Sunday, June 30, 2013

ಮಿನಿ ಬಸ್ ಗೂಡ್ಸ್ ರೈಲು ಢಿಕ್ಕಿ: ಜಿಲ್ಲಾಧಿಕಾರಿ ಭೇಟಿ

ಮಂಗಳೂರು, ಜೂನ್,30 : ರಾಷ್ಟ್ರೀಯ ಹೆದ್ದಾರಿ ಅಡ್ಯಾರು ಸಮೀಪ ನೀರು ಮಾರ್ಗಕ್ಕೆ ತೆರ ಳುವ ಒಳ ರಸ್ತೆಯ ಕೆಮ್ಮಂ ಜೂರು ಎಂಬ ಲ್ಲಿ ರೈಲ್ವೇ ಕ್ರಾಸಿಂ ಗ್ ನಲ್ಲಿ  ಮಿನಿ ಬಸ್ ಮತ್ತು ಗೂಡ್ಸ್  ರೈಲು ಡಿಕ್ಕಿ ಯಾಗಿ ದುರಂತ ಸಂಭವಿ ಸಿದ್ದು, ದುರ್ಘ ಟನಾ ಸ್ಥಳಕ್ಕೆ ಮತ್ತು ಅಪ ಘಾತ ಕ್ಕೀಡಾ ದವರನ್ನು  ಸೇರಿ ಸಿದ ಫಾದರ್ ಮುಲ್ಲರ್ಸ್ ಆಸ್ಪ ತ್ರೆಗೆ ದಕ್ಷಿಣ ಕನ್ನಡ ಜಿಲ್ಲಾ ಧಿಕಾರಿ  ಎನ್ ಪ್ರಕಾಶ್ ಅವರು ಭೇಟಿ ಮಾಡಿ ಕೈ ಗೊಂಡ ಕ್ರಮ ಗಳನ್ನು ಪರಿ ಶೀಲಿ ಸಿದರು.

Saturday, June 29, 2013

ದೇಶದ ಅಭಿವೃದ್ಧಿಗೆ ಸಂಖ್ಯಾ ಶಾಸ್ತ್ರದ ಕೊಡುಗೆ ಅಪಾರ: ಎಂ ಆರ್ ವಾಸುದೇವ್

ಮಂಗಳೂರು, ಜೂನ್. 29: ನಮ್ಮ ಪ್ರಜಾಪ್ರಭುತ್ವ ದೇಶದ ಸಮಗ್ರ ಅಭಿವೃದ್ಧಿ ಯೋಜನೆಯ ಯಶಸ್ವಿಗೆ ಸಂಖ್ಯಾ ಶಾಸ್ತ್ರದ ಕೊಡುಗೆ ಅಪಾರ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ನಿವೃತ್ತ ನಿರ್ದೇಶಕರಾದ ಎಂ ಆರ್ ವಾಸುದೇವ್ ಅವರು ಹೇಳಿದರು.
           ಅವರಿಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ಮಿನಿಹಾಲ್ ನಲ್ಲಿ ಆಯೋಜಿಸಲಾದ ಸಂಖ್ಯಾಶಾಸ್ತ್ರದ ಪಿತಾಮಹ ಮಹಾಲನೊಬಿಸ್ ಅವರ 120ನೇ ಜನ್ಮಜಯಂತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡುತ್ತಿದ್ದರು.
ಡಾ ಸರ್ ಎಂ ವಿಶ್ವೇಶ್ವರಯ್ಯನವರು ಸಿವಿಲ್ ಇಂಜಿನಿಯರಿಂಗ್ ವೃತ್ತಿಗೆ ತಂದುಕೊಟ್ಟ ಗೌರವವನ್ನು ಪ್ರೊ. ಪ್ರಶಾಂತ್ಚಂದ್ರ ಮಹಲನೊಬಿಸ್ ಅವರು ಸಂಖ್ಯಾಶಾಸ್ತ್ರಕ್ಕೆ ತಂದುಕೊಟ್ಟಿದ್ದು ನಮ್ಮ ಪಂಚವಾರ್ಷಿಕ ಯೋಜನೆಗಳಲ್ಲಿ ಸಂಖ್ಯಾಶಾಸ್ತ್ರದ ಕೊಡುಗೆ ಅನನ್ಯ ಎಂದು ಅವರು ಹೇಳಿದರು. ಅಭಿವೃದ್ಧಿಯನ್ನು ರೂಪಿಸಲು ಮೂಲ ಅಂಕಿ ಸಂಖ್ಯೆಗಳು. ಸಮಗ್ರ ಹಾಗೂ ಅಧಿಕೃತ ಡಾಟಾ ಸಂಗ್ರಹದಿಂದ ಉತ್ತಮ ಅಭಿವೃದ್ಧಿಯ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ ಎಂದ ಅವರು,  ಈ ಕ್ಷೇತ್ರದಲ್ಲಿ ತಮ್ಮ ಅನುಭವವನ್ನು ಸಭೆಯಲ್ಲಿ ಹಂಚಿಕೊಂಡರು. ದೇಶದ ಸಂಪನ್ಮೂಲಗಳನ್ನು ಉಪಯೋಗಿಸಿಕೊಂಡು ಹೇಗೆ ಅಭಿವೃದ್ಧಿ ಸಾಧಿಸಬಹುದು; ಅದು ಕೈಗಾರಿಕೆಗಳ ಮೂಲಕ, ಕೃಷಿಯ ಮೂಲಕ, ಉದ್ಯೋಗ ಸೃಷ್ಟಿಯ ಮೂಲಕ ಇದರಿಂದ ದೇಶದ ಆಥರ್ಿಕ ಅಭಿವೃದ್ಧಿಗೆ ದೊರೆಯಬಹುದಾದ ಕೊಡುಗೆಗಳನ್ನು ಸಂಖ್ಯಾಶಾಸ್ತ್ರದ ಮೂಲಕ ಮಹಲನೊಬಿಸ್ ಅನುಷ್ಠಾನಕ್ಕೆ ತಂದರು. ಯೋಜನೆ, ಸಂಘಟನೆ ಮತ್ತು ಅನುಷ್ಠಾನಕ್ಕೆ ಅಂಕಿ ಅಂಶಗಳ ಇಲಾಖೆ ಅಗತ್ಯ ಎಂದರು.
ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಸಂಖ್ಯಾಶಾಸ್ತ್ರದ ಪ್ರಾಮ್ಯುಖತೆ ಹಾಗೂ ಪ್ರಾಥಮಿಕ ಅಂಕಿಅಂಶಗಳ ಅಗತ್ಯ ಹಾಗೂ ಇಲ್ಲಿ ಮಾಡಲ್ಪಡುವ ಸಣ್ಣ ತಪ್ಪುಗಳಿಂದ ಆಗುವ ಅನಾಹುತಗಳ ಬಗ್ಗೆಯೂ ಅವರು ಮಾತನಾಡಿದರು. ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸದ ಅವಧಿಯಲ್ಲಿ ಗಣಿತ ಮತ್ತು ಭೌತಶಾಸ್ತ್ರ ಅಧ್ಯಯನಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಿದರೂ ಸಂಖ್ಯಾಶಾಸ್ತ್ರದ ಅಧ್ಯಯನ, ಅಗತ್ಯ ಹಾಗೂ ಅವಕಾಶಗಳಿಗೆ ಮಹಲನೊಬಿಸ್ ಅವರು ವಿಶೇಷ ಸ್ಥಾನಮಾನ ರೂಪಿಸಿದ್ದು ಅದಕ್ಕಾಗಿ ಅವರಿಗೆ ನಾವು ಕೃತಜ್ಞರಾಗಿರಬೇಕು ಎಂದು ಅವರು ನುಡಿದರು. ದೇಶದಲ್ಲಿ ಇಂಡಿಯನ್ ಸ್ಟಾಟಿಸ್ಟಿಕಲ್ ಸವರ್ಿಸ್ ಆರಂಭಿಸಲು ಪ್ರೇರಪಣೆ ಮಹಲನೊಬಿಸ್ ಎಂದು ಅವರು ನುಡಿದರು.
ಮುಖ್ಯ ಅತಿಥಿಗಳಾಗಿದ್ದ ರಾಷ್ಟ್ರೀಯ ಮಾದರಿ ಸಮೀಕ್ಷೆಯ ಮುಖ್ಯಸ್ಥರಾದ  ಪಿ. ಆನಂದ ಅವರು ಸಂಖ್ಯಾಶಾಸ್ತ್ರಕ್ಕೆ ಸಂಬಂಧ ಪಟ್ಟಂತೆ ತಮ್ಮ ಇಲಾಖೆಯ ಕಾರ್ಯವೈಖರಿಗಳನ್ನು ಪರಿಚಯಿಸಿದರು. ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿ ಮಹಮ್ಮದ್ ನಜೀರ್ ಅಧ್ಯಕ್ಷತೆ ವಹಿಸಿದ್ದರು. ಟಿ ಜೆ ತಾಕತ್ ರಾವ್ ಮುಖ್ಯ ಅತಿಥಿಗಳಾಗಿದ್ದರು. ಶ್ರೀಮತಿ ಸಂಧ್ಯಾ, ಯೋಜನೆ ಮತ್ತು ಮೌಲ್ಯಮಾಪನ ಅನುಷ್ಠಾನಾಧಿಕಾರಿ ನಾಗೇಂದ್ರ ಅವರು ಸಮಾರಂಭದಲ್ಲಿದ್ದರು. ಅಂಕಿ ಸಂಖ್ಯೆ ಇಲಾಖೆ ಇತರೆ ಅಧಿಕಾರಿಗಳು, ಸಿಬ್ಬಂದಿಗಳು, ಉಪನ್ಯಾಸಕರು ವಿದ್ಯಾರ್ಥಿಗಳು ಸಮಾರಂಭದಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ಉಜಿರೆ ಎಸ್ ಡಿ ಎಂ ನ ವಿದ್ಯಾರ್ಥಿ ಪ್ರಥಮ ಬಹುಮಾನ ಪಡೆದರೆ, ಬೆಸೆಂಟ್ ಮತ್ತು ಉಜಿರೆಯ ವಿದ್ಯಾರ್ಥಿಗಳು ದ್ವಿತೀಯ ಬಹುಮಾನವನ್ನು ಹಂಚಿಕೊಂಡರು. ತೃತೀಯ ಬಹುಮಾನವನ್ನು ಸಂತ ಅಲೋಷಿಯಸ್ ಕಾಲೇಜಿನ ವಿದ್ಯಾರ್ಥಿನಿ ತನ್ನದಾಗಿಸಿಕೊಂಡಳು. ಪ್ರದೀಪ್ ಡಿ ಸೋಜಾ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸಹಾಯಕ ಸಾಂಖ್ಯಿಕ ಅಧಿಕಾರಿ ಗಣಪತಿ ಭಟ್ ವಂದಿಸಿದರು. 

Friday, June 28, 2013

ಪಾರಂಪರಿಕ ಹಣ್ಣುಗಳನ್ನು ಬೆಳೆಸಿ ಉಳಿಸಿ- ಡಾ ಕೆ ಎನ್ ವಿಜಯಪ್ರಕಾಶ್

ಮಂಗಳೂರು, ಜೂನ್. 28: ವಾಣಿಜ್ಯ ಹಣ್ಣುಗಳ ಅಬ್ಬರದ ಪ್ರಚಾರದ ಮುಂದೆ ನಮ್ಮ ಹಿತ್ತಲಗಿಡದ ಪೇರಳೆ ,ನೇರಳೆ, ಹಲಸು ಇತ್ಯಾದಿ ಹಣ್ಣುಗಳು ನಿರ್ಲಕ್ಷ್ಯಕ್ಕೊಳಗಾಗುತ್ತವೆ. ಇ0ತಹ ಪಾರಂಪರಿಕ ಗಿಡಗಳನ್ನು ನಮ್ಮ ಮನೆಯ ಕೈತೋಟ, ಶಾಲಾವನ ಸೇರಿದ0ತೆ ಸರಕಾರಿ ಕಚೇರಿಗಳ ಖಾಲಿ ಜಾಗಗಳಲ್ಲಿ ಬೆಳೆಯ ಬೇಕೆ0ದು ದಕ್ಷಿಣ ಕನ್ನಡ ಜಿಲ್ಲಾ ಪ0ಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್ ತಿಳಿಸಿದ್ದಾರೆ.
    ಅವರು ಇ0ದು ಕರ್ನಾ ಟಕ ಪಶು ವೈ ದ್ಯಕೀಯ ಹಾಗೂ ಮೀನು ಗಾರಿಕೆ ವಿಜ್ಞಾನ ಗಳ ವಿಶ್ವ ವಿದ್ಯಾಲಯ ಬೀದರ್, ಕೃಷಿ ವಿಜ್ಞಾನ ಕೇ0ದ್ರ, ಮ0ಗ ಳೂರು. ದ. ಕ ಜಿಲ್ಲಾ ಪ0ಚಾ ಯತ್, ಕೃಷಿ ತೋಟಗಾರಿಕೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಹಾಗೂ ದ ಕ ಜಿಲ್ಲಾ ಕೃಷಿಕ ಸಮಾಜ ಇವರ ಸ0ಯುಕ್ತಾಶ್ರಯದಲ್ಲಿ ಆತ್ಮ ಯೋಜನೆಯಡಿಯಲ್ಲಿ ಎಕ್ಕೂರಿನ ಕೃಷಿ ವಿಜ್ಞಾನ ಕೇ0ದ್ರದಲ್ಲಿ ಆಯೋಜಿಸಿದ್ದ 2 ದಿನಗಳ (28 ಮತ್ತು 29) 4ನೇ ವಾರ್ಷಿಕ ಹಲಸಿನ ಮೇಳ ಉದ್ಘಾಟಿಸಿ ಮಾತನಾಡಿದರು.
   ನಮ್ಮ ಮಕ್ಕಳಿಗೆ ನೇಜಿ ಎ0ದರೇನು ಎ0ದು ಗೊತ್ತಿಲ್ಲ. ಅಕ್ಕಿ ಹೇಗೆ ದೊರೆಯುತ್ತೆ, ಹಣ್ಣುಗಳು ಹೇಗೆ ನಮಗೆ ಸಿಗುತ್ತೆ, ಇತ್ಯಾದಿ ವಿಷಯಗಳು ತಿಳಿದಿಲ್ಲ. ಅದ್ದರಿ0ದ ಜಿಲ್ಲೆಯ ಎಲ್ಲಾ ಶಾಲಾ ಮಕ್ಕಳಿಗೆ ಅವರ ಶಾಲಾ ಹತ್ತಿರದ ತೋಟಗಳಿಗೆ ಸಾಧ್ಯವಾದರೆ ಪ್ರಗತಿ ಪರ ರೈತರ ಜಮೀನುಗಳಿಗೆ ಕೆರೆದುಕೊ0ಡು ಹೋಗಿ, ಕೃಷಿ ಚಟುವಟಿಕೆಗಳ ಪರಿಚಯ ಮಾಡಿಸ ಬೇಕೆ0ದರು. ಇದರಿ0ದ ಕೃಷಿಕನ ಬಗ್ಗೆ ಕೃಷಿ ಬಗ್ಗೆ ಮಕ್ಕಳಲ್ಲಿ ಅಭಿಮಾನ ಮೂಡಲಿದೆ. ಎ0ದರು.
   ಜಿಲ್ಲೆಯಲ್ಲಿ ಒ0ದೆರಡು ಹಲಸುಬೆಳೆಗಾರರ ಸ0ಘಗಳಿ0ದ ಕ್ಲಸ್ಟರ್ಗಳನ್ನು  ರಚಿಸಲಾಗಿದೆ, ಇ0ತಹ ಕ್ಲಸ್ಟರ್ ಗಳನ್ನು ಇನ್ನೂ ಹೆಚ್ಚಸಲು ಕ್ರಮ ಕೈಗೊಳ್ಳಲಾಗುವುದೆ0ದು  ತಿಳಿಸಿ ನಮ್ಮ ಜಿಲ್ಲೆಯಲ್ಲಿ ಪ್ರಸ್ತುತ 838 ಹೆಕ್ಟೇರ್ ನಲ್ಲಿ ಹಲಸು ಬೆಳೆಯಲಾಗುತ್ತಿದೆ. ಎ0ದರು. ದ ಕ ಜಿಲ್ಲೆಯಲ್ಲಿ ಒಟ್ಟು 699 ಲಕ್ಷ ರೂ.ಗಳು ತೋಟಗಾರಿಕಾ ಅಭಿವೃಧ್ದಿಗೆ ಕಾಯ್ದಿರಿಸಲಾಗಿದೆ. ಇದರಲ್ಲಿ ರೂ 296 ಲಕ್ಷ ತೋಟಗಾರಿಕಾ ಇಲಾಖೆ, 303 ರಾಷ್ಟ್ರೀಯ ತೋಟಗಾರಿಕಾ ಮಿಷನ್ ಹಾಗೂ ಸಾವಯವ ಕೃಷಿ ಅಭಿವೃದ್ದಿಗಾಗಿ 100 ಲಕ್ಷ ರೂಗಳು ಸೇರಿವೆ ಎ0ದರು.
  ಜಿಲ್ಲಾ ಕೃಷಿಕ ಸಮಾ ಜದ ಅಧ್ಯಕ್ಷ ರಾದ ಎಸ್. ಡಿ. ಸಂಪತ್ ಸಾಮ್ರಾಜ್ ಅವರು ಮಾತ ನಾಡಿ, ಹಲಸು ಒ0ದೇ ಏಕೈಕ ಸ0ಪೂರ್ಣ ಸಾವ ಯವ ಹಣ್ಣು, ನೈಸ ರ್ಗಿಕ ಹಣ್ಣು, ಇದನ್ನು ನಿರ್ಲ ಕ್ಷಿಸದೆ ಅಲಕ್ಷ್ಯ ಮಾಡದೆ, ಸೂಕ್ತ ವಾಗಿ ಸ0ಸ್ಕ ರಿಸಿ ಹೆಚ್ಚಿನ ಆದಾಯ ಪಡೆ ಯುವ0ತೆ ತಿಳಿಸಿದರು. ಮ0ಜೇಶ್ವರದ ಪ್ರಗತಿ ಪರ ಕೃಷಿಕ ಡಾ ಡಿ ಚ0ದ್ರಶೇಖರ ಚೌಟ ಅವರು ಮಾತನಾಡಿ ಒ0ದು ಕಾಲದಲ್ಲಿ ಊಟ ಇಲ್ಲದಿದ್ದರೆ ಹಲಸಿನ ಹಣ್ಣಿನಿಂದ ಹೊಟ್ಟೆ ತುಂಬುತ್ತಿತ್ತು. ಆದರೆ ಇ0ದು ಹಲಸು ತಿನ್ನುವವರ ಸ0ಖ್ಯೆ ಕಡಿಮೆ ಆಗುತ್ತಿದೆ ಎ0ದರು. ಹಲಸನ್ನು ಹಲಸಿನ ವಿವಿಧ ಅಹಾರ ರೂಪಗಳನ್ನು ಜನರಿಗೆ ಪರಿಚಯಿಸಿ ಹಲಸನ್ನು ಸಾರ್ವತ್ರಿಕ ಗೊಳಿಸಲು ತಿಳಿಸಿದರು.
   ಜ0ಟಿ ಕೃಷಿ ನಿರ್ದೇಶಕ ಪಿ ಮೋಹನ್ ಈ ಸ0ಧರ್ಭದಲ್ಲಿ ಮಾತನಾಡಿದರು. ಸಮಾರ0ಭದ ಅಧ್ಯಕ್ಷತೆಯನ್ನು ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ ಕೆ ಎಂ ಶ0ಕರ್ ವಹಿಸಿದ್ದರು.
ಅಡ್ಯನಡ್ಕದ ವಾರಣಾಸಿ ಸ0ಶೋದನಾ ಪ್ರತಿಷ್ಟಾನದ ಡಾ ವಾರಣಾಶಿ ಕೃಷ್ಣಮೂರ್ತಿ, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಹೆಚ್ ಆರ್ ಯೋಗಿಶ್, ಮಹಿಳಾ ಮತ್ತು ಮಕ್ಕಳ ಇಲಾಖೆ ಉಪ ನಿರ್ದೇಶಕಿ ಶಕು0ತಳಾ ಮು0ತಾದವರು ಹಾಜರಿದ್ದರು. ಕೃಷಿ ವಿಜ್ಞಾನ ಕೇ0ದ್ರದ ಕಾರ್ಯಕ್ರಮ ಸ0ಯೋಜಕರಾದ ಡಾ ಹೆಚ್ ಹನುಮ0ತಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಎಲ್ಲರನ್ನು ಸ್ವಾಗತಿಸಿದರು. ಹರೀಶ್ ಶೆಣೈ ವ0ದಿಸಿದರು.

ಮಳೆಗಾಲದಲ್ಲಿ "ಕಲ್ಪವೃಕ್ಷ"ದ (ತೆಂಗು ಬೆಳೆ) ರಕ್ಷಣೆ


"ಕಲ್ಪವೃಕ್ಷ"ವೆಂದೇ ಕರೆಯಲ್ಪಡುವ ತೆಂಗು ಬೆಳೆ ರಾಜ್ಯದ ಪ್ರಮುಖ ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆಯಾಗಿದೆ. ಲಾಭದಾಯಕ ಗಿಡ ತೆಂಗು ನಮ್ಮ ಆರೋಗ್ಯ ಮತ್ತು ಆಹಾರಕ್ಕೆ ಉಪಯುಕ್ತವಾದ ಗಿಡ. ಕರಾವಳಿ ಪ್ರದೇಶದ ಮುಖ್ಯ ತೋಟಗಾರಿಕಾ ಬೆಳೆಗಳಲ್ಲೊಂದಾದ ತೆಂಗು, ನೀರು ಬಸಿದು ಹೋಗುವ ಮರಳು ಮಿಶ್ರಿತ ಗೋಡು ಮತ್ತು ಕೆಂಪು ಗೋಡು ಮಣ್ಣುಗಳಲ್ಲಿ ಉತ್ತಮವಾಗಿ ಬೆಳೆಯಬಲ್ಲದು. ಕೆಲಮೊಮ್ಮೆ ವಾತಾವರಣದ ವೈಪರೀತ್ಯದಿಂದ ತೆಂಗುಬೆಳೆಗೆ ತಗಲುವ ರೋಗ ಮತ್ತು ಕೀಟಗಳ ಬಾಧೆಯಿಂದಲೂ ಕೂಡಾ ಬೆಳೆಯ ಬೆಳೆವಣಿಗೆ ಕುಂಠಿತಗೊಳ್ಳುತ್ತದೆ. 
ತೆಂಗು ಬೆಳೆಗೆ ಬಾಧಿಸುವ ರೋಗಗಳು/ಕೀಟಗಳು ಮತ್ತು ಹತೋಟಿ ಕ್ರಮಗಳು:
ಸುಳಿ ಕೊಳೆ ರೋಗ:ರಿಗಳು ಜೋತು ಬೀಳುವುದು ಮತ್ತು ಹಳದಿ ಬಣ್ಣಕ್ಕೆ ತಿರುಗುತ್ತದೆ. ಸುಳಿಯ ಬುಡವು ಕೊಳೆಯುತ್ತದೆ. ಕೊನೆಗೆ ಸುಳಿಯು ಬಿದ್ದು ಹೋಗುತ್ತದೆ.
ಹತೋಟಿ ಕ್ರಮಗಳು: ಈ ರೋಗಗಳು ಕಂಡು ಬರುತ್ತಲೇ, ನುರಿತ ತಜ್ಞರಿಂದ ಮರ ಹತ್ತಿಸಿ ಸುಳಿ ಕೊಳೆತ ಬಾಗವನ್ನು ಸ್ವಚ್ಛಗೊಳಿಸಿ ಇಲ್ಲವೇ ಕತ್ತರಿಸಿ ಶೇ1 ರ ಬೋರ್ಡೋ ದ್ರಾವಣವನ್ನು ಸುರಿಯುವುದು.
    ಮುನ್ನೆಚರಿಕೆಯ ಕ್ರಮವಾಗಿ ಶೇ. 1 ರ ಬೋರ್ಡೊ ದ್ರಾವಣ ಅಥವಾ 3 ಗ್ರಾಂ ತಾಮ್ರದ ಆಕ್ಸಿ ಕ್ಲೋರೈಡನ್ನು 1 ಲೀಟರ್ ನೀರಿನಲ್ಲಿ ಬೆರೆಸಿ ಸುಳಿಯ ಮತ್ತು ಗರಿಗಳ ತೊಟ್ಟಿನ ಸಂದುಗಳಲ್ಲಿ ಸುರಿಯಬೇಕು.
ರೈನೋಸರಸ್ ದುಂಬಿ:ಈ ಕೀಟಗಳ ಬಾಧೆಯು ಮಳೆಗಾಲದಲ್ಲಿ ಅಧಿಕವಾಗಿದ್ದು, ದುಂಬಿಗಳು ಗಿಡಗಳ ಸುಳಿ ಮತ್ತು ಎಲೆಗಳ ಬುಡಗಳನ್ನು ಕೊರೆದು ತಿನ್ನುತ್ತವೆ. ಗರಿಗಳನ್ನು ಕತ್ತರಿಸುತ್ತದೆ. ಹೂ ಗೊಂಚಲುಗಳನ್ನು ಕೊರೆಯುವುದರಿಂದ ಕಾಯಿಗಳ ಉತ್ಪತ್ತಿ ಕಡಿಮೆಯಾಗುತ್ತದೆ. ಸುಳಿ ಭಾಗವನ್ನು ಆಕ್ರಮಿಸಿದಲ್ಲಿ ಸಸಿಗಳು ಸಾಯುವ ಸಂಭವವೂ ಹೆಚ್ಚಿದೆ.
ಹತೋಟಿ ಕ್ರಮಗಳು:-
    ಸುಳಿಯ 2-3 ಗರಿಗಳ ತೊಟ್ಟಿನ ಸಂದುಗಳಿಗೆ ಮೆಲಾಥಿಯಾನ್ ಕೀಟನಾಶಕ ಮತ್ತು ಮರಳನ್ನು ಸಮಪ್ರಮಾಣದಲ್ಲಿ ಮಳೆಗಾಲದಲ್ಲಿ ಹಾಗೂ ಮಳೆಗಾಲ ಮುಗಿದ ನಂತರ ಆಕ್ಟೋಬರ್-ನವೆಂಬರ್ ತಿಂಗಳಿನಲ್ಲಿ ತುಂಬಬೇಕು.
ಕೆಂಪು ಮೂತಿ ಹುಳು:
    ರೈನೋಸರಸ್ ದುಂಬಿಯಂತೆ ಇವುಗಳು ಕೂಡ ತೆಂಗಿನ ಮರದ ಗಾಯಗೊಂಡ ಕಾಂಡದ ಮೃದು ಭಾಗವನ್ನು ಕೊರೆದು ತಿನ್ನುವುದರಿಂದ ಕಾಂಡದಲ್ಲಿ ರಂಧ್ರಗಳು ಕಾಣುತ್ತವೆ. ಕೀಟ ಬಾಧೆಯು ತೀವ್ರವಾದಾಗ ಸುಳಿಗರಿಗಳು ಒಣಗುತ್ತವೆ.
ಹತೋಟಿ ಕ್ರಮಗಳು:  ಕಾಂಡದಲ್ಲಿನ ರಂಧ್ರಗಳಿಂದ ರಸ ಸೋರುತ್ತಿದ್ದರೆ, 4 ಗ್ರಾಂ ಕಾರ್ಬರಿಲ್ ಕೀಟನಾಶಕವನ್ನು 1 ಲೀಟರ್ ನೀರಿಗೆ ಸೇರಿಸಿ ರಂಧ್ರಗಳಿಗೆ ಸುರಿಯಬೇಕು. ಸುಳಿಯ 2-3 ಗರಿಗಳ ತೊಟ್ಟಿನ ಸಂದುಗಳಿಗೆ ಫೋರೇಟ್ ಕೀಟನಾಶಕವನ್ನು ಪ್ರತೀ ಮರಕ್ಕೆ 5ಗ್ರಾಂ ನಂತೆ ಹಾಕಬೇಕು.
ತೆಂಗಿನ ನುಸಿ:ಇವು ಅತ್ಯಂತ ಸೂಕ್ಷ್ಮ ಜೀವಿಯಾಗಿದ್ದು ಎಳೆಯ ಕಾಯಿಗಳ ಅಂಗಾಂಶಗಳನ್ನು ಚುಚ್ಚಿ ಹೊರಬರುವ ರಸವನ್ನು ಹೀರುತ್ತದೆ. ಕಾಯಿಗಳ ಮೇಲೆ ಬಿರುಕನ್ನು ಕಾಣುತ್ತೇವೆ ಮತ್ತು ಅಲ್ಲಲ್ಲಿ ಅಂಟುಗಳು ಬರುತ್ತವೆ. ಕಾಯಿಗಳ ಬೆಳವಣಿಗೆ ಕುಂಠಿತಗೊಳ್ಳುತ್ತವೆ.
ಹತೋಟಿ ಕ್ರಮಗಳು:
1.    ಪ್ರತೀ ಮರಕ್ಕೆ 50 ಕೆ.ಜಿ.ಸಾವಯವ ಗೊಬ್ಬರ ಹಾಕುವುದು.
2.    ಪ್ರತೀ ಮರಕ್ಕೆ 5 ಕೆ.ಜಿ. ಬೇವಿನ ಹಿಂಡಿ ಹಾಕುವುದು.
3.    ಪ್ರತೀ ಮರಕ್ಕೆ ಶಿಫಾರಸ್ಸು ಮಾಡಿರುವ ನಿಗದಿತ ಪೋಷಕಾಂಶಗಳನ್ನು ನೀಡುವುದರ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.

    ತೆಂಗು ಬೆಳೆಯಲ್ಲಿ ಕೀಟ/ರೋಗಗಳನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲು ಸಾಧ್ಯವಿಲ್ಲದಿದ್ದರೂ, ಮಳೆಗಾಲದಲ್ಲಿ ಗಿಡಗಳ ಬುಡಗಳ ಸ್ವಚ್ಛತೆಯನ್ನು ಕಾಪಾಡಿಕೊಳ್ಳುವ ಮೂಲಕ ಹಾಗೂ ಹೆಚ್ಚು-ಹೆಚ್ಚು ಹಸಿರೆಲೆ ಗೊಬ್ಬರಗಳನ್ನು ಬಳಸುವ ಮೂಲಕ ಮತ್ತು ಅವಶ್ಯಕ ರಾಸಾಯನಿಕ ಮತ್ತು ಸಾವಯವ ಗೊಬ್ಬರಗಳ ಬಳಕೆಯಿಂದ ಹೆಚ್ಚಿನ ನಿಯಂತ್ರಣವನ್ನು ಕಾಣಲು ಸಾಧ್ಯವಾಗುವುದು ಮತ್ತು ಉತ್ತಮ ಫಸಲನ್ನು ಪಡೆಯಬಹುದು. ಒಟ್ಟಿನಲ್ಲಿ ಸವರ್ೊಪಯೋಗಿ ಲಾಭದಾಯಕ ಗಿಡ ತೆಂಗನ್ನು ರೋಗ/ಕೀಟಗಳಿಂದ ರಕ್ಷಿಸುವುದು ನಮ್ಮ ಹೊಣೆ.

ಹೆಚ್ಚಿನ ಮಾಹಿತಿಗೆ ಸ್ಥಳೀಯ ಹೋಬಳಿ ತೋಟಗಾರಿಕೆ ಅಧಿಕಾರಿಗಳನ್ನು/ ತಾಲೂಕು ಸಹಾಯಕ ತೋಟಗಾರಿಕೆ ನಿರ್ದೇಶಕರನ್ನು  ಸಂಪರ್ಕಿಸಬಹುದು ಅಥವಾ ವಿಷಯ ತಜ್ಞರು, ತೋಟಗಾರಿಕಾ ಮಾಹಿತಿ ಮತ್ತು ಸಲಹಾ ಕೇಂದ್ರ (ಹಾರ್ಡಿ ಕ್ಲಿನಿಕ್) ಮಂಗಳೂರು ಇಲ್ಲಿ ಸಂಪರ್ಕಿಸಬಹುದು. ದೂರವಾಣಿ ಸಂ:0824-2412628
Email: hoticlinicmangalore@gmail.com

Tuesday, June 25, 2013

ಜಿಲ್ಲೆಯ ಅಭಿವೃದ್ಧಿಗೆ ಪರಸ್ಪರ ಸಹಕಾರ ಅಗತ್ಯ: ವೀರಪ್ಪ ಮೊಯಿಲಿ

ಮಂಗಳೂರು, ಜೂನ್. 25:- ಜಿಲ್ಲೆಯಲ್ಲಿ ಕೈಗಾರಿಕೆಗಳು ಬೆಳೆಯಲು ಜನರು ಮತ್ತು ಜಿಲ್ಲಾಡಳಿತ ಪರಸ್ಪರ ಸಹಕರಿಸಬೇಕು. ಅಭಿವೃದ್ದಿ ಸಾಧಿಸಲು ಉತ್ತಮ ಅವಕಾಶ ದಕ್ಷಿಣ ಕನ್ನಡ ಜಿಲ್ಲೆಗಿದ್ದು ಅವಕಾಶಗಳ ಸದುಪಯೋಗವಾಗಬೇಕೆಂದು ಕೇಂದ್ರ ಪೆಟ್ರೋಲಿಯಂ ಸಚಿವ ಎಂ ವೀರಪ್ಪ ಮೊಯಿಲಿ ಹೇಳಿದರು.
 ಅವರು 24ರಂದು(ಸೋಮವಾರ) ಸಂಜೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರಮುಖ ಇಲಾಖಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ರೈಲ್ವೇ, ಬಂದರು, ರಸ್ತೆ ಹಾಗೂ ವಿಶೇಷ ಆರ್ಥಿಕ ವಲಯದ ಅಧಿಕಾರಿಗಳು ಸಭೆಯಲ್ಲಿದ್ದರು.ಹೊಣೆಯರಿತು ಅಧಿಕಾರವನ್ನು ಉಪಯೋಗಿಸಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುವುದರಿಂದ ಎಲ್ಲರಿಗೂ ಅನುಕೂಲ. ಯೋಜನೆಗಳ ಉಪಯೋಗ ಸ್ಥಳೀಯ ಜನರಿಗೂ ದಕ್ಕಬೇಕು ಎಂದರು. ರಾಜ್ಯ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಿ ರಾಷ್ಟ್ರೀಯ ಹೆದ್ದಾರಿಗಳನ್ನಾಗಿಸಬೇಕೆಂದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್ ಪ್ರಕಾಶ್ ಅವರು, ಜಿಲ್ಲಾಡಳಿತ ಕೈಗಾರಿಕಾಭಿವೃದ್ಧಿಗೆ ಪೂರಕವಾಗಿದ್ದು ಸ್ಥಳೀಯ ಜನರ ಹಿತಾಸಕ್ತಿಯೂ ಜಿಲ್ಲಾಡಳಿತಕ್ಕೆ ಅಷ್ಟೇ ಮುಖ್ಯ. ಹಾಗಾಗಿ ಕಾರ್ಪೋರೆಟ್ ಕಂಪೆನಿಗಳು ತಾವು ಉಪಯೋಗಿಸುವ ಸಾರ್ವಜನಿಕ ರಸ್ತೆಗಳನ್ನು ನಿರ್ವಹಿಸುವ ಹೊಣೆಯನ್ನು ವಹಿಸಬೇಕಿದೆ. ಸ್ಥಳೀಯ ಜನರೊಂದಿಗೆ ಉತ್ತಮ ಸಂಪರ್ಕ, ಬಾಂದವ್ಯ ಹಾಗೂ ಅವಕಾಶ ಸೃಷ್ಟಿಸುವ ಹೊಣೆ ಕಂಪೆನಿಗಳದ್ದಾಗಿರಬೇಕೆಂದರು.
ಹಾಗಾಗಿ ಪರಸ್ಪರ ಸಮನ್ವಯತೆಯಿಂದ ಮಾತ್ರ ಅಭಿವೃದ್ದಿ ಸಾಧ್ಯ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ವಿಮಾನ ನಿಲ್ದಾಣ ಪ್ರಾಧಿಕಾರದ ರನ್ ವೇ ವಿಸ್ತರಣೆಗೆ ಸಂಬಂಧಿಸಿದ ತಾಂತ್ರಿಕ ಪ್ರಸ್ತಾವನೆಯನ್ನು ಇಂದು ನಡೆಸಿದ ಸಭೆಯನ್ನು ಉಲ್ಲೇಖಿಸಿ ಸಚಿವಾಲಯಕ್ಕೆ ಸಲ್ಲಿಸಿ ಎಂದು ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕರಿಗೆ ಸಚಿವ ವೀರಪ್ಪ ಮೊಯಿಲಿ ಸೂಚಿಸಿದರು.ಸಭೆಯಲ್ಲಿ ಉಪಸ್ಥಿತರಿದ್ದ ಮೂಲಸೌಕರ್ಯ ಇಲಾಖೆ ಕಾರ್ಯದರ್ಶಿ ರಾಜಕುಮಾರ್ ಕತ್ರಿ ಅವರು ರಾಜ್ಯ ಸಕರ್ಾರ ಈ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡಲಿದೆ ಎಂದು ಸಚಿವರಿಗೆ ಹೇಳಿದರು.ವಾಣಿಜ್ಯ ಮತ್ತು ಕೈಗಾರಿಕಾ ಇಲಾಖಾ ಕಾರ್ಯದರ್ಶಿಗಳಾದ  ವಿದ್ಯಾಶಂಕರ್ ಅವರು ತಮ್ಮ ಇಲಾಖೆಯಿಂದ ಅಭಿವೃದ್ದಿಗೆ ಸಂಬಂಧಿಸಿದಂತೆ ಎಲ್ಲ ಸಹಕಾರ ನೀಡಲಾಗುವುದು. ಸಂಪರ್ಕ ವ್ಯವಸ್ಥೆ ಉತ್ತಮವಾಗಿದ್ದರೆ ಹಲವು ಸಮಸ್ಯೆಗಳು ಪರಿಹಾರವಾದಂತೆ ಎಂದರು.
ವಿಶೇಷ ಆರ್ಥಿಕ ವಲಯ ಹಾಗೂ ಎಂ ಆರ್ ಪಿ ಎಲ್ ಸಂಪರ್ಕ ರಸ್ತೆ, ಸುರತ್ಕಲ್ ವ್ಯಾಪ್ತಿಯ 15 ಕಿ.ಮೀ ರಸ್ತೆ, ಮರವೂರು-ಜೋಕಟ್ಟೆ -ಪಣಂಬೂರು ರಸ್ತೆ ರಿಪೇರಿ. ಕಳವೂರು- ಜೋಕಟ್ಟೆ ರಸ್ತೆಗಳನ್ನು ತಕ್ಷಣವೇ ಸರಿಪಡಿಸಬೇಕೆಂದು ಯುವಜನಸೇವೆ ಮತ್ತು ಮೀನುಗಾರಿಕೆ ಸಚಿವರಾದ  ಅಭಯಚಂದ್ರ ಜೈನ್ ಅವರು ಸಭೆಯಲ್ಲಿ ಸೂಚಿಸಿದರು. ಕಂಪೆನಿಗಳಿಗೆ ಸಾಮಾಜಿಕ ಹೊಣೆಗಾರಿಕೆ ಇದೆ ಎಂಬುದನ್ನು ಮರೆಯಬಾರದು. ಆಡಳಿತದ ಬಗ್ಗೆ ಜನರಿಗೆ ತಪ್ಪು ಸಂದೇಶ ರವಾನೆಯಾಗಬಾರದು ಎಂದೂ ಅವರು ಈ ಸಂದರ್ಭದಲ್ಲಿ ನುಡಿದರು.
ಬಿಸಿರೋಡ್, ಮಳಲಿ, ಬಜಪೆ ಮುಲ್ಕಿ ಬೈಪಾಸ್ ರಸ್ತೆಗೆ ಹೊಸ ಪ್ರಸ್ತಾವನೆಯನ್ನು ಸಿದ್ಧಪಡಿಸಲು ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದರು. ಮೈಸೂರು-ಸಂಪಾಜೆ-ಮಾಣಿ -ಸುಳ್ಯ- ಪುತ್ತೂರು ರಸ್ತೆಯ ಬಗ್ಗೆ ಸಭೆಯಲ್ಲಿ ಚರ್ಚಿಸಿದ ಕೇಂದ್ರ ಸಚಿವರು ಕೆ ಆರ್ ಡಿ ಸಿಎಲ್ ನವರು ತಮ್ಮ ನೈಜ ಸಮಸ್ಯೆ ಹೇಳಿ ಪರಿಹಾರ ಕಂಡುಕೊಳ್ಳುವ ಮೂಲಕ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಗಿಸಲು ಸೂಚಿಸಿದರು.
ಮಂಗಳೂರು ರೈಲ್ವೇ ನಿಲ್ದಾಣವನ್ನು ಮೇಲ್ದರ್ಜೆಗೇರಿಸುವ ಬಗ್ಗೆ, ರಾಜ್ಯದಲ್ಲಿ ಹಾಸನ-ಸಕಲೇಶಪುರ-ಬೆಂಗಳೂರಿಗೆ ರೈಲ್ವೇ ಸಂಪರ್ಕ ಅಭಿವೃದ್ದಿಪಡಿಸುವ ಬಗ್ಗೆ ಸಭೆಯಲ್ಲಿ ಸವಿವರ ಚರ್ಚೆ ನಡೆಯಿತು. ಮಂಗಳೂರು ಕೇಂದ್ರ ರೈಲ್ವೇ ನಿಲ್ದಾಣಕ್ಕೆ ಸಂಬಂಧಿಸಿದ ಯೋಜನಾ ಪ್ರಸ್ತಾವವನ್ನು ತಕ್ಷಣವೇ ತಮಗೆ ಸಲ್ಲಿಸಿ ಎಂದು ಕೇಂದ್ರ ಸಚಿವರು ಪಾಲ್ಘಾಟ್ ವಿಭಾಗದ ರೈಲ್ವೇ ಅಧಿಕಾರಿಗಳಿಗೆ ಸೂಚಿಸಿದರು.
ಉಡುಪಿ ಜಿಲ್ಲಾಧಿಕಾರಿ ಡಾ. ರೆಜು ಅವರು ಕರಾವಳಿ ಅಭಿವೃದ್ದಿ ಯೋಜನೆ ಕೇಂದ್ರ ಸರ್ಕಾರದ ಪರಿಸರ ಸಚಿವಾಲಯದಲ್ಲಿ ಬಾಕಿ ಇರುವುದಾಗಿ ಕೇಂದ್ರ ಸಚಿವರ ಗಮನ ಸೆಳೆದರು. ಬಂದರು ನಗರಿಗಳನ ನಡುವೆ ಸಂಪರ್ಕವೇರ್ಪಡಿಸುವ ಚೆನ್ನೈ-ಬೆಂಗಳೂರು-ಮಂಗಳೂರು ಗ್ರೀನ್ ಫೀಲ್ಡ್ ಎಕ್ಸ್ಪ್ರೆಸ್ ವೇ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಗಿ ಈ ಯೋಜನೆ ಇನ್ನೂ ಪ್ರಥಮ ಹಂತದಲ್ಲಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಬಿಪಿಸಿಎಲ್ ನಿಂದ ಲೇಡಿಗೋಷನ್ ಆಸ್ಪತ್ರೆನಲ್ಲಿರುವ ಬ್ಲಡ್ ಬ್ಯಾಂಕ್ ಗೆ ಒಂದು ಕೋಟಿ ರೂ.ಗಳ ನೆರವನ್ನು ಹಸ್ತಾಂತರಿಸಲಾಯಿತು.

ಇಲಿ ಜ್ವರವಿದೆ ಮು0ಜಾಗ್ರತಾ ವಹಿಸಿ-ಡಿ ಹೆಚ್ ಓ


ಮಂಗಳೂರು, ಜೂನ್.25: ಇಲಿ ಜ್ವರವು ಒ0ದು ಸಾ0ಕ್ರಮಿಕ ರೋಗವಾಗಿದ್ದು. ಇದು 'ಸ್ಪೈರೋಕಿಟಾ' ಎ0ಬ ಸೂಕ್ಷ್ಮಾಣು ಜೀವಿಯಿ0ದ ಹರಡುತ್ತದೆ. ಇದು ಪ್ರಾಣಿಗಳ ಮೂತ್ರದಲ್ಲಿದ್ದು,  ಇಲಿ, ಹೆಗ್ಗಣ, ಬೆಕ್ಕು, ನಾಯಿ ಹಾಗೂ ಕೆಲ ಕಾಡು ಪ್ರಾಣಿಗಳ ಮೂತ್ರದಲ್ಲಿರುವ ಸೂಕ್ಷ್ಮಾಣು ಜೀವಿಗಳು ನೀರನ್ನು ಸೇರಿಕೊ0ಡಾಗ, ನೀರು ಕಲುಷಿತವಾಗಿ ಮನುಷ್ಯರು ನೀರು ಸೇವಿಸಿದಾಗ  ಸೋ0ಕು ಮನುಷ್ಯರಲ್ಲಿ  ಕಾಣಿಸಿಕೊಳ್ಳುತ್ತದೆ. ಜ್ವರ ,ಮಾ0ಸಖ0ಡ , ಮೈ ಕೈ , ತಲೆ ನೋವು , ಜಾ0ಡಿಸ್ ಈ ರೋಗದ ಲಕ್ಷಣವಾಗಿದೆ. ಬಾಯಿ,ಮೂಗಿನಲ್ಲಿ ರಕ್ತಸ್ರಾವ, ಮೂತ್ರಪಿ0ಡ, ಹೃದಯದ ಸೋ0ಕು ಉ0ಟಾಗಬಹುದು. ಅದ್ದರಿ0ದ ನೀರಿನ ಸ0ರಕ್ಷಣೆ, ಸ್ನಾನ ಮತ್ತು ಕುಡಿಯಲು ಉಪಯೋಗಿಸುವ ನೀರಿನಲ್ಲಿ ಪ್ರಾಣಿಗಳ ಮೂತ್ರ ಸೇರದ0ತೆ  ಜಾಗ್ರತೆ ವಹಿಸಬೇಕು, ಆಹಾರ ಪದಾರ್ಥಗಳು, ಹಣ್ಣು ತರಕಾರಿ ಇಲಿಗಳಿಗೆ ಸಿಗದ0ತೆ ಮುಚ್ಚಿಡಬೇಕು. ಪರಿಸರವನ್ನು ಸ್ವಚ್ಚವಾಗಿಡಬೇಕು. ಪ್ರಾಣಿಗಳು ವಾಸ ಮಾಡುವ ಸ್ಥಳಗಳಲ್ಲಿ ಬರಿಗಾಲಲ್ಲಿ ಓಡಾಡದೆ, ಚಪ್ಪಲಿ ಧರಿಸಿ ನಡೆಯಿರಿ. ಮೇಲ್ಕಾಣಿಸಿದ ಲಕ್ಷಣಗಳು ಕ0ಡುಬ0ದಲ್ಲಿ ಹತ್ತಿರದ ಆರೋಗ್ಯ ಕೇ0ದ್ರ, ಆಸ್ಪತ್ರೆ ವೈದ್ಯಾಧಿಕಾರಿಗಳ ಸಲಹೆ ಪಡೆಯಲು ಜಿಲ್ಲಾ ಆರೋಗ್ಯ ಮತ್ತು ಕುಟು0ಬ ಕಲ್ಯಾಣಾಧಿಕಾರಿ ತಿಳಿಸಿರುತ್ತಾರೆ.

Monday, June 24, 2013

ರಸ್ತೆ ಸುರಕ್ಷತಾ ಸಮಿತಿ ಸಭೆ

ಮಂಗಳೂರು, ಜೂನ್. 24 :ಅವೈಜ್ಞಾನಿಕ ರಸ್ತೆ ಉಬ್ಬು, ಚರಂಡಿ ವ್ಯವಸ್ಥೆ,ಸ್ಪೀಡ್ ಬ್ರೇಕರ್ ಗಳ ಬಗ್ಗೆ ನಾಗರೀಕರಿಂದ ಅಸಮಾಧಾನ ವ್ಯಕ್ತವಾದ ಹಿನ್ನಲೆಯಲ್ಲಿ ತಕ್ಷಣವೇ ಈ ಸಂಬಂಧ ಸೂಕ್ತವಾಗಿ ಸಂಬಂಧಪಟ್ಟ ಅಧಿಕಾರಿಗಳು ಸ್ಪಂದಿಸಬೇಕೆಂದು ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಎನ್ ಪ್ರಕಾಶ್ ಆದೇಶಿಸಿದರು.
ಇಂದು ನಡೆದ ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಹಾಗೂ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಕಾರ್ಯದರ್ಶಿಗಳೂ ಆಗಿರುವ ಮಲ್ಲಿಕಾರ್ಜುನ್ ಅವರು ಜನರಿಂದ ಬಂದ ಸಮಸ್ಯೆಗಳು ಹಾಗೂ ಕಳೆದ ಸಭೆಯಲ್ಲಿ ಚರ್ಚಿಸಲಾದ ವಿಷಯಗಳನ್ನು ಸಭೆಯ ಮುಂದಿರಿಸಿದರು.
ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಮಹಾನಗರಪಾಲಿಕೆ ಇಂಜಿನಿಯರ್ಗಳು ಮತ್ತು  ಸಂಚಾರಿ ಪೊಲೀಸರು ಸಂಯುಕ್ತವಾಗಿ ಕೈಗೊಳ್ಳಬೇಕಾದ ಸ್ಥಳ ತನಿಖೆಗಳಿಗೆ ನಿರ್ದೇಶನ ನೀಡಿದ ಜಿಲ್ಲಾಧಿಕಾರಿಗಳು, ವಿಷಯಗಳ ಸಾಧಕ ಬಾಧಕಗಳನ್ನು ಕೂಲಂಕಷವಾಗಿ ಪರಿಶೀಲಿಸಬೇಕೆಂದರು.
ಆಟೋರಿಕ್ಷಾ ತಂಗುದಾಣಗಳನ್ನು ಮತ್ತು ಬಸ್ ಬೇಗಳನ್ನು ನಿರ್ಮಿಸುವ ಸಂಬಂಧ ಈಗಾಗಲೇ 181 ಆಟೋ ರಿಕ್ಷಾ ತಂಗುದಾಣಗಳನ್ನು ಸಮೀಕ್ಷೆ ಮಾಡಿ ಪಟ್ಟಿ ಮಾಡಲಾಗಿದೆ ಎಂದು ಆರ್ ಟಿ ಒ ಮಲ್ಲಿಕಾರ್ಜುನ್ ಅವರು ಹೇಳಿದರು.
ಮಂಗಳೂರು ಉಡುಪಿ ಹೆದ್ದಾರಿಯಲ್ಲಿ ಬಸ್ ಬೇಗಳನ್ನು ನಿರ್ಮಿಸುವ ಬಗ್ಗೆಯೂ ಸಭೆ ಚರ್ಚಿಸಿತು. ಪಡಿಲ್ ಫ್ಲೈ ಓವರ್ ಗೆ 30 ಲಕ್ಷ ರೂ. ಗಳನ್ನು ತಕ್ಷಣವೇ ಬಿಡುಗಡೆ ಮಾಡಲು ಜಿಲ್ಲಾಧಿಕಾರಿಗಳು ಸೂಚಿಸಿದರು. ಕಪಿತಾನಿಯಾ ವಿದ್ಯಾಸಂಸ್ಥೆಗೆ ಬರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ  ಶಾಲೆಯ ಬಳಿ ಸ್ಪೀಡ್ ಬ್ರೇಕರ್, ಝೀಬ್ರಾ ಕ್ರಾಸಿಂಗ್ ಹಾಗೂ ಸ್ಕೂಲ್ ಝೋನ್ ನಮೂದಿಸಿರುವ ಸೂಚನಾ ಫಲಕ ಅಳವಡಿಸಲು ಪೊಲೀಸ್ ಮತ್ತು ಪಾಲಿಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿಗಳು ಸೂಚಿಸಿದರು.
ಪಿವಿಎಸ್ ಸರ್ಕಲ್ ಬಳಿ ಹಾಗೂ ಬಂಟ್ಸ್ ಹಾಸ್ಟೆಲ್ ಬಳಿ ವಾಹನ ದಟ್ಟಣೆ ಪ್ರದೇಶವಾಗಿದ್ದು, ಇಲ್ಲಿ ಸಿಗ್ನಲ್ ಲೈಟ್ ಅಳವಡಿಸಬೇಕೆಂದು ಕರಂಗಲ್ಪಾಡಿ ಬಳಿ ಬಸ್ ತಂಗುದಾಣವಿಲ್ಲದಿದ್ದರೂ ಖಾಸಗಿ ಮತ್ತು ಕೆಎಸ್ ಆರ್ಟಿಸಿ ಬಸ್ಸುಗಳು ನಿಲ್ಲುತ್ತಿದ್ದು ಸದರಿ ಬಸ್ಸುಗಳು ನಿಲುಗಡೆ ಮಾಡುತ್ತಿರುವುದನ್ನು ನಿಷೇಧಿಸಬೇಕೆಂದು ಸಭೆಯಲ್ಲಿ ಕೋರಲಾಯಿತು.
ಬೆಳ್ತಂಗಡಿ, ಬಂಟ್ವಾಳ ಪರಿಸರದಲ್ಲಿ ಜೀಪುಗಳು ಪರವಾನಿಗೆರಹಿತವಾಗಿ ಜನ ತುಂಬಿಸಿಕೊಂಡು ಹೋಗುತ್ತಿದ್ದು, ಬಸ್ ಗಳು ಈ ವ್ಯಾಪ್ತಿಯಲ್ಲಿ ಸಂಚರಿಸುವುದಿಲ್ಲ; ಹಾಗಾಗಿ ಇಂತಹ ಜೀಪುಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್ ಸಭೆಯ ಗಮನಕ್ಕೆ ತಂದರು. ಜೀಪುಗಳನ್ನು ನಿಲ್ಲಿಸುವುದರಿಂದ ಇಲ್ಲಿನ ಜನಕ್ಕೆ ಸಂಪರ್ಕ ಕೊರತೆಯಾಗಲಿದೆ; ಆದರೆ ಇವುಗಳಿಗೆ ಹಳದಿ ಬೋಡ್ರ್  ನೀಡಿ ಕಾನೂನಿನಡಿ ಅನುಮತಿ ನೀಡುವ ಬಗ್ಗೆ ಕ್ರಮಕೈಗೊಳ್ಳಬೇಕಿದೆ. ಈ ಬಗ್ಗೆ ಎಸ್ ಪಿ ನೀಡಿದ ವರದಿಯನ್ನಾಧರಿಸಿ ಆರ್ ಟಿ ಒ ಸರ್ಕಾರಕ್ಕೆ ತುರ್ತು ಕ್ರಮಕ್ಕೆ ಬರೆಯಿರಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ನಗರದಲ್ಲಿ ಟ್ರಕ್ ಹಾಗೂ ಬುಲೆಟ್ ಟ್ಯಾಂಕರ್ ಗಳು ರಸ್ತೆ ಬದಿ ನಿಲ್ಲಿಸುವುದನ್ನು ತಡೆಯಲು ಟ್ರಕ್ ಟರ್ಮಿನಲ್ ಸ್ಥಾಪಿಸುವ ಬಗ್ಗೆ ಪ್ರಸ್ತಾಪ ಸಕರ್ಾರಕ್ಕೆ ಸಲ್ಲಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಶಾಲಾ ಮಕ್ಕಳ ಸುರಕ್ಷತೆ ಬಗ್ಗೆ ಮಕ್ಕಳ ವಾಹನದ ಬಗ್ಗೆ ಕೈಗೊಂಡಿರುವ ಕಾನೂನುಗಳು ರಾಜ್ಯ ಸರ್ಕಾರದ್ದಾಗಿದ್ದು, ಸರ್ಕಾರದ ಆದೇಶ ಅನುಷ್ಠಾನ ಜಿಲ್ಲಾಡಳಿತದ ಹೊಣೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಪೆರ್ನೆ ಅಪಘಾತದ ಹಿನ್ನಲೆಯಲ್ಲಿ ತೈಲ ಕಂಪೆನಿಗಳು ಎಲ್ಲ ಟ್ರಕ್ ಗಳು ಎರಡು ಡ್ರೈವರ್ ಗಳನ್ನು ಖಚಿತಪಡಿಸಿಕೊಳ್ಳಬೇಕೆಂದು ಇಂದು ಆರ್ ಟಿ ಒ ಸಭೆಯಲ್ಲಿ ಹೇಳಿದರು. ಇನ್ನೂ ಹಲವು ಟ್ರಕ್ ಗಳಲ್ಲಿ ನಿಯಮಪಾಲನೆಯಾಗದಿರುವುದು ಕಂಡು ಬಂದಿದ್ದು, ಸಂಬಂಧಪಟ್ಟವರು ಎಚ್ಚರಿಕೆ ವಹಿಸಬೇಕು. ಹಾಗೂ ಈ ಪ್ರದೇಶದಲ್ಲಿ ಒಂದು ತುರ್ತು ನಿರ್ವಹಣೆಗೊಂದು ಮೊಬೈಲ್ ವಾಹನವನ್ನು ತೈಲ ಕಂಪೆನಿಗಳು ನಿರ್ವಹಿಸಬೇಕೆಂದರು.
ಜ್ಯೋತಿ ಸರ್ಕಲ್ ಬಳಿ ಮತ್ತು ವೆನ್ ಲಾಕ್ ಆಸ್ಪತ್ರೆ ಬಳಿ ನೋ ಹಾರ್ನ್ ಝೋನ್ ಗುರುತಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಮಂಗಳೂರು ಮಹಾನಗರಪಾಲಿಕೆ ಆಯುಕ್ತ ಶ್ರೀಕಾಂತ್ ರಾವ್, ಎಸಿಪಿ ಸುಬ್ರಮಣ್ಯ, ಬಸ್ ಮಾಲಕರು, ಆಟೋ ರಿಕ್ಷಾ ಸಂಘದ ಪ್ರಮುಖರು, ಸಾರ್ವಜನಿಕರು ಸಭೆಯಲ್ಲಿದ್ದರು.

Saturday, June 22, 2013

ಬಂದರು ಅಭಿವೃದ್ಧಿಗೆ ಬಜೆಟ್ ನಲ್ಲಿ 50 ಕೋ.ರೂ. : ಸಚಿವ ಬಾಬುರಾವ್ ಚಿಂಚನಸೂರ್

ಮಂಗಳೂರು, ಜೂನ್. 22: ರಾಜ್ಯದ ಬಂದರು ಅಭಿವೃದ್ಧಿನ ಹಾಗೂ ಕಡಲ್ಕೊರೆತ ತಡೆಗೆ ಬಜೆಟ್ ನಲ್ಲಿ 50 ಕೋಟಿ ರೂ. ಮೀಸಲಿಟ್ಟಿದೆ ಎಂದು ಜವಳಿ, ಬಂದರು ಮತ್ತು ಒಳನಾಡು ಸಾರಿಗೆ ಸಚಿವರಾದ ಬಾಬುರಾವ್ ಚಿಂಚನಸೂರ್ ಅವರು ಹೇಳಿದರು.
ಇಂದು ನಗರದ ಸರ್ಕಿಟ್  ಹೌಸ್ ನಲ್ಲಿ ಆಯೋ ಜಿಸಿದ್ದ ಪತ್ರಿಕಾ ಗೋಷ್ಟಿ ಯನ್ನು ಉದ್ದೇ ಶಿಸಿ ಮಾತ ನಾಡಿದ ಅವರು, ಅಭಿ ವೃದ್ಧಿ ಕಾರ್ಯ ಗಳನ್ನು ಇಲಾಖೆ ಅತ್ಯಂತ ತ್ವರಿ ತಗತಿ ಯಲ್ಲಿ ಅನು ಷ್ಠಾನಕ್ಕೆ ತರ ಲಿದೆ ಎಂದರು. ಕರಾವಳಿಯ ಕಡ ಲ್ಕೊರೆತ ತಡೆಗೆ ಹಾಗೂ ಎಡಿಬಿ ಆಧಾರಿತ ಶಾಶ್ವತ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ನಡೆಸಲಾಗುವುದು. ಮೂರು ಹಂತಗಳಲ್ಲಿ ಈ ಸಂಬಂಧ ಕಾಮಗಾರಿಗಳು ನಡೆಯಲಿವೆ ಎಂದು ಪ್ರತಿಕ್ರಿಯಿಸಿದರು.
ಯಾದ ಗಿರಿಯಲ್ಲಿ ಅಂತರರಾಷ್ಟ್ರೀಯ ಜವಳಿ ಪಾರ್ಕ್  ನಿರ್ಮಿಸಲು ಉದ್ದೇಶಿಸಲಾಗಿದ್ದು, ಈ ಸಂಬಂಧ ಒಟ್ಟು 3,300 ಎಕರೆ ಜಮೀನು ಸ್ವಾಧೀನ ಪಡಿಸಲಾಗಿದೆ. ಜವಳಿ ಫಾರ್ಮಿಗೆ ಒಂದು ಸಾವಿರ ಎಕರೆ ಮೀಸಲಿರಿಸಿದೆ. ಇದರಿಂದ ಹೈದರಾಬಾದ್ ಕರ್ನಾಟಕದ ಜನರಿಗೆ ನೌಕರಿ ಜೊತೆಗೆ ನೇಕಾರರಿಗೆ ವಿಫುಲ ಅವಕಾಶ ಲಭ್ಯವಾಗಲಿದೆ ಎಂದರು.
ಕರ್ನಾಟಕ ಮೆರಿಟೈಮ್ ಬಿಲ್ ರಾಷ್ಟ್ರಪತಿಗಳ ಅಂಕಿತಕ್ಕಾಗಿ ಸಲ್ಲಿಸಿದ್ದು, 300 ಕಿ.ಮೀ ಉದ್ದದ ಕರ್ನಾಟಕ ಕರಾವಳಿ ತೀರ ಈ ಯೋಜನೆಯಡಿ ಬರಲಿದೆ ಎಂದರು. ಕರಾವಳಿಯ ಕಡಲ್ಕೊರೆತ ತಡೆಗೆ ಒಟ್ಟು 911 ಕೋಟಿ ರೂ.ಗಳ ಯೋಜನೆ ರೂಪಿಸಲಾಗಿದೆ ಎಂದು ಬಂದರು ಇಲಾಖೆಯ ನಿರ್ದೇಶಕರಾದ ಕ್ಯಾಪ್ಟನ್ ಆರ್ ಮೋಹನ್ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಈ ಸಂದರ್ಭದಲ್ಲಿ ಕ್ಯಾಪ್ಟನ್ ಸ್ವಾಮಿ, ಕಾರ್ಯನಿರ್ವಾಹಕ ಇಂಜಿನಿಯರ್ ಟಿ ಎಸ್ ರಾಥೋಡ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುಜನ್ ಎ ಎಸ್ ರಾವ್ ಉಪಸ್ಥಿತರಿದ್ದರು.

Friday, June 21, 2013

'ಎಲ್ಲರೂ ಕಲಿಯೋಣ ಎಲ್ಲರೂ ಬೆಳೆಯೋಣ'

ಮಂಗಳೂರು, ಜೂನ್. 21: ಶಿಕ್ಷಣ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಗೆ ಕಾರಣವಾದದ್ದು ಸರ್ವಶಿಕ್ಷಣ ಅಭಿಯಾನ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ  ಕೊರಗಪ್ಪ ನಾಯಕ್ ಅವರು ಹೇಳಿದರು.
ಈ ಯೋಜನೆಯಿಂದಾಗಿ ನಮ್ಮ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಹೊಸ ವಾತಾವರಣ ಸೃಷ್ಟಿಯಾಯಿತು. ಮೂಲಭೂತ ಸೌಕರ್ಯ ಅಭಿವೃದ್ಧಿ ಪಡಿಸಲು, ಶೌಚಾಲಯ ನಿರ್ಮಾಣ, ಶಾಲಾ ಕಂಪೌಂಡ್,ತೋಟಗಾರಿಕೆ, ಕೃಷಿ ದರ್ಶನ, ಕಂಪ್ಯೂಟರ್ ಶಿಕ್ಷಣಗಳಿಗೆ ಅನುದಾನ ದೊರೆಯಿತು. ಶಾಲಾ ವಾತಾವರಣ ಉತ್ತಮಗೊಂಡಿತು ಎಂದು ಅಧ್ಯಕ್ಷರು ನುಡಿದರು.
ಅವರಿಂದು ಮುಲ್ಕಿಯ ರುಕ್ಕರಾಮ ಸಾಲಿಯಾನ ಸಭಾಗೃಹದಲ್ಲಿ ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ವಾರ್ತಾ ಇಲಾಖೆ, ಸಂಗೀತ ಮತ್ತು ನಾಟಕ ವಿಭಾಗ ಭಾರತ ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಶ್ರೀ ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಮುಲ್ಕಿ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ 'ಸರ್ವ ಶಿಕ್ಷಣ ಅಭಿಯಾನ' ಬಗ್ಗೆ ವಿಶೇಷ ಆಂದೋಲನ ಕಾರ್ಯಕ್ರಮ ಹಾಗೂ ಬೆಂಗಳೂರಿನ ಯಕ್ಷದೇಗುಲ ತಂಡದ ಖ್ಯಾತ ಕಲಾವಿದರಿಂದ ಶೈಕ್ಷಣಿಕ ಜಾಗೃತಿ ಬಗ್ಗೆ ಯಕ್ಷಗಾನ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸರ್ಕಾರಗಳು ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಅರಿವು ಮೂಡಿಸುವುದರಿಂದ ಯೋಜನೆಗಳ ಅನುಷ್ಠಾನ ಸುಲಭವಾಗಲಿದೆ ಎಂದರು. ಇದೇ ಸಂದರ್ಭದಲ್ಲಿ ಸಾಂಕ್ರಾಮಿಕ ರೋಗಗಳ ಬಗ್ಗೆಯೂ ಜನರು ಎಚ್ಚರಿಕೆ ವಹಿಸಬೇಕು. ಅನಾರೋಗ್ಯ ಕಾಡಿದ ಕೂಡಲೇ ಹತ್ತಿರದ ಆರೋಗ್ಯ ಕೇಂದ್ರಗಳಿಗೆ ತೆರಳಿ ಆರೋಗ್ಯ ಪರೀಕ್ಷೆ ಮಾಡಿಸಬೇಕೆಂದರು.
ಸಭೆಯಲ್ಲಿ ನಗರಪಂಚಾಯತ್ ಅಧ್ಯಕ್ಷರಾದ  ಶಶಿಕಾಂತ್ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ನಿರ್ದೇಶಕರಾದ ಎಂ ನಾಗೇಂದ್ರ ಸ್ವಾಮಿ, ಕಸಾಪ ಮಾಜಿ ಅಧ್ಯಕ್ಷರಾದ ಶ್ರೀ ಹರಿಕೃಷ್ಣ ಪುನರೂರು, ನಗರಪಂಚಾಯತ್ ಉಪಾಧ್ಯಕ್ಷ  ಯೋಗೀಶ್ ಕೋಟ್ಯಾನ್,  ನಾರಾಯಣ ಗುರು ಆಂಗ್ಲ ಮಾಧ್ಯಮ ಶಾಲೆ ಮುಲ್ಕಿಯ ಸಂಚಾಲಕರಾದ  ಹರೀಶ್ಚಂದ್ರ ಕೋಟ್ಯಾನ್, ಯಾದೀಶ್ ಅಮೀನ್ ಅತಿಥಿಗಳಾಗಿ ಪಾಲ್ಗೊಂಡರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಶ್ರೀಮತಿ ಚಂದ್ರಕಲಾ ಸಿ ಆರ್ ಪಿ (ಕ್ಲಸ್ಟರ್ ರಿಸೋರ್ಸ್ ಪರ್ಸನ್) ವಿಶೇಷ ಉಪನ್ಯಾಸ ನೀಡಿದರು. ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಸಹಾಯಕ ನಿರ್ದೇಶಕರಾದ  ಕೆ ಪಿ ರಾಜೀವನ್, ವಾರ್ತಾಧಿಕಾರಿ ಶ್ರೀಮತಿ ರೋಹಿಣಿ. ಕೆ ಉಪಸ್ಥಿತರಿದ್ದರು. ಶಿಕ್ಷಕ ರವೀಂದ್ರ ಪೂಜಾರಿ ಸ್ವಾಗತಿಸಿದರು. ಶ್ರೀಕಾಂತ್ ವಂದಿಸಿದರು. ಹರ್ಷರಾಜ್ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಕಲಾವಿದರಾದ  ವಿಶ್ವನಾಥ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು.

Wednesday, June 19, 2013

ಗೃಹ ಇಲಾಖೆಯಲ್ಲಿ ಖಾಲಿ ಹುದ್ದೆ ಭರ್ತಿಗೆ ಕ್ರಮ: ಗೃಹಸಚಿವ ಕೆ.ಜೆ. ಜಾರ್ಜ್

ಮಂಗಳೂರು, ಜೂನ್.19:- ರಾಜ್ಯ ಸರ್ಕಾರ ಗೃಹ ಸಚಿವಾಲಯವನ್ನು ಸಬಲಗೊಳಿಸಲು ಖಾಲಿ ಇರುವ 19,000 ಹುದ್ದೆಗಳನ್ನು ತುಂಬಲು ನಿರ್ಧರಿಸಿದ್ದು, ಪ್ರಥಮ ಹಂತದಲ್ಲಿ 8,000 ಖಾಲಿ ಹುದ್ದೆ ಭರ್ತಿಗೆ ಕ್ರಮ ಕೈಗೊಂಡಿದೆ ಎಂದು ರಾಜ್ಯ ಗೃಹಸಚಿವ ಕೆ ಜೆ ಜಾರ್ಜ್  ಹೇಳಿದರು.
ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಲಾಖಾ ಪ್ರಗತಿ ಪರಿಶೀಲನೆ ಬಳಿಕ ಪೊಲೀಸ್  ಕಮಿಷನರ್ ಕಚೇರಿಯಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಹುದ್ದೆ ಭರ್ತಿ ವೇಳೆ ಇಲಾಖೆಯಲ್ಲಿ ಶೇಕಡ 20ರಷ್ಟು ಹುದ್ದೆಯನ್ನು ಮಹಿಳೆಯರಿಗೆ ಮೀಸಲಿರುಸುವಲ್ಲೂ ಮುತುವರ್ಜಿ ವಹಿಸಲಿದೆ ಎಂದರು.ಉದ್ಯೋಗ ನೇಮಕಾತಿ ಸಂದರ್ಭದಲ್ಲಿ  ಬುಡಕಟ್ಟು ವರ್ಗದವರಿಗೂ ಆದ್ಯತೆ ನೀಡಲು ಕ್ರಮವಹಿಸಲಾಗುವುದು ಎಂದರು.
ಪೊಲೀಸ್ ಇಲಾಖೆಯನ್ನು ಅತ್ಯಾಧುನಿಕ ಗೊಳಿಸಲು ಕ್ರಮಕೈಗೊಳ್ಳಲಾಗುವುದು. ಮೂಲ  ಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಪೊಲೀಸರ  ವಸತಿಗೃಹವನ್ನು ಈ ಸಾಲಿನಲ್ಲಿ 5,000 ಮನೆಗಳನ್ನು ನಿರ್ಮಿಸಲಾಗುವುದು. ಸಿಬ್ಬಂದಿಗಳಿಗೆ ಆರೋಗ್ಯ ಭಾಗ್ಯ ಮತ್ತು ಕೌಶಲ್ಯ ತರಬೇತಿ ನೀಡಲು ಸರ್ಕಾರ ಯೋಜಿಸಿದೆ ಎಂದರು.
ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ಯಾರೂ ಮಂತ್ರಿಗಳು ಸೇರಿದಂತೆ ಕಾನೂನು ಚೌಕಟ್ಟು ಮೀರಿ ಕೆಲಸ ಮಾಡಲು ಅವಕಾಶವಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆ ನಮ್ಮದು; ದೇಶದ ಸಂವಿಧಾನ ಹಾಗೂ ಕಾನೂನು ಪಾಲನೆ ಎಲ್ಲರ ಕರ್ತವ್ಯ. ಕಾನೂನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ನಕ್ಸಲ್ ರು ಮುಖ್ಯ ವಾಹಿನಿಗೆ  ಬರಲು ವೇದಿಕೆ ಒದಗಿಸಲಾಗುವುದು. ಇಲಾಖೆಯನ್ನು ಬಲಪಡಿಸಿ ಕಾನೂನು ಸುವ್ಯಸ್ಥೆಯ ಮೂಲಕ ಅಭಿವೃದ್ಧಿಯ ಬುನಾದಿಯನ್ನು ಸ್ಥಿರ ಪಡಿಸಲಾಗುವುದು. ಪತ್ರಿಕಾಗೋಷ್ಟಿಯಲ್ಲಿ ಪೊಲೀಸ್ ಮಹಾನಿರೀಕ್ಷಕ ಪಶ್ಚಿಮ ವಲಯ ಪ್ರತಾಪ್ ರೆಡ್ಡಿ, ಕಮಿಷನರ್ ಮನಿಷ್ ಕರ್ಬಿಕರ್, ಎಸ್ ಪಿ ಅಭಿಷೇಕ್ ಗೋಯಲ್ ಉಪಸ್ಥಿತರಿದ್ದರು.

ಪ್ರಾಕೃತಿಕ ವಿಕೋಪ-ಅಧಿಕಾರಿಗಳು ಕೇಂದ್ರಸ್ಥಾನದಲ್ಲಿ


ಮಂಗಳೂರು, ಜೂನ್.19: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮುಂಗಾರು ಪ್ರಾರಂಭವಾಗಿದ್ದು,ಕೆಲವು ಪ್ರದೇಶದಲ್ಲಿ ಜೀವಹಾನಿ ,ಜಾನುವಾರು ಹಾನಿ ಹಾಗೂ ವಾಸದ ಮನೆಗಳ ಅಂಶಿಕ ಹಾನಿ ಸಂಭವಿಸಿರುತ್ತದೆ. ಸಂತ್ರಸ್ಥರಿಗೆ ಸಕಾಲದಲ್ಲಿ ಪರಿಹಾರ ನೀಡುವ ಬಗ್ಗೆ ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ಇಲಾಖೆಯ ಸಹಕಾರವು ಅತೀ ಆವಶ್ಯವಿದ್ದು,ಜಿಲ್ಲಾ ಮಟ್ಟದ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿ ಇದ್ದು, ಸಾರ್ವಜನಿಕ ತೊಂದರೆಗಳಿಗೆ ಸ್ಪಂದಿಸಲು ಮುತುವರ್ಜಿ ವಹಿಸುವುದು ಅತೀ ಆವಶ್ಯವಾಗಿದೆ. ಆದ್ದರಿಂದ ಎಲ್ಲಾ ಜಿಲ್ಲಾ ಮಟ್ಟದ/ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿ ಇರುವಂತೆ ನಿರ್ದೇಶಿಸಿದ್ದು,ಅನಿವಾರ್ಯ ಸಂದರ್ಭದಲ್ಲಿ (ಮೇಲಾಧಿಕಾರಿಗಳ ಸಭೆಗೆ) ಕೇಂದ್ರಸ್ಥಾನ ಬಿಡುವಾಗ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆಯತಕ್ಕದ್ದು.ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರುವ ಎಲ್ಲಾ ಅಧಿಕಾರಿಗಳು/ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಜರಗಿಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ. 

Tuesday, June 18, 2013

ಜಿಲ್ಲೆಯಲ್ಲಿ ಗುಟ್ಕಾ ನಿಷೇಧ: ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಆದೇಶ

ಮಂಗಳೂರು,ಜೂನ್.18 : ಗುಟ್ಕಾ ನಿಷೇಧ ಆದೇಶವನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ತಹಸೀಲ್ದಾರರು ಮತ್ತು ತಾಲೂಕು ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿ ದಾಳಿ ನಡೆಸುವಂತೆ ಜಿಲ್ಲಾಧಿಕಾರಿ ಎನ್ ಪ್ರಕಾಶ್ ಆದೇಶ ನೀಡಿದ್ದಾರೆ.
ರಾಜ್ಯ ಸರ್ಕಾರ ಈಗಾಗಲೇ ನಿಷೇಧವನ್ನು ಜಾರಿಗೆ ತಂದದ್ದು, ಈ ಆದೇಶದ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಈ ಸಂಬಂಧ 17ರಂದು ಸಂಜೆ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವ್ಯಾಪಾರಿಗಳು, ಸಗಟು ಮಾರಾಟದಾರರು ತಮ್ಮಲ್ಲಿರುವ ಸ್ಟಾಕ್ ಮುಗಿಸಲು ಕದ್ದುಮುಚ್ಚಿ ತಮ್ಮ ಖಾಯಂ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರೆ ತಕ್ಷಣವೇ ಅಂತಹುದಕ್ಕೆ ಅವಕಾಶ ನೀಡದಂತೆ ಒಂದು ಕಾರ್ಯಪಡೆ ರಚಿಸಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳು ಸೂಚಿಸಿದರು. ಜಿಲ್ಲೆಯಲ್ಲಿರುವ ಆಹಾರ ಸುರಕ್ಷಾ ಅಧಿಕಾರಿ ಹಾಗೂ ಡಾ ರಾಜೇಶ್ ಅವರು ಇದಕ್ಕೆ ಅಂಕಿತ ಅಧಿಕಾರಿಗಳಾಗಿರುತ್ತಾರೆ.
ಗುಟ್ಕಾ ಮತ್ತು ಪಾನ್ ಮಸಾಲಗಳು, ತಂಬಾಕು ಮತ್ತು ನಿಕೋಟಿನ್ ಘಟಕಾಂಶಗಳನ್ನು ಒಳಗೊಂಡ ಆಹಾರ ಪದಾರ್ಥಗಳು ಈ ಅಧಿಸೂಚನೆಯಡಿ ಬರುತ್ತವೆ. ತಂಬಾಕು ಮತ್ತು ನಿಕೋಟಿನ್ ಘಟಕಾಂಶಗಳನ್ನೊಳಗೊಂಡ ಗುಟ್ಕಾ ಮತ್ತು ಪಾನ್ ಮಸಾಲ ಆಹಾರ ಪದಾರ್ಥಗಳ ಸೇವನೆಯಿಂದ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದ್ದು, ಕರುಳು, ಶ್ವಾಸಕೋಶ, ಹೃದಯಕ್ಕೆ ಸಂಬಂಧಿಸಿದಂತೆ ಹಾಗೂ ಕ್ಯಾನ್ಸರ್ ರೋಗಗಳಿಗೆ ಸಾರ್ವಜನಿಕರು ಬಲಿಯಾಗುತ್ತಿದ್ದಾರೆ. ಯುವಜನತೆ ಗುಟ್ಕಾ ಸೇವನೆಯ ಚಟಕ್ಕೆ ಬೀಳುತ್ತಿದ್ದಾರೆ. ಇದು ಸಾಮಾಜಿಕ ಮತ್ತು ಆರ್ಥಿಕ ವ್ಯವಸ್ಥೆಯ ಮೇಲೆ ದುಷ್ಪರಿಣಾಮ ಬೀರುವುದನ್ನು ಗಮನಿಸಿ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಜಿಲ್ಲಾ ಅಂಕಿತ ಅಧಿಕಾರಿಗಳು ಹಾಗೂ ಆಹಾರ ಸುರಕ್ಷತ ಅಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕೆಂದು  ಜಿಲ್ಲಾಧಿಕಾರಿಗಳು ಆದೇಶಿಸಿದರು.
ಆಯಾ ಸ್ಥಳೀಯ ಸಂಸ್ಥೆಯ ಮುಖ್ಯಾಧಿಕಾರಿಗಳು/ಪೌರಾಯುಕ್ತರು ಹಾಗೂ ಆರೋಗ್ಯಾಧಿಕಾರಿಗಳು ಈ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡತಕ್ಕದ್ದು ಎಂದ ಜಿಲ್ಲಾಧಿಕಾರಿಗಳು, ಅಗತ್ಯವಿದ್ದಲ್ಲಿ ಪೊಲೀಸ್ ಇಲಾಖೆಯ ಸಹಕಾರ ಪಡೆಯಿರಿ ಎಂಬ ಸೂಚನೆಯನ್ನೂ ನೀಡಿದರು. ಗುಟ್ಕಾ ಮತ್ತು ಪಾನ್ ಮಸಾಲಗಳ ಮಾರಾಟ, ಶೇಖರಣೆ ಹಾಗೂ ವಿತರಣೆಯಲ್ಲಿ ತೊಡಗಿರುವ ವ್ಯಾಪಾರಸ್ಥರು ಪತ್ತೆಯಾದರೆ ಅವರ ವ್ಯಾಪಾರ ಪರವಾನಿಗೆಯನ್ನು ರದ್ದುಗೊಳಿಸಲು ಸೂಚಿಸಿದರು.
ನಿಯಮ ಉಲ್ಲಂಘನೆಗೆ ಗರಿಷ್ಠ 10 ಲಕ್ಷರೂ. ದಂಡ ವಿಧಿಸುವ ಅಧಿಕಾರವೂ ಇದೆ. ದಂಡದ ಹಣವನ್ನು ಜಾಗೃತಿ ಕಾರ್ಯಕ್ರಮಕ್ಕೆ ವಿನಿಯೋಗಿಸಲು ಅವಕಾಶವಿದೆ.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ, ಡಿಎಚ್ಒ ಶ್ರೀರಂಗಪ್ಪ, ಡಾ ರಾಮಕೃಷ್ಣ ಹಾಗೂ ತಹಸೀಲ್ದಾರ್ ಮತ್ತು ಆಹಾರ ಸುರಕ್ಷಾ ಅಧಿಕಾರಿಗಳು ಉಪಸ್ಥಿತರಿದ್ದರು.

Monday, June 17, 2013

'ಮನಪಾ ರಾಜ್ಯಕ್ಕೆ ಮಾದರಿ ಆಗಬೇಕು'

ಮಂಗಳೂರು ಜೂನ್ 17 :ಮಂಗಳೂರು ಮಹಾನಗರಪಾಲಿಕೆಯನ್ನು ರಾಜ್ಯಕ್ಕೆ ಮಾದರಿಯನ್ನಾಗಿ ಮಾಡುವ ಗುರಿ ತಮ್ಮ ಮುಂದಿದೆ ಎಂದು ರಾಜ್ಯ ನಗರಾಭಿವೃದ್ಧಿ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಮಾರ್ ಸೊರಕೆ  ಹೇಳಿದರು.
ರಾಜ್ಯದ ಪಾಲಿಕೆ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯ ಹಾಗೂ ರಸ್ತೆ, ಸಂಚಾರ ವ್ಯವಸ್ಥೆಯನ್ನು ಅಭಿವೃದ್ದಿ ಪಡಿಸಲು ಅರ್ಬನ್ ಲ್ಯಾಂಡ್ ಟ್ರಾನ್ಸ್ ಪೋರ್ಟ ಅಥಾರಿಟಿಯನ್ನು ಸ್ಥಾಪಿಸಲಾಗಿದೆ. ಈ ಸಮಿತಿಯಲ್ಲಿ ಪ್ರಧಾನ ಕಾರ್ಯದರ್ಶಿಗಳು ಸದಸ್ಯರಾಗಿರುವರು. ನಗರಗಳ ಸುಸ್ಥಿರ ಅಭಿವೃದ್ಧಿಯ ಉದ್ದೇಶದಿಂದ ಕೇಂದ್ರ ಹಾಗೂ ರಾಜ್ಯಗಳಲ್ಲಿ ಸ್ಥಾಪಿಸಲ್ಪಟ್ಟಿರುವ ಈ ಅಥಾರಿಟಿಯಡಿ 60 ಕೋಟಿ ರೂ. ಗಳಷ್ಟು ತುರ್ತುಅಗತ್ಯಕ್ಕೆ ಅನುದಾನವಿರುತ್ತದೆ.
ನಮ್ಮ ಅಗತ್ಯಗಳು ಹಾಗೂ ಯೋಜನೆಗಳು ಸಮಗ್ರವಾಗಿದ್ದು, ಸಲ್ಲಿಸಿಅನುಮೋದನೆ ಪಡೆದರೆ ನಗರದ ಅಭಿವೃದ್ಧಿಗೆ ಪೂರಕವಾಗಲಿದೆ ಎಂದು ಸಚಿವರು ಹೇಳಿದರು. ಈಗಾಗಲೇ ಗ್ರೇಟರ್ ಮಂಗಳೂರು ಸರ್ವೇಯಡಿ ಮಂಗಳೂರು ಮಹಾನಗರಪಾಲಿಕೆ ಅಭಿವೃದ್ಧಿಗೆ ಯೋಜನೆ ರೂಪಿಸಲಾಗಿದೆ ಎಂದು ಸಚಿವರು ಪಾಲಿಕೆ ಪ್ರಗತಿಪರಿಶೀಲನೆ ಬಗ್ಗೆ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಭಿವೃದ್ಧಿಗೆ ತೆರಿಗೆ ಹೆಚ್ಚಳ ಅನಿವಾರ್ಯವಾಗಿದ್ದು, ತೆರಿಗೆಯ ಭಾರವನ್ನು ಜನಸಾಮಾನ್ಯರ ಮೇಲೆ ಹೇರದೆ ಕೈಗಾರಿಕೆಗಳಿಗೆ ವಿಧಿಸುವ ಬಗ್ಗೆ ಚಿಂತಿಸಲಾಗುವುದು ಎಂದ ಸಚಿವರು, ನರ್ಮ ಯೋಜನೆಯಲ್ಲಿ ಸೇರ್ಪಡೆಗೊಳಿಸಲು ಈಗ ಜನಸಂಖ್ಯೆ ಮಾನದಂಡವಾಗಿಲ್ಲದ ಕಾರಣ ಈ ಯೋಜನೆಯಡಿ ಮಂಗಳೂರನ್ನು ಸೇರ್ಪಡೆಗೊಳಿಸಲು ಚಿಂತಿಸಿದೆ ಎಂದು ಸಚಿವರು ಹೇಳಿದರು. ಸಿಬ್ಬಂದಿ ಕೊರತೆ ಎಲ್ಲ ಇಲಾಖೆಗಳಲ್ಲೂ ಹಾಗೂ ರಾಜ್ಯದಾದ್ಯಂತ ಇದ್ದು, ಪಾಲಿಕೆ ಹಾಗೂ ಮೂಡಾ ಕಚೇರಿಗಳಲ್ಲಿ ಪಾರದರ್ಶಕಗೊಳಿಸಲು ವ್ಯವಸ್ಥೆಯನ್ನು ಗಣಕೀಕೃತ ಗೊಳಿಸಲಾಗುವುದು ಎಂದು ಸಚಿವರು ಹೇಳಿದರು.
ಪಾಲಿಕೆಯಲ್ಲಿ ಅಂತರ್ ವರ್ಗಾವಣೆ ನೀತಿಯನ್ನು ಜಾರಿಗೆ ತರಲಾಗುವುದು ಎಂದ ಸಚಿವರು, ಮಹಾನಗರಪಾಲಿಕೆ ಮತ್ತು ಮೂಡಾ ಜನರ ಹಾಗೂ ನಗರಾಭಿವೃದ್ದಿಗೆ ಪೂರಕವಾಗಿ ಕಾರ್ಯೋನ್ಮುಖಗೊಳಿಸುವುದು ತಮ್ಮ ಉದ್ದೇಶ ಎಂದರು. ಇದಕ್ಕೆಂದ ಪರಸ್ಪರರ ನಡುವೆ ಕೊಂಡಿಯಾಗಿ ಕೆಲಸ ಮಾಡಲು ಪಾಲಿಕೆಯಲ್ಲಿ ಒಂದು ಅಭಿವೃದ್ಧಿ ಅಧಿಕಾರಿಯ ಹುದ್ದೆಯನ್ನು ಭರ್ತಿ ಮಾಡಲಾಗುವುದೂ ಎಂದು ಅವರು ನುಡಿದರು.
ಮಹಾನಗರಪಾಲಿಕೆಯಡಿ ಇರುವ ಕಟ್ಟಡಗಳ ಬಾಡಿಗೆ, ಜಾಹೀರಾತು ತೆರಿಗೆ ಸಂಗ್ರಹದಲ್ಲಿ ನಿಗದಿತ ಗುರಿ ಯಾಕೆ ಸಾಧಿಸಿಲ್ಲ; ಎಲ್ಲ ಕಾಮಗಾರಿಗಳನ್ನು ನಿಗದಿತ ಸಮಯದೊಳಗೆ ಮಾಡಿ. ಮೂರು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ ಮಾಡಲಿರುವುದರಿಂದ ಪಿಪಿಟಿ ಪ್ರಸೆಂಟೇಷನ್ ನಲ್ಲಿ ಕಂಪಾರಿಟಿವ್ ಅಧ್ಯಯನ ವರದಿ ಇರಲಿ ಎಂದು ಅವರಿಂದು ಮಂಗಳೂರು ಮಹಾನಗರಪಾಲಿಕೆಯಲ್ಲಿ ಪಾಲಿಕೆ ಪ್ರಗತಿಪರಿಶೀಲನೆ ಸಭೆಯನ್ನುದ್ದೇಶಿಸಿ ಮಾತನಾಡಿದ ಸಂದರ್ಭದಲ್ಲಿ ಹೇಳಿದರು.
ಸಾಂಕ್ರಾಮಿಕ ರೋಗ ತಡೆಗೆ ಕೈಗೊಂಡ ಕ್ರಮ ಹಾಗೂ ಕಟ್ಟಡ ನಿಯಮ ಉಲ್ಲಂಘನೆ ಬಗ್ಗೆ ಸವಿವರ ವರದಿ ನೀಡಲು ಸೂಚಿಸಿದರು.
ಪಾಲಿಕೆಯಲ್ಲಿ ಆದಾಯ ತೆರಿಗೆ 2013 ಮತ್ತು 14 ರ ಸಾಲಿನಲ್ಲಿ 1152.38ಲಕ್ಷ ರೂ.ಗಳನ್ನು ಸಂಗ್ರಹಿಸಲಾಗಿದ್ದು, 3136.44 ಲಕ್ಷ ಸಂಗ್ರಹ ಬಾಕಿ ಇದೆ. ಜಾಹೀರಾತು ತೆರಿಗೆ ಸಂಗ್ರಹ ಹಾಗೂ ಅನಧಿಕೃತ ಜಾಹೀರಾತು ಫಲಕಗಳ ಬಗ್ಗೆ ಇನ್ನಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿ ಎಂದು ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.
ಉದ್ದಿಮೆ ಪರವಾನಿಗೆಯಡಿ 13-14ರ ಸಾಲಿನಲ್ಲಿ 23644 ಪರವಾನಿಗೆ ನೀಡಲಾಗಿದೆ. ಒಟ್ಟು 138.53 ಲಕ್ಷ ರೂ.ಗಳನ್ನು ವಸೂಲಿ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 271  ಹೊಸದಾಗಿ ಪರವಾನಿಗೆ ನೀಡಲಾಗಿದೆ. 57 ತಾತ್ಕಾಲಿಕ ಪರವಾನಿಗೆ ನೀಡಲಾಗಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಘನತ್ಯಾಜ್ಯ ವಿಲೇಗೆ ಸಂಬಂಧಿಸಿದಂತೆ ಪಾಲಿಕೆಯ 60 ವಾರ್ಡುಗಳಲ್ಲಿ 47 ವಾರ್ಡುಗಳನ್ನು ಗುತ್ತಿಗೆ ಆಧಾರದಲ್ಲಿ 8 ಪ್ಯಾಕೇಜುಗಳನ್ನಾಗಿ ವಿಂಗಡಿಸಿ ಟೆಂಡರು ಕರೆದು ಗುತ್ತಿಗೆ ನೀಡಲಾಗಿದೆ. ಘನತ್ಯಾಜ್ಯ ವಿಲೇವಾರಿಗಾಗಿ ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಪಚ್ಚನಾಡಿ ಪ್ರದೇಶದಲ್ಲಿ 77.93 ಎಕರೆ ಜಮೀನಿನಲ್ಲಿ ಕುಡ್ಸೆಂಪ್ ಯೋಜನೆಯಡಿಯಲ್ಲಿ ಕಾಂಪೋಸ್ಟ್ ಸ್ಥಾವರ ಹಾಗೂ ಸೆನಿಟರಿ ಲ್ಯಾಂಡ್ಫಿಲ್ ಸ್ಥಾವರ ನಿರ್ಮಿಸಿದ್ದು ಪಾಲಿಕೆ ನಿರ್ವಹಿಸುತ್ತಿದೆ.ಮನೆಮನೆಯಿಂದ ತ್ಯಾಜ್ಯ ಸಂಗ್ರಹಣೆ, ವಿಂಗಡಣೆ, ಶೇಖರಣೆ, ಸಾಗಾಣಿಕೆಯನ್ನು ಮಂಗಳೂರನ್ನು 2 ವಲಯಗಳನ್ನಾಗಿ ಮಾಡಿ ಹಾಗೂ ಕಾಂಪೋಸ್ಟ್ ಸ್ಥಾವರ ಮತ್ತು ಲ್ಯಾಂಡ್ ಫಿಲ್ ಘಟಕದ ಕಾರ್ಯಾಚರಣೆ ಹಾಗೂ ನಿರ್ವಹಣೆಯನ್ನು ಹೊರಗುತ್ತಿಗೆ ನೀಡಲು ಒಟ್ಟು 3 ಪ್ಯಾಕೇಜುಗಳಿಗೆ 7 ವರ್ಷಗಳ ಅವಧಿಗೆ ನಿರ್ವಹಿಸಲು ಟೆಂಡರ್ ಪ್ರಕ್ರಿಯೆ ಮುಕ್ತಾಯಗೊಂಡಿದ್ದು ಸರಕಾರದ ಅನುಮೋದನೆ ಪಡೆಯಲಾಗಿರುತ್ತದೆ.
ಆದರೂ ನಗರ ಶುಚಿತ್ವದೆಡೆ ನೀಡಿದ ಗಮನ ಸಾಲದು ಎಂದು ಶಾಸಕರು ಗಮನಸೆಳೆದಾಗ, ಕಾರಣ ಕೇಳಿದ ಸಚಿವರು, 47 ವಾರ್ಡುಗಳನ್ನು ನೈರ್ಮಲ್ಯಕ್ಕಾಗಿ ಗುತ್ತಿಗೆ ನೀಡಲಾಗಿದ್ದು, 13 ವಾರ್ಡುಗಳನ್ನು ಪೌರಕಾರ್ಮಿಕರಿಂದಲೇ ನಿರ್ವಹಿಸಲಾಗುತ್ತಿದೆ ಎಂದು ಅಧಿಕಾರಿಗಳು ವಿವರಿಸಿದರು.
ಮಳೆಗಾಲದ ಮುಂಚೆ ವಿವಿಧ ಕಾರಣಗಳಿಂದ ಸಾಂಕ್ರಾಮಿಕ ರೋಗ ಹರಡುವ ಬಗ್ಗೆ ಎಲ್ಲರಿಗೂ ಮಾಹಿತಿ ಇದ್ದು, ಈ ನಿಟ್ಟಿನಲ್ಲಿ ಮಹಾನಗರಪಾಲಿಕೆಯ ಆರೋಗ್ಯ ವಿಭಾಗ ಹೆಚ್ಚಿನ ಅಸ್ಥೆ ವಹಿಸಿ ಕಾರ್ಯನಿರ್ವಹಿಸಬೇಕಿದೆ ಎಂದು ಸಚಿವರು ನುಡಿದರು.
ಮಲೇರಿಯಾ ಹಾಗೂ ಡೆಂಗ್ಯು ನಿಯಂತ್ರಿಸುವಲ್ಲಿ ಕಳೆದ ಸಾಲಿಗೆ ಹೋಲಿಸಿದರೆ ಈ ಸಾಲಿನಲ್ಲಿ ಯಶಸ್ಸು ಸಾಧಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 13ನೇ ಫೈನಾನ್ಸ್ ನಡಿ %64 ರಷ್ಟು ಪ್ರಗತಿ ದಾಖಲಿಸಿದೆ. ರೈಲ್ವೇ ಕಾಮಗಾರಿಗಳಡಿಯಲ್ಲಿ ಮಹಾಕಾಳಿಪಡ್ಪಿನಲ್ಲಿ 14.29 ಕೋಟಿಗಳಿಗೆ ಯೋಜನೆ ತಯಾರಿಸಿದ್ದು, ಅನುಮೋದನೆಗಾಗಿ ರೈಲ್ವೇಯವರಿಗೆ ಸಲ್ಲಿಸಲಾಗಿದೆ. ಜೆಪ್ಪು ಕುಡುಪಾಡಿ ರಸ್ತೆ ಕೆಳಸೇತುವೆಗೆ ಅಂದಾಜು ಪಟ್ಟಿ ರೂ. 3.62 ಕೋಟಿಗಳಿಗೆ ತಯಾರಿಸಿದ್ದು, ರೈಲ್ವೇ ಇಲಾಖೆಗೆ ಹಣ ಪಾವತಿಸಲು ಸಕರ್ಾರವನ್ನು ವಿನಂತಿಸಲಾಗಿದೆ. ಪಡೀಲ್ ಬಜಾಲ್ ರಸ್ತೆ ಕೆಳಸೇತುವೆಗೆ ರೈಲ್ವೇ ಇಲಾಖೆಯಲ್ಲಿ 50:50 ಅನುಪಾತದಲ್ಲಿ ರೂ. 5.16 ಕೋಟಿ ಗಳಿಗೆ ಅನುಮೋದನೆಯಾಗಿದ್ದು, ಪಾಲಿಕೆಯು ರೂ. %50 ಮೊತ್ತ ಅಂದರೆ 2.58 ಕೋಟಿ ಗಳನ್ನು ರೈಲ್ವೇಗೆ ಪಾವತಿಸಲು ಕ್ರಮಕೈಗೊಳ್ಳಲಾಗಿದೆ ಎಂದು ಸೂಪರಿಂಟೆಂಡೆಂಟ್ ಇಂಜಿನಿಯರ್ ಸಭೆಯಲ್ಲಿ ಮಾಹಿತಿ ನೀಡಿದರು.
ವಾಜಪೇಯಿ ನಗರ ವಸತಿ ಯೋಜನೆಯಡಿ ಪ್ರಗತಿ ಸಮಾಧಾನಕರವಾಗಿಲ್ಲ ಎಂದ ಸಚಿವರು, ಮುಂದಿನ ದಿನಗಳಲ್ಲಿ ಅರ್ಹರಿಗೆ ಯೋಜನೆಗಳನ್ನು ತಲುಪಿಸುವಂತಹ ಕೆಲಸವಾಗಬೇಕೆಂದರು. ಈ ಸಂಬಂಧ ಅಧಿಕಾರಿ ಮಾಹಿತಿ ನೀಡಿ, ಸಮಿತಿಯಲ್ಲಿ 704 ಅರ್ಜಿಗಳಲ್ಲಿ 163 ಅರ್ಜಿಗಳು ಸ್ವೀಕೃತವಾಗಿದ್ದು, 20 ಜನರಿಗೆ ಮಾತ್ರ ರೂ. 75,000 ದಂತೆ ಸಹಾಯಧನ ಲಭ್ಯವಾಗಿದೆ ಎಂದರು. ಸಾಲ ಮಂಜೂರಾತಿಗಾಗಿ ಬ್ಯಾಂಕಿನಲ್ಲಿ 211 ಅರ್ಜಿಗಳು ಬಾಕಿ ಇವೆ ಎಂದರು.
ನಿವೇಶನ ಕೋರಿ ಒಟ್ಟು 3612 ಬಂದಿರುವ ಒಟ್ಟು ಅರ್ಜಿಗಳು, ತಹಸೀಲ್ದಾರರ ಕಚೇರಿಯಿಂದ ಗುರುತಿಸಲಾದ ಅರ್ಹ ಫಲಾನುಭವಿಗಳ ಸಂಖ್ಯೆ 918. ದಕ್ಷಿಣ ವಿಧಾನಸಭಾ ಕ್ಷೇತ್ರ 699, ಉತ್ತರ ವಿಧಾನಸಭಾ ಕ್ಷೇತ್ರ 219. ಆಶ್ರಯ ಸಮಿತಿಯಲ್ಲಿ ಫಲಾನುಭವಿಗಳಿಗೆ ನಿವೇಶನ ಹಂಚಿಕೆ ಮಾಡಲಾದ ಸಂಖ್ಯೆ 85.
ಪರಿಶಿಷ್ಟ ಪಂಗಡ ಮತ್ತು ವರ್ಗಗಳ ಅಭಿವೃದ್ಧಿಗಾಗಿ ಪ.ಜಾ/ಪ.ವ ಕಾಲನಿಗಳಲ್ಲಿ ರೂ. 98.35 ಲಕ್ಷ ವೆಚ್ಚದಲ್ಲಿ 3 ಅಂಬೇಡ್ಕರ್ ಭವನಗಳ ನಿರ್ಮಾಣ ಕಾರ್ಯವನ್ನು ಕೈಗೊಳ್ಳಲಾಗಿದೆ.
ಸಮಸ್ಯೆ ಬಂದಾಗ ತಾತ್ಕಾಲಿಕ ಪರಿಹಾರವನ್ನು ರೂಪಿಸದೆ 25 ವರ್ಷ ಭವಿಷ್ಯವನ್ನು ಗಮನದಲ್ಲಿರಿಸಿ ಯೋಜನೆ ರೂಪಿಸಿ. ದೂರದೃಷ್ಟಿಯೊಂದಿಗೆ ಯೋಜನೆಗಳು ರೂಪಿಸಲ್ಪಟ್ಟಾಗ ಸಮಸ್ಯೆಗಳು ಉದ್ಭವಿಸುವುದಿಲ್ಲ ಎಂದು ಸಚಿವರು ಹೇಳಿದರು.
ಪಾಲಿಕೆ ಹಾಗೂ ಮೂಡಾಕ್ಕೆ ಜಿಲ್ಲಾಧಿಕಾರಿಗಳೇ ಆಡಳಿತಾಧಿಕಾರಿಗಳಿದ್ದು, ಸಮಗ್ರ ನಿರ್ಧಾರ ಕೈಗೊಳ್ಳಲು ಅನುಕೂಲವಾಗಲಿದೆ. ಅಭಿವೃದ್ಧಿಯತ್ತ ಅಧಿಕಾರಿಗಳ ಚಿತ್ತವಿರಲಿ ಎಂದು ಸಚಿವರು ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ  ರಮಾನಾಥ ರೈ, ಶಾಸಕರಾದ  ಜೆ ಆರ್ ಲೋಬೋ,  ಮೊಯ್ದಿನ್ ಬಾವಾ, ಜಿಲ್ಲಾಧಿಕಾರಿ ಎನ್ ಪ್ರಕಾಶ್, ಪಾಲಿಕೆ ಆಯುಕ್ತರಾದ ಶ್ರೀಕಾಂತ್ ರಾವ್ ಉಪಸ್ಥಿತರಿದ್ದರು.

ಒಂಟಿ ನಿವೇಶನಗಳ ಅನುಮೋದನೆ ಸರಳಗೊಳಿಸಿ-ವಿನಯಕುಮಾರ್ ಸೊರಕೆ


ಮಂಗಳೂರು, ಜೂನ್. 17:ಬಡವರು ಸ್ವಂತ ಸೂರು ಇಲ್ಲದವರು ಜೀವನದ   ಮಹಾ ಆಸೆಯಲ್ಲಿ  ಮನೆ ಕಟ್ಟಿಕೊಳ್ಳಲು ಅನುಮೋದನೆಗಾಗಿ ಮೂಡಾ ಕಚೇರಿಗೆ ಬಂದರೆ ಅವರನ್ನು ಪ್ರೀತಿ ಪೂರ್ವಕವಾಗಿ ಗೌರವಾದರದಿಂದ ಮಾತನಾಡಿಸಿ, ಅವರ ಕೆಲಸವನ್ನು   ಆದಷ್ಟು ಸರಳವಾಗಿ ತ್ವರಿತವಾಗಿ ಮಾಡಿಕೊಡಿ ಎಂದು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳಿಗೆ ನಗರಾಭಿವೃದ್ಧಿ ಖಾತೆ ಸಚಿವ  ವಿನಯಕುಮಾರ ಸೊರಕೆ ಕಿವಿಮಾತು ಹೇಳಿದ್ದಾರೆ. ಅವರು ಇಂದು ಬೆಳಿಗ್ಗೆ ನಗರದ ಮೂಡಾ ಕಚೇರಿಯಲ್ಲಿ ಮೂಡಾ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದರು. ಮೂಡಾ ವತಿಯಿಂದ ಚೇಳ್ಯಾರು,ಮದ್ಯ ಗ್ರಾಮಗಳ ಬಳಿ ಮೂಡಾ ವತಿಯಿಂದ ನಿರ್ಮಿಸಲು ಉದ್ದೇಶಿಸಿರುವ ಬಡಾವಣೆಗೆ 200 ಎಕ್ರೆ ಖರೀದಿಸಲು  ಜಮೀನು ಖರೀದಿಸಿರುವ ಬಗ್ಗೆ ಸಾರ್ವಜನಿಕರಲ್ಲಿ ಸಂಶಯ ಮೂಡಿರುವುದರಿಂದ ಆ ಬಗ್ಗೆ ಕೂಡಲೇ ತನಿಖೆಗೊಳಪಡಿಸುವುದಾಗಿ ಅವರು ಈ ಸಂದರ್ಭದಲ್ಲಿ ತಿಳಿಸಿದರು.
        ಸಭೆಯಲ್ಲಿ ಶಾಸಕರಾದ ಜೆ.ಆರ್. ಲೋಬೋ, ಮೊಯ್ದಿನ್ ಬಾವಾ, ಮೋನಪ್ಪ ಭಂಡಾರಿ, ಜಿಲ್ಲಾಧಿಕಾರಿ ಹಾಗೂ ಮೂಡಾ ಅಧ್ಯಕ್ಷ ಎನ್. ಪ್ರಕಾಶ್ ಮುಂತಾದವರು ಹಾಜರಿದ್ದರು.

Saturday, June 15, 2013

ಅಭಿವೃದ್ಧಿಯೊಂದೇ ನಮ್ಮ ಗುರಿ: ಜಿಲ್ಲಾ ಉಸ್ತುವಾರಿ ಸಚಿವ

ಮಂಗಳೂರು, ಜೂನ್.15: ಸಾಮಾಜಿಕ ಭದ್ರತಾ ಯೋಜನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಕರ್ತವ್ಯವನ್ನು ಮಾನವೀಯತೆಯೊಂದಿಗೆ ನಿರ್ವಹಿಸಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಅರಣ್ಯ ಪರಿಸರ ಮತ್ತು ಜೀವಶಾಸ್ತ್ರ ಸಚಿವ  ರಮಾನಾಥ ರೈ ಅವರು ಹೇಳಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾದ ಪ್ರಗತಿ ಪರಿಶೀಲನೆ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಅರ್ಹ ಫಲಾನುಭವಿಗಳಿಗೆ ಪ್ರತೀ ತಿಂಗಳು ಸಾಮಾಜಿಕ ಭದ್ರತಾ ಯೋಜನೆಯಡಿ ನೀಡಲಾಗುವ ವೇತನ ವಿತರಣೆಯಾಗಬೇಕು. ಯೋಜನೆಯಡಿ ವಿವಿಧ ಕಾರಣಗಳಿಂದ ವಂಚಿತರಾದವರಿಗೆ ಮತ್ತೆ ಮರುಪರಿಶೀಲನೆ ನಡೆಸಿ ದೂರುಗಳು ಸಚಿವರ ಬಳಿ ಬಾರದ ಹಾಗೆ ಕ್ರಮ ವಹಿಸಬೇಕು ಎಂದು ಸಚಿವರು ನುಡಿದರು.
ಜಿಲ್ಲೆಯಲ್ಲಿ ಮೇ 2013ರಂತೆ ವೃದ್ದಾಪ್ಯ ವೇತನ -5229, ವಿಧವಾ ವೇತನ 26948, ಅಂಗವಿಕಲ ವೇತನ (40%) 9199, ಅಂಗವಿಕಲ ವೇತನ (75%) 5823, ಸಂಧ್ಯಾ ಸುರಕ್ಷಾ ವೇತನ 24726 ಒಟ್ಟು 71925 ಪಿಂಚಣಿ ಪಾವತಿಸಲಾಗಿದೆ ಎಂಬ ಮಾಹಿತಿಯನ್ನು ಅಪರ ಜಿಲ್ಲಾಧಿಕಾರಿ ಶ್ರೀ ದಯಾನಂದ ಕೆ ಎ ಅವರು ಮಾಹಿತಿ ನೀಡಿದರು.
ಸರಕಾರದ ಹೊಸ ಮಂಜೂರಾತಿ ಆದೇಶದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 15947 ಫಲಾನುಭವಿಗಳಿಗೆ ವೇತನ ನೀಡಲಾಗಿದೆ ಎಂದರು.
ಪಡಿತರ ವಿತರಣೆಗೆ ಸಂಬಂಧಿಸಿದಂತೆಈಗಾಗಲೇ ಎದುರಿಸುತ್ತಿರುವ ಹಲವು ಸಮಸ್ಯೆಗಳ ಪರಿಹಾರಕ್ಕಾಗಿ  ಆಹಾರ ಸಚಿವರ ಅಧ್ಯಕ್ಷತೆಯಲ್ಲಿ ಸಭೆ ಕರೆಯಲಾಗಿದ್ದು, ಹೊಸ ಕಾರ್ಡ್ ಮಾಡುವ ಸಂದರ್ಭದಲ್ಲಿ ಬಿಪಿಎಲ್ ಕಾಡ್ರ್ ನವರಿಗೆ ಆದ್ಯತೆ ನೀಡಲಾಗುವುದು ಎಂದು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಉಪನಿರ್ದೇಶಕರು ಸಭೆಗೆ ಮಾಹಿತಿ ನೀಡಿದರು.
ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹೊಸ ಸಾಫ್ಟ್ ವೇರ್ ಮತ್ತು ಫ್ರಾಂಚೈಸಿಗಳನ್ನು ಹೆಚ್ಚಿಸಲು ಒಪ್ಪಿದ್ದು, ಎನ್ ಐ ಸಿ ಅಧಿಕಾರಿಗಳು ನಿನ್ನೆಯಿಂದಲೇ ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ. 203 ಗ್ರಾಮಪಂಚಾಯತಿಗಳಲ್ಲಿ ಮತ್ತು 52 ಸರ್ವಿಸ್ ಸೆಂಟರ್ ಗಳಲ್ಲಿ ಪಡಿತರ ಕಾರ್ಡ್  ನೀಡಲು ನಿರ್ಧರಿಸಲಾಗಿದೆ ಎಂದು ಉಪನಿರ್ದೇಶಕರು ವಿವರಿಸಿದರು.
ಜುಲೈ 10ರಂದು ರಾಜ್ಯ ಸರ್ಕಾರದ ಮಹತ್ವಪೂರ್ಣ ಯೋಜನೆಯಾದ ಕೆಜಿಗೆ ಒಂದು ರೂ. ವಿನಂತೆ ಬಿಪಿಎಲ್ ಕಾರ್ಡುದಾರರಿಗೆ ಅಕ್ಕಿ ವಿತರಿಸಲು 7,000 ಟನ್ ಅಕ್ಕಿ ಸಂಗ್ರಹಿಸಲಾಗಿದ್ದು, ಹೆಚ್ಚುವರಿ ಗೋಡೌನ್ ನ್ನ್ನು ಸಜ್ಜುಗೊಳಿಸಲಾಗಿದೆ.ಹೊಸದಾಗಿ 6981 ಒಟ್ಟು ಕೋರಿದ ಕಾರ್ಡುಗಳಲ್ಲಿ 6900 ಕಾರ್ಡು ನೀಡಲಾಗಿದೆ.
ಮಂಗಳೂರಿಗೆ ಕುಡಿಯುವ ನೀರು ಸರಬರಾಜು ಮಾಡುವ ಉದ್ದೇಶದಿಂದ ನೇತ್ರಾವತಿ ನದಿಗೆ ತುಂಬೆ ಬಳಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಪ್ರಥಮ ಹಂತದಲ್ಲಿ 40 ಕೋಟಿ ರೂ. ಆಗಿದ್ದು, ಮುಳುಗಡೆ ಪ್ರದೇಶದ ಬಗ್ಗೆ ಮಾಹಿತಿ ಕೊರತೆ ಇರುವುದರಿಂದ ಜನರಲ್ಲಿ ಅಭದ್ರತೆ ಭಯ ಉಂಟಾಗಿದೆ. ಹಾಗಾಗಿ ಈ ಪ್ರದೇಶದ ಜನರಿಗೆ ಸಮಗ್ರ ಮಾಹಿತಿ ಹಾಗೂ ಪರಿಹಾರ ನೀಡುವ ಬಗ್ಗೆ ಯೋಜನೆ ರೂಪಿಸಿ ಎಂದು ಉಸ್ತುವಾರಿ ಸಚಿವರು ಸೂಚನೆ ನೀಡಿದರು.
ಐದು ಹಳ್ಳಿಗಳ 216.27 ಎಕರೆ ಮುಳುಗಡೆ ಯಾಗಲಿದ್ದು, 168 ಖಾಸಗಿ ಹಾಗೂ 48 ಎಕರೆ ಎಂದು ಗುರುತಿಸಲಾಗಿತ್ತು. ಆದರೆ ಆಗ  ಜನರ ಪ್ರತಿಭಟನೆಯಿಂದ ಮರು ಸಮೀಕ್ಷೆ ಮಾಡಿದ್ದು, ಆ ಪ್ರಕಾರ 6 ಗ್ರಾಮಗಳ 358 ಎಕರೆ ಪ್ರದೇಶ ಮುಳುಗಡೆಯಾಗಲಿದೆ ಹಾಗೂ ಕಲ್ಲು ನೆಡಲಾಗಿದೆ ಎಂಬ ಮಾಹಿತಿಯನ್ನು ಅಧಿಕಾರಿಗಳು ಸಭೆಗೆ ನೀಡಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಚಿವರು, ಯಾವುದೇ ಕಾರಣಕ್ಕೂ ಯೋಜನೆ ದಿಕ್ಕು ತಪ್ಪಬಾರದು ಜನರನ್ನು ದಾರಿತಪ್ಪಿಸಬಾರದು ಎಂದು ಎಚ್ಚರಿಕೆ ನೀಡಿದರು. ಕಾಮಗಾರಿ ಉಸ್ತುವಾರಿ ಮಂಡಳಿಗೆ ವಹಿಸಲಾಗಿದ್ದು, ಜನರಿಗೆ ಪರಿಹಾರವನ್ನು ಕಾಪರ್ೊರೇಷನ್ನವರು ನೀಡಲಿರುವರು. ಈಗಾಗಲೇ ಅಣೆಕಟ್ಟು ಕೆಲಸವನ್ನು ಎರಡೂವರೆ ವರ್ಷಗಳಿಂದ ಆರಂಭಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರು ಈ ಬಗ್ಗೆ ಸಮಗ್ರವಾಗಿ ಯೋಜನೆ ರೂಪಿಸಿ ಪರಿಹಾರದ ಯೋಜನೆಯೂ ಸಮಗ್ರವಾಗಿರಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ಶಾಸಕರು ಅಭಿಪ್ರಾಯ ವ್ಯಕ್ತಪಡಿಸಿ,  ಕಂದಾಯ ಇಲಾಖೆ ವ್ಯವಸ್ಥೆ ಶೋಚನೀಯವಾಗಿದ್ದು, ಅಜರ್ಿ ಕೊಟ್ಟು 180 ದಿವಸಗಳಾದರೂ ಮ್ಯುಟೇಷನ್ ಅರ್ಜಿ ವಿಲೇ ಆಗುತ್ತಿಲ್ಲ ಎಂದರು. ಈ ಬಗ್ಗೆ ಕಂದಾಯ ಕಾರ್ಯದರ್ಶಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿಗಳು ವಿಶೇಷ ಸಭೆ ನಡೆಸಿ ದಕ್ಷಿಣ ಕನ್ನಡ ಮತ್ತು ಉಡುಪಿ ಹಾಗೂ ಮಡಿಕೇರಿಯ ವಿಶೇಷ ಸಮಸ್ಯೆಗಳನ್ನು ತಿಳಿಸಿ ಪರಿಹರಿಸಬೇಕಿದೆ ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.
ನಗರಾಭಿವೃದ್ಧಿ ಹಾಗೂ ನಗರೋತ್ಥಾನ ಯೋಜನೆಗಳ ಬಗ್ಗೆ  ನಗರಾಭಿವೃದ್ಧಿ ಸಚಿವರ ಅಧ್ಯಕ್ಷತೆಯಲ್ಲಿ ವಿಶೇಷ ಸಭೆ ಸೋಮವಾರ ನಡೆಯಲಿರುವುದು. ಬಂಟ್ವಾಳ ಹಾಗೂ ಮೂಡಬಿದ್ರೆ ಸೇರಿದಂತೆ ಘನತ್ಯಾಜ್ಯ ವಿಲೇಗೆ 2 ತಿಂಗಳ ಗಡುವನ್ನು ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು, ಯಾವುದೇ ಸಬೂಬು ನೀಡದೆ ಘನತ್ಯಾಜ್ಯ ವಿಲೇಗೆ ಕ್ರಮಕೈಗೊಳ್ಳಬೇಕೆಂದರು.
ಘನತ್ಯಾಜ್ಯ ವಿಲೇಗೆ ಸಂಬಂಧಿಸಿದಂತೆ ಇಂತಹ ಯೋಜನೆಗಳ ವೇಳೆ ನಿಷ್ಠುರ ಕ್ರಮದ ಅಗತ್ಯವಿದೆ ಎಂದು ಯುವಜನಸೇವೆ ಮತ್ತು ಮೀನುಗಾರಿಕೆ ಸಚಿವ  ಅಭಯಚಂದ್ರ ಜೈನ್ ಹೇಳಿದರು. ಲೋಕೋಪಯೋಗಿ ಇಲಾಖೆ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಂಡ ಸಚಿವರು, ರಸ್ತೆ ಹಾಗೂ ಸೇತುವೆ ಅಭಿವೃದ್ಧಿ ಕಾಮಗಾರಿ ಸಮಾಧಾನಕರವಾಗಿಲ್ಲ ಎಂದರು. ಇಲಾಖೆಯು ಕಾರಣಗಳನ್ನು ಹೇಳದೆ ಕಾರ್ಯನಿರ್ವಹಿಸಬೇಕು. ಮಾತೃ ಇಲಾಖೆ ಇದಾಗಿದ್ದು, ಇತರರಿಗೆ ಮಾದರಿಯಾಗಿರಬೇಕು; ಕಾಮಗಾರಿ ಗುಣಮಟ್ಟ  ಹಾಗೂ ಕಾರ್ಯವೈಖರಿ ತೃಪ್ತಿಕರವಾಗಿಲ್ಲ ಎಂದರು.
ಕೋರ್ಟ್ ಕಾಮಗಾರಿ ಹಾಗೂ ಅದರ ಅಪ್ರೋಚ್ ರಸ್ತೆ ಬಗ್ಗೆ ಜಿಲ್ಲಾಧಿಕಾರಿ ಅಸಮಾಧಾನ ವ್ಯಕ್ತಪಡಿಸಿ ಸೂಕ್ತ ಮೂಲಭೂತ ವ್ಯವಸ್ಥೆ ಇಲ್ಲದೆ ಅತ್ಯಂತ ದೊಡ್ಡ ಬಿಲ್ಡಿಂಗ್ ಕಟ್ಟುವ ಬಗ್ಗೆ ಉಸ್ತುವಾರಿ ಸಚಿವರ ಗಮನಕ್ಕೆ ತಂದರು. ಕೋಟಿಗಟ್ಟಲೆ ಹಣ ವ್ಯಯಿಸಿ ಬರೀ ಕಟ್ಟಡ ನಿರ್ಮಾಣ ಮಾಡದೆ ಮೂಲಸೌಕರ್ಯ ಹಾಗೂ ಸಂಪರ್ಕದತ್ತ ಗಮನಹರಿಸಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇಲಾಖೆ ಅಧಿಕಾರಿಗಳು ಉತ್ತರಿಸಿ, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಒಟ್ಟು 4 ರಸ್ತೆಗಳನ್ನು 166.91 ಕಿ.ಮೀ ಉದ್ದಕ್ಕೆ ರೂ. 59.19 ಕೋಟಿ ಅಂದಾಜಿನಲ್ಲಿ 2 ಹಂತಗಳಲ್ಲಿ ಅಭಿವೃದ್ಧಿ ಪಡಿಸುವ ಪ್ರಸ್ತಾವನೆಯಿದೆ.
ಮೊದಲನೇ ಹಂತದಲ್ಲಿ 132.47 ಕಿ.ಮೀ ಉದ್ದದ ರಸ್ತೆಯನ್ನು ರೂ. 53.79 ಕೋಟಿ ಮೊತ್ತಗಳಲ್ಲಿ ಈಗಾಗಲೇ ಅನುಮೋದನೆ ಗೊಂಡಿದ್ದು, 2 ಕಾಮಗಾರಿಗಳು ಪ್ರಗತಿಯಲ್ಲಿರುತ್ತದೆ.
ಎರಡನೇ ಹಂತದಲ್ಲಿ 34.44 ಕಿ.ಮೀ ಉದ್ದದ ರಸ್ತೆಯನ್ನು ರೂ. 5.40 ಕೋಟಿ ಮೊತ್ತಗಳಲ್ಲಿ ಸರಕಾರದಿಂದ ಅನುಮೋದನೆ ದೊರಕಿದ ಕೂಡಲೇ ಕೈಗೆತ್ತಿಕೊಳ್ಳಲಾಗುವುದು.
ಮಂಗಳೂರು ವಿಭಾಗರಸ್ತೆ ಮತ್ತು ಸೇತುವೆಗಳ ಒಟ್ಟು 193 ಕಾಮಗಾರಿಗಳಿಗೆ ರೂ. 16680.02 ಲಕ್ಷಗಳು ಮಂಜೂರಾಗಿದ್ದು, ಇದರಲ್ಲಿ 108 ಕಾಮಗಾರಿಗಳನ್ನು ಪೂರ್ಣಗೊಳಿಸಲಾಗಿದ್ದು, 79 ಕಾಮಗಾರಿಗಳು ಪ್ರಗತಿಯಲ್ಲಿವೆ. 6 ಕಾಮಗಾರಿಗಳಿಗೆ ಗುತ್ತಿಗೆ ನಿಗದಿಪಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದರು.
ಜಿಲ್ಲೆಯಲ್ಲಿ ವಸತಿ ಮತ್ತು ನಿವೇಶನ ಯೋಜನೆ ಏನೇನೂ ತೃಪ್ತಿಕರವಾಗಿಲ್ಲ ಎಂದ ಜಿಲ್ಲಾ ಉಸ್ತುವಾರಿ ಸಚಿವರು, ದಕ್ಷಿಣ ಕನ್ನಡದಲ್ಲಿ ವಸತಿ ಯೋಜನೆ ಕಳೆದ ಹತ್ತು ವರ್ಷಗಳಿಂದ ಹಿಂದುಳಿದಿದೆ. ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕಿದೆ ಎಂದರು.
ಪಿಎಂಜಿಎಸ್ ವೈ, ಕೆ ಆರ್ ಡಿ ಸಿ ಎಲ್ ಕಾರ್ಯವೈಖರಿ ಬಗ್ಗೆ ಸಭೆಯಲ್ಲಿ ಎಲ್ಲರಿಂದಲೂ ತೀವ್ರ ಅಸಮಾಧಾನ ವ್ಯಕ್ತವಾಯಿತು.
ಯುವ ಜನ ಸೇವಾ ಮತ್ತು ಇಲಾಖೆಯ ಸಚಿವರು ದಕ್ಷಿಣ ಕನ್ನಡ ಜಿಲ್ಲೆಯವರೇ ಆಗಿದ್ದು, ಪ್ರಸಕ್ತ ಸಾಲಿನಲ್ಲಿ ಕ್ರೀಡೆಯಲ್ಲಿ ಜಿಲ್ಲೆಯನ್ನು ಕ್ರೀಡೆಯಲ್ಲಿ ಮುಂಚೂಣಿಗೆ ತರುವ ಪ್ರಯತ್ನ ಆಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದರು. ಜಿಲ್ಲೆಗೊಂದು ಸುಸ್ಸಜ್ಜಿತ ಕೀಡಾಂಗಣ ಹಾಗು ಕ್ರೀಡಾ ಶಾಲೆಯ ಅಗತ್ಯವಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಯಿತು. ಈಗಾಗಲೇ ಇರುವ ಕ್ರೀಡಾಂಗಣಗಳನ್ನು ಉನ್ನತೀಕರಿಸುವ ಕೆಲಸವಾಗಬೇಕು. ಹೊಸ ಈಜು ಕೊಳಕ್ಕೆ ಹಣ ಬಿಡುಗಡೆಯಾಗಿದೆ ಎಂದು ಯುವಜನಸೇವಾ ಇಲಾಖಾ ಸಚಿವ  ಅಭಯಚಂದ್ರ ಜೈನ್ ಹೇಳಿದರು.
ಬಂದರು ಮತ್ತು ಮೀನುಗಾರಿಕಾ ಇಲಾಖೆಯಡಿ ಕೈಗೊಂಡಿರುವ ನೂತನ ಯೋಜನೆಗಳ ಬಗ್ಗೆ ಸಮಗ್ರ ಮಾಹಿತಿ ನೀಡಬೇಕು ಎಂದರು. ಪ್ರಾಣ ಹಾಗೂ ಆಸ್ತಿಪಾಸ್ತಿ ನಷ್ಟವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕೆಂದರು. ಡ್ರೆಜ್ಜಿಂಗ್ ಯಂತ್ರ ಖರೀದಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಈ ಸಂದರ್ಭದಲ್ಲಿ ಹೇಳಿದರು.
ಕೊಯಿಲಾದಲ್ಲಿ ಪಶುವೈದ್ಯಕೀಯ ಕಾಲೇಜು ಪ್ರಕ್ರಿಯೆ ತ್ವರಿತ ಗತಿಯಲ್ಲಿ ಮುಂದುವರಿಯಲು ವಿಶೇಷ ಅಧಿಕಾರಿಯನ್ನು ನಿಯೋಜಿಸಲಾಗಿದ್ದು, 247 ಎಕರೆ ಭೂಮಿ ವಗರ್ಾಯಿಸಲಾಗಿದೆ. ಇಲ್ಲಿ ಕಾಮಗಾರಿಯಲ್ಲಿ ವಿಳಂಬ ಸಲ್ಲದು ಎಂದು ಉಸ್ತುವಾರಿ ಸಚಿವರಾದ  ರಮಾನಾಥ ರೈ ಅವರು ಹೇಳಿದರು.
ಸಮಾಜ ಕಲ್ಯಾಣ ಇಲಾಖೆಯ ಸಮಸ್ಯೆಗಳನ್ನು ಆಲಿಸಿದ ಸಚಿವರು, ಪ್ರಿ ಮೆಟ್ರಿಕ್ ಗಳನ್ನು ಪೋಸ್ಟ್ ಮೆಟ್ರಿಕ್ ಗಳಾಗಿ ಪರಿವತರ್ಿಸಲು ಕ್ರಮಕೈಗೊಳ್ಳಿ ಎಂದರು. ನನ್ನ ಜಿಲ್ಲೆಯಲ್ಲಿ ಅಂಗನವಾಡಿಗಳಿಗೆ ಸ್ವಂತ ಕಟ್ಟಡವಿರಬೇಕು. ಎಲ್ಲ ಅಂಗನವಾಡಿಗಳಿಗೆ ವಿದ್ಯುತ್ ಸೌಲಭ್ಯಹೊಂದಿದೆ ಎಂದರು.
ಜಿಲ್ಲೆಯಲ್ಲಿ 546 ಶಿಕ್ಷಕರ ಕೊರತೆ ಇದ್ದು, 100 ಶಿಕ್ಷಕರ ಆಯ್ಕೆಯಾಗಲಿದೆ. ಸಮಸ್ಯೆ ಪರಿಹಾರಕ್ಕೆ ಅತಿಥಿ ಉಪನ್ಯಾಸಕರನ್ನು ನೇಮಿಸಲು ಅವಕಾಶ ನೀಡಿ ಎಂದು ವಿದ್ಯಾಂಗ ಉಪನಿರ್ದೇಶಕರು ಕೋರಿದರು.
ಪೊಲೀಸ್ ಇಲಾಖೆಗೆ ವಿಶೇಷ ನಿರ್ದೇಶನ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯಲ್ಲಿ ಹಾಗೂ ಕಮಿಷನರೇಟ್  ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಯಾಗಬೇಕು ಎಂದರು. ಸಭೆಯಲ್ಲಿ ಪೊಲೀಸ್ ಕಮಿಷನರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸಿಇಒ, ಸಂಸದ  ನಳಿನ್ ಕುಮಾರ್, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಕೊರಗಪ್ಪ ನಾಯಕ್ ಸಭೆಯಲ್ಲಿದ್ದರು. 

ವೆನ್ಲಾಕ್ ಆಸ್ಪತ್ರೆಯಲ್ಲಿ ಜನಸ್ನೇಹಿ ವಾತಾವರಣವಿರಲಿ: ಯು.ಟಿ.ಖಾದರ್

ಮಂಗಳೂರು, ಜೂನ್. 15:- ಸಾಮಾನ್ಯವಾಗಿ ಜನರು ಸರ್ಕಾರಿ ಶಾಲೆ ಹಾಗೂ ಆಸ್ಪತ್ರೆ ಎಂದರೆ ಅನುಮಾನದಿಂದ ದೂರ ಉಳಿಯುತ್ತಾರೆ. ಆದ್ದರಿಂದ  ಅವರಲ್ಲಿ ವಿಶ್ವಾಸ ತುಂಬುವ, ಪ್ರೀತಿ ಸೌಹಾರ್ದಮಯ ಪರಿಸರ ನಿರ್ಮಾಣದ ಅಗತ್ಯ ಸರ್ಕಾರಿ ವೆನ್ಲಾಕ್ ಆಸ್ಪತ್ರೆಯಲ್ಲಿರಬೇಕೆಂದು ಕರ್ನಾಟಕ ಸರ್ಕಾರದ ಆರೋಗ್ಯ ಸಚಿವರಾದ ಯು.ಟಿ.ಖಾದರ್ ಅವರು ತಿಳಿಸಿದ್ದಾರೆ.
ಅವರು ಇಂದು ವೆನ್ಲಾಕ್ ಆಸ್ಪತ್ರೆಗೆ ಭೇಟಿ ನೀಡಿ, ಡೆಂಗಿ ಹಾಗೂ ಮಲೇರಿಯಾ ರೋಗ ಹರಡದಂತೆ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಆರೋಗ್ಯ ಇಲಾಖೆ ಪ್ರಧಾನ ಕಾರ್ಯದರ್ಶಿ ಮದನಗೋಪಾಲ ಅವರೊಂದಿಗೆ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು.
ವೆನ್ಲಾಕ್ ಆಸ್ಪತ್ರೆಯಲ್ಲಿ ವೆಂಟಿಲೇಷನ್(ಜೀವರಕ್ಷಕ ಕೃತಕ ಉಸಿರಾಟ) ಸೌಲಭ್ಯ ಹೆಚ್ಚ್ಚಿಸುವುದು` ಡಿ' ಗ್ರೂಪ್ ಹಾಗೂ ನಸರ್್ಗಳನ್ನು ನೇಮಕಾತಿ ಮಾಡಿಕೊಳ್ಳಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು. ಬಿಪಿಎಲ್ ಕಾಡರ್್ ರೋಗಿಗಳಿಗೆ ಸರ್ಕಾರದಿಂದ ಸರಬರಾಜಿಲ್ಲದ ಔಷಧಿಗಳನ್ನು ಹೊರಗಡೆಯಿಂದ ತರಿಸಿದಲ್ಲಿ ಅದರ ವೆಚ್ಚವನ್ನು ಮರುಪಾವತಿಸುವಂತೆ ಸೂಚಿಸಿದರು. ಲೇಡಿಗೋಷನ್ ಆಸ್ಪತ್ರೆಯಲ್ಲಿ ರೂ.10 ಕೋಟಿಯಲ್ಲಿ ಕ್ಯಾನ್ಸರ್ ರೋಗಿಗಳಿಗೆ ರೇಡಿಯೋಥೆರಪಿ ಚಿಕಿತ್ಸಾ ಘಟಕ ಆರಂಭಿಸಲಾಗುವುದೆಂದರು.
ಸಭೆಯಲ್ಲಿ ಜಿಲ್ಲಾ ಪ್ರಭಾರ ಸರ್ಜನ್ ಡಾ.ಈರಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಓ.ಆರ್.ಶ್ರೀರಂಗಪ್ಪ, ಆರೋಗ್ಯ ಇಲಾಖೆ ಆಯುಕ್ತ ವಿಜಯಕುಮಾರ್ ಜೋಗಿ ಮುಂತಾದವರು ಉಪಸ್ಥಿತರಿದ್ದರು.  

Friday, June 14, 2013

ಕಿನ್ನಿಗೋಳಿ ಬಹುಗ್ರಾಮ ಕುಡಿಯುವ ನೀರು ಯೋಜನೆಗೆ ಜುಲೈ ಅಂತ್ಯಕ್ಕೆ ಚಾಲನೆ

ಮಂಗಳೂರು, ಜೂನ್. 14:ಕಿನ್ನಿಗೋಳಿ ಬಹು ಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಕಾಮಗಾರಿಗಳು ಅಂತಿಮ ಹಂತ ತಲುಪಿದ್ದು, ವಿದ್ಯುತ್ ಹಾಗೂ ಪೈಪ್ ಲೈನ್ ಅಳವಡಿಕೆ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು,ಜುಲೈ ಅಂತ್ಯಕ್ಕೆ ನೀರು ಸರಬರಾಜು ಯೋಜನೆಗೆ ಚಾಲನೆ ಮಾಡಬಹುದಾಗಿದೆಯೆಂದು ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಅಭಿಯಂತರರಾದ ಸತ್ಯನಾರಾಯಣ ಅವರು ಗುರುವಾರ  ನಡೆದ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಜಿಲ್ಲೆಗೆ 2013-14ನೇ ಸಾಲಿಗೆ ಕುಡಿಯುವ ನೀರು ಪೂರೈಕೆಗಾಗಿ 46.24 ಕೋಟಿ ಮಂಜೂರಾತಿ ದೊರೆತಿದ್ದು, ಕಳೆದ ವರ್ಷದ ಬಾಕಿ ಇರುವ ಕುಡಿಯುವ ನೀರು ಯೋಜನೆಯಗಳನ್ನು ಶೀಘ್ರಗತಿಯಲ್ಲಿ ಪೂರ್ಣಗೊಳಿಸಲಾಗುವುದೆಂದು ಹಾಗೂ ಜಿಲ್ಲೆಯಲ್ಲಿ ಕೈಗೊಂಡಿರುವ ಬಹುಗ್ರಾಮಕುಡಿಯುವ ನೀರು ಯೋಜನೆ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಕೆಲವು ಯೋಜನೆಗಳ ಟೆಂಡರ್ ಪ್ರಕ್ರಿಯೆಯಲ್ಲಿ ಇರುವುದಾಗಿ ಅವರು ಸ್ಪಷ್ಟಪಡಿಸಿದರು.
ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳು ದಿನೇದಿನೇ ಹೆಚ್ಚುತ್ತಿರುವುದರಿಂದ ಅದನ್ನು ತಡೆಗಟ್ಟಲು ಎಲ್ಲಾ ಗ್ರಾಮ ಪಂಚಾಯತ್ ಗಳು ಹಾಗೂ ಪಟ್ಟಣ ಪಂಚಾಯತ್ ಗಳು ಸ್ವಚ್ಛತೆಗೆ ಆದ್ಯತೆ ನೀಡಬೇಕು.ಈ ದಿಸೆಯಲ್ಲಿ ತಮ್ಮ ತಮ್ಮ ವ್ಯಾಪ್ತಿಯ ಹೋಟೇಲ್ ವಿದ್ಯಾಥರ್ಿನಿಲಯಗಳು ಮುಂತಾದ ಕಡೆ ಶುಚಿತ್ವವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅವರಿಗೆ ನೋಟೀಸು ಕೊಡುವ ಮೂಲಕ ಅವರಲ್ಲಿ ಜಾಗೃತಿ ಉಂಟುಮಾಡಬೇಕು. ಹಾಗೂ ಸ್ವಚ್ಚತೆಗೆ ನಿರ್ಲಕ್ಷ್ಯ ತಾಳುವ ಹೋಟೇಲ್ ಗಳ ವಿರುದ್ಧ ಕ್ರಮ ಕೈಗೊಂಡು ಅಂತಹ ಹೋಟೇಲ್ ಗಳನ್ನು ಮುಚ್ಚುವಂತೆ ಗ್ರಾಮ ಪಂಚಾಯತ್ಗಳು ಕಾರ್ಯೋನ್ಮುಖರಾಗಬೇಕೆಂದು ಮುಖ್ಯ ಕಾರ್ಯ ನಿರ್ವಹಣಾದಿಕಾರಿ ಕೆ.ಎನ್.ವಿಜಯಪ್ರಕಾಶ್ ಸಭೆಯಲ್ಲಿ ಹಾಜರಿದ್ದ ತಾಲೂಕು ಪಂಚಾಯತ್ಗಳ ಕಾರ್ಯನಿರ್ವಹಣಾಧಿಕಾರಿಗಳಿಗೆ ಸೂಚಿಸಿದರು.
ವಾಜಪೇಯಿ ಆರೋಗ್ಯ ವಿಮೆ ಯೋಜನೆಯಡಿಯಲ್ಲಿ 422 ವಿವಿಧ ಕಾಯಿಲೆಗಳಿಗೆ ನಗರದ ಫಾದರ್ ಮುಲ್ಲರ್ಸ್ ಕ್ಷೇಮ್,ಯೇನೋಪಯ,ಸ್ಪೆಷಲ್ ಹಾಸ್ಟಿಟಲ್ ಹಾಗೂ ಎಜೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು,ಫಲಾನುಭವಿಗಳು ಇದರ ಉಪಯೋಗವನ್ನು ಪಡೆಯುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಒ.ಶ್ರೀರಂಗಪ್ಪ ತಿಳಿಸಿದರು.
ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಮಿಷನ್ ನಡಿಯಲ್ಲಿ ಜಿಲ್ಲೆಗೆ 100942899 ರೂ.ಗಳು ಮಂಜೂರಾಗಿದ್ದು ಇದರಲ್ಲಿ 86800671 ರೂ.ಗಳು ವೆಚ್ಚವಾಗಿದ್ದು, ಉಳಿಕೆ ಮೊತ್ತ 11985147 ಗಳನ್ನು ಸರ್ಕಾರಕ್ಕೆ ಹಿಂತಿರುಗಿಸಲಾಗಿದೆಯೆಂದು ಆರ್.ಸಿ.ಹೆಚ್ ಜಿಲ್ಲಾ ಅಧಿಕಾರಿ ಡಾ. ರುಕ್ಮಿಣಿಯವರು ಜಿಲ್ಲಾ ಪಂಚಾಯತ್ ಸಭೆಗೆ ಮಾಹಿತಿ ನೀಡಿದರು.

 

ಮೂಡಾ ಅಧ್ಯಕ್ಷರಿಂದ ಪ್ರಗತಿ ಪರಿಶೀಲನೆ

ಮಂಗಳೂರು, ಜೂನ್. 14: ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಜಿಲ್ಲಾಧಿಕಾರಿ ಎನ್ ಪ್ರಕಾಶ್ ಅವರು ಗುರುವಾರ ಮೂಡಾ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ ಕಚೇರಿಯ ಪ್ರಗತಿ ಪರಿಶೀಲನೆ ನಡೆಸಿದರು.
ಸಾರ್ವಜನಿಕರಿಂದ ಬಂದ ದೂರುಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಜಿಲ್ಲಾಧಿಕಾರಿಗಳು, ಪ್ರಸಕ್ತ ಸಾಲಿನ ಮೂಡಾದ ಯೋಜನೆಗಳು ಹಾಗೂ ಈವರೆಗೆ ಸಾಧಿಸಿದ ಪ್ರಗತಿಯ ಮಾಹಿತಿಯನ್ನು ಕಲೆ ಹಾಕಿದರು.
ಸಕರ್ಾರಕ್ಕೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಇದುವರೆಗೆ ಹೋದ ಯೋಜನೆಗಳು ಹಾಗೂ ಮಂಜೂರಾದ ಯೋಜನೆಗಳು, ಅನುಷ್ಠಾನಕ್ಕೆ ತಂದ ಯೋಜನೆಗಳ ಬಗ್ಗೆ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಅಧಿಕಾರಿಗಳು ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಬೇಕೆಂದು ಎಚ್ಚರಿಕೆ ನೀಡಿದರು. ಮೂಡಾ ಆಯುಕ್ತರಾದ ಎ ಸಿ ರೇಣುಕಾಪ್ರಸಾದ್ ಉಪಸ್ಥಿತರಿದ್ದರು.

Thursday, June 13, 2013

ಡೆಂಗ್ಯೂ ಪೀಡಿತರನ್ನು ಭೇಟಿ ಮಾಡಿದ ಜಿಲ್ಲಾಧಿಕಾರಿ.

ಮಂಗಳೂರು ಜೂನ್ 13: ನಗರದ  ಕೆಎಂಸಿ ಅತ್ತಾವರ ಆಸ್ಪತ್ರೆಯಲ್ಲಿ ಡೆಂಗ್ಯೂ ಪೀಡಿತರನ್ನು ಇಂದು ಜಿಲ್ಲಾಧಿಕಾರಿ  ಎನ್. ಪ್ರಕಾಶ್ ಅವರು ಭೇಟಿ ಮಾಡಿ, ಸಾಂತ್ವಾನ ಹೇಳಿದರು. ಜ್ವರ ಪೀಡಿತರ ಬಗ್ಗೆ ವಿಶೇಷ ಮುತುವರ್ಜಿವಹಿಸಿ ಶುಶ್ರೂಸೆ ನೀಡಿ ಎಂದು ಜಿಲ್ಲಾಧಿಕಾರಿಗಳು ವೈದ್ಯರಿಗೆ ಸೂಚನೆ ನೀಡಿದರು.    
ನಗ ರದ ಅತ್ತಾ ವರ ದಲ್ಲಿ ಒಟ್ಟು ಏಳು ಜನರು  ಡೆಂ ಗ್ಯೂ ಪೀಡಿ ತರಾ ಗಿದ್ದಾರೆ ಎಂಬ ಮಾಹಿ ತಿಯ ಹಿನ್ನಲೆ ಯಲ್ಲಿ ಅವ ರನ್ನು ವೀಕ್ಷಿ ಸಲು ತೆರ ಳಿದ ಜಿಲ್ಲಾ ಧಿಕಾರಿ ರೋಗ ಪೀಡಿ ತರಿಗೆ ನೀಡಿ ರುವ  ಚಿಕಿ ತ್ಸೆಯ ಬಗ್ಗೆ ಪರಿ ಶೀಲನೆ ನಡೆ ಸಿದರು.  ಇಬ್ಬ ರನ್ನು ಈಗಾ ಗಲೇ ಆಸ್ಪ ತ್ರೆಯಿಂ ದ ಬಿಡು ಗಡೆ ಗೊಳಿ ಸಲಾ ಗಿದ್ದು, ಪುತ್ತೂ ರಿನ ಕರು ಣಾಕರ ಅವ ರಿಗೆ ನೆಗೆ ಟಿವ್ ವರದಿ ಬಂದಿದೆ.  ಇನ್ನು ಉಳಿದ ಮೂವರು ಕೇರ ಳದ ಕಾಂಞ ಗಾಡು ಹಾಗೂ ನಿಲೇ ಶ್ವರದ ನಿವಾ ಸಿಗಳು, ಇನ್ನೊ ಬ್ಬರು ಪುತ್ತೂರು  ಬೆಟ್ಟಂ ಪಾಡಿಯ ಅಬೂ ಬಕ್ಕರ್ ಎಂಬು ವವರು ಹಾಗೂ ಮತ್ತೊ ಬ್ಬರು ಸುಳ್ಯದ ತಮ್ಮಪ್ಪ ಎನ್ನುವವರು. ಇವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತಿದ್ದು ಗುಣಮುಖರಾಗುತ್ತಿದ್ದಾರೆ.

Wednesday, June 12, 2013

ಬಾಲಕಾರ್ಮಿಕರ ಪುನರ್ವಸತಿಯು ಮುಖ್ಯ: ಚೌಡಪುರ್ಕರ್ ಅರುಣ್


ಮಂಗಳೂರು, ಜೂನ್. 12: ಬಾಲ ಕಾರ್ಮಿಕ ಪದ್ಧತಿ ಸಂಪೂರ್ಣ ನಿಷೇಧಕ್ಕೆ ಎಲ್ಲರೂ ಅಸ್ಥೆ ವಹಿಸಬೇಕು.  ಬಾಲಕಾರ್ಮಿಕರ ಪುನರ್ವಸತಿಗೆ ಪರಿಣಾಮಕಾರಿಯಾಗಿ ಯೋಜನೆ ರೂಪಿಸಬೇಕೆಂದು ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ  ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರೂ ಆದ  ಚೌಡಪುರ್ಕರ್ ಅರುಣ್ ಅವರು ಹೇಳಿದರು.
        ಅವರು ಇಂದು ನಗರದ ಪುರಭವನದಲ್ಲಿ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾಡಳಿತ ಹಾಗೂ ಜಿಲ್ಲಾ ಬಾಲ ಕಾಮರ್ಿಕ ಯೋಜನಾ ಸಂಘ ದಕ್ಷಿಣಕನ್ನಡ ಜಿಲ್ಲೆ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಮತ್ತು ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
           ಬಡತನ ,ಅನಕ್ಷರತೆ,ಅತೀ ಸಂತಾನ ಇವೇ ಮೊದಲಾದ ಕಾರಣಗಳಿಂದ ಸಂಸಾರದ ಬಂಡಿ ಸಾಗಲು ತಮ್ಮ ಎಳೆ ಮಕ್ಕಳನ್ನು ಕೂಲಿಗಾಗಿ ಬಾಲಕಾರ್ಮಿಕರನ್ನಾಗಿಸಲಾಗುತ್ತಿದೆ ಎಂದ ಅವರು, ಪೋಷಕರ ಆರ್ಥಿಕತೆ ಸುಧಾರಿಸುವ ಹಾಗೂ ಅವರು ಆರ್ಥಿಕವಾಗಿ ಮುಂದೆ ಬರುವಂತಹ ಕಾರ್ಯಕ್ರಮಗಳತ್ತ  ಅವರನ್ನು ಆಕರ್ಷಿಸುವ ಮೂಲಕ ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ ಸಾಧ್ಯವಾಗಲಿದೆ ಎಂದರು.
         ಸಮಾರಂಭದ ಅಂಗವಾಗಿ ಬೆಳಿಗ್ಗೆ ಜ್ಯೋತಿ ವೃತ್ತದಿಂದ ಪುರಭವನದ ವರೆಗೆ ಆಯೋಜಿಸಿದ್ದ ಕಾಲೇಜು ವಿದ್ಯಾರ್ಥಿಗಳ ಜಾಥಾವನ್ನು ಉದ್ಘಾಟಿಸಿ, ನಂತರ ಪುರಭವನದಲ್ಲಿ ನಡೆದ ಸಮಾರಂಭದಲ್ಲಿ ನೆರೆದಿದ್ದ ಸಭಿಕರಿಗೆ ಬಾಲ ಕಾರ್ಮಿಕ ಪದ್ಧತಿ ನಿಷೇಧಿಸುವ ಬಗ್ಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಅವರು ಮಾತನಾಡಿ, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಅತ್ಯಂತ ಕನಿಷ್ಠವಾಗಿದ್ದು ಜಿಲ್ಲೆಯನ್ನು ಬಾಲ ಕಾರ್ಮಿಕ ಮುಕ್ತ ಜಿಲ್ಲೆಯನ್ನಾಗಿಸುವಲ್ಲಿ ಅಭಿವೃದ್ಧಿ ಯೋಜನೆಗಳ ಅನುಷ್ಠಾನ ಇಲಾಖಾ ಜಿಲ್ಲಾ ಮಟ್ಟದ ಅಧಿಕಾರಿಗಳು ಬಡತನ ನಿರ್ಮೂಲನಾ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಕರೆ ನೀಡಿದರು.
        ಸಮಾರಂಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಶ್ರೀಮತಿ ಆಶಾ ನಾಯಕ್ ಅವರು ಮಾತನಾಡಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಕ್ಕಳ ರಕ್ಷಣೆಗೆ ಸರ್ಕಾರ ಮುಂದಾಗಿದೆ. ಆದ್ದರಿಂದ ಸಾರ್ವಜನಿಕರು ಎಲ್ಲಿಯೇ ಆಗಲೀ ಬಾಲ ಕಾಮರ್ಿಕರನ್ನು ಕಂಡಲ್ಲಿ ಚೈಲ್ಡ್ ಲೈನ್ ಗೆ  ತಿಳಿಸುವಂತೆ ಮನವಿ ಮಾಡಿದರು.
            ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾಧಿಕಾರಿ ಎನ್.ಪ್ರಕಾಶ್ ಅವರು ಮಾತನಾಡಿ, ಜಿಲ್ಲೆಯಲ್ಲಿ ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ತೊಡೆದು ಹಾಕುವ ದಿಸೆಯಲ್ಲಿ ಸಾರ್ವಜನಿಕರು ಜಿಲ್ಲಾಡಳಿತದೊಂದಿಗೆ  ಸಹಕರಿಸುವಂತೆ ಹಾಗೂ ನೇರವಾಗಿ ತಮ್ಮನ್ನು ದೂರವಾಣಿ ಮೂಲಕವೂ ಸಂಪರ್ಕಿಸಲು ವಿನಂತಿಸಿದರು.
           ಪ್ರಾಸ್ತಾವಿಕವಾಗಿ ಮಾತನಾಡಿ ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಡಿ.ಜಿ ನಾಗೇಶ್ ಅವರು ದೇಶದಲ್ಲಿ 14 ವರ್ಷಕ್ಕಿಂತ ಕಿರಿಯ ಬಾಲ ಕಾರ್ಮಿಕರ ಸಂಖ್ಯೆ 2 ಕೋಟಿ,ರಾಜ್ಯದಲ್ಲಿ 8.5 ಲಕ್ಷ ಇದ್ದು ಶೇಕಡಾ 90 ಗ್ರಾಮೀಣ ಪ್ರದೇಶದಲ್ಲಿ ಹಾಗೂ ಶೇಕಡಾ 10 ರಷ್ಟು ಪಟ್ಟಣ/ನಗರ ಪ್ರದೇಶಗಳಲ್ಲಿದ್ದಾರೆ. ಶೇಕಡಾ 45 ರಷ್ಟು ಹೆಣ್ಣು ಶೇಕಡಾ 55 ರಷ್ಟು ಗಂಡು ಮಕ್ಕಳಿದ್ದಾರೆ ಎಂದು ಅಂಕಿ ಅಂಶ ನೀಡಿದರು.ಬಾಲಕಾರ್ಮಿಕರಾಗಿ ಶೋಷಣೆಗೊಳಪಟ್ಟು ಅಲ್ಲಿಂದ ತಪ್ಪಿಸಿಕೊಂಡು ಪೋಲೀಸರ ಸಹಾಯದಿಂದ ಸ್ವಯಂ ಸೇವಾ ಸಂಸ್ಥೆ ಸೇರಿ ಎಸ್ ಎಸ್ ಎಲ್ ಸಿ ಯಲ್ಲಿ 376 ಅಂಕ ಗಳಿಸಿರುವ ಚಿತ್ರದುರ್ಗ ಮೂಲದ ಕು.ಗೀತಾ ತನ್ನ ಅನುಭವವನ್ನು ಸಭೆಯಲ್ಲಿ ಹಂಚಿಕೊಂಡರು.
            ಸಮಾರಂಭದಲ್ಲಿ ಹಿರಿಯ ಸಿವಿಲ್ ನ್ಯಾಯಾಧೀಶರಾದ  ಜೆ.ಎನ್.ಸುಬ್ರಹ್ಮಣ್ಯ, ವಕೀಲರ ಸಂಘದ ಅಧ್ಯಕ್ಷರಾದ ಅಶೋಕ ಅರಿಗ, ಮಹಾನಗರಪಾಲಿಕೆಯ ಪ್ರಭಾರ ಆಯುಕ್ತ ಶ್ರೀಕಾಂತ ರಾವ್, ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಮೋಸೆಸ್ ಜಯಶೇಖರ್, ಮಹಿಳಾ ಮಕ್ಕಳ ಆಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಶ್ರೀಮತಿ ಶಕುಂತಳಾ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಅರುಣ್ ಫುರ್ಟಾಡೋ, ಕಾರ್ಖಾನೆ ಮತ್ತು ಬಾಯ್ಲರು ಇಲಾಖೆ ಉಪ ನಿರ್ದೆಶಕರಾದ ನಂಜಪ್ಪ ಮುಂತಾದವರು ಉಪಸ್ಥಿತರಿದ್ದರು.

ಮೂಡಾ ಅಧ್ಯಕ್ಷರಾಗಿ ಜಿಲ್ಲಾಧಿಕಾರಿ ಅಧಿಕಾರ ಸ್ವೀಕಾರ

ಮಂಗಳೂರು ಜೂನ್ 12 :- ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಎನ್.ಪ್ರಕಾಶ್ ಅವರು ಇಂದು ಅಧಿಕಾರ ವಹಿಸಿಕೊಂಡಿರುತ್ತಾರೆ.
   ಇನ್ನು ಮುಂದೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಿಸಿದ ಕೆಲಸ ಕಾರ್ಯಗಳಿಗೆ ಹಾಗೂ ಅವರ ವೈಯಕ್ತಿಕ ಗಮನಕ್ಕೆ ತರುವಂತಹ ಪತ್ರಗಳು,ಅರೆ ಸರಕಾರಿ ಪತ್ರಗಳು ಹಾಗೂ ರಹಸ್ಯ ಪತ್ರಗಳನ್ನು ಎನ್. ಪ್ರಕಾಶ್, ಜಿಲ್ಲಾಧಿಕಾರಿಗಳು ಹಾಗೂ ಅಧ್ಯಕ್ಷರು,ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ,ಉರ್ವಸ್ಟೋರ್ಸ್,ಅಶೋಕನಗರ ಅಂಚೆ,ಮಂಗಳೂರು-6 ಈ ವಿಳಾಸಕ್ಕೆ ಕಳುಹಿಸಲು ಅವರು ಸೂಚಿಸಿದ್ದಾರೆ.

Tuesday, June 11, 2013

ಸ್ವಚ್ಛತೆ ಕಾಪಾಡಿ ಡೆಂಗ್ಯು ಹರಡದಂತೆ ತಡೆಗಟ್ಟಿ -ಡಾ.ಕೆ.ಎನ್.ವಿಜಯಪ್ರಕಾಶ್

ಮಂಗಳೂರು, ಜೂನ್. 11 : ಆರೋಗ್ಯ ಇಲಾಖೆಯೊಂದಿಗೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ,ಕೃಷಿ ,ಕಾರ್ಮಿಕ ಕಲ್ಯಾಣ, ಕೈಗಾರಿಕಾ ಇಲಾಖೆ, ಶಿಕ್ಷಣ ಇಲಾಖೆಗಳು ಕೈಜೋಡಿಸಿ ಜಿಲ್ಲೆಯಲ್ಲಿ ಡೆಂಗ್ಯು ಜ್ವರವನ್ನು ನಿಯಂತ್ರಿಸಲು ಎಲ್ಲರೂ ನೆರವಾಗಬೇಕೆಂದು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಅವರು ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಕರೆ ನೀಡಿದ್ದಾರೆ.
ಅವರು ಈ ಸಂಬಂಧ ತಮ್ಮ ಕಚೇರಿಯಲ್ಲಿ  ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಣ ಇಲಾಖೆ ವತಿಯಿಂದ ಶಿಕ್ಷಕರಿಗೆ ಡೆಂಗ್ಯು ಬಗ್ಗೆ ಜಾಗೃತಿ ಮೂಡಿಸುವ  ಜೊತೆಗೆ ಪ್ರತಿನಿತ್ಯ ಜಿಲ್ಲೆಯ ಎಲ್ಲಾ ಸಕರ್ಾರಿ,ಖಾಸಗಿ, ಅನುದಾನಿತ, ಅನುದಾನ ರಹಿತ ಶಾಲೆಗಳಲ್ಲಿ ಪ್ರಾರ್ಥನೆ ಸಂದರ್ಭದಲ್ಲಿ ಮಕ್ಕಳಿಗೆ ಸ್ವಚ್ಛತೆ ಬಗ್ಗೆ ಪ್ರತಿಜ್ಞೆಯನ್ನು ಬೋಧಿಸುವುದಲ್ಲದೆ, ಅವರ ಕುಟುಂಬ  ಅಥವಾ ಅಕ್ಕಪಕ್ಕದ ಮನೆಗಳಲ್ಲಿ ಡೆಂಗ್ಯು ಜ್ವರದ ಲಕ್ಷಣವುಳ್ಳವರ ಬಗ್ಗೆ ಮಾಹಿತಿ ಇದ್ದಲ್ಲಿ, ಅದನ್ನು ತಮ್ಮ ಶಾಲಾ ಶಿಕ್ಷಕರಲ್ಲಿ ತಿಳಿಸುವಂತೆ ಹಾಗೂ ಶಿಕ್ಷಕರು ತಮ್ಮ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಮಾಹಿತಿ ಒದಗಿಸುವಂತೆ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ಸೂಚಿಸಿದ್ದಾರೆ. ಜಿಲ್ಲೆಯ ಎಲ್ಲಾ ಸಕರ್ಾರಿ ವಿದ್ಯಾಥರ್ಿ ನಿಲಯಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವಂತೆ, ಮಕ್ಕಳು ಸೊಳ್ಳೆ ಪರದೆಗಳನ್ನು ಬಳಸುವಂತೆ ಎಚ್ಚರ ವಹಿಸಲು ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಜಿಲ್ಲಾ ಅಧಿಕಾರಿಗಳಿಗೆ ಸೂಕ್ತ ಕ್ರಮಗಳನ್ನು ವಹಿಸುವಂತೆ ಸೂಚಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,  ಅಂಗನವಾಡಿ ಮಕ್ಕಳಿಗೆ ಕಡ್ಡಾಯವಾಗಿ ಮೈಮುಚ್ಚುವಂತಹ ಬಟ್ಟೆಗಳನ್ನು ಧರಿಸಿ ಬರುವಂತೆ ಅವರ ಪೋಷಕರಲ್ಲಿ ತಿಳಿಸುವುದು,ಎಲ್ಲಾ  ಕೇಂದ್ರಗಳ ಕಿಟಿಕಿ ಬಾಗಿಲುಗಳಿಗೆ ಸೊಳ್ಳೆ ತಡೆಮೆಷ್ಗಳನ್ನು ಕೂಡಲೇ ಅಳವಡಿಸುವಂತೆ ಸೂಚಿಸಿದರು.
ವಿಶೇಷ ಗ್ರಾಮಸಭೆಗಳಲ್ಲಿ ಡೆಂಗ್ಯು ಜ್ವರದ ತೀವ್ರತೆಯ ಬಗ್ಗೆ ಗ್ರಾಮಸ್ಥರಲ್ಲಿ ಅರಿವು ಮೂಡಿಸುವುದಲ್ಲದೆ ಡೆಂಗ್ಯುವಿನಿಂದ ತಮ್ಮನ್ನು ರಕ್ಷಿಸಿಕೊಂಡು ಇತರರನ್ನು  ರಕ್ಷಿಸುವಂತೆ ಗ್ರಾಮೀಣ ಪ್ರದೇಶದ ಜನರ ಮನವೊಲಿಸಲು ಕೃಷಿ, ಕಂದಾಯ ಇಲಾಖೆ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಮುಂದಾಗಬೇಕೆಂದರು. ಸ್ವಚ್ಚತೆ ಆರೋಗ್ಯ ಹಾಗೂ ನೈರ್ಮಲ್ಯ ಪ್ರತಿಯೊಬ್ಬರ ವೈಯಕ್ತಿಕ ಹಾಗೂ ಸಮುದಾಯಿಕ ಜವಾಬ್ದಾರಿಯಾಗಿದ್ದು ಈ ನಿಟ್ಟಿನಲ್ಲಿ ಜನರು ಜಾಗೃತರಾಗಬೇಕೆಂದರು.
ಡೆಂಗ್ಯು ಜ್ವರ ಸಾಂಕ್ರಾಮಿಕ ರೋಗವಾಗಿರುವುದರಿಂದ ಸಮರೋಪಾದಿಯಲ್ಲಿ ಎಲ್ಲರೂ ಕೂಡಿ ಕಾರ್ಯ ಪ್ರವೃತ್ತರಾದರೆ ಮಾತ್ರ ಡೆಂಗ್ಯುವನ್ನು ತಡೆಯಲು ಸಾಧ್ಯ ಎಂದು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ತಿಳಿಸಿದ್ದಾರೆ.
ಜಿಲ್ಲಾ ಮಟ್ಟದ ಆರೋಗ್ಯ ಇಲಾಖಾ ವೈದ್ಯಾಧಿಕಾರಿಗಳ ಜೊತೆಗೆ ತಾಲೂಕು ಮಟ್ಟದ ಆರೋಗ್ಯ ಇಲಾಖಾ ಅಧಿಕಾರಿಗಳಾದ ಡಾ.ಅರುಣ್ ಕುಮಾರ್ ಸುಳ್ಯ, ಡಾ.ರಾಜೇಶ್,ಪುತ್ತೂರು,ಡಾ.ರಾಮಕೃಷ್ಣ ರಾವ್ ಪುತ್ತೂರು, ಡಾ.ಕಿಶೋರ್ ಬಂಟ್ವಾಳ ಹಾಗೂ ಡಾ.ರುಕ್ಮಿಣಿ ಇವರನ್ನು ಮಂಗಳೂರು ಗ್ರಾಮಾಂತರಕ್ಕೆ ನೋಡಲ್ ಅಧಿಕಾರಿಗಳಾಗಿ ನೇಮಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಓ.ಆರ್. ಶ್ರೀರಂಗಪ್ಪ ತಿಳಿಸಿದ್ದಾರೆ.
ಡೆಂಗ್ಯು ಜ್ವರ ಜಿಲ್ಲೆಯ ಸುಳ್ಯ, ಪುತ್ತೂರು, ಬಂಟ್ವಾಳ ತಾಲೂಕುಗಳಲ್ಲಿ ತೀವ್ರ ಸ್ವರೂಪದಲ್ಲಿರುವುದರಿಂದ ಸಾರ್ವಜನಿಕರು ಡೆಂಗ್ಯು ಬಗ್ಗೆ ಜಾಗೃತಿ ವಹಿಸುವಂತೆ ಡಾ.ಶ್ರೀರಂಗಪ್ಪ ತಿಳಿಸಿದ್ದಾರೆ.
ಸಭೆಯಲ್ಲಿ ಯೋಜನಾಧಿಕಾರಿ ನಜೀರ್ ,ಮಂಗಳೂರು ಮಹಾನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ಸುದರ್ಶನ್ ಮುಂತಾದವರು ಹಾಜರಿದ್ದರು.

                         

Monday, June 10, 2013

ರಾಜ್ಯಕ್ಕೆ ಮಾದರಿ ದಕ್ಷಿಣಕನ್ನಡ ಜಿಲ್ಲಾಧಿಕಾರಿ

ಮಂಗಳೂರು, ಜೂನ್.10:ಕರ್ನಾಟಕ ಸರ್ಕಾರ ಅಧಿಸೂಚನೆಯೊಂದನ್ನು ಹೊರಡಿಸಿದ್ದು,ಅದರಂತೆ ಇನ್ನು ಮುಂದೆ ಸರ್ಕಾರದ ಕಂದಾಯ ಅಧಿಕಾರಿಗಳು ಪೋಲೀಸ್ ಅಧಿಕಾರಿಗಳ ವಾಹನದ ಮೇಲಿನ ಕೆಂಪು ದೀಪ ಬಳಸುವಂತಿಲ್ಲ ಎಂಬುದಾಗಿ ಆದೇಶಿಸಿ ಹೊರಡಿಸಿದ ಆದೇಶಾನುಸಾರ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಎನ್.ಪ್ರಕಾಶ್ ಅವರು ಇಂದು ತಮ್ಮ ಅಧಿಕೃತ ವಾಹನದ ಮೇಲಿನ ಕೆಂಪು ದೀಪವನ್ನು ತೆಗೆಸುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.
 ಗಣ್ಯ/ಅತೀ ಗಣ್ಯ ಸರ್ಕಾರಿ ಅಧಿಕಾರಿಗಳ ಅಧಿಕೃತ ವಾಹನಗಳ ಮೇಲೆ ಕೆಂಪು ದೀಪ ಉಪಯೋಗಿಸುವ ಸಂಬಂಧ ಮಾನ್ಯ ಸವೋಚ್ಚ ನ್ಯಾಯಾಲಯವು ಪ್ರಕರಣವೊಂದರಲ್ಲಿ ನೀಡಿರುವ  ಆದೇಶದ ಹಿನ್ನಲೆಯಲ್ಲಿ ಇಲ್ಲಿಯವರೆಗೂ ಈ ಸಂಬಂಧ ಹೊರಡಿಸಲಾದ ಅಧಿಸೂಚನೆಗಳನ್ನು ಹಿಂದಕ್ಕೆ ಪಡೆದು ಈ ಕೆಳಕಂಡ ಪ್ರತಿಷ್ಠಿತ ವ್ಯಕ್ತಿಗಳ ಅಧಿಕೃತ ವಾಹನಗಳ ಮೇಲೆ ಮಾತ್ರ ವಿಐಪಿ ರೆಡ್ಟಾಪ್ ಲೈಟ್ ಬಳಸಲು ಕರ್ನಾಟಕ ಸರ್ಕಾರವು ಈ ಮೂಲಕ ನಿರ್ಧಿಷ್ಟ ಪಡಿಸಿ ಅಧಿಸೂಚನೆ ಹೊರಡಿಸಿದೆ.
ಗೌರವಾನ್ವಿತ ರಾಜ್ಯಪಾಲರು ,ಮಾನ್ಯ ಮುಖ್ಯ ಮಂತ್ರಿಗಳು ಮತ್ತು ಅವರ ಮಂತ್ರಿ ಮಂಡಲದ ಸಚಿವರುಗಳು ಮಾನ್ಯ ಸಭಾಪತಿ ಕರ್ನಾಟಕ ವಿಧಾನ ಪರಿಷತ್ ಹಾಗೂ ವಿಧಾನಸಭೆ ಸಭಾಧ್ಯಕ್ಷರು,ಗೌರವಾನ್ವಿತ ಮುಖ್ಯ ನ್ಯಾಯಾಧೀಶರು ಹಾಗೂ ಹಾಲಿ ನ್ಯಾಯಾಧೀಶರುಗಳು ಕರ್ನಾಟಕ ಉಚ್ಚ ನ್ಯಾಯಾಲಯ ಇವರನ್ನು ಹೊರತು ಪಡಿಸಿ ಸಚಿವರುಗಳ ಸಮಾನ ಸ್ಥಾನಮಾನ ಹೊಂದಿರುವ ನಿಗಮ/ಮಂಡಳಿ/ಪ್ರಾಧಿಕಾರಗಳ ಅಧ್ಯಕ್ಷರು/ಮುಖ್ಯಸ್ಥರು ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಾಧೀಶರ ಸಮಾನ ಸ್ಥಾನಮಾನ ಹೊಂದಿರುವ ನ್ಯಾಯಮಂಡಳಿ/ಆಯೋಗಗಳ ಅಧ್ಯಕ್ಷರುಗಳು /ಸದಸ್ಯರುಗಳು  ತಮ್ಮ ಅಧಿಕೃತ ವಾಹನಗಳ ಮೇಲೆ ಕೆಂಪು ದೀಪ ಅಳವಡಿಸಿಕೊಳ್ಳುವಂತಿಲ್ಲ.ಇದೇ ರೀತಿ ಕಂದಾಯ ಹಾಗೂ ಪೋಲೀಸ್ ಇಲಾಖೆಯ ಅಧಿಕಾರಿಗಳು ಸೇರಿದಂತೆ ಯಾವುದೇ ಸರ್ಕಾರಿ ಅಧಿಕಾರಿಗಳು ಮತ್ತು ಇತರೇ ಗಣ್ಯರು ತಮ್ಮ ಅಧಿಕೃತ ವಾಹನಗಳ ಮೇಲೆ ಕೆಂಪು ದೀಪ ಅಳವಡಿಸಿಕೊಳ್ಳುವಂತಿಲ್ಲ.
ಪ್ರತಿಷ್ಠಿತ ವ್ಯಕ್ತಿಗಳ ಭದ್ರತೆಗೆ ಉಪಯೋಗಿಸುವ ಪೋಲೀಸ್ ಎಸ್ಕಾರ್ಟ್ ವಾಹನಗಳು ಕೇಂದ್ರ ಮೋಟಾರು ವಾಹನ ನಿಯಮಗಳು 1989 ರ ನಿಯಮ 108(3)ರನ್ವಯ ನೀಲಿ ಬಣ್ಣದ ದೀಪ ಅಳವಡಿಸಿಕೊಳ್ಳತಕ್ಕದ್ದು ಎಂದು ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಕೆ.ಬಿರೇಶ್ ಅವರು  ತಿಳಿಸಿದ್ದಾರೆ.

ಮಳೆ ಅಬ್ಬರ ಜಿಲ್ಲೆಯಲ್ಲಿ 1 ಮನೆ ಸಂಪೂರ್ಣ 4 ಮನೆ ಭಾಗಶ: ಹಾನಿ

ಮಂಗಳೂರು, ಜೂನ್.10 : ಮುಂಗಾರು ಮಳೆಯ ಅಬ್ಬರಕ್ಕೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮೇ 8 ರಂದು ಬೆಳ್ತಂಗಡಿ ತಾಲ್ಲೂಕಿನ ಕೆಯ್ಯುರ್ ಗ್ರಾಮದಲ್ಲಿ ಒಂದು ಮನೆ ಸಂಪೂರ್ಣ ಕುಸಿದಿದ್ದರೆ ಮೇ 9 ರಂದು ಮಂಗಳೂರು  ತಾಲೂಕಿನ ಬಜಾಲ್, ಸೋಮೇಶ್ವರ,ಮೂಲ್ಕಿ ಹಾಗೂ ಕಾಟಿಪಳ್ಳದಲ್ಲಿ 4 ಮನೆಗಳು ಭಾಗಶ: ಹಾನಿಗೊಳಗಾಗಿ ಸುಮಾರು 1 ಲಕ್ಷ ರೂ.ಗಳಿಗೂ ಹೆಚ್ಚು ನಷ್ಟವುಂಟಾಗಿದೆ.
ಈ ಬಾರಿಯ ಮುಂಗಾರು ಮಳೆ 2013 ರ ಜನವರಿಯಿಂದ 10-6-13 ರ ವರೆಗೆ ಸರಾಸರಿ 444.9 ಮಿಲಿಮೀಟರ್ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 165.4 ಮಿಲಿಮೀಟರ್ ಮಳೆ ಆಗಿತ್ತು. ಈ ವರ್ಷ ಮಂಗಳೂರು ತಾಲೂಕಿನಲ್ಲಿ ಅತೀ ಹೆಚ್ಚು 589.8 ಮಿಲಿಮೀಟರ್ ಮಳೆ ಆಗಿದ್ದರೆ, ಬಂಟ್ವಾಳ ತಾಲೂಕಿನಲ್ಲಿ  ಕನಿಷ್ಠ 331.3 ಮಿಲಿಮೀಟರ್ ಮಳೆಯಾಗಿದೆ. ಬೆಳ್ತಂಗಡಿಯಲ್ಲಿ 458.0 ಮಿಲಿಮೀಟರ್,ಪುತ್ತೂರಿನಲ್ಲಿ 435.2 ಮಿಲಿಮೀಟರ್ ಹಾಗೂ ಸುಳ್ಯದಲ್ಲಿ 410.0 ಮಿಲಿಮೀಟರ್ ಮಳೆಯಾಗಿದೆ.
10-6-13 ರಂದು ಜಿಲ್ಲೆಯಲ್ಲಿ 19.9 ಮಿಲಿಮೀಟರ್ ಸರಾಸರಿ ಮಳೆಯಾಗಿದ್ದರೆ ಕಳೆದ ವರ್ಷ ಇದೇ ದಿನ 9.8 ಮಿಲಿಮೀಟರ್ನಷ್ಟು ಮಳೆಯಾಗಿತ್ತು. ಜೂನ್ ಮಾಹೆಯಲ್ಲಿ ಜಿಲ್ಲೆಯ ವಾಡಿಕೆ ಮಳೆ 941.8 ಮಿಲಿಮೀಟರ್ ಆಗಿದೆ.ವಾರ್ಷಿಕ ಸರಾಸರಿ ಮಳೆ 3912.2 ಮಿಲಿಮೀಟರ್ ಆಗಬೇಕಾಗಿದೆ.               

Saturday, June 8, 2013

ಶಿಕ್ಷಣದಿಂದ ಮಾತ್ರ ಸಾಮಾಜಿಕ ಬದಲಾವಣೆ ಸಾಧ್ಯ: ರಮಾನಾಥ ರೈ

ಮಂಗಳೂರು, ಜೂನ್.08: ಶಿಕ್ಷಣದಿಂದ ಮಾತ್ರವೇ ಸಾಮಾಜಿಕ ಬದಲಾವಣೆ ಸಾಧ್ಯವಾಗಿದ್ದು, ಅಕ್ಷರ ಜ್ಞಾನದಿಂದ ಮಾತ್ರವೇ ಶೋಷಣೆ ಮುಕ್ತ ಸಮಾಜ ನಿರ್ಮಾಣ ಸಾಧ್ಯವಾಗುವುದು ಎಂದು ರಾಜ್ಯ ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಖಾತೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅಭಿಪ್ರಾಯಪಟ್ಟಿದ್ದಾರೆ.
          ಇಂದು ನಗರದ ಸರಕಾರಿ ಶಿಕ್ಷಣ ಮಹಾವಿದ್ಯಾಲಯದ ನೂತನ ಸಭಾಂಗಣ ಹಾಗೂ ಆಡಳಿತ ಭವನ ಉದ್ಘಾಟಿಸಿ ಬಳಿಕ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು. ಕೇಂದ್ರ ಸರಕಾರವು ಸರ್ವ ಶಿಕ್ಷ ಅಭಿಯಾನದ ಮೂಲಕ ಶಾಲೆಗಳಿಗೆ ಸಕಲ ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ ಪ್ರೌಢ ಶಿಕ್ಷಣಕ್ಕೂ ಹೆಚ್ಚು ಒತ್ತು ನೀಡಿದೆ.ಸಂಪೂರ್ಣ ಸಾಕ್ಷರತಾ ಜಿಲ್ಲೆಯಾಗಿರುವ ದಕ್ಷಿಣ ಕನ್ನಡ ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವುದ ಒಟ್ಟಿಗೆ  ಶಿಕ್ಷಣಕ್ಕೆ ಹೊಣೆಗಾರಿಕೆಯ ಸಹಭಾಗಿತ್ವ ನೀಡಿರುವ ಜಿಲ್ಲೆಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
      ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾತನಾಡಿದ ಶಾಸಕ ಜೆ.ಆರ್. ಲೋಬೋ ಅವರು ಮಕ್ಕಳ ಹಕ್ಕುಗಳು ಮೊಟಕುಗೊಳ್ಳುತ್ತಿರುವ ಇಂದಿನ ಶೈಕ್ಷಣಿಕ ವ್ಯವಸ್ಥೆಯಲ್ಲಿ ಕ್ರಾಂತಿಕಾರಿ ಬದಲಾವಣೆಯೊಂದಿಗೆ ಗ್ರಾಮೀಣ ಪ್ರದೇಶಗಳಿಗೆ ಒತ್ತು ನೀಡುತ್ತಾ ಮಕ್ಕಳ ಹಕ್ಕುಗಳನ್ನು ಸಂರಕ್ಷಿಸುವ ಜವಾಬ್ಧಾರಿ ಶಿಕ್ಷಕರ ಮೇಲಿದೆ. ಮಕ್ಕಳನ್ನು ಕೇವಲ ಯಂತ್ರಮಾನವರನ್ನಾಗಿ  ಬೆಳೆಸದೆ, ಸಮಾಜವನ್ನು ಎದುರಿಸುವ ನಿಟ್ಟಿನಲ್ಲಿ ಪಠ್ಯೇತರ ಚಟುವಟಿಕೆಗಳ ಬಗ್ಗೆಯೂ ಅವರಲ್ಲಿ ಆಸಕ್ತಿ ಮೂಡಿಸಿ ಅವರು ಪಾಲ್ಗೊಳ್ಳುವಂತೆ ಪೋಷಕರು ಹಾಗೂ ಶಿಕ್ಷಕರು ಪ್ರೋತ್ಸಾಹಿಸಬೇಕೆಂದರು.
 ಡಿಎಸ್ಇಆರ್ ಟಿ  ಬೆಂಗಳೂರು ಇದರ ನಿರ್ದೇಶಕ ರಾಮರಾವ್ ಎಚ್.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿದರು.
 ದ.ಕ. ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜೇಂದ್ರ ಕಲ್ಬಾವಿ, ಪಾಲಿಕೆ ಸದಸ್ಯ ಎ.ಸಿ. ವಿನಯರಾಜ್ ಸಮಾರಂಭದಲ್ಲಿ ಉಪಸ್ಥಿತರಿದ್ದರು.ಸರಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯದ ಸಹ ನಿರ್ದೇಶಕಿ ಹಾಗೂ ಪ್ರಾಂಶುಪಾಲೆ ಫಿಲೋಮಿನಾ ಲೋಬೋ ಸ್ವಾಗತಿಸಿದರು. ಉಪನ್ಯಾಸಕ ಸಿಪ್ರಿಯಾನ್ ವಂದಿಸಿದರು.

 ಸಮಾರಂಭದ ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಸಚಿವರು ಗುಟ್ಕಾ ನಿಷೇಧವೆಂದರೆ ಅಡಿಕೆ ನಿಷೇಧವಲ್ಲ,ಗುಟ್ಕಾ ನಿಷೇಧ ಗುಜರಾತ್ ಸೇರಿದಂತೆ ದೇಶದ 20 ರಾಜ್ಯಗಳಲ್ಲಿ ಈಗಾಗಾಲೇ ಜಾರಿಯಲ್ಲಿದೆ. ಹಾಗಾಗಿ ಯಾವುದೇ ಕಾರಣಕ್ಕೂ ಗುಟ್ಕಾ ನಿಷೇಧದಿಂದ ಅಡಿಕೆ ಬೆಳೆಗಾರರಿಗೆ ತೊಂದರೆಯಾಗದು.  ಇದೀಗ ಆಮದು ಸುಂಕ ಹೆಚ್ಚಳ ಮಾಡುವ ಮೂಲಕ ಅಡಿಕೆ ಬೆಲೆ ಏರಿಕೆಯಾಗಿದೆ. ರೈತರಿಗೆ ತೊಂದರೆ ಆದಲ್ಲಿ ಅವರ ನೆರವಿಗೆ ಬರುವ ವಿಶ್ವಾಸದೊಂದಿಗೆ ಸರಕಾರ ಗುಟ್ಕಾ ನಿಷೇಧಕ್ಕೆ ಮುಂದಾಗಿದೆ. ರೈತರ ಹಿತವನ್ನು ಗಮನದಲ್ಲಿಟ್ಟುಕೊಳ್ಳಲಾಗುವುದು ಎಂದರು.
ಶೀಘ್ರದಲ್ಲೇ ಸ್ಥಳೀಯಾಡಳಿತ ಸಂಸ್ಥೆಗಳ ಮೇಯರ್ ಹಾಗೂ ಅಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗುವುದು. ಆ ಬಳಿಕ ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ಇತರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಪದಾಧಿಕಾರಿಗಳ ನೇಮಕ ಪ್ರಕ್ರಿಯೆ ನಡೆಯಲಿದೆ .ಇತರ ಇಲಾಖೆಗಳಿಗಿಂತ ಹಿಂದುಳಿದಿರುವ ಅರಣ್ಯ ಮತ್ತು ಪರಿಸರ ಇಲಾಖೆಯನ್ನು ಪರಿಸರ ಸ್ನೇಹಿಯಾಗಿಸುವ ಜೊತೆಗೆ ಜನಸ್ನೇಹಿಯಾಗಿಸುವ ಮೂಲಕ ನಿರ್ದಿಷ್ಠ ರೂಪವನ್ನು ನೀಡುವ ಪ್ರಯತ್ನ ತಮ್ಮ ಅವಧಿಯಲ್ಲಿ ಆಗಲಿದೆ  ಎಂದು ಸಚಿವರು  ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

Friday, June 7, 2013

ಜನಪರವಾಗಿ ಕರ್ತವ್ಯ ನಿರ್ವಹಿಸಿ: ಸಚಿವ ಖಾದರ್

ಮಂಗಳೂರು, ಜೂನ್.0 7: ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರು, ರಸ್ತೆ ಹಾಗೂ ಪ್ರಾಕೃತಿಕ ವಿಕೋಪದಲ್ಲಿ ಸಂಭವಿಸಿದ ಹಾನಿಗೆ ತುರ್ತು ಪರಿಹಾರ ನೀಡುವುದು ಇಂಜಿನಿಯರ್ ವಿಭಾಗದ ಹೊಣೆ ಎಂದು ಆರೋಗ್ಯ ಸಚಿವ  ಯು ಟಿ ಖಾದರ್ ಹೇಳಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಸಿದ ಸಭೆಯಲ್ಲಿ ಮಾತನಾಡಿದ ಅವರು, ನೀರು, ನೈರ್ಮಲ್ಯ ಹಾಗೂ ರಸ್ತೆಗಳಿಗೆ ಆದ್ಯತೆ ನೀಡಿ. ನಮ್ಮ ಗ್ರಾಮ ನಮ್ಮ ರಸ್ತೆಯಡಿ ರಸ್ತೆಗಳಿಗಾಗಿ ಬಿಡುಗಡೆಯಾದ ಅನುದಾನವನ್ನು ಸದ್ಬಳಕೆ ಮಾಡಿ ಜನರ ಸಮಸ್ಯೆಗೆ ಸ್ಪಂದಿಸಿ. ಮಳೆಗಾಲದಲ್ಲಿ ರಸ್ತೆ ಇಲ್ಲದೆ ಗ್ರಾಮೀಣರು ಒದ್ದಾಡಬಾರದು. ಅವರಿಗೆ ಸಂಪರ್ಕ ವ್ಯವಸ್ಥೆ ಕಲ್ಪಿಸಲು ಆದ್ಯತೆ ನೀಡಿ ಎಂದರು.
ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ನೀರು ಪೂರೈಸಿ. ಯೋಜನೆಗಳನ್ನು ಅರ್ದಂಬರ್ಧ ಮಾಡಿ ಕೈಬಿಡದೆ ಸಂಪೂರ್ಣಗೊಳಿಸಿ. ಯಾವುದಕ್ಕೂ ಜನ ಇಲ್ಲ ಎಂಬ ಸಬೂಬು ನೀಡದೆ ವಿವಿಧ ಕಾಮಗಾರಿಗಳನ್ನು ಒಂದೇ ಏಜೆನ್ಸಿಗೆ ನೀಡುವ ಮೂಲಕವಾದರೂ ಕೆಲಸ ಮಾಡಿಸಿ ಎಂದು ಮಂಗಳೂರು ಹಾಗೂ ಬಂಟ್ವಾಳ ವ್ಯಾಪ್ತಿಯ ಕಾಮಗಾರಿಗಳ ಮಾಹಿತಿ ಪಡೆದು ಸಂಪೂರ್ಣಗೊಳಿಸಲು ಸಮಯಮಿತಿ ನಿಗದಿ ಪಡಿಸಿದರು. ಸಭೆಯಲ್ಲಿ ಇಂಜಿನಿಯರ್ ವಿಭಾಗದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಜನರ ಸಮಸ್ಯೆಗೆಕಿವಿಯಾಗಿ: ಸಚಿವಖಾದರ್


ಮಂಗಳೂರು,ಜೂನ್.07: ಆರೋಗ್ಯ ಸಚಿವರಾಗಿಅಧಿಕಾರ ವಹಿಸಿಕೊಂಡರೂ ನನ್ನ ತವರು ಜಿಲ್ಲೆಯಲ್ಲಿ ಮಲೇರಿಯಾ, ಡೆಂಗ್ಯು ತಡೆಗೆ ಕೈಗೊಂಡಿರುವ ಕ್ರಮದ ಬಗ್ಗೆ ತನಗೆ ಹೆಚ್ಚು ಕಾಳಜಿ. ಯೋಚನೆ ಇಲ್ಲಿಯದ್ದೇ; ಹಾಗಾಗಿ ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಅದರಲ್ಲೂ ಮುಖ್ಯವಾಗಿ ಮಂಗಳೂರು ಮಲೇರಿಯಾ ಹಾಗೂ ಡೆಂಗ್ಯು ವಿರುದ್ಧ ಆರೋಗ್ಯ ಇಲಾಖೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿ ಎಂದು ಆರೋಗ್ಯ ಸಚಿವರು ಹಾಗೂ ಕೋಲಾರ ಜಿಲ್ಲಾಉಸ್ತುವಾರಿ ಸಚಿವರೂ ಆಗಿರುವ ಯು ಟಿ ಖಾದರ್ಅವರು ಹೇಳಿದರು.
ಅವರಿಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಉಳ್ಳಾಲದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾದ ಜಿಲ್ಲೆಯಎಲ್ಲ ವೈದ್ಯಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಸಾಂಕ್ರಾಮಿಕ ರೋಗ ತಡೆಗೆ ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖಾಧಿಕಾರಿಗಳಿಗೆ ತಾವು ಪ್ರಥಮ ಸಭೆಯಲ್ಲಿ ನೀಡಿದ ಮಾರ್ಗದರ್ಶನದಂತೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಡೆಂಗ್ ಪೀಡಿತ ರೋಗಿಗಳು ಕಂಡು ಬಂದರೆ ಅವರನ್ನು ಭೇಟಿ ಮಾಡಿ ಚಿಕಿತ್ಸೆಯ ಬಗ್ಗೆ ಗಮನ ಹರಿಸಬೇಕು.ಅಧಿಕಾರಿಗಳು ಸಾಂಕ್ರಾಮಿಕ ರೋಗ ಹರಡುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಕಚೇರಿ ಬಿಟ್ಟು ಹೊರಬನ್ನಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿರುವುದನ್ನು  ನಿವಾರಿಸಲು ಉಳಿದ ಎಲ್ಲಾ ಕೆಲಸ ಬದಿಗಿಟ್ಟು ರೋಗ ತಡೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸುಸುಜ್ಜಿತವಾದ ಮೊಬೈಲ್ ಯೂನಿಟ್ ಒಂದನ್ನು ರಚಿಸಿ ಅದನ್ನು ಸಾಂಕ್ರಾಮಿಕ ರೋಗ ಪೀಡಿತ ಪ್ರದೇಶದ ಜನರ ರಕ್ತದ ಮಾದರಿ  ಸಂಗ್ರಹಿಸಲು ಹಾಗು ಪರೀಕ್ಷೆಗೆ  ಸಂಬಂಧಿಸಿದಂತೆ ಕ್ರಮ ಕೈ ಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ವೈದ್ಯಕೀಯ ಸೌಲಭ್ಯಗಳೊಂದಿಗೆ ಗುತ್ತಿಗಾರು,ಶಿರಾಡಿ, ಸುಬ್ರಹ್ಮಣ್ಯದಲ್ಲಿರುವಜನರಿಗೆ ವೈದ್ಯಕೀಯ ಸೌಲಭ್ಯಒದಗಿಸಲುಎರಡು ಮೊಬೈಲ್ಯುನಿಟ್ ನೀಡಲು ಸಭೆಯಲ್ಲಿಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿಗೆ ಸಚಿವರು ಸೂಚಿಸಿದರು.
ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿದಿನ ಮಲೇರಿಯಾ ಹಾಗೂ ಡೆಂಗ್ಯು ವರದಿಯನ್ನುತನಗೆ ನೀಡಬೇಕುಎಂದು ಸೂಚಿಸಿದ ಸಚಿವರು, ವರದಿ ನೀಡುವುದು ಮಾತ್ರ ಮುಖ್ಯವಲ್ಲ ಸೊಳ್ಳೆಗಳ ಉತ್ಪತ್ತಿತಡೆಗೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳಿ ಎಂದು ನಿದರ್ೇಶಿಸಿದರು.
ಆಶಾ ಕಾರ್ಯಕತರ್ೆಯರು, ಎ ಎನ್ ಎಂಗಳು, ತಾಲೂಕು ವೈದ್ಯಾಧಿಕಾರಿಗಳು ಫೀಲ್ಡ್ ನಲ್ಲಿರಬೇಕು.ಈ ಸಂಬಂಧ ಸಂಪೂರ್ಣ ಹೊಣೆಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿಗಳದ್ದು ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವಾಗ ಮಾನವೀಯತೆಯಿಂದ ಮಾಡಿ.ವೆನ್ಲಾಕ್ಆಸ್ಪತ್ರೆಯು ಈ ಸಂಬಂಧ ಸಂಪೂರ್ಣ ಸಹಕಾರ ನೀಡಲಿದೆ.ಪ್ರಾಥಮಿಕಆರೋಗ್ಯ ಕೇಂದ್ರಗಳಿಗೆ ಎಲ್ಲ ಸವಲತ್ತು ನೀಡಲು ಸರ್ಕಾರ ಬದ್ಧವಿದ್ದು, ಯಾವುದೇ ಸಂಕೋಚವಿಲ್ಲದೆ ಸೌಲಭ್ಯಗಳ ಪಟ್ಟಿಯನ್ನು ನೀಡಿ ಕೆಲಸ ಮಾಡಿಎಂದರು.
ಬಳಿಕ ಉಳ್ಳಾಲ ಪುರಸಭೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಕೆಲಸದಲ್ಲಿ ಪಾರದರ್ಶಕತೆಇರಲಿ ಎಂದರು. ಇಂದು ಪ್ರಸ್ತಾಪಿಸಲಾದ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಹೊಣೆ ಅಧಿಕಾರಿಗಳದ್ದು. ಮುಂದಿನ ಸಭೆಯಲ್ಲಿ ಇದೇ ಸಮಸ್ಯೆ ಪುನಾರವರ್ತನೆಯಾಗಬಾರದು ಎಂದರು.
ವೈದ್ಯರ ಕೊರತೆ ನಿವಾರಿಸಲು ಕಡ್ಡಾಯ ಗ್ರಾಮೀಣ ಸೇವೆ:
 ಯುವ ವೈದ್ಯರಿಗೆ ಗ್ರಾಮೀಣ ಪ್ರದೇಶದಲ್ಲಿ ಕನಿಷ್ಠ ಒಂದು ವರುಷದ ಸೇವೆ ಕಡ್ಡಾಯ ಗೊಳಿಸುವ ಕರಡು ಮಸೂದೆ ರಾಷ್ಟ್ರಪತಿಯವರ ಅಂಕಿತಕ್ಕೆ ಬಾಕಿ ಇದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಅವರು ಇಂದು ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯಾಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಈ ಹಿಂದೆ ವೈದ್ಯಕೀಯ ಪದವೀಧರರು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸದಿದ್ದರೆ    ದಂಡ ತೆರಬೇಕೆಂಬ ನಿಯಮವಿತ್ತು ಆ ಪ್ರಕಾರ  ರಾಜ್ಯದ ಬೊಕ್ಕಸಕ್ಕೆ ಏಳು ಕೋಟಿ ರೂಪಾಯಿ ದಂಡದ ರೂಪದಲ್ಲಿ ಸಲ್ಲಿಕೆಯಾಗಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಇದರಿಂದ ತೊಂದರೆಯಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ವೈದ್ಯರ ಸೇವೆ ಅಗತ್ಯವಾಗಿರುವುದರಿಂದ ಕಡ್ಡಾಯ ಗ್ರಾಮೀಣ ವೈದ್ಯಕೀಯ ನೀತಿಯನ್ನು ರೂಪಿಸುವುದು ಇಂದಿನ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿದೆ ಎಂದು ಖಾದರ್ ತಿಳಿಸಿದರು.
ಶೀಘ್ರದಲ್ಲಿಯೆ ರಾಜ್ಯದ ಖಾಲಿ ಇರುವ  ಹುದ್ದೆಗಳಲ್ಲಿ 198 ಹುದ್ದೆಗಳಿಗೆ ಕೌನ್ಸಿಲಿಂಗ್ ಮೂಲಕ ನೇಮಕಾತಿ ನಡೆಸಲು ಕ್ರಮ ಕೈಗೊಳ್ಳಲಾಗಿದೆ.ರಾಜ್ಯ ಮಟ್ಟದಲ್ಲಿ ಆರೋಗ್ಯ ಇಲಾಖೆಯ ಖಾಲಿ ಇರುವ ಕಾರ್ಯಕ್ರಮ  ಪರಿವೀಕ್ಷಣಾಧಿಕಾರಿಗಳ ಹುದ್ದೆಗಳನ್ನು ತುಂಬಲು ತಳ ಮಟ್ಟದಿಂದಲೆ ಗುತ್ತಿಗೆ ಆಧಾರ ಹಾಗೂ ನೇರ ನೇಮಕಾತಿ ಮೂಲಕ ನೇಮಕಾತಿಗೆ ಸೂಚಿಸಲಾಗಿದೆ ಎಂದು ಸಚಿವ ಖಾದರ್ ತಿಳಿಸಿದ್ದಾರೆ.
ರಾಜ್ಯಾದ್ಯಂತ ತುರ್ತು ಆರೋಗ್ಯ ಸೇವೆಗೆ  `104' ಉಚಿತ ದೂರವಾಣಿ ಸಂಖ್ಯೆ ರಾಜ್ಯಾದ್ಯಂತ ತುರ್ತು ಆರೋಗ್ಯ ಸೇವೆಗಾಗಿ ಟೋಲ್ ಫ್ರಿ  104 ದೂರವಾಣಿ ಸಂಖ್ಯೆಗೆ ರಾಜ್ಯದ ಯಾವುದೇ ಮೂಲೆಯಿಂದ ಕರೆ ಮಾಡಬಹುದಾಗಿದೆ. ಈ ಉಚಿತ ಕರೆಯ ಮೂಲಕ ಸಾರ್ವಜನಿಕರು ವೈದ್ಯಕೀಯ ತುರ್ತು ಸೇವೆಗಳ ಜೊತೆ ವೈದ್ಯಕೀಯಕ್ಕೆ ಸಂಬಂಧಿಸಿದ ಸಲಹೆಗಳನ್ನು ಪಡೆಯಬಹುದಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದರು.
ಉಳ್ಳಾಲದಲ್ಲಿ ಸುಸಜ್ಜಿತ ವೈದ್ಯಕೀಯ ಕೇಂದ್ರಕ್ಕೆ ಸಮೀಕ್ಷೆ: ಉಳ್ಳಾಲದಲ್ಲಿ ಸುಸಜ್ಜಿತವಾದ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯನ್ನು ಆರಂಭಿಸಲು ಸರ್ವೇ ಕಾರ್ಯ ನಡೆಸಲು ಅಧಿಕಾರಗಳ ತಂಡ ಉಳ್ಳಾಲಕ್ಕೆ ಆಗಮಿಸಲಿದೆ ಎಂದು ಯು.ಟಿ.ಖಾದರ್ ತಿಳಿಸಿದರು.

ಕಟ್ಟಡ ಕಾಮಗಾರಿ ಪ್ರದೇಶದಲ್ಲಿ ನಿಯಮಪಾಲಿಸದಿದ್ದರೆ ಲೈಸನ್ಸ್ ರದ್ದು: ಜಿಲ್ಲಾಧಿಕಾರಿ

ಮಂಗಳೂರು,ಜೂನ್.07: ನಗರದ ಆರ್ಥಿಕ ಬೆಳವಣಿಗೆಯಲ್ಲಿ ಅತಿ ಮುಖ್ಯ ಪಾತ್ರ ವಹಿಸುತ್ತಿರುವ ಬಿಲ್ಡರ ಗಳು ಈ ಪ್ರದೇಶದ ಜನರ ಹಿತವನ್ನು ಗಮನದಲ್ಲಿರಿಸಿ ತಮ್ಮ ಕಟ್ಟಡ ಕಾಮಗಾರಿ ನಡೆಯುತ್ತಿರುವ ಪ್ರದೇಶಗಳಲ್ಲಿ ಸ್ವಚ್ಛತೆ ಹಾಗೂ ಕಾನೂನು ಪಾಲಿಸದಿದ್ದರೆ ತಮ್ಮ ಖುದ್ದು ಭೇಟಿಯ ವೇಳೆ ಕಾಮಗಾರಿ ಲೈಸನ್ಸ್ ರದ್ದುಪಡಿಸುವುದು ಖಚಿತ  ಎಂದು ಜಿಲ್ಲಾಧಿಕಾರಿ  ಎನ್ ಪ್ರಕಾಶ್ ಎಚ್ಚರಿಕೆ ಸಂದೇಶ ನಗರದ ಬಿಲ್ಡರ್ ಗಳಿಗೆ ರವಾನಿಸಿದ್ದಾರೆ.  ಗುರುವಾರ ಸಂಜೆ ಪಾಲಿಕೆಯಲ್ಲಿ ಈ ಸಂಬಂಧ ನಡೆದ ಸಭೆಯಲ್ಲಿ ಬಿಲ್ಡರ್ ಗಳು, ಸಿವಿಲ್ ಇಂಜಿನಿಯರ್ಸ್ ಹಾಗೂ ಪಾಲಿಕೆ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.
 ಕಟ್ಟಡ ಕಾಮಗಾರಿ ಪ್ರದೇಶದಲ್ಲಿ ದುಡಿಯುತ್ತಿರುವ ಕಾರ್ಮಿಕರು ವಲಸೆ ಕಾರ್ಮಿಕರಾಗಿದ್ದು, ಇವರಿಗೆ ಮೂಲ ಸೌಕರ್ಯಗಳನ್ನು ಒದಗಿಸದೆ ದುಡಿಸುತ್ತಿರುವುದನ್ನು ಜಿಲ್ಲಾಡಳಿತ ಗಮನಿಸಿದೆ. ಪಾಲಿಕೆಯ ಆರೋಗ್ಯ ವಿಭಾಗ ಸುಮಾರು 383 ಸೈಟ್ ಗಳ ಸಮೀಕ್ಷೆ ನಡೆಸಿದ್ದು, ಹೆಚ್ಚಿನ ಸೈಟ್ ಗಳಲ್ಲಿ ಆರೋಗ್ಯ ಹಾಗೂ ಸ್ವಚ್ಛತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಲಾಗಿಲ್ಲ ಎಂದು ಜಿಲ್ಲಾಧಿಕಾರಿ ಹೇಳಿದರು.
ಈಗಾಗಲೇ ಪಾಲಿಕೆಯ ಆರೋಗ್ಯ ವಿಭಾಗ ನಡೆಸಿದ ಸಮೀಕ್ಷೆಯ ಪ್ರಕಾರ 13 ಸೈಟ್ ಗಳಲ್ಲಿ ಸೊಳ್ಳೆಗಳ ಉತ್ಪತ್ತಿ  ಕಂಡು ಬಂದಿದ್ದು ಎರಡನೇ ಸಮೀಕ್ಷೆಯ ಬಳಿಕವೂ ಕ್ರಮ ವಹಿಸದ ಬಿಲ್ಡರ್ ಗಳ ನಿರ್ಲಕ್ಷ್ಯದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ ಕಠಿಣ ಕ್ರಮದ ಎಚ್ಚರಿಕೆ ನೀಡಿದರು.
ಖುದ್ದಾಗಿ ತಾನು ಇಂತಹ ಸೈಟ್ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವುದಾಗಿ ಎಚ್ಚರಿಕೆ ನೀಡಿದ ಅವರು, ಇಂದಿನ ಸಭೆಯ ಉದ್ದೇಶ ಪೂರ್ವಭಾವಿಯಾಗಿ ಎಚ್ಚರಿಕೆ ನೀಡುವುದಷ್ಟೆ ಎಂದು ಹೇಳಿದರು.
ಸೂಚನೆಯನ್ನು ಪಾಲಿಸದವರ ವಿರುದ್ಧ ಕಠಿಣ ಕ್ರಮ ಅನಿವಾರ್ಯ ಎಂದು ಹೇಳಿದ ಜಿಲ್ಲಾಧಿಕಾರಿಗಳು, ನಿಮ್ಮ ವ್ಯವಹಾರ ಹಿತದ ಜೊತೆಗೆ ಜನತೆಯ ಹಿತವನ್ನು ಗಮನದಲ್ಲಿರಿಸುವುದ ಆದ್ಯ ಕರ್ತವ್ಯ ಎಂದರು.
ಮಳೆಯಿಂದ ಮಲೇರಿಯಾ ಜಾಸ್ತಿಯಾಗುತ್ತದೆ ಎಂದ ಬಿಲ್ಡರ್ ಗಳ ವಾದವನ್ನು ಆಲಿಸಿದ ಜಿಲ್ಲಾಧಿಕಾರಿಗಳು, ಸಬೂಬು ಹೇಳದೆ ಎಲ್ಲರ ಹಿತ ಕಾಯುವುದು ಮುಖ್ಯ. ಜಿಲ್ಲಾಡಳಿತ ಆ ಕರ್ತವ್ಯವನ್ನು ನಿರ್ವಹಿಸಲಿದೆ. ಪಾಲಿಕೆಯ ಆರೋಗ್ಯ ವಿಭಾಗ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ನಿಮ್ಮ ಕೆಲಸದವರಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಎಂದರು.
 ಎಲ್ಲೆಡೆ ಸ್ವಾಭಾವಿಕ ಚರಂಡಿಗಳ ಬ್ಲಾಕ್ ಮಾಡಿ, ಎಲ್ಲ ಕಟ್ಟಡ ಸಾಮಗ್ರಿಗಳನ್ನು ರಸ್ತೆಯ ಮೇಲೆ ಬೇಕಾಬಿಟ್ಟಿ ಸಾರ್ವಜನಿಕ ರಸ್ತೆಗಳಲ್ಲಿ ಡಂಪ್ ಮಾಡುವುದು ಅಕ್ಷಮ್ಯ. ಕ್ರಾಸ್ ರೋಡ್ ಗಳಲ್ಲಿ ಬಿಲ್ಡಿಂಗ್ ಮೆಟಿರಿಯಲ್ ಡಂಪ್ ಮಾಡುವುದು ಅನಾಗರೀಕ ವರ್ತನೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಇದರಿಂದ ಪಾದಾಚಾರಿಗಳಿಗೆ ಶಾಲಾ ಮಕ್ಕಳಿಗೆ ತೊಂದರೆಯಾಗುತ್ತಿದೆ ಎಂದರು.
ಈ ಸಂಬಂಧ ದೂರುಗಳನ್ನು ಈಗಾಗಲೇ ಪಾಲಿಕೆ ಸ್ವೀಕರಿಸುತ್ತಿದ್ದು, ಪಾಲಿಕೆ ಅಭಿವೃದ್ಧಿ ಆಯುಕ್ತರು ಈಗಾಗಲೇ ನಾಲ್ಕಾರು ಕಡೆಗಳಲ್ಲಿ ಟಿಪ್ಪರ್ ಕಳುಹಿಸಿ ಮೆಟಿರೀಯಲ್ ತೆಗೆಸಿ ಇದರ ಖರ್ಚನ್ನು ಬಿಲ್ಡರ್ ಗಳಿಗೆ ಕಳುಹಿಸಲಾಗುತ್ತಿದೆ ಎಂದರು. ಇದೇ ವರ್ತನೆ ಮುಂದುವರಿದರೆ ದಂಡ ವಿಧಿಸದೆ ಲೈಸನ್ಸ್ ರದ್ದಿನಂತಹ ನಿರ್ದಾಕ್ಷಿಣ್ಯ ಕ್ರಮ ವಹಿಸಲಾಗುವುದು ಎಂದರು.
ಆದ್ದರಿಂದ ಈ ನಿಟ್ಟಿನಲ್ಲಿ ಬಿಲ್ಡರ್ ಗಳು ಕಾರ್ಪೋರೇಟ್ ಜವಾಬ್ದಾರಿಯನ್ನು ಪ್ರದರ್ಶಿಸಬೇಕೆಂದರು.
ಪ್ರಭಾರ ಆಯುಕ್ತ ಶ್ರೀಕಾಂತ್ ರಾವ್, ಉಪ ಆಯುಕ್ತ ಅಭಿವೃದ್ಧಿ ಬಾಲಕೃಷ್ಣ ಉಪಸ್ಥಿತರಿದ್ದರು.

Wednesday, June 5, 2013

ವಿಶ್ವ ಹಾಲು ದಿನಾಚರಣೆ

ಮಂಗಳೂರು, ಜೂನ್.05: ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ  ಆಶ್ರಯದಲ್ಲಿ 13 ನೇ ವಿಶ್ವ ಹಾಲು ದಿನಾಚರಣೆ ಮತ್ತು ಹಾಲು ಡೀಲರುಗಳ ಸನ್ಮಾನ ಕಾರ್ಯಕ್ರಮ ಕುಲಶೇಖರ ಡೇರಿ ಆವರಣದಲ್ಲಿ  ಮಂಗಳವಾರ ನಡೆಯಿತು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಧಿಕಾರಿ ಡಾ. ಓ. ಆರ್. ಶ್ರೀರಂಗಪ್ಪ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ, ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ವಿ. ಸತ್ಯನಾರಾಯಣ,ನಿರ್ದೇಶಕ ಕೆ. ಸೀತರಾಂ ರೈ, ಪಾಲಿಕೆ ಸದಸ್ಯ ಭಾಸ್ಕರ್ ಸಹಿತ ಅನೇಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.  

Tuesday, June 4, 2013

ಜೂನ್ 12 ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆ

ಮಂಗಳೂರು, ಜೂನ್. 04:-ಪ್ರತಿಯೊಂದು ಮಗುವಿಗೂ ಬದುಕುವ ಹಕ್ಕು, ರಕ್ಷಣೆ ಹಕ್ಕು ಹಾಗೂ ವಿಕಾಸ ಹೊಂದುವ ಹಕ್ಕಿದೆ. ಪ್ರತಿಯೊಂದು ಮಗುವು ತನ್ನ ಬಾಲ್ಯವನ್ನು ಶಾಲೆಯಲ್ಲಿ ಓದಿ ಬರೆದು ಬೆಳೆಯಲು ಅನುಕೂಲವಾಗುವಂತೆ ಸಂವಿಧಾನ, ಸರ್ಕಾರ ಹಾಗೂ ಮಕ್ಕಳ ಹಕ್ಕುಗಳ ರಕ್ಷಣೆಗಾಗಿಯೇ ಇರುವ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಸಕರ್ಾರೇತರ ಸಂಘ ಸಂಸ್ಥೆಗಳು ಕಾರ್ಯೋನ್ಮುಖವಾಗಿವೆ.
ಆದರೂ ಸಂಪೂರ್ಣ ಬಾಲಕಾರ್ಮಿಕ ಮುಕ್ತ ಸಮಾಜವೆಂದು ನಮ್ಮನ್ನು ನಾವು ಗುರುತಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ; ಸಾಕ್ಷರತೆ ಹಾಗೂ ಇತರೆ ವಿಷಯಗಳಲ್ಲಿ ಮುಂದುವರಿದಿರುವ ನಮ್ಮ ಜಿಲ್ಲೆಯಲ್ಲಿ ಬಾಲಕಾರ್ಮಿಕರನ್ನು ಮನೆ  ಕೆಲಸಕ್ಕೆ ಈಗಲೂ ಬಳಸಿಕೊಳ್ಳಲಾಗುತ್ತಿದೆ. ಈ ಮಕ್ಕಳು ವಲಸೆ ಬಂದ ಮಕ್ಕಳೇ ಇರಬಹುದು ಆದರೂ ಮಕ್ಕಳೇ ತಾನೇ ಎಂಬುದು ಪ್ರಜ್ಞಾ ಸಂಸ್ಥೆಯ ಮುಖ್ಯಸ್ಥರಾದ ಶ್ರೀಮತಿ ಹಿಲ್ಡಾ ರಾಯಪ್ಪನ್ ಅವರ ಪ್ರಶ್ನೆ.  ಹೊಟೇಲ್, ಅಂಗಡಿ ಮುಂಗಟ್ಟುಗಳಲ್ಲಿ ಮಕ್ಕಳನ್ನು ದುಡಿಸಿಕೊಳ್ಳಲು ಇಂದು ಇಲ್ಲಿನ ವಿದ್ಯಾವಂತರು ಹಿಂಜರಿಯುತ್ತಾರಾದರೂ ಮನೆಕೆಲಸಗಳಲ್ಲಿ ಮಕ್ಕಳನ್ನು ದುಡಿಸಿಕೊಳ್ಳುತ್ತಿರುವುದು ಈಗಲೂ ಪತ್ತೆಯಾಗುತ್ತಿದೆ. ಹಾಗಾಗಿ ಈ ನಿಟ್ಟಿನಲ್ಲಿ ಜಾಗೃತಿ ಮತ್ತು ಅಪರಾಧ ಮಾಡಿದವರಿಗೆ ಕಠಿಣ ಶಿಕ್ಷೆ ಎರಡೂ ಮುಖ್ಯ ಎಂದು ಅವರು ಹೇಳುತ್ತಾರೆ.
ಪ್ರತಿ ವರ್ಷದಂತೆ ಈ ಬಾರಿಯೂ ಜೂನ್ 12ರಂದು ವಿಶ್ವ ಬಾಲಕಾರ್ಮಿಕ ವಿರೋಧಿ ದಿನಾಚರಣೆಯನ್ನು ನಗರದ ಪುರಭವನದಲ್ಲಿ ಆಯೋಜಿಸಲಾಗಿದೆ. ಈ ಸಂಬಂಧ  ಜಿಲ್ಲಾಧಿಕಾರಿ ಎನ್ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಕರೆದ ಪೂರ್ವಭಾವಿ ಸಭೆಯಲ್ಲಿ ಹೀಲ್ಡಾ ರಾಯಪ್ಪನ್ ಅವರು ಮೇಲ್ಕಂಡಂತೆ ಅಭಿಪ್ರಾಯ ವ್ಯಕ್ತಪಡಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2012-13ನೇ ಸಾಲಿನಲ್ಲಿ ಒಟ್ಟು 5070 ದಾಳಿಗಳನ್ನು ಹಾಗೂ ಈ ಸಂಬಂಧ ತನಿಖೆಗಳನ್ನು ನಡೆಸಲಾಗಿದ್ದು, ಮೂರು ಬಾಲಕಾಮರ್ಿಕರನ್ನು ಪತ್ತೆ ಹಚ್ಚಲಾಗಿದೆ. ಇವರಲ್ಲಿ ಇಬ್ಬರು ಅಪಾಯಕಾರಿ ಹಾಗೂ ಒಂದು ಮಗು ಅಪಾಯಕಾರಿಯಲ್ಲದ ಉದ್ದಿಮೆಯಲ್ಲಿ ದುಡಿಯುತ್ತಿದ್ದರು. ಇದರಲ್ಲಿ ಒಂದು ಮಗುವನ್ನು ಪೋಷಕರಿಗೆ ಒಪ್ಪಿಸಲಾಗಿದೆ. ಇನ್ನೊಂದು ಮಗುವನ್ನು ಬಿಜೈ ಕಾಪಿಕ್ಕಾಡಿನಲ್ಲಿರುವ ಚಿಣ್ಣರ ತಂಗುಧಾಮಕ್ಕೆ ಸೇರಿಸಲಾಗಿದೆ. ಮತ್ತೊಂದು ಮಗುವನ್ನು ಪುನರ್ವಸತಿ  ಕಲ್ಪಿಸಿ ಶಾಲೆಗೆ ಸೇರಿಸುವ ಕಾರ್ಯವಾಗಿದೆ. 11 ಮಕ್ಕಳನ್ನು ಬಾಲಕಾರ್ಮಿಕರೆಂದು ಸಂಶಯದ ಮೇಲೆ ಪತ್ತೆ ಹಚ್ಚಿ ಪರಿಶೀಲಿಸಿದಾಗ ಎಲ್ಲ ಮಕ್ಕಳು 14 ವರ್ಷ ಮೇಲ್ಪಟ್ಟವರಾಗಿದ್ದು ಅವರನ್ನು ಹೆತ್ತವರಿಗೆ ಒಪ್ಪಿಸಲಾಗಿದೆ. 60 ಜನರ ಮೇಲೆ ಮೊಕದ್ದಮೆ ದಾಖಲಿಸಲಾಗಿದೆ ಎಂದು ಕಾರ್ಮಿಕ ಅಧಿಕಾರಿಗಳು ಜಿಲ್ಲಾಧಿಕಾರಿಗಳಿಗೆ ಪ್ರಶ್ನೆಗೆ ಮಾಹಿತಿ ನೀಡಿದರು.                                 
ಈ ಸಂಬಂಧ ಕಾರ್ಮಿಕ ಇಲಾಖೆಯವರು ಜೂನ್ 12ರಂದು ಜ್ಯೋತಿ ವೃತ್ತದಿಂದ ಪುರಭವನದವರೆಗೆ ಜಾಥಾ, ಜನಜಾಗೃತಿ ಮೂಡಿಸಲು ಬೀದಿನಾಟಕ, ಮೈಮ್ ಕಾರ್ಯಕ್ರಮ ಹಮ್ಮಿಕೊಂಡಿದೆ. ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ ಮತ್ತು ಇತರ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

Monday, June 3, 2013

ಪಾಲಿಕೆ ಕಂಟ್ರೋಲ್ ರೂಂ ಪರಿಶೀಲಿಸಿದ ಜಿಲ್ಲಾಧಿಕಾರಿ

ಮಂಗಳೂರು, ಜೂನ್. 03 : ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದಂತೆ ಮಂಗಳೂರು ಮಹಾ ನಗರ ಪಾಲಿಕೆಯಲ್ಲಿ  ಸ್ಥಾಪಿಸಿದ ಕಂಟ್ರೋಲ್ ರೂಂ ವ್ಯವಸ್ಥೆಯನ್ನು ಸಮಗ್ರವಾಗಿ ಪರಿಷ್ಕರಿಸಿ ಪ್ರತಿದಿನದ ದೂರು ಹಾಗೂ ಕ್ರಮಗಳ ವರದಿಯನ್ನು ಪಾಲಿಕೆ ಆಯುಕ್ತರಿಗೆ ಸಲ್ಲಿಸಬೇಕೆಂದು ಜಿಲ್ಲಾಧಿಕಾರಿ ಎನ್ ಪ್ರಕಾಶ್ ಆದೇಶಿಸಿದರು.
ಇಂದು ಪಾಲಿಕೆ ದಿಢೀರ್ ಭೇಟಿ ನೀಡಿದ ಮಹಾನಗರಪಾಲಿಕೆ ಆಡಳಿತಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಗಳು, ಕಂಟ್ರೋಲ್ ರೂಂ ವ್ಯವಸ್ಥೆಯನ್ನು ಸಮರ್ಪಕಗೊಳಿಸಿ ಎಂದು ತಾಕೀತು ಮಾಡಿದರು.
 ದೂರುಗಳ ದಾಖಲೀಕರಣ ಹಾಗೂ ಕೈಗೊಂಡ ಕ್ರಮಗಳ ಬಗ್ಗೆ ವರದಿ ಇರಬೇಕು. ಬಂದ ದೂರುಗಳನ್ನಷ್ಟೆ ದಾಖಲಿಸಿ ಸಂಬಂಧಪಟ್ಟವರಿಗೆ ನೀಡುವುದು ಕಂಟ್ರೋಲ್ ರೂಂ ಕಾರ್ಯವೈಖರಿಯಲ್ಲ ಎಂದ ಜಿಲ್ಲಾಧಿಕಾರಿಗಳು, ನೇರವಾಗಿ ಸಾರ್ವಜನಿಕರಿಂದ ತಮಗೆ ದೂರವಾಣಿ ಕರೆ ಬಂದರೆ ಅಧಿಕಾರಿಗಳ ವಿರುದ್ಧ ಕ್ರಮ ನಿಶ್ಚಿತ ಎಂದರು. ಸಂಬಂಧಪಟ್ಟ ಅಧಿಕಾರಿಗಳು ಹೊಣೆಯರಿತು ವರ್ತಿಸಿ ನಾಗರೀಕರ ದೂರುಗಳಿಗೆ ಸ್ಪಂದಿಸದಿದ್ದರೆ ಶಿಸ್ತುಕ್ರಮ ಎದುರಿಸಿ. ಸಮನ್ವಯತೆಯಿಂದ ಸಾರ್ವಜನಿಕರ ಕೆಲಸ ಮಾಡಿ ಎಂದ ಜಿಲ್ಲಾಧಿಕಾರಿಗಳು ದೂರನ್ನು ಪರಿಹರಿಸಲು ಕ್ರಮಕೈಗೊಳ್ಳಿ ಎಂದರು.
ನಗರದಲ್ಲಿ ಕಸ ವಿಲೇ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಪ್ರತಿದಿನ ತಾವೇ ಖುದ್ದಾಗಿ ಸ್ಥಳ ಪರಿಶೀಲನೆ ನಡೆಸುವ ಎಚ್ಚರಿಕೆಯನ್ನೂ ನೀಡಿದರು. ಸಮರ್ಪಕ ಕಸ ವಿಲೇ ಮಾಡದ ಗುತ್ತಿಗೆದಾರರ ಗುತ್ತಿಗೆ ರದ್ದುಪಡಿಸಿ ಹೊಸ ಗುತ್ತಿಗೆದಾರರನ್ನು ನೇಮಿಸಿ. ಈ ಸಂಬಂಧ ಆರೋಗ್ಯ ಅಧಿಕಾರಿಗಳು ಇನ್ನಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕಿದೆ ಎಂದರು.
ಶೀಘ್ರವೇ ಜಿಲ್ಲಾ ಉಸ್ತುವಾರಿ ಸಚಿವರು ಪ್ರಗತಿಪರಿಶೀಲನೆ ಹಾಗೂ ಆರೋಗ್ಯ ಸಚಿವರು ಜಿಲ್ಲೆಯ ಸ್ವಚ್ಛತೆ ಹಾಗೂ ಆರೋಗ್ಯ ಸಂಬಂಧಿ ಸಭೆಗಳನ್ನು ನಡೆಸಲಿದ್ದು ಜಾರಿ ಮಾಡಿದ ಕಾರ್ಯಕ್ರಮಗಳ ಬಗ್ಗೆಮಾಹಿತಿ ಸಿದ್ದಪಡಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಪಾಲಿಕೆಯ ಅಭಿವೃದ್ಧಿಗೆ ಬಿಡುಗಡೆಯಾದ ಹಣವನ್ನು ಕಾಮಗಾರಿ ನಿರ್ವಹಿಸಿದವರಿಗೆ ಪಾವತಿಸಲು ಹಿಂದುಮುಂದು ನೋಡದೆ ಸಮರ್ಪಕ ಕೆಲಸಕ್ಕೆ ತಕ್ಷಣವೇ ಬಿಲ್ ಸಿದ್ಧಪಡಿಸಲು 48 ಗಂಟೆಗಳ ಕಾಲಾವಕಾಶವನ್ನು ಜಿಲ್ಲಾಧಿಕಾರಿಗಳು ನೀಡಿದರು.
ಸಭೆಯಲ್ಲಿ ಪಾಲಿಕೆ ಪ್ರಭಾರ ಆಯುಕ್ತ ಶ್ರೀಕಾಂತ್ ರಾವ್, ಉಪ ಆಯುಕ್ತರು ಅಭಿವೃದ್ಧಿ ಬಿ ಎಸ್ ಬಾಲಕೃಷ್ಣ, ವಲಯ ಆಯುಕ್ತರು ಪ್ರಮೀಳ ಹಾಗೂ ಪಾಲಿಕೆಯ ವಿವಿಧ ವಿಭಾಗಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Saturday, June 1, 2013

ಚಿತ್ರ ಕಲೆಗೆ ಪ್ರೋತ್ಸಾಹ ಅಗತ್ಯ: ಬಿ ರಮಾನಾಥ ರೈ

ಮಂಗಳೂರು, ಜೂನ್.01 : ಚಿತ್ರಕಾರ ಬಿಡಿಸುವ ಚಿತ್ರಗಳು ಕೇವಲ ಬಣ್ಣಗಳ ಮಿಶ್ರಣವಲ್ಲ.ರೇಖಾ ಚಿತ್ರಗಳಲ್ಲಿ ಜೀವಂತಿಕೆಯನ್ನು ತುಂಬಿ ಅವರಿಂದ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡುತ್ತಾನೆ. ಆದ್ದರಿಂದ ನಾವು ಚಿತ್ರಕಲೆಗೆ ಪ್ರೋತ್ಸಾಹ ನೀಡಬೇಕಿದೆ ಎಂದು ಕರ್ನಾಟಕ ಸರ್ಕಾರದ  ಅರಣ್ಯ,ಪರಿಸರ,ವಿಜ್ಞಾನ ಜೀವಿಶಾಸ್ತ್ರ ಸಚಿವರಾದ  ಬಿ.ರಮಾನಾಥ ರೈ ಯವರು ತಿಳಿಸಿದ್ದಾರೆ.
            ಅವರು ಇಂದು ಪುತ್ತೂರಿನಲ್ಲಿ ಪುತ್ತೂರು ಪುರಸಭೆ ವತಿಯಿಂದ ರೂ.1.00 ಕೋಟಿ ವೆಚ್ಚದಲ್ಲಿ ಪುತ್ತೂರಿನ ಪರ್ಲಡ್ಕದ ಶಿವರಾಮ ಕಾರಂತರ ಬಾಲವನದಲ್ಲಿ ನಿರ್ಮಿಸಿರುವ ಚಿತ್ರ ಕಾರಂತ ಕಲಾ ಸಮುಚ್ಛಯವನ್ನು ಉದ್ಘಾಟಿಸಿ ಮಾತನಾಡಿದರು.
           ಡಾ.ಕೆ.ಶಿವರಾಮ ಕಾರಂತರು ಕನ್ನಡ ಸಾಹಿತ್ಯ ಲೋಕದ ಅಪ್ರತಿಮ ಮೇರು ಸಾಹಿತಿಯಾಗಿ ಗಂಡು ಕಲೆ ಯಕ್ಷಗಾನವನ್ನು ಸಪ್ರ ಸಮುದ್ರಗಳಾಚೆಗೂ ಪಸರಿಸಿದ ಕೀರ್ತಿವಂತರು.ಇಂತಹವರ ಹೆಸರಿನ ಕಲಾ ಸಮುಚ್ಛಯದಲ್ಲಿ ಸಾಹಿತ್ಯ ಕಲೆ ,ಯಕ್ಷಗಾನ ಮೊದಲಾದ ಪ್ರಾಕಾರಗಳ ಪ್ರದರ್ಶನ ತರಬೇತಿ ನಿರಂತರ ನಡೆಯಲಿ ಎಂದು ಹಾರೈಸಿದರು.
         ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ ಜ್ಞಾನಪೀಠ ಪುರಸ್ಕೃತರಾದ ಡಾ.ಕೆ.ಶಿವರಾಮ ಕಾರಂತರ ಮಟ್ಟಕ್ಕೆ ರಾಜಕಾರಣಿಗಳು ಬೆಳೆಯಲು ಆಗುವುದಿಲ್ಲ. ಬದಲಾಗಿ ಅವರ ನೇರನುಡಿ,ಸಮಯ ಪ್ರಜ್ಞೆ ಮುಂತಾದ ಆದರ್ಶ ಗುಣಗಳನ್ನು ನಾವು ಜೀವನದಲ್ಲಿ ರೂಢಿಸಿಕೊಂಡಾಗ ಜೀವನ ಸಾರ್ಥಕ ಎಂದರು. ಕಲಾವಿದ ಕೆ.ಕೆ.ಹೆಬ್ಬಾರ್ರವರ ಸುಪುತ್ರಿ ಶ್ರೀಮತಿ ರೇಖಾರವರು ಕಲಾವಿದ  ಕೆ.ಕೆ.ಹೆಬ್ಬಾರ್ ಕಂಡ ಕಾರಂತ ಬೃಹತ್ ಬಿತ್ತಿಫಲಕದ ಅನಾವರಣ ಮಾಡಿದರು.
          ಸಮಾರಂಭದ ಅಧ್ಯಕ್ಷತೆಯನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀಮತಿ ಶಕುಂತಳಾ ಶೆಟ್ಟಿ ವಹಿಸಿ ಮಾತನಾಡುತ್ತಾ ಶಿವರಾಮ ಕಾರಂತರ ಬಾಲವನದಲ್ಲಿ ನಿರಂತರ ಯಕ್ಷಗಾನ ವಿವಿಧ ಪ್ರಾಕಾರಗಳ ತರಬೇತಿ ಕಾರ್ಯಕ್ರಮಗಳು ಜರಗುವಲ್ಲಿ ಆಗಬೇಕಾದ ಪ್ರಯುತ್ನಗಳನ್ನು ಮಾಡುವುದಾಗಿ ತಿಳಿಸಿದರು.
           ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಪುತ್ತೂರು ಉಪವಿಭಾಗಾಧಿಕಾರಿ ಎಚ್.ಪ್ರಸನ್ನ ಕಲಾ ಸಮುಚ್ಛಯದಲ್ಲಿ 55 ರಷ್ಟು ಡಾ.ಕೆ. ಶಿವರಾಮ ಕಾರಂತರ ಸಾಹಿತ್ಯವನ್ನು ಆಧರಿಸಿದ ಚಿತ್ರ ಕಲೆಗಳನ್ನು 55 ಚಿತ್ರಕಾರರು ರಚಿಸಿದ್ದು ಅವುಗಳನ್ನು ಪ್ರದರ್ಶಿಸಲಾಗಿದೆ.  ಇಲ್ಲಿ ನಿರಂತರ ಸಾಹಿತ್ಯ ಚಿತ್ರಕಲೆ ಇನ್ನಿತರೆ ಸಾಂಸ್ಕೃತಿಕ ಚಟುವಟಿಕೆಗಳು ಜರುಗಲು ಎಲ್ಲಾ ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದರು.ಡಾ.ಕೆ.ಶಿವರಾಮ ಕಾರಂತರ ಸುಪುತ್ರಿ ಶ್ರೀಮತಿ ಕ್ಷಮಾರಾವ್  ಅವರಿಂದ ಒಡಿಸ್ಸಿ ನೃತ್ಯ ಕಾರ್ಯಕ್ರಮ ನಡೆಯಿತು.