Saturday, March 31, 2012

ಎಸ್ ಎಸ್ ಎಲ್ ಸಿ ಪರೀಕ್ಷೆಗೆ 95 ಪರೀಕ್ಷಾ ಕೇಂದ್ರ

ಮಂಗಳೂರು,ಮಾರ್ಚ್.31:ಏಪ್ರಿಲ್ ಎರಡರಿ0ದ 16 ರವರೆಗೆ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಸಲು ದಕ್ಷಿಣ ಕನ್ನಡ ಜಿಲ್ಲೆಯ ವಿದ್ಯಾ0ಗ ಇಲಾಖೆ ಸ0ಪೂರ್ಣ ಸಜ್ಜಾಗಿದ್ದು ಪ್ರಸಕ್ತ ಸಾಲಿನಲ್ಲಿ ಒಟ್ಟು 33885 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ ಎಂದು ವಿದ್ಯಾಂಗ ಉಪನಿರ್ದೇಶಕರು ತಿಳಿಸಿದ್ದಾರೆ. ವಿದ್ಯಾರ್ಥಿಗಳಲ್ಲಿ 31453 (ಫ್ರೆಷರ್ಸ್), ಪುನರಾವರ್ತಿತ ಅಭ್ಯರ್ಥಿಗಳು 2432. ಇವರಲ್ಲಿ ಒಟ್ಟು 17486 ಗ0ಡು, 16399 ಹೆಣ್ಣುಮಕ್ಕಳುಪರೀಕ್ಷೆಬರೆಯಲಿರುವರು, ಜಿಲ್ಲೆಯಲ್ಲಿ ಒಟ್ಟು 95 ಪರೀಕ್ಷಾ ಕೇ0ದ್ರಗಳಿದ್ದು, ಬ0ಟ್ವಾಳ 15, ಬೆಳ್ತ0ಗಡಿ 10, ಮ0ಗಳೂರು ನಗರ 20, ಮ0ಗಳೂರು ತಾಲ್ಲೂಕು 25, ಮೂಡಬಿದ್ರೆ 4, ಪುತ್ತೂರು 15, ಸುಳ್ಯ 6 ಕೇ0ದ್ರಗಳಲ್ಲಿ ಪರೀಕ್ಷೆ ನಡೆಯಲಿರುವುದು.
ವಲಯದ ಪ್ರತಿ ಕೇ0ದ್ರಕ್ಕೆ ಒಬ್ಬರ0ತೆ ಪ್ರೌಡ ಶಾಲಾ ಮುಖ್ಯ ಶಿಕ್ಷಕರು/ಹಿರಿಯ ಸಹಾಯಕ ಶಿಕ್ಷಕರನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ನೇಮಕ ಮಾಡಿ ಸ್ಥಾನಿಕ ಜಾಗೃತ ದಳ ರಚಿಸಲಾಗಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆಗಳು ನಡೆದಿದ್ದು, ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವುದೇ ಗೊಂದಲ ಅಥವಾ ಸಮಸ್ಯೆಗಳಿಗೆ ಅವಕಾಶ ನೀಡದೆ ವಿದ್ಯಾರ್ಥಿ ಸ್ನೇಹಿ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ನಿರ್ಭೀತಿಯಿಂದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದಾಗಿದೆ. ಪರೀಕ್ಷಾ ಕೇಂದ್ರಕ್ಕೆ ಅರ್ಧಗಂಟೆ ಮೊದಲೇ ಆಗಮಿಸಲು ಸೂಚಿಸಲಾಗಿದೆ.
ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಮ0ಗಳೂರು ನಗರದ 6 ಸುಸಜ್ಜಿತವಾದ ಹಾಗೂ ಮೂಲಭೂತ ಸೌಕರ್ಯ ಹೊ0ದಿರುವ ಪ್ರೌಢಶಾಲೆಗಳಲ್ಲಿ ಮೌಲ್ಯಮಾಪನ ಕೇ0ದ್ರಗಳನ್ನು ರಚಿಸಲಾಗಿದೆ. ಜಿಲ್ಲಾ ಹ0ತದಲ್ಲಿ ಶಿಕ್ಷಣ ಇಲಾಖೆಯ ವತಿಯಿ0ದ ಪ್ರತ್ಯೇಕವಾಗಿ ಎರಡು ಜಾಗೃತ ದಳದ ರಚನೆ ಮಾಡಲಾಗಿದೆ ಎಂದು ವಿದ್ಯಾ0ಗ ಉಪನಿರ್ದೇಶಕರಾದ ಮೋಸೆಸ್ ಜಯಶೇಖರ್ ತಿಳಿಸಿರುತ್ತಾರೆ.

ಶ್ರೀಸಾಮಾನ್ಯನಿಗೆ 'ಸಕಾಲ' ದಿ0ದ ನೆಮ್ಮದಿ

ಮಂಗಳೂರು,ಮಾರ್ಚ್.31:ಕರ್ನಾಟಕ ಸರ್ಕಾರದ ಮಹತ್ವಾಕಾ0ಕ್ಷಿ ಯೋಜನೆ ಕರ್ನಾಟಕ ನಾಗರೀಕರಿಗೆ ಸೇವೆಗಳ ಖಾತರಿ ಅಧಿನಿಯಮ 2011 ರಿ0ದಾಗಿ ರಾಜ್ಯದ ಶ್ರೀಸಾಮಾನ್ಯ ಇನ್ನು ತನ್ನ ಕೆಲಸಕಾರ್ಯಗಳಿಗಾಗಿ ಸಮಯ, ಹಣವನ್ನು ಅನಾವಶ್ಯವಾಗಿ ವೆಚ್ಚ ಮಾಡದೆ ಸರ್ಕಾರಿ ಕಛೇರಿಗಳ ಕೆಲಸಗಳನ್ನು ಸಕಾಲ ನೆರವಿನಿ0ದ ಸೂಕ್ತ ಸಮಯದೊಳಗೆ ಪಡೆಯಬಹುದಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡಲು ಬೀದಿ ನಾಟಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರಾಜ್ಯ ವಾರ್ತಾ ಇಲಾಖೆ ವತಿಯಿ0ದ 'ಸಕಾಲ' ಕರ್ನಾಟಕ ನಾಗರೀಕ ಸೇವೆಗಳ ಅಧಿನಿಯಮ 2011 ರ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಬೀದಿ ನಾಟಕ ಪ್ರದರ್ಶನಕ್ಕೆ ಪುತ್ತೂರು ತಾಲ್ಲೂಕು ಕಬಕ ಗ್ರಾಮಪ0ಚಾಯತ್ ಅಧ್ಯಕ್ಷರಾದ ಕೆ ಶಾಬಾಹು ಮತ್ತು ನರಿಮೊಗರು ಗ್ರಾಮ ಪ0ಚಾಯತ್ ಅಧ್ಯಕ್ಷೆ ಶ್ರೀಮತಿ ನಳಿನಿ ಮು0ಡೋಡಿ ಶುಕ್ರವಾರದಂದು ಚಾಲನೆ ನೀಡಿದರು.ಉಪ್ಪಿನ0ಗಡಿ ಗ್ರಾಮ ಪ0ಚಾಯತ್ ಕಾರ್ಯ ದರ್ಶಿ ಜೆರಾಲ್ಡ್ ಮಸ್ಕರೇನಸ್ ಉಪ್ಪಿನ0ಗಡಿ ಬಸ್ ನಿಲ್ದಾಣದಲ್ಲಿ ಸಕಾಲ ಬೀದಿನಾಟಕಕ್ಕೆ ಚಾಲನೆ ನೀಡಿದರು.
ಕಬಕ ಗ್ರಾಮದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಕಬಕ ಗ್ರಾಮ ಪ0ಚಾಯತ್ ಸಧಸ್ಯರಾದ ಶ್ರೀಮತಿ ಸು0ದರಿ ಗಿರಿದರ್, ವಿಠಲಗೌಡ, ಬಾಲಕೃಷ್ಣ ಗೌಡ, ಮತ್ತು ಸುಬ್ಬಣ್ಣ, ಗ್ರಾಮ ಪ0ಚಾಯತ್ ಅಭಿವೃದ್ದಿ ಅಧಿಕಾರಿ ದಯಾನ0ದ ಗೌಡ, ನರಿಮೊಗರು ಗ್ರಾಮಪ0ಚಾಯತ್ ಅಭಿವೃದ್ದಿ ಅಧಿಕಾರಿ ಸುಬಾಷ್ ಚ0ದ್ರ. ಹಾಗು ವಾರ್ತಾ ಸಹಾಯಕರಾದ ಬಿ ಆರ್ ಚ0ದ್ರಶೇಖರ್ ಆಝಾದ್ ಉಪಸ್ಥಿತರಿದ್ದರು. ಬೆ0ಗಳೂರಿನ ಸಿರಿವಾರ ಕಲ್ಚರಲ್ ಅಕಾಡೆಮಿ ಕಲಾವಿದರಿ0ದ ಬೀದಿನಾಟಕ ಪ್ರದರ್ಶಿಸಲಾಯಿತು. ಏಪ್ರಿಲ್ 1 ರಂದು ಪುತ್ತೂರು ತಾಲ್ಲೂಕಿನ ರಾಮಕು0ಜ, ಕಡಬ ಮತ್ತು ಬಿಳಿನೆಲೆ ಗ್ರಾಮಪ0ಚಾಯತ್ ವ್ಯಾಪ್ತಿಯಲ್ಲಿ 'ಸಕಾಲ' ಜಾಗೃತಿ ಬೀದಿನಾಟಕ ಪ್ರದರ್ಶಿಸಲಾಗುವುದು.

Friday, March 30, 2012

ತೋಟಗಾರಿಕೆಗೆ 867 ಕೋ.ರೂ : ಡಾ. ವಿಜಯ ಪ್ರಕಾಶ್

ಮಂಗಳೂರು,ಏಪ್ರಿಲ್.30:ರಾಜ್ಯ ಸರ್ಕಾರವು ತೋಟಗಾರಿಕೆಯ ಪುನಶ್ಚೇತನ ಮತ್ತು ಸಮಗ್ರ ಅಭಿವೃದ್ಧಿಗೆ ಪ್ರಸಕ್ತ ಸಾಲಿನ ಮುಂಗಡ ಪತ್ರದಲ್ಲಿ 867 ಕೋಟಿ ರೂ ಗಳನ್ನು ಮೀಸಲಿಟ್ಟಿದೆ. ಈ ಅನುದಾನದಡಿಯಲ್ಲಿ ಹೊರ್ಟಿ ಕ್ಲಿನಿಕ್ ಗಳನ್ನು ಸ್ಥಾಪಿಸಿ ರೈತರಿಗೆ ಮತ್ತು ಸಾರ್ವಜನಿಕರಿಗೆ ವಿಶೇಷ ತರಬೇತಿ ಮತ್ತು ತೋಟಗಾರಿಕಾ ಬೆಳೆಗಳ ಬಗ್ಗೆ ಅರಿವು ಮೂಡಿಸುವ ಯೋಜನೆ ರೂಪಿಸಲಾಗಿದೆ ಎಂದು ದ.ಕ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ವಿಜಯ ಪ್ರಕಾಶ್ ಅವರು ಹೇಳಿದರು.
ಇಂದು ಮಂಗ ಳೂರು ನಗರದ ಕದ್ರಿ ಉದ್ಯಾ ನವ ನದಲ್ಲಿ ತೋಟ ಗಾರಿಕಾ ಇಲಾಖೆ, ದಕ್ಷಿಣ ಕನ್ನಡ ಜಿಲ್ಲಾ ಡಳಿತ,ಹಾಗೂ ಜಿಲ್ಲಾ ಪಂಚಾ ಯತ್, ಮಂಗ ಳೂರು ಮಹಾ ನಗರ ಪಾಲಿಕೆ, ಆತ್ಮ ಯೋಜನೆ ಚಾಲನಾ ಸಮಿತಿ ಹಾಗೂ ಸಿರಿ ತೋಟ ಗಾರಿಕಾ ಇಲಾಖೆ ಇವುಗಳ ಸಂಯುಕ ಆಶ್ರಯದಲ್ಲಿ ತೋಟಗಾರಿಕಾ ವರ್ಷ 2012 ರ ಅಂಗವಾಗಿ ಆಯೋಜಿಸಿದ ಫಲಪುಷ್ಪ ಪ್ರದರ್ಶನದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ತೋಟ ಗಾರಿಕಾ ಇಲಾಖೆ ಮತ್ತು ಇತರ ಇಲಾಖೆ ಗಳಿಂದ ನೀಡ ಲಾಗು ತ್ತಿರುವ ಪ್ರೊತ್ಸಾಹ ಹಾಗೂ ಅದ ರಲ್ಲೂ ಯುವ ಜನಾಂ ಗಕ್ಕೆ , ನಗರ ವಾಸಿ ಗಳಿಗೆ ತೋಟ ಗಾರಿ ಕೆಯ ಬಗ್ಗೆ, ಮನೆ ತೋಟ,ರೂಫ್ ಗಾರ್ಡನ್,ಗಳ ಬಗ್ಗೆ ಇರುವ ಉತ್ತಮ ಯೋಜನೆ ಗಳನ್ನು ವಿವ ರಿಸಿ ದರು. ಸರ್ವ ಶಿಕ್ಷಣ ದಡಿ ಶಾಲಾ ಮಕ್ಕಳಿಗೆ ಕೃಷಿ ತೋಟ ಗಳ ಭೇಟಿ ನೀಡುವ ಕಾರ್ಯ ಕ್ರಮ ಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಸಿಇಓ ನುಡಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕೆ.ಟಿ.ಶೈಲಜಾ ಭಟ್ ಅವರು ಅತ್ಯುತ್ತಮ ಫಲಪುಷ್ಪ ಪ್ರದರ್ಶನ ಇದಾಗಿದ್ದು,ಸಂಘಟಕರಿಗೆ ಅಭಿನಂದಿಸಿ ಶುಭಹಾರೈಸಿದರು.ಫಲ ಪುಷ್ಪ ಪ್ರದ ರ್ಶನ ವನ್ನು ಉದ್ಘಾ ಟಿಸಿ ಮಾತ ನಾಡಿದ ಕರಾ ವಳಿ ಅಭಿ ವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ರಾದ ಬಿ. ನಾಗ ರಾಜ ಶೆಟ್ಟಿ ಅವರು ಜಿಲ್ಲೆ ಕೃಷಿ ಕಾರ್ಮಿ ಕರ ಅಭಾವ ಹಾಗೂ ಕೃಷಿ ಕರು ಎದುರಿ ಸುತ್ತಿ ರುವ ಸಮಸ್ಯೆ ಗಳ ಬಗ್ಗೆ ಪ್ರಸ್ತಾ ಪಿಸಿ, ಸಾವ ಯವ ಕೃಷಿಗೆ ಹೆಚ್ಚಿನ ಆದ್ಯತೆ ಮತ್ತು ಕಲಬೆರಕೆ ರಹಿತ ಆಹಾರವನ್ನು ಬೆಳೆಸಿ ವಿತರಿಸುವ ಬಗ್ಗೆ ಗಮನ ಹರಿಸುವ ಅಗತ್ಯತೆಯನ್ನು ಪ್ರತಿಪಾದಿಸಿದರು.ಸಿರಿ ತೋಟ ಗಾರಿಕಾ ಸಂಘದ ಉಪಾ ಧ್ಯಕ್ಷೆ ಶ್ರೀಮತಿ ಲಕ್ಮೀ ರಾವ್ ಆರೂರು ತೋಟ ಗಾರಿಕಾ ಇಲಾ ಖೆಯ ಉಪ ನಿರ್ದೇ ಶಕ ರಾದ ಡಾ. ಎಸ್. ನಂದಾ ಅವರು ಸ್ವಾಗ ತಿಸಿದರು.ಹಿರಿಯ ಸಹಾ ಯಕ ತೋಟ ಗಾರಿಕಾ ನಿರ್ದೇ ಶಕ ಜೋ.ಪ್ರದೀಪ್ ಡಿಸೋಜ ಅವರು ವಂದ ನಾರ್ಪಣೆ ಸಲ್ಲಿ ಸಿರು. ಸಂಜೀವ ನಾಯಕ್ ಅವರು ಕಾರ್ಯ ಕ್ರಮ ನಿರೂಪಿಸಿದರು. ಶಾಲಾ ಮಕ್ಕಳಿಂದ ಛದ್ಮವೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಇದೇ ಸಂದ ರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಹೊಟೇಲ್ ಮತ್ತು ರೆಸ್ಟೋ ರೆಂಟ್ ಒಕ್ಕೂ ಟಗಳ ಆಶ್ರಯ ದಲ್ಲಿ ಆಯೋ ಜಿಸಿದ್ದ ಮೂರು ದಿನಗಳ ಆಹಾ ರೋತ್ಸ ವವನ್ನು ಕರಾ ವಳಿ ಅಭಿ ವೃದ್ಧಿ ಪ್ರಾಧಿ ಕಾರದ ಅಧ್ಯಕ್ಷ ರಾದ ಬಿ. ನಾಗ ರಾಜ ಶೆಟ್ಟಿ ಅವರು ಉದ್ಘಾ ಟಿಸಿ ದರು.

'ಸಕಾಲ'-ಏ.02ರಿಂದ ರಾಜ್ಯದಾದ್ಯಂತ ಜಾರಿ

ಬೆಂಗಳೂರು,ಮಾರ್ಚ್.30:ರಾಜ್ಯ ಸರ್ಕಾರವು ಜಾರಿಗೆ ತಂದಿರುವ 'ಕರ್ನಾಟಕ ನಾಗರಿಕ ಸೇವಾ ಖಾತರಿ ಕಾಯಿದೆ 2011' ಏಪ್ರಿಲ್ 02 ರಿಂದ ರಾಜ್ಯದಾದ್ಯಂತ ಎಲ್ಲ ಜಿಲ್ಲೆಗಳಲ್ಲೂ ಜಾರಿಗೆ ಬರಲಿದೆ.ನಾಗರಿಕರಿಗೆ ವಿವಿಧ ರೀತಿಯ ಸೇವೆಗಳನ್ನು ಪೂರೈಸುವ 11 ಇಲಾಖೆಗಳನ್ನು ಅಂದರೆ ಕಂದಾಯ, ಶಿಕ್ಷಣ, ಆರ್ಥಿಕ ಇಲಾಖೆ, ಪೊಲೀಸ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಆಹಾರ ಮತ್ತು ನಾಗರಿಕ ಪೂರೈಕೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸ್ಥಳೀಯ ಸಂಸ್ಥೆಗಳು, ಕಾರ್ಮಿಕ ಇಲಾಖೆ, ಸಾರಿಗೆ ಇಲಾಖೆ ಮತ್ತು ಆರೋಗ್ಯ ಇಲಾಖೆಗಳ ಒಟ್ಟು 151 ಸೇವೆಗಳನ್ನು ಈ ಕಾಯ್ದೆಯ ವ್ಯಾಪ್ತಿಯಲ್ಲಿ ತರಲಾಗಿದೆ.
ಆಯಾ ಇಲಾಖೆಗಳು ತಾವು ಪೂರೈಸುವ ಸೇವೆ ಕುರಿತು ಸೇವೆಗಾಗಿ ಅಗತ್ಯವಿರುವ ಸಮಯದ ಕುರಿತು, ಮೇಲ್ಮನವಿ ಪ್ರಾಧಿಕಾರದ ಕುರಿತು ಮತ್ತು ವಿಳಂಬವಾದಲ್ಲಿ ಪರಿಹಾರ ಶುಲ್ಕ ನೀಡುವ ಕುರಿತು ತಮ್ಮ ಕಚೇರಿಗಳಲ್ಲಿ ಸೂಚನಾ ಫಲಕಗಳನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕಿದೆ. ನಾಗರಿಕರಿಗೆ ಸೇವೆಯನ್ನು ಪೂರೈಸುವುದರಲ್ಲಿ ವಿಳಂಬವಾದರೆ ವಿಳಂಬಿತ ಅವಧಿಯಲ್ಲಿ ಪ್ರತಿದಿನಕ್ಕೆ 20-00 ರೂ.ನಂತೆ ಗರಿಷ್ಠ 500-00 ರೂ.ಗಳ ಮಿತಿಯವರೆಗೆ ಸಂಬಂಧಿತ ಸರ್ಕಾರಿ ನೌಕರರು ಅರ್ಜಿ ಸಲ್ಲಿಸಿದ ಸಾರ್ವಜನಿಕರಿಗೆ ಪರಿಹಾರ ಶುಲ್ಕ ನೀಡಬೇಕಿದೆ.
ವಿವಿಧ ಇಲಾಖೆಗಳಲ್ಲಿ ಸೇವೆಯನ್ನು ಪಡೆಯಲು ಬಯಸುವ ನಾಗರಿಕರು ಸಂಬಂಧಿತ ದಾಖಲೆಗಳು ಮತ್ತು ನಿಗದಿಪಡಿಸಿದ ಶುಲ್ಕದೊಂದಿಗೆ ಅರ್ಜಿಯನ್ನು ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ಕೂಡಲೆ ಅವರಿಗೊಂದು ರಸೀದಿ ನೀಡಲಾಗುತ್ತದೆ. ಈ ರಸೀದಿಯಲ್ಲಿ 15 ಅಂಕಿಗಳ ಗುರುತಿನ ಸಂಖ್ಯೆಯೊಂದನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಅರ್ಜಿ ಸಲ್ಲಿಸಿದ ಕೂಡಲೆ ನಾಗರಿಕರು ರಸೀದಿ ಪಡೆಯುವುದು ಕಡ್ಡಾಯವಾಗಿರುತ್ತದೆ.
ಅರ್ಜಿದಾರರು ತಮ್ಮ ಮೊಬೈಲ್ ಸಂಖ್ಯೆ ನೀಡಿದಲ್ಲಿ ಅವರಿಗೆ ಎಸ್ಎಂಎಸ್ ಮೂಲಕ ಅರ್ಜಿಯ ಪ್ರಗತಿಯ ಕುರಿತು ವರದಿ ದೊರಕುತ್ತದೆ. ಮೊಬೈಲ್ ಇಲ್ಲದಿದ್ದಲ್ಲಿ ಅರ್ಜಿದಾರರು ಅಂತರ್ ಜಾಲದಲ್ಲಿ ತಮ್ಮ ಅರ್ಜಿಯ ಪ್ರಗತಿಯನ್ನು ಪರಿಶೀಲಿಸಬಹುದಾಗಿದೆ. ಈ ಪ್ರಗತಿ ಪರಿಶೀಲನೆ ಮತ್ತಿತರ ಎಲ್ಲ ಪ್ರಕ್ರಿಯೆಗಳಿಗೂ ಗ್ರಾಹಕರಿಗೆ ಸ್ವೀಕೃತಿಯಲ್ಲಿ ನೀಡಿದ 15 ಅಂಕಿಯ ಗುರುತಿನ ಸಂಖ್ಯೆಯನ್ನೇ ಬಳಸಬೇಕಾಗಿರುತ್ತದೆ. ಸಕಾಲ ದ ಕಾಲ್ ಸೆಂಟರ್ ಗೆ ಕರೆಮಾಡಿದಾಗ ಕೂಡ ಈ ಗುರಿತಿನ ಸಂಖ್ಯೆ ಆಧಾರದಿಂದ ಗ್ರಾಹಕರು ತಮ್ಮ ಅರ್ಜಿಯ ಸ್ಥಿತಿ ಅರಿಯಬಹುದಾಗಿದೆ.
ನಾಗರಿಕ ಸೇವಾ ಖಾತರಿ ಕಾಯ್ದೆ ಸಕಾಲ ಕುರಿತು ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ. ಅರ್ಜಿಯನ್ನು ತುಂಬಲಾಗದ ಗ್ರಾಹಕರಿಗಾಗಿ ಕಾಲ್ಸೆಂಟರ್ ನಲ್ಲಿರುವ ಸಿಬ್ಬಂದಿ ಅರ್ಜಿ ತುಂಬಲು ಮತ್ತು ತಮ್ಮ ಅರ್ಜಿಯ ಸ್ಥಿತಿಗತಿಗಳನ್ನು ಅರಿಯಲು ನೆರವು ನೀಡುತ್ತಾರೆ. ಸಾರ್ವಜನಿಕರು ದೂರವಾಣಿ ಸಂಖ್ಯೆ 080-44554455 ಗೆ ಕರೆಮಾಡಿ ಕೂಡ ಗ್ರಾಹಕರು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದಾಗಿದೆ. ಈ ಕಾಯ್ದೆಯ ವೆಬ್ ವಿಳಾಸ www.sakala.kar.nic.in ಮತ್ತು ಇ-ಮೇಲ್ ವಿಳಾಸ sakala@kar.in ಆಗಿದ್ದು, ಅಂತರ್ ಜಾಲದ ಮುಖಾಂತರವೂ ಸಾರ್ವಜನಿಕರು ಈ ಕಾಯ್ದೆಯ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ.
ಏಪ್ರಿಲ್-02, 2012 ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಜಿಲ್ಲಾಧಿಕಾರಿಗಳು, ಆಯಾ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಈ ಕಾಯ್ದೆಯ ಅನುಷ್ಠಾನಕ್ಕೆ ಚಾಲನೆ ನೀಡುವರು.
ಸರ್ಕಾರದ ಆಡಳಿತದಲ್ಲಿ ಪಾರದರ್ಶಕತೆಯನ್ನು ತರುವ ಮತ್ತು ಸರ್ಕಾರಿ ನೌಕರರಲ್ಲಿ ಹೊಸ ವೃತ್ತಿ ಸಂಸ್ಕೃತಿಯನ್ನು ಮೂಡಿಸುವ ಆಶಯ ಹೊಂದಿರುವ ಎಲ್ಲಕ್ಕಿಂತ ಹೆಚ್ಚಾಗಿ ಸಾರ್ವಜನಿಕರಿಗೆ ನಿಗದಿತ ಸಮಯದಲ್ಲಿ ಸೇವೆ ಪೂರೈಸುವ ಮತ್ತು ಅವರ ಅಮೂಲ್ಯ ಸಮಯ ಮತ್ತು ಹಣವನ್ನು ಉಳಿಸುವ ಉದ್ದೇಶ ಹೊಂದಿರುವ ಈ ಕಾಯ್ದೆಯ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕೆಂದು ವಿನಂತಿಸಲಾಗಿದೆ.
ಇಲ್ಲಿಯವರೆಗೆ ಈ ಕಾಯ್ದೆಯ ಅಡಿ ಎಲ್ಲಾ ಇಲಾಖೆಗಳಲ್ಲಿಯೂ ಒಟ್ಟಾಗಿ 1,32,304 ಅರ್ಜಿಗಳನ್ನು ಸ್ವೀಕರಿಸಿದ್ದು, ಅವುಗಳಲ್ಲಿ 1,12,439 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ.

ಕುಡಿಯಲು ನೀರಿದೆ; ಆದರೆ ದುರ್ಬಳಕೆ ಸಲ್ಲದು: ಜಿಲ್ಲಾಧಿಕಾರಿ

ಮಂಗಳೂರು,ಮಾರ್ಚ್.30:ಮಂಗಳೂರು ನಗರಕ್ಕೆಕುಡಿಯುವ ನೀರು ಸರಬರಾಜಾಗುವ ತುಂಬೆ ಅಣೆಕಟ್ಟಿನಲ್ಲಿ ಸಕಾಲದಲ್ಲಿ ಕೈಗೊಂಡ ಕ್ರಮಗಳಿಂದಾಗಿ ನೀರಿನ ಮಟ್ಟ ಹೆಚ್ಚಿದ್ದು, ನೀರನ್ನು ಮಿತವಾಗಿ ಬಳಸುವುದರಿಂದ ನೀರಿನ ತೊಂದರೆ ಉದ್ಭವಿಸದು ಎಂದು ದ.ಕ.ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ ಹೇಳಿದ್ದಾರೆ.ಕೈಗಾರಿಕೆಗಳು ಜಿಲ್ಲಾಡಳಿತದ ಸೂಚನೆಯನ್ನು ಪಾಲಿಸಿದ್ದು, ಎಂ ಆರ್ ಪಿ ಎಲ್ ಬಳಸುವ ನೀರಿನ ಪ್ರಮಾಣವನ್ನು 2.5 ಎಂ ಜಿ ಕಡಿಮೆಗೊಳಿಸಿದೆ. ಕಿರು ಜಲವಿದ್ಯುತ್ ಘಟಕಗಳು ನೀರನ್ನು ಬಳಸುತ್ತಿಲ್ಲ ಎಂದೂ ಅವರು ನುಡಿದರು.ಗ್ರಾಮೀಣ ಪ್ರದೇಶದಲ್ಲಿ ಬೇಸಿಗೆಯಲ್ಲಿ ನೀರಿನ ಬವಣೆ ತಪ್ಪಿಸುವ ಉಸ್ತುವಾರಿಯನ್ನು ಆಯಾಯ ತಾಲೂಕು ಪಂಚಾಯತ್ ಸಹಾಯಕ ಅಭಿಯಂತರರಿಗೆ ನೀಡಲಾಗಿದೆ.
ನೀರು ಸಂಬಂಧಿ ದೂರುಗಳನ್ನು ಆಲಿಸಿ ಆದ್ಯತೆಯ ಮೇರೆಗೆ ಪರಿಹಾರ ನೀಡಲು ಇವರಿಗೆ ನಿರ್ದೇಶನ ನೀಡಲಾಗಿದ್ದು, ತುರ್ತು ಕ್ರಮಗಳ ಬಗ್ಗೆ ಸಿಇಒ/ಜಿಲ್ಲಾಧಿಕಾರಿಗಳ ಅನುಮೋದನೆ ಪಡೆಯಲು ಸೂಚಿಸಲಾಗಿದೆ ಎಂದರು.

Thursday, March 29, 2012

ತ್ಯಾಜ್ಯದ ಸದ್ಬಳಕೆಯಿಂದ ನೈರ್ಮಲ್ಯ ಸವಾಲಿಗೆ ಜವಾಬು: ಜಿಲ್ಲಾಧಿಕಾರಿ

ಮಂಗಳೂರು,ಮಾರ್ಚ್.29:ಮಂಗಳೂರನ್ನು ನಿರ್ಮಲ ನಗರವನ್ನಾಗಿಸಲು ಮಂಗಳೂರಿಗರ ಸಹಕಾರ ಅಗತ್ಯ. ದಿನನಿತ್ಯ ನಾವು ಉತ್ಪಾದಿಸುವ ತ್ಯಾಜ್ಯದಿಂದ ವಿದ್ಯುತ್ ಉತ್ಪಾದಿಸಲು, ಅದನ್ನು ಅಡುಗೆ ಅನಿಲವನ್ನಾಗಿ ಮಾರ್ಪಾಡು ಗೊಳಿಸಲು ಹಲವು ಯಶಸ್ವಿ ಮಾದರಿಗಳು ನಮ್ಮ ಮುಂದಿದ್ದು ಅನುಷ್ಠಾನಕ್ಕೆ ತರುವಲ್ಲಿ ಎಲ್ಲರ ಪಾಲ್ಗೊಳ್ಳುವಿಕೆ ಅಗತ್ಯವಿದೆ ಎಂದು ದ.ಕ.ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಹೇಳಿದರು.
ಅವರಿಂದು ರೋಟರಿ ಕ್ಲಬ್ ಮಂಗಳೂರು ಸಹ ಯೋಗದಲ್ಲಿ ನಗರದ ಫಾದರ್ ಮುಲ್ಲರ್ ಚಾರಿ ಟೇಬಲ್ ಸಂಸ್ಥೆಯಲ್ಲಿ ಆಯೋ ಜಿಸಲಾದ ಜೈವಿಕ ಅನಿಲ ಘಟಕಕ್ಕೆ ಚಾಲನೆ ನೀಡಿ ಮಾತ ನಾಡುತ್ತಿದ್ದರು. ಬೆಳೆಯು ತ್ತಿರುವ ನಗರ ಶುಚಿತ್ವ ಹಾಗೂ ಸೌಂದರ್ಯ ದಲ್ಲೂ ಮುಂದಿರ ಬೇಕೆಂಬ ದೃಷ್ಟಿಯಿಂದ ಹಲವು ಯೋಜನೆ ಗಳನ್ನು ಈಗಾಗಲೇ ಜಾರಿಗೆ ತರಲಾಗಿದೆ. ಪ್ಲಾಸ್ಟಿಕ್ ನಿಷೇಧವನ್ನೂ ಜಾರಿ ಮಾಡಲಾಗಿದೆ; ಆದರೆ ಪರಿಣಾಮ ಮಾತ್ರ ನಿರೀಕ್ಷಿತ ಮಟ್ಟದಲ್ಲಿ ಕಾಣುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ರೋಟರಿಯಂತಹ ಸಂಘಸಂಸ್ಥೆಗಳು ಈ ನಿಟ್ಟಿನಲ್ಲಿ ಮುಖ್ಯ ಪಾತ್ರವಹಿಸಬೇಕು.ಸಂಘಟನೆಗಳು ಕೈಗೊಳ್ಳುವ ಇಂತಹ ಕಾರ್ಯ ಕ್ರಮಗಳಿಗೆ ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡಲಿದೆ. ಇಂತಹ ಮಾದರಿ ಗಳಿಗೆ ಚಾಲನೆ ನೀಡಿ ಅರ್ಧಕ್ಕೇ ನಿಲ್ಲದೆ ಅವುಗಳ ನಿರಂತರ ನಿರ್ವಹಣೆ ಯಾಗಬೇಕು; ಹಾಗಾದರೆ ಮಾತ್ರ ಜನರಿಗೆ, ಸಮಾಜಕ್ಕೆ ಅನುಕೂಲವಾಗಲಿದೆ ಎಂದರು.
ನಗರದಲ್ಲಿ ಮೆಡಿಕಲ್ ಕಾಲೇಜುಗಳು, ಹಾಸ್ಟೆಲ್ ಗಳು, ಹೋಟೆಲ್ ಗಳು ಸಾಕಷ್ಟು ಸಂಖ್ಯೆಯಲ್ಲಿದ್ದು ಎಲ್ಲವನ್ನೂ ಜಿಲ್ಲಾಡಳಿತ ಕಾನೂನು ಮೂಲಕ ಹೇರದೆ ಸ್ವಯಂಪ್ರೇರಿತವಾಗಿ ಪರ್ಯಾಯ ಶಕ್ತಿಗಳನ್ನು, ಪರಿಸರ ಸ್ನೇಹಿ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕೆಂದರು. ಅಂತಹ ಒಂದು ಯತ್ನ ರೋಟರಿಯವರ ಪ್ರಯತ್ನದಿಂದ ಫಾದರ್ ಮುಲ್ಲರ್ಸ್ ಸಂಸ್ಥೆಯ ಅಡುಗೆ ಕೋಣೆಯಲ್ಲಿ ಅಡುಗೆ ಅನಿಲ ಪೂರೈಸಲು ಜೈವಿಕ ಅನಿಲ ಘಟಕ ಆರಂಭವಾಗಿದ್ದು ಅಭಿನಂದನೀಯ ಎಂದರು.ಈ ಕುರಿತು ಪ್ರಾಸ್ತಾವಿಕ ಮಾತುಗ ಳನ್ನಾಡಿದ ಪ್ರಕಾಶ್ ಕಲ್ಬಾವಿ ಅವರು, ಐದು ಲಕ್ಷ ರೂ. ವೆಚ್ಚದಲ್ಲಿ ಜೈವಿಕ ಅನಿಲ ಘಟಕವನ್ನು ಫಾದರ್ ಮುಲ್ಲರ್ಸ್ ನಲ್ಲಿ ಆರಂಭಿಸಿದ್ದು, 300 ಕೆ ಜಿ ಹಸಿ ತ್ಯಾಜ್ಯಗಳ ಬಳಕೆಯಿಂದ 14 ಕೆ ಜಿ ಮಿಥೇನ್ ಅನಿಲ ಉತ್ಪಾದನೆಯಾಗುತ್ತದೆ. ಇಂತಹ ಪಯರ್ಾಯ ವಿಧಾನಗಳು ದೊಡ್ಡ ದೊಡ್ಡ ಸಂಸ್ಥೆಗಳಿಗೆ ಲಾಭದಾಯಕ ವಾಗುವುದಲ್ಲದೆ,ಆಡಳಿತಕ್ಕೆ ಸವಾಲಾಗಿ ಪರಿಣಮಿಸಿರುವ ತ್ಯಾಜ್ಯ ವಿಲೇಗೂ ಸಹಕಾರಿಯಾಗಲಿದೆ ಎಂದರು.
ಜಿಲ್ಲಾ ಪಂಚಾಯತ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್, ಫಾದರ್ ಮುಲ್ಲರ್ಸ್ ನಿರ್ದೇಶಕರಾದ ಪ್ಯಾಟ್ರಿಕ್ ರೋಡ್ರಿಗಸ್, ಆಡಳಿತ ನಿರ್ದೇಶಕ ರಿಚರ್ಡ್ ಕುವೆಲ್ಲೊ ಉದ್ಘಾಟನಾ ಸಮಾರಂಭದಲ್ಲಿ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ನಿರ್ಮಿತಿ ಕೇಂದ್ರದ ರಾಜೇಂದ್ರ ಕಲ್ಬಾವಿ ಕಾರ್ಯಕ್ರಮ ನಿರೂಪಿಸಿದರು.

Wednesday, March 28, 2012

ತೋಟಗಾರಿಕೆ ವರ್ಷ: ವಿಶೇಷ ಫಲಪುಷ್ಪ ಪ್ರದರ್ಶನ

ಮಂಗಳೂರು,ಮಾರ್ಚ್.28:ತೋಟಗಾರಿಕಾ ವರ್ಷ 2011-12 ರ ಅಂಗವಾಗಿ ತೋಟಗಾರಿಕೆ ಇಲಾಖೆ ವಿಶೇಷ ಫಲಪುಷ್ಟ ಪ್ರದರ್ಶನವನ್ನು ಕದ್ರಿ ಉದ್ಯಾನದಲ್ಲಿ ಹಮ್ಮಿಕೊಂಡಿದ್ದು, ಈ ಬಾರಿ ಫಲಪುಷ್ಟ ಪ್ರದರ್ಶನದಲ್ಲಿ 'ಭಾರತೀಯ ಹಬ್ಬಗಳು' ಹೂಜೋಡಣೆ ವಿಶೇಷ ಆಕರ್ಷಣೆ ಎಂದು ಜಿಲ್ಲಾ ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕಿ ಡಾ.ಎಸ್. ನಂದಾ ಪತ್ರಿಕಾಗೋಷ್ಠಿಯಲ್ಲಿಂದು ತಿಳಿಸಿದರು.ವಿವಿಧ ಇಲಾಖೆಗಳು, ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮಾ.30ರಿಂದ ಎಪ್ರಿಲ್ 1ರವರೆಗೆ ಫಲಫುಷ್ಪ ಪ್ರದರ್ಶನವನ್ನು ಮಂಗಳೂರಿನ ಕದ್ರಿ ಉದ್ಯಾನವನದಲ್ಲಿ ನಡೆಯಲಿದೆ. ಪ್ರದರ್ಶನದ ಬಳಿಕ ಆಯ್ದ ಹೂ ಗಿಡಗಳನ್ನು ರಿಯಾಯಿತಿ ದರದಲ್ಲಿ ಮಾರಾಟ ಮಾಡಲಾಗುವುದು ಎಂದು ಅವರು ತಿಳಿಸಿದರು.
ಫಲಪುಷ್ಪ ಪ್ರದರ್ಶನದಲ್ಲಿ 31 ತಳಿಯ ತರಕಾರಿ ಬೆಳೆಗಳು, 29 ತಳಿಯ ಹೂವಿನ ಗಿಡಗಳು, 17 ಬಗೆಯ ಆಲಂಕಾರಿಕ ಗಿಡಗಳು ಹಾಗೂ 90 ಬಗೆಯ ಔಷಧೀಯ ಸಸ್ಯಗಳನ್ನು ನೋಡಬಹುದು. ಇದರ ಜೊತೆಯಲ್ಲೇ ತರಕಾರಿ ಕೆತ್ತನೆಗಳು, ವಿವಿಧ ಹೂ ಜೋಡಣೆಗಳು, ಕಲಾತ್ಮಕ ತೋಟಗಾರಿಕಾ ಚಟುವಟಿಕೆಗಳು ಕೂಡಾ ಪ್ರದರ್ಶಿಸಲ್ಪಡಲಿವೆ. ಫಲಪುಷ್ಟ ಪ್ರದರ್ಶನದ ಜೊತೆಗೆ ಆಹಾರೋತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಜೊತೆಗೆ ಪ್ರಾರಂಭದ ಎರಡು ದಿನಗಳಂದು ಸಾಯಂಕಾಲ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಪ್ರದರ್ಶನದಲ್ಲಿ ಸಾರ್ವಜನಿಕರು ಹಾಗೂ ಸರಕಾರಿ ಇಲಾಖೆಗಳು, ಸರಕಾರೇತರ ಸಂಘ ಸಂಸ್ಥೆಗಳು ಬೆಳೆಸಿರುವ ಹೂವು, ಅಲಂಕಾರಿಕ ಗಿಡಗಳ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಜಿಲ್ಲೆಯ ವಿವಿಧ ತಾಲೂಕುಗಳ ರೈತರು ಬೆಳೆಸಿರುವ ವಿಶೇಷ ರೀತಿಯ ತೋಟಗಾರಿಕಾ ಪ್ರದರ್ಶಿಕೆಗಳನ್ನು ಕೂಡಾ ಸಂಗ್ರಹಿಸಿ ಪ್ರದರ್ಶಿಸಲಾಗುವುದು ಎಂದು ನಂದಾ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಿರಿ ತೋಟಗಾರಿಕಾ ಸಂಘದ ಉಪಾಧ್ಯಕ್ಷೆ ಲಕ್ಷ್ಮೀ ರಾವ್ ಆರೂರು, ಸಹ ಕಾರ್ಯದರ್ಶಿ ನೇಮಿರಾಜ್ ಕೊಂಡೆ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಪ್ರದೀಪ್ ಡಿಸೋಜಾ, ಶಾರದಾ ಆಚಾರ್ ಉಪಸ್ಥಿತರಿದ್ದರು.
ಚೆಂಡುಹೂ, ಸಾಲ್ವಿಯಾ, ಪಿಂಕ್ಸ್, ಪೆಟೋನಿಯಾ, ಅಂಥೂರಿಯಂ, ಜರ್ಬೇರಾ, ಡೇಲಿಯಾ, ಗ್ಲಾಡಿಯೊಲಸ್, ಸೆಲೋಶಿಯಾ ಹೂ ಗಿಡಗಳು ಪ್ರದರ್ಶನಕ್ಕೆ ಸಜ್ಜಾಗಿವೆ.
ಪ್ರದರ್ಶನದ ಒಂದು ಪಾಶ್ರ್ವ ಭಾಗದಲ್ಲಿ ಉದ್ದನೆಯ ಸೋರೆಕಾಯಿ, ಹೀರೆಕಾಯಿ, ತೊಂಡೆಕಾಯಿ, ಸಿಹಿಗುಂಬಳ, ಮೀಟರ್ ಉದ್ದದ ಅಲಸಂಡೆ, ಕೆಂಪು ಬಸಳೆ, ಪಡವಲಕಾಯಿಗಳು ಚಪ್ಪರದಲ್ಲಿ ಬಳ್ಳಿಗಳ ನಡುವೆ ನೋಡುಗರ ಕಣ್ಮನ ಸೆಳೆಯಲಿವೆ. ಉಳಿದಂತೆ ಕೆಂಪು ಬೆಂಡೆ, ಬದನೆ, ಚಪ್ಪರ ಅವರೆಯ ಜೊತೆಯಲ್ಲಿ ಮಂಗಳೂರಿನಲ್ಲಿ ತೀರಾ ಅಪರೂಪದ ತರಕಾರಿ ಬೆಳೆಗಳಾದ ಹೂಕೋಸು, ಎಲೆಕೋಸು, ನವಿಲುಕೋಸು, ಮೂಲಂಗಿ ಗಿಡಗಳು ಪ್ರದರ್ಶನದಲ್ಲಿದೆ. ಈಲ್ಲೆಯ ರೈತರು, ಉದ್ದಿಮೆದಾರರು, ವಿದ್ಯಾರ್ಥಿಗಳು, ಸಾರ್ವಜನಿಕರು ಪ್ರದರ್ಶನದ ಸದುಪಯೋಗ ಪಡೆಯಲು ಇಲಾಖೆಯವರು ಕೋರಿದ್ದಾರೆ.

ಏ.20ರೊಳಗೆ ಮಕ್ಕಳ ಸಮಗ್ರ ವರದಿ ನೀಡಿ: ಜಿಲ್ಲಾಧಿಕಾರಿ

ಮಂಗಳೂರು,ಮಾರ್ಚ್.27:ಜಿಲ್ಲೆಯಲ್ಲಿ ಅಪೌಷ್ಠಿಕತೆಯಿಂದ ಬಳಲುತ್ತಿರುವ ಮಕ್ಕಳ ಕುರಿತು ಹಾಗೂ ಸಮಗ್ರವಾಗಿ ಒಂದರಿಂದ ಐದು ವರ್ಷಗಳ ಮಕ್ಕಳ ಕುರಿತ ಮಾಹಿತಿಯನ್ನು ಏಪ್ರಿಲ್ 20ರೊಳಗಾಗಿ ಸಲ್ಲಿಸುವಂತೆ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ ಅವರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾ ಮಕ್ಕಳ ರಕ್ಷಣಾ ಸ್ಥಾಪನೆ ಕುರಿತ ಮಂಗಳವಾರ ತಮ್ಮ ಕಚೇರಿಯಲ್ಲಿ ಕರೆದ ಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ ಜಿಲ್ಲಾಧಿಕಾರಿಗಳು, ಮಕ್ಕಳ ಕುರಿತ ಸಮಗ್ರ ಮಾಹಿತಿ ಜಿಲ್ಲಾಡಳಿತಕ್ಕೆ ಅಗತ್ಯವಿದ್ದು, ಅಂಕಿ ಅಂಶಗಳು ಆನ್ ಲೈನ್ ನಲ್ಲಿ ಲಭ್ಯವಿರಬೇಕೆಂದರು. ತಾಲೂಕುವಾರು ಮಾಹಿತಿ ಪಕ್ಕಾ ಇರಬೇಕೆಂದು ಸೂಚಿಸಿದ ಜಿಲ್ಲಾಧಿಕಾರಿಗಳು, ಪ್ರತಿ ದಿನ ಕನಿಷ್ಠ ಐದು ಅಂಗನವಾಡಿಗಳಿಗೆ ಭೇಟಿ ನೀಡಿ ಖುದ್ದು ಪರಿಶೀಲನೆ ನಡೆಸಿ. ಎಲ್ಲ ಅಂಗನವಾಡಿಗಳು ನಿರ್ದಿಷ್ಟ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುತ್ತಿದೆಯೇ; ಅಲ್ಲಿನ ಮಕ್ಕಳ ಬಗ್ಗೆ, ಅಪೌಷ್ಠಿಕ ಮಕ್ಕಳ ಬಗ್ಗೆ ಏನು ಕಾಳಜಿ ವಹಿಸಲಾಗುತ್ತಿದೆ ಎಂಬ ಬಗ್ಗೆಯೂ ಮಾಹಿತಿ ಜಿಲ್ಲಾಡಳಿತಕ್ಕೆ ನೀಡಬೇಕು ಎಂದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಕ್ಕಳ ಆರೋಗ್ಯ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಆರೋಗ್ಯ ಇಲಾಖೆ ಹೆಚ್ಚಿನ ನಿಗಾ ವಹಿಸಬೇಕು. ತಾಲೂಕು ಆರೋಗ್ಯಾಧಿಕಾರಿಗಳು ವಾರಕ್ಕೊಮ್ಮೆ ಅಂಗನವಾಡಿಗಳಿಗೆ ಭೇಟಿ ನೀಡಬೇಕು ಎಂದು ಹೇಳಿದ ಜಿಲ್ಲಾಧಿಕಾರಿಗಳು, ಜಿಲ್ಲೆಯಲ್ಲಿ ಮಕ್ಕಳು ಅಪೌಷ್ಠಿಕತೆಯಿಂದ ನರಳಿದರೆ ಇಲಾಖೆಗಳನ್ನು ಹೊಣೆ ಮಾಡಲಾಗುವುದೆಂಬ ಎಚ್ಚರಿಕೆಯನ್ನೂ ನೀಡಿದರು.

ಸಕಾಲ ಅನುಷ್ಠಾನಕ್ಕೆ ಸಜ್ಜಾಗಿ: ಜಿಲ್ಲಾಧಿಕಾರಿ

ಮಂಗಳೂರು.ಮಾರ್ಚ್.27:ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಏಪ್ರಿಲ್ 2ರಿಂದ ಜಾರಿಗೆ ಬರಲಿರುವ ಹನ್ನೊಂದು ಇಲಾಖೆಗಳ 151 ಸೇವೆಗಳನ್ನು ನೀಡಲು ಸಜ್ಜಾಗಿ ಎಂದ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮಂಗಳವಾರ ಕರೆದ ಸಭೆಯಲ್ಲಿ ಸೂಚನೆ ನೀಡಿದರು.ಕರ್ನಾಟಕ ನಾಗರಿಕ ಸೇವೆ ಖಾತರಿ ಅಧಿನಿ ಯಮದ ವ್ಯಾಪ್ತಿಗೆ ಬರುವ ಎಲ್ಲ ಕಚೇರಿ ಗಳು ತಮ್ಮ ಕಚೇರಿಯ ಮುಂಭಾ ಗದಲ್ಲಿ ಮಾದರಿ ಮಾಹಿತಿ ಫಲಕ ವನ್ನು ಹಾಕಲೇ ಬೇಕು; ಜೊತೆಗೆ ಯಾವ್ಯಾವ ಸೇವೆಗೆ ಏನು ದಾಖಲೆ ಬೇಕೆಂಬ ಮಾಹಿತಿಯನ್ನು ಅಗತ್ಯವಾಗಿ ಎಲ್ಲರಿಗೆ ಗೋಚರಿಸುವಂತೆ ಹಾಕಿರಬೇಕೆಂದು ಹೇಳಿದರು.
ಈ ಎಲ್ಲ ಇಲಾಖೆಗಳು ಪ್ರತಿದಿನ ಈ ಬಗ್ಗೆ ವರದಿ ನೀಡಲು ನೋಡಲ್ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗೆ ಪ್ರತಿದಿನದ ಬೆಳವಣಿಗೆ ಬಗ್ಗೆ ಮಾಹಿತಿ ನೀಡಬೇಕೆಂದರು. ತಕ್ಷಣವೇ ಅಗತ್ಯ ವಿರುವ ಇಲಾಖೆಗಳು ಕಂಪ್ಯೂ ಟರ್ ಗಳನ್ನು ಖರೀದಿಸಿ ಹಾಗೂ ಡಾಟಾ ಎಂಟ್ರಿ ಆಪರೇಟರ್ ಗಳನ್ನು ನೇಮಿಸಿಕೊಳ್ಳಿ; ಯಾವ ಸಮಸ್ಯೆ ಗಳಿದ್ದರೂ ಅಧಿನಿ ಯಮ ಅನುಷ್ಠಾನಕ್ಕೆ ಮುನ್ನ ಮಾಹಿತಿ ನೀಡಿ ಎಂದ ಅವರು, ಎಲ್ಲರಿಗೂ ಈ ಸಂಬಂಧ ಸೂಕ್ತ ತರಬೇತಿ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು.
ವ್ಯಾಪ್ತಿಯಡಿ ಬರುವ ಇಲಾಖೆಗಳ ಮುಖ್ಯಸ್ಥರಿಂದ ಕೈಗೊಂಡಿರುವ ಕ್ರಮಗಳ ವರದಿಯನ್ನು ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ ಅವರು ಪಡೆದುಕೊಂಡರು. ಮಹಾನಗರಪಾಲಿಕೆಯ ಸಿದ್ಧತೆಗಳನ್ನು ಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್ ವಿವರಿಸಿದರು.

ಡಾ:ಬಾಬು ಜಗಜೀವನರಾಂ,ಡಾ:ಬಿ ಆರ್ ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆ

ಮಂಗಳೂರು,ಮಾರ್ಚ್.27: 2012 ನೇ ಸಾಲಿನಲ್ಲಿ ದಿನಾ0ಕ 5.4.12 ರ0ದು ಡಾ:ಬಾಬು ಜಗಜೀವನ ರಾ0 ಇವರ 105 ನೇ ಹಾಗೂ ದಿನಾ0ಕ 14.4.12 ರ0ದು ಡಾ: ಬಿ ಆರ್ ಅ0ಬೇಡ್ಕರ್ ರವರ 121 ನೇ ಜಯ0ತಿಯನ್ನು ಆಚರಿಸುವ ಪೂರ್ವಭಾವಿ ಸಭೆ ಜಿಲ್ಲಾಧಿಕಾರಿಯವರ ಕಛೇರಿಯಲ್ಲಿ ಜಿಲ್ಲಾಧಿಕಾರಿ ಡಾ. ಎನ್ ಎಸ್ ಚೆನ್ನಪ್ಪ ಗೌಡ ಇವರ ಅಧ್ಯಕ್ಷತೆಯಲ್ಲಿ ಮಂಗಳವಾರ ಜರುಗಿತು.
ಡಾ ಜಗ ಜೀವನರಾ0 ಜಯ0ತಿ ಯ0ದು ಕಾರ್ಯ ಕ್ರಮವನ್ನು ಜಿಲ್ಲಾ ಪ0ಚಾಯತ್ ಸಭಾ0ಗಣದಲ್ಲಿ ಆಯೋಜಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಕಾರ್ಯಕ್ರಮಕ್ಕೆ ಗಣ್ಯರನ್ನು ಆಹ್ವಾನಿಸುವ ಕುರಿತು ಹಾಗೂ ವಿಜೃಂಭಣೆಯಿಂದ ಅರ್ಥಪೂರ್ಣವಾಗಿ ಆಚರಿಸಲು ನಿರ್ಧರಿಸಲಾಯಿತು.
ಡಾ ಬಿ ಆರ್ ಅ0ಬೇಡ್ಕರ್ ಜಯ0ತಿಯನ್ನು ನಗರದ ಪುರಭವನದಲ್ಲಿ ಆಯೋಜಿಸಲು ನಿರ್ಧರಿಸಲಾಗಿದ್ದು, ಆಹ್ವಾನಿಸುವ ಗಣ್ಯರ ಪಟ್ಟಿಯನ್ನು ತಯಾರಿಸಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು. ಅ0ದು ವಿವಿದ ಇಲಾಖೆಗಳಿ0ದ ಸವಲತ್ತುಗಳನ್ನು ವಿತರಿಸುವ ಕುರಿತು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಕನ್ನಡ ಸ0ಸ್ಕೃತಿ ಇಲಾಖೆಯಿ0ದ ವಾದ್ಯಪರಿಕರಗಳನ್ನು ವಿತರಿಸಲಾಗುವುದು ಎಂದು ಇಲಾಖೆಯ ಅಧಿಕಾರಿ ಶ್ರೀಮತಿ ಮಂಗಳಾ ಅವರು ಹೇಳಿದರು.
ಕಾರ್ಯಕ್ರಮಗಳು ಬೆಳಿಗ್ಗೆ 10.30 ಕ್ಕೆ ಆರಂಭವಾಗಲಿದ್ದು, ಎಲ್ಲಾ ಸರ್ಕಾರಿ ಅಧಿಕಾರಿಗಳು ಹಾಗೂ ಸಿಬ್ಬ0ದಿ ವರ್ಗದವರು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವ0ತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಕೆ ದಯಾನ0ದ್ ಹಾಗೂ ಇತರ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

Tuesday, March 27, 2012

ಜಿಲ್ಲಾ ಮಕ್ಕಳ ರಕ್ಷಣಾ ಘಟಕ: ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ

ಮ0ಗಳೂರು,ಮಾರ್ಚ್.27:ಸಮಗ್ರ ಮಕ್ಕಳ ಹಿತ ರಕ್ಷಣೆಯನ್ನು ಗಮನದಲ್ಲಿರಿಸಿ ಕೇಂದ್ರ ಸರ್ಕಾರದ ಮಾದರಿಯ ಯೋಜನೆಯನ್ನು ರಾಜ್ಯ ಮಟ್ಟದಲ್ಲಿ ಅನುಷ್ಠಾನಗೊಳಿಸುವ ಸಂಬಂಧ ಒಂದೇ ಸೂರಿನಡಿ ಹಲವು ಸೇವೆಗಳನ್ನು ನೀಡುವ ನಿಟ್ಟಿನಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸ್ಥಾಪಿಸಲು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.ಸೋಮವಾರ ಸಂಜೆ ನಡೆದ ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾ ಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್, ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶ ಕರಾದ ಶಕುಂತಲಾ, ಎಸಿಪಿ ಸುಬ್ರಹ್ಮಣ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿ ಗಳಾದ ಡಾ.ಓ ಶ್ರೀರಂಗಪ್ಪ, ಲೇಡಿಗೋಷನ್ ಮುಖ್ಯಸ್ಥರಾದ ಡಾ ಶಕುಂತಲಾ ಮತ್ತು ಇತರ ಅಧಿಕಾರಿಗಳು ಪಾಲ್ಗೊಂಡಿದ್ದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಕಚೇರಿ ಹಾಗೂ ಸಿಬ್ಬಂದಿ ನೇಮಕ ಹಾಗೂ ಕಾರ್ಯವ್ಯಾಪ್ತಿಯ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಕರ್ನಾಟಕ ರಾಜ್ಯ ಸಮಗ್ರ ಮಕ್ಕಳ ರಕ್ಷಣಾ ಸೊಸೈಟಿಯ ಆಡಳಿತ ವ್ಯಾಪ್ತಿಗೆ ರಾಜ್ಯದ ಎಲ್ಲ 30 ಜಿಲ್ಲೆಗಳ ಘಟಕಗಳು ಸೇರ್ಪಡೆಗೊಳ್ಳುತ್ತವೆ. ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಘಟಕದ ಅಧ್ಯಕ್ಷರಾಗಿದ್ದು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಉಪಾಧ್ಯಕ್ಷರಾಗಿರುತ್ತಾರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಆರೋಗ್ಯಾಧಿಕಾರಿಗಳು, ಸಮಾಜ ಕಲ್ಯಾಣಾಧಿಕಾರಿಗಳು ಸದಸ್ಯರಾಗಿರುತ್ತಾರೆ. ಒಬ್ಬರು ಮಕ್ಕಳ ಕ್ಷೇತ್ರದಲ್ಲಿ ಅನುಭವವಿರುವ ಸ್ವಯಂ ಸೇವಾ ಸಂಸ್ಥೆಯ ನಾಮ ನಿರ್ದೇಶಿತ ಪ್ರತಿನಿಧಿಗಳು ಸದಸ್ಯರಾಗಿರುತ್ತಾರೆ. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಜಿಲ್ಲಾ ಸಮಗ್ರ ಮಕ್ಕಳ ರಕ್ಷಣಾ ಘಟಕ ಇವರು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ.
ಬಾಲನ್ಯಾಯ ಕಾರ್ಯಕ್ರಮ, ಬೀದಿ ಮಕ್ಕಳ ಕಾರ್ಯಕ್ರಮ, ಸ್ವದೇಶಿ ದತ್ತು ಕಾರ್ಯಕ್ರಮ ಪ್ರೋತ್ಸಾಹಿಸಲು ಶಿಶುಗೃಹ/ ವಿಶೇಷ ದತ್ತ ಏಜೆನ್ಸಿಗಳಿಗೆ ನೆರವಿನ ಯೋಜನೆ, ಚೈಲ್ಡ್ ಲೈನ್ (ಮಕ್ಕಳ ಸಹಾಯವಾಣಿ) ಇವನ್ನೆಲ್ಲಾ ವಿಲೇನಗೊಳಿಸಿ ಮಕ್ಕಳಿಗೆ ಗರಿಷ್ಠ ಸೌಲಭ್ಯ ಲಭ್ಯವಾಗಿಸಲು ಯೋಜನಾ ಅನುಷ್ಠಾನ ಮತ್ತು ಉಸ್ತುವಾರಿ ಮಾಡಲು ಪ್ರತ್ಯೇಕ ವಿಭಾಗಗಳನ್ನು ರಚಿಸಲು ಮಾರ್ಗಸೂಚಿ ರೂಪಿಸಲಾಗಿದೆ.
ಈ ಘಟಕದ ಕಾರ್ಯಕ್ರಮಗಳು ಅಭಿಯಾನ ಮಾದರಿಯಲ್ಲಿ ಜರುಗಬೇಕಿದ್ದು, ಪ್ರತೀ ಜಿಲ್ಲೆಯಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಯೋಜನೆಯನ್ನು ಸಿದ್ಧಪಡಿಸಬೇಕಿದೆ. ಮಕ್ಕಳ ಬಗ್ಗೆ ಅಂಕಿ ಅಂಶಗಳ ದಾಖಲೆ ನಿರ್ವಹಿಸಬೇಕಿದೆ. ಮಕ್ಕಳಿಗಾಗಿ ಕಾರ್ಯನಿರ್ವಹಿಸುತ್ತಿರುವ ಎಲ್ಲ ಸರ್ಕಾರಿ ಹಾಗೂ ಸರ್ಕಾರೇತರ ಸಂಸ್ಥೆಗಳನ್ನು ನೋಂದಣಿ ಮಾಡಿಕೊಳ್ಳುವ ಬಗ್ಗೆ ಖಚಿತಪಡಿಸಿಕೊಳ್ಳವುದು ಹಾಗೂ ಬಾಲನ್ಯಾಯ ಕಾಯಿದೆಯಡಿ ಸಂಸ್ಥೆಗಳಲ್ಲಿ ಮಕ್ಕಳಿಗೆ ಒದಗಿಸಬೇಕಾಗಿರುವ ಕನಿಷ್ಠ ಸೇವೆಗಳನ್ನು ನಿಗದಿಪಡಿಸಿದ್ದು, ಆಗಿಂದಾಗ್ಗೆ ಈ ಸಂಸ್ಥೆಗಳು ಒದಗಿಸುತ್ತಿರುವ ಸೇವೆಗಳ ಗುಣಮಟ್ಟದ ಪರಿಶೀಲನೆ ನಡೆಸಬೇಕಿದೆ.
ಸಮಗ್ರ ಮಕ್ಕಳ ಹಿತದೃಷ್ಟಿಯನ್ನು ಗಮನದಲ್ಲಿರಿಸಿ ರೂಪಿಸಲಾಗಿರುವ ಈ ಘಟಕ ಸಕ್ರಿಯ ಹಾಗೂ ಪರಿಣಾಮಕಾರಿ ಕಾರ್ಯಾನುಷ್ಠಾನಕ್ಕೆ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಮಾರ್ಗದರ್ಶನ ನೀಡಿದರು. ಸಿಬ್ಬಂದಿ ನೇಮಕ ಹಾಗೂ ಘಟಕ ಕಾರ್ಯಾಚರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕರಿಂದ ಮಾಹಿತಿ ಪಡೆದರು.
ಇಲಾಖೆಯನ್ನು ಸಬಲೀಕರಿಸುವ ಜೊತೆಗೆ ಈ ಘಟಕ ಪರಿಣಾಮಕಾರಿಯಾಗಿ ಕಾರ್ಯೋನ್ಮುಖವಾಗಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸೂಚನೆಗಳನ್ನು ನೀಡಿದರು.

Monday, March 26, 2012

ಯುವಕ ಸಂಘಟನೆಗಳಿಂದ ಉತ್ತಮ ಸಮಾಜ: ಜಿಲ್ಲಾಧಿಕಾರಿ

ಮಂಗಳೂರು,ಮಾರ್ಚ್.26:ಸಶಕ್ತ ಯುವಕ ಮತ್ತು ಯುವತಿ ಮಂಡಲಗಳು ಸಮಾಜಮುಖಿ ಕರ್ತವ್ಯಗಳನ್ನು ನಿರ್ವಹಿಸಿದರೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಜನಸಂಪರ್ಕವಿರುವ ಕಚೇರಿಗಳನ್ನು ಮಧ್ಯವರ್ತಿಗಳಿಂದ ಮುಕ್ತರನ್ನಾಗಿಸಲು ಸಾಧ್ಯ ಎಂದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಹೇಳಿದರು.
ಅವರಿಂದು ನಗರದ ಡಯಟ್ ನಲ್ಲಿ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ,ಮಂಗಳೂರು ಜಿಲ್ಲಾ ಶಿಕ್ಷಣ ತರಬೇತಿ ಸಂಸ್ಥೆ ಸಭಾಭವನದಲ್ಲಿ ಹಾಸನ,ಮಡಿಕೇರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮೆಂಟರ್ ಯೂತ್ ಕ್ಲಬ್ ನ ನಾಯಕರಿಗೆ ಸಾಮಥ್ರ್ಯ ನಿರ್ಮಾಣ ತರಬೇತಿ ಕಾರ್ಯಕ್ರಮದ ಪ್ರಶಿಕ್ಷಣಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದರು.
ನಾವು ಮಾಡುವ ಕಾರ್ಯಕ್ರಮಗಳ ಉದ್ದೇಶ ಒಳೆಯದಿದ್ದರೆ ಪ್ರತಿಫಲವೂ ಒಳ್ಳೆಯದಿರುತ್ತದೆ; ಒಳ್ಳೆಯ ಕೆಲಸವನ್ನು ಮಾಡುದರಲ್ಲಿ ನಮ್ಮ ನಡುವೆ ಸ್ಪರ್ಧೆಗಳಾಗಬೇಕೇ ವಿನ: ಕೆಟ್ಟದ್ದನ್ನು ಮಾಡಲು ಅಲ್ಲ ಎಂದರು. ಒಳಿತನ್ನು ಮಾಡುವ ಮನೋಭಾವ ಎಲ್ಲರಿಗೂ ಇರಬೇಕು. ಸರ್ಕಾರದ ಸವಲತ್ತುಗಳನ್ನು ನಿಮ್ಮ ಹಳ್ಳಿಗಳ ಅರ್ಹರಿಗೆ ದೊರಕಿಸಿಕೊಡಿ. ಯೂತ್ ಕ್ಲಬ್ ಗಳು ಸಕ್ರಿಯವಾದಷ್ಟು ಸಮಾಜಕ್ಕೆ ಒಳಿತಾಗಲಿದೆ ಎಂದರು.
ಬಳಿಕ ನಡೆದ ಸಂವಾದದಲ್ಲಿ ಪ್ರಶಿಕ್ಷಣಾರ್ಥಿಗಳು ತಮ್ಮ ಅನುಭವಗಳನ್ನು ಸಮಸ್ಯೆಗಳನ್ನು ಜಿಲ್ಲಾಧಿಕಾರಿಗಳೊಂದಿಗೆ ಹೇಳಿದರು. ಡಯಟ್ ನ ಪ್ರಾಂಶುಪಾಲರಾದ ಪಾಲಾಕ್ಷಪ್ಪ, ನೆಹರು ಯುವಕೇಂದ್ರದ ಯುವ ಸಮನ್ವಯಾಧಿಕಾರಿ ಸಿ ಜೆ ಎಫ್ ಡಿ ಸೋಜ ಉಪಸ್ಥಿತರಿದ್ದರು.

Saturday, March 24, 2012

ವಿಶ್ವ ಕ್ಷಯರೋಗ ದಿನಾಚರಣೆ

ಮಂಗಳೂರು,ಮಾರ್ಚ್.24:ಸಾರ್ವಜನಿಕರು, ಸಂಘಸಂಸ್ಥೆಗಳು ಮತ್ತು ಸಮುದಾಯದವರ ಸಹಕಾರದಿಂದ ಮಾತ್ರ ಕ್ಷಯರೋಗ ಪತ್ತೆ ಮತ್ತು ಚಿಕಿತ್ಸೆ ಸಾಧ್ಯ ಎಂದು ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ಹೇಳಿದರು. ಅವರಿಂದು ನಗರದ ಜೆಪ್ಪುವಿನ ಸ್ಪಂದನಾ ಟ್ರಸ್ಟ್ ಸಭಾಂಗಣದಲ್ಲಿ ವಿಶ್ವ ಕ್ಷಯರೋಗ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಅಭಿ ವೃದ್ಧಿ ಹೊಂದು ತ್ತಿರುವ ಭಾರತ ದೇಶ ಕ್ಷಯ ರೋಗ ದಿಂದ ಇನ್ನೂ ಮುಕ್ತ ವಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆ ರಾಜ್ಯಕ್ಕೆ ಹಲವು ಉತ್ತಮ ಮಾದರಿ ಗಳನ್ನು ಎಲ್ಲ ಕ್ಷೇತ್ರ ಗಳಲ್ಲೂ ನೀಡಿದ್ದು, ಆರೋಗ್ಯ ಕ್ಷೇತ್ರ ದಲ್ಲೂ ತನ್ನ ಸಾಧನೆ ಯನ್ನು ದಾಖ ಲಿಸ ಬೇಕಿದೆ. ಕೇವಲ ಅಧಿಕಾ ರಿಗ ಳಿಂದ ಮಾತ್ರ ಈ ಸಾಧನೆ ಸಾಧ್ಯ ವಿಲ್ಲ; ಇದಕ್ಕೆ ಸಮು ದಾಯದ ಸಹ ಭಾಗಿ ತ್ವದ ಅಗತ್ಯ ವಿದೆ ಎಂದು ಅವರು ನುಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಉತ್ತಮ ಪ್ರಯತ್ನ ಮಾಡುತ್ತಿದೆ ಎಂದು ಶ್ಲಾಘಿಸಿದ ಅವರು, ಆರೋಗ್ಯದ ಬಗ್ಗೆ ಪಡೆದ ಮಾಹಿತಿಯ ಸದ್ಬಳಕೆ ಆಗಬೇಕಿದೆ ಎಂದರು.
ಕಾರ್ಯ ಕ್ರಮದ ಬಗ್ಗೆ ಡಾ ಕಿಶೋರ್ ಪ್ರಾಸ್ತಾ ವಿಕ ಮಾತು ಗಳಲ್ಲಿ, ಸಮು ದಾಯ ವನ್ನು ಕ್ಷಯ ರೋಗ ದಿಂದ ಮುಕ್ತ ಮಾಡು ವುದೇ ರಾಷ್ಟ್ರೀಯ ಕ್ಷಯ ನಿಯಂ ತ್ರಣ ಕಾರ್ಯ ಕ್ರಮದ ಉದ್ದೇಶ ವಾಗಿದೆ ಎಂದರು. ಮುಖ್ಯ ಅತಿಥಿ ಗಳಾ ಗಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿ ಕಾರಿ ಡಾ ಓ ಆರ್ ಶ್ರೀ ರಂಗಪ್ಪ ಅವರು ಜಿಲ್ಲೆಯಲ್ಲಿ ಆರೋಗ್ಯಕ್ಕೆ ಪೂರಕವಾಗಿ ರೂಪಿಸಿಕೊಂಡಿರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಪ್ರಸ್ತುತ ಸಾಲಿನಲ್ಲಿ ಅಕ್ಟೋಬರ್ 2012ರೊಳಗೆ ಜಿಲ್ಲೆಯಲ್ಲಿ ಡಾಟ್ಸ್ ಪ್ಲಸ್ (treatment for multi Drug resistant TB cases) ಕಾರ್ಯಕ್ರಮದ ಯೋಜನೆ ಹಾಕಿಕೊಳ್ಳಲಾಗಿದೆ.
ಈ ಸಂಬಂಧ ಪೂರ್ವ ಸಿದ್ಧತೆಗಳು ನಡೆದಿದೆ ಎಂದರು. ಪರಿಷ್ಕೃತ ರಾಷ್ಟ್ರೀಯ ಕ್ಷಯ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯ ಮಂಗಳೂರು, ಮೂಡಬಿದ್ರೆ, ಬಂಟ್ವಾಳ, ಪುತ್ತೂರು (ಸುಳ್ಯ ತಾಲೂಕು ಸೇರಿ), ಬೆಳ್ತಂಗಡಿ ಹೀಗೆ ಒಟ್ಟು 5 ಕ್ಷಯ ಚಿಕಿತ್ಸಾ ಘಟಕಗಳು ಕರ್ತವ್ಯ ನಿರ್ವಹಿಸುತ್ತಿದ್ದು, ಜಿಲ್ಲೆಯಲ್ಲಿ 29 ನಿಗದಿತ ಪ್ರಯೋಗ ಶಾಲೆಗಳು (ಸರಕಾರಿ ಆರೋಗ್ಯ ಸಂಸ್ಥೆಗಳು ಹಾಗೂ 6 ವೈದ್ಯಕೀಯ ಕಾಲೇಜುಗಳು ಸೇರಿ) ಕಾರ್ಯನಿರ್ವಹಿಸುತ್ತಿದೆ.
ಡಾ ಎಂ ರಾಮಕೃಷ್ಣ ರಾವ್ ಸ್ವಾಗತಿಸಿದರು. ಇನ್ಫೆಂಟ್ ಮೇರೀಸ್ ಕಾನ್ವೆಂಟ್ ಭಗಿನಿ ಮೇರಿ ಎಮ್ಮ ಜೋಸೆಫ್ ಮತ್ತು ಭಗಿನಿ ಇವಾಂಜಿಲಿನ್ ಉಪಸ್ಥಿತರಿದ್ದರು. ತೀರ್ಥ ಕೆ ಎಸ್ ವಂದಿಸಿದರು. ಆರೋಗ್ಯ ಇಲಾಖೆಯ ಜಯರಾಮ್ ಅವರು ಕಾರ್ಯಕ್ರಮ ನಿರ್ವಹಿಸಿದರು.

ಏ. 2ರಿಂದ 'ಸಕಾಲ' ರಾಜ್ಯಾದ್ಯಂತ ಜಾರಿ

ಮಂಗಳೂರು,ಮಾರ್ಚ್.24:ಮಾರ್ಚ್ ಒಂದರಿಂದ ಪ್ರಾಯೋಗಿಕವಾಗಿ ರಾಜ್ಯದ 4 ತಾಲೂಕುಗಳಲ್ಲಿ ಆರಂಭಗೊಂಡ 'ಸಕಾಲ' ಕರ್ನಾಟಕ ನಾಗರಿಕ ಸೇವಾ ಖಾತರಿ ಅಧಿನಿಯಮ 2011 ಇದೇ ಏಪ್ರಿಲ್ 2ರಿಂದ ರಾಜ್ಯಾದ್ಯಂತ ಜಾರಿಗೆ ಬರಲಿದೆ. ಈ ಕುರಿತು 22 ರಂದು ಸಂಜೆ ಮುಖ್ಯ ಕಾರ್ಯ ದರ್ಶಿ ಯವ ರಾದ ಎಸ್ ವಿ ರಂಗ ನಾಥ್ ಅವರು, ವಿಡಿಯೋ ಕಾನ್ಫ ರೆನ್ಸಿಂಗ್ ಮೂಲಕ ರಾಜ್ಯದ ಎಲ್ಲ ಜಿಲ್ಲಾ ಧಿಕಾರಿ ಗಳೊಂ ದಿಗೆ 'ಸಕಾಲ' ಪರಿಣಾ ಮಕಾರಿ ಅನು ಷ್ಠಾನ ಕುರಿತು ಚರ್ಚೆ ನಡೆ ಸಿದರು. ದಕ್ಷಿಣ ಕನ್ನಡದಲ್ಲಿ ಪೈಲೆಟ್ ಯೋಜನೆಯಡಿ ಪುತ್ತೂರು ತಾಲೂಕಿನಲ್ಲಿ ಯೋಜನೆ ಅನುಷ್ಠಾನದ ಕುರಿತು ತಮ್ಮ ಅನುಭವಗಳನ್ನು ಹಂಚಿಕೊಂಡ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು, ಯೋಜನೆ ಅನುಷ್ಠಾನಕ್ಕೆ ತರಲು ಜಿಲ್ಲೆ ಸಜ್ಜಾಗಿದೆ ಎಂದರು.
ಅಧಿನಿಯಮದಡಿ ಬರುವ ಎಲ್ಲ ಇಲಾಖೆಗಳು ತಾವು ಒದಗಿಸುವ ಸೇವೆಯ ಬಗ್ಗೆ ಸಾರ್ವಜನಿಕರಿಗೆ ಸೂಚನಾ ಫಲಕಗಳ ಮುಖಾಂತರ ಕಡ್ಡಾಯವಾಗಿ ಪ್ರದರ್ಶಿಸಲು ಸೂಚನೆ ನೀಡಲಾಗಿದೆ ಎಂದರು. ಇದರ ಜೊತೆ ಅರ್ಜಿಯ ಜೊತೆಗೆ ಏನೆಲ್ಲಾ ಪೂರಕಮಾಹಿತಿಗಳನ್ನು (ಚೆಕ್ ಲಿಸ್ಟ್)ನೀಡಬೇಕೆಂಬ ಬಗ್ಗೆಯೂ ಸಾರ್ವಜನಿಕರಿಗೆ ತಿಳಿಸಲು ಕ್ರಮಕೈಗೊಳ್ಳುವುದಾಗಿ ಯೂ ಜಿಲ್ಲಾಧಿಕಾರಿಗಳು ಹೇಳಿದರು. ಈ ಬಗ್ಗೆ ಪ್ರತಿ ದಿನದ ಪ್ರಗತಿಯ ಬಗ್ಗೆ ಪರಿ ಶೀಲನೆ ನಡೆ ಸಲು ಜಿಲ್ಲಾ ಮಟ್ಟ ದಲ್ಲಿ ನೋಡಲ್ ಅಧಿಕಾ ರಿಯೊ ಬ್ಬರ ಅಗತ್ಯ ವನ್ನು ಪ್ರತಿ ಪಾದಿಸಿದ ಜಿಲ್ಲಾ ಧಿಕಾ ರಿಗಳು, 26 ರಂದು ಈ ಸಂಬಂಧ ತಮ್ಮ ಕಚೇರಿ ಯಲ್ಲಿ ಪೂರ್ವ ಪರಿಶೀ ಲನೆ ಸಭೆ ನಡೆ ಸುವುದಾಗಿ ಹೇಳಿದರು. ಪುತ್ತೂರಿನಿಂದ 3725 ಅರ್ಜಿಗಳು ಸಕಾಲ ಅಧಿನಿಯಮದಡಿ ಸ್ವೀಕರಿಸಲಾಗಿದ್ದು, 3284 ಅರ್ಜಿಗಳನ್ನು ವಿಲೇ ಮಾಡಲಾಗಿದೆ ಎಂದರು.
ರಾಜ್ಯ ಮಟ್ಟದಲ್ಲಿ ಈ ಯೋಜನೆಯಡಿ 97 ಸಾವಿರಕ್ಕೂ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, ಅವುಗಳಲ್ಲಿ 80 ಸಾವಿರಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿಯಾಗಿರುವುದು ಈ ಯೋಜನೆಯ ಯಶಸ್ಸಿಗೆ ಸಾಕ್ಷಿಯಾಗಿದೆ. ಸಕಾಲ ಅನುಷ್ಠಾನದಿಂದ ರಾಜ್ಯದಲ್ಲಿ ಸಾರ್ವಜನಿಕರಿಗೆ ಅತ್ಯುತ್ತಮ ಮತ್ತು ಪಾರದರ್ಶಕ ಸೇವೆ ದೊರಕಿಸಿಕೊಡುವ ಕರ್ನಾಟಕ ಸರ್ಕಾರದ ಆಶಯಕ್ಕೆ ಇಂಬುಕೊಟ್ಟಂತಾಗಿದೆ ಎಂದು ವಿಡಿಯೋ ಕಾನ್ಫರೆನ್ಸ್ ನಲ್ಲಿ ಉಪಸ್ಥಿತರಿದ್ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ, ಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್ ಹಾಗೂ ಸೇವಾ ಖಾತರಿ ಅಧಿನಿಯಮದಡಿ ಬರುವ ಎಲ್ಲ ಇಲಾಖೆಗಳು ವಿಡಿಯೋ ಕಾನ್ಫರೆನ್ಸ್ ವೇಳೆ ಉಪಸ್ಥಿತರಿದ್ದರು.

Thursday, March 22, 2012

ದ.ಕ. ಜಿಲ್ಲೆಗೆ 'ನಿರ್ಮಲ ಗ್ರಾಮ' ಪುರಸ್ಕಾರ ಗೌರವ

ಮಂಗಳೂರು,ಮಾರ್ಚ್.22: ದಕ್ಷಿಣ ಕನ್ನಡ ಜಿಲ್ಲೆಗೆ ಸ್ವಚ್ಚತೆಗಾಗಿ 'ನಿರ್ಮಲ ಗ್ರಾಮ'
ಪುರಸ್ಕಾ ರದ ಗೌರವ ದೊರೆ ತ್ತಿದ್ದು,ಬುಧ ವಾರ ನವ ದೆಹಲಿ ಯಲ್ಲಿ ನಡೆದ ಸಮಾ ರಂಭ ದಲ್ಲಿ ರಾಷ್ಟ್ರ ಪತಿ ಶ್ರೀ ಮತಿ ಪ್ರತಿಭಾ ಪಾಟೀಲ್ ದೇವಿ ಸಿಂಗ್ ಅವರು ಜಿಲ್ಲಾ ಪಂಚಾ ಯತ್ ಅಧ್ಯಕ್ಷೆ ಶ್ರೀ ಮತಿ ಕೆ.ಟಿ. ಶೈಲಜಾ ಭಟ್ ಅವರಿಗೆ ಪುರಸ್ಕಾ ರವನ್ನು ಪ್ರದಾನ ಮಾಡಿ ದರು. ಸಿಇಓ ಡಾ. ಕೆ.ಎನ್. ವಿಜಯ ಪ್ರಕಾಶ್,ಮಂಗ ಳೂರು ತಾಲೂಕ್ ಪಂಚಾ ಯತ್ ಅಧ್ಯಕ್ಷರು, ಕಾರ್ಯ ನಿರ್ವಾಹ ಣಾಧಿ ಕಾರಿ,ಜಿಲ್ಲಾ ಪಂಚಾ ಯತ್ ನೈರ್ಮಲ್ಯ ಧಿಕಾರಿ ಮಂಜುಳ ಅವರು ಸಮಾ ರಂಭದಲ್ಲಿ ಉಪಸ್ಥಿತರಿದ್ದರು. ನಿರ್ಮಲ ಗ್ರಾಮ ಪ್ರಶಸ್ತಿ ಸ್ವೀಕರಿಸುತ್ತಿರುವ ದೇಶದ 11 ನೇ ಮತ್ತು ರಾಜ್ಯದ ಮೊದಲ ಜಿಲ್ಲೆ ಎಂಬ ಹೆಗ್ಗಳಿಕೆಗೆ ದಕ್ಷಿಣ ಕನ್ನಡ ಜಿಲ್ಲೆ ಪಾತ್ರವಾಗಿದೆ.

ನಗರದ ಪುರಭವನದಲ್ಲಿ ಸೋಲಿಗರ ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮ ಸಮಾರೋಪ

ಮಂಗಳೂರು,ಮಾರ್ಚ್22:ಜಿಲ್ಲೆಯಲ್ಲಿ ಸತತ ಏಳು ಪ್ರದೇಶಗಳಲ್ಲಿ ತಮ್ಮ ಸೋಲಿಗರ ನೃತ್ಯ ಹಾಗೂ ಸಂಸ್ಕೃತಿಯನ್ನು ಪರಿಚಯಿಸಿದ ಕೊಳ್ಳೇಗಾಲದ ಯಳಂದೂರಿನ ಪುಷುಮಾಲೆ ತಂಡ ಕೊನೆಯದಾಗಿ ನಗರದ ಪುರಭವನದಲ್ಲಿ ತಮ್ಮ ಪ್ರದರ್ಶನ ನೀಡಿದರು.
ಜಿಲ್ಲಾ ಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ, ಡಿಸಿಪಿ ಮುತ್ತು ರಾಯರು, ಸಾರ್ವ ಜನಿಕ ಶಿಕ್ಷಣ ಇಲಾ ಖೆಯ ಉಪ ನಿರ್ದೇ ಶಕ ರಾದ ಮೋಸೆಸ್ ಜಯ ಶೇಖರ್, ಸರ್ವ ಶಿಕ್ಷಣ ಅಭಿ ಯಾನದ ಅಧಿ ಕಾರಿ ಶಿವ ಪ್ರಕಾಶ್, ಒಂಬುಡ್ಸ ಮನ್ ಶೀನ ಶೆಟ್ಟಿ, ಜನ ಶಿಕ್ಷಣ ಟ್ರಸ್ಟ್ ನ ಕೃಷ್ಣ ಮೂಲ್ಯರು ಕಾರ್ಯ ಕ್ರಮ ವೀಕ್ಷಿ ಸಿದರು. ತಮ್ಮ ಸಾಂಪ್ರ ದಾಯಿಕ ಹಾಡು ಹಾಗೂ ನೃತ್ಯ ವನ್ನು ಪ್ರದರ್ಶಿ ಸಿದ ಸೋಲಿ ಗರ ತಂಡದ ನಾಯಕ ಬಸವ ರಾಜ್ ಜಿಲ್ಲೆ ಯಲ್ಲಿ ಎಲ್ಲರೂ ನೀಡಿದ ಸಹ ಕಾರಕ್ಕೆ ಕೃತ ಜ್ಞತೆ ಅರ್ಪಿ ಸಿದರು.

Wednesday, March 21, 2012

ಸಂಸ್ಕೃತಿ ವಿನಿಮಯದಿಂದ ಪರಸ್ಪರ ಪ್ರೀತಿ ಹೆಚ್ಚಲಿದೆ

ಮಂಗಳೂರು,ಮಾರ್ಚ್.21:ಒಂದು ಪ್ರದೇಶದ ಜನರು ಮತ್ತೊಂದು ಪ್ರದೇಶದ ಜನರೊಂದಿಗೆ ತಮ್ಮ ಸಂಸ್ಕೃತಿಯನ್ನು ಪ್ರದರ್ಶಿಸುವುದರಿಂದ ಪರಸ್ಪರರಲ್ಲಿ ಪ್ರೀತಿ ಪ್ರೇಮ ಭಾಂದವ್ಯ ಹೆಚ್ಚಲಿದೆ ಎಂದು ಕೊಲ್ನಾಡು ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಸುಭಾಷ್ಚಂದ್ರ ಶೆಟ್ಟಿ ಅವರು ತಿಳಿಸಿದ್ದಾರೆ.ಅವರು ಮಂಗಳ ವಾರ ಮಂಗ ಳೂರು ತಾಲೂ ಕಿನ ಕೊಲ್ನಾಡು ಗ್ರಾಮ ಪಂಚಾ ಯ್ತಿಯ ಸಾಲೆ ತ್ತೂರು ಗಾಂಧಿ ಗ್ರಾಮದ ಡಾ|ಬಿ.ಆರ್. ಅಂಬೇ ಡ್ಕರ್ ಭವನ ಆವರ ಣದಲ್ಲಿ ವಾರ್ತಾ ಇಲಾಖೆ ವತಿ ಯಿಂದ ಏರ್ಪ ಡಿಸಿದ್ದ ಸೋಲಿ ಗರ ನೃತ್ಯ ಕಾರ್ಯ ಕ್ರಮ ಉದ್ಘಾ ಟಿಸಿ ಮಾತ ನಾಡಿದರು.

ಕಾಡು ವಾಸಿ ಗಳಾದ ಸೋಲಿ ಗರ ರೊಟ್ಟಿ, ಹಬ್ಬದ ಕುಣಿತ, ಮಾರಿ ಹಬ್ಬದ ಕುಣಿತ,ಗೌಜಲು ಹಕ್ಕಿ ಹಿಡಿ ಯುವ ಕುಣಿತ,ಮಾರಿ ಕುಣಿತ,ಬಿಳಿ ಗಿರಿ ರಂಗ ಯ್ಯನ ಹಾಡು ಎಲ್ಲವೂ ಅವರ ಬದುಕಿನ ಬಗ್ಗೆ ತಿಳಿಸು ವಂತಿದೆ ಎಂದು ಅವರು ತಿಳಿ ಸಿದರು.ಸಮಾ ರಂಭ ದಲ್ಲಿ ಗ್ರಾಮ ಪಂಚಾ ಯತ್ ಸದಸ್ಯ ರಾದ ವಿಶ್ವ ನಾಥ ಶೆಟ್ಟಿ,ಪವಿತ್ರ ಪೂಂಜ ಸಿಬ್ಬಂದಿ ಜಯ ರಾಮ್ ಸೇರಿದಂತೆ ವಿವಿಧ ಸಂಘ ಟನೆಗಳ ಮುಖ್ಯ ಸ್ಥರು ಭಾಗ ವಹಿ ಸಿದ್ದರು.ವಾರ್ತಾ ಇಲಾಖೆ ಸಹಾ ಯಕ ರಾದ ಬಿ.ಆರ್.ಚಂದ್ರ ಶೇಖರ ಆಜಾದ್ ಕಾರ್ಯ ಕ್ರಮ ನಿರೂ ಪಿಸಿದರು.

Tuesday, March 20, 2012

ಸಕಾಲ 'ಪ್ರತಿಕ್ರಿಯೆ' ಗೆ ವಿಡಿಯೋಕಾನ್ಫರೆನ್ಸ್

ಮಂಗಳೂರು,ಮಾರ್ಚ್.20: ಸಕಾಲದಲ್ಲಿ ಸರ್ಕಾರದ ಸೇವೆಯನ್ನು ಸಾರ್ವಜನಿಕರಿಗೆ ನೀಡುವ ಉದ್ದೇಶದಿಂದ ನಾಲ್ಕು ಜಿಲ್ಲೆಗಳ ನಾಲ್ಕು ತಾಲೂಕುಗಳಲ್ಲಿ ಪೈಲಟ್ ಯೋಜನೆಯ ಸಾಧಕ ಬಾಧಕ ಪರಿಶೀಲನೆಗೆ ಅಪರ ಮುಖ್ಯ ಕಾರ್ಯದರ್ಶಿ ಜೈರಾಜ್ ನೇತೃತ್ವದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರು ತಾಲೂಕು, ಬೀದರ್, ಧಾರವಾಡ, ಚಿತ್ರದುರ್ಗದ ಜಿಲ್ಲಾಧಿಕಾರಿಗಳೊಂದಿಗೆ ಇಂದು ವಿಡಿಯೋಕಾನ್ಫರೆನ್ಸ್ ನಡೆಸಿದರು.
ದಕ್ಷಿಣ ಕನ್ನಡದಲ್ಲಿ ಸಕಾಲ ಜಾರಿಯಿಂದ ಜನರಿಗಾದ ಅನುಕೂಲಗಳು ಮತ್ತು ಅರ್ಜಿಗಳ ವಿಲೇವಾರಿ ಬಗ್ಗೆ ಮಾಹಿತಿ ಪಡೆದುಕೊಂಡ ಅಪರ ಮುಖ್ಯ ಕಾರ್ಯದರ್ಶಿಗಳು, ಯೋಜನೆ ಅನುಷ್ಠಾನಕ್ಕೆ ತಂದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಜಿಲ್ಲೆಯ ಪುತ್ತುರು ತಾಲೂಕಿನಲ್ಲಿ ಸಕಾಲ ಯೋಜನೆಯಡಿ ಸ್ವೀಕರಿಸಲಾದ 3401 ಅರ್ಜಿಗಳಲ್ಲಿ 3085 ಅರ್ಜಿಗಳನ್ನು ವಿಲೇ ಮಾಡಲಾಗಿದೆ ಎಂಬ ಮಾಹಿತಿಯನ್ನು ಅಪರ ಮುಖ್ಯ ಕಾರ್ಯದರ್ಶಿಗಳಿಗೆ ನೀಡಿದರು. ಪ್ರಾದೇಶಿಕ ಸಾರಿಗೆ ಇಲಾಖೆ ಅತೀ ಹೆಚ್ಚು ಅರ್ಜಿಗಳನ್ನು ಸ್ವೀಕರಿಸಿದ್ದು, 2254 ಅರ್ಜಿಗಳಲ್ಲಿ 2118 ಅರ್ಜಿಗಳನ್ನು ವಿಲೇ ಮಾಡಿದೆ. ಇನ್ನುಳಿದಂತೆ ಕಂದಾಯ ಇಲಾಖೆ 415 ಅರ್ಜಿಗಳಲ್ಲಿ 325 ಅರ್ಜಿಗಳನ್ನು, ಪುರಸಭೆ 352 ಅರ್ಜಿಗಳನ್ನು ಸ್ವೀಕರಿಸಿದ್ದು 312 ಅರ್ಜಿಗಳನ್ನು ವಿಲೇ ಮಾಡಲಾಗಿದೆ. ಕಮರ್ಷಿಯಲ್ ಟ್ಯಾಕ್ಸ್ ಡಿಪಾರ್ಟ್ ಮೆಂಟ್175 ಅರ್ಜಿಗಳಲ್ಲಿ 152, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ 32ರಲ್ಲಿ 30 ಅರ್ಜಿಗಳನ್ನು ವಿಲೇ ಮಾಡಿದ್ದು, ಸಕಾಲ ಯೋಜನೆಯನ್ನು ಪರಿಣಾಮಕಾರಿ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ ಎಂದರು. ಇನ್ನುಳಿದಂತೆ ಜಿಲ್ಲಾ ಪಂಚಾಯತ್ ವ್ಯಾಪ್ತಿಯ 64 ಅರ್ಜಿಗಳಲ್ಲಿ 32 ಅರ್ಜಿಗಳನ್ನು ಸ್ವೀಕರಿಸಲಾಗಿದೆ. ಗೃಹ, ಕಾರ್ಮಿಕ ಇಲಾಖೆ, ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆಗಳಲ್ಲಿ ಅರ್ಜಿಗಳು ಸ್ವೀಕರಿಸಲಾಗಿದ್ದು ಸಕಾಲದಲ್ಲಿ ಅರ್ಜಿ ವಿಲೇ ಮಾಡಲಾಗಿದೆ ಎಂಬ ಮಾಹಿತಿ ನೀಡಿದರು.
ಇನ್ನುಳಿದಂತೆ ಸೌಕರ್ಯಗಳ ಬಗ್ಗೆ ಹಾಗೂ ಕೆಲವು ಇಲಾಖೆಗಳಲ್ಲಿ ಅನುಷ್ಠಾನಕ್ಕೆ ಇರುವ ತೊಂದರೆಯ ಬಗ್ಗೆ ಚರ್ಚಿಸಲಾಯಿತು. ಮುಖ್ಯ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್ ಅವರು, ಜಿಲ್ಲಾಧಿಕಾರಿಗಳ ವಿವೇಚನೆಗೆ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲು ಈಗಾಗಲೇ ನಿರ್ದೇಶನ ನೀಡಿರುವುದಾಗಿ ನುಡಿದರು. ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ, ಆರ್ ಟಿ ಒ ಮಲ್ಲಿಕಾರ್ಜುನ್, ಡಿ ಎಚ್ ಒ ಸೇರಿದಂತೆ ಎಲ್ಲ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪಾಲಿಕೆ ವ್ಯಾಪ್ತಿಯಲ್ಲಿ ರೂ.5.25 ಕೋ.ಕಾಮಗಾರಿ ಪೂರ್ಣ-ಯೋಗೀಶ್ ಭಟ್

ಮಂಗಳೂರು,ಮಾರ್ಚ್.20:ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಒಳರಸ್ತೆಗಳ ಅಭಿವೃದ್ಧಿಗೆ ಸಂಬಂಧ 60 ವಾರ್ಡುಗಳಿಗೆ ತಲಾ 25 ಲಕ್ಷದಂತೆ ಮಂಜೂರಾತಿ ನೀಡಲಾಗಿದ್ದು,ಈಗಾಗಲೇ 21 ವಾರ್ಡ್ ಗಳ ಕಾಮಗಾರಿ ಪೂರ್ಣಗೊಂಡಿದ್ದು,ಇದರ ಒಟ್ಟುಮೊತ್ತ ರೂ.5.25 ಕೋಟಿಗಳಾಗಿದೆಯೆಂದು ಮಂಗಳೂರು ದಕ್ಷಿಣ ವಿಧಾನಸಭಾ ಸದಸ್ಯರು ಹಾಗೂ ವಿಧಾನಸಭೆಯ ಉಪಾಧ್ಯಕ್ಷರಾದ ಎನ್.ಯೋಗೀಶ ಭಟ್ ಅವರು ತಿಳಿಸಿದ್ದಾರೆ. ಅವರು ಇತ್ತೀಚೆಗೆ ಮಂಗಳೂರು ಮಹಾನಗರಪಾಲಿಕೆಗೆ ಮಾನ್ಯ ಮುಖ್ಯಮಂತ್ರಿಗಳು ನೀಡಿರುವ ರೂ.100 ಕೋಟಿ ಅನುದಾನದದ 2ನೇ ಹಂತದ ಕಾಮಗಾರಿಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿ ಈ ಮಾಹಿತಿ ನೀಡಿದರು.,
ಪ್ರಗತಿಯಲ್ಲಿರುವಂತಹ 39 ವಾರ್ಡುಗಳ ಕಾಮಗಾರಿಗಳಲ್ಲಿ ವಿವಿಧ ಹಂತಗಳಲ್ಲಿರುವ ಕಾಮಗಾರಿ ಸುಮಾರು ರೂ.10 ಕೋಟಿ, ಮಂಜೂರಾದ 5 ವಿದ್ಯುದ್ಧೀಕರಣ ಕಾಮಗಾರಿಗಳಲ್ಲಿ ಕಾಂಕ್ರೀಟ್ ರಸ್ತೆ ವಿಭಾಜಕದಲ್ಲಿ ವಿದ್ಯುತ್ ದೀಪ ಅಳವಡಿಕೆ ಮುಂತಾದ 3 ಕಾಮಗಾರಿಗಳು ಪೂರ್ತಿಗೊಂಡಿದ್ದು ತಗಲಿದ ಒಟ್ಟು ವೆಚ್ಚ ರೂ.68ಲಕ್ಷ ,ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಕಾರ್ಯಾದೇಶ ನೀಡಿರುವ ಕಾಮಗಾರಿಗಳು ರೂ.2.5ಕೋಟಿ ಟೆಂಡರ್ ಹಂತದಲ್ಲಿರುವ ಕಾಮಗಾರಿಗಳು ಒಟ್ಟು ರೂ.33.46 ಕೋಟಿ ರೂ.ಗಳೆಂದು ಅವರು ತಿಳಿಸಿದ್ದಾರೆ.

ಜನಮನಗೆದ್ದ ಸೋಲಿಗರ ನೃತ್ಯ

ಮಂಗಳೂರು ಮಾರ್ಚ್.20:ವಾರ್ತಾ ಇಲಾಖೆ,ಮಂಗಳೂರು ಇವರು ಸಾಂಸ್ಕೃತಿಕ ವಿನಿಮಯ ಕಾರ್ಯಕ್ರಮದನ್ವಯ ಬಂಟ್ವಾಳ ತಾಲೂಕು ಬಾಳೆಪುಣಿ ಗ್ರಾಮದಲ್ಲಿ ನಿನ್ನೆ ಸೋಮವಾದಂದು ಸಂಜೆ ಏರ್ಪಡಿಸಿದ್ದ ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಬಿಳಿಗಿರಿ ರಂಗನಬೆಟ್ಟದ ತಪ್ಪಲಿನ ಬುಡಕಟ್ಟು ಕಲಾವಿದರಾದ ಪುಪುಮಾಲೆ ಕಲಾತಂಡದ ಸದಸ್ಯರು ನಡೆಸಿಕೊಟ್ಟ ಸೋಲಿಗರ ನೃತ್ಯ ಅತ್ಯಂತ ಆಕರ್ಷಕವಾಗಿ ಜನಮನ ಸೂರೆಗೊಂಡಿದೆ.ಸೋಲಿ ಗರ ನೃತ್ಯ ಕಾರ್ಯ ಕ್ರಮದ ಜೊತೆ ಯಲ್ಲಿ ಸ್ಥ ಳೀಯ ಕೊರಗ ಸಮು ದಾಯದ ಆದಿ ಸಿರಿ ಕಲಾ ತಂಡ ದವರೂ ತಮ್ಮ ನೃತ್ಯ ಪ್ರದ ರ್ಶನ ನೀಡಿದ್ದು,ಎರಡು ಆದಿ ವಾಸಿ ಸಾಂ ಸ್ಖೃತಿಕ ಕಲಾ ತಂಡ ಗಳ ಸಂಸ್ಕೃತಿ ವಿನಿ ಮಯಕ್ಕೆ ವೇದಿಕೆ ಸಾಕ್ಷಿ ಯಾಯಿತು.ಸಮಾ ರಂಭ ದಲ್ಲಿ ಬಾಳೆ ಪುಣಿ ಗ್ರಾಮ ಪಂಚಾ ಯತ್ ಅಧ್ಯಕ್ಷ ರಾದ ಚಂದ್ರ ಶೇಖರ ಆಳ್ವಾ, ಮಹಾ ತ್ಮ ಗಾಂಧಿ ರಾ ಷ್ಟ್ರೀಯ ಗ್ರಾ ಮೀಣ ಉದ್ಯೋಗ ಭರವಸೆ ಯೋಜ ನೆಯ ಒಂ ಬುಡ್ಸ್ ಮನ್ ಬಿ. ಶೀನ ಶೆಟ್ಟಿ, ಜನ ಶಿಕ್ಷಣ ಟ್ರಸ್ಟ್ ನ ಕೃಷ್ಣ ಮೂಲ್ಯ ಮುಂತಾ ದವರು ಹಾಜ ರಿದ್ದರು. ಪತ್ರ ಕರ್ತ ಗುರು ವಪ್ಪ ಎನ್.ಟಿ. ಬಾಳೆ ಪುಣಿ ಕಾರ್ಯ ಕ್ರಮ ನಿರೂ ಪಿಸಿ ದರು. ಶಾಲಾ ಮಕ್ಕ ಳಿಂದ ಸ್ವಚ್ಛತಾ ಗೀತೆ ಹಾಗೂ ಸ್ವಚ್ಛತಾ ಘೋಷಣೆ ಗಳನ್ನು ನಡೆಸಿ ಕೊಡ ಲಾಯಿತು.

Monday, March 19, 2012

ಸಿಂಥೆಟಿಕ್ ಟ್ರ್ಯಾಕ್ ಕಾಮಗಾರಿ ಪರಿಶೀಲನೆ

ಮಂಗಳೂರು,ಮಾರ್ಚ್.19:ನಗರದ ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸಿಂಥೆಟಿಕ್ ಟ್ರ್ಯಾಕ್ ಕಾಮಗಾರಿ ಕಾಲಮಿತಿಯೊಳಗೆ ಉತ್ತಮ ಗುಣಮಟ್ಟದೊಂದಿಗೆ ಸಂಪೂರ್ಣಗೊಳಿಸಲು ಉಸ್ತುವಾರಿ ಸಮಿತಿ ಮತ್ತು ತಾಂತ್ರಿಕ ಸಮಿತಿಯನ್ನು ರಚಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಹೇಳಿದರು.
ಇಂದು ನಗರದ ಮಂಗಳಾ ಸ್ಟೇ ಡಿಯಂ ಕಚೇರಿ ಯಲ್ಲಿ ನಡೆದ ಪ್ರಗತಿ ಪರಿ ಶೀಲನಾ ಸಭೆ ಯನ್ನು ದ್ದೇಶಿಸಿ ಮಾತ ನಾಡಿದ ಅವರು, ಏಪ್ರಿಲ್ ನೊಳಗೆ ಕಾಮ ಗಾರಿ ಮುಗಿಸಿ ಮೇ ಮೊದಲ ವಾರದಲ್ಲಿ ಸಿಂಥೆ ಟಿಕ್ ಟ್ರ್ಯಾಕ್ ಉದ್ಘಾ ಟನೆ ನಡೆಸಲು ನಿರ್ಧ ರಿಸ ಲಾಗಿದೆ ಎಂದರು.
ಕಾಮಗಾರಿ ಪರಿಶೀಲನೆಗೆ ರಚಿಸಲಾಗಿರುವ ಸಮಿತಿಯಲ್ಲಿ ಭದ್ರಾವತಿಯ ರಾಜು ವೇಲು ಅವರನ್ನು ಸೇರಿಸಲು ಸಮಿತಿಯ ಸದಸ್ಯರ ಸಲಹೆಯಂತೆ ನಿರ್ಧರಿಸಲಾಯಿತು. ಅಂತಾರಾಷ್ಟ್ರೀಯ ಅಥ್ಲೆಟಿಕ್ ಫೆಡರೇಷನ್ ಅವರು ಪ್ರಮಾಣೀಕರಿಸಿದ ಬಳಿಕ ಹಣ ಬಿಡುಗಡೆ ಮಾಡಲಾಗುವುದು ಎಂದ ಜಿಲ್ಲಾಧಿಕಾರಿಗಳು ಕಾಮಗಾರಿಯ ಗುಣಮಟ್ಟದ ಅನುಷ್ಠಾನಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಇದೇ ಸಂದರ್ ಭದಲ್ಲಿ ಕದ್ರಿ ಐಟಿಐ ಬಳಿ ಇರುವ ಜಾಗದಲ್ಲಿ ಕ್ರೀಡಾ ಹಾಸ್ಟೆಲ್ ನಿರ್ಮಾಣ ಮತ್ತು ಶಕ್ತಿ ನಗರ ದಲ್ಲಿರುವ 1.5 ಎಕರೆ ಪ್ರದೇ ಶದಲ್ಲಿ ಒಳಾಂ ಗಣ ಕ್ರೀಡಾಂಗಣ ನಿರ್ಮಾಣ ಮಾಡುವ ಬಗ್ಗೆಯೂ ತಾಂತ್ರಿಕ ವರದಿ ಸಲ್ಲಿಸಲು ಜಿಲ್ಲಾಧಿಕಾರಿಗಳು ಸೂಚಿಸಿದರು.
ಸಿಂಥೆಟಿಕ್ ಟ್ರ್ಯಾಕ್ ಅಳವಡಿಕೆಗೆ 3.09 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಕಾಮಗಾರಿ ಪ್ರಗತಿ ವಿವರವನ್ನು ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಪಾಶ್ರ್ವನಾಥ್ ಸಭೆಗೆ ತಿಳಿಸಿದರು.
ಉಪಸಭಾಧ್ಯಕ್ಷರಾದ ಎನ್ ಯೋಗೀಶ್ ಭಟ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಂಗಳಾ ಕ್ರೀಡಾಂಗಣದ ಸಮಗ್ರ ಅಭಿವೃದ್ಧಿ ಬಗ್ಗೆ ವಿಸ್ತೃತ ಚರ್ಚೆ ನಡೆಯಿತು. ನಗರದಲ್ಲಿ ಇನ್ನೊಂದು ಈಜು ಕೊಳ ನಿರ್ಮಾಣದ ಬಗ್ಗೆ ಸಲಹೆ ನೀಡಿದ ಉಪಸಭಾಧ್ಯಕ್ಷರು, ಎಮ್ಮೆಕೆರೆ ಸಮಗ್ರವಾಗಿ ಅಭಿವೃದ್ಧಿ ಹೊಂದುತ್ತಿದ್ದು ಒಂದೆಡೆ ನೈಸರ್ಗಿಕ ಮತ್ತು ಇನ್ನೊಂದು ಬದಿಯಲ್ಲಿ ಈಜುಕೊಳ ನಿರ್ಮಿಸಬಹುದು ಎಂದರು. ಇಲ್ಲಿನ ಸುತ್ತಮುತ್ತಲ ವಾತಾವರಣ ಈಜುಕೊಳ ನಿರ್ಮಾಣಕ್ಕೆ ಪೂರಕವಾಗಿದೆ ಎಂದರು.
ಟ್ರ್ಯಾಕ್ ನ್ನು 2ಡಿ ಯಲ್ಲಿ ರೂಪಿಸಲು ಯುವಜನ ಮತ್ತು ಸೇವಾ ಇಲಾಖೆಯ ನಿರ್ದೇಶಾನಾಲಯದ ಜೊತೆ ಮಾತುಕತೆ ನಡೆಸುವುದಾಗಿ ಉಪಸಭಾಧ್ಯಕ್ಷರು ಹೇಳಿದರು. ಬಂಗ್ರ ಕೂಳೂರಿನಲ್ಲಿ ಕ್ರೀಡಾಭಿವೃದ್ಧಿಗೆ ಮೈದಾನ ರೂಪಿಸುವ ಬಗ್ಗೆ ಪರಿಶೀಲಿಸಿ ವರದಿ ನೀಡುವುದಾಗಿ ಮೂಡಾ ಆಯುಕ್ತರಾದ ಅಜಿತ್ ಕುಮಾರ್ ಹೆಗ್ಡೆ ಅವರು ಹೇಳಿದರು.
ಸಭೆಯಲ್ಲಿ ಕಾರ್ಪೋ ರೇಷನ್ ಬ್ಯಾಂಕ್ ಕ್ರೀಡಾಂ ಗಣ ನಿರ್ವ ಹಣೆ ಖರ್ಚನ್ನು ನೀಡುವ ಬಗ್ಗೆ ಆದ ಅನೌ ಪಾಚಾ ರಿಕ ಒಪ್ಪಂದ ಕುರಿತು ಕ್ರೀ ಡಾಂಗಣ ಸಮಿತಿ ಸದಸ್ಯರು ಜಿಲ್ಲಾಧಿ ಕಾರಿಗಳ ಗಮನಕ್ಕೆ ತಂದಾಗ ಈ ಬಗ್ಗೆ ಬ್ಯಾಂಕ್ ಅಧ್ಯಕ್ಷರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಮೂಡಬಿದ್ರೆ ಸ್ವರಾಜ್ ಮೈದಾನದಲ್ಲಿ ಕ್ರೀಡಾಂಗಣ ನಿರ್ಮಿಸಲು 40 ಲಕ್ಷ ರೂ. ಬಿಡುಗಡೆಯಾಗಿದ್ದು, ಟೆಂಡರ್ ಕರೆಯಲಾಗಿದೆ; ತಕ್ಷಣವೇ ಕ್ರಮಕೈಗೊಳ್ಳಲಾಗುವುದು ಎಂದು ತಾಂತ್ರಿಕ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಂಜುನಾಥ್ ಅವರು ಸಭೆಗೆ ತಿಳಿಸಿದರು. ಕರಾವಳಿ ಉತ್ಸವ ಮೈದಾನಕ್ಕೆ ಗೇಟ್ ಅಳವಡಿಸುವ ಬಗ್ಗೆ, ಎಲ್ಲರ ಅನುಕೂಲಕ್ಕೆ ಸುಸ್ಸಜ್ಜಿತ ಶೌಚಾಲಯ ನಿರ್ಮಿಸುವ ಬಗ್ಗೆ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು. ಸಮಿತಿ ಸದಸ್ಯರು ಸಭೆಯಲ್ಲಿ ಪಾಲ್ಗೊಂಡರು.

ಮಧ್ಯಪದವಿನಲ್ಲಿ ಸೋಲಿಗರ ನೃತ್ಯ ವೈಭವ

ಮಂಗಳೂರು,ಮಾರ್ಚ್.19: ಮಂಗಳೂರಿನ ಮಧ್ಯಪದವು ಶಾಲೆಯಲ್ಲಿ ಆದಿತ್ಯವಾರ ಆಯೋಜಿಸಿದ್ದ ಸೋಲಿಗರ ನೃತ್ಯ ವೈಭವ