6 ರಿಂದ 8ನೇ ತರಗತಿ ವರೆಗಿನ ಹೆಣ್ಣು ಮಕ್ಕಳಲ್ಲಿ ಅರೋಗ್ಯ ರಕ್ಷಣೆಯ ಬಗ್ಗೆ ಜಾಗೃತಿ ಹಾಗೂ ಆರೋಗ್ಯದ ಬಗ್ಗೆ ತಿಳುವಳಿಕೆ, ವಿಶ್ವಾಸ ಮೂಡಿಸುವ ಉದ್ದೇಶದಿಂದ ಕಿಶೋರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮ ಪ್ರತಿ ಶಾಲೆಯಲ್ಲಿ ಶನಿವಾರ ಮಧ್ಯಾಹ್ನ ಮತ್ತು ಭಾನುವಾರ ನಡೆಯಲಿದೆ ಎಂದರು.
ಲಾಯಿಲದಲ್ಲಿ ಐಸಿರಿ ಸ್ವ ಸಹಾಯ ಗುಂಪಿ ನವರು ತಯಾರಿಸುತ್ತಿರುವ `ಸೇಫ್ಟಿ' ನ್ಯಾಪ್ಕಿನ್ ಪ್ಯಾಡ್ ನ ಘಟಕ ಮಹತ್ವಾಕಾಂಕ್ಷೆಯ ಯೋಜನೆ ಯಾಗಿದೆ. ಇದಕ್ಕೆ ನಬಾರ್ಡ್ ರೂ.7.33 ಲಕ್ಷ ಅನುದಾನ ಒದಗಿಸಿದೆ. ನಬಾರ್ಡನ ನೆರವನ್ನು ಭವಿಷ್ಯದಲ್ಲೂ ಹಲವು ಯೋಜನೆಗಳಿಗೆ ಪಡೆಯ ಲಾಗುವುದು ಎಂದರು. ರೂ.4.33 ಲಕ್ಷವನ್ನು ಗುಂಪಿಗೆ ಅನುದಾನ ನೀಡಲಾಗಿದೆ.
5 ನ್ಯಾಪ್ಕಿನ್ ಗಳ ಒಂದು ಪ್ಯಾಕೇಟಿಗೆ ರೂ.15ರಂತೆ ಮಾರಾಟ ದರ ನಿಗದಿ ಪಡಿಸಲಾಗಿದೆ. ಜಿಲ್ಲೆಯಲ್ಲಿ ವಿವಿಧ ಇಲಾಖೆಗಳ 50 ವಿದ್ಯಾರ್ಥಿನಿ ನಿಲಯಗಳಿದ್ದು ಸುಮಾರು 3,745 ವಿದ್ಯಾರ್ಥಿ ನಿಯರಿದ್ದಾರೆ. ಜಿಲ್ಲೆಯಲ್ಲಿ 12 ವರ್ಷ ಮೀರಿದ ಸುಮಾರು 79 ಸಾವಿರ ವಿದ್ಯಾರ್ಥಿನಿಯರಿದ್ದಾರೆ. ಸ್ವ ಸಹಾಯ ಸಂಘದ 52 ಸಾವಿರ ಮಹಿಳೆಯರಿದ್ದಾರೆ. ಇವರು ನ್ಯಾಪ್ಕಿನ್ ಬಳಕೆ ಮೂಲಕ ಆರೋಗ್ಯ ಕಾಳಜಿ ವಹಿಸುವರಲ್ಲದೆ, ಮಾರುಕಟ್ಟೆ ಯನ್ನು ವಿಸ್ತರಿಸುವರೆಂಬ ಭರವಸೆ ಇದೆ. ಇದಲ್ಲದೆ ಸರಕಾರಿ ಆಸ್ಪತ್ರೆಗಳಲ್ಲಿ ಮತ್ತು ಔಷಧಿ ಅಂಗಡಿಗಳಲ್ಲಿ ನ್ಯಾಪ್ಕಿನ್ ಸಿಗುವಂತೆ ವ್ಯವಸ್ಥೆ ಮಾಡಲಾಗುವುದು ಎಂದು ವಿಜಯಪ್ರಕಾಶ್ ನುಡಿದರು.
ಇಷ್ಟೇ ಅಲ್ಲದೆ ವಿದ್ಯಾರ್ಥಿನಿ ನಿಲಯಗಳಿಗೆ ಈ ನ್ಯಾಪ್ಕಿನ್ ಪ್ಯಾಕೆಟ್ಗಳನ್ನು ರೂ.12ಕ್ಕೆ ಒದಗಿಸ ಲಾಗುವುದು. ಪ್ರಸ್ತುತ ಬೆಂಗಳೂರಿನಿಂದ ರೂ.18ಕ್ಕೆ ಖರೀದಿಸ ಲಾಗುತ್ತಿದ್ದು `ಸೇಫ್ಟಿ' ನ್ಯಾಪ್ಕಿನ್ ಒದಗಿಸುವ ಮೂಲಕ ಇಲಾಖೆಗಳಿಗೆ ಆರ್ಥಿಕ ಲಾಭವನ್ನು ತಂದುಕೊಡಲಾಗುವುದು ಎಂದವರು ಹೇಳಿದರು.
ವಿನೂತನ ನ್ಯಾಪ್ಕಿನ್ ವೆಂಡಿಂಗ್ ಯಂತ್ರ ಮತ್ತು ನ್ಯಾಪ್ಕಿನ್ ಡಿಸ್ಪೋಸಲ್ ವ್ಯವಸ್ಥೆ ಹೊಂದಿರುವ ವಿಶೇಷ ಶೌಚಾಲ ಯಗಳನ್ನು ವಿದ್ಯಾರ್ಥಿನಿ ಯರಿಗಾಗಿ ಸ್ಥಾಪಿಸಲಾಗುವುದು ಎಂದ ವಿಜಯಪ್ರಕಾಶ್, ಈಗಾಗಲೇ ಜಿಲ್ಲೆಯ 57 ಶಾಲೆಗಳಲ್ಲಿ ರೂ.1.83 ಲಕ್ಷದ ಶೌಚಾಲ ಯಗಳನ್ನು ಅಳವಡಿಸುವ ಯೋಜನೆಯಿದೆ. ಇದರ ವಿಶೇಷತೆ ಏನೆಂದರೆ ಇದರಲ್ಲಿ ಉಪಯೋಗಿ ಸಲ್ಪಟ್ಟ ನ್ಯಾಪ್ಕಿನ್ ಗಳನ್ನು ನಾಶ ಮಾಡಲು ಬರ್ನರ್ ಅನ್ನು ಅಳವಡಿಸಲಾಗುವುದು. ಈ ಮಾದರಿಯ ಮೊದಲ ಶೌಚಾಲ ಯವನ್ನು ಕರ್ನೊಡಿ ಶಾಲೆಯಲ್ಲಿ ಸ್ಥಾಪಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಜಿಪಂ ಅಧ್ಯಕ್ಷೆ ಶೈಲಜಾ ಭಟ್, ನಬಾರ್ಡ್ ಎಜಿಎಂ ಪ್ರಸಾದ್ ರಾವ್, ಗ್ರಾಪಂ ಅಧ್ಯಕ್ಷ ಸುಧಾಕರ್ ಮತ್ತಿತರರು ಉಪಸ್ಥಿತರಿದ್ದರು.