Saturday, September 17, 2011

ಮೀನುಗಾರರ ಸಮಸ್ಯೆಗೆ ಸ್ಪಂದಿಸಲು ಸರ್ಕಾರ ಬದ್ಧ ; ಸಚಿವ ಕೃಷ್ಣ ಪಾಲೆಮಾರ್

ಮಂಗಳೂರು,ಸೆಪ್ಟೆಂಬರ್.17: ಮಂಗಳೂರು ಬಂದರು ಪ್ರದೇಶದಲ್ಲಿರುವ ಮೀನುಗಾರಿಕಾ ದಕ್ಕೆಯನ್ನು ರೂ.57 ಕೋಟಿ ವೆಚ್ಛದಲ್ಲಿ ವಿಸ್ತರಣಾ
ಕಾಮಗಾರಿ ಕಾರ್ಯ ಶೀಘ್ರ ಕೈಗೆತ್ತಿಕೊಳ್ಳಲಾಗುವುದೆಂದು ಒಳನಾಡು,ಜಲಸಾರಿಗೆ ಬಂದರು,ಪರಿಸರ, ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜೆ. ಕೃಷ್ಣ ಪಾಲೆಮಾರ್ ಅವರು ತಿಳಿಸಿದ್ದಾರೆ.
ಅವರು ಇಂದು ಮಂಗ ಳೂರಿನ ಮೀನು ಗಾರಿಕಾ ಬಂದ ರಿನಲ್ಲಿ ಆಯೋ ಜಿಸಿದ್ದ ಮೀನು ಗಾರರ ಸಭೆ ಯಲ್ಲಿ ಈ ವಿಷಯ ತಿಳಿ ಸಿದರು.ಎರಡು ದಿನ ಗಳ ಹಿಂದೆ ನಡೆದ ಮೀನು ಗಾರಿಕ ದೋಣಿ ದುರಂತ ದಲ್ಲಿ ಸಮುದ್ರ ಪಾಲಾಗಿ ನಾಪತ್ತೆ ಯಾದ ಕುಟುಂಬ ದವರಿಗೆ ತಲಾ ರೂ.1 ಲಕ್ಷ ಪರಿ ಹಾರ ವನ್ನು ಸರ್ಕಾರದಿಂದ ನೀಡುವುದಾಗಿ ಹಾಗೂ ಇತ್ತೀಚೆಗೆ ಮೀನುಗಾರಿಕೆಗೆ ತೆರಳಿದ್ದ ದೋಣಿ ದುರಂತದಲ್ಲಿ ಗಾಯಗೊಂಡವರಿಗೆ ತಲಾ ರೂ.25000/- ಪರಿಹಾರ ದೊರಕಿಸುವುದಾಗಿ ಅವರು ತಿಳಿಸಿದರು.
ಇತ್ತೀಚಿನ ದೋಣಿ ದುರಂತಗಳಿಗೆ ನವಮಂಗಳೂರು ಬಂದರು ಅಧಿಕಾರಿಗಳೇ ಕಾರಣವಾಗಿರುವ ಅಂಶ ಗಮನಕ್ಕೆ ಬಂದಿದ್ದು,ಈ ಅಪಾದನೆಯ ಬಗ್ಗೆ ತನಿಖೆ ನಡೆಸುವುದಾಗಿಯೂ ತಿಳಿಸಿದರು.
ಸರ್ಕಾರ ಮಿನುಗಾರರ ಸಂಕಷ್ಟಕ್ಕೆ ಸ್ಪಂದಿಸಿ ಕಾರ್ಯ ನಿರ್ವಹಿಸುತ್ತಿದ್ದು, 10 ಕೋಟಿ ರೂ.ವೆಚ್ಚದಲ್ಲಿ ರಾಜ್ಯದ ಎಲ್ಲಾ ಮೀನುಗಾರಿಕಾ ಬಂದರುಗಳ ಡ್ರೆಜ್ಜಿಂಗ್ ಕಾರ್ಯ ಕೈಗೊಳ್ಳಲು ಹಣ ಬಿಡುಗಡೆ ಮಾಡಿದೆ. ಮಳೆ ಕಡಿಮೆಯಧ ಕೂಡಲೇ ತುರ್ತಾಗಿ ಈ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದ ಅವರು ಶಾಶ್ವತ ಕಾಮಗಾರಿಗಳನ್ನು ಮಾಡುವ ಮೂಲಕ ಮೀನುಗಾರರಿಗೆ ಶಾಶ್ವತ ಪರಿಹಾರಗಳನ್ನು ಕಲ್ಪಿಸಲಾಗುತ್ತಿದೆ,ಡ್ರೆಜ್ಜರನ್ನು ಸಹ ಖರೀದಿಸಲಾಗುವುದೆಂದು ತಿಳಿಸಿದರು.
ದೇಶದ ರಫ್ತು ಉದ್ಯಮದಲ್ಲಿ ಪ್ರಮುಖ ಪಾತ್ರ ವಹಿಸಿರುವ ಮೀನುಗಾರಿಕೆ ಹಾಗೂ ಮೀನುಗಾರರ ಬಗ್ಗೆ ತಮಗೆ ಅಪಾರ ಗೌರವವಿದ್ದು,ಅವರ ಎಲ್ಲಾ ಸಮಸ್ಯೆ ಪರಿಹರಿಸಲು ತಾವು ಪ್ರಮಾಣಿಕ ಪ್ರಯತ್ನ ಮಾಡುವುದಾಗಿ ತಿಳಿಸಿದರು.
ಮಂಗಳೂರು ಮೀನುಗಾರರ ಬಹುದಿನಗಳ ಬೇಡಿಕೆಯಾದ ಅಳಿವೆ ಬಾಗಿಲಿನಲ್ಲಿ ಹೂಳು ತೆಗೆಯಲು ಕ್ರಮ ಕೈಗೊಳ್ಳಲಾಗಿದೆ.ಬಂದರುಗಳ ಅಭಿವೃದ್ದಿ ಕಾರ್ಯ ಒಳಗೊಂಡಂತೆ ಎಲ್ಲಾ ಪ್ರಮುಖ ನಿರ್ಧಾರಗಳನ್ನು ಶೀಘ್ರದಲ್ಲೇ ಕೈ ಗೊಳ್ಳುವಂತಾಗಲು ಬಂದರು ಮೆರಿ ಟೈಮ್ ಬೋಡ್ರ್ ಸ್ಥಾಪಿಸಲಾಗಿದೆ ಎಂದರು. ರಾಜ್ಯದಲ್ಲಿ 19900 ಬೋಟುಗಳಿದ್ದು ಇವುಗಳಿಂದ 4ಲಕ್ಷ ಟನ್ ನಷ್ಟು ಮೀನುಗಳನ್ನು ಹಿಡಿಯಲಾಗುತ್ತಿದೆ, ಮಂಗಳೂರಿನಲ್ಲಿ ಸುಮಾರು 2000 ಬೋಟುಗಳಿಂದ 1.13ಲಕ್ಷ ಟನ್ ಮೀನು ಸಂಗ್ರಹ ಮಾಡಲಾಗುತ್ತಿದೆ. ಮೀನುಗಾರಿಕೆ ದೋಣಿಗಳಿಗೆ ಈಗ ನೀಡಲಾಗುತ್ತಿರುವ ರಿಯಾಯ್ತಿ ದರದ ಡೀಸೆಲ್ ಪ್ರಮಾಣವನ್ನು ಹೆಚ್ಚಿಸಲುಮೀನುಗಾರಿಕೆ ಸಂಘಗಳು ಮನವಿ ಮಾಡಿದ್ದು, ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು ದೊರಕಿಸುವುದಾಗಿ ತಿಳಿಸಿದರು.ಕರ್ನಾ ಟಕ ಸರ್ಕಾರ ಮೀನು ಗಾರ ರಿಗೆ ಅನೇಕ ಸೌಲಭ್ಯ ಗಳನ್ನು ನೀಡು ತ್ತಿದ್ದು ಇವು ಗಳನ್ನು ಪಡೆ ಯುವಲ್ಲಿ ಮೀನು ಗಾರರ ಲ್ಲದವರು ಸೌಲಭ್ಯ ಗಳನ್ನು ಪಡೆ ಯಲು ಹವಣಿ ಸುತ್ತಿ ರುತ್ತಾರೆ, ಆದ್ದ ರಿಂದ ಮೀನು ಗಾರರು ಎಚ್ಚೆತ್ತು ಕೊಂಡು ತಮ್ಮ ಸೌಲ ಭ್ಯಗ ಳನ್ನು ಸದು ಪಯೋ ಗಪಡಿ ಸಿಕೊ ಳ್ಳಲು ಕಿವಿ ಮಾತು ಹೇಳಿದರು.
ಸ್ಥಳಿಯ ಶಾಸಕರೂ, ವಿಧಾನಸಭೆ ಉಪಾಧ್ಯಕ್ಷರಾದ ಎನ್.ಯೋಗೀಶ್ ಭಟ್ ಅವರು ಮಾತನಾಡಿ ಮಾನವೀಯತೆಯಿಂದ ನವಮಂಗಳೂರು ಅಧಿಕಾರಿಗಳು ವರ್ತಿಸಿದ್ದರೆ, 6 ಜನರ ಅಮೂಲ್ಯ ಜೀವಗಳ ರಕ್ಷಣೆ ಆಗುತ್ತಿತ್ತು ಎಂದ ಅವರು ಈ ಬಗ್ಗೆ ರಾಜ್ಯ ಸರ್ಕಾರ ಇನ್ನು ಮುಂದೆ ಹೀಗಾಗದಂತೆ ಕ್ರಮ ವಹಿಸುವುದೆಂದು ತಿಳಿಸಿದರು.
ಸಭೆಯಲ್ಲಿ ಮೀನುಗಾರರ ಸಂಘದ ಮುಖಂಡರುಗಳಾದ ನವೀನ್ ಕರ್ಕೇರಾ,ಉಮೇಶ್ ಕರ್ಕೇರಾ,ಕರ್ನಾಟಕ ಮೀನುಗಾರರ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್,ಮೀನುಗಾರಿಕಾ ಉಪನಿರ್ದೇಶಕರಾದ ಸುರೇಶ್ ಕುಮಾರ್, ಬಂದರು ಮಂಡಳಿ ಅಧ್ಯಕ್ಷ ಕ್ಯಾಪ್ಟನ್ ಮೋಹನ್ ಮುಂತಾದವರು ಉಪಸ್ಥಿತರಿದ್ದರು.