Saturday, December 31, 2011

ರಾಷ್ಟ್ರೀಯ ಯುವಜನೋತ್ಸವ:ಸ್ಥಳೀಯ ಯುವ ಕಲಾವಿದರಿಗೆ ಅವಕಾಶ

ಮಂಗಳೂರು,ಡಿಸೆಂಬರ್.31:ಮಂಗಳೂರಿನಲ್ಲಿ ನಡೆಯಲಿರುವ 17ನೇ ರಾಷ್ಟ್ರೀಯ ಯುವಜನೋತ್ಸವ 2012 ಇದರ ಅಂಗವಾಗಿ 13-1-2012 ರಿಂದ 15-1-2012 ರ ವರೆಗೆ 18 ರಿಂದ 35 ವರ್ಷ ವಯೋಮಿತಿಯ ಯುವ ಕಲಾವಿದರ ಶಿಬಿರವನ್ನು ಪ್ರತೀ ದಿನ ಬೆಳಿಗ್ಗೆ 9.00 ರಿಂದ ಸಂಜೆ 5.00 ರ ತನಕ ಏರ್ಪಡಿಸಲಾಗಿದೆ. ಇದರಲ್ಲಿ ವಿಕಲ ಚೇತನ ಕಲಾ ವಿದರು ಸಹಿತ ಮೂರು ವಿಭಾಗ ಗಳಿವೆ. ಆಶು ಚಿತ್ರಣ,ಆವೆ ಮಣ್ಣು ಮೂರ್ತಿ ಶಿಲ್ಪ,ಛಾಯಾ ಚಿತ್ರಣ ಎಂಬ ಮೂರು ವಿಭಾಗ ಗಳು.
ಆಶು ಚಿತ್ರಣ ಮತ್ತು ಆವೆ ಮಣ್ಣು ಮೂರ್ತಿ ಶಿಲ್ಪ ಶಿಬಿರಕ್ಕೆ ಮಂಗಳೂರು ಕದ್ರಿ ಪಾರ್ಕಿನಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ. ಛಾಯಾ ಚಿತ್ರಣಕ್ಕೆ ಪಿಲಿಕುಳ ನಿಸರ್ಗಧಾಮ,ಪಣಂಬೂರು ಕಡಲ ಕಿನಾರೆ ಮತ್ತು ಕದ್ರಿ ದೇವಸ್ಥಾನ ಸ್ಥಳಗಳನ್ನು ಆಯ್ಕೆ ಮಾಡಲಾಗಿದೆ.
ಆಕ್ರಿಲಿಕ್ ಬಣ್ಣ ಮತ್ತು 24''* 30'' ಅಳತೆಯ ಕ್ಯಾನ್ವಾಸ್ ಒದಗಿಸಿಕೊಡಲಾಗುವುದು.ಆವೆಮಣ್ಣನ್ನು ಸ್ಥಳದಲ್ಲಿಯೇ ನೀಡಲಾಗುವುದು.ಛಾಯಾಚಿತ್ರಕ್ಕೆ ಆಯಾ ಕಲಾವಿದರೇ ಉಪಕರಣಗಳನ್ನು ಒದಗಿಸಿಕೊಳ್ಳತಕ್ಕದ್ದು.ಇದಲ್ಲದೆ ಪಣಂಬೂರು ಬೀಚ್ ಪರಿಸರದಲ್ಲಿ ಮರಳು ಶಿಲ್ಪ ರಚಿಸುವ ಅವಕಾಶವೂ ಇದೆ.
ಈ ಶಿಬಿರದಲ್ಲಿ ಸ್ಥಳೀಯ ವಿಕಲಚೇತನರ ಕಲಾವಿದರನ್ನೊಳಗೊಂಡಂತೆ ಅಭ್ಯರ್ಥಿಗಳು ಜನವರಿ 7 ರ ಸಂಜೆ 5.30ರೊಳಗೆ ಮಂಗಳೂರಿನ ಪ್ರಸಾದ್ ಆರ್ಟ್ ಗ್ಯಾಲರಿಯಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಬಹುದೆಂದು ಯುವ ಕಲಾವಿದರ ಉಪ ಸಮಿತಿ ಅಧ್ಯಕ್ಷರಾದ ಡಾ.ವಾಮನ ನಂದಾವರ ತಿಳಿಸಿರುತ್ತಾರೆ.ಕೇವಲ 15 ಕಲಾವಿದರಿಗೆ ಮಾತ್ರ ಅವಕಾಶವಿರುವುದರಿಂದ ಮೊದಲು ಬಂದವರಿಗೆ ಅವಕಾಶವಿದೆ.

ಯುವಜನೋತ್ಸವ: ಕಟ್ಟಡಗಳ ದೀಪಾಲಂಕಾರ

ಮಂಗಳೂರು,ಡಿಸೆಂಬರ್.31:ದಕ್ಷಿಣಕನ್ನಡ ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್,ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ನೆಹರು ಯುವ ಕೇಂದ್ರ,ರಾಷ್ಟ್ರೀಯ ಸೇವಾ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ 17 ನೇ ರಾಷ್ಟ್ರೀಯ ಯುವಜನೋತ್ಸವವನ್ನು ದಿನಾಂಕ 12-1-12 ರಿಂದ 16-1-12 ರ ವರೆಗೆ ಮಂಗಳೂರಿನಲ್ಲಿ ಏರ್ಪಡಿಸಲಾಗಿದೆ. ಈ ಸಂದರ್ಭದಲ್ಲಿ ಮಂಗಳೂರು ನಗರದಲ್ಲಿ ಅತೀ ವಿಜೃಂಭಣೆಯಿಂದ ಆಚರಿಸುವ ಸಲುವಾಗಿ ನಗರವನ್ನು ಸೌಂದರೀಕರಣಗೊಳಿಸಲು ತಮ್ಮ ಕಟ್ಟಡಗಳನ್ನು ದೀಪಾಲಂಕಾರದಿಂದ ಅಲಂಕರಿಸಲು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

Thursday, December 29, 2011

ಜನಸಂಖ್ಯೆಯ ಆಧಾರದ ಮೇಲೆ ಗ್ರಾಂ. ಪಂ.ಗಳಿಗೆ ಅನುದಾನ:ಸಚಿವ ಜಗದೀಶ ಶೆಟ್ಟರ್

ಮಂಗಳೂರು,ಡಿಸೆಂಬರ್.29:ರಾಜ್ಯದಲ್ಲಿರುವ ಗ್ರಾಮ ಪಂಚಾಯತ್ ಗಳಿಗೆ ಇನ್ನು ಮುಂದೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಅವುಗಳ ಜನಸಂಖ್ಯೆಯ ಆಧಾರದಲ್ಲಿ 9ಲಕ್ಷ, 12 ಲಕ್ಷ, ಮತ್ತು 15 ಲಕ್ಷ ರೂ.ಗಳ ವರೆಗೂ ಅನುದಾನವನ್ನು ನೀಡಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆಯೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಜಗದೀಶ ಶೆಟ್ಟರ್ ರವರು ತಿಳಿಸಿದ್ದಾರೆ.ಅವರು ಇಂದು ಮಂಗ ಳೂರು ತಾಲೂಕು ಮೆನ್ನ ಬೆಟ್ಟು ಗ್ರಾಮ ಪಂಚಾ ಯತ್ ಗೆ ಭೇಟಿ ನೀಡಿ ಪಂಚಾ ಯತ್ ವತಿ ಯಿಂದ ಕೈ ಗೊಂಡಿ ರುವ ಘನ ತ್ಯಾಜ್ಯ ವಿಲೇ ವಾರಿ ಘಟಕ ವನ್ನು ಪರಿ ಶೀಲಿಸಿ ಮಾತ ನಾಡಿ ದರು.ರಾಜ್ಯದ 900 ಕ್ಕೂ ಹೆಚ್ಚು ಗ್ರಾಮ ಪಂಚಾ ಯತ್ ಗಳಿಗೆ ನಿರ್ಮಲ ಗ್ರಾಮ ಪುರ ಸ್ಕಾರ ಬಂದಿದ್ದು, ಇದ ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 203 ಗ್ರಾಮ ಪಂಚಾ ಯತ್ ಗಳೂ ನಿರ್ಮಲ ಗ್ರಾಮ ಪುರಸ್ಕಾರ ಪಡೆ ದಿರು ವುದು ಶ್ಲಾಘ ನೀಯ ಎಂದ ಅವರು ದಕ್ಷಿಣ ಕನ್ನಡ ಜಿಲ್ಲೆ ಅಭಿವೃದ್ಧಿ ಕಾರ್ಯ ಗಳು ರಾಜ್ಯದ ಇತರೇ ಜಿಲ್ಲೆಗಳಿಗೆ ಮಾದರಿಯಾಗಿವೆಯೆಂದು ತಿಳಿಸಿದರು.
ತಾಲೂಕು ಪಂಚಾಯತ್ ಗಳಿಗೆ ತಮ್ಮ ಸರ್ಕಾರ ಬಂದಾಗಿನಿಂದ ಒಂದು ಕೋಟಿ ರೂ.ಗಳ ಅನುದಾನವನು ನೀಡುತ್ತಿದ್ದು, 13ನೇ ಹಣಕಾಸು ಆಯೋಗದ ಶಿಫಾರಸಿನನ್ವಯ ಮುಂದಿನ ಸಾಲಿನಿಂದ ಈ ಅನುದಾವನ್ನು 2 ಕೋಟಿಗಳಿಗೆ ಹೆಚ್ಚಿಸುವುದಾಗಿ ತಿಳಿಸಿ, ಪಂಚಾಯತ್ಗಳಲ್ಲಿ ಆಡಳಿತ ಪಾರದರ್ಶಕವಾಗಿರಬೇಕು,ಕೆಳ ಹಂತದಲ್ಲಿ ನೀಡುವ ಅನುದಾನವನ್ನು ಪ್ರಾಮಾಣಿಕವಾಗಿ ವೆಚ್ಚ ಮಾಡಿದಾಗ ಮಾತ್ರ ಅಭಿವೃದ್ಧಿ ಕಾರ್ಯಗಳು ಜನಸಮುದಾಯಕ್ಕೆ ತಲುಪಲು ಸಾಧ್ಯ ಎಂದರು.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭರವಸೆ ಯೋಜನೆಯಡಿ ಕರ್ನಾಟಕ ರಾಜ್ಯಕ್ಕೆ 2 ಸಾವಿರ ಕೋಟಿ ರೂ.ಗಳ ಅನುದಾನ ಬಂದಿದ್ದು ಇಲ್ಲಿಯ ವರೆಗೂ ಒಂದು ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದ್ದು, ಮಾರ್ಚ್ ಅಂತ್ಯಕ್ಕೆ ಉಳಿಕೆ ಒಂದು ಸಾವಿರ ಕೋಟಿ ರೂ.ಗಳನ್ನು ಸಹ ವೆಚ್ಚ ಮಾಡುವುದಾಗಿ ಅವರು ತಿಳಿಸಿದರು.
ಗ್ರಾಮಪಂಚಾಯತ್ ಗಳು ಕೇವಲ ರಾಜ್ಯ ಕೇಂದ್ರ ಸರ್ಕಾರಗಳ ಅನುದಾನದಲ್ಲೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದನ್ನು ಬಿಟ್ಟು ತಮ್ಮಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ವಿಶೇಷವಾಗಿ ಕಂದಾಯ ವಸೂಲಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕೆಂದು ತಿಳಿಸಿದ ಸಚಿವರು, 13ನೇ ಹಣಕಾಸು ಆಯೋಗ ಅನುದಾನ ನೀಡುವಾಗ ಎಲ್ಲಾ ಗ್ರಾಮ ಪಂಚಾಯತ್ಗಳು ಶೇಕಡಾ 40 ರಷ್ಟು ತೆರಿಗೆ ವಸೂಲಾತಿಯನ್ನು ಕಡ್ಡಾಯವಾಗಿ ಮಾಡಬೇಕೆಂಬ ಷರತ್ತನ್ನು ವಿಧಿಸಲಾಗಿದೆಯೆಂದರು.
ಗ್ರಾಮ ಪಂಚಾಯತ್ ಗಳು ತಮಗೆ ನೀಡಲಾಗುತ್ತಿರುವ ಹೆಚ್ಚಿನ ಅನುದಾನವನ್ನು ವಿದ್ಯುತ್ ಬಿಲ್ ಗಳ ಪಾವತಿಗಾಗಿ ಬಳಸುತ್ತಿದ್ದು, ಇದರಿಂದ ಇತರೇ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಉಂಟಾಗುತ್ತಿದೆಯೆಂದ ಸಚಿವರು ಎಲ್ಲಾ ಗ್ರಾಮ ಪಂಚಾಯತ್ ಗಳ ವಿದ್ಯುತ್ ಬಿಲ್ ಬಾಕಿ 1000 ಕೋಟಿ ರೂಪಾಯಿಗಳಾಗಿದೆ. ಕಳೆದ ವರ್ಷ ಸರ್ಕಾರ 400 ಕೋಟಿಗೂ ಹೆಚ್ಚು ಗ್ರಾಮ ಪಂಚಾಯತ್ ಗಳ ವಿದ್ಯುತ್ ಬಿಲ್ಲನ್ನು ಮನ್ನಾ ಮಾಡಲಾಗಿದ್ದರೂ ಸಹ ಇಷ್ಟೊಂದು ಬೃಹತ್ ಮೊತ್ತದ ಬಿಲ್ಲು ಬಾಕಿ ಉಳಿದಿದೆಯೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೂಡಬಿದಿರೆ ಶಾಸಕರಾದ ಅಭಯಚಂದ್ರ ಜೈನ್, ಜಿಲ್ಲಾಪಂಚಾಯತ್ ಅಧ್ಯಕ್ಷೆ ಶೈಲಜಾಭಟ್, ಉಪಾಧ್ಯಕ್ಷೆ ಧನಲಕ್ಷ್ಮಿ ಜನಾರ್ಧನ ಗೌಡ.ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ ಕಟೀಲ್, ತಾಲೂಕು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭವ್ಯ, ಮೆನ್ನಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೈಲಾ ಶೆಟ್ಟಿ ,ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.

' ಯುವಜನೋತ್ಸವದಲ್ಲಿ ರಾಜ್ಯದ ಸಂಸ್ಕೃತಿ ಪ್ರತಿಬಿಂಬಿಸುವಂತಿರಲಿ '

ಮಂಗಳೂರು,ಡಿಸೆಂಬರ್.29:ದೇಶದ ನಾನಾ ಭಾಗಗಳಿಂದ ನಾನಾ ಸಂಸ್ಕೃತಿ ಪರಂಪರೆಯ ಜನ ಆಗಮಿಸುತ್ತಿರುವ, ರಾಷ್ಟ್ರೀಯ ಯುವಜನೋತ್ಸವ ಕಾರ್ಯಕ್ರಮದಲ್ಲಿ ದಕ್ಷಿಣಕನ್ನಡ ಜಿಲ್ಲೆಯ ಸಾಂಸ್ಕೃತಿಕ ಕಲಾ ಪ್ರಾಕಾರಗಳ ಜೊತೆಗೆ ಇಡೀ ರಾಜ್ಯದ ಸಾಂಸ್ಕೃತಿಕ ಪರಂಪರೆ ಪ್ರತಿಬಿಂಬಿಸುವಂತೆ ಸಂಘಟಕರು ಕಾರ್ಯಕ್ರಮ ರೂಪಿಸಬೇಕೆಂದು ವಾರ್ತಾ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಬಸವರಾಜ್ ಅವರು ತಿಳಿಸಿದ್ದಾರೆ. ಅವರು ಬುಧವಾರ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಈ ಕುರಿತು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಹಾಗೂ ಅಧ್ಯಕ್ಷರು ಡಾ.ಎನ್.ಎಸ್.ಚನ್ನಪ್ಪ ಗೌಡ ಅವರ ಜೊತೆ ಚರ್ಚೆ ನಡೆಸಿದರು.ರಾಷ್ಟ್ರೀಯ ಯುವಜನೋತ್ಸವವನ್ನು ಸ್ವಾಮಿ ವಿವೇಕಾನಂದರ 150ನೇ ಜನ್ಮ ದಿನಾಚರಣೆ ಅಂಗವಾಗಿ ಆಚರಿಸುತ್ತಿರುವುದರಿಂದ ಸ್ವಾಮಿ ವಿವೇಕಾನಂದರು ಯುವಜನತೆಗೆ ರಾಷ್ಟ್ರ ಕಟ್ಟುವ ದಿಸೆಯಲ್ಲಿ ನೀಡಿರುವ ಧ್ಯೇಯ ವಾಕ್ಯಗಳನ್ನು ಸಮಾರಂಭ ಸ್ಪರ್ಧೆಗಳು ನಡೆಯುವ ಸ್ಥಳಗಳಲ್ಲಿ ಪ್ರದರ್ಶಿಸಲು ಸೂಚಿಸಿದರು.ವಾರ್ತಾ ಇಲಾಖೆ ಯ ನಿರ್ದೇ ಶಕ ರಾದ ಬೇವಿನ ಮರದ ಅವರು ಈ ಸಂ ಬಂಧ ವಾರ್ತಾ ಇಲಾಖೆ ಕೈ ಗೊಳ್ಳ ಲಿರುವ ಪ್ರಚಾರ ಕಾರ್ಯ ಕ್ರಮದ ರೂಪು ರೇಷೆ ಗಳನ್ನು ವಿವರಿ ಸಿದರು. 115 ಹೋ ರ್ಡಿಂಗ್ಸ್ ಗಳನ್ನು ತಯಾ ರಿಸಿ ಬೆಂಗ ಳೂರು ನಗರ ಜಿಲ್ಲೆ ಯಲ್ಲಿ 25 ಹಾಗೂ 15 ಹೈಮಾಸ್ಟ್ ಹೆದ್ದಾರಿ ಫಲಕ ಗಳು,ಉಡುಪಿ ಜಿಲ್ಲೆ ಯಲ್ಲಿ 14,ಕಾರ ವಾರ ದಲ್ಲಿ 21,ಮಂಗ ಳೂರಿ ನಲ್ಲಿ 25 ಮತ್ತು ಕೊಡಗಿ ನಲ್ಲಿ 15 ಹೆದ್ದಾರಿ ಫಲಕ ಗಳನ್ನು ಅಳ ವಡಿ ಸುವು ದಾಗಿ ತಿಳಿಸಿದರು.ಸುಸಜ್ಜಿತ ಮಾಧ್ಯಮ ಕೇಂದ್ರ ವನ್ನು ಸ್ಥಾಪಿಸುತ್ತಿದ್ದು ಮಾಧ್ಯಮ ಪ್ರತಿನಿಧಿಗಳಿಗೆ ಸುದ್ದಿ ರವಾನೆಗೆ ಯಾವ ಕೊರತೆಗಳುಂಟಾಗದಂತೆ ಎಲ್ಲಾ ವ್ಯವಸ್ಥೆಗಳನ್ನು ಮಾಡುವುದಾಗಿ ತಿಳಿಸಿದರು.

ದಕ್ಷಿಣ ಕನ್ನಡ ಆತಿಥ್ಯಕ್ಕೆ ಮಾದರಿಯಾಗಲಿ:ಯೋಗೀಶ್ ಭಟ್

ಮಂಗಳೂರು,ಡಿಸೆಂಬರ್.29: ಮಂಗಳೂರಿನಲ್ಲಿ ಜರುಗಲಿರುವ ರಾಷ್ಟ್ರೀಯ ಯುವಜನೋತ್ಸವದ ಹಿನ್ನಲೆಯಲ್ಲಿ ದೇಶದ ವಿವಿಧ ರಾಜ್ಯಗಳ ಸುಮಾರು 5 ಸಾವಿರ ಯುವ ರಾಯಭಾರಿಗಳಿಗೆ ದಕ್ಷಿಣಕನ್ನಡ ಜಿಲ್ಲೆಯ ಆದರ ಆತಿಥ್ಯಗಳು ಎಂದೆಂದಿಗೂ ನೆನಪಿನಲ್ಲುಳಿಯುವಂತೆ ಮಾಡಬೇಕಾದುದು ನಮ್ಮೆಲ್ಲರ ಕರ್ತವ್ಯವಾಗಿದೆಯೆಂದು ಕರ್ನಾಕ ವಿಧಾನಸಭೆಯ ಉಪಾಧ್ಯಕ್ಷರಾದ ಎನ್.ಯೋಗೀಶ್ ಭಟ್ ಅವರು ತಿಳಿಸಿದ್ದಾರೆ.
ಅವರು ಬುಧವಾರ ದಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ 17ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಇಲ್ಲಿಯವರೆಗೂ ಆಗಿರುವ ಸಿದ್ಧತೆಗಳ ಪರಿಶೀಲನೆ ಮಾಡಿ ಮಾತನಾಡಿದರು.ಮುಖ್ಯವಾಗಿ ಆಹಾರ,ತಿಂಡಿ,ಶೌಚಾಲಯ ವ್ಯವಸ್ಥೆ, ಸ್ನಾನ ಸೌಲಭ್ಯ ,ಸಾರಿಗೆ ಮುಂತಾದ ಮೂಲಭೂತ ಸೌಕರ್ಯಗಳಿಗೆ ಕೊರತೆಯಾಗದಂತೆ ನಿಗಾವಹಿಸಬೇಕೆಂದರು.ಮಂಗ ಳೂರು ನಗರದ ಜನತೆ ಇದೊಂ ದು ಸರ್ಕಾರಿ ಕಾರ್ಯ ಕ್ರಮ.ಇದ ರಲ್ಲಿ ನಮ್ಮ ಪಾಲೂ ಏನೂ ಇಲ್ಲ ಎಂಬ ತಾ ತ್ಸಾರ ಮನೋ ಭಾವನೆ ತಾಳದೆ, ನಮ್ಮ ಊರಿಗೆ ಇಡೀ ರಾಷ್ಟ್ರದ ವಿವಿಧ ರಾಜ್ಯ ಗಳ ಯುವ ಸಾಂ ಸ್ಕೃತಿಕ ರಾಯ ಭಾರಿ ಗಳು ಆಗಮಿ ಸುತ್ತಿ ದ್ದಾರೆ. ಅವರು ನಮ್ಮ ಅತಿಥಿ ಗಳು ಎಂಬು ದಾಗಿ ಭಾವಿಸಿ ಹಬ್ಬದ ವಾತಾ ವರಣ ಏರ್ಪ ಡುವಂತೆ ಮನೆ ಮನೆ, ಅಂಗಡಿ ಮುಗ್ಗಟ್ಟು ಗಳನ್ನು, ಪೂಜಾ ಮಂದಿರಗಳನ್ನು, ವಿದ್ಯುತ್ ದೀಪಗಳಿಂದ ಅಲಂಕರಿಸಲು ಅವರು ವಿನಂತಿಸಿದ್ದಾರೆ.
ಸಭೆಯಲ್ಲಿ ಹಾಜರಿದ್ದ ಕರ್ನಾಟಕ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಾದ ಪೆರುವಾಳ್ ರವರು ಈ ಸಂದರ್ಭದಲ್ಲಿ ಮಾತನಾಡಿ ಇಲ್ಲಿಯ ವರೆಗೂ ರಾಷ್ಟ್ರೀಯ ಯುವಜನೋತ್ಸವಕ್ಕೆ ಆಗಿರುವ ತಯಾರಿಗಳು ತೃಪ್ತಿದಾಯಕವಾಗಿದೆ.ಅಧಿಕಾರಿಗಳ ತಂಡ ಸ್ಪೂರ್ತಿಯಿಂದ ಕೆಲಸಗಳನ್ನು ನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.ಯುವಜನೋತ್ಸವದಲ್ಲಿ ಭಾಗವಹಿಸುವ ಎಲ್ಲಾ ಪ್ರತಿನಿಧಿಗಳಿಗೆ ಸೂಕ್ತವಾದ ಸ್ಮರಣಿಕೆಗಳನ್ನು ನೀಡಲು ಖಾಸಗಿ,ರಾಷ್ಟ್ರೀಕೃತ ಬ್ಯಾಂಕುಗಳು,ಸಂಘಸಂಸ್ಥೆಗಳ ಪ್ರಾಯೋಜಕತ್ವ ವಹಿಸಿಕೊಳ್ಳುವಂತೆ ಮನವೊಲಿಸಲು ಸಭೆಯಲ್ಲಿ ಹಾಜರಿದ್ದ ಜನ ಪ್ರತಿನಿಧಿಗಳನ್ನು ಕೋರಿದರು.
ಜಿಲ್ಲಾಧಿಕಾರಿ ಹಾಗೂ ರಾಷ್ಟ್ರೀಯ ಯುವಜನೋತ್ಸವ ಅಧ್ಯಕ್ಷರಾದ ಡಾ.ಎನ್.ಎಸ್.ಚನ್ನಪ್ಪ ಗೌಡರು ಇಲ್ಲಿಯವರೆಗೂ ಆಗಿರುವ ಸಿದ್ಧತೆಗಳು ಹಾಗೂ ಯುವಜನೋತ್ಸವ ಕಾರ್ಯಕ್ರಮಗಳನ್ನು ಪವರ್ ಪಾಯಿಂಟ್ ಪ್ರೆಸೆಂಟೇಷನ್ ಮೂಲಕ ವಿವರಿಸಿದರು. ಸಭೆಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬಿ.ನಾಗರಾಜ ಶೆಟ್ಟಿ,ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಎನ್.ಶೈಲಜಾ ಭಟ್,ಶಾಸಕ ಅಭಯಚಂದ್ರ ಜೈನ್,ಯುವಜನೋತ್ಸವ ಸಮಿತಿಗಳ ಅಧ್ಯಕ್ಷರು ಹಾಜರಿದ್ದರು.

ಯುವಜನೋತ್ಸವದ ಸಿದ್ದತೆ ಮುಖ್ಯಮಂತ್ರಿಗಳಿಂದ ಪರಿಶೀಲನೆ: ಯೋಗಿಶ್ ಭಟ್

ಮಂಗಳೂರು,ಡಿಸೆಂಬರ್.29 :ಪ್ರಥಮ ಬಾರಿಗೆ ಕರ್ನಾಟಕ ಕರಾವಳಿ ನಗರಿ ಮಂಗಳೂರಿನಲ್ಲಿ ನಡೆಯುತ್ತಿರುವ 17ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ನಡೆದಿರುವ ಸಿದ್ಧತೆಗಳ ಪರಿಶೀಲನೆಗೆ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡರು ಜನವರಿ 4 ಅಥವಾ 5 ರಂದು ಮಂಗಳೂರಿಗೆ ಆಗಮಿಸಿ ಖುದ್ದು ಪರಿಶೀಲನೆ ಮಾಡುವರೆಂದು ವಿಧಾನಸಭಾ ಉಪಾಧ್ಯಕ್ಷರಾದ ಎನ್.ಯೋಗೀಶ್ ಭಟ್ ಅವರು ತಿಳಿಸಿದ್ದಾರೆ.ಅವರು ಬುಧ ವಾರ ಜಿಲ್ಲಾಧಿ ಕಾರಿ ಗಳ ಕಚೇರಿ ಯಲ್ಲಿ ನಡೆದ ರಾ ಷ್ಟ್ರೀಯ ಯುವ ಜನೋ ತ್ಸವ ತಯಾ ರಿಗಳ ಪರಿ ಶೀಲನಾ ಸಭೆಯ ಅಧ್ಯ ಕ್ಷತೆ ವಹಿಸಿ ಮಾತ ನಾಡಿದರು.
ಯುವಜನೋತ್ಸವಕ್ಕೆ ಕರ್ನಾಟಕ ಸರ್ಕಾರ ರೂ.10 ಕೋಟಿ ನೀಡಿದೆ.ಕೇಂದ್ರ ಸರ್ಕಾರ 2 ಕೋಟಿ ನೀಡಿದೆ.ಇನ್ನು ಹೆಚ್ಚಿನ ಅನುದಾನಕ್ಕಾಗಿ ವಿವರವಾದ ಪಟ್ಟಿಯನ್ನು ಸಿದ್ಧಪಡಿಸಿ ನೀಡಿದಲ್ಲಿ, ಮಾನ್ಯ ಮುಖ್ಯಮಂತ್ರಿಗಳಿಂದ ಮಂಜೂರಾತಿಗೆ ಕೋರಲಾಗುವುದೆಂದು ಅವರು ತಿಳಿಸಿದರು.

Tuesday, December 27, 2011

ರಾಷ್ಟ್ರೀಯ ಯುವಜನೋತ್ಸವ;ಎಲ್ಲಾ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿರಲು ಸೂಚನೆ

ಮಂಗಳೂರು,ಡಿಸೆಂಬರ್.27:ಪ್ರಥಮ ಬಾರಿಗೆ ಮಂಗಳೂರಿನಲ್ಲಿ 2012 ನೇ ಜನವರಿ 12 ರಿಂದ 16 ರ ವರೆಗೆ ನಡೆಯುತ್ತಿರುವ ರಾಷ್ಟ್ರೀಯ ಯುವಜನೋತ್ಸವ ಯಶಸ್ಸಿಗಾಗಿ ಎಲ್ಲಾ ಅಧಿಕಾರಿಗಳು ಇಂದಿನಿಂದ ಜನವರಿ 17 ರ ವರೆಗೆ ರಜೆ ಹಾಕದೇ ಕೇಂದ್ರಸ್ಥಾನದಲ್ಲಿಯೇ ಇರಬೇಕೆಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ಆದೇಶ ಹೊರಡಿಸಿದ್ದಾರೆ.

ರಾಷ್ಟ್ರೀಯ ಯುವಜನೋತ್ಸವ ಯಶಸ್ಸಿಗೆ ಕ್ಷಣಕ್ಷಣದ ಕಾರ್ಯಕ್ರಮಗಳ ಹೊಣೆಗಾರಿಕೆ

ಮಂಗಳೂರು,ಡಿಸೆಂಬರ್.27:ಕರ್ನಾಟಕ ರಾಜ್ಯದಲ್ಲಿ ಪ್ರಥಮ ಬಾರಿಗೆ ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ 2012 ನೇ ಜನವರಿ 12 ರಿಂದ 16 ರ ವರೆಗೆ ನಡೆಯಲಿರುವ 17ನೇ ರಾಷ್ಟ್ರೀಯ ಯುವ ಜನೋತ್ಸವ ಕಾರ್ಯ ಕ್ರಮಗಳಿಗೆ ಇಂದಿನ ವರೆಗೂ ಆಗಿರುವ ಸಿದ್ಧತೆ ಗಳ ಕ್ಷಣ ಕ್ಷಣದ(ಮಿನಿಟ್ ಪ್ರೋ ಗ್ರಾಂ)ಕಾರ್ಯ ಕ್ರಮಗಳ ಹೊಣೆ ಗಳ ಕುರಿ ತಂತೆ ಜಿಲ್ಲಾಧಿ ಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡರು ಇಂದು ತಮ್ಮ ಕಚೇರಿ ಯಲ್ಲಿ ನಡೆದ ವಿವಿಧ ಸಮಿತಿ ಗಳ ಅಧ್ಯಕ್ಷರ ಸಭೆ ಯಲ್ಲಿ ಚರ್ಚಿ ಸಿದರು.ಸ್ವಾಗತ ಸಮಿತಿ,ನೋಂ ದಣಿ ಸಮಿತಿ, ಸಾರಿಗೆ ಸಮಿತಿ, ಆರೋಗ್ಯ ಸಮಿತಿ,ಆಹಾರ ಸಮಿತಿ,ಸಾಂ ಸ್ಕೃತಿಕ ಸಮಿತಿ,ವೇದಿಕೆ ಸಮಿತಿ,ದೀಪಾ ಲಂಕಾರ ಸಮಿತಿ ಇನ್ನು ಮುಂ ತಾದ ಸಮಿತಿ ಗಳು ಇಲ್ಲಿಯ ವರೆಗೂ ನಡೆಸಿ ರುವ ಸಿದ್ಧತಾ ಪಟ್ಟಿ ಯನ್ನು (ಚೆಕ್ ಲಿಸ್ಟ್) ಪರಿಶೀಲಿಸಿದರು. ಸಮರೋಪಾದಿಯಲ್ಲಿ ಸಿದ್ಧತೆಗಳನ್ನು ಪೂರ್ಣಗೊಳಿಸುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು, ಅಧಿಕಾರಿಗಳು ತಮಗೆ ವಹಿಸಿರುವ ಹೊಣೆಗಾರಿಕೆ ಬಗ್ಗೆ ಉದಾಸೀನತೆಯಿಂದಿರದೇ ಹುರುಪು ಉತ್ಸಾಹದಿಂದ ಉತ್ತಮ ಕಾರ್ಯ ಮಾಡುವ ಮೂಲಕ ಜಿಲ್ಲೆಯ ಘನತೆ ಹೆಚ್ಚಿಸಿ ರಾಜ್ಯಕ್ಕೆ ಕೀರ್ತಿ ತರಬೇಕೆಂದು ಅಧಿಕಾರಿಗಳನ್ನು ಉತ್ತೇಜಿಸಿದರು.
ಯುವಜನೋತ್ಸವ ನಡೆಯುವ ಐದು ದಿನಗಳು ನೀರು,ವಿದ್ಯುತ್ ಸರಬರಾಜು ಅಡೆತಡೆಯಿಲ್ಲದೆ ನಿರಂತರವಾಗಿರುವಂತೆ ಸಂಬಂಧಿಸಿದ ಅಧಿಕಾರಿಗಳು ಮುಂಜಾಗ್ರತೆ ವಹಿಸಲು ಸೂಚಿಸಿದರು.
ತುರ್ತು ಸೇವೆ ಸೇರಿದಂತೆ ಯುವಜನೋತ್ಸವ ಪ್ರತಿನಿಧಿಗಳಿಗೆ ಅಗತ್ಯ ಆರೋಗ್ಯ ಸೇವೆಯನ್ನು ಆದ್ಯತೆ ಮೇಲೆ ಒದಗಿಸಲು ಸರ್ವ ಸನ್ನದ್ಧರಾಗಿರುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ಅಗತ್ಯ ಬಿದ್ದಲ್ಲಿ ಖಾಸಗಿ ಆಸ್ಪತ್ರೆಗಳ ಸೇವೆಯನ್ನು ಬಳಸಿಕೊಳ್ಳುವಂತೆ ತಿಳಿಸಿದ್ದಾರೆ.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ಡಾ.ವೆಂಕಟೇಶ್,ಹೆಚ್ಚುವರಿ ಜಿಲ್ಲಾಧಿಕಾರಿ ದಯಾನಂದ,ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ್ ಆಳ್ವಾ ಮತ್ತಿರರುಹಾಜರಿದ್ದರು.

Monday, December 26, 2011

ಯುವಜನೋತ್ಸವ ವಿಶೇಷ ಟೂರ್ ಪ್ಯಾಕೆಜ್

ಮಂಗಳೂರು,ಡಿಸೆಂಬರ್.26:ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಮಂಗಳೂರು ವಿಭಾಗವು (ದಿನಾಂಕ 12-1-12ರಿಂದ 15-1-12) ಇಲ್ಲಿನ ಮಂಗಳ ಕ್ರೀಡಾಂಗಣದಲ್ಲಿ ನಡೆಯುವ
ರಾ ಷ್ಟ್ರೀಯ ಯುವ ಜನೋ ತ್ಸವ 2012 ರ ಆಚ ರಣೆಗ ದೇಶ ವಿದೇ ಶಗ ಳಿಂದ ಸಾವಿರ ಸಂಖ್ಯೆ ಯಲ್ಲಿ ಯುವ ಜನರು/ ಸ್ಪರ್ಧಾ ಳುಗಳು ಭಾಗ ವಹಿ ಸುವ ಸಂದ ರ್ಭದಲ್ಲಿ, ಪ್ರವಾ ಸಿಗರು ಹಾಗೂ ಪ್ರತಿ ನಿಧಿ ಗಳ ಅನು ಕೂಲಕ್ಕೆ ಮಂಗ ಳೂರು ಹಾಗೂ ಸುತ್ತ ಮುತ್ತ ಲಿನ ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸಿ ತಾಣ ಗಳಿಗೆ ವ್ಯವ ಸ್ಥಿತ ಪ್ರವಾ ಸಗ ಳನ್ನು ಏರ್ಪ ಡಿಸ ಲಾಗಿದೆ ಹಾಗೂ ಅವು ಗಳ ವಿವರ ಈ ಕೆಳ ಗಿನಂತಿದೆ.

ಮಂಗಳೂರು-ಕೊಲ್ಲೂರು-ಉಡುಪಿ-ಮಲ್ಪೆ ಬೀಚ್(ಒಂದುದಿನ)ಸಮಯ ಬೆಲಿಗ್ಗೆ 7.30 ರಿಂದ ಸಂಜೆ 7.00 ಗಂಟೆಯವರೆಗೆ ಒಬ್ಬರಿಗೆ ರೂ.400/-

ಮಂಗಳೂರು-ವೇಣೂರು-ಮೂಡಬಿದ್ರೆ-ಕೊಡ್ಯಡ್ಕ ಅನ್ನಪೂರ್ಣೇಶ್ವರಿ ದೇವಸ್ಥಾನ-ಕಾರ್ಕಳ(ಒಂದು ದಿನ) ಸಮಯ ಬೆಳಿಗ್ಗೆ 7.30ರಿಂದ ಸಂಜೆ 5.0 ಗಂಟೆಯವರೆಗೆ ಒಬ್ಬರಿಗೆ ರೂ.400/-

ಮಂಗಳೂರು-ಧರ್ಮಸ್ಥಳ-ಸೌತಡ್ಕ-ಕುಕ್ಕೆ ಸುಬ್ರಹ್ಮಣ್ಯ (ಒಂದುದಿನ)ಬೆಳಿಗ್ಗೆ 7.30 ರಿಂದ ಸಂಜೆ 6.30 ವರೆಗೆ ಒಬ್ಬರಿಗೆ ರೂ.400/-

ಮಂಗಳೂರು ನಗರ ಪ್ರದಕ್ಷಿಣೆ ಅರ್ಧದಿನ ಬೆಳಿಗ್ಗೆ 8.30 ರಿಂದ ಮಧ್ಯಾಹ್ನ 1.30ರ ವರೆಗೆ ಒಬ್ಬರಿಗೆ ರೂ.100/-
ಮಂಗಳೂರು ನಗರ ಪ್ರದಕ್ಷಿಣೆ ಅರ್ಧ ದಿನ- ಮಧ್ಯಾಹ್ನ 2 ರಿಂದ ಸಂಜೆ 7 ರ ವರೆಗೆ ಒಬ್ಬರಿಗೆ ರೂ.200/-
ಹೆಚ್ಚಿನ ಮಾಹಿತಿಗೆ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಕಚೇರಿ, ನಗರಪಾಲಿಕೆ ವಾಣಿಜ್ಯ ಸಂಕೀರ್ಣ,ಲಾಲ್ ಭಾಗ್ ಮಂಗಳೂರು-3 ಇವರನ್ನು ದೂರವಾಣಿ ಸಂಖ್ಯೆ 0824-2453826/2453926 ಮೊಬೈಲ್ 09845776175/08970650116/09901328675
ನ್ನು ಸಂಪರ್ಕಿಸಬಹುದಾಗಿದೆ.

ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಅವರ ನಿಧನಕ್ಕೆ ಸಂತಾಪ

ಮಂಗಳೂರು,ಡಿಸೆಂಬರ್.26: ಸತ್ಯ ನಿಷ್ಠ ರಾಜಕಾರಣಿ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಎಸ್. ಬಂಗಾರಪ್ಪ ಅವರ ನಿಧನದಿಂದ ರಾಜ್ಯ ರಾಜಕಾರಣಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ.ಅವರ ಕುಟುಂಬಕ್ಕೆ ದು:ಖ ಭರಿಸುವ ಶಕ್ತಿ ನೀಡಲಿ ಎಂದು ಮಾನ್ಯ ಮುಖ್ಯಮಂತ್ರಿಗಳಾದ ಡಿ.ವಿ. ಸದಾನಂದ ಗೌಡರು ತಮ್ಮ ಸಂತಾಪ ಸೂಚಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ನಿಧನದ ಗೌರವಾರ್ಥ ರಾಜ್ಯದಲ್ಲಿ ರಜೆ ಹಾಗೂ ಮೂರು ದಿನಗಳ ಶೋಕಾಚರಣೆ ಆಚರಿಸಲಿದ್ದು,27-12-11 ರಂದು ಶಿವಮೊಗ್ಗಕ್ಕೆ ಜಿಲ್ಲೆಯ ಎಲ್ಲಾ ಶಾಲಾ, ಕಾಲೇಜು, ಕಚೇರಿಗಳಿಗೆ ರಜೆಯನ್ನು ಘೋಷಿಸಿದರು.

ದಿ.ಸಂತೋಷ್ ಕುಮಾರ್ ಭಂಡಾರಿ ಅವರ ಕುಟುಂಬಕ್ಕೆ ಮುಖ್ಯಮಂತ್ರಿಗಳಿಂದ ಸಾಂತ್ವನ

ಮಂಗಳೂರು,ಡಿಸೆಂಬರ್.26: ಬಂಟ್ವಾಳ ತಾಲೂಕು ರಾಯಿ ಗ್ರಾಮದ ಮಾಜಿ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ದಿವಂಗತ ಸಂತೋಷ್ ಕುಮಾರ್ ಭಂಡಾರಿಯವರ ಅಕಾಲಿಕ ಮರಣದಿಂದ ಶೋಕ ತಪ್ತರಾದ ಅವರ ಕುಟುಂಬ ವರ್ಗ ದವ ರಿಗೆ ಸಾಂ ತ್ವನ ಹೇಳಲು ಮಾನ್ಯ ಮುಖ್ಯ ಮಂತ್ರಿ ಗಳಾದ ಡಿ.ವಿ. ಸದಾ ನಂದ ಗೌಡರು ಅವರ ಮನೆಗೆ ತೆರಳಿ ಸಂ ತಾಪ ಸೂಚಿ ಸಿದರು. ಕುಟುಂಬ ದವರಿಗೆ ದು:ಖ ಭರಿ ಸುವ ಶಕ್ತಿ ನೀಡ ಲೆಂದು ದೇವ ರಲ್ಲಿ ಪ್ರಾರ್ಥಿ ಸಿದರು.
ಮಾನ್ಯ ಮುಖ್ಯ ಮಂತ್ರಿ ಗಳ ಜೊತೆ ಯಲ್ಲಿ ಪರಿಸರ,ಒಳನಾಡು, ಜಲಸಾರಿಗೆ,ಬಂದರು ಹಾಗೂ ದಕ್ಷಿಣಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ.ಪಾಲೆಮಾರ್,ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕೆ.ಟಿ.ಶೈಲಜಾ ಭಟ್,ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ನಾಗರಾಜ ಶೆಟ್ಟಿ,ಸಂಸದರಾದ ನಳಿನ್ ಕುಮಾರ್ ಕಟೀಲ್,ವಿಧಾನ ಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಮತ್ತಿರ ಜನಪ್ರತಿನಿಧಿಗಳು ಹಾಜರಿದ್ದರು.

Sunday, December 25, 2011

ಎರಡು ವರ್ಷದೊಳಗೆ ಪಿಯುಸಿಗೆ ಸೆಂಟ್ರಲ್ ಸಿಲೆಬಸ್:ಮುಖ್ಯಮಂತ್ರಿ

ಮಂಗಳೂರು,ಡಿಸೆಂಬರ್.25:ರಾಜ್ಯದಲ್ಲಿ ಪಿಯುಸಿಗೆ ಸೆಂಟ್ರಲ್ ಪಠ್ಯಕ್ರಮವನ್ನು ಮುಂದಿನ ಎರಡು ವರ್ಷದೊಳಗಾಗಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸಲಾಗುವುದು ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.ಎ.ಶಾಮರಾವ್ ಪ್ರತಿಷ್ಠಾನದ ಶ್ರೀನಿವಾಸ ಸಮೂಹ ಸಂಸ್ಥೆಯ ವತಿಯಿಂದ ಸುರತ್ಕಲ್ ಮುಕ್ಕದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀನಿವಾಸ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ ಹಾಗೂ ಆಸ್ಪತ್ರೆಯನ್ನು ಉದ್ಘಾಟಿಸಿಬಳಿಕ ಸಮಾರಂಭದಲ್ಲಿ ಅವರು ಮಾತನಾಡಿದರು.ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಗೆ ಅನು ಕೂಲ ವಾಗು ವಂತೆ ಪಿಯು ಸಿಯಲ್ಲಿ ಸೆಂ ಟ್ರಲ್ ಸಿಲೆ ಬಸ್ ಅಳ ವಡಿ ಸಿಕೊಳ್ಳು ವಂತೆ ಕೇಂದ್ರ ಈಗಾ ಗಲೇ ಜಿಲ್ಲಾ ರಾಜ್ಯ ಗಳಿಗೆ ಸೂಚನೆ ನೀಡಿದೆ. ಆದರೆ ಕರ್ನಾ ಟಕ ರಾಜ್ಯ ದಲ್ಲಿ ಇದನ್ನು ತಕ್ಷಣ ಅಳ ವಡಿಸಿ ಕೊಳ್ಳು ವುದು ಕಷ್ಟ. ಈ ಹಿನ್ನೆಲೆಯಲ್ಲಿ ಎರಡು ವರ್ಷಗಳ ಕಾಲಾವಕಾಶ ಕೇಳಲಾಗಿದೆ.ಮುಂದಿನ ಎರಡು ವರ್ಷದೊಳಗಾಗಿ ಅನುಷ್ಠಾನಕ್ಕೆ ತರಲು ಪ್ರಯತ್ನಿಸಲಾಗುವುದು ಎಂದರು.
ರಾಜ್ಯ ಸರಕಾರ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದು 2010-11ನೇ ಸಾಲಿನಲ್ಲಿ ಒಟ್ಟು ರೂ.12,284 ಕೋಟಿ ಒದಗಿಸಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ರೂ.2,428 ಕೋಟಿ ಮತ್ತು ವೈದ್ಯಕೀಯ ಶಿಕ್ಷಣಕ್ಕಾಗಿ ರೂ.826 ಕೋಟಿ ನೀಡಿದೆ.ಸರಕಾರದಿಂದಲೇ ಎಲ್ಲಾ ಬದಲಾವಣೆ ಸಾಧ್ಯವಿಲ್ಲ. ಖಾಸಗಿ ಸಂಸ್ಥೆಗಳು ಕೂಡ ಕೈ ಜೋಡಿಸಿದಲ್ಲಿ ರಾಜ್ಯ ಇನ್ನಷ್ಟು ಅಭಿವೃದ್ಧಿ ಕಾಣಲು ಸಾಧ್ಯ ಎಂದ ಮುಖ್ಯಮಂತ್ರಿ ಗಳು ಮೌಲ್ಯಾಧಾರಿತ ಶಿಕ್ಷಣ ಇಂದಿನ ಅಗತ್ಯ ವಾಗಿದ್ದರೂ,ಹೆಚ್ಚಿನ ವಿದ್ಯಾ ಸಂಸ್ಥೆಗಳಲ್ಲಿ ಗುಣಮಟ್ಟದ ಸಮಸ್ಯೆ ಕಂಡು ಬರುತ್ತಿದೆ ಎಂಬ ಕಳವಳ ವ್ಯಕ್ತಪಡಿಸಿ, ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆನೀಡಬೇಕಾಗಿದೆ ಎಂದರು.ಸಮಾ ರಂಭ ದಲ್ಲಿ ಮುಖ್ಯ ಅತಿಥಿ ಗಳಾಗಿ ಮಾತ ನಾಡಿದ ಉನ್ನತ ಶಿಕ್ಷಣ ಸಚಿವ ಡಾ.ವಿ. ಎಸ್.ಆ ಚಾರ್ಯ ಅವರು ಸಮಾ ಜದ ಹಿತ ದೃಷ್ಟಿ ಯಿಂದ ಶಿಕ್ಷಣ ಮತ್ತು ವೈದ್ಯ ಕೀಯ ಕ್ಷೇತ್ರ ದಲ್ಲಿ ತೊಡ ಗಿಸಿ ಕೊಂಡು ಅಭೂತ ಪೂರ್ವ ಕೊಡುಗೆ ನೀಡುವ ಖಾಸಗಿ ಸಂಸ್ಥೆ ಗಳಿಗೆ ಸರ ಕಾರ ಅಗತ್ಯ ನೆರವು ನೀಡಲು ಸಿದ್ಧವಿದೆ ಎಂದರು.
ಮುಖ್ಯ ಅತಿಥಿಗಳಾಗಿದ್ದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೆಮಾರ್ ಮಾತನಾಡಿ ಗ್ರಾಮೀಣ ಭಾಗದ ಜನತೆಗೆ ನೂತನ ವೈದ್ಯಕೀಯ ಸಂಸ್ಥೆಯಿಂದ ಹೆಚ್ಚಿನ ಅನುಕೂಲವಾಗಲಿದೆ. ನನ್ನ ಕ್ಷೇತ್ರದಲ್ಲಿಯೇ ವೈದ್ಯಕೀಯ ಸಂಸ್ಥೆ ನಿರ್ಮಾಣಗೊಂಡಿರುವುದು ಹೆಮ್ಮೆಯ ವಿಚಾರ. ಉತ್ತಮ ವೈದ್ಯಕೀಯ ಸೇವೆ ಜನತೆಗೆ ದೊರೆಯಲಿ ಎಂದು ಹಾರೈಸಿದರು.ಪೇಜಾವರ ಶ್ರೀಗಳಾದ ವಿಶ್ವೇಶತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡಿ ಶೈಕ್ಷಣಿಕ ಸೇವೆಯಲ್ಲಿ ಶ್ರದ್ಧಾಭಕ್ತಿಯಿಂದ ತೊಡಗಿಕೊಳ್ಳಬೇಕು. ಸರಕಾರವೂ ಹೆಚ್ಚಿನ ಒತ್ತು ನೀಡಬೇಕು ಎಂದು ನುಡಿದ ಸ್ವಾಮೀಜಿ ವೈದ್ಯಕೀಯ ವಿದ್ಯಾರ್ಥಿಗಳು ತಮ್ಮ ಸೇವೆಯ ಮಹತ್ವವನ್ನು ಅರಿತುಕೊಳ್ಳಬೇಕು. ಸಂಪಾದನೆಯೊಂದೇ ಮುಖ್ಯವಾಗದೆ ರೋಗಿಗಳ ಮೇಲೆ ಕರುಣೆಯನ್ನು ಹೊಂದಿರಬೇಕು. ವೈದ್ಯ ಸೇವೆಯನ್ನು ಭಗವಂತನ ಸೇವೆ ಎಂದು ಪರಿಗಣಿಸಬೇಕು ಎಂದರು.
ಎ.ಶಾಮರಾವ್ ಪ್ರತಿಷ್ಠಾನದ ಅಧ್ಯಕ್ಷ ಎ.ರಾಘವೇಂದ್ರ ರಾವ್ ಅಧ್ಯಕ್ಷತೆ ವಹಿಸಿದ್ದರು.ಬಾಳೆಗುರು ಮಠದ ಶ್ರೀ ರಘುವರಭೂಷಣ ತೀರ್ಥ ಸ್ವಾಮೀಜಿ, ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲದ ಕುಲಪತಿ ಡಾ.ಶ್ರೀಪ್ರಕಾಶ್ ಕೆ.ಎಸ್., ಎಐಸಿಸಿ ಕಾರ್ಯದರ್ಶಿ ವಿನಯ್ ಕುಮಾರ್ ಸೊರಕೆ, ಇಂಡಿಯನ್ ಓವರ್ಸೀಸ್ ಬ್ಯಾಂಕಿನ ಮುಖ್ಯಸ್ಥ ಎಂ.ನರೇಂದ್ರ, ಬ್ಯಾಂಕ್ ಆಫ್ ಮಹಾರಾಷ್ಟ್ರ ಇದರ ನಿಕಟ ಪೂರ್ವ ಅಧ್ಯಕ್ಷ ಅಲೆನ್ ಪಿರೇರಾ ,ಶ್ರೀನಿವಾಸ ಆಸ್ಪತ್ರೆಯ ಮುಕ್ಕ ಇದರ ಡೀನ್ ಮತ್ತು ವೈದ್ಯಕೀಯ ನಿರ್ದೇಶಕ ಡಾ.ಸಿ.ವಿ.ರಘುವೀರ್ ,ಎ.ಶಾಮರಾವ್ ಪ್ರತಿಷ್ಠಾನದ ಉಪಾಧ್ಯಕ್ಷ ಎ.ಶ್ರೀನಿವಾಸ ರಾವ್ ಸಂಸ್ಥೆಯ ಟ್ರಸ್ಟಿಗಳಾದ ಎ.ವಿಜಯಲಕ್ಷ್ಮೀ ಆರ್.ರಾವ್, ಡಾ.ಉದಯ್ ಕುಮಾರ್ ಮಲ್ಯ, ಪದ್ಮಿನಿ ಕುಮಾರ್, ಎ.ಮಿತ್ರಾ ಎಸ್.ರಾವ್, ಪ್ರಮುಖರಾದ ಶಾಂತಾ ವಿ.ಆಚಾರ್ಯ ಉಪಸ್ಥಿತರಿದ್ದರು.

' ಬರ ಪರಿಹಾರ ನಿರ್ವಹಣೆಯಲ್ಲಿ ಕರ್ನಾಟಕ ನಂ.1'

ಮಂಗಳೂರು,ಡಿಸೆಂಬರ್.25: ಬರ ಪರಿಹಾರ ನಿರ್ವಹಣೆಯಲ್ಲಿ ಕರ್ನಾಟಕ ರಾಜ್ಯ ನಂ.1 ಸ್ಥಾನದಲ್ಲಿದೆ ಎಂಬುದನ್ನು ಕೇಂದ್ರವೇ ಮಾನ್ಯ ಮಾಡಿರುವುದಕ್ಕಾಗಿ ಮುಖ್ಯ ಮಂತ್ರಿ ಡಿ.ವಿ.ಸದಾನಂದ ಗೌಡ ಹರ್ಷ ವ್ಯಕ್ತಪಡಿಸಿದ್ದಾರೆ.ಅವರು ಸುರತ್ಕಲ್ ಎನ್ಐಟಿಕೆ ಹೆಲಿ ಪ್ಯಾಡ್ ನಲ್ಲಿ ಸುದ್ದಿ ಗಾರ ರೊಂದಿಗೆ ಮಾತ ನಾಡಿದರು. ಕೇಂ ದ್ರದ ವಿಜಯ್ ಕುಮಾರ್ ನೇತೃ ತ್ವದ ಸಮಿತಿ ದೇಶದ ಎಂಟು ರಾಜ್ಯ ಗಳಲ್ಲಿ ಸಮೀಕ್ಷೆ ನಡೆಸಿದ್ದು ಕರ್ನಾಟಕ ಬರ ಪರಿಹಾರ ನಿರ್ವಹಣೆಯಲ್ಲಿ ಮೊದಲ ಸ್ಥಾನದಲ್ಲಿದೆ ಎಂಬುದಾಗಿ ಘೋಷಿಸಿದೆ ಎಂದರು.ರಾಜ್ಯದ ಮುಖ್ಯಮಂತ್ರಿಯಾಗಿ ಅಭಿವೃದ್ಧಿಯ ದೃಷ್ಟಿಯಿಂದ ನನ್ನ ಕರ್ತವ್ಯ ನಿರ್ವಹಿಸುತ್ತೇನೆ ಎಂದು ಸದಾನಂದ ಗೌಡ ಹೇಳಿದರು.

ಮುಖ್ಯ ಮಂತ್ರಿ ಗಳನ್ನು ಉಸ್ತು ವಾರಿ ಸಚಿವ ಜೆ.ಕೃಷ್ಣ ಪಾಲೆ ಮಾರ್, ಸಚಿವ ರಾದ ಡಾ.ವಿ. ಎಸ್. ಆಚಾ ರ್ಯ,ಸಂ ಸದ ನಳಿನ್ ಕುಮಾರ್ ಕಟೀಲ್, ಕಮಿ ಷನರ್ ಸೀ ಮಂತ್ ಕುಮಾರ್ ಸಿಂಗ್, ಬಿಜೆಪಿ ಜಿಲ್ಲಾ ಧ್ಯಕ್ಷ ಪದ್ಮ ನಾಭ ಕೊಟ್ಟಾರಿ, ಮೀನು ಗಾರಿಕಾ ನಿಗ ಮದ ಅಧ್ಯಕ್ಷ ನಿತಿನ್ ಕುಮಾರ್, ಜಿ.ಪಂ.ಅಧ್ಯಕ್ಷೆ ಶೈಲಜಾ ಭಟ್ ಕೆ.ಟಿ. ಮತ್ತಿತರರು ಪುಷ್ಪ ಗುಚ್ಚವಿತ್ತು ಸ್ವಾಗತ ಕೋರಿದರು.

Saturday, December 24, 2011

ರಾಷ್ಟ್ರೀಯ ಯುವಜನೋತ್ಸವ ಮೂಲಭೂತ ವ್ಯವಸ್ಥೆಗಳ ಪರಿಶೀಲನೆ

ಮಂಗಳೂರು,ಡಿಸೆಂಬರ್.24:ಜನವರಿ 12 ರಿಂದ ಆರಂಭವಾಗಲಿರುವ ರಾಷ್ಟ್ರೀಯ ಯುವಜನೋತ್ಸವಕ್ಕೆ ವಿವಿಧ ಸಮಿತಿಗಳು ತೆಗೆದುಕೊಂಡಿರುವ ನಿರ್ಣಯಗಳು ಹಾಗೂ ಅದರಂತೆ ಆಗಿರುವ ಮೂಲಭೂತ ವ್ಯವಸ್ಥೆಗಳ ಬಗ್ಗೆ ರಾಷ್ಟ್ರೀಯ ಯುವಜನೋತ್ಸವದ ಅಧ್ಯಕ್ಷರು ಹಾಗೂ ದ.ಕ.ಜಿಲ್ಲಾಧಿ ಕಾರಿಗಳಾದ ಡಾ.ಎನ್.ಎಸ್.ಚನ್ನಪ್ಪ ಗೌಡ ಅವರು ಈ ಕುರಿತು ತಮ್ಮ ಕಚೇರಿಯಲ್ಲಿ ಕರೆದಿದ್ದ ವಿವಿಧ ಸಮಿತಿಗಳ ಅಧ್ಯಕ್ಷರು ಗಳ ಸಭೆಯಲ್ಲಿ ಪರಿಶೀಲನೆ ಮಾಡಿದರು. ರಾಷ್ಟ್ರೀಯ ಯುವ ಜನೋ ತ್ಸವಕ್ಕೆ ಆಗಮಿ ಸುತ್ತಿ ರುವ ವಿವಿಧ ರಾಜ್ಯ ಗಳ ಅತಿಥಿ ಗಳು ಹಾಗೂ ಕಲಾ ವಿದರ ನೋಂದ ಣಿಗೆ ಹಾಗೂ ಅವರ ನ್ನು ವಸತಿ ಸೌಕರ್ಯ ಕಲ್ಪಿ ಸಿರುವ ಜಾಗಕ್ಕೆ ಹಾಗೂ ವಿವಿಧ ಕಾರ್ಯ ಕ್ರಮ ಗಳು ನಡೆಯುವ ಸ್ಥಳ ಗಳಿಗೆ ಕರೆದು ಕೊಂಡು ಹೋಗಿ ಬರಲು ಆಗಿ ರುವ ವಾಹನ ಸೌಕರ್ಯ ಗಳ ಬಗ್ಗೆ ಪ್ರಾದೇ ಶಿಕ ಸಾರಿಗೆ ಅಧಿ ಕಾರಿ ಗಳಿಂದ ಮಾಹಿತಿಯನ್ನು ಪಡೆದು, ಕೆಲವೊಂದು ಸಲಹೆಗಳನ್ನು ನೀಡಿದರು.
ಆಹಾರದ ಬಗ್ಗೆ ಹಾಗೂ ಸ್ವಚ್ಛತೆ ಬಗ್ಗೆ ತೆಗೆದುಕೊಂಡಿರುವ ಮುಂಜಾಗ್ರತೆ ಕುರಿತಂತೆ ಪರಿಶೀಲನೆ ಮಾಡಿದ ಜಿಲ್ಲಾಧಿಕಾರಿಗಳು ಯಾವುದೇ ಕಾರಣಕ್ಕೂ ಆಹಾರ ವಿತರಣೆಯಲ್ಲಿ ಗೊಂದಲವಾಗದಂತೆ ಹಾಗೂ ವಿವಿಧ ರಾಜ್ಯಗಳ ಪ್ರತಿನಿಧಿಗಳು ಯಾವುದೇ ರೀತಿಯ ಮುಜುಗರಕ್ಕೆ ಒಳಗಾಗದಂತೆ ಎಚ್ಚರಿಕೆಯಿಂದ ಅತಿಥಿ ಸತ್ಕಾರವನ್ನು ಮಾಡಲು ಮತ್ತು ಆಹಾರ ವಿತರಣಾ ಸ್ಥಳಗಳಲ್ಲಿ ಕಡ್ಡಾಯವಾಗಿ ಸ್ವಚ್ಚತೆಯನ್ನು ಕಾಪಾಡಬೇಕೆಂದು ಸೂಚಿಸಿದರು.
ಯಾರಾದರೂ ಅನಾರೋಗ್ಯ ಪೀಡಿತರಾದಲ್ಲಿ ಅಂತಹವರಿಗೆ ತಕ್ಷಣ ಶ್ರುಶ್ರೂಷೆ ನೀಡಲು ಮೂರು ಅಂಬುಲೆನ್ಸ್ ಮತ್ತು 2 ಸಂಚಾರಿ ಕ್ಲಿನಿಕ್ ಗಳನ್ನು ದಿನದ 24 ಗಂಟೆಗಳು ಲಭ್ಯವಿರುವಂತೆ ವ್ಯವಸ್ಥೆ ಮಾಡಬೇಕೆಂದು ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ತಿಳಿಸಿ,ತುರ್ತು ಔಷಧಿಗಳನ್ನು ಸಂಗ್ರಹಿಸುವಂತೆ ತಿಳಿಸಿದರು.
ಉದ್ಘಾಟನಾ ಸಮಾರಂಭದಂದು ವೇದಿಕೆ ಮೇಲೆ ಅತೀ ಗಣ್ಯರ ಹೊರತು ಅಗತ್ಯಕ್ಕಿಂತ ಹೆಚ್ಚಿನ ಜನರು ವೇದಿಕೆಯಲ್ಲಿ ಅನಾವಶ್ಯಕವಾಗಿ ಓಡಾಡದಂತೆ ಸ್ವಾಗತ ಸಮಿತಿಯವರು ಮುಂಜಾಗ್ರತೆ ವಹಿಸಲು ಹಾಗೂ ಅತಿಥಿ ಗಣ್ಯರಿಗೆ ಸನ್ಮಾನಿತರಿಗೆ ಗೌರವ ಪೂರ್ವಕವಾಗಿ ನೀಡಲಾಗುವ ಹೂಗುಚ್ಛಗಳಿಗೆ ಪ್ಲಾಸ್ಟಿಕ್ ಹೊದಿಕೆ ಇಲ್ಲದಂತೆ ನೀಡಲು ಜಾಗ್ರತೆ ವಹಿಸಲು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ವಿಜಯ ಪ್ರಕಾಶ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಪಾಲಯ್ಯ,ಮಹಾನಗರಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್, ಉಪವಿಭಾಗಾಧಿಕಾರಿ ಡಾ.ವೆಂಕಟೇಶ್ ,ಅಪರ ಜಿಲ್ಲಾಧಿಕಾರಿ ದಯಾನಂದ .ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಪದ್ಮಯ್ಯ ನಾಯ್ಕ ಮುಂತಾದವರು ಹಾಜರಿದ್ದರು.

Friday, December 23, 2011

ಕಂದಾಯ ಇಲಾಖೆಯ ಕುರಿತಾದ ಸಮಸ್ಯೆಗಳ ಪರಿಹಾರಕ್ಕೆ ವಿಶೇಷ ಸಭೆ; ಜಿ.ಪಂ.ನಿರ್ಣಯ

ಮಂಗಳೂರು,ಡಿಸೆಂಬರ್.23: ಕಂದಾಯ ಇಲಾಖೆಯ ಕುರಿತಾದ ಸಮಸ್ಯೆಗಳನ್ನು ಚರ್ಚಿಸಿ ಸೂಕ್ತ ಪರಿಹಾರ ಕಂಡುಕೊಳ್ಳಲು ಅಧಿಕಾರಿಗಳ ವಿಶೇಷ ಸಭೆಯನ್ನು ಕರೆಯಲು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ನಿರ್ಧರಿಸಿದೆ.ಜಿಲ್ಲಾಧಿಕಾರಿ ಸೇರಿದಂತೆ ಪ್ರಮುಖ ಎಲ್ಲಾ ಅಧಿಕಾರಿಗಳನ್ನು ಈ ವಿಶೇಷ ಸಭೆಗೆ ಕರೆಯಲು ಜಿ.ಪಂ ಅಧ್ಯಕ್ಷರಾದ ಶೈಲಜಾ ಕೆ.ಟಿ.ಭಟ್ ಅವರ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಸಾಮನ್ಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಯಿತು.ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ರುದ್ರ ಭೂಮಿಗೆ ಜಮೀ ನಿನ ಅವಶ್ಯ ಕತೆ ಇದೆ.ಕೆಲವು ಕಡೆ ರುದ್ರ ಭೂಮಿಗೆ ಮೂಲ ಭೂತ ಸೌಕರ್ಯ ಗಳ ಕೊರತೆ ಇದೆ.ವಸತಿ ಯೋಜನೆ ಗಳ ಅನು ಷ್ಠಾನಕ್ಕೆ, ಸರ ಕಾರಿ ಸೌಲಭ್ಯ ಗಳನ್ನು ವಿಸ್ತ ರಿಸಲು ಜಮೀ ನಿನ ಅವಶ್ಯ ಕತೆ ಇದೆ. ಸರ ಕಾರಿ ಜಮೀ ನಿನಲ್ಲಿ ಗುಡಿ ಸಲು ಹಾಕಿ ವಾಸಿ ಸುತ್ತಿ ರುವ ಬಡವರಿಗೆ ಹಕ್ಕುಪತ್ರಗಳನ್ನು ನೀಡಬೇಕಾಗಿದೆ ಎಂದು ಜಿ.ಪಂ.ಸದಸ್ಯರು ಸಭೆಯ ಗಮನ ಸೆಳೆದರು. ಈ ಸಂದರ್ಭದಲ್ಲಿ ಈ ಎಲ್ಲಾ ವಿಷಯಗಳ ಕುರಿತು ಚರ್ಚಿಸಲು ಜಿಲ್ಲಾದಿಕಾರಿಗಳು ಒಳಗೊಂಡಂತೆ ವಿಶೇಷ ಸಭೆ ಕರೆಯಬೇಕೆಂದು ಅನೇಕ ಸದಸ್ಯರು ಸಲಹೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಜಿ.ಪಂ. ಅಧ್ಯಕ್ಷರು, ಮುಂದಿನ 10 ದಿನಗಳ ಒಳಗಾಗಿ ವಿಶೇಷ ಸಭೆ ಕರೆಯಲಾಗುವುದು ಮತ್ತು ತಾಲೂಕು ತಹಶೀಲ್ದಾರರು, ಸಹಾಯಕ ಆಯುಕ್ತರು ಮತ್ತು ಜಿಲ್ಲಾಧಿಕಾರಿಯವರನ್ನು ಸಭೆಗೆ ಆಹ್ವಾನಿಸಲಾಗುವುದು ಎಂದರು.ಜಿಲ್ಲೆಯ ಗ್ರಾಮಾಂ ತರ ಭಾಗ ಗಳ ರಸ್ತೆ ಗಳು ತೀರಾ ಹದ ಗೆಟ್ಟಿ ರುವ ಕುರಿತು ಮತ್ತು ಕುಡಿ ಯುವ ನೀರಿನ ಸಮ ರ್ಪಕ ಸರ ಬರಾ ಜಿನಲ್ಲಿ ಆಗು ತ್ತಿರುವ ತೊಂದ ರೆಗಳ ಬಗ್ಗೆ ಸದ ಸ್ಯರು ಸಭೆಯ ಗಮ ನಕ್ಕೆ ತಂ ದರು. ಇದಕ್ಕೆ ಉತ್ತ ರಿಸಿದ ಕಾರ್ಯ ನಿರ್ವಾ ಹಕ ಇಂಜಿ ನಿಯರ್ ಈಗಾ ಗಲೇ ರಸ್ತೆ ಗಳ ದುರಸ್ತಿ ಕಾರ್ಯ ನಡೆ ದಿದೆ. ಮುಖ್ಯ ಮಂತ್ರಿ ಗಳು ಕಿ.ಮೀ.ಗೆ 50 ಸಾವಿರ ದಂತೆ ರಸ್ತೆ ದುರಸ್ತಿ ಗೆಂದು ಅನುದಾನ ನೀಡಲು ಸಮ್ಮತಿಸಿದ್ದಾರೆ. ಜಿ.ಪಂ.ನ 2650 ಕಿ.ಮೀ. ಉದ್ದದ ರಸ್ತೆಗಳಿಗೆ ರೂ. 13.14 ಕೋಟಿಯ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. 62 ಕಾಮಗಾರಿಗಳು ಪ್ರಗತಿಯಲ್ಲಿವೆ ಎಂಬ ಮಾಹಿತಿಯನ್ನು ಸಭೆಗೆ ನೀಡಿದರು.ಸಿಇಒ ಡಾ. ವಿಜಯಪ್ರಕಾಶ್ ಮಾತನಾಡಿ,ಗ್ರಾಮೀಣ ರಸ್ತೆಗಳ ದುರಸ್ತಿಗೆ ಅಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಲಾಗಿದೆ. ಅಗತ್ಯವಿರುವ ಅನುದಾನವನ್ನು ಮುಖ್ಯಮಂತ್ರಿಗಳ ವಾಗ್ದಾನದಂತೆ ಒದಗಿಸಲಾಗುವುದು. ಶೀಘ್ರ ಕಾಮಗಾರಿಗಳನ್ನು ಮುಗಿಸಬೇಕು,ತಪ್ಪಿದಲ್ಲಿ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಗಳನ್ನು ಜವಾಬ್ದಾರರನ್ನಾಗಿಸಲಾಗುವುದು ಎಂದರು.
ಅನೇಕ ಸರಕಾರಿ ಶಾಲೆಗಳಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ.ಅನುಭವಿ ಶಿಕ್ಷಕರಿಲ್ಲ. ಸರಕಾರಿ ಶಾಲೆಗಳಿಗೆ ಇನ್ನಷ್ಟು ಕಾಯಕಲ್ಪದ ಮತ್ತು ಸೌಲಭ್ಯದ ಅವಶ್ಯಕತೆ ಇದೆ ಎಂದು ಕೆಲವು ಸದಸ್ಯರು ಆಗ್ರಹಿಸಿದರು.
ಜಿ.ಪಂ. ಉಪಾಧ್ಯಕ್ಷೆ ಧನಲಕ್ಷ್ಮೀ, ಶಾಸಕ ಯು.ಟಿ. ಖಾದರ್, ಸ್ಥಾಯಿ ಸಮಿತಿ ಅಧ್ಯಕ್ಷ ಜನಾರ್ಧನ ಗೌಡ, ಈಶ್ವರ ಕಟೀಲ್ ಉಪಸ್ಥಿತರಿದ್ದರು.

Wednesday, December 21, 2011

ಯುವಜನೋತ್ಸವ ಪೂರ್ವಸಿದ್ಧತೆ ಕುಮಾರ್ ನಾಯಕ್ ರಿಂದ ಪರಿಶೀಲನೆ

ಮಂಗಳೂರು,ಡಿಸೆಂಬರ್.21:ಮಂಗಳೂರಿನಲ್ಲಿ ಜನವರಿ 12ರಿಂದ 16ರವರೆಗೆ ನಡೆಯಲಿರುವ 17 ನೇ ರಾಷ್ಟ್ರೀಯ ಯುವಜನೋತ್ಸವದ ಉದ್ಘಾಟನಾ ಮತ್ತು ಸಮಾರೋಪ ಸಮಾರಂಭದ ಉಸ್ತುವಾರಿ ವಹಿಸಿರುವ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಕುಮಾರ್ ನಾಯಕ್ ಅವರು ಐದು ದಿನಗಳ ಸಂಭ್ರಮದ ನಿಮಿಷ ನಿಮಿಷದ ಕಾರ್ಯಕ್ರಮ ಪಟ್ಟಿಯನ್ನು ತಯಾರಿಸಲು ಸೂಚಿಸಿದರು.ಉದ್ಘಾ ಟನಾ ಸಮಾ ರಂಭವು ಉಳಿದ ದಿನ ಗಳಲ್ಲಿ ನಡೆ ಯುವ ಸಂಭ್ರ ಮದ ಮುಖ ವಾಣಿ ಯಾಗ ಲಿದ್ದು, ಅತ್ಯಂತ ಸು ವ್ಯವ ಸ್ಥಿತವೂ ಅರ್ಥ ಪೂರ್ಣವೂ ಆಗಿರ ಬೇಕೆಂಬ ಆಶಯ ವನ್ನು ಅವರು ವ್ಯಕ್ತ ಪಡಿಸಿದರು. ಇಂದು ಜಿಲ್ಲಾ ಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಉದ್ಘಾಟನಾ ಸಮಾರಂಭ, ನೆಹರೂ ಮೈದಾನದಿಂದ ಮಂಗಳಾ ಕ್ರೀಡಾಂಗಣದವರೆಗೆ ನಡೆಯಲಿರುವ ಮೆರವಣಿಗೆ ಹಾಗೂ ಕಾರ್ಯಕ್ರಮಗಳ ಮಾಹಿತಿಯನ್ನು ಪಡೆದರಲ್ಲದೆ ಈ ಬಗ್ಗೆ ನೀಡಿದ ಸಲಹೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಿ ಮುಂದಿನ ಸಭೆಯಲ್ಲಿ ಪ್ರಗತಿ ವರದಿ ಬೇಕೆಂದು ಎಲ್ಲ ಸಮಿತಿಗಳಿಗೆ ಸೂಚಿಸಿದರು.
ನಗರ ದಲ್ಲಿ ಕಾರ್ಯ ಕ್ರಮ ಗಳು ನಡೆ ಯಲಿ ರುವ ಸ್ಥಳ ಗಳನ್ನು ಭೇಟಿ ನೀಡಿ ಪರಿ ಶೀಲಿ ಸಿದ ಅವರು, ಆತಿಥೇ ಯಕ್ಕೆ ಹೆಸ ರಾಗಿ ರುವ ನಗರ ದಲ್ಲಿ ಅತಿಥಿ ಗಳ ತಂಗು ವಿಕೆ ಹಾಗೂ ಭೇಟಿ ಸ್ಮರಣೀ ಯವಾ ಗಿರಬೇ ಕೆಂದರು. ದೇಶದ ವಿವಿಧ ಮೂಲೆ ಗಳಿಂದ ಆಗಮಿ ಸುವ ಸ್ಪರ್ಧಾ ರ್ಥಿಗಳು ಹಾಗೂ ವೀಕ್ಷಕರು ಮತ್ತು ಗಣ್ಯರಿಗೆ ಯಾವುದೇ ತೊಂದರೆ ಯಾಗದ ರೀತಿ ಯಲ್ಲಿ ವ್ಯವಸ್ಥೆ ಗಳಿರ ಬೇಕು. ಆಹಾರ ಮತ್ತು ವಾಸ್ತವ್ಯಕ್ಕೆ, ಶುಚಿತ್ವಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಮುಖ್ಯವಾಗಿ ಊಟದ ಸಂದರ್ಭದಲ್ಲಿ ನೂಕು ನುಗ್ಗಲುಗಳಾಗಬಾರದು ಎಂದ ಅವರು, ಸಮಿತಿಗಳ ನಡುವೆ ಸಂವಹನದ ಕೊರತೆಯುಂಟಾಗಬಾರದು ಎಂದರು.

ಯುವಜನೋತ್ಸವಕ್ಕೆ ಪೋಲಿಸರ ಸರ್ವ ಸಹಕಾರ ;ಸೀಮಂತ್ ಕುಮಾರ್ ಸಿಂಗ್

ಮಂಗಳೂರು.ಡಿಸೆಂಬರ್.21:17ನೇ ರಾಷ್ಟ್ರೀಯ ಯುವಜನೋತ್ಸವವನ್ನು ಸುವ್ಯವಸ್ಥಿತವಾಗಿ ನಡೆಸುವ ಸಂಬಂಧ ಪೋಲೀಸ್ ಕಮೀಷನರೇಟ್ ವತಿಯಿಂದ ಸರ್ವ ಸಹಕಾರ ನೀಡುವುದಾಗಿ ಪೋಲೀಸ್ ಕಮೀಷನರ್ ಸೀಮಂತ್ ಕುಮಾರ್ ಸಿಂಗ್ ತಿಳಿಸಿದರು.ಅವರು ಮಂಗಳವಾರ ಸಂಜೆ (20-12-11) ಮಂಗಳಾ ಕ್ರೀಡಾಂಗಣದ ಯುವಜನೋತ್ಸವದ ಕ್ಯಾಂಪ್ ಕಚೇರಿಯಲ್ಲಿ ಈ ಸಂಬಂಧ ನಡೆದ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.ಎಲ್ಲಾ ಉಪ ಸಮಿತಿಗಳ ಮುಖ್ಯಸ್ಥರು ಹಾಗೂ ನೋಡೆಲ್ ಅಧಿಕಾರಿಗಳು ಸ್ಥಳೀಯ ಪೋಲೀ ಸರೊಂದಿಗೆ ನಿಕಟ ಸಂಪರ್ಕ ವನ್ನಿರಿ ಸಿಕೊಂಡು ಮಾಹಿತಿ ನೀಡ ಬೇಕೆಂದ ಅವರು, ಎಲ್ಲಾ ಕಾರ್ಯ ಕ್ರಮಗಳ ಕುರಿತು ವಿವರ ಮಾಹಿತಿಯನ್ನು ಕಮಿಷನರೇಟ್ ಗೆ ನೀಡಬೇಕೆಂದರು. ಡಿಸಿಪಿ ಕಾನೂನು ಮತ್ತು ಸುವ್ಯವಸ್ಥೆ ಇವರು ಕಾನೂನು ಮತ್ತು ಸುರಕ್ಷಾ ವ್ಯವಸ್ಥೆಯ ಸದಸ್ಯ ಕಾರ್ಯದರ್ಶಿಗಳಾಗಿದ್ದು ಯಾವುದೇ ಸಂದರ್ಭದಲ್ಲೂ ಅಧಿಕಾರಿಗಳು ಪೋಲಿಸ್ ಆಯುಕ್ತರ ಮೊಬೈಲ್ ಸಂಖ್ಯೆ 9480802304ನ್ನು ಸಂಪರ್ಕಿಸಬಹುದು. ಅದೇ ರೀತಿ ಅಪರಾಧ ವಿಭಾಗದ ಡಿಸಿಪಿ ಧರ್ಮಯ್ಯ ಅವರು 9480802305 ನಲ್ಲಿ ಲಭ್ಯರಿರುತ್ತಾರೆ. ಟ್ರಾಫಿಕ್ ಎಸಿಪಿ ಸುಬ್ರಹ್ಮಣ್ಯ ಅವರ ಮೊಬೈಲ್ ನಂಬರ್ 9480802312 ಎಂದು ಸಭೆಗೆ ಮಾಹಿತಿ ನೀಡಿದರು. ಬಸ್ ಸ್ಟ್ಯಾಂಡ್, ರೈಲ್ವೇ ಸ್ಟೇಷನ್ಗಳು ಸೇರಿದಂತೆ ಕಾರ್ಯಕ್ರಮಗಳು ನಡೆಯುವ ಪ್ರಮುಖ ಪ್ರದೇಶಗಳಲ್ಲಿ ಪೋಲೀಸ್ ಹೆಲ್ಪ್ ಡೆಸ್ಕ್ ಸ್ಥಾಪಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
ಯುವ ಜನೋತ್ಸವ ಸಂಬಂಧ ರಚಿಸ ಲಾಗಿರುವ ವಿವಿಧ ಸಮಿತಿಗಳ ಅಧ್ಯಕ್ಷರು ಮತ್ತು ಸದಸ್ಯ ಕಾರ್ಯ ದರ್ಶಿಗಳು ಕಾರ್ಯಕ್ರಮ ಸಂಬಂಧ ಇದುವರೆಗೆ ಆಗಿರುವ ಅಭಿವೃದ್ಧಿಯ ಮಾಹಿತಿಯನ್ನು ನೀಡಿದರು. ಆರ್ ಟಿ ಒ ಮತ್ತು ಪೊಲೀಸ್ ಇಲಾಖೆ ಜನವರಿ 12ರಿಂದ 16ರವರೆಗೆ ಸಮನ್ವಯ ಸಾಧಿಸಿ ಟ್ರಾಫಿಕ್ ಮತ್ತು ಸುವ್ಯವಸ್ಥೆಯಲ್ಲಿ ಯಾವುದೇ ಗೊಂದಲಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಚರ್ಚಿಸಲಾಯಿತು.
ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆ ಜಂಟಿ ನಿರ್ದೇಶಕರಾದ ವೈ.ಆರ್.ಕಾಂತ ರಾಜೇಂದ್ರ ಮತ್ತು ನೆಹರು ಯುವ ಕೇಂದ್ರದ ವಲಯ ನಿರ್ದೇಶಕರಾದ ನಟರಾಜನ್ ಅವರು ಉಪಸ್ಥಿತರಿದ್ದರು. ಎಲ್ಲಾ ಸಮಿತಿ ಮುಖ್ಯಸ್ಥರು ಮತ್ತು ಸದಸ್ಯ ಕಾರ್ಯದರ್ಶಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Tuesday, December 20, 2011

ನಗರದಲ್ಲಿ 'ಮೈಸೂರು ಸಿಲ್ಕ್' ಸೀರೆಗಳ ಮಳಿಗೆ

ಮಂಗಳೂರು,ಡಿಸೆಂಬರ್.20:ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯಮಿತ ದ ಪಾರಂಪರಿಕ ಉತ್ಪನ್ನವಾದ ಮೈಸೂರು ರೇಶ್ಮೆ ಸೀರೆಗಳ ಮಾರಾಟದ ಮಳಿಗೆಯನ್ನು ನಗರದ ಕೆ.ಎಸ್. ರಾವ್ ರಸ್ತೆಯ ಪ್ರಿಯದರ್ಶಿನಿ ಹ್ಯಾಂಡ್ ಲೂಮ್ಸ್ ಮಳಿಗೆಯಲ್ಲಿ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಎಂ.ಡಿ. ಲಕ್ಷ್ಮೀ ನಾರಾಯಣ ಅವರು ಉದ್ಘಾಟಿಸಿದರು.ಈ ಸಂದ ರ್ಭದಲ್ಲಿ ಮಾತ ನಾಡಿದ ಅವರು, ಕೈ ಮಗ್ಗ ಅಭಿವೃದ್ದಿ ನಿಗ ಮವು ಒಟ್ಟು 55 ಮಾರಾಟ ಮಳಿಗೆ ಗಳನ್ನು ಹೊಂದಿ ದ್ದು, ರಾಜ್ಯ ದಲ್ಲಿ 42 ಮಳಿಗೆ ಗಳಿವೆ.ನೇಕಾ ರರು ನೇಯ್ದ ಬಟ್ಟೆ ಗಳನ್ನು 'ಪ್ರಿಯ ದರ್ಶಿನಿ' ಹೆಸರಿ ನಡಿ ಗ್ರಾಹಕ ರಿಗೆ ನೇರ ವಾಗಿ ಮಾರಾಟ ಮಾಡ ಲಾಗು ತ್ತಿದೆ.ಇದೀಗ ಇದೇ ಹೆಸರಿನಡಿ ರೇಷ್ಮೆ ಉದ್ದಿಮೆಗಳ ನಿಗಮದ ರೇಷ್ಮೆ ಸೀರೆಗಳನ್ನು ಕೂಡಾ ಮಾರಾಟ ಮಾಡಲು ತೀರ್ಮಾನಿಸಿ ಈ ನೂತನ ಯೋಜನೆಗೆ ಚಾಲನೆ ನೀಡಲಾಗಿದೆ ಎಂದರು. ನಿಗಮವು 2009 ನೇ ಸಾಲಿನ ಆರ್ಥಿಕ ವರ್ಷದಲ್ಲಿ 98.72 ಕೋಟಿ ರೂ.ಗಳ ವಹಿವಾಟು ನಡೆಸಿದ್ದರೆ, 2010-11ನೆ ಸಾಲಿನಲ್ಲಿ 138 ಕೋಟಿ ರೂ.ಗಳ ದಾಖಲೆ ಮಾರಾಟ ವಹಿವಾಟನ್ನು ನಡೆಸಿದೆ. ಪ್ರಸಕ್ತ ಆರ್ಥಿಕ ಸಾಲಿನಲ್ಲಿ 200 ಕೋಟಿ ರೂ.ಗಳ ವಹಿವಾಟಿನ ಗುರಿಯನ್ನು ಹೊಂದಲಾಗಿದೆ ಎಂದವರು ತಿಳಿಸಿದರು.ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ನಿಯ ಮಿತ (ಕೆಎಸ್ ಐಸಿ)ದ ಅಧ್ಯಕ್ಷ ಬಿ. ವಿಜಯ ಕುಮಾರ್ ಮಾತ ನಾಡಿ, ಸಾಂಪ್ರದಾಯಿಕ ರೀತಿಯ ಉತ್ಪಾದನೆ, ಬಟ್ಟೆಯಲ್ಲಿ ಅಳವಡಿಸಲಾಗಿರುವ ಹುರಿ ಮಾಡುವ ವಿಧಾನ, ಮೈಸೂರು ಸಿಲ್ಕ್ ಬಟ್ಟೆಯು ಭಾರತದಲ್ಲಿ ದೊರೆಯುವ ಕ್ರೇಪ್ ಸಿಲ್ಕ್ ಬಟ್ಟೆಗಳಲ್ಲಿಯೇ ಅತ್ಯುತ್ತಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮೈಸೂರ್ ಸಿಲ್ಕ್ ಗೆ ಉಪಯೋಗಿಸಲ್ಪಡುವ ಜರಿಯು ಪರಿಶುದ್ಧ ಚಿನ್ನವಾಗಿದ್ದು, ಶೇ. 0.65 ಚಿನ್ನ ಹಾಗೂ ಶೇ. 65ರಷ್ಟು ಬೆಳ್ಳಿಯಿಂದ ತಯಾರಿಸಲ್ಪಟ್ಟಿದೆ. ವಿನ್ಯಾಸಗಳು ಸಾಂಪ್ರದಾಯಿಕ ಹಾಗೂ ಆಧುನಿಕ ಸ್ಪರ್ಶದಿಂದ ಕೂಡಿದೆ.ಮೈಸೂರು ಸಿಲ್ಕ್ ಸೀರೆಗಳು 60 ವರ್ಷಗಳ ಬಳಕೆಯ ಬಳಿಕವೂ ತಮ್ಮ ನೈಜತೆಯನ್ನು ಕಾಪಾಡಿಕೊಳ್ಳಬಲ್ಲವು ಎಂದವರು ಹೇಳಿದರು.ಕೆಎಸ್ ಐಸಿ ಆಡಳಿತ ನಿರ್ದೇ ಶಕ ಜಿ. ರಾಮ ಚಂದ್ರ, ಕೆಎಚ್ ಡಿ ಸಿ ಆಡ ಳಿತ ನಿರ್ದೇಶಕ ಮುಹ ಮ್ಮದ್ ಮುಹ್ಸಿನ್,ದಕ್ಷಿಣ ಕನ್ನಡ ಜಿಲ್ಲಾಧಿ ಕಾರಿ ಎನ್.ಎಸ್. ಚನ್ನಪ್ಪ ಗೌಡ, ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.ಮಳಿಗೆಯಲ್ಲಿ 1954 ಹಾಗೂ 1958ರಲ್ಲಿ ನಿಗಮದಿಂದ ತಯಾರಿಸಲ್ಪಟ್ಟ, ಗ್ರಾಹಕರು ಖರೀದಿಸಿ ಸುಮಾರು 50 ವರ್ಷಗಳಿಗೂ ಅಧಿಕ ಕಾಲ ಉಪಯೋಗಿಸಿದ ಸೀರೆಯನ್ನು ಇಂದು ಪ್ರದರ್ಶನಕ್ಕಿಡಲಾಗಿತ್ತು. ಹಳೆಯ ಬಾಟಲ್ ಗ್ರೀನ್ ಮತ್ತು ರಾಯಲ್ ಬ್ಲೂ ಬಣ್ಣದ ಎರಡು ಮೈಸೂರು ಸಿಲ್ಕ್ ಸೀರೆಗಳು ಇಂದಿಗೂ ತಮ್ಮ ನೈಜತೆಯನ್ನು ಕಾಪಾಡಿಕೊಂಡಿವೆ.

17ನೇ ರಾಷ್ಟ್ರೀಯ ಯುವಜನೋತ್ಸವ ಸಿದ್ದತೆ : ಜಿಲ್ಲಾ ಉಸ್ತುವಾರಿ ಸಚಿವರಿಂದ ಪರಿಶೀಲನೆ

ಮಂಗಳೂರು, ಡಿಸೆಂಬರ್.20: ಜನವರಿ 12 ರಿಂದ 16 ರ ವರೆಗೆ 17 ನೇ ರಾಷ್ಟ್ರೀಯ ಯುವ ಜನೋ ತ್ಸವ ಮಂಗ ಳೂರಿ ನಲ್ಲಿ ನಡೆ ಯಲಿದ್ದು ಉತ್ಸ ವದ ಯಶ ಸ್ಸಿಗೆ ಸಿದ್ದತೆ ಗಳು ಭರ ದಿಂದ ಸಾಗಿವೆ. ಉದ್ಘಾ ಟನೆ ಮತ್ತು ಇತರ ಕಾರ್ಯ ಕ್ರಮಗಳು ನಡೆ ಯುವ ನಗರದ ಮಂಗಳ ಕ್ರೀಡಾಂ ಗಣ ದಲ್ಲಿನ ಸಿದ್ದತೆ ಗಳನ್ನು ಸೋಮ ವಾರ ಸಂಜೆ ಜಿಲ್ಲಾ ಉಸ್ತು ವಾರಿ ಸಚಿವ ರಾದ ಕೃಷ್ಣ ಜೆ.ಪಾಲೆಮಾರ್ ಅವರು ಪರಿಶೀಲನೆ ನಡೆಸಿದರು. ಶಾಸಕ ಯು.ಟಿ. ಖಾದರ್, ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Monday, December 19, 2011

ರಾಷ್ಟ್ರೀಯ ಯುವಜನೋತ್ಸವ ಯಶಸ್ವಿಗೆ ಪಾಲೆಮಾರ್ ಕರೆ

ಮಂಗಳೂರು, ಡಿಸೆಂಬರ್.19: ಜನವರಿ 12ರಿಂದ 16ರವರೆಗೆ ಮಂಗಳೂರು ನಗರದಲ್ಲಿ ಜರಗಲಿರುವ 17ನೇ ರಾಷ್ಟ್ರೀಯ ಯುವಜನೋತ್ಸವ ರಾಜ್ಯ ಮತ್ತು ದಕ್ಷಿಣ ಕನ್ನಡ ಜಿಲ್ಲೆಗೆ ದೊರಕಿದ ಅಪೂರ್ವ ಅವಕಾಶ. ಈ ಅವಕಾಶವನ್ನು ಅತ್ಯುತ್ತಮವಾಗಿ ಬಳಸಿಕೊಂಡು ರಾಜ್ಯ ಹಾಗೂ ಜಿಲ್ಲೆಯ ಘನತೆಯನ್ನು ಹೆಚ್ಚಿಸಲು ಎಲ್ಲಾ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳು ಸ್ವಯಂಪ್ರೇರಿತವಾಗಿ ಸಹಕರಿಸಬೇಕು ಎಂದರು.
ಕಾರ್ಯಕ್ರಮಗಳ ವೀಕ್ಷಣೆಗೆ ಆಗಮಿಸಲು ಅನುಕೂಲವಾಗುವಂತೆ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಸೌಲಭ್ಯ ನೀಡಲು ನಿರ್ಧರಿಸಲಾಗಿದೆ. ಸೋಮವಾರ ಇಲ್ಲಿನ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ.ಪಾಲೆಮಾರ್ ಅಧ್ಯಕ್ಷತೆಯಲ್ಲಿ ನಡೆದ ಜನ ಪ್ರತಿನಿಧಿಗಳ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳ ಲಾಯಿತು. ಶಾಲೆಗಳಿಗೆ ರಜಾ ಸೌಲಭ್ಯ ಇಲ್ಲ. ಆದರೆ ಕಾರ್ಯಕ್ರಮ ವೀಕ್ಷಣೆಗೆ ಶಾಲೆಗಳಿಗೆ ಅವಕಾಶ ಮಾಡಿ ಕೊಡ ಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಎನ್.ಎಸ್.ಚನ್ನಪ್ಪ ಗೌಡ ಸಭೆಗೆ ಸ್ಪಷ್ಟಪಡಿಸಿದರು.
ಯುವ ಜನೋತ್ಸವದ ವಿಷಯ ಗ್ರಾಮಾಂತರ ಪ್ರದೇಶ ಗಳಿಗೆ ತಲುಪಲು ಗ್ರಾ.ಪಂ. ಮಟ್ಟದಲ್ಲಿ ಪ್ರಚಾರ ಹಮ್ಮಿ ಕೊಳ್ಳಲಾಗುವುದು. ಅದಕ್ಕೆ ಬೇಕಾಗುವ ಬೆಂಬಲವನ್ನು ಉತ್ಸವ ಸಮಿತಿ ಗ್ರಾಮ ಪಂಚಾಯತ್ಗಳಿಗೆ ನೀಡಲಿದೆ ಎಂದು ಜಿಲ್ಲಾಧಿಕಾರಿ ನುಡಿದರು.
ಜಿಲ್ಲೆಯ ವಿವಿಧ ಕಲಾ ತಂಡಗಳು, ಪ್ರಶಸ್ತಿ ವಿಜೇತ ಯುವ ಸಂಘಟನೆಗಳು ಮತ್ತು ಯುವಶಕ್ತಿಯನ್ನು ಯುವ ಜನೋತ್ಸವದ ಯಶಸ್ವಿಗೆ ಬಳಸಿಕೊಳ್ಳಲು ಸಭೆಯಲ್ಲಿ ನಿರ್ಧರಿಸಲಾಯಿತು.ಸಭೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಮಂತ್ರಿ ಕೃಷ್ಣ ಜೆ.ಪಾಲೆಮಾರ್ ಅವರು, ನಗರದ ರಾಜಬೀದಿಗಳು, ಕಟ್ಟಡಗಳು, ಪ್ರೇಕ್ಷಣೀಯ ಸ್ಥಳಗಳು ಮತ್ತು ಆರಾಧನಾ ಕ್ಷೇತ್ರಗಳನ್ನು ವಿದ್ಯುದ್ದೀಪಗಳಿಂದ ಅಲಂಕರಿಸು ವಂತೆಯೂ ಸಚಿವರು ವಿನಂತಿಸಿದರು. ಸಭೆಯಲ್ಲಿ ವಿಧಾನಸಭೆಯ ಉಪಾಧ್ಯಕ್ಷ ಎನ್.ಯೋಗೀಶ್ ಭಟ್, ಶಾಸಕರಾದ ಬಿ.ರಮಾನಾಥ ರೈ, ಯು.ಟಿ.ಖಾದರ್, ಜಿ.ಪಂ. ಅಧ್ಯಕ್ಷೆ ಶೈಲಜಾ ಕೆ.ಟಿ.ಭಟ್, ಉಪಾಧ್ಯಕ್ಷೆ ಧನಲಕ್ಷ್ಮೀ ಜನಾರ್ದನ್, ಮೇಯರ್ ಪ್ರವೀಣ್ ಅಂಚನ್, ಮೂಡಾ ಅಧ್ಯಕ್ಷ ಎಸ್.ರಮೇಶ್, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್ ಸಭೆಯಲ್ಲಿ ಉಪಸ್ಥಿತರಿದ್ದರು.

Saturday, December 17, 2011

ಜಿಲ್ಲಾ ಪಂಚಾಯತ್ ವ್ಯಾಪ್ತಿಯಲ್ಲಿ ಘನತ್ಯಾಜ್ಯ ನಿರ್ವಹಣೆ ಜಾಗೃತಿ ಅಭಿಯಾನ

ಮಂಗಳೂರು,ಡಿಸೆಂಬರ್.17: ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ 203 ಗ್ರಾಮ ಪಂಚಾಯತ್ ಗಳಲ್ಲಿ ಗ್ರಾಮೀಣ ಘನತ್ಯಾಜ್ಯ ನಿರ್ವಹಣೆ ಜನಜಾಗೃತಿ ಅಭಿಯಾನವನ್ನು ಮುಂದುವರೆಸುವುದಾಗಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯ್ತಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ|ಕೆ.ಎನ್. ವಿಜಯ ಪ್ರಕಾಶ್ ತಿಳಿಸಿದ್ದಾರೆ.ಅವರು ಇಂದು ಜಿಲ್ಲಾ ಪಂಚಾ ಯತ್, ತಾಲ್ಲೂಕು ಪಂಚಾ ಯತ್ ಮಂಗ ಳೂರು, ಕಂದಾ ವರ,ಗುರು ಪುರ,ಗಂಜಿ ಮಠ, ಪಡು ಪೆರಾರ್ ಮೂಡು ಶೆಡ್ಡೆ ಮತ್ತು ಬಜ್ಪೆ ಗ್ರಾಮ ಪಂಚಾ ಯತ್ ಗಳು ಹಾಗೂ ಸೈಂಟ್ ಆಗ್ನೇಸ್ ಕಾಲೆಜು ಇವರ ಸಹ ಯೋಗ ದೊಂದಿಗೆ ಗುರುಪುರ ಕೈಕಂಬದಲ್ಲಿ ಗ್ರಾಮೀಣ ಘನತ್ಯಾಜ್ಯ ನಿರ್ವಹಣೆ ಜನಜಾಗೃತಿ ಅಭಿಯಾನ- 2011-12 ನ್ನು ಉದ್ಘಾಟಿಸಿ ಮಾತನಾಡಿದರು.
ಸ್ವಚ್ಚ್ಚತ ಪುರಸ್ಕಾರ ಪಡೆದ ರಾಜ್ಯದ ಏಕೈಕ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆ ಎಂದ ಮುಖ್ಯಕಾರ್ಯನಿರ್ವಹಣಾಧಿಕಾರಿಗಳು ಜಿಲ್ಲೆಯ ಜನಪ್ರತಿನಿಧಿಗಳು ಹೆಚ್ಚಿನ ಮುತುವರ್ಜಿ ವಹಿಸಿ ಸ್ವಚ್ಚತಾ ಆಂದೋಲನ ಯಶಸ್ವಿಗೆ ಕಾರಣರಾಗಿದ್ದಾರೆ ಎಂದರು. ದಕ್ಷಿಣ ಕನ್ನಡ ಜಿಲ್ಲೆಯ 5 ಗ್ರಾಮ ಪಂಚಾಯತ್ ಗಳಲ್ಲಿ ಎರೆ ಗೊಬ್ಬರ ತಯಾರಿಕೆಗೆ ತೊಡಗಿದ್ದು ಲೈಲಾ ಗ್ರಾಮ ಪಂಚಾಯತ್ ಎರೆಗೊಬ್ಬರ ತಯಾರಿಸಿ ಮಾರಾಟ ಮಾಡುತ್ತಿದೆ,ಮಲೆನಾಡು ಅಭಿವೃದ್ಧಿ ಮಂಡಲಿಯ ಸಹಯೋಗದೊಂದಿಗೆ ಉಜಿರೆ ಗ್ರಾಮ ಪಂಚಾಯತ್ ನಲ್ಲಿ ರೂ.70 ಲಕ್ಷದಲ್ಲಿ ದ್ರವತ್ಯಾಜ್ಯ ವಿಲೆವಾರಿ ಘಟಕ ಸ್ಥಾಪಿಸಲು ಶಂಖುಸ್ಥಾಪನೆ ಆಗಬೇಕಿದೆ, ಕಡಬ ಗ್ರಾಮ ಪಂಚಾಯತ್ನಲ್ಲಿ ಈಗಾಗಲೆ ಘಟಕವನ್ನು ರೂ.24ಲಕ್ಷ ವೆಚ್ಚದಲ್ಲಿ ಸ್ಥಾಪಿಸಿರುವುದಾಗಿ ಅವರು ತಿಳಿಸಿದರು.
ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತಿ ಗಳಿಗೆ ಘನ ತ್ಯಾಜ್ಯ ನಿರ್ವಹಣೆ ಕುರಿತಂತೆ 25 ಮಾರ್ಗ ಸೂಚಿಗಳನ್ನು ನೀಡ ಲಾಗಿದ್ದು ಅದರಂತೆ ಅವು ಕಾರ್ಯಾ ಚರಿಸುತ್ತಿವೆ ಎಂದು ತಿಳಿಸಿದರು. ಮಂಗಳೂರು ಮಹಾ ನಗರ ಪಾಲಿಕೆ ಆಯುಕ್ತರಾಗಿದ್ದ ಅವಧಿಯಲ್ಲಿ ನಗರ ಸ್ವಚ್ಚತೆ ಅಭಿಯಾನಕ್ಕೆ ಸೈಂಟ್ ಆಗ್ನೇಸ್ ಕಾಲೆಜು ನೀಡಿದ ಸಹಕಾರವನ್ನು ನೆನೆದ ವಿಜಯ್ ಪ್ರಕಾಶ್ ಈಗಲೂ ಕಾಲೇಜು ಗ್ರಾಮಿಣ ಪ್ರದೇಶಗಳಲ್ಲೂ ಜನರಲ್ಲಿ ಜಾಗೃತಿ ಮೂಡಿಸುವಲ್ಲಿ ವಿಷಿಷ್ಟವಾದ ಹೆಜ್ಜೆಯನ್ನು ಇಟ್ಟಿರುವುದು ಪ್ರಶಂಸಾರ್ಹವಾದುದೆಂದರು.
ಜಿಲ್ಲಾ ಪಂಚಾತ್ ನ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷರಾದ ಜನಾರ್ಧನಗೌಡ, ಸದಸ್ಯರಾದ ಶ್ರೀಮತಿ ಯಶ್ವಂತಿ ಆಳ್ವ, ಸೈಂಟ್ ಆಗ್ನೇಸ್ ಕಾಲೇಜಿನ ಉಪ ಪ್ರಾಂಶುಪಾಲರಾದ ಸಿಸ್ಟರ್ ಸುಪ್ರಿಯ ಅವರು ಈ ಸಂದರ್ಭದಲ್ಲಿ ಮಾತನಾಡಿದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯತಿಯ ಸದಸ್ಯರಾದ ರಿತೇಶ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ವಿಜಯಲಕ್ಷಮಿ , ಗ್ರಾಮ ಪಂಚಾಯ್ತಿಗಳ ಅಧ್ಯಕ್ಷರು ಉಪಾಧ್ಯಕ್ಷರುಗಳು ಭಾಗವಹಿಸಿದ್ದರು.
ಜಿಲ್ಲಾ ಪಂಚಾಯಿತಿಯ ಮುಖ್ಯಯೋಜನಾಧಿಕಾರಿ ಎಮ್. ಮೊಹ್ಮದ್ ನಜಿರ್ ಸ್ವಾಗತಿಸಿದರೆ ತಾಲ್ಲುಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ಪೂಜಾರಿ ವಂದಿಸಿದರು. ಶ್ರೀಮತಿ ಮಂಜುಳ ಕಾರ್ಯಕ್ರಮ ನಿರ್ವಹಿಸಿದರು.ಸೈಂಟ್ ಆಗ್ನೇಸ್ ಕಾಲೇಜಿನ ವಿದ್ಯಾರ್ಥಿನಿಯರಿದ ಕಸ ವಿಲೆವಾರಿ ಕುರಿತ ರೂಪಕವನ್ನು ಪ್ರಸ್ತುತಪಡಿಸಲಾಯಿತು.

Thursday, December 15, 2011

ಯುವಜನೋತ್ಸವ: ಕಚೇರಿ ಉದ್ಘಾಟನೆ

ಮಂಗಳೂರು,ಡಿಸೆಂಬರ್.15:ಮಂಗಳಾ ಕ್ರೀಡಾಂಗಣದ ಒಳಾಂಗಣ ಕ್ರೀಡಾಂಗಣದಲ್ಲಿ 17ನೇ ರಾಷ್ಟ್ರೀಯ ಯುವಜನೋತ್ಸವ ಕಚೇರಿ (ಕ್ಯಾಂಪ್ ಆಫೀಸ್)ಯನ್ನು ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ಎನ್. ಎಸ್. ಚನ್ನಪ್ಪಗೌಡ ಅವರು ಉದ್ಘಾಟಿಸಿದರು.
ಯುವ ಜನೋ ತ್ಸವಕ್ಕೆ ಸಂಬಂ ಧಿಸಿದ ಎಲ್ಲ ಚಟು ವಟಿಕೆ ಗಳು ಇಲ್ಲಿ ನಡೆ ಯಲಿದ್ದು, ಮಂಗಳಾ ಸ್ಟೇಡಿ ಯಂನ ಒಳಾಂ ಗಣ ದಲ್ಲೂ ಕಂಟ್ರೋಲ್ ರೂಂ ನ್ನು ಸ್ಥಾಪಿ ಸಲಾಗಿದೆ. ಈ ಕಚೇರಿ ಯಲ್ಲೇ ಇನ್ನು ಯುವ ಜನೋ ತ್ಸವಕ್ಕೆ ಸಂಬಂ ಧಿಸಿದ ಸಭೆ ಗಳು, ಕ್ರಿಯಾ ಯೋಜನೆ ಗಳು ನಡೆ ಯಲಿವೆ. ಸಾರ್ವ ಜನಿಕರು ಇಲ್ಲಿಂದ ಅಗತ್ಯ ಮಾಹಿತಿಗಳನ್ನು ಸಂಗ್ರಹಿಸಬಹುದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಸಿಇಒ ಡಾ ಕೆ ಎನ್ ವಿಜಯಪ್ರಕಾಶ್, ಪಾಲಿಕೆ ಆಯುಕ್ತ ಡಾ. ಹರೀಶ್ ಕುಮಾರ್, ಸಹಾಯಕ ಆಯುಕ್ತರಾದ ಡಾ.ವೆಂಕಟೇಶ್, ಯುವಜನ ಸೇವೆ ಮತ್ತು ಕ್ರೀಡಾ ಇಲಾಖೆಯ ಅಧಿಕಾರಿ ಪಾಶ್ವನಾಥ್ ಉಪಸ್ಥಿತರಿದ್ದರು.

ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಆಗಿಲ್ಲ ;ಡಾ.ವಿಜಯಪ್ರಕಾಶ್

ಮಂಗಳೂರು,ಡಿಸೆಂಬರ್.15:ದಕ್ಷಿಣಕನ್ನಡ ಜಿಲ್ಲೆಯಲ್ಲಿ ಜಿಲ್ಲಾ ಪಂಚಾಯತ್ ಆಧೀನದ ವಿವಿಧ ಇಲಾಖೆಗಳಲ್ಲಿ ಪ್ರಸ್ತುತ ವರ್ಷ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಿಲ್ಲ.ಇನ್ನುಳಿದಿರುವ ಕಾಮಗಾರಿಗಳನ್ನು 15 ದಿನಗಳೊಳಗಾಗಿ ಪೂರ್ಣಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕೆಂದು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ತಿಳಿಸಿದ್ದಾರೆ.ಅವರು ಇಂದು ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸರ್ವ ಶಿಕ್ಷಣ ಅಭಿಯಾನದಡಿ ಜಿಲ್ಲೆಯಲ್ಲಿ 6-14 ವಯೋಮಾನದ 5054 ಅಂಗವಿಕಲ ಮಕ್ಕಳನ್ನು ಗುರುತಿಸಲಾಗಿದ್ದು,ಎಲ್ಲಾ ಮಕ್ಕಳಿಗೂ ಶಾಲಾ ಶಿಕ್ಷಣದ ವ್ಯವಸ್ಥೆ ಕಲ್ಪಿಸಲಾಗಿದು,್ದ ಇವರಲ್ಲಿ 605 ಗೃಹಾಧಾರಿತ ಶಿಕ್ಷಣ ಪಡೆಯುತ್ತಿರುವ ಮಕ್ಕಳು ಸೇರಿದ್ದಾರೆ.
ಗ್ರಾಮೀಣ ಮೂಲಭೂತ ಸೌಕರ್ಯ ಅಭಿವೃದ್ಧಿ ನಿಧಿಯಿಂದ 101 ಅಂಗನವಾಡಿ ಕಟ್ಟಡಗಳ ಕಾಮಗಾರಿ ಕೈಗೊಂಡಿದ್ದು ಇದರಲ್ಲಿ 28 ಕಟ್ಟಡಗಳ ಕಾಮಗಾರಿ ಪೂರ್ಣಗೊಂಡಿದ್ದರೆ 61 ಕಟ್ಟಡಗಳ ಕಾಮಗಾರಿ ಆರಂಭಿಸಲಾಗಿದೆ. ಇನ್ನು 12 ಕಟ್ಟಡಗಳ ಕಾಮಗಾರಿ ಇನ್ನಷ್ಟೆ ಆರಂಭಿಸಬೇಕಿದೆ ಎಂಬ ಮಾಹಿತಿಯನ್ನು ಉಪನಿರ್ದೇಶಕರು,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅವರು ಸಭೆಗೆ ತಿಳಿಸಿದರು.
ಜಿಲ್ಲೆಯಲ್ಲಿ ಕುಡಿಯುವ ನೀರು ಸರಬರಾಜು ಕಾಮಗಾರಿಗಳನ್ನು ಆದ್ಯತೆ ಮೇಲೆ ಪೂರ್ಣಗೊಳಿಸುವಂತೆ ಹಾಗೂ ಯುವ ಗ್ರಾಮದಲ್ಲೂ ಕುಡಿಯುವ ನೀರನ ಸಮಸ್ಯೆ ತಲೆದೋರದಂತೆ ಸೂಕ್ತ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ನವೆಂಬರ್ ಅಂತ್ಯದ ವರೆಗೆ 19 ಕೊಳವೆ ಬಾವಿಗಳನ್ನು ಕೊರೆಯಲಾಗಿದೆ. 92 ನಳ್ಳಿನೀರು ಸರಬರಾಜು ಯೋಜನೆಗಳನ್ನು ಪೂರ್ಣಗೊಳಿಸಲಾಗಿದೆ.ಇದೇ ಅವಧಿಯಲ್ಲಿ 22 ಕಿರು ನೀರು ಸರಬರಾಜು ಯೋಜನೆಗಳುಪೂರ್ಣಗೊಂಡಿವೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ನೂತನ ಐಜಿಪಿ ಪ್ರತಾಪ್ ರೆಡ್ಡಿ ಅಧಿಕಾರ ಸ್ವೀಕಾರ;ಪಾರದರ್ಶಕ ಮತ್ತು ದಕ್ಷ ಆಡಳಿತಕ್ಕೆ ಒತ್ತು

ಮಂಗಳೂರು,ಡಿಸೆಂಬರ್.16:ಪಶ್ಚಿಮ ವಲಯದ ನೂತನ ಪೋಲಿಸ್ ಮಹಾ ನಿರೀಕ್ಷಕರಾಗಿ ಪ್ರತಾಪ್ ರೆಡ್ಡಿ ಅವರು ಬುಧವಾರ ನಿರ್ಗಮನ ಐಜಿಪಿ ಅಲೋಕ್ ಮೋಹನ್ ಅವರಿಂದ ಮಂಗಳೂರಿನ ಕಚೇರಿಯಲ್ಲಿ ಅಧಿಕಾರ ಸ್ವೀಕರಿದರು. ಪೋಲಿಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ ಲಾಬೂ ರಾಮ್ ಅವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರಾವಳಿ ಸೂಕ್ಷ್ಮ ಪ್ರದೇಶ. ಜನತೆ ಮತ್ತು ಇಲಾಖೆಯ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಮೂಲಕ ಪಾರದರ್ಶಕ ಮತ್ತು ದಕ್ಷ ಆಡಳಿತಕ್ಕೆ ಒತ್ತು ನೀಡುವುದಕ್ಕೆ ಮೊದಲ ಆದ್ಯತೆ ಎಂದರು.ಕರಾವಳಿಯ ಈ ಭಾಗ ನನಗೆ ಹೊಸತ ಲ್ಲ ವಾದರೂ ಅನೇಕ ಬದಲಾ ವಣೆಗ ಳನ್ನು ಕಳೆದ 15 ವರ್ಷ ಗಳಿಂದ ಕಂಡಿದೆ. 1994ರಲ್ಲಿ ಕಾರ್ಕಳ ದಲ್ಲಿ ಎಎಸ್ಪಿ ಯಾಗಿ ಕರ್ತವ್ಯ ನಿರ್ವ ಹಿಸಿದ್ದೇನೆ. ಇದೀಗ ಎರಡನೆಯ ಬಾರಿಗೆ ಕರಾವಳಿಗೆ ಆಗಮಿ ಸುತ್ತಿದ್ದೇನೆ. ಇತರ ಪ್ರದೇಶ ಗಳಿಗಿಂತ ಕರಾವಳಿ ತುಸು ಭಿನ್ನ ಪ್ರದೇಶ. ಕೋಮುಗಲಭೆ, ನಕ್ಸಲ್ ಪೀಡೆ, ಭೂಗತ ಚಟುವ ಟಿಕೆ ಗಳಿಗೆ ಇಲ್ಲಿ ತಡೆ ಒಡ್ಡ ಬೇಕಾ ಗಿದೆ.ಎದುರಾಗುವ ಸವಾಲು ಗಳನ್ನು ದಿಟ್ಟವಾಗಿ ಎದುರಿಸ ಲಾಗುವುದು. ಅಲ್ಲದೆ ಶಾಂತಿ ಕಾಯ್ದು ಕೊಳ್ಳವಲ್ಲಿ ಯಾವ ರೀತಿ ಕಾರ್ಯೋ ನ್ಮುಖವಾ ಗಬೇಕೆಂಬ ನಿಟ್ಟಿನಲ್ಲಿ ಪೊಲೀಸ್ ಇಲಾಖೆಗಳಿಗೆ ನಿರ್ದೇಶನ ನೀಡಲಾಗುವುದು. ಸಾರ್ವಜನಿಕರ ಸಹಕಾರ, ಸ್ಥಳೀಯ ಪೊಲೀಸರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೊಂದಾಣಿಕೆಯಿಂದ ಕೆಲಸ ಮಾಡುವತ್ತ ಒತ್ತು ನೀಡಲಾಗುವುದು ಎಂದರು.

ಅಂಕಿ ಅಂಶಗಳ ಮೂಲಕ ಪೊಲೀಸ್ ಇಲಾಖೆಯ ಸಾಧನೆ ಯನ್ನು ಅಳೆಯ ಲಾಗದು. ವಿಭಿನ್ನ ರೀತಿ ಯಲ್ಲಿ ಕಳ್ಳತನ, ದರೋಡೆ ಯಂತಹ ಪ್ರಕರ ಣಗಳು ನಡೆ ಯುತ್ತವೆ. ಇದನ್ನು ಪತ್ತೆ ಹಚ್ಚುವಲ್ಲಿ ಕೂಡ ಪೊಲೀಸರು ಸಜ್ಜಾ ಗಿರಬೇಕಾ ಗುತ್ತದೆ. ಅತ್ಯಂತ ಜವಾ ಬ್ದಾರಿಯು ತವಾಗಿ ಕರ್ತವ್ಯ ನಿರ್ವಹಿ ಸುವುದಲ್ಲದೆ ಆಧುನಿಕ ಮಾಹಿತಿ ತಂತ್ರಜ್ಞಾನವನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಳ್ಳಲಾಗುವುದು ಎಂದು ಪ್ರತಾಪ್ ರೆಡ್ಡಿ ಹೇಳಿದರು.
ಐಜಿಪಿ ಪ್ರತಾಪ್ ರೆಡ್ಡಿ ಅವರ ಸ್ಥೂಲ ಪರಿಚಯ:ಮೂಲತಃ ಆಂಧ್ರ ಪ್ರದೇಶದ ಗುಂಟೂರಿನವರಾದ ಪ್ರತಾಪ್ ರೆಡ್ಡಿಯವರು 1991ರ ಬ್ಯಾಚಿನ ಐಪಿಎಸ್ ಅಧಿಕಾರಿ. ಅರಸೀಕೆರೆಯಲ್ಲಿ ಎಎಸ್ಪಿಯಾಗಿ ವೃತ್ತಿ ಜೀವನ ಆರಂಭಿಸಿದ ಇವರು ಬಳಿಕ ಕಾರ್ಕಳದಲ್ಲಿ ಎಎಸ್ಪಿಯಾಗಿದ್ದರು. ಬಿಜಾಪುರ, ಗುಲ್ಬರ್ಗದಲ್ಲಿ ಎಸ್ಪಿಯಾಗಿ ಸೇವೆ ಸಲ್ಲಿಕೆ. ಸಿಬಿಐ ಅಧಿಕಾರಿಯಾಗಿಯೂ ಆಗಿಯೂ ಕರ್ತವ್ಯ ನಿಭಾಯಿಸಿದ್ದಾರೆ.
ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವಾ ದಳದಲ್ಲಿ ಎಡಿಜಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಅಲ್ಲದೆ ನ್ಯಾಶನಲ್ ಅಸೋಸಿಯೇಶನ್ ಆಫ್ ಸಾಫ್ಟ್ ವೆರ್ ಅಂಡ್ ಸರ್ವಿಸಸ್ ಕಂಪೆನೀಸ್ ಇದರ ಹಿರಿಯ ನಿರ್ದೇಶಕರಾಗಿ ಫೆಬ್ರವರಿ 2009ರಿಂದ ಆಗಸ್ಟ್ 2011ರವರೆಗೆ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.ಪೊಲೀಸ್ ಇಲಾಖೆಯಲ್ಲಿನ ದಕ್ಷ ಸೇವೆಗೆ ಮುಖ್ಯಮಂತ್ರಿ, ರಾಷ್ಟ್ರಪತಿಯವರ ಪದಕಗಳ ಗೌರವವೂ ಇವರಿಗೆ ದೊರೆತಿದೆ.

Wednesday, December 14, 2011

ಭ್ರೂಣ ಹತ್ಯೆಗೆ ಜನಜಾಗೃತಿಯೇ ಪರಿಹಾರ :ಜಿಲ್ಲಾಧಿಕಾರಿ

ಮಂಗಳೂರು, ಡಿಸೆಂಬರ್.14: ಜನಜಾಗೃತಿಯಿಂದ ಮಾತ್ರ ಭ್ರೂಣಹತ್ಯೆ ತಡೆ ಸಾಧ್ಯ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ಹೇಳಿದರು.ಅವರಿಂದು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದ ವಾರ್ತಾ ಇಲಾಖೆ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಸವ ಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ 1994 ಕಾರ್ಯಾಗಾರ ಉದ್ಘಾಟಿಸಿ ಮಾತನಾಡುತ್ತಿದ್ದರು.ಗಂಡು ಮಕ್ಕಳ ಬಗ್ಗೆ ಸಾಮಾ ಜಿಕ ವಾಗಿ ಎಲ್ಲ ರಲ್ಲೂ ಇರುವ ಹೆಚ್ಚು ಪ್ರೀತಿ ಹಾಗೂ ಹೆಣ್ಣು ಮಕ್ಕಳ ಕುರಿ ತಿರುವ ತಾತ್ಸಾರ ನಿವಾ ರಣೆಗೆ ಸರ್ಕಾ ರೇತರ ಸಂಘ ಸಂಸ್ಥೆ ಗಳು ಆರೋಗ್ಯ ಇಲಾಖೆ ಯೊಂದಿಗೆ ಕೈ ಜೋಡಿಸ ಬೇಕೆಂದ ಅವರು, ಲಿಂಗ ತಾರ ತಮ್ಯ ಒಂದು ಸಾಮಾ ಜಿಕ ಪಿಡು ಗೆಂದರು.ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ನಿಷೇಧ ಕಾಯ್ದೆ 1994 ನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದ ಅವರು, ಕಾಯಿದೆಯನ್ನು ಉಲ್ಲಂಘಿಸುವ ಸಂಸ್ಥೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದರು.ಹೆಣ್ಣು ಮಕ್ಕ ಳಿಗಾಗಿ ಸ ರ್ಕಾರ ಭಾಗ್ಯ ಲಕ್ಷ್ಮಿ ಯಂತಹ ಉತ್ತಮ ಯೋಜನೆ ಗಳನ್ನು ಜಾರಿಗೆ ತಂದಿ ದ್ದು ಸಾಮಾ ಜಿಕ ವಾಗಿ ನಮ್ಮಲ್ಲಿ ಮಹಿಳೆ ಯರಿಗೆ ಉತ್ತಮ ಸ್ಥಾನ ಮಾನ ಹಾಗೂ ಭದ್ರತೆ ಯನ್ನು ಒದ ಗಿಸ ಲಾಗಿದೆ ಎಂದರು.
ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ ಸಂಗಮೇಶ್ವರ ಅಧ್ಯಕ್ಷತೆ ವಹಿಸಿದ್ದರು. ಡಿ.ಎಚ್.ಒ ಡಾ. ಓ ಆರ್ ಶ್ರೀರಂಗಪ್ಪ ಅವರು ಪ್ರಾಸ್ತಾವಿಕ ಮಾತುಗಳನ್ನಾಡಿದರು. ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಜ್ಯೋತಿ ಅವರು ಸ್ವಾಗತಿಸಿದರು. ಜಯರಾಮ್ ಪೂಜಾರಿ ಕಾರ್ಯಕ್ರಮ ನಿರ್ವಹಿಸಿದರು.

Tuesday, December 13, 2011

ಕರಾವಳಿ ಭಾಗದಲ್ಲಿ ಅಪರಾಧ ಪ್ರಮಾಣ ಇಳಿಕೆ ; ಅಲೋಕ್ ಮೋಹನ್

ಮಂಗಳೂರು,ಡಿಸೆಂಬರ್.13:ಕರಾವಳಿ ಭಾಗದ ಪ್ರದೇಶಗಳಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಪರಾಧ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಪೋಲಿಸ್ ಅಧಿಕಾರಿ ಮತ್ತು ಸಿಬಂದಿ ವರ್ಗ ಹಾಗೂ ಸಾರ್ವಜನಿಕರ ಸಹಕಾರದಿಂದ ಇದು ಸಾಧ್ಯವಾಗಿದೆ ಎಂದು ಪಶ್ಚಿಮ ವಲಯದ ಪೊಲೀಸ್ ಮಹಾನಿರೀಕ್ಷಕರಾದ ಅಲೋಕ್ ಮೋಹನ್ ಹೇಳಿದರು. 2012ರ ಜನವರಿಯಿಂದ ಡಿಸೆಂಬರ್ ತನಕ ಸಿಂಗಾಪುರ ವಿಶ್ವ ವಿದ್ಯಾನಿಲಯದ ಎಲ್. ಕೆ. ಸ್ಕೂಲ್ ಆಫ್ ಪಾಲಿಸಿ ಮತ್ತು ಹಾರ್ವರ್ಡ್ ವಿಶ್ವ ವಿದ್ಯಾನಿಲಯದ ಸ್ಕೂಲ್ ಆಫ್ ಗವರ್ನೆನ್ಸ್ ನಲ್ಲಿ `ಮಾಸ್ಟರ್ ಇನ್ ಪಬ್ಲಿಕ್ ಮೆನೇಜ್ಮೆಂಟ್' ಕುರಿತ ಅಧ್ಯಯನಕ್ಕಾಗಿ ಸದ್ಯದಲ್ಲೇ ವಿದೇಶಕ್ಕೆ ತೆರಳಲಿರುವ ಅವರು ಸೋಮವಾರ ಮಂಗಳೂರಿನ ತಮ್ಮ ಕಚೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದರು.
ಜನಸ್ನೇಹಿ ಪೋಲಿಸಿಂಗ್ ಗೆ ತನ್ನ ಮೊದಲ ಆದ್ಯತೆ ಯಾಗಿದ್ದು, ಇಲಾಖೆಯ ಅಧಿಕಾರಿ ಮತ್ತು ಸಿಬಂದಿ ವರ್ಗ ಸಾರ್ವಜನಿಕರಿಗಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.ದೈನಂದಿನ ಕರ್ತವ್ಯದಿಂದ ಅನೇಕ ಒತ್ತಡಗಳಿಗೆ ಅವರು ಒಳಗಾಗುತ್ತಿರುನ ಹಿನ್ನೆಲೆಯಲ್ಲಿ ಪೋಲಿಸರ ಕಾರ್ಯ ದಕ್ಷತೆಯನ್ನು ಬಲಪಡಿಸಲು ಯೋಗ, ದೈಹಿಕ ಕಸರತ್ತುಗಳಲ್ಲಿ ತೊಡಗಿಸಲು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು. ವೀದೇಶಗಳಲ್ಲೂ ಪೋಲಿಸರು ಯಾವ ರೀತಿ ಕಾರ್ಯ ನಿರ್ವಹಿಸುತ್ತಾರೆ ಮತ್ತು ಅಲ್ಲಿ ಅಪರಾಧ ಪತ್ತೆ ಕಾರ್ಯದಲ್ಲಿ ಯಾವ ತಂತ್ರಗಳನ್ನು ಅನುಸರಿಸಲಾಗುತ್ತಿದೆ ಈ ಬಗ್ಗೆ ತಿಳಿದುಕೊಳ್ಳಲು ಈ ಉನ್ನತ ಅಧ್ಯಯನ ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟ ಅವರು; ಈ ಅಧ್ಯಯನ ಕರ್ತವ್ಯದ ಒಂದು ಭಾಗವಾಗಿದೆ ಎಂದರು.
ಅಲೋಕ್ ಮೋಹನ್ ಅವರು ಮಾಡಲಿರುವ ಒಂದು ವರ್ಷದ ಉನ್ನತ ಅಧ್ಯಯನ `ಮಾಸ್ಟರ್ ಇನ್ ಪಬ್ಲಿಕ್ ಮೆನೇಜ್ಮೆಂಟ್' ಎರಡು ಸೆಮಿಸ್ಟರ್ ಕೋರ್ಸ್. ಮೊದಲ ಆರು ತಿಂಗಳು ಸೆಮಿಸ್ಟರನ್ನು ಸಿಂಗಾಪುರದಲ್ಲಿ ಮತ್ತು ದ್ವಿತೀಯ ಆರು ತಿಂಗಳು ಸೆಮಿಸ್ಟರನ್ನು ಹಾರ್ವರ್ಡ್ ನಲ್ಲಿ ಮಾಡಲಿದ್ದಾರೆ.
2012ರ ಸಾಲಿನ ಈ ಉನ್ನತ ಅಧ್ಯಯನಕ್ಕಾಗಿ ಭಾರತದ ನಾಲ್ವರು ಹಿರಿಯ ಅಧಿಕಾರಿಗಳು ಆಯ್ಕೆಯಾಗಿದ್ದು, ಇವರಲ್ಲಿ ಮೂವರು ಐಎಎಸ್ ಅಧಿಕಾರಿಗಳಾದರೆ ಅಲೋಕ್ ಮೋಹನ್ ಮಾತ್ರ ಐಪಿಎಸ್ ಅಧಿಕಾರಿಯಾಗಿದ್ದಾರೆ. ಅಲೋಕ್ ಮೋಹನ್ ಕರ್ನಾಟಕದಿಂದ ಆಯ್ಕೆಯಾದ ಏಕೈಕ ಅಧಿಕಾರಿಯಾಗಿದ್ದಾರೆ.

Monday, December 12, 2011

17ನೇ ರಾಷ್ಟ್ರೀಯ ಯುವಜನೋತ್ಸವ: ಕಂಟ್ರೋಲ್ ರೂಂ ಉದ್ಘಾಟನೆ

ಮಂಗಳೂರು,ಡಿಸೆಂಬರ್.12: ಜನವರಿ 12 ರಿಂದ 16 ರ ವರೆಗೆ 17 ನೇ ರಾಷ್ಟ್ರೀಯ ಯುವಜನೋತ್ಸವ ಮಂಗಳೂರಿನಲ್ಲಿ ನಡೆಯಲಿದ್ದು ಉತ್ಸವದ ಯಶಸ್ಸಿಗೆ ಸಿದ್ದತೆಗಳು ಭರದಿಂದ ಸಾಗಿವೆ.

ರಾ ಷ್ಟ್ರೀಯ ಯುವ ಜನೋ ತ್ಸವಕ್ಕೆ ಪೂರಕ ವಾಗಿ ಆನ್ ಲೈನ್ ರಿಜಿ ಸ್ಟ್ರೇಷನ್ ಗೆ ಕಂ ಟ್ರೋಲ್ ರೂಂ ನ್ನು ಸ್ಥಾಪಿ ಸಲಾ ಗಿದ್ದು, ಇಂದು ದಕ್ಷಿಣ ಕನ್ನಡ ಜಿಲ್ಲಾ ಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ ಉದ್ಘಾ ಟಿಸಿ ದರು.ಈ ಸಂ ಬಂಧ ಹೆಚ್ಚಿನ ಮಾಹಿ ತಿಗೆ ವೆಬ್ ಸೈಟ್ www.nyf 2012.in ಸಂಪ ರ್ಕಿಸ ಬಹುದು. ಹೆಚ್ಚಿನ ಮಾಹಿ ತಿಗೆ 0824 6555001/003/006 ಯಾ ವುದೇ ಮಾಹಿ ತಿಗೆ ಅಥವಾ ರಿಜಿ ಸ್ಟ್ರೇಷನ್, ಮಾಹಿ ತಿಗೆ ಹೆಲ್ಪ್ ಡೆಸ್ಕ್ ನ್ನು ಬೆಳಗ್ಗೆ 10 ರಿಂದ 7 ಗಂಟೆಗೆ
ಜಿಲ್ಲಾ ಧಿಕಾರಿ ಕಚೇರಿ ಕಟ್ಟ ಡದ ಎರ ಡನೇ ಮಹ ಡಿಯ ಲ್ಲಿರುವ ಜಿಲ್ಲಾ ನಗರಾ ಭಿವೃದ್ಧಿ ಕೋಶದ ಪಕ್ಕ ದಲ್ಲಿ ರಾಷ್ಟ್ರೀಯ ಯುವ ಜನೋ ತ್ಸವ ಕಚೇರಿ ಎನ್ ವೈ ಎಫ್ -2012 ಕಂಟ್ರೋಲ್ ರೂಂ ತೆರೆಯಲಾಗಿದ್ದು ಮಾಹಿತಿ ಪಡೆಯಬಹುದಾಗಿದೆ.

ನಂದಿನಿಯಿಂದ ಜಿಲ್ಲಾ ಮಟ್ಟದ ಚಿತ್ರ ಮತ್ತು ಭಾವಗೀತೆ ಸ್ಪರ್ಧೆ

ಮಂಗಳೂರು,ಡಿಸೆಂಬರ್.11: ಹೈನುಗಾರಿಕೆ ಹಾಗೂ ಹಾಲಿನ ಉಪಯೋಗದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲು ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ ಹೇಳಿದರು.ಭಾನು ವಾರ ನಗರದ ಕೊಡಿ ಯಾಲ್ ಬೈಲ್ ಶಾರದಾ ವಿದ್ಯಾ ಲಯ ದಲ್ಲಿ ಜಿಲ್ಲಾ ಮಟ್ಟದ ಚಿತ್ರ ರಚನೆ ಸ್ಪರ್ಧೆ ಮತ್ತು ಭಾವ ಗೀತೆ ಸ್ಪ ರ್ಧೆಯ ಸಮಾ ರೋಪ ಸಮಾ ರಂಭದ ಅಧ್ಯ ಕ್ಷತೆ ವಹಿಸಿ ಮಾತ ನಾಡು ತ್ತಿದ್ದರು. ಚಿತ್ರ ರಚನೆ ಯಲ್ಲಿ 127 ಮತ್ತು ಭಾವ ಗೀತೆ ಯಲ್ಲಿ 60 ಮಕ್ಕಳು ಎಲ್ಲ ತಾಲೂಕು ಗಳಿಂದ ವಿವಿಧ ಶಾಲೆ ಗಳ ಮಕ್ಕಳು ಭಾಗ ವಹಿ ಸಿದ್ದರು.
ಇಂದಿನ ಸ್ಪರ್ಧಾ ಜಗತ್ತಿನಲ್ಲಿ ಪ್ರತಿಭಾನೇಷ್ವಣೆಗಳು ಹೆಚ್ಚುತ್ತಿದ್ದು, ನಂದಿನಿಯವರು ವಿದ್ಯಾರ್ಥಿಗಳಲ್ಲಿ ಉತ್ತಮ ಮೌಲ್ಯಗಳನ್ನು ಬಿತ್ತುತ್ತಿದ್ದಾರೆ. ಹೈನುಗಾರಿಕೆ ಮತ್ತು ಗ್ರಾಮೀಣ ಬದುಕಿನ ಬಗ್ಗೆ ವಿದ್ಯಾರ್ಥಿಗಳಲ್ಲಿ ತಿಳುವಳಿಕೆ ಮೂಡಿಸುವ ಪ್ರಯತ್ನವಾಗುತ್ತಿದೆ ಎಂದರು. ನಮ್ಮ ಗ್ರಾಮಾಂತರ ಪ್ರದೇಶಗಳಲ್ಲಿ ಇಂದು ಹೈನುಗಾರಿಕೆ ಯಿಂದ ಅಭಿವೃದ್ಧಿ ಹೊಂದಿದ ಮಾದರಿಗಳನ್ನು ವಿದ್ಯಾರ್ಥಿಗಳಿಗೆ ನೀಡಿದರು.
ನಂದಿನಿಯ ವ್ಯವಸ್ಥಾಪಕ ನಿರ್ದೇಶಕರಾದ ರವಿಕುಮಾರ್ ಕಾಕಡೆಯವರು ವಿದ್ಯಾರ್ಥಿಗಳು ಮತ್ತು ಹೆತ್ತವರ ಪ್ರೋತ್ಸಾಹಕ್ಕೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮ ಸಂಘಟಿಸಲು ಸಹಕಾರ ನೀಡಿದ ವಿದ್ಯಾಂಗ ಉಪನಿರ್ದೇಶಕರಾದ ಮೊಸೆಸ್ ಜಯಶೇಖರ್ ಅವರು ಮಾತನಾಡಿದರು. ವಿದ್ಯಾಂಗ ಇಲಾಖೆಯ ನರಸಿಂಹ ಭಟ್ ಅವರು ಉಪಸ್ಥಿತರಿದ್ದರು.
ಮಧ್ಯಾಹ್ನ ಒಂದರಿಂದ ಎರಡು ಗಂಟೆಯವರೆಗೆ ಕುದ್ರೋಳಿ ಗಣೇಶ್ ಅವರಿಂದ ಜಾದೂ ಪ್ರದರ್ಶನ ಏರ್ಪಡಿಸಲಾಗಿತ್ತು. ಒಂದರಿಂದ ನಾಲ್ಕನೇ ತರಗತಿಯವರೆಗೆ ಸಂಗೀತ ಮತ್ತು ಚಿತ್ರ ರಚನೆ ಸ್ಪರ್ಧೆ ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಲಾಗಿತ್ತು. 5ರಿಂದ ಏಳನೇ ತರಗತಿಯವರೆಗೆ 8ರಿಂದ 10ನೇ ತರಗತಿಯ ಮಕ್ಕಳಿಗೆ ಪ್ರತ್ಯೇಕ ಮತ್ತು ತಾಲೂಕು ಮತ್ತು ಜಿಲ್ಲಾ ಮಟ್ಟದ ಪ್ರತ್ಯೇಕ ನಗದು ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.

Sunday, December 11, 2011

ಗಂಜಿಮಠ-ಮುಚ್ಚೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ

ಮಂಗಳೂರು,ಡಿಸೆಂಬರ್.11:ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್,ಪಂಚಾಯತ್ ರಾಜ್ ಇಂಜಿನೀಯರಿಂಗ್ ವಿಭಾಗ,ಮಂಗಳೂರು ತಾಲೂಕು ಪಂಚಾಯತ್ ಮತ್ತು ಗಂಜಿಮಠ ಪಂಚಾಯತ್ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿವಿಧ ಅಭೀವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವರಿ ಸಚಿವರಾರ ಕೃಷ್ಣ ಜೆ ಪಾಲೆಮಾರ್ ಅವರು ಶನಿವಾರ ಚಾಲನೆ ನೀಡಿದರು. ಮುಖ್ಯ ಮಂತ್ರಿ ಗಳ ಸಡಕ್ ಯೋಜನೆ ಯಲ್ಲಿ 6.37 ಕಿ.ಮೀ ಉದ್ದದ 2.05 ಕೋಟಿ ರೂಪಾಯಿ ಗಳ ವೆಚ್ಚದಲ್ಲಿ ನಿರ್ಮಿ ಸಲಾ ಗುವ ನಾರ್ಲ ಪದವು ಮಳಲಿ ಕಾಜಿಲ ರಸ್ತೆಯ ಕಾಮ ಗಾರಿಗೆ ಶಿಲಾನ್ಯಾಸ,ಸುವರ್ಣ ಗ್ರಾಮ ಸಡಕ್ ಯೋಜನೆ ಯಡಿ ಯಲ್ಲಿ 1.25 ಕೋ. ವೆಚ್ಚದ 19 ರಸ್ತೆ,5 ಚ ರಂಡಿ,2 ಸಮು ದಾಯ ಭವನ,3 ಅಂಗನ ವಾಡಿ ಸೇರಿ ದಂತೆ 32 ವಿವಿಧ ಕಾಮ ಗಾರಿ ಗಳನ್ನು ಸಚಿವರು ಉದ್ಘಾ ಟಿಸಿ ದರು.ಇದೇ ಸಂದ ರ್ಭದಲ್ಲಿ ಮುಚ್ಚೂರು ಪ್ರೌಢ ಶಾಲಾ ಕಟ್ಟಡಕ್ಕೆ ಶಂಕು ಸ್ಥಾಪನೆ ನರ ವೇರಿ ಸಿದರು.ಗಂಜಿ ಮಠ ಪಂಚಾಯತ್ ವ್ಯಾಪ್ತಿಯ ಕಾರ್ಯಕ್ರಮಗಲಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶೈಲಜಾ ಭಟ್,ತಾಲೂಕ್ ಪಂಚಾಯತ್ ಅಧ್ಯಕ್ಷೆ ಭವ್ಯ ಗಂಗಾಧರ,ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಜನಾರ್ಧನ ಗೌಡ,ತಾಲೂಕ್ ಪಂಚಾಯತ್ ಉಪಾಧ್ಯಕ್ಷೆ ವಿಜಯ ಲಕ್ಷ್ಮೀ,ಜಿಲ್ಲಾ ಪಂಚಾಯತ್ ಸದಸ್ಯೆ ಯಶವಂತಿ ಆಳ್ವಾ,ಗ್ರಾಮ ಪಂಚಾಯ್ ಅಧ್ಯಕ್ಷೆ ರೇಣುಕಾ, ಉಪಾಧ್ಯಕ್ಷ ಜಯಾನಂದ ನಾಯ್ಕ್,ಜಿಲ್ಲಾ ಪಂಚಾಯತ್ ಅಧಿಕಾರಿಗಳು, ಉಪಸ್ಥಿತರಿದ್ದರು.ಮುಚ್ಚೂರು ಪ್ರೌಢ ಶಾಲಾ ಕಟ್ಟಡಕ್ಕೆ ಶಂಕು ಸ್ಥಾಪನ ಕಾರ್ಯಕ್ರಮದಲ್ಲಿ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ಜನಾರ್ಧನ ಗೌಡ,ಗ್ರಾಮ ಪಂಚಾಯತ್ ಉಪಾಧ್ಯಕ್ಷ ಪ್ರಕಾಶ್ ಹೆಗ್ಡೆ,ಸಾರ್ವಜನಿಕ ಶಿಕ್ಷಣಾ ಇಲಾಕೆಯ ಉಪ ನಿರ್ದೇಶಕ ಮೋಸೆಸ್ ಜಯಶೇಖರ್,ಜಿಲ್ಲಾ ಪಂಚಾಯತ್ ಸದಸ್ಯೆ ಯಶವಂತಿ ಆಳ್ವಾ ಮತ್ತಿತರ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.