ಈ ಎಲ್ಲ ಇಲಾಖೆಗಳು ಪ್ರತಿದಿನ ಈ ಬಗ್ಗೆ ವರದಿ ನೀಡಲು ನೋಡಲ್ ಅಧಿಕಾರಿಗಳನ್ನು ನೇಮಿಸಿ ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗೆ ಪ್ರತಿದಿನದ ಬೆಳವಣಿಗೆ ಬಗ್ಗೆ ಮಾಹಿತಿ ನೀಡಬೇಕೆಂದರು.
ತಕ್ಷಣವೇ ಅಗತ್ಯ ವಿರುವ ಇಲಾಖೆಗಳು ಕಂಪ್ಯೂ ಟರ್ ಗಳನ್ನು ಖರೀದಿಸಿ ಹಾಗೂ ಡಾಟಾ ಎಂಟ್ರಿ ಆಪರೇಟರ್ ಗಳನ್ನು ನೇಮಿಸಿಕೊಳ್ಳಿ; ಯಾವ ಸಮಸ್ಯೆ ಗಳಿದ್ದರೂ ಅಧಿನಿ ಯಮ ಅನುಷ್ಠಾನಕ್ಕೆ ಮುನ್ನ ಮಾಹಿತಿ ನೀಡಿ ಎಂದ ಅವರು, ಎಲ್ಲರಿಗೂ ಈ ಸಂಬಂಧ ಸೂಕ್ತ ತರಬೇತಿ ವ್ಯವಸ್ಥೆಯನ್ನು ಮಾಡಲಾಗುವುದು ಎಂದರು. ವ್ಯಾಪ್ತಿಯಡಿ ಬರುವ ಇಲಾಖೆಗಳ ಮುಖ್ಯಸ್ಥರಿಂದ ಕೈಗೊಂಡಿರುವ ಕ್ರಮಗಳ ವರದಿಯನ್ನು ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ ಅವರು ಪಡೆದುಕೊಂಡರು. ಮಹಾನಗರಪಾಲಿಕೆಯ ಸಿದ್ಧತೆಗಳನ್ನು ಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್ ವಿವರಿಸಿದರು.