Thursday, January 17, 2013

ಸಕಾಲ- ಸ್ಪಂದಿಸಲು 080- 44554455: ಶಾಲಿನಿ ರಜನೀಶ್

ಮಂಗಳೂರು, ಜನವರಿ.17:- ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಸಕಾಲ ಕಾಯ್ದೆ ಸಮಗ್ರವಾಗಿ ಜಾರಿಗೊಂಡಿದ್ದು, ಅನುಷ್ಠಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಇತರರಿಗೆ ಮಾದರಿಯಾಗಿದೆ ಎಂದು ರಾಜ್ಯ ಸರಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಶಾಲಿನಿ ರಜನೀಶ್ ಹೇಳಿದರು.
ಅವರು ಬುಧ ವಾರ ಜಿಲ್ಲಾಧಿ ಕಾರಿ ಗಳ ಕಚೇರಿ ಯಲ್ಲಿ ಈ ಸಂ ಬಂಧ ಅಧಿ ಕಾರಿ ಗಳ ಸಭೆಯ ಪ್ರಗತಿ ಪರಿ ಶೀಲನಾ ನಂತರ ಮಾಧ್ಯಮ ದವ ರೊಂದಿಗೆ ಮಾತ ನಾಡುತ್ತಾ, ಸಕಾಲ ಅನು ಷ್ಠಾನದಿಂದ ಜನ ಸಾಮಾನ್ಯರ ಕೆಲಸ ಸುಲಭ ಸಾಧ್ಯ ವಾಗಿದ್ದು, ಕಾಯಿದೆಯ ಬಗ್ಗೆ ದೇಶ ವಿದೇಶ ಗಳಿಂದ ಮೆಚ್ಚುಗೆ ಲಭ್ಯವಾಗಿದೆ ಎಂದರು.
ಕಾಯಿದೆ ಜಾರಿಯಲ್ಲಿ ರಾಮನಗರ, ಉತ್ತರಕನ್ನಡ ಜಿಲ್ಲೆಗಳ ನಂತರದ ಸ್ಥಾನ ದಕ್ಷಿಣ ಕನ್ನಡಕ್ಕಾದರೂ ಅದು ಕೆಲವು ತಾಂತ್ರಿಕ ಸಮಸ್ಯೆಗಳಿಂದ; ಅನುಷ್ಠಾನದಲ್ಲಿ ದಕ್ಷಿಣ ಕನ್ನಡ ಉತ್ತಮ ಸಾಧನೆ ದಾಖಲಿಸಿದೆ ಎಂದರು.
ಈ ಜಿಲ್ಲೆ ಯಲ್ಲಿ ಕಳೆದ ಐದು ತಿಂಗ ಳಲ್ಲಿ ಶೇ. 99.70 ಅರ್ಜಿ ಗಳನ್ನು ನಿಗದಿತ ಅವಧಿ ಯೊಳಗೆ ವಿಲೇ ಮಾಡ ಲಾಗಿದೆ. ಒಟ್ಟು 265 ಸೇವೆಗಳು ಈ ಕಾಯಿದೆ ಯಡಿ ಯಿದೆ. ಕಾಯಿದೆ ಸಮ ರ್ಪಕ ಅನು ಷ್ಠಾನಕ್ಕೆ ಪೂರಕ ವ್ಯವಸ್ಥೆ ಗಳನ್ನು ಮಾಡ ಲಾಗಿದೆ ಎಂದು ಶಾಲಿನಿ ರಜನೀಶ್ ಹೇಳಿದರು.
ಇದೇ 26 ರಂದು ನಡೆ ಯುವ ಗಣ ರಾಜ್ಯೋ ತ್ಸವ ಸಂದರ್ಭ ಧಲ್ಲಿ ಸಕಾಲ ಯೋಜನೆ ಯಡಿ ಅತ್ಯು ತ್ತಮ ಸೇವೆ ಸಲ್ಲಿ ಸಿದ ಇಲಾಖೆ ಗಳನ್ನು ಗುರು ತಿಸಿ ಮೂರು ಬಹು ಮಾನ ಗಳನ್ನು ನೀಡ ಲಾಗು ವುದು ಎಂದ ಅವರು, ಆಡಳಿತ ಸುಧಾ ರಣೆಗೆ ಹೆಚ್ಚಿನ ಮಹತ್ವ ನೀಡ ಲಾಗಿದ್ದು, ಸಕಾಲಕ್ಕೆ ಸಂಬಂ ಧಿಸಿ ದಂತೆ 080-44554455 ದೂರ ವಾಣಿಗೆ ಕರೆ ಮಾಡಿ ಎಂದರು.
ಗ್ರಾಮೀಣ ಜನರಿಗೂ ನೆರವಾಗುವಂತೆ ಶೀಘ್ರವೇ ಎಲ್ಲ ಸೇವೆಗಳನ್ನು ಆನ್ ಲೈನ್ ಗೆ ಅಳವಡಿಸುವ ಯೋಜನೆ ಪ್ರಗತಿಯಲ್ಲಿದೆ. ಈ ಕಾಯಿದೆಯಡಿ ಇದುವರೆಗೆ 1.59 ಕೋಟಿ ಅರ್ಜಿಗಳನ್ನು ಸ್ವೀಕರಿಸಲಾಗಿದ್ದು, 1.56 ಕೋಟಿ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದೆ ಎಂದರು. ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ ಅವರು ಉಪಸ್ಥಿತರಿದ್ದರು.