Wednesday, June 19, 2013

ಪ್ರಾಕೃತಿಕ ವಿಕೋಪ-ಅಧಿಕಾರಿಗಳು ಕೇಂದ್ರಸ್ಥಾನದಲ್ಲಿ


ಮಂಗಳೂರು, ಜೂನ್.19: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಮುಂಗಾರು ಪ್ರಾರಂಭವಾಗಿದ್ದು,ಕೆಲವು ಪ್ರದೇಶದಲ್ಲಿ ಜೀವಹಾನಿ ,ಜಾನುವಾರು ಹಾನಿ ಹಾಗೂ ವಾಸದ ಮನೆಗಳ ಅಂಶಿಕ ಹಾನಿ ಸಂಭವಿಸಿರುತ್ತದೆ. ಸಂತ್ರಸ್ಥರಿಗೆ ಸಕಾಲದಲ್ಲಿ ಪರಿಹಾರ ನೀಡುವ ಬಗ್ಗೆ ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ಇಲಾಖೆಯ ಸಹಕಾರವು ಅತೀ ಆವಶ್ಯವಿದ್ದು,ಜಿಲ್ಲಾ ಮಟ್ಟದ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿ ಇದ್ದು, ಸಾರ್ವಜನಿಕ ತೊಂದರೆಗಳಿಗೆ ಸ್ಪಂದಿಸಲು ಮುತುವರ್ಜಿ ವಹಿಸುವುದು ಅತೀ ಆವಶ್ಯವಾಗಿದೆ. ಆದ್ದರಿಂದ ಎಲ್ಲಾ ಜಿಲ್ಲಾ ಮಟ್ಟದ/ತಾಲೂಕು ಮಟ್ಟದ ಅಧಿಕಾರಿಗಳು ಕೇಂದ್ರಸ್ಥಾನದಲ್ಲಿ ಇರುವಂತೆ ನಿರ್ದೇಶಿಸಿದ್ದು,ಅನಿವಾರ್ಯ ಸಂದರ್ಭದಲ್ಲಿ (ಮೇಲಾಧಿಕಾರಿಗಳ ಸಭೆಗೆ) ಕೇಂದ್ರಸ್ಥಾನ ಬಿಡುವಾಗ ಪೂರ್ವಾನುಮತಿಯನ್ನು ಕಡ್ಡಾಯವಾಗಿ ಪಡೆಯತಕ್ಕದ್ದು.ಪ್ರಾಕೃತಿಕ ವಿಕೋಪದ ಸಂದರ್ಭದಲ್ಲಿ ನಿರ್ಲಕ್ಷ್ಯ ತೋರುವ ಎಲ್ಲಾ ಅಧಿಕಾರಿಗಳು/ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಜರಗಿಸಲಾಗುವುದೆಂದು ಜಿಲ್ಲಾಧಿಕಾರಿಗಳು ತಿಳಿಸಿರುತ್ತಾರೆ.