Friday, February 3, 2012

ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ:ದ.ಕ.ಪ್ರಥಮ

ಮಂಗಳೂರು,ಫೆಬ್ರವರಿ.03:ಚಿತ್ರದುರ್ಗದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಆ ಸ್ಪರ್ಧೆಯಲ್ಲಿ ವಿವಿಧ ವಿಭಾಗಗಳಲ್ಲಿ ವಿಜೇತರಾಗಿರುವ ಜಿಲ್ಲೆಯ ವಿವಿಧ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ಇಂದು ದ.ಕ. ಜಿಲ್ಲಾ ಪಂಚಾಯತ್ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ನಡೆಯಿತು.
ನಗರದ ಕಾವೂರು-ಬೊಂದೇಲ್ ಮಹಾತ್ಮಗಾಂಧಿ ಸೆಂಟನರಿ ಹೈಸ್ಕೂಲ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.ಪ್ರತಿಭಾ ಕಾರಂ ಜಿಯಲ್ಲಿ ವೈ ಯಕ್ತಿಕ ಹಾಗೂ ಸಾಮೂ ಹಿಕ ಸ್ಪರ್ಧೆ ಗಳಲ್ಲಿ ರಾಜ್ಯ ಮಟ್ಟ ದಲ್ಲಿ ವಿಜೇತ ರಾಗಿ ರುವ ಜಿಲ್ಲೆಯ ವಿವಿಧ ಶಾಲೆ ಗಳ ಪ್ರತಿ ಭಾವಂತ ವಿದ್ಯಾ ರ್ಥಿಗ ಳನ್ನು ಪುರ ಸ್ಕರಿಸಿ ಮಾತ ನಾಡಿದ ಅವರು, ಪ್ರತಿ ಯೊಬ್ಬ ವಿದ್ಯಾರ್ಥಿ ಯಲ್ಲಿ ಯೂ ವಿಶೇಷ ವಾದ ಪ್ರತಿಭೆ ಅಡಗಿದ್ದು, ಹೆತ್ತವರು ಮತ್ತು ಗುರು ಗಳ ಸಮರ್ಥ ಮಾರ್ಗದರ್ಶನದಿಂದ ಮಕ್ಕಳಲ್ಲಿರುವ ಪ್ರತಿಭೆಗಳು ಹೊರಹೊಮ್ಮಿ ಅವರು ಸಮಾಜದ ಆಸ್ತಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.ಪಠ್ಯ ಚಟುವಟಿಕೆಯ ಜೊತೆಗೆ ಪಠ್ಯೇತರ ಚಟುವಟಿಕೆ ಹಾಗೂ ಪರಿಸರದ ಬಗ್ಗೆ ಆಸಕ್ತಿ, ಕಾಳಜಿಯನ್ನು ವಿದ್ಯಾರ್ಥಿಗಳು ಬೆಳೆಸಬೇಕೆಂದು ಕರೆ ನೀಡಿದ ಅವರು ತಮ್ಮ ಶಾಲಾ ದಿನಗಳನ್ನು ನೆನಪಿಸಿಕೊಂಡರು.ರಾಜ್ಯ ಮಟ್ಟದ ಪ್ರತಿಭಾ ಕಾರಂಜಿ ಯಲ್ಲಿ ಜಿಲ್ಲೆಗೆ ದೊರೆ ತಿರುವ ಸಮಗ್ರ ಪ್ರಶ ಸ್ತಿಯ ಶೀಲ್ಡ ನ್ನು ರಾಜ್ಯ ಮಟ್ಟದ ನೋಡಲ್ ಅಧಿ ಕಾರಿ ಎ.ಐ. ಖಾಝಿ ಯವರು ದ.ಕ. ಜಿಲ್ಲಾ ಸಾರ್ವ ಜನಿಕ ಶಿಕ್ಷಣ ಇಲಾ ಖೆಯ ವಿದ್ಯಾಂಗ ಉಪ ನಿರ್ದೇ ಶಕ ಮೋಸೆಸ್ ಜಯ ಶೇಖ ರಿಗೆ ಹಸ್ತಾಂ ತರಿ ಸಿದರು.
ಇದೇ ಸಂದರ್ಭ ರಾಜ್ಯಮಟ್ಟದ ಪ್ರತಿಭಾ ಕಾರಂಜಿಯಲ್ಲಿ ವಿಜೇತರಾಗಿರುವ ವಿದ್ಯಾರ್ಥಿನಿ ಖಿಲಾ ಕೆ. ಜನಪದ ಗೀತೆ ಹಾಗೂ ಗಝಲೊಂದನ್ನು ವೇದಿಕೆಯಲ್ಲಿ ಹಾಡಿದರೆ, ತಮಿಳು ಭಾಷಣದಲ್ಲಿ ವಿಜೇತರಾಗಿರುವ ಆಯಿಷತ್ ತಸ್ರೀಫ್ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದರು.ವೇದಿಕೆಯಲ್ಲಿ ವಿದ್ಯಾಧಿಕಾರಿ ಸದಾನಂದ ಪೂಂಜಾ, ಕ್ಷೇತ್ರ ಶಿಕ್ಷಣಾಧಿಕಾರಿ ದಯಾವತಿ, ಬಿ.ವಿ. ಮಲ್ಲೇಶಪ್ಪ, ನರಸಿಂಹ ಭಟ್, ರಾಮಚಂದ್ರ ಗೌಡ, ಮಹಾತ್ಮಗಾಂಧಿ ಸೆಂಟಿನರಿ ಹೈಸ್ಕೂಲ್ನ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಮೆಟಿಲ್ಡಾ ಉಪಸ್ಥಿತರಿದ್ದರು.ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೆಶಕ ಮೋಸೆಸ್ ಜಯಶೇಖರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿ ಸುರೇಖಾ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.