ಅವರು ಇತ್ತೀಚೆಗೆ ಮಂಗಳೂರು ಮಹಾನಗರಪಾಲಿಕೆಗೆ ಮಾನ್ಯ ಮುಖ್ಯಮಂತ್ರಿಗಳು ನೀಡಿರುವ ರೂ.100 ಕೋಟಿ ಅನುದಾನದದ 2ನೇ ಹಂತದ ಕಾಮಗಾರಿಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ನಂತರ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿ ಈ ಮಾಹಿತಿ ನೀಡಿದರು.,ಪ್ರಗತಿಯಲ್ಲಿರುವಂತಹ 39 ವಾರ್ಡುಗಳ ಕಾಮಗಾರಿಗಳಲ್ಲಿ ವಿವಿಧ ಹಂತಗಳಲ್ಲಿರುವ ಕಾಮಗಾರಿ ಸುಮಾರು ರೂ.10 ಕೋಟಿ, ಮಂಜೂರಾದ 5 ವಿದ್ಯುದ್ಧೀಕರಣ ಕಾಮಗಾರಿಗಳಲ್ಲಿ ಕಾಂಕ್ರೀಟ್ ರಸ್ತೆ ವಿಭಾಜಕದಲ್ಲಿ ವಿದ್ಯುತ್ ದೀಪ ಅಳವಡಿಕೆ ಮುಂತಾದ 3 ಕಾಮಗಾರಿಗಳು ಪೂರ್ತಿಗೊಂಡಿದ್ದು ತಗಲಿದ ಒಟ್ಟು ವೆಚ್ಚ ರೂ.68ಲಕ್ಷ ,ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಕಾರ್ಯಾದೇಶ ನೀಡಿರುವ ಕಾಮಗಾರಿಗಳು ರೂ.2.5ಕೋಟಿ ಟೆಂಡರ್ ಹಂತದಲ್ಲಿರುವ ಕಾಮಗಾರಿಗಳು ಒಟ್ಟು ರೂ.33.46 ಕೋಟಿ ರೂ.ಗಳೆಂದು ಅವರು ತಿಳಿಸಿದ್ದಾರೆ.