Wednesday, February 29, 2012

ಕುಡಿಯುವ ನೀರು ಒದಗಿಸಲು ರೂ.120.9 ಲಕ್ಷ ಕ್ರಿಯಾ ಯೋಜನೆ- ಶೈಲಜಾಭಟ್.

ಮಂಗಳೂರು,ಫೆಬ್ರವರಿ.29:ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ತೊಂದರೆ ಆಗದಂತೆ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ಜಿಲ್ಲಾ ಪಂಚಾಯತ್ ವತಿಯಿಂದ ಕೈಗೊಳ್ಳಲಾಗಿದ್ದು ಈಗಾಗಲೆ ರೂ. 120.9ಲಕ್ಷಗಳ ಕ್ರಿಯಾಯೋಜನೆಯನ್ನು ತಯಾರಿಸಿ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಕೆ.ಟಿ. ಶೈಲಜಾ ಭಟ್ ಅವರು ಇಂದು ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ತಿಳಿಸಿದರು.
ಈಗಿರುವ ದುರಸ್ತಿ ಯಾಗ ಬೇಕಾದ ಕೊಳವೆ ಬಾವಿ ಗಳನ್ನು ಆಧ್ಯತೆ ಮೇಲೆ ಕೈ ಗೊಳ್ಳ ಬಹು ದಾಗಿದ್ದು ಒಂದು ವೇಳೆ ಅವು ದುರಸ್ತಿ ಪಡಿ ಸಲು ಆಗದಿ ದ್ದಲ್ಲಿ ಮಾತ್ರ ಹೊಸ ಕೊಳವೆ ಬಾವಿ ಗಳನ್ನು ಕೊರೆ ಸಲು ಸರ್ಕಾರ ಅವಕಾಶ ಕಲ್ಪಿ ಸಿದೆ ಎಂದು ಮುಖ್ಯ ಕಾರ್ಯ ನಿರ್ವಹ ಣಾಧಿ ಕಾರಿ ಡಾ ಕೆ.ಎನ್.ವಿಜಯ ಪ್ರಕಾಶ್ ತಿಳಿಸಿದ್ದಾರೆ.
ಸಾಮಾಜಿಕ ಭದ್ರತಾ ಯೋಜನೆಗಳ ಅನುಷ್ಠಾನದಲ್ಲಿ ಜಿಲ್ಲೆಯಲ್ಲಿ ಅನಗತ್ಯ ವಿಳಂಬಗಳಾಗುತ್ತಿರುವ ಬಗ್ಗೆ ಕೆಲವು ಸದಸ್ಯರು ಸಭೆಯ ಅಧ್ಯಕ್ಷರ ಗಮನಕ್ಕೆ ತಂದು ಅವುಗಳನ್ನು ಕೂಡಲೇ ಪರಿಹರಿಸಲು ಕಂದಾಯ ಅಧಿಕಾರಿಗಳನ್ನು ಸಭೆಗೆ ಕರೆಸುವಂತೆ ಒತ್ತಾಯಿಸಿದ ಮೇರೆಗೆ ಸಭೆಯಲ್ಲಿ ಹಾಜರಿದ್ದ ಮಂಗಳೂರು ತಹಸೀಲ್ದಾರರು ಮಾತನಾಡಿ 2011ರ ಜನವರಿಯಿಂದ ಜಿಲ್ಲೆಯಲ್ಲಿ ಕಂದಾಯ ಅದಿಕಾರಿಗಳು ಮನೆಮನೆಗೆ ಭೇಟಿ ನೀಡಿ ಸಾಮಾಜಿಕ ಭದ್ರತೆ ಯೋಜನೆಯಡಿ ಸೌಲಭ್ಯ ಪಡೆಯುತ್ತಿರುವವರ ಪರಿಶೀಲನೆ ನಡೆಸಿ ಸರ್ಕಾರಕ್ಕೆ ಈಗಾಗಲೇ ವರದಿಯೊಂದನ್ನು ಸಲ್ಲಿಸಿದ್ದು ಅದರಂತೆ ಕೆಲವರ ಮಾಸಾಶನಗಳು ತಡೆಹಿಡಿಯಲಾಗಿದೆ, ಉಳಿದಂತೆ ಇತರರ ಮಾಸಾಶನಗಳು ಎಂದಿನಂತೆ ವಿತರಿಸಲಾಗುತ್ತಿದೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಜಿಲ್ಲೆ ಯಲ್ಲಿ ಕೊರ ಗರು ಜಾತಿ ದೃಢೀ ಕರಣ ಸೇರಿ ದಂತೆ ಇತರೆ ಸರ್ಕಾರಿ ಸೌಲಭ್ಯ ಗಳನ್ನು ಪಡೆಯಲು ತೊಂ ದರೆ ಆಗು ತ್ತಿರುವ ಬಗ್ಗೆ ಅಧ್ಯಕ್ಷರ ಗಮನ ಸೆಳೆ ದಾಗ ಈ ಬಗ್ಗೆ ಉತ್ತ ರಿಸಿದ ಜಿಲ್ಲಾ ಪಂಚಾ ಯಿತಿ ಉಪ ಕಾರ್ಯ ದರ್ಶಿ ಶಿವ ರಾಮೆ ಗೌಡರು, ಕೊರಗರು ಅಥವಾ ಇನ್ನಿತರೆ ಜನಾಂಗದವರು ಒಂದು ಧರ್ಮದಿಂದ ಮತ್ತೊಂದು ಧರ್ಮಕ್ಕೆ ಮತಾಂತರವಾಗಿ ಮೂಲ ಧರ್ಮದ ಅಡಿಯಲ್ಲಿ ಸೌಲಭ್ಯಗಳನ್ನು ಪಡೆಯಲು ಕಾನೂನಿನಲ್ಲಿ ಅವಕಾಶವಿರುವುದಿಲ್ಲ. ಆದರೆ ಅವರು ಸ್ವ ಇಚ್ಚೆಯಿಂದ ಮರಳಿ ಮೂಲ ಧರ್ಮಕ್ಕೆ ಬಂದಲ್ಲಿ ಅವರಿಗೆ ಎಲ್ಲಾ ಸೌಲಭ್ಯಗಳು ದೊರೆಯಲಿದೆ ಎಂದು ಸ್ಪಷ್ಟಪಡಿಸಿದರು.
ಸಭೆಯಲ್ಲಿ ಶಾಸಕರಾದ ಯು.ಟಿ ಖಾದರ್,ಬಿ.ರಮಾನಾಥ ರೈ, ಉಪಾಧ್ಯಕ್ಷೆ ಶ್ರೀಮತಿ ಧನಲಕ್ಷ್ಮಿ ಜನಾರ್ದನಗೌಡ ಮುಂತಾದವರು ಹಾಜರಿದ್ದರು.