Saturday, March 17, 2012

ನೈರ್ಮಲ್ಯ ಪ್ರಶಸ್ತಿ ಸ್ವೀಕರಿಸಲು ಜಿ.ಪಂ.ಅಧ್ಯಕ್ಷೆ ನೇತೃತ್ವದ ತಂಡ ಹೊಸದಿಲ್ಲಿಗೆ

ಮಂಗಳೂರು,ಮಾರ್ಚ್.17: ಸಂಪೂರ್ಣ ಸ್ವಚ್ಛತಾ ಆಂದೋಲನ ಕಾರ್ಯಕ್ರಮದಡಿ ದ.ಕ. ಜಿಲ್ಲಾ ಪಂಚಾಯತ್ ಕೇಂದ್ರ ಸರಕಾರದ ಜಿಲ್ಲಾ ನಿರ್ಮಲ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದ್ದು, ಮಾ. 21ರಂದು ಹೊಸದಿಲ್ಲಿಯಲ್ಲಿ ಭಾರತದ ರಾಷ್ಟ್ರಪತಿಗಳು ಪ್ರಶಸ್ತಿ ಪ್ರಧಾನ ಮಾಡುವರು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೆ.ಟಿ. ಶೈಲಜಾ ಭಟ್ ತಿಳಿಸಿದ್ದಾರೆ.ಜಿ.ಪಂ.ನ ಮಿನಿ ಸಭಾಂ ಗಣದಲ್ಲಿ ಇಂದು ಸುದ್ದಿ ಗೋಷ್ಠಿ ಯನ್ನು ದ್ದೇಶಿಸಿ ಮಾತ ನಾಡಿದ ಅವರು, ಜಿ.ಪಂ. ಮುಖ್ಯ ಕಾರ್ಯ ನಿರ್ವ ಹಣಾ ಧಿಕಾರಿ, ಮುಖ್ಯ ಯೋಜನಾ ಅಧಿ ಕಾರಿ, ಸುಳ್ಯ ಮತ್ತು ಮಂಗ ಳೂರು ತಾಲೂಕು ಪಂಚಾ ಯತ್ ಅಧ್ಯ ಕ್ಷರು ಸೇರಿ ದಂತೆ ತಮ್ಮ ನೇತೃತ್ವ ದಲ್ಲಿ ಜಿಲ್ಲಾ ತಂಡವೊಂದು ಮಾ. 19ರಂದು ಹೊಸದಿಲ್ಲಿಗೆ ಜಿಲ್ಲೆಯಿಂದ ಪ್ರಯಾಣ ಬೆಳೆಸಲಿದೆ ಎಂದು ಅವರು ತಿಳಿಸಿದರು.
ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗೆ 10 ಕೋಟಿ ರೂ.:
ಜಿಲ್ಲೆಯ ಐದು ತಾಲೂಕುಗಳ ಗ್ರಾಮೀಣ ರಸ್ತೆ ಕಾಮಗಾರಿಗಳ ಅಭಿವೃದ್ಧಿಗಾಗಿ 10 ಕೋಟಿ ರೂ. ಅಂದಾಜು ವೆಚ್ಚದಲ್ಲಿ 288 ಕಾಮಗಾರಿಗಳಿಗೆ ಸರಕಾರ ಮಂಜೂರಾತಿ ನೀಡಿದ್ದು,2011-12 ನೇ ಸಾಲಿ ನಲ್ಲಿ ಅಗತ್ಯ ಕಾಮ ಗಾರಿ ಗಳನ್ನು ಕೈ ಗೆತ್ತಿ ಗೊಳ್ಳಲು ಈಗಾ ಗಲೇ 3.33 ಕೋಟಿ ರೂ. ಹಣ ಬಿಡು ಗಡೆ ಯಾಗಿದೆ. ಮಳ ವೂರು ಹಾಗೂ 10 ಗ್ರಾಮ ಗಳಿಗೆ ಕುಡಿ ಯುವ ನೀರಿನ ವ್ಯವಸ್ಥೆ ಗಾಗಿ ಮೊದಲ ಹಂತದ ಕಾಮ ಗಾರಿ 10.50 ಕೋಟಿ ರೂ. ಬಿಡು ಗಡೆ ಯಾಗಿದೆ. ದ್ವಿತೀಯ ಹಂತ ದಲ್ಲಿ ಡ್ಯಾಂನ ರಕ್ಷಣಾ ಕಾಮ ಗಾರಿ ಗಾಗಿ 7.50 ಕೋಟಿ ರೂ. ಅಂದಾಜು ವೆಚ್ಚಕ್ಕೆ ಸರ ಕಾರ ಮಂಜೂ ರಾತಿ ನೀಡಿದೆ. ಜಿಲ್ಲೆಯ ಗ್ರಾ ಮೀಣ ರಸ್ತೆ ಗಳನ್ನು ಸು ವ್ಯವಸ್ಥೆ ಗೊಳಿಸಲು ಹೊಂಡ ಗಳನ್ನು ಮುಚ್ಚಲು 188 ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ 3.15 ಕೋಟಿ ರೂ. ಅನುದಾನ ಸರಕಾರದಿಂದ ಬಿಡುಗಡೆಯಾಗಿದ್ದು, ಮಾರ್ಚ್ ಅಂತ್ಯಕ್ಕೆ ಕಾಮಗಾರಿ ಪೂರ್ಣಗೊಳ್ಳಲಿದೆ. ಜಿ.ಪಂ. ಅಧ್ಯಕ್ಷರ ವಿವೇಚನೆಯಡಿ ಅಗತ್ಯ ಕಾಮಗಾರಿಗಳಿಗಾಗಿ ಒಂದು ಕೋಟಿ ರೂ. ಅನುದಾನದಲ್ಲಿ ಈಗಾಗಲೇ 73 ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅಧ್ಯಕ್ಷರು ಈ ಸಂದರ್ಭ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್, ಸ್ಥಾಯಿ ಸಮಿತಿ ಅಧ್ಯಕ್ಷರಾದ ಈಶ್ವರ ಕಟೀಲ್, ಜನಾರ್ದನ ಗೌಡ, ನವೀನ್ ಕುಮಾರ್ ಮೇನಾಲ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರಾದ ಚೆನ್ನಪ್ಪ ಕೋಟ್ಯಾನ್, ಸತೀಶ್ ಕುಂಪಲ, ಜಯಶ್ರೀ, ಜಿ.ಪಂ. ಯೋಜನಾ ಅಧಿಕಾರಿ ನಝೀರ್, ಮುಖ್ಯ ಲೆಕ್ಕಾಧಿಕಾರಿ ಲತೀಫ್ ಮೊದಲಾದವರು ಉಪಸ್ಥಿತರಿದ್ದರು.