Saturday, January 12, 2013

ವಿಶ್ವಭ್ರಾತೃತ್ವ ದಿನವಾಗಲಿ ವಿವೇಕಾನಂದರ ಜಯಂತಿ: ಸಿ ಟಿ ರವಿ

ಮಂಗಳೂರು, ಜನವರಿ.12: ದೇಶದೇಶಗಳ ನಡುವೆ ಸಂಘರ್ಷ ದೂರಾಗಿ ಪ್ರಪಂಚದೆಲ್ಲೆಡೆಗೆ ವಸುದೈವ ಕುಟುಂಬಕಂ ಸಂದೇಶ ಪಸರಿಸಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವರಾದ ಸಿ. ಟಿ.ರವಿ ಹೇಳಿದರು.                
     ಅವರಿಂದು ಮಂಗ ಳೂರಿ ನಲ್ಲಿ ಜಿಲ್ಲಾ ಡಳಿತ ಮತ್ತು ರಾಮ ಕೃಷ್ಣ ಮಠ ಸಂಯುಕ್ತ ವಾಗಿ ಆಯೋ ಜಿಸಿದ್ದ ಸ್ವಾಮಿ ವಿವೇಕಾ ನಂದರ 150ನೇ ಜನ್ಮ ದಿನೋತ್ಸವ ಅಂಗ ವಾಗಿ ಬೃಹತ್ ಯುವ ಸಮಾ ವೇಶ ಮತ್ತು ವಿವೇಕಾನಂದ ಸಂಸ್ಮೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡುತ್ತಿದ್ದರು.
  ಪ್ರಪಂ ಚಕ್ಕೆ ಅದ್ಭುತ ಸಂ ದೇಶ ನೀಡಿದ ಸ್ವಾಮಿ ವಿವೇಕಾ ನಂದರು, ಸಾಮಾ ಜಿಕ ಅಸ ಮಾನತೆ ನಿವಾರ ಣೆಗೆ ಕರೆ ನೀಡಿದ ಪ್ರಥ ಮರು. ಯುವ ಶಕ್ತಿಯಿಂದ ಬದ ಲಾವಣೆ ಸಾಧ್ಯ ಎಂಬು ದರಲ್ಲಿ ನಂಬುಗೆ ಇರಿಸಿ ದವರು. ಅವರು ಮತ್ತು ಅವರು ನೀಡಿದ ಸಂದೇ ಶಗಳು ಎಲ್ಲ ಕಾಲಕ್ಕೂ ಪ್ರೇರಣೆಯಾಗುವಂತಹವು. ಜಗತ್ತು ಇಂದು ಎದುರಿಸುತ್ತಿರುವ ಸಮಸ್ಯೆಗಳಿಗೆ ಅಂದೇ ಉತ್ತರ ನೀಡಿದವರು ಎಂದರು. ವಿವೇಕಾನಂದ ಜಯಂತಿಯು ಜಗದ ಜಾಗೃತಿಯ ದಿನವಾಗಲಿ. ನಮ್ಮ ಯುವಶಕ್ತಿಯಲ್ಲಿ ಸಂಚಲನ ಮೂಡಿಸಲಿ ಎಂದು ಹಾರೈಸಿದರು.
   ಇಂದಿನ ಕಾರ್ಯಕ್ರಮದಿಂದ ಹಿಂದಿರುಗಿ ಹೋಗುವಾಗ ಕನಿಷ್ಠ ನೂರು ವಿದ್ಯಾರ್ಥಿಗಳಿಗೆ ವಿವೇಕಾನಂದರು ಪ್ರೇರಣೆಯಾದರೆ ನಮ್ಮಲ್ಲಿ ಬದಲಾವಣೆ ಸಾಧ್ಯ ಎಂದು ನಿಟ್ಟೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ವಿನಯ್ ಹೆಗ್ಡೆ ಹೇಳಿದರು.
         ರಾಮ ಕೃಷ್ಣ ಮಠದ ಜಿತ ಕಾಮಾ ನಂದ ಸ್ವಾಮೀಜಿ ಅಧ್ಯ ಕ್ಷತೆ ವಹಿಸಿ ಎಲ್ಲ ರನ್ನೂ ಸ್ವಾಗ ತಿಸಿ ದರು. ವಿಧಾನ ಪರಿ ಷತ್ ಸದಸ್ಯ ಕ್ಯಾಪ್ಟನ್ ಗಣೇಶ್ ಕಾರ್ಣಿಕ್,  ಅಲ್ಪಸಂಖ್ಯಾತ ಅಭಿ ವೃದ್ಧಿ ನಿಗ ಮದ ಅಧ್ಯಕ್ಷ ರಾದ ಅನ್ವರ್ ಮಾಣಿ ಪ್ಪಾಡಿ, ಕರ್ನಾ ಟಕ ಬ್ಯಾಂಕಿನ ಚೇರ್ ಮ್ಯಾನ್ ಅನಂತ ಕೃಷ್ಣ, ಯುವ ವಿದ್ಯಾರ್ಥಿ ತೇಜಸ್ವಿ ಸೂರ್ಯ ಮಾತನಾಡಿದರು. ಸುಧೀರ್ ಪ್ರಾಸ್ತಾವಿಕ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ಮೋನಪ್ಪ ಭಂಡಾರಿ,ಜಿಲ್ಲಾಧಿಕಾರಿ ಎನ್ ಪ್ರಕಾಶ್, ಸಿಇಒ ಡಾ. ಕೆ. ಎನ್. ವಿಜಯಪ್ರಕಾಶ್ ವೇದಿಕೆಯಲ್ಲಿದ್ದರು.
 ಸಮಾ ರಂಭ ಕ್ಕೂ ಮುನ್ನ ನಗ ರದ ನೆಹರು ಮೈದಾನಿ ನಿಂದ ರಾಮ ಕೃಷ್ಣ ಮಠದ ವರೆಗೆ ಆಯೋ ಜಿಸ ಲಾಗಿದ್ದ ಬೃಹತ್ ಯುವ ಜಾಗೃತಿ ಜಾಥಾಕ್ಕೆ ನಿಟ್ಟೆ ಶಿಕ್ಷಣ ಸಂಸ್ಥೆ ಗಳ ಅಧ್ಯಕ್ಷ ರಾದ ವಿನಯ್ ಹೆಗ್ಡೆ, ಜಿಲ್ಲಾ ಉಸ್ತು ವಾರಿ ಸಚಿ ವರು ಹಾಗೂ ಉನ್ನತ ಶಿಕ್ಷಣ ಸಚಿವ ರಾದ ಸಿ. ಟಿ.ರವಿ, ಶಾಸಕ ರಾದ ಕೃಷ್ಣ ಜೆ ಪಾಲೇ ಮಾರ್ ಅವರು ಸ್ವಾಮಿ ವಿವೇಕಾ ನಂದರ ಭಾವ ಚಿತ್ರಕ್ಕೆ ಪುಷ್ಪಾ ರ್ಚನೆ ಮಾಡುವ ಮೂಲಕ ಚಾಲನೆ ನೀಡಿ ದರು. ವಿಧಾನ ಪರಿ ಷತ್ ಸದಸ್ಯ ರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಮೋನಪ್ಪ ಭಂ ಡಾರಿ, ಕರ್ನಾ ಟಕ ಮೀನು ಗಾರಿಕಾ ನಿಗ ಮದ ಅಧ್ಯಕ್ಷ ನಿತಿನ್ ಕುಮಾರ್, ಜಿಲ್ಲಾಧಿ ಕಾರಿ ಎನ್. ಪ್ರಕಾಶ್, ಜಿ.ಪಂ. ಸಿಇಓ ಡಾ. ವಿಜಯ ಪ್ರಕಾಶ್  ಅವರು ಈ ಸಂದ ರ್ಭದಲ್ಲಿ ಉಪ ಸ್ಥಿತ ರಿದ್ದರು.  ವಿವಿಧ ಶಾಲೆ ಗಳ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿ ನಿಯರು ಈ ಬೃಹತ್ ಜಾಥಾ ದಲ್ಲಿ ಪಾಲ್ಗೊಂಡಿದ್ದರು.