Friday, January 25, 2013

ಮಹಿಳಾ ಮಂಡಲಗಳು ಮಹಿಳೆಯರಲ್ಲಿ ಜಾಗೃತಿ ಮೂಡಿಸುತ್ತಿವೆ -ಎನ್.ಪ್ರಕಾಶ್

ಮಂಗಳೂರು, ಜನವರಿ. 25:-ಮಹಿಳೆ ಜಾಗೃತಳಾದಲ್ಲಿ ನಮ್ಮ ಆರ್ಥಿಕ ಸಬಲೀಕರಣವಾಗಲಿದೆ.ಮಹಿಳಾ ಮಂಡಲಗಳೂ ಮಹಿಳೆಯರಲ್ಲಿ ಜಾಗೃತಿ ಉಂಟುಮಾಡಿ ಅವರ ಸುಪ್ತ ಪ್ರತಿಭೆಗಳ ವಿಕಸನಕ್ಕೆ ಹಾಗೂ ಅವರ ಆರ್ಥಿಕಾಭಿವೃದ್ಧಿಗೆ ನೆರವಾಗುತ್ತಿವೆ ಎಂದು ದ.ಕ.ಜಿಲ್ಲಾಧಿಕಾರಿ  ಎನ್.ಪ್ರಕಾಶ್ ಅಭಿಪ್ರಾಯ ಪಟ್ಟಿದ್ದಾರೆ.
     ಅವರು ಗುರು ವಾರ ನೆಹರು ಯುವ ಕೇಂದ್ರ ಮಂಗ ಳೂರು ಹಾಗೂ ಮಂಗ ಳೂರು ತಾಲೂಕು ಮಹಿಳಾ ಮಂಡಳಿ ಗಳ ಒಕ್ಕೂಟ ಇವರ ಆಶ್ರಯ ದಲ್ಲಿ ಯುವ ಕೃತಿ ವಸ್ತು ಪ್ರದ ರ್ಶನ ಹಾಗೂ ಮಾರಾಟ ಮೇಳ ಮತ್ತು ಜಿಲ್ಲಾ ಯುವ ಮಂಡಳ ಪ್ರಶಸ್ತಿ ಪ್ರದಾನ ಮತ್ತು ಕ್ರೀಡಾ  ಸಾಮಾಗ್ರಿ ವಿತ ರಣಾ ಸಮಾ ರಂಭ ವನ್ನು ನಗರದ ಉರ್ವಾ ಸ್ಟೋರ್ಸ್ ಮಂಗಳೂರು ತಾಲೂಕು ಮಹಿಳಾ ಮಂಡಲಗಳ ಒಕ್ಕೂಟ ನೂತನ ಕಟ್ಟಡದಲ್ಲಿ ಉದ್ಘಾಟಿಸಿ ಮಾತನಾಡಿದರು.
ಬೆಳ್ತಂ ಗಡಿ ತಾಲೂಕಿನ ಮುಂಡಾಜೆ ಗ್ರಾಮದ ಯಂಗ್ ಚಾಲೆಂ ಜರ್ಸ್ ಸ್ಪೋರ್ಸ್ ಕ್ಲಬ್ ಗೆ 2011-12 ನೇ ಸಾಲಿನ ಜಿಲ್ಲಾ ಯುವ ಮಂಡಳ ಪ್ರಶಸ್ತಿ ಯನ್ನು ಹಾಗೂ ರೂ.10,000/-ಗಳ ಚೆಕ್ನ್ನು ಜಿಲ್ಲಾ ಧಿಕಾ ರಿಗಳು ಈ ಸಂದರ್ಭ ದಲ್ಲಿ ವಿತರಿ ಸಿದರು.ಇದೇ ಸಂದರ್ಭ ದಲ್ಲಿ 24 ಯುವಕ ಮಂಡಲ ಹಾಗೂ 6 ಮಹಿಳಾ ಮಂಡಲ ಗಳಿಗೆ ತಲಾ ರೂ.4000/-ದಂತೆ ಕ್ರೀಡಾ ಸಾಮಾಗ್ರಿ ಗಳನ್ನು ಸಹ ವಿತ ರಿಸಲಾ ಯಿತು.
ಮಂಗ ಳೂರು ತಾಲೂಕು ಮಹಿಳಾ ಮಂಡಲ ಗಳ ಒಕ್ಕೂ ಟದ ಅಧ್ಯಕ್ಷ ರಾದ ಶ್ರೀ ಮತಿ ವಿಜಯ ಲಕ್ಮಿ ಬಿ.ಶೆಟ್ಟಿ ಹಾಗೂ ಜಿಲ್ಲಾ ಯುವ ಸಮನ್ವ ಯಾಧಿ ಕಾರಿ ಸಿ.ಜೆ.ಎಫ್.ಡಿ' ಸೋಜ ಉಪ ಸ್ಥಿತ ರಿದ್ದರು. 28 ಕ್ಕೂ ಹೆಚ್ಚು ವಿವಿಧ ಬಗೆಯ ಮಳಿಗೆ ಗಳು ಇಲ್ಲಿ ತೆರೆ ಯಲ್ಪ ಟ್ಟಿವೆ.