Sunday, February 12, 2012

ದ.ಕ.ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಪ್ರವಾಸ

ಮಂಗಳೂರು,ಫೆಬ್ರವರಿ.12:ಬೆಂಗಳೂರಿನಿಂದ ಮುಂಜಾನೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮುಖ್ಯಮಂತ್ರಿಗಳು ಜಿಲ್ಲೆಯಾದ್ಯಂತ ವಿವಿಧ ಸಮಾರಂಭಗಳಲ್ಲಿ ಪಾಲ್ಗೊಂಡು ಮಾತನಾಡಿದರು.
ಸರ್ಕಿಟ್ ಹೌಸ್ ನಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ನಗರದ ಪತ್ರಿಕಾ ಭವನದ ನೂತನ ಸಭಾಂಗಣ ಉದ್ಘಾಟಿಸಿದರು. ಪುರಭವನದಲ್ಲಿ ಬಿಲ್ಲವರ ಸಮಾರಂಭದಲ್ಲಿ ಪಾಲ್ಗೊಂಡರು. ಬಳಿಕ ಒಡಿಯೂರಿನಲ್ಲಿ ಶ್ರೀ ಗುರುದೇವ ಕೈಗಾರಿಕಾ ತರಬೇತಿ ಕೇಂದ್ರ ಸಮುಚ್ಛಯ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡರು. ಅಲ್ಲಿಂದ ಮಾಣಿಲ ಶ್ರೀಧಾಮಕ್ಕೆ ತೆರಳಿ ಅಲ್ಲಿನ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ ಸಮುದಾಯಭವನಕ್ಕೆ 50 ಲಕ್ಷ ರೂ. ಬಿಡುಗಡೆ ಮಾಡಿದರು. ಬಳಿಕ ಉಳ್ಳಾಲದಲ್ಲಿ ರಾಣಿ ಅಬ್ಬಕ್ಕ ಉತ್ಸವ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡರಲ್ಲದೆ ನಗರದ ನೆಹರೂ ಮೈದಾನದಲ್ಲಿ ಆಯೋಜಿಸಿದ್ದ ಮಂಗಳೂರು ಕ್ರೈಸ್ತ ಧರ್ಮ ಪ್ರಾಂತ್ಯದ ಶತಮಾನೋತ್ತರ ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಅಲ್ಪಸಂಖ್ಯಾತರ ಅಭಿವೃದ್ಧಿಗೆ ಸರ್ಕಾರ ಬದ್ಧ ಎಂದರು.
ವಿವಿಧೆಡೆಗಳಲ್ಲಿ ಮುಖ್ಯಮಂತ್ರಿಗಳು ಸಭಾಸದರನ್ನುದ್ದೇಶಿಸಿ ಮಾತನಾಡಿದ ಭಾಷಣದ ಸಾರಾಂಶಗಳಿವೆ.
ಪತ್ರಿಕಾ ಭವನ:
ದಕ್ಷಿಣ ಕನ್ನಡ ಜಿಲ್ಲಾ ಪತ್ರಿಕಾ ಭವನದಲ್ಲಿ ಹೆಚ್ಚುವರಿಯಾಗಿ ನಿಮರ್ಿಸಿರುವ ನೂತನ ಸಭಾಂಗಣವನ್ನು ಸಂತೋಷದಿಂದ ಉದ್ಘಾಟಿಸಿದ್ದೇನೆ.ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಪತ್ರಿಕಾ ಭವನಗಳ ನಿರ್ಮಾಣ ಹಾಗೂ ಅಭಿವೃದ್ಧಿಗೆ ನಮ್ಮ ಸರ್ಕಾರ ತಲಾ 25 ಲಕ್ಷ ರೂ.ಗಳ ಅನುದಾನವನ್ನು ನೀಡುತ್ತಿದೆ. ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಪತ್ರಿಕಾ ಭವನ ನಿರ್ಮಾಣಗೊಂಡಿವೆ.
ಈ ಮುನ್ನ ಪತ್ರಿಕಾ ಭವನಗಳು ನಿರ್ಮಾಣ ವಾಗಿದ್ದರೆ ಅವುಗಳಿಗೆ ಹೆಚ್ಚು ವರಿ ಸೌಲಭ್ಯ ಸೇರ್ಪಡೆ ಮಾಡಲು ಸರ್ಕಾರ 12.5 ಲಕ್ಷ ರೂ.ಗಳನ್ನು ಮಂಜೂರು ಮಾಡು ತ್ತಿದೆ. ಅದ ರಂತೆ ದಕ್ಷಿಣ ಕನ್ನಡ ಜಿಲ್ಲೆಗೆ ಸರ್ಕಾರದ ವತಿಯಿಂದ ಈ ಸಭಾಂಗಣ ನಿರ್ಮಾಣಕ್ಕೆ 12.5 ಲಕ್ಷ ರೂಗಳನ್ನು ಬಿಡುಗಡೆ ಮಾಡಲಾಗಿತ್ತು. ಈ ಹಣವನ್ನು ಬಳಸಿಕೊಂಡು ನೂತನ ಸಭಾಂಗಣವನ್ನು ನಿರ್ಮಿಸಲು ಶ್ರಮಿಸಿರುವ ಎಲ್ಲರಿಗೂ ನನ್ನ ಅಭಿನಂದನೆಗಳು.
2007 ರಲ್ಲಿ ಈ ಪತ್ರಿಕಾ ಭವನ ನಿರ್ಮಿಸಿದಾಗ ಸಂಸದರ ನಿಧಿಯಿಂದ ನಾನು 4 ಲಕ್ಷ ರೂ.ಗಳನ್ನು ನೀಡಿದ್ದನ್ನು ಇಲ್ಲಿ ಸಾಂದರ್ಭಿಕವಾಗಿ ಸ್ಮರಿಸುತ್ತಿದ್ದೇನೆ. ಮಾಧ್ಯಮದ ಮಿತ್ರರ ವೃತ್ತಿ ಸಂಬಂಧಿ ಚಟುವಟಿಕೆಗಳಿಗೆ ಈ ಭವನ ಉಪಯುಕ್ತವಾಗಿದೆ. ಅದು ಸಂತೋಷದ ಸಂಗತಿ. ಕರಾವಳಿ ನಗರಿ ಮಂಗಳೂರು ಒಳಗೊಂಡಂತೆ ಈ ಭಾಗದ ಪತ್ರಕರ್ತರು ರಾಜ್ಯ, ರಾಷ್ಟ್ರ ಹಾಗೂ ಅಂತರರಾಷ್ಟ್ರೀಯ ಪತ್ರಿಕೋದ್ಯಮ ರಂಗಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.ಜನತೆಯ ಆಶೋತ್ತರಗಳನ್ನು ಪ್ರತಿಬಿಂಬಿಸುವುದರ ಜೊತೆಗೆ ಅವರ ದು:ಖ ದುಮ್ಮಾನಗಳನ್ನು ಸರ್ಕಾರದ ಗಮನಕ್ಕೆ ತರುವ ನಿಟ್ಟಿನಲ್ಲಿಯೂ ಪತ್ರಕರ್ತರು ಗುರುತರ ಸೇವೆ ಸಲ್ಲಿಸುತ್ತಿದ್ದಾರೆ.ಪ್ರಜಾ ಪ್ರಭುತ್ವ ವ್ಯವಸ್ಥೆ ಯಲ್ಲಿ ಅತ್ಯಂತ ಪ್ರಭಾವ ಶಾಲಿ ಮಾಧ್ಯಮ ವಾಗಿ ರುವ ಮುದ್ರಣ ಮತ್ತು ಎಲೆ ಕ್ಟ್ರಾನಿಕ್ ಮಾಧ್ಯ ಮಕ್ಕೆ ವರದಿ ಗಳನ್ನು ವೈಭ ವೀಕ ರಿಸದೆ ವಸ್ತ್ತುನಿಷ್ಟ ವಾಗಿ ಜನತೆಗೆ ನೀಡುವ ಗುರುತರ ಹೊಣೆ ಗಾರಿ ಕೆಯೂ ಇದೆ.ನಮ್ಮ ಸರ್ಕಾರವಂತೂ ಮುಕ್ತ, ನಿರ್ಭೀತ ಮತ್ತು ವಸ್ತುನಿಷ್ಟ ಪತ್ರಿಕೋದ್ಯಮ ಬೆಳೆಯಲು ಅಗತ್ಯ ಒತ್ತಾಸೆ ನೀಡಿದೆ.
ಪತ್ರಕರ್ತರ ಮಾಶಾಸನವನ್ನು 1,000 ರೂ.ಗಳಿಂದ 2,000 ರೂ.ಗಳಿಗೆ ಹೆಚ್ಚಿಸಿರುವುದು, ನಿವೃತ್ತ ಪತ್ರಕರ್ತರು ಮಾಶಾಸನ ಪಡೆಯಲು ಇರುವ ವರಮಾನದ ಮಿತಿಯನ್ನು ಹೆಚ್ಚಿಸಿರುವುದು, ಟಿಎಸ್ಆರ್ ಪ್ರಶಸ್ತಿ ಮಾದರಿಯಲ್ಲಿ ಮೊಹರೆ ಹಣಮಂತರಾಯರ ಹೆಸರಿನಲ್ಲಿ ಪತ್ರಿಕೋದ್ಯಮ ಪ್ರಶಸ್ತಿ ಸ್ಥಾಪಿಸಿರುವುದು ಮುಂತಾದವು ನಮ್ಮ ಸರ್ಕಾರವು ಮಾಧ್ಯಮ ರಂಗದ ಸಬಲೀಕರಣಕ್ಕೆ ಪೂರಕವಾಗಿ ತೆಗೆದುಕೊಂಡಿರುವ ಕೆಲವು ಉಪಕ್ರಮಗಳಾಗಿವೆ.ಮಾಧ್ಯಮರಂಗ ಸಮರ್ಪಕವಾಗಿ ಕಾರ್ಯನಿರ್ವಹಿಸಲು ಅಗತ್ಯವಿರುವ ಪೂರಕ ಪರಿಸರವನ್ನು ಮುಂದಿನ ದಿನಗಳಲ್ಲಿಯೂ ನಮ್ಮ ಸರ್ಕಾರ ಒದಗಿಸಲಿದೆ ಎಂದು ತಿಳಿಸಬಯಸುತ್ತೇನೆ.ಇಂದು ಇಡೀ ದಿನ ದಕ್ಷಿಣ ಕನ್ನಡ ಜಿಲ್ಲೆಯ ವಿವಿದೆಡೆಗಳಲ್ಲಿ ಹಲವಾರು ಕಾರ್ಯಕ್ರಮಗಳಲ್ಲಿ ನಾನು ಭಾಗವಹಿಸುತ್ತಿದ್ದೇನೆ.ಬೆಳಗಿನ ಈ ಕಾರ್ಯಕ್ರಮದ ನಿಮಿತ್ತ ನಿಮ್ಮೆಲ್ಲರ ರಚನಾತ್ಮಕ ಒಡನಾಟ ನನಗೆ ದೊರೆತಿದೆ. ನಿಮ್ಮೆಲ್ಲರಿಗೂ ಸರ್ವರೀತಿಯಲ್ಲಿಯೂ ಶುಭಕೋರಿ ನನ್ನ ಮಾತುಗಳನ್ನು ಮುಗಿಸುತ್ತೇನೆ.
ಪುರಭವನದ ಅಖಿಲಭಾರತ ಬಿಲ್ಲವ ಯೂನಿಯನ್ ನ ಶತಮಾನೋತ್ಸವ ಸಮಾರಂಭ:ಅಖಿಲ ಭಾರತ ಬಿಲ್ಲವರ ಒಕ್ಕೂಟದ ಶತಮಾನೋತ್ಸವ ಆಚರಣೆಯನ್ನು ಸಂತೋಷದಿಂದ ನಾನು ಉದ್ಘಾಟಿಸಿದ್ದೇನೆ.ಈ ಒಕ್ಕೂಟವನ್ನು 100 ವರ್ಷಗಳ ಹಿಂದೆ ಪ್ರಾರಂಭಿಸಿ,ಒಂದು ಶತಮಾನದ ಕಾಲ ಅನು ಕರಣ ಯೋಗ್ಯ ರೀತಿ ಯಲ್ಲಿ ಮುಂದು ವರಿಸಿ ಕೊಂಡು ಬಂದಿರುವ ಸಂಬಂ ಧಪಟ್ಟ ಎಲ್ಲರಿಗೂ ಈ ಸಂದರ್ಭ ದಲ್ಲಿ ಸರ್ವ ಪ್ರಥಮದಲ್ಲಿ ನಾವೆಲ್ಲರೂ ಕೃತಜ್ಞತೆ ಅರ್ಪಿಸೋಣ.ನಿಮ್ಮ ಒಕ್ಕೂಟವು ಶಿಕ್ಷಣ, ಆರ್ಥಿಕ ಕ್ಷೇತ್ರವೂ ಒಳಗೊಂಡಂತೆ ಹಲವಾರು ಸಮಾಜಮುಖಿ ಉಪಕ್ರಮಗಳೊಂದಿಗೆ ಸದಸ್ಯರ ಸಬಲೀಕರಣಕ್ಕೆ ಬದ್ಧತೆಯಿಂದ ಶ್ರಮಿಸುತ್ತಿರುವುದು ಶ್ಲಾಘನೀಯ.ಈ ಕಾರ್ಯಕ್ರಮಕ್ಕೆ ಮುನ್ನ ಬಿಲ್ಲವ ಹಾಸ್ಟೆಲ್ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿರುವುದು, ಬಿಲ್ಲವರ ಒಕ್ಕೂಟ ಸಮಾಜ ಮುಖಿ ಯಾಗಿ ಕಾರ್ಯ ನಿರ್ವಹಿ ಸುತ್ತಿರು ವುದರ ಒಂದು ಪ್ರಾತಿನಿಧಿಕ ಉದಾ ಹರಣೆ ಯಾಗಿದೆ.ನೂರು ವರ್ಷಗಳ ಸಾರ್ಥಕ ಸಾಧನ ಪಥದ ಕುರುಹಾಗಿ ಅತ್ಯಂತ ಮುತುವ ರ್ಜಿಯಿಂದ ಆಯೋಜಿಸಿರುವ ಈ ಶತಮಾನೋತ್ಸವ ಆಚರಣೆಯು ನಿಮ್ಮೆಲ್ಲರ ಸಬಲೀಕರಣಕ್ಕೆ ಒಂದು ಸಮರ್ಥ ವೇದಿಕೆಯಾಗಲಿ ಎಂದು ಹಾರೈಸುತ್ತೇನೆ.ಬದಲಾಗುತ್ತಿರುವ ಕಾಲಘಟ್ಟಕ್ಕನುಗುಣವಾಗಿ ಆಧುನಿಕ ತಂತ್ರಜ್ಞಾನಗಳೆಲ್ಲವನ್ನು ಅಳವಡಿಸಿಕೊಂಡು, "ಸಂಘಟನೆಗಾಗಿ ಸಂಘಟನೆಯಲ್ಲ, ಸೇವೆಗಾಗಿ ಸಂಘಟನೆ" ಎಂಬ ಮೂಲ ಆಶಯಕ್ಕನುಗುಣವಾಗಿ ಅಖಿಲ ಭಾರತ ಬಿಲ್ಲವ ಒಕ್ಕೂಟ ಮುಂದುವರಿಯಲೆಂದು ಆಶಿಸುತ್ತೇನೆ.ಸಮಕಾಲೀನ ಭಾರತೀಯ ಗುರುಪರಂಪರೆಯಲ್ಲಿ ತಮ್ಮದೇ ಆದ ವಿಶಿಷ್ಟ ಸ್ಥಾನ ಪಡೆದಿರುವ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಮುಖ್ಯ ಸಂದೇಶವಾದ ವಿದ್ಯೆಯಿಂದ ಸ್ವತಂತ್ರರಾಗಿ, ಸಂಘಟನೆಯಿಂದ ಬಲಯುತರಾಗಿ ಎನ್ನುವ ತತ್ವದಡಿಯಲ್ಲಿ ಬಿಲ್ಲವ ಸಮುದಾಯ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿ ಮುಂದುವರಿಯುತ್ತಿರುವುದು ಶ್ಲಾಘನೀಯ.
ಸರ್ವ ಜನಾಂಗದ ಶಾಂತಿಯ ತೋಟ ದಂತಿರುವ ಕರ್ನಾಟ ಕವು ಎಲ್ಲಾ ಅರ್ಥ ಗಳಲ್ಲಿ ಒಂದು ಮಿನಿ ಭಾರತವೇ ಆಗಿದ್ದು, ವಿವಿಧ ಸಮುದಾ ಯಗಳ ಸಾಮ ರಸ್ಯದ ಬಾಳ್ವೆಗೆ ಹೆಸರಾಗಿದೆ.ಕಳೆದ ಮೂರು ಮುಕ್ಕಾಲು ವರ್ಷಗಳಲ್ಲಿ ನಮ್ಮ ಸರ್ಕಾರವು ಬಿಲ್ಲವ ಸಮುದಾ ಯವೂ ಸೇರಿದಂತೆ ಸಮಾಜದ ಎಲ್ಲಾ ಸಮುದಾ ಯಗಳ ವಿಕಾಸಕ್ಕೆ ಆದ್ಯತೆ ನೀಡಿದೆ.ಬಿಲ್ಲವ ಸಮಾಜದ ಕುಲ ಕಸುಬು ಮಾಡುವ ಮೂರ್ತೆದಾರರಿಗೆ ಶೇ.6ರ ಬಡ್ಡಿ ದರದಲ್ಲಿ ಸಾಲ ಮಂಜೂರು ಮಾಡಿರುವುದು, ಮೂರ್ತೆದಾರರ ಸೊಸೈಟಿಗಳ ಆಡಿಟ್ ಫೀ ಮನ್ನಾ ಮಾಡಿರುವುದು ಮುಂತಾದುವು ನಮ್ಮ ಸರ್ಕಾರ ಬಿಲ್ಲವ ಸಮುದಾಯಕ್ಕೆ ನೀಡಿರುವ ಕೆಲವು ಸೌಲಭ್ಯಗಳಾಗಿವೆ.ಹಿಂದುಳಿದ ವರ್ಗಗಳ ಅಭಿವೃದ್ಧಿ ಇಲಾಖೆಗೆ 2010-11ನೇ ಸಾಲಿನಲ್ಲಿ 606 ಕೋಟಿ ರೂ.ಗಳು, 2011-12ನೇ ಸಾಲಿನಲ್ಲಿ 760 ಕೋಟಿ ರೂ.ಗಳ ದಾಖಲೆ ಅನುದಾನವನ್ನು ಮೀಸಲಿಡುವ ಮೂಲಕ ಹಿಂದುಳಿದ ವರ್ಗಗಳ ಒಟ್ಟಾರೆ ವಿಕಾಸಕ್ಕೆ ನಮ್ಮ ಸರ್ಕಾರ ಒಂದು ಹೊಸ ಆಯಾಮ ನೀಡಿದೆ.
ಒಡಿಯೂರಿನಲ್ಲಿ ಸಿಎಂ:ದಕ್ಷಿಣದ ಗಾಣಿಗಾಪುರವೆಂದೇ ಖ್ಯಾತಿ ಪಡೆದಿರುವ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಕ್ಕೆ ಬಂದಿರುವುದು ನನ್ನಲ್ಲಿ ಹೊಸ ಚೈತನ್ಯ ಮೂಡಿಸಿದೆ.ಶ್ರೀ ಕ್ಷೇತ್ರದ ವತಿಯಿಂದ ಕನ್ಯಾನದ ಬಳಿ ನೂತನವಾಗಿ ನಿರ್ಮಿಸಿರುವ ಶ್ರೀ ಗುರುದೇವ ಕೈಗಾರಿಕಾ ತರಬೇತಿ ಕೇಂದ್ರ ಕಟ್ಟಡವನ್ನು ಇಂದು ಸಂತೋಷದಿಂದ ಉದ್ಘಾಟಿಸಿದ್ದೇನೆ.ಸುಸಂಸ್ಕೃತ ಸಮಾಜ ನಿರ್ಮಾಣ ವಾದಾಗ ಮಾತ್ರ ಸಶಕ್ತ ರಾಷ್ಟ್ರ ರೂಪು ಗೊಳ್ಳಲು ಸಾಧ್ಯ. ಗುರುದೇವ ದತ್ತ ಸಂಸ್ಥಾನ ಇದೇ ಧ್ಯೇಯವನ್ನು ಆಧಾರ ವಾಗಿಟ್ಟು ಕೊಂಡು ಸಮಾಜ ಮುಖಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಶ್ಲಾಘನೀಯ. ಶಿಕ್ಷಣವೂ ಸೇರಿದಂತೆ ಧರ್ಮ, ಸಂಸ್ಕೃತಿ, ಕಲೆ ಮುಂತಾದವುಗಳ ಸಂರಕ್ಷಣೆ ಹಾಗೂ ಅಭಿವೃದ್ಧಿಯ ನಿಟ್ಟಿನಲ್ಲಿ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನ ಸಕ್ರಿಯವಾಗಿ ತೊಡಗಿಸಿಕೊಂಡು ಈ ಭಾಗದ ಜನರ ಮೆಚ್ಚುಗೆ ಗಳಿಸಿದೆ.
ಪೂಜ್ಯ ಗುರುದೇವಾನಂದ ಸ್ವಾಮಿಗಳ ದಿವ್ಯ ಮಾರ್ಗದರ್ಶನದಲ್ಲಿ ಈ ಕ್ಷೇತ್ರವು ಹಲವಾರು ಸಮಾಜಮುಖಿ ಉಪಕ್ರಮಗಳನ್ನು ಯಶಸ್ವಿಯಾಗಿ ಅನುಷ್ಠಾನ ಮಾಡುತ್ತಿದೆ.ನಮ್ಮ ಯುವಕರಿಗೆ ಕೇವಲ ಶಿಕ್ಷಣ ನೀಡಿದರೆ ಸಾಲದು. ಅವರು ಉದ್ಯೋಗಶೀಲರಾಗಲು ಅಗತ್ಯ ಕೌಶಲ್ಯವನ್ನೂ ನೀಡಬೇಕು. ಅದ್ದರಿಂದಲೇ ನಮ್ಮ ಸರ್ಕಾರ ಕೌಶಲ್ಯ ಆಯೋಗ ಸ್ಥಾಪಿಸುವ ಮೂಲಕ ವಿದ್ಯಾರ್ಥಿ ಯುವ ಜನರಿಗೆ ರಾಜ್ಯದಾದ್ಯಂತ ಉದ್ಯೋಗ - ಕೌಶಲ್ಯ ತರಬೇತಿ ನೀಡುತ್ತಿದೆ.
ಕಳೆದ ಮೂರು ಮುಕ್ಕಾಲು ವರ್ಷಗಳಲ್ಲಿ ವಿವಿಧ ಉದ್ಯೋಗ ಮೇಳಗಳ ಮೂಲಕ 3.15 ಲಕ್ಷ ಅಭ್ಯರ್ಥಿಗಳಿಗೆ ತರಬೇತಿ ನೀಡಲಾಗಿದ್ದು, 2.9 ಲಕ್ಷ ಮಂದಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಲಾಗಿದೆ.ಇದೇ ಮಾದರಿಯಲ್ಲಿ ಗುರುದೇವ ದತ್ತ ಸಂಸ್ಥಾನವು ಕೈಗಾರಿಕಾ ತರಬೇತಿ ಕೇಂದ್ರ ಸ್ಥಾಪಿಸುವ ಮೂಲಕ ಯುವ ಜನರ ಉದ್ಯೋಗಾರ್ಹತೆ ಹೆಚ್ಚಿಸಲು ಅಗತ್ಯ ತರಬೇತಿ ದೊರಕಿಸಿಕೊಡುತ್ತಿರುವುದು ಪ್ರಶಂಸನೀಯ. ಸರ್ಕಾರದ ಯಾವುದೇ ಅನುದಾನವಿಲ್ಲದೆ ಈ ರೀತಿ ಧಾರ್ಮಿಕ ಕೇಂದ್ರಗಳು ಸಮಾಜದ ಒಟ್ಟಾರೆ ವಿಕಾಸಕ್ಕೆ ಕೊಡುಗೆ ನೀಡುವ ಮೂಲಕ ಸರ್ಕಾರದ ಕಾರ್ಯನಿರ್ವಹಣೆಗೆ ಪೂರಕ ಬೆಂಬಲ ನೀಡುತ್ತಿವೆ.
ಶಿಕ್ಷಣ ಮತ್ತು ವೈದ್ಯಕೀಯ ಸೌಲಭ್ಯಗಳು ಜನತೆಯ ಮೂಲಭೂತ ಅಗತ್ಯಗಳಾಗಿವೆ. ಇವುಗಳನ್ನು ಒದಗಿಸುವುದು ಯಾವುದೇ ಪ್ರಜಾತಂತ್ರ ಸರ್ಕಾರದ ಪ್ರಾಥಮಿಕ ಹೊಣೆಗಾರಿಕೆಯಾಗಿದೆ. ಆದರೆ ಭಾರತದಂತಹ ವಿಶಾಲ ರಾಷ್ಟ್ರ ಹಾಗೂ ಕರ್ನಾಟಕದಂತಹ ವಿಶಾಲವಾದ ರಾಜ್ಯದಲ್ಲಿ ಎಲ್ಲರಿಗೂ ಸರ್ಕಾರವೇ ಎಲ್ಲಾ ರೀತಿಯ ಸೌಕರ್ಯಗಳನ್ನು ಒದಗಿಸುವುದು ಕಷ್ಟಸಾಧ್ಯ. ಹಲವು ಮಠ ಮಾನ್ಯಗಳು ಸರ್ಕಾರದ ಈ ಹೊಣೆಗಾರಿಕೆಯನ್ನು ಸ್ವಯಂ ತಾವೇ ವಹಿಸಿಕೊಂಡು ಶಿಕ್ಷಣ ಸಂಸ್ಥೆ ಹಾಗೂ ಆಸ್ಪತ್ರೆಗಳನ್ನು ನಿರ್ಮಿಸಿ ಜನರಿಗೆ ನೆರವಾಗುತ್ತಿರುವುದು ಸ್ವಾಗತಾರ್ಹ ಬೆಳವಣಗೆಯಾಗಿದೆ. ನಮ್ಮ ಸರ್ಕಾರ ಇಂತಹ ಮಠ ಮಂದಿರಗಳು ಹಾಗೂ ಧಾರ್ಮಿಕ ಕೇಂದ್ರಗಳಿಗೆ ಧನ ಸಹಾಯ ನೀಡುತ್ತಿದೆ.
ರಾಜ್ಯದ ಇತಿಹಾಸದಲ್ಲಿ ಈ ರೀತಿ ಆಯವ್ಯಯದಲ್ಲಿಯೇ ಮಠ ಮಂದಿರಗಳಿಗೆ ಆರ್ಥಿಕ ಅನುದಾನ ಮೀಸಲಿಟ್ಟ ಪ್ರಥಮ ಸರ್ಕಾರ ನಮ್ಮದು. ಸರ್ಕಾರ ನೀಡಿರುವ ಅನುದಾನ ಆ ಕ್ಷೇತ್ರಗಳಿಗೆ ಬರುವ ಭಕ್ತರಿಗೆ ಸೌಲಭ್ಯಗಳನ್ನು ಒದಗಿಸುವಲ್ಲಿ ಸಹಕಾರಿಯಾಗಿದೆ ಎಂದು ಈ ಸಂದರ್ಭದಲ್ಲಿ ಹೆಮ್ಮೆಯಿಂದ ತಿಳಿಸಬಯಸುತ್ತೇನೆ.ಮಠ ಮಂದಿರಗಳ ಈ ಸಮಾಜಮುಖಿ ಉಪಕ್ರಮಗಳಿಗೆ ಮುಂದಿನ ದಿನಗಳಲ್ಲಿಯೂ ನಮ್ಮ ಸರ್ಕಾರ ಅನುದಾನ ನೀಡುವುದನ್ನು ಮುಂದುವರಿಸಲಿದೆ.
ಸರ್ಕಾರದಿಂದ ಯಾವುದೇ ನೆರವು ಪಡೆಯದೆ ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನ ಶೈಕ್ಷಣಕ ಸೇವೆಯಲ್ಲಿ ನಿರತವಾಗಿದೆ. ಈ ಸಂಸ್ಥೆಯ ಪವಿತ್ರ ಮಾರ್ಗದರ್ಶನದಲ್ಲಿ ವಿದ್ಯೆ ಕಲಿತ ಯುವಕ ಯುವತಿಯರು ಮುಂದೆ ಸಮಾಜಕ್ಕೆ ಎಲ್ಲಾ ಕ್ಷೇತ್ರಗಳಲ್ಲಿ ಸಕಾರಾತ್ಮಕ ಕೊಡುಗೆ ನೀಡುತ್ತಿದ್ದಾರೆ. ಇದು ಅಭಿನಂದನೀಯ.ಇಂದಿನ ನನ್ನ ದಕ್ಷಿಣ ಕನ್ನಡ ಜಿಲ್ಲೆಯ ಪ್ರವಾಸದ ಅಂಗವಾಗಿ ಈ ಕ್ಷೇತ್ರಕ್ಕೆ ಬಂದಿರುವುದು, ಪೂಜ್ಯರ ಆಶೀರ್ವಾದ ಪಡೆದಿರುವುದು ನನ್ನಲ್ಲಿ ಹೊಸ ಹುರುಪು ನೀಡಿದೆ.
ದೈವದ ಕೃಪಾಶೀರ್ವಾದ, ಪೂಜ್ಯರ ಮಾರ್ಗದರ್ಶನ ಹಾಗೂ ನಿಮ್ಮೆಲ್ಲರ ರಚನಾತ್ಮಕ ಒಡನಾಟದಿಂದ ಮುಂದಿನ ದಿನಗಳಲ್ಲಿಯೂ ನಾಡಿನ ಎಲ್ಲರ ಬದುಕನ್ನು ಇನ್ನು ಹೆಚ್ಚಿನ ಪ್ರಮಾಣ ಹಾಗೂ ತೀವ್ರತೆಯಿಂದ ಹಸನುಗೊಳಿಸಲು ನಮ್ಮ ಸರ್ಕಾರ ಶ್ರಮಿಸಲಿದೆ ಎಂದು ತಿಳಿಸುತ್ತಾ, ನಿಮ್ಮೆಲ್ಲರಿಗೂ ಶುಭಕೋರಿ ನನ್ನ ಮಾತುಗಳನ್ನು ಮುಗಿಸುತ್ತೇನೆ.
ಮಾಣಿಲದಲ್ಲಿ ಸಿಎಂ:


ಉಳ್ಳಾಲದಲ್ಲಿ ರಾಣಿ ಅಬ್ಬಕ್ಕ ಉತ್ಸವದಲ್ಲಿ ಮುಖ್ಯಮಂತ್ರಿಗಳು:
ತುಳುನಾಡಿನ ವೀರ ವನಿತೆ ರಾಣಿ ಅಬ್ಬಕ್ಕನ ಸ್ಮರಣಾರ್ಥ ನೆನ್ನೆಯಿಂದ ಅರ್ಥಪೂರ್ಣವಾಗಿ ಇಲ್ಲಿ ಜರುಗಿರುವ ಈ ಉತ್ಸವದ ಸಮಾರೋಪ ಸಮಾರಂಭದಲ್ಲಿ ಸಂತೋಷದಿಂದ ಭಾಗಿಯಾಗಿದ್ದೇನೆ. ವೀರರಾಣಿ ಅಬ್ಬಕ್ಕ ಪ್ರಶಸ್ತಿಗೆ ಪಾತ್ರರಾಗಿರುವ ಸಾಹಿತಿ ಶ್ರೀಮತಿ ಲಲಿತಾ ರೈ ಹಾಗೂ ರಂಗ ಕಲಾವಿದೆ ಶ್ರೀಮತಿ ಜಯಶೀಲರವರನ್ನು ಅಭಿನಂದಿಸುತ್ತೇನೆ.ಅಬ್ಬಕ್ಕ ತುಳು ನಾಡ ವನಿತೆ ಯರ ಕ್ಷಾತ್ರ ತೇಜದ ಪ್ರತೀಕ. ಸ್ವಾಭಿ ಮಾನದ ಸಂಕೇತ. ಇಂತಹ ವೀರ ಮಹಿಳೆಯ ನೆನಪಿ ನಲ್ಲಿ ಉತ್ಸವ ಆಚರಿಸುವ ಮೂಲಕ ಆಕೆಯ ಗುಣ ವಿಶೇಷ ಮತ್ತು ಸಾಧನೆ ಯನ್ನು ನಾವು ವಿಶೇಷವಾಗಿ ನಮ್ಮ ಮಹಿಳೆ ಯರು ಅನುಸರಿಸುವ ಪ್ರಯತ್ನಕ್ಕೆ ಪ್ರೇರಣೆ ನೀಡುವುದೇ ಸರ್ಕಾರದ ಆಶಯವಾಗಿದೆ. ಒಂದು ನಾಡಿನ ಹಿರಿಮೆ-ಗರಿಮೆಗಳನ್ನು ನಿರ್ಧರಿಸುವಾಗ ಆ ನಾಡಿನ ವೀರ ಪುರುಷರು, ವೀರ ಮಹಿಳೆಯರು, ಸಾಂಸ್ಕೃತಿಕ ನಾಯಕರು ಮತ್ತು ಆಳಿದ ಅರಸು-ಅರಸಿಯರು ನೀಡಿದ ಕೊಡುಗೆಗಳ ಜೊತೆಗೆ ಸಾಮಾನ್ಯ ಶ್ರಮಿಕ ವರ್ಗದ ಕೊಡುಗೆಯೂ ಕೂಡಾ ಪರಿಗಣಸಬೇಕಾಗುತ್ತದೆ.ಸಮ ಕಾಲೀನ ಇತಿಹಾಸ ಕಾರರು ಚಿತ್ರಿಸಿ ರುವಂತೆ ಅಬ್ಬಕ್ಕ ಸಾಮಾನ್ಯ ಶ್ರಮಿಕ ಮಹಿಳೆಯ ವ್ಯಕ್ತಿತ್ವ ಹೊಂದಿ ದ್ದಳು. ಪೋರ್ಚು ಗೀಸರ ವಿರುದ್ಧ ಹೋರಾ ಡುವ ಮುನ್ನ ಮಹಿಳಾ ಸ್ವಾಭಿ ಮಾನ ಮತ್ತು ಸ್ವಾ ತಂತ್ರ್ಯಕ್ಕೆ ಅಡ್ಡಿ ಯಾಗಿದ್ದ ಶಕ್ತಿ ಗಳನ್ನು ಮಣಿಸಿ ದ್ದಳು. ಈ ಮಣ್ಣನ ಕೃಷಿ ಮತ್ತು ವ್ಯಾಪಾರ ಪರಕೀ ಯರ ಕಪಿ ಮುಷ್ಟಿಗೆ ಸಿಲುಕ ದಂತೆ ಎಚ್ಚರ ವಹಿಸಿದ್ದಳು. ಇವೆಲ್ಲವೂ ಆಕೆಯ ದೂರದೃಷ್ಠಿಯ ಸಂಕೇತ ಗಳಾಗಿವೆ.
ಸಮಕಾಲೀನ ಬೆಳವಣಗೆಗಳ ಹಿನ್ನೆಲೆಯಲ್ಲಿ ಈ ಅಂಶಗಳನ್ನು ವಿಶ್ಲೇಷಿಸಿದಾಗ ಅಬ್ಬಕ್ಕದೇವಿ ತನ್ನ ಕಾಲದಿಂದಾಚೆಗೆ ಎಷ್ಟು ಚಿಂತನೆ ನಡೆಸಿದ್ದಳು ಮತ್ತು ಆಕೆಯ ನಿಲುವು ಎಷ್ಟೊಂದು ಪ್ರಸ್ತುತ ಎಂಬುದು ವೇದ್ಯವಾಗುತ್ತದೆ. ನಿನ್ನೆ ಬೆಳಿಗ್ಗೆಯಿಂದ ಈ ಉತ್ಸವದ ಅಂಗವಾಗಿ ಇಲ್ಲಿ ಜರುಗಿರುವ ಸಂಗೀತ, ನೃತ್ಯ, ನಾಟಕ, ಜಾನಪದ ಮುಂತಾದ ಕಾರ್ಯಕ್ರಮಗಳಿಗೆ ನೀವೆಲ್ಲಾ ಸಾಕ್ಷಿಯಾಗಿದ್ದೀರಿ. ಅಬ್ಬಕ್ಕನ ವ್ಯಕ್ತಿತ್ವವನ್ನು ನೈಜ ರೀತಿಯಲ್ಲಿ ಅರ್ಥೈಸಿಕೊಳ್ಳಲು ಇವು ಸಹಕಾರಿಯಾಗಿದ್ದವೆಂದು ನಾನು ಭಾವಿಸುತ್ತೇನೆ.
ವೀರ ಪುರುಷರು ಮತ್ತು ವೀರ ವನಿತೆಯರನ್ನು ಸಂಕುಚಿತ ಜಾತಿ ಕಟ್ಟುಪಾಡುಗಳಿಗೆ ಒಳಪಡಿಸುವ ಅಕ್ಷಮ್ಯ ಪ್ರಯತ್ನ ನಮ್ಮ ನಾಡಿನಲ್ಲಿ ನಡೆದಿದೆ. ಇದು ತಪ್ಪು. ಯಾರೇ ಸಾಧಕರಾಗಲೀ ಅವರು ಎಲ್ಲರಿಗೂ ಪ್ರಾತಃಸ್ಮರಣಯರು. ಎಲ್ಲರಿಗೂ ಸ್ಫೂರ್ತಿ ನೀಡುವ ಅಂತಹವರನ್ನು ಒಂದು ಜಾತಿಗೆ ಅಥವಾ ಒಂದು ಪ್ರಾಂತ್ಯಕ್ಕೆ ಸೀಮಿತಗೊಳಿಸದೆ ಎಲ್ಲಾ ಭಾರತೀಯರೂ ಸ್ವೀಕರಿಸುವ ಮೂಲಕ ಪ್ರೇರಣೆ ಪಡೆಯಬೇಕಾಗಿದೆ.
ಈ ಹಿನ್ನೆಲೆಯಲ್ಲಿ ರಾಣ ಅಬ್ಬಕ್ಕ ತುಳುನಾಡಿನ ಆಚೆಯಿಂದ ಕರಾವಳಿ ಕರ್ನಾಟಕದ ಮೂಲಕ ಸಮಗ್ರ ಕರ್ನಾಟಕವನ್ನು ತಲುಪಿ ಇಡೀ ಭಾರತದ ಆರಾಧ್ಯ ವ್ಯಕ್ತಿಗಳಲ್ಲಿ ಒಬ್ಬಳೆಂದು ಪರಿಗಣತಳಾಗಲಿ. ಆಕೆಯ ಬದುಕು ಮತ್ತು ಸಾಧನೆ ಸರ್ವತ್ರ ಸರ್ವರಿಗೂ ಸ್ಫೂರ್ತಿ ನೀಡಲಿ ಎಂದು ಆಶಿಸುತ್ತೇನೆ.ಭಾರತೀಯರ ಸ್ವಾಭಿಮಾನವನ್ನು ಎತ್ತಿ ಹಿಡಿದ ಉಳ್ಳಾಲದ ರಾಣಿ ಅಬ್ಬಕ್ಕ ದೇವಿಯ ಜೀವನದ ಮೇರು ಮೌಲ್ಯಗಳನ್ನು ಅಳವಡಿಸಿಕೊಂಡು ಒಂದು ಮಾದರಿ ಸಮಾಜ ನಿರ್ಮಿಸುವ ಮೂಲಕ ಆ ವೀರವನಿತೆಯನ್ನು ನಿಜವಾದ ಅರ್ಥದಲ್ಲಿ ಸ್ಮರಿಸೋಣವೆಂದು ಕರೆ ನೀಡುತ್ತೇನೆ.ರಾಣಿ ಅಬ್ಬಕ್ಕ ಉತ್ಸವ 2012ನ್ನು ಅಚ್ಚುಕಟ್ಟಾಗಿ ಬದ್ಧತೆಯಿಂದ ಆಯೋಜಿಸಿರುವ ಸಂಬಂಧಪಟ್ಟ ಎಲ್ಲರಿಗೂ ಅಭಿನಂದಿಸುತ್ತೇನೆ.
ವೀರವನಿತೆ ರಾಣಿ ಅಬ್ಬಕ್ಕನ ಭವ್ಯ ಬದುಕನ್ನು ಅಭಿವ್ಯಕ್ತಿಗೊಳಿಸುವ ಕಲಾ ಗ್ಯಾಲರಿಯನ್ನು 25.12.2011ರಂದು ಮಣಿಪಾಲದಲ್ಲಿ ನಾನು ಉದ್ಘಾಟಿಸಿದ್ದೆ ಎಂಬ ಅಂಶವು ಈ ಸಂದರ್ಭದಲ್ಲಿ ನನಗೆ ನೆನಪಾಗುತ್ತಿದೆ.
ನಾಡು ಮತ್ತು ನುಡಿಯ ಸಮಗ್ರ ಬೆಳವಣಿಗೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ರಾಜ್ಯದ ಇತಿಹಾಸದಲ್ಲಿಯೇ ದಾಖಲೆಯ ವಾರ್ಷಿಕ ಸುಮಾರು 250 ಕೋಟಿ ರೂ.ಗಳ ಅನುದಾನ ನೀಡಿರುವುದೇ ಇದಕ್ಕೆ ಸಾಕ್ಷಿ.ಮುಂಬರುವ ದಿನಗಳಲ್ಲೂ ನಾಡು ಮತ್ತು ನುಡಿಯ ಬೆಳವಣಿಗೆಗೆ ನಮ್ಮ ಸರ್ಕಾರ ಎಲ್ಲಾ ರೀತಿಯಲ್ಲೂ ನೆರವು ನೀಡುವುದಾಗಿ ಭರವಸೆ ನೀಡಿ ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳನ್ನು ಹೇಳಿ ನನ್ನ ಮಾತುಗಳನ್ನು ಮುಗಿಸುತ್ತೇನೆ.