Thursday, December 29, 2011

ಜನಸಂಖ್ಯೆಯ ಆಧಾರದ ಮೇಲೆ ಗ್ರಾಂ. ಪಂ.ಗಳಿಗೆ ಅನುದಾನ:ಸಚಿವ ಜಗದೀಶ ಶೆಟ್ಟರ್

ಮಂಗಳೂರು,ಡಿಸೆಂಬರ್.29:ರಾಜ್ಯದಲ್ಲಿರುವ ಗ್ರಾಮ ಪಂಚಾಯತ್ ಗಳಿಗೆ ಇನ್ನು ಮುಂದೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಅನುಕೂಲವಾಗುವಂತೆ ಅವುಗಳ ಜನಸಂಖ್ಯೆಯ ಆಧಾರದಲ್ಲಿ 9ಲಕ್ಷ, 12 ಲಕ್ಷ, ಮತ್ತು 15 ಲಕ್ಷ ರೂ.ಗಳ ವರೆಗೂ ಅನುದಾನವನ್ನು ನೀಡಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆಯೆಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಜಗದೀಶ ಶೆಟ್ಟರ್ ರವರು ತಿಳಿಸಿದ್ದಾರೆ.ಅವರು ಇಂದು ಮಂಗ ಳೂರು ತಾಲೂಕು ಮೆನ್ನ ಬೆಟ್ಟು ಗ್ರಾಮ ಪಂಚಾ ಯತ್ ಗೆ ಭೇಟಿ ನೀಡಿ ಪಂಚಾ ಯತ್ ವತಿ ಯಿಂದ ಕೈ ಗೊಂಡಿ ರುವ ಘನ ತ್ಯಾಜ್ಯ ವಿಲೇ ವಾರಿ ಘಟಕ ವನ್ನು ಪರಿ ಶೀಲಿಸಿ ಮಾತ ನಾಡಿ ದರು.ರಾಜ್ಯದ 900 ಕ್ಕೂ ಹೆಚ್ಚು ಗ್ರಾಮ ಪಂಚಾ ಯತ್ ಗಳಿಗೆ ನಿರ್ಮಲ ಗ್ರಾಮ ಪುರ ಸ್ಕಾರ ಬಂದಿದ್ದು, ಇದ ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 203 ಗ್ರಾಮ ಪಂಚಾ ಯತ್ ಗಳೂ ನಿರ್ಮಲ ಗ್ರಾಮ ಪುರಸ್ಕಾರ ಪಡೆ ದಿರು ವುದು ಶ್ಲಾಘ ನೀಯ ಎಂದ ಅವರು ದಕ್ಷಿಣ ಕನ್ನಡ ಜಿಲ್ಲೆ ಅಭಿವೃದ್ಧಿ ಕಾರ್ಯ ಗಳು ರಾಜ್ಯದ ಇತರೇ ಜಿಲ್ಲೆಗಳಿಗೆ ಮಾದರಿಯಾಗಿವೆಯೆಂದು ತಿಳಿಸಿದರು.
ತಾಲೂಕು ಪಂಚಾಯತ್ ಗಳಿಗೆ ತಮ್ಮ ಸರ್ಕಾರ ಬಂದಾಗಿನಿಂದ ಒಂದು ಕೋಟಿ ರೂ.ಗಳ ಅನುದಾನವನು ನೀಡುತ್ತಿದ್ದು, 13ನೇ ಹಣಕಾಸು ಆಯೋಗದ ಶಿಫಾರಸಿನನ್ವಯ ಮುಂದಿನ ಸಾಲಿನಿಂದ ಈ ಅನುದಾವನ್ನು 2 ಕೋಟಿಗಳಿಗೆ ಹೆಚ್ಚಿಸುವುದಾಗಿ ತಿಳಿಸಿ, ಪಂಚಾಯತ್ಗಳಲ್ಲಿ ಆಡಳಿತ ಪಾರದರ್ಶಕವಾಗಿರಬೇಕು,ಕೆಳ ಹಂತದಲ್ಲಿ ನೀಡುವ ಅನುದಾನವನ್ನು ಪ್ರಾಮಾಣಿಕವಾಗಿ ವೆಚ್ಚ ಮಾಡಿದಾಗ ಮಾತ್ರ ಅಭಿವೃದ್ಧಿ ಕಾರ್ಯಗಳು ಜನಸಮುದಾಯಕ್ಕೆ ತಲುಪಲು ಸಾಧ್ಯ ಎಂದರು.
ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಭರವಸೆ ಯೋಜನೆಯಡಿ ಕರ್ನಾಟಕ ರಾಜ್ಯಕ್ಕೆ 2 ಸಾವಿರ ಕೋಟಿ ರೂ.ಗಳ ಅನುದಾನ ಬಂದಿದ್ದು ಇಲ್ಲಿಯ ವರೆಗೂ ಒಂದು ಸಾವಿರ ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದ್ದು, ಮಾರ್ಚ್ ಅಂತ್ಯಕ್ಕೆ ಉಳಿಕೆ ಒಂದು ಸಾವಿರ ಕೋಟಿ ರೂ.ಗಳನ್ನು ಸಹ ವೆಚ್ಚ ಮಾಡುವುದಾಗಿ ಅವರು ತಿಳಿಸಿದರು.
ಗ್ರಾಮಪಂಚಾಯತ್ ಗಳು ಕೇವಲ ರಾಜ್ಯ ಕೇಂದ್ರ ಸರ್ಕಾರಗಳ ಅನುದಾನದಲ್ಲೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವುದನ್ನು ಬಿಟ್ಟು ತಮ್ಮಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನು ವಿಶೇಷವಾಗಿ ಕಂದಾಯ ವಸೂಲಿಗೆ ಹೆಚ್ಚಿನ ಆದ್ಯತೆಯನ್ನು ನೀಡಬೇಕೆಂದು ತಿಳಿಸಿದ ಸಚಿವರು, 13ನೇ ಹಣಕಾಸು ಆಯೋಗ ಅನುದಾನ ನೀಡುವಾಗ ಎಲ್ಲಾ ಗ್ರಾಮ ಪಂಚಾಯತ್ಗಳು ಶೇಕಡಾ 40 ರಷ್ಟು ತೆರಿಗೆ ವಸೂಲಾತಿಯನ್ನು ಕಡ್ಡಾಯವಾಗಿ ಮಾಡಬೇಕೆಂಬ ಷರತ್ತನ್ನು ವಿಧಿಸಲಾಗಿದೆಯೆಂದರು.
ಗ್ರಾಮ ಪಂಚಾಯತ್ ಗಳು ತಮಗೆ ನೀಡಲಾಗುತ್ತಿರುವ ಹೆಚ್ಚಿನ ಅನುದಾನವನ್ನು ವಿದ್ಯುತ್ ಬಿಲ್ ಗಳ ಪಾವತಿಗಾಗಿ ಬಳಸುತ್ತಿದ್ದು, ಇದರಿಂದ ಇತರೇ ಅಭಿವೃದ್ಧಿ ಕಾರ್ಯಗಳಿಗೆ ಅನುದಾನದ ಕೊರತೆ ಉಂಟಾಗುತ್ತಿದೆಯೆಂದ ಸಚಿವರು ಎಲ್ಲಾ ಗ್ರಾಮ ಪಂಚಾಯತ್ ಗಳ ವಿದ್ಯುತ್ ಬಿಲ್ ಬಾಕಿ 1000 ಕೋಟಿ ರೂಪಾಯಿಗಳಾಗಿದೆ. ಕಳೆದ ವರ್ಷ ಸರ್ಕಾರ 400 ಕೋಟಿಗೂ ಹೆಚ್ಚು ಗ್ರಾಮ ಪಂಚಾಯತ್ ಗಳ ವಿದ್ಯುತ್ ಬಿಲ್ಲನ್ನು ಮನ್ನಾ ಮಾಡಲಾಗಿದ್ದರೂ ಸಹ ಇಷ್ಟೊಂದು ಬೃಹತ್ ಮೊತ್ತದ ಬಿಲ್ಲು ಬಾಕಿ ಉಳಿದಿದೆಯೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಮೂಡಬಿದಿರೆ ಶಾಸಕರಾದ ಅಭಯಚಂದ್ರ ಜೈನ್, ಜಿಲ್ಲಾಪಂಚಾಯತ್ ಅಧ್ಯಕ್ಷೆ ಶೈಲಜಾಭಟ್, ಉಪಾಧ್ಯಕ್ಷೆ ಧನಲಕ್ಷ್ಮಿ ಜನಾರ್ಧನ ಗೌಡ.ಜಿಲ್ಲಾ ಪಂಚಾಯತ್ ಸದಸ್ಯ ಈಶ್ವರ ಕಟೀಲ್, ತಾಲೂಕು ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಭವ್ಯ, ಮೆನ್ನಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಶೈಲಾ ಶೆಟ್ಟಿ ,ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.