ರಾಷ್ಟ್ರೀಯ ಯುವ ಜನೋತ್ಸವ ಕಾರ್ಯ ಕ್ರಮಗಳಿಗೆ ಇಂದಿನ ವರೆಗೂ ಆಗಿರುವ ಸಿದ್ಧತೆ ಗಳ ಕ್ಷಣ ಕ್ಷಣದ(ಮಿನಿಟ್ ಪ್ರೋ ಗ್ರಾಂ)ಕಾರ್ಯ ಕ್ರಮಗಳ ಹೊಣೆ ಗಳ ಕುರಿ ತಂತೆ ಜಿಲ್ಲಾಧಿ ಕಾರಿ ಡಾ.ಎನ್.ಎಸ್. ಚನ್ನಪ್ಪ ಗೌಡರು ಇಂದು ತಮ್ಮ ಕಚೇರಿ ಯಲ್ಲಿ ನಡೆದ ವಿವಿಧ ಸಮಿತಿ ಗಳ ಅಧ್ಯಕ್ಷರ ಸಭೆ ಯಲ್ಲಿ ಚರ್ಚಿ ಸಿದರು.ಯುವಜನೋತ್ಸವ ನಡೆಯುವ ಐದು ದಿನಗಳು ನೀರು,ವಿದ್ಯುತ್ ಸರಬರಾಜು ಅಡೆತಡೆಯಿಲ್ಲದೆ ನಿರಂತರವಾಗಿರುವಂತೆ ಸಂಬಂಧಿಸಿದ ಅಧಿಕಾರಿಗಳು ಮುಂಜಾಗ್ರತೆ ವಹಿಸಲು ಸೂಚಿಸಿದರು.
ತುರ್ತು ಸೇವೆ ಸೇರಿದಂತೆ ಯುವಜನೋತ್ಸವ ಪ್ರತಿನಿಧಿಗಳಿಗೆ ಅಗತ್ಯ ಆರೋಗ್ಯ ಸೇವೆಯನ್ನು ಆದ್ಯತೆ ಮೇಲೆ ಒದಗಿಸಲು ಸರ್ವ ಸನ್ನದ್ಧರಾಗಿರುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿ ಅಗತ್ಯ ಬಿದ್ದಲ್ಲಿ ಖಾಸಗಿ ಆಸ್ಪತ್ರೆಗಳ ಸೇವೆಯನ್ನು ಬಳಸಿಕೊಳ್ಳುವಂತೆ ತಿಳಿಸಿದ್ದಾರೆ.
ಸಭೆಯಲ್ಲಿ ಉಪ ವಿಭಾಗಾಧಿಕಾರಿ ಡಾ.ವೆಂಕಟೇಶ್,ಹೆಚ್ಚುವರಿ ಜಿಲ್ಲಾಧಿಕಾರಿ ದಯಾನಂದ,ಆಳ್ವಾಸ್ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ.ಮೋಹನ್ ಆಳ್ವಾ ಮತ್ತಿರರುಹಾಜರಿದ್ದರು.