Wednesday, February 29, 2012

ಕುಡಿಯುವ ನೀರು ಒದಗಿಸಲು ರೂ.120.9 ಲಕ್ಷ ಕ್ರಿಯಾ ಯೋಜನೆ- ಶೈಲಜಾಭಟ್.

ಮಂಗಳೂರು,ಫೆಬ್ರವರಿ.29:ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೊಂದರೆ ಆಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾ ಪಂಚಾಯತ್ ವತಿಯಿಂದ ಕೈಗೊಳ್ಳಲಾಗಿದ್ದು ಈಗಾಗಲೆ ರೂ. 120.9ಲಕ್ಷಗಳ ಕ್ರಿಯಾಯೋಜನೆಯನ್ನು ತಯಾರಿಸಿ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ.ಟಿ. ಶೈಲಜಾ ಭಟ್ ಅವರು ಇಂದು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ತಿಳಿಸಿದರು.
ಈಗಿರುವ ದುರಸ್ತಿ ಯಾಗ ಬೇಕಾದ ಕೊಳವೆ ಬಾವಿ ಗಳನ್ನು ಆಧ್ಯತೆ ಮೇಲೆ ಕೈ ಗೊಳ್ಳ ಬಹು ದಾಗಿದ್ದು ಒಂದು ವೇಳೆ ಅವು ದುರಸ್ತಿ ಪಡಿ ಸಲು ಆಗದಿ ದ್ದಲ್ಲಿ ಮಾತ್ರ ಹೊಸ ಕೊಳವೆ ಬಾವಿ ಗಳನ್ನು ಕೊರೆ ಸಲು ಸರ್ಕಾರ ಅವಕಾಶ ಕಲ್ಪಿ ಸಿದೆ ಎಂದು ಮುಖ್ಯ ಕಾರ್ಯ ನಿರ್ವಹ ಣಾಧಿ ಕಾರಿ ಡಾ ಕೆ.ಎನ್.ವಿಜಯ ಪ್ರಕಾಶ್ ತಿಳಿಸಿದ್ದಾರೆ.
ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನದಲ್ಲಿ ಜಿಲ್ಲೆಯಲ್ಲಿ ಅನಗತ್ಯ ವಿಳಂಬಗಳಾಗುತ್ತಿರುವ ಬಗ್ಗೆ ಕೆಲವು ಸದಸ್ಯರು ಸಭೆಯ ಅಧ್ಯಕ್ಷರ ಗಮನಕ್ಕೆ ತಂದು ಅವುಗಳನ್ನು ಕೂಡಲೇ ಪರಿಹರಿಸಲು ಕಂದಾಯ ಅಧಿಕಾರಿಗಳನ್ನು ಸಭೆಗೆ ಕರೆಸುವಂತೆ ಒತ್ತಾಯಿಸಿದ ಮೇರೆಗೆ ಸಭೆಯಲ್ಲಿ ಹಾಜರಿದ್ದ ಮಂಗಳೂರು ತಹಸೀಲ್ದಾರರು ಮಾತನಾಡಿ 2011ರ ಜನವರಿಯಿಂದ ಜಿಲ್ಲೆಯಲ್ಲಿ ಕಂದಾಯ ಅದಿಕಾರಿಗಳು ಮನೆಮನೆಗೆ ಭೇಟಿ ನೀಡಿ ಸಾಮಾಜಿಕ ಭದ್ರತೆ ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವವರ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಈಗಾಗಲೇ ವರದಿಯೊಂದನ್ನು ಸಲ್ಲಿಸಿದ್ದು ಅದರಂತೆ ಕೆಲವರ ಮಾಸಾಶನಗಳು ತಡೆಹಿಡಿಯಲಾಗಿದೆ, ಉಳಿದಂತೆ ಇತರರ ಮಾಸಾಶನಗಳು ಎಂದಿನಂತೆ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಕೊರ ಗರು ಜಾತಿ ದೃಢೀ ಕರಣ ಸೇರಿ ದಂತೆ ಇತರೆ ಸರ್ಕಾರಿ ಸೌಲಭ್ಯ ಗಳನ್ನು ಪಡೆಯಲು ತೊಂ ದರೆ ಆಗು ತ್ತಿರುವ ಬಗ್ಗೆ ಅಧ್ಯಕ್ಷರ ಗಮನ ಸೆಳೆ ದಾಗ ಈ ಬಗ್ಗೆ ಉತ್ತ ರಿಸಿದ ಜಿಲ್ಲಾ ಪಂಚಾ ಯಿತಿ ಉಪ ಕಾರ್ಯ ದರ್ಶಿ ಶಿವ ರಾಮೆ ಗೌಡರು, ಕೊರಗರು ಅಥವಾ ಇನ್ನಿತರೆ ಜನಾಂಗದವರು ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರವಾಗಿ ಮೂಲ ಧರ್ಮದ ಅಡಿಯಲ್ಲಿ ಸೌಲಭ್ಯಗಳನ್ನು ಪಡೆಯಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ಆದರೆ ಅವರು ಸ್ವ ಇಚ್ಚೆಯಿಂದ ಮರಳಿ ಮೂಲ ಧರ್ಮಕ್ಕೆ ಬಂದಲ್ಲಿ ಅವರಿಗೆ ಎಲ್ಲಾ ಸೌಲಭ್ಯಗಳು ದೊರೆಯಲಿದೆ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಶಾಸಕರಾದ ಯು.ಟಿ ಖಾದರ್,ಬಿ.ರಮಾನಾಥ ರೈ, ಉಪಾಧ್ಯಕ್ಷೆ ಶ್ರೀಮತಿ ಧನಲಕ್ಷ್ಮಿ ಜನಾರ್ದನಗೌಡ ಮುಂತಾದವರು ಹಾಜರಿದ್ದರು.

ನಿರ್ಮಲಗ್ರಾಮ ಪುರಸ್ಕಾರಕ್ಕೆ ಜಿಲ್ಲೆ ಆಯ್ಕೆ-ಡಾ.ವಿಜಯಪ್ರಕಾಶ್.

ಮಂಗಳೂರು,ಫೆಬ್ರವರಿ.29: ದಕ್ಷಿಣ ಕನ್ನಡ ಜಿಲ್ಲೆ ನಿರ್ಮಲ ಗ್ರಾಮ ಪುರಸ್ಕಾರಕ್ಕೆ ಅಯ್ಕೆಯಾದ ಜಿಲ್ಲೆಯಾಗಿದ್ದು, ನಿರ್ಮಲ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ರಾಜ್ಯದ ಪ್ರಥಮ ಜಿಲ್ಲೆ ಎಂಬ ಹೆಗ್ಗಳಿಕೆಗೆ ಜಿಲ್ಲೆ ಪಾತ್ರವಾಗಿದೆ.
ಪುರಸ್ಕಾರ ವಿಜೇತ ಜಿಲ್ಲೆಗೆ ಕೇಂದ್ರ ಸರ್ಕಾರ ರೂ 50ಲಕ್ಷ ಬಹುಮಾನವನ್ನು ನೀಡಲಿದೆ ಎಂದು ಇಂದು ಜಿಲ್ಲಾ ಪಂಚಾಯತ್ ಮುಖ್ಯಕಾರ್ಯನಿರ್ವಹಣಾದಿಕಾರಿ ಡಾ! ಕೆ.ಎನ್. ವಿಜಯಪ್ರಕಾಶ್ ಹರ್ಷೋದ್ಗಾರಗಳ ನಡುವೆ ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಘೋಷಿಸಿದರು.
ಜಿಲ್ಲೆಯ 203ಗ್ರಾಮ ಪಂಚಾಯತ್ ಗಳಿಗೆ ನಿರ್ಮಲ ಗ್ರಾಮ ಪುರಸ್ಕಾರ ಈಗಾಗಲೆ ಲಭ್ಯವಾಗಿದ್ದು, ಇದೀಗ ಜಿಲ್ಲೆಗೆ ಜಿಲ್ಲಾ ಮಟ್ಟದ ಪುರಸ್ಕಾರವೂ ಲಭ್ಯವಾಗಿದೆ ಎಂದು ಅವರು. ತಿಳಿಸಿದರು.
2009ರಲ್ಲಿ ಜಿಲ್ಲೆಯ ಪುತ್ತೂರು, ಬಂಟ್ವಾಳ ಮತ್ತು ಬೆಳ್ತಂಗಡಿ ತಾಲ್ಲೂಕುಗಳು ಬ್ಲಾಕ್ ಮಟ್ಟದಲ್ಲಿ ಪುರಸ್ಕಾರಗಳನ್ನು ಪಡೆದಿದ್ದರೆ 2011ರಲ್ಲಿ ಸುಳ್ಯ ಮತ್ತು ಮಂಗಳೂರು ತಾಲ್ಲೂಕುಗಳು ಬ್ಲಾಕ್ ಮಟ್ಟದ ಪುರಸ್ಕಾರ ಪಡೆಯುವ ಮೂಲಕ ಇಡೀ ಜಿಲ್ಲೆಯೇ ನಿರ್ಮಲಗ್ರಾಮ ಪುರಸ್ಕಾರ ಪಡೆದ ಏಕೈಕ ಜಿಲ್ಲೆ ದಕ್ಷಿಣ ಕನ್ನಡ ಜಿಲ್ಲೆ ಎಂಬುದಾಗಿ ಅವರು ತಿಳಿಸಿದರು.

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ: ವಿವಿಧ ಘಟಕಗಳ ಸ್ಥಾಪನೆಗೆ ಸಹಾಯಧನ

ಮಂಗಳೂರು,ಫೆಬ್ರವರಿ.29:ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗು ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿಯಡಿ ಫಲಾನುಭವಿ ಆಧಾರಿತ ಕಾರ್ಯಕ್ರಮಗಳನ್ನು ಕೈಗೊಳ್ಳಲು ಮುಂದೆ ಬರುವ ಫಲಾನುಭವಿಗಳಿಗೆ ಸಹಾಯಧನ ಪಡೆಯಲು ಇಚ್ಚಿಸುವವರು ಆಯಾ ತಾಲ್ಲುಕು ಪಶುಪಾಲನಾ ಸಹಾಯಕ ನಿರ್ದೇಶಕರಿಗೆ ದಿನಾಂಕ 05-3-2012 ರೊಳಗಾಗಿ ಅರ್ಜಿಗಳನ್ನು ಸಲ್ಲಿಸುವಂತೆ ಉಪನಿರ್ದೇಶಕರು ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಕುಕ್ಕುಟ ಅಭಿವೃದ್ದಿ ಯೋಜನೆ; ವಾಣಿಜ್ಯ ಮೊಟ್ಟೆ ಕೋಳಿ ಸಾಕಾಣಿಕೆಗೆ ಪ್ರೋತ್ಸಾಹ ನೀಡುವ ದಿಸೆಯಲ್ಲಿ ದಿನಕ್ಕೆ ಸರಾಸರಿ 800 ಮೊಟ್ಟೆ ಉತ್ಪಾದಿಸಲು ವಾಣಿಜ್ಯ ಕೋಳಿ (ಕನಿಷ್ಟ 1000 ವಾಣಿಜ್ಯ ಮೊಟ್ಟೆ ಕೋಳಿ) ಘಟಕ ಸ್ಥಾಪಿಸಲು ರೈತರಿಗೆ/ಗ್ರಾಮೀಣ ಯುವಕರಿಗೆ ಘಟಕದ ವೆಚ್ಚ 7.50ಲಕ್ಷದಲ್ಲಿ ರೂ.1.00ಲಕ್ಷ ಸಹಾಯಧನ/ಪ್ರೋತ್ಸಾಹ ಧನ, ಇನ್ನುಳಿದ ರೂ.6.50ಲಕ್ಷ ಬ್ಯಾಂಕಿನ ಸಾಲ/ಫಲಾನುಭವಿ ವಂತಿಗೆ ಸೇರಿದೆ.
ಹುಲ್ಲುಗಾವಲುಗಳ ಸ್ಥಾಪನೆಗಾಗಿ ರೈತರ ಅನುಪಯುಕ್ತ ಭೂಮಿಯಲ್ಲಿ ಸುಧಾರಿತ ವಿವಿಧ ಮೇವಿನ ಬಳೆ ಮರಗಳನ್ನು 10 ಎಕರೆ ಭೂಮಿಯಲ್ಲಿ ಬೆಳೆಯಲು ಅರ್ಹ ಆಸಕ್ತ ರೈತರಿಗೆ ಘಟಕದ ವೆಚ್ಚ ರೂ.50,000/ದ ಶೇಕಡ 50 ರಷ್ಟು (25,000/-) ಸಹಾಯಧನವಾಗಿ ನೀಡಲಾಗುವುದು.

ವರಾಹ ಅಭಿವೃದ್ದಿ ಯೋಜನೆ ಯಡಿ ಆಧುನಿಕ ಹಂದಿ ಸಾಕಾಣಿಕೆಗೆ ಪ್ರೋತ್ಸಾಹ ನೀಡಲಾ ಗುತ್ತಿದ್ದು ತಳಿ ಸಂವರ್ಧನೆಗೆ ಘಟಕ ವೆಚ್ಚ ರೂ 20,000/- ಸಹಾಯಧನ ರೂ.10,000/-, ಮಿಶ್ರತಳಿ ಅಭಿವೃದ್ದಿ ಘಟಕ ವೆಚ್ಚ ರೂ.3,000/- ಸಹಾಯಧನ ರೂ. 1,500 /- ಮತ್ತು ಮರಿ ಕೊಬ್ಬಿಸುವುದು ಘಟಕ ಸ್ಥಾಪನೆಗೆ ಘಟಕ ವೆಚ್ಚದ ರೂ.6,000/-ಕ್ಕೆ ಸಹಾಯಧನ ರೂ.3,000/- ನೀಡಲಾಗುವುದು.
ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ(ನಿ) ಇವರ ವತಿಯಿಂದ ನಿರುದ್ಯೋಗ ಯುವಕ: ಯುವತಿಯರಿಗೆ: ಸಣ್ಣರೈತರಿಗೆ ಮಾಂಸ ಕೋಳಿ ಕ್ಷೇತ್ರ ಸ್ಥಾಪಿಸಲು ಪ್ರೋತ್ಸಾಹ ನೀಡಲಾಗುತ್ತಿದ್ದು ಇದರ ಘಟಕ ವೆಚ್ಚದ ರೂ.70,000/-ಕ್ಕೆ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಸಹಾಯಧನ ರೂ.17,500/- ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ರೂ.23,100/- ಸಹಾಯಧನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಡಾ.ಕೆ.ಅಶೋಕ್ ಕುಮಾರ್, ಮಂಗಳೂರು ದೂರವಾಣಿ 0824/2492369 ಮೊ.9448124601, ಡಾ. ಸಿ. ನಾಗರಾಜ, ಬಂಟ್ವಾಳ 08255/232512,ಮೊ.9980322369, ಡಾ ಹೆಚ್ .ಸುಧಾಕರ ಶೆಟ್ಟಿ, ಬೆಳ್ತಂಗಡಿ 08256/232067,ಮೊ 9448329065, ಡಾ. ಕೆ. ರಾಮಚಂದ್ರ ಶೆಟ್ಟಿ, ಪುತ್ತೂರು 08251/230664 ಮೊ.9448869129, ಡಾ. ಎಂ.ಎನ್.ರಾಜಣ್ಣ, ಸುಳ್ಯ 08257/230412, ಮೊ.9448725698 ಇವರನ್ನು ಆಯಾ ತಾಲ್ಲುಕುಗಳವರು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.

Monday, February 27, 2012

'ಕೇಂದ್ರ ಸರ್ಕಾರದ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಕ್ಕೆ ತನ್ನಿ'

ಮಂಗಳೂರು,ಫೆಬ್ರವರಿ.27:ಕೇಂದ್ರ ಸರ್ಕಾರದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ವಿವಿಧ ಯೋಜನೆಗಳ ಮೂಲಕ ಬಿಡುಗಡೆಯಾಗಿರುವ ಅನುದಾನವನ್ನು ತ್ವರಿತಗತಿಯಲ್ಲಿ ಬಳಸಿಕೊಂಡು ಯೋಜನೆಗಳು ಸದುಪಯೋಗವಾಗುವಂತೆ ಕ್ರಮ ಕೈಗೊಳ್ಳಬೇಕೆಂದು ದ.ಕ.ಲೋಕಸಭಾ ಕ್ಷೇತ್ರದ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಅವರು ಇಂದು ಜಿಲ್ಲಾ ಪಂಚಾ ಯತ್ ನೇತ್ರಾವತಿ ಸಭಾಂಗ ಣದಲ್ಲಿ ನಡೆದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿದ್ದರು.ಕುಡಿಯುವ ನೀರು ಯೋಜನೆಗಳು, ರಸ್ತೆಗಳು, ಸರ್ವ ಶಿಕ್ಷಣ ಅಭಿಯಾನದಡಿ ಶಾಲಾ ಕೊಠಡಿಗಳ ನಿರ್ಮಾಣ, ಇಂದಿರಾ ಆವಾಜ್ ಯೋಜನೆ ವಸತಿ, ಬಸವ ವಸತಿ ಯೋಜನೆ ಮುಂತಾದ ಯೋಜನೆಗಳ ಅನುಷ್ಠಾನ ಕುರಿತಂತೆ ಪ್ರಗತಿ ಪರಿಶಿಲನೆ ಮಾಡಿದರು.ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳಿಗೆ ವಿಶೇಷವಾಗಿ ವೃದ್ದಾಪ್ಯ ವೇತನದಾರರಿಗೆ ಕ್ಲಪ್ತ ಸಮಯದಲ್ಲಿ ಮಾಸಾಶನ ದೊರಕುವಂತೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ವಿಧಾನಸಭಾ ಉಪಸಭಾಪತಿಗಳಾದ ಎನ್.ಯೋಗೀಶ್ ಭಟ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿಜಯಪ್ರಕಾಶ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.

ನಾಗರಿಕ ಸೇವಾ ಖಾತರಿಗೆ ಸಜ್ಜಾಗಿ: ಪೊನ್ನುರಾಜ್

ಮಂಗಳೂರು,ಫೆಬ್ರವರಿ.27 :ನಾಗರಿಕರಿಗೆ ವಿಳಂಬವಿಲ್ಲದೆ ಸರ್ಕಾರಿ ಸೇವೆಗಳನ್ನು ಒದಗಿಸುವ ದೃಷ್ಟಿಯಲ್ಲಿ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಕರ್ನಾಟಕ ನಾಗರಿಕ ಸೇವಾ ಖಾತರಿ ಅಧಿನಿಯಮ ಮಾರ್ಚ್ ಒಂದರಿಂದ ಅನುಷ್ಠಾನಕ್ಕೆ ಬರಲಿದೆ.
ಅಧಿಕಾರಿಗಳು ಈ ಅಧಿನಿಯಮವನ್ನು ಸಮರ್ಪಕವಾಗಿ ಜಾರಿಗೊಳಿಸಲು ಸನ್ನದ್ಧರಾಗಬೇಕೆಂದು ಅಧಿನಿಯಮ ಅನುಷ್ಠಾನದ ಮಾರ್ಗದರ್ಶಿ ಅಧಿಕಾರಿ ವಿ.ಪೊನ್ನುರಾಜ್ ಹೇಳಿದರು.ಅವ ರಿಂದು ಜಿಲ್ಲಾ ಧಿಕಾ ರಿಗಳ ಕಚೇರಿ ಯಲ್ಲಿ ನಡೆದ ಅಧಿ ಕಾರಿ ಗಳ ಸಭೆ ಯನ್ನು ದ್ದೇಶಿಸಿ ಮಾತ ನಾಡು ತ್ತಿದ್ದರು. ಮುಖ್ಯ ಮಂತ್ರಿ ಗಳ ತವರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂ ಕನ್ನು ಪೈಲಟ್ ಯೋಜನೆ ಯಡಿ ಸೇರಿ ಸಿದ್ದು ಪುತ್ತೂರು ವ್ಯಾ ಪ್ತಿಯ ಕಚೇರಿ ಹಾಗೂ ಅಲ್ಲಿನ ವ್ಯ ವಸ್ಥೆ ಗಳ ಬಗ್ಗೆ ಮಾಹಿತಿ ಯನ್ನು ಅಧಿ ಕಾರಿ ಗಳಿಂದ ಪಡೆದು ಕೊಂಡರು.
ಈಗಾಗಲೇ ಅಧಿಕಾರಿಗಳಿಗೆ ಅಧಿನಿಯಮ ಸಂಬಂಧ ತರಬೇತಿಗಳನ್ನು ಆರಂಭಿಸಲಾಗಿದ್ದು, ಮಂಗಳವಾರ ಜಿಲ್ಲಾ ತರಬೇತಿ ಕೇಂದ್ರದಲ್ಲಿ ತರಬೇತಿ ಆಯೋಜಿಸಲಾಗಿದೆ. ಕಂಪ್ಯೂಟರೀಕರಣಗೊಂಡಿರುವ ಇಲಾಖೆಗಳಲ್ಲಿ ಯೋಜನಾ ಅನುಷ್ಠಾನಕ್ಕೆ ಹೆಚ್ಚಿನ ತೊಂದರೆಯಾಗಲಾರದೆಂದ ಅವರು, ಎಲ್ಲ ಕಚೇರಿಗಳಲ್ಲೂ ಮಾಹಿತಿ ಫಲಕಗಳನ್ನು ಅಳವಡಿಸಬೇಕೆಂದರು.
ವಿವಿಧ ಇಲಾಖೆಗಳ ಅಧಿಕಾರಿಗಳಿಂದ ಪ್ರತಿದಿನ ಸಾರ್ವಜನಿಕರಿಂದ ಸ್ವೀಕರಿಸಲಾಗುವ ಅರ್ಜಿಗಳ ಮಾಹಿತಿ ಪಡೆದ ಪೊನ್ನುರಾಜ್ ಅವರು, ಸೇವೆ ನೀಡುವಲ್ಲಿ ಲೋಪವಾದರೆ ಸಂಬಂಧಪಟ್ಟ ಅಧಿಕಾರಿಗಳು ದಂಡ ಪಾವತಿಸಬೇಕಾಗುತ್ತದೆ. ಹಾಗಾಗಿ ಹೆಚ್ಚಿನ ಕಾಳಜಿಯಿಂದ ಕರ್ತವ್ಯ ನಿರ್ವಹಿಸುವಂತೆ ಸೂಚಿಸಿದರು.
ಪ್ರಸ್ತಾವಿತ ಅಧಿನಿಯಮದಡಿ ಪ್ರತಿಯೊಬ್ಬ ನಾಗರಿಕರು ಅನುಸೂಚಿಯಲ್ಲಿ ನಿರ್ದಿಷ್ಟ ಪಡಿಸಿ ನಿಗದಿ ಮಾಡಿದ ಕಾಲದೊಳಗೆ, ಈ ಅಧಿನಿಯಮಕ್ಕನುಸಾರವಾಗಿ ರಾಜ್ಯದಲ್ಲಿ ನಾಗರಿಕ ಸಂಬಂಧಿ ಸೇವೆಗಳನ್ನು ಪಡೆಯುವ ಹಕ್ಕನ್ನು ಹೊಂದಿರುತ್ತಾರೆ ಎಂಬುದನ್ನು ಎಲ್ಲರೂ ಗಮನದಲ್ಲಿರಿಸಿ ಕೊಳ್ಳಬೇಕು ಎಂದರು. ಸ್ಥಳೀಯ ಪ್ರಾಧಿ ಕಾರ, ಆರೋಗ್ಯ ಇಲಾಖೆ, ಸಾರಿಗೆ ಇಲಾಖೆ, ಕಂ ದಾಯ ಇಲಾಖೆ, ಆಹಾರ ಮತ್ತು ನಾಗ ರಿಕ ಸರಬ ರಾಜು ಇಲಾಖೆ, ಪೊಲೀಸ್ ಇಲಾಖೆ, ಶಿಕ್ಷಣ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಅಧಿಕಾ ರಿಗಳು ಉಪ ಸ್ಥಿತರಿದ್ದು ತಮ್ಮ ಇಲಾಖೆ ಗಳ ಗಣಕೀ ಕರಣ ಮಟ್ಟದ ಬಗ್ಗೆ ಮಾಹಿತಿ ನೀಡಿದರು. ಸಿಇಒ ಡಾ ಕೆ ಎನ್ ವಿಜಯ ಪ್ರಕಾಶ್, ಅಪರ ಜಿಲ್ಲಾಧಿಕಾರಿ ದಯಾನಂದ, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್ ಉಪಸ್ಥಿತರಿದ್ದರು.

Sunday, February 26, 2012

ಬಜೆಟ್ ನಲ್ಲಿ ಯುವಜನತೆಗೆ ಒತ್ತು :ಡಿ.ವಿ.ಸದಾನಂದ ಗೌಡ

ಮಂಗಳೂರು,ಫೆಬ್ರವರಿ.26: ರಾಷ್ಟ್ರದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.40 ಕ್ಕಿಂತಲೂ ಹೆಚ್ಚಿರುವ ಯುವಜನತೆಯ ಕನಸುಗಳನ್ನು ಸಾಕಾರಗೊಳಿಸುವ ದಿಸೆಯಲ್ಲಿ ಕರ್ನಾಟಕ ರಾಜ್ಯ ಯುವ ಜನರಿಗಾಗಿಯೆ ಪ್ರತ್ಯೇಕ ಬಜೆಟ್ ಮಂಡಿಸಲು ಉತ್ಸುಕವಾಗಿದೆ, ಆದರೆ ಇದರ ಸಾಧಕ ಬಾಧಕಗಳನ್ನು ಅಧ್ಯಯನ ಮಾಡಿ ಮುಂದಿನ ವರ್ಷ ಬಜೆಟ್ ನಲ್ಲಿ ಯುವಜನರಿಗಾಗಿ ಪ್ರತ್ಯೆಕ ಬಜೆಟನ್ನು ಮಂಡಿಸಲಾಗುವುದು, ಆದರೆ ಈ ಬಾರಿಯ ಬಜೆಟ್ ನಲ್ಲಿ ಯುವ ಸಮೂಹಕ್ಕೆ ಹೆಚ್ಚಿನ ಒತ್ತು ನೀಡುವುದಾಗಿ ಕರ್ನಾಟಕದ ಮಾನ್ಯಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡರು ತಿಳಿಸಿದ್ದಾರೆ.ಅವರು ಇಂದು ಉಡು ಪಿಗೆ ತೆರ ಳುವ ಮಾರ್ಗ ದಲ್ಲಿ ಮಂಗ ಳೂರು ವಿಮಾನ ನಿಲ್ದಾ ಣದಲ್ಲಿ ಮಾಧ್ಯಮ ಪ್ರತಿ ನಿಧಿ ಗಳೊಂ ದಿಗೆ ಮಾತ ನಾಡು ತ್ತಿದ್ದರು.ದೇಶ ದಲ್ಲಿಯೇ ಪ್ರಥಮ ಬಾರಿಗೆ ರೈ ತಾಪಿ ಜನ ರಿಗಾ ಗಿಯೇ ಪ್ರತ್ಯೇಕ ಬಜೆಟ್ ನೀಡಿದ ಮಾದ ರಿಯ ಲ್ಲಿಯೇ ಯುವ ಜನ ರಿಗೂ ಪ್ರತ್ಯೇಕ ಬಜೆಟ್ ಮಂಡಿ ಸುವು ದಾಗಿ ಅವರು ತಿಳಿ ಸಿದರು.
ಲೋಕಾಯುಕ್ತ ನೇಮಾಕಾತಿ ಬಗ್ಗೆ ರಾಜ್ಯದ ಮುಖ್ಯ ನ್ಯಾಯಮೂರ್ತಿಗಳಿಗೆ, ವಿರೋಧಪಕ್ಷದ ನಾಯಕರಿಗೆ ಎಲ್ಲರಿಗೂ ಸೂಕ್ತ ವ್ಯಕ್ತಿಯನ್ನು ಗುರ್ತಿಸುವಂತೆ ಈಗಾಗಲೆ ಪತ್ರ ಬರೆಯಲಾಗಿದೆ ಎಂದ ಮುಖ್ಯಮಂತ್ರಿಗಳು ಈ ಬಾರಿಯ ಬಜೆಟ್ ಸಮಾಜದ ಎಲ್ಲಾ ವರ್ಗದ ಜನರಿಗೂ ಒಳಿತಾಗುವಂತೆ ಸಿದ್ದಪಡಿಸಲಾಗುತ್ತಿದೆ ಎಂದರು.
ಇದ ಕ್ಕಾಗಿ ಮುಂದಿನ ವಾರ ವಿವಿಧ ರೈತ ಸಂಘ ಗಳ ನಾಯ ಕರ ಜೊತೆ ಬಜೆಟ್ ಕುರಿ ತಂತೆ ಚರ್ಚಿ ಸುವು ದಾಗಿ ತಿಳಿಸಿದ ಅವರು, ಈಗಾ ಗಲೇ ಶೇ.60-65 ರಷ್ಟು ಇಲಾಖೆ ಗಳ ಪರಿ ಶೀಲನೆ ಕಾರ್ಯ ಮುಗಿ ದಿದ್ದು, ಎಲ್ಲಾ ಇಲಾಖೆ ಗಳ ಪರಿ ಶೀಲನೆ ಕಾರ್ಯ ವನ್ನು ನಡೆಸು ವುದಾಗಿ ತಿಳಿಸಿ ದರು.
ರಾಜ್ಯಕ್ಕೆ ಉತ್ತಮ ಬಜೆಟ್ ನೀಡುವಲ್ಲಿ ವಿರೋಧ ಪಕ್ಷಗಳ ಉತ್ತಮ ಸಲಹೆಗಳನ್ನು ಸ್ವೀಕರಿಸುವುದಾಗಿ ತಿಳಿಸಿದರು. ಮುಖ್ಯ ಮಂತ್ರಿಗಳ ಜೊತೆಯಲ್ಲಿ ದ.ಕ. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ.ಟಿ. ಶೈಲಜಾ ಭಟ್, ವಿಧಾನಸಭೆ ಉಪಾಧ್ಯಕ್ಷರಾದ ಎನ್.ಯೋಗೀಶ್ ಭಟ್, ವಿಧಾನ ಪರಿಷತ್ ಸದಸ್ಯರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಸಂಸದರಾದ ನಳಿನ್ ಕುಮಾರ್ ಕಟೀಲ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಬಿ.ನಾಗರಾಜ ಶೆಟ್ಟಿ,ಮೇಯರ್ ಪ್ರವಿಣ್, ಬಿಜೆಪಿ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ ಮುಂತಾದವರು ಹಾಜರಿದ್ದರು.

ಮೇಯರ್ ಮನೆಯಿಂದ ಗಣತಿಗೆ ಚಾಲನೆ

ಮಂಗಳೂರು,ಫೆಬ್ರವರಿ.26:ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಶನಿವಾರದಿಂದ ಸಾಮಾಜಿಕ, ಆರ್ಥಿಕ ಮತ್ತು ಜಾತಿ ಗಣತಿ ಆರಂಭಗೊಂಡಿದ್ದು ಸಾರ್ವಜನಿಕರು ಅಗತ್ಯ ಮಾಹಿತಿ ನೀಡಿ ಗಣತಿದಾರರಿಗೆ ಸಮಗ್ರ ಮಾಹಿತಿ ಸಂಗ್ರಹಕ್ಕೆ ನೆರವಾಗಬೇಕೆಂದು ಮಂಗಳೂರು ಮಹಾ ನಗರ ಪಾಲಿಕಾ ಮಹಾಪೌರರಾದ ಪ್ರವೀಣ್ ಅವರು ಮನವಿ ಮಾಡಿದರು.ತಮ್ಮ ಮನೆ ಯಿಂದ ಗಣತಿ ಆರಂ ಭಿಸ ಲಾದ ಸಂದ ರ್ಭ ದಲ್ಲಿ ಅವರು ಮಾತ ನಾಡಿ ದರು. ಕೇಂದ್ರ ಗ್ರಾಮೀಣಾ ಭಿವೃದ್ದಿ ಮಂತ್ರಾ ಲಯ ಹಾಗೂ ಕೇಂದ್ರ ವಸತಿ ಮತ್ತು ನಗರ ಬಡ ತನ ನಿರ್ಮೂ ಲನಾ ಮಂತ್ರಾ ಲಯದ ನಿರ್ದೇ ಶನಾ ಲಯ ಕೈ ಗೊಂಡಿ ರುವ ಈ ಗಣ ತಿಗೆ ಮಹಾ ನಗರ ಪಾಲಿಕೆ ವ್ಯಾಪ್ತಿ ಯಲ್ಲಿ ಒಟ್ಟು 11 ಚಾರ್ಜ್ ಗಳಿದ್ದು 4 ಚಾರ್ಜ್ ಕೇಂದ್ರ ಗಳನ್ನು ರಚಿ ಸಲಾ ಗಿದೆ. ಮಹಾ ನಗರ ಪಾಲಿಕೆ ವ್ಯಾಪ್ತಿ ಯಲ್ಲಿ 987 ಗಣತಿ ಬ್ಲಾಕ್ ಗಳಿದ್ದು 25.2.12 ರಿಂದ ನಿರಂತ ರವಾಗಿ 40 ದಿನಗಳ ಅವಧಿ ಯಲ್ಲಿ ಗಣತಿ ನಡೆ ಯಲಿದೆ. ಅಧಿ ಕಾರಿ ಗಳು ಮನೆ ಗಳಿಗೆ ಭೇಟಿ ಕೊಟ್ಟ ಸಂದರ್ಭ ದಲ್ಲಿ ಗಣತಿಗೆ ಸಹಕರಿಸಿ ಎಂದು ಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್ ಹೇಳಿದರು.

Friday, February 24, 2012

ಗುಡಿ ಕೈಗಾರಿಕಾ ಉತ್ಪನ್ನಗಳನ್ನು ಖರೀದಿಸಿ ಗ್ರಾಮೀಣ ಆರ್ಥಿಕತೆ ವೃದ್ದಿಸಿ;ಶೈಲಜಾ ಭಟ್

ಮಂಗಳೂರು,ಫೆಬ್ರವರಿ.24:ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕನಸನ್ನು ನನಸು ಮಾಡಲು ನಾವೆಲ್ಲಾ ಖಾದಿ ಮತ್ತು ಗ್ರಾಮೋದ್ಯೋಗ ಗುಡಿ ಕೈಗಾರಿಕೆಗಳ ದೇಸಿ ಉತ್ಪನ್ನಗಳನ್ನೇ ಖರೀದಿಸುವ ಮೂಲಕ ಗ್ರಾ ಮೀಣ ಜನರ ಆರ್ಥಿ ಕತೆ ಯನ್ನು ಹೆಚ್ಚಿ ಸಬೇ ಕೆಂದು ದ.ಕ.ಜಿಲ್ಲಾ ಪಂಚಾ ಯತ್ ನ ಅಧ್ಯಕ್ಷ ರಾದ ಶ್ರೀ ಮತಿ ಶೈಲಜಾ ಭಟ್ ಅವರು ಜನತೆ ಯಲ್ಲಿ ಮನವಿ ಮಾಡಿ ದ್ದಾರೆ.ಅವರು ಇಂದು ಕರ್ನಾಟಕ ರಾಜ್ಯ ಖಾದಿ ಮತ್ತು ಗ್ರಾಮೋ ದೋಗ ಮಂಡಳಿ, ಬೆಂಗ ಳೂರು, ಕೈಗಾ ರಿಕಾ ಮತ್ತು ವಾಣಿಜ್ಯ ಇಲಾಖೆ, ಬೆಂಗ ಳೂರು ಇವರ ಆಶ್ರಯ ದಲ್ಲಿ ಮಂಗ ಳೂರು ನಗರದ ಭಾರ ತೀಯ ವಿದ್ಯಾ ಭವನ ದಲ್ಲಿ ಏರ್ಪ ಡಿಸಿ ರುವ ಖಾದಿ ಮತ್ತು ಗ್ರಾಮೋ ದ್ಯೋಗ ವಸ್ತು ಪ್ರದ ರ್ಶನ ಹಾಗೂ ಮಾರಾಟ ಉತ್ಸವ-2012ನ್ನು ಉದ್ಘಾ ಟಿಸಿ ಮಾತ ನಾಡಿದರು.ಸಮಾ ರಂಭ ದಲ್ಲಿ ಕೇಂದ್ರ ಖಾದಿ ಮತ್ತು ಗ್ರಾಮೋ ದ್ಯೋಗ ಕೇಂದ್ರ ವಲ ಯದ ಸದಸ್ಯ ರಾದ ಇಂದ್ರ ಜಿತ್ ವಿಕ್ರಮ ಸಿಂಗ್, ರಾಜ್ಯ ಖಾದಿ ಮತ್ತು ಗ್ರಾಮೋ ದ್ಯೋಗ ಇಲಾಖೆ ಉಪ ನಿರ್ದೇ ಶಕ ರಾದ ಸೋಮಪ್ಪ, ಜಿಲ್ಲಾ ಕೈಗಾ ರಿಕಾ ಕೇಂದ್ರ ಜಂಟಿ ನಿರ್ದೇ ಶಕ ರಾದ ಎಸ್.ಜಿ.ಹೆಗಡೆ, ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಧ್ಯಕ್ಷ ಪ್ರದೀಪ್ ಕುಮಾರ ಕಲ್ಕೂರ ಮುಂತಾ ದವರು ಭಾಗ ವಹಿ ಸಿದ್ದರು.ವಸ್ತು ಪ್ರದ ರ್ಶನ ಫೆಬ್ರವರಿ 24 ರಿಂದ ಮಾರ್ಚ್ 4 ರವ ರೆಗೆ ಇರು ತ್ತದೆ. ಚಿಕ್ಕ ಬಳ್ಳಾ ಪುರ ಜಿಲ್ಲೆ, ಬಾಗಲ ಕೋಟೆ ಜಿಲ್ಲೆ, ಬೆಂಗ ಳೂರು ಮುಂತಾದ ಜಿಲ್ಲೆ ಗಳ ಖಾದಿ ಮತ್ತು ಗ್ರಾಮೋ ದ್ಯೋಗ ಕೈಗಾ ರಿಕೆ ಗಳ ಉತ್ಪನ್ನ ಗಳ ಪ್ರದ ರ್ಶನ ಮತ್ತು ಮಾರಾ ಟವನ್ನು ಆಯೋ ಜಿಸ ಲಾಗಿದೆ.

Wednesday, February 22, 2012

ಸಂಸದರ ನಿಧಿಯಿಂದ 194 ಕಾಮಗಾರಿ.ರೂ.289.58ಲಕ್ಷ ವೆಚ್ಚ-ನಳಿನ್ ಕುಮಾರ್ ಕಟೀಲ್

ಮಂಗಳೂರು,ಫೆಬ್ರವರಿ.22:ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ (2009-10 ಮತ್ತು 2010-11 )ಶ್ರೀ ನಳಿನ್ ಕುಮಾರ್ ಕಟೀಲ್ ಅವರ ಸಂಸದರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಗೆ ರೂ.380.29 ಲಕ್ಷ ಮಂಜೂರಾಗಿದ್ದು, ಇದರಲ್ಲಿ ಇಲ್ಲಿಯವರೆಗೆ 289.58 ಲಕ್ಷ ರೂ.ಗಳನ್ನು 194 ವಿವಿಧ ಕಾಮಗಾರಿಗಳ ಅನುಷ್ಠಾನಕ್ಕಾಗಿ ವೆಚ್ಚ ಮಾಡಲಾಗಿದೆಯೆಂದು ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ತಿಳಿಸಿದರು.
ಅವರು ಇಂದು ಜಿಲ್ಲಾಧಿ ಕಾರಿಗಳ ಕಚೇರಿಯಲ್ಲಿ ಈ ಸಂಬಂಧ ನಡೆದ ಸಂಸದರ ಸ್ಥಳೀಯ ಪ್ರದೇಶಾ ಭಿವೃದ್ಧಿ ಯೋಜನೆಯಡಿ ಅನುಷ್ಠಾ ನಗೊಳಿಸ ಲಾದ ಕಾಮ ಗಾರಿಗಳ ಪ್ರಗತಿ ಪರಿಶೀಲನೆ ಮಾಡಿ ಮಾತ ನಾಡಿದರು.ಸಂಸದರ ನಿಧಿಯಿಂದ ಕಾಮಗಾರಿಗಳಿಗೆ ಮಂಜೂರಾತಿ ಪಡೆದು ಕಾಮಗಾರಿ ಆರಂಭಿಸದೆ ಕಾಲಹರಣ ಮಾಡುವ ಸಂಘ ಸಂಸ್ಥೆಗಳಿಗೆ ಮೂರು ನೋಟೀಸ್ ಜಾರಿ ಮಾಡಿ ಉತ್ತರ ಬಾರದಿದ್ದಲ್ಲಿ ನಂತರ ಏಕಪಕ್ಷೀಯವಾಗಿ ನಿಯಮಾವಳಿಯಂತೆ ರದ್ದು ಪಡಿಸಲು ಅವಕಾಶವಿರುವುದರಿಂದ ಕೂಡಲೇ ಕ್ರಮ ಕೈಗೊಂಡು ಬೇರೆಯವರಿಗೆ ಮಂಜೂರಾತಿ ಮಾಡುವಂತೆ ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದರಾದ ನಳಿನ್ ಕುಮಾರ್ ಕಟೀಲ್ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ಇಲಾಖೆ, ನಿರ್ಮಿತಿ ಕೇಂದ್ರ,ಲೋಕೋಪಯೋಗಿ ಇಲಾಖೆಯವರು ಸಂಸದ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯಿಂದ ಕಾಮಗಾರಿಗಳ ಅನುಷ್ಠಾನಗೊಳಿಸಿ ಸಂಬಂಧಿಸಿದ ಬಿಲ್ಲುಗಳನ್ನು ಹಣ ಬಳಕೆ ದೃಢೀಕರಣದೊಂದಿಗೆ ಕೂಡಲೇ ಸಲ್ಲಿಸಲು ಅವರು ಸೂಚಿಸಿದ್ದಾರೆ. ಬಾಕಿ ಇರುವ ಕಾಮಗಾರಿಗಳನ್ನು ಮಾರ್ಚ್ 15 ರೊಳಗೆ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಗಡವು ವಿಧಿಸಿದ್ದಾರೆ.
ಸಭೆಯಲ್ಲಿ ಕಾರ್ಯನಿರ್ವಾಹಕ ಇಂಜಿನಿಯರ್ ಗೋಪಾಲ್ ನಾಯಕ್ ಮುಂತಾದವರು ಉಪಸ್ಥಿತರಿದ್ದರು.

ಫೆ.23,ಮಂಗಳೂರು ವಿಶ್ವವಿದ್ಯಾನಿಲಯ ಘಟಿಕೋತ್ಸವ.ಶ್ರೀಕುಮಾರ್ ಬ್ಯಾನರ್ಜಿ,ಗೋವಿಂದ ರಾವ್,ಏರ್ಯಗೆ ಗೌರವ ಡಾಕ್ಟರೇಟ್

ಮಂಗಳೂರು,ಫೆಬ್ರವರಿ.22: ಮಂಗಳೂರು ವಿಶ್ವವಿದ್ಯಾನಿಲಯದ 30ನೇ ವಾರ್ಷಿಕ ಘಟಿಕೋತ್ಸವ ಫೆ. 23ರಂದು ಬೆಳಗ್ಗೆ ವಿಶ್ವವಿದ್ಯಾನಿಲಯ ಆವರಣದ ಮಂಗಳಾ ಸಭಾಂಗಣದಲ್ಲಿ ಜರಗಲಿದೆ. ಈ ಸಂದರ್ಭ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿನ ಸೇವೆಗಾಗಿ ಅಣುಶಕ್ತಿ ಆಯೋಗದ ಅಧ್ಯಕ್ಷ ಹಾಗೂ ಅಣುಶಕ್ತಿ ಇಲಾಖೆಯ ಭಾರತ ಸರಕಾರದ ಕಾರ್ಯದರ್ಶಿ ಡಾ. ಶ್ರೀಕುಮಾರ್ ಬ್ಯಾನರ್ಜಿ, ಶಿಕ್ಷಣ ಕ್ಷೇತ್ರದ ಸೇವೆಗಾಗಿ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಫೈನಾನ್ಸ್ & ಪಾಲಿಸಿಯ ನಿರ್ದೇಶಕ ಡಾ.ಗೋವಿಂದ ರಾವ್ ಮಾರಪಳ್ಳಿ ಹಾಗೂ ಸಾಹಿತ್ಯ ಮತ್ತು ಸಮಾಜ ಸೇವೆಗಾಗಿ ಏರ್ಯ ಲಕ್ಷ್ಮಿ ನಾರಾಯಣ ಆಳ್ವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಲಾಗುವುದು ಎಂದು ವಿವಿ ಕುಲಪತಿ ಪ್ರೊ.ಟಿ.ಸಿ. ಶಿವಶಂಕರಮೂರ್ತಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಂಗ ಳೂರು ವಿಶ್ವ ವಿದ್ಯಾ ನಿಲಯ ಕಾಲೇ ಜಿನ ರ ವೀಂದ್ರ ಕಲಾ ಭವನ ದಲ್ಲಿ ಘಟಿ ಕೋತ್ಸ ವದ ಬಗ್ಗೆ ಇಂದು ಮಾಹಿತಿ ನೀಡಿದ ಅವರು, ಘಟಿ ಕೋತ್ಸ ವದಲ್ಲಿ 44 ಮಂದಿಗೆ ಡಾಕ್ಟ ರೇಟ್ ಪದವಿ (ಕಲೆ- 13, ವಿಜ್ಞಾನ-26, ವಾಣಿಜ್ಯ-5), 17 ಎಂಫಿಲ್ (ಕಲೆ-1, ವಿಜ್ಞಾನ- 9, ವಾಣಿಜ್ಯ-7), 35 ಂದಿಗೆ ಚಿನ್ನದ ಪದಕ ಹಾಗೂ 57 ಮಂದಿಗೆ ನಗದು ಬಹುಮಾನ ನೀಡಲಾಗುವುದು. ಒಟ್ಟು 62 ಮಂದಿಗೆ ರ್ಯಾಂಕ್ (ಸ್ನಾತಕೋತ್ತರ ಪದವಿ -44, ಪದವಿ-18, ಕಲೆ- 12, ವಿಜ್ಞಾನ ಮತ್ತು ತಂತ್ರಜ್ಞಾನ-33, ವಾಣಿಜ್ಯ- 9, ಕಾನೂನು- 3, ಶಿಕ್ಷಣ- 3, ಸ್ನಾತಕೋತ್ತರ ಡಿಪ್ಲೊಮಾ- 2) ನೀಡಲಾಗುವುದು ಎಂದು ತಿಳಿಸಿದರು.
ಘಟಿಕೋತ್ಸವ ಸಮಾರಂಭವು ರಾಜ್ಯಪಾಲ ಹಾಗೂ ಮಂಗಳೂರು ವಿವಿಯ ಕುಲಾಧಿಪತಿ ಎಚ್.ಆರ್. ಭಾರದ್ವಾಜ್ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಹಾಗೂ ಉನ್ನತ ಶಿಕ್ಷಣ ಇಲಾಖೆಯ ಹೆಚ್ಚುವರಿ ಪ್ರಭಾರ ಹಾಗೂ ಮಂಗಳೂರು ವಿವಿಯ ಸಹಕುಲಾಧಿಪತಿಯಾಗಿರುವ ಡಿ.ವಿ. ಸದಾನಂದ ಗೌಡ ಉಪಸ್ಥಿತರಿರುವರು. ಅಣುಶಕ್ತಿ ಆಯೋಗದ ಅಧ್ಯಕ್ಷ ಡಾ. ಶ್ರೀಕುಮಾರ್ ಬ್ಯಾನರ್ಜಿ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದವರು ತಿಳಿಸಿದರು.2010-11ನೇ ಸಾಲಿನಲ್ಲಿ 26,222 ಮಂದಿ ಪರೀಕ್ಷೆಗೆ ಹಾಜ ರಾಗಿದ್ದು, 17,271 ಮಂದಿ ವಿದ್ಯಾ ರ್ಥಿಗಳು ಉತ್ತೀ ರ್ಣರಾ ಗಿದ್ದಾರೆ. ಇದ ರಲ್ಲಿ ಸ್ನಾತ ಕೋತ್ತರ ಪದವಿ ಪರೀ ಕ್ಷೆಗೆ 2,984 ವಿದ್ಯಾ ರ್ಥಿಗಳು ಹಾಜ ರಾಗಿದ್ದು 2,732 ಮಂದಿ ಉತ್ತೀರ್ಣ ರಾಗಿದ್ದಾರೆ. ಪದವಿ ಪರಿಕ್ಷೆಗೆ ಹಾಜರಾದ 23,154 ವಿದ್ಯಾ ರ್ಥಿಗಳಲ್ಲಿ 14,460 ವಿದ್ಯಾರ್ಥಿ ಗಳು ಉತ್ತೀರ್ಣ ರಾಗಿದ್ದಾರೆ. ಸ್ನಾತಕೋತ್ತರ ಡಿಪ್ಲೊಮಾ ಪರೀಕ್ಷೆಗೆ ಹಾಜರಾದ 23 ವಿದ್ಯಾರ್ಥಿಗಳಲ್ಲಿ 18 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದರು.
ಮುಂಬೈನ ಡಿಪಾರ್ಟಮೆಂಟ್ ಆಫ್ ಅಟೊಮಿಕ್ ಎನರ್ಜಿ (ಡಿಎಇ)ಯ ಅಂಗಸಂಸ್ಥೆಗಳಾದ ಬೋರ್ಡ್ ಆಫ್ ರಿಸರ್ಚ್ ಇನ್ ನ್ಯೂಕ್ಲಿಯರ್ ಸೈಯನ್ಸ್ (ಬಿಆರ್ಎನ್ಎಸ್)ಮತ್ತು ಬೋರ್ಡ್ ಆಫ್ ರೇಡಿಯೇಶನ್ & ಐಸೋಟೋಪ್ ಟೆಕ್ನಾಲಜಿ (ಬಿಆರ್ಐಟಿ)ಸಹಯೋಗದೊಂದಿಗೆ ಸ್ಥಾಪಿಸಿರುವ ಸೆಂಟರ್ ಫಾರ್ ಅಪ್ಲಿಕೇಶನ್ ಆಫ್ ರೇಡಿಯೋಐಸೋಟೊಪ್ಸ್ & ರೇಡಿಯೇಶನ್ ಟೆಕ್ನಾಲಜಿ (ವಿಕಿರಣಶೀಲಧಾತುಗಳು ಮತ್ತು ವಿಕಿರಣೀಯ ತಂತ್ರಜ್ಞಾನ ಅನ್ವಯಿಕ ಕೇಂದ್ರ)ಯ ಉದ್ಘಾಟನೆ ಯೂ ಘಟಿಕೋತ್ಸವ ಸಮಾರಂಭದ ತರುವಾಯ ಅತಿಥಿಗಳಿಂದ ನಡೆಯಲಿದೆ ಎಂದು ಕುಲಪತಿಗಳು ಮಾಹಿತಿ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಕುಲಸಚಿವ ಪ್ರೊ.ಕೆ. ಚಿನ್ನಪ್ಪ ಗೌಡ, ಪತ್ರಿಕೋದ್ಯಮ ವಿಭಾಗದ ಡಾ.ಜಿ.ಪಿ ಶಿವರಾಂ, ಪ್ರೊ. ಯಡಪಡಿತ್ತಾಯ ಉಪಸ್ಥಿತರಿದ್ದರು.

Tuesday, February 21, 2012

ಕ್ರಿಯಾ ಯೋಜನೆಗೆ ಅನುಮತಿ ದ.ಕ. ಜಿಲ್ಲಾ ಯೋಜನಾ ಸಮಿತಿ ಸಭೆ

ಮಂಗಳೂರು,ಫೆಬ್ರವರಿ.21:2011-12ನೆ ಸಾಲಿಗೆ ಜಿಲ್ಲಾ ಯೋಜನಾ ಸಮಿತಿಗೆ ಬಿಡುಗಡೆಯಾದ ಆರು ಲಕ್ಷ ರೂ.ಗಳಲ್ಲಿ 2,15,082 ರೂ.ಗಳು ಖರ್ಚಾಗಿದ್ದು, 3,84,918 ರೂ.ಗಳು ಉಳಿಕೆಯಾಗಿದೆ ಎಂದು ಜಿ.ಪಂ. ಮುಖ್ಯ ಯೋಜನಾಧಿಕಾರಿ ಮುಹಮ್ಮದ್ ನಝೀರ್ ತಿಳಿಸಿದರು. ಇಂದು ಜಿಲ್ಲಾ ಪಂಚಾಯತ್ ನಲ್ಲಿ ಆಯೋಜಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಯೋಜನಾ ಸಮಿತಿ ಸಭೆಯಲ್ಲಿ ಮಾತನಾಡುತ್ತಿದ್ದ ಅವರು, ಸಮಿತಿಯ ಎದುರು ಖರ್ಚು ವೆಚ್ಚದ ವಿವರ ಮಂಡಿಸಿದರು.
ಸಭೆಯಲ್ಲಿ ಮಾತನಾಡಿದ ಸಿಇಒ ಡಾ ಕೆ ಎನ್ ವಿಜಯಪ್ರಕಾಶ್ ಅವರು, ಪ್ರತೀ ಮೂರು ತಿಂಗಳಿಗೊಮ್ಮೆ ನಿಯಮಿತವಾಗಿ ಯೋಜನಾ ಸಮಿತಿ ಸಭೆ ಕರೆಯುವ ಹಾಗೂ ಇಂದಿನ ಕೃಷಿ ಕಾರ್ಯಾಗಾರದಂತೆ, ಆರೋಗ್ಯ ಮತ್ತು ಶಿಕ್ಷಣ ಕಾರ್ಯಾಗಾರಗಳನ್ನು ನಡೆಸುವುದಾಗಿ ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಿರಲು ಬಹುಗ್ರಾಮ ಕುಡಿಯುವ ನೀರು ಯೋಜನೆ ಹಾಗೂ ಕಿಂಡಿ ಅಣೆಕಟ್ಟುಗಳ ಯೋಜನೆಯ ಸಮಗ್ರ ಅನುಷ್ಠಾನಕ್ಕೆ ಯೋಜನೆ ರೂಪಿಸಿರುವುದಾಗಿ ಸಮಿತಿ ಸದಸ್ಯರ ಪ್ರಶ್ನೆಗೆ ಉತ್ತರಿಸಿದರು.
ಸರ್ವ ಶಿಕ್ಷಾ ಅಭಿಯಾನದಡಿ ದ.ಕ. ಜಿಲ್ಲೆಯಲ್ಲಿ ಸರಕಾರಿ ಶಾಲೆಗಳಿಗೆ ಆವರಣಗೋಡೆ ಹಾಗೂ ಆಟದ ಮೈದಾನಗಳನ್ನು ನಿರ್ಮಿಸುವ ಕುರಿತಂತೆ ಕ್ರಿಯಾ ಯೋಜನೆ ತಯಾರಿಸಿ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ಪಿಡಿಒಗಳು ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್ ಸೂಚನೆ ನೀಡಿದ್ದಾರೆ.
ಜಿಲ್ಲೆಯಾದ್ಯಂತ ಕಳೆದ ಸೆಪ್ಟಂಬರ್ ಅಂತ್ಯಕ್ಕೆ ಸಂಗ್ರಹಿಸಲಾದ ಮಾಹಿತಿಯ ಪ್ರಕಾರ 118 ಶಾಲೆಗಳಿಗೆ ಆಟದ ಮೈದಾನಗಳ ಅಗತ್ಯವಿದ್ದು, 407 ಶಾಲೆಗಳಿಗೆ ಆವರಣ ಗೋಡೆಯ ಅಗತ್ಯವಿರುವುದಾಗಿ ಸರ್ವ ಶಿಕ್ಷಣ ಅಭಿಯಾನ ಅಧಿಕಾರಿ ಶಿವಪ್ರಕಾಶ್ ಸಭೆಯಲ್ಲಿ ಮಾಹಿತಿ ನೀಡಿದರು.
ಜಿಲ್ಲೆಯ ಪ್ರತಿಯೊಂದು ಶಾಲೆಗಳಲ್ಲಿಯೂ ಶೌಚಾಲಯಗಳನ್ನು ಕಡ್ಡಾಯಗೊಳಿಸುವ ಕುರಿತಂತೆ ಕಳೆದ ಡಿಸೆಂಬರ್ 31ಕ್ಕೆ ಅಂತಿಮ ಗಡುವು ನೀಡಲಾಗಿದ್ದರೂ ಮತ್ತೆ ಮಾರ್ಚ್ 31ಕ್ಕೆ ಅಧಿಕಾರಿಗಳು ಗಡುವು ಕೋರಿದರು. ಈ ಸಂದರ್ಭ ಪ್ರತಿಕ್ರಿಯಿಸಿದ ಸಿಇಒ ಡಾ. ವಿಜಯಪ್ರಕಾಶ್, ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಎಲ್ಲಾ ಗ್ರಾ.ಪಂ. ಪಿಡಿಒ ಮತ್ತು ಕಾರ್ಯದರ್ಶಿಗಳಿಗೆ ಸೂಚನೆ ನೀಡಿದರಲ್ಲದೆ, ಶಾಲಾ ಶೌಚಾಲಯಗಳಲ್ಲಿ ಸ್ವಚ್ಛತೆ, ಆರೋಗ್ಯವನ್ನು ಕಾಪಾಡುವಲ್ಲಿಯೂ ಜಾಗೃತಿ ವಹಿಸಬೇಕೆಂದರು.
ಸಭೆಯಲ್ಲಿ ಜಿ.ಪಂ. ಅಧ್ಯಕ್ಷೆ ಶೈಲಜಾ ಭಟ್, ಮನಪಾ ಆಯುಕ್ತ ಡಾ. ಹರೀಶ್ ಕುಮಾರ್, ಉಪಕಾರ್ಯದರ್ಶಿ ಶಿವರಾಮೇಗೌಡ ಉಪಸ್ಥಿತರಿದ್ದರು.

ತುಂಬೆಯಲ್ಲಿ ನೇತ್ರಾವತಿಗೆ ಪೂಜೆ

ಮಂಗಳೂರು,ಫೆಬ್ರವರಿ.21: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ನೀರು ಪೂರೈಸುತ್ತಿರುವ ತುಂಬೆ ನೇತ್ರಾವತಿ ನದಿಯ ವೆಂಟೆಡ್ ಡ್ಯಾಂನಲ್ಲಿ ಮಂಗಳವಾರ ಮೇಯರ್ ಪ್ರವೀಣ್ ಅಂಚನ್ ಅವರು ಗಂಗಾಪೂಜೆ ನೆರವೇರಿಸಿದರು.ಕಾರ್ಯ ಕ್ರಮದ ಬಳಿಕ ಮಾತ ನಾಡಿದ ಮೇಯರ್, ಗಂಗಾ ಮಾತೆ ನೀರಿನ ಸಮಸ್ಯೆ ಎದು ರಾಗ ದಂತೆ ನೋಡಿ ಕೊಳ್ಳಲಿ ಜೂನ್ ಅಂತ್ಯ ದವ ರೆಗೂ ನಗರಕ್ಕೆ ನೀರು ದೊರೆ ಯುವಂ ತಾಗಲಿ ಎಂದು ಪ್ರಾರ್ಥನೆ ಸಲ್ಲಿಸಿದೆ ಎಂದರು.
ಪ್ರಕೃತಿಯಲ್ಲೂ ದೇವರನ್ನು ಕಾಣುವ ಭಾರತೀಯರು, ಏರಿಕೆಯಾಗುತ್ತಿರುವ ತಾಪಮಾನದ ಈ ಸಂದರ್ಭ ಜಲ ಸಂರಕ್ಷಣೆ, ಪರಿಸರ ಸಂರಕ್ಷಣೆ ಇಂದಿನ ಅಗತ್ಯ ಎಂದು. ಉಪಮೇಯರ್ ಗೀತಾ ನಾಯಕ್ ಹೇಳಿದರು. ಆಯುಕ್ತ ಡಾ.ಹರೀಶ್ ಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷರು, ಸದಸ್ಯರು ಹಾಗೂ ಅಧಿರಿಗಳು ಭಾಗವಹಿಸಿದ್ದರು.
ತುಂಬಿ ಹರಿಯುತ್ತಿರುವ ತುಂಬೆ ಅಣೆಕಟ್ಟು
ಪ್ರಸಕ್ತ 4 ಮೀಟರ್ ಎತ್ತರದ ತುಂಬೆ ಅಣೆಕಟ್ಟು ಸಂಪೂರ್ಣವಾಗಿ ತುಂಬಿದ್ದು, ಮನಪಾ ವ್ಯಾಪ್ತಿಗೆ ಮುಂದಿನ ಮೂರು ತಿಂಗಳ ಅವಧಿಗೆ ಸಾಕಾಗುವಷ್ಟು ನೀರು ಅಣೆಕಟ್ಟಿನಲ್ಲಿ ಶೇಖರವಾಗಿದೆ.

'ಭತ್ತಕ್ಕೆ ಒತ್ತು ಕೊಡಿ'

ಮಂಗಳೂರು,ಫೆಬ್ರವರಿ.21:ಹತ್ತುಹಲವು ಸವಾಲುಗಳನ್ನು ಎದುರಿಸುತ್ತಿರುವ ಕೃಷಿ ವಲಯದಲ್ಲಿ ಕೃಷಿ ಯಾಂತ್ರೀಕರಣ ಅನಿವಾರ್ಯ ಎಂದು ಬೆಳ್ತಂಗಡಿ ಪ್ರಗತಿಪರ ಕೃಷಿಕರಾದ ಪ್ರಭಾಕರ ಮಯ್ಯ ಅವರು ಹೇಳಿದರು.
ಅವ ರಿಂದು ಜಿಲ್ಲಾ ಪಂಚಾ ಯತ್ ಮತ್ತು ದ.ಕ ಜಿಲ್ಲಾ ಯೋಜನಾ ಸಮಿತಿ ಮಂಗ ಳೂರು ಇವರ ವತಿ ಯಿಂದ 'ಕೃಷಿ ರಂಗ- ಅಭಿ ವೃದ್ಧಿ ಅವ ಕಾಶ ಗಳು' ಎಂಬ ಒಂದು ದಿನದ ಮಾಹಿತಿ ಕಾರ್ಯಾ ಗಾರದ ಅಧಿ ವೇಶ ನದಲ್ಲಿ ಮಾತ ನಾಡು ತ್ತಿದ್ದರು.
ಜಿಲ್ಲೆಯ ವಾತಾವರಣಕ್ಕೆ ಪೂರಕವಾಗಿ ಮಲೆನಾಡು, ಬಯಲು ಪ್ರದೇಶಗಳಲ್ಲಿ ಬಳಸುವ ಕೃಷಿ ಯಂತ್ರಗಳು ನಮ್ಮ ಜಿಲ್ಲೆಗೆ ಹೊಂದದಿದ್ದರೂ, ಸ್ಥಳೀಯ ಪರಿಸ್ಥಿತಿಗೆ ಪೂರಕವಾಗಿ ಅಂದರೆ ಬೆಟ್ಟ ಗುಡ್ಡಗಳ ನಡುವೆ ಇರುವ ಸಣ್ಣ ಸಣ್ಣ ಭತ್ತದ ಗದ್ದೆ ಹಾಗೂ ತೋಟಗಳಿಗೆ ವಿಶೇಷ ಸಣ್ಣ ಯಂತ್ರಗಳು ಸೂಕ್ತವಾಗಿದ್ದು ಬೆಳ್ತಂಗಡಿಯ ನಡ ಗ್ರಾಮದ ಸುರ್ಯದ ತಮ್ಮ ಗದ್ದೆಯಲ್ಲಿ ನಡೆದಿರುವ ಆವಿಷ್ಕಾರ ಹಾಗೂ ಅನುಷ್ಠಾನ ಕುರಿತು ಮಾಹಿತಿ ನಿಡಿದರು. ಎಲ್ಲಕ್ಕಿಂತ ಮುಖ್ಯವಾಗಿ ಗದ್ದೆಯ ಫಲವತ್ತತೆಯನ್ನು ರೈತರು ಕಾಪಾಡಬೇಕೆಂದರು. ನೇಜಿ ನೆಡಲು, ಕಳೆ ಕೀಳಲು, ಕಾಳು ಮೆಣಸು ಬೇರ್ಪಡಿಸಲು ಉಪಯೋಗಿಸುವ ಯಂತ್ರಗಳ ಬಗ್ಗೆ ಮಾಹಿತಿ ನೀಡಿದರು. ನಾಲ್ಕು ಸಾಲಿನ ನೇಜಿ ನೆಡುವ ಟಿಲ್ರ್ ಮಾದರಿ ಯಂತ್ರದ ಬಗ್ಗೆ, ಹಾಗೂ ಪೆಟ್ರೋಲ್ ನಿಂದ ಓಡುವ ಈ ಯಂತ್ರಗಳಲ್ಲಿ ಪೆಟ್ರೋಲ್ ಬದಲಿಗೆ ಸೌರಶಕ್ತಿ ಅಳವಡಿಸುವ ಬಗ್ಗೆ ಸೆಲ್ಕೊ ಯೋಜನೆ ರೂಪಿಸುತ್ತಿದ್ದು, ಇಂತಹ ಯಂತ್ರಗಳ ಸದುಪಯೋಗವನ್ನು ಅರಿತು ಪಡೆಯುವ ಬಗ್ಗೆ ಇತರ ಕೃಷಿಕರೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡರು. ಕೃಷಿಕರಾದ ಸೀತಾರಾಂ ಶೆಟ್ಟಿಯವರು, ದೊಡ್ಡ ಯಂತ್ರಗಳಿಂದಾಗುವ ಲಾಭದ ಅನುಭವವನ್ನು ಹಂಚಿಕೊಂಡರು. ಕೃಷಿ ವಿಜ್ಞಾನ ಕೇಂದ್ರದ ಆನಂದ ಅವರು ಕೃಷಿಯಲ್ಲಿ ಸುಧಾರಿತ ಆಧುನಿಕ ಯಂತ್ರಗಳ ಬಳಕೆಯಿಂದಾಗುವ ಲಾಭಗಳನ್ನು ವಿವರಿಸಿದರು.ಅಧಿವೇ ಶನಕ್ಕೂ ಮುನ್ನ ನಡೆದ ಸಭಾ ಕಾರ್ಯ ಕ್ರಮ ದಲ್ಲಿ ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯ ನಿರ್ವ ಹಣಾ ಧಿಕಾರಿ ಡಾ ಕೆ ಎನ್ ವಿಜಯ ಪ್ರಕಾಶ್ ಅವರು ಮಾತ ನಾಡಿ, ಕೃಷಿಗೆ ಪೂರಕ ವಾದ ಈ ಕಾರ್ಯಾ ಗಾರ ಅರ್ಥ ಪೂರ್ಣ ವಾಗಿ ಮೂಡಿ ಬರಲಿ ಎಂದು ಹಾರೈ ಸಿದರು. ಕೃಷಿ ಮತ್ತು ಕೈಗಾ ರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ರಾದ ನವೀನ್ ಕುಮಾರ್ ಮೇನಾಲ ಅವರು ಮಾತ ನಾಡಿ, ಕೃಷಿ ಪ್ಯಾಕೇಜ್ ಗಳು ಅರ್ಹ ರೈತ ರನ್ನು ತಲುಪಲಿ; ಸರ್ಕಾರದ ಸೌಲಭ್ಯಗಳು, ಅನುದಾನಗಳು ಸದ್ಬಳಕೆಯಾಗಲಿ ಎಂದರು. ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಸಂಪತ್ ಸಾಮ್ರಾಜ್ಯ ಅವರು ಕೃಷಿ ಪರವಾದ ಯೋಜನೆಗಳು ಈ ಹಂತದಲ್ಲಿ ರೂಪುಗೊಳ್ಳುವುದರಿಂದ ಪರಿಣಾಮಕಾರಿ ಯೋಜನೆ ರೂಪಿಸಲು ಹಾಗೂ ಅನುಷ್ಠಾನಕ್ಕೆ ತರಲು ನೆರವಾಗಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ ಟಿ ಶೈಲಜಾ ಭಟ್ ಅವರು, ಕೃಷಿ ಸಂಸ್ಕೃತಿಯಿಂದ ದೇಶ ಉಳಿಯಲು ಸಾಧ್ಯ; ಕೃಷಿಗೆ ಎಲ್ಲರೂ ಹೆಚ್ಚಿನ ಒತ್ತು ನೀಡಬೇಕೆಂದು ಅಭಿಪ್ರಾಯಪಟ್ಟರು. ಮುಖ್ಯ ಯೋಜನಾಧಿಕಾರಿ ನಝೀರ್ ಸ್ವಾಗತಿಸಿದರು. ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಪದ್ಮಯ್ಯ ನಾಯಕ್ ಅವರು ವಂದಿಸಿದರು.

Monday, February 20, 2012

ದ.ಕ. ಜಿಲ್ಲೆಯಲ್ಲಿ ಪಲ್ಸ್ ಪೋಲಿಯೊ ಅಭಿಯಾನ

ಮಂಗಳೂರು,ಫೆಬ್ರವರಿ.19:ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು ನಡೆದ ಪಲ್ಸ್ ಪೋಲಿಯೋ ಅಭಿಯಾನ & ಮಾಹಿತಿ


Saturday, February 18, 2012

ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಂದ ಪ್ರಗತಿ ಪರಿಶೀಲನಾ ಸಭೆ

ಮಂಗಳೂರು,ಫೆಬ್ರವರಿ.18:ಸಣ್ಣ ನೀರಾವರಿ ಇಲಾಖೆಯವರಿಗೆ ಜಿಲ್ಲೆಯಲ್ಲಿ 43 ಕಿಂಡಿ ಅಣೆಕಟ್ಟುಗಳನ್ನು ನಿರ್ಮಿಸಲು ಮಂಜೂರಾತಿ ನೀಡಿದ್ದರೂ ಕಾಮಗಾರಿ ಅನುಷ್ಠಾನ ತೃಪ್ತಿಕರವಾಗಿಲ್ಲ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾದ ಬಿ ಎಸ್ ರಾಮ್ ಪ್ರಸಾದ್ ಹೇಳಿದರು. ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನು ನಡೆಸಿ ಮಾತನಾಡುತ್ತಿದ್ದರು.ಅಧಿಕಾರಿಗಳು ನೀಡಿದ ಮಾಹಿತಿಯನ್ನು ಪಡೆದ ಉಸ್ತುವಾರಿ ಕಾರ್ಯದರ್ಶಿಗಳು, ನೀರಾವರಿ ಪ್ರಮುಖ ವಲಯವಾಗಿದ್ದು, ಜಿಲ್ಲೆಯಲ್ಲಿ ನೀರಾವರಿಗೆ ಪೂರಕ ಯೋಜನೆಗಳ ಅನುಷ್ಠಾನದಲ್ಲಿ ಸಣ್ಣ ನೀರಾವರಿ ಇಲಾಖೆ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸಮಾಡಬೇಕೆಂದರು. ಕಾಮಗಾರಿ ಸಂಪೂರ್ಣಗೊಂಡ ಬಳಿಕ ಪರಿಶೀಲನಾ ಸಮಿತಿ ಕಾಮಗಾರಿಯನ್ನು ಪರಿಶೀಲಿಸಲಿದೆ ಎಂದರು.
13 ಕೆರೆಗಳ ಪುನರುಜ್ಜೀವನಕ್ಕೆ 382 ಲಕ್ಷ ರೂ. ಬಿಡುಗಡೆ ಮಾಡಿದ್ದರೂ ಅದರಲ್ಲಿ ಕೇವಲ 2 ಕಾಮಗಾರಿಗಳು ಮಾತ್ರ ಪೂರ್ಣಗೊಂಡಿದೆ. ನಿಗದಿತ ಗುರಿ ಸಾಧಿಸಲು ಕೇವಲ ಒಂದು ತಿಂಗಳು ಮಾತ್ರ ಬಾಕಿ ಇದ್ದು, ಸಮಸ್ಯೆ ಏನು ಎಂದು ಪ್ರಶ್ನಿಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಮುತುವರ್ಜಿ ವಹಿಸಿ ಕೆಲಸ ಮಾಡಬೇಕೆಂದು ಸಣ್ಣ ನೀರಾವರಿ ಇಲಾಖಾಧಿಕಾರಿಗಳಿಗೆ ಸೂಚಿಸಿದರು.
ವಿಶೇಷ ಘಟಕ ಯೋಜನೆಯಡಿ ಮಹಾನಗರಪಾಲಿಕೆ ಮತ್ತು ಸ್ಥಳೀಯ ಸಂಸ್ಥೆಗಳು ಶೇಕಡ 45 ಅಭಿವೃದ್ಧಿ ದಾಖಲಿಸಿದ್ದು ಸಮಾಜ ಕಲ್ಯಾಣ ಇಲಾಖೆ ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಿ ಪರಿಶಿಷ್ಟರಿಗೆ ಮೀಸಲಿರಿಸಿದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಬೇಕೆಂದರು.
ಜಿಲ್ಲಾ ಪಂಚಾಯತ್ ಗೆ ಸರ್ಕಾರದಿಂದ ಬಿಡುಗಡೆಯಾಗಬೇಕಿರುವ ಅನುದಾನದ ಕುರಿತು ಜಿಲ್ಲಾ ಪಂಚಾಯತ್ ಮುಖ್ಯ ಯೋಜನಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮಾಹಿತಿ ನೀಡಿದರು. ರಾಜ್ಯ ಮಟ್ಟದಲ್ಲಿ ಬಾಕಿ ಇರುವ ಜಿಲ್ಲೆಗಳ ಕೆಲಸಗಳ ಬಗ್ಗೆ ವಿವಿಧ ಇಲಾಖಾಧಿಕಾರಿಗಳಿಂದ ಮಾಹಿತಿ ಪಡೆದ ಉಸ್ತುವಾರಿ ಕಾರ್ಯದರ್ಶಿಗಳು ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು.
42 ಕಿ ಮೀ ಮಾಣಿ-ಸಂಪಾಜೆ ರಸ್ತೆಯನ್ನು ಕೆ ಆರ್ ಡಿಸಿಎಲ್ ನವರು 14 ಕಿ.ಮೀ ಅಭಿವೃದ್ಧಿ ಪಡಿಸಿದ್ದು ಮೇ ಅಂತ್ಯದೊಳಗೆ ಕಾಮಗಾರಿ ಮುಗಿಸುವ ಭರವಸೆಯನ್ನು ನೀಡಿದರು. ಪ್ರಗತಿ ಪರಿಶೀಲನಾ ವರದಿಯನ್ನು ತಾವು ಮುಖ್ಯಮಂತ್ರಿಗಳಿಗೆ ಸಲ್ಲಿಸಲಿದ್ದು ಸಭೆಯಲ್ಲಿ ನೀಡಿದ ಮಾಹಿತಿ ಹಾಗೂ ಗುರಿ ನಿಗದಿ ಸಾಧನೆ ನಿಖರವಾಗಿರಬೇಕು ಎಂದು ಉಸ್ತುವಾರಿ ಕಾರ್ಯ ದರ್ಶಿಗಳು ಈ ಸಂದರ್ಭದಲ್ಲಿ ಅಧಿಕಾರಿಗಳನ್ನು ಎಚ್ಚರಿಸಿದರು.
ಸುಳ್ಯದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿಯೂ ಫೆಬ್ರವರಿ ಅಂತ್ಯದೊಳಗೆ ಮುಗಿಸುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದರು. ಏರ್ ಪೋರ್ಟ್ ಎಕ್ಸಿಟ್ ರೋಡ್ ಕಾಮಗಾರಿಯ ಬಗ್ಗೆ ಜಿಲ್ಲಾಧಿಕಾರಿಗಳು ಸಭೆಯಲ್ಲಿ ಪ್ರಸ್ತಾಪಿಸಿ, ಕಾಮಗಾರಿ ಆರಂಭಿಸಲು ಬೇಕಿರುವ ಕ್ರಮಕೈಗೊಳ್ಳಲು ಸೂಚಿಸಿದರು.ಲೋಕೋಪಯೋಗಿ ಇಲಾಖೆಯು ಶೇಕಡ 90ರಷ್ಟು ಕಾಮಗಾರಿಗಳನ್ನು ಸಂಪೂರ್ಣ ಗೊಳಿಸಿದ್ದು, ಸುಳ್ಯ ಮಿನಿ ವಿಧಾನಸೌಧ ಮಾರ್ಚ್ ಒಳಗಡೆ, ನಗರದ ಕೋರ್ಟ್ ಕಟ್ಟಡ ಆದಷ್ಟು ಬೇಗ ಸಂಪೂರ್ಣ ಗೊಳಿಸ ಲಾಗುವುದು ಎಂದರು. ಮಂಗಳೂರು ಮಿನಿ ವಿಧಾನ ಸೌಧವನ್ನು ಮೇ ಒಳಗಡೆ ಬಿಟ್ಟುಕೊಡಲಾಗುವುದು ಎಂದು ಕಾರ್ಯಪಾಲಕ ಇಂಜಿನಿಯರ್ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಅಭಿವೃದ್ಧಿ ವರದಿ ಪಡೆದ ಕಾರ್ಯದರ್ಶಿ ಗಳು, ಭಾಗ್ಯಲಕ್ಷ್ಮಿ ಬಾಂಡ್ ಗಳ ವಿತರಣೆ ಮಾಹಿತಿ ಕೇಳಿದರು. 17,000ದಷ್ಟು ಬಾಂಡ್ ಗಳನ್ನು ಈವರೆಗೆ ಜಿಲ್ಲೆಯಲ್ಲಿ ವಿತರಿಸಲಾಗಿದ್ದು, 4,351 ಬಾಂಡ್ ವಿತರಣೆ ಬಾಕಿ ಇದೆ ಎಂದರು.
ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ಕೈಗೊಂಡಿರುವ ಕ್ರಮಗಳ ಬಗ್ಗೆ ವಿಚಾರಿಸಿದಾಗ, ಕಳೆದ ಸಾಲಿನ ಸಮಸ್ಯೆಗಳನ್ನು ಗಮನದಲ್ಲಿರಿಸಿ ಕ್ರಿಯಾ ಯೋಜನೆ ರೂಪಿಸಿದ್ದು, ಯಾವುದೇ ಗಂಭೀರ ಸಮಸ್ಯೆಗಳಿಲ್ಲ. ಎದುರಾಗುವ ಸಮಸ್ಯೆಗಳನ್ನು ಬಗೆ ಹರಿಸಲು ಟಾಸ್ಕ್ ಫೋರ್ಸ್ ಗೆ 60 ಲಕ್ಷ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ. ನೀರಿನ ದೂರು ಆಲಿಸಲು ತಾಲೂಕು ಪಂಚಾಯತ್ ಗಳಲ್ಲಿ ಕೌಂಟರ್ ಗಳನ್ನು ತೆರೆಯಲಾಗುವುದು ಎಂದು ಅಧಿಕಾರಿಗಳು ಉತ್ತರಿಸಿದರು. ಜಿಲ್ಲೆಯಲ್ಲಿ ಕಿನ್ನಿಗೋಳಿ ಮತ್ತು ಮಳವೂರಿನ ಬಹುಗ್ರಾಮ ಕುಡಿಯುವ ನೀರು ಯೋಜನೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮಾಹಿತಿಯನ್ನು ಜಿಲ್ಲಾ ಪಂಚಾಯತ್ ನ ಮುಖ್ಯ ಯೋಜನಾಧಿಕಾರಿಗಳು ನೀಡಿದರು.
ಆರ್ ಟಿ ಒಗೆ ಬೇರೆ ಜಾಗ ನೀಡುವ ಬಗ್ಗೆ, ನೋಂದಣಿ ಇಲಾಖೆಯಲ್ಲಿ ಹೊಸ ಸಾಫ್ಟ್ ವೇರ್ ಅಳವಡಿಸಿರುವುದರಿಂದ ಆಗಿರುವ ಸಮಸ್ಯೆ ಬಗ್ಗೆ, ಅವರ ಕಟ್ಟಡ ಸಮಸ್ಯೆಗಳ ಬಗ್ಗೆ, ಜನರಿಗಾಗುತ್ತಿರುವ ತೊಂದರೆಗಳ ಬಗ್ಗೆ ಜಿಲ್ಲಾಧಿಕಾರಿಗಳು ಸಭಾಧ್ಯಕ್ಷರ ಗಮನಸೆಳೆದರು.
ಇಂದಿರಾಗಾಂಧಿ ವಸತಿಯೋಜನೆಯಡಿ 2233ಮನೆಗಳಿಗೆ ಅರ್ಜಿ ಸ್ವೀಕರಿಸಿದ್ದು,2004 ಅರ್ಜಿಗಳು ಆಯ್ಕೆಯಾಗಿದೆ. 56 ಮನೆಗಳು ಸಂಪೂರ್ಣಗೊಂಡಿವೆ. 601 ಮನೆಗಳು ವಿವಿಧ ಹಂತದಲ್ಲಿವೆ. 1347 ಮನೆಗಳ ಕಾಮಗಾರಿ ಆರಂಭವಾಗಿದೆ. ಒಟ್ಟು 1,92,000 ಖರ್ಚಾಗಿದೆ ಎಂದು ಮುಖ್ಯ ಯೋಜನಾಧಿಕಾರಿಗಳು ತಿಳಿಸಿದರು. ಜಿಲ್ಲೆಯಲ್ಲಿ ಕೊರಗರ ಮನೆ ನಿರ್ಮಾಣದ ಕಾಮಗಾರಿಯಡಿ 1.090 ಕುಟುಂಬಗಳಿಗೂ ಮನೆ ಒದಗಿಸುವಂತೆ ಜಿಲ್ಲಾಧಿಕಾರಿಗಳು ಹೇಳಿದರು.
ಕೃಷಿ ಹಾಗೂ ತೋಟಗಾರಿಕಾ ಇಲಾಖೆಯ ಸುವರ್ಣಭೂಮಿ ಯೋಜನೆಯಡಿ ರೈತರಿಗೆ ಎರಡನೇ ಹಂತದಲ್ಲಿ ಬಿಡುಗಡೆಯಾಗಬೇಕಿದ್ದ ಹಣವನ್ನು ಮಾರ್ಚ್ 15ಕ್ಕೆ ಪಾವತಿಸಲು ಉಸ್ತುವಾರಿ ಕಾರ್ಯದರ್ಶಿಗಳು ಸೂಚಿಸಿದರು.
ಸಮಾಜ ಕಲ್ಯಾಣ ಇಲಾಖೆಯಲ್ಲಿ ಖಾಲಿ ಇದ್ದ ವಾರ್ಡನ್ ಹುದ್ದೆ ತುಂಬಲಾಗಿದ್ದು, ಬಿಸಿ ಎಂ ಹಾಸ್ಟೆಲ್ ಗಳಿಗೆ ಜಾಗ ಗುರುತಿಸಲಾಗಿದೆ ಎಂದು ಸಮಾಜ ಕಲ್ಯಾಣಾಧಿಕಾರಿಗಳು ತಿಳಿಸಿದರು. ಸಿಂಥೆಟಿಕ್ ಟ್ರ್ಯಾಕ್ ಬಗ್ಗೆ, ಗಣಿ ಮತ್ತು ಭೂವಿಜ್ಞಾನದಿಂದ ಸುರಕ್ಷಾ ವಲಯ ಗುರುತಿಸುವ ಬಗ್ಗೆ, ಈ ಸಂದರ್ಭದಲ್ಲಿ ಪರಿಸರ ಇಲಾಖೆ ಜೊತೆಯಾಗಿ ಕರ್ತವ್ಯ ನಿರ್ವಹಿಸಬೇಕೆಂದು ಹೇಳಿದರು.
ಮಹಾತ್ಮಗಾಂಧಿ ಗ್ರಾಮೀಣ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ 22.97 ಕೋಟಿ ರೂ. ಖರ್ಚಾಗಿದ್ದು, ಶೇಕಡಾ 50ರಷು ಹಣ ಖಚರ್ಾಗಿದೆ. ಉಳಿದ ಹಣವನ್ನು ಮಾಚ್ರ್ ಅಂತ್ಯದೊಳಗೆ ಖಚರ್ು ಮಾಡಲು ಸಮಗ್ರ ಯೋಜನೆ ರೂಪಿಸಿ ಎಂದ ಅವರು. ಸಾಮಾಜಿಕ ಸುರಕ್ಷಾ ಯೋಜನೆಗಳ ಫಲವನ್ನು ಅರ್ಹರಿಗೆ ತಲುಪಿಸುವ ಹೊಣೆ ಅಧಿಕಾರಿಗಳದ್ದು ಎಂದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್, ಪ್ರಭಾರ ಅಪರ ಜಿಲ್ಲಾಧಿಕಾರಿ ಕೆ ಟಿ ಕಾವೇರಿಯಪ್ಪ, ಮಹಾನಗರಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್ ಮತ್ತು ಇತರ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು.

ಮಲೇರಿಯಾ ನಿಗ್ರಹಕ್ಕೆ ಕ್ರಮಕೈಗೊಳ್ಳಿ: ರಾಮ್ ಪ್ರಸಾದ್

ಮಂಗಳೂರು,ಫೆಬ್ರವರಿ.18: ಇಡೀ ರಾಜ್ಯದಲ್ಲಿ ಮಲೇರಿಯಾದಲ್ಲಿ ಶೇ. 30 ಮಲೇರಿಯಾ ಮಂಗಳೂರು ನಗರದಿಂದ ವರದಿಯಾಗುತ್ತಿದೆ. ನಗರದಲ್ಲಿ ಮಲೇರಿಯಾ ತಡೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಾನಗರಪಾಲಿಕೆಯ ಆರೋಗ್ಯ ವಿಭಾಗ ಜಂಟಿಯಾಗಿ ಯೋಜನೆ ರೂಪಿಸಿ ಕಟ್ಟು ನಿಟ್ಟಿನ ಕ್ರಮಕೈಗೊಳ್ಳಬೇಕೆಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರಾದ ಬಿ ಎಸ್ ರಾಮ್ ಪ್ರಸಾದ್ ಸೂಚಿಸಿದರು.ಮುಂದಿನ ಬಜೆಟ್ ನಲ್ಲಿ ಮಲೇರಿಯಾ ನಿರ್ಮೂ ಲನೆಗಾಗಿ ವಿಶೇಷ ಅನುದಾನ ಹಾಗೂ ಗುತ್ತಿಗೆ ಆಧಾರದಲ್ಲಿ ಕಾರ್ಮಿ ಕರನ್ನು ನೇಮಿಸಲು ಅಧಿಕಾರ ನೀಡುವ ಬಗ್ಗೆಯೂ ಇಂದು ಬೆಳಗ್ಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಯಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ತೀರ್ಮಾ ನಿಸಲಾಗಿದೆ. ನಗರದಲ್ಲಿ ಮಲೇರಿಯಾ ನಿರ್ಮೂಲನೆಗೆ ಮೆಡಿಕಲ್ ಕಾಲೇಜುಗಳ ನೆರವು ಪಡೆಯಲು ಯೋಜಿಸಲಾಗಿದೆ ಎಂದು ಬಿ ಎಸ್ ರಾಮ್ ಪ್ರಸಾದ್ ಹೇಳಿದರು. ನಗರದಲ್ಲಿ ಮಲೇರಿಯಾ ಕುರಿತ ಸವಿವರ ಮಾಹಿತಿಯನ್ನು ಸಭೆಯಲ್ಲಿ ಅಧಿಕಾರಿಗಳಿಂದ ಅವರು ಪಡೆದಿದ್ದಾರೆ.

Friday, February 17, 2012

ಜಿಲ್ಲೆಯಲ್ಲಿ ಫೆ.19 ರಂದು ಪಲ್ಸ್ ಪೋಲಿಯೋ

ಮಂಗಳೂರು,ಫೆಬ್ರವರಿ.17 :ಭಾರತವನ್ನು ಪೋಲಿಯೋ ಮುಕ್ತ ದೇಶವನ್ನಾಗಿಸಲು ಆರೋಗ್ಯ ಇಲಾಖೆ ಅವಿರತ ಶ್ರಮಿಸುತ್ತಿದ್ದು ಗುರಿ ಸಾಧನೆಯತ್ತ ನಮ್ಮ ದೇಶ ಸಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಒ. ಆರ್. ಶ್ರೀರಂಗಪ್ಪ ತಿಳಿಸಿದರು.ಫೆಬ್ರವರಿ 19 ರಂದು ನಡೆಯಲಿರುವ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ ಕುರಿತ ಪತ್ರಿಕಾ ಗೋಷ್ಟಿ ಯನ್ನು ದ್ದೇಶಿಸಿ ಮಾತ ನಾಡುತ್ತಿದ್ದ ಅವರು, ಜಿಲ್ಲೆಯಲ್ಲಿ ಕೊನೆಯ ಪ್ರಕರಣ 1999ರಲ್ಲಿ ಅತ್ತಾವರ ಕೆ ಎಂ ಸಿ ಬಳಿ ವರದಿ ಯಾಯಿತು. ಆ ಬಳಿಕ ಜಿಲ್ಲೆಯಲ್ಲಿ ಪೋಲಿಯೋ ಪ್ರಕರಣ ದಾಖಲಾಗಿಲ್ಲ ಎಂದರು.ಹೆತ್ತವರು ಮಕ್ಕಳಿಗೆ ನಿಯಮಿತವಾಗಿ ಲಸಿಕೆಗಳನ್ನು ಹಾಕಿಸುವುದು ಹಾಗೂ ಪಲ್ಸ್ ಪೋಲಿಯೋ ದಿನಗಳಂದು ಪೋಲಿಯೋ ಹನಿ ಹಾಕಿಸುವುದರಿಂದ ಪೋಲಿಯೋ ಮುಕ್ತವಾಗಿಸಲು ನೆರವಾಗಬೇಕು. ನಗರದಲ್ಲಿ ಫ್ಲ್ಯಾಟ್ ಗಳಲ್ಲಿ ವಾಸಿಸುವರು ಪೋಲಿಯೋ ಹನಿ ಹಾಕಿಸುವ ಕಾರ್ಯಕ್ರಮ ಯಶಸ್ವಿಯಾಗಿಸಲು ನೆರವಾಗಬೇಕೆಂದು ಕೋರಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳು ಹೆತ್ತವರ ಸಹಕಾರದಿಂದ ಮಾತ್ರ ಕಾರ್ಯಕ್ರಮದ ಯಶಸ್ವಿ ಸಾಧ್ಯ ಎಂದರು.2011-12ನೇ ಸಾಲಿನ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಮೊದಲನೇ ಸುತ್ತು ಫೆಬ್ರವರಿ 19ರಂದು ಭಾನುವಾರ ನಡೆಯಲಿದ್ದು, 5 ವರ್ಷದೊಳಗಿನ ಎಲ್ಲ ಮಕ್ಕಳಿಗೂ ತಪ್ಪದೆ ಪೋಲಿಯೋ ಹನಿ ಹಾಕಿಸಲು ಕೋರಿದ್ದಾರೆ.ವಿಶೇಷವಾಗಿ ವಲಸೆ ಕಾರ್ಮಿಕರ ಮಕ್ಕಳಿಗೆ ಪೋಲಿಯೋ ಹನಿ ಹಾಕಿಸಲು ಯೋಜನೆ ರೂಪಿಸಲಾಗಿದ್ದು, ವಲಸೆಯಿಂದಾಗಿ ರೋಗ ಹರಡದಂತೆ ಗುರಿಯಿರಿಸಿಕೊಳ್ಳಲಾಗಿದೆ.
ವೆನ್ ಲಾಕ್ ನಲ್ಲಿ 19ರಂದು ಬೆಳಗ್ಗೆ 8.30ಕ್ಕೆ ಉಪಸಭಾಧ್ಯಕ್ಷರು, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ಮತ್ತು ಜಿಲ್ಲಾಧಿಕಾರಿಗಳು ಹಾಜರಿದ್ದು ಕಾರ್ಯಕ್ರಮಕ್ಕೆ ಚಾಲನೆ ನೀಡುವರೆಂದು ಆರ್ ಸಿ ಎಚ್ ಅಧಿಕಾರಿ ಡಾ ರುಕ್ಮಿಣಿ ಅವರು ಹೇಳಿದರು.
ಕಾರ್ಯಕ್ರಮದ ಯಶಸ್ಸಿಗೆ 7 ತಂಡಗಳನ್ನು ತುರ್ತು ನಿಗಾ ತಂಡ ಎಂದು ಗುರುತಿಸಲಾಗಿದೆ. ಅನುಮಾನಗಳು ಆತಂಕಗಳಿದ್ದಲ್ಲಿ,ಈ ಕೆಳಗಿನ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಲಿ ಕೋರಲಾಗಿದೆ. 944843050, 9449843194, 9448931945, 9845700807, 9480983607, 9449773045, 0824-2423672, 9483503672.

Thursday, February 16, 2012

'2012ರಲ್ಲಿ ಕರ್ನಾಟಕ ಬಾಲ ಕಾರ್ಮಿಕ ಮುಕ್ತ ರಾಜ್ಯವಾಗಲಿ'

ಮಂಗಳೂರು,ಫೆಬ್ರವರಿ.16:ಮುಂದುವರಿದ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಬಾಲ ಕಾರ್ಮಿಕ ಮುಕ್ತ ಪಟ್ಟದ ಗರಿಯನ್ನು 2012 ರಲ್ಲಿ ತಮ್ಮ ಮುಡಿಗೇರಿಸಬೇಕು ಎಂದು ಜಂಟಿ ಕಾರ್ಮಿಕ ಆಯುಕ್ತರು ಹಾಗೂ ಸದಸ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಜೆ.ಟಿ ಜಿಂಕಲಪ್ಪ ಅಭಿಪ್ರಾಯಪಟ್ಟರು.
ಇಂದು ದ.ಕ.ಜಿಲ್ಲಾ ಪಂಚಾ ಯತ್ ನ ನೇತ್ರಾ ವತಿ ಸಭಾಂ ಗಣ ದಲ್ಲಿ ಆಯೋ ಜಿಸಲಾ ಗಿದ್ದ ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂ ತ್ರಣ) ಕಾಯ್ದೆ 19 86 ಕಲಂ 17ರಡಿ ನೇಮ ಕವಾ ಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ನಿರೀಕ್ಷ ಕರು ಗಳಿಗೆ ತರ ಬೇತಿ ಮತ್ತು ಕಾರ್ಯಾ ಗಾರ ದಲ್ಲಿ ಸಂಪ ನ್ಮೂಲ ವ್ಯಕ್ತಿ ಗಳಾಗಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯ ಸಂಸ್ಥೆಗಳಲ್ಲಿ ಬಾಲಕಾರ್ಮಿಕರನ್ನು ಯಾರೂ ನೇಮಿಸಿಕೊಳ್ಳುತ್ತಿಲ್ಲ; ಆದರೆ ಮನೆ ಕೆಲಸಕ್ಕೆ ಮಕ್ಕಳನ್ನು ಬಳಸಿಕೊಳ್ಳುವ ಬಗ್ಗೆ ಜಿಲ್ಲೆಯಿಂದ ದೂರುಗಳು ದಾಖಲಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದ ಅವರು, ನಿಷೇಧದ ಕಾನೂನು ವ್ಯಾಪ್ತಿಗಳು ಹೆಚ್ಚಾಗುತ್ತಿದೆ ಎಂದರು. ಸುಪ್ರೀಂ ಕೋರ್ಟ್ ಸರ್ಕಸ್ ನಲ್ಲಿ ಮಕ್ಕಳನ್ನು ಬಳಸುವ ಬಗ್ಗೆಯೂ ನೋಟೀಸ್ ನೀಡಿದ್ದು ನಿರೀಕ್ಷಕರ ಜವಾಬ್ದಾರಿ ಇನ್ನಷ್ಟು ಹೆಚ್ಚಲಿದೆ ಎಂದರು.
ಬಾಲಕಾರ್ಮಿಕ ಪದ್ಧತಿಯ ಬಗ್ಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಮೀಕ್ಷೆ ನಡೆಸಿದ್ದು 5 ಜಿಲ್ಲೆಯಲ್ಲಿ ಮಾತ್ರ ಸಮೀಕ್ಷೆ ಬಾಕಿ ಇದೆ ಎಂದರು. ಆದರೂ ಈ ಸಂಬಂಧ ನಿಖರ ಸಮೀಕ್ಷೆ ಅಸಾಧ್ಯ ಎಂದು ಅಭಿಪ್ರಾಯಿಸಿದ ಅವರು, ಪ್ರಾಯೋಗಿಕ ಸಮಸ್ಯೆಗಳ ಬಗ್ಗೆ ಉದಾಹರಣೆ ಸಹಿತ ವಿವರಿಸಿದರು. ಮನೆಗಳಲ್ಲಿ ಮಕ್ಕಳು ದುಡಿಯುವುದನ್ನು ನಿಷೇಧಿಸಲು 2008ರ ಕಾನೂನಿನಡಿ ನಿರೀಕ್ಷಕರು ಮನೆಯೊಳಗೆ ಹೋಗಿ ತಪಾಸಣೆ ನಡೆಸುವ ಅಧಿಕಾರ ನೀಡಲಾಗಿದೆ ಎಂದರು. ಕೆಲಸದ ವ್ಯಾಪ್ತಿಯ ಹೆಚ್ಚಾಗುವ ಜೊತೆಗೆ ಹೆಚ್ಚಿನ ಅಧಿಕಾರವನ್ನು ನೀಡಲಾಗುತ್ತಿದ್ದು ಕಟ್ಟುನಿಟ್ಟಿನ ಕ್ರಮ ಕಾನೂನು ಅನುಷ್ಠಾನದಲ್ಲೂ ಆಗಬೇಕಿದೆ ಎಂದರು.
ಬೆಳಗ್ಗಿನ ಅಧಿವೇಶನದಲ್ಲಿ ಕಾನೂನು, ಕರ್ತವ್ಯ ಹಾಗೂ ಅನುಷ್ಠಾನದ ಬಗ್ಗೆ ಮಾತನಾಡಿದ ಜಿಂಕಲಪ್ಪ ಅವರು ಅಪರಾಹ್ನ ಪುನರ್ ವಸತಿ ಕುರಿತ ಮಾಹಿತಿಯನ್ನು ಶಿಬಿರಾರ್ಥಿಗಳಿಗೆ ನೀಡಿದರು. ಸಭಾ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್ ವಿ ಪಾಟೀಲ್ ಅವರು ಉದ್ಘಾಟಿಸಿ, ಯೋಜನೆಗಳು ಕಾರ್ಯಗತ ಗೊಳಿಸಲು ತರಬೇತಿಯ ಅಗತ್ಯವನ್ನು ಪ್ರತಿಪಾದಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ ಕೆ ಎನ್ ವಿಜಯಪ್ರಕಾಶ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಬಾಲಕಾರ್ಮಿಕ ಪದ್ಧತಿಯಂತಹ ಅನಿಷ್ಠ ಪದ್ಧತಿ ನಿವಾರಣೆಯ ಗುರುತರ ಹೊಣೆ ನಮ್ಮೆಲ್ಲರ ಮೇಲಿದ್ದು ಕಾರ್ಯಾಗಾರದ ಸದುಪಯೋಗವಾಗಬೇಕು ಎಂದರು. ಕೇವಲ ಕಾಯಿದೆ, ಕಾನೂನುಗಳಿಂದ ಉತ್ತಮ ಸಮಾಜನಿರ್ಮಾಣ ಅಸಾಧ್ಯವಾಗಿದ್ದು, ನಮ್ಮ ಮುಂದಿನ ಜನಾಂಗಕ್ಕೆ ಅತ್ಯುತ್ತಮ ಪರಿಸರ ನೀಡುವುದು ನಮ್ಮೆಲ್ಲ ಜವಾಬ್ದಾರಿ ಎಂದರು. ಪ್ರೇರಣೆ, ಮಾರ್ಗದರ್ಶನ ಹಾಗೂ ಪರಿಣಾಮಕಾರಿ ಅನುಷ್ಠಾನದಿಂದ ಮಾತ್ರ ನಿಷೇಧ ಕಾನೂನುಗಳು ಯಶಸ್ವಿಯಾಗಲಿವೆ ಎಂದರು.
ನಿರೀ ಕ್ಷಕರಿಗೆ ಎರಡು ಕೈ ಪಿಡಿ ಗಳನ್ನು ಸಿಇಒ ಮತ್ತು ಸಿಡ ಬ್ಲ್ಯುಸಿ ಯ ಆಶಾ ನಾಯಕ್ ಅವರು ಬಿಡು ಗಡೆ ಮಾಡಿ ದರು. ಹಾಸ ನದ ಪ್ರಾದೇ ಶಿಕ ಉಪ ಕಾರ್ಮಿಕ ಆಯು ಕ್ತರಾದ ಟಿ ಶ್ರೀನಿ ವಾಸ ಸೇರಿ ದಂತೆ ಎಲ್ಲ ಇಲಾಖೆ ಗಳ ಅಧಿ ಕಾರಿ ಗಳು ಉಪಸ್ಥಿ ತರಿದ್ದರು.

1986ರಡಿ ನೇಮಕಗೊಂಡ ನಿರೀಕ್ಷಕರ ಸಂಖ್ಯೆ: ಕಂದಾಯ ಇಲಾಖೆಯ ತಹಸೀಲ್ದಾರರು, ನಾಡಕಚೇರಿಗಳ ಉಪತಹಸೀಲ್ದಾರರು, ರೆವಿನ್ಯೂ ಇನ್ಸ್ ಪೆಕ್ಟರ್ ಗಳು. ಪಂಚಾಯತ್ ರಾಜ್ ಇಲಾಖೆಯ ಕಾರ್ಯನಿರ್ವಹಣಾಧಿಕಾರಿಗಳು, ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಅಧಿಕಾರಿಗಳು, ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿಗಳು. ಶಿಕ್ಷಣ ಇಲಾಖೆಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬ್ಲಾಕ್ ರಿಸೋಸ್ರ್ ಕೋ ಆರ್ಡಿನೇಟರ್, ಸರ್ವ ಶಿಕ್ಷಣ ಅಭಿಯಾನ ಅಧಿಕಾರಿಗಳು. ಕಾರ್ಖಾನೆ ಮತ್ತು ಬಾಯ್ಲರ್ ಗಳ ಇಲಾಖೆ ಉಪನಿರ್ದೇಶಕರು, ಹಿರಿಯ ಸಹಾಯಕ ನಿರ್ದೇಶಕರು, ಸಹಾಯಕ ನಿರ್ದೇಶಕರು. ನಗರಾಭಿವೃದ್ಧಿ ಇಲಾಖೆ ನಗರ ಸಭೆ ಆಯುಕ್ತರು, ಮುಖ್ಯಾಧಿಕಾರಿಗಳು, ಹೆಲ್ತ್ ಇನ್ಸ್ ಪೆಕ್ಟರ್ ಗಳು. ರೇಷ್ಮೆ ಇಲಾಖೆಯಿಂದ ರೇಷ್ಮೆ ಕೃಷಿ ವಿಸ್ತರಣಾಧಿಕಾರಿಗಳು, ರೇಷ್ಮೆ ಕೃಷಿ ಸಹಾಯಕ ನಿರ್ದೇಶಕರು. ಸಮಾಜ ಕಲ್ಯಾಣ ಇಲಾಖೆಯಿಂದ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಿಸ್ತರಣಾಧಿಕಾರಿಗಳು. ಕೃಷಿ ಇಲಾಖೆಯಿಂದ ಸಹಾಯಕ ನಿರ್ದೇಶಕರು, ಕೃಷಿ ಅಧಿಕಾರಿಗಳು. ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಿಂದ ಸಹಾಯಕ ನಿರ್ದೇಶಕರು, ಕೈಗಾರಿಕ ವಿಸ್ತರಣಾಧಿಕಾರಿಗಳು.

Wednesday, February 15, 2012

800 ಕೆ. ಜಿ.ನಿಷೇಧಿತ ಪ್ಲಾಸ್ಟಿಕ್ ವಶ

ಮಂಗಳೂರು, ಫೆಬ್ರವರಿ15: ಪ್ಲಾಸ್ಟಿಕ್ ನಿಷೇಧ ಕಾನೂನು ಉಲ್ಲಂಘಿಸಿ 20ಮೈಕ್ರಾನ್ ಗಳಿಗಿಂತ ಕಡಿಮೆ ಇದ್ದ 800 ಕೆಜೆ ಪ್ಲಾಸ್ಟಿಕ್ ದಾಸ್ತಾನನ್ನು ಪಾಲಿಕೆ ಆಯುಕ್ತರಾದ ಡಾ ಹರೀಶ್ ಕುಮಾರ್ ನಿರ್ದೇಶನದಂತೆ ಅನಿರೀಕ್ಷಿತ ದಾಳಿ ನಡೆಸಿ ಮಂಗಳೂರು ಮಹಾನಗರಪಾಲಿಕೆ ಅಧಿಕಾರಿಗಳು ಇಂದು ವಶಪಡಿಸಿಕೊಂಡಿಸಿದ್ದಾರೆ.
ಕಾನೂನು ಉಲ್ಲಂಘಿ ಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈ ಗೊಳ್ಳು ವುದಾಗಿ ತಿಳಿಸಿದ ಪರಿಸರ ಇಂಜಿ ನಿಯರ್ ಮಂಜು ನಾಥ್ ಅವರು, ಪ್ಲಾಸ್ಟಿಕ್ ಹೌಸ್ ಮತ್ತು ಪ್ಲಾಸ್ಟಿಕ್ ವರ್ಲ್ಡ್ ಕಳೆದ ಬಾರಿಯ ಎಚ್ಚರಿಕೆಯ ಹೊರತಾ ಗಿಯೂ ಮತ್ತೆ ತಪ್ಪನ್ನು ಪುನಾರ ವರ್ತಿ ಸಿದ್ದು ಕಾನೂನು ಉಲ್ಲಂಘ ನೆಯ ಇಂತಹ ಪ್ರಕರ ಣಗಳ ವಿರುದ್ಧ ಕಠಿಣ ಕ್ರಮ ಕೈಗೊ ಳ್ಳುವ ಎಚ್ಚ ರಿಕೆಯನ್ನು ಮಹಾ ನಗರ ಪಾಲಿಕೆ ಆಯುಕ್ತರು ನೀಡಿದ್ದಾರೆ.
ಈ ಬಾರಿ ಮೀನಾಕ್ಷಿ ಪ್ಲಾಸ್ಟಿಕ್ ನವರು ಇಂತಹುದೇ ಮಾದರಿಯ ನಿಷೇಧಿತ ಪ್ಲಾಸ್ಟಿಕ್ ತಯಾರಿಸಿ ದಾಸ್ತಾನಿರಿಸಿ ಪತ್ತೆಯಾಗಿದ್ದು ಕಾನೂನಿನುಸಾರ ಕ್ರಮಕೈಗೊಳ್ಳುವುದಾಗಿ ಆಯುಕ್ತರು ತಿಳಿಸಿದ್ದಾರೆ.
ನಿಷೇಧಿತ ಪ್ಲಾಸ್ಟಿಕ್ ಉತ್ಪಾದಿಸುವುದಾಗಲೀ, ವ್ಯಾಪಾರ ಮಾಡುವುದಾಗಲೀ ಕಂಡು ಬಂದಲ್ಲಿ ಶಿಕ್ಷೆ ಖಚಿತ ಎಂದಿದ್ದಾರೆ. ನಿಷೇಧಿತ ಪ್ಲಾಸ್ಟಿಕ್ ಚೀಲಗಳು ಬೆಂಗಳೂರು, ಮುಂಬಯಿ, ಡಾಮನ್ ನಿಂದ ವಿತರಣೆಯಾಗುವುದರ ಜೊತೆಗೆ ಬೈಕಂಪಾಡಿಯಲ್ಲೂ ಉತ್ಪಾದಿಸಲಾಗುತ್ತಿದೆ ಎಂಬ ಅಂಶ ಘಟನೆಯಿಂದ ಬೆಳಕಿಗೆ ಬಂದಿದ್ದು ಉತ್ಪಾದಕರು ಮತ್ತು ವಿತರಕರು ಕಾನೂನು ಪಾಲಿಸಬೇಕೆಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ.

Tuesday, February 14, 2012

ಮುಖ್ಯಮಂತ್ರಿಯವರಿಂದ ಅಂತಿಮ ನಮನ

ಅಗಲಿದ ರಾಜ್ಯ ಉನ್ನತ ಶಿಕ್ಷಣ ಹಾಗೂ ಮುಜರಾಯಿ ಸಚಿವರಾದ ಡಾ.ವಿ.ಎಸ್. ಆಚಾರ್ಯ ಅವರಿಗೆ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಬೆಂಗಳೂರಿನಲ್ಲಿ ಅಂತಿಮ ನಮನ ಸಲ್ಲಿಸಿದರು.


ಡಾ.ವಿ.ಎಸ್.ಆಚಾರ್ಯ ಅವರ ನಿಧನಕ್ಕೆ ಮುಖ್ಯಮಂತ್ರಿಯವರಿಂದ ಸಂತಾಪ :

ನನ್ನ ಸಚಿವ ಸಂಪುಟದ ಹಿರಿಯ ಸದಸ್ಯರು ಹಾಗೂ ಉನ್ನತ ಶಿಕ್ಷಣ ಸಚಿವರಾದ ಡಾ:ವಿ.ಎಸ್.ಆಚಾರ್ಯರವರ ಹಠಾತ್ ನಿಧನ ನನಗೆ ಅತೀವ ದು:ಖವನ್ನು ಉಂಟುಮಾಡಿದೆ. ಜನಸಂಘದ ದಿನಗಳಿಂದಲೂ ಬಿ.ಜೆ.ಪಿ.ಯೊಡನೆ ಒಡನಾಟ ಹೊಂದಿದ್ದ ಡಾ:ಆಚಾರ್ಯ ಅವರು ವೈಯಕ್ತಿಕವಾಗಿ ನನಗೆ ಗುರು, ಹಿತೈಷಿ ಹಾಗೂ ಮಾರ್ಗದಶರ್ಿ ಯಾಗಿದ್ದರು. ಮುಖ್ಯಮಂತ್ರಿಯಾದ ನಂತರವೂ ಡಾ:ಆಚಾರ್ಯ ಅವರ ಮೌಲಿಕ ಮಾರ್ಗದರ್ಶನ ನನಗೆ ದೊರಕಿತ್ತು. ಅವರ ಅಪಾರ ಆಡಳಿತ ಅನುಭವ, ಸೌಮ್ಯ ಸ್ವಭಾವ ನನಗೆ ಪ್ರೇರಕ ಶಕ್ತಿಯಾಗಿತ್ತು. ಅವರ ನಿಧನ ತೀರಾ ಅನಿರೀಕ್ಷಿತ ಮತ್ತು ಆಘಾತಕಾರಿಯಾಗಿದೆ.
ಅತಿ ಕಿರಿಯ ವಯಸ್ಸಿನಲ್ಲಿ ಉಡುಪಿಯ ಪುರಸಭೆ ಅಧ್ಯಕ್ಷರಾಗಿ ಆಚಾರ್ಯ ಅವರು ಕೈಗೊಂಡ ಅನೇಕ ಅಭಿವೃದ್ಧಿ ಕಾರ್ಯಗಳು ಇಂದಿಗೂ ಸ್ಮರಣೀಯ. ಇಡೀ ದೇಶದಲ್ಲೇ ಮೊಟ್ಟ ಮೊದಲನೇ ಬಾರಿಗೆ ತಲೆ ಮೇಲೆ ಮಲ ಹೊರುವ ಪದ್ಧತಿಯನ್ನು ರದ್ದುಮಾಡಿದ ಹೆಗ್ಗಳಿಕೆ ಅವರದು. 1975ರಿಂದ 1977ರ ತುರ್ತು ಪರಿಸ್ಥಿತಿ ಅವಧಿಯಲ್ಲಿ 19 ತಿಂಗಳ ಕಾಲ ಸೆರೆವಾಸ ಅನುಭವಿಸಿದ್ದರು. 1983ರಲ್ಲಿ ಕರ್ನಾಟಕ ವಿಧಾನ ಸಭೆಗೆ ಆಯ್ಕೆಯಾಗಿ ಬಿ.ಜೆ.ಪಿ. ಶಾಸಕಾಂಗ ಪಕ್ಷದ ನಾಯಕರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದನ್ನು ಮರೆಯಲಾಗದು.
1996, 2002 ಮತ್ತು 2006ರಲ್ಲಿ ವಿಧಾನ ಪರಿಷತ್ತಿಗೆ ಆಯ್ಕೆಯಾಗಿ, 2006ರಿಂದ 2007ರವರೆಗೆ ವೈದ್ಯಕೀಯ ಶಿಕ್ಷಣ ಸಚಿವರಾಗಿ ಒಂದೇ ವರ್ಷದಲ್ಲಿ 6 ನೂತನ ಸಕರ್ಾರಿ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಿದ ಹೆಗ್ಗಳಿಕೆ ಅವರದು. 2008ರ ನಂತರ ಗೃಹ ಖಾತೆ, ಉನ್ನತ ಶಿಕ್ಷಣ, ಮುಜರಾಯಿ, ಯೋಜನೆ, ಹೀಗೆ ಹಲವಾರು ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಿಸಿದ್ದ ಅವರು ದಕ್ಷ ಆಡಳಿತಗಾರರೆಂದು ನಿರೂಪಿಸಿದ್ದರು.
ಡಾ.ಆಚಾರ್ಯರವರು ತಮ್ಮ ರಾಜಕೀಯ ಜೀವನದುದ್ದಕ್ಕೂ ದಕ್ಷತೆ, ಪ್ರಾಮಾಣಿಕತೆ ಮತ್ತು ಸಭ್ಯತೆಯನ್ನು ಕಾಪಾಡಿಕೊಂಡು ಬಂದಂತಹ ಅತ್ಯಂತ ಧೀಮಂತ ನಾಯಕ. ಇಂತಹ ಒಬ್ಬ ಒಳ್ಳೆಯ ರಾಜಕಾರಣಿ ಹಾಗೂ ಉತ್ತಮ ಆಡಳಿತಗಾರರನ್ನು ಕಳೆದುಕೊಂಡಿರುವುದು ವೈಯಕ್ತಿಕವಾಗಿ ನನಗೆ ಮತ್ತು ರಾಜ್ಯಕ್ಕೆ ದೊಡ್ಡ ನಷ್ಟವಾಗಿದೆ. ಡಾ.ಆಚಾರ್ಯರವರ ಆತ್ಮಕ್ಕೆ ಚಿರಶಾಂತಿ ದೊರಕಲೆಂದು ಪ್ರಾರ್ಥಿಸಿ, ನಾನು ಹಾಗೂ ನನ್ನ ಪತ್ನಿ ಶೋಕತಪ್ತ ಕುಟುಂಬ ವರ್ಗ ಹಾಗೂ ಎಲ್ಲಾ ಹಿತೈಷಿಗಳಿಗೆ ಸಂತಾಪವನ್ನು ಈ ಮೂಲಕ ತಿಳಿಸುತ್ತೇವೆ.

ಸಹಿ/-

(ಡಿ.ವಿ. ಸದಾನಂದ ಗೌಡ)

ಮುಖ್ಯಮಂತ್ರಿ( ಕರ್ನಾಟಕ ಸರ್ಕಾರ)

Sunday, February 12, 2012

ದ.ಕ.ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಪ್ರವಾಸ

ಮಂಗಳೂರು,ಫೆಬ್ರವರಿ.12:ಬೆಂಗಳೂರಿನಿಂದ ಮುಂಜಾನೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು ಜಿಲ್ಲೆಯಾದ್ಯಂತ ವಿವಿಧ ಸಮಾರಂಭಗಳಲ್ಲಿ ಪಾಲ್ಗೊಂಡು ಮಾತನಾಡಿದರು.
ಸರ್ಕಿಟ್ ಹೌಸ್ ನಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ನಗರದ ಪತ್ರಿಕಾ ಭವನದ ನೂತನ ಸಭಾಂಗಣ ಉದ್ಘಾಟಿಸಿದರು. ಪುರಭವನದಲ್ಲಿ ಬಿಲ್ಲವರ ಸಮಾರಂಭದಲ್ಲಿ ಪಾಲ್ಗೊಂಡರು. ಬಳಿಕ ಒಡಿಯೂರಿನಲ್ಲಿ ಶ್ರೀ ಗುರುದೇವ ಕೈಗಾರಿಕಾ ತರಬೇತಿ ಕೇಂದ್ರ ಸಮುಚ್ಛಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡರು. ಅಲ್ಲಿಂದ ಮಾಣಿಲ ಶ್ರೀಧಾಮಕ್ಕೆ ತೆರಳಿ ಅಲ್ಲಿನ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ ಸಮುದಾಯಭವನಕ್ಕೆ 50 ಲಕ್ಷ ರೂ. ಬಿಡುಗಡೆ ಮಾಡಿದರು. ಬಳಿಕ ಉಳ್ಳಾಲದಲ್ಲಿ ರಾಣಿ ಅಬ್ಬಕ್ಕ ಉತ್ಸವ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡರಲ್ಲದೆ ನಗರದ ನೆಹರೂ ಮೈದಾನದಲ್ಲಿ ಆಯೋಜಿಸಿದ್ದ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಶತಮಾನೋತ್ತರ ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸರ್ಕಾರ ಬದ್ಧ ಎಂದರು.
ವಿವಿಧೆಡೆಗಳಲ್ಲಿ ಮುಖ್ಯಮಂತ್ರಿಗಳು ಸಭಾಸದರನ್ನುದ್ದೇಶಿಸಿ ಮಾತನಾಡಿದ ಭಾಷಣದ ಸಾರಾಂಶಗಳಿವೆ.
ಪತ್ರಿಕಾ ಭವನ:
ದಕ್ಷಿಣ ಕನ್ನಡ ಜಿಲ್ಲಾ ಪತ್ರಿಕಾ ಭವನದಲ್ಲಿ ಹೆಚ್ಚುವರಿಯಾಗಿ ನಿಮರ್ಿಸಿರುವ ನೂತನ ಸಭಾಂಗಣವನ್ನು ಸಂತೋಷದಿಂದ ಉದ್ಘಾಟಿಸಿದ್ದೇನೆ.ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಪತ್ರಿಕಾ ಭವನಗಳ ನಿರ್ಮಾಣ ಹಾಗೂ ಅಭಿವೃದ್ಧಿಗೆ ನಮ್ಮ ಸರ್ಕಾರ ತಲಾ 25 ಲಕ್ಷ ರೂ.ಗಳ ಅನುದಾನವನ್ನು ನೀಡುತ್ತಿದೆ. ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಪತ್ರಿಕಾ ಭವನ ನಿರ್ಮಾಣಗೊಂಡಿವೆ.
ಈ ಮುನ್ನ ಪತ್ರಿಕಾ ಭವನಗಳು ನಿರ್ಮಾಣ ವಾಗಿದ್ದರೆ ಅವುಗಳಿಗೆ ಹೆಚ್ಚು ವರಿ ಸೌಲಭ್ಯ ಸೇರ್ಪಡೆ ಮಾಡಲು ಸರ್ಕಾರ 12.5 ಲಕ್ಷ ರೂ.ಗಳನ್ನು ಮಂಜೂರು ಮಾಡು ತ್ತಿದೆ. ಅದ ರಂತೆ ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರದ ವತಿಯಿಂದ ಈ ಸಭಾಂಗಣ ನಿರ್ಮಾಣಕ್ಕೆ 12.5 ಲಕ್ಷ ರೂಗಳನ್ನು ಬಿಡುಗಡೆ ಮಾಡಲಾಗಿತ್ತು. ಈ ಹಣವನ್ನು ಬಳಸಿಕೊಂಡು ನೂತನ ಸಭಾಂಗಣವನ್ನು ನಿರ್ಮಿಸಲು ಶ್ರಮಿಸಿರುವ ಎಲ್ಲರಿಗೂ ನನ್ನ ಅಭಿನಂದನೆಗಳು.
2007 ರಲ್ಲಿ ಈ ಪತ್ರಿಕಾ ಭವನ ನಿರ್ಮಿಸಿದಾಗ ಸಂಸದರ ನಿಧಿಯಿಂದ ನಾನು 4 ಲಕ್ಷ ರೂ.ಗಳನ್ನು ನೀಡಿದ್ದನ್ನು ಇಲ್ಲಿ ಸಾಂದರ್ಭಿಕವಾಗಿ ಸ್ಮರಿಸುತ್ತಿದ್ದೇನೆ. ಮಾಧ್ಯಮದ ಮಿತ್ರರ ವೃತ್ತಿ ಸಂಬಂಧಿ ಚಟುವಟಿಕೆಗಳಿಗೆ ಈ ಭವನ ಉಪಯುಕ್ತವಾಗಿದೆ. ಅದು ಸಂತೋಷದ ಸಂಗತಿ. ಕರಾವಳಿ ನಗರಿ ಮಂಗಳೂರು ಒಳಗೊಂಡಂತೆ ಈ ಭಾಗದ ಪತ್ರಕರ್ತರು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಪತ್ರಿಕೋದ್ಯಮ ರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.ಜನತೆಯ ಆಶೋತ್ತರಗಳನ್ನು ಪ್ರತಿಬಿಂಬಿಸುವುದರ ಜೊತೆಗೆ ಅವರ ದು:ಖ ದುಮ್ಮಾನಗಳನ್ನು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿಯೂ ಪತ್ರಕರ್ತರು ಗುರುತರ ಸೇವೆ ಸಲ್ಲಿಸುತ್ತಿದ್ದಾರೆ.ಪ್ರಜಾ ಪ್ರಭುತ್ವ ವ್ಯವಸ್ಥೆ ಯಲ್ಲಿ ಅತ್ಯಂತ ಪ್ರಭಾವ ಶಾಲಿ ಮಾಧ್ಯಮ ವಾಗಿ ರುವ ಮುದ್ರಣ ಮತ್ತು ಎಲೆ ಕ್ಟ್ರಾನಿಕ್ ಮಾಧ್ಯ ಮಕ್ಕೆ ವರದಿ ಗಳನ್ನು ವೈಭ ವೀಕ ರಿಸದೆ ವಸ್ತ್ತುನಿಷ್ಟ ವಾಗಿ ಜನತೆಗೆ ನೀಡುವ ಗುರುತರ ಹೊಣೆ ಗಾರಿ ಕೆಯೂ ಇದೆ.ನಮ್ಮ ಸರ್ಕಾರವಂತೂ ಮುಕ್ತ, ನಿರ್ಭೀತ ಮತ್ತು ವಸ್ತುನಿಷ್ಟ ಪತ್ರಿಕೋದ್ಯಮ ಬೆಳೆಯಲು ಅಗತ್ಯ ಒತ್ತಾಸೆ ನೀಡಿದೆ.
ಪತ್ರಕರ್ತರ ಮಾಶಾಸನವನ್ನು 1,000 ರೂ.ಗಳಿಂದ 2,000 ರೂ.ಗಳಿಗೆ ಹೆಚ್ಚಿಸಿರುವುದು, ನಿವೃತ್ತ ಪತ್ರಕರ್ತರು ಮಾಶಾಸನ ಪಡೆಯಲು ಇರುವ ವರಮಾನದ ಮಿತಿಯನ್ನು ಹೆಚ್ಚಿಸಿರುವುದು, ಟಿಎಸ್ಆರ್ ಪ್ರಶಸ್ತಿ ಮಾದರಿಯಲ್ಲಿ ಮೊಹರೆ ಹಣಮಂತರಾಯರ ಹೆಸರಿನಲ್ಲಿ ಪತ್ರಿಕೋದ್ಯಮ ಪ್ರಶಸ್ತಿ ಸ್ಥಾಪಿಸಿರುವುದು ಮುಂತಾದವು ನಮ್ಮ ಸರ್ಕಾರವು ಮಾಧ್ಯಮ ರಂಗದ ಸಬಲೀಕರಣಕ್ಕೆ ಪೂರಕವಾಗಿ ತೆಗೆದುಕೊಂಡಿರುವ ಕೆಲವು ಉಪಕ್ರಮಗಳಾಗಿವೆ.ಮಾಧ್ಯಮರಂಗ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ಪೂರಕ ಪರಿಸರವನ್ನು ಮುಂದಿನ ದಿನಗಳಲ್ಲಿಯೂ ನಮ್ಮ ಸರ್ಕಾರ ಒದಗಿಸಲಿದೆ ಎಂದು ತಿಳಿಸಬಯಸುತ್ತೇನೆ.ಇಂದು ಇಡೀ ದಿನ ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆಗಳಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸುತ್ತಿದ್ದೇನೆ.ಬೆಳಗಿನ ಈ ಕಾರ್ಯಕ್ರಮದ ನಿಮಿತ್ತ ನಿಮ್ಮೆಲ್ಲರ ರಚನಾತ್ಮಕ ಒಡನಾಟ ನನಗೆ ದೊರೆತಿದೆ. ನಿಮ್ಮೆಲ್ಲರಿಗೂ ಸರ್ವರೀತಿಯಲ್ಲಿಯೂ ಶುಭಕೋರಿ ನನ್ನ ಮಾತುಗಳನ್ನು ಮುಗಿಸುತ್ತೇನೆ.
ಪುರಭವನದ ಅಖಿಲಭಾರತ ಬಿಲ್ಲವ ಯೂನಿಯನ್ ನ ಶತಮಾನೋತ್ಸವ ಸಮಾರಂಭ:ಅಖಿಲ ಭಾರತ ಬಿಲ್ಲವರ ಒಕ್ಕೂಟದ ಶತಮಾನೋತ್ಸವ ಆಚರಣೆಯನ್ನು ಸಂತೋಷದಿಂದ ನಾನು ಉದ್ಘಾಟಿಸಿದ್ದೇನೆ.ಈ ಒಕ್ಕೂಟವನ್ನು 100 ವರ್ಷಗಳ ಹಿಂದೆ ಪ್ರಾರಂಭಿಸಿ,ಒಂದು ಶತಮಾನದ ಕಾಲ ಅನು ಕರಣ ಯೋಗ್ಯ ರೀತಿ ಯಲ್ಲಿ ಮುಂದು ವರಿಸಿ ಕೊಂಡು ಬಂದಿರುವ ಸಂಬಂ ಧಪಟ್ಟ ಎಲ್ಲರಿಗೂ ಈ ಸಂದರ್ಭ ದಲ್ಲಿ ಸರ್ವ ಪ್ರಥಮದಲ್ಲಿ ನಾವೆಲ್ಲರೂ ಕೃತಜ್ಞತೆ ಅರ್ಪಿಸೋಣ.ನಿಮ್ಮ ಒಕ್ಕೂಟವು ಶಿಕ್ಷಣ, ಆರ್ಥಿಕ ಕ್ಷೇತ್ರವೂ ಒಳಗೊಂಡಂತೆ ಹಲವಾರು ಸಮಾಜಮುಖಿ ಉಪಕ್ರಮಗಳೊಂದಿಗೆ ಸದಸ್ಯರ ಸಬಲೀಕರಣಕ್ಕೆ ಬದ್ಧತೆಯಿಂದ ಶ್ರಮಿಸುತ್ತಿರುವುದು ಶ್ಲಾಘನೀಯ.ಈ ಕಾರ್ಯಕ್ರಮಕ್ಕೆ ಮುನ್ನ ಬಿಲ್ಲವ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿರುವುದು, ಬಿಲ್ಲವರ ಒಕ್ಕೂಟ ಸಮಾಜ ಮುಖಿ ಯಾಗಿ ಕಾರ್ಯ ನಿರ್ವಹಿ ಸುತ್ತಿರು ವುದರ ಒಂದು ಪ್ರಾತಿನಿಧಿಕ ಉದಾ ಹರಣೆ ಯಾಗಿದೆ.ನೂರು ವರ್ಷಗಳ ಸಾರ್ಥಕ ಸಾಧನ ಪಥದ ಕುರುಹಾಗಿ ಅತ್ಯಂತ ಮುತುವ ರ್ಜಿಯಿಂದ ಆಯೋಜಿಸಿರುವ ಈ ಶತಮಾನೋತ್ಸವ ಆಚರಣೆಯು ನಿಮ್ಮೆಲ್ಲರ ಸಬಲೀಕರಣಕ್ಕೆ ಒಂದು ಸಮರ್ಥ ವೇದಿಕೆಯಾಗಲಿ ಎಂದು ಹಾರೈಸುತ್ತೇನೆ.ಬದಲಾಗುತ್ತಿರುವ ಕಾಲಘಟ್ಟಕ್ಕನುಗುಣವಾಗಿ ಆಧುನಿಕ ತಂತ್ರಜ್ಞಾನಗಳೆಲ್ಲವನ್ನು ಅಳವಡಿಸಿಕೊಂಡು, "ಸಂಘಟನೆಗಾಗಿ ಸಂಘಟನೆಯಲ್ಲ, ಸೇವೆಗಾಗಿ ಸಂಘಟನೆ" ಎಂಬ ಮೂಲ ಆಶಯಕ್ಕನುಗುಣವಾಗಿ ಅಖಿಲ ಭಾರತ ಬಿಲ್ಲವ ಒಕ್ಕೂಟ ಮುಂದುವರಿಯಲೆಂದು ಆಶಿಸುತ್ತೇನೆ.ಸಮಕಾಲೀನ ಭಾರತೀಯ ಗುರುಪರಂಪರೆಯಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನ ಪಡೆದಿರುವ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಮುಖ್ಯ ಸಂದೇಶವಾದ ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿ ಎನ್ನುವ ತತ್ವದಡಿಯಲ್ಲಿ ಬಿಲ್ಲವ ಸಮುದಾಯ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರಿಯುತ್ತಿರುವುದು ಶ್ಲಾಘನೀಯ.
ಸರ್ವ ಜನಾಂಗದ ಶಾಂತಿಯ ತೋಟ ದಂತಿರುವ ಕರ್ನಾಟ ಕವು ಎಲ್ಲಾ ಅರ್ಥ ಗಳಲ್ಲಿ ಒಂದು ಮಿನಿ ಭಾರತವೇ ಆಗಿದ್ದು, ವಿವಿಧ ಸಮುದಾ ಯಗಳ ಸಾಮ ರಸ್ಯದ ಬಾಳ್ವೆಗೆ ಹೆಸರಾಗಿದೆ.ಕಳೆದ ಮೂರು ಮುಕ್ಕಾಲು ವರ್ಷಗಳಲ್ಲಿ ನಮ್ಮ ಸರ್ಕಾರವು ಬಿಲ್ಲವ ಸಮುದಾ ಯವೂ ಸೇರಿದಂತೆ ಸಮಾಜದ ಎಲ್ಲಾ ಸಮುದಾ ಯಗಳ ವಿಕಾಸಕ್ಕೆ ಆದ್ಯತೆ ನೀಡಿದೆ.ಬಿಲ್ಲವ ಸಮಾಜದ ಕುಲ ಕಸುಬು ಮಾಡುವ ಮೂರ್ತೆದಾರರಿಗೆ ಶೇ.6ರ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡಿರುವುದು, ಮೂರ್ತೆದಾರರ ಸೊಸೈಟಿಗಳ ಆಡಿಟ್ ಫೀ ಮನ್ನಾ ಮಾಡಿರುವುದು ಮುಂತಾದುವು ನಮ್ಮ ಸರ್ಕಾರ ಬಿಲ್ಲವ ಸಮುದಾಯಕ್ಕೆ ನೀಡಿರುವ ಕೆಲವು ಸೌಲಭ್ಯಗಳಾಗಿವೆ.ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಗೆ 2010-11ನೇ ಸಾಲಿನಲ್ಲಿ 606 ಕೋಟಿ ರೂ.ಗಳು, 2011-12ನೇ ಸಾಲಿನಲ್ಲಿ 760 ಕೋಟಿ ರೂ.ಗಳ ದಾಖಲೆ ಅನುದಾನವನ್ನು ಮೀಸಲಿಡುವ ಮೂಲಕ ಹಿಂದುಳಿದ ವರ್ಗಗಳ ಒಟ್ಟಾರೆ ವಿಕಾಸಕ್ಕೆ ನಮ್ಮ ಸರ್ಕಾರ ಒಂದು ಹೊಸ ಆಯಾಮ ನೀಡಿದೆ.
ಒಡಿಯೂರಿನಲ್ಲಿ ಸಿಎಂ:ದಕ್ಷಿಣದ ಗಾಣಿಗಾಪುರವೆಂದೇ ಖ್ಯಾತಿ ಪಡೆದಿರುವ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಕ್ಕೆ ಬಂದಿರುವುದು ನನ್ನಲ್ಲಿ ಹೊಸ ಚೈತನ್ಯ ಮೂಡಿಸಿದೆ.ಶ್ರೀ ಕ್ಷೇತ್ರದ ವತಿಯಿಂದ ಕನ್ಯಾನದ ಬಳಿ ನೂತನವಾಗಿ ನಿರ್ಮಿಸಿರುವ ಶ್ರೀ ಗುರುದೇವ ಕೈಗಾರಿಕಾ ತರಬೇತಿ ಕೇಂದ್ರ ಕಟ್ಟಡವನ್ನು ಇಂದು ಸಂತೋಷದಿಂದ ಉದ್ಘಾಟಿಸಿದ್ದೇನೆ.ಸುಸಂಸ್ಕೃತ ಸಮಾಜ ನಿರ್ಮಾಣ ವಾದಾಗ ಮಾತ್ರ ಸಶಕ್ತ ರಾಷ್ಟ್ರ ರೂಪು ಗೊಳ್ಳಲು ಸಾಧ್ಯ. ಗುರುದೇವ ದತ್ತ ಸಂಸ್ಥಾನ ಇದೇ ಧ್ಯೇಯವನ್ನು ಆಧಾರ ವಾಗಿಟ್ಟು ಕೊಂಡು ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ಶಿಕ್ಷಣವೂ ಸೇರಿದಂತೆ ಧರ್ಮ, ಸಂಸ್ಕೃತಿ, ಕಲೆ ಮುಂತಾದವುಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಯ ನಿಟ್ಟಿನಲ್ಲಿ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನ ಸಕ್ರಿಯವಾಗಿ ತೊಡಗಿಸಿಕೊಂಡು ಈ ಭಾಗದ ಜನರ ಮೆಚ್ಚುಗೆ ಗಳಿಸಿದೆ.
ಪೂಜ್ಯ ಗುರುದೇವಾನಂದ ಸ್ವಾಮಿಗಳ ದಿವ್ಯ ಮಾರ್ಗದರ್ಶನದಲ್ಲಿ ಈ ಕ್ಷೇತ್ರವು ಹಲವಾರು ಸಮಾಜಮುಖಿ ಉಪಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡುತ್ತಿದೆ.ನಮ್ಮ ಯುವಕರಿಗೆ ಕೇವಲ ಶಿಕ್ಷಣ ನೀಡಿದರೆ ಸಾಲದು. ಅವರು ಉದ್ಯೋಗಶೀಲರಾಗಲು ಅಗತ್ಯ ಕೌಶಲ್ಯವನ್ನೂ ನೀಡಬೇಕು. ಅದ್ದರಿಂದಲೇ ನಮ್ಮ ಸರ್ಕಾರ ಕೌಶಲ್ಯ ಆಯೋಗ ಸ್ಥಾಪಿಸುವ ಮೂಲಕ ವಿದ್ಯಾರ್ಥಿ ಯುವ ಜನರಿಗೆ ರಾಜ್ಯದಾದ್ಯಂತ ಉದ್ಯೋಗ - ಕೌಶಲ್ಯ ತರಬೇತಿ ನೀಡುತ್ತಿದೆ.
ಕಳೆದ ಮೂರು ಮುಕ್ಕಾಲು ವರ್ಷಗಳಲ್ಲಿ ವಿವಿಧ ಉದ್ಯೋಗ ಮೇಳಗಳ ಮೂಲಕ 3.15 ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದ್ದು, 2.9 ಲಕ್ಷ ಮಂದಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗಿದೆ.ಇದೇ ಮಾದರಿಯಲ್ಲಿ ಗುರುದೇವ ದತ್ತ ಸಂಸ್ಥಾನವು ಕೈಗಾರಿಕಾ ತರಬೇತಿ ಕೇಂದ್ರ ಸ್ಥಾಪಿಸುವ ಮೂಲಕ ಯುವ ಜನರ ಉದ್ಯೋಗಾರ್ಹತೆ ಹೆಚ್ಚಿಸಲು ಅಗತ್ಯ ತರಬೇತಿ ದೊರಕಿಸಿಕೊಡುತ್ತಿರುವುದು ಪ್ರಶಂಸನೀಯ. ಸರ್ಕಾರದ ಯಾವುದೇ ಅನುದಾನವಿಲ್ಲದೆ ಈ ರೀತಿ ಧಾರ್ಮಿಕ ಕೇಂದ್ರಗಳು ಸಮಾಜದ ಒಟ್ಟಾರೆ ವಿಕಾಸಕ್ಕೆ ಕೊಡುಗೆ ನೀಡುವ ಮೂಲಕ ಸರ್ಕಾರದ ಕಾರ್ಯನಿರ್ವಹಣೆಗೆ ಪೂರಕ ಬೆಂಬಲ ನೀಡುತ್ತಿವೆ.
ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯಗಳು ಜನತೆಯ ಮೂಲಭೂತ ಅಗತ್ಯಗಳಾಗಿವೆ. ಇವುಗಳನ್ನು ಒದಗಿಸುವುದು ಯಾವುದೇ ಪ್ರಜಾತಂತ್ರ ಸರ್ಕಾರದ ಪ್ರಾಥಮಿಕ ಹೊಣೆಗಾರಿಕೆಯಾಗಿದೆ. ಆದರೆ ಭಾರತದಂತಹ ವಿಶಾಲ ರಾಷ್ಟ್ರ ಹಾಗೂ ಕರ್ನಾಟಕದಂತಹ ವಿಶಾಲವಾದ ರಾಜ್ಯದಲ್ಲಿ ಎಲ್ಲರಿಗೂ ಸರ್ಕಾರವೇ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸುವುದು ಕಷ್ಟಸಾಧ್ಯ. ಹಲವು ಮಠ ಮಾನ್ಯಗಳು ಸರ್ಕಾರದ ಈ ಹೊಣೆಗಾರಿಕೆಯನ್ನು ಸ್ವಯಂ ತಾವೇ ವಹಿಸಿಕೊಂಡು ಶಿಕ್ಷಣ ಸಂಸ್ಥೆ ಹಾಗೂ ಆಸ್ಪತ್ರೆಗಳನ್ನು ನಿರ್ಮಿಸಿ ಜನರಿಗೆ ನೆರವಾಗುತ್ತಿರುವುದು ಸ್ವಾಗತಾರ್ಹ ಬೆಳವಣಗೆಯಾಗಿದೆ. ನಮ್ಮ ಸರ್ಕಾರ ಇಂತಹ ಮಠ ಮಂದಿರಗಳು ಹಾಗೂ ಧಾರ್ಮಿಕ ಕೇಂದ್ರಗಳಿಗೆ ಧನ ಸಹಾಯ ನೀಡುತ್ತಿದೆ.
ರಾಜ್ಯದ ಇತಿಹಾಸದಲ್ಲಿ ಈ ರೀತಿ ಆಯವ್ಯಯದಲ್ಲಿಯೇ ಮಠ ಮಂದಿರಗಳಿಗೆ ಆರ್ಥಿಕ ಅನುದಾನ ಮೀಸಲಿಟ್ಟ ಪ್ರಥಮ ಸರ್ಕಾರ ನಮ್ಮದು. ಸರ್ಕಾರ ನೀಡಿರುವ ಅನುದಾನ ಆ ಕ್ಷೇತ್ರಗಳಿಗೆ ಬರುವ ಭಕ್ತರಿಗೆ ಸೌಲಭ್ಯಗಳನ್ನು ಒದಗಿಸುವಲ್ಲಿ ಸಹಕಾರಿಯಾಗಿದೆ ಎಂದು ಈ ಸಂದರ್ಭದಲ್ಲಿ ಹೆಮ್ಮೆಯಿಂದ ತಿಳಿಸಬಯಸುತ್ತೇನೆ.ಮಠ ಮಂದಿರಗಳ ಈ ಸಮಾಜಮುಖಿ ಉಪಕ್ರಮಗಳಿಗೆ ಮುಂದಿನ ದಿನಗಳಲ್ಲಿಯೂ ನಮ್ಮ ಸರ್ಕಾರ ಅನುದಾನ ನೀಡುವುದನ್ನು ಮುಂದುವರಿಸಲಿದೆ.
ಸರ್ಕಾರದಿಂದ ಯಾವುದೇ ನೆರವು ಪಡೆಯದೆ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನ ಶೈಕ್ಷಣಕ ಸೇವೆಯಲ್ಲಿ ನಿರತವಾಗಿದೆ. ಈ ಸಂಸ್ಥೆಯ ಪವಿತ್ರ ಮಾರ್ಗದರ್ಶನದಲ್ಲಿ ವಿದ್ಯೆ ಕಲಿತ ಯುವಕ ಯುವತಿಯರು ಮುಂದೆ ಸಮಾಜಕ್ಕೆ ಎಲ್ಲಾ ಕ್ಷೇತ್ರಗಳಲ್ಲಿ ಸಕಾರಾತ್ಮಕ ಕೊಡುಗೆ ನೀಡುತ್ತಿದ್ದಾರೆ. ಇದು ಅಭಿನಂದನೀಯ.ಇಂದಿನ ನನ್ನ ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸದ ಅಂಗವಾಗಿ ಈ ಕ್ಷೇತ್ರಕ್ಕೆ ಬಂದಿರುವುದು, ಪೂಜ್ಯರ ಆಶೀರ್ವಾದ ಪಡೆದಿರುವುದು ನನ್ನಲ್ಲಿ ಹೊಸ ಹುರುಪು ನೀಡಿದೆ.
ದೈವದ ಕೃಪಾಶೀರ್ವಾದ, ಪೂಜ್ಯರ ಮಾರ್ಗದರ್ಶನ ಹಾಗೂ ನಿಮ್ಮೆಲ್ಲರ ರಚನಾತ್ಮಕ ಒಡನಾಟದಿಂದ ಮುಂದಿನ ದಿನಗಳಲ್ಲಿಯೂ ನಾಡಿನ ಎಲ್ಲರ ಬದುಕನ್ನು ಇನ್ನು ಹೆಚ್ಚಿನ ಪ್ರಮಾಣ ಹಾಗೂ ತೀವ್ರತೆಯಿಂದ ಹಸನುಗೊಳಿಸಲು ನಮ್ಮ ಸರ್ಕಾರ ಶ್ರಮಿಸಲಿದೆ ಎಂದು ತಿಳಿಸುತ್ತಾ, ನಿಮ್ಮೆಲ್ಲರಿಗೂ ಶುಭಕೋರಿ ನನ್ನ ಮಾತುಗಳನ್ನು ಮುಗಿಸುತ್ತೇನೆ.
ಮಾಣಿಲದಲ್ಲಿ ಸಿಎಂ:


ಉಳ್ಳಾಲದಲ್ಲಿ ರಾಣಿ ಅಬ್ಬಕ್ಕ ಉತ್ಸವದಲ್ಲಿ ಮುಖ್ಯಮಂತ್ರಿಗಳು:
ತುಳುನಾಡಿನ ವೀರ ವನಿತೆ ರಾಣಿ ಅಬ್ಬಕ್ಕನ ಸ್ಮರಣಾರ್ಥ ನೆನ್ನೆಯಿಂದ ಅರ್ಥಪೂರ್ಣವಾಗಿ ಇಲ್ಲಿ ಜರುಗಿರುವ ಈ ಉತ್ಸವದ ಸಮಾರೋಪ ಸಮಾರಂಭದಲ್ಲಿ ಸಂತೋಷದಿಂದ ಭಾಗಿಯಾಗಿದ್ದೇನೆ. ವೀರರಾಣಿ ಅಬ್ಬಕ್ಕ ಪ್ರಶಸ್ತಿಗೆ ಪಾತ್ರರಾಗಿರುವ ಸಾಹಿತಿ ಶ್ರೀಮತಿ ಲಲಿತಾ ರೈ ಹಾಗೂ ರಂಗ ಕಲಾವಿದೆ ಶ್ರೀಮತಿ ಜಯಶೀಲರವರನ್ನು ಅಭಿನಂದಿಸುತ್ತೇನೆ.ಅಬ್ಬಕ್ಕ ತುಳು ನಾಡ ವನಿತೆ ಯರ ಕ್ಷಾತ್ರ ತೇಜದ ಪ್ರತೀಕ. ಸ್ವಾಭಿ ಮಾನದ ಸಂಕೇತ. ಇಂತಹ ವೀರ ಮಹಿಳೆಯ ನೆನಪಿ ನಲ್ಲಿ ಉತ್ಸವ ಆಚರಿಸುವ ಮೂಲಕ ಆಕೆಯ ಗುಣ ವಿಶೇಷ ಮತ್ತು ಸಾಧನೆ ಯನ್ನು ನಾವು ವಿಶೇಷವಾಗಿ ನಮ್ಮ ಮಹಿಳೆ ಯರು ಅನುಸರಿಸುವ ಪ್ರಯತ್ನಕ್ಕೆ ಪ್ರೇರಣೆ ನೀಡುವುದೇ ಸರ್ಕಾರದ ಆಶಯವಾಗಿದೆ. ಒಂದು ನಾಡಿನ ಹಿರಿಮೆ-ಗರಿಮೆಗಳನ್ನು ನಿರ್ಧರಿಸುವಾಗ ಆ ನಾಡಿನ ವೀರ ಪುರುಷರು, ವೀರ ಮಹಿಳೆಯರು, ಸಾಂಸ್ಕೃತಿಕ ನಾಯಕರು ಮತ್ತು ಆಳಿದ ಅರಸು-ಅರಸಿಯರು ನೀಡಿದ ಕೊಡುಗೆಗಳ ಜೊತೆಗೆ ಸಾಮಾನ್ಯ ಶ್ರಮಿಕ ವರ್ಗದ ಕೊಡುಗೆಯೂ ಕೂಡಾ ಪರಿಗಣಸಬೇಕಾಗುತ್ತದೆ.ಸಮ ಕಾಲೀನ ಇತಿಹಾಸ ಕಾರರು ಚಿತ್ರಿಸಿ ರುವಂತೆ ಅಬ್ಬಕ್ಕ ಸಾಮಾನ್ಯ ಶ್ರಮಿಕ ಮಹಿಳೆಯ ವ್ಯಕ್ತಿತ್ವ ಹೊಂದಿ ದ್ದಳು. ಪೋರ್ಚು ಗೀಸರ ವಿರುದ್ಧ ಹೋರಾ ಡುವ ಮುನ್ನ ಮಹಿಳಾ ಸ್ವಾಭಿ ಮಾನ ಮತ್ತು ಸ್ವಾ ತಂತ್ರ್ಯಕ್ಕೆ ಅಡ್ಡಿ ಯಾಗಿದ್ದ ಶಕ್ತಿ ಗಳನ್ನು ಮಣಿಸಿ ದ್ದಳು. ಈ ಮಣ್ಣನ ಕೃಷಿ ಮತ್ತು ವ್ಯಾಪಾರ ಪರಕೀ ಯರ ಕಪಿ ಮುಷ್ಟಿಗೆ ಸಿಲುಕ ದಂತೆ ಎಚ್ಚರ ವಹಿಸಿದ್ದಳು. ಇವೆಲ್ಲವೂ ಆಕೆಯ ದೂರದೃಷ್ಠಿಯ ಸಂಕೇತ ಗಳಾಗಿವೆ.
ಸಮಕಾಲೀನ ಬೆಳವಣಗೆಗಳ ಹಿನ್ನೆಲೆಯಲ್ಲಿ ಈ ಅಂಶಗಳನ್ನು ವಿಶ್ಲೇಷಿಸಿದಾಗ ಅಬ್ಬಕ್ಕದೇವಿ ತನ್ನ ಕಾಲದಿಂದಾಚೆಗೆ ಎಷ್ಟು ಚಿಂತನೆ ನಡೆಸಿದ್ದಳು ಮತ್ತು ಆಕೆಯ ನಿಲುವು ಎಷ್ಟೊಂದು ಪ್ರಸ್ತುತ ಎಂಬುದು ವೇದ್ಯವಾಗುತ್ತದೆ. ನಿನ್ನೆ ಬೆಳಿಗ್ಗೆಯಿಂದ ಈ ಉತ್ಸವದ ಅಂಗವಾಗಿ ಇಲ್ಲಿ ಜರುಗಿರುವ ಸಂಗೀತ, ನೃತ್ಯ, ನಾಟಕ, ಜಾನಪದ ಮುಂತಾದ ಕಾರ್ಯಕ್ರಮಗಳಿಗೆ ನೀವೆಲ್ಲಾ ಸಾಕ್ಷಿಯಾಗಿದ್ದೀರಿ. ಅಬ್ಬಕ್ಕನ ವ್ಯಕ್ತಿತ್ವವನ್ನು ನೈಜ ರೀತಿಯಲ್ಲಿ ಅರ್ಥೈಸಿಕೊಳ್ಳಲು ಇವು ಸಹಕಾರಿಯಾಗಿದ್ದವೆಂದು ನಾನು ಭಾವಿಸುತ್ತೇನೆ.
ವೀರ ಪುರುಷರು ಮತ್ತು ವೀರ ವನಿತೆಯರನ್ನು ಸಂಕುಚಿತ ಜಾತಿ ಕಟ್ಟುಪಾಡುಗಳಿಗೆ ಒಳಪಡಿಸುವ ಅಕ್ಷಮ್ಯ ಪ್ರಯತ್ನ ನಮ್ಮ ನಾಡಿನಲ್ಲಿ ನಡೆದಿದೆ. ಇದು ತಪ್ಪು. ಯಾರೇ ಸಾಧಕರಾಗಲೀ ಅವರು ಎಲ್ಲರಿಗೂ ಪ್ರಾತಃಸ್ಮರಣಯರು. ಎಲ್ಲರಿಗೂ ಸ್ಫೂರ್ತಿ ನೀಡುವ ಅಂತಹವರನ್ನು ಒಂದು ಜಾತಿಗೆ ಅಥವಾ ಒಂದು ಪ್ರಾಂತ್ಯಕ್ಕೆ ಸೀಮಿತಗೊಳಿಸದೆ ಎಲ್ಲಾ ಭಾರತೀಯರೂ ಸ್ವೀಕರಿಸುವ ಮೂಲಕ ಪ್ರೇರಣೆ ಪಡೆಯಬೇಕಾಗಿದೆ.
ಈ ಹಿನ್ನೆಲೆಯಲ್ಲಿ ರಾಣ ಅಬ್ಬಕ್ಕ ತುಳುನಾಡಿನ ಆಚೆಯಿಂದ ಕರಾವಳಿ ಕರ್ನಾಟಕದ ಮೂಲಕ ಸಮಗ್ರ ಕರ್ನಾಟಕವನ್ನು ತಲುಪಿ ಇಡೀ ಭಾರತದ ಆರಾಧ್ಯ ವ್ಯಕ್ತಿಗಳಲ್ಲಿ ಒಬ್ಬಳೆಂದು ಪರಿಗಣತಳಾಗಲಿ. ಆಕೆಯ ಬದುಕು ಮತ್ತು ಸಾಧನೆ ಸರ್ವತ್ರ ಸರ್ವರಿಗೂ ಸ್ಫೂರ್ತಿ ನೀಡಲಿ ಎಂದು ಆಶಿಸುತ್ತೇನೆ.ಭಾರತೀಯರ ಸ್ವಾಭಿಮಾನವನ್ನು ಎತ್ತಿ ಹಿಡಿದ ಉಳ್ಳಾಲದ ರಾಣಿ ಅಬ್ಬಕ್ಕ ದೇವಿಯ ಜೀವನದ ಮೇರು ಮೌಲ್ಯಗಳನ್ನು ಅಳವಡಿಸಿಕೊಂಡು ಒಂದು ಮಾದರಿ ಸಮಾಜ ನಿರ್ಮಿಸುವ ಮೂಲಕ ಆ ವೀರವನಿತೆಯನ್ನು ನಿಜವಾದ ಅರ್ಥದಲ್ಲಿ ಸ್ಮರಿಸೋಣವೆಂದು ಕರೆ ನೀಡುತ್ತೇನೆ.ರಾಣಿ ಅಬ್ಬಕ್ಕ ಉತ್ಸವ 2012ನ್ನು ಅಚ್ಚುಕಟ್ಟಾಗಿ ಬದ್ಧತೆಯಿಂದ ಆಯೋಜಿಸಿರುವ ಸಂಬಂಧಪಟ್ಟ ಎಲ್ಲರಿಗೂ ಅಭಿನಂದಿಸುತ್ತೇನೆ.
ವೀರವನಿತೆ ರಾಣಿ ಅಬ್ಬಕ್ಕನ ಭವ್ಯ ಬದುಕನ್ನು ಅಭಿವ್ಯಕ್ತಿಗೊಳಿಸುವ ಕಲಾ ಗ್ಯಾಲರಿಯನ್ನು 25.12.2011ರಂದು ಮಣಿಪಾಲದಲ್ಲಿ ನಾನು ಉದ್ಘಾಟಿಸಿದ್ದೆ ಎಂಬ ಅಂಶವು ಈ ಸಂದರ್ಭದಲ್ಲಿ ನನಗೆ ನೆನಪಾಗುತ್ತಿದೆ.
ನಾಡು ಮತ್ತು ನುಡಿಯ ಸಮಗ್ರ ಬೆಳವಣಿಗೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ರಾಜ್ಯದ ಇತಿಹಾಸದಲ್ಲಿಯೇ ದಾಖಲೆಯ ವಾರ್ಷಿಕ ಸುಮಾರು 250 ಕೋಟಿ ರೂ.ಗಳ ಅನುದಾನ ನೀಡಿರುವುದೇ ಇದಕ್ಕೆ ಸಾಕ್ಷಿ.ಮುಂಬರುವ ದಿನಗಳಲ್ಲೂ ನಾಡು ಮತ್ತು ನುಡಿಯ ಬೆಳವಣಿಗೆಗೆ ನಮ್ಮ ಸರ್ಕಾರ ಎಲ್ಲಾ ರೀತಿಯಲ್ಲೂ ನೆರವು ನೀಡುವುದಾಗಿ ಭರವಸೆ ನೀಡಿ ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳನ್ನು ಹೇಳಿ ನನ್ನ ಮಾತುಗಳನ್ನು ಮುಗಿಸುತ್ತೇನೆ.