Saturday, June 22, 2013

ಬಂದರು ಅಭಿವೃದ್ಧಿಗೆ ಬಜೆಟ್ ನಲ್ಲಿ 50 ಕೋ.ರೂ. : ಸಚಿವ ಬಾಬುರಾವ್ ಚಿಂಚನಸೂರ್

ಮಂಗಳೂರು, ಜೂನ್. 22: ರಾಜ್ಯದ ಬಂದರು ಅಭಿವೃದ್ಧಿನ ಹಾಗೂ ಕಡಲ್ಕೊರೆತ ತಡೆಗೆ ಬಜೆಟ್ ನಲ್ಲಿ 50 ಕೋಟಿ ರೂ. ಮೀಸಲಿಟ್ಟಿದೆ ಎಂದು ಜವಳಿ, ಬಂದರು ಮತ್ತು ಒಳನಾಡು ಸಾರಿಗೆ ಸಚಿವರಾದ ಬಾಬುರಾವ್ ಚಿಂಚನಸೂರ್ ಅವರು ಹೇಳಿದರು.
ಇಂದು ನಗರದ ಸರ್ಕಿಟ್  ಹೌಸ್ ನಲ್ಲಿ ಆಯೋ ಜಿಸಿದ್ದ ಪತ್ರಿಕಾ ಗೋಷ್ಟಿ ಯನ್ನು ಉದ್ದೇ ಶಿಸಿ ಮಾತ ನಾಡಿದ ಅವರು, ಅಭಿ ವೃದ್ಧಿ ಕಾರ್ಯ ಗಳನ್ನು ಇಲಾಖೆ ಅತ್ಯಂತ ತ್ವರಿ ತಗತಿ ಯಲ್ಲಿ ಅನು ಷ್ಠಾನಕ್ಕೆ ತರ ಲಿದೆ ಎಂದರು. ಕರಾವಳಿಯ ಕಡ ಲ್ಕೊರೆತ ತಡೆಗೆ ಹಾಗೂ ಎಡಿಬಿ ಆಧಾರಿತ ಶಾಶ್ವತ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ನಡೆಸಲಾಗುವುದು. ಮೂರು ಹಂತಗಳಲ್ಲಿ ಈ ಸಂಬಂಧ ಕಾಮಗಾರಿಗಳು ನಡೆಯಲಿವೆ ಎಂದು ಪ್ರತಿಕ್ರಿಯಿಸಿದರು.
ಯಾದ ಗಿರಿಯಲ್ಲಿ ಅಂತರರಾಷ್ಟ್ರೀಯ ಜವಳಿ ಪಾರ್ಕ್  ನಿರ್ಮಿಸಲು ಉದ್ದೇಶಿಸಲಾಗಿದ್ದು, ಈ ಸಂಬಂಧ ಒಟ್ಟು 3,300 ಎಕರೆ ಜಮೀನು ಸ್ವಾಧೀನ ಪಡಿಸಲಾಗಿದೆ. ಜವಳಿ ಫಾರ್ಮಿಗೆ ಒಂದು ಸಾವಿರ ಎಕರೆ ಮೀಸಲಿರಿಸಿದೆ. ಇದರಿಂದ ಹೈದರಾಬಾದ್ ಕರ್ನಾಟಕದ ಜನರಿಗೆ ನೌಕರಿ ಜೊತೆಗೆ ನೇಕಾರರಿಗೆ ವಿಫುಲ ಅವಕಾಶ ಲಭ್ಯವಾಗಲಿದೆ ಎಂದರು.
ಕರ್ನಾಟಕ ಮೆರಿಟೈಮ್ ಬಿಲ್ ರಾಷ್ಟ್ರಪತಿಗಳ ಅಂಕಿತಕ್ಕಾಗಿ ಸಲ್ಲಿಸಿದ್ದು, 300 ಕಿ.ಮೀ ಉದ್ದದ ಕರ್ನಾಟಕ ಕರಾವಳಿ ತೀರ ಈ ಯೋಜನೆಯಡಿ ಬರಲಿದೆ ಎಂದರು. ಕರಾವಳಿಯ ಕಡಲ್ಕೊರೆತ ತಡೆಗೆ ಒಟ್ಟು 911 ಕೋಟಿ ರೂ.ಗಳ ಯೋಜನೆ ರೂಪಿಸಲಾಗಿದೆ ಎಂದು ಬಂದರು ಇಲಾಖೆಯ ನಿರ್ದೇಶಕರಾದ ಕ್ಯಾಪ್ಟನ್ ಆರ್ ಮೋಹನ್ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಈ ಸಂದರ್ಭದಲ್ಲಿ ಕ್ಯಾಪ್ಟನ್ ಸ್ವಾಮಿ, ಕಾರ್ಯನಿರ್ವಾಹಕ ಇಂಜಿನಿಯರ್ ಟಿ ಎಸ್ ರಾಥೋಡ್, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸುಜನ್ ಎ ಎಸ್ ರಾವ್ ಉಪಸ್ಥಿತರಿದ್ದರು.