Wednesday, February 29, 2012

ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ: ವಿವಿಧ ಘಟಕಗಳ ಸ್ಥಾಪನೆಗೆ ಸಹಾಯಧನ

ಮಂಗಳೂರು,ಫೆಬ್ರವರಿ.29:ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಹಾಗು ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿಯಡಿ ಫಲಾನುಭವಿ ಆಧಾರಿತ ಕಾರ್ಯಕ್ರಮಗಳನ್ನು ಕೈಗೊಳ್ಳಲು ಮುಂದೆ ಬರುವ ಫಲಾನುಭವಿಗಳಿಗೆ ಸಹಾಯಧನ ಪಡೆಯಲು ಇಚ್ಚಿಸುವವರು ಆಯಾ ತಾಲ್ಲುಕು ಪಶುಪಾಲನಾ ಸಹಾಯಕ ನಿರ್ದೇಶಕರಿಗೆ ದಿನಾಂಕ 05-3-2012 ರೊಳಗಾಗಿ ಅರ್ಜಿಗಳನ್ನು ಸಲ್ಲಿಸುವಂತೆ ಉಪನಿರ್ದೇಶಕರು ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಕುಕ್ಕುಟ ಅಭಿವೃದ್ದಿ ಯೋಜನೆ; ವಾಣಿಜ್ಯ ಮೊಟ್ಟೆ ಕೋಳಿ ಸಾಕಾಣಿಕೆಗೆ ಪ್ರೋತ್ಸಾಹ ನೀಡುವ ದಿಸೆಯಲ್ಲಿ ದಿನಕ್ಕೆ ಸರಾಸರಿ 800 ಮೊಟ್ಟೆ ಉತ್ಪಾದಿಸಲು ವಾಣಿಜ್ಯ ಕೋಳಿ (ಕನಿಷ್ಟ 1000 ವಾಣಿಜ್ಯ ಮೊಟ್ಟೆ ಕೋಳಿ) ಘಟಕ ಸ್ಥಾಪಿಸಲು ರೈತರಿಗೆ/ಗ್ರಾಮೀಣ ಯುವಕರಿಗೆ ಘಟಕದ ವೆಚ್ಚ 7.50ಲಕ್ಷದಲ್ಲಿ ರೂ.1.00ಲಕ್ಷ ಸಹಾಯಧನ/ಪ್ರೋತ್ಸಾಹ ಧನ, ಇನ್ನುಳಿದ ರೂ.6.50ಲಕ್ಷ ಬ್ಯಾಂಕಿನ ಸಾಲ/ಫಲಾನುಭವಿ ವಂತಿಗೆ ಸೇರಿದೆ.
ಹುಲ್ಲುಗಾವಲುಗಳ ಸ್ಥಾಪನೆಗಾಗಿ ರೈತರ ಅನುಪಯುಕ್ತ ಭೂಮಿಯಲ್ಲಿ ಸುಧಾರಿತ ವಿವಿಧ ಮೇವಿನ ಬಳೆ ಮರಗಳನ್ನು 10 ಎಕರೆ ಭೂಮಿಯಲ್ಲಿ ಬೆಳೆಯಲು ಅರ್ಹ ಆಸಕ್ತ ರೈತರಿಗೆ ಘಟಕದ ವೆಚ್ಚ ರೂ.50,000/ದ ಶೇಕಡ 50 ರಷ್ಟು (25,000/-) ಸಹಾಯಧನವಾಗಿ ನೀಡಲಾಗುವುದು.

ವರಾಹ ಅಭಿವೃದ್ದಿ ಯೋಜನೆ ಯಡಿ ಆಧುನಿಕ ಹಂದಿ ಸಾಕಾಣಿಕೆಗೆ ಪ್ರೋತ್ಸಾಹ ನೀಡಲಾ ಗುತ್ತಿದ್ದು ತಳಿ ಸಂವರ್ಧನೆಗೆ ಘಟಕ ವೆಚ್ಚ ರೂ 20,000/- ಸಹಾಯಧನ ರೂ.10,000/-, ಮಿಶ್ರತಳಿ ಅಭಿವೃದ್ದಿ ಘಟಕ ವೆಚ್ಚ ರೂ.3,000/- ಸಹಾಯಧನ ರೂ. 1,500 /- ಮತ್ತು ಮರಿ ಕೊಬ್ಬಿಸುವುದು ಘಟಕ ಸ್ಥಾಪನೆಗೆ ಘಟಕ ವೆಚ್ಚದ ರೂ.6,000/-ಕ್ಕೆ ಸಹಾಯಧನ ರೂ.3,000/- ನೀಡಲಾಗುವುದು.
ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳಿ(ನಿ) ಇವರ ವತಿಯಿಂದ ನಿರುದ್ಯೋಗ ಯುವಕ: ಯುವತಿಯರಿಗೆ: ಸಣ್ಣರೈತರಿಗೆ ಮಾಂಸ ಕೋಳಿ ಕ್ಷೇತ್ರ ಸ್ಥಾಪಿಸಲು ಪ್ರೋತ್ಸಾಹ ನೀಡಲಾಗುತ್ತಿದ್ದು ಇದರ ಘಟಕ ವೆಚ್ಚದ ರೂ.70,000/-ಕ್ಕೆ ಸಾಮಾನ್ಯ ವರ್ಗದ ಫಲಾನುಭವಿಗಳಿಗೆ ಸಹಾಯಧನ ರೂ.17,500/- ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಫಲಾನುಭವಿಗಳಿಗೆ ರೂ.23,100/- ಸಹಾಯಧನ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ಡಾ.ಕೆ.ಅಶೋಕ್ ಕುಮಾರ್, ಮಂಗಳೂರು ದೂರವಾಣಿ 0824/2492369 ಮೊ.9448124601, ಡಾ. ಸಿ. ನಾಗರಾಜ, ಬಂಟ್ವಾಳ 08255/232512,ಮೊ.9980322369, ಡಾ ಹೆಚ್ .ಸುಧಾಕರ ಶೆಟ್ಟಿ, ಬೆಳ್ತಂಗಡಿ 08256/232067,ಮೊ 9448329065, ಡಾ. ಕೆ. ರಾಮಚಂದ್ರ ಶೆಟ್ಟಿ, ಪುತ್ತೂರು 08251/230664 ಮೊ.9448869129, ಡಾ. ಎಂ.ಎನ್.ರಾಜಣ್ಣ, ಸುಳ್ಯ 08257/230412, ಮೊ.9448725698 ಇವರನ್ನು ಆಯಾ ತಾಲ್ಲುಕುಗಳವರು ಸಂಪರ್ಕಿಸಿ ಮಾಹಿತಿ ಪಡೆಯಬಹುದಾಗಿದೆ.