Sunday, March 31, 2013

ಸುಭದ್ರ ಪ್ರಜಾಪ್ರಭುತ್ವಕ್ಕೆ ಪ್ರತಿಯೊಬ್ಬರೂ ಮತದಾನ ಮಾಡಿ: ಜಿಲ್ಲಾಧಿಕಾರಿ

ಮಂಗಳೂರು,ಮಾರ್ಚ್.31: ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಪ್ರತಿಯೊಬ್ಬರೂ ಮತದಾನ ಮಾಡಿ. ಮತದಾನ ಪ್ರತಿಯೊಬ್ಬರ ಕರ್ತವ್ಯ ಹಾಗೂ ಹಕ್ಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ  ಹರ್ಷ ಗುಪ್ತ ಅವರು ಹೇಳಿದರು.
 ಅವ ರಿಂದು ನಗ ರದ ಬಿಜೈ ಯಲ್ಲಿ ರುವ ಭಾರತ್ ಮಾಲ್  ನಲ್ಲಿ ಸ್ವೀಪ್ ಕಾರ್ಯ ಕ್ರಮ ದಡಿ ಆಯೋ ಜಿಸ ಲಾದ ಯಕ್ಷ ಗಾನದ ಮೂಲಕ ಜಾಗೃತಿ ಕಾರ್ಯ ಕ್ರಮಕ್ಕೆ ಚೆಂಡೆ ಬಾರಿ ಸುವುದರ ಮೂಲಕ ಉದ್ಘಾಟಿಸಿದರು.
ಪ್ರಜಾಪ್ರಭುತ್ವ ಬಲಗೊಳ್ಳಲು ಪ್ರತಿಯೊಬ್ಬರು ಮತದಾನ ಮಾಡುವಂತೆ ಪ್ರೇರೆಪಿಸಲು ಜಿಲ್ಲಾಡಳಿತ ಕೇಂದ್ರ ಚುನಾವಣಾ ಆಯೋಗದ ಸೂಚನೆಯಂತೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಈ ಜಾಗೃತಿ ಕಾರ್ಯಕ್ರಮಗಳು ಫಲ ನೀಡುವಂತೆ ಸಾರ್ವಜನಿಕರು ಸಹಕರಿಸಬೇಕು ಎಂದರು.
 ಅರ್ಹ ಮತದಾರರನ್ನು ಮತದಾನಕ್ಕೆ ಪ್ರೇರೆಪಿಸಿ ಪ್ರಜಾಪ್ರಭುತ್ವವನ್ನು ಸುಭದ್ರ ಪಡಿಸಲು ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸ್ವೀಪ್ ಕಾರ್ಯಕ್ರಮವನ್ನು ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಿಯಾಯೋಜನೆ ರೂಪಿಸಿ ಜಾರಿಗೊಳಿಸಲಾಗುತ್ತಿದೆ,
ಜಿಲ್ಲಾ ಪಂಚಾಯತ್ ಸಿಇಓ ಡಾ. ವಿಜಯ ಪ್ರಕಾಶ್, ಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್, ಜನ ಶಿಕಣ ಟ್ರಸ್ಟ್ ನ ಕೃಷ್ಣ ಮೂಲ್ಯ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಶಿಶು ಕಲ್ಯಾಣ ಅಭಿವೃದ್ಧಿ ಅಧಿಕಾರಿ ಶ್ಯಾಮಲ ಅವರು ಸ್ವಾಗತಿಸಿದರು. ರೋಶನಿಲಯ ಕಾಲೇಜಿನ ಪ್ರಾಧ್ಯಾಪಕಿ ಪ್ರೊ. ವಿನೀತಾ ಅವರ  ನೇತ್ರತ್ವದಲ್ಲಿ ಹವ್ಯಾಸಿ ಬಳಗ ಕದ್ರಿ ಮತ್ತು ವಿದ್ಯಾರ್ಥಿಗಳು ಯಕ್ಷಗಾನ ಕಾರ್ಯಕ್ರಮ ನಡೆಸಿಕೊಟ್ಟರು.  

ಖರ್ಚು ವೆಚ್ಚ ವೀಕ್ಷಕರ ತಂಡಕ್ಕೆ ಜಿಲ್ಲಾಧಿಕಾರಿಗಳ ವಿಶೇಷ ಸಭೆ

ಮಂಗಳೂರು,ಮಾರ್ಚ್.31: ಚುನಾವಣಾ ನೀತಿ ಸಂಹಿತೆಯನ್ನು ಉಲ್ಲಂಘಿಸದಂತೆ ಪ್ರತಿಯೊಂದು ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸಲು ಅಪರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ವಿವಿಧ ಸಮಿತಿಗಳು ಕಾಯರ್ಾಚರಿಸಲಿದ್ದು, ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯ ಎಲ್ಲ ಕ್ರಮಗಳಿಗೆ ಮುನ್ನುಡಿಯಾಗಿ ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಹರ್ಷ ಗುಪ್ತ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಶೇಷ ಸಭೆ ನಡೆಯಿತು.
       ಚುನಾ ವಣಾ ಖರ್ಚು ವೆಚ್ಚದ ನಿಗಾ ಇಡಲು ಜಿಲ್ಲಾ ನೋಡಲ್ ಅಕೌಂ ಟಿಂಗ್ ಅಧಿಕಾ ರಿಯಾಗಿ ಆದಾಯ ತೆರಿಗೆ ಅಧಿ ಕಾರಿ ಯನ್ನು ನೇಮಿ ಸಲಾ ಗಿದೆ. ಅವರಿಗೆ ಇಬ್ಬರು ಸಹಾ ಯಕ ರನ್ನು ನೇಮಿಸ ಲಾಗಿದೆ. ಬೆಳ್ತಂ ಗಡಿ, ಮೂಡ ಬಿದರೆ, ಮಂಗ ಳೂರು ಉತ್ತರ, ದಕ್ಷಿಣ, ಮಂಗ ಳೂರು, ಬಂಟ್ವಾಳ, ಪುತ್ತೂರು, ಸುಳ್ಯ ಕ್ಕೆ ಪ್ರತ್ಯೇಕ ಅಧಿ ಕಾರಿ ಗಳ ತಂಡ ನೇಮಿಸಲಾಗಿದೆ.
ವಿಡಿಯೊ ಸರ್ವಲೆನ್ಸ್ ತಂಡವನ್ನು ಇದೇ ಮಾದರಿಯಲ್ಲಿ ರಚಿಸಲಾಗಿದ್ದು ಇವರಿಗೆ ಪ್ರತ್ಯೇಕ ತರಬೇತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಇನ್ನೊಂದು ಪ್ರತ್ಯೇಕ  ವಿಡಿಯೋ ವ್ಯೂವಿಂಗ್ ತಂಡವನ್ನು ರಚಿಸಲಾಗಿದೆ. ಇನ್ನು ಪೇಯ್ಡ್ ನ್ಯೂಸ್ ಬಗ್ಗೆ ನಿಗಾ ಇಡಲು ಎಂ ಸಿ ಎಂಸಿ(ಮೀಡಿಯಾ ಸರ್ಟಿಪೈಯಿಂಗ್ ಅಂಡ್ ಮಾನಿಟರಿಂಗ್ ಕಮಿಟಿ) ಸಮಿತಿ ಕಾರ್ಯಾಚರಿಸಲಿದೆ. ಚುನಾವಣಾ ಪ್ರಕ್ರಿಯೆಯಲ್ಲಿ ಅಕ್ರಮ ತಡೆಗೆ ರಚನಾತ್ಮಕ ವ್ಯೂಹ ರಚಿಸಲಾಗಿದ್ದು ಎಲ್ಲೆಡೆಯಿಂದಲೂ ವೀಕ್ಷಕರು ಪ್ರತಿಯೊಂದು ಚಟುವಟಿಕೆಯನ್ನು ವೀಕ್ಷಿಸಲಿರುವರು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಎಲ್ಲ ಸಮಿತಿ ಗಳ ಜವಾ ಬ್ದಾರಿ ಮತ್ತು ಪಾತ್ರದ ಬಗ್ಗೆ ವಿವ ರಿಸಿದ ಅವರು, ಇಲ್ಲಿ ಸೃಷ್ಟಿ ಸಲಾ ಗಿರುವ ಯಾವುದೇ ಪಾತ್ರ ಗಳು ಕಾಲ್ಪನಿ ಕವಲ್ಲ. ಎಲ್ಲವೂ ಕಾರ್ಯಾ ನುಷ್ಠಾ ನಕ್ಕೆ ತರ ಲಾಗು ವಂತಹುದೇ. ಅದನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದು ಅಧಿಕಾರಿಗಳಿಗೆ ಸಂದೇಶ ನೀಡಿದರು. ಚುನಾವಣಾ ಅಕ್ರಮ ತಡೆಗೆ ಕಾರ್ಯಾಚರಿಸಲು ಪ್ರತಿಯೊಬ್ಬನಿಗೂ ಬೆಂಬಲವಾಗಿ ಜಿಲ್ಲಾ ಚುನಾವಣಾಧಿಕಾರಿಗಳಿರುತ್ತಾರೆ; ಈ ಬಗ್ಗೆ ಯಾವುದೇ ಸಂದೇಹ ಬೇಡ ಎಂದರು.
ಚುನಾವಣಾ ಸಂದರ್ಭದಲ್ಲಿ ಕೇಂದ್ರ ಸ್ಥಾನ ಬಿಡದಿರಲು ಎಲ್ಲಾ ಅಧಿಕಾರಿಗಳಿಗೆ ಸೂಚಿಸಿದ ಅವರು, ಅಗತ್ಯ ಮತ್ತು ತುರ್ತು ಸಂದರ್ಭಗಳಲ್ಲಿ ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕೆಂದರು.

' ಮತದಾನ ನಮ್ಮ ಹಕ್ಕು,ಬನ್ನಿ ಪಾಲ್ಗೊಳ್ಳಿ'

ಮಂಗಳೂರು,ಮಾರ್ಚ್.31: ಅರ್ಹ ಮತದಾರರನ್ನು ಮತದಾನಕ್ಕೆ ಪ್ರೇರೆಪಿಸಿ ಪ್ರಜಾಪ್ರಭುತ್ವವನ್ನು ಸುಭದ್ರ ಪಡಿಸಲು ಈಗಾಗಲೇ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಸ್ವೀಪ್ ಕಾರ್ಯಕ್ರಮವನ್ನು ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಿಯಾಯೋಜನೆ ರೂಪಿಸಿ ಜಾರಿಗೊಳಿಸಲಾಗುತ್ತಿದೆ, ದಕ್ಷಿಣ ಕನ್ನಡ ಜಿಲ್ಲೆ ಯಲ್ಲೂ ಜನ ರಲ್ಲಿ  ಜಾಗೃತಿ ಮೂಡಿ ಸಲು ಜಿಲ್ಲಾ ಡಳಿತ ಕಾರ್ಯ ಯೋಜ ನೆಯನ್ನು ರೂಪಿ ಸಿದ್ದು, ಜಿಲ್ಲಾಧಿ ಕಾರಿ ಹರ್ಷ ಗುಪ್ತ ಅವರು ಇಂದು ನಗ ರದ ಬಿಜೈ ಭಾರತ್ ಮಾಲ್  ನಲ್ಲಿ ಸ್ವೀಪ್ ಕಾರ್ಯ ಕ್ರಮ ದಡಿ ಯಲ್ಲಿ ಆಯೋ ಜಿಸ ಲಾದ ಯಕ್ಷ ಗಾನ ಮೂಲಕ ಮತ ದಾನದ ಜಾಗೃತಿ ಅಭಿ ಯಾನಕ್ಕೆ ಚಾಲನೆ ನೀಡಿ ದರು. ಜಿಲ್ಲಾ ಪಂಚಾ ಯತ್ ಸಿಇಓ ಡಾ. ವಿಜಯ ಪ್ರಕಾಶ್, ಪಾಲಿಕೆ ಆಯುಕ್ತ ರಾದ ಡಾ. ಹರೀಶ್ ಕುಮಾರ್, ಜನ ಶಿಕಣ ಟ್ರಸ್ಟ್ ನ ಕೃಷ್ಣ ಮೂಲ್ಯ ಕಾರ್ಯ ಕ್ರಮ ದಲ್ಲಿ ಉಪ ಸ್ಥಿತ ರಿದ್ದರು. ಶಿಶು ಕಲ್ಯಾಣ ಅಭಿ ವೃದ್ಧಿ ಅಧಿ ಕಾರಿ ಶ್ಯಾಮಲ ಅವರು ಸ್ವಾಗ ತಿಸಿ ದರು. ರೋಶನಿ ನಿಲಯ ಕಾಲೇ ಜಿನ ಪ್ರಾಧ್ಯಾ ಪಕಿ ಪ್ರೊ. ವಿನೀತಾ ಅವರ  ನೇತೃತ್ವ ದಲ್ಲಿ ಹವ್ಯಾಸಿ ಬಳಗ ಕದ್ರಿ ಮತ್ತು ವಿದ್ಯಾರ್ಥಿ ಗಳು ಯಕ್ಷ ಗಾನ ಕಾರ್ಯ ಕ್ರಮ ನಡೆಸಿ ಕೊಟ್ಟರು. ಸ್ವೀಪ್ ಬಗ್ಗೆ ಸಾರ್ವ ಜನಿಕ ರಿಂದ ಉತ್ತಮ ಪ್ರತಿ ಕ್ರಿಯೆ ವ್ಯಕ್ತ ವಾಗು ತ್ತಿದೆ.   
 ಭಾರತ ಚುನಾವಣಾ ಆಯೋಗ
ಕರ್ನಾಟಕ ವಿಧಾನಸಭಾ ಚುನಾವಣೆ-2013ರ ಮತದಾನವು ಮೇ 5 ರಂದು ಬೆಳಗಿನ 8 ರಿಂದ ಸಂಜೆ 5 ಗಂಟೆಯವರೆಗೆ ಜರುಗಲಿದೆ.ಈ ಮತದಾನಕ್ಕಾಗಿ ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರಿರುವುದನ್ನು ಈಗಲೇ ಖಚಿತ ಪಡಿಸಿಕೊಳ್ಳಿ.
2013ರ ಜನವರಿ 1ಕ್ಕೆ 18 ವರ್ಷ ತುಂಬಿದವರೆಲ್ಲ ಮತಪಟ್ಟಿಗೆ ತಪ್ಪದೇ ಹೆಸರು ಸೇರಿಸಿ.ಮಾಹಿತಿಗಾಗಿ ಲಾಗ್ ಆನ್ ಮಾಡಿ.http://ceokarnataka.kar.nic.in/

Friday, March 29, 2013

ಮತದಾರರ ಪಟ್ಟಿ ಸ್ವಚ್ಛವಾಗಿರಲಿ: ಜಿಲ್ಲಾಧಿಕಾರಿ ಹರ್ಷ ಗುಪ್ತ

ಮಂಗಳೂರು, ಮಾರ್ಚ್. 29 : ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ಆಗಿರುವ ಪ್ರಗತಿ ವರದಿಯನ್ನು ಪ್ರತಿದಿನ ಬೆಳಗ್ಗೆ ತನಗೆ ನೀಡಬೇಕೆಂದು ಜಿಲ್ಲಾಧಿಕಾರಿ ಹರ್ಷ ಗುಪ್ತ ಹೇಳಿದರು. ಫಾರ್ಮ್ ನಂಬರ್ 6, 7 ಮತ್ತು 8 ಹಾಗೂ ಎಲ್ಲಿ ಹೆಚ್ಚು ನೋಂದಣಿಯಾಗಿದೆ; ಯಾವೆಲ್ಲ ಪ್ರದೇಶಗಳಲ್ಲಿ ಕಡಿಮೆ ನೋಂದಣಿಯಾಗಿದೆ ಎಂಬುದರ ಮಾಹಿತಿ ಕಾರಣ ಸಹಿತ ನೀಡಬೇಕೆಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.
  ಮತ ದಾರರ ಪಟ್ಟಿ ಯಲ್ಲಿ ಹೆಸರು ಗಳ ಡೂಪ್ಲಿ ಕೇಟ್ ಆಗ ದಂತೆ ಹಾಗೂ ಸತ್ತ ವರ ಹಾಗೂ ಇತರ ಕಾರಣ ಗಳಿಂದ ಇಲ್ಲ ದವರ ಹೆಸ ರನ್ನು ಕೈ ಬಿಟ್ಟು ಸ್ವಚ್ಛ ಮತ ದಾರರ ಪಟ್ಟಿ ಯನ್ನು ರಚಿಸಿ ದರೆ ಮತ ದಾನದ ಶೇಕಡ ವಾರು ವಿವರ ಹಾಗೂ ಪಾಲ್ಗೊ ಳ್ಳುವಿ ಕೆಯನ್ನು ಖಚಿತ ಪಡಿಸಿ ಕೊಳ್ಳ ಬಹುದು ಎಂದು ಅವರು ನುಡಿದರು.
      ಕೆಳಮಟ್ಟದಿಂದ ಮೇಲ್ಮಟ್ಟದವರೆಗಿನ ಅಧಿಕಾರಿಗಳ ನಡುವೆ ಸಂವಹನ ಅತಿ ಮುಖ್ಯವಾಗಿದ್ದು, ಮತದಾನದ ಪ್ರಕ್ರಿಯೆ ಯನ್ನು ಸೂಚನೆಯಂತೆ ಪಾಲಿಸಲು ಸುತ್ತೋಲೆಗಳಂತೆ ನಡೆದುಕೊಳ್ಳಿ. ಗಡಿ ಪ್ರದೇಶದ ಮತದಾರರ ಪಟ್ಟಿಯನ್ನು ತಯಾರಿಸುವಾಗ ಸೂಕ್ಷ್ಮವಾಗಿ ಕೆಲಸ ಮಾಡಿ ಎಂದರು. ಸೆಕ್ಟರ್ ಅಧಿಕಾರಿಗಳು ಚುನಾವಣಾ ಪ್ರಕ್ರಿಯೆ ಬೆನ್ನೆಲುಬಾಗಿದ್ದು, ಅವರ ಸಕ್ರಿಯ ಪಾಲ್ಗೊಳ್ಳುವಿಕೆ ಮುಖ್ಯ.ಅವರು ತಮ್ಮ ಬೂತ್ ಲೆವೆಲ್ ಅಧಿಕಾರಿಗಳೊಂದಿಗೆ ಪ್ರತಿದಿನ ಸಂಪರ್ಕವಿರಿಸಿಕೊಂಡು ಮಾಹಿತಿಯನ್ನು ಸಂಗ್ರಹಿಸಬೇಕು. ಸಭೆ ನಡೆಸಲು ನಿಗದಿತ ಜಾಗ ಗುರುತಿಸಿಕೊಳ್ಳಬೇಕು. ನಿಗದಿತ ಮಾದರಿಯಲ್ಲೇ ಮಾಹಿತಿ ತುಂಬಿ ಕಳುಹಿಸಿ ಎಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ರಿಟರ್ನಿಂಗ್ ಅಧಿಕಾರಿಗಳ ಸಭೆಯನ್ನುದ್ದೇಶಿಸಿ ಹೇಳಿದರು, ಮತದಾರರ ನೋಂದಣಿ ಕಾರಣಗಳನ್ನು ವಿಶ್ಲೇಷಿಸಿ; ಎಲ್ಲಿ ತಪ್ಪಾಗಿದೆ, ಯಾರು ಹೊಣೆ ಎಂಬ ಬಗ್ಗೆಯೂ ಸ್ಪಷ್ಟಪಡಿಸಿದರು.
 ಕ್ಷೇತ್ರ ವಾರು ಡಿ ಡುಪ್ಲಿ ಕೇಷನ್ ತಡೆ ಯಲು ಬೇಕಾದ ಕ್ರಮ ಗಳನ್ನು ಕೈ ಗೊಳ್ಳಲು ನಿರ್ದೇ ಶನ ನೀಡಿ ದರು. ಆರ್ ಒ ಗಳು ಮತ್ತು ಎ ಆರ್ ಒ ಗಳಿಗೆ ಹೆಚ್ಚಿನ ಜವಾ ಬ್ದಾರಿ ಯಿದ್ದು, ಫೋಟೋ ಗಳಿ ಲ್ಲದೆ (ಎಪಿಕ್) ವೋಟರ್ ಐ ಡಿ ಇರ ಬಾರದು ಎಂದರು.
ಸ್ವೀಪ್ ಬಗ್ಗೆಯೂ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು ಕ್ಷೇತ್ರವಾರು ಕಡಿಮೆ ಮತದಾನವಾದ ಪ್ರದೇಶಗಳನ್ನು ವಿಶೇಷ ಗಮನದಲ್ಲಿರಿಸಿ, ಮತದಾನವನ್ನು ಹೆಚ್ಚಿಸಲು ಯೋಜನೆ ರೂಪಿಸಿ. ಇದಕ್ಕಾಗಿ ಬಿಎಲ್ ಒ ಗಳ ಸಹಕಾರ ಪಡೆಯಿರಿ. ಮತದಾನವಾಗದಿರುವ ಸಮಸ್ಯೆ ಮೂಲ ಹುಡುಕಿ. ಸಹಾಯಕ ಆಯುಕ್ತರು ಈ ಸಂಬಂಧ ತಮಗೆ ಫೀಡ್ ಬ್ಯಾಕ್ ಕೊಡಿ. ಬಿ ಎಲ್ ಒ ಗೆ ಕಳೆದ ಬಾರಿಯ ಪಟ್ಟಿ ಕೊಟ್ಟು ಕಾರಣ ಕೇಳಿ. ವೋಟಿಂಗ್ ಪರ್ಸಂಟೇಜ್ ಜಾಸ್ತಿ ಆದರೆ ಬಿ ಎಲ್ ಒ ಗಳಿಗೆ ವಿಶೇಷ ಸಂಭಾವನೆ ಕೊಡುವ ಬಗ್ಗೆಯೂ ಚಿಂತಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ದಯಾನಂದ ಕೆ .ಎ., ಸಿಇಒ ಹಾಗೂ ಸ್ವೀಪ್ ಅಧ್ಯಕ್ಷರಾದ ಡಾ ಕೆ ಎನ್ ವಿಜಯಪ್ರಕಾಶ್ ಹಾಗೂ ಮಹಾನಗರಪಾಲಿಕೆ ಆಯುಕ್ತರು ಉಪಸ್ಥಿತರಿದ್ದರು

ಕಂಟ್ರೊಲ್ ರೂಂ ನಂ 1077 ,ಖರ್ಚು-ವೆಚ್ಚದ ಮೇಲೆ ತೀವ್ರ ನಿಗಾ: ಹರ್ಷ ಗುಪ್ತ

ಮಂಗಳೂರು,ಮಾರ್ಚ್.29 : ಹೊಸ ಮತದಾರರ ನೋಂದಣಿ, ನೀತಿ ಸಂಹಿತೆಯನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವುದು ಮತ್ತು ಮುಕ್ತ-ನ್ಯಾಯ ಸಮ್ಮತ ಚುನಾವಣೆಗೆ ತಮ್ಮ ಆದ್ಯತೆ ಇರುವುದಾಗಿ ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಹರ್ಷಗುಪ್ತ ಹೇಳಿದ್ದಾರೆ.
ಅವರು ಇಂದು ಬೆಳಗ್ಗೆ  ತಮ್ಮ ಜಿಲ್ಲಾ ಧಿಕಾರಿ ಕಚೇರಿ ಯಲ್ಲಿ ಮಾಧ್ಯಮ ಪ್ರತಿ ನಿಧಿ ಗಳೊಂ ದಿಗೆ ಮಾತ ನಾಡು ತ್ತಿದ್ದರು.
ಒಂದ ಕ್ಕಿಂತ ಹೆಚ್ಚು ಕಡೆ ಗಳಲ್ಲಿ ಮತ ದಾರರ ಪಟ್ಟಿ ಯಲ್ಲಿ ಹೆಸರು ನೋಂದಾ ಯಿಸಿ ಕೊಳ್ಳು ವುದು ಕಾನೂನು ಪ್ರಕಾರ ತಪ್ಪು.ಅಂತಹ ವರು ತಕ್ಷಣವೇ ನಮೂನೆ 7ರಲ್ಲಿ ಅಲ್ಲಿ ಸಲ್ಲಿಸಿ ಒಂದಕ್ಕಿಂತ ಹೆಚ್ಚು ಕಡೆಯ ಹೆಸರುಗಳನ್ನು ಕಿತ್ತು ಹಾಕಲು ಕೋರಿಕೆ ಸಲ್ಲಿಸಬೇಕು. ಇದು ಮತದಾರರ ಕರ್ತವ್ಯವೂ ಆಗಿದೆ ಎಂದು  ಜಿಲ್ಲಾಧಿಕಾರಿ ನುಡಿದರು.
ಅರ್ಹ ನಾಗರಿಕರು ಸ್ವಇಚ್ಛೆಯಿಂದ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಲು ಅಗತ್ಯವಾದ ಎಲ್ಲಾ ಕ್ರಮಗಳನ್ನು ಈಗಾಗಲೇ ಜಾರಿಗೊಳಿಸಲಾಗಿದೆ.ಅದೇ ರೀತಿ ನಮೂನೆ 8ರಲ್ಲಿ ಅರ್ಜಿ ಸಲ್ಲಿಸಿ ತಪ್ಪಾಗಿರುವುದನ್ನು ಸರಿಪಡಿಸಿಕೊಳ್ಳಲು ಅವಕಾಶವಿದೆ. ಎ.7 ಸೇರ್ಪಡೆ ಮತ್ತು ತಿದ್ದುಪಡಿಗೆ ಕೊನೆಯ ದಿನವಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿಯವರು  ತಿಳಿಸಿದರು.
 ಜಿಲ್ಲಾ ಧಿಕಾರಿ ಕಚೇರಿಯ ನಿಯಂ ತ್ರಣ ಕೊಠಡಿ ಯನ್ನು ಬಲ ಪಡಿ ಸಲಾ ಗುವು ದಲ್ಲದೆ ದಿನದ 24 ಗಂಟೆ ಯೂ ಕಾರ್ಯ ನಿರ್ವ ಹಿಸು ವಂತೆ ವ್ಯ ವಸ್ಥೆ ರೂಪಿ ಸಲಾ ಗುವುದು. ನಿಯಂ ತ್ರಣ ಕೊಠಡಿಯ ದೂರ ವಾಣಿ ಸಂಖ್ಯೆ 1077 ಕ್ಕೆ ಹೆಚ್ಚು ವರಿ ಲೈನ್ ಗಳನ್ನು ಜೋಡಿ ಸುವ ಮೂಲಕ ಫೋನ್ ಬಿಝಿ ಬರ ದಂತೆ ನೋಡಿ ಕೊಳ್ಳ ಲಾಗು ವುದು ಎಂದು ಹರ್ಷ ಗುಪ್ತ ವಿವ ರಿಸಿ ದರು.
ನಿಯಂತ್ರಣ ಕೊಠಡಿಗೆ ಕರೆ ಮಾಡಿದವರು ನೇರವಾಗಿ ಜಿಲ್ಲಾಧಿಕಾರಿಯವರಲ್ಲಿ ಮಾತನಾಡಲು ಬಯಸಿದರೆ ಕರೆ ವರ್ಗಾವಣೆಗೂ ವ್ಯವಸ್ಥೆ ರೂಪಿಸಲಾಗುವುದು ಎಂದ ಅವರು ನಿಯಂತ್ರಣ ಕೊಠಡಿಯ ಸಿಬ್ಬಂದಿ ಕರೆ ಸ್ವೀಕರಿಸಿದ ಕೂಡಲೆ ಸಂಬಂಧ ಪಟ್ಟವರಿಗೆ ವಿಳಂಬವಿಲ್ಲದೆ ವರದಿ ಮಾಡಲು ನಿರ್ದೇಶನ ನೀಡುವುದಾಗಿ ಹೇಳಿದರು.
ಅಭ್ಯರ್ಥಿಗಳ ಖರ್ಚು ವೆಚ್ಚದ ಮೇಲೆ ತೀವ್ರ ನಿಗಾ ಇಡಲಾಗುವುದು.ಅಭ್ಯರ್ಥಿಗಳಿಗೆ ಪ್ರತ್ಯೇಕ ದಾಖಲಾತಿ ಪುಸ್ತಕ ತೆರೆದು ಖರ್ಚು-ವೆಚ್ಚಗಳನ್ನು ದಾಖಲು ಮಾಡಲಾಗುವುದು. ಅಂತಿಮವಾಗಿ ಅಭ್ಯರ್ಥಿಗಳು ನೀಡುವ ವಿವರಗಳೊಂದಿಗೆ ತಾಳೆ ನೋಡಲಾಗುವುದು.ಆ ಕುರಿತಂತೆ ಈಗಾಗಲೇ ಛಾಯಾ ತಂಡ, ಸೆಕ್ಟರ್ ಅಧಿಕಾರಿಗಳ ನೇಮಕ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿಗಳು ನುಡಿದರು.

 ವಿವಿಧ ಇಲಾಖಾಧಿಕಾರಿಗಳೊಂದಿಗೆ ಜಿಲ್ಲಾಧಿಕಾರಿಗಳು ಸಭೆ ನಡೆಸಿದರು.
       ನಕ್ಸಲ್ ಬಾಧಿತ ಪ್ರದೇಶಗಳಲ್ಲಿ ಮುಕ್ತ ಮತ್ತು ನ್ಯಾಯ ಸಮ್ಮತ ಚುನಾವಣೆಗಾಗಿ ಯಾವ್ಯಾವ ಕ್ರಮಗಳನ್ನು ತೆಗೆದುಕೊಳ್ಳ ಬೇಕು ಎಂಬ ಕುರಿತು ಚುನಾವಣಾ ಆಯೋಗ ಸ್ಪಷ್ಟ ಮಾರ್ಗದರ್ಶನ ನೀಡಿದೆ. ಆಯೋಗ ಸೂಚಿತ ಎಲ್ಲಾ ಕ್ರಮಗಳನ್ನು ಜಿಲ್ಲಾಡಳಿತ ಕೈಗೊಳ್ಳಲಿದೆ ಎಂದು ಹೇಳಿದ ಗುಪ್ತ ಜಿಲ್ಲೆಯ ಅಧಿಕಾರಿಗಳ ಸಭೆ ನಡೆಸಿ ಚುನಾವಣಾ ಕೆಲಸ ಕಾರ್ಯಗಳಿಗೆ ವೇಗ ಹೆಚ್ಚಿಸಲಾಗುವುದು ಎಂದರು.ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ, ಮಂಗಳೂರು ಮಹಾ ನಗರಪಾಲಿಕೆಯ ಆಯುಕ್ತ ಡಾ.ಹರೀಶ್ ಕುಮಾರ್ ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಉಪಸ್ಥಿತರಿದ್ದರು.

'ಮತದಾರರನ್ನು ಮತದಾನಕ್ಕೆ ಪ್ರೇರೆಪಿಸಿ'

ಮಂಗಳೂರು, ಮಾರ್ಚ್. 29 : ಅರ್ಹ ಮತದಾರರನ್ನು ಮತದಾನಕ್ಕೆ ಪ್ರೇರೆಪಿಸಿ ಪ್ರಜಾಪ್ರಭುತ್ವವನ್ನು ಸುಭದ್ರ ಪಡಿಸಲು ಈಗಾಗಲೇ ಎಲ್ಲ ಜಿಲ್ಲೆಗಳಲ್ಲು ಸ್ವೀಪ್ ಕಾರ್ಯಕ್ರಮವನ್ನು ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಕ್ರಿಯಾಯೋಜನೆ ರೂಪಿಸಿ ಜಾರಿಗೊಳಿಸಲಾಗಿದ್ದು, ಇದನ್ನು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ಖರ್ಚು ವೆಚ್ಚದ ವಿಶೇಷ ಅಧಿಕಾರಿಯೂ ಆಗಿರುವ ಪಂಕಜ್ ಕುಮಾರ್ ಪಾಂಡೆ ಅವರು ಹೇಳಿದರು.
  ಇಂದು ನಡೆದ ವಿಡಿಯೋ ಕಾನ್ಫ ರೆನ್ಸ್ನಲ್ಲಿ ಜಾಗೃತಿ ಯೋಜ ನೆಯ ಬಗ್ಗೆ ವಿವ ರಿಸಿದ ಅವರು, ವಿವಿಧ ಜಿಲ್ಲೆಯ ಜಿಲ್ಲಾ ಧಿಕಾರಿ ಗಳಿಂದ ಅಭಿ ಪ್ರಾಯ ವನ್ನು ಸಂಗ್ರ ಹಿಸಿ ದರು. ದಕ್ಷಿಣ ಕನ್ನಡ ಜಿಲ್ಲಾ ಧಿಕಾರಿ ಹರ್ಷ ಗುಪ್ತಾ ಅವರು ಅಭಿಪ್ರಾ ಯಿಸಿ, ಉಳಿ ದೆಲ್ಲ ಸ್ವೀಪ್ ನ ಕ್ರಿಯಾ ಯೋಜನೆ ಗಳ ಜೊತೆಗೆ ಕಾರ್ಯ ಕ್ರಮ ಗಳಲ್ಲಿ ಸ ಕ್ರಿಯ ವಾಗಿ ನೇರ ವಾಗಿ ಜನ ರೊಂದಿಗೆ ಸಂಪರ್ಕ ಹೊಂದಿ ರುವ ಬಿ ಎಲ್ ಒಗಳನ್ನು ಈ ನಿಟ್ಟಿನಲ್ಲಿ ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.
ಲೋಕಲ್ ಚಾನೆಲ್ ಗಳು ಚುನಾವಣಾ ಸಂದೇಶಗಳನ್ನು ಸಮಾಜದ ಹಿತದೃಷ್ಟಿಯಿಂದ ನೀಡಬೇಕು. ಜನ ಜಾಗೃತಿಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಬಹುಮಾಧ್ಯಮಗಳ ನೆರವನ್ನು ಪಡೆಯಲಾಗಿದೆ.
ಇದಕ್ಕೂ ಮುಂಚೆ ಮಾತನಾಡಿದ ಅನಿಲ್ ಝಾ ಅವರು ಸದಾಚಾರ ಸಂಹಿತೆ ಬಗ್ಗೆ ವಿವರಿಸಿದರು. ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ, ಸಿಇಒ ಡಾ ಕೆ ಎನ್ ವಿಜಯಪ್ರಕಾಶ್ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.

Thursday, March 28, 2013

ದ.ಕ.ಜಿಲ್ಲಾಧಿಕಾರಿಯಾಗಿ ಹರ್ಷಗುಪ್ತ ಅವರು ಅಧಿಕಾರ ಸ್ವೀಕಾರ


ಮಂಗಳೂರು, ಮಾರ್ಚ್. 28: ದಕ್ಚಿಣ ಕನ್ನಡ ನೂತನ ಜಿಲ್ಲಾ ಧಿಕಾ ರಿಯಾಗಿ  ಹರ್ಷ ಗುಪ್ತ ಅವರು ಇಂದು  ಅಧಿ ಕಾರ ಸ್ವೀಕ ರಿಸಿದರು. ಇಂದು ಸಂಜೆ ನಗ ರಕ್ಕೆ ಆಗಮಿ ಸಿದ ಅವರು ಅಪರ ಜಿಲ್ಲಾ ಧಿಕಾರಿ ಮತ್ತು ಇತರ ಜಿಲ್ಲೆಯ ಅಧಿ ಕಾರಿ ಗಳಿಂದ  ಚುನಾ ವಣಾ ಪ್ರ ಕ್ರೀಯೆ ಬಗ್ಗೆ ಸಮಗ್ರ ಮಾಹಿತಿ ಪಡೆದು ಕೊಂಡರು.

 

Monday, March 25, 2013

ಮಹಾನಗರಪಾಲಿಕೆ ವ್ಯಾಪ್ತಿಗೆ ಇನ್ನೊಂದು ನೋಂದಣಿ ಕೇಂದ್ರ

ಮಂಗಳೂರು, ಮಾರ್ಚ್. 25:-ಇಂದು ಜಿಲ್ಲಾಧಿಕಾರಿಗಳು ಮಹಾ ನಗರ ಪಾಲಿಕೆಯ ಮತ ದಾನ ನೋಂದಣಿ ಕೇಂದ್ರ ಕ್ಕೆ ಭೇಟಿ ನೀಡಿದ ಸಂದ ರ್ಭದಲ್ಲಿ ಅಲ್ಲಿ ನೆರೆ ದಿದ್ದ ಜನ ದಟ್ಟಣೆ ಯನ್ನು ಗಮ ನಿಸಿ ಮತ ದಾರರ ನೋಂದ ಣಿಗೆ  ಅನು ಕೂಲ ವಾಗು ವಂತೆ ಮಹಾನಗರಪಾಲಿಕೆ ಕದ್ರಿ ಉಪಕಚೇರಿಯಲ್ಲಿ ದಿನಾಂಕ 26-3-13ರ  ಬೆಳಿಗ್ಗೆಯಿಂದ ನೋಂದಣಿ ಕೇಂದ್ರ ಕಾರ್ಯಾರಂಭಗೊಳ್ಳಲಿದೆ.  ಮತದಾರ ಸಾರ್ವಜನಿಕರು ಈ ಕೇಂದ್ರದ ಉಪಯೋಗವನ್ನು ಪಡೆದುಕೊಳ್ಳಬಹುದಾಗಿದೆಯೆಂದು ಅವರು ತಿಳಿಸಿದ್ದಾರೆ. 


ಚುನಾವಣಾ ಖರ್ಚುವೆಚ್ಚ: ಬ್ಯಾಂಕ್ ಅಧಿಕಾರಿಗಳ ಸಭೆ


ಮಂಗಳೂರು,ಮಾರ್ಚ್.25 :ಚುನಾವಣಾ ಖರ್ಚು ವೆಚ್ಚಕ್ಕೆ ಸಂಬಂಧಿಸಿದಂತೆ ಸೂಕ್ಷ್ಮವಾಗಿ ನಿಗಾ ವಹಿಸಲು ಹಾಗೂ 50,000 ರೂ. ಗಳಿಗಿಂತ ಹೆಚ್ಚಿನ ನಗದು ವ್ಯವಹಾರಗಳ ಬಗ್ಗೆ ಕಣ್ಣಿಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ  ಎನ್ ಪ್ರಕಾಶ್ ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಎಲ್ಲ ಬ್ಯಾಂಕ್ ಅಧಿಕಾರಿಗಳ ಸಭೆ ಕರೆದು ಚುನಾವಣಾ ಸದಾಚಾರ ಸಂಹಿತೆ ಮತ್ತು ಕೇಂದ್ರ ಚುನಾವಣಾ ಆಯೋಗ ಬ್ಯಾಂಕ್ ಗಳಿಗೆ ನೀಡಿದ ನಿರ್ದೇಶನ ದ ಮಾಹಿತಿ ನೀಡಿದರು.
ಅಭ್ಯ ರ್ಥಿಗಳ ಖಾತೆಯ ಮೇಲೆ ನಿಗಾ, ಅವರು ಹಣ ನಗದೀ ಕರಣ ಗೊಳಿ ಸಿದ ಬಗ್ಗೆ ಮಾಹಿತಿ, ವಿಶೇಷ ವಾಗಿ 50,000 ಕ್ಕಿಂತಲೂ ಹೆಚ್ಚು ಹಣ ಖಾತೆ ಯಿಂದ ತೆಗೆ ದರೆ, ಅನು ಮಾನಾ ಸ್ಪದ ವಾಗಿ ನಗದು ವ್ಯವ ಹಾರ ನಡೆ ಸಿದ ಚಟು ವಟಿಕೆ ಗಳ ಬಗ್ಗೆ ಲೀಡ್  ಬ್ಯಾಂಕ್ ಮ್ಯಾನೇ ಜರ್ ಮೂಲಕ ಪ್ರತಿ ದಿನದ ಮಾಹಿತಿ ಯನ್ನು ಜಿಲ್ಲಾ ಧಿಕಾ ರಿಗ ಳಿಗೆ ತಲುಪಿಸಬೇಕೆಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಇದರ ಜೊತೆಗೆ ಎಲ್ಲ ಬ್ಯಾಂಕುಗಳ ಸಿಬ್ಬಂದಿ ಮತ್ತು ಅಧಿಕಾರಿಗಳ ಪಟ್ಟಿಯನ್ನು ಆದ್ಯತೆ ಮೇಲೆ ನೀಡುವಂತೆ ಸೂಚಿಸಿದ ಜಿಲ್ಲಾಧಿಕಾರಿಗಳು ಚುನಾವಣಾ ಪ್ರಕ್ರಿಯೆಯಲ್ಲಿ ಕೇಂದ್ರ ಸರ್ಕಾರದ ಇಲಾಖೆಗಳ ಸಿಬ್ಬಂದಿಗಳ ಸಹಕಾರದ ಅಗತ್ಯವಿದೆ ಎಂದರು.ಪ್ರತಿದಿನ ಕೇಂದ್ರ ಚುನಾವಣಾ ಆಯೋಗಕ್ಕೆ ಈ ಸಂಬಂಧ ವರದಿ ಕಳುಹಿಸುವ ಹೊಣೆ ನಮ್ಮದಾಗಿದ್ದು ನಗದು ವ್ಯವಹಾರದ ಬಗ್ಗೆ ಸಮಗ್ರ ಹಾಗೂ ಶೀಘ್ರ ಮಾಹಿತಿ ಬೇಕಿದೆ ಎಂದರು.

ಚುನಾವಣಾ ಖರ್ಚು ವೆಚ್ಚ: ರಾಜಕೀಯ ಪಕ್ಷ ಪ್ರತಿನಿಧಿಗಳ ಸಭೆ


ಮಂಗಳೂರು, ಮಾರ್ಚ್.25 : ಚುನಾವಣಾ ಖರ್ಚು ವೆಚ್ಚದ ಬಗ್ಗೆ ಸಮಗ್ರ ಹಾಗೂ ಸರಿಯಾದ ಮಾಹಿತಿ ನೀಡಿ ಎಂದು ದ.ಕ. ಜಿಲ್ಲಾಧಿಕಾರಿ ಎನ್ ಪ್ರಕಾಶ್ ಅವರು ರಾಜಕೀಯ ಪಕ್ಷ ಪ್ರತಿನಿಧಿಗಳ ಸಭೆಯಲ್ಲಿ ಹೇಳಿದರು.
ಸುಳ್ಳು ಮಾಹಿತಿ ನೀಡಿ ದರೆ ಶ್ಯಾಡೋ ಅ ಕೌಂಟ್ ಸಮಿತಿ ಕಾರ್ಯೋ ನ್ಮುಖ ವಾಗಿದ್ದು, ಈ ಬಗ್ಗೆ ನಿಮಗೆ ಮುಂಚಿತ ಮಾಹಿತಿ ನೀಡ ಲಾಗು ತ್ತಿದೆ. ಸಭೆ ಸಮಾ ರಂಭ ಗಳು ಹಾಗೂ ವಾಹನ ವೆಚ್ಚ, ಸಾರಿಗೆ ವೆಚ್ಚ ಸೇರಿ ದಂತೆ ಎಲ್ಲ ಮಾಹಿತಿ ಯನ್ನು ಸರಿ ಯಾಗಿ ನೀಡಿ. 16 ಲಕ್ಷ ರೂಪಾಯಿ ಓರ್ವ ಅಭ್ಯರ್ಥಿಗೆ ವೆಚ್ಚ ಮಾಡಲು ಅವಕಾಶವಿದ್ದು, ಕಾನೂನು ಉಲ್ಲಂಘನೆ ಬಗ್ಗೆ ವಿವಿಧ ಸಮಿತಿಗಳು ಕಣ್ಗಾವಲಿರಿಸಿದ್ದು ಎಚ್ಚರಿಕೆಯಿಂದ ವರ್ತಿಸಿ. ಹಾಗೂ ಸ್ವಚ್ಚ ಚುನಾವಣೆಗೆ ಅವಕಾಶ ನೀಡಿ ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ದಕ್ಷಿಣ ಕನ್ನಡ ಜಿಲ್ಲೆ ಪ್ರಾಮಾಣಿಕತೆ ಮತ್ತು ನೇರ ನಡೆನುಡಿಗೆ ಮಾದರಿಯಾಗಿದ್ದು, ಖರ್ಚು ವೆಚ್ಚದ ಬಗ್ಗೆ ಮಾಹಿತಿ ನೀಡಿ. ಶಿಸ್ತಾಗಿ ವರ್ತಿಸುವುದರಿಂದ ಎಲ್ಲರಿಗೂ ಅನುಕೂಲವಾಗಲಿದೆ ಎಂದರು. ಅತ್ಯಂತ ಪಾರದರ್ಶಕವಾಗಿ ಚುನಾವಣಾ ಪ್ರಕ್ರಿಯೆ ನಡೆಯಲಿದ್ದು, ಎಲ್ಲರ ಸಹಕಾರ ಅಗತ್ಯ ಎಂದರು. ಸಮಯ ಸಮಯಕ್ಕೆ ಎಲ್ಲ ಮಾಹಿತಿಗಳನ್ನು ನೇರವಾಗಿ ಹಾಗೂ ಬಹುಮಾಧ್ಯಮಗಳ ಮೂಲಕ ಮಾಹಿತಿ ನೀಡಲಾಗುವುದು ಎಂದರು. ಅಪರ ಜಿಲ್ಲಾಧಿಕಾರಿ  ದಯಾನಂದ ಕೆ ಎ ಉಪಸ್ಥಿತರಿದ್ದರು.    

ಸ್ವೀಪ್ ಅನುಷ್ಠಾನಕ್ಕೆ ನೋಡಲ್ ಅಧಿಕಾರಿಗಳು

ಮಂಗಳೂರು,ಮಾರ್ಚ್. 25:-ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ವೀಪ್ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ  ತರಲು ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಅಧಿಕಾರಿಗಳ ವಿಶೇಷ ಸಹಕಾರ ಪಡೆಯಲು ನಿರ್ಧರಿಸಿದ ಸ್ವೀಪ್ ಅಧ್ಯಕ್ಷರೂ ಆಗಿರುವ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಡಾ ಕೆ ಎನ್ ವಿಜಯಪ್ರಕಾಶ್ ಅವರು ಇಂದು ಜಿಲ್ಲಾ ಮಟ್ಟದ ಅಧಿಕಾರಿಗಳ ವಿಶೇಷ ಸಭೆ ಕರೆದು ಮಂಗಳೂರು ವ್ಯಾಪ್ತಿಗೆ ಯೋಜನಾ ನಿರ್ದೇಶಕರಾದ ಶ್ರೀಮತಿ ಸೀತಮ್ಮ ಹಾಗೂ ಪುತ್ತೂರು ವ್ಯಾಪ್ತಿಗೆ ರಾಷ್ಟ್ರೀಯ ಶಿಕ್ಷಣ ಮಾಧ್ಯಮ ಅಧಿಕಾರಿಗಳಾದ  ಶಿವರಾಮಯ್ಯ ಅವರನ್ನು ನೋಡಲ್ ಅಧಿಕಾರಿಗಳಾಗಿ ನೇಮಿಸಿದರು.
ಜಿಲ್ಲಾ ಪಂಚಾಯತ್ ವ್ಯಾಪ್ತಿಯ ಕಚೇರಿಗಳ ಎದುರು ಮತದಾರರಲ್ಲಿ ಜಾಗೃತಿ ಮೂಡಿಸಲು ಹಾಗೂ ಮತದಾನಕ್ಕೆ ಪ್ರೇರೆಪಣೆ ನೀಡಲು ಎಲ್ಲ ಕಚೇರಿಗಳ ಎದುರು ಸಾರ್ವಜನಿಕರಿಗೆ ಕಾಣುವ ಹಾಗೆ ಬ್ಯಾನರ್ ಗಳ ಮೂಲಕ ಮಾಹಿತಿ ನೀಡುವ ಕಾರ್ಯವಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಯಕ್ಷಗಾನ, ಬೀದಿನಾಟಕ, ಮೈಮ್ ಶೋ ಮುಖಾಂತರ, ಸಾರ್ವಜನಿಕ ಸಾರಿಗೆ ವ್ಯವಸ್ಥೆಗಳ ಮುಖಾಂತರ ಜನರು ತಮ್ಮ ಹಕ್ಕನ್ನು ಪ್ರತಿಪಾದಿಸುವಂತೆ ಪ್ರೇರೆಪಿಸಲು ಕ್ರಮಕೈಗೊಳ್ಳಲು ಅರಿವು ಕಾರ್ಯಕ್ರಮ ಹಮ್ಮಿಕೊಳ್ಳಲು ಸಭೆ ನಿರ್ಧರಿಸಿತು. ಸ್ಥಳೀಯ ಭಾಷೆಗಳಾದ ತುಳು, ಬ್ಯಾರಿ, ಕೊಂಕಣಿ, ಅರೆ ಭಾಷೆಗಳ ಮುಖಾಂತರ ಮೈಕ್ ಗಳಲ್ಲಿ ಅನೌನ್ಸ್ ಮಾಡುವುದರಿಂದ ಜನರಲ್ಲಿ ಅರಿವು ಮೂಡಿಸುವ ಬಗ್ಗೆ ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ಸಲಹೆ ಮಾಡಿದರು. ಎಲ್ಲ ಯುವಜನ ಒಕ್ಕೂಟ ಮತ್ತು ಕಾಲೇಜಿನಲ್ಲಿರುವ ವಿದ್ಯಾರ್ಥಿ ಕಲ್ಯಾಣ ವಿಭಾಗದ ಮುಖ್ಯಸ್ಥರು ಮತ್ತು ಯುವ ಜನ ಇಲಾಖಾ ವ್ಯಾಪ್ತಿಗೆ ಬರುವ ಸಮೂಹಗಳೊಂದಿಗೆ ಸತತ ಸಂಪರ್ಕವಿರಿಸಿಕೊಂಡು ಮಾಹಿತಿ ಶಿಕ್ಷಣ ಕಾರ್ಯಕ್ರಮ ಯಶಸ್ಸಿಗೆ ಕ್ರಮಕೈಗೊಳ್ಳುವುದಾಗಿ ಹೇಳಿದರು.
ಸಕರ್ಾರೇತರ ಸಂಘಸಂಸ್ಥೆಗಳ ನೆರವು ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಹಾಗೂ ಶಿಕ್ಷಣ ಇಲಾಖಾ ಅಧಿಕಾರಿಗಳಿಗೆ ನಿಗದಿತ ಮಾದರಿಗಳನ್ನು ಈ ನಿಟ್ಟಿನಲ್ಲಿ ನೀಡಲಾಯಿತು. ಮುಖ್ಯ ಯೋಜನಾಧಿಕಾರಿ ನಝೀರ್, ಅವರನ್ನೊಳಗೊಂಡಂತೆ ಜಂಟಿ ನಿರ್ದೇಶಕರು ಕೃಷಿ ಮತ್ತಿತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು. 

Sunday, March 24, 2013

ಚುನಾವಣಾ ಖರ್ಚು ವೆಚ್ಚ: ಆಯೋಗದ ಹದ್ದಿನ ಕಣ್ಣು


ಮಂಗಳೂರು, ಮಾರ್ಚ್. 24: ಪ್ರತ್ಯಕ್ಷ ಹಾಗೂ ಪರೋಕ್ಷ ಚುನಾವಣಾ ವೆಚ್ಚದ ಬಗ್ಗೆ ಹೆಚ್ಚಿನ ನಿಗಾ ಇರಿಸಲು ಭಾರತ ಚುನಾವಣಾ ಆಯೋಗ ಪ್ರತ್ಯೇಕ ಖರ್ಚು ವೆಚ್ಚ ವಿಭಾಗವನ್ನೇ ರಚಿಸಿದ್ದು, ವಿಶೇಷ ಫ್ಲೈಯಿಂಗ್ ಸ್ಕ್ವಾಡ್ ಮೂಲಕ ವಿಶೇಷ ನಿಗಾ ಇರಿಸಲಿದೆ ಎಂದು ಖರ್ಚು ವೆಚ್ಚ ವೀಕ್ಷಣಾ ಸಮಿತಿ ಅಧ್ಯಕ್ಷರಾದ  ಪಿ.ಕೆ ದಾಸ್ ಅವರು ಹೇಳಿದರು.
                                          ಅವರಿಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ವಿಡಿಯೋ ಕಾನ್ಫರೆನ್ಸ್ ಮುಖಾಂತರ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳೊಂದಿಗೆ ಈ ನಿಟ್ಟಿನಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳು ಹಾಗೂ ಕೈಗೊಂಡಿರುವ ಕ್ರಮಗಳ ಮಾಹಿತಿಯನ್ನು ಪಡೆದರು.
ಖರ್ಚು ವೆಚ್ಚಗಳ ಬಗ್ಗೆ ಮಾಹಿತಿ ಪಡೆದು ನಂತರ ಏನೂ ಕ್ರಮಕೈಗೊಳ್ಳಾಗುತ್ತಿಲ್ಲ ಎಂಬ ಸಾರ್ವಜನಿಕ ಆರೋಪಕ್ಕೆ ಈ ಬಾರಿಯ ಚುನಾವಣೆಯಲ್ಲಿ ಉತ್ತರಿಸಬೇಕಿದೆ. ಹಾಗಾಗಿ ಕಟ್ಟುನಿಟ್ಟಿನ ಕ್ರಮ ಹಾಗೂ ಪೂರ್ವಭಾವಿ ಸಿದ್ಧತೆಗಳನ್ನು ಆಯೋಗ ಮಾಡಿದೆ; ಅಧಿಕಾರಿಗಳು ಪರಿಣಾಮಕಾರಿಯಾಗಿ ಕಾಯರ್ೋನ್ಮುಖರಾಗಬೇಕಿದೆ ಎಂದು ನಿರ್ದೇಶನ ನೀಡಿದ ಅವರು, ವಾಣಿಜ್ಯ ತೆರಿಗೆ ಇಲಾಖೆ, ಆದಾಯ ತೆರಿಗೆ ಇಲಾಖೆ, ಜಿಲ್ಲಾಧಿಕಾರಿಗಳ ಕಚೇರಿ, ಪೊಲೀಸ್ ಇಲಾಖೆ ಸಮನ್ವಯ ಹಾಗೂ ಸಹಕಾರದಿಂದ ಸೂಕ್ಷ್ಮವಾಗಿ ಬೆಳವಣಿಗೆಗಳನ್ನು ಗಮನಿಸಬೇಕಿದೆ.
ಚುನಾವಣೆ ಅಧಿಕಾರಿಗಳಿಗೆ ಹೊಸದಲ್ಲದಿದ್ದರೂ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವ ಅಧಿಕಾರಿಗಳು ಇನ್ನಷ್ಟೂ ವಿನೂತನವಾಗಿ ಚಿಂತಿಸಿ ಅಕ್ರಮ ತಡೆಯಲು ಎಲ್ಲ ನಿಟ್ಟಿನಲ್ಲೂ ಕ್ರಮಕೈಗೊಳ್ಳಬೇಕು. ತಪ್ಪಿತಸ್ತರನ್ನು ಗುರುತಿಸಿ ಶಿಕ್ಷೆಯಾಗುವಾಗ ಶಿಕ್ಷೆ ನೀಡಿದ ಬಗ್ಗೆ ಪ್ರಚಾರ ನೀಡುವ ಕೆಲಸವಾಗಬೇಕು. ಮಾಹಿತಿಯೂ ಎಲ್ಲರಿಗೂ ತಲುಪಬೇಕು ಎಂದು ಅವರು ಜಿಲ್ಲಾಧಿಕಾರಿಗಳು ತಿಳಿಸಿದರು.
ಹಣಕಾಸು ವ್ಯವಹಾರಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಹಾಗೂ 50,000 ಕ್ಕೂ ಹೆಚ್ಚು ನಗದು ವ್ಯವಹಾರಗಳಾದಾಗ ಈ ಬಗ್ಗೆ ದಾಖಲಿಸಬೇಕು. ಅಭ್ಯರ್ಥಿಗಳ ಆಸ್ತಿ ವಿವರದ ಅಫಿದವಿತ್ ಜೊತೆಗೆ ಕ್ರಿಮಿನಲ್ ವಿವರಗಳ ಮಾಹಿತಿಯಿದ್ದರೆ ಜೊತೆಗೆ ಎರಡು ಅಫಿದಾವಿತ್ ಗಳನ್ನು ಸಲ್ಲಿಸಬೇಕು. ಇದನ್ನು 24 ಗಂಟೆಯೊಳಗೆ ವೆಬ್ ಸೈಟ್ ಗೆ ಅಪಲೋಡ್ ಮಾಡುವ ಬಗ್ಗೆ ಕ್ರಮಗಳಾಗಬೇಕು. ಖಚರ್ುವೆಚ್ಚದ ಬಗ್ಗೆಗಿನ ಏನೇ ಸಂದೇಹಗಳಿದ್ದರೂ ತನ್ನ ಗಮನಕ್ಕೆ ಖುದ್ದಾಗಿ ತರಬಹುದೆಂದು ಮೊಬೈಲ್ ನಂಬರ ನ್ನೂ ನೀಡಿದರು.
24 ಗಂಟೆ ದೂರು ಕೋಶ, 50,000ಕ್ಕಿಂತ ಹೆಚ್ಚು ರೂಪಾಯಿಗಳ ನಗದು ವ್ಯವಹಾರ ಈ ಎಲ್ಲ  ಮಾಹಿತಿಗಳನ್ನು ಸಂಬಂಧಪಟ್ಟವರಿಗೆ ತಲುಪಿಸಲು ಸೂಕ್ತ ಕ್ರಮ, ಬ್ಯಾಂಕ್ ಅಧಿಕಾರಿಗಳ ಸಭೆ ತಕ್ಷಣವೇ ಆಗಬೇಕು ಎಂದು ನಿರ್ದೇಶಿಸಿದ ಅವರು, ಅಬಕಾರಿ ಇಲಾಖೆಯ ಜೊತೆಯೂ ಸಮನ್ವಯ ಅಗತ್ಯ. ಅವರದ್ದೇ ಪ್ರತ್ಯೇಕ ವ್ಯವಸ್ಥೆ ಚುನಾವಣೆಯಲ್ಲಿ ಅಕ್ರಮ ಮದ್ಯ ತಡೆಗೆ ಇದ್ದರೂ ಇನ್ನಿತರ ಅಧಿಕಾರಿಗಳೊಂದಿಗೆ ಸಮನ್ವಯ ಹಾಗೂ ಪತ್ತೆಯಾದುದನ್ನು ಜನತೆಗೆ ತಿಳಿಸುವ ಕೆಲಸವಾಗಬೇಕು. ಚುನಾವಣಾ ಅಕ್ರಮ ತಡೆಗೆ ಕೇಂದ್ರ ಚುನಾವಣಾ ಆಯೋಗ ಎಲ್ಲಾ ರೀತಿಯ ಮುನ್ನೆಚ್ಚರಿಕೆ ವಹಿಸಿದ್ದು, ಪ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ತಪಾಸಣೆಯ ವೇಳೆ ಶಾಂತಿ ಹಾಗೂ ಸಂಯಮದಿಂದ ವರ್ತಿಸುವ ಮುಖಾಂತರ ಘರ್ಷಣೆಗೆ ಅವಕಾಶ ನೀಡಬಾರದು ಎಂದರು.
ಮಂಗಳೂರಿನಲ್ಲಿ ವಿಮಾನ ನಿಲ್ದಾಣವಿರುವುದರಿಂದ ಇಲ್ಲೂ ವಿಶೇಷ ತಪಾಸಣೆ ಅಗತ್ಯವಿದೆ. ರೈಲ್ವೇ ನಿಲ್ದಾಣ ಹಾಗೂ ಎಲ್ಲ ರೀತಿಯ ಸಂವಹನಗಳ ಬಗ್ಗೆ ನಿಗಾ ಇರಿಸಬೇಕಿದೆ. ಕೇರಳ ಗಡಿ ಪ್ರದೇಶದ ಸ್ಥಳಗಳಲ್ಲಿ ವಿಶೇಷ ಚೆಕ್ ಪೋಸ್ಟ್ ಬೇಕಿದೆ ಎಂದರು. ಉತ್ತರಿಸಿದ ಪೊಲೀಸ್ ಕಮಿಷನರ್ ಮನೀಷ್ ಕರ್ಬೀಕರ್ ಅವರು, ಚುನಾವಣೆ ಹಿನ್ನಲೆಯಲ್ಲಿ 5 ವಿಶೇಷ ಚೆಕ್ ಪೋಸ್ಟ್ ಗಳನ್ನು ರಚಿಸಲಾಗಿದೆ. ಕೋಸ್ಟ್ ಗಾರ್ಡ್ ನವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ. ಕಳೆದ ಜನವರಿಯಿಂದ ಒಟ್ಟು 170 ಕೇಸ್ ಗಳನ್ನು ಹಾಕಲಾಗಿದೆ. ಕ್ರಿಮಿನಲ್ ಶಕ್ತಿಗಳ ವಿರುದ್ಧ ಕಣ್ಣಿಡಲಾಗಿದೆ ಎಂಬ ಮಾಹಿತಿ ನೀಡಿದರು.
ಮತಪಟ್ಟಿಯಲ್ಲಿ ಹೆಸರು ಸೇರಿಸುವಾಗ ಅಕ್ರಮವಾಗಬಾರದು ಎಂಬುದನ್ನು ಸ್ಪಷ್ಟವಾಗಿ ಹೇಳಿದ ಅವರು, ಜಿಲ್ಲಾ ಚುನಾವಣಾಧಿಕಾರಿಗಳು ಕರಡು ಪಟ್ಟಿಯನ್ನು ಖುದ್ದಾಗಿ ಒಮ್ಮೆ ನೋಡಬೇಕು. ಚುನಾವಣಾ ಪ್ರಕ್ರಿಯೆಯಲ್ಲಿ ಒಳಗೊಂಡಿರುವ ಅಧಿಕಾರಿಗಳು ತಮ್ಮ ಕಣ್ಣು ಹಾಗೂ ಕಿವಿಗಳನ್ನು ಮುಕ್ತವಾಗಿರಿಸಿಕೊಂಡು ಕೆಲಸ ಮಾಡಬೇಕು. ಕರ್ನಾಟಕದಲ್ಲೂ ಚುನಾವಣಾ ಅಕ್ರಮ ನಡೆಯುತ್ತಿದೆ ಎಂಬುದು ಕೇಂದ್ರ ಚುನಾವಣಾ ಆಯೋಗ್ ಗಮನಿಸಿದ್ದು, ನಿರ್ಲಕ್ಷ್ಯ ವಹಿಸಿದರೆ ಅಧಿಕಾರಿಗಳ ವಿರುದ್ಧ ಕ್ರಮ ಜರುಗಲಿದೆ ಎಂದರು.
ಜಿಲ್ಲಾಧಿಕಾರಿ ಎನ್. ಪ್ರಕಾಶ್ ಅವರು ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ನೀಡಿದರೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಕಾನೂನು ಸುವ್ಯವಸ್ಥೆ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಸ್ವೀಪ್ ನ ಅಧ್ಯಕ್ಷರು ಆದ ಡಾ ಕೆ ಎನ್ ವಿಜಯಪ್ರಕಾಶ್ ಹಾಗೂ ಮನಾಪ ಆಯುಕ್ತ ಡಾ ಹರೀಶ್ ಅವರನ್ನೊಳಗೊಂಡಂತೆ ಚುನಾವಣಾ ಖರ್ಚು ವೆಚ್ಚ ಸಮಿತಿಯಲ್ಲಿ ಕಾರ್ಯನಿರ್ವಹಿಸಲಿರುವ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಚುನಾವಣಾ ಕಾವಲು ಸಮಿತಿ ಸಭೆ


ಸ್ವೀಪ್ ಅಧ್ಯಕ್ಷರು ಹಾಗೂ ಸಿಇಒ ಜಿಲ್ಲಾ ಪಂಚಾಯತ್ ಅವರ ಅಧ್ಯಕ್ಷತೆಯಲ್ಲಿ ಮಂಗಳೂರು ಮಹಾನಗರಪಾಲಿಕೆ ಆಯುಕ್ತರಾದ ಡಾ. ಹರೀಶ್  ಕುಮಾರ್ ಅವರ ಉಪಸ್ಥಿತಿಯಲ್ಲಿ ಪಾಲಿಕೆ ಆಯುಕ್ತರ ಕಚೇರಿಯಲ್ಲಿ 23ರಂದು ಆಯೋಜಿಸಲಾಗಿತ್ತು.
 ಸಭೆಯಲ್ಲಿ ಸ್ವಚ್ಛ ಚುನಾವಣೆ ಹಾಗೂ ಮತದಾರರ ನೋಂದಣಿ, ಜಾಗೃತಿ ಕುರಿತು ವಿಚಾರ ವಿನಿಮಯ ನಡೆಯಿತು.

ಸಾರ್ವತಿಕ್ರ ಚುನಾವಣೆ-ಅಬಕಾರಿ ಕಂಟ್ರೋಲ್ ರೂಂ


ಮಂಗಳೂರು, ಮಾರ್ಚ್.24: ರಾಜ್ಯ ವಿಧಾನಸಭಾ ಚುನಾವಣೆ 2013   ಸಂಬಂಧ ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವವರೆಗೂ  ಅಕ್ರಮ ಮದ್ಯ ತಯಾರಿಕೆ/ದಾಸ್ತಾನು/ಸಾಗಾಣಿಕೆ ಹಾಗೂ ಸರಬರಾಜನ್ನು ಪತ್ತೆಹಚ್ಚಲು ಅನುಕೂಲವಾಗುವಂತೆ ಜಿಲ್ಲೆಯ ಅಬಕಾರಿ ಕಾರ್ಯ ನಿರ್ವಾಹಕ ಸಿಬ್ಬಂದಿಗಳನ್ನು ದಿನದ 24 ಗಂಟೆಯೂ ಕಾರ್ಯ ನಿರ್ವ ಹಿಸು ವಂತೆ ಕಂಟ್ರೋಲ್  ರೂಂ ಗಳನ್ನು ತೆರೆಯ ಲಾಗಿದೆ. ಅಕ್ರಮ ಚಟುವ ಟಿಕೆ ಗಳು ಕಂಡು ಬಂದಲ್ಲಿ ಸಾರ್ವ ಜನಿ ಕರು ದೂರ ವಾಣಿ ಸಂಖ್ಯೆ 0824- 222 53 84 ನ್ನು ಸಂಪರ್ಕಿಸಿ ತಿಳಿಸಬಹುದಾಗಿದೆ.
    ತಾಲೂಕು ಮಟ್ಟದಲ್ಲಿ ಅಕ್ರಮ ಮದ್ಯ ದೂರು ಸಲ್ಲಿಸಲು ತಾಲೂಕುವಾರು ಅಧಿಕಾರಿಗಳ ಸಂಚಾರಿ ದೂರವಾಣಿ ಸಂಖ್ಯೆಗಳು ಇಂತಿವೆ.  ಮಂಗಳೂರು ತಾಲೂಕಿನಲ್ಲಿ ದೂರು ಸಲ್ಲಿಸಲು ಇರುವ ಅಧಿಕಾರಿಗಳ ವಿವರ ಹಾಗೂ ಅವರ ದೂರವಾಣಿ ಸಂಖ್ಯೆಗಳು . ಅಬಕಾರಿ ನಿರೀಕ್ಷಕರು, ದಕ್ಷಿಣ ವಲಯ-1 -ದೂ.ಸಂ.9449615579, ಅಬಕಾರಿ ನಿರೀಕ್ಷಕರು, ದಕ್ಷಿಣ ವಲಯ-2-ದೂ.ಸಂ.9035365162, ಅಬಕಾರಿ ನಿರೀಕ್ಷಕರು, ಪೂರ್ವ ವಲಯ-1 -ದೂ.ಸಂ.9480044600, ಅಬಕಾರಿ ನಿರೀಕ್ಷಕರು, ಉತ್ತರ ವಲಯ-1 -ದೂ.ಸಂ.9902995400, ಅಬಕಾರಿ ನಿರೀಕ್ಷಕರು, ಉತ್ತರ ವಲಯ-2-ದೂ.ಸಂ.9900105493, ಅಬಕಾರಿ ನಿರೀಕ್ಷಕರು, ಪೂರ್ವ ವಲಯ-1 ದೂ.ಸಂ.-9448823929, ಬಂಟ್ವಾಳ ತಾಲೂಕು ಅಬಕಾರಿ ನಿರೀಕ್ಷಕರು-ದೂ.ಸಂ.9448770694, ಬೆಳ್ತಂಗಡಿ ತಾಲೂಕು ಅಬಕಾರಿ ನಿರೀಕ್ಷಕರು-ದೂ.ಸಂ.9448867015, ಪುತ್ತೂರು ತಾಲೂಕು ಅಬಕಾರಿ ನಿರೀಕ್ಷಕರು-ದೂ.ಸಂ.9448253092 ಸುಳ್ಯ ತಾಲೂಕು ಅಬಕಾರಿ ನಿರೀಕ್ಷಕರು-ದೂ.ಸಂ.9935410708 ಸಂಚಾರಿ ದೂರವಾಣಿ ಸಂಖ್ಯೆಗಳಿಗೆ ದೂರು ಸಲ್ಲಿಸಬಹುದಾಗಿದೆ.

ಸುಗಮ SSLC ಪರೀಕ್ಷೆಗೆ ಜಿಲ್ಲಾಡಳಿತ ಸಿದ್ಧ

ಮಂಗಳೂರು, ಮಾರ್ಚ್.24: ದಕ್ಷಿಣಕನ್ನಡ ಜಿಲ್ಲೆಯಲ್ಲಿ 2013, ಎಪ್ರಿಲ್ 1 ರಿಂದ ಎಪ್ರಿಲ್ 10 ರವರೆಗೆ ಸುಗಮವಾಗಿ ಎಸ್ಎಸ್ಎಲ್ಸಿ ಪರೀಕ್ಷೆ ನಡೆಸಲು ಜಿಲ್ಲಾಡಳಿತ ಹಾಗೂ ಜಿಲ್ಲೆಯ ವಿದ್ಯಾಂಗ ಇಲಾಖೆ ಸಜ್ಜಾಗಿದ್ದು,ಪೂರ್ವಭಾವೀ ತಯಾರಿಗಳನ್ನು ನಡೆಸಲಾಗಿದೆಯೆಂದು ದಕ್ಷಿಣಕನ್ನಡ ಅಪರ ಜಿಲ್ಲಾಧಿಕಾರಿಗಳಾದ  ಕೆ.ಎ.ದಯಾನಂದ್ ತಿಳಿಸಿದ್ದಾರೆ.
       ಅವರು  ಶನಿ ವಾರ ಜಿಲ್ಲಾಧಿ ಕಾರಿ ಕಚೇರಿ ಯಲ್ಲಿ ಸಭೆಯ ಅಧ್ಯಕ್ಷತೆ ವಹಿಸಿ ಮಾತ ನಾಡು ತ್ತಿದ್ದರು. ಸುಲಲಿತ ವಾಗಿ ಪರೀಕ್ಷೆ ಗಳನ್ನು ನಡೆಸಲು ಹಾಗೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲು, ನಕಲು ತಡೆಗೆ ಎಲ್ಲಾ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಜಿಲ್ಲಾ ಕೇಂದ್ರದಿಂದ ತಾಲೂಕು ಕೇಂದ್ರಗಳಿಗೆ ಪ್ರಶ್ನೆ ಪತ್ರಿಕೆಗಳನ್ನು ಸಾಗಿಸಲು ವ್ಯವಸ್ಥೆ ಮಾಡಲಾಗಿದೆ.
ಜಿಲ್ಲೆಯಲ್ಲಿ ವಿಭಾಗ ಹಾಗೂ  ತಾಲೂಕು ಮಟ್ಟದ ಅಧಿಕಾರಿಗಳ ಸ್ಕ್ವಾಡ್ ರಚಿಸಲಾಗಿದ್ದು, ತಂಡ ಪರೀಕ್ಷಾ ಕೇಂದ್ರಗಳಿಗೆ  ಭೇಟಿ ನೀಡುವಾಗ ವಿದ್ಯಾಥರ್ಿಗಳು ಗಾಬರಿ ಬೀಳದಂತೆ ವತರ್ಿಸಬೇಕು. ವಿದ್ಯಾಥರ್ಿಗಳ ಪರೀಕ್ಷೆ ಬರೆಯುವಾಗ ಅವರ ಬರವಣಿಗೆಗೆ ತೊಂದರೆಯಾಗದಂತೆ ಪರೀಕ್ಷಾ ಕೇಂದ್ರಗಳಿಗೆ ಪ್ರವೇಶಿಸಬೇಕೆಂದು ಕಿವಿಮಾತು ಹೇಳಿದರು. ಪರೀಕ್ಷೆಗಳು ಬೆಳಿಗ್ಗೆ 9.30 ಗಂಟೆಗೆ ಪ್ರಾರಂಭವಾಗಿ ಪರೀಕ್ಷೆ ಮುಗಿಯವವರೆಗೆ ಯಾರನ್ನು ಹೊರಗೆ ಬಿಡಬಾರದೆಂದು ಸೂಚಿಸಿದರು.
ಈ ಸಮಯದಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಇರುವ ಜೆರಾಕ್ಸ್ ಅಂಗಡಿಗಳನ್ನು  ಮುಚ್ಚುವ ವ್ಯವಸ್ಥೆ ಮಾಡಲಾಗುವುದು.ಎಸ್ಎಸ್ಎಲ್ ಸಿ ಪರೀಕ್ಷೆಯ ಮೌಲ್ಯ ಮಾಪನವನ್ನು ಎಪ್ರಿಲ್ 15 ರಿಂದ ಪ್ರಾರಂಭಿಸಿ 20 ರೊಳಗೆ ಮುಗಿಸಲು ಕ್ರಮ ಕೈಗೊಳ್ಳಲಾಗುವುದೆಂದರು.
ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ  ಮೋಸೆಸ್ ಜಯಶೇಖರ್ ಸ್ವಾಗತಿಸಿದರು. ಸಭೆಯಲ್ಲಿ ಶಿಕ್ಷಣ ಇಲಾಖೆಯ ಪ್ರಾಂಶುಪಾಲರು, ಎಲ್ಲಾ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳು, ಕಾರ್ಯ ನಿರ್ವಹಣಾಧಿಕಾರಿಗಳು,ತಹಶೀಲ್ದಾರರು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. 
ದ್ವಿತೀಯ ಪಿಯುಸಿ ಪರೀಕ್ಷೆ:
ಶನಿವಾರ ( 23-3-13) ಪಿಯುಸಿ ವ್ಯವಹಾರ ಅಧ್ಯಯನ(ಬಿಸಿನೆಸ್ ಸ್ಟಡೀಸ್) ಪರೀಕ್ಷೆಗೆ ಒಟ್ಟು 13552 ವಿದ್ಯಾರ್ಥಿಗಳು ಹೆಸರು ನೊಂದಾಯಿಸಿದ್ದು, 218 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, 13334 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಕೆಮಿಸ್ಟ್ರಿ ಪರೀಕ್ಷೆಗೆ ಒಟ್ಟು 11204 ವಿದ್ಯಾರ್ಥಿಗಳು ಹೆಸರು ನೊಂದಾಯಿಸಿದ್ದು, 109 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದು, 11095 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆಂದು  ಪಿ ಯು ಬೋರ್ಡ್  ಅಧಿಕಾರಿಗಳು ತಿಳಿಸಿದ್ದಾರೆ.

Friday, March 22, 2013

ನ್ಯಾಯಯುತ ಮತದಾನಕ್ಕೆ ಜಿಲ್ಲಾಡಳಿತ ಸಜ್ಜಾಗುತ್ತಿದೆ: ಜಿಲ್ಲಾಧಿಕಾರಿ

ಮಂಗಳೂರು, ಮಾರ್ಚ್. 22:-ಜಿಲ್ಲೆಯಲ್ಲಿ ವಿಧಾನಸಭಾ ಸಾರ್ವತ್ರಿಕ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಯಾವುದೇ ಚ್ಯುತಿ ಬಾರದಂತೆ ಕಾರ್ಯ ನಿರ್ವಹಿಸುವಂತೆ ಚುನಾವಣಾ ಪ್ರಕ್ರಿಯೆಯಲ್ಲಿ
ಪಾಲ್ಗೊಳ್ಳುವ ಎಲ್ಲಾ ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನ್ಯಾಯಯುತ ಪಾರದರ್ಶಕ ಹಾಗೂ ಮುಕ್ತ ಚುನಾವಣೆಯ ಹೊಣೆ ನಮ್ಮೆಲ್ಲರದ್ದು ಎಂದು ದಕ್ಷಿಣಕನ್ನಡ ಜಿಲ್ಲಾಧಿಕಾರಿಗಳಾದ ಎನ್.ಪ್ರಕಾಶ್ ತಿಳಿಸಿದರು.
ಇವರು ಇಂದು ಜಿಲ್ಲಾ ಧಿಕಾರಿ ಕಚೇರಿ ಯಲ್ಲಿ ನಡೆದ ಪತ್ರಿಕಾ ಗೋಷ್ಠಿ ಯನ್ನು ಉದ್ದೇ ಶಿಸಿ ಮಾತ ನಾಡು ತ್ತಿದ್ದರು.
ಚುನಾ ವಣಾ ಅಧಿ ಸೂಚನೆ ದಿನಾಂಕ 10-4-13 ರಂದು ಪ್ರಕಟಿ ಸಲಾ ಗುತ್ತಿದೆ. ನಾಮ ಪತ್ರ ಸಲ್ಲಿಸಲು ಕೊನೇ ದಿನಾಂಕ 17-4-13, ನಾಮಪತ್ರ ಪರಿಶೀಲನೆ 18-4-13, ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಕೊನೇ ದಿನಾಂಕ 20-4-13. ಚುನಾವಣೆಯನ್ನು ದಿನಾಂಕ 5-5-13 ರಂದು ಪೂರ್ವಾಹ್ನ 8 ಗಂಟೆಯಿಂದ ಸಂಜೆ 5 ಗಂಟೆ ವರೆಗೆ ,ಮತ ಎಣಿಕೆ ದಿನಾಂಕ 8-5-13 ಮತ್ತು ಚುನಾವಣಾ ಪ್ರಕಿೃಯೆ ದಿನಾಂಕ 11-5-13 ರಂದು ಪೂರ್ಣಗೊಳ್ಳಲಿದೆ.ಭಾರತ ಚುನಾವಣಾ ಆಯೋಗದ ರಾಜ್ಯ ವಿಧಾನ ಸಭೆಯ ವೇಳಾಪಟ್ಟಿಯು ದಿನಾಂಕ 11-5-13 ರ ವರೆಗೆ ಜಾರಿಯಲ್ಲಿರುತ್ತದೆ.
ಜಿಲ್ಲೆಯಲ್ಲಿ 16-1-3 ಮತ್ತು 28-1-13 ರಂದು ಅಂತಿಮವಾಗಿ ಪ್ರಕಟಿಸಲ್ಪಟ್ಟ ಮತದಾರತರ ಪಟ್ಟಿಗಳಲ್ಲಿ ಪ್ರಕಟಿಸಲಾಗಿದೆ.  ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಲ್ಲಿ 96494  ಗಂಡಸರು 93131 ಹೆಂಗಸರು ಒಟ್ಟು 189625 ಮತದಾರರು /ಮೂಡಬಿದ್ರೆ 79855 ಗಂಡಸರು 87281 ಹೆಂಗಸರು ಒಟ್ಟು 167136 ಮತದಾರರು/ಮಂಗಳೂರು ಉತ್ತರದಲ್ಲಿ 96994 ಗಂಡಸರು 101372 ಹೆಂಗಸರು ಒಟ್ಟು 198366 ಮತದಾರರು/ಮಂಗಳೂರು ದಕ್ಷಿಣ 94816 ಗಂಡಸರು 103566 ಹೆಂಗಸರು ಒಟ್ಟು 198382 ಮತದಾರರು/ಮಂಗಳೂರು 81069 ಗಂಡಸರು ,83236 ಹೆಂಗಸರು ಒಟ್ಟು 164305 ಮತದಾರರು/ಬಂಟ್ವಾಳ 97221 ಗಂಡಸರು 95663  ಹೆಂಗಸರು ಒಟ್ಟು 192884 ಮತದಾರರು/ಪುತ್ತೂರು 89198 ಗಂಡಸರು 85409 ಹೆಂಗಸರು ಒಟ್ಟು 174607ಮತದಾರರು/
ಸುಳ್ಯ 89515 ಗಂಡಸರು 86839 ಹೆಂಗಸರು ಒಟ್ಟು 176354 ಮತದಾರರು ಹೀಗೆ ಜಿಲ್ಲೆಯಲ್ಲಿ ಒಟ್ಟು 725162 ಗಂಡಸರು,  736497 ಹೆಂಗಸರು ಒಟ್ಟು 1461659 ಮತದಾರರಿದ್ದಾರೆ.  ಒಟ್ಟು 1627 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಜಿಲ್ಲೆಯಲ್ಲಿ ಈಗಾಗಲೇ 99.76 ಶೇಕಡಾ ಮತದಾರರಿಗೆ ಗುರುತಿನ ಚೀಟಿ ವಿತರಿಸಲಾಗಿದೆ.ದಿನಾಂಕ 1-1-13 ರಂದು 18 ವರ್ಷ ಪ್ರಾಯ ತುಂಬಿದ ಸಾರ್ವಜನಿಕರು 13-4-13 ರೊಳಗೆ ನಮೂನೆ 6 ರಲ್ಲಿ ಸಲ್ಲಿಸಿದರೆ ದಿನಾಂಕ 20-4-13ರೊಳಗೆ ಇತ್ಯರ್ಥಪಡಿಸಿ ಅಂತಿಮ ಮತದಾರರ ಪಟ್ಟಿಗಳಲ್ಲಿ ನೊಂದಾಯಿಸಲಾಗುವುದು.ತಿದ್ದುಪಡಿಗಳನ್ನು ನಮೂನೆ 8 ರಲ್ಲಿ ಸಲ್ಲಿಸಿದರೆ ಇತ್ಯರ್ಥ ಪಡಿಸಿ ಸರಿಪಪಡಿಸಲಾಗುವುದು .ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಕಾರ್ಯ ನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್, ಮಂಗಳೂರು ಮಹಾನಗರಪಾಲಿಕೆಯ ಆಯುಕ್ತರಾದ ಡಾ ಹರೀಶ್ ಕುಮಾರ್ ಹಾಗೂ ಅಪರ ಜಿಲ್ಲಾಧಿಕಾರಿ ಕೆ ಎ ದಯಾನಂದ ಉಪಸ್ಥಿತರಿದ್ದರು.

ಸ್ವೀಪ್ ಬಗ್ಗೆ ಪಕ್ಷಗಳ ಮುಖಂಡರಿಗೆ ಮಾಹಿತಿ


ಮಂಗಳೂರು, ಮಾರ್ಚ್. 22:-ಮತದಾನದ ಪ್ರಕ್ರಿಯೆಯಲ್ಲಿ ಸಕ್ರಿಯ ಪಾಲ್ಗೊಳ್ಳುವಿಕೆಗೆ ಪೂರ್ವಭಾವಿಯಾಗಿ ಅರ್ಹ ಮತದಾರರು ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕೆಂಬ ಸಂದೇಶವನ್ನು ವಿವಿಧ ರೀತಿಗಳಲ್ಲಿ ಜನಮಾನಸಕ್ಕೆ ತಲುಪಿಸುವ ಇನ್ನೊಂದು ಹಂತವಾಗಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ವಿಶೇಷ ಸಭೆಯನ್ನು ಆಯೋಜಿಸಲಾಗಿತ್ತು.
ಮತ ದಾನ ದಂದು ಮತ ದಾರರ ಪಟ್ಟಿ ಯಲ್ಲಿ ಹೆಸರಿ ಲ್ಲವೆಂದು ಗೊಂದಲ ಮೂಡಿ ಸದೇ ಪೂರ್ವ ಭಾವಿ ಯಾಗಿ ಮತ ದಾರರ ಪಟ್ಟಿ ಪರಿಶೀ ಲನೆ ಹಾಗೂ ನೋಂದ ಣಿಗೆ ಇರುವ ಅವ ಕಾಶ ಗಳು, ಯಾರ ನೆರವನ್ನು ಪಡೆದುಕೊಳ್ಳಬಹುದು ಎಂಬ ಬಗ್ಗೆ ಸವಿವರ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ನೀಡಿದರು.
ಸ್ಥಳೀಯವಾಗಿ ಬಿಎಲ್ಓಗಳಿಂದ ಪಡೆಯಬಹುದಾದ ಮಾಹಿತಿ, ಗ್ರಾಮ ಪಂಚಾಯತ್ ನಿಂದ ಹಿಡಿದು ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಅರ್ಹರನ್ನು ಮತದಾರರ ಪಟ್ಟಿಗೆ ಸೇರಿಸಲು ಕೈಗೊಂಡಿರುವ ಕ್ರಮಗಳನ್ನು ವಿವಿಧ ಪಕ್ಷಗಳ ಮುಖಂಡರಿಗೆ ನೀಡಲಾಯಿತು.ಯಾವುದೇ ಸಂದೇಹಗಳಿದ್ದರೂ ಜಿಲ್ಲಾಡಳಿತವನ್ನು ಸಂಪರ್ಕಿಸಿ ಎಂದ ಜಿಲ್ಲಾಧಿಕಾರಿಗಳು, ನ್ಯಾಯ ಸಮ್ಮತ ಮತ್ತು ಮುಕ್ತ ಚುನಾವಣೆ ಜಿಲ್ಲಾಡಳಿತದ ಹೊಣೆಯಾಗಿದ್ದು, ಸ್ಪಷ್ಟೀಕರಣ ಕೇಳಿ ಮುಂದುವರಿಯಿರಿ ಎಂಬ ಸಲಹೆಯನ್ನು ಪ್ರಶ್ನೆಯೊಂದಕ್ಕೆ ನೀಡಿದರು.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಅಧಿಕಾರಿಗಳು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು, ಪ್ರಜ್ಞಾವಂತರ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ಶೇಕಡಾವಾರು ಮತದಾನ ಹೆಚ್ಚಾಗಬೇಕಿದೆ. ಇದಕ್ಕೆ ಎಲ್ಲರ ಸಹಕಾರದ ಅಗತ್ಯವಿದೆ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಪೋಲೀಸ್ ಕಮೀಷನರ್ ಮಾತನಾಡಿ, ಚುನಾವಣೆ ಆಯೋಗದ ನಿರ್ದೇಶನದಂತೆ ಪೋಲೀಸ್ ಇಲಾಖೆ,ಕಂದಾಯ ಇಲಾಖೆ ಸಮನ್ವಯದಿಂದ ಕರ್ತವ್ಯ ನಿರ್ವಹಿಸುತ್ತಿದ್ದು, ಇಲ್ಲಿ ನಮಗೆ ಯಾರೂ ಶತ್ರುಗಳಿಲ್ಲ ಎಂಬುದನ್ನು ಅರಿತು ನಡೆಯಬೇಕು.ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾದರೆ ಕಠಿಣ ಕ್ರಮ ಶತ: ಸಿದ್ದ;ಎಲ್ಲರೂ ಕಾನೂನನ್ನು ಗೌರವಿಸಬೇಕು ಮತ್ತು ಪಾಲಿಸಬೇಕು ಎಂದರು.
ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್ ಅವರು ಮಾತನಾಡಿ ತಾಲೂಕು ಮಟ್ಟದಲ್ಲಿ ಪೋಲೀಸ್ ಮತ್ತು ತಹಸೀಲ್ದಾರ್ ಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದರು.
ಮತದಾನದ ಪಟ್ಟಿಯಲ್ಲಿ ಹೆಸರು ಬಿಟ್ಟು ಹೋಗಿರುವ ಸಮಸ್ಯೆ ಬಗ್ಗೆ ಪಕ್ಷಗಳ ಮುಖಂಡರ ಸಂದೇಹಗಳಿಗೆ ಅಪರ ಜಿಲ್ಲಾಧಿಕಾರಿ  ಕೆ.ಎ.ದಯಾನಂದ ಮತ್ತು ಪಾಲಿಕೆ ಆಯುಕ್ತರಾದ ಡಾ. ಹರೀಶ್ ಕುಮಾರ್  ಉತ್ತರಿಸಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್.ವಿಜಯಪ್ರಕಾಶ್ ಉಪಸ್ಥಿತರಿದ್ದರು.
ವಿವಿಧ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು. ಆನ್ ಲೈನ್ ನಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಪರಿಶೀಲಿಸುವ ಬಗ್ಗೆ ಅಪರ ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದರು.

Wednesday, March 20, 2013

ಚುನಾವಣಾ ಕರ್ತವ್ಯದಲ್ಲಿ ನಿರ್ಲಕ್ಷ್ಯ ಸಲ್ಲ: ಜಿಲ್ಲಾಧಿಕಾರಿ

ಮಂಗಳೂರು, ಮಾರ್ಚ್. 20 :- ಇತ್ತೀಚೆಗೆ ನಡೆದ ನಗರ ಸ್ಥಳೀಯಸಂಸ್ಥೆ ಚುನಾವಣೆ ಯಶಸ್ವಿಯಾಗಿದ್ದು, ಮುಂಬರುವ ಚುನಾವಣೆಯಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ  ಎನ್ ಪ್ರಕಾಶ್ ಅವರು ಹೇಳಿದರು.
ಅವ ರಿಂದು ಜಿಲ್ಲಾಧಿ ಕಾರಿ ಕಚೇರಿ ಯಲ್ಲಿ ಜಿಲ್ಲಾ ಕಂದಾ ಯಾಧಿ ಕಾರಿ ಗಳ ಸಮ ನ್ವಯ ಸಮಿತಿ ಸಭೆಯ ಆರಂಭ ದಲ್ಲಿ ಚುನಾ ವಣಾ ಕರ್ತ ವ್ಯದ ಬಗ್ಗೆ, ಆದ್ಯತೆ ಗಳ ಬಗ್ಗೆ ಅಧಿ ಕಾರಿ ಗಳನ್ನು ದ್ದೇಶಿಸಿ ಮಾತ ನಾಡು ತ್ತಿದ್ದರು. ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳುವುದು ತನಗೆ ಖುಷಿ ಕೊಡುವ ವಿಷಯವಲ್ಲ; ಆದ್ದರಿಂದ ಎಲ್ಲರೂ ಪ್ರಾಮಾಣಿಕವಾಗಿ ಕಾರ್ಯೋನ್ಮುಖರಾಗಿ ಎಂದ ಜಿಲ್ಲಾಧಿಕಾರಿಗಳು, ನಾಳೆಯಿಂದಲೇ ಗ್ರಾಮಪಂಚಾಯಿತಿಯಿಂದ ಪಾಲಿಕೆ ವ್ಯಾಪ್ತಿಯ ವರೆಗೆ ಸಂಬಂಧಪಟ್ಟ ಅಧಿಕಾರಿಗಳು ಮತದಾರರ ಹೆಸರು ಸೇರ್ಪಡೆಯಲ್ಲಿ ಹೆಚ್ಚಿನ ಅಸ್ಥೆ ವಹಿಸಿ ದುಡಿಯಬೇಕು. ಈ ಸಂಬಂಧ ನೆರವು ಬಯಸಿ ಬರುವ ಯಾವುದೇ ಅರ್ಹ ಮತದಾರ ನಿರಾಸೆಯಾಗದಂತೆ ಅವನ ಕೆಲಸ ಮುಗಿದ ಖುಷಿಯಲ್ಲಿ ಹಿಂದಿರುಗಬೇಕು. ಅರ್ಹರಿಗೆ ಸ್ಪಂದಿಸದ ವರದಿಗಳು ಪ್ರಕಟವಾದರೆ ಕಠಿಣ ಕ್ರಮ ನಿಶ್ಚಿತ ಎಂದರು.
ಜಿಲ್ಲಾ ಪಂಚಾ ಯತ್ ಮುಖ್ಯ ಕಾರ್ಯ ನಿರ್ವ ಹಣಾ ಧಿಕಾ ರಿಗಳು ಈ ನಿಟ್ಟಿ ನಲ್ಲಿ ತಮ್ಮ ಸಂಪೂರ್ಣ ಸಹ ಕಾರ ನೀಡಿದ್ದು, ಇದರ ಸದ್ಬಳ ಕೆಯಾ ಗಬೇಕು. ಚುನಾ ವಣಾ ಪ್ರ ಕ್ರಿಯೆ ಮೇಲ್ವಿ ಚಾರಣೆ ತಹ ಸೀಲ್ದಾ ರರದ್ದೆ. ಅವರದ್ದೇ ಉಸ್ತುವಾರಿ. ಯಾವುದೇ ತಪ್ಪುಗಳಿಗೆ ಅವಕಾಶವಿಲ್ಲ ಎಂದು ಸ್ಪಷ್ಟಪಡಿಸಿದರು. ಸಹಾಯವಾಣಿಗಳು ಸುಸ್ಥಿತಿಯಲ್ಲಿರಬೇಕು. ಸಂವಹನದಲ್ಲಿ ಕೊರತೆಯಾಗಬಾರದು. ಬಿ ಎಲ್ ಒಗಳಲ್ಲೂ ತಹಸೀಲ್ದಾರ ಕಚೇರಿಯಲ್ಲೂ ಮತದಾರರ ಪಟ್ಟಿ ಲಭ್ಯವಿರಬೇಕು ಎಂದರು. ತಪ್ಪು ಮಾರ್ಗದರ್ಶನ ಅಥವಾ ಸುಳ್ಳು ಮಾಹಿತಿಗೆ ಶಿಕ್ಷೆ ಖಚಿತ ಎಂದರು.ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ ಅವರು ಉಪಸ್ಥಿತರಿದ್ದರು.
ಅಪರಾಹ್ನ ಜಿಲ್ಲಾ ಧಿಕಾರಿಗಳ ಕಚೇರಿಯಲ್ಲಿ ನಡೆದ ಪಿಡಿಒ ಹಾಗೂ ಇಒಗಳ ಸಭೆಯಲ್ಲೂ ಮಾದರಿ ನೀತಿ ಸಂಹಿತೆ ಮತ್ತು ಕರ್ತವ್ಯ ಹಾಗೂ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ, ಅರ್ಹ ಮತದಾರರಿಗೆ ಫೆಸಿಲಿಟಿ ನೀಡುವ ವ್ಯವಸ್ಥೆಗಳ ಬಗ್ಗೆ, ಮತದಾರರಿಗೆ ಮತದಾನದ ಬಗ್ಗೆ ಜಾಗೃತಿ ಮೂಡಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಜಿಲ್ಲಾಧಿಕಾರಿಗಳು ಸೂಚನೆಗಳನ್ನು ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಮಹಾನಗರಪಾಲಿಕೆ ಆಯುಕ್ತರು, ಅಪರ ಜಿಲ್ಲಾಧಿಕಾರಿಗಳು ಮಾಹಿತಿ ಹಾಗೂ ನಿರ್ದೇಶನಗಳನ್ನು ನೀಡಿದರು. 

ಜನಜಾಗೃತಿ ರಥ ಉದ್ಘಾಟನೆ

ಮಂಗಳೂರು,ಮಾರ್ಚ್.20: ಬಾಲಕಾರ್ಮಿಕ ನಿಷೇಧ ಮತ್ತು ನಿಯಂತ್ರಣ ಕಾಯ್ದೆಯನ್ವಯ 14 ವರ್ಷದೊಳಗಿನ ಮಕ್ಕಳನ್ನು ದುಡಿಸುವುದು ಅಪರಾಧ.  ಮಕ್ಕಳನ್ನು ಕೆಲಸಕ್ಕೆ ನೇಮಿಸಿಕೊಂಡಲ್ಲಿ ಮಾಲೀಕರಿಗೆ ರೂ.10,000 ರಿಂದ 20,000 ವರೆಗೆ ದಂಡ ಹಾಗೂ ಒಂದು ವರ್ಷದವರೆಗೆ ಜೈಲು ಶಿಕ್ಷೆ ವಿಧಿಸಲಾಗುವುದು. ಈ ಬಗ್ಗೆ ಜನ ಜಾಗೃತಿ ಮೂಡಿ ಸಲು ದಕ್ಷಿಣ ಕನ್ನಡ ಜಿಲ್ಲಾ ಡಳಿತ, ಮಂಗ ಳೂರು ಹಾಗೂ ಜಿಲ್ಲಾ ಚೈಲ್ಡ್ ಲೇಬರ್ ಪ್ರಾ ಜೆಕ್ಟ್  ಸೊಸೈಟಿ,ಕಾರ್ಮಿಕ ಇಲಾಖೆ ಮಂಗ ಳೂರು ಇವರ ಸಂಯು ಕ್ತಾಶ್ರ ಯದಲ್ಲಿ ಜಿಲ್ಲಾ ಧಿಕಾರಿ ಕಚೇರಿ ಆವ ರಣ ದಲ್ಲಿ ಜನ ಜಾಗೃತಿ ರಥಕ್ಕೆ ಜಿಲ್ಲಾಧಿಕಾರಿ ಎನ್.ಪ್ರಕಾಶ್ ಅವರು ಇಂದು ಚಾಲನೆ ನೀಡಿದರು.
          `` ಶಿಕ್ಷಣ ನಮ್ಮ ಮಕ್ಕಳ ಜನ್ಮ ಸಿದ್ಧ ಹಕ್ಕು, ಬಾಲ ಕಾರ್ಮಿಕ ಪದ್ಧತಿ ಅಳಿಯಲಿ,ಮಕ್ಕಳ ದುಡಿತ ಭವಿಷ್ಯಕ್ಕೆ ಚ್ಯುತಿ,ಕೆಲಸ ಸಾಕು ಶಿಕ್ಷಣ ಬೇಕು,ಶಿಕ್ಷಣವಿಲ್ಲದ ಬಾಳು ಅಂಧಕಾರದ ಗೋಳು'' ಎಂಬ ಧ್ಯೇಯ ವಾಕ್ಯಗಳೊಂದಿಗೆ ಜಿಲ್ಲೆಯಾದ್ಯಂತ 10 ದಿನಗಳ ಕಾಲ ಜನ ಜಾಗೃತಿ ರಥ ಸಂಚರಿಸಲಿದೆ.   ದಿನಾಂಕ 20-3-13 ರಂದು ಮಂಗಳೂರು ನಗರ,21-3-13 ರಂದು ಮೂಡಬಿದ್ರೆ ಗ್ರಾಮಾಂತರ,22,23-3-13 ರಂದು ಬಂಟ್ವಾಳ,24,25-3-13 ರಂದು ಪುತ್ತೂರು ,26,27-3-13 ರಂದು ಸುಳ್ಯ ಹಾಗೂ 28,29-3-13 ರಂದು ಬೆಳ್ತಂಗಡಿ ತಾಲೂಕಿನಲ್ಲಿ ಜನಜಾಗೃತಿ ರಥ ಸಂಚರಿಸಲಿದೆಯೆಂದು ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರಾದ ನಾಗೇಶ್ ಈ ಸಂದರ್ಭದಲ್ಲಿ ತಿಳಿಸಿದರು.
ಸಮಾರಂಭದಲ್ಲಿ ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್, ಮಂಗಳೂರು ಮಹಾನಗರಪಾಲಿಕೆ ಆಯುಕ್ತರಾದ ಡಾ. ಹರೀಶ್, ದಕ್ಷಿಣಕನ್ನಡ ಜಿಲ್ಲಾ ಅಪರ ಜಿಲ್ಲಾಧಿಕಾರಿ  ದಯಾನಂದ್.ಕೆ.ಎ., ಕಾರ್ಮಿಕ ಅಯುಕ್ತರಾದ ಡಾ.ಬಾಲಕೃಷ್ಣ, ಕಾರ್ಮಿಕ ಅಧಿಕಾರಿಗಳಾದ ಆನಂದಮೂರ್ತಿ,ಕುಮಾರ್ ಜ್ಞಾನೇಶ್,ಬಾಲ ಕಾರ್ಮಿಕ ಯೋಜನಾ ನಿರ್ದೇಶಕರಾದ ಶ್ರೀನಿವಾಸ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಮತದಾರರ ಪಟ್ಟಿಗೆ ಹೆಸರು ಸೇರಿಸಿ:ಜಿಲ್ಲಾಧಿಕಾರಿ

ಮಂಗಳೂರು,ಮಾರ್ಚ್. 20:-ಅರ್ಹ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಮತದಾರರ ಪಟ್ಟಿಯಲ್ಲಿ ಹೆಸರನ್ನು ಸೇರಿಸಿ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ  ಎನ್ ಪ್ರಕಾಶ್ ಅವರು ಹೇಳಿದ್ದಾರೆ.
ಎಲ್ಲ ಮತ ದಾರರ ಹಿತ ವನ್ನು ಗಮನ ದಲ್ಲಿ ರಿಸಿ ಎಲ್ಲ ಬಿ ಎಲ್ ಒ ಅವ ರಿಂದ ಹಿಡಿದು ಆನ್ ಲೈನ್ ಮೂಲಕ ಹೆಸರು ಸೇರಿ ಸಲು ಅವಕಾಶ ನೀಡ ಲಾಗಿದ್ದು ಅವ ಕಾಶದ ಸದು ಪಯೋಗ ಪಡೆದು ಕೊಳ್ಳಿ ಎಂದು ಅವರು ಮತ ದಾರ ರಲ್ಲಿ ವಿನಂತಿ ಸಿದ್ದಾರೆ.
ಆನ್ ಲೈನ್ ಹೆಸರು ಪರಿಶೀಲಿಸಲು ವೋಟರ್ ಫೆಸಿಲಿಟಿ ಸೆಂಟರ್, ಮಹಾನಗರಪಾಲಿಕೆ, ಪುರಸಭೆ, ಕಂದಾಯ ಕಚೇರಿಗಳು ಮತ್ತು ಗ್ರಾಮಪಂಚಾಯತ್ ಕಚೇರಿ ಲಭ್ಯವಿದ್ದು, ಮತದಾರರ ಪಟ್ಟಿಯಲಿ ಹೆಸರು ಬಿಟ್ಟು ಹೋಗಿದ್ದರೆ ಫಾರ್ಮ್ 6 ಪಡೆದು ನಿಗದಿತ ದಾಖಲೆಗಳೊಂದಿಗೆ ಮತ ದಾರರ ಪಟ್ಟಿ ಯಲ್ಲಿ ಹೆಸರು ಸೇರ್ಪಡೆ ಯಾಗಿ ರುವು ದನ್ನು ಆನ್ ಲೈನ್ ಅಥವಾ ತಹ ಸೀಲ್ದಾರ್ ಕಚೇರಿ ಯಲ್ಲಿ ಪರಿ ಶೀಲಿಸಿ ಖಚಿತ ಪಡಿಸಿ ಕೊಳ್ಳಿ ಎಂದ ಅವರು, ಮತ ದಾನದ ಬಗ್ಗೆ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಸ್ವೀಪ್ ಕಾರ್ಯಕ್ರಮ ಹಮ್ಮಿಕೊಂಡಿದೆ.  ಈ ಸಂಬಂದ ಜಿಲ್ಲಾಧಿಕಾರಿಗಳು ತಮ್ಮ ಕಚೇರಿಯಲ್ಲಿಂದು ಪತ್ರಿಕಾಗೋಷ್ಠಿ ನಡೆಸಿ ಹೆಸರು ಸೇರ್ಪಡೆಯಲ್ಲಿ ನಿರ್ಲಕ್ಷ್ಯ ವಹಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ದಯಾನಂದ ಕೆ ಎ, ಪಾಲಿಕೆ ಆಯುಕ್ತರಾದ ಡಾ ಹರೀಶ್ ಅವರು ಉಪಸ್ಥಿತರಿದ್ದರು.

Tuesday, March 19, 2013

ಮತದಾನದ ಬಗ್ಗೆ ಜಾಗೃತಿ ಮೂಡಿಸಲು 'ಸ್ವೀಪ್' ಸಮಿತಿ ಸಭೆ

ಮಂಗಳೂರು,ಮಾರ್ಚ್.19 :- ಶೇಕಡವಾರು ಮತದಾನದ ಪ್ರಮಾಣ ಹೆಚ್ಚಿಸಲು ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಅರ್ಹ ಮತದಾರರು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ನೋಂದಾಯಿಸಲು 'ಮತದಾರರ ಶಿಕ್ಷಣ, ಜಾಗೃತಿ ಮತ್ತು ಸಮರ್ಪಕ ಪಾಲ್ಗೊಳ್ಳುವಿಕೆ' ಕುರಿತು ಬಹುಮಾಧ್ಯಮ ಪ್ರಚಾರಾಂದೋಲನ ಆರಂಭಿಸುವ ಕುರಿತು ಜಿಲ್ಲಾಧಿಕಾರಿ  ಎನ್ ಪ್ರಕಾಶ್ ಅವರ ಅಧ್ಯಕ್ಷತೆಯಲ್ಲಿ ಇಂದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಯಿತು.
'ನಿಮ್ಮ ಮತ ನಿಮ್ಮ ಹಕ್ಕು'
'ನಿಮ್ಮ ಮತ ನಿಮ್ಮ ಹಕ್ಕು' ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಸರ್ವರ ಪಾಲ್ಗೊಳ್ಳುವಿಕೆ ಎಂಬ ಧ್ಯೇಯದೊಂದಿಗೆ 1.1.13 ರಂದು 18 ವರ್ಷ ತುಂಬಿದವರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸುವ ಕುರಿತು ಮಾಹಿತಿ ನೀಡುವ ಯೋಜನೆ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು. ಪ್ರಥಮ ಹಂತದ ಜಾಗೃತಿ ಕಾರ್ಯಕ್ರಮದಲ್ಲಿ ಮತದಾರರ ಹೆಸರನ್ನು ನೋಂದಾಯಿಸುವ ಬಗ್ಗೆ ಎಲ್ಲರಿಗೂ ಮಾಹಿತಿ ನೀಡುವುದು. ಎರಡನೇ ಹಂತದಲ್ಲಿ ಮತದಾನದಿಂದಾಗುವ ಪ್ರಯೋಜನಗಳ ಬಗ್ಗೆ ಮತದಾರರಿಗೆ ಮಾಹಿತಿ ನೀಡುವುದು. ಮೂರನೇ ಹಂತದಲ್ಲಿ ನಿರ್ಭೀತ ಮತದಾನಕ್ಕೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮಗಳ ಬಗ್ಗೆ ಮಾಹಿತಿ ಜನರಿಗೆ ತಲುಪಿಸುವ ಮೂರು ಹಂತದ ಪ್ರಚಾರ ಕಾರ್ಯಕ್ರಮ ಹಮ್ಮಿಕೊಳ್ಳಲು ಸಭೆ ನಿರ್ಧರಿಸಿತು. ಇದಕ್ಕಾಗಿ ಸಂವಹನದ ವಿವಿಧ ಮಾದರಿಗಳ ಮುಖಾಂತರ ಟಾರ್ಗೆಟ್ ಗ್ರೂಪ್ ತಲುಪುವ ಕುರಿತು ಸಭೆ ಚರ್ಚಿಸಿತು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮತ್ತು ಮಹಾನಗರಪಾಲಿಕೆಯಲ್ಲಿ ಫಾರ್ಮ್ ನಂಬರ್ 6 ಪಡೆಯಲು ಪ್ರತ್ಯೇಕ ಕೌಂಟರ್ ಗಳನ್ನು ಆರಂಭಿಸುವುದಾಗಿಯೂ ಹಾಗೂ ಮಾಹಿತಿ ಫಲಕಗಳು ಮತ್ತು ಜಾಥಾ ಮೂಲಕ ಮಾಹಿತಿಯನ್ನು ನೀಡಲು ಕ್ರಮಕೈಗೊಳ್ಳುವುದಾಗಿ ಪಾಲಿಕೆ ಆಯುಕ್ತರಾದ ಡಾ ಹರೀಶ್ ಹೇಳಿದರು. ಸ್ವೀಪ್ ಯೋಜನೆಯ ಸದುದ್ದೇಶಗಳನ್ನು ಸಭೆಗೆ ವಿವರಿಸಿದ ಅವರು, ಮತದಾರರ ಜಾಗೃತಿ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಪ್ರತಿಯೊಬ್ಬರೂ ಪರಿಣಾಮಕಾರಿಯಾಗಿ ತೊಡಗಿಕೊಳ್ಳಬೇಕು; ಇದು ಭಾರತ ಚುನಾವಣಾ ಆಯೋಗದ ನಿರ್ದೇಶನ ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಶ್ರೀ ಕೆ ಎ ದಯಾನಂದ ಅವರು ಮಾತನಾಡಿ, ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವ ಬೂತು ಮಟ್ಟದ ಅಧಿಕಾರಿ, ಗ್ರಾಮಲೆಕ್ಕಿಗರು, ಕಂದಾಯ ನಿರೀಕ್ಷಕರು, ತಹಸೀಲ್ದಾರರು, ಕಂದಾಯಾಧಿಕಾರಿ, ಮಹಾನಗರಪಾಲಿಕೆ, ಸಹಾಯಕ ಕಮಿಷನರ್ ಅವರಿಗೆ ಅಗತ್ಯ ಹಾಗೂ ಪೂರಕ ಪ್ರೇರಣಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು. ನಿರ್ಲಕ್ಷ್ಯ ವಹಿಸಿದರೆ ಅಮಾನತು ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದರು.
ಸ್ವೀಪ್ ಸಮಿತಿಯ ಅಧ್ಯಕ್ಷರು ಸಿಇಒ ಜಿಲ್ಲಾಪಂಚಾಯತ್, ಆಯುಕ್ತರು ಮಹಾನಗರಪಾಲಿಕೆ, ಜಿಲ್ಲಾ ವಾರ್ತಾಧಿಕಾರಿ, ಉಪನಿರ್ದೇಶಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ, ಮಂಗಳೂರು. ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ, ಜಿಲ್ಲಾ ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಇಲಾಖಾಧಿಕಾರಿ, ಉಪನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ,ಉಪನಿರ್ದೇಶಕರು ಪದವಿಪೂರ್ವ ಶಿಕ್ಷಣ ಮಂಡಳಿ, ಜಂಟಿ ನಿರ್ದೇಶಕರು ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾಯುವಜನಸೇವಾ ಮತ್ತು ಕ್ರೀಡಾಧಿಕಾರಿ ಮಂಗಳಾ ಸ್ಟೇಡಿಯಂ, ಜಿಲ್ಲಾ ಸಮನ್ವಯಾಧಿಕಾರಿ ರಾಷ್ಟ್ರೀಯ ಸೇವಾ ಯೋಜನೆ (ಎನ್ ಎಸ್ ಎಸ್). ಮುಖ್ಯಾಧಿಕಾರಿಗಳು ಪುರಸಭೆ ಮೂಡಬಿದ್ರೆ, ಉಳ್ಳಾಲ, ಬಂಟ್ವಾಳ ಮತ್ತು ಪುತ್ತೂರು, ಮುಖ್ಯಾಧಿಕಾರಿ ಪಟ್ಟಣ ಪಂಚಾಯಿತಿ ಬೆಳ್ತಂಗಡಿ ಮತ್ತು ಸುಳ್ಯ ಇವರುಗಳಿರುತ್ತಾರೆ.
ಇಂದು ನಡೆದ ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ಚುನಾವಣೆ ಜರೂರು ಕರ್ತವ್ಯದಡಿ ನೋಟೀಸು ನೀಡಲೂ ಜಿಲ್ಲಾಧಿಕಾರಿಗಳು ಸೂಚಿಸಿದರು.

Monday, March 18, 2013

ಮುಖ್ಯಮಂತ್ರಿಯಿಂದ ವಿವಿಧ ಕಾಮಗಾರಿಗಳಿಗೆ ಚಾಲನೆ, ಶಂಕುಸ್ಥಾಪನೆ

ಮಂಗಳೂರು, ಮಾರ್ಚ್.18: ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಇಂದು ನಗರದ ವಿವಿಧ ಕಡೆಗಳಲ್ಲಿ 15ಕ್ಕೂ ಅಧಿಕ ವಿವಿಧ ಕಾಮಗಾರಿಗಳಿಗೆ ಸಾಮೂಹಿಕ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದರು.
               ಮಂಗ ಳೂರು ವಿಮಾನ ನಿಲ್ದಾಣ ದಲ್ಲಿ ಬಂದಿ ಳಿದ ಮುಖ್ಯ ಮಂತ್ರಿ ಜಗ ದೀಶ್ ಶೆಟ್ಟರ್ ಅವರು ಆರಂ ಭದಲ್ಲಿ ಮಂಗ ಳೂರು ಮಹಾ ನಗರ ಪಾಲಿ ಕೆಯ ವಿಮಾನ ನಿಲ್ದಾಣ ರಸ್ಥೆ ಅಭಿ ವೃದ್ಧಿಯ ಪ್ರಥಮ ಹಂತದ ಕಾಮ ಗಾರಿಗೆ ಚಾಲನೆ ನೀಡಿ ದರು.
ನಗ ರದ ಕೆಪಿಟಿ ಯಿಂದ ರಾಮಾ ಶ್ರಮ ಶಾಲೆ ಯವ ರೆಗಿನ 1.7 ಕಿ.ಮೀ. ಉದ್ದದ ಡಾ. ಸರ್ ಎಂ. ವಿಶ್ವೇ ಶ್ವರಯ್ಯ ಚತು ಷ್ಪಥ ರಸ್ತೆ ಕಾಮ ಗಾರಿಯ ನಾಮ ಫಲಕವನ್ನು ಅನಾವರಣಗೊಳಿಸುವ ಮೂಲಕ ಉದ್ಘಾಟಿಸಿದರು. ಫುಟ್ಪಾತ್, ಚರಂಡಿ, ಬಸ್ಸು ನಿಲ್ದಾಣವನ್ನು ಒಳಗೊಂಡ 2.43 ಕೋಟಿ ರೂ. ವೆಚ್ಚದ ಕೆಪಿಟಿಯಿಂದ ರಾಮಾಶ್ರಮ ಶಾಲೆವರೆಗಿನ ಕಾಂಕ್ರಿಟೀಕರಣ ರಸ್ತೆ ಕಾಮಗಾರಿ ಇದಾಗಿದೆ.
  ಅಲ್ಲಿಂದ ಲೇಡಿ ಗೋಶನ್ ಆಸ್ಪತ್ರೆಯ ಶಂಕು ಸ್ಥಾಪನೆ ಕಾರ್ಯ ಕ್ರಮ ದಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವರಾದ ಡಾ. ಎಂ. ವೀರಪ್ಪ ಮೊಯಿಲಿ ಅವರೋಂದಿಗೆ ಭಾಗ ವಹಿ ಸಿದ  ಮುಖ್ಯ ಮಂತ್ರಿ ಬಳಿಕ ನಗ ರದ ಉರ್ವಾ ಮಾರ್ಕೆಟ್ ಬಳಿ ಮುಂಬೈನ ನಿಸರ್ಗ ಟೆಕ್ನಾ ಲಜಿಯ ತಾಂತ್ರಿಕ ಸಹ ಯೋಗದೊಂದಿಗೆ 2 ಟನ್ ಸಾಮಥ್ರ್ಯದ ಜೈವಿಕ ಕಿರು ವಿದ್ಯುತ್ ಉತ್ಪಾದನಾ ಸ್ಥಾವರವನ್ನು ಉದ್ಘಾಟಿಸಿದರು.
       15 ಕೆವಿಎ ಸಾಮ ಥ್ರ್ಯದ ಜನ ರೇಟರ್ ಅಳವ ಡಿಸ ಲಾಗಿ ರುವ ಈ ಸ್ಥಾವ ರದಲ್ಲಿ 1 ಗಂಟೆಗೆ 12 ಕಿಲೋ ವ್ಯಾಟ್ ವಿದ್ಯುತ್ ಉತ್ಪಾ ದನೆ ಮಾಡ ಲಾಗು ತ್ತಿದೆ. ಪ್ರಸ್ತುತ ಸ್ಥಾವ ರದಲ್ಲಿ ದಿನ ವೊಂದಕ್ಕೆ 240 ಯುನಿಟ್ ವಿದ್ಯುತ್ ಉತ್ಪಾ ದಿಸಬ ಹುದು. ಈ ವಿದ್ಯುತ ನಿಂದ ಸುಮಾರು 40 ವ್ಯಾಟ್ ಸಾಮರ್ಥ್ಯದ 200 ದಾರಿ ದೀಪಗಳನ್ನು ಉರಿಸಬಹುದಾಗಿದೆ. ಪ್ರಾಯೋಗಿಕ ನೆಲೆಯಲ್ಲಿ ಸದ್ರಿ ಜನರೇಟರ್ನಿಂದ ಉತ್ಪಾದಿಸುತ್ತಿರುವ ವಿದ್ಯುತ್ತನ್ನು ಜೈವಿಕ ಅನಿಲ ಸ್ಥಾವರದ ಉಪಯೋಗಕ್ಕೆ ಹಾಗೂ ಉರ್ವ ಮಾರುಕಟ್ಟೆ ಆವರಣಕ್ಕೆ ಪೂರೈಸಲಾಗುತ್ತಿದೆ.
         ಇದಾದ ಬಳಿಕ ಮುಖ್ಯ ಮಂತ್ರಿ ಜಗ ದೀಶ್ ಶೆಟ್ಟರ್ ಅವರು ಮಂಗ ಳಾ ಕ್ರೀಡಾಂ ಗಣ ದಲ್ಲಿ ಸುಮಾರು 3.52 ಕೋಟಿ ರೂ. ವೆಚ್ಚದಲ್ಲಿ ನಿರ್ಮಿ ಸಲಾ ಗಿರುವ ಸಿಂಥೆ ಟಿಕ್ ಟ್ರ್ಯಾಕ್ ನಲ್ಲಿ ಇತರ ಜನ ಪ್ರತಿ ನಿಧಿ ಗಳ ಜೊತೆ ಸ್ವತಹ ಓಡುವ ಮೂಲಕ ನೂತನ ಟ್ರಾಕ್ ಗೆ ಚಾಲನೆ ನೀಡಿದರು. ಇದೇ ವೇಳೆ  ಮಂಗಳಾ ಕ್ರೀಡಾಂ ಗಣ ದಲ್ಲಿ ಮುಖ್ಯ ಮಂತ್ರಿ ಜಗ ದೀಶ್ ಶೆಟ್ಟರ್ ಅವರು 99. 90 ಲಕ್ಷ ರೂ. ವೆಚ್ಚದ ಕ್ರೀಡಾ ವಸತಿ ನಿಲಯ, 2.5 ಕೋಟಿ ರೂ. ವೆಚ್ಚದ ಪಾಂಡೇ ಶ್ವರ ಅಗ್ನಿ ಶಾಮಕ ಠಾಣೆಯ ನೂತನ ಕಟ್ಟಡ, 61.10 ಲಕ್ಷ ರೂ. ವೆಚ್ಚದ ಅರಣ್ಯ ಇಲಾಖೆಯ ಮಂಗ ಳೂರು ವೃತ್ತ ಕಚೇರಿ, 3.92 ಕೋಟಿ ರೂ. ವೆಚ್ಚದ ಮೆಟ್ರಿಕ್ ನಂತ ರದ ಬಾಲಕಿ ಯರ ವಸತಿ ನಿಲಯ, 3.85 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುವ ಅಂತಾರಾಷ್ಟ್ರೀಯ ಈಜು ಕೊಳ, 2.5 ಕೋಟಿ ರೂ. ವೆಚ್ಚದ ಬಲ್ಮಠದ ಪ್ರಥಮ ದರ್ಜೆ ಮಹಿಳಾ ಕಾಲೇಜು ಮೊದಲಾದ ವಿವಿಧ ಕಾಮಗಾರಿಗಳಿಗೆ ಸಾಮೂಹಿಕವಾಗಿ ಚಾಲನೆ ನೀಡಿದರು.
        ಬಳಿಕ ಅವರು ಪಿಲಿ ಕುಳ ನಿಸರ್ಗ ಧಾಮ ದಲ್ಲಿ 24.50 ಕೋಟಿ ವೆಚ್ಚ ದಲ್ಲಿ ನಿರ್ಮಾ ಣವಾ ಗುತ್ತಿ ರುವ ಸ್ವಾಮಿ ವಿವೇಕಾ ನಂದ ತಾರಾ ಲಯಕ್ಕೆ ಶಂಕು ಸ್ಥಾಪನೆ ನೆರ ವೇರಿ ಸಿದರು. ಎರಡು ವರ್ಷದ ಅವಧಿಯಲ್ಲಿ ತಾರಾ ಲಯ ಪೂರ್ಣ ಗೊಂಡು ಸಾರ್ವ ಜನಿಕ ರಿಗೆ ಮುಕ್ತ ವಾಗುವ ನಿರೀಕ್ಷೆ ಇದೆ. ಇದೇ ವೇಳೆ 3.73 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಗುತ್ತು ಮನೆಯ ಉದ್ಘಾಟನೆಯನ್ನು ಕೂಡಾ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ನೆರವೇರಿಸಿದರು.ಸಂಸದ ನಳಿನ್ ಕುಮಾರ್ ಕಟೀಲ್,ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ, ವಿಧಾನ ಸಭಾ ಉಪ ಸಭಾಪತಿ ಎನ್. ಯೋಗಿಶ್ ಭಟ್, ಶಾಸಕರಾದ ಕೃಷ್ಣ ಜೆ. ಪಾಲೆಮಾರ್, ಬಿ. ರಮಾನಾಥ ರೈ, ಮೋನಪ್ಪ ಭಂಡಾರಿ, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಅಭಯ ಚಂದ್ರ ಜೈನ್, ಸಹಿತ ಅನೇಕ ಗಣ್ಯರು ವಿವಿಧ ಕಾರ್ಯಕ್ರಮಗಳಲ್ಲಿ ಉಪಸ್ಥಿತರಿದ್ದರು.                                                               

Sunday, March 17, 2013

ಕೆ ಎಚ್ ಬಿ ಬಹುಮಹಡಿ ವಸತಿ ಸಮುಚ್ಚಯಕ್ಕೆ ಸಚಿವ ಸೋಮಣ್ಣರಿಂದ ಶಿಲನ್ಯಾಸ

ಮಂಗಳೂರು, ಮಾರ್ಚ್.17:- ಮಧ್ಯಮ ವರ್ಗದವರಿಗೆ ಸೂರನ್ನು ಒದಗಿಸುವ ದೃಷ್ಟಿಯಿಂದ ಕರ್ನಾಟಕ ಗೃಹಮಂಡಳಿ ಕುಡುಪುವಿನಲ್ಲಿ 70ಮನೆ ಹಾಗೂ ಕೋಟೆಕಾರ್ ಬಡಾವಣೆಯಲ್ಲಿ 216 ಮನೆಗಳನ್ನೊಳಗೊಂಡ ಬಹು ಮಹಡಿ ವಸತಿ ಸಮುಚ್ಚಯಗಳಿಗೆ ಗುದ್ದಲಿ ಪೂಜೆಯನ್ನು ವಸತಿ ಸಚಿವ ಹಾಗೂ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷರಾದ ವಿ. ಸೋಮಣ್ಣ ನೆರವೇರಿಸಿದರು.
          ಇಂದು ಮಂಗ ಳೂರು ನಗರದ ಕುಡುಪು ಬಡಾ ವಣೆ ಯಲ್ಲಿ ಶಂಕು ಸ್ಥಾಪನಾ ಸಮಾ ರಂಭ ನೆರ ವೇರಿಸಿ ಮಾತ ನಾಡಿದ ಅವರು, ಕಳೆದ 56 ವರ್ಷಗಳಲ್ಲಿ ಆಗದ ಸಾಧನೆ ತಮ್ಮ ಸರ್ಕಾರದ ಅವಧಿಯಲ್ಲಿ ಆಗಿದ್ದು, 40,000ಕ್ಕೂ ಅಧಿಕ ಸೈಟ್ ಗಳನ್ನು ಹಾಗೂ 12,000ಕ್ಕೂ ಹೆಚ್ಚಿನ ಮನೆಗಳನ್ನು ನಿರ್ಮಿಸಲಾಗಿದೆ. ಇಲ್ಲಿ ಮನೆಗಳು ಮಾತ್ರವಲ್ಲದೆ ಮೂಲಭೂತ ಸೌಕರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಗಿದೆ. ರಾಜ್ಯದ ಎಲ್ಲ  30 ಜಿಲ್ಲಾ ಕೇಂದ್ರಗಳಲ್ಲೂ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗಿದೆ. ಮನೆ ನಿರ್ಮಾಣದಲ್ಲಿ ದೇಶಕ್ಕೆ ಉತ್ತಮ ಮಾದರಿಯನ್ನು ಕರ್ನಾಟಕ ನೀಡಿದೆ.
                ಬಸವ ವಸತಿ ಯೋಜನೆಯಿಂದ 6ಲಕ್ಷಕ್ಕೂ ಮೇಲ್ಪಟ್ಟ ಜನರಿಗೆ ವಸತಿ ರಾಜ್ಯದಲ್ಲಿ ಒದಗಿಸುವ ಪ್ರಕ್ರಿಯೆಯ ಪ್ರಗತಿಯಲ್ಲಿದೆ. ಕೇಂದ್ರದ ನೆರವು ಹಾಗೂ ರಾಜ್ಯದ ಯೋಜನೆಗಳಿಂದ ವಸತಿ ರಹಿತರಿಗೆ ವಸತಿ ಒದಗಿಸುವ ಹಿನ್ನಲೆಯಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯಿಂದ 100 ಕೋಟಿ ರೂ.ಗಳನ್ನು ವ್ಯಯಿಸಲಾಗಿದೆ ಎಂದರು.
          ಕಾರ್ಯಕ್ರಮವನ್ನು ಉನ್ನತ ಶಿಕ್ಷಣ ಸಚಿವ ಸಿ ಟಿ ರವಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ವಿಧಾನ ಸಭಾ ಉಪಸಭಾಧ್ಯಕ್ಷರಾದ  ಎನ್ ಯೋಗೀಶ್ ಭಟ್ ಉಪಸ್ಥಿತರಿದ್ದರು. ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ  ಜೆ ಕೃಷ್ಣ ಪಾಲೆಮಾರ್ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಕೆ. ಮೋನಪ್ಪ ಭಂಡಾರಿ, ಸ್ಥಳಿಯ ಪಾಲಿಕೆ ಸದಸ್ಯ ಭಾಸ್ಕರ ಮೊಯಿಲಿ ಉಪಸ್ಥಿತರಿದ್ದರು.
        ಉಳ್ಳಾಲ ಕೋಟೆ ಕಾರ್ ಬಡಾ ವಣೆ ಯಲ್ಲಿ ಶಂಕು ಸ್ಥಾಪನೆ ನೆರ ವೇರಿಸಿ ಮಾತ ನಾಡಿದ ಸಚಿವರು ಕೆ ಎಚ್ ಬಿ ವ್ಯವಹಾರ ಪಾರದರ್ಶಕವಾಗಿದ್ದು, ಇದು ವ್ಯವಹಾರವಲ್ಲ; ಸೇವೆ ಎಂದು ಸ್ಪಷ್ಟ ಪಡಿಸಿದರು. ನಗರದ ಎಂ ಜಿ ರೋಡ್ ಮತ್ತು ಕೊಟ್ಟಾರದಲ್ಲಿ ವಸತಿ ಸಮುಚ್ಛಯಕ್ಕೆ 1,500 ಕೋಟಿ ರೂ.ಗಳ ಕ್ರಿಯಾ ಯೋಜನೆ ಸಿದ್ಧಪಡಿಸಲಾಗಿದೆ. ಈಗಿರುವ ಸರ್ಕಾರಿ ವಸತಿಗೃಹಗಳನ್ನು ಸರಿ ಪಡಿಸುವ ಉದ್ದೇಶವಿದೆ ಎಂದರು. ಸಭೆಯ ಅಧ್ಯಕ್ಷತೆಯನ್ನು ಮಂಗಳೂರು ಕ್ಷೇತ್ರ ವಿಧಾನಸಭಾ ಸದಸ್ಯರಾದ  ಯು ಟಿ ಖಾದರ್ ಅವರು ವಹಿಸಿದ್ದರು. ಗ್ರಾಮಪಂಚಾಯತ್ ಅಧ್ಯಕ್ಷ ಶೇಖರ್ ಕಣೀರುತೋಟ, ಕೆ ಎಚ್ ಬಿಯ ಮುಖ್ಯ ಅಭಿಯಂತರರಾದ ಬಿ ಗುರುಪ್ರಸಾದ್ ಅವರು ಉಪಸ್ಥಿತರಿದ್ದರು.

Saturday, March 16, 2013

ಬಸವ ವಸತಿ ಯೋಜನೆ ಸಮಗ್ರ ಅನುಷ್ಠಾನಕ್ಕೆ ಆಗ್ರಹ

ಮಂಗಳೂರು,ಮಾರ್ಚ್.16:- ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಸವ ವಸತಿ ಯೋಜನೆಯ ಅನುಷ್ಠಾನದಲ್ಲಿ ಅಧಿಕಾರಿಗಳು ಪರಿಣಾಮಕಾರಿಯಾಗಿ ಕರ್ತವ್ಯ ನಿರ್ವಹಿಸಿಲ್ಲ. ಸಮನ್ವಯತೆ ಕೊರತೆಯಿಂದ ಫಲಾನುಭವಿಗಳು ಪರದಾಡುವಂತಾಗಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯರು ಆರೋಪಿಸಿದರು.
            ಇಂದು ಜಿ.ಪಂ.ನ ನೇತ್ರಾ ವತಿ ಸಭಾಂ ಗಣ ದಲ್ಲಿ ಅಧ್ಯಕ್ಷ ಕೊರ ಗಪ್ಪ ನಾಯ್ಕ ಅಧ್ಯಕ್ಷ ತೆಯಲ್ಲಿ ನಡೆದ ಜಿಲ್ಲಾ ಪಂಚಾ ಯತ್ ನ 11ನೆ ಸಾಮಾನ್ಯ ಸಭೆ ಯಲ್ಲಿ ಬಸವ ವಸತಿ ಯೋಜನೆ ಅನು ಷ್ಠಾನ ತೀವ್ರ ವಾದ ವಿವಾದಕ್ಕೆ ಕಾರಣವಾಯಿತು. ಕೆಲವೊಂದು ಪ್ರದೇಶಗಳಲ್ಲಿ ಫಲಾನುಭವಿಗಳು ಪ್ರಥಮ ಹಂತದ ಕಾಮಗಾರಿ ಮುಗಿಸಿ ಮನೆ ಕಟ್ಟಲು ಆರಂಭಿಸಿದ್ದರೂ ಹಣ ಬಿಡುಗಡೆಯಾಗಿಲ್ಲ. ಮತ್ತೆ ಕೆಲವು ಮನೆಗಳನ್ನು ರದ್ದುಪಡಿಸಲಾಗಿದೆ ಎಂಬ ಉತ್ತರ ಅಧಿಕಾರಿಗಳಿಂದ ಬರುತ್ತಿದ್ದರೆ, ಮತ್ತೆ ಕೆಲವು ಮನೆಗಳನ್ನು ಲಾಕ್ ಮಾಡಲಾಗಿದೆ ಎಂಬ ಉತ್ತರ ಸಿಗುತ್ತಿದೆ. ಬಡವರ ಅನುಕೂಲಕ್ಕೆ ಸರಕಾರ ರೂಪಿಸಿದ ಉತ್ತಮ ಯೋಜನೆ ನಿರೀಕ್ಷಿತ ಗುರಿ ಸಾಧಿಸಿಲ್ಲ ಎಂದು ಹಲವರು ಅಸಮಾಧಾನ ವ್ಯಕ್ತಪಡಿಸಿದರು.
ಮಾತ್ರವಲ್ಲದೆ, ಮನೆಗಳಿಗೆ ಪಂಚಾಂಗ ಹಾಕುವ ಅವಧಿಯನ್ನು ಮೂರು ತಿಂಗಳಿನಿಂದ ಆರು ತಿಂಗಳಿಗೆ ಏರಿಕೆ ಮಾಡಬೇಕೆಂಬ ಪ್ರಸ್ತಾಪದ ಕುರಿತು ಸಭೆ ನಿರ್ಣಯ ಕೈಗೊಂಡಿತು.
ಈ ವೇಳೆ, ಮುಖ್ಯ ಯೋಜನಾಧಿಕಾರಿ ನಝೀರ್ ಮಾತನಾಡಿ, ಬಸವ ವಸತಿ ಯೋಜನೆಯಡಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ತಲಾ 4000 ಮನೆಗಳಂತೆ ಹಾಗೂ ಬೆಳ್ತಂಗಡಿಗೆ ಹೆಚ್ಚುವರಿ 2000 ಮನೆಗಳು ಸೇರಿ ದ.ಕ. ಜಿಲ್ಲೆಗೆ ಒಟ್ಟು 30,000 ಮನೆಗಳು ಮಂಜೂರು ಆಗಿವೆ. 32,000 ರೂ. ಒಳಗಿನ ವಾಷರ್ಿಕ ಆದಾಯ ಹೊಂದಿರುವವರು ಅಥವಾ ಬಿಪಿಎಲ್ ಕಾಡರ್್ದಾರರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ಪಿಡಿಒಗಳು ಹಾಗೂ ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿಗಳ ಮುತುವರ್ಜಿಯಲ್ಲಿ ಈ ಯೋಜನೆ ಸಮರ್ಪಕವಾಗಿ ಅನುಷ್ಠಾನ ಆಗಬೇಕಿದೆ ಎಂದರು.
        ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ಎನ್. ವಿಜಯಪ್ರಕಾಶ್ ಪ್ರತಿಕ್ರಿಯಿಸಿ, ಮನೆಯ ಪಂಚಾಂಗ ನಿರ್ಮಾಣ ಅವಧಿಯನ್ನು ಈಗಿರುವ 3 ತಿಂಗಳಿನಿಂದ ನಾಲ್ಕು ತಿಂಗಳಿಗೆ ಏರಿಕೆ ಮಾಡಲು ನಿರ್ಣಯ ಮಾಡಬಹುದಾಗಿದೆ. ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಸಂಬಂಧಿಸಿ ಐದು ತಾಲೂಕುಗಳ ನೋಡಲ್ ಅಧಿಕಾರಿಗಳು ಮುಂದಿನ ವಾರದಿಂದ ಪ್ರತಿ ತಾಲೂಕಿಗೆ ಭೇಟಿ ನೀಡಿ ತಾಲೂಕಿನ ಇಒ ಹಾಗೂ ಪಿಡಿಒಗಳ  ಸಭೆ ನಡೆಸಿ, ಪರಿಶೀಲನೆ ನಡೆಸಬೇಕು. ಮಾತ್ರವಲ್ಲದೆ, ಅಧ್ಯಕ್ಷರ ಸಮಕ್ಷಮದಲ್ಲಿ ತಾನು ಕೂಡಾ ಯೋಜನೆಯ ಪ್ರಗತಿ ಬಗ್ಗೆ ಮೇಲುಸ್ತುವಾರಿ ವಹಿಸಿಕೊಂಡು ಸಮೀಕ್ಷೆ ನಡೆಸುವುದಾಗಿ ತಿಳಿಸಿದರು.
ಇದೇ ವೇಳೆ ಯೋಜನೆಯ ಪ್ರಥಮ ಹಂತದ ಕಾಮಗಾರಿಯ ಅವಧಿಯನ್ನು 3 ತಿಂಗಳಿನಿಂದ ನಾಲ್ಕು ತಿಂಗಳಿಗೆ ವಿಸ್ತರಿಸಲು ನಿರ್ಣಯಿಸಲಾಯಿತು.ಕೊರಗರ ಮನೆಗಳಿಗೆ ಇದುವರೆಗೆ ರಚನಾತ್ಮಕ ಕಾರ್ಯವಾಗಿಲ್ಲ ಎಂಬ ಆಕ್ಷೇಪಕ್ಕೆ ಐಟಿಡಿಪಿ ಅಧಿಕಾರಿ ಉತ್ತರಿಸಿದರು. ನಬಾರ್ಡ್ ಯೋಜನೆಯಡಿ ಅಂಗನವಾಡಿ ಪಟ್ಟಿ ಬದಲೀ ಪ್ರಸ್ತಾವನೆ ಕಳುಹಿಸಬೇಕು. ಹಾಗೂ ಪಟ್ಟಿಯನ್ನು ಎಲ್ಲ ಜಿಲ್ಲಾ ಪಂಚಾಯತ್ ಸದಸ್ಯರಿಗೆ ನಿಡಬೇಕೆಂದು ಸದಸ್ಯರು ಆಗ್ರಹಿಸಿದರು. ಉಪಾಧ್ಯಕ್ಷ ರಿತೇಶ್ ಶೆಟ್ಟಿ, ಸ್ಥಾಯಿ ಸಮಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಉಪಸ್ಥಿತರಿದ್ದರು.

ಸ್ವಚ್ಚ ಮಂಗಳೂರಿಗೆ: ಕಸಗುಡಿಸುವ ಯಂತ್ರ

ಮಂಗಳೂರು, ಮಾರ್ಚ್.16:-ಮಂಗಳೂರು ಮಹಾ ನಗರಪಾಲಿಕೆ ವ್ಯಾಪ್ತಿಯನ್ನು ಶುಚಿಯಾಗಿಡುವ ನಿಟ್ಟಿನಲ್ಲಿ 57 ಲಕ್ಷ ರೂ.ಗಳ ಗುಡಿಸುವ ಯಂತ್ರವನ್ನು ಇಂದು ಜಿಲ್ಲಾಧಿಕಾರಿ  ಎನ್.ಪ್ರಕಾಶ್ ನಾಗರೀಕರಿಗೆ ಅರ್ಪಿಸಿದರು.
ಮಂಗ ಳೂರು ನಗರ ವನ್ನು ಶುಚಿ ಯಾಗಿ ರಿಸುವ  ನಿಟ್ಟಿ ನಲ್ಲಿ ಕಸ ಗುಡಿಸುವ ಯಂತ್ರದ ಜೊತೆಗೆ ಮಣ್ಣ ಗುಡ್ಡೆ,ಕೋರ್ಟ್  ವಾರ್ಡಿನ ನಾಗ ರೀಕರಿಗೆ ಈ ಸಂದರ್ಭದಲ್ಲಿ ಹಳದಿ ಮತ್ತು ಹಸಿರು ಕಸದ ಬುಟ್ಟಿಗಳನ್ನು ವಿತರಿಸಲಾಯಿತು.  ಸಾರ್ವಜನಿಕರು ಕಸವಿಲೇವಾರಿಯಲ್ಲಿ ತಮ್ಮ ಸಹಕಾರವನ್ನು ನೀಡುವುದು ಅತ್ಯಗತ್ಯ ಎಂದು ನುಡಿದರು. ಹಸಿಕಸ ಮತ್ತು ಒಣಕಸವನ್ನು ವಿಭಜಿಸಿ ನೀಡುವುದರಿಂದ ತ್ಯಾಜ್ಯ ವಿಲೇ ಸುಲಭವಾಗಲಿದೆ ಎಂದು ಅವರು ನುಡಿದರು.
ಈ ಸಮಾ ರಂಭದ ಲ್ಲಿದ್ದ ಮಹಾ ನಗರ ಪಾಲಿಕೆ ಆಯುಕ್ತ ರಾದ ಡಾ. ಹರೀಶ್ ಕುಮಾರ್ ಮಾತನಾಡಿ ಮಹಾನಗರಪಾಲಿಕೆ ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಕಸಗುಡಿಸುವ ಯಂತ್ರವನ್ನು ಖರೀದಿಸಲಾಗಿದ್ದು ಕಾರ್ಮಿಕರ ಅಸಹಕಾರದ ವೇಳೆಯಲ್ಲಿ ಈ ಯಂತ್ರ ಪಾಲಿಕೆಗೆ ವರದಾನವಾಗಲಿದೆಯೆಂದರು.ಕಾಂಕ್ರೀಟ್ ರಸ್ತೆಗಳಲ್ಲಿ ಅತ್ಯಂತ ಸುಲಲಿತವಾಗಿ ಕಸಗುಡಿಸಲು ಈ ಯಂತ್ರದಿಂದ ಸಾಧ್ಯವಾಗಲಿದೆ ಎಂದರು.10ಲೀಟರ್ ನ 7800 ಟಿನ್ ಗಳು- 3900 ಹಸಿರು ಮತ್ತು 3900 ಹಳದಿ,120 ಲೀಟರ್ ನ 600 ಟಿನ್ ಗಳು -300 ಹಸಿರು ಮತ್ತು 300 ಹಳದಿ ,240 ಲೀಟರ್ 50 ಟಿನ್ ಗಳು- ತಲಾ 25 ರಂತೆ ವಿತರಿಸಲಾಯಿತು.
ಜಂಟಿ ಆಯುಕ್ತರಾದ ಶ್ರೀಕಾಂತ್ ,ವಲಯ ಆಯುಕ್ತರಾದ  ಶ್ರೀಮತಿ ಪ್ರಮೀಳಾ ಅವರನ್ನೊಳಗೊಂಡಂತೆ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Friday, March 15, 2013

ಕೆನರಾ ಪ್ರೌಢಶಾಲೆಯಲ್ಲಿ ಮೇಳೈಸಿದ 'ಮೀನಾ'

ಮಂಗಳೂರು, ಮಾರ್ಚ್.15:- ಮೀನಾ ಯಾವುದೇ ಕನಸಿನ ಲೋಕದ ಸುಂದರಿಯಲ್ಲ; ಬಾಲಕಿಯರ ಶಿಕ್ಷಣ ಉತ್ತೇಜಿಸಲು ಕೈಗೊಂಡ ಕಾರ್ಯಕ್ರಮವಿದಾಗಿದ್ದು, ಮೀನಾ ಉಲ್ಲಾಸ ಉತ್ತೇಜನ, ಅನುಕಂಪ ಹಾಗೂ ಸಹಕಾರ ಮನೋಭಾವದ, ಲಿಂಗ ಸಮಾನತೆ, ಹೆಣ್ಣುಮಕ್ಕಳ ಸಬಲೀಕರಣಕ್ಕಾಗಿ ಇರುವ ಎಲ್ಲ ಬಾಲೆಯರ ಬದುಕಿಗೆ ಮಾದರಿಯಾಗುವ ಎಲ್ಲರ ಬಗೆಗೆ ಕಾಳಜಿ ವಹಿಸುವ ಕ್ರಿಯಾಶೀಲ ಪಾತ್ರ. ಶಿಕ್ಷಣ ವಂಚಿತ ಮೀನಾ ಶಿಕ್ಷಣ ಪಡೆದು ಸಮುದಾಯವನ್ನು ಜಾಗೃತಗೊಳಿಸುತ್ತಾಳೆ. ಶಾಲೆ ಸೇರಿ ವಿದ್ಯೆ ಕಲಿತು ತನ್ನಂತಹ ಹಲವರ ಬಾಳಿಗೆ ಬೆಳಕಾಗುವ ಕಾಲ್ಪನಿಕ ಬಾಲಕಿ. ಹೆಣ್ಣು ಮಕ್ಕಳ ಶಿಕ್ಷಣ ಮತ್ತು ಕಲ್ಯಾಣಕ್ಕಾಗಿ ಯುನಿಸೆಫ್ ರೂಪಿಸಿದ ಕಾರ್ಯಕ್ರಮ ಮೀನ. 
ಮೀನ ಕಾರ್ಯಕ್ರಮ ಎಲ್ಲ ಶಾಲೆಗಳಿಗೂ ವಿಸ್ತರಿಸಬೇಕು. ಈ ಕಾರ್ಯಕ್ರಮದ ಪ್ರಯೋಜನ ನಮ್ಮ ಎಲ್ಲಾ ಸಹೋದರಿಯರಿಗೆ ದೊರೆಯಬೇಕು ಎಂದು ಅಡ್ಡೂರು ಸ. ಹಿ. ಪ್ರಾ. ಶಾಲೆಯ ವಿದ್ಯಾರ್ಥಿನಿ ಶರೀಫಾ ಅಭಿಪ್ರಾಯಪಟ್ಟರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಸರ್ವ ಶಿಕ್ಷಣ ಅಭಿಯಾನದ ಅಂಗವಾಗಿ ಮಂಗಳೂರು ಉರ್ವ ಕೆನರಾ ಪ್ರೌಢಶಾಲೆಯಲ್ಲಿ ಶುಕ್ರವಾರ ಜರಗಿದ `ಮೀನಾ ಮೇಳ 2012- 13' ದಲ್ಲಿ ಅವರು ಮುಖ್ಯ ಅತಿಥಿಯಾಗಿ ವಿದ್ಯಾರ್ಥಿನಿ ತನ್ನ ಮನದಿಗಿಂತವನ್ನು ಬಿಚ್ಚಿಟ್ಟಳು.
ಹೆಣ್ಣುಮಕ್ಕಳಲ್ಲಿ ರಚನಾತ್ಮಕ ಚಟುವಟಿಕೆಗಳನ್ನು ಪ್ರೇರೇಪಿಸಲು ಉತ್ತೇಜಿಸುವ ಕಾರ್ಯಕ್ರಮವಿದು ಎಂದರು.  30 ಕ್ಲಸ್ಟರ್ ಗಳ 600 ಮಕ್ಕಳು ಭಾಗವಹಿಸಿದ್ದ ಇಂದಿನ ಕಾರ್ಯಕ್ರಮದಲ್ಲಿ ' ಜಾಗೃತ ಕಿಶೋರಿ ಅರಿವಿನ ಕಿನ್ನರಿ' ಎಂಬ ಘೋಷ ವಾಕ್ಯ ಅರ್ಥಪೂರ್ಣವಾಗಿ ಧ್ವನಿಸಿತ್ತು.
ಒಂದು ಕಾಲದಲ್ಲಿ ಗುಜಿರಿ ಹೆಕ್ಕುತ್ತಿದ್ದ ನಾನು ಇಂದು ಕಲಿಕೆಯ ಆನಂದ ಅನುಭವಿಸುತ್ತಿದ್ದೇನೆ ಎಂದು ಇನ್ನೋರ್ವ ಅತಿಥಿ, ಬಿಜೈ ಕಾಪಿಕಾಡು ಚಿಣ್ಣರ ತಂಗುದಾಣದ 5 ನೇ ತರಗತಿ ವಿದ್ಯಾರ್ಥಿನಿ ಮಂಜುಳಾ ಸಂಭ್ರಮ ಹಂಚಿಕೊಂಡರು.
ನಾನು ಮೂಲತಃ ಹಾಸನ ಜಿಲ್ಲೆಯವಳು. ಅಮ್ಮ ಮತ್ತು ತಂಗಿ ಸುಬ್ರಹ್ಮಣ್ಯದಲ್ಲಿದ್ದಾರೆ. ಜೀವನೋಪಾಯಕ್ಕಾಗಿ ಗುಜಿರಿ ಹೆಕ್ಕುತ್ತಿದ್ದ ನಾನು ಸಾಮಾಜಿಕ ಕಾರ್ಯಕರ್ತರು ಹಾಗೂ ಕೆಲ ಶಿಕ್ಷಣ ಪ್ರೇಮಿಗಳ ಪ್ರಯತ್ನದ ಫಲವಾಗಿ ಇಂದು ಶಿಕ್ಷಣ ಪಡೆಯುತ್ತಿದ್ದೇನೆ. ಮೊದಲು ಈ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಕಷ್ಟ ಎನಿಸಿತು. ಈಗ ಧೈರ್ಯ ಬಂದಿದೆ. ಒಳ್ಳೆಯ ಶಿಕ್ಷಣ ಪಡೆದು ಓರ್ವ ಉತ್ತಮ ಶಿಕ್ಷಕಿಯಾಗುವುದಾಗಿ ಕನಸು ಬಿಚ್ಚಿಟ್ಟರು. ದಕ್ಷಿಣ ವಲಯದ ಹಿರಿಯ ಪ್ರಾಥಮಿಕ ಶಾಲೆಯ 7 ಮಕ್ಕಳು ಮತ್ತು ಒಬ್ಬರು ಶಿಕ್ಷಕರಂತೆ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರಾಂಶುಪಾಲರು ಹಾಗೂ ಪದನಿಮಿತ್ತ ಸಹನಿರ್ದೇಶಕರು ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದ ಫಿಲೋಮಿನಾ ಲೋಬೊ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಆಶಾ ನಾಯಕ್, ಆಸರೆ ಟ್ರಸ್ಟ್ ಅಧ್ಯಕ್ಷೆ ಆಶಾ ಜ್ಯೋತಿ ರೈ, ಗೀತಾ ದೇವದಾಸ್, ಉರ್ದು ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಹನೀಫ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಣ್ಣಯ್ಯ, ಗ್ರೇಸಿ ಗೊನ್ಸಾಲ್ವಿಸ್  ಮುಖ್ಯ ಅತಿಥಿಗಳಾಗಿದ್ದರು.
ಸಭಾ ಕಾರ್ಯಕ್ರಮದ ಮೊದಲು ನಡೆದ ಜಾಗೃತಿ ಜಾಥಾವನ್ನು ಜಿಲ್ಲಾ ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಡಾ. ಕೆ. ಎನ್. ವಿಜಯ ಪ್ರಕಾಶ್ ಉದ್ಘಾಟಿಸಿದರು.
ಶಿಕ್ಷಣ ಅಧಿಕಾರಿ ಸದಾನಂದ ಪೂಂಜಾ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಾಜಲಕ್ಷ್ಮೀ,  ಲೋಕೇಶ್ ಉಪಸ್ಥಿತರಿದ್ದರು. ಕ್ಷೇತ್ರ ಸಮನ್ವಯಾಧಿಕಾರಿ ಲಕ್ಷ್ಮೀನಾರಾಯಣ ಭಟ್ ಸ್ವಾಗತಿಸಿದರು. ಸಮಾರೋಪ ಸಮಾರಂಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿದ್ದ ವೈ ಶಿವರಾಮಯ್ಯ ಪಾಲ್ಗೊಂಡಿದ್ದರು.

ಚುನಾವಣೆ ಪೂರ್ವ ಸಿದ್ದತೆ: ವಿಡಿಯೋ ಕಾನ್ಫರೆನ್ಸ್

ಮಂಗಳೂರು, ಮಾರ್ಚ್.15:- ಮತದಾರರ ಪಟ್ಟಿಯಿಂದ ಅರ್ಹರ ಹೆಸರು ಬಿಟ್ಟು ಹೋಗದಂತೆ ಹೆಚ್ಚಿನ ಮುತುವರ್ಜಿ ವಹಿಸಿ;ಮತದಾರರ ಗುರುತು ಚೀಟಿ (ಎಪಿಕ್ ಕಾರ್ಡ್) ಪರ್ಸೆಂಟೇಜ್ ನಲ್ಲಿ ಪ್ರಗತಿ ದಾಖಲಿಸಿ ಎಂದು ಮುಖ್ಯ ಚುನಾವಣಾಧಿಕಾರಿಗಳಾದ  ಅನಿಲ್ ಕುಮಾರ್ ಝಾ ಸೂಚಿಸಿದರು.
             ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಚುನಾವಣಾ ಪ್ರಕ್ರಿಯೆ ಪ್ರಗತಿ ಪರಿಶೀಲಿಸಿದ ಅವರು, ಚುನಾವಣೆಗೆ ಸನ್ನದ್ಧರಾಗಿ ಎಂದು ಜಿಲ್ಲಾಧಿಕಾರಿಗಳಿಗೆ ಹೇಳಿದರು. ಈಗಾಗಲೇ ಮುಗಿದಿರುವ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಹಿನ್ನಲೆಯನ್ನು ಗಮನದಲ್ಲಿರಿಸಿ, ಅಲ್ಲಿ ಸಂಭವಿಸಿದ ಲೋಪಗಳು ಮರುಕಳಿಸದಂತೆ, ಮತದಾರರ ಹೆಸರು ಕೈಬಿಟ್ಟು ಹೋಗದಂತೆ ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಕೆಲಸವಾಗಬೇಕು. ಜಿಲ್ಲಾಧಿಕಾರಿಗಳು ಈ ಪ್ರಕ್ರಿಯೆಯನ್ನು ಖುದ್ದಾಗಿ ಗಮನಿಸಬೇಕು; ವೋಟರ್ ಸ್ಲಿಪ್ ಗಳನ್ನು ಚುನಾವಣಾ ಕಚೇರಿಯ ಈ ಬಾರಿ ವಿತರಿಸಲಿದೆ. ಯಾವುದೇ ಕ್ಷಣದಲ್ಲಿ ಚುನಾವಣೆ ಘೋಷಣೆಯಾಗಲಿದ್ದು, ಸೂಕ್ಷ್ಮ ಮತ್ತು ಅತಿಸೂಕ್ಷ್ಮ ಪ್ರದೇಶಗಳ ಪಟ್ಟಿಯನ್ನು ಸಿದ್ಧವಾಗಿರಿಸಿ ಎಂದು ಹೇಳಿದರು.
ಪೊಲೀಸ್ ಇಲಾಖೆಯು ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಬೇಕು; ಮುಕ್ತ ಹಾಗೂ ನ್ಯಾಯಯುತ ಚುನಾವಣೆಗೆ ವಾತಾವರಣ ನಿರ್ಮಿಸುವ ಹೊಣೆ ಇಲಾಖೆಯ ಮೇಲಿದೆ ಎಂದರು. ಸದಾಚಾರ ಸಂಹಿತೆ ಪಾಲನೆ, ಖರ್ಚು ವೆಚ್ಚದ ವಿವರ, ರಿಟರ್ನಿಂಗ್ ಆಫೀಸರ್ ಗಳ ನೇಮಕ ಕುರಿತ ಹೊಣೆಯನ್ನು ವಿಶೇಷ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ಅವರು ನೋಡಿಕೊಳ್ಳಲಿದ್ದು, ಇಲಾಖೆಗೆ ಪ್ರತ್ಯೇಕ ಚುನಾವಣಾ ವೀಕ್ಷಕರು ಆಗಮಿಸಿ ಪರಿಶೀಲನೆ ನಡೆಸಲಿರುವರು.
ಮತದಾರರ ಜಾಗೃತಿ ಮತ್ತು ಪಾಲ್ಗೊಳ್ಳುವಿಕೆ ಯೋಜನೆ
(sveep- systematic Voters Education and Electoral Participation Plan) ಗೆ ಚುನಾವಣಾ ಆಯೋಗ ಹೆಚ್ಚಿನ ಒತ್ತು ನೀಡಿದ್ದು, 'ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಸರ್ವರ ಪಾಲ್ಗೊಳ್ಳುವಿಕೆ' ಅನುಷ್ಠಾನಕ್ಕೆ ಬರಬೇಕಿದ್ದು ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ಜಾರಿಗೆ ಬರಲಿದೆ. ಸಮಿತಿಯು ಮತದಾನ ಪ್ರಕ್ರಿಯೆಯಲ್ಲಿ ಸರ್ವರೂ ಪಾಲ್ಗೊಳ್ಳುವಂತೆ ಮಾಡಲು ಮಾಧ್ಯಮ ಹಾಗೂ ವಿವಿಧ ಸಂವಹನ ಮಾದರಿಗಳ ಸಹಕಾರದಿಂದ ಮತದಾನದ ಅಗತ್ಯದ ಬಗ್ಗೆ ಜಾಗೃತಿ ಮೂಡಿಸಲಿದೆ.
ಚುನಾವಣಾ ತಯಾರಿಗೆ ಪೊಲೀಸ್ ಇಲಾಖೆಯ ಅಗತ್ಯಗಳ ಬಗ್ಗೆ ಪೊಲೀಸ್ ಕಮಿಷನರ್ ಮನಿಷ್ ಕರ್ಬೀಕರ್ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗೋಯಲ್ ಅವರು ಮುಖ್ಯ ಚುನಾವಣಾಧಿಕಾರಿಗಳ ಗಮನಸೆಳೆದರು. ಜಿಲ್ಲಾಧಿಕಾರಿ  ಎನ್ ಪ್ರಕಾಶ್ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಚುನಾವಣಾ ಸಂಬಂಧಿ ಪ್ರಕ್ರಿಯೆಗಳ ಸಮಗ್ರ ಮಾಹಿತಿಯನ್ನು ಮುಖ್ಯ ಚುನಾವಣಾಧಿಕಾರಿಗಳಿಗೆ ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ ಕೆ ಎನ್ ವಿಜಯಪ್ರಕಾಶ್, ಪಾಲಿಕೆ ಆಯುಕ್ತರಾದ ಡಾ ಹರೀಶ್ ಅವರು ಉಪಸ್ಥಿತರಿದ್ದರು.

ಗ್ರಾಹಕ ಶಿಕ್ಷಣ, ಜಾಗೃತಿಯಿಂದ ಇಂದಿನ ಸಮಸ್ಯೆಗೆ ಪರಿಹಾರ

ಮಂಗಳೂರು.ಮಾರ್ಚ್.15:- 1986 ರಲ್ಲಿ ಗ್ರಾಹಕ ಸಂರಕ್ಷಣಾ ಕಾಯ್ದೆ ಭಾರತದಲ್ಲಿ ಜಾರಿಗೆ ಬಂದು ,ಅಂದಿನಿಂದ ಗ್ರಾಹಕರು ನಿರ್ದಿಷ್ಟ ಹಕ್ಕುಗಳು ,ಶಿಕ್ಷಣ, ಪರಿಹಾರ ಮಾರ್ಗಗಳು ದೊರಕಿದವು ಎಂದು ಜಿಲ್ಲಾಧಿಕಾರಿ ಎನ್. ಪ್ರಕಾಶ್ ತಿಳಿಸಿದರು.
ಅವರು ಇಂದು  ಮಂಗಳೂರು ವಿಶ್ವವಿದ್ಯಾನಿಲಯ ರವೀಂದ್ರ ಕಲಾಭವನದಲ್ಲಿ ನಡೆದ ವಿಶ್ವ ಗ್ರಾಹಕ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸರಕುಗಳ ಯೋಗ್ಯತೆ,ಪ್ರಮಾಣ ಸಾಮಥ್ರ್ಯ,ಶುದ್ಧತೆ,ಗುಣಮಟ್ಟ ಮತ್ತು ಧಾರಣೆ ಬಗ್ಗೆ ಪ್ರಶ್ನಿಸುವ ಮತ್ತು ಸಮಸ್ಯೆಯನ್ನು ದೂರು ನೀಡಿ ಬಗೆಹರಿಸಿಕೊಳ್ಳುವ ಹಕ್ಕನ್ನು ಇಂದು ಗ್ರಾಹಕ ಪಡೆದುಕೊಂಡಿರುತ್ತಾನೆ.ಅದನ್ನು ಇಂದು ವಿದ್ಯಾರ್ಥಿಗಳು ಮನೆಮನೆಗಳಲ್ಲಿ ತಿಳಿಸಿ ಗ್ರಾಹಕರು ಜಾಗೃತಿಗೊಳ್ಳುವುದು ಅವಶ್ಯವೆಂದು ನುಡಿದರು.
        ಮುಖ್ಯ ಅತಿಥಿಗಳಾಗಿ ಈ ಸಮಾರಂಭದಲ್ಲಿ ಭಾಗವಹಿಸಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿ.ಮಲ್ಲಿಕಾರ್ಜುನ ಮಾತನಾಡಿ  ಸೌಕರ್ಯಗಳು ಹೆಚ್ಚಿದ್ದಲ್ಲಿ ಸಮಸ್ಯೆಗಳು ಹೆಚ್ಚಿರುತ್ತವೆ. ಎಲ್ಲಾ ಬಸ್ಗಳಲ್ಲೂ ಕಂಪ್ಯೂಟರ್ ಟಿಕೇಟ್ ನೀಡುವ ವ್ಯವಸ್ಥೆ ಮತ್ತು ಕರ್ಕಶ ಹಾರನ್ ಬದಲಾಯಿಸಿ ಸಾಧಾರಣ ಹಾರನ್ ಬಳಸುವ ಬಗ್ಗೆ ಮತ್ತು ಬಸ್ನ ಚಾಲಕ / ನಿರ್ವಾಹಕರು ಸೌಜನ್ಯದಿಂದ ವರ್ತಿಸುವ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾರಾದ ಡಾ.ಲಕ್ಷ್ಮಿನಾರಾಯಣ ಭಟ್ಟ ಎಚ್.ಆರ್. ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಗ್ರಾಹಕ ಶಿಕ್ಷಣ ಸರ್ಟಿಫಿಕೇಟ್ ,ಉತ್ತಮ ಕ್ಲಬ್ಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.  ಸಮಾರಂಭದಲ್ಲಿ ವಿಶ್ವವಿದ್ಯಾನಿಲಯದ ಪ್ರೊ ಟಿ.ಎನ್. ಶ್ರೀಧರ ಮತ್ತು ಕಾಲೇಜುಗಳ ಪ್ರಾಂಶುಪಾಲರುಗಳು  ಹಾಜರಿದ್ದರು. 

Thursday, March 14, 2013

ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಸೇವಿಸಿದರೆ ಸ್ಥಳದಲ್ಲೇ ದಂಡ

ಮಂಗಳೂರು, ಮಾ.14: ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ನಿಷೇಧ ಕಾಯ್ದೆ (ಕೋಟ್ಪಾ)ಯನ್ನು ಪಶ್ಚಿಮ ವಲಯದಲ್ಲಿ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಎಡಿಜಿಪಿ (ಅಪರಾಧ) ಎ.ಎಂ. ಪ್ರಸಾದ್ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ನಿರ್ದೇಶನ ನೀಡಿದ್ದಾರೆ.
ಪೊಲೀಸ್ ಅತಿಥಿ ಗೃಹ ದಲ್ಲಿ ಇಂದು ಪಶ್ಚಿಮ ವಲ ಯದ ಪೊಲೀಸು ಸಿಬ್ಬಂದಿ ಗಳಿ ಗಾಗಿ ಕೊಟ್ಪಾ ಕಾಯಿದೆ ಬಗ್ಗೆ ಆಯೋ ಜಿಸ ಲಾದ ತರ ಬೇತಿ ಕಾರ್ಯಾ ಗಾರ ವನ್ನು ಉದ್ದೇ ಶಿಸಿ ಅವರು ಮಾನ ತಾಡಿದರು.
ಕೋಟ್ಪಾ ಕಾಯಿದೆ ಜಾರಿಗೆ ಸಂಬಂಧಿಸಿ ಪಶ್ಚಿಮ ವಲಯದ ಕೆಲವು ಜಿಲ್ಲೆಗಳಲ್ಲಿ ಉತ್ತಮ ಕೆಲಸ ಆಗಿದೆ. ಆದರೆ ನಮ್ಮ ಉದ್ದೇಶ ಕೇವಲ ಪ್ರಕರಣಗಳನ್ನು ದಾಖಲಿಸಿ ದಂಡ ಸಂಗ್ರಹಿಸುವುದು ಮಾತ್ರ ಆಗಬಾರದು. ನಾನೇ ನೋಡಲ್ ಅಧಿಕಾರಿಯಾಗಿರುವ ಈ ಕಾಯಿದೆಗೆ ಗುರಿ ನಿಗದಿ ಪಡಿಸುವುದಿಲ್ಲ. ಇಲ್ಲಿ ದಂಡ ಕಟ್ಟಿಸುವುದಕ್ಕಿಂತ ಮುಖ್ಯವಾಗಿ ತಿಳುವಳಿಕೆ ನೀಡುವುದು ಹಾಗೂ ವೈಯಕ್ತಿಕ ಶಿಸ್ತು ಪಾಲನೆಯಾಗಲಿ ಎಂಬ ಉದ್ದೇಶವಿದೆ ಎಂದರು. ಕಟ್ಟುನಿಟ್ಟಾಗಿ ಕಾಯ್ದೆಯನ್ನು ಜಾರಿಗೊಳಿಸುವ ಮೂಲಕ ಸಾರ್ವಜನಿಕವಾಗಿ ತಂಬಾಕು ಸೇವನೆಯ ದುಷ್ಪರಿಣಾಮಕ್ಕೆ ಕಡಿವಾಣ ಹಾಕುವಲ್ಲಿ  ಪೊಲೀಸ್ ಅಧಿಕಾರಿಗಳು ಮುಂದಾಗಬೇಕು ಎಂದು ಅವರು ಹೇಳಿದರು.  
ಕೋಟ್ಪಾ ಕಾಯಿದೆಯಡಿ ನಿಯಮ 4ರ ಅನುಸಾರ ಕಾನೂನು ಉಲ್ಲಂಘಿಸಿದರೆ 200ರೂ. ದಂಡವನ್ನು ಹಾಕುವ ಅಧಿಕಾರ ಸಬ್ ಇನ್ಸ್ ಪೆಕ್ಟರ್ ಮತ್ತು ಮೇಲಿನ ಅಧಿಕಾರವನ್ನು ನೀಡಲಾಗಿದ್ದು, ದಂಡ ಜಮಾ ಮಾಡಲು ಪ್ರತ್ಯೇಕ ಅಕೌಂಟ್ ನಂಬರನ್ನು ನೀಡಲಾಗಿದೆ. ಐಜಿಪಿ ಪಶ್ಚಿಮ ವಲಯ ಪ್ರತಾಪ್ ರೆಡ್ಡಿ ಅವರು ಮಾತನಾಡಿ, 2013ರಲ್ಲಿ 2303 ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದರು. ರಾಜ್ಯದಲ್ಲಿ ಈ ನಿಟ್ಟಿನಲ್ಲಿ ಗದಗ ಜಿಲ್ಲೆ ಉತ್ತಮ ಸಾಧನೆ ಮಾಡಿದೆ ಎಂದು ಎಡಿಜಿಪಿ ಪ್ರಸಾದ್ ಹೇಳಿದರು.
ಜನ ಸಾಮಾ ನ್ಯರನ್ನು ಕಾಡುವ ವಿವಿಧ ರೀ ತಿಯ ಕ್ಯಾನ್ಸರ್ ಎಂಬ ಮಾರಕ ಕಾಯಿ ಲೆಗೆ ಸಂಬಂ ಧಿಸಿ ಶೇ. 50ರಷ್ಟು ಪ್ರಕರ ಣಗಳು ತಂಬಾಕು ಸೇವ ನೆಯಿಂದ ಉಂಟಾ ಗಿರುವುದು ಪತ್ತೆ ಯಾಗಿದೆ ಎಂದು ಕ್ಯಾನ್ಸರ್ ತಡೆ ಯೋಜನೆಯ ನಿರ್ದೇಶಕ, ಬೆಂಗಳೂರಿನ ಕ್ಯಾನ್ಸರ್ ಸರ್ಜನ್ ಡಾ. ವಿಶಾಲ್ ರಾವ್ ಹೇಳಿದರು. 
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ತಂಬಾಕು ಸೇವನೆಯಿಂದ ಉಂಟಾದ ವಿವಿಧ ರೀತಿಯ ಕ್ಯಾನ್ಸರ್ ಪ್ರಕರಣಗಳ ವಿವರ ನೀಡಿದ ಅವರು, ರಾಜ್ಯದಲ್ಲಿ 2 ಕೋಟಿ ಮಂದಿ ತಂಬಾಕು ಸೇವಿಸುವವರಿದ್ದು ಅವರಲ್ಲಿ 66 ಲಕ್ಷ ಮಂದಿ ಅಕಾಲಿಕ ಮರಣವನ್ನು ಹೊಂದುತ್ತಾರೆ ಎಂದು ತಂಬಾಕು ಸೇವನೆಯ ವಾಸ್ತವ ಚಿತ್ರಣ ನೀಡಿದರು.
ಪ್ರಸ್ತುತ ಡ್ರಗ್ಸ್ ಬಗ್ಗೆ ಭಾರೀ ಚರ್ಚೆ ನಡೆ ಯುತ್ತಿದೆ. ಆದರೆ ತೀರಾ ಅಗ್ಗ ಹಾಗೂ ಎಲ್ಲೆಂ ದರಲ್ಲಿ ತಂಬಾಕು ಪದಾ ರ್ಥಗಳು ಸಿಗು ವುದ ರಿಂದ ಡ್ರಗ್ಸ್ ಗಿಂತಲೂ ತಂಬಾಕು ಸೇವನೆ ತೀರಾ ಮಾರಕ ವಾಗಿದೆ. ಈ ಹಿನ್ನೆಲೆಯಲ್ಲಿ ಡ್ರಗ್ಸ್ ವಿರುದ್ಧದ ಜನಜಾಗೃತಿಗೆ ನೀಡುವ ಮಹತ್ವವನ್ನು ತಂಬಾಕು ಸೇವನೆಯ ಬಗ್ಗೆಯೂ ನೀಡಬೇಕಾಗಿದೆ ಎಂದವರು ಹೇಳಿದರು.
ಪೊಲೀಸ್ ಆಯುಕ್ತ ಮನೀಶ್ ಕರ್ಬೀಕರ್, ಉಡುಪಿ ಎಸ್ಪಿ ಡಾ ಬೋರಲಿಂಗಯ್ಯ, ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಭಿಷೇಕ್ ಗೋಯಲ್ ಉಪಸ್ಥಿತರಿದ್ದರು. ಡಾ. ರಿಯಾಝ್ ಇನ್ನೋರ್ವ ಸಂಪನ್ಮೂಲ ವ್ಯಕ್ತಿಗಳಾಗಿದ್ದರು.