Friday, September 30, 2011

24 ಗಂಟೆಯೊಳಗೆ ಜಿಲ್ಲೆಯ ಎಲ್ಲ '108' ವಾಹನ ಸೇವೆಗೆ ಸಿದ್ಧ

ಮಂಗಳೂರು,ಸೆಪ್ಟೆಂಬರ್.30 :ಸಾರ್ವಜನಿಕ ತುರ್ತು ಚಿಕಿತ್ಸಾ ಸೇವೆಯ 108 ಆಂಬುಲೆನ್ಸ್ ನೌಕರರ ಮುಷ್ಕರದಿಂದ ಅನಿವಾರ್ಯ ಸೇವೆಯಲ್ಲಿ ವ್ಯತ್ಯಯ ಸಂಭವಿಸದಂತೆ ಜಿಲ್ಲಾಡಳಿತ ಪರ್ಯಾಯ ಕ್ರಮಗಳನ್ನು ಕೈಗೊಂಡಿದ್ದು ಜಿಲ್ಲಾಧಿಕಾರಿಗಳು ಈ ಸಂಬಂಧ ಈಗಾಗಲೇ ಮೂರು ಸಭೆಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಜೊತೆ ನಡೆಸಿದ್ದಾರೆ. ಜಿಲ್ಲೆಯ 19 ವಾಹನಗಳು ನಾಳೆ ಸಂಜೆಯೊಳಗೆ ಮತ್ತೆ ಸೇವೆ ನೀಡಲಿದೆ ಎಂದು ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪಗೌಡ ಅವರು ತಿಳಿಸಿದ್ದಾರೆ. ಈಗಾಗಲೇ ಹತ್ತು 108 ಅಂಬುಲೆನ್ಸ್ ಗಳು ಸೇವೆ ನೀಡುತ್ತಿದೆ. ಐದು ಇಂದು ಕಾರ್ಯೋನ್ಮುಖವಾಗಿದೆ. ಉಳಿದ ನಾಲ್ಕು ವಾಹನಗಳು ನಾಳೆ ಸಂಜೆಯೊಳಗೆ ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
ಅಗತ್ಯ ಸೇವೆಯಲ್ಲೊಂದೆಂದು ಪರಿಗಣಿಸಲಟ್ಪಿರುವ 108 ಅಂಬುಲೆನ್ಸ್ ಸೇವೆ ಸಿಬ್ಬಂದಿಗಳ ಅನಧಿಕೃತ ಗೈರನ್ನು ಗಂಭೀರವಾಗಿ ಪರಿಗಣಿಸಲಾಗಿದ್ದು, ಮುಷ್ಕರ ನಿರತರ ವಿರುದ್ಧ ಮೊಕದ್ದಮ್ಮೆ ದಾಖಲಿಸಲಾಗುವುದು ಮತ್ತು ಅವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.
ವೆನ್ಲಾಕ್, ಶಿರಾಡಿ, ಕಬಕ, ಪೂಂಜಾಲ್ ಕಟ್ಟೆ, ಬಜಪೆ, ಮುಲ್ಕಿ,ವೇಣೂರು, ನಾರಾವಿ,ಸುರತ್ಕಲ್, ಬಿ ಸಿ ರೋಡ್ ನ 108 ಈಗಾಗಲೇ ಕಾರ್ಯಪ್ರವೃತ್ತವಾಗಿವೆ ಎಂದು ಅವರು ಮಾಹಿತಿ ನೀಡಿದರು. ಅರೋಗ್ಯ ಇಲಾಖೆಯಿಂದ 14 ಮತ್ತು ವೆನ್ ಲಾಕ್ ನಿಂದ 2 ಚಾಲಕರನ್ನು 108 ವಾಹನ ಚಾಲನೆ ಮಾಡಲು ತಾತ್ಕಾಲಿಕವಾಗಿ ವ್ಯವಸ್ಥೆ ಮಾಡಲಾಗಿದೆ.
ಸಮುದಾಯ ಆರೋಗ್ಯ ಕೇಂದ್ರ ಬಂಟ್ವಾಳದ ವೇಣುಗೋಪಾಲ್ ಕಾಮತ್ ಮೊಬೈಲ್ 9449034315. ಪೂಂಜಾಲ್ ಕಟ್ಟೆಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ತಿಮ್ಮಯ್ಯಗೌಡ 9448543275. ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಶೇಖರ, ಕಡಬ ಸಮುದಾಯ ಆರೋಗ್ಯ ಕೇಂದ್ರದ ಸುದರ್ಶನ 9740893452,ಶಿರಾಡಿಗೆ ರಾಮಣ್ಣ 9483286925, ಪುತ್ತೂರಿಗೆ ತಿಮ್ಮಪ್ಪ ಸಫಲ್ಯ 9449032692.ಬೆಳ್ತಂಗಡಿಗೆ ರಜಾಕ್ 9448501458.ಸುಳ್ಯಕ್ಕೆ ಮಾಧವ 9448445709, ಸುಬ್ರಹ್ಮಣ್ಯಕ್ಕೆ ಹೊನ್ನಪ್ಪ 9448625410, ಮೂಡಬಿದ್ರೆಗೆ ಸಂತೋಷ್ 9481510303, ಮುಲ್ಕಿಗೆ ದಯಾನಂದ್ 9739828627, ವೇಣೂರಿಗೆ ರೋಶನ್ 9449227856, ತಿಂಗಳಾಡಿಗೆ ವಿಜಯಕುಮಾರ್ 9481024231. ಇವರ ಸೇವೆಯನ್ನು ಪಡೆಯುವ ಬಗ್ಗೆ ಆರೋಗ್ಯ ಇಲಾಖೆಯ ನಿದರ್ೇಶಕರಿಗೆ ಮಾಹಿತಿ ನೀಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

Thursday, September 29, 2011

ಮಂಗಳಗಂಗೋತ್ರಿಯಲ್ಲಿ ಪ್ರವಾಸೋದ್ಯಮ ದಿನಾಚರಣೆ

ಮಂಗಳೂರು,ಸೆಪ್ಟೆಂಬರ್.29: ಭಾರತ ಸಾಂಸ್ಕೃತಿಕ ವೈವಿಧ್ಯತೆಯಿಂದ ಕೂಡಿದ ರಾಷ್ಟ್ರವಾಗಿದ್ದು, ಇಲ್ಲಿ ಪ್ರವಾಸೋದ್ಯಮಕ್ಕೆ ವಿಪುಲ ಅವಕಾಶಗಳಿವೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಟಿ.ಸಿ.ಶಿವಶಂಕರ ಮೂರ್ತಿ ಹೇಳಿದ್ದಾರೆ.ಅವರು ವಿಶ್ವ ವಿದ್ಯಾನಿ ಲಯ ದಲ್ಲಿ ಎಂ.ಬಿ.ಎ ಟೂರಿಸಂ ವಿಭಾಗ ಹಮ್ಮಿ ಕೊಂಡಿದ್ದ `ವಿಶ್ವ ಪ್ರವಾ ಸೋದ್ಯಮ ದಿನಾ ಚರಣೆ'ಯನ್ನು ಉದ್ಘಾಟಿಸಿ ಮಾತ ನಾಡಿದರು.ವಿಶ್ವ ದಲ್ಲಿ ಅನೇಕ ರಾಷ್ಟ್ರಗಳಿಗೆ ಪ್ರವಾಸೋ ದ್ಯಮವೇ ದೇಶದ ಆದಾಯದ ಪ್ರಮುಖ ಮೂಲ ವಾಗಿದೆ. ಭಾರತ ದೇಶವು ಪ್ರವಾಸೋ ದ್ಯಮದಲ್ಲಿ ಮುಂಚೂಣಿ ಯಲ್ಲಿದ್ದು ಉತ್ತಮ ವಿದೇಶಿ ವಿನಿಮಯ ಗಳಿಸುತ್ತಿದೆ ಎಂದ ಅವರು ಪ್ರವಾಸೋದ್ಯಮ ಪರಸ್ಪರ ಒಬ್ಬರನ್ನೊಬ್ಬರು ಅರಿತುಕೊಳ್ಳಲು ಒಂದು ಅತ್ಯುತ್ತಮ ಮಾಧ್ಯಮವಾಗಿದೆ ಎಂದು ಅಭಿಪ್ರಾಯಪಟ್ಟರು.ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಪಾಲ್ಗೊಂಡ ಹಿರಿಯ ವಿದ್ವಾಂಸ ಡಾ.ಪ್ರಭಾಕರ ಜೋಷಿ ಅವರು ಮಾತನಾಡಿದರು.ದಕ್ಷಿಣ ಕನ್ನಡ ಜಿಲ್ಲಾ ವಾರ್ತಾ ಧಿಕಾರಿ ರೋಹಿಣಿ ಕೆ. ಅವರು ಟೂರಿಸಂ ಕ್ಲಬ್ ನ್ನು ಉದ್ಘಾ ಟಿಸಿದರು.ವಿಶ್ವ ವಿದ್ಯನಿಲಯ ಹಣ ಕಾಸು ಅಧಿಕಾರಿ ಪ್ರೊ.ಫಕೀರಪ್ಪ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎಂ.ಬಿ.ಎ ವಿಭಾಗ ಮುಖ್ಯಸ್ಥೆ ಮುಸ್ತ್ಯಾರಿ ಬೇಗಂ ಮತ್ತು ಟೂರಿಸಂ ಕ್ಲಬ್ ಕಾರ್ಯದರ್ಶಿ ರೈಸಾ ಸುಲ್ತಾನ್,ಎಂ.ಬಿ.ಎ. ಟೂರಿಸಂ ಸಹಾಯಕ ಪ್ರಾಧ್ಯಾಪಕ ಜೋಸೆಫ್, ಪ್ರೊ.ಮಲ್ಲಿಕಾರ್ಜುನಪ್ಪ, ಶ್ರೀಧರ್ ನಾಯಕ್ ಉಪಸ್ಥಿತರಿದ್ದರು.

Wednesday, September 28, 2011

ಬಾಲಕಿಯರಿಗಾಗಿ "ಕಿಶೋರಿ" ಯೋಜನೆ:-ಡಾ.ಕೆ.ಎನ್. ವಿಜಯಪ್ರಕಾಶ್

ಮಂಗಳೂರು,ಸೆಪ್ಟೆಂಬರ್ 28: 12 ವರ್ಷ ಪ್ರಾಯ ಮೀರಿದ ಬಾಲಕಿಯರ ಮನೋದೈಹಿಕ ಸದೃಢತೆಯನ್ನು ಕಾಯ್ದುಕೊಳ್ಳಲು `ಕಿಶೋರಿ' ಎಂಬ ನೂತನ ಯೋಜನೆ ನವೆಂಬರ್ 1ರಿಂದ ಜಾರಿಗೆ ಬರಲಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹ ಣಾಧಿಕಾರಿ ಡಾ.ಕೆ.ಎನ್. ವಿಜಯ ಪ್ರಕಾಶ್ ತಿಳಿಸಿದರು .ಬೆಳ್ತಂಗಡಿ ತಾಲೂಕಿನ ಲಾಯಿಲದಲ್ಲಿ ಮಾಧ್ಯಮ ಪ್ರತಿನಿಧಿ ಗಳಿಗೆ ಜಿ.ಪಂ.ನ ವಿವಿಧ ಯೋಜನೆ ಗಳನ್ನು ವಿವರಿಸಿದರು.
6 ರಿಂದ 8ನೇ ತರಗತಿ ವರೆಗಿನ ಹೆಣ್ಣು ಮಕ್ಕಳಲ್ಲಿ ಅರೋಗ್ಯ ರಕ್ಷಣೆಯ ಬಗ್ಗೆ ಜಾಗೃತಿ ಹಾಗೂ ಆರೋಗ್ಯದ ಬಗ್ಗೆ ತಿಳುವಳಿಕೆ, ವಿಶ್ವಾಸ ಮೂಡಿಸುವ ಉದ್ದೇಶದಿಂದ ಕಿಶೋರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ಪ್ರತಿ ಶಾಲೆಯಲ್ಲಿ ಶನಿವಾರ ಮಧ್ಯಾಹ್ನ ಮತ್ತು ಭಾನುವಾರ ನಡೆಯಲಿದೆ ಎಂದರು.
ಲಾಯಿಲದಲ್ಲಿ ಐಸಿರಿ ಸ್ವ ಸಹಾಯ ಗುಂಪಿ ನವರು ತಯಾರಿಸುತ್ತಿರುವ `ಸೇಫ್ಟಿ' ನ್ಯಾಪ್ಕಿನ್ ಪ್ಯಾಡ್ ನ ಘಟಕ ಮಹತ್ವಾಕಾಂಕ್ಷೆಯ ಯೋಜನೆ ಯಾಗಿದೆ. ಇದಕ್ಕೆ ನಬಾರ್ಡ್ ರೂ.7.33 ಲಕ್ಷ ಅನುದಾನ ಒದಗಿಸಿದೆ. ನಬಾರ್ಡನ ನೆರವನ್ನು ಭವಿಷ್ಯದಲ್ಲೂ ಹಲವು ಯೋಜನೆಗಳಿಗೆ ಪಡೆಯ ಲಾಗುವುದು ಎಂದರು. ರೂ.4.33 ಲಕ್ಷವನ್ನು ಗುಂಪಿಗೆ ಅನುದಾನ ನೀಡಲಾಗಿದೆ.
5 ನ್ಯಾಪ್ಕಿನ್ ಗಳ ಒಂದು ಪ್ಯಾಕೇಟಿಗೆ ರೂ.15ರಂತೆ ಮಾರಾಟ ದರ ನಿಗದಿ ಪಡಿಸಲಾಗಿದೆ. ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ 50 ವಿದ್ಯಾರ್ಥಿನಿ ನಿಲಯಗಳಿದ್ದು ಸುಮಾರು 3,745 ವಿದ್ಯಾರ್ಥಿ ನಿಯರಿದ್ದಾರೆ. ಜಿಲ್ಲೆಯಲ್ಲಿ 12 ವರ್ಷ ಮೀರಿದ ಸುಮಾರು 79 ಸಾವಿರ ವಿದ್ಯಾರ್ಥಿನಿಯರಿದ್ದಾರೆ. ಸ್ವ ಸಹಾಯ ಸಂಘದ 52 ಸಾವಿರ ಮಹಿಳೆಯರಿದ್ದಾರೆ. ಇವರು ನ್ಯಾಪ್ಕಿನ್ ಬಳಕೆ ಮೂಲಕ ಆರೋಗ್ಯ ಕಾಳಜಿ ವಹಿಸುವರಲ್ಲದೆ, ಮಾರುಕಟ್ಟೆ ಯನ್ನು ವಿಸ್ತರಿಸುವರೆಂಬ ಭರವಸೆ ಇದೆ. ಇದಲ್ಲದೆ ಸರಕಾರಿ ಆಸ್ಪತ್ರೆಗಳಲ್ಲಿ ಮತ್ತು ಔಷಧಿ ಅಂಗಡಿಗಳಲ್ಲಿ ನ್ಯಾಪ್ಕಿನ್ ಸಿಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ವಿಜಯಪ್ರಕಾಶ್ ನುಡಿದರು.
ಇಷ್ಟೇ ಅಲ್ಲದೆ ವಿದ್ಯಾರ್ಥಿನಿ ನಿಲಯಗಳಿಗೆ ಈ ನ್ಯಾಪ್ಕಿನ್ ಪ್ಯಾಕೆಟ್ಗಳನ್ನು ರೂ.12ಕ್ಕೆ ಒದಗಿಸ ಲಾಗುವುದು. ಪ್ರಸ್ತುತ ಬೆಂಗಳೂರಿನಿಂದ ರೂ.18ಕ್ಕೆ ಖರೀದಿಸ ಲಾಗುತ್ತಿದ್ದು `ಸೇಫ್ಟಿ' ನ್ಯಾಪ್ಕಿನ್ ಒದಗಿಸುವ ಮೂಲಕ ಇಲಾಖೆಗಳಿಗೆ ಆರ್ಥಿಕ ಲಾಭವನ್ನು ತಂದುಕೊಡಲಾಗುವುದು ಎಂದವರು ಹೇಳಿದರು.
ವಿನೂತನ ನ್ಯಾಪ್ಕಿನ್ ವೆಂಡಿಂಗ್ ಯಂತ್ರ ಮತ್ತು ನ್ಯಾಪ್ಕಿನ್ ಡಿಸ್ಪೋಸಲ್ ವ್ಯವಸ್ಥೆ ಹೊಂದಿರುವ ವಿಶೇಷ ಶೌಚಾಲ ಯಗಳನ್ನು ವಿದ್ಯಾರ್ಥಿನಿ ಯರಿಗಾಗಿ ಸ್ಥಾಪಿಸಲಾಗುವುದು ಎಂದ ವಿಜಯಪ್ರಕಾಶ್, ಈಗಾಗಲೇ ಜಿಲ್ಲೆಯ 57 ಶಾಲೆಗಳಲ್ಲಿ ರೂ.1.83 ಲಕ್ಷದ ಶೌಚಾಲ ಯಗಳನ್ನು ಅಳವಡಿಸುವ ಯೋಜನೆಯಿದೆ. ಇದರ ವಿಶೇಷತೆ ಏನೆಂದರೆ ಇದರಲ್ಲಿ ಉಪಯೋಗಿ ಸಲ್ಪಟ್ಟ ನ್ಯಾಪ್ಕಿನ್ ಗಳನ್ನು ನಾಶ ಮಾಡಲು ಬರ್ನರ್ ಅನ್ನು ಅಳವಡಿಸಲಾಗುವುದು. ಈ ಮಾದರಿಯ ಮೊದಲ ಶೌಚಾಲ ಯವನ್ನು ಕರ್ನೊಡಿ ಶಾಲೆಯಲ್ಲಿ ಸ್ಥಾಪಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಜಿಪಂ ಅಧ್ಯಕ್ಷೆ ಶೈಲಜಾ ಭಟ್, ನಬಾರ್ಡ್ ಎಜಿಎಂ ಪ್ರಸಾದ್ ರಾವ್, ಗ್ರಾಪಂ ಅಧ್ಯಕ್ಷ ಸುಧಾಕರ್ ಮತ್ತಿತರರು ಉಪಸ್ಥಿತರಿದ್ದರು.

'ಗ್ರಾಮೀಣ ಮಹಿಳಾ ಸಬಲೀಕರಣಕ್ಕೆ ಒತ್ತು'

ಮಂಗಳೂರು,ಸೆಪ್ಟೆಂಬರ್ 28: ಗ್ರಾಮೀಣ ಪ್ರದೇಶದಲ್ಲಿ ಮಹಿಳೆಯರನ್ನು ಸ್ವಾವಲಂಬಿಗಳಾಗಿಸಲು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಯೋಜನೆಗಳನ್ನು ಮಾದರಿಯಾಗಿ ಅನುಷ್ಠಾನಗೊಳಿಸಲು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಕೆ.ಟಿ. ಶೈಲಜಾ ಭಟ್ ಹೇಳಿದ್ದಾರೆ. ಅವರು ಬುಧವಾರ ಲಾಯಿಲದ ಗ್ರಾಮ ಪಂಚಾಯತ್ ವಠಾರದಲ್ಲಿ ಮಹಿಳೆಯರು ತಯಾರಿಸುವ ಸ್ಯಾನಿಟರಿ ನ್ಯಾಪ್ಕಿನ್ ಪ್ಯಾಡ್ `ಸೇಫ್ಟಿ'ಯನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಮಾತನಾಡುತ್ತಿದ್ದರು. ಗ್ರಾಮೀಣ ಮಹಿಳೆ ಯರಲ್ಲಿ ಆರೋಗ್ಯದ ಮಹತ್ವ ವನ್ನು ತಿಳಿಸ ಬೇಕು; ಸ್ವಯಂ ಉದ್ಯೋಗ ಹಾಗೂ ಸ್ವಾವ ಲಂಬಿ ಗಳಾ ಗುವ ಕುರಿತು ಗ್ರಾಮ ಪಂಚಾ ಯತ್ ಗಳು ಜಾಗೃತಿ ಮೂಡಿಸುವ ಕಾರ್ಯ ವನ್ನು ಕೈ ಗೆತ್ತಿ ಕೊಳ್ಳ ಬೇಕು ಎಂದವರು ನುಡಿದರು.ಮಹಿಳೆ ಯರಲ್ಲಿ ಉತ್ಪನ್ನಗಳ ಕುರಿತು ಜಾಗೃತಿ, ಬಳಕೆ ಪ್ರಮಾಣ ಹೆಚ್ಚಾದಂತೆ, ಸ್ಯಾನಿಟರಿ ನ್ಯಾಪ್ಕಿನ್ ಉತ್ಪಾದನಾ ಘಟಕ ಉದ್ದಿಮೆಯಾಗಿ ಬೆಳೆಯಬಲ್ಲುದು. ಮಾರುಕಟ್ಟೆಯಲ್ಲಿ ತನ್ನ ಗುಣಮಟ್ಟದಿಂದ ಸ್ಪರ್ಧೆಯನ್ನು ಎದುರಿಸಬಲ್ಲದು ಎಂದು ಅಭಿಪ್ರಾಯಪಟ್ಟ ಜಿಪಂ ಅಧ್ಯಕ್ಷರು, ಲಾಯಿಲ ಗ್ರಾಮ ಪಂಚಾಯತ್ ಸ್ಯಾನಿಟರಿ ನ್ಯಾಪ್ಕಿನ್ ಘಟಕ ಹಾಗೂ ಉತ್ತಮ ಘನತ್ಯಾಜ್ಯ ನಿರ್ವಹಣಾ ಘಟಕ ಸ್ಥಾಪನೆ ಮೂಲಕ ಜಿಲ್ಲೆಯ ಇತರ ಗ್ರಾಮ ಪಂಚಾಯತ್ಗಳಿಗೆ ಮಾದರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ನ್ಯಾಪ್ಕಿನ್ನ ಮೊದಲ ಉತ್ಪನ್ನವನ್ನು ಧರ್ಮಸ್ಥಳ ಸಿರಿ ಗ್ರಾಮೋ ದ್ಯೋಗ ಸಂಸ್ಥೆ ಹಾಗೂ ಸ್ಥಳೀಯ ಗ್ರಾಮೀಣ ಸೂಪರ್ ಮಾರ್ಕೆಟ್ ಗೆ ಹಸ್ತಾಂತರ ಗೊಳಿಸುವ ಮೂಲಕ ಮಾರುಕಟ್ಟೆಗೆ ಮುಕ್ತಗೊಳಿಸಿದರು.ಅತಿಥಿ ಯಾಗಿ ಮಾತ ನಾಡಿದ ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯ ನಿರ್ವಹ ಣಾಧಿಕಾರಿ ಡಾ.ವಿಜಯ ಪ್ರಕಾಶ್, ತಮ್ಮ ಅಧಿಕಾರ ವ್ಯಾಪ್ತಿಯಲ್ಲಿರುವ ವಿದ್ಯಾರ್ಥಿನಿ ನಿಲಯ ಗಳಲ್ಲಿ ನಮ್ಮದೇ ಮಹಿಳೆ ಯರು ಮಾಡುವ ಉತ್ಪನ್ನಕ್ಕೆ ಮಾರುಕಟ್ಟೆ ಒದಗಿಸು ವುದಾಗಿ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ವಸಂತ ಬಂಗೇರ, ನ್ಯಾಪ್ಕಿನ್ ಉಪಯೋಗದ ಬಗ್ಗೆ ಗ್ರಾಮ ಪಂಚಾಯತ್ ಗಳು ಮಹಿಳೆ ಯರನ್ನು ಮತ್ತು ಶಾಲಾ ವಿದ್ಯಾರ್ಥಿನಿ ಯರನ್ನು ಒಂದೆಡೆ ಸೇರಿಸಿ ಮಾಹಿತಿ ಕೊಡುವ ಕಾರ್ಯಕ್ರಮ ನಡೆಸ ಬೇಕು. ಲಾಯಿಲಾ ಗ್ರಾಪಂ ಉತ್ತಮ ಅಭಿವೃದ್ಧಿ ಮಾದರಿ ನೀಡಿರುವುದು ಸ್ಥಳೀಯ ಶಾಸಕನಾದ ನನಗೆ ಹೆಮ್ಮೆ ತಂದಿದೆ ಎಂದರು.
ಜಿ.ಪಂ. ಉಪಾಧ್ಯಕ್ಷೆ ಧನಲಕ್ಷ್ಮೀ ಜನಾರ್ಧನ್, ಸದಸ್ಯ ಶೈಲೇಶ್ ಕುಮಾರ್, ಬೆಳ್ತಂಗಡಿ ತಾ.ಪಂ. ಉಪಾಧ್ಯಕ್ಷ ಸಂತೋಷ್ ಕುಮಾರ್, ಜಿಪಂ ಮುಖ್ಯ ಯೋಜನಾಧಿಕಾರಿ ಮೊಹಮ್ಮದ್ ನಝೀರ್, ನಬಾರ್ಡ್ ಎಜಿಎಂ ಪ್ರಸಾದ್ ರಾವ್, ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಯೋಜನಾಧಿಕಾರಿ ಗೀತಾ, ವಿಮುಕ್ತಿ ಸಂಸ್ಥೆಯ ನಿರ್ದೇಶಕ ಫಾ.ವಿನೋದ್ ಮಸ್ಕರೇನಸ್, ಪಿರಿಯಾಪಟ್ಟಣ ಕಾವೇರಿ ಮಾತಾ ಟ್ರಸ್ಟ್ ನಿರ್ದೇಶಕ ಪಿ.ಸಲ್ದಾನ, ಲಾಯಿಲ ಗ್ರಾಪಂ ಉಪಾಧ್ಯಕ್ಷೆ ಲೀಲಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಲಾಯಿಲ ಗ್ರಾಪಂ ಅಧ್ಯಕ್ಷ ಸುಧಾಕರ ಬಿ.ಎಲ್ ಸ್ವಾಗತಿಸಿದರು. ದ.ಕ. ಜಿಲ್ಲಾ ನೆರವು ಘಟಕದ ಮಂಜುಳಾ ಪ್ರಸ್ತಾವಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಿ.ಹೆಚ್.ಪ್ರಕಾಶ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
ಇದೇ ಸಂದರ್ಭ ಲಾಯಿಲ ಗ್ರಾಮ ಪಂಚಾಯತ್ ಅಭಿವೃದ್ಧಿ ಪಡಿಸಿದ ಲಾಯಿಲ ಗೋಲ್ಡ್ ಎಂಬ ಎರೆಹುಳ ಗೊಬ್ಬರದ ಸಾಂಕೇತಿಕ ಬಿಡುಗಡೆಯನ್ನು ಡಾ.ಕೆ ಎನ್ ವಿಜಯ ಪ್ರಕಾಶ್ ನೆರವೇರಿಸಿದರು.ಸಭೆಯಲ್ಲಿದ್ದ ಮಹಿಳೆಯರಿಗೆ ಉಚಿತವಾಗಿ ನ್ಯಾಪ್ಕಿನ್ ಪ್ಯಾಡ್ನ್ನು ಹಾಗೂ ಸ್ವಚ್ಛತೆಯ ಜಾಗೃತಿ ಮೂಡಿಸುವ ಕರಪತ್ರವನ್ನು ವಿತರಿಸಲಾಯಿತು. ಅತಿಥಿಗಳಿಗೆ ಪುಸ್ತಕಗಳನ್ನು ನೀಡಿ ಸ್ವಾಗತಿಸಬೇಕು ಎಂಬ ಸರಕಾರದ ಆದೇಶವನ್ನು ಇಲ್ಲಿ ಪಾಲಿಸಲಾಯಿತು.
ನಬಾರ್ಡ್ ಸಹಕಾರದಿಂದ ಲಾಯಿಲ ಗ್ರಾಮ ಪಂಚಾಯತ್ ನಲ್ಲಿ ಆರಂಭಗೊಂಡಿರುವ ಐಸಿರಿ ಸ್ವ-ಸಹಾಯ ಸಂಘದ ಮಹಿಳೆಯರು ತಯಾರಿಸುವ `ಸೇಫ್ಟಿ' ಸ್ಯಾನಿಟರಿ ನ್ಯಾಪ್ಕಿನ್ ಜಿಲ್ಲೆಯ ಪ್ರಥಮ ಘಟಕವಾಗಿದೆ. ಒಂದು ಪ್ಯಾಕ್ಗೆ ರೂ. 15ರಂತೆ ಇಂದಿನಿಂದ ಮಾರುಕಟ್ಟೆಯಲ್ಲಿ ಲಭ್ಯವಾಗಲಿದೆ. ಲಾಯಿಲ ಗ್ರಾಮದಲ್ಲಿನ ಕಾಲು ಇಲ್ಲದ ಕು.ಅಶ್ವಿನಿ ಎಂಬ ಬಾಲಕಿಗೆ ಗ್ರಾಮ ಪಂಚಾಯತ್ ವತಿಯಿಂದ ನೀಡಲಾದ ರೂ.5000ದ ನೆರವನ್ನು ಶಾಸಕರು ವಿತರಿಸಿದರು. ಇದೇ ಸಂದರ್ಭ ಅವರೂ ರೂ. ಒಂದು ಸಾವಿರ ವೈಯಕ್ತಿಕ ನೆರವು ನೀಡಿದರು.

Tuesday, September 27, 2011

' ಪ್ರವಾಸೋದ್ಯಮಕ್ಕೆ ಜನರ ಸಹಕಾರ ಅಗತ್ಯ '

ಮಂಗಳೂರು,ಸೆಪ್ಟೆಂಬರ್.27:ಕಡಲ ತೀರದ ಕರಾವಳಿಯಲ್ಲಿ ಪ್ರವಾಸೋದ್ಯಮ ಯಶಸ್ಸು ಕಾಣಬೇಕಾದರೆ ಜನತೆಯ ಸಹಕಾರ ಅಗತ್ಯವಾಗಿ ಬೇಕು. ಈ ನಿಟ್ಟಿನಲ್ಲಿ ಚಿಂತನೆ ನಡೆಸಬೇಕೆಂದು ವಿಧಾನ ಸಭಾ ಉಪಸಭಾಪತಿ ಎನ್.ಯೋಗಿಶ್ ಭಟ್ ಹೇಳಿದರು.

ದಕ್ಷಿಣ ಕನ್ನಡ ಜಿಲ್ಲಾ ಡಳಿತ, ಪ್ರವಾ ಸೋದ್ಯಮ ಇಲಾಖೆ,ಮಂಗ ಳೂರು ಅಸೋಸಿ ಯೇಷನ್ ಅಫ್ ಟ್ರಾವೆಲ್ ಏಜಂಟ್ ಮತ್ತು ಪಣಂಬೂರು ಬೀಚ್ ಅಭಿ ವೃದ್ದಿ ಸಂಸ್ಥೆ ಗಳ ಸಹ ಭಾಗಿತ್ವ ದಲ್ಲಿ ನಗರ ದಲ್ಲಿ ಆಯೋ ಜಿದ್ದ ವಿಶ್ವ ಪ್ರವಾ ಸೋದ್ಯಮ ದಿನಾ ಚರಣೆ ಯನ್ನು ಉದ್ಘಾ ಟಿಸಿ ಅವರು ಮಾತ ನಾಡಿದರು. ಕರಾ ವಳಿ ಯಲ್ಲಿ ಪ್ರವಾ ಸೋದ್ಯ ಮಕ್ಕೆ ವಿಫುಲ ಅವ ಕಾಶ ಗಳಿವೆ.ಈ ನಿಟ್ಟಿನಲ್ಲಿ ಆನೇಕ ಯೋಜ ನೆಗಳ ಪ್ರಸ್ತಾಪ ವನ್ನು ಸರ್ಕಾರಕ್ಕೆ ಸಲ್ಲಿಸ ಲಾಗಿದೆ.ಮುಂದಿನ ದಿನ ಗಳಲ್ಲಿ ಅವು ಗಳನ್ನು ಹಂತ ಹಂತವಾಗಿ ಅನು ಷ್ಟಾನಕ್ಕೆ ತರು ವುದ ರೊಂದಿಗೆ ಆ ಮೂಲಕ ಮಂಗಳೂರನ್ನು ಪ್ರವಾಸೋದ್ಯಮದಲ್ಲಿ ವಿಶ್ವ ಮಟ್ಟದಲ್ಲಿ ಗುರುತ್ತಿಸುವ ಪ್ರಯತ್ನ ನಡೆಸ ಲಾಗುವುದು ಎಂದರು.ಸಂಸದ ನಳಿನ್ ಕುನಾರ್ ಕಟೀಲ್, ಶಾಸಕರಾದ ಯು.ಟಿ. ಖಾದರ್,ಬಿ.ರಮನಾಥ ರೈ, ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕ ಎಂ.ಆರ್.ಪ್ರಕಾಶ್,ಮಂಗಳೂರು ಅಸೋಸಿಯೇಷನ್ ಅಫ್ ಟ್ರಾವೆಲ್ ಏಜಂಟ್ ಅಧ್ಯಕ್ಷ ರೋಷನ್ ಪಿಂಟೊ,ಪಣಂಬೂರು ಬೀಚ್ ಅಭಿವೃದ್ದಿ ಸಂಸ್ಥೆಯ ಕಾರ್ಯನಿರ್ವಾಕಧಿಕಾರಿ ಯತೀಶ್ ಬೈಕಂಪಾಡಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಪತ್ರಕರ್ತರಿಗಾಗಿ 'ಆಧಾರ್' ಗೆ ಚಾಲನೆ

ಮಂಗಳೂರು,ಸೆಪ್ಟೆಂಬರ್ 27:ಕೇಂದ್ರ ಸರ್ಕಾರದ ವಿಶಿಷ್ಟ
ಗುರು ತಿನ ಸಂಖ್ಯೆ 'ಆಧಾರ್'ಗೆ ಪತ್ರ ಕರ್ತರು ಮತ್ತು ಅವರ ಕುಟುಂಬ ದವರು ನೋಂ ದಣಿ ಮಾಡುವ ಸಲು ವಾಗಿ ನಗ ರದ ಲೇಡಿ ಹಿಲ್ ಪತ್ರಿಕಾ ಭವನ ದಲ್ಲಿ ಆಯೋ ಜಿಸ ಲಾಗಿದ್ದ 2 ದಿನ ಗಳ ಆಧಾರ್ ನೋಂ ದಣಿ ಪ್ರ ಕ್ರಿಯೆಗೆ ಜಿಲ್ಲಾ ಉಸ್ತು ವಾರಿ ಸಚಿವ ರಾದ ಕೃಷ್ಣ ಜೆ ಪಾಲೇ ಮಾರ್ ಅವರು ಇಂದು ಚಾಲನೆ ನೀಡಿದರು.
ದ.ಕ.ಜಿಲ್ಲೆಯಲ್ಲಿ ಸೆ.29ರಿಂದ 'ಆಧಾರ್' ನೋಂದಣಿ ಕಾರ್ಯಕ್ರಮ ಅಧಿಕೃತವಾಗಿ ಆರಂಭಗೊಳ್ಳಲಿದೆ.

ವಿಶ್ವ ಪ್ರವಾಸೋದ್ಯಮ ದಿನಾಚರಣೆ

ಮಂಗಳೂರು,ಸೆಪ್ಟೆಂಬರ್.27: ಪ್ರವಾಸೋದ್ಯಮ ಇಲಾಖೆ ಮತ್ತು ದಕ್ಷಿಣ ಕನ್ನಡ ಜಿಲ್ಲಾಡಳಿತ,
ಮಂಗ ಳೂರು ಅಸೋ ಸಿಯೇ ಷನ್ ಆಫ್ ಟ್ರಾ ವೆಲ್ಸ್ ಏ ಜೆಂಟ್ಸ್ ಇವರ ಸಹ ಯೋಗ ದಲ್ಲಿ ಮಂಗ ಳೂರು ವಿಮಾನ ನಿಲ್ದಾಣ ದಲ್ಲಿ ಆಯೋ ಜಿಸ ಲಾದ ಕಾರ್ಯ ಕ್ರಮ ವನ್ನು ಪಶ್ಚಿಮ ವಲಯ ಐಜಿಪಿ ಅ ಲೋಕ್ ಮೋ ಹನ್ ಅವರು ಉದ್ಘಾ ಟಿಸಿ ದರು. ಜೆಟ್ ಏರ್ ವೇಸ್ ಮತ್ತು ಕಿಂಗ್ ಫಿಷರ್ ನಲ್ಲಿ ಬಂದಿ ಳಿದ ಪ್ರಯಾ ಣಿಕ ರನ್ನು ಐಜಿಪಿ ಅವರು ಹೂ ಮತ್ತು ಸಿಹಿ ತಿಂಡಿ ವಿತ ರಿಸಿ ಸ್ವಾಗ ತಿಸಿ ದರು. ಈ ಸಂದರ್ಭದಲ್ಲಿ ಅಸೋಸಿಯೇಷನ್ ಆಫ್ ಟ್ರಾವೆಲ್ಸ್ ಏಜೆಂಟ್ಸ್ ಅಧ್ಯಕ್ಷ ರೋಶನ್ ಪಿಂಟೋ ಮತ್ತು ಲೂಯಿಸ್ ಜೆ ಪಿಂಟೋ ಮತ್ತು ಪ್ರವಾಸೋದ್ಯಮ ಇಲಾಖೆಯ ಹರೀಶ್ ಕುಮಾರ್,ವಿಮಾನ ನಿಲ್ದಾಣ ನಿರ್ದೇಶಕರಾದ ಎಂ.ಆರ್.ವಾಸುದೇವ್ ಅವರುಗಳು ಉಪಸ್ಥಿತರಿದ್ದರು.

Monday, September 26, 2011

ಅ.6ರಂದು ವಿಶ್ವೇಶ್ವರಯ್ಯ ಮಾದರಿ ರಸ್ತೆ ಕಾಮಗಾರಿಗೆ ಚಾಲನೆ

ಮಂಗಳೂರು,ಸೆಪ್ಟೆಂಬರ್.26: ಮಂಗಳೂರು ನಗರದ ರಸ್ತೆ ಅಭಿವೃದ್ದಿಯ ಹೊಸ ಆಯಾಮಕ್ಕೆ ಮೊದಲ ಹೆಜ್ಜೆಯಾಗಿ ನಗರದ
ಬಿಲ್ಡರ್ ಹಾಗೂ ಇಂಜನಿಯರ್ ಗಳ ಸಹಕಾರದಲ್ಲಿ ಪಾಲಿಕೆ ವ್ಯಾಪ್ತಿಯ 23 ರಸ್ತೆಗಳನ್ನು ಅಭಿವೃದ್ಧಿಪಡಿಸಲು ತೀರ್ಮಾನಿಸಲಾಗಿದೆ.
ಇಂದು ಜಿಲ್ಲಾ ಧಿಕಾರಿ ಕಚೇರಿ ಯಲ್ಲಿ ಜಿಲ್ಲಾ ಉಸ್ತು ವಾರಿ ಸಚಿವ ರಾದ ಕೃಷ್ಣ ಜೆ.ಪಾಲೆ ಮಾರ್ ಅವರ ಅಧ್ಯಕ್ಷ ತೆಯಲ್ಲಿ ನಡೆದ ಬಿಲ್ಡರ್ ಮತ್ತು ಇಂಜನಿ ಯರ್ಸ್ ಅಸೋ ಸಿಯೇ ಶನ್ ಸಹ ಭಾಗಿ ತ್ವದ ಸಭೆ ಯಲ್ಲಿ ಈ ನಿರ್ಧಾರ ಕೈ ಗೊಳ್ಳ ಲಾಯಿತು.60 ಜನ ಇಂಜಿ ನಿಯರ್ ಗಳನ್ನು ರಸ್ತೆ ಕಾಮ ಗಾರಿ ಗಳ ಮೇಲು ಸ್ತುವಾ ರಿಗಾಗಿ ಒದಗಿಸಲು ಇಂಜಿನಿಯರ್ಸ್ ಅಸೋಸಿಯೇಶನ್ ಸಭೆಯಲ್ಲಿ ಒಪ್ಪಿಗೆ ಸೂಚಿಸಿತು. ಅಕ್ಟೋಬರ್ 6 ರಂದು ನಗರದ ಕೆಪಿಟಿಯಿಂದ ಕಾವೂರು ಮರಕಡದವರೆಗಿನ ರಸ್ತೆ(ವಿಮಾನ ನಿಲ್ದಾಣ ರಸ್ತೆ)ಯನ್ನು ವಿಶ್ವೇಶ್ವರಯ್ಯ ಮಾದರಿ ರಸ್ತೆಯನ್ನಾಗಿ ಪರಿವರ್ತಿಸುವ ಮೂಲಕ ಕಾಮಗಾರಿಗೆ ಚಾಲನೆ ನೀಡಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಯಿತು.ಸಭೆಯ ಬಳಿಕ ಸುದ್ದಿ ಗಾರ ರೊಂದಿಗೆ ಮಾತ ನಾಡಿದ ಜಿಲ್ಲಾ ಉಸ್ತು ವಾರಿ ಸಚಿ ವರು ನಗ ರದ ರಸ್ತೆ ಕಾಮ ಗಾರಿ ಗಳಿಗೆ ಬಿಲ್ಡರ್ ಗಳು ಅಗತ್ಯ ಕಾರ್ಮಿ ಕರನ್ನು ಒದ ಗಿಸ ಲಿದ್ದು, ಇಂಜಿ ನಿಯರ್ ಅಸೋ ಸಿಯೇ ಶನ್ನ ವರು ಕಾಮ ಗಾರಿಯ ಮೇಲು ಸ್ತುವಾ ರಿಗಾಗಿ ಇಂಜ ನಿಯರ್ ಗಳನ್ನು ಒದ ಗಿಸ ಲಿದ್ದಾರೆ. ಕಾಮ ಗಾರಿ ಗಳ ವೆಚ್ಚ ಮತ್ತು ಕಾರ್ಮಿ ಕರ ವೆಚ್ಚ ವನ್ನು ಸರ ಕಾರವೇ ಭರಿ ಸಲಿದೆ.ಅಕ್ಟೋ ಬರ್ 6 ರಿಂದ ಆರಂಭಗೊಳ್ಳುವ ರಸ್ತೆಗಳ ಅಭಿವೃದ್ಧಿ ಕಾಮಗಾರಿ ಆರು ತಿಂಗಳೊಳಗೆ ಪೂರ್ಣಗೊಳಿಸಲು ಸಭೆಯಲ್ಲಿ ಕಾಲಮಿತಿ ನಿಗದಿಪಡಿಸಲಾಗಿದೆ. ಕಾಮಗಾರಿಗೆ ಅಗತ್ಯವಾದ ಸಾಮಗ್ರಿಗಳನ್ನು ಸರಕಾರಿ ಸಂಸ್ಥೆಯಾದ ನಿರ್ಮಿತಿ ಕೇಂದ್ರದ ಮೂಲಕ ರಾಜ್ಯ ಸರಕಾರ ಪೂರೈಸಲಿದೆ ಎಂದ ಅವರು ಎಲ್ಲಾ ಕಾಮಗಾರಿಗಳು ಸರ್ಕಾರದ ನಿರ್ದೇಶನ ಮತ್ತು ಕಾನೂನಿನ ಚೌಕಟ್ಟಿನಲ್ಲೇ ನಡೆಯಲಿದೆ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ವಿಧಾನ ಸಭಾ ಉಪಸಭಾಪತಿ ಮತ್ತು ಸ್ಥಳೀಯ ಶಾಸಕರೂ ಆದ ಎನ್. ಯೋಗೀಶ್ ಭಟ್, ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್, ಪ್ರಭಾರ ಅಪರ ಜಿಲ್ಲಾಧಿಕಾರಿ ಕೆ.ಟಿ. ಕಾವೇರಿಯಪ್ಪ, ಬಿಲ್ಡರ್ ಗಳು, ಇಂಜಿನಿಯರ್ಸ್ ಅಸೋಸಿಯೇಶನ್ನ ಪದಾಧಿಕಾರಿಗಳು,ಮತ್ತು ಸಂಬಂಧಪಟ್ಟ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Sunday, September 25, 2011

ಉದ್ಯೋಗ ಮೇಳ ಸಂಪನ್ನ

ಮಂಗಳೂರು,ಸೆಪ್ಟೆಂಬರ್.25: ರಾಜ್ಯ ಕೌಶಲ ಆಯೋಗ,ಉದ್ಯೋಗ ಮತ್ತು ತರಬೇತಿ ಇಲಾಖೆ, ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ ಅಭಿವೃದ್ದಿ ನಿಗಮದ ಸಂಯುಕ್ತ ಆಶ್ರಯದಲ್ಲಿ ಎರಡು ದಿನಗಳ ಕಾಲ ನಗರದಲ್ಲಿ ನಡೆದ ಕೌಶಲ ಮತ್ತು ಉದ್ಯೋಗ ಮೇಳದಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ. ಪಾಲೆಮಾರ್ ಅವರು ಪ್ರಮಾಣ ಪತ್ರಗಳನ್ನು ವಿತರಿಸಿದರು.ವಿಧಾಸಭಾ ಉಪ ಸಭಾಪತಿ ಎನ್. ಯೋಗಿಶ್ ಭಟ್, ಸಂಸದ ನಳಿನ್ ಕುಮಾರ್ ಕಟೀಲ್,ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಕೆ.ಟಿ.ಶೈಲಜ ಭಟ್,ಮೀನುಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್,ಕರ್ನಾಟಕ ವೃತ್ತಿ ತರಬೇತಿ ಮತ್ತು ಕೌಶಲ ಅಭಿವೃದ್ದಿ ನಿಗಮದ ನಿರ್ದೇಶಕ ಕೇಶವ ಮೂರ್ತಿ,ಉದ್ಯೋಗ ಮತ್ತು ತರಬೇತಿ ಇಲಾಖೆ ಜಂಟಿ ನಿರ್ದೇಶಕ ಎಚ್.ವಿ.ವೆಂಕಟರಾಮು,ಸಹಾಯಕ ನಿರ್ದೇಶಕ ವಿಶ್ವನಾಥ ಭರಣಿ ಸಮಾರಂಭದಲ್ಲಿ ಉಪಸ್ಥಿತರಿದ್ದರು.

ಡಾ.ವಿಜಯ ಪ್ರಕಾಶ್ ಗೆ ಬೀಳ್ಕೊಡುಗೆ

ಮಂಗಳೂರು,ಸೆಪ್ಟೆಂಬರ್ 25: ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾಗಿ ಸೇವೆ ಸಲ್ಲಿಸಿ ಇದೀಗ ದಕ್ಷಿಣ ಕನ್ನಡ ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯ ವಾಹಕ ಅಧಿ ಕಾರಿ ಯಾಗಿ ನಿಯುಕ್ತಿ ಗೊಂಡಿ ರುವ ಡಾ. ವಿಜಯ ಪ್ರಕಾಶ್ ಅವರಿಗೆ ಪಾಲಿಕೆ ವತಿ ಯಿಂದ ಗೌರ ವಿಸಿ ಬೀಳ್ಕೊ ಡುವ ಸಮಾ ರಂಭ ಶನಿ ವಾರ ಪಾಲಿಕೆ ಯ ಸಭಾಂಗ ಣದಲ್ಲಿ ಜರು ಗಿತು.ವಿಧಾನ ಸಭಾ ಉಪ ಸಭಾ ಪತಿ ಯಾದ ಎನ್.ಯೋಗಿಶ್ ಭಟ್ ಅವರು ಡಾ.ವಿಜಯ ಪ್ರಕಾಶ್ ರಾವ್ ಅವರನ್ನು ಸನ್ಮಾನಿಸಿ ಗೌರವಿಸಿದರು.ಪಾಲಿಕೆ ಮೇಯರ್ ಪ್ರವೀಣ್,ಉಪಮೇಯರ್ ಶ್ರೀಮತಿ ಗೀತಾ ನಾಯಕ್, ನೂತನ ಪಾಲಿಕೆ ಆಯುಕ್ತರಾದ ಡಾ.ಹರೀಶ್ ಕುಮಾರ್,ಸ್ಥಾಯಿ ಸಮಿತಿ ಅಧ್ಯಕ್ಷರು,ಪ್ರತಿ ಪಕ್ಷದ ಮುಖಂಡರು,ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Saturday, September 24, 2011

ವ್ಯಕ್ತಿತ್ವ ನಿರ್ಮಾಣದಲ್ಲಿ ಎನ್ ಎಸ್ ಎಸ್ ಪಾತ್ರ ಮಹತ್ವದ್ದು: ನಳಿನ್ ಕುಮಾರ್

ಮಂಗಳೂರು,ಸೆಪ್ಟೆಂಬರ್.24: ಭವ್ಯ ಭಾರತ ನಿರ್ಮಾಣದಲ್ಲಿ ಯುವಶಕ್ತಿಯ ಪಾತ್ರ ಮಹತ್ವದ್ದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.ಅವರಿಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಭಾರತ ಸರ್ಕಾರದ ಯುವಕಾರ್ಯ ಹಾಗೂ ಕ್ರೀಡಾ ಸಚಿವಾಲಯ ನೆಹರು ಯುವ ಕೇಂದ್ರ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ, ರಾಷ್ಟ್ರೀಯ ಸೇವಾ ಯೋಜನೆ ವಿಶ್ವವಿದ್ಯಾನಿಲಯ ಕಾಲೇಜು, ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಯುವ ಸಮಾವೇಶ, ಎನ್ ಎಸ್ ಎಸ್ ದಿನಾಚರಣೆ ಹಾಗೂ ಕ್ರೀಡಾ ಸಾಮಗ್ರಿ ವಿತರಣಾ ಸಮಾರಂಭವನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಯುವಶಕ್ತಿಯನ್ನು ರೂಪಿಸಲು ಎನ್ ಎಸ್ ಎಸ್ ನಂತಹ ಘಟಕಗಳು ಪ್ರಮುಖ ಪಾತ್ರ ವಹಿಸಿದ್ದು, ಪ್ರತಿಭೆಗಳು ಅರಳಲು ಸಾಧ್ಯ. ಸಾಧನೆ ಮತ್ತು ಸೇವೆ ನಮ್ಮ ಯುವಕರ ಧ್ಯೇಯವಾಗಬೇಕೆಂದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಸಿಇಒ ಡಾ ಕೆ ಎನ್ ವಿಜಯಪ್ರಕಾಶ್ ಅವರು, ವೈಪರೀತ್ಯಗಳಿಂದ ಕೂಡಿದ ಸಮಾಜದಲ್ಲಿ ಯುವಶಕ್ತಿ ಆಮಿಷಗಳಿಗೆ ಬಲಿಯಾಗದೆ ಮೂಲಭೂತವಾದ ನಮ್ಮ ಸಂಸ್ಕೃತಿ, ಮೌಲ್ಯಗಳನ್ನು ಎತ್ತಿಹಿಡಿಯಬೇಕು. ಜ್ಞಾನಾರ್ಜನೆ ಜೊತೆ ಜೊತೆಗೆ ಸಾಮಾಜಿಕ ಮೌಲ್ಯಗಳ ಸಂರಕ್ಷಣೆಯ ಹೊಣೆಯೂ ನಮ್ಮದೇ ಎಂಬುದನ್ನು ಮರೆಯಬಾರದು ಎಂದರು.
ನಗರದ ರೇಡಿಯೋ ಪಾರ್ಕನ ಅಭಿವೃದ್ಧಿಗೆ ಎನ್ ಎಸ್ ಎಸ್ ಘಟಕ ನೀಡಿದ ಕೊಡುಗೆಯನ್ನು ಸ್ಮರಿಸಿದ ಸಿಇಒ ಅವರು, ಯುವಚೈತನ್ಯದ ಸದ್ಬಳಕೆಗೆ ಮಾದರಿ ಕಾರ್ಯಕ್ರಮ ಅದಾಗಿತ್ತು. ಪಾಲಿಕೆಯಲ್ಲಿ ಎಸ್ಟಿಮೇಷನ್ ಮಾಡಿಸಿ ಪಾಕ್ರ್ ಸ್ವಚ್ಛಗೊಳಿಸಿದರೆ ಅದರ ಖರ್ಚು ದುಪ್ಪಟ್ಟಾಗುತ್ತಿತ್ತು ಎಂದರು. ಸಾಮಾಜಿಕ ಅಭಿವೃದ್ಧಿ ಮತ್ತು ಆಡಳಿತಾತ್ಮಕ ವಿಷಯಗಳಲ್ಲಿ ಯುವಶಕ್ತಿಯ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯ ಎಂದರು.
ಎನ್ ಎಸ್ ಎಸ್ ಕಾರ್ಯಕ್ರಮ ಅಧಿಕಾರಿ ದಯಾನಂದ ನಾಯಕ್, ರಾಷ್ಟ್ರೀಯ ಸೇವಾಯೋಜನೆ ಮಂಗಳೂರು ವಿಶ್ವವಿದ್ಯಾನಿಲಯದ ಸಂಯೋಜನಾಧಿಕಾರಿ ಗಣನಾಥ ಎಕ್ಕಾರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

ನವೆಂಬರ್ ನಲ್ಲಿ ಸಾಹಿತ್ಯ ಸಮ್ಮೇಳನ

ಮಂಗಳೂರು,ಸೆಪ್ಟೆಂಬರ್.24 : ಕನ್ನಡ ಸಾಹಿತ್ಯ ಸಮ್ಮೇಳನವನ್ನು ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನ ಸೀಮಂತೂರಿನಲ್ಲಿ ಶೈಕ್ಷಣಿಕ ನೆಲೆಯಲ್ಲಿ ಆಡಂಬರವಿಲ್ಲದೆ 3 ಲಕ್ಷ ಅನುದಾನ ಬಳಸಿ ಯಶಸ್ವಿಯಾಗಿ ದಾಸ ಸಾಹಿತ್ಯ ಸಮ್ಮೇಳನ ಮಾಡಿದಂತೆ, ನವೆಂಬರ್ ಕೊನೆಯೊಳಗೆ ನಡೆಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ನ ಅಧ್ಯಕ್ಷರಾದ ಪ್ರದೀಪ್ ಕುಮಾರ್ ಕಲ್ಕೂರಾ ಸಭೆಯಲ್ಲಿ ಮಾಹಿತಿ ನೀಡಿದರು.
ಅವರು ಇಂದು ಈ ಸಂಬಂಧ ನಗರದಲ್ಲಿ ನಡೆದ ಪೂರ್ವಭಾವೀ ಸಭೆಯಲ್ಲಿ ಮಾತನಾಡುತ್ತಿದ್ದರು.
ಪರಿಷತ್ತಿನ ನಿಬಂಧನೆಗೊಳಪಟ್ಟಂತೆ ಹಣವನ್ನು ಉಪಯೋಗಿಸಿಕೊಂಡು ತಾಲೂಕು ಮಟ್ಟದಲ್ಲಿ ಬೆಳ್ತಂಗಡಿ ಮತ್ತು ಪುತ್ತೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಪ್ರತೀ ತಾಲೂಕಿನಿಂದಲೂ ಸಾಧಕರ ಮಾಹಿತಿ ಸಂಗ್ರಹಿಸಿ, ಪ್ರಶಸ್ತಿಗೆ ಅರ್ಜಿಗಳನ್ನು ಸ್ವೀಕರಿಸಲಾಗುವುದು.
ಸಭೆಯಲ್ಲಿ ಹರಿಕೃಷ್ಣ ಪುನರೂರು ಮಾತನಾಡಿ, ಸಾಹಿತ್ಯ ಸಮ್ಮೇಳನಕ್ಕೆ ಸಿರಿತನ, ವೈಭವ ದೊರೆಯುತ್ತಿದ್ದು, ಕನ್ನಡ ಶಾಲೆಗಳಿಗೂ ಇದೇ ಸ್ಥಿತಿ ಬರಬೇಕು. ಕನ್ನಡದ ಸಿರಿತನ ಉಳಿಸಲು ಕಸಾಪ ಮುಡಿಪಾಗಿರಬೇಕು ಎಂದರು. ಸಾಹಿತಿ ವಿ.ಗ.ನಾಯಕ್, ತಾಲೂಕು ಕಸಾಪ ಅಧ್ಯಕ್ಷರಾದ ಸರ್ವೋತ್ತಮ ಅಂಚನ್ ಸಾಹಿತ್ಯ ಸಮ್ಮೇಳನ ನಡೆಸುವ ಬಗ್ಗೆ ಸಲಹೆಗಳನ್ನು ನೀಡಿದರು.

ಎಲ್ಲರಿಗೂ ಬದುಕುವ ಹಕ್ಕಿದೆ -ಎಸ್.ಆರ್.ನಾಯಕ್

ಮಂಗಳೂರು,ಸೆಪ್ಟೆಂಬರ್.24 :ಮಾನವ ಹಕ್ಕಿನ ಅಜೆಂಡಾದಲ್ಲಿ ಬದುಕುವ ಹಕ್ಕು ಅತೀ ಪ್ರಾಮುಖ್ಯವಾದ ಅಂಶವಾಗಿದ್ದು, ಈ ಜಗತ್ತಿನಲ್ಲಿ ಹುಟ್ಟಿರುವ ಪ್ರತಿಯೊಬ್ಬರಿಗೂ ಒಂದು ಸೂರು ಕಟ್ಟಲು ಒಂದಿಷ್ಟು ಜಾಗ ದೊರಕಿಸಿ ಕೊಟ್ಟು ,ಬದುಕಲು ಅವಕಾಶ ಮಾಡಿ ಕೊಡಲೇಬೇಕೆಂದು ಅಧಿಕಾರಿಗಳಿಗೆ ರಾಜ್ಯ ಮಾನವ ಹಕ್ಕು ಆಯೋಗದ ಅಧ್ಯಕ್ಷರಾದ ನ್ಯಾಯಮೂರ್ತಿ ಎಸ್.ಆರ್.ನಾಯಕ್ ತಿಳಿಸಿದರು.
ಅವರು ದಕ್ಷಿಣಕನ್ನಡ ಜಿಲ್ಲೆಯ ಭೇಟಿ ಸಂದರ್ಭದಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯ ಸಭಾಂಗಣದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡುತ್ತಿದ್ದರು.ಎಲ್ಲಾ ಅಧಿಕಾರಿಗಳು ಜಿಲ್ಲಾಧಿಕಾರಿಗಳೊಂದಿಗೆ ಜನರಿಗೆ ಸಹಾಯ ಮಾಡುವ ಮನೋಭಾವನೆಯನ್ನು ಬೆಳೆಸಿಕೊಂಡು,ಅನರ್ಹರಿಗೆ ಸರಕಾರದ ಸವಲತ್ತುಗಳನ್ನು ದೊರಕಿಸಿ ಕೊಡದೆ, ಅರ್ಹರಿಗೆ ದೊರಕಿಸಿ ಕೊಡುವಲ್ಲಿ ಮುಂದಾಗಬೇಕೆಂದು ನುಡಿದರು. ಜನರಿಗೆ ವಾಸಿಸಲು ಒಂದು ಸೂರು,ಕುಡಿಯುವ ನೀರು,ಆಹಾರ ,ಶಿಕ್ಷಣ ಮತ್ತು ರಕ್ಷಣೆ ಕೊಡುವುದು ಮುಖ್ಯವಾಗಿದೆ. ಬೆಳ್ತಂಗಡಿಯ ತಹಶೀಲ್ದಾರರು ನೀಡಿದ ಮಾಹಿತಿಯಂತೆ, ಸುಮಾರು 4000 ಜನರು ಸೂರಿಲ್ಲದೆ ಬದುಕುತ್ತಿದ್ದಾರೆ.ಅದರಂತೆ ಇಡೀ ರಾಜ್ಯದಲ್ಲಿ ಬಹಳಷ್ಟು ಮಂದಿ ಸೂರಿಲ್ಲದೆ ಇರಬಹುದೆಂದರು. ಆದ್ದರಿಂದ ಕನಿಷ್ಠ ಪಕ್ಷ 2 ಅಥವಾ 3 ಸೆನ್ಸ್ ಜಾಗವಾದರೂ ಪ್ರತಿಯೊಬ್ಬರಿಗೂ ದೊರೆಯುವಂತಾಗಬೇಕೆಂದರು.ಈ ಸಂದರ್ಭದಲ್ಲಿ ಸಾರ್ವಜನಿಕರು ಕಾಲುದಾರಿ ಇರುವಲ್ಲಿ ರಸ್ತೆ ಕೊಡುವ ಬಗ್ಗೆ, ಒಎನ್ಜಿಸಿಯಲ್ಲಿ ಉದ್ಯೋಗ, ನಕಲಿ ವೈದ್ಯ ಎಂ.ಕೆ ಬಾಲಕೃಷ್ಣನ್,ಕೆಎಂಸಿ ಮಣಿಪಾಲದಿಂದ ಪ್ರಾವಿಂಡೆಂಟ್ ಫಂಡ್ ದೊರೆಯದ ಬಗ್ಗೆ ,ಪಂಜಿಮೊಗರು ಮರ್ಡರ್ ಕೇಸಿನಲ್ಲಿ ಅಪಾದಿತರನ್ನು ಹಿಡಿಯದ ಬಗ್ಗೆ, ಕಾರ್ಕಳದಲ್ಲಿ ದಲಿತರ ಮರಣ ಬಗ್ಗೆ ಹೀಗೆ ಹತ್ತು ಹಲವಾರು ವಿಷಯಗಳಲ್ಲಿ ಸುಮಾರು 20 ಮಂದಿ ತಮ್ಮ ಮನವಿಯನ್ನು ಸಲ್ಲಿಸಿದ್ದರು.
ಸಭೆಯಲ್ಲಿ ಜಿಲ್ಲಾಧಿಕಾರಿಗಳಾದ ಡಾ.ಎನ್.ಎಸ್.ಚನ್ನಪ್ಪ ಗೌಡ, ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್, ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್ ಹಾಗೂ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಅಂಗವಿಕಲರ ಸ್ಥಿತಿಗತಿ ಬಗ್ಗೆ ಸಮಗ್ರ ಅಧ್ಯಯನ ವರದಿ ಸಿದ್ಧಪಡಿಸಿ:ರಾಜಣ್ಣ ಸೂಚನೆ

ಮಂಗಳೂರು,ಸೆಪ್ಟೆಂಬರ್.24 :ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿಅಂಗವಿಕಲರ ಸ್ಥಿತಿಗತಿ ಬಗ್ಗೆ ಸಮಗ್ರಅಧ್ಯಯನಮಾಡಲು ಸ್ಥಳೀಯ ಸಂಸ್ಥೆಗಳು ಅಂಗವಿಕಲರಿಗೆ ಮೀಸಲಾಗಿರಿಸಿರುವ ಅನುದಾನದ ಸ್ವಲ್ಪ ಭಾಗವನ್ನು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ನೀಡಿ ವರದಿ ಸಿದ್ಧಪಡಿಸಿ ಆಯೋಗಕ್ಕೆ ನೀಡಿ ಎಂದು ರಾಜ್ಯ ಅಂಗವಿಕಲರ ಆಯೋಗದ ಆಯುಕ್ತ ಕೆ.ವಿ ರಾಜಣ್ಣಅವರು ಸೂಚನೆ ನೀಡಿದರು.ಇಂದು ಜಿಲ್ಲಾಧಿ ಕಾರಿ ಗಳ ಕಚೇರಿ ಯಲ್ಲಿ ನಡೆದ ಇಲಾಖಾ ಪ್ರಗತಿ ಪರಿ ಶೀಲನೆ ಸಭೆ ಯನ್ನು ದ್ದೇಶಿಸಿ ಮಾತ ನಾಡಿದ ಅವರು, ಅಧಿ ಕಾರಿ ಗಳು ಅಂಗ ವಿಕ ಲರಿಗೆ ನೆರವು ನೀಡ ಬೇಕೆಂಬ ಸದ್ದಿ ಚ್ಚೆಯಿಂದ ಕಾರ್ಯ ನಿರ್ವ ಹಿಸಿ ದರೆ ಅಂಗ ವಿಕ ಲರ ಕಲ್ಯಾಣ ಸಾಧ್ಯ ಎಂದರು.ಎಲ್ಲ ಇಲಾಖೆ ಗಳು ಕಡ್ಡಾಯ ವಾಗಿ ಶೇ.3ರಷ್ಟು ನಿಧಿಯನ್ನು ಅಂಗ ವಿಕ ಲರ ಕಲ್ಯಾ ಣಕ್ಕೆ ಮೀಸ ಲಿಡ ಬೇಕು. ಈ ಕುರಿತು ತಾನು ಗ್ರಾಮ ಪಂಚಾಯತ್ ಮಟ್ಟದಿಂದ ಅರಿವು ಮೂಡಿಸುವ ಕಾರ್ಯದಲ್ಲಿ ನಿರತನಾಗಿದ್ದೇನೆ. ಸೌಲಭ್ಯಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಇಲಾಖಾಧಿಕಾರಿಗಳ ಸಹಕಾರ ಬೇಕೆಂದರು.ಪ್ರತೀ ತಿಂಗಳು 240 ಗಂಟೆಕರ್ತವ್ಯ ನಿರ್ವಹಣಾವಧಿಯಲ್ಲಿ ಕನಿಷ್ಠ ಎರಡುಗಂಟೆ ಅಧಿಕಾರಿಗಳು ಅಂಗವಿಕಲರ ಅಭಿವೃದ್ಧಿಗೆ ಕಡ್ಡಾಯವಾಗಿ ಮೀಸಲಿಡಬೇಕುಎಂದು ಆದೇಶಿಸಿದರು.
ಎಲ್ಲ ಗ್ರಾಮಪಂಚಾಯಿತಿಗಳು ಕ್ರಿಯಾ ಯೋಜನೆಯೊಂದಿಗೆ ಮಾಹಿತಿಯನ್ನುತಮಗೆ ನಾಲ್ಕು ದಿನಗಳೊಳಗಾಗಿ ಕಳುಹಿಸಿಕೊಡಬೇಕು ಎಂದ ಅವರು,ಉಡುಪಿ ಜಿಲ್ಲೆ ಈ ನಿಟ್ಟಿನಲ್ಲಿ ಮಾದರಿ ಕೆಲಸ ಮಾಡಿದೆಎಂದರು.ಜಾತಿಆಧಾರಿತ ಗಣತಿ ಸಂದರ್ಭದಲ್ಲಿ ಅಂಗವಿಕಲರನ್ನು ಸೇರಿಸಬೇಕೆಂದು ಎಂದು ಸರ್ಕಾರಕ್ಕೆ ತಾವು ಸಲಹೆ ಮಾಡಿರುವುದಾಗಿ ನುಡಿದರು.
ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿರುವ 203 ಗ್ರಾಮಪಂಚಾಯಿತಿಗಳಲ್ಲಿ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರು 36 ಜನ ಹಾಗೂ ಒಬ್ಬರೇ ಒಬ್ಬ ವಿವಿಧೋದ್ದೇಶ ಪುನರ್ವಸತಿ ಕಾರ್ಯಕರ್ತರಿದ್ದು ಇವರಿಗೆ ಗ್ರಾಮಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಅನುದಾನದಿಂದ ಕನಿಷ್ಠ ಭತ್ಯೆ ನೀಡಿದರೆ ಕರ್ತವ್ಯ ನಿರ್ವಹಿಸಲು ಪ್ರೋತ್ಸಾಹ ನೀಡಿದಂತಾಗುತ್ತದೆಎಂದರು.ಜಿಲ್ಲೆಯ ಎಲ್ಲ ಗ್ರಾಮ ಪಂಚಾ ಯತ್ ಮತ್ತು ತಾಲೂಕು ಪಂಚಾ ಯತ್ ನಲ್ಲಿ ಅಂಗ ವಿಕ ಲರ ಅಭಿ ವೃದ್ಧಿಗೆ ಅನು ದಾನ ಮೀಸ ಲಿಟ್ಟಿ ರುವುದು ಶ್ಲಾಘ ನೀಯ ಬೆಳ ವಣಿಗೆ ಎಂದ ಅವರು, ಸಮೀ ಕ್ಷೆಗೆ ಉತ್ತಮ ತರ ಬೇತಿಯ ಅಗತ್ಯ ವಿದೆ ಎಂದರು.ವಿಶ್ವ ಆರೋಗ್ಯ ಸಂಸ್ಥೆಯ ಮಾನ ದಂಡ ದಂತೆ ಹತ್ತು ಶೇಕಡ ಅಂಗವೈಕಲ್ಯವಿದ್ದರೂ ಅವರು ಅಂಗವಿಕಲರೇ ಎಂದರು.ಮಾಸಾಶನಕ್ಕೆ ಮಾತ್ರ ಆದಾಯ ಪ್ರಮಾಣ ಪತ್ರ ಅಗತ್ಯವಿದೆ.ಉಳಿದೆಲ್ಲ ಸೌಲಭ್ಯಗಳಿಗೆ ಅವರು ಅಂಗವಿಕಲರಾದರೆ ಸಾಕು ಎಂಬುದನ್ನು ಸ್ಪಷ್ಟ ಪಡಿಸಿದರು.
ಅಂಗವಿಕಲರ ಮನೆ ದುರಸ್ತಿಗೆ ಸಂಬಂಧಿಸಿದಂತೆ ನಡೆದ ಚರ್ಚೆಯಲ್ಲಿ ಪಾಲ್ಗೊಂಡ ಅಪರ ಜಿಲ್ಲಾಧಿಕಾರಿ ಕೆ ಟಿ ಕಾವೇರಿಯಪ್ಪಅವರು ಸಮಸ್ಯೆ ಪರಿಹಾರಕ್ಕೆ ಸಲಹೆ ನೀಡಿದರು.ಅಂಗವಿಕಲರ ಹೆಸರಿನಲ್ಲಿ ಮನೆಯ ದಾಖಲೆ ಪತ್ರಇಲ್ಲದಿದ್ದರೆ, ಮಹಜರು ಮಾಡಿ ಇಂದಿನ ಸಭೆಯ ನಡಾವಳಿ ಆದೇಶವನ್ನು ಲಗತ್ತಿಸಿ ಎಂದರು.
ನೇರ ಹಾಗೂ ಪರೋಕ್ಷ ಪುನರ್ ವಸತಿಕಲ್ಪಿಸುವ ಬಗ್ಗೆಯೂ ಸಭೆಯಲ್ಲಿ ಸವಿವರ ಚರ್ಚೆ ನಡೆಯಿತು.ಸ್ಥಳೀಯ ಸಂಸ್ಥೆಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾದರೆ ಸಮಸ್ಯೆಯ ಪ್ರಮಾಣ ಕಡಿಮೆಯಾಗಲಿದೆ ಎಂದರು.ನಗರಾಭಿವೃದ್ಧಿ ಕೋಶದ ಅಧಿಕಾರಿ ತಾಕತ್ ರಾವ್, ಅಸಿಸ್ಟೆಂಟ್ ಸೆಕ್ರೆಟರಿ ಶಿವರಾಮಯ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಶ್ರೀಮತಿ ಶಕುಂತಳಾ, ಅಂಗವಿಕಲ ಕಲ್ಯಾಣಾಧಿಕಾರಿ ಗಂಗಾಧರಯ್ಯ ಉಪಸ್ಥಿತರಿದ್ದರು.ಸಭೆಯಲ್ಲಿ ಪಾಲ್ಗೊಂಡ ಅಂಗವಿಕಲರು ಹಾಗೂ ಪ್ರತಿನಿಧಿಗಳು ತಮ್ಮ ಸಮಸ್ಯೆಗಳನ್ನು ರಾಜಣ್ಣ ಅವರ ಗಮನಕ್ಕೆ ತಂದರು.ಸಭೆಯ ಬಳಿಕ ಜಿಲ್ಲಾಧಿಕಾರಿಗಳು, ಸಿಇಒ ಮತ್ತು ಪಾಲಿಕೆ ಆಯುಕ್ತರು ಆಯೋಗದ ಅಧ್ಯಕ್ಷರನ್ನು ಭೇಟಿಯಾಗಿ ಜಿಲ್ಲೆಯಲ್ಲಿ ಅಂಗವಿಕಲರಿಗಾಗಿರುವ ಸೌಲಭ್ಯ ನೀಡುವುದಾಗಿ ಹೇಳಿದರು.

ಕಾನೂನು ಸಾಕ್ಷರತಾ ಕಾರ್ಯಕ್ರಮ: ಪೂರ್ವಭಾವಿ ಸಭೆ

ಮಂಗಳೂರು,ಸೆಪ್ಟೆಂಬರ್.24: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ 2011-12ನೇ ಸಾಲಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಮಂಗಳೂರು ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಜಿಲ್ಲೆಯಾದ್ಯಂತ ವಿವಿಧ ಸ್ತರದ ಕಾನೂನು ಸಾಕ್ಷರತಾ ಕಾರ್ಯಕ್ರಮಗಳು, ಶಾಲಾ ಕಾಲೇಜುಗಳಲ್ಲಿ ಕಾನೂನು ಸಾಕ್ಷರತಾ ಕ್ಲಬ್ ಗಳನ್ನು ರಚಿಸುವುದು ಹಾಗೂ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ ಧ್ಯೇಯೋದ್ದೇಶಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವ ಬಗ್ಗೆ ನಗರದ ನ್ಯಾಯಾಂಗಣದಲ್ಲಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಚ್ ಆರ್ ದೇಶಪಾಂಡೆ ಅಧ್ಯಕ್ಷತೆಯಲ್ಲಿ ಅಧಿಕಾರಿಗಳ ಸಭೆ ನಡೆಯಿತು.ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ ಅವರ ಮಾರ್ಗದರ್ಶನದಲ್ಲಿ ನಡೆದ ಸಭೆಯಲ್ಲಿ ವಿವಿಧ ಇಲಾಖೆಯ ಅಧಿಕಾರಿಗಳು ಸಮನ್ವಯದಿಂದ ಯಶಸ್ವಿ ಕಾರ್ಯಕ್ರಮಗಳನ್ನು ರೂಪಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅಕ್ಟೋಬರ್ ನಿಂದ ಡಿಸೆಂಬರ್ ವರೆಗೆ ವಿವಿಧ ದಿನಾಚರಣೆಗಳಂದು ಕಾನೂನಿನ ಬಗ್ಗೆ ಸಮಾಜದ ದುರ್ಬಲ ವರ್ಗಗಳಿಗೆ ಕಾನೂನು ಮಾಹಿತಿ ಹಾಗೂ ನೆರವು ನೀಡುವ ಕಾರ್ಯಕ್ರಮಗಳನ್ನು ನೀಡಿ ಎಂದರು. ಅಕ್ಟೋಬರ್ ಒಂದರಂದು ಪುರಭವನದಲ್ಲಿ ಹಿರಿಯ ನಾಗರೀಕರ ದಿನಾಚರಣೆಯನ್ನು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಸಹಕಾರದೊಂದಿಗೆ ಆಯೋಜಿಸಿ ಎಂದ ಜಿಲ್ಲಾಧಿಕಾರಿಗಳು, ಅಕ್ಟೋಬರ್ 2ರಂದು ಮಹಾತ್ಮಗಾಂಧಿ ಜಯಂತಿ ಯಂದು ನಡೆಸುವ ಕಾರ್ಯಕ್ರಮಗಳಡಿ ಮಧ್ಯಸ್ಥಿಕೆ ಮತ್ತು ಸಂಧಾನದ ವಿಧಾನದ ವಿಷಯಗಳ ಬಗ್ಗೆ ವಿಚಾರಗೋಷ್ಠಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಶಿಕ್ಷಣ ಇಲಾಖೆಯವರಿಗೆ ಸೂಚಿಸಿದರು.
10.10.11ರಂದು ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಅಂಗವಾಗಿ ಮಾನಸಿಕ ರೋಗಗಳ ಹಕ್ಕುಗಳ ಬಗ್ಗೆ, ಅಧಿನಿಯಮದ ಬಗ್ಗೆ, ಅವರಿಗೆ ಉಚಿತ ಕಾನೂನು ಸೇವೆ ನೀಡುವ ಬಗ್ಗೆ ರೋಶನಿ ಕಾಲೇಜಿನೊಂದಿಗೆ ಸಮನ್ವಯ ಸಾಧಿಸಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಸಂಪನ್ಮೂಲ ವ್ಯಕ್ತಿಗಳನ್ನು ನೀಡಿ ಎಂದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಡಾ. ರಾಜೇಶ್ ಅವರು ಕಾರ್ಯಕ್ರಮ ರೂಪಿಸಲು ಸಮನ್ವಯಾಧಿಕಾರಿಯಾಗ ಬೇಕೆಂದು ಜಿಲ್ಲಾಧಿಕಾರಿಗಳು ಹೇಳಿದರು.
ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಮಹಿಳೆ ಮತ್ತು ಮಕ್ಕಳ ರಕ್ಷಣೆಯ ಬಗ್ಗೆ ಕಾನೂನು ಸಾಕ್ಷರತೆ, ಕಾರ್ಯಾಗಾರ, ಮಕ್ಕಳಿಗೆ ಸಂಬಂಧಿಸಿದ ಕಾನೂನಿನಬಗ್ಗೆ ಕಾರ್ಯಕ್ರಮ ಹಮ್ಮಿಕೊಳ್ಳಲು ಸೂಚಿಸಿದರು. ಕಾರ್ಯಕ್ರಮಗಳ ಬಗ್ಗೆ ಪ್ರಚಾರವನ್ನು ಮಾಧ್ಯಮಗಳು ನೀಡಬೇಕೆಂದು ಸಭೆಯಲ್ಲಿ ಜಿಲ್ಲಾಧಿಕಾರಿಗಳು ಹೇಳಿದರು. ಕಾರ್ಮಿಕ ಇಲಾಖೆಯನ್ನೊಳಗೊಂಡಂತೆ ಎಲ್ಲ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಪಾಲಿಕೆ ಆಯುಕ್ತ ಡಾ ಹರೀಶ್ ಕುಮಾರ್, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ಪಿ.ಚೆಂಗಪ್ಪ, ಹಿರಿಯ ನ್ಯಾಯಾಧೀಶರಾದ ರಾಜಶೇಖರ್ ಪಾಟೀಲ್ ಉಪಸ್ಥಿತರಿದ್ದರು.

Friday, September 23, 2011

8-9 ತಿಂಗಳಲ್ಲಿ ರಾಜ್ಯದ ಎಲ್ಲರಿಗೂ 'ಆಧಾರ್ ' ; ಪಿ.ಎಸ್.ರವೀಂದ್ರನ್

ಮಂಗಳೂರು,ಸೆಪ್ಟೆಂಬರ್.23:ಕರ್ನಾಟಕ ರಾಜ್ಯದ ಎಲ್ಲಾ ಜನತೆ `ಆಧಾರ್'ವಿಶೇಷ ಗುರುತಿನ ಸಂಖ್ಯೆಯನ್ನು ಹೊಂದುವಂತೆ ರಾಜ್ಯ ಇ-ಆಡಳಿತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ, ಡಿ. ಎಸ್. ರವೀಂದ್ರನ್ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ. ಮಂಗ ಳೂರಿನ ಜಿಲ್ಲಾ ಧಿಕಾರಿ ಕಚೇರಿ ಯಲ್ಲಿಂದು ನಡೆದ ಮಾ ದ್ಯಮ ಗೋಷ್ಠಿ ಯಲ್ಲಿ ಅವರು ಮಾತ ನಾಡು ತ್ತಿದ್ದರು.ಆಧಾರ್ ಗುರುತಿನ ಚೀಟಿ ಯೋಜನೆ ಸಂ ಪೂರ್ಣ ಉಚಿತ ವಾಗಿದ್ದು,'ಆಧಾರ್' ಗಾಗಿ ರಾಜ್ಯ ದಲ್ಲಿ 7 ಸಾವಿರ ಸ್ಟೇಷನ್ ಗಳು ಕಾರ್ಯ ನಿರ್ವ ಹಿಸಲಿವೆ. ದಕ್ಷಿಣ ಕನ್ನಡ ದಲ್ಲಿ 225 ಸ್ಟೇಷನ್ ಗಳನ್ನು ಸ್ಥಾಪಿಸ ಲಾಗುವುದು. ರಾಜ್ಯದ ಎಲ್ಲಾ ನಾಗರಿಕರಿಗೂ 12 ಅಂಕಿಗಳ ಈ ಸಂಖ್ಯೆಯನ್ನು ನೀಡಲು ಸರಕಾರ ಉದ್ದೇಶಿಸಿದೆ. ರಾಜ್ಯದಲ್ಲಿ ಈಗಾಗಲೇ ಆರಂಭವಾಗಿರುವ ಈ ಯೋಜನೆಗೆ ಉತ್ತಮವಾದ ಪ್ರತಿಕ್ರಿಯೆ ಜನರಿಂದ ವ್ಯಕ್ತವಾಗಿದೆ.ಯಾವುದೇ ಶುಲ್ಕವನ್ನು ಸಾರ್ವಜನಿಕರಿಂದ ಪಡೆಯಲಾಗುತ್ತಿಲ್ಲ,ಸಾರ್ವಜನಿಕರು ಅದಕ್ಕೆಂದು ಸ್ಥಾಪಿಸಲಾದ ಕೇಂದ್ರಗಳಿಗೆ ತೆರಳಿ ಅರ್ಜಿ ನಮೂನೆಯನ್ನು ಪಡೆದು,ಅದರಲ್ಲಿ ಸರಿಯಾದ ಮಾಹಿತಿಯನ್ನು ಭರ್ತಿಮಾಡಿದ ಬಳಿಕ ಭಾವಚಿತ್ರ, ಅಕ್ಷಿ ಪಟಲದ ಸ್ಕ್ಯಾನ್ ಮತ್ತು ಬೆರಳಚ್ಚು ನೀಡಿದರಾಯಿತು. ಈ ಪ್ರಕ್ರಿಯೆ ನಡೆದ 60 ದಿನಗಳಲ್ಲಿ ಆಧಾರ್ ಸಂಖ್ಯೆಯನ್ನು ಅಂಚೆಯ ಮೂಲಕ ಮನೆಗೆ ತಲುಪಿಸಲಾಗುತ್ತದೆ ಎಂದರು.ಈಗಾಗಲೇ ರಾಜ್ಯದ 68 ಲಕ್ಷ ನಾಗರಿಕರು ಆಧಾರ್ ಸಂಖ್ಯೆಯನ್ನು ಪಡೆದಿದ್ದಾರೆ. 8-9 ತಿಂಗಳಲ್ಲಿ ರಾಜ್ಯದ ಎಲ್ಲರಿಗೂ ಆಧಾರ್ ಸಂಖ್ಯೆಯನ್ನು ಒದಗಿಸುವುದು ಸರಕಾರದ ಉದ್ದೇಶವಾಗಿದೆ ಎಂದು ರವೀಂದ್ರನ್ ಹೇಳಿದರು. ನವಜಾತ ಶಿಶುವಿನಿಂದ ಮೊದಲ್ಗೊಂಡು ವಯೋವೃದ್ಧರೂ ಸೇರಿದಂತೆ ಎಲ್ಲರೂ ಆಧಾರ್ ಸಂಖ್ಯೆಯನ್ನು ಪಡೆಯುವ ಅಧಿಕಾರ ಹೊಂದಿದ್ದಾರೆ. ರಾಜ್ಯ ಸರ್ಕಾರದ ಹಾಗೂ ಖಾಸಗಿ ಸೇವೆಗಳನ್ನು ಪಡೆಯಲು ಈ ಸಂಖ್ಯೆಯನ್ನು ಹೊಂದಿರುವುದು ಕಡ್ಡಾಯವಾಗಿದ್ದು, ಭವಿಷ್ಯದಲ್ಲಿ ಇನ್ನಷ್ಟು ಸೇವೆಗಳನ್ನು ಪಡೆಯಲು ಈ ಆಧಾರ್ ಸಂಖ್ಯೆ ಒಂದು ಪ್ರಮುಖ ದಾಖಲೆಯಾಗಲಿದೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಡಾ.ಎನ್ ಎಸ್ ಚನ್ನಪ್ಪ ಗೌಡ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್,ಪ್ರಾಜೆಕ್ಟ್ ಡೈರಕ್ಟರ್ ಟಿ ಪ್ರಭಾಕರ್, ಯು ಡಿ ಅಧಿಕಾರಿ ಅಶೋಕ್ ಲೆನಿನ್, ಅಪರ ಜಿಲ್ಲಾಧಿಕಾರಿ ಕೆ ಟಿ ಕಾವೇರಿಯಪ್ಪ, ಮಹಾನಗರ ಪಾಲಿಕೆ ಕಮಿಷನರ್ ಡಾ.ಹರೀಶ್ ಕುಮಾರ್ ಉಪಸ್ಥಿತರಿದ್ದರು.ಬಳಿಕ ಎಲ್ಲ ಅಧಿಕಾರಿ ಗಳಿಗೆ ಆಯೋಜಿ ಸಲಾದ ಕಾರ್ಯಾ ಗಾರದಲ್ಲಿ ಮಾಹಿತಿ ನೀಡಿದ ರವೀಂದ್ರನ್ ಅವರು, ಆಧಾರ ಪ್ರಕ್ರಿಯೆಯಲ್ಲಿ ಅಧಿಕಾರಿಗಳ ಹೊಣೆಯ ಬಗ್ಗೆ ವಿವರಿಸಿದರು. ಟಿ.ಪ್ರಭಾಕರ್ ಅವರು ಎಲ್ಲ ಅಧಿಕಾರಿಗಳು ಸಮಯಮಿತಿಯೊಳಗೆ ಯೋಜನೆ ಮುಗಿಸಲು ನೆರವಾಗಬೇಕೆಂದರು. ಜಿಲ್ಲಾಡಳಿತದಿಂದ ಅನುಷ್ಠಾನಗೊಂಡ ಆಧಾರ್ ಯೋಜನೆಯಡಿ ಪತ್ರಕರ್ತ ಜೈ ದೀಪ್ ಶೆಣೈ ಪ್ರಥಮವಾಗಿ ತಮ್ಮ ಹೆಸರನ್ನು ನೋಂದಾಯಿಸಿದರು.

ಕಾರ್ಮಿಕರಿಗಾಗಿ ಪೈಲಟ್ ಯೋಜನೆ

ಮಂಗಳೂರು,ಸೆಪ್ಟೆಂಬರ್.23:ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ,ಬೆಂಗಳೂರು,ಬಳ್ಳಾರಿ,ಮೈಸೂರು ಗುಲ್ಬರ್ಗಾ ಜಿಲ್ಲೆಗಳ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಲು ಕರ್ನಾಟಕ ಸರ್ಕಾರದ ಕಾರ್ಮಿಕ ಇಲಾಖೆಯು ಜರ್ಮನ್ ತಾಂತ್ರಿಕ ಸಹಕಾರ {ಜರ್ಮನಿ} ಈ ಸಂಸ್ಥೆಯ ಸಹಯೋಗದೊಂದಿಗೆ ಪೈಲಟ್ ಯೋಜನೆಯನ್ನು ಜಾರಿಗೊಳಿಸುತ್ತಿದೆ.
ಈ ಪೈಲಟ್ ಯೋಜನೆಯು ಅಸಂಘಟಿತ ವರ್ಗದವರಾದ ಕೃಷಿ ಕಾರ್ಮಿಕರು,ನಿರ್ಮಾಣ ಕಾರ್ಮಿಕರು,ಗೃಹಕೃತ್ಯದ ಕಾರ್ಮಿಕರು,ವಸ್ತ್ರೋದ್ಯಮ ಕಾರ್ಮಿಕರು ಮತ್ತು ಅಗರ್ ಬತ್ತಿ ಕಾರ್ಮಿಕರನ್ನು ಒಳಗೊಂಡಿರುತ್ತದೆ. ಸದರಿ ಯೋಜನೆಯನ್ನು ದಕ್ಷಿಣಕನ್ನಡ ಜಿಲೆಯ ಮಂಗಳೂರು ತಾಲೂಕಿನ 25 ಗ್ರಾಮ ಗಳು ಬಂಟ್ವಾಳ ತಾಲೂಕಿನ 25 ಗ್ರಾಮ ಪಂಚಾಯತ್ ಮತ್ತು ವಾರ್ಡುಗಳಲ್ಲಿ ಈ ಯೋಜನೆ ಜಾರಿಗೊಳಿಸಲಾಗುವುದು.ಈ ಯೋಜನೆಯಡಿ ಗ್ರಾಮ ಪಂಚಾಯತಿ ಹಾಗೂ ವಾರ್ಡು ಮಟ್ಟದಲ್ಲಿ ಕಾರ್ಮಿಕರ ಸೇವಾ ಕೇಂದ್ರವನ್ನು ಪ್ರಾರಂಭಿಸಿ ಕಾರ್ಮಿಕರಿಗೆ ಸಮುದಾಯ ಸೌಲಭ್ಯೀಕರಣ ಒದಗಿಸಲಿದೆ.

Thursday, September 22, 2011

ಪಾಲಿಕೆ ಆಯುಕ್ತರಾಗಿ ಡಾ.ಹರೀಶ್ ಕುಮಾರ್

ಮಂಗಳೂರು,ಸೆಪ್ಟೆಂಬರ್.22: ಮಂಗಳೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಡಾ.ಹರೀಶ್ ಕುಮಾರ್ ಅವರು ಅಧಿಕಾರ ಸ್ವೀಕ ರಿಸಿದರು. ಇದು ವರೆಗೆ ಆಯುಕ್ತ ರಾಗಿದ್ದ ಡಾ. ಕೆ. ಎನ್. ವಿಜಯ ಪ್ರ ಕಾಶ್ ಅವರು ನಗರಾ ಭಿವೃದ್ಧಿಯ ಕುರಿತ ಪುಸ್ತಕ ಮತ್ತು ಲೇಖನಿ ಯನ್ನು ನೂತನ ಆಯು ಕ್ತರಿಗೆ ನೀಡುವ ಮೂಲಕ ಅಧಿಕಾರ ಹಸ್ತಾಂ ತರಿಸಿದರು.
ಡಾ.ಹರೀಶ್ ಕುಮಾರ್ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ರಸಾಯನ ಶಾಸ್ತ್ರ(ಎಂಎಸ್ಸಿ)ದಲ್ಲಿ ಸ್ನಾತಕೊತ್ತರ ಪದವಿ ಪಡೆದಿದ್ದಾರೆ.1999ರ ಬ್ಯಾಚ್ ನ ಕೆಎಎಸ್ ಪರೀಕ್ಷೆಯಲ್ಲಿ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದು, ಬಳಿಕ ದ.ಕ. ಜಿಲ್ಲೆಯಲ್ಲಿಯೇ ಪ್ರೊಬೆಶನರಿ, ಅನಂತರ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಸಹಾಯಕ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ.

ಜಾನುವಾರು ಲಸಿಕಾ ಕಾರ್ಯಕ್ರಮ: ಶೇ.87 ಪ್ರಗತಿ

ಮಂಗಳೂರು,ಸೆಪ್ಟೆಂಬರ್.22: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 11-12ನೇ ಸಾಲಿನಲ್ಲಿ ಕಾಲುಬಾಯಿ ಜ್ವರ ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯ 2,33,803 ರಾಸುಗಳಿಗೆ ಲಸಿಕೆ ಹಾಕಲಾಗಿದೆ ಎಂದು ಪಶುಪಾಲನಾ ಇಲಾಖಾ ಉಪ ನಿರ್ದೇಶಕರಾದ ಡಾ ಕೆ ವಿ ಹಲಗಪ್ಪ ಅವರು ತಿಳಿಸಿದ್ದಾರೆ.
ಪಲ್ಸ್ ಪೋಲಿಯೋ ಮಾದರಿಯಲ್ಲಿ 1.8.11ರಿಂದ ಆರಂಭಿಸಿದ ಲಸಿಕಾ ಕಾರ್ಯಕ್ರಮ ಕ್ಲಸ್ಟರ್/ಫಿರ್ಕವಾರು ಹಾಗೂ ಗ್ರಾಮವಾರು ನಿರ್ವಹಿಸಿದ್ದು 21.9.11ರವರೆಗೆ ಜಿಲ್ಲೆಯಲ್ಲಿ ಒಟ್ಟಾರೆ ಲಭ್ಯವಾದ ಅರ್ಹ ಜಾನುವಾರುಗಳ ಶೇ. 87ರಷ್ಟು ಪ್ರಗತಿ ಸಾಧಿಸಲಾಗಿದೆ. ಈ ಸಂದರ್ಭದಲ್ಲಿ ತಮ್ಮ ಮನೆಯ ಯಾವುದೇ ದನ/ಎಮ್ಮೆ ಲಸಿಕೆಗೊಳಪಡದೆ ಬಿಟ್ಟು ಹೋಗಿದ್ದಲ್ಲಿ ಹತ್ತಿರದ ಇಲಾಖಾ ಪಶುವೈದ್ಯಕೀಯ ಸಂಸ್ಥೆಗಳು, ಹಾಲು ಉತ್ಪಾದಕರ ಸಹಕಾರಿ ಸಂಘಗಳ ಅಧಿಕಾರಿ, ಪಶುವೈದ್ಯರು -ಸಿಬ್ಬಂದಿ ವರ್ಗದವರನ್ನು ಸಂಪರ್ಕಿಸಿ ಕಾಲುಬಾಯಿ ಜ್ವರ ಲಸಿಕೆ ಹಾಕಿಸಿಕೊಳ್ಳಬೇಕೆಂದು ಉಪನಿರ್ದೇಶಕರು ಕೋರಿದ್ದಾರೆ.

ರಾತ್ರಿ ವಸತಿರಹಿತರಿಗೆ ತಾತ್ಕಾಲಿಕ ವಸತಿ ಕೇಂದ್ರ

ಮಂಗಳೂರು,ಸೆ.21:ಮಂಗಳೂರು ಮಹಾ ನಗರ ಪಾಲಿಕೆ ರಾತ್ರಿ ವಸತಿ ರಹಿತರಿಗೆ,
ನಿರ್ಗತಿ ಕರಿಗೆ ನಗರದಲ್ಲಿ 3.30 ಕೋಟಿ ರೂ. ವೆಚ್ಚದಲ್ಲಿ ತಾತ್ಕಾಲಿಕ ವಸತಿ ಕೇಂದ್ರವನ್ನು ಆರಂಭಿಸುವುದು ಎಂದು ಪಾಲಿಕೆ ಆಯುಕ್ತರಾದ ಡಾ ಕೆ ಎನ್ ವಿಜಯಪ್ರಕಾಶ್ ಹೇಳಿದರು.
ನಗರದಲ್ಲಿ ಬುಧವಾರ ಸಂಜೆ ತಾತ್ಕಾಲಿಕ ವಸತಿ ಕೇಂದ್ರದ ಉದ್ಘಾಟನೆಯ ಸಂದರ್ಭದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿ ಮಾಹಿತಿ ನೀಡಿದ ಅವರು,ಪದವಿನಲ್ಲಿ, ಬಂದರಿನಲ್ಲಿ ಇಂತಹುದೇ ಕೇಂದ್ರಗಳನ್ನು ಸ್ಥಾಪಿಸಲು ಯೋಜನೆ ರೂಪಿಸಲಾಗಿದ್ದು ನಗರದಲ್ಲಿ ಕೂಲಿ, ಹಮಾಲಿ ಸೇರಿದಂತೆ ದುಡಿಯುವವರಿಗೆ ರಾತ್ರಿ ತಂಗಲು ಅವಕಾಶ ಮಾಡಿ ಕೊಡಲಾಗುವುದು. ಉಪಮೇಯರ್ ಗೀತಾ ನಾಯಕ್ ಕೇಂದ್ರವನ್ನು ತಾತ್ಕಾಲಿಕ ಕೇಂದ್ರ ಉದ್ಘಾಟಿಸಿದರು.

Tuesday, September 20, 2011

'ಬದಲಾವಣೆಯ ಹರಿಕಾರರಾಗಿ'

ಮಂಗಳೂರು,ಸೆಪ್ಟೆಂಬರ್.20 :ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳು ಅರ್ಹ ಫಲಾನುಭವಿಗಳನ್ನು ತಲುಪುವಲ್ಲಿಸಮನ್ವಯಕಾರರ ಪಾತ್ರ ಪ್ರಮುಖವಾಗಿದ್ದು, ಯೋಜನೆಯ ಪರಿಣಾಮಕಾರಿ ಅನುಷ್ಠಾನದಲ್ಲಿ ಸಮನ್ವಯಕಾರರ ಪಾತ್ರ ಹಿರಿದು ಎಂದು ರೋಶನಿಲಯ ಪ್ರಾಂಶುಪಾಲರಾದ ಜೆಸಿಂತ ಡಿಸಿಲ್ವಾ ಅವರು ಹೇಳಿದರು.
ಇಂದು ನಗರದ ನಂತೂ ರಿನ ಶಾಂತಿ ಕಿರಣ ದ ಪ್ಯಾಸ್ಟರ್ ಇನ್ಸ್ಟಿ ಟ್ಯೂಟ್ ನಲ್ಲಿ ಜಿಟಿ ಝಡ್(ಜ ರ್ಮನ್ ಟೆಕ್ನಿ ಕಲ್ ಕೋ ಆಪ ರೇಷನ್) ಸಹ ಯೋಗ ದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗ ಳೂರು, ಬಂ ಟ್ವಾಳ ತಾಲೂಕು ಗಳ ಗ್ರಾಮ ಪಂಚಾ ಯಿತಿ ಮತ್ತು ಸಮು ದಾಯ ಸೌಲಭ್ಯ ಕೇಂದ್ರ ಗಳಲ್ಲಿ ಕ ರ್ತವ್ಯ ನಿರ್ವ ಹಿಸ ಲಿರುವ ಸಮು ದಾಯ ಸೌಲಭ್ಯೀ ಕರಣಿ ಕರಿಗೆ 3 ದಿನಗಳ ತರ ಬೇತಿ ಕಾರ್ಯ ಕ್ರಮ ದಲ್ಲಿ ಮುಖ್ಯ ಅತಿಥಿ ಯಾಗಿ ಮಾತ ನಾಡು ತ್ತಿದ್ದರು.
ಸಾಮಾಜಿಕ ಬದಲಾವಣೆಯ ಹರಿಕಾರರು ಇಂದು ತರಬೇತಿ ಪಡೆಯಲಿರುವವರು ಎಂದ ಅವರು,ತಮ್ಮ ಪ್ರದೇಶದಲ್ಲಿ ಅರ್ಹ ಫಲಾನುಭವಿಗಳಿಗೆ ಸರ್ಕಾರದ ವಿವಿಧ ಇಲಾಖೆಗಳಿಂದ ದೊರೆಯಲಿರುವ ಸೌಲಭ್ಯಗಳನ್ನು ಒದಗಿಸಬೇಕು.ಅವರ ಪ್ರಶ್ನೆಗಳಿಗೆ, ಸಂಶಯಗಳಿಗೆ ಉತ್ತರಿಸುವ ಅವರಿಂದ ದಾಖಲೆಗಳನ್ನು ಪಡೆಯುವ ಸಾಮಥ್ರ್ಯವಿರಬೇಕು.ಅವರಲ್ಲಿ ಜೀವನೋತ್ಸಾಹ ತುಂಬಲು ಶಕ್ತರಾಗಬೇಕು ಎಂದರು.
ಪ್ರಪಂಚ ಇಂದು ಆರ್ಥಿಕ ಹಿಂಜರಿ ತದಲ್ಲಿ ನಲು ಗುತ್ತಿ ದ್ದರೂ ನಮ್ಮ ದೇ ಶಕ್ಕೆ ಇದರ ಅನು ಭವ ವಾಗ ದಿರಲು ನಮ್ಮ ಜೀವನ ಮಟ್ಟ ಕಾರಣ. ಇಂ ದಿಗೂ ಗ್ರಾಮಾಂ ತರ ಪ್ರದೇಶ ದಲ್ಲಿ ಕನಿಷ್ಠ ಅಗತ್ಯ ಗಳೊಂ ದಿಗೆ ನಮ್ಮ ಜೀ ವನ ಸಾಗು ತ್ತಿರು ವುದೇ ಇದಕ್ಕೆ ಕಾರಣ ಎಂದರು.
ತರಬೇತಿ ಕಾರ್ಯಕ್ರಮವನ್ನು ಜಿಲ್ಲಾ ವಾರ್ತಾಧಿಕಾರಿ ರೋಹಿಣಿ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಮಿಕ ಆಯುಕ್ತರಾದ ವೆಂಕಟೇಶ ಅಪ್ಪಯ್ಯ ಶಿಂಧಿಹಟ್ಟಿ ಅವರು, ಎರಡು ವರ್ಷದಿಂದಜಿ ಟಿ ಝಡ್ ಸಹಯೋಗದೊಂದಿಗೆ ಕಾರ್ಯಕ್ರಮ ರೂಪಿಸಲು ಹಂತಹಂತವಾಗಿ ಕ್ರಮ ಕೈಗೊಂಡಿದ್ದು, ಒಂದೆಡೆಯಲ್ಲಿ ವಿವಿಧ ಇಲಾಖೆಗಳ ಸೌಲಭ್ಯಗಳು ಅರ್ಹರಿಗೆ ದೊರೆಯುವಂತಾಗಿಸಲು ಈ ಯೋಜನೆ ರೂಪಿಸಲಾಗಿದೆ ಎಂದರು. ಅಸಂಘಟಿತ ಕಾರ್ಮಿಕರೇ ಹೆಚ್ಚಾಗಿರುವ ನಮ್ಮಲ್ಲಿ ಅವರಿಗೊಂದು ಸಾಮಾಜಿಕ ಭದ್ರತೆ ನೀಡುವ ಯೋಜನೆ ಉತ್ತಮದ್ದಾಗಿದೆ ಎಂದರು. ಕೃಷಿ ಕಾರ್ಮಿಕರು, ನಿರ್ರ್ಮಾಣ ಕಾರ್ಮಿಕರು, ಗೃಹ ಕೃತ್ಯದ ಕಾರ್ಮಿಕರು, ವಸ್ತ್ರೋದ್ಯಮ ಕಾರ್ಮಿಕರು ಮತ್ತು ಅಗರ ಬತ್ತಿ ಕಾರ್ಮಿಕರಿಗೆ ಸಂಬಂಧಿಸಿ
ಸರ್ಕಾರದ ಸಾಮಾಜಿಕ ಸಹಾಯ ಕಾರ್ಯಕ್ರಮಗಳಾದ ವಿಧವಾ ವೇತನ, ಅಂಗವಿಕಲ ವೇತನ, ಸಂಧ್ಯಾ ಸುರಕ್ಷಾ, ಸ್ತ್ರೀ ಶಕ್ತಿ, ವೃದ್ಧಾಪ್ಯ ವೇತನ, ಹೊಸ ಪಿಂಚಣಿ ಯೋಜನೆ, ರಾಷ್ಟ್ರೀಯ ಸ್ವಾಸ್ಥ್ಯ ಭೀಮಾ ಯೋಜನೆಗಳಂತಹ ಸೌಲಭ್ಯಗಳನ್ನು ಅಸಂಘಟಿತ ವಲಯದವರಿಗೆ ಒದಗಿಸುವುದರೊಂದಿಗೆ ಪ್ರಥಮ ಹಂತದಲ್ಲಿ ಜಿಲ್ಲೆಯ ಮಂಗಳೂರು ಮತ್ತು ಬಂಟ್ವಾಳದ ಐವತ್ತು ಗ್ರಾಮಪಂಚಾಯಿತಿ ಹಾಗೂ ವಾರ್ಡುಗಳಲ್ಲಿ ಜಾರಿಗೊಳಿಸಲಾಗುವುದು ಎಂದರು. ತರಬೇತಿ ಸಮನ್ವಯಾಧಿಕಾರಿ ಶ್ರೀಮತಿ ಜಲಜಾ, ಸಂಪನ್ಮೂಲ ವ್ಯಕ್ತಿಗಳಾದ ಬಸವರಾಜ್, ಶಂಕರ್ ಉಪಸ್ಥಿತರಿದ್ದರು. ಕುಮಾರಿ ಸ್ವಾತಿ ಪ್ರಾರ್ಥಿಸಿದರು.ಜಿಲ್ಲಾ ಸಮನ್ವಯಾಧಿಕಾರಿ ಅಕ್ಷತಾ ಸ್ವಾಗತಿಸಿದರು.ಹಿರಿಯ ಕಾರ್ಮಿಕ ನಿರೀಕ್ಷಕರಾದ ಸತ್ಯನಾರಾಯಣ ವಂದಿಸಿದರು.

Monday, September 19, 2011

ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗದಿಂದ ಅಹವಾಲು ಸ್ವೀಕಾರ

ಮಂಗಳೂರು,ಸೆಪ್ಟೆಂಬರ್. 19 :ವಿದ್ಯುತ್ ದರ ಪರಿಷ್ಕರಣೆ ಕುರಿತು ಇಂದು ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ಸಾರ್ವಜನಿಕರ ಅಹವಾಲುಗಳನ್ನು ಆಲಿಸಿತು.
ಸಭೆಯ ಅಧ್ಯಕ್ಷ ತೆಯನ್ನು ಕರ್ನಾ ಟಕ ವಿದ್ಯುತ್ ನಿಯಂತ್ರಣ ಆಯೋ ಗದ ಅಧ್ಯಕ್ಷ ಎಂ.ಆರ್.ಶ್ರೀನಿ ವಾಸ ಮೂರ್ತಿ ವಹಿಸಿ ದ್ದರು. ಮಂಗ ಳೂರು ವಿದ್ಯುತ್ ಸರಬ ರಾಜು ಕಂಪೆ ನಿಯ(ಮೆಸ್ಕಾಂ) ಅಧ್ಯಕ್ಷ ವಿಜಯ ನರ ಸಿಂಹ ಅವರು ವಿದ್ಯುತ್ ದರ ಪರಿ ಷ್ಕರಿಸ ಬೇಕಾದ ಅಗತ್ಯತೆಯ ಕುರಿತು ಸಭೆಯಲ್ಲಿ ವಿವರಿಸಿದರು. ಸಾರ್ವಜನಿಕರು, ಸಂಘ ಸಂಸ್ಥೆಗಳು,ರೈತರು,ಕೃಷಿಕ ರಿಂದ ಅಹವಾಲುಗಳನ್ನು ಆಲಿಸಿದ ಬಳಿಕ ಮಾತನಾಡಿದ ಆಯೋಗದ ಆಧ್ಯಕ್ಷರು ಮೆಸ್ಕಾಂ ದರ ಪರಿಷ್ಕರಣೆಯ ಹಿನ್ನೆಲೆಯಲ್ಲಿ ಒಟ್ಟು 4,602 ಆಕ್ಷೇಪಣಾ ದೂರುಗಳು ಬಂದಿವೆ. ರಾಜ್ಯದ ಇತರ ನಾಲ್ಕು ವಿದ್ಯುತ್ ಕಂಪೆನಿಗಳಿಗೆ ಸಲ್ಲಿಕೆಯಾದ ದೂರುಗಳಷ್ಟೇ ಆಕ್ಷೇಪಗಳು ಇಂದಿನ ಸಭೆಯಲ್ಲಿ ಸಲ್ಲಿಕೆಯಾಗಿವೆ. ಆಯೋಗವು ಕಂಪೆನಿಗಳು ಅರ್ಜಿ ಸಲ್ಲಿಸಿದ 120 ದಿನಗಳೊಳಗೆ ನಿರ್ಧಾರ ಕೈಗೊಳ್ಳಬೇಕಾಗಿದೆ. ಇದೇ ಸೆಪ್ಟೆಂಬರ್ 21ಕ್ಕೆ ಹುಬ್ಬಳ್ಳಿ ಮತ್ತು ಸೆಪ್ಟೆಂಬರ್ 23ಕ್ಕೆ ಗುಲ್ಬರ್ಗದಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರದ ಸಭೆ ನಡೆದ ಬಳಿಕ ಅಂತಿಮವಾಗಿ ಆಯೋಗವು ತನ್ನ ನಿರ್ಧಾರ ಪ್ರಕಟಿಸಲಿದೆ ಎಂದರು. ಆಯೋಗದ ಸದಸ್ಯರಾದ ವಿಶ್ವನಾಥ ಹಿರೇಮಠ, ಕೆ.ಶ್ರೀನಿವಾಸ್ ರಾವ್ ಅವರು ಸಭೆಯಲ್ಲಿ ಉಪಸ್ಥಿತರಿದ್ದರು.

ನಗರದ ಅಭಿವೃದ್ಧಿಗೆ ಪಿಪಿಪಿ ಮಾದರಿ: ಜಿಲ್ಲಾಉಸ್ತುವಾರಿ ಸಚಿವರ ಸಭೆ

ಮಂಗಳೂರು,ಸೆಪ್ಟೆಂಬರ್.19: ಮಂಗಳೂರು ನಗರದ ಸಮಗ್ರ ಅಭಿವೃದ್ಧಿಗೆ ಸಮಯ ಮಿತಿ ನಿಗದಿಯಡಿ ಕಾಮಗಾರಿಗಳನ್ನು ಮುಗಿಸಬೇಕಿದ್ದು, ಬಳಿಕ ರಾಜ್ಯ ಸರ್ಕಾರಕ್ಕೆ ನೂತನ ಪ್ರಸ್ತಾವನೆಗಳನ್ನು ಸಲ್ಲಿಸಬೇಕಿದೆ.
ಇದಕ್ಕೆ ಪೂರಕವಾಗಿ ಪ್ರಸಕ್ತ ಸನ್ನಿವೇಶದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕ ಮತ್ತು ಖಾಸಗಿಯವರ ಸಹಕಾರದಲ್ಲಿ ಸುಮಾರು 45 ಕಿ.ಮೀ ರಸ್ತೆಗಳನ್ನು ಸಮಗ್ರವಾಗಿ ಅಭಿವೃದ್ಧಿ ಪಡಿಸಲು ಕಟ್ಟಡ ನಿರ್ಮಾಪಕರು ಮತ್ತು ಗುತ್ತಿಗೆದಾರರು, ಇಂಜಿನಿಯರ್ ಅಸೋಸಿಯೇಷನ್, ವಿನ್ಯಾಸಗಾರರು ರಸ್ತೆಗಳನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸುವ ನಿಟ್ಟಿನಲ್ಲಿತಮ್ಮ ಸಹಕಾರವನ್ನು ನೀಡಬೇಕಿದೆ ಎಂದು ಜೀವಿಶಾಸ್ತ್ರ, ಪರಿಸರ, ಬಂದರು, ಒಳನಾಡು ಜಲಸಾರಿಗೆ, ವಿಜ್ಞಾನ ಮತ್ತುತಂತ್ರಜ್ಞಾನ ಸಚಿವರು ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಜೆ ಪಾಲೆಮಾರ್ ಅವರು ಹೇಳಿದರು.
ಅವರಿಂದು ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಆಯೋಜಿಸಲಾದ ಪಾಲಿಕೆ ಅಧಿಕಾರಿಗಳು, ಬಿಲ್ಡರ್ಸ್, ಇಂಜಿನಿಯರ್ಸ್ ಅಸೋಸಿಯೇಷನ್ ನವರ ಜೊತೆ ನಗರಾಭಿವೃದ್ಧಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಸಮಾಜದಿಂದ ಪಡೆದುಕೊಂಡದ್ದನ್ನು ಮತ್ತೆ ಸಮಾಜಕ್ಕೆ ನೀಡಿ ಎಂಬ ಸದುದ್ದೇಶದ ಜೊತೆಗೆ ಸಮನ್ವಯ ಹಾಗೂ ಸಹಕಾರದಿಂದ ಅಭಿವೃದ್ಧಿಗೆ ವೇಗ ನೀಡಲು ಈ ಸಭೆ ನಡೆಸಿದರು.ಎಲ್ಲರಿಂದಲೂ ಸಕಾರಾತ್ಮಕ ಪ್ರತಿಕ್ರಿಯೆ ಸಭೆಯಲ್ಲಿ ದೊರೆಯಿತು.
ಸುಮಾರು 115 ಪ್ರತಿನಿಧಿಗಳು ಸಭೆಯಲ್ಲಿ ಪಾಲ್ಗೊಂಡಿದ್ದು ಈ ಬಗ್ಗೆ ನಿರ್ಧಾರಕ್ಕೆ ಬರಲು ಒಂದು ವಾರದ ಸಮಯಾವಕಾಶವನ್ನು ಅವರು ಸಚಿವರಲ್ಲಿ ಕೋರಿದರು. ಪ್ರತೀ ಒಂದು ಕಿ.ಮೀ ರಸ್ತೆಯ ಉಸ್ತುವಾರಿಯನ್ನು, ಗುಣಮಟ್ಟ ಪರಿಶೀಲನೆಗೆ ಒಬ್ಬ ಇಂಜಿನಿಯರ್ ಎಂಬಂತೆ, ಓನ್ನ್ ಯುನರ್ ರೋಡ್, ಓನ್ ಯುವರ್ ಪಾರ್ಕ್ ಮಾದರಿಯ ಮುಂದುವರಿದ ಹಂತದಲ್ಲಿ ಮೂರು ಮಾದರಿಯಲ್ಲಿ ಇವರೆಲ್ಲರಿಂದ ಸಚಿವರು ಸಹಕಾರ ಕೋರಿದರು.
ಎಸ್ ಕೆ ಎಸ್ ಬಿಲ್ಡರ್ಸ್ ನ ಸನತ್ ಅವರು ನಗರದ ಕೆಪಿಟಿಯಿಂದ ಪದವು ವರೆಗಿನ ರಸ್ತೆಯನ್ನು ಅಂತರರಾಷ್ಟ್ರೀಯ ಮಟ್ಟಕ್ಕೇರಿಸಲು ಒಪ್ಪಿದರು.ಕೆ ಸಿ ನಾಯಕ್ ಅವರು ಸಚಿವರ ಮಾರ್ಗದರ್ಶನದಂತೆ ನಗರಾಭಿವೃದ್ಧಿಗೆ ಕೈಗನ್ನಡಿಯಂತಿರುವ ರಸ್ತೆ ಸಂಪರ್ಕ ಅಭಿವೃದ್ಧಿಗೆ ನೆರವು ನೀಡುವುದಾಗಿ ಹೇಳಿದರು.ಇಂಜಿನಿಯರ್ಸ್ ಅಸೋಸಿಯೇಷನ್ ನವರು ತಾಂತ್ರಿಕ ನೆರವು ನೀಡುವ ಭರವಸೆ ನೀಡಿದರು.ರಸ್ತೆ ಸಂಪರ್ಕಕ್ಕೆ ಆದ್ಯತೆಯನ್ನು ನೀಡಿ ನಗರದಲ್ಲಿರುವ ರಸ್ತೆ ಅಭಿವೃದ್ಧಿ ಬಗ್ಗೆ ಮಾಹಿತಿ ಆನ್ ಲೈನ್ ನಲ್ಲಿ ಲಭ್ಯವಾಗಬೇಕೆಂದರು.ಮಾಧ್ಯಮಗಳು ಅಭಿವೃದ್ಧಿ ವರದಿಗೆ ಸಹಕಾರ ನೀಡಬೇಕೆಂದರು.
ಪ್ರವಾಸೋದ್ಯಮ, ಘನತ್ಯಾಜ್ಯ ನಿರ್ವಹಣೆ, ಎಲ್ಲೆಂದರಲ್ಲಿ ಜಾಹೀರಾತುಗಳನ್ನು ಕಟ್ಟುವ ಬಗ್ಗೆಯೂ ಸಭೆಯಲ್ಲಿ ಚರ್ಚಿಸಲಾಯಿತು.
10,000ರೂ.ಗಳವರೆಗೆ ಬಹುಮಾನ: ಲಾರಿಗಳಲ್ಲಿ ಡೆಬರಿ ಮತ್ತು ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಎಸೆಯುವ ಬಗ್ಗೆ ಮಾಹಿತಿ ನೀಡುವವರಿಗೆ, ಕೆರೆಗಳಿಗೆ ಮಣ್ಣು ತುಂಬಿಸುವ ಕುರಿತು ಮಾಹಿತಿ ನೀಡುವವರಿಗೆ ಒಂದು ಸಾವಿರ ರೂ.ಗಳಿಂದ ಹತ್ತು ಸಾವಿರದವರೆಗೆ ಬಹುಮಾನ ನೀಡಲು ಪರಿಸರ ಇಲಾಖೆ ಯೋಜಿಸಿದ್ದು, ಶೀಘ್ರದಲ್ಲೇ ಆದೇಶ ಜಾರಿಯಾಗಲಿದೆ ಎಂದರು. ನಗರದ ದೇವಾಲಯಗಳ ಎದುರಿನ ರಸ್ತೆಗಳನ್ನು ದೇವಾಲಯದವರು ಅಭಿವೃದ್ಧಿಪಡಿಸುವ ಬಗ್ಗೆಯೂ ಸಭೆಯಲ್ಲಿ ಸಲಹೆ ಬಂತು.ಸಾಮಾಜಿಕ ಜವಾಬ್ದಾರಿಗಳ ಬಗ್ಗೆ, ಜನರ ನಿರೀಕ್ಷೆಯ ಬಗ್ಗೆ, ಅಭಿವೃದ್ದಿಗೆ ವೇಗ ನೀಡುವ ಬಗ್ಗೆ ಸಭೆಯಲ್ಲಿಉತ್ತಮ ಸಲಹೆಗಳು ಮೂಡಿಬಂದವು.ಉಪಸಭಾಪತಿಗಳಾದ ಎನ್ ಯೋಗೀಶ್ ಭಟ್ ಅವರು ನಮ್ಮ ಪರಿಸರ, ನಮ್ಮ ನಗರದ ಅಭಿವೃದ್ಧಿಯಲ್ಲಿ ನಮ್ಮ ಸಹಭಾಗಿತ್ವದ ಕುರಿತು ಮಾತನಾಡಿದರು.ಮೇಯರ್ ಪ್ರವೀಣ್ ಅಂಚನ್, ಜಿಲ್ಲಾಧಿಕಾರಿ ಡಾ ಎನ್ ಎಸ್ ಚನ್ನಪ್ಪ ಗೌಡ, ಸಿಇಒ ಡಾ ಕೆ ಎನ್ ವಿಜಯಪ್ರಕಾಶ್ ಉಪಸ್ಥಿತರಿದ್ದರು.

Sunday, September 18, 2011

ಸ್ವಾತಂತ್ರ್ಯ ಹೋರಾಟ ಸ್ಮರಣೆ ಪ್ರತಿಯೊಬ್ಬರ ಕರ್ತವ್ಯ: ಕರುಣಾಕರ ಉಚ್ಚಿಲ

ಮಂಗಳೂರು,ಸೆಪ್ಟೆಂಬರ್ 18: ಸ್ವಾತಂತ್ರ್ಯಕ್ಕೋಸ್ಕರ ತನ್ನ ಮಕ್ಕಳ ಬಲಿದಾನ ಮಾಡಿದ ಟಿಪ್ಪುವಿನ ದೇಶಭಕ್ತಿಯ ಬಗ್ಗೆ, ನಮ್ಮ ಸ್ವಾತಂತ್ರ್ಯದ ಹೋರಾಟ, ಬಲಿದಾನಗಳ ಬಗ್ಗೆ ಇಂದಿನ ಜನಾಂಗ ತಿಳಿಯಬೇಕಿದೆ. ಇತಿಹಾಸದ ಅರಿವು ವಿದ್ಯಾರ್ಥಿಗಳಿಗಿರಬೇಕು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಕರುಣಾಕರ ಕೆ ಉಚ್ಚಿಲ ಅವರು ಹೇಳಿದರು.ಅವರು ಸಂ ಸ್ಕೃತಿ ಮಂತ್ರಾ ಲಯ ನವ ದೆಹಲಿ, ಕನ್ನಡ ಮತ್ತು ಸಂ ಸ್ಕೃತಿ ಇಲಾಖೆ ಬೆಂಗ ಳೂರು ಇವರ ಆಶ್ರ ಯದಲ್ಲಿ ಮಂಗ ಳೂರಿನ ಸೋ ಮೇಶ್ವರ- ಉಚ್ಚಿಲದ ಬೋವಿ ಹಿರಿಯ ಪ್ರಾಥ ಮಿಕ ಶಾಲೆ ಯಲ್ಲಿ ಆಯೋ ಜಿಸ ಲಾದ ಭಾರತ ಸ್ವಾ ತಂತ್ರ್ಯ ಸಂಗ್ರಾ ಮದ 150 ನೇ ವರ್ಷಾ ಚರಣೆ ಮತ್ತು ಟಿಪ್ಪು ಸುಲ್ತಾ ನರ ಸ್ಮರ ಣಾರ್ಥ ಸಾಂಸ್ಕೃ ತಿಕ ಕಾರ್ಯ ಕ್ರಮ ದಲ್ಲಿ ವಿಶೇಷ ಉಪ ಸ್ಥಿತಿ ವಹಿಸಿ ಮಾತ ನಾಡು ತ್ತಿದ್ದರು.1857ರ ಸಿಪಾಯಿ ದಂಗೆ ಯಿಂದ ಆರಂ ಭಿಸಿ ಸ್ವಾ ತಂತ್ರ್ಯ ಲಭಿಸಿ ದವರೆ ಗಿನ ಘಟನೆ ಗಳನ್ನು ಸ್ಮರಿ ಸಿದ ಅವರು, ಗಾಂಧೀ ಜಿಯ ವರ ಜೊತೆ ಗಿದ್ದ ಸುಧಾ ಕರ ಚತು ರ್ವೇದಿ ಅವರ ಅನು ಭವ ಗಳನ್ನು ಸಭೆ ಯಲ್ಲಿ ಹಂಚಿ ಕೊಂಡರು. ಇಲಾಖೆ ವತಿಯಿಂದ ಹಿರಿಯರನ್ನು ಸನ್ಮಾನಿಸಲಾಯಿತು. ಶಾಸಕ ಯು ಟಿ ಖಾದರ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾ ಯತ್ ಸದಸ್ಯ ರಾದ ಸತೀಶ್ ಕುಂಪಲ, ತಾಲೂಕು ಪಂಚಾ ಯತ್ ಸದಸ್ಯ ರಾದ ಶ್ರೀಮತಿ ಧನ್ಯ ವತಿ, ದೇವಕಿ ರಾಘವ, ಗ್ರಾಮ ಪಂಚಾ ಯತ್ ಅಧ್ಯಕ್ಷ ರಾದ ಶ್ರೀಮತಿ ಕಮಲ, ಉಪಾ ಧ್ಯಕ್ಷ ರಾದ ಕೆ. ರಮೇಶ್ , ಶಾಲಾ ಮುಖ್ಯೋ ಪಾಧ್ಯಾ ಯರು, ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಶ್ರೀಮತಿ ಮಂಗಳ ವೆಂ.ನಾಯಕ್ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಕನ್ನಡ ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರಾದ ಕಾ.ತ. ಚಿಕ್ಕಣ್ಣ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು.

ಸೆ.20 ಸಮುದಾಯ ಆರೋಗ್ಯ ದಿನಾಚರಣೆ

ಮಂಗಳೂರು, ಸೆಪ್ಟೆಂಬರ್ 18:ರಾಜ್ಯದಲ್ಲಿ 2011-12ನೇ ವರ್ಷವನ್ನು ರಾಷ್ಟ್ರೀಯ ಲಸಿಕಾ ಕಾರ್ಯಕ್ರಮ ವರ್ಷ ಎಂದು ಘೋಷಿಸಲಾಗಿದೆ.ಈ ವರ್ಷ ಲಸಿಕಾ ಕಾರ್ಯಕ್ರಮಕ್ಕೆ ಹೆಚ್ಚಿನ ಮಹತ್ವ ನೀಡುವ ಸಲುವಾಗಿ 2011ರ ಸೆ.20ನ್ನು ಸಮುದಾಯ ಆರೋಗ್ಯ ದಿನವನ್ನಾಗಿ ಆಚರಿಸಲಾಗುತ್ತಿದೆ. ಅಂದು ಜಿಲ್ಲೆಯ ಎಲ್ಲ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ನಮ್ಮ ಗ್ರಾಮದಲ್ಲಿ ಏಳು ಮಾರಕ ರೋಗಗಳ ನಿರೋಧಕ ಲಸಿಕೆಯಿಂದ ವಂಚಿತವಾಗಿರುವ ಯಾವುದೇ ಮಗು ಇರುವುದಿಲ್ಲ'' ಎಂಬ ಘೋಷಣೆ ಮಾಡಬೆಕು.
ಈ ಕಾರ್ಯಕ್ರಮದ ಉದ್ದೇಶ ಪ್ರತೀ ಗ್ರಾಮದಲ್ಲಿ ಲಸಿಕೆಯಿಂದ ವಂಚಿತ ಮಕ್ಕಳು ಇಲ್ಲದಂತೆ ನೋಡಿಕೊಳ್ಳಲು ಎಲ್ಲರ ಜವಾಬ್ದಾರಿ ಇದೆ ಎಂಬ ಸಂದೇಶ ತಲುಪಿಸುವುದಾಗಿದೆ. ಆಯಾ ಗ್ರಾಮಗಳ ಎಲ್ಲ ಚುನಾಯಿತ ಪ್ರತಿನಿಧಿಗಳು, ಜನಪ್ರತಿನಿಧಿಗಳು, ಆರೋಗ್ಯ, ನೈರ್ಮಲ್ಯ ಸಮಿತಿ ಸದಸ್ಯರು, ಆರೋಗ್ಯ ರಕ್ಷಾ ಸಮಿತಿ ಸದಸ್ಯರು, ಸ್ಥಳೀಯ ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ, ಸ್ವಸಹಾಯಸಂಘಗಳು, ಯುವಶಕ್ತಿ, ಸಂಘಟನೆಗಳು, ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜರುಗುವ ಸಮುದಾಯ ಆರೋಗ್ಯ ದಿನಾಚರಣೆಯಲ್ಲಿ ಭಾಗವಹಿಸಿ ಆರೋಗ್ಯ ಕೇಂದ್ರಗಳಲ್ಲಿ ತರಬಹುದಾದ ಸುಧಾರಣೋಪಾಯಗಳ ಬಗ್ಗೆ ಚರ್ಚಿಸಿ ತೀರ್ಮಾನಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.

'ಅಬ್ಬಕ್ಕ ಸಂಕಥನ' ಲೋಕಾರ್ಪಣೆ

ಮಂಗಳೂರು,ಸೆಪ್ಟೆಂಬರ್.18: ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಅಬ್ಬಕ್ಕ ಉತ್ಸವ ಸಮಿತಿ ಪ್ರಕಟಿಸಿದ ವೀರರಾಣಿ ಅಬ್ಬಕ್ಕ ಕುರಿತ 'ಅಬ್ಬಕ್ಕ ಸಂಕಥನ'ಲೋಕಾರ್ಪಣೆಯ ಸಮಾರಂಭ ಮಂಗಳೂರಿನಲ್ಲಿ ಶನಿವಾರ ಸಂಜೆ ನಡೆಯಿತು.

ಜಿಲ್ಲಾ ಉಸ್ತುವರಿ ಸಚಿವರಾದ ಕೃಷ್ಣ ಜೆ.ಪಾಲೆ ಮಾರ್ ಅವರು ಸಮಾ ರಂಭ ವನ್ನು ಉದ್ಘಾ ಟಿಸಿದರು.ರಂಗ ಕಲಾವಿದೆ ಹಾಗೂ ರಾಜ್ಯ ಸಭಾ ಸದಸ್ಯೆ ಜಯ ಶ್ರೀ ಅವರು ಅಬ್ಬಕ್ಕ ಸಂಕಥನ ವನ್ನು ಲೋಕಾ ರ್ಪಣೆ ಮಾಡಿ ದರು. ಸಂಸದ ನಳಿನ್ ಕುಮಾರ್ ಕಟೀಲ್,ವಿಧಾನ ಸಭಾ ಉಪ ಸಭಾಪತಿ ಎನ್. ಯೋಗಿಶ್ ಭಟ್,ಶಾಸಕ ಯು.ಟಿ.ಖಾದರ್,ಹಿರಿಯ ಸಾಹಿತಿ ಅಬ್ಬಕ್ಕ ಸಂಕಥನ ಕೃತಿಯ ಪ್ರಧಾನ ಸಂಪಾದಕರಾದ ಡಾ. ಅಮೃತ ಸೋಮೇಶ್ವರ,ಪ್ರೊ.ಬಿ.ಎ.ವಿವೇಕ ರೈ,ಅಬ್ಬಕ್ಕ ಉತ್ಸವ ಸಮಿತಿಯ ಪ್ರಮುಖರಾದ ಜಯರಾಂ ಶೆಟ್ಟಿ,ದಿನಕರ ಉಳ್ಳಾಲ್,ಸುರೇಶ್ ಕುಮಾರ್,ಸದಾನಂದ ಬಂಗೇರಾ ಮತ್ತಿತರರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.

Saturday, September 17, 2011

ಮೀನುಗಾರರ ಸಮಸ್ಯೆಗೆ ಸ್ಪಂದಿಸಲು ಸರ್ಕಾರ ಬದ್ಧ ; ಸಚಿವ ಕೃಷ್ಣ ಪಾಲೆಮಾರ್

ಮಂಗಳೂರು,ಸೆಪ್ಟೆಂಬರ್.17: ಮಂಗಳೂರು ಬಂದರು ಪ್ರದೇಶದಲ್ಲಿರುವ ಮೀನುಗಾರಿಕಾ ದಕ್ಕೆಯನ್ನು ರೂ.57 ಕೋಟಿ ವೆಚ್ಛದಲ್ಲಿ ವಿಸ್ತರಣಾ
ಕಾಮಗಾರಿ ಕಾರ್ಯ ಶೀಘ್ರ ಕೈಗೆತ್ತಿಕೊಳ್ಳಲಾಗುವುದೆಂದು ಒಳನಾಡು,ಜಲಸಾರಿಗೆ ಬಂದರು,ಪರಿಸರ, ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೆಮಾರ್ ಅವರು ತಿಳಿಸಿದ್ದಾರೆ.
ಅವರು ಇಂದು ಮಂಗ ಳೂರಿನ ಮೀನು ಗಾರಿಕಾ ಬಂದ ರಿನಲ್ಲಿ ಆಯೋ ಜಿಸಿದ್ದ ಮೀನು ಗಾರರ ಸಭೆ ಯಲ್ಲಿ ಈ ವಿಷಯ ತಿಳಿ ಸಿದರು.ಎರಡು ದಿನ ಗಳ ಹಿಂದೆ ನಡೆದ ಮೀನು ಗಾರಿಕ ದೋಣಿ ದುರಂತ ದಲ್ಲಿ ಸಮುದ್ರ ಪಾಲಾಗಿ ನಾಪತ್ತೆ ಯಾದ ಕುಟುಂಬ ದವರಿಗೆ ತಲಾ ರೂ.1 ಲಕ್ಷ ಪರಿ ಹಾರ ವನ್ನು ಸರ್ಕಾರದಿಂದ ನೀಡುವುದಾಗಿ ಹಾಗೂ ಇತ್ತೀಚೆಗೆ ಮೀನುಗಾರಿಕೆಗೆ ತೆರಳಿದ್ದ ದೋಣಿ ದುರಂತದಲ್ಲಿ ಗಾಯಗೊಂಡವರಿಗೆ ತಲಾ ರೂ.25000/- ಪರಿಹಾರ ದೊರಕಿಸುವುದಾಗಿ ಅವರು ತಿಳಿಸಿದರು.
ಇತ್ತೀಚಿನ ದೋಣಿ ದುರಂತಗಳಿಗೆ ನವಮಂಗಳೂರು ಬಂದರು ಅಧಿಕಾರಿಗಳೇ ಕಾರಣವಾಗಿರುವ ಅಂಶ ಗಮನಕ್ಕೆ ಬಂದಿದ್ದು,ಈ ಅಪಾದನೆಯ ಬಗ್ಗೆ ತನಿಖೆ ನಡೆಸುವುದಾಗಿಯೂ ತಿಳಿಸಿದರು.
ಸರ್ಕಾರ ಮಿನುಗಾರರ ಸಂಕಷ್ಟಕ್ಕೆ ಸ್ಪಂದಿಸಿ ಕಾರ್ಯ ನಿರ್ವಹಿಸುತ್ತಿದ್ದು, 10 ಕೋಟಿ ರೂ.ವೆಚ್ಚದಲ್ಲಿ ರಾಜ್ಯದ ಎಲ್ಲಾ ಮೀನುಗಾರಿಕಾ ಬಂದರುಗಳ ಡ್ರೆಜ್ಜಿಂಗ್ ಕಾರ್ಯ ಕೈಗೊಳ್ಳಲು ಹಣ ಬಿಡುಗಡೆ ಮಾಡಿದೆ. ಮಳೆ ಕಡಿಮೆಯಧ ಕೂಡಲೇ ತುರ್ತಾಗಿ ಈ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದ ಅವರು ಶಾಶ್ವತ ಕಾಮಗಾರಿಗಳನ್ನು ಮಾಡುವ ಮೂಲಕ ಮೀನುಗಾರರಿಗೆ ಶಾಶ್ವತ ಪರಿಹಾರಗಳನ್ನು ಕಲ್ಪಿಸಲಾಗುತ್ತಿದೆ,ಡ್ರೆಜ್ಜರನ್ನು ಸಹ ಖರೀದಿಸಲಾಗುವುದೆಂದು ತಿಳಿಸಿದರು.
ದೇಶದ ರಫ್ತು ಉದ್ಯಮದಲ್ಲಿ ಪ್ರಮುಖ ಪಾತ್ರ ವಹಿಸಿರುವ ಮೀನುಗಾರಿಕೆ ಹಾಗೂ ಮೀನುಗಾರರ ಬಗ್ಗೆ ತಮಗೆ ಅಪಾರ ಗೌರವವಿದ್ದು,ಅವರ ಎಲ್ಲಾ ಸಮಸ್ಯೆ ಪರಿಹರಿಸಲು ತಾವು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಮಂಗಳೂರು ಮೀನುಗಾರರ ಬಹುದಿನಗಳ ಬೇಡಿಕೆಯಾದ ಅಳಿವೆ ಬಾಗಿಲಿನಲ್ಲಿ ಹೂಳು ತೆಗೆಯಲು ಕ್ರಮ ಕೈಗೊಳ್ಳಲಾಗಿದೆ.ಬಂದರುಗಳ ಅಭಿವೃದ್ದಿ ಕಾರ್ಯ ಒಳಗೊಂಡಂತೆ ಎಲ್ಲಾ ಪ್ರಮುಖ ನಿರ್ಧಾರಗಳನ್ನು ಶೀಘ್ರದಲ್ಲೇ ಕೈ ಗೊಳ್ಳುವಂತಾಗಲು ಬಂದರು ಮೆರಿ ಟೈಮ್ ಬೋಡ್ರ್ ಸ್ಥಾಪಿಸಲಾಗಿದೆ ಎಂದರು. ರಾಜ್ಯದಲ್ಲಿ 19900 ಬೋಟುಗಳಿದ್ದು ಇವುಗಳಿಂದ 4ಲಕ್ಷ ಟನ್ ನಷ್ಟು ಮೀನುಗಳನ್ನು ಹಿಡಿಯಲಾಗುತ್ತಿದೆ, ಮಂಗಳೂರಿನಲ್ಲಿ ಸುಮಾರು 2000 ಬೋಟುಗಳಿಂದ 1.13ಲಕ್ಷ ಟನ್ ಮೀನು ಸಂಗ್ರಹ ಮಾಡಲಾಗುತ್ತಿದೆ. ಮೀನುಗಾರಿಕೆ ದೋಣಿಗಳಿಗೆ ಈಗ ನೀಡಲಾಗುತ್ತಿರುವ ರಿಯಾಯ್ತಿ ದರದ ಡೀಸೆಲ್ ಪ್ರಮಾಣವನ್ನು ಹೆಚ್ಚಿಸಲುಮೀನುಗಾರಿಕೆ ಸಂಘಗಳು ಮನವಿ ಮಾಡಿದ್ದು, ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ದೊರಕಿಸುವುದಾಗಿ ತಿಳಿಸಿದರು.ಕರ್ನಾ ಟಕ ಸರ್ಕಾರ ಮೀನು ಗಾರ ರಿಗೆ ಅನೇಕ ಸೌಲಭ್ಯ ಗಳನ್ನು ನೀಡು ತ್ತಿದ್ದು ಇವು ಗಳನ್ನು ಪಡೆ ಯುವಲ್ಲಿ ಮೀನು ಗಾರರ ಲ್ಲದವರು ಸೌಲಭ್ಯ ಗಳನ್ನು ಪಡೆ ಯಲು ಹವಣಿ ಸುತ್ತಿ ರುತ್ತಾರೆ, ಆದ್ದ ರಿಂದ ಮೀನು ಗಾರರು ಎಚ್ಚೆತ್ತು ಕೊಂಡು ತಮ್ಮ ಸೌಲ ಭ್ಯಗ ಳನ್ನು ಸದು ಪಯೋ ಗಪಡಿ ಸಿಕೊ ಳ್ಳಲು ಕಿವಿ ಮಾತು ಹೇಳಿದರು.
ಸ್ಥಳಿಯ ಶಾಸಕರೂ, ವಿಧಾನಸಭೆ ಉಪಾಧ್ಯಕ್ಷರಾದ ಎನ್.ಯೋಗೀಶ್ ಭಟ್ ಅವರು ಮಾತನಾಡಿ ಮಾನವೀಯತೆಯಿಂದ ನವಮಂಗಳೂರು ಅಧಿಕಾರಿಗಳು ವರ್ತಿಸಿದ್ದರೆ, 6 ಜನರ ಅಮೂಲ್ಯ ಜೀವಗಳ ರಕ್ಷಣೆ ಆಗುತ್ತಿತ್ತು ಎಂದ ಅವರು ಈ ಬಗ್ಗೆ ರಾಜ್ಯ ಸರ್ಕಾರ ಇನ್ನು ಮುಂದೆ ಹೀಗಾಗದಂತೆ ಕ್ರಮ ವಹಿಸುವುದೆಂದು ತಿಳಿಸಿದರು.
ಸಭೆಯಲ್ಲಿ ಮೀನುಗಾರರ ಸಂಘದ ಮುಖಂಡರುಗಳಾದ ನವೀನ್ ಕರ್ಕೇರಾ,ಉಮೇಶ್ ಕರ್ಕೇರಾ,ಕರ್ನಾಟಕ ಮೀನುಗಾರರ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್,ಮೀನುಗಾರಿಕಾ ಉಪನಿರ್ದೇಶಕರಾದ ಸುರೇಶ್ ಕುಮಾರ್, ಬಂದರು ಮಂಡಳಿ ಅಧ್ಯಕ್ಷ ಕ್ಯಾಪ್ಟನ್ ಮೋಹನ್ ಮುಂತಾದವರು ಉಪಸ್ಥಿತರಿದ್ದರು.

ವಾಸದ ಉದ್ದೇಶದಿಂದ ಮನೆಗಳ ನಿರ್ಮಾಣಕ್ಕೆ ನಿರಾಕ್ಷೇಪಣಾಪತ್ರ ನೀಡಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಅಧಿಕಾರ-ಪಾಲೇಮಾರ್

ಮಂಗಳೂರು,ಸೆಪ್ಟೆಂಬರ್.17 : ಕರಾವಳಿ ನಿಯಂತ್ರಣ ವಲಯದ 2 ನೇ ವರ್ಗದಲ್ಲಿ ವಾಸದ ಮನೆಗಳನ್ನು ನಿರ್ಮಿಸಲು ನಿರಾಕ್ಷೇಪಣಾ ಪತ್ರಕ್ಕಾಗಿ ಅರ್ಜಿಗಳನ್ನು ಬೆಂಗಳೂರಿನ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರಕ್ಕೆ ಇಲ್ಲಿಯವರೆಗೆ ಸಲ್ಲಿಸಬೇಕಾಗಿತ್ತು.
ಇದರಿಂದ 4-5 ತಿಂಗಳು ನಿರಾಕ್ಷೇಪಣಾ ಪತರಕ್ಕಾಗಿ ಕಾಯ ಬೇಕಾಗಿತ್ತು.ಆದರೆ ಮಾನ್ಯ ಪರಿಸರ ಖಾತೆ ಸಚಿವರು ಹಾಗೂ ದಕ್ಷಿಣಕನ್ನಡ ಜಿಲ್ಲೆ ಉಸ್ತುವಾರಿ ಸಚಿವರು ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಜೊತೆ ಚರ್ಚಿಸಿದ ಮೇರೆಗೆ ದಿನಾಂಕ 15-9-11 ರಂದು ಬೆಂಗಳೂರಿನಲ್ಲಿ ನಡೆದ ರಾಜ್ಯ ಕರಾವಳಿ ವಲಯ ನಿರ್ವಹಣಾ ಪ್ರಾಧಿಕಾರ ಸಭೆಯಲ್ಲಿ ಇನ್ನು ಮುಂದೆ ನಿರಾಕ್ಷೇಪಣಾ ಪತ್ರವನ್ನು ಆಯಾ ಜಿಲ್ಲೆಯ ಪ್ರಾದೇಶಿಕ ನಿರ್ದೇಶಕರು (ಪರಿಸರ) ಇವರು ನೀಡಲು ನಿರ್ಣಯಿಸಿರುತ್ತಾರೆ.

Friday, September 16, 2011

ಗ್ರಾಮೀಣ ಕ್ರೀಡಾ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ;ಈಶ್ವರ ಕಟೀಲ್

ಮಂಗಳೂರು,ಸೆಪ್ಟೆಂಬರ್.16:ಗ್ರಾಮೀಣ ಪ್ರದೇಶಗಳಲ್ಲಿರುವ ಕ್ರೀಡಾಪಟುಗಳಿಗೆ ಉತ್ತಮ ಪ್ರೋತ್ಸಾಹ ನೀಡುವ ಮೂಲಕ ಭಾರತ ದೇಶ ಕ್ರೀಡಾ ರಂಗದಲ್ಲಿ ಹೆಚ್ಚು ಸಾಧನೆ ತೋರುವಂತೆ ಹಾಗೂ ಪದಕಗಳನ್ನು ಗಳಿಸುವಂತೆ ಮಾಡಬೇಕಾದ ಕೆಲಸ ಸರ್ಕಾರ ಹಾಗೂ ಸಂಘ ಸಂಸ್ಥೆಗಳದ್ದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಈಶ್ವರ ಕಟೀಲ್ ಅವರು ತಿಳಿಸಿದ್ದಾರೆ.
ಅವರು ಇಂದು ಜಿಲ್ಲಾ ಡಳಿತ,ಜಿಲ್ಲಾ ಪಂಚಾ ಯತ್,ಭಾರ ತೀಯ ಕ್ರೀಡಾ ಪ್ರಾಧಿಕಾರ ಹಾಗೂ ಪಂಚಾಯತ್ ಯುವ ಖೇಲ್ ಔರ್ ಕ್ರೀಡಾ ಅಭಿಯಾನ(ಪೈಕಾ) ಇವರ ಸಂಯುಕ್ತಾಶ್ರಯದಲ್ಲಿ ಮಂಗಳಾ ಕ್ರೀಡಾಂಗಣದಲ್ಲಿ ಏರ್ಪಡಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದಸರಾ/ಮಹಿಳಾ ಮತ್ತು ಪೈಕಾ ಗ್ರಾಮೀಣ ಕ್ರೀಡಾಕೂಟ 2011-12 ನ್ನು ಉದ್ಘಾಟಿಸಿ ಮಾತನಾಡಿದರು.
ಮಂಗಳಾ ಕ್ರೀಡಾಂಗಣವನ್ನು ಸುಸಜ್ಜಿತಗೊಳಿಸಲು ಅನುದಾನ ನೀಡುವಂತೆ ಮಾನ್ಯ ಮುಖ್ಯ ಮಂತ್ರಿಗಳನ್ನು ಕೋರಿದ್ದು,ಅವರು ಎಲ್ಲಾ ಅಗತ್ಯ ನೆರವು ನೀಡುವ ಭರವಸೆ ನೀಡಿದ್ದಾರೆಂದು ಈಶ್ವರ ಕಟೀಲ್ ತಿಳಿಸಿದರು.

ಮುಖ್ಯ ಅತಿಥಿ ಗಳಾಗಿ ಆಗ ಮಿಸಿದ್ದ ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯ ನಿರ್ವ ಹಣಾ ಧಿಕಾರಿ ಡಾ.ವಿಜಯ ಪ್ರಕಾಶ್ ಅವರು ಮಾತ ನಾಡಿ ಗ್ರಾಮೀಣ ಕ್ರೀಡಾ ಪಟು ಗಳನ್ನು ಉತ್ತೇ ಜಿಸುವ ಮೂಲಕ ಅವರು ಕ್ರೀಡಾ ಸಾಮರ್ಥ್ಯ ಇಮ್ಮಡಿ ಗೊಳಿಸಿ ಅವರು ರಾ ಷ್ಟ್ರೀಯ ಅಂತರ್ ರಾ ಷ್ಟ್ರೀಯ ಕ್ರೀಡಾ ಪಟು ಗಳಾಗಿ ಹೊರ ಹೊಮ್ಮಲು ಸಮಗ್ರ ವ್ಯವಸ್ಥೆ ಕಲ್ಪಿಸುವ ಹೊಣೆ ಸಮಾ ಜದ್ದು ಎಂದರು.ಕೇವಲ ದಸರಾ ಕ್ರೀಡಾ ಕೂಟಕ್ಕೆ ಮಾತ್ರ ಗ್ರಾಮೀಣ ಕ್ರೀಡಾ ಪಟು ಗಳನ್ನು ಹುರಿ ದುಂಬಿ ಸದೆ ಎಲ್ಲಾ ರೀತಿ ಯಿಂದಲೂ ನಿರಂತರ ಪ್ರೋತ್ಸಾಹ ಅವರಿಗೆ ದೊರಕು ವಂತಾ ಗಬೇ ಕೆಂದರು.
ಸಮಾ ರಂಭದ ಅಧ್ಯ ಕ್ಷತೆ ಯನ್ನು ಜಿಲ್ಲಾ ಪಂಚಾ ಯತ್ ಸದಸ್ಯರಾದ ಜನಾರ್ಧನ ಗೌಡ ವಹಿಸಿದ್ದರು.
ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಪಾಶ್ರ್ವನಾಥ ಅವರು ಸ್ವಾಗತಿಸಿದರು. ರಾಷ್ಟ್ರೀಯ ಕ್ರೀಡಾಪಟು ಶ್ರೀಮತಿ ಸೀಮಾ ಪ್ರಿಯದರ್ಶಿನಿ ಅವರು ಕ್ರೀಡಾ ಪ್ರತಿಜ್ಞೆ ಬೋಧಿಸಿದರು. ಇಲಾಖೆಯ ಪಾಂಡುರಂಗ ಗೌಡ ವಂದಿಸಿದರು.