Friday, September 23, 2011

8-9 ತಿಂಗಳಲ್ಲಿ ರಾಜ್ಯದ ಎಲ್ಲರಿಗೂ 'ಆಧಾರ್ ' ; ಪಿ.ಎಸ್.ರವೀಂದ್ರನ್

ಮಂಗಳೂರು,ಸೆಪ್ಟೆಂಬರ್.23:ಕರ್ನಾಟಕ ರಾಜ್ಯದ ಎಲ್ಲಾ ಜನತೆ `ಆಧಾರ್'ವಿಶೇಷ ಗುರುತಿನ ಸಂಖ್ಯೆಯನ್ನು ಹೊಂದುವಂತೆ ರಾಜ್ಯ ಇ-ಆಡಳಿತ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ, ಡಿ. ಎಸ್. ರವೀಂದ್ರನ್ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ. ಮಂಗ ಳೂರಿನ ಜಿಲ್ಲಾ ಧಿಕಾರಿ ಕಚೇರಿ ಯಲ್ಲಿಂದು ನಡೆದ ಮಾ ದ್ಯಮ ಗೋಷ್ಠಿ ಯಲ್ಲಿ ಅವರು ಮಾತ ನಾಡು ತ್ತಿದ್ದರು.ಆಧಾರ್ ಗುರುತಿನ ಚೀಟಿ ಯೋಜನೆ ಸಂ ಪೂರ್ಣ ಉಚಿತ ವಾಗಿದ್ದು,'ಆಧಾರ್' ಗಾಗಿ ರಾಜ್ಯ ದಲ್ಲಿ 7 ಸಾವಿರ ಸ್ಟೇಷನ್ ಗಳು ಕಾರ್ಯ ನಿರ್ವ ಹಿಸಲಿವೆ. ದಕ್ಷಿಣ ಕನ್ನಡ ದಲ್ಲಿ 225 ಸ್ಟೇಷನ್ ಗಳನ್ನು ಸ್ಥಾಪಿಸ ಲಾಗುವುದು. ರಾಜ್ಯದ ಎಲ್ಲಾ ನಾಗರಿಕರಿಗೂ 12 ಅಂಕಿಗಳ ಈ ಸಂಖ್ಯೆಯನ್ನು ನೀಡಲು ಸರಕಾರ ಉದ್ದೇಶಿಸಿದೆ. ರಾಜ್ಯದಲ್ಲಿ ಈಗಾಗಲೇ ಆರಂಭವಾಗಿರುವ ಈ ಯೋಜನೆಗೆ ಉತ್ತಮವಾದ ಪ್ರತಿಕ್ರಿಯೆ ಜನರಿಂದ ವ್ಯಕ್ತವಾಗಿದೆ.ಯಾವುದೇ ಶುಲ್ಕವನ್ನು ಸಾರ್ವಜನಿಕರಿಂದ ಪಡೆಯಲಾಗುತ್ತಿಲ್ಲ,ಸಾರ್ವಜನಿಕರು ಅದಕ್ಕೆಂದು ಸ್ಥಾಪಿಸಲಾದ ಕೇಂದ್ರಗಳಿಗೆ ತೆರಳಿ ಅರ್ಜಿ ನಮೂನೆಯನ್ನು ಪಡೆದು,ಅದರಲ್ಲಿ ಸರಿಯಾದ ಮಾಹಿತಿಯನ್ನು ಭರ್ತಿಮಾಡಿದ ಬಳಿಕ ಭಾವಚಿತ್ರ, ಅಕ್ಷಿ ಪಟಲದ ಸ್ಕ್ಯಾನ್ ಮತ್ತು ಬೆರಳಚ್ಚು ನೀಡಿದರಾಯಿತು. ಈ ಪ್ರಕ್ರಿಯೆ ನಡೆದ 60 ದಿನಗಳಲ್ಲಿ ಆಧಾರ್ ಸಂಖ್ಯೆಯನ್ನು ಅಂಚೆಯ ಮೂಲಕ ಮನೆಗೆ ತಲುಪಿಸಲಾಗುತ್ತದೆ ಎಂದರು.ಈಗಾಗಲೇ ರಾಜ್ಯದ 68 ಲಕ್ಷ ನಾಗರಿಕರು ಆಧಾರ್ ಸಂಖ್ಯೆಯನ್ನು ಪಡೆದಿದ್ದಾರೆ. 8-9 ತಿಂಗಳಲ್ಲಿ ರಾಜ್ಯದ ಎಲ್ಲರಿಗೂ ಆಧಾರ್ ಸಂಖ್ಯೆಯನ್ನು ಒದಗಿಸುವುದು ಸರಕಾರದ ಉದ್ದೇಶವಾಗಿದೆ ಎಂದು ರವೀಂದ್ರನ್ ಹೇಳಿದರು. ನವಜಾತ ಶಿಶುವಿನಿಂದ ಮೊದಲ್ಗೊಂಡು ವಯೋವೃದ್ಧರೂ ಸೇರಿದಂತೆ ಎಲ್ಲರೂ ಆಧಾರ್ ಸಂಖ್ಯೆಯನ್ನು ಪಡೆಯುವ ಅಧಿಕಾರ ಹೊಂದಿದ್ದಾರೆ. ರಾಜ್ಯ ಸರ್ಕಾರದ ಹಾಗೂ ಖಾಸಗಿ ಸೇವೆಗಳನ್ನು ಪಡೆಯಲು ಈ ಸಂಖ್ಯೆಯನ್ನು ಹೊಂದಿರುವುದು ಕಡ್ಡಾಯವಾಗಿದ್ದು, ಭವಿಷ್ಯದಲ್ಲಿ ಇನ್ನಷ್ಟು ಸೇವೆಗಳನ್ನು ಪಡೆಯಲು ಈ ಆಧಾರ್ ಸಂಖ್ಯೆ ಒಂದು ಪ್ರಮುಖ ದಾಖಲೆಯಾಗಲಿದೆ ಎಂದು ಅವರು ಹೇಳಿದರು.
ಜಿಲ್ಲಾಧಿಕಾರಿ ಡಾ.ಎನ್ ಎಸ್ ಚನ್ನಪ್ಪ ಗೌಡ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್,ಪ್ರಾಜೆಕ್ಟ್ ಡೈರಕ್ಟರ್ ಟಿ ಪ್ರಭಾಕರ್, ಯು ಡಿ ಅಧಿಕಾರಿ ಅಶೋಕ್ ಲೆನಿನ್, ಅಪರ ಜಿಲ್ಲಾಧಿಕಾರಿ ಕೆ ಟಿ ಕಾವೇರಿಯಪ್ಪ, ಮಹಾನಗರ ಪಾಲಿಕೆ ಕಮಿಷನರ್ ಡಾ.ಹರೀಶ್ ಕುಮಾರ್ ಉಪಸ್ಥಿತರಿದ್ದರು.ಬಳಿಕ ಎಲ್ಲ ಅಧಿಕಾರಿ ಗಳಿಗೆ ಆಯೋಜಿ ಸಲಾದ ಕಾರ್ಯಾ ಗಾರದಲ್ಲಿ ಮಾಹಿತಿ ನೀಡಿದ ರವೀಂದ್ರನ್ ಅವರು, ಆಧಾರ ಪ್ರಕ್ರಿಯೆಯಲ್ಲಿ ಅಧಿಕಾರಿಗಳ ಹೊಣೆಯ ಬಗ್ಗೆ ವಿವರಿಸಿದರು. ಟಿ.ಪ್ರಭಾಕರ್ ಅವರು ಎಲ್ಲ ಅಧಿಕಾರಿಗಳು ಸಮಯಮಿತಿಯೊಳಗೆ ಯೋಜನೆ ಮುಗಿಸಲು ನೆರವಾಗಬೇಕೆಂದರು. ಜಿಲ್ಲಾಡಳಿತದಿಂದ ಅನುಷ್ಠಾನಗೊಂಡ ಆಧಾರ್ ಯೋಜನೆಯಡಿ ಪತ್ರಕರ್ತ ಜೈ ದೀಪ್ ಶೆಣೈ ಪ್ರಥಮವಾಗಿ ತಮ್ಮ ಹೆಸರನ್ನು ನೋಂದಾಯಿಸಿದರು.