
ಈ ಕಾರ್ಯಕ್ರಮದ ಉದ್ದೇಶ ಪ್ರತೀ ಗ್ರಾಮದಲ್ಲಿ ಲಸಿಕೆಯಿಂದ ವಂಚಿತ ಮಕ್ಕಳು ಇಲ್ಲದಂತೆ ನೋಡಿಕೊಳ್ಳಲು ಎಲ್ಲರ ಜವಾಬ್ದಾರಿ ಇದೆ ಎಂಬ ಸಂದೇಶ ತಲುಪಿಸುವುದಾಗಿದೆ. ಆಯಾ ಗ್ರಾಮಗಳ ಎಲ್ಲ ಚುನಾಯಿತ ಪ್ರತಿನಿಧಿಗಳು, ಜನಪ್ರತಿನಿಧಿಗಳು, ಆರೋಗ್ಯ, ನೈರ್ಮಲ್ಯ ಸಮಿತಿ ಸದಸ್ಯರು, ಆರೋಗ್ಯ ರಕ್ಷಾ ಸಮಿತಿ ಸದಸ್ಯರು, ಸ್ಥಳೀಯ ಶಿಕ್ಷಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ, ಸ್ವಸಹಾಯಸಂಘಗಳು, ಯುವಶಕ್ತಿ, ಸಂಘಟನೆಗಳು, ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು.
ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಜರುಗುವ ಸಮುದಾಯ ಆರೋಗ್ಯ ದಿನಾಚರಣೆಯಲ್ಲಿ ಭಾಗವಹಿಸಿ ಆರೋಗ್ಯ ಕೇಂದ್ರಗಳಲ್ಲಿ ತರಬಹುದಾದ ಸುಧಾರಣೋಪಾಯಗಳ ಬಗ್ಗೆ ಚರ್ಚಿಸಿ ತೀರ್ಮಾನಿಸಬೇಕೆಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ತಿಳಿಸಿದ್ದಾರೆ.