Friday, June 7, 2013

ಜನರ ಸಮಸ್ಯೆಗೆಕಿವಿಯಾಗಿ: ಸಚಿವಖಾದರ್


ಮಂಗಳೂರು,ಜೂನ್.07: ಆರೋಗ್ಯ ಸಚಿವರಾಗಿಅಧಿಕಾರ ವಹಿಸಿಕೊಂಡರೂ ನನ್ನ ತವರು ಜಿಲ್ಲೆಯಲ್ಲಿ ಮಲೇರಿಯಾ, ಡೆಂಗ್ಯು ತಡೆಗೆ ಕೈಗೊಂಡಿರುವ ಕ್ರಮದ ಬಗ್ಗೆ ತನಗೆ ಹೆಚ್ಚು ಕಾಳಜಿ. ಯೋಚನೆ ಇಲ್ಲಿಯದ್ದೇ; ಹಾಗಾಗಿ ಮಳೆಗಾಲದಲ್ಲಿ ಜಿಲ್ಲೆಯಲ್ಲಿ ಅದರಲ್ಲೂ ಮುಖ್ಯವಾಗಿ ಮಂಗಳೂರು ಮಲೇರಿಯಾ ಹಾಗೂ ಡೆಂಗ್ಯು ವಿರುದ್ಧ ಆರೋಗ್ಯ ಇಲಾಖೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿ ಎಂದು ಆರೋಗ್ಯ ಸಚಿವರು ಹಾಗೂ ಕೋಲಾರ ಜಿಲ್ಲಾಉಸ್ತುವಾರಿ ಸಚಿವರೂ ಆಗಿರುವ ಯು ಟಿ ಖಾದರ್ಅವರು ಹೇಳಿದರು.
ಅವರಿಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಉಳ್ಳಾಲದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾದ ಜಿಲ್ಲೆಯಎಲ್ಲ ವೈದ್ಯಾಧಿಕಾರಿಗಳ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಸಾಂಕ್ರಾಮಿಕ ರೋಗ ತಡೆಗೆ ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಇಲಾಖಾಧಿಕಾರಿಗಳಿಗೆ ತಾವು ಪ್ರಥಮ ಸಭೆಯಲ್ಲಿ ನೀಡಿದ ಮಾರ್ಗದರ್ಶನದಂತೆ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಡೆಂಗ್ ಪೀಡಿತ ರೋಗಿಗಳು ಕಂಡು ಬಂದರೆ ಅವರನ್ನು ಭೇಟಿ ಮಾಡಿ ಚಿಕಿತ್ಸೆಯ ಬಗ್ಗೆ ಗಮನ ಹರಿಸಬೇಕು.ಅಧಿಕಾರಿಗಳು ಸಾಂಕ್ರಾಮಿಕ ರೋಗ ಹರಡುತ್ತಿರುವ ಪ್ರಸಕ್ತ ಸಂದರ್ಭದಲ್ಲಿ ಕಚೇರಿ ಬಿಟ್ಟು ಹೊರಬನ್ನಿ ಜನಸಾಮಾನ್ಯರಿಗೆ ತೊಂದರೆಯಾಗುತ್ತಿರುವುದನ್ನು  ನಿವಾರಿಸಲು ಉಳಿದ ಎಲ್ಲಾ ಕೆಲಸ ಬದಿಗಿಟ್ಟು ರೋಗ ತಡೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಸುಸುಜ್ಜಿತವಾದ ಮೊಬೈಲ್ ಯೂನಿಟ್ ಒಂದನ್ನು ರಚಿಸಿ ಅದನ್ನು ಸಾಂಕ್ರಾಮಿಕ ರೋಗ ಪೀಡಿತ ಪ್ರದೇಶದ ಜನರ ರಕ್ತದ ಮಾದರಿ  ಸಂಗ್ರಹಿಸಲು ಹಾಗು ಪರೀಕ್ಷೆಗೆ  ಸಂಬಂಧಿಸಿದಂತೆ ಕ್ರಮ ಕೈ ಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ವೈದ್ಯಕೀಯ ಸೌಲಭ್ಯಗಳೊಂದಿಗೆ ಗುತ್ತಿಗಾರು,ಶಿರಾಡಿ, ಸುಬ್ರಹ್ಮಣ್ಯದಲ್ಲಿರುವಜನರಿಗೆ ವೈದ್ಯಕೀಯ ಸೌಲಭ್ಯಒದಗಿಸಲುಎರಡು ಮೊಬೈಲ್ಯುನಿಟ್ ನೀಡಲು ಸಭೆಯಲ್ಲಿಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿಗೆ ಸಚಿವರು ಸೂಚಿಸಿದರು.
ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಪ್ರತಿದಿನ ಮಲೇರಿಯಾ ಹಾಗೂ ಡೆಂಗ್ಯು ವರದಿಯನ್ನುತನಗೆ ನೀಡಬೇಕುಎಂದು ಸೂಚಿಸಿದ ಸಚಿವರು, ವರದಿ ನೀಡುವುದು ಮಾತ್ರ ಮುಖ್ಯವಲ್ಲ ಸೊಳ್ಳೆಗಳ ಉತ್ಪತ್ತಿತಡೆಗೆ ವ್ಯಾಪಕ ಕ್ರಮಗಳನ್ನು ಕೈಗೊಳ್ಳಿ ಎಂದು ನಿದರ್ೇಶಿಸಿದರು.
ಆಶಾ ಕಾರ್ಯಕತರ್ೆಯರು, ಎ ಎನ್ ಎಂಗಳು, ತಾಲೂಕು ವೈದ್ಯಾಧಿಕಾರಿಗಳು ಫೀಲ್ಡ್ ನಲ್ಲಿರಬೇಕು.ಈ ಸಂಬಂಧ ಸಂಪೂರ್ಣ ಹೊಣೆಜಿಲ್ಲಾಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿಗಳದ್ದು ಎಂದರು.
ಗ್ರಾಮೀಣ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವಾಗ ಮಾನವೀಯತೆಯಿಂದ ಮಾಡಿ.ವೆನ್ಲಾಕ್ಆಸ್ಪತ್ರೆಯು ಈ ಸಂಬಂಧ ಸಂಪೂರ್ಣ ಸಹಕಾರ ನೀಡಲಿದೆ.ಪ್ರಾಥಮಿಕಆರೋಗ್ಯ ಕೇಂದ್ರಗಳಿಗೆ ಎಲ್ಲ ಸವಲತ್ತು ನೀಡಲು ಸರ್ಕಾರ ಬದ್ಧವಿದ್ದು, ಯಾವುದೇ ಸಂಕೋಚವಿಲ್ಲದೆ ಸೌಲಭ್ಯಗಳ ಪಟ್ಟಿಯನ್ನು ನೀಡಿ ಕೆಲಸ ಮಾಡಿಎಂದರು.
ಬಳಿಕ ಉಳ್ಳಾಲ ಪುರಸಭೆಯಲ್ಲಿ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಕೆಲಸದಲ್ಲಿ ಪಾರದರ್ಶಕತೆಇರಲಿ ಎಂದರು. ಇಂದು ಪ್ರಸ್ತಾಪಿಸಲಾದ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ಹೊಣೆ ಅಧಿಕಾರಿಗಳದ್ದು. ಮುಂದಿನ ಸಭೆಯಲ್ಲಿ ಇದೇ ಸಮಸ್ಯೆ ಪುನಾರವರ್ತನೆಯಾಗಬಾರದು ಎಂದರು.
ವೈದ್ಯರ ಕೊರತೆ ನಿವಾರಿಸಲು ಕಡ್ಡಾಯ ಗ್ರಾಮೀಣ ಸೇವೆ:
 ಯುವ ವೈದ್ಯರಿಗೆ ಗ್ರಾಮೀಣ ಪ್ರದೇಶದಲ್ಲಿ ಕನಿಷ್ಠ ಒಂದು ವರುಷದ ಸೇವೆ ಕಡ್ಡಾಯ ಗೊಳಿಸುವ ಕರಡು ಮಸೂದೆ ರಾಷ್ಟ್ರಪತಿಯವರ ಅಂಕಿತಕ್ಕೆ ಬಾಕಿ ಇದೆ ಎಂದು ಆರೋಗ್ಯ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಅವರು ಇಂದು ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆರೋಗ್ಯಾಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು.
ಈ ಹಿಂದೆ ವೈದ್ಯಕೀಯ ಪದವೀಧರರು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸದಿದ್ದರೆ    ದಂಡ ತೆರಬೇಕೆಂಬ ನಿಯಮವಿತ್ತು ಆ ಪ್ರಕಾರ  ರಾಜ್ಯದ ಬೊಕ್ಕಸಕ್ಕೆ ಏಳು ಕೋಟಿ ರೂಪಾಯಿ ದಂಡದ ರೂಪದಲ್ಲಿ ಸಲ್ಲಿಕೆಯಾಗಿದೆ. ಆದರೆ ಗ್ರಾಮೀಣ ಪ್ರದೇಶದಲ್ಲಿ ಇದರಿಂದ ತೊಂದರೆಯಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟು ವೈದ್ಯರ ಸೇವೆ ಅಗತ್ಯವಾಗಿರುವುದರಿಂದ ಕಡ್ಡಾಯ ಗ್ರಾಮೀಣ ವೈದ್ಯಕೀಯ ನೀತಿಯನ್ನು ರೂಪಿಸುವುದು ಇಂದಿನ ಪರಿಸ್ಥಿತಿಯಲ್ಲಿ ಅನಿವಾರ್ಯವಾಗಿದೆ ಎಂದು ಖಾದರ್ ತಿಳಿಸಿದರು.
ಶೀಘ್ರದಲ್ಲಿಯೆ ರಾಜ್ಯದ ಖಾಲಿ ಇರುವ  ಹುದ್ದೆಗಳಲ್ಲಿ 198 ಹುದ್ದೆಗಳಿಗೆ ಕೌನ್ಸಿಲಿಂಗ್ ಮೂಲಕ ನೇಮಕಾತಿ ನಡೆಸಲು ಕ್ರಮ ಕೈಗೊಳ್ಳಲಾಗಿದೆ.ರಾಜ್ಯ ಮಟ್ಟದಲ್ಲಿ ಆರೋಗ್ಯ ಇಲಾಖೆಯ ಖಾಲಿ ಇರುವ ಕಾರ್ಯಕ್ರಮ  ಪರಿವೀಕ್ಷಣಾಧಿಕಾರಿಗಳ ಹುದ್ದೆಗಳನ್ನು ತುಂಬಲು ತಳ ಮಟ್ಟದಿಂದಲೆ ಗುತ್ತಿಗೆ ಆಧಾರ ಹಾಗೂ ನೇರ ನೇಮಕಾತಿ ಮೂಲಕ ನೇಮಕಾತಿಗೆ ಸೂಚಿಸಲಾಗಿದೆ ಎಂದು ಸಚಿವ ಖಾದರ್ ತಿಳಿಸಿದ್ದಾರೆ.
ರಾಜ್ಯಾದ್ಯಂತ ತುರ್ತು ಆರೋಗ್ಯ ಸೇವೆಗೆ  `104' ಉಚಿತ ದೂರವಾಣಿ ಸಂಖ್ಯೆ ರಾಜ್ಯಾದ್ಯಂತ ತುರ್ತು ಆರೋಗ್ಯ ಸೇವೆಗಾಗಿ ಟೋಲ್ ಫ್ರಿ  104 ದೂರವಾಣಿ ಸಂಖ್ಯೆಗೆ ರಾಜ್ಯದ ಯಾವುದೇ ಮೂಲೆಯಿಂದ ಕರೆ ಮಾಡಬಹುದಾಗಿದೆ. ಈ ಉಚಿತ ಕರೆಯ ಮೂಲಕ ಸಾರ್ವಜನಿಕರು ವೈದ್ಯಕೀಯ ತುರ್ತು ಸೇವೆಗಳ ಜೊತೆ ವೈದ್ಯಕೀಯಕ್ಕೆ ಸಂಬಂಧಿಸಿದ ಸಲಹೆಗಳನ್ನು ಪಡೆಯಬಹುದಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದರು.
ಉಳ್ಳಾಲದಲ್ಲಿ ಸುಸಜ್ಜಿತ ವೈದ್ಯಕೀಯ ಕೇಂದ್ರಕ್ಕೆ ಸಮೀಕ್ಷೆ: ಉಳ್ಳಾಲದಲ್ಲಿ ಸುಸಜ್ಜಿತವಾದ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆಯನ್ನು ಆರಂಭಿಸಲು ಸರ್ವೇ ಕಾರ್ಯ ನಡೆಸಲು ಅಧಿಕಾರಗಳ ತಂಡ ಉಳ್ಳಾಲಕ್ಕೆ ಆಗಮಿಸಲಿದೆ ಎಂದು ಯು.ಟಿ.ಖಾದರ್ ತಿಳಿಸಿದರು.