Thursday, February 16, 2012

'2012ರಲ್ಲಿ ಕರ್ನಾಟಕ ಬಾಲ ಕಾರ್ಮಿಕ ಮುಕ್ತ ರಾಜ್ಯವಾಗಲಿ'

ಮಂಗಳೂರು,ಫೆಬ್ರವರಿ.16:ಮುಂದುವರಿದ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆ ಬಾಲ ಕಾರ್ಮಿಕ ಮುಕ್ತ ಪಟ್ಟದ ಗರಿಯನ್ನು 2012 ರಲ್ಲಿ ತಮ್ಮ ಮುಡಿಗೇರಿಸಬೇಕು ಎಂದು ಜಂಟಿ ಕಾರ್ಮಿಕ ಆಯುಕ್ತರು ಹಾಗೂ ಸದಸ್ಯ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಬಾಲ ಕಾರ್ಮಿಕ ಯೋಜನಾ ಸೊಸೈಟಿ ಜೆ.ಟಿ ಜಿಂಕಲಪ್ಪ ಅಭಿಪ್ರಾಯಪಟ್ಟರು.
ಇಂದು ದ.ಕ.ಜಿಲ್ಲಾ ಪಂಚಾ ಯತ್ ನ ನೇತ್ರಾ ವತಿ ಸಭಾಂ ಗಣ ದಲ್ಲಿ ಆಯೋ ಜಿಸಲಾ ಗಿದ್ದ ಬಾಲ ಕಾರ್ಮಿಕ (ನಿಷೇಧ ಮತ್ತು ನಿಯಂ ತ್ರಣ) ಕಾಯ್ದೆ 19 86 ಕಲಂ 17ರಡಿ ನೇಮ ಕವಾ ಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲ ನಿರೀಕ್ಷ ಕರು ಗಳಿಗೆ ತರ ಬೇತಿ ಮತ್ತು ಕಾರ್ಯಾ ಗಾರ ದಲ್ಲಿ ಸಂಪ ನ್ಮೂಲ ವ್ಯಕ್ತಿ ಗಳಾಗಿ ಅವರು ಮಾತನಾಡುತ್ತಿದ್ದರು.
ಜಿಲ್ಲೆಯ ಸಂಸ್ಥೆಗಳಲ್ಲಿ ಬಾಲಕಾರ್ಮಿಕರನ್ನು ಯಾರೂ ನೇಮಿಸಿಕೊಳ್ಳುತ್ತಿಲ್ಲ; ಆದರೆ ಮನೆ ಕೆಲಸಕ್ಕೆ ಮಕ್ಕಳನ್ನು ಬಳಸಿಕೊಳ್ಳುವ ಬಗ್ಗೆ ಜಿಲ್ಲೆಯಿಂದ ದೂರುಗಳು ದಾಖಲಾಗುತ್ತಿರುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದ ಅವರು, ನಿಷೇಧದ ಕಾನೂನು ವ್ಯಾಪ್ತಿಗಳು ಹೆಚ್ಚಾಗುತ್ತಿದೆ ಎಂದರು. ಸುಪ್ರೀಂ ಕೋರ್ಟ್ ಸರ್ಕಸ್ ನಲ್ಲಿ ಮಕ್ಕಳನ್ನು ಬಳಸುವ ಬಗ್ಗೆಯೂ ನೋಟೀಸ್ ನೀಡಿದ್ದು ನಿರೀಕ್ಷಕರ ಜವಾಬ್ದಾರಿ ಇನ್ನಷ್ಟು ಹೆಚ್ಚಲಿದೆ ಎಂದರು.
ಬಾಲಕಾರ್ಮಿಕ ಪದ್ಧತಿಯ ಬಗ್ಗೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಸಮೀಕ್ಷೆ ನಡೆಸಿದ್ದು 5 ಜಿಲ್ಲೆಯಲ್ಲಿ ಮಾತ್ರ ಸಮೀಕ್ಷೆ ಬಾಕಿ ಇದೆ ಎಂದರು. ಆದರೂ ಈ ಸಂಬಂಧ ನಿಖರ ಸಮೀಕ್ಷೆ ಅಸಾಧ್ಯ ಎಂದು ಅಭಿಪ್ರಾಯಿಸಿದ ಅವರು, ಪ್ರಾಯೋಗಿಕ ಸಮಸ್ಯೆಗಳ ಬಗ್ಗೆ ಉದಾಹರಣೆ ಸಹಿತ ವಿವರಿಸಿದರು. ಮನೆಗಳಲ್ಲಿ ಮಕ್ಕಳು ದುಡಿಯುವುದನ್ನು ನಿಷೇಧಿಸಲು 2008ರ ಕಾನೂನಿನಡಿ ನಿರೀಕ್ಷಕರು ಮನೆಯೊಳಗೆ ಹೋಗಿ ತಪಾಸಣೆ ನಡೆಸುವ ಅಧಿಕಾರ ನೀಡಲಾಗಿದೆ ಎಂದರು. ಕೆಲಸದ ವ್ಯಾಪ್ತಿಯ ಹೆಚ್ಚಾಗುವ ಜೊತೆಗೆ ಹೆಚ್ಚಿನ ಅಧಿಕಾರವನ್ನು ನೀಡಲಾಗುತ್ತಿದ್ದು ಕಟ್ಟುನಿಟ್ಟಿನ ಕ್ರಮ ಕಾನೂನು ಅನುಷ್ಠಾನದಲ್ಲೂ ಆಗಬೇಕಿದೆ ಎಂದರು.
ಬೆಳಗ್ಗಿನ ಅಧಿವೇಶನದಲ್ಲಿ ಕಾನೂನು, ಕರ್ತವ್ಯ ಹಾಗೂ ಅನುಷ್ಠಾನದ ಬಗ್ಗೆ ಮಾತನಾಡಿದ ಜಿಂಕಲಪ್ಪ ಅವರು ಅಪರಾಹ್ನ ಪುನರ್ ವಸತಿ ಕುರಿತ ಮಾಹಿತಿಯನ್ನು ಶಿಬಿರಾರ್ಥಿಗಳಿಗೆ ನೀಡಿದರು. ಸಭಾ ಕಾರ್ಯಕ್ರಮವನ್ನು ಹಿರಿಯ ಸಿವಿಲ್ ನ್ಯಾಯಾಧೀಶರಾದ ಆರ್ ವಿ ಪಾಟೀಲ್ ಅವರು ಉದ್ಘಾಟಿಸಿ, ಯೋಜನೆಗಳು ಕಾರ್ಯಗತ ಗೊಳಿಸಲು ತರಬೇತಿಯ ಅಗತ್ಯವನ್ನು ಪ್ರತಿಪಾದಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ ಕೆ ಎನ್ ವಿಜಯಪ್ರಕಾಶ್ ಅವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಬಾಲಕಾರ್ಮಿಕ ಪದ್ಧತಿಯಂತಹ ಅನಿಷ್ಠ ಪದ್ಧತಿ ನಿವಾರಣೆಯ ಗುರುತರ ಹೊಣೆ ನಮ್ಮೆಲ್ಲರ ಮೇಲಿದ್ದು ಕಾರ್ಯಾಗಾರದ ಸದುಪಯೋಗವಾಗಬೇಕು ಎಂದರು. ಕೇವಲ ಕಾಯಿದೆ, ಕಾನೂನುಗಳಿಂದ ಉತ್ತಮ ಸಮಾಜನಿರ್ಮಾಣ ಅಸಾಧ್ಯವಾಗಿದ್ದು, ನಮ್ಮ ಮುಂದಿನ ಜನಾಂಗಕ್ಕೆ ಅತ್ಯುತ್ತಮ ಪರಿಸರ ನೀಡುವುದು ನಮ್ಮೆಲ್ಲ ಜವಾಬ್ದಾರಿ ಎಂದರು. ಪ್ರೇರಣೆ, ಮಾರ್ಗದರ್ಶನ ಹಾಗೂ ಪರಿಣಾಮಕಾರಿ ಅನುಷ್ಠಾನದಿಂದ ಮಾತ್ರ ನಿಷೇಧ ಕಾನೂನುಗಳು ಯಶಸ್ವಿಯಾಗಲಿವೆ ಎಂದರು.
ನಿರೀ ಕ್ಷಕರಿಗೆ ಎರಡು ಕೈ ಪಿಡಿ ಗಳನ್ನು ಸಿಇಒ ಮತ್ತು ಸಿಡ ಬ್ಲ್ಯುಸಿ ಯ ಆಶಾ ನಾಯಕ್ ಅವರು ಬಿಡು ಗಡೆ ಮಾಡಿ ದರು. ಹಾಸ ನದ ಪ್ರಾದೇ ಶಿಕ ಉಪ ಕಾರ್ಮಿಕ ಆಯು ಕ್ತರಾದ ಟಿ ಶ್ರೀನಿ ವಾಸ ಸೇರಿ ದಂತೆ ಎಲ್ಲ ಇಲಾಖೆ ಗಳ ಅಧಿ ಕಾರಿ ಗಳು ಉಪಸ್ಥಿ ತರಿದ್ದರು.

1986ರಡಿ ನೇಮಕಗೊಂಡ ನಿರೀಕ್ಷಕರ ಸಂಖ್ಯೆ: ಕಂದಾಯ ಇಲಾಖೆಯ ತಹಸೀಲ್ದಾರರು, ನಾಡಕಚೇರಿಗಳ ಉಪತಹಸೀಲ್ದಾರರು, ರೆವಿನ್ಯೂ ಇನ್ಸ್ ಪೆಕ್ಟರ್ ಗಳು. ಪಂಚಾಯತ್ ರಾಜ್ ಇಲಾಖೆಯ ಕಾರ್ಯನಿರ್ವಹಣಾಧಿಕಾರಿಗಳು, ಗ್ರಾಮಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಅಧಿಕಾರಿಗಳು, ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿಗಳು. ಶಿಕ್ಷಣ ಇಲಾಖೆಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಬ್ಲಾಕ್ ರಿಸೋಸ್ರ್ ಕೋ ಆರ್ಡಿನೇಟರ್, ಸರ್ವ ಶಿಕ್ಷಣ ಅಭಿಯಾನ ಅಧಿಕಾರಿಗಳು. ಕಾರ್ಖಾನೆ ಮತ್ತು ಬಾಯ್ಲರ್ ಗಳ ಇಲಾಖೆ ಉಪನಿರ್ದೇಶಕರು, ಹಿರಿಯ ಸಹಾಯಕ ನಿರ್ದೇಶಕರು, ಸಹಾಯಕ ನಿರ್ದೇಶಕರು. ನಗರಾಭಿವೃದ್ಧಿ ಇಲಾಖೆ ನಗರ ಸಭೆ ಆಯುಕ್ತರು, ಮುಖ್ಯಾಧಿಕಾರಿಗಳು, ಹೆಲ್ತ್ ಇನ್ಸ್ ಪೆಕ್ಟರ್ ಗಳು. ರೇಷ್ಮೆ ಇಲಾಖೆಯಿಂದ ರೇಷ್ಮೆ ಕೃಷಿ ವಿಸ್ತರಣಾಧಿಕಾರಿಗಳು, ರೇಷ್ಮೆ ಕೃಷಿ ಸಹಾಯಕ ನಿರ್ದೇಶಕರು. ಸಮಾಜ ಕಲ್ಯಾಣ ಇಲಾಖೆಯಿಂದ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ವಿಸ್ತರಣಾಧಿಕಾರಿಗಳು. ಕೃಷಿ ಇಲಾಖೆಯಿಂದ ಸಹಾಯಕ ನಿರ್ದೇಶಕರು, ಕೃಷಿ ಅಧಿಕಾರಿಗಳು. ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಿಂದ ಸಹಾಯಕ ನಿರ್ದೇಶಕರು, ಕೈಗಾರಿಕ ವಿಸ್ತರಣಾಧಿಕಾರಿಗಳು.