Thursday, January 31, 2013

ಪಡೀಲ್ -ಬಜಾಲ್ ರೈಲ್ವೆ ಕೆಳ ಸೇತುವೆ ನಿರ್ಮಾಣಕ್ಕೆ 5.16 ಕೋ. ರೂ. ಬಿಡುಗಡೆ

ಮಂಗಳೂರು,ಜನವರಿ.31;ಪಡೀಲ್ ಬಜಾಲ್ನಲ್ಲಿ ರೈಲ್ವೆ ಕೆಳ ಸೇತುವೆ  ನಿರ್ಮಾಣ ಮಾಡಲು 5,16,06,814 ರೂಪಾಯಿ ಅನುದಾನ ಬಿಡುಗಡೆ ಮಾಡಲಾಗಿದೆ.  ಶೀಘ್ರದಲ್ಲಿ ಟೆಂಡರ್ ಪ್ರಕ್ರೀಯೆಗೆ ಚಾಲನೆ ನೀಡಲಾಗುವುದು ಎಂದು ಸಂಸದ ನಳೀನ್ ಕುಮಾರ್  ತಿಳಿಸಿದರು.ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ರೈಲ್ವೆ ಇಲಾಖೆ ಹಾಗು ಇತರ ಇಲಾಖಾ ಅಧಿಕಾರಗಳೊಂದಿಗೆ ನಡೆದ ಸಭೆಯನ್ನುದ್ದೇಶಿಸಿ ಮಾತನಾಡಿದರು.
ರೈಲ್ವೆ ಇಲಾ ಖೆಯ ಅಧಿಕಾ ರಿಗಳ ಜೊತೆ ನಡೆದ ಸಭೆ ಯಲ್ಲಿ ಸರ ಕಾರ ದಿಂದ ಯೋಜ ನೆಗೆ ಸಂಬಂ ಧಿಸಿ ದಂತೆ ಕೋರ ಲಾದ ಅನು ದಾನದ ಪ್ರಕಾರ ರೈಲ್ವೆ ಇಲಾಖೆ 2,87,43,583 ರೂಪಾಯಿ ಹಾಗು ಕರ್ನಾಟಕ ಸರಕಾರ 2,28,63,258 ರೂಪಾಯಿ ಅನುದಾನ ಬಿಡುಗಡೆ ಮಾಡಿ ಆದೇಶ ಮಾಡಲಾಗಿದೆ ಎರಡು ವಾರದಲ್ಲಿ ಟೆಂಡರ್ ಕರೆದು ಮೂರನೆ ವಾರದಲ್ಲಿ ಟೆಂಡರ್ ತೆರೆಯಲಾಗುವುದು ಎಂದು ಸಂಸದರು ಸಭೆಗೆ ತಿಳಿಸಿದರು.ಮನಪಾದಿಂದ ಬರಬೇಕಾದ ಅನುದಾನ ಶೀಘ್ರವಾಗಿ ಬಂದಲ್ಲಿ ಟೆಂಡರ್ ಪ್ರಕ್ರೀಯೆ ತ್ವರಿತಗೊಳಿಸಲಾಗುವುದು ಎಂದು ಪಾಲ್ಘಾಟ್ ರೈಲ್ವೆ ವಿಭಾಗದ ಹೆಚ್ಚುವರಿ ನಿರ್ದೇಶಕರಾದ ಮೋಹನ್ ಮೆನನ್ ತಿಳಿಸಿದರು. 17.63ಕೋಟಿ ರೂ.ವೆಚ್ಚದಲ್ಲಿ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣ ಅಭಿವೃದ್ದಿ :-ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣವನ್ನು 17.63 ಕೋಟಿ ರೂಪಾಯಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುವ ಯೋಜನೆಯನ್ನು ಸಿದ್ಧ ಪಡಿಸಲಾಗಿದೆ ಎಂದು ಮೋಹನ್ ಮೆನನ್ ತಿಳಿಸಿದರು.ಪ್ರಸಕ್ತ ಮಂಗಳೂರು ರೈಲ್ವೆ ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವ ಯೋಜನೆ ಬೆಲ್ಜಿಯಂ ತಾಂತ್ರಿಕ ಸಲಹೆಗಾರರ ಸಹಾಯದೊಂದಿಗೆ ಪ್ರಗತಿಯಲ್ಲಿದೆ ಎಂದು ಮೋಹನ್ ಮೆನನ್ ತಿಳಿಸಿದರು.
ಕಂಕ ನಾಡಿ ಪ್ರದೇಶದ ಪಡೀಲ್ -ಬಜಾಲ್ ರೈಲ್ವೆ ಕೆಳ ಸೇತುವೆ ರಸ್ತೆಗೆ ಸಂಬಂ ಧಿಸಿ ದಂತೆ ಒಟ್ಟು 11 ಕೋಟಿ ರೂಪಾ ಯಿಯ ಯೋಜನೆ ಯನ್ನು ಮಂಗ ಳೂರು ಮಹಾ ನಗರ ಪಾಲಿಕೆ ಹಾಗು ದಕ್ಷಿಣ ರೈಲ್ವೆ ವಿಭಾ ಗದ ನಡುವೆ ಶೇ 50:50 ರ ಅನು ಪಾತ ದಲ್ಲಿ ವೆಚ್ಚವನ್ನು ಭರಿಸ ಬೇಕಾ ಗಿದೆ,ಈ ಹಿನ್ನೆಲೆಯಲ್ಲಿ ಕರ್ನಾಟಕ ಸರಕಾರ ಹಾಗು ರೈಲ್ವೆ ಸಚಿವಾಲಯ  ಅನುದಾನ ದೊಂದಿಗೆ ನಿವರ್ಾಹಣಾ ವೆಚ್ಚದ ಶೇ 30ನ್ನು ರೈಲ್ವೆ ಇಲಾಖೆ ನೀಡಲು ಸಮ್ಮತಿಸಿದೆ .ಬೈಕಂಪಾಡಿ ರೈಲ್ವೆ ಮೇಲ್ ಸೇತುವೆ ಕಾಮಗಾರಿಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಪರಿಷೃತ ಯೋಜನೆ ತಯಾರಿಸಲು ನಳಿನ್ ಕುಮಾರ್ ಸೂಚಿಸಿದರು.
ಸುರತ್ಕಲ್-ಬಿ.ಸಿ.ರೋಡ್ ಚತುಷ್ಪಥ ರಸ್ತೆ ಕಾಮಗಾರಿಯನ್ನು ಎಪ್ರಿಲ್ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು. ಕುಂದಾಪುರ- ತಲಪಾಡಿ ಚತುಷ್ಪಥ ಕಾಮಗಾರಿ 2014ರಲ್ಲಿ ಪೂರ್ಣಗೊಳಿಸಲಾಗುವುದು ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಶ್ರೀರಾಮ್ ಮಿಶ್ರಾ ಸಭೆಗೆ ತಿಳಿಸಿದರು.
ಮಂಗ ಳೂರು ಸೆಂಟ್ರಲ್  ರೈಲ್ವೆ ನಿಲ್ದಾಣ ದ ಅಭಿ ವೃದ್ಧಿ ಬಹು ಉಪ ಯೋಗಿ ಸಂಕೀ ರ್ಣದ ರಚನೆ ಹಾಗು ಕಂಕ ನಾಡಿ ಜಂಕ್ಷನ್ ರೈಲ್ವೆ ನಿಲ್ದಾ ಣದ ಸಮಸ್ಯೆ ಗಳ ಬಗ್ಗೆ ಸಭೆ ಯಲ್ಲಿ ಭಾಗ ವಹಿ ಸಿದ ಪ್ರತಿ ನಿಧಿ ಗಳು ಅಧಿ ಕಾರಿ ಗಳ ಗಮನ ಸೆಳೆ ದರು.ಬೈಕಂ ಪಾಡಿ ರೈಲ್ವೆ ಮೇಲ್ಸೇ ತುವೆ ಕಾಮ ಗಾರಿ ತ್ವರಿತ ವಾಗಿ ಕೈ ಗೊಳ್ಳಲು ಸಂಸದ ನಳಿನ್ ಕುಮಾರ್ ಸೂಚಿಸಿದರು.
ಚೆರ್ವತ್ತೂರು -ಮಂಗಳೂರು ಪ್ಯಾಸೆಂಜರ್ ರೈಲು ಮತ್ತು ಕಬಕ-ಪುತ್ತೂರು ರೈಲಿನಲ್ಲಿ ಬರುವ ವಿದ್ಯಾರ್ಥಿಗಳು ಮತ್ತು ನೌಕರರಿಗೆ ಅನುಕೂಲವಾಗುವಂತೆ  ಬೆಳಗ್ಗೆ ಹಿಂದೆ ನಿಗದಿಯಾದ ಸಮಯದಂತೆ 9 ಗಂಟೆಗೆ ಮುಂಚಿತವಾಗಿ ಈ ಎರಡೂ ರೈಲುಗಳು ಮಂಗಳೂರು ತಲುಪಬೇಕೆಂದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಕೋರಿಕೆಗೆ ಸ್ಪಂದಿಸಿದ ರೈಲ್ವೇ ಇಲಾಖಾಧಿಕಾರಿಗಳು ಸಮ್ಮತಿಸಿದರು.
     ಸಭೆಯಲ್ಲಿ ವಿಧಾನಸಭೆಯ ಉಪಸಭಾಪತಿ ಎನ್.ಯೋಗೀಶ್ ಭಟ್,ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಜಿಲ್ಲಾಧಿಕಾರಿ ಪ್ರಕಾಶ್ ,ಅಪರ ಜಿಲ್ಲಾಧಿಕಾರಿ ದಯಾನಂದ,ಮನಪಾ ಆಯುಕ್ತ ಡಾ ಹರೀಶ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.
 

ಶೌಚಾಲಯ ಕಾಮಗಾರಿ ಫೆಬ್ರವರಿ ತಿಂಗಳ ಅಂತ್ಯಕ್ಕೆ ಮುಗಿಸಿ: ಕೊರಗಪ್ಪ ನಾಯಕ್

ಮಂಗಳೂರು, ಜನವರಿ.31: ಸ್ವಚ್ಚತೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ರಾಷ್ಟ್ರೀಯ ಪ್ರಶಸ್ತಿ ದೊರಕಿದ್ದರೂ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಹುತೇಕ ಗ್ರಾಮಗಳಿನ್ನೂ ಸಂಪೂರ್ಣ ಶೌಚಾಲಯ ಹೊಂದಿರುವ ಗ್ರಾಮ ಎಂಬುದಾಗಿ ಘೋಷಣೆಯಾಗಿಲ್ಲ  ಎಂಬ ಅಸಮಾಧಾನ ಇಂದು ದ.ಕ. ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಜನಪ್ರತಿನಿಧಿಗಳಿಂದ ವ್ಯಕ್ತವಾಯಿತು.
ಜಿ.ಪಂ.ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿಂದು ಅಧ್ಯಕ್ಷತೆ ವಹಿಸಿದ್ದ ಜಿ.ಪಂ. ಅಧ್ಯಕ್ಷ ಕೊರಗಪ್ಪ ನಾಯಕ್ ಹಾಗೂ ಕೆಲ ಸದಸ್ಯರು ಈ ಬಗ್ಗೆ ಆಕ್ಷೇಪಿಸಿದರು.
ಮಂಗಳೂರು ತಾಲೂಕಿನಲ್ಲಿ 999, ಬಂಟ್ವಾಳದಲ್ಲಿ 954, ಪುತ್ತೂರು ತಾಲೂಕಿನಲ್ಲಿ 780, ಸುಳ್ಯದಲ್ಲಿ 982, ಬೆಳ್ತಂಗಡಿಯಲ್ಲಿ 1530 ವೈಯಕ್ತಿಕ ಶೌಚಾಲಯಗಳ ನಿರ್ಮಾಣ ಕಾಮಗಾರಿ ಬಾಕಿ ಇದ್ದು, 2012ರ ಡಿಸೆಂಬರ್ ಅಂತ್ಯಕ್ಕೆ ಪೂರ್ಣಗೊಳಿಸುವುದಾಗಿ ಅಧಿಕಾರಿಗಳು ಹಿಂದಿನ ಯೋಜನಾ ಸಮಿತಿ ಸಭೆಯಲ್ಲಿ ಭರವಸೆ ನೀಡಿದ್ದರು. ಹಾಗಿದ್ದರೂ ತಾಲೂಕು ಪಂಚಾಯತ್ ವ್ಯಾಪ್ತಿಗಳಲ್ಲಿ ಕೆಲ ಕಾಮಗಾರಿಗಳು ಮಾತ್ರವೇ ಪೂರ್ಣಗೊಂಡಿವೆ. ಪಿಡಿಒಗಳು ಶೌಚಾಲಯ ಬಾಕಿ ಆದಲ್ಲಿ ಈವರೆಗೂ ಭೇಟಿ ನೀಡಿಲ್ಲ. ಅಧಿಕಾರಿ ವರ್ಗದವರ ಉದಾಸೀನತೆಯಿಂದ ಕಾಮಗಾರಿ ಪೂರ್ಣ ಆಗಿಲ್ಲ. ಕೆಲವೆಡೆ ಅನುದಾನ ನೀಡಲಾಗಿಲ್ಲ ಎಂದು ಅಧ್ಯಕ್ಷ ಕೊರಗಪ್ಪ ನಾಯ್ಕ ಅಸಮಾಧಾನ ವ್ಯಕ್ತಪಡಿಸಿದರು.
ಶೌಚಾಲಯ ನಿರ್ಮಾಣ ಯೋಜನೆ ಐದು ವರ್ಷಗಳಿಂದ ನಡೆಯುತ್ತಿರುವ ಅಭಿಯಾನವಾಗಿದ್ದು, ಇನ್ನೂ ಜಿಲ್ಲೆಯ ಯಾವುದೇ ಗ್ರಾಮ ಸಂಪೂರ್ಣ ಶೌಚಾಲಯ ಹೊಂದಿದ ಗ್ರಾಮ ಎಂದು ಘೋಷಣೆಗೆ ಒಳಪಡದಿರುವುದು ವಿಷಾದನೀಯ ಎಂದು ಸದಸ್ಯ ಕೇಶವ ಆಕ್ಷೇಪಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್, ಫೆಬ್ರವರಿ ಅಂತ್ಯದೊಳಗೆ ಜಿಲ್ಲೆಯಾದ್ಯಂತ ಬಾಕಿ ಇರುವ ಶೌಚಾಲಯ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ದ.ಕ. ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕೆಲ ಶಾಲೆಗಳಿಗೆ ಆರ್ಟಿಸಿ ಇಲ್ಲದೆ ಸಮಸ್ಯೆಯಾಗಿದೆ. ಈ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶಾಲಾ ಆರ್ಟಿಸಿ ಬಗ್ಗೆ ತಹಶೀಲ್ದಾರ್ಗಳ ಮೂಲಕ ಶಾಲಾವಾರು ಪಟ್ಟಿಯನ್ನು ತಯಾರಿಸಿ, ಸಮಸ್ಯೆ ಬಗೆಹರಿಸಲು ಆಂದೋಲನ ರೂಪದಲ್ಲಿ ಕ್ರಮ ಕೈಗೊಳ್ಳುವಂತೆ ಸಿಇಒ ಡಾ. ವಿಜಯಪ್ರಕಾಶ್ ಸಭೆಯಲ್ಲಿ ಸೂಚಿಸಿದರು. 
ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಶೌಚಾಲಯ ಸ್ವಚ್ಛತೆ ಕುರಿತಂತೆ ನಡೆದ ಚರ್ಚೆಯ ವೇಳೆ, ಆರೋಗ್ಯ ಇಲಾಖೆಯ ಕಚೇರಿಗಳಲ್ಲಿ ಬಹಳ ಕಡೆಗಳಲ್ಲಿ ಶೌಚಾಲಯಗಳಲ್ಲಿ ಸಾಮಾನುಗಳನ್ನು ತುಂಬಿಟ್ಟಿರುವುದು ಕಂಡು ಬಂದಿದೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆರೋಗ್ಯಾಧಿಕಾರಿಗೆ ಜಿ.ಪಂ. ಅಧ್ಯಕ್ಷ ಕೊರಗಪ್ಪ ನಾಯಕ್ ಸೂಚನೆ ನೀಡಿದರು.
ಉಳಿದಂತೆ ಸಭೆಯಲ್ಲಿ ಅಂಗನವಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು ಹಾಗೂ ಬಹುಗ್ರಾಮ ಕುಡಿಯುವ ನೀರಿನ ಆರು ಯೋಜನೆಗಳಿಗೆ ಸಂಬಂಧಿಸಿ ಪ್ರಾಥಮಿಕ ಹಂತದ ಸರ್ವೇ ಕಾರ್ಯ ಶೀಘ್ರವೇ ಪೂರ್ಣಗೊಳಿಸಿ ಯೋಜನೆಗೆ ಚಾಲನೆ ನೀಡಲು ಮುಂದಾಗುವಂತೆ ಅಧಿಕಾರಿಗಳಿಗೆ ಅವರು ಸೂಚಿಸಿದರು.
ಜಿಲ್ಲಾ ಯೋಜನಾ ಸಮಿತಿಗೆ ಆರು ಲಕ್ಷ ರೂ. ಅನುದಾನ ಬರುತ್ತಿದ್ದು, ಅದರಲ್ಲಿ ಮೂರು ಲಕ್ಷ ರೂ.ಗಳನ್ನು ಗ್ರಾ.ಪಂ. ವ್ಯಾಪ್ತಿಯಲ್ಲಿ ವಿವಿಧ ಇಲಾಖೆಗಳಡಿ ವಿಶೇಷ ಹಾಗೂ ಅಪರೂಪದ ಕಾರ್ಯಕ್ರಮಗಳಿಗೆ ವಿನಿಯೋಗಿಸಲು ಅವಕಾಶವಿದೆ ಎಂದು ಮುಖ್ಯ ಯೋಜನಾ ಅಧಿಕಾರಿ ಅಬ್ದುಲ್ ನಝೀರ್ ತಿಳಿಸಿದರು.

'ಸಮಗ್ರ ಬೆಳವಣಿಗೆಗೆ ಪೌಷ್ಟಿಕ ಆಹಾರ'

ಮಂಗಳೂರು, ಜನವರಿ.31: ಊಟ ಬಲ್ಲವನಿಗೆ ರೋಗವಿಲ್ಲ; ಆರೋಗ್ಯವೇ ಭಾಗ್ಯ ಈ ಎಲ್ಲ ಗಾದೆಗಳು ಮಾನವನ ಆರೋಗ್ಯದ  ಮಹತ್ವವನ್ನು ದೃಷ್ಟಿಯಲ್ಲಿಟ್ಟುಕೊಂಡೇ ಸೃಷ್ಟಿಯಾದವು. ಮಾನವ ಹಸಿವೆ ತೀರಿಸಲು ಮಾತ್ರ ತಿನ್ನದೇ ದೇಹದ ಸಮಗ್ರ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಆಹಾರವನ್ನು ಸೇವಿಸಬೇಕೆಂದು ಹಿರಿಯ ಮಲೇರಿಯಾ ಪರಿವೀಕ್ಷಕರಾದ ಜಯರಾಮ್ ಪೂಜಾರಿ ಅವರು ಹೇಳಿದರು.
        ಅವ ರಿಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂ ಕಿನ ಪೂಂಜಾಲ ಕಟ್ಟೆಯ ಮುರು ಘೇಂದ್ರ ಸಭಾ ಭವನ ದಲ್ಲಿ ವಾರ್ತಾ ಇಲಾಖೆ, ಗ್ರಾಮ ಪಂಚಾ ಯತ್ ಪಿಲಾತ ಬೆಟ್ಟು, ಕಾರ್ಯ ನಿರತ ಪತ್ರ ಕರ್ತರ ಸಂಘ ಬಂಟ್ವಾಳ ತಾಲೂಕು ಮತ್ತು ಮುರು ಘೇಂದ್ರ ಮಿತ್ರ ಮಂಡಳಿ, ವನಿತಾ ಸಮಾಜ ಪೂಂಜಾ ಲಕಟ್ಟೆ ಇವರ ಸಂಯು ಕ್ತಾಶ್ರ ಯದಲ್ಲಿ ಆಯೋಜಿಸಲಾದ 'ಅಪೌಷ್ಟಿಕತೆ ನಿವಾರಣೆ' ಕುರಿತ ಸಂವಾದ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ನಮ್ಮ ಆಹಾರ ದಲ್ಲಿ ಐದು ಅಂಶ ಗಳು ಮುಖ್ಯ ವಾಗಿ ರಬೇಕಾ ಗಿದ್ದು, ಧಾನ್ಯ, ಬೇಳೆ ಕಾಳು ಗಳು, ಸೊಪ್ಪು ತರ ಕಾರಿ, ಹಾಲು, ಹಣ್ಣು ಗಳು ಮಾನ ವನ ಆರೋ ಗ್ಯದ ಸಮಗ್ರ ಬೆಳ ವಣಿ ಗೆಗೆ ಅಗತ್ಯ ಎಂದರು. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿ ಯಾನ ದಿಂದ ಗ್ರಾಮೀಣ ಆರೋಗ್ಯ ಸದೃಢಗೊಳಿಸುವಲ್ಲಿ ಪರಿಣಾಮಕಾರಿ ಕೆಲಸಗಳಾಗಿವೆ. ನಮ್ಮ ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ಕಡಿಮೆ ಇದೆ. ಆದರೆ ತಾಯಿ ಮರಣ ಪ್ರಮಾಣ ಕನಿಷ್ಠ ಗೊಳಿಸಲು ಇನ್ನಷ್ಟು ಸಾಧನೆಯಾಗಬೇಕಿದೆ ಎಂದರು.
ಹದಿಹರೆಯದ ಆರೋಗ್ಯ, ಅದರಲ್ಲೂ ಮುಖ್ಯವಾಗಿ ಹದಿಹರೆಯದ ಹೆಣ್ಣು ಮಕ್ಕಳ ಆರೋಗ್ಯ ಉತ್ತಮವಾದರೆ ಆರೋಗ್ಯವಂತ ಸಮಾಜ ನಿರ್ಮಾಣ ಖಂಡಿತ ಸಾಧ್ಯ ಎಂದ ಅವರು, ಹೆಣ್ಣೊಬ್ಬಳು ಆರೋಗ್ಯವಾಗಿದ್ದರೆ, ಇಡೀ ಕುಟುಂಬ ಹಾಗೂ ಸಮಾಜ ಆರೋಗ್ಯಪೂರ್ಣವಾಗಿರಲು ಸಾಧ್ಯ. ಸ್ವಚ್ಛ ಹಾಗೂ ವಿಟಮಿನ್ಯುಕ್ತ ಆಹಾರ ಸೇವನೆಯಿಂದ ಉತ್ತಮ ಆರೋಗ್ಯ ಭಾಗ್ಯ ಲಭ್ಯ. ಈ ಉದ್ದೇಶದಿಂದಲೇ ನಮ್ಮ ಆರೋಗ್ಯ ನಮ್ಮ ಅಂಗೈಯಲ್ಲಿ ಎಂಬ ಘೋಷವಾಕ್ಯ ಸೃಷ್ಟಿಯಾದದ್ದು ಎಂದರು. ಆಹಾರ ಸೇವನೆಯಲ್ಲಿ ನಿರ್ಲಕ್ಷ್ಯ, ಅಪೌಷ್ಟಿಕತೆಯಿಂದ ಸಮಾಜದ ಮೇಲಾಗುವ ದುಷ್ಪರಿಣಾಮಗಳನ್ನು ನೀಡಿದರಲ್ಲದೆ. ಆಹಾರ ಸೇವನೆಗೆ ಸಂಬಂಧಿಸಿದಂತೆ ಮಹಿಳೆಯರಲ್ಲಿದ್ದ ಸಂಶಯಗಳಿಗೆ ಉತ್ತರ ನೀಡಿದರು.
ಕಾರ್ಯ ಕ್ರಮವನ್ನು ಪಿಲಾತ ಬೆಟ್ಟು ಗ್ರಾಮ ಪಂಚಾ ಯತ್ ಅಧ್ಯಕ್ಷ ರಾದ ಶ್ರೀಮತಿ ಭಾರತಿ ಶೆಟ್ಟಿ ಉದ್ಘಾ ಟಿಸಿದರು. ಮುರು ಘೇಂದ್ರ ಮಿತ್ರ ಮಂಡಳಿ ಅಧ್ಯಕ್ಷ ರಾದ ವಿಕ್ಟರ್ ಡಿ ಸೋಜಾ, ಮುರು ಘೇಂದ್ರ ವನಿತಾ ಸಮಾ ಜದ ಅಧ್ಯಕ್ಷ ರಾದ ಶ್ರೀಮತಿ ಉಮಾ ಡಿ. ಗೌಡ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾ ಭಿವೃದ್ಧಿ ಯೋಜ ನೆಯ ಯೋಜನಾ ಧಿಕಾರಿ ಶ್ರೀ ಮತಿ ದಯಾ ವತಿ ಎಸ್, ಬಂಟ್ವಾಳ ತಾಲೂ ಕಿನ ಕಾರ್ಯನಿರತ ಪತ್ರ ಕರ್ತರ ಸಂಘದ ಅಧ್ಯಕ್ಷ ಮೌನೇಶ್ ವಿಶ್ವ ಕರ್ಮ ವೇದಿಕೆ ಯಲ್ಲಿ ದ್ದರು. ವಾರ್ತಾ ಧಿಕಾರಿ ರೋಹಿಣಿ ಸ್ವಾಗ ತಿಸಿ ದರು. ಸಂದೀಪ್ ಸಾಲ್ಯಾನ್ ವಂದಿ ಸಿದರು. ರತ್ನ ದೇವ್ ಪೂಂಜಾ ಲಕಟ್ಟೆ ಕಾರ್ಯ ಕ್ರಮ ನಿರೂ ಪಿಸಿ ದರು.
ಕಾರ್ಯ ಕ್ರಮದ ಬಳಿಕ ಸಂಸಾರ ತಂಡ ದಿಂದ 'ಸಾವ ಯವ ಅಜ್ಜ' ಬೀದಿ ನಾಟಕ ವನ್ನು ಪ್ರದ ರ್ಶಿಸಿದರು.

ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಲು ಮನೆಮನೆ ದಾಳಿ-ಕಾರ್ಮಿಕ ಆಯುಕ್ತರು

ಮಂಗಳೂರು, ಜನವರಿ. 31:-ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿದೆ. ಪತ್ತೆ ಹಚ್ಚಿ ದಂಡ ವಿಧಿಸುವ ಪ್ರಕ್ರಿಯೆ ನಿರಂತರವಾಗಿ ಮಾಡಿದ್ದಾಗ್ಯೂ ಕೆಲವೆಡೆ ಪ್ರಕರಣಗಳು ವರದಿಯಾಗುತ್ತಿವೆ. ಈ ಕುರಿತು ಇನ್ನಷ್ಟು ಜಾಗೃತಿ ಮೂಡಿಸಲು ಪ್ರತೀ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಕ್ಕಳ ಮಿತ್ರರನ್ನು ನೇಮಿಸಿ ಇಲಾಖೆ ತರಬೇತಿ ನೀಡುತ್ತಿದೆಯೆಂದು ಕಾರ್ಮಿಕ ಆಯುಕ್ತ ಡಿ.ಜೆ.ನಾಗೇಶ್ ತಿಳಿಸಿದರು.
   ಬುಧವಾರ ಅವರ ಕಚೇರಿಯಲ್ಲಿ ಈ ಸಂಬಂಧ ಆಯೋಜಿಸಿರುವ ಸಭೆಯಲ್ಲಿ ಡಿಸ್ಟ್ರಿಕ್ಟ್ ಚೈಲ್ಡ್ ಲೇಬರ್ ಪ್ರಾಜೆಕ್ಟ್ ಸೊಸೈಟಿ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
ಬಹುಮಹಡಿ ಕಟ್ಟಡಗಳಲ್ಲಿ ಕೆಲವರು ಬಾಲಕಾರ್ಮಿಕರನ್ನು ಬಳಸಿಕೊಳ್ಳುತ್ತಿರುವ ಬಗ್ಗೆ ಇಲಾಖೆಗೆ ಮಾಹಿತಿ ಬಂದಿದ್ದು,ಇನ್ನು ಮುಂದಿನ ದಿನಗಳಲ್ಲಿ ಬಾಲಕಾರ್ಮಿಕರನ್ನು ಪತ್ತೆ ಹಚ್ಚಲು ಮನೆಮನೆ ದಾಳಿ ಮಾಡಲಾಗುವುದು. ಕೆಲಸಕ್ಕೆ ನೇಮಿಸಿಕೊಂಡ ಮಾಲೀಕರಿಗೆ  ಸ್ಥಳದಲ್ಲೇ ರೂ.20,000/- ದಂಡ ವಿಧಿಸಲಾಗುವುದೆಂದು ಅವರು ತಿಳಿಸಿದರು.ಈಗಾಗಲೇ 2010 ರಿಂದ 2012 ರ ವರೆಗೆ 17 ಬಾಲಕಾರ್ಮಿಕರನ್ನು ಪತ್ತೆ ಹಚ್ಚಿ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಅಪಾರ್ಟ್ ಮೆಂಟ್ ಗಳಲ್ಲಿ ದಾಳಿ ಮಾಡಲು ಕಾರ್ಮಿಕ ಇಲಾಖೆಯ ನಿರೀಕ್ಷಕರಿಗೆ ಅಧಿಕಾರ ಪತ್ರವನ್ನು ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುವಂತೆ ಸಭೆಯಲ್ಲಿ ಚರ್ಚಿಸಲಾಯಿತು.
 ಬಾಲಕಾರ್ಮಿಕಪದ್ಧತಿ ತಡೆಗಟ್ಟಲು ಜನರಲ್ಲಿ ಅರಿವು ಮೂಡಿಸಲು ಕ್ರಮಕೈಗೊಳ್ಳಲಾಗಿದೆ. ಮಾರ್ಚ್ 31 ರೊಳಗೆ ಜನಜಾಗೃತಿ ಕಾರ್ಯಕ್ರಮಗಳನ್ನು ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಲಾಯಿತು. ಈ ಕಾರ್ಯಕ್ರಮಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಕಾರ ನೀಡಬೇಕೆಂದು ಜಿಲ್ಲಾ ಬಾಲಕಾರ್ಮಿಕ ಯೋಜನಾಧಿಕಾರಿ ಶ್ರೀನಿವಾಸ್ ಸಭೆಯಲ್ಲಿ ಕೋರಿದರು.
ಸಭೆಯಲ್ಲಿ ಕಾರ್ಮಿಕ ಅಧಿಕಾರಿ ಮಹೇಶ್ ಹಾಗೂ ಎಂ.ಆನಂದ ಮೂರ್ತಿ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

 

Tuesday, January 29, 2013

99 ಫಲಾನುಭವಿಗಳಿಗೆ ಚೆಕ್ ವಿತರಣೆ

ಮಂಗಳೂರು, ಜನವರಿ. 29:- ಸಮಗ್ರ ಮಕ್ಕಳ ರಕ್ಷಣಾ ಯೋಜನೆಯ ಪ್ರಾಯೋಜಕತ್ವದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಇಂದು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ 99 ಮಕ್ಕಳಿಗೆ ಶೈಕ್ಷಣಿಕ ನೆರವು ವಿತರಿಸಲಾಯಿತು.
ಜಿಲ್ಲೆ ಯಲ್ಲಿ ರುವ ಅರ್ಹ ಏಕ ಪೋಷ ಕರ ನೆರ ಳಿನಡಿ ಬೆಳೆ ಯುವ ಮಕ್ಕಳು ವಿದ್ಯಾ ಭ್ಯಾಸ ಅರ್ಧದಲ್ಲೇ ಕೈ ಬಿಡ ದಂತೆ ತಡೆ ಯಲು ಹಾಗೂ ಮಕ್ಕಳು ಕುಟುಂ ಬದೊ ಳಗೆ ಬೆಳೆ ಯಲು ಈ ಪ್ರೋತ್ಸಾ ಹಧನ ಸಹಾಯ ವನ್ನು ನೀಡ ಲಾಗುತ್ತದೆ.
ಸಹಾಯಧನ ವಿತರಿಸಿ ಮಾತನಾಡಿದ ಜಿಲ್ಲಾಧಿಕಾರಿ  ಎನ್. ಪ್ರಕಾಶ್ ಅವರು, ವಿದ್ಯೆಯು ಜೀವನಕ್ಕೆ ಬೆಳಕನ್ನು ನೀಡುತ್ತದೆ. ಸರಕಾರ ನೀಡುವ ಸವಲತ್ತುಗಳನ್ನು ಬಳಸಿ ಸಬಲರಾಗಿ ಎಂದು ಮಕ್ಕಳಿಗೆ ಹಿತವಚನ ನುಡಿದರು.
ಮಕ್ಕಳ ಹಿತರಕ್ಷಣಾ ಸಮಿತಿ ಅಧ್ಯಕ್ಷರಾದ ಶ್ರೀಮತಿ ಆಶಾ ನಾಯಕ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಎನ್ ವಿಜಯಪ್ರಕಾಶ್ ಉಪಸ್ಥಿತರಿದ್ದರು. ಜಿಲ್ಲಾ ಮಕ್ಕಳ ರಕ್ಷಣ ಘಟಕದ ಶ್ರೀಮತಿ ಗ್ರೇಸಿ ಗೊನ್ಸಾಲಿಸ್ ಅವರು ಸ್ವಾಗತಿಸಿದರು.
 

Monday, January 28, 2013

ಬೀಚ್ ಉತ್ಸವಕ್ಕೆ ಅದ್ದೂರಿ ತೆರೆ;ಜನಸಾಗರವನ್ನು ಮೋಡಿ ಮಾಡಿದ ಯುಪೋರಿಯ ರಾಕ್ ಬ್ಯಾಂಡ್

ಮಂಗಳೂರು, ಜನವರಿ.28: ಪಣಂಬೂರಿನ ಕಡಲ ಕಿನಾರೆಯಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ  ಬೀಚ್ ಉತ್ಸವ ಭಾನುವಾರ ಸಂಪನ್ನಗೊಂಡಿತು. ಇಲ್ಲಿ ಆಯೋ ಜಿಸಲಾ ಗಿದ್ದ ಸಮಾ ರೋಪ ಸಮಾ ರಂಭದ ಅಧ್ಯ ಕ್ಷತೆ ವಹಿಸಿ ಮಾತ ನಾಡಿದ ಶಾಸಕ ಕೃಷ್ಣ ಜೆ . ಪಾಲೇ ಮಾರ್ ಬೀಚ್ ಉತ್ಸ ವದ ಯಶಸ್ಸಿಗೆ ದುಡಿದ ಅಧಿಕಾರಿ ವರ್ಗ , ಸಂಘ ಸಂಸ್ಥೆಗಳು ಮತ್ತು ಪ್ರೋತ್ಸಾಹ ನೀಡಿದ ಜನತೆಯನ್ನು ಅಭಿನಂದಿಸಿದರು. ನೆರೆಯ ಕೇರಳ, ಗೋವಾ ರಾಜ್ಯಗಳು ಪ್ರವಾಸೋದ್ಯಮದಿಂದಲೇ ಆರ್ಥಿಕವಾಗಿ, ಸಾಮಾಜಿವಾಗಿ ಅಭಿವೃದ್ದಿ ಹೊಂದುತ್ತಿವೆ, ಸಾವಿರಾರು ಉದ್ಯೋಗ ಅವಕಾಶಗಳು ಲಭಿಸುತ್ತಿವೆ.ಕರ್ನಾಟಕ ರಾಜ್ಯವೂ ಬೃಹತ್ ಕರಾವಳಿಯನ್ನು ಹೊಂದಿದ್ದು , ಇದನ್ನು ಹಂತ ಹಂತವಾಗಿ ಅಭಿವೃದ್ದಿ ಪಡಿಸಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎಂದರು.ಮಂಗಳೂರು ಮೇಯರ್ ಶ್ರೀಮತಿ ಗುಲ್ಜಾರ್ ಭಾನು, ಜಿಲ್ಲಾಧಿಕಾರಿ ಎನ್. ಪ್ರಕಾಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕೆ.ಎನ್.ವಿಜಯ ಪ್ರಕಾಶ್,ಪಾಲಿಕೆ ಆಯುಕ್ತ ಡಾ. ಹರೀಶ್ ಕುಮಾರ್, ಸಹಾಯಕ ಆಯುಕ್ತ ಡಾ. ವೆಂಕಟೇಶ್ ಅವರು ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಸಭಾ ಕಾರ್ಯ ಕ್ರಮದ ಬಳಿಕ ನಡೆದ ಸಾಂಸ್ಕೃ ತಿಕ ಕಾರ್ಯ ಕ್ರಮ ದಲ್ಲಿ ನವ ದೆಹಲಿ ಯ ಡಾ. ಪಲಶ್ ಸೇನ್ ಅವರ ನೇತ್ರ ತ್ವದ ಯುಪೋ ರಿಯಾ ರಾಕ್ ಬ್ಯಾಂಡ್ ಸಂಗೀತ ಸುಧೆ ಯಲ್ಲಿ ಜನ ಸಾಗರ ವನ್ನು ತೇಲಾ ಡಿಸಿತು.

Saturday, January 26, 2013

ದಕ್ಷಿಣ ಕನ್ನಡ: ನೆಹರು ಮೈದಾನದಲ್ಲಿ ಸಂಭ್ರಮದ 64ನೇ ಗಣರಾಜ್ಯೋತ್ಸವ 5000 ಮಕ್ಕಳಿಂದ ಗಾನ -ನೃತ್ಯ ವೈಭವ

ಮಂಗಳೂರು, ಜನವರಿ.26: ಪ್ರಜಾಪ್ರಭುತ್ವದ ಮಹತ್ವ ಮತ್ತು ಸಮಾನ ಸಮಾಜ ನಿರ್ಮಾಣಕ್ಕೆ  ಸರ್ಕಾರ ಕೈಗೊಂಡ ಕ್ರಮಗಳು, ಜಿಲ್ಲೆಯಲ್ಲಿ ಆಗಿರುವ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ನಗರದ ನೆಹರು ಮೈದಾನದಲ್ಲಿ ಧ್ವಜಾರೋಹಣ ನೆರವೇರಿಸಿ  ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಮಾತನಾಡಿದರು.
ಪೆರೇಡ್ ವೀಕ್ಷಿ ಸಿದ ಬಳಿಕ ನೀಡಿದ ತಮ್ಮ ಸಂದೇ ಶದಲ್ಲಿ ಅವರು ರಾಜ್ಯ ಸರ ಕಾರವು ಜಿಲ್ಲೆಯಲ್ಲಿ ಹಮ್ಮಿ ಕೊಂಡ ವಿವಿಧ ಅಭಿ ವೃದ್ಧಿ ಕಾರ್ಯ ಕ್ರಮ ಗಳ ಮಾಹಿತಿ ನೀಡಿ ದರು. ಪುತ್ತೂರಿನ ಕೊಯಿಲ ದಲ್ಲಿ ಪಶು ಸಂಗೋ ಪನಾ ಕಾಲೇಜು ತೆರೆ ಯಲು ಸರ ಕಾರ ಅನುಮೋದನೆ ನೀಡಿ ರುವು ದಾಗಿ ಹೇಳಿದ ಅವರು, ದ.ಕ. ಜಿಲ್ಲೆ ಯಲ್ಲಿ ಪ್ರವಾ ಸೋದ್ಯಮ ಉತ್ತೇ ಜನಕ್ಕೆ ಸಂಬಂ ಧಿಸಿ ಹಲವು ಯೋಜನೆ ಗಳನ್ನು ಕೈಗೆತ್ತಿಕೊಂಡಿರುವುದಾಗಿ ತಿಳಿಸಿದರು.
ಪಿಲಿಕುಳದಲ್ಲಿ 24.5 ಕೋಟಿ  ವೆಚ್ಚದಲ್ಲಿ ವಿನೂತನ 3ಡಿ ತಾರಾಲಯವನ್ನು ಆದಷ್ಟು ಶೀಘ್ರದಲ್ಲಿ ರಾಷ್ಟ್ರಕ್ಕೆ ಸಮರ್ಪಿಸಲಾಗುವುದು.ಸಿಂಥೆಟಿಕ್ ಟ್ರಾಕ್, ಜಿಲ್ಲಾ ರಂಗಮಂದಿರ, ಲೇಡಿಗೋಶನ್ ಆಸ್ಪತ್ರೆಯ ನವೀಕರಣ, ಮಂಗಳೂರು ಮಿನಿ ವಿಧಾನಸೌಧ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳು ಆರಂಭಗೊಂಡಿರುವುದಾಗಿ ಅವರು ತಿಳಿಸಿದರು.
ನಾಡಿನ ಸ್ವಾತಂತ್ರ್ಯ ಹೋರಾಟಗಾರರ ಕನಸು, ಹಿರಿಯರ ಆಶಯಗಳನ್ನು ಸಾಕಾರಗೊಳಿಸುವ ಬದ್ಧತೆ ನಮ್ಮದಾಗಬೇಕು. ಸರ್ವಧರ್ಮ ಸಹಿಷ್ಣುತೆ, ಭ್ರಾತೃತ್ವದ ಭವ್ಯ ಪರಂಪರೆ ಕಾಯ್ದುಕೊಳ್ಳುವ ಹೊಣೆ ನಮ್ಮ ಮೇಲಿದೆ. ಪ್ರಜಾಪ್ರಭುತ್ವ ಯಶಸ್ವಿಯಾಗುವುದು ಕೇವಲ ಆಡಳಿತಾತ್ಮಕ ತೀಮರ್ಾನಿಗಳಿಂದಷ್ಟೇ ಅಲ್ಲ, ಪ್ರಜೆಗಳ ಸಕ್ರಿಯ ಪಾಲ್ಗೊಳ್ಳುವಿಕೆಯೂ ಮುಖ್ಯ. ಇಂದು ಮತದಾನದ ಪ್ರಮಾಣ ಹೆಚ್ಚಿಸಲು ಜಾಗೃತಿ ಕಾರ್ಯಕ್ರಮ ನಡೆಸುತ್ತಿರುವುದು  ವಿಷಾದಕರ ಎಂದ ಸಿ.ಟಿ. ರವಿ, ಚುನಾವಣೆಗಳಿಂದ ಸುಶಿಕ್ಷಿತರು ದೂರವುಳಿದರೆ ಅರ್ಥಪೂರ್ಣ ಪ್ರಜಾಪ್ರಭುತ್ವ ಅಸಾಧ್ಯ ಎಂದರು.
ಈ ಸಾಲಿ ನಲ್ಲಿ ಆರಂಭಿ ಸಲಾ ಗಿರುವ ಸರ್ವೋ ತ್ತಮ ಸೇವಾ ಪ್ರಶಸ್ತಿ ಯನ್ನು ಬಂಟ್ವಾ ಳದ ಸಮು ದಾಯ ಆರೋಗ್ಯ ಕೇಂದ್ರದ  ಡಾ. ದುರ್ಗಾ ಪ್ರಸಾದ್ ಎಂ.ಆರ್. ಹಾಗೂ ಆಹಾರ ಮತ್ತು ನಾಗರಿಕ ಪೂರೈಕೆ ಇಲಾ ಖೆಯ ಉಪ ನಿರ್ದೇ ಶಕ ಶರಣ ಬಸಪ್ಪ, ಮಂಗ ಳೂರು ಮಹಾ ನಗರ ಪಾಲಿಕೆಯ ಆರೋಗ್ಯ ಅಭಿಯಂತರ ಮಂಜುನಾಥ ಆರ್. ಶೆಟ್ಟಿ ಹಾಗೂ ಕಂದಾಯ ಇಲಾಖೆಯ ಪ್ರಥಮ ದರ್ಜೆ ಸಹಾಯಕರಾದ ಜೂಲಿಯಟ್ ಫೆರ್ನಾಂಡಿಸ್  ನೀಡಲಾಯಿತು.
ಕ್ರೀಡಾ ಸಾಧಕರಾದ ಅವನಿ ಎಸ್. ಕುಮಾರ್, ಬಿ. ಸಂಕೇತ್ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಾಧಕರನ್ನು ಗೌರವಿಸಲಾಯಿತು. ಪೆರೇಡ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಎನ್ಸಿಸಿ ನೇವಿ ಸೀನಿಯರ್ ತಂಡಕ್ಕೆ ಪ್ರಥಮ ಹಾಗೂ ಎನ್ಸಿಸಿ ಏರ್ವಿಂಗ್ ತಂಡಕ್ಕೆ ದ್ವಿತೀಯ ಬಹುಮಾನ ನೀಡಲಾಯಿತು. ಪೆರೇಡ್ ನಲ್ಲಿ 20 ವಿವಿಧ ತಂಡಗಳು ಹಾಗೂ 2 ಪೊಲೀಸ್ ವಾದ್ಯ ವೃಂದ ತಂಡಗಳು ಭಾಗವಹಿಸಿದ್ದವು.
ಕಾರ್ಯಕ್ರಮದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಉಪ ಮೇಯರ್ ಅಮಿತಕಲಾ, ಶಾಸಕರಾದ ಎನ್.ಯೋಗೀಶ್ ಭಟ್, ಯು.ಟಿ.ಖಾದರ್, ವಿಧಾನಪರಿಷತ್ ಸದಸ್ಯ ಮೋನಪ್ಪ ಭಂಡಾರಿ, ಜಿಲ್ಲಾ ಪಂಚಾಯತ್ ಅಧ್ಯಕ್ಷ ಕೊರಗಪ್ಪ ನಾಯ್ಕ, ಬ್ಯಾರಿ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್, ಮೀನುಗಾರಿಕಾ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಉಪಮೇಯರ್ ಅಮಿತ ಕಲಾ,ಕಸಾಪ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಪಶ್ಚಿಮ ವಲಯ ಐಜಿಪಿ ಪ್ರತಾಪ್ ರಡ್ಡಿ, ಜಿಲ್ಲಾಧಿಕಾರಿ ಎನ್. ಪ್ರಕಾಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೀಶ್ ಕರ್ಬಿಕರ್ ಮೊದಲಾದವರು ಉಪಸ್ಥಿತರಿದ್ದರು. ಇದೇ ಸಂದರ್ಭ ಮೈದಾನದಲ್ಲಿ ವಿಂಟೇಜ್ ಕಾರುಗಳ ಪ್ರದರ್ಶನವನ್ನು ಆಯೋಜಿಸಲಾಗಿತ್ತು.

ವಿಜೃಂಭಿಸಿದ `ಗಾನ- ನೃತ್ಯ ರಾಷ್ಟ್ರೀಯ ಭಾವೈಕ್ಯ ಸಂಗಮ'
ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆಯ ಮುತುವರ್ಜಿಯಿಂದ ನಗರದ ನೆಹರೂ ಮೈದಾನದಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಇಂದು ನಗರದ 23 ಶಾಲೆಗಳ 4,500 ರಷ್ಟು ವಿದ್ಯಾರ್ಥಿಗಳು ಗಾನ- ನೃತ್ಯದ ಮೂಲಕ ರಾಷ್ಟ್ರೀಯ ಭಾವೈಕ್ಯ ಸಂಗಮ ಆಕರ್ಷಣೀಯವಾಗಿ ಮೂಡಿಬಂತು.
ಜಿಲ್ಲಾ ಶಿಕ್ಷಣ ಇಲಾಖೆಯ ನೇತೃತ್ವದಲ್ಲಿ ಇದೇ ಪ್ರಥಮ ಬಾರಿಗೆ ನಗರದ ಬಹುತೇಕ ಶಾಲೆಗಳ ಭಾರೀ ಸಂಖ್ಯೆಯ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಗೆ ರಾಷ್ಟ್ರೀಯ ಭಾವೈಕ್ಯ ಸಂಗಮದಲ್ಲಿ ಅವಕಾಶ ಕಲ್ಪಿಸಲಾಗಿತ್ತು. ಶಿಕ್ಷಣ ಇಲಾಖೆಯ ಅಧಿಕಾರಿಗಳ ಮೇಲುಸ್ತುವಾರಿ ಹಾಗೂ ಶಾಲಾ ಶಿಕ್ಷಕರ ವಿಶೇಷ ಮಾರ್ಗದರ್ಶನ ಮತ್ತು ಮುತುವರ್ಜಿಯಲ್ಲಿ ವಿದ್ಯಾರ್ಥಿಗಳು ಅಚ್ಚುಕಟ್ಟಾಗಿ ತಮ್ಮ ಕಲಾ ಪ್ರತಿಭೆಯನ್ನು ಮೆರೆದರು.
ಸಾರೇ ಜಹಾಂ ಸೆ ಅಚ್ಚಾ..., ಜೈ ಭಾರತ ಜನ ನಿಯ ತನು ಜಾತೆ... ಪಾಪು ಲ್ಲಾರು ಪಿಲ್ಲ ಲ್ಲಾರು..., ಎಲೆ ಗಳು ನೂರಾರು ಭಾವದ..., ಜೋ ಲಾಲಿ...., ಕೂಡಿ ವಿಳಿ ಯಾಡು ಪಾಪ..., ಒಂದೇ ಒಂದೇ ನಾವೆ ಲ್ಲರೂ ಒಂದೇ..., ಹಮ್ ಹೋಂ ಗೇ ಕಾಮಿ ಯಾಬ್... ಮೊದ ಲಾದ ಹಾಡು ಗಳನ್ನು ಒಂದರ ಮೇಲೊಂ ದರಂತೆ ಧ್ವನಿ ಸುರು ಳಿಯ ಹಿನ್ನೆಲೆ ಯೊಂದಿಗೆ 2600 ರಷ್ಟು ವಿದ್ಯಾ ರ್ಥಿಗಳು ಗಾಯನ ಮಾಡಿ ದರೆ, ಆ ಹಾಡು ಗಳಿಗೆ ಲಯ ಬದ್ಧ ವಾಗಿ ವಿವಿಧ ಶಾಲೆ ಗಳ 2000 ಕ್ಕೂ ಅಧಿಕ ವಿದ್ಯಾರ್ಥಿ ಗಳು ಸರಳ ವಾದ ಉಡುಗೆ ತೊಡುಗೆ ಗಳೊಂ ದಿಗೆ ಹೆಜ್ಜೆ ಹಾಕಿ ಮನ ಸೆಳೆ ದರು.
ರಾಷ್ಟ್ರೀಯ ಭಾವೈಕ್ಯ ಸಂಗಮದಲ್ಲಿ ಪಾಲ್ಗೊಂಡ ವಿವಿಧ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ 5000ಕ್ಕೂ ಅಧಿಕ ಮಂದಿಗೆ ಬೆಳಗ್ಗಿನ ಉಪಹಾರವನ್ನು ಕಸಾಪ ಅಧ್ಯಕ್ಷ ಪ್ರದೀಪ್ ಕಲ್ಕೂರ ಅವರು ನೀಡಿ ಸಹಕರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರಿಂದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಾರ್ವಜನಿಕ ಕುಂದುಕೊರತೆಗಳ ನಿರ್ವಹಣಾ ವ್ಯವಸ್ಥೆ ಉದ್ಘಾಟನೆ


ಮಂಗಳೂರು, ಜನವರಿ. 26:- ರಾಜ್ಯ ಸರ್ಕಾರದ ಇನ್ನೊಂದು ಮಹತ್ವಾಕಾಂಕ್ಷಿ ಯೋಜನೆ ಸಾರ್ವಜನಿಕ ಕುಂದುಕೊರತೆಗಳ ನಿರ್ವಹಣಾ ವ್ಯವಸ್ಥೆಯನ್ನು ಜಿಲ್ಲಾಧಿಕಾರಿಗಳ ಕಚೇರಿಯ ಮೂರನೇ ಮಹಡಿಯಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವರಾದ ಸಿ ಟಿ ರವಿ ಅವರು ಉದ್ಘಾಟಿಸಿದರು. ಈ ವ್ಯವಸ್ಥೆ ಯಡಿ ನಾಗ ರಿಕರು ತಮ್ಮ ಅಹ ವಾಲು/ ಕುಂದು ಕೊರತೆ ಯನ್ನು ಇಂಟರ್ ನೆಟ್ ಮುಖೇನ ದಾಖಲಿ ಸಬಹು ದಲ್ಲದೆ, ದೂರಿನ ಬಗ್ಗೆ ವಿವಿಧ ಹಂತ ಗಳಲ್ಲಿ ಪರಿ ಶೀಲಿ ಸಬಹುದು.
 ದಾಖ ಲಿಸಿದ ದೂರುಗಳ ಶೀಘ್ರ ವಿಲೇವಾರಿ ಕೋರಿ ನೆನಪೋಲೆಗಳನ್ನು ಸಲ್ಲಿಸಬಹುದು. ಇಂಟರ್ ನೆಟ್ ನಲ್ಲಿ ಅರ್ಜಿ ದಾಖಲಾದ ಕೂಡಲೇ ಅರ್ಜಿಯನ್ನು ದೂರಿಗೆ ಸಂಬಂಧಿಸಿದ ಇಲಾಖೆಯ ಪ್ರಥಮ ಹಂತದ ಅಧಿಕಾರಿಗಳಿಗೆ ರವಾನಿಸುತ್ತಾರೆ.
ಮಾನಿಟರಿಂಗ್ ಮೇಜು: ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾನಿಟರಿಂಗ್ ಸೆಲ್ ಇರಲಿದೆ. ಈ ಸೆಲ್ ನಿಂದಲೇ ಇಂಟರ್ನೆಟ್ ಮೂಲಕ ಬಂದ ಕುಂದುಕೊರತೆಗಳ ಅರ್ಜಿಯನ್ನು ಸೂಕ್ತ ಕ್ರಮಕ್ಕಾಗಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಕುಂದುಕೊರತೆ/ಅಹವಾಲಿನ ಇತ್ಯರ್ಥಕ್ಕೆ ಗಮನಹರಿಸುವಂತೆ ಕ್ರಮವಹಿಸಲಾಗು ವುದು.

www.dk.nic.in £À°è public grievance ಲಿಂಕ್ ಗೆ ಹೋಗಬೇಕು ಅಥವಾ 
URL: http://stg3.kar.nic.in /pgrcdk


ಸಾರ್ವಜನಿಕ ಕುಂದುಕೊರತೆಗಳ ನಿರ್ವಹಣಾ ವ್ಯವಸ್ಥೆ:

ಸಾರ್ವಜನಿಕ ಕುಂದುಕೊರತೆಗಳ ನಿರ್ವಹಣಾ ವ್ಯವಸ್ಥೆಯು ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ವ್ಯವಸ್ಥೆಯನ್ವಯ ಸಾರ್ವಜನಿಕ ದೂರುಗಳಿಗೆ ಸಂಬಂಧಿಸಿ, ನಾಗರಿಕರು ತಮ್ಮ ದೂರುಗಳನ್ನು ಇಂಟರ್ ನೆಟ್ ಮೂಲಕ ನೇರವಾಗಿ ದಾಖಲಿಸಬಹುದು ಮತ್ತು ಅದರ ವಿಲೇವಾರಿ ಬಗ್ಗೆ ಸಂಬಂಧಿಸಿದ ಮಾಹಿತಿಯನ್ನು ಇಂಟರ್ ನೆಟ್ ಮೂಲಕವೇ ಪಡೆಯಲು ಅವಕಾಶ ಕಲ್ಪಿಸಲಾಗಿದೆ.
ನಾಗರಿಕರು ಈ ವ್ಯವಸ್ಥೆಯಿಂದ ಅವರ ಅಹವಾಲು/ ಕುಂದು ಕೊರತೆಗಳನ್ನು ಇಂಟರ್ ನೆಟ್ ಉಪಯೋಗಿಸುವ ಮೂಲಕ ದಾಖಲಿಸಬಹುದು. ಅದರ ವಿವಿಧ ಹಂತಗಳನ್ನು ಪರಿಶೀಲಿಸಬಹುದು ಮತ್ತು ಈಗಾಗಲೇ ದಾಖಲಿಸಿರುವ ಕುಂದು ಕೊರತೆಗಳ ಶೀಘ್ರ ವಿಲೇವಾರಿ ಕೋರಿ ನೆನಪೋಲೆಗಳನ್ನು ಸಲ್ಲಿಸಲೂ ಬಹುದು.
ಒಂದು ಕುಂದು ಕೊರತೆ ಅರ್ಜಿಯು ಕಂಪ್ಯೂಟರ್ ನಲ್ಲಿ ದಾಖಲಾದ ಕೂಡಲೇ ಅವು ವಿವಿಧ ಹಂತಗಳಲ್ಲಿ ಕಾರ್ಯಾಚರಿಸಲು ಆರಂಭಿಸುವುದು. ಅರ್ಜಿ ದಾಖಲಾದ ಕೂಡಲೇ ಅದನ್ನು ದೂರಿಗೆ ಸಂಬಂಧಿಸಿದ ಇಲಾಖೆಯ ಪ್ರಥಮ ಹಂತದ ಅಧಿಕಾರಿಗಳಿಗೆ ರವಾನಿಸಲಾಗುವುದು. ಸದರಿ ಅರ್ಜಿಯು ಅದೇ ಕಛೇರಿಯಲ್ಲಿ ಇತ್ಯರ್ಥಗೊಳ್ಳಬಹುದು ಅಥವಾ ಮುಂದಿನ ಕ್ರಮಕ್ಕಾಗಿ ಅಧೀನ ಕಛೇರಿಗೆ ರವಾನೆ ಆಗಬಹುದು. ಅರ್ಜಿಯ ವಿಲೇವಾರಿಯ ವಿವಿಧ ಹಂತದ ಮಾಹಿತಿಯು ಅರ್ಜಿದಾರರಿಗೆ ವೆಬ್ ಸೈಟ್ ನಲ್ಲಿ ದೊರೆಯುವುದು.

ಸಾರ್ವಜನಿಕ ಕುಂದು ಕೊರತೆಗಳ ನಿರ್ವಹಣಾ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ಈ ಕೆಳಗಿನ ಸೌಲಭ್ಯಗಳನ್ನು ಒದಗಿಸಲಾಗಿದೆ.
  1. ಕುಂದು ಕೊರತೆಗಳನ್ನು ದಾಖಲಿಸುವುದು :-
                        ನಾಗರಿಕರು Lodge Grievance ನ್ನು ಕ್ಲಿಕ್ ಮಾಡಿ ತಮ್ಮ ಕುಂದುಕೊರತೆಗೆ ಸಂಬಂಧಿಸಿದ ಎಲ್ಲಾ ವಿವರಗಳನ್ನು ದಾಖಲಿಸಬಹುದು. ಅರ್ಜಿ ಸಲ್ಲಿಸಿದ ಕೂಡಲೇ ಅರ್ಜಿದಾರರಿಗೆ ಅರ್ಜಿ ದಾಖಲಿಸಿದ ಬಗ್ಗೆ ರಿಜಿಸ್ಟ್ರೇಶನ್ (ನೋಂದಣಿ ಸಂಖ್ಯೆ) ಸಂಖ್ಯೆಯು ನೀಡಲ್ಪಡುತ್ತದೆ ಮತ್ತು ಈ ಕ್ರಮಾಂಕವನ್ನು ಮುಂದಿನ ತಮ್ಮ ವ್ಯವಹರಣೆ ವೇಳೆ ಬಳಸಬಹುದು.

  1. ಹಿಂದೆ ಸಲ್ಲಿಸಿದ ಕುಂದು ಕೊರತೆ ಅರ್ಜಿ ಬಗ್ಗೆ ನೆನಪೋಲೆ/ಸ್ಪಷ್ಟೀಕರಣ :-
                        ಈ ಲಿಂಕ್ ಅನ್ನು ಬಳಸಿ ನಾಗರಿಕರು ತಮ್ಮ ಅನಿಸಿಕೆಗಳನ್ನು ಮತ್ತು ಹಿಂದೆ ಸಲ್ಲಿಸಿದ ಕುಂದು ಕೊರತೆ ಅರ್ಜಿ ಬಗ್ಗೆ ಸ್ಪಷ್ಟೀಕರಣಗಳನ್ನು ಕೇಳಬಹುದು.

  1. ಕುಂದು ಕೊರತೆಗಳ ಮಾಹಿತಿ:
                        ಈ ಲಿಂಕ್ ಅನ್ನು ಬಳಸುವ ಮೂಲಕ ಅರ್ಜಿದಾರನು ಪ್ರಕೃತ ತನ್ನ ಅರ್ಜಿಯು ಯಾವ ಹಂತದಲ್ಲಿದೆ ಎಂಬುದನ್ನು ತನ್ನ ಅರ್ಜಿ ನೋಂದಣಿ ಸಂಖ್ಯೆ ದಾಖಲಿಸುವ ಮೂಲಕ ಅರಿತುಕೊಳ್ಳಬಹುದು.

            ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾರ್ವಜನಿಕ ಕುಂದುಕೊರತೆ ಅರ್ಜಿಗಳ ಉಸ್ತುವಾರಿಯನ್ನು ನಿರ್ವಹಿಸಲು ಈ ಕೆಳಗಿನ ವ್ಯವಸ್ಥೆ ಇರುತ್ತದೆ.
ಮಾನಿಟರಿಂಗ್ ಮೇಜು :-
ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಮಾನಿಟರಿಂಗ್ ಸೆಲ್ ಇರುವುದು. ಸೆಲ್ ನಲ್ಲಿ ಇಂಟರ್ ನೆಟ್ ಮೂಲಕ ಬಂದ ಕುಂದು ಕೊರತೆಗಳ ಅರ್ಜಿಗಳನ್ನು ಸೂಕ್ತ ಕ್ರಮಕ್ಕಾಗಿ ಸಂಬಂಧಿಸಿದ ಇಲಾಖೆಗಳಿಗೆ ರವಾನಿಸಲಾಗುವುದು. ಈ ರೀತಿ ರವಾನಿಸಿದ ಅರ್ಜಿಗಳ ಇತ್ಯರ್ಥ ಮತ್ತು ನಾಗರಿಕರಿಂದ ಬಂದ ಅರ್ಜಿಗಳ ಪೈಕಿ ಇತ್ಯರ್ಥವಾಗದೆ ಬಾಕಿ ಇರುವ ಎಲ್ಲಾ ಹಂತಗಳನ್ನು ಪರಿಶೀಲಿಸಲಾಗುವುದು ಹಾಗೂ ಇದರ ಮೂಲಕ ಕಾಲ ಕಾಲಕ್ಕೆ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಕುಂದು ಕೊರತೆ/ಅಹವಾಲಿನ ಇತ್ಯರ್ಥಕ್ಕೆ ಗಮನಹರಿಸುವಂತೆ ಕ್ರಮವಹಿಸಲಾಗುವುದು.


ಅಥವಾ
ಜಿಲ್ಲಾ ವೆಬ್ ಸೈಟ್ www.dk.nic.in ನಲ್ಲಿ  Public Grievance 


 

Friday, January 25, 2013

'ಯಶಸ್ವಿ ಪ್ರಜಾಪ್ರಭುತ್ವಕ್ಕೆ ಮತದಾನದ ಹಕ್ಕನ್ನು ಬಳಸಿ'

ಮಂಗಳೂರು, ಜನವರಿ.25:- ಯಶಸ್ವಿ ಪ್ರಜಾಪ್ರಭುತ್ವ ವ್ಯವಸ್ಥೆಗೆ ಒಂದೊಂದು ಮತವೂ ಮಹತ್ವ. ಮತದಾನದ ಹಕ್ಕನ್ನು ಹೊಂದಿರುವ ಪ್ರತಿಯೊಬ್ಬನ್ನು ತನ್ನ ಹಕ್ಕನ್ನು ಚಲಾಯಿಸುವ ಮೂಲಕ ಸುಭದ್ರ ಪ್ರಜಾಪ್ರಭುತ್ವ ವ್ಯವಸ್ಥೆಗೆ ತನ್ನ ಕೊಡುಗೆ ನೀಡಬೇಕೆಂದು  ನಿಟ್ಟೆ ವಿಶ್ವವಿದ್ಯಾನಿಲಯದ ಸಹ ಕುಲಾಧಿಪತಿ ಡಾ. ಶಾಂತಾರಾಮ ಶೆಟ್ಟಿ ಹೇಳಿದ್ದಾರೆ.
ರಾಷ್ಟ್ರೀಯ ಮತ ದಾರ ರರ ದಿನಾ ಚರಣೆ ಯಂಗ ವಾಗಿ ನಗ ರದ ಪುರ ಭವನ ದಲ್ಲಿ ಜಿಲ್ಲಾ ಡಳಿತ ಆಯೋ ಜಿಸಿದ ಕಾರ್ಯ ಕ್ರಮ ಉದ್ಘಾ ಟಿಸಿ ಅವರು ಮಾತ ನಾಡು ತ್ತಿದ್ದರು.
40 ಕೋಟಿ ಯುವ ಮತ ದಾರರು ನಮ್ಮ ದೇಶದ ಶಕ್ತಿ ಯಾಗಿದ್ದು, ಎಲ್ಲ ಯುವ ಕರು ತಮ್ಮ ಹಕ್ಕನ್ನು ಚಲಾ ಯಿಸಿ ದರೆ ವ್ಯವಸ್ಥೆ ಯಲ್ಲಿ ಸಕಾ ರಾತ್ಮಕ ಬದ ಲಾವಣೆ ಸಾಧ್ಯ ವಿದೆ ಎಂದ ಅವರು, ದೇಶದಲ್ಲಿ ಶೇ. 30ರಷ್ಟು ಬಡತನ, ಶೇ. 30ರಷ್ಟು ಅನಕ್ಷರತೆ, ಶೇ. 25ರಷ್ಟು ಜನರು ಮೂಲಭೂತ ಸೌಕರ್ಯ ಕೊರತೆಯನ್ನು ಎದುರಿಸುತ್ತಿದ್ದಾರೆ. ದೇಶದ ಜನ ಸಂಖ್ಯೆ ಯಲ್ಲಿ ಒಟ್ಟು 76 ಕೋಟಿ ಮತ ದಾರ ರಿದ್ದಾರೆ. ಇಂತಹ ಸಂದ ರ್ಭದಲ್ಲಿ ದೇಶ ವನ್ನು ಅಭಿ ವೃದ್ಧಿ ಯತ್ತ ಮುನ್ನ ಡೆಸುವ ಉತ್ತಮ ರಾಜ ಕೀಯ ನಾಯ ಕತ್ವದ ಅಗತ್ಯ ವಿದೆ. ಮತ ದಾನದ ಮಹತ್ವ ವನ್ನು ಅರಿತು ದೇಶಕ್ಕೆ ಸಮರ್ಥ ಮುಂದಾ ಳತ್ವ ನೀಡಬಲ್ಲ ನಾಯಕನನ್ನು ಆಯ್ಕೆ ಮಾಡುವ ಹೊಣೆ  ನಮ್ಮೆಲ್ಲರದು ಎಂದು ಡಾ. ಶಾಂತಾರಾಮ ಶೆಟ್ಟಿ ಪ್ರತಿಪಾದಿಸಿದರು.
 ಮತದಾನದ ಮಹತ್ವದ ಕುರಿತಂತೆ ಪ್ರಧಾನ ಭಾಷಣ ಮಾಡಿದ ಮಂಗಳಗಂಗೋತ್ರಿಯ ರಾಜ್ಯಶಾಸ್ತ್ರ ಪ್ರೊ. ಪಿ.ಎಲ್. ಧರ್ಮ ಅವರು, ಜಾಗೃತ ಜನರಿಂದ ಉತ್ತಮ ಪ್ರಜಾಪ್ರಭುತ್ವ. ಪ್ರಜಾಪ್ರಭುತ್ವದ ಬೆಳವಣಿಗೆಗೆ ಮತದಾನದಲ್ಲಿ ಸಕ್ರಿಯ ಭಾಗವಹಿಸುವಿಕೆಯ ಅಗತ್ಯವಿದೆ ಎಂದರು. ದೇಶದಲ್ಲಿ ಯುವಜನತೆ ಮತದಾನದಿಂದ ದೂರ ಇರುವುದು ಆತಂಕಕಾರಿ  ಸಂಗತಿ ಎಂದು ಹೇಳಿದರು.
ಮತದಾನದಿಂದ ಸಾಮಾಜಿಕ ಕ್ರಾಂತಿ ಸಾಧ್ಯ; ಸಮುದಾಯ ಅಭಿವೃದ್ಧಿ, ಸಹಬಾಳ್ವೆ ರಾಜಕೀಯ ಶಿಕ್ಷಣದಿಂದ ಸಾಧ್ಯ ಎಂಬುದನ್ನು ಅರಿತುಕೊಳ್ಳಬೇಕು ಎಂದು ಪಿ.ಎಲ್. ಧರ್ಮ ತಿಳಿ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಎನ್. ಪ್ರಕಾಶ್, ಹಿಂದಿನ ವರ್ಷಗಳಿಗೆ ಹೋಲಿಸಿದರೆ ಪ್ರಸ್ತುತ ಮತದಾನದ ಮಾಡುವವರ ಸಂಖ್ಯೆ ಹೆಚ್ಚುತ್ತಿರುವುದು ಸಂತಸದ ಸಂಗತಿ ಎಂದರು.
ಹಾಗಿ ದ್ದರೂ ಪ್ರಸ್ತುತ ಶೇ. 60ರಿಂದ 65ರಷ್ಟು ಪ್ರಮಾ ಣದಲ್ಲಿ ಮಾತ್ರವೇ ಮತ ದಾನ ಆಗು ತ್ತಿದ್ದು, ಇದ ರಿಂದ ಪ್ರಜಾ ಪ್ರಭುತ್ವ ವ್ಯ ವಸ್ಥೆಗೆ ತೊಡ ಕಾಗು ತ್ತಿದೆ. ಈ ಬಗ್ಗೆ ಯುವ ಜನತೆ ಜಾಗೃ ತರಾಗಿ ಮತ ದಾನದ ಪ್ರಾಮು ಖ್ಯತೆ ಯನ್ನು ತಿಳಿದು ಕೊಂಡು ಇತರ ರಲ್ಲಿ ಅರಿವು ಮೂಡಿ ಸುವ ಕೆಲಸ ಮಾಡ ಬೇಕೆಂದು ಜಿಲ್ಲಾ ಧಿಕಾರಿ ನುಡಿ ದರು.
ಕಾರ್ಯ ಕ್ರಮದಲ್ಲಿ ಸಾಂಕೇ ತಿಕ ವಾಗಿ ನೂತನ ವಾಗಿ ಹೆಸರು ನೊಂದಾ ಯಿಸಿದ 8 ಮತ ದಾರ ರಿಗೆ ಗುರು ತಿನ ಚೀಟಿ ಯನ್ನು ವಿತ ರಿಸ ಲಾಯಿತು. ಮತ ದಾರರ ದಿನಾ ಚರಣೆ ಅಂಗ ವಾಗಿ ಶಾಲಾ, ಕಾಲೇಜು ಗಳ ವಿದ್ಯಾರ್ಥಿ ಗಳಿಗೆ ವಿವಿಧ ಸ್ಪರ್ಧೆ ಗಳನ್ನು ಆಯೋ ಜಿಸ ಲಾಗಿದ್ದು, ಈ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನವನ್ನು ನೀಡಲಾಯಿತು. ಮತದಾನದ ಬಗ್ಗೆ ಮಹಾನಗರಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್ ಪ್ರತಿಜ್ಞಾ ವಿಧಿ ಬೋಧಿಸಿದರು.
ಅಪರ ಜಿಲ್ಲಾ ಧಿಕಾರಿ ದಯಾ ನಂದ್ ಸ್ವಾಗ ತಿಸಿ ಪ್ರಾಸ್ತಾ ವಿಕ ನುಡಿ ಗಳ ನ್ನಾಡಿದರು. ಮಂಗ ಳೂರು ವಿಭಾ ಗದ ಸಹಾ ಯಕ ಆಯುಕ್ತ ಎಂ.ವಿ. ವೆಂಕ ಟೇಶ್, ಜಿಲ್ಲಾ ಪಂಚಾ ಯತ್  ಉಪ ಕಾರ್ಯ ದರ್ಶಿ ಶಿವ ರಾಮೇ ಗೌಡ ಉಪ ಸ್ಥಿತ ರಿದ್ದರು. ಸಭಾ ಕಾರ್ಯ ಕ್ರಮಕ್ಕೆ ಮೊದಲು ವಿದ್ಯಾರ್ಥಿ ಗಳು, ಅಧಿ ಕಾರಿ ಗಳು ಹಾಗೂ ಶಿಕ್ಷಕ ರನ್ನೊ ಳಗೊಂಡು ಮಾನವ ಸರ ಪಳಿ ಕಾರ್ಯ ಕ್ರಮ ನಡೆಯಿತು. ವಿಜೇತ ತಂಡ ಗಳಿಂದ ಕಾರ್ಯ ಕ್ರಮವೂ ನೆರವೇರಿತು.

 

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ


ಮಂಗಳೂರು, ಜನವರಿ. 25;-ಐತಿಹಾಸಿಕ ನಗರ ವಿಜಾಪುರದಲ್ಲಿ 79 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಫೆಬ್ರವರಿ 9 ರಿಂದ 11 ನೇ ದಿನಾಂಕದವರೆಗೆ 258 ಎಕರೆ ವಿಸ್ತೀರ್ಣದ ಸೈನಿಕ ಶಾಲೆಯ ಆವರಣದಲ್ಲಿ ಏರ್ಪಡಿಸಲಾಗಿದೆ. ದಿನಾಂಕ 9 ರಂದು ಬೆಳಿಗ್ಗೆ 7.30 ಗಂಟೆಗೆ ರಾಷ್ಟ್ರಧ್ವಜವನ್ನು ಸ್ವಾಗತ ಸಮಿತಿಯ ಅಧ್ಯಕ್ಷರಾದ  ಎಸ್.ಕೆ.ಬೆಳ್ಳುಬ್ಬಿಯವರು,ಪರಿಷತ್ ಧ್ವಜವನ್ನುಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ  ಪುಂಡಲೀಕ ಹಾಲಂಬಿಯವರು ನೆರವೇರಿಸುವರು.ನಂತರ 9 ಗಂಟೆಗೆ ನಗರದ ಅಂಬೇಡ್ಕರ್ ಕ್ರೀಡಾಂಗಣದಿಂದ ಸಮ್ಮೇಳನಾಧ್ಯಕ್ಷರ ಮೆರವಣಿಗೆಯನ್ನು ಶಾಸಕ ಅಪ್ಪುಪಟ್ಟಣ ಶೆಟ್ಟಿ ಉದ್ಘಾಟಿಸುವರು. 11.30 ಗಂಟೆಗೆ ರಾಜ್ಯದ ಮುಖ್ಯಮಂತ್ರಿಗಳಾದ  ಜಗದೀಶ ಶೆಟ್ಟರ್ ಸಮ್ಮೆಳನದ ಉದ್ಘಾಟನೆ ನೆರವೇರಿಸುವರು.ಪೂಜ್ಯರಾದ ಸಿದ್ದೇಶ್ವರ ಸ್ವಾಮೀಜಿಯವರು ಶುಭ ನುಡಿ ನುಡಿಯಲಿದ್ದಾರೆ.
ಉದ್ಘಾಟನಾ ಸಮಾರಂಭದಲ್ಲಿ ನಿಕಟಪೂರ್ವ ಸಮ್ಮೇಳನಾಧ್ಯಕ್ಷರಾದ ಡಾ.ಸಿ.ಪಿ ಕೃಷ್ಣಕುಮಾರ್,ಸಚಿವರಾದ  ಗೋವಿಂದಕಾರಜೋಳ,ವಿರೋಧ ಪಕ್ಷದ ನಾಯಕರಾದ  ಸಿದ್ದರಾಮಯ್ಯ,ಸಂಸದರಾದ ರಮೇಶ್ ಜಿಗಜಿಣಗಿ,ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾದ  ಎಸ್.ಆರ್. ಪಾಟೀಲ್,ಜಿಲ್ಲೆಯ ಎಲ್ಲಾ ವಿಧಾನಸಭಾ ಸದಸ್ಯರು,ವಿಧಾನಪರಿಷತ್ ಸದಸ್ಯರು, ಎಲ್.ಭೈರಪ್ಪ ಅಧ್ಯಕ್ಷರು ರಾಜ್ಯ ನೌಕರರ ಸಂಘ  ಬಸವರಾಜು ಪ್ರಧಾನ ಕಾರ್ಯದರ್ಶಿ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಪಸ್ಥಿತರಿರುತ್ತಾರೆ. ಖ್ಯಾತ ಚಿಂತಕರಾದ ಡಾ ಬರಗೂರು ರಾಮಚಂದ್ರಪ್ಪನವರು ಪರಿಷತ್ತಿನ ಪುಸ್ತಕಗಳನ್ನು ಬಿಡುಗಡೆ ಮಾಡುತ್ತಾರೆ.
ಬಳಿಕ ವಿಚಾರ ಗೋಷ್ಟಿಗಳು ಸಂವಾದ ಕಾರ್ಯಕ್ರಮಗಳು ನಡೆಯಲಿವೆ.
ದಿನಾಂಕ 11-2-13 ರಂದು ಬೆಳಿಗ್ಗೆ ಎರಡು ಕವಿಗೋಷ್ಟಿ ನಡೆಯಲಿದ್ದು,11.30ಕ್ಕೆ ಸನ್ಮಾನ ಸಮಾರಂಭ,ಬಳಿಕ  79ನೇ ಸಮ್ಮೇಳನ ನೆನಪಿಗೆ 79 ಸಾಧಕರನ್ನು ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಇವರು ಸನ್ಮಾನಿಸಲಿದ್ದಾರೆ.ಸಂಜೆ 4.30 ಗಂಟೆಗೆ ಸಮಾರೋಪ ಸಮಾರಂಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ  ಎಚ್.ಡಿ.ಕುಮಾರಸ್ವಾಮಿಯವರು ಭಾಗವಹಿಸಲಿದ್ದಾರೆಂದು ಗೌರವ ಕಾರ್ಯದರ್ಶಿಗಳು ತಿಳಿಸಿರುತ್ತಾರೆ.