಿತು. ಕಾರ್ಯಕ್ರಮದ ಮಧ್ಯೆ ಮತದಾನದ ಅರಿವಿನ ಪಂಚಭಾಷಾ ಹಾಡನ್ನು ಬಿತ್ತರಿಸಲಾಯಿತು. ದಕ್ಕೆಯಲ್ಲಿ ಮೀನುಗಾರರನ್ನು ಪ್ರೇರೇಪಿಸಲು ಸಮುದ್ರದಲ್ಲಿ 5 ದಿನ 'ವಿ ವೋಟ್'ಎಂಬ  ಲಿಖಿತ ಘೋಷಣೆಯೊಂದಿಗೆ ಕ್ರೂಜ್ ಬೋಟ್ ಸಮುದ್ರದಲ್ಲಿ ವಿಹರಿಸಿ ಮೀನುಗಾರರಲ್ಲಿ ಮತದಾನದ ಜಾಗೃತಿಯನ್ನು ಮೂಡಿಸಿದೆ. ಹಾಗೂ ಕಾರ್ಯಕ್ರಮಕ್ಕೆ ಪೂರಕವಾಗಿ ಫುಡ್ ಫೆಸ್ಟಿವಲ್ನ್ನು ಸಹ ಆಯೋಜಿಸಲಾಯಿತು. 

 ತಾಲೂಕ್ ಪಂಚಾಯತ್ ಹಾಗೂ ಸಮಗ್ರ ಗಿರಿಜನ ಅಭಿವೃದ್ದಿ ಯೋಜನಾ ಇಲಾಖೆಯ  ಸಹಯೋಗದೊಂದಿಗೆ ಜಿಲ್ಲಾಡಳಿತ  ದೂರ ಹಾಗೂ ದುರ್ಗಮ ಪ್ರದೇಶಗಳು ಹಾಗೂ ಹಿಂದುಳಿದ ಪ್ರದೇಶಗಳಾದ ಮಧ್ಯ,ಗುತ್ತಕಾಡು, ಅನ್ನಾರ್, ನಾರಾವಿ, ಶಿರ್ಲಾಳು, ಕಲ್ಮಕಾರು, ಬಾಳಗೋಡು ಮತ್ತು ಕುರ್ಕುಂದ ಇತ್ಯಾದಿ  ಪ್ರದೇಶಗಳಿಗೆ ಇಲಾಖಾಧಿಕಾರಿಗಳು ಹಾಗೂ ವಿಶೇಷ ಸಾಂಸ್ಕೃತಿಕ ಕಲಾ ತಂಡಗಳಾದ ಗಿರಿಸಿರಿ ಮತ್ತು ಕೊರಲ್ಗಳ ಮೂಲಕ ಮತದಾನದ ಜಾಗೃತಿಯನ್ನು ಹಮ್ಮಿಕೊಳ್ಳಲಾಯಿತು. ಜನಶಿಕ್ಷಣ ಟ್ರಸ್ಟ್ ಮತ್ತು ಅಪ್ನಾದೇಶ್ ಮಾದರಿ ಗ್ರಾಮೀಣಭಿವೃದ್ಧಿ ಸಂಸ್ಥೆಯ ನೆರವನ್ನು ಪಡೆಯಲಾಗಿದೆ.  ಅವರಲ್ಲಿ ಜಾಗೃತಿ ಹಾಗೂ ಆತ್ಮ ವಿಶ್ವಾಸ ಮೂಡಿಸುವ ಕಾರ್ಯಕ್ರಮಗಳಾದವು. ಮಂಗಳೂರಿನ ಮಧ್ಯ, ಮುಡಿಪು,  ಬೆಳ್ತಂಗಡಿ ಅನ್ನಾರ್ಗಳಲ್ಲಿ ನಡೆದ ರ್ಯಾಲಿಯಲ್ಲಿ ಜನರು ಪಾಲ್ಗೊಂಡ ರೀತಿ ಪ್ರಜಾಪ್ರಭುತ್ವದ ಮೇಲೆ ಜನರಿಟ್ಟಿರುವ ನಂಬಿಕೆಗೆ ಸಾಕ್ಷಿಯಾಗಿತ್ತು.

ಯುವಜನತೆಗೆ   ಬೈಕ್ ರಾಲಿ, ಮಾಸ್ಕಟ್, ಮಾನವ ಸರಪಳಿ ಮತ್ತು  ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಮತದಾನದ ಪ್ರತಿಜ್ಞಾ ಸ್ವೀಕಾರ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಅಂತಿಮ ಹಂತದಲ್ಲಿ ಮತದಾನ ಮಾಡಿ ಎಂದು ಪ್ರೇರೇಪಿಸಲು ಎನ್ವೈಕೆ ಸಹಯೋಗದೊಂದಿಗೆ  ಮಂಗಳೂರು ವಿಶ್ವವಿದ್ಯಾನಿಲಯದ ಕಾಲೇಜು ಆವರಣದಲ್ಲಿ 365 ಮಣ್ಣಿನ ಹಣತೆ ದೀಪಗಳನ್ನು ಭಾರತ ದೇಶದ ನಕಾಶೆಯ ಮಾದರಿಯಲ್ಲಿ ಬೆಳಗಿಸಿ ನಿರಂತರವಾಗಿ ಚಾಲ್ತಿಯಲ್ಲಿರುವ ಅರಿವು ಮತ್ತು ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. 

ಜಿಲ್ಲೆಯಲ್ಲಿ ಪ್ಯಾರಾ ಸ್ಲೈಡರ್ ಹಾರಿಸುವ ಮೂಲಕ ಮತದಾನದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಗರ ಹಾಗೂ ಗ್ರಾಮಾಂತರ ಮಹಿಳೆಯರಿಗೆ ಯಕ್ಷಗಾನ,ಮೈಮ್ ಶೋ,ಹಾಡು, ಬಿತ್ತಿಪತ್ರ, ಬೀದಿನಾಟಕ, ಕರಪತ್ರ, ಸ್ರ್ತೀ ಶಕ್ತಿ ಗುಂಪುಗಳಿಗೆ ಮತದಾನದ ಪ್ರತಿಜ್ಞಾ ಸ್ವೀಕಾರ, ಜಾಥಾ ಹಾಗೂ ಮಾನವ ಸರಪಳಿಗಳ ಮುಂತಾದ ಕಾರ್ಯಕ್ರಗಳನ್ನು ವಿಶೇಷವಾಗಿ ಜಿಲ್ಲೆಯ 2102 ಅಂಗನವಾಡಿ ಕೇಂದ್ರಗಳಲ್ಲಿ ಅಂಗನವಾಡಿ ಸಹಾಯಕಿಯರು ಕಾರ್ಯಕರ್ತೆಯರು ಮೇಲ್ವಿಚಾರಕರ  ಮೂಲಕ ಜಿಲ್ಲಾಡಳಿತ ಮತದಾನದ ಜಾಗೃತಿಯನ್ನು ವ್ಯಾಪಕವಾಗಿ  ಮೂಡಿಸಲಾಗಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶಾ ಕಾರ್ಯಕರ್ತೆಯರು, ಹಿರಿಯ ಮತ್ತು ಕಿರಿಯ ಆರೋಗ್ಯ ಸಹಾಯಕರು, ಜಿಲ್ಲೆಯ ಎಲ್ಲಾ ವೈದ್ಯರುಗಳು ಮತದಾನದ ಜಾಗೃತಿ ಕಾರ್ಯಕ್ರಮವನ್ನು  ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿದರು.
ಕಾರ್ಮಿಕ ಇಲಾಖೆ,ಫ್ಯಾಕ್ಟರಿ ಹಾಗೂ ಬಾಯ್ಲರ್ ಇಲಾಖೆ ಮತ್ತು ಕೈಗಾರಿಕೆ ಇಲಾಖೆ ಸಮಗ್ರವಾಗಿ,  ಎಲ್ಲಾ ಸಂಘಟಿತ ಮತ್ತು ಅಸಂಘಟಿತ ಕಾರ್ಮಿಕರಿಗೆ ವೈಶಿಷ್ಟ್ಯ ಪೂರ್ಣ ಅರಿವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದರು.
ಸಾರಿಗೆ ಮತ್ತು ಕೆ.ಎಸ್.ಆರ್.ಟಿ.ಸಿ ಇಲಾಖೆಯ ಮೂಲಕ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಬಸ್ಸುಗಳಲ್ಲಿ ಮತದಾರ ಜಾಗೃತಿ ಭಿತ್ತಿ ಪತ್ರ, ಸಿಡಿಗಳ ಮೂಲಕ ವ್ಯಾಪಕವಾಗಿ ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಗ್ರಾಮ ಪಂಚಾಯತ್ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರ ಮತ್ತು ಸಮನ್ವಯ ಎಲ್ಲಾ ಇಲಾಖೆಗಳಲ್ಲಿ ಎಲ್ಲರ ಸಹಕಾರ ಹಾಗೂ ಸಮನ್ವಯದೊಂದಿಗೆ ಮತದಾನದ ಜಾಗೃತಿ ಮತ್ತು ಪ್ರತಿಜ್ಞಾ ಸ್ವೀಕಾರ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಿದೆ.

ಚುನಾವಣಾ ಆಯೋಗದಿಂದ ನೀಡಲಾದ  ಜಾಗೃತಿ ಕಾರ್ಯಕ್ರಮಗಳ ಜಾಹೀರಾತನ್ನು ಲೋಕಲ್ ಚಾನಲ್ಸ್ ಹಾಗೂ ಎಫ್ ಎಂ ಮೂಲಕ ಹಾಗೂ ಆಕಾಶವಾಣಿ ಮೂಲಕ ಜನಮಾನಸ ತಲುಪಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಯಿತು. ಜಿಲ್ಲೆಯಲ್ಲಿ ಸುಮಾರು 70000 ಅರ್ಜಿಗಳನ್ನು ಸ್ವೀಕರಿಸಲಾಗಿದೆ.

ನೈತಿಕ ಮತದಾನದ ಸಂದೇಶದೊಂದಿಗೆ ಸ್ವಯಂ ಪ್ರೇರಿತರಾಗಿ ಎಲ್ಲರೂ ಮತದಾನ ಮಾಡುವ  ಭಯಮುಕ್ತ, ಸುವ್ಯವಸ್ಥಿತ ವಾತಾವರಣವನ್ನು ಜಿಲ್ಲಾಡಳಿತ ನಿರ್ಮಿಸಿದೆ.  ಸುಗಮ, ಶಾಂತಿಯುತ ಮತದಾನದ ಪ್ರಕ್ರಿಯೆ ಜಿಲ್ಲಾಡಳಿತದ ಸಂಕಲ್ಪ.   

Friday, May 3, 2013

ಜಿಲ್ಲೆಯಾದ್ಯಂತ ಕಲಂ 144 ರನ್ವಯ ನಿಷೇದಾಜ್ಞೆ ಜಾರಿ -ಹರ್ಷಗುಪ್ತ


ಮಂಗಳೂರು,ಮೇ.03 :-ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಮೂಲಕ ಶಾಂತ ಮತ್ತು ಮುಕ್ತ ಮತದಾನಕ್ಕೆ ಅವಕಾಶ ಕಲ್ಪಿಸುವ  ದೃಷ್ಟಿಯಿಂದ ಸಿಆರ್ ಪಿಸಿ ಕಲಂ 144 ರನ್ವಯ ಪ್ರತಿಬಂಧಕಾಜ್ಞೆಯನ್ನು ಹೊರಡಿಸುವುದು ಆವಶ್ಯವೆಂದು ಪರಿಗಣಿಸಿ ದಿನಾಂಕ 03-5-13 ರ ಅಪರಾಹ್ನ 5.00 ಗಂಟೆಯಿಂದ ದಿನಾಂಕ 06-5-13 ರ ಪೂರ್ವಾಹ್ನ 6.00 ಗಂಟೆ ವರೆಗೆ ದಕ್ಷಿಣಕನ್ನಡ ಜಿಲ್ಲಾ ದಂಡಾಧಿಕಾರಿ ಹಾಗೂ  ಜಿಲ್ಲಾಧಿಕಾರಿಗಳಾದ  ಹರ್ಷಗುಪ್ತರವರು ನಿಷೇಧಾಜ್ಞೆಯನ್ನು ವಿಧಿಸಿ ಆದೇಶಿಸಿರುತ್ತಾರೆ.
           ಅದರಂತೆ ವಿಧಾನಸಭಾ ಚುನಾವಣೆ 2013 ಅಂಗವಾಗಿ ಯಾವುದೇ ಅಹಿತಕಾರಿ ಘಟನೆಗಳು ನಡೆಯದಂತೆ ಹಾಗೂ ಗುಂಪು ಗುಂಪಾಗಿ ರ್ಯಾಲಿ ಮೂಲಕ ಮತಯಾಚಿಸುವುದನ್ನು ತಡೆಯಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯಾದ್ಯಂತ ಮೇಲೆ ತಿಳಿಸಿದ ಅವಧಿಯಲ್ಲಿ ಸಾರ್ವಜನಿಕರು 5 ಅಥವಾ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆ,ಬೀದಿ,ಓಣೆ ಕೇರಿಗಳಲ್ಲಿ ಸಾರ್ವಜನಿಕ ಸ್ಥಳ,ಕಟ್ಟಡ ಮತ್ತು ಮತದಾನ ಕೇಂದ್ರಗಳ ಸುತ್ತಮುತ್ತ ಗುಂಪು ಸೇರುವುದನ್ನು ನಿಷೇಧಿಸಿದೆ. ಯಾವುದೇ ಆಯುಧ,ಕುಡುಗೋಲು, ಖಡ್ಗ, ಭರ್ಚಿ,ಮುಂತಾದ ಮಾರಕಾಯುಧಗಳನ್ನು ಹೊಂದುವುದನ್ನು ನಿಷೇಧಿಸಿದೆ. ಜಿಲ್ಲಾ ಚುನಾವಣಾಧಿಕಾರಿಯವರ ಪೂರ್ವಾನುಮತಿ ಪಡೆಯದೇ ಯಾವುದೇ ರೀತಿಯ ಮೆರವಣಿಗೆ, ಸಾರ್ವಜನಿಕ ಸಭೆ ಸಮಾರಂಭಗಳನ್ನು ನಡೆಸಬಾರದು.ಅಲ್ಲದೆ ಯಾವುದೇ ಕೂಗನ್ನು ಉಚ್ಚರಿಸುವುದು ಯಾ ಪದ ಹಾಡುವುದು, ಚೇಷ್ಟೆ ಮಾಡುವುದು, ಸಂಜ್ಞೆಗಳನ್ನು ಉಪಯೋಗಿಸುವುದು ಮತ್ತು ಚಿತ್ರಗಳ ಮೂಲಕ ಪ್ರಸಾರ ಮಾಡುವುದು,ಪ್ರಕಟಣಾ ಪತ್ರಿಕೆಗಳ ಯಾ ಇತರೆ ಯಾವುದೇ ವಸ್ತುಗಳ ಪ್ರದರ್ಶನ ಬಿತ್ತಿ ಪತ್ರಗಳನ್ನು ಅಂಟಿಸುವುದರಿಂದ ಸಭ್ಯತನ ಸದಾಚಾರ ಸಾರ್ವಜನಿಕ ಭದ್ರತೆ ಶಿಥಿಲಗೊಳ್ಳುವಂತಹ ಯಾವುದೇ ರೀತಿಯ ಅಪರಾಧ ಎಸಗುವರೇ ಪ್ರೇರೇಪಿಸುವ ಕ್ರಮವನ್ನು ನಿಷೇಧಿಸಿದೆ. ನಾಲ್ಕು ಅಥವಾ ಅದಕ್ಕಿಂತ ಕಡಿಮೆ ಜನರು ಮನೆಮನೆಗೆ ತೆರಳಿ ಮತಯಾಚನೆ ಮಾಡಲು ಯಾವುದೇ ನಿರ್ಬಂಧವಿರುವುದಿಲ್ಲ.
ಈ ಆದೇಶವು ಸರ್ಕಾರದಿಂದ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ ಸಭೆ ಸಮಾರಂಭಗಳಿಗೆ ಅಸನ್ವಯಿಸುವುದಿಲ್ಲ ಮತ್ತು ಅರಕ್ಷಕ ಸಿಬ್ಬಂದಿಗಳು ಕಾರ್ಯ ನಿರ್ವಹಣೆ ವೇಳೆ  ಲಾಠಿಗಳನ್ನು ಉಪಯೋಗಿಸುವುದಕ್ಕೆ ಅನ್ವಯಿಸುವುದಿಲ್ಲ ಹಾಗೂ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವ  ಸಿಬ್ಬಂದಿಗಳು ಅವರ ಚುನಾವಣಾ ಕರ್ತವ್ಯ ನಿರ್ವಹಿಸುವ ಸ್ಥಳಕ್ಕೆ ಅನ್ವಯಿಸುವುದಿಲ್ಲ ಎಂದು ದಕ್ಷಿಣಕನ್ನಡ ಜಿಲ್ಲಾ ದಂಡಾಧಿಕಾರಿ ಹರ್ಷಗುಪ್ತ ತಿಳಿಸಿದ್ದಾರೆ.
  ಚುನಾವಣಾ ಪೂರ್ವ ಸಮೀಕ್ಷೆಗಳು ಮೇ5 ರೊಳಗೆ ನಿಷೇಧ
  ಭಾರತೀಯ ಚುನಾವಣಾ ಆಯೋಗ ಪ್ರಜಾಪ್ರತಿನಿಧಿ ಕಾಯ್ದೆ 1951 ಸೆಕ್ಷನ್ 126ಎ ಹಾಗೂ ಉಪ ಸೆಕ್ಷನ್ (1) ಅನ್ವಯ ಯಾವುದೇ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ಮುದ್ರಣ/ದೃಶ್ಯ ಮಾಧ್ಯಮಗಳ ಮೂಲಕ ಪ್ರಕಟಿಸುವ ಬಗ್ಗೆ ಆದೇಶ ಹೊರಡಿಸಿ,ವಿಧಾನಸಭಾ ಚುನಾವಣೆಗಳು ಮೇ5 ರ ಬೆಳಿಗ್ಗೆ 7 ರಿಂದ ಸಂಜೆ 5.30 ರ ವರೆಗೆ ನಿಷೇಧಿಸಲಾಗಿದೆಯೆಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ  ತಿಳಿಸಿದ್ದಾರೆ.
 ಮತದಾನ  ಶಾಯಿ ಗುರುತು ಉಂಗುರ ಬೆರಳಿಗೆ
ಮೇ 5ರಂದು  ರಾಜ್ಯ ವಿಧಾನಸಭೆಗೆ ನಡೆಯಲಿರುವ ಚುನಾವಣೆಯಲ್ಲಿ ಮತದಾರರಿಗೆ ಎಡಗೈ ಉಂಗುರದ ಬೆರಳಿಗೆ ಅಳಿಸಲಾಗದ ಶಾಯಿ ಗುರುತನ್ನು ಮಾಡುವಂತೆ ಭಾರತ ಚುನಾವಣಾ ಆಯೋಗವು ಆದೇಶಿಸಿದೆ. ಕಳೆದ ಮಾರ್ಚ್ 2013 ರಲ್ಲಿ ನಡೆದ ಸ್ಥಳೀಯ ಸಂಸ್ಥೆ ಚುನಾವಣೆ ಸಂದರ್ಭದಲ್ಲಿ ಮತದಾರರ ಎಡಗೈ ತೋರು ಬೆರಳಿಗೆ ಅಳಿಸಲಾಗದ ಶಾಯಿ ಗುರುತನ್ನು ಹಾಕಲಾಗಿದ್ದು,ಅದರ ಗುರುತು ಇನ್ನು ಇರುವುದರಿಂದ ಚುನಾವಣಾ ಆಯೋಗವು ಈ ನಿರ್ಧಾರವನ್ನು ಕೈಗೊಂಡಿದೆ.
 ಮತದಾನಕ್ಕೆ ಈ ದಾಖಲೆಗಳಿರಲಿ
ಮತದಾರರು ಮತಪಟ್ಟಿಯಲ್ಲಿ ತಮ್ಮ ಹೆಸರನ್ನು ದೃಢಪಡಿಸಿಕೊಂಡು,ಮತದಾನ ಮಾಡುವ ಸಂದರ್ಭದಲ್ಲಿ ಅವರನ್ನು ಗುರುತಿಸಲು ಅವರು ನೀಡಬೇಕಾದ ಗುರುತಿನ ದಾಖಲೆಗಳನ್ನು ಭಾರತ ಚುನಾವಣಾ ಆಯೋಗವು ಮತದಾರರ ಭಾವಚಿತ್ರದ ಗುರುತಿನ ಚೀಟಿ ಅಥವಾ 23 ದಾಖಲೆಗಳ ಪೈಕಿ ಯಾವುದಾದರೊಂದನ್ನು ಹಾಜರುಪಡಿಸುವುದನ್ನು ಕಡ್ಡಾಯ ಮಾಡಿದೆ. ಮತಪತ್ರವನ್ನು ಮತದಾರರಿಗೆ ನೀಡುವ ಮುನ್ನ ಅವರು ತಮ್ಮ ಗುರುತನ್ನು ಸಾಬೀತು ಪಡಿಸತಕ್ಕದ್ದು.ಕುಟುಂಬದ ಮುಖ್ಯಸ್ಥರ ಹೆಸರಿನಲ್ಲಿ ನೀಡಲಾಗಿರುವ ಈ ಕೆಳಕಂಡ 23 ದಾಖಲೆಗಳ ಪೈಕಿ ಯಾವುದಾದರೊಂದು ದಾಖಲೆಯನ್ನು ಆ ಕುಟುಂಬದ ಇನ್ನಿತರ ಸದಸ್ಯರು ಗುರುತಿಗೆ ಬಳಸಬಹುದಾಗಿದೆ.
ಅಧಿಕೃತ ಫೊಟೋ ಹೊಂದಿರುವ ಮತದಾನ ಚೀಟಿ/ಪಾಸ್ ಪೋರ್ಟ್/ಡ್ರೈವಿಂಗ್ ಲೈಸನ್ಸ್/ಆದಾಯತೆರಿಗೆ ಗುರುತಿನ ಚೀಟಿ/ರಾಜ್ಯ:ಕೇಂದ್ರ ಸರ್ಕಾರ ಹಾಗೂ ಸಾರ್ವಜನಿಕ ಉದ್ದಿಮೆಗಳು ಅಥವಾ ಇತರೆ ಖಾಸಗಿ ಔದ್ಯಮಿಕ ಸಂಸ್ಥೆಗಳು ಅವರ ಕೆಲಸಗಾರರಿಗೆ ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು/ಸಾರ್ವಜನಿಕ ವಲಯದ ಬ್ಯಾಂಕ್/ಕಿಸಾನ್ ಮತ್ತು ಅಂಚೆ ಕಚೇರಿ ನೀಡಿರುವ ಭಾವಚಿತ್ರವಿರುವ ಪಾಸ್ ಪುಸ್ತಕ/31-3-13 ರೊಳಗೆ ಮಾನ್ಯತೆ ಪಡೆದ ನೋಂದಾಯಿತ ವಿದ್ಯಾ ಸಂಸ್ಥೆಗಳು ವಿದ್ಯಾಥರ್ಿಗಳಿಗೆ ಕೊಟ್ಟಿರುವ ಗುರುತಿನ ಚೀಟಿಗಳು/ಭಾವಚಿತ್ರವಿರುವ ನೋಂದಾಯಿತ ಡೀಡ್ ಗಳು/ಪಟ್ಟಾಗಳು ಮುಂತಾದ ಆಸ್ತಿ ದಾಖಲೆಗಳು/ಭಾವಚಿತ್ರವಿರುವ ಪಡಿತರ ಚೀಟಿಗಳು/ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಪಿಂಚಣಿ ಪಾವತಿ ಆದೇಶಗಳು ಅಥವಾ ಮಾಜಿ ಯೋಧರ ಪಿಂಚಣಿ ಪುಸ್ತಕ/ಪಿಂಚಣಿ ಸಂದಾಯ ಆದೇಶಗಳಂತಹ ಪಿಂಚಣಿ ದಾಖಲೆಗಳು,ವೃದ್ಧಾಪ್ಯ ವೇತನ ಆದೇಶಗಳು,ವಿಧವಾ ವೇತನ ಆದೇಶಗಳು/ಭಾವಚಿತ್ರವಿರುವ ಸ್ವಾತಂತ್ರ್ಯ ಯೋಧರ ಗುರುತಿನ ಚೀಟಿಗಳು/ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಶಸ್ತ್ರ ಪರವಾನಗಿ/ಅಂಗವಿಕಲರಿಗೆ ಸಕ್ಷಮ ಪ್ರಾಧಿಕಾರ ನೀಡಿರುವ ಭಾವಚಿತ್ರವಿರುವ ಗುರುತಿನ ಚೀಟಿಗಳು/ಮಾಜಿ ಯೋಧರ ಭಾವಚಿತ್ರವಿರುವ ಸಿ.ಎಸ್.ಡಿ ಕ್ಯಾಂಟೀನ್ ಕಾರ್ಡ್/ಸಂಧ್ಯಾ ಸುರಕ್ಷಾ ಯೋಜನೆಯ ಭಾವಚಿತ್ರವಿರುವ ಗುರುತಿನ ಚೀಟಿ/ಎನ್ಆರ್ಇಜಿ ಯೋಜನೆಯಡಿಯಲ್ಲಿ  ನೀಡಿರುವ ಭಾವಚಿತ್ರವಿರುವ ಉದ್ಯೋಗ ಕಾರ್ಡ್/ಭಾವಚಿತ್ರವಿರುವ ಯಶಸ್ವಿನಿ ಕಾರ್ಡ್/ಮಹಾನಗರಪಾಲಿಕೆ,ನಗರಸಭೆ,ಪುರಸಭೆ,ಗ್ರಾಮ ಪಂಚಾಯತಿಗಳು ಇತ್ಯಾದಿ ಸ್ಥಳೀಯ ಸಂಸ್ಥೆಗಳು  ನೀಡಿರುವ ಭಾವಚಿತ್ರವಿರುವ ಸೇವಾ ಗುರುತಿನ ಚೀಟಿಗಳು/ಸರ್ಕಾರಿ ಇಲಾಖೆ ನೀಡಿರುವ ಭಾವಚಿತ್ರವಿರುವ ಹಿರಿಯ ನಾಗರೀಕರ ಗುರುತಿನ ಚೀಟಿ/ಕರ್ನಾಟಕ ಸರ್ಕಾರದ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ನೀಡಿರುವ ಕುಟುಂಬದ ಸದಸ್ಯರ ಹೆಸರು ಮತ್ತು ವಯಸ್ಸು ಹಾಗೂ ಕುಟುಂಬದ ಯಜಮಾನನೊಂದಿಗೆ ಹೊಂದಿರುವ ಸದಸ್ಯರ ಸಂಬಂಧ ಒಳಗೊಂಡ ಭಾವಚಿತ್ರ ಇರುವ ತಾತ್ಕಾಲಿಕ/ಮೂಲ ಪಡಿತರ ಚೀಟಿ/ಆಧಾರ್ ಕಾರ್ಡ್,ಭಾವಚಿತ್ರವಿರುವ ಆರೋಗ್ಯ ವಿಮಾ ಯೋಜನೆಯ ಸ್ಮಾರ್ಟ್  ಕಾರ್ಡ್ ಗಳು ಸೂಕ್ತ ಪ್ರಾಧಿಕಾರ ಮಾರ್ಚ್ 2013ರೊಳಗೆ ನೀಡಿರುವ ಭಾವಚಿತ್ರ ಸಹಿತ ಎಸ್ಸಿ/ಎಸ್ಟಿ/ಒಬಿಸಿ/ದೃಢೀಕರಣ ಪತ್ರಗಳು ಮತದಾನ ಸಂದರ್ಭದಲ್ಲಿ ಗುರುತಿನ ದಾಖಲೆಗೆ ನೀಡಬಹುದಾಗಿದೆ. 

ದೇಶದ ಪ್ರಗತಿಗಾಗಿ ಮತದಾನದಲ್ಲಿ ಪಾಲ್ಗೊಳ್ಳಿ; ಯುವಜನತೆಗೆ ಜಿಲ್ಲಾಧಿಕಾರಿ ಕರೆ

ಮಂಗಳೂರು,ಮೇ.03:- ದೇಶದ ಎಲ್ಲಾ ಯುವಜನತಯೆ ಮತದಾನದಲ್ಲಿ ಖಡ್ಡಾಯವಾಗಿ ಭಾಗವಹಿಸಿ ಸೂಕ್ತ ವ್ಯಕ್ತಿಯನ್ನು ಚುನಾಯಿಸಿದಲ್ಲಿ ದೇಶದ ಪ್ರಗತಿ ಯ ದಕ್ಕೇ ಬದಲಾಗಲಿದೆ, ಆದ್ದರಿಂದ ಎಲ್ಲಾ ಯುವಪೀಳಿಗೆ ಮತದಾನದಲ್ಲಿ ಭಾಗವಹಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಚುನಾವಣಾಧಿಕಾರಿ ಮತ್ತು ಜಿಲ್ಲಾಧಿಕಾರಿ ಹರ್ಷಗುಪ್ತ ಅವರು ಯುವಜನತೆಗೆ ಕರೆನೀಡಿದ್ದಾರೆ.
     ಅವರು ಗುರು ವಾರ ಸಂಜೆ ಮಂಗ ಳೂರು ವಿಶ್ವ ವಿದ್ಯಾ ನಿಲಯ ಕಾಲೇ ಜಿನಲ್ಲಿ ನೆಹರು ಯುವ ಕೇಂದ್ರ, ಮಂಗ ಳೂರು, ಜಿಲ್ಲಾ ಆಡ ಳಿತ ಮತ್ತು ಜಿಲ್ಲಾ ಪಂಚಾ ಯತ್, ಮಂಗ ಳೂರು, ಲಯನ್ಸ ಕ್ಲಬ್,ಮಂಗಳೂರು ಹಾಗೂ ಅಸೊಸಿಯೇಷನ್ ಆಫ್ ಕನ್ಸಟ್ರಕ್ಷನ್ ಇಂಜಿನಿಯರ್ಸ್(ಇಂ)ಮಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಮತದಾರರ ಜಾಗೃತಿ ಕಾರ್ಯಕ್ರಮದ ಅಂಗವಾಗಿ ನಡೆದ ಕ್ಯಾಂಡಲ್ ಶೋ ಕಾರ್ಯಕ್ರಮವನ್ನು ದೀಪ ಬೆಳಗುವ ಮೂಲಕ ಉದ್ಘಾಟಿಸಿ ಮಾತನಾಡಿದರು.
     ಇಂದು ಸ್ವೀಪ್ ಕಾರ್ಯ ಕ್ರಮದ ಸಮಾ ರೋಪ ಸಮಾ ರಂಭ ಇಷ್ಟೋಂ ದು ಅರ್ಥ ಪೂರ್ಣ ವಾಗಿ ಜರು ಗುತ್ತಿ ರುವುದು ತುಂಬಾ ಶ್ಲಾಘ ನೀಯ ವಾಗಿದೆ ಎಂದು ಪ್ರಶಂಸಿಸಿದರು.
     ಸಮಾರಂಭದಲ್ಲಿ ಉಪಸ್ಥಿತರಿದ್ದ ದ.ಕ.ಜಿಲ್ಲಾಪಂಚಾಯತ್ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ|ಕೆ.ಎನ್.ವಿಜಯಪ್ರಕಾಶ್ ಅವರು ಮಾತನಾಡಿ ಮತದಾರರ ಜಾಗೃತಿ ಕಾರ್ಯಕ್ರಮ ಒಂದುದಿನದ ಕಾರ್ಯಕ್ರಮವಲ್ಲ ಬದಲಾಗಿ ನಿರಂತರವಾಗಿ ವರ್ಷಪೂರ್ತಿ ನಡೆಯುತ್ತಿರಬೇಕು ಅದಕ್ಕಾಗಿಯೇ ಭಾರತದ ಭೂಪಟದ ಸುತ್ತಲೂ 365 ನಂದಾದೀಪಗಳನ್ನು ಹಚ್ಚಲಾಗಿದೆ ಎಂದು ತಿಳಿಸಿದರು.
     ಸಮಾರಂಭದಲ್ಲಿ ಮಂಗಳೂರು ಮಹಾನಗರಪಾಲಿಕೆ ಆಯುಕ್ತರಾದ ಡಾ|ಹರೀಶ್ ಕುಮಾರ್ ಮುಂತಾದವರು ಹಾಜರಿದ್ದರು.

Thursday, May 2, 2013

ಸ್ವಯಂಪ್ರೇರಿತರಾಗಿ ಮತದಾನ ಮಾಡಿ: ಸಿಇಓ

ಮಂಗಳೂರು, ಮೇ.02 :ಮತದಾನ ನಮ್ಮ ಹಕ್ಕು ಹಾಗೂ ಕರ್ತವ್ಯ; ತಪ್ಪದೆ ಮತದಾನ ಮಾಡಿ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಹೇಳಿದರು.
ಅವರು ಬುಧ ವಾರ  ಸಂಜೆ ನಗ ರದ ಬಂದರು ಮೀನು ಗಾರಿಕಾ ದಕ್ಕೆ ಯಲ್ಲಿ ಮೀನು ಗಾರ ರನ್ನು ಗಮನ ದಲ್ಲಿ ರಿಸಿ ಆಯೋ ಜಿಸ ಲಾದ ಮತ ದಾರರ ಜಾಗೃತಿ ಮತ್ತು ಶಿಕ್ಷಣ ಕಾರ್ಯ ಕ್ರಮ ವನ್ನು ದ್ದೇಶಿಸಿ ಮಾತ ನಾಡು ತ್ತಿದ್ದರು.
ನೂರಾರು ಮೀನುಗಾರ ಬಂಧುಗಳು ಹಾಗೂ ಅವರ ಕುಟುಂಬದವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಮತದಾನ ಮಾಡುವ ಬಗ್ಗೆ ಹಾಗೂ ಇತರರಿಗೆ  ಮತದಾನ ಮಾಡುವಂತೆ ಮನವೊಲಿಸುವ ಪ್ರಮಾಣವಚನ ಬೋಧಿಸಲಾಯಿತು. ನಿನ್ನೆಯಿಂದ ಐದು ದಿನಗಳ ಕಾಲ 'ವೋಟ್ ಮಿ' ಎಂಬ ಸಂದೇಶದೊಂದಿಗೆ ದೋಣಿ ಸಮುದ್ರದಲ್ಲಿ ಸಂಚರಿಸಲಿದೆ.
ಮೀನು ಗಾರರ ಬದುಕೇ ಸವಾಲು ಗಳಿಂ ದೊಡ ಗೂಡಿದ ಸಾಹ ಸದ ಬದುಕು. ಮೀನು ಗಾರ ರೆಲ್ಲರೂ ನೈತಿಕ ಮತ ದಾನಕ್ಕೆ ಆದ್ಯತೆ ನೀಡಿ ಮೇ ಐದ ರಂದು ನಡೆ ಯಲಿ ರುವ ಮತ ದಾನ ಪ್ರ ಕ್ರಿಯೆ ಯಲ್ಲಿ ಪಾಲ್ಗೊಳ್ಳಿ ಎಂಬ ಸಂದೇಶ ನೀಡಿದರು.
ಸಭೆ ಯಲ್ಲಿ ಯತೀಶ್ ಬೈ ಕಂಪಾಡಿ, ಹರೀ ಶ್ಚಂದ್ರ ಪುತ್ರನ್, ಅಬ್ದುಲ್  ರೆಹ ಮಾನ್, ಯೂತ್ ಕ್ಲಬ್ ನ ಚೇತನ್ ಬೆಂಗ್ರೆ, ಮೀನು ಗಾರಿಕಾ ಇಲಾಖೆ ಉಪ ನಿರ್ದೇ ಶಕ ರಾದ ಸುರೇಶ್ ಕುಮಾರ್, ಸಹಾ ಯಕ ನಿರ್ದೇ ಶಕ ರಾದ ಪಾಶ್ರ್ವ ನಾಥ್ ಮುಂತಾದವರು ಭಾಗವಹಿಸಿದ್ದರು.

Wednesday, May 1, 2013

ಚುನಾವಣಾ ಸಂಬಂಧಿ ಮಾಹಿತಿಗೆ dk.nic.inವೆಬ್ ಸೈಟ್ ವೀಕ್ಷಿಸಿ

ಮಂಗಳೂರು, ಮೇ.1 : ಜಿಲ್ಲೆಯಲ್ಲಿ ನ್ಯಾಯ ಸಮ್ಮತ ಹಾಗೂ ಮುಕ್ತ ಚುನಾವಣೆಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕೈಗೊಂಡ ಕ್ರಮಗಳನ್ನು ಎಲ್ಲರೂ ವೀಕ್ಷಿಸಲು ಅನುಕೂಲವಾಗುವಂತೆ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ dk.nic.in ವೆಬ್ ಸೈಟ್ ರೂಪಿಸಲಾಗಿದೆ.
ಇದುವರೆಗೆ ಜಿಲ್ಲಾಡಳಿತದಿಂದ ಸಭೆ ಸಮಾರಂಭಗಳಿಗೆ ನೀಡಿದ ಅನುಮತಿ, ವಾಹನಗಳಿಗೆ ನೀಡಿದ ಅನುಮತಿ ಹಾಗೂ ಮಾಧ್ಯಮಗಳಿಗೆ ನೀಡಿದ ಅನುಮತಿ ಹಾಗೂ ಅಭ್ಯರ್ಥಿಗಳು ನೀಡಿರುವ ಖರ್ಚು ವೆಚ್ಚದ ಮಾಹಿತಿಯನ್ನು ಇಲ್ಲಿಂದ ಪಡೆಯಬಹುದಾಗಿದೆ.
ಎಲ್ಲ ಮಾಹಿತಿಗಳು ಎಲ್ಲರಿಗೂ ಲಭ್ಯವಾಗಬೇಕೆನ್ನುವ ಉದ್ದೇಶದಿಂದ ಜಿಲ್ಲಾ ಚುನಾವಣಾಧಿಕಾರಿಗಳು ರೂಪಿಸಿರುವ ಈ ವೆಬ್ ಸೈಟ್ ನಲ್ಲಿ ಸಮಗ್ರ ಮಾಹಿತಿಗಳಿವೆ. ಇದುವರೆಗೆ ಒಟ್ಟು 223 ವಾಹನಗಳಿಗೆ ಸಂಬಂಧಿಸಿದ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು ಅನುಮತಿ ನೀಡಲಾಗಿದೆ. ಸಭೆ ಸಮಾರಂಭಗಳಿಗೆ ಹಾಗೂ ರ್ಯಾಲಿಗಳಿಗೆ ಒಟ್ಟು 402 ಅರ್ಜಿಗಳು ಬಂದಿದ್ದು, ಅನುಮತಿಸಲಾಗಿದೆ.
ಪತ್ರಿಕೆ ಮತ್ತು ದೃಶ್ಯ ಮಾಧ್ಯಮಗಳಿಗೆ ಸಂಬಂಧಿಸಿದಂತೆ 210 ಅರ್ಜಿಗಳಿಗೆ ಅನುಮತಿ ನೀಡಲಾಗಿದೆ. ಪಾವತಿ ಸುದ್ದಿ ಮಾಹಿತಿಯು ಲಭ್ಯವಿದೆ. ಅಕೌಂಟ್ ರಿಜಿಸ್ಟರ್ ಆಫ್ ಕ್ಯಾಂಡಿಡೇಟ್ಸ್ನಡಿ ಕ್ಷೇತ್ರವಾರು ಪ್ರತೀ ಅಭ್ಯರ್ಥಿಗಳು ನೀಡಿದ ವಿವರ ಪಡೆಯಬಹುದೆಂದು ಜಿಲ್ಲಾ ಚುನಾವಣಾಧಿಕಾರಿ ಹರ್ಷಗುಪ್ತ ಅವರು ಹೇಳಿದ್ದಾರೆ.

ಮನೆ ಮನೆಗೆ ಬಿಎಲ್ ಓಗಳ ಮೂಲಕ ವೋಟರ್ ಸ್ಲಿಪ್ ವಿತರಣೆ: ಜಿಲ್ಲಾಧಿಕಾರಿ

ಮಂಗಳೂರು, ಮೇ.1 :  ಮೇ 5 ರಂದು ನಡೆಯಲಿರುವ  ರಾಜ್ಯ ವಿಧಾನಸಭಾ ಚುನಾವಣೆ 2013ರ ಚುನಾವಣೆಯಂದು ಅರ್ಹ ಮತದಾರರು ಮತದಾನ ಚಲಾಯಿಸಲು ಅನುಕೂಲವಾಗುವಂತೆ ಚುನಾವಣಾ ಆಯೋಗ ಮನೆ ಮನೆಗೆ ಬಿಎಲ್ ಓಗಳ ಮೂಲಕ ವೋಟರ್ ಸ್ಲಿಪ್ ವಿತರಿಸಲಿದ್ದು, ಈ ಸ್ಲಿಪ್ನ್ನು  ಗುರುತಿನ ಚೀಟಿಯಾಗಿ ಬಳಸಲು ಚುನಾವಣಾ ಆಯೋಗ ಅನುಮತಿ ನೀಡಿದೆ. ಬಿಎಲ್ಓಗಳು ನೀಡುವ ವೋಟರ್ ಸ್ಲಿಪ್ ಮಾತ್ರ ಅಧಿಕೃತವಾಗಿದ್ದು, ರಾಜಕೀಯ ಪಕ್ಷಗಳು ವಿತರಿಸುವ ವೋಟರ್ ಸ್ಲಿಪ್ನ್ನು ಗುರುತಿನ ಚೀಟಿಯಾಗಿ ಬಳಸಲು ಅವಕಾಶವಿಲ್ಲ ಎಂದು  ಜಿಲ್ಲಾಧಿಕಾರಿ ಹಾಗೂ ಚುನಾವಣಾ ಅಧಿಕಾರಿಯಾಗಿರುವ  ಹರ್ಷಗುಪ್ತ ಅವರು ಸ್ಪಷ್ಟಪಡಿಸಿದ್ದಾರೆ.
ಈಗಾಗಲೇ ಎಪ್ರಿಲ್ 30 ರಿಂದ  ವೋಟರ್ ಸ್ಲಿಪ್ ನ್ನು ಮನೆ ಮನೆಗೆ ವಿತರಿಸಲು ಬಿಎಲ್ಓಗಳು  ಆರಂಭಿಸಿದ್ದು, ಮೇ 3 ರೊಳಗೆ ಎಲ್ಲರ ಮನೆಗೂ ವೋಟರ್ ಸ್ಲಿಪ್ ತಲುಪಲಿದೆ. ವೋಟರ್ ಸ್ಲಿಪ್ ಸಿಗದಿದ್ದರೆ ಸಂಬಂಧಪಟ್ಟ ಬಿಎಲ್ಓಗಳನ್ನುಅರ್ಹಮತದಾರರು ತಕ್ಷಣವೇ ಸಂಪರ್ಕಿಸಬಹುದಾಗಿದೆ ಎಂದು  ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.